ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಕಳೆದ ವಾರ ಕನ್ನಡದಲ್ಲಿ ಬಹಳಷು ಪುಸ್ತಕಗಳು ಬಿಡುಗಡೆಯಾದವು.ಪತ್ರಿಕೆಗಳ ಸಾಧರ ಸ್ವಿಕಾರಗಳಲ್ಲಿ ಅವು ಗೋಚರಿಸಿ,ಫೇಸ್ ಬುಕ್ಕುಗಳಲ್ಲಿ ಚರ್ಚೆಯಾಗಿ ಯಾರ ಪುಸ್ತಕ ಟಾಪ್ ಎಷ್ಟರಲ್ಲಿದೆ ಎಂಬ ಕುತೂಹಲ ಹುಟ್ಟಿಸುವಂತೆ ಮಾಡಿದವು.ಆದರೆ ಶಿವರಾಮ ಕಾರಂತರ ಹುಟ್ಟೂರು ಉಡುಪಿಯ ಕೋಟದಲ್ಲಿ ಬಿದುಗಡೆಯಾದ ಒಂದು ಪುಸ್ತಕದ ಸುದ್ದಿ ಬಹುಶ ಪತ್ರಿಕೆಗಳ ಕೋಸ್ಟಲ್ ಪುಟಗಳಿಗಷ್ಟೇ ಸೀಮಿತವಾದವು.ಅ ಪುಸ್ತಕದ ಹೆಸ್ರು "ಈ ನಯನ ನೂತನ".ಮುಖಪುಟದಲ್ಲಿ ಜಯಂತ್ ಕಾಯ್ಕಿಣಿಯವರ ಚಿತ್ರವಿದ್ದರೂ ಅದು ಅವರ ಕಥೆಯಲ್ಲ,ಕವನ ಸಂಗ್ರಹವಲ್ಲ.ಅದು ಅವರು ಬರೆದ ಚಲನಚಿತ್ರ ಗೀತೆಗಳ ಬಗ್ಗೆ ಬೇರೆಯವರು ಬರೆದ ಪುಸ್ತಕ.ಪುಸ್ತಕದ ಸಂಪಾದಕ ಅವಿನಾಶ್ ಕಾಮತ್ ಎಂಬ ರೇಡೀಯೋ ಜಾಕಿ.ಮಾತಿನಲ್ಲೇ ಮನೆಕಟ್ಟುವ ಉದ್ಯೋಗದ ಹುಡುಗ.ಜಯಂತ್ ಎಂದರೆ ಹುಚ್ಚು ಅಭಿಮಾನ ಬೇರೆ.


ಹಾಡುಗಳೊಟ್ಟಿಗೆ ಆಟವಾಡುತ್ತಾ ಆಡುತ್ತ ಈತ ಜಯಂತರ ಅಭಿಮಾನಿಗಳನ್ನು,ಅವರನ್ನು ಹತ್ತಿರದಿಂದ ಕಂಡವರನ್ನು ಕಲೆಹಾಕುತ್ತಾನೆ.ಹೀಗೆ ಆತನ ಒಂದೂವರೆ ವರ್ಷದ ಪ್ರಯತ್ನದ ಫಲವೇ ಈ ನಯನಾ ನೂತನ.ಮೊನ್ನೆ ಕೋಟದಲ್ಲಿ ಬಿಡುಗಡೆಯಾಗಿದ್ದೂ ಇದೇ ಪುಸ್ತಕ.ಸ್ವತ ಜಯಂತ ಕಾಯ್ಕಿಣಿಯವರೇ ಬಿಡುಗಡೆ ಮಾಡಿ ಸಂಕೋಚವಾಗಿದೆ ಎಂದಿದ್ದರು.


ಬಿದುಗಡೆ ಮಾದಿದ ಕಾಯ್ಕಿಣಿಯವರು "ಕನ್ನಡದಲ್ಲಿ ಇದೋಂದು ವಿಶಿಷ್ಟ ಪ್ರಯೋಗ"ಎಂದರು. ಅದು ನಿಜವೂ ಕೂಡ ಏಕೆಂದರೆ ಸಿನಿಮಾಹಾಡನ್ನು ಕೇಳಿದ ಸಮಾಜದ ನಾನಾ ಕ್ಷೇತ್ರದ ಮಂದಿ ಬರೆದ ಸಾಹಿತ್ಯ ಕನ್ನಡದಲ್ಲಿ ಇದೇ ಮೊದಲು.ಒಂದು ವಿಷಯದ ಬಗ್ಗೆ ಹಲವರಿಂದ ಲೇಖನಗಳನ್ನು ಬರೆಸುವ ರಿಸ್ಕ್ ಅನ್ನು ವತ್ತಿಯಲ್ಲಿ ಸಾಹಿತಿಯೂ ಅಲ್ಲದ,ಪತ್ರಕರ್ತನೂ ಅಲ್ಲದ ೨೩ರ ಅವಿನಾಶ್ ಕಾಮತ್ ಮಾಡಿರುವುದು ಕೇವಲ ಜಯಂತ್ ಮೇಲಿನ ಅಭಿಮಾನದಿಂದ.ಜಯಂತ್ ಹಾಡುಗಳ ಬಗ್ಗೆ ಕೇವಲ ಅಭಿಮಾನ ಎಂದರೂ ನ್ಯಾಯ ಒದಗಿಸಿದಂತಾಗದು.ಏಕೆಂದರೆ ಜಯಂತ್ ಹೋಗಿದ್ದು ಅಂಥಾ ಒಂದು ಕ್ಷೇತ್ರಕ್ಕೆ.ಅದುವರೆಗೆ ನವಿರಾದ ಸಾಲುಗಳಲ್ಲಿ ಕಥೆ-ಕವನ ಬರೆಯುತಿದ್ದ ಜಯಂತರು ಇದ್ದಕ್ಕಿದ್ದ ಹಾಗೆ ಸಿನಿಮಾಕ್ಕೆ ಹಾದು ಬರೆಯಲು ಹೋದಾಗ ಹಲವ್ರು ಸಂಕಟಗೊಂಡಿದ್ದರು. ಕಾಯಕವೇ ಕೈಲಾಸವಾಗುವ ಮುಂಬೈ,ಕೈಲಾಸದಲ್ಲೆ ಕಾಯಕವನ್ನು ಕಾಣುವ ಗೋಕರ್ಣವಿನ್ನು ಮರೆಯಾಗಿಹೋಯಿತು ಎಂದು ಬಹುತೇಕರು ಸಂಕಟಪಟ್ಟಿದ್ದ್ರು.ಸಾಹಿತ್ಯದ ಸೊಗಡನ್ನು ಜಯಂತ್ ಅನಾವಶ್ಯಕವಾಗಿ ಬಲಿಗೊಟ್ಟರೆಂದೂ ಕೆಲವರು ನೊಂದುಕೊಂಡಿದ್ದರು.ಏಕೆಂದರೆ ಸಿನಿಮಾ ಸಾಹಿತ್ಯಕ್ಕೆ ಸಂಗೀತದ ಗುಣಗಳೊಂದಿಗೆ ರಾಜೀ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ.ಈ ರಾಜೀ ಮಾಡಿಕೊಳ್ಳುವ ಭರದಲ್ಲಿ ಜಯಂತರ ಸೂಕ್ಷ್ಮ ಸಂವೇದನೆಗಳು ಉಳಿದಾವೇ ಎಂಬ ಗುಮಾನಿ ಕೂಡ ಸತ್ಯವೆ.ಮೊದಲೇ ಸಂಗೀತ ಮತ್ತು ಸಾಹಿತ್ಯಕ್ಕೆ ಪರಸ್ಪರ ಬೆರೆಯದೆ ವಿಧಿ ಇಲ್ಲ ಎಂಬಂತಹ ನೆಂಟಸ್ಥನ.

ಅದರೂ ಜಯಂತ್ ಸಿನಿಮಾ ಕ್ಷೆತ್ರದಲ್ಲಿ ಯಶಸ್ವಿಯಾದರು.ಕೇವಲ ಯಶಸ್ವಿ ಮಾತ್ರವಲ್ಲ ಕನ್ನಡದ ಜನತೆ ಜಯಂತ್ ಸುರಿಸಿದ ಮಳೆಯಲ್ಲಿ ತೋಯ್ದುಹೋದರು.ಒಂದರ್ಥದಲ್ಲಿ ಹೇಳಬೇಕೆಂದರೆ ಜಯಂತರ ಲೇಖನಿ ಮತ್ತಷ್ಟು ಸೂಕ್ಷ್ಮವಾಯಿತು.ಅವರ ಸಾಲುಗಳು ಸಂಗೀತಕ್ಕೆ ಪ್ರತಿಸ್ಪರ್ಧಿಯಾಗದೆ ಸಮಸ್ಪರ್ಧಿಯಾದವು.ಕವಿಯೊಬ್ಬ ಸಿನಿಮಾಕ್ಕೂ ಲಗ್ಗೆ ಇಟ್ಟ.ಅನಂತರ ಆದುದೆಲ್ಲಾ ಇತಿಹಾಸ.ಇಡೀ ಕನ್ನಡ ಚಿತ್ರರಂಗ ಒಂದು ತಿರುವನ್ನು ಪದೆದುಕೊಂಡಿತು.ಅವರ ಎಲ್ಲಾ ಹಾಡುಗಳು ಜನರ ಹಾಡುಗಳಾದವು.ಪ್ರತಿಯೊಬ್ಬರ ಹದಯದ ಹಾಡುಗಳಾದವು. ಅದುವರೆಗೆ ಅವರು ತಾವು ಕಂಡಿಲ್ಲದಿದ್ದದ್ದನ್ನು ಕಂಡರು.ಬಾಲ್ಯದಲ್ಲಿ ತಾವು ಚಂದಾಮಾಮ ಓದಿದಂತೆ ರಸವತ್ತಾಗಿ ಹಾಡನ್ನು ಕೇಳಿದರು.

ಇಂಥ ಹಾಡುಗಳಿಂದ ಜಯಂತರಿಗೆ ಹಲವು ಅಬಿಮಾನಿಗಳು ಹುಟ್ಟಿಕೊಂಡರು.ಹಾಡು ಬರೆದವನಿಗೆ ಸಿಗುವ ಅಪರೂಪದ ಮರ್ಯಾದೆಯಿದು ಎಂದರೂ ತಪ್ಪಿಲ್ಲ.ಕವಿಯೊಬ್ಬನೂ ಸಲೆಬ್ರಿಟಿಯಾಗಬಹುದೆಂಬುದಕ್ಕೂ ಜಯಂತ್ ಕಾಯ್ಕಿಣಿ ಉದಾಹರಣೆ.ದೇವಸ್ಥಾನ ಕಟ್ತಿಸುವ,ಧಾನಧರ್ಮ ಮಾಡುವ,ಚಂದ್ರನಲ್ಲೂ ಚಂದ್ರಾಬಡಾವಣೆಯಲ್ಲೂ ಸೈಟು ಕೊಡುವ ಅಭಿಮಾನಿ ದೇವರುಗಳನ್ನು ನಾವು ನೋಡಿದ್ದೇವೆ.ಅಭಿಮಾನದ ಪರಾಕಾಷ್ಟೆಗೆ ನಗಾಡಿದ್ದೇವೆ,ತಮಾಷೆ ಮಾಡಿದ್ದೇವೆ.ಆದರೆ ರೇಡಿಯೋದಲ್ಲಿ ಚೇಷ್ಟೆಯ ಮಾತಾಡುತ್ತಾ ವಟವಟ ಎನ್ನುವ ಈ ಹುಡುಗನ ಅಭಿಮಾನಕ್ಕೆ ನಗಾಡಬೇಕೆನಿಸುವುದಿಲ್ಲ.ಬದಲು ಆತನ ಅಭಿಮಾನಕ್ಕೆ ಮರುಳಾಗುತ್ತೇವೆ.ಅಕ್ಷರ ಗಾರುಡಿಗನಿಗೆ ಅಕ್ಷರದಲ್ಲೇ ಅಕ್ಕರೆಯ ಅರ್ಪಣೆ ಮಾಡಿದಾತನ ಬಗ್ಗೆ ನಮಗೂ ಅಭಿಮಾನವುಂಟಾಗುತ್ತದೆ.

ಈ ನಯನ ನೂತನ ದಲ್ಲಿ ಜಯಂತರ ಹಾಡುಗಳ ಬಗ್ಗೆ ಇಪ್ಪತ್ತಾರು ಜನ ಬರೆದಿದ್ದಾರೆ.ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯಿದೆ.ಜಯಂತರಿಂದ ಹಾಡು ಬರೆಸಿದ ಯೋಗರಾಜ ಭಟ್ಟರು,ಅವರ ಗೀತೆಗೆ ಸಂಗೀತ ಕೋಟ್ಟ ಮನೋಮೂರ್ತಿಗಳ ಮಾತು,ನಟ ರಮೇಶ್ ಅರವಿಂದ್,ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್,ಪ್ರಾಧ್ಯಾಪ್ಯಕ ವರದೇಶ ಹಿರೇಗಂಗೆ,ಪತ್ರಕರ್ತೆ ಸಂಧ್ಯಾ ಪೈ,ಚಿಂತಕ ಮುರುಳೀಧರ ಉಪಾಧ್ಯ ಹಿರಿಯಡಕ,ನಿರೂಪಕಿ ಅಪರ್ಣ, ಜೈಹೋ ಗಾಯಕ ವಿಜಯಪ್ರಕಾಶ ಮೊದಲಾದವರ ಲೇಖನಗಳಿವೆ. ಇಲ್ಲಿನ ಬಹುತೇಕ ಬರಹಗಳು ಜಯಂತ್ ಹಾಡಿನ ಬೆರಗಿನ ಫಲವಾಗಿ ರೂಪುಗೊಂಡ ಸಾಲುಗಳು.ಅದಕ್ಕಲ್ಲದಿದ್ದರೂ ಇಂದು ವಿನೂತನ ಪ್ರಯತ್ನಕ್ಕಂತೂ ಈ ನಯನ ನೂತನ ಇಷ್ಟವಾಗುತ್ತದೆ.

ನೆಲ್ಚಿ ಅಪ್ಪಣ್ಣ,
ಸಾಹಿತ್ಯದ ವಿದ್ಯಾರ್ಥಿ,ಬೆಂಗಳೂರು ವಿ.ವಿ

0 comments:

Post a Comment