ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:35 PM

ಹರಿದಾಸ ಕೀರ್ತನೆ

Posted by ekanasu

ರಾಜ್ಯ - ರಾಷ್ಟ್ರ
ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ 'ಮಾಹಿತಿ ಮನರಂಜನೆ' ಕಾರ್ಯಕ್ರಮದಡಿ ಡಿಸೆಂಬರ್ 27 ರಂದು ಚಿತ್ರಕಲಾ ಪರಿಷತ್ತಿನಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಹರಿದಾಸ ಕೀರ್ತನೆ ಹಾಗೂ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಹಾಗೂ ಕೃಷ್ಣ ಕಲ್ಚರಲ್ ಅಕಾಡೆಮಿಯ ವಿದುಷಿ ಕೆ. ನಾಗಲಕ್ಷ್ಮೀ ಮತ್ತು ತಂಡದವರಿದ ಭರತನಾಟ್ಯ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮೂಲದ ಕಿರಾಣಾ ಘರಾನಾದ ಗಾಯಕರಾದ ಜಯತೀರ್ಥ ಮೇವುಂಡಿ ಅವರು, ಎಳೆ ವಯಸ್ಸಿನಲ್ಲೇ ಪಂ. ಅರ್ಜುನ ನಾಕೋಡ ಅವರ ಬಳಿ ಆರಂಭಿಕ ತರಬೇತಿ ಪಡೆದರು. ನಂತರ ಸುಮಾರು 12 ವರ್ಷಗಳ ಕಾಲ ಭಾರತ ರತ್ನ ಪಂ. ಭೀಮಸೇನ ಜೋಷಿ ಅವರ ಶಿಷ್ಯ ದಿ. ಶ್ರೀಪತಿ ಪಾಡಿಗಾರ್ ಅವರ ಗರಡಿಯಲ್ಲಿ ಪಳಗಿದವರು.ಶ್ರೀ ಕೃಷ್ಣ ಕಲ್ಚರಲ್ ಅಕಾಡೆಮಿಯ ವಿದುಷಿ ನಾಗಲಕ್ಷ್ಮೀ ಕೆ. ಅವರು ಎರಡು ದಶಕಗಳಿಂದ ನೃತ್ಯ ಸೇವೆಯಲ್ಲಿ ತೊಡಗಿದ್ದಾರೆ. ಭರತನಾಟ್ಯ, ಕೂಚಿಪುಡಿ, ಜಾನಪದ, ಬುಡಕಟ್ಟು ಪ್ರಕಾರಗಳು ಹಾಗೂ ಆಧುನಿಕ ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಇವರು ಅತ್ಯುತ್ತಮ ನೃತ್ಯ ಸಂಯೋಜಕರೂ ಹೌದು.

ಈ ಇಬ್ಬರೂ ಕಲಾವಿದರು ಡಿಸೆಂಬರ್ 27 ರಂದು ಸಂಜೆ 6.30 ಗಂಟೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದು, ಪ್ರವೇಶ ಉಚಿತವಾಗಿರುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಾರ್ತಾ ಇಲಾಖೆ ನಿರ್ದೇಶಕ ಡಾ. ಮುದ್ದು ಮೋಹನ್ ಮನವಿ ಮಾಡಿದ್ದಾರೆ.

0 comments:

Post a Comment