ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:59 PM

ಶಾಕ್...ಶಾಕ್...

Posted by ekanasu

ವಿಶೇಷ ವರದಿ

ಪಶ್ವಿಮ ಘಟ್ಟದ ಜಲಪಾತದಿಂದ ಕಿರು ವಿದ್ಯುತ್ ಉತ್ಪಾದನೆ ಬಗ್ಗೆ ಪರಿಸರ ಪ್ರೇಮಿಗಳು ಕೆಂಡಾಮಂಡಲವಾಗಿದ್ದಾರೆ. ಸದ್ದಿಲ್ಲದೆ ನಡೆಸಲು ಯೋಚಿಸಿರುವ ವಿದ್ಯುತ್ ಯೋಜನೆಗೆ ಸರಕಾರ ಅನುಮತಿ ಒಡಂಬಡಿಕೆಗೆ ಸಹಿ ಹಾಕಿರುವ ಬಗ್ಗೆ ಈ ಕನಸಿಗೆ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತದೆ. ಎಷ್ಟೇ ಮಳೆ ಸುರಿದರೂ ಕೂಡ ಜಿಲ್ಲೆಯಲ್ಲಿ ಮಳೆಗಾಲ ಮುಕ್ತಾಯದಿಂದಲೇ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಜಿಲ್ಲೆಯ ಈ ಸಮಸ್ಯೆ ಪರಿಹರಿಸುವ ನೆವದಲ್ಲಿ ರಾಜ್ಯ ಸರಕಾರ ಅತ್ತಿಗುಂಡಿ, ಹಲುವತ್ತಿ, ಹಳೆಯಂಗಡಿ, ಕತ್ತಣಕುಡಿಗೆ, ಕಗ್ಗನಾಳ, ಗುತ್ತಿಹಳ್ಳಿ, ಖಾಂಡ್ಯ, ಕಿಗ್ಗ, ಕೊಪ್ಪ, ಚಿಕ್ಕಮಗಳೂರು, ಮಧುಗುಂಡಿ, ಎನ್.ಆರ್.ಪುರ, ಕಳಸ, ಮೂಡಿಗೆರೆ ಸೇರಿದಂತೆ ಜಿಲ್ಲೆಯ ಒಟ್ಟು 42 ಕಡೆಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಹುಟ್ಟಿಬರುವ ಕಿರು ಜಲಪಾತದ ನೀರು ಬಳಸಿಕೊಂಡು ಕಿರು ಜಲವಿದ್ಯುತ್ ಘಟಕ ತೆರೆಯಲು ಮುಂದಾಗಿದೆ.
ಮಲೆನಾಡಿನ ಅಲ್ಲಲ್ಲಿ ಇಂತಹ ಜಲವಿದ್ಯುತ್ ಯೋಜನೆ ಆರಂಭಿಸುವುದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಪರಿಸರ ಪ್ರೇಮಿಗಳು ಭರೀ ವಿರೋಧ ವ್ಯಕ್ತ ಪಡಿಸಿದ್ದಾರೆ. ಪರಿಸರ ಪ್ರೇಮಿಗಳ ಕೂಗಿಗೆ ಬೆಚ್ಚಿದ ಸರಕಾರ ಎಲ್ಲವನ್ನೂ ಗಪ್ಚುಪ್ಪಾಗಿ ಮಾಡಿ ಮುಗಿಸುತ್ತದೆ.
ಬನಶಂಕರಿ ಹೈಡ್ರೋ ಪವರ್, ನಿಸರ್ಗ, ನಮನ, ಸೀವೆಲ್, ಫೋರ್ಚೂನ್, ಶಕುಂತಲಂ, ಶ್ರೀವರಿ ಹೈಡ್ರೋ ಪವರ್ ಪ್ರೈ.ಲಿ. ಸೇರಿದಂತೆ ಒಟ್ಟು 30ಕ್ಕೂ ಅಧಿಕ ಸಂಸ್ಥೆಗಳಿಗೆ ವಿದ್ಯುತ್ ಘಟಕ ತೆರೆಯಲು ಸರಕಾರ ಅನುಮತಿ ನೀಡಿದೆ ಎಂಬ ಗುಲ್ಲೆದ್ದಿದೆ.

ಅಭಿವೃದ್ಧಿ ಹೆಸರಲ್ಲಿ ಬೆಲೆ ಕಟ್ಟಲಾದ ನೈಸರ್ಗಿಕ ಸಂಪತ್ತು ವೈವಿಧ್ಯ ಜೀವ ಜಗತ್ತು, ಮಣ್ಣಿನ ಮೇನ್ಮೈ ಮುಂತಾದ ಪ್ರಕೃತಿ ದತ್ತ ಕೊಡುಗೆಯಲ್ಲಿ ಕೆಲವಷ್ಟನ್ನು ಕಳೆದುಕೊಂಡಾಗಿದೆ.
ಕಳೆದ ಕೊಂಡ ಸಂಪತ್ತನ್ನು ಕ್ರೋಢೀಕರಿಸಲು ಸಾಧ್ಯವಿಲ್ಲದಿದ್ದರೂ ಪರಿಸರದ ಮೇಲೆ ಭಸ್ಮಾಸುರ ಹಸ್ತ ಉರಿ ಇಡುತ್ತಿದ್ದೇನೆ. ಪ್ರಕೃತಿ ತಿರುಗಿಬಿದ್ದು ಬುದ್ದಿ ಕಲಿಸುತ್ತಿದ್ದರೂ ಮತ್ತೆ ಮತ್ತೆ ಗಧಾಪ್ರಹಾರ ನಿಂತಿಲ್ಲ. ನಾವು ಮಾಡಿದ ಎಡವಟ್ಟ ಉಣ್ಣೊ ಕಾಲವನ್ನು ಮೂಂದಿನ ಜನಾಂಗಕ್ಕೆ ಬಳುವಳಿಯಾಗಿ ಬಿಟ್ಟುಕೊಡುತ್ತಿದ್ದೇವೆ.

ವಿದ್ಯುತ್ ಉತ್ಪಾದನೆ ಹೆಸರಲ್ಲಿ ಸರಕಾರದ ಕಣ್ಣು ಪಶ್ಚಿಮ ಘಟ್ಟದ ಮೇಲೆ ಬಿದ್ದಿದೆ. ಮಳೆಗಾಲದಲ್ಲಿ ಮೈದುಂಬಿ ದುಮ್ಮಿಕ್ಕುತ್ತಿದ್ದ ಜಲಪಾತಗಳು ಇನ್ನು ಮುಂದೆ ಶೂನ್ಯ ಸೃಷ್ಟಿ! ಕಿರು ವಿದ್ಯುತ್ ಉತ್ಪಾದನೆಗಾಗಿ ಪಶ್ಚಿಮ ಘಟ್ಟಡ ವೈವಿಧ್ಯಮಯ ಜಲಪಾತದ ಜೋಗಳಕ್ಕೆ ಪುಲ್ಸ್ಟಾಪ್. ಇದರೊಟ್ಟಿಗೆ ಅಪೂರ್ವ ಸಸ್ಯ ಸಂಪತ್ತು, ಸೂಕ್ಮಜೀವಿಗಳು, ಪ್ರಾಣಿ ಸಂಕುಲ ಚಟ್ಟವೇರಲಿದೆ.

ರಾಜ್ಯದಲ್ಲಿ ವಿದ್ಯುತ್ ಅಭವವಿದೆ ಎನ್ನೋದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ರಾಜ್ಯ ಸರಕಾರ ಪಶ್ಚಿಮ ಘಟ್ಟದಲ್ಲಿ ಹರಿಯುವ ಚಿಕ್ಕ ಚಿಕ್ಕ ಹಳ್ಳ,ಕೊಳ್ಳಕ್ಕೆ ಕಟ್ಟೆ ಕಟ್ಟಿ ಕಿರು ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ. ವಿದ್ಯುತ್ ಉತ್ಪಾದನಯನ್ನು ಸರಕಾರವೇ ಮುಂದೆ ನಿಂತು ಮಾಡುತ್ತಾ ಅಂದ್ರೆ ಅದೂ ಇಲ್ಲ. ಖಾಸಗಿ ಕಂಪನಿಗಳ ಲಾಭಕ್ಕಾಗಿ ಸರಕಾರಿ ಪಶ್ಚಿಮ ಘಟ್ಟದ ಜಲಪಾತಗಳಿಗೆ ಕೊಳ್ಳಿಯಿಡಲು ಮುಂದಾಗಿದೆ.
ಮಲೆನಾಡಿನ ಭಗದಲ್ಲಿ ಮಳೆಗಾಲದಲ್ಲಿ ಎಷ್ಟೇ ಮಳೆ ಸುರಿದರೂ ಬೇಸಿಗೆಯಲ್ಲಿ ವಿದ್ಯುತ್ ಅಭಾವ ತಪ್ಪಿದ್ದಲ್ಲ. ವಿದ್ಯುತ್ ಸಮಸ್ಯೆಯಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಲೆನಾಡಿನ ಕೆಲ ಜಿಲ್ಲೆಗಳಲ್ಲಿ ಕಿರು ಜಲ ವಿದ್ಯುತ್ ಯೋಜನೆಗೆ ಕೈಹಾಕಿದೆ.

ಕಾಫಿ ನಾಡು ಎಂದೇ ಹೆಸರಾದ ಚಿಕ್ಕಮಗಳೂರು ಜಿಲ್ಲೆಯ ಸುಮಾರು ನಲವತ್ತೆರಡು ಕಡೆಯಲ್ಲಿ ಸರಕಾರ ಕಿರು ವಿದ್ಯುತ್ ಘಟಕ ಆರಂಭಿಸಲು ಮುಂದಾಗಿದೆ. ಅದೂ ಗುಪ್ತವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಉದ್ದೇಶಿತ ಯೋಜನೆಯ ಸಾಧಕ ಬಾಧಕ, ನಾಶವಾಗಿ ಭೂ ಪ್ರದೇಶ, ವಿದ್ಯುತ್ ಉತ್ಪಾದನೆಯ ಸಮಥ್ರ್ಯ ಯೋಜನೆಯಿಂದ ಪರಿಸರಕ್ಕೆ ಆಗುವ ನಷ್ಟ ದ ಬಗ್ಗೆ ಮಾಹಿತಿಯನ್ನು ಸರಕಾರ ನಾಗರಿಕರಿಗೆ ನೀಡದೆ ಕಿರು ವಿದ್ಯುತ್ ಯೋಜನೆ ಆರಂಭಿಸಲು ಮುಂದಾಗಿರುವ ಹಿಂದೆ ಕಂಪನಿಗಳ ಹಿತಾಸಕ್ತಿ ಅಡಗಿದೆ ಎಂದು ನಾಗರಿಕರು ಕಿಡಿಯಾಗುತ್ತಾರೆ.

ಚಿಕ್ಕಮಗಳೂರು ಜಿಲ್ಲೆ ಅರಣ್ಯ ವೈವಿದ್ಯತೆಗಳು ಬಹಳ ಸಂಕೀರ್ಣತೆಯಿಂದ ಕೂಡಿದೆ. ಹರಿಯುವ ನೀರನ್ನು ಬಳಸಿಕೊಂಡು, ಇಲ್ಲಾ ತಡೆಗೋಡೆ ನಿರ್ಮಿಸಿಕೊಂಡು ಇಂತಹ ಯೋಜನೆಗಳನ್ನು ಜಾರಿಗೆ ತಂದರೆ ಪಶ್ಚಿಮಘಟ್ಟದ ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ.
ಘಟ್ಟದಿಂದ ಬರುವ ನೀರನ್ನೇ ಅವಲಂಭಿಸಿಸ ಕೃಷಿಕರ ಹೊಟ್ಟೆಮಾಲೆ ಕಲ್ಲು ಚಪ್ಪಡಿ ಬೀಳಲಿದೆ. ಕೃಷಿ ಭೂಮಿ ಬಂಜರಾಗುತ್ತದೆ. ಪರಿಸರ ಜನ ಜೀನವದೊಟ್ಟಿಗೆ ಮಂಗಾಟವಾಡುವ ಇಂತಹ ಯೋಜನೆಗೆ ರಾಜ್ಯ ಸರಕಾರ ಅನುಮತಿ ನೀಡಿರುವುದು ಅಚ್ಚರಿಯಾಗಿದೆ.
ಹಾಸನ, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕೆಲ ಭಗಗಳಲ್ಲಿ ಇಂತಹದೇ ಯೋಜನೆ ಆರಂಭಿಸಲು ಸರಕಾರ ಮುಂದಾಗಿತ್ತು. ಆದರೆ ಪರಿಸರಕ್ಕೆ ಮಾರಕ ಎಂಬ ಕಾರಣಕ್ಕೆ ಯೋಜನೆ ಅರ್ಧಕ್ಕೆ ನಿಂತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರಂಭಿಸಿರುವ ಯೋಜನೆ ವಿರೋಧಿಸಿ ಪರಿಸರವಾದಿಗಳು ಈಗಾಗಲೇ ಸುಪ್ರೀಂ ಕೋರ್ಟ್
ಮೆಟ್ಟಿಲೇರಿದ್ದಾರೆ. ಜೊತೆಗೆ ಕಿರು ಜಲವಿದ್ಯುತ್ ಘಟಕಗಳನ್ನು ಆರಂಭಿಸುವಾಗ ಸರಕಾರ ಅರಣ್ಯ ಪರಿಸರ ಸಚಿವಾಲದ ಅನುಮತಿ ಕಡ್ಡಾಯ ಪಡೆಯಬೇಕು. ಆದರೆ ಸರಕಾರ ಇದುವರೆಗೂ ಅರಣ್ಯ ಸಚಿವಾಲಯದಿಂದ ಯಾವುದೇ ಅನುಮತಿ ಪಡೆದಿಲ್ಲ ಎನ್ನುತ್ತಾರೆ ಪರಿಸರ ವಾದಿಗಳು.
ಒಟ್ಟಿನಲ್ಲಿ ವಿದ್ಯುತ್ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸರಕಾರ ಯೋಜಿಸಿರುವ ಕಿರು ವಿದ್ಯುತ್ ಯೋಜನೆಗೆ ಆರಂಭದಲ್ಲಿ ವಿಘ್ನ ಎದುರಾಗಿದೆ. ಇಂತಹ ಮಹಾತ್ವಾಕಾಂಕ್ಷಿ ಯೋಜನೆ ಆರಂಭಿಸುವಾಗ ಸ್ಥಳೀಯರಿಗೆ ಯೋಜನೆ ಕುರಿತು ಮಾಹಿತಿ ನೀಡದಿರುವುದು ಯಾಕೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಹುಟ್ಟಿಕೊಂಡಿದೆ. ಹಸಿಗೋಡೆ ತಲೆ ಮೇಲೆ ನೀರಿನ ಕಟ್ಟೆ ಕಟ್ಟಿ ಮತ್ತೆ ಬುಡದಲ್ಲೊಂದಿಷ್ಟು ನೀರು ನಿಲ್ಲಿಸಿದರೆ ಗೋಡೆ ಗತಿಯೇನು? ಮಶ್ಚಿಮ ಘಟ್ಟ ಎಂಬ ಗೋಡೆ ಮೇಲೆ ಸರಕಾರ ನೀರು ನಿಲ್ಲಿಸಲು ಹೊರಟಿದೆ. ಇದರಿಂದ ಘಟ್ಟದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಇದರಿಂದ ಮಲೆನಾಡು ಮತ್ತು ಕರಾವಳಿ ತೀರಕ್ಕೂ ಅಪಾಯತಪಿಪ್ಪಿದ್ದಲ್ಲ.ಶ್ರೀಪತಿ ಹೆಗಡೆ ಹಕ್ಲಾಡಿ


0 comments:

Post a Comment