ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಳಗಾವಿ: ನೀರುಳ್ಳಿ ರೈತ ಹಾಗೂ ಗ್ರಾಹಕರ ಕಣ್ಣೀರಿಳಿಸಿದ ವಿಚಾರ ಮರೆಯಾಗುವ ಮೊದಲೇ ಬೆಳ್ಳುಳ್ಳಿ ತಾನೇನೂ ಕಡಿಮೆಯಿಲ್ಲ ಎಂಬಂತೆ ಫೋಸ್ ನೀಡಿದೆ.
ಬೆಳ್ಳುಳ್ಳಿಯ ಒಗ್ಗರಣೆಯಿಲ್ಲದಿದ್ದರೆ ಊಟಕ್ಕೇನೋ ಮಜಾನೇ ಇಲ್ಲ ಎಂಬಂತೆ. ಯಾವುದೇ ಅಡುಗೆಯಿರಲಿ...ಅದಕ್ಕೊಂದು ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರಂತೂ...ವ್ಹಾವ್...ಏನೊಂದು ರುಚಿ...! ಬಾಯಲ್ಲಿ ನೀರೂರದಿರದು. ದೂರದಲ್ಲಿ ಸಾಗುವಾಗಲೇ ಅಡುಗೆ ರೆಡಿ ಎಂಬಷ್ಟರ ಮಟ್ಟಿಗೆ ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಿದೆ. ಆದರೆ ಈ ದರಏರಿಕೆಯ ಬಿಸಿಯಿಂದಾಗಿ ಊಟಕ್ಕೊಂದು ರುಚಿ ನೀಡುವ ಬೆಳ್ಳುಳ್ಳಿ ಇದೀಗ ರುಚಿಕೆಡಿಸುವಂತೆ ಮಾಡಿದೆ.
ತರಕಾರಿ ಅಡುಗೆಯಿರಲಿ, ಮಾಂಸದ ಅಡುಗೆಯಿರಲಿ ಅದಕ್ಕೆ ಬೆಳ್ಳುಳ್ಳಿ ಬೇಕೇ ಬೇಕು. ಇಂತಹ ಬೆಳ್ಳುಳ್ಳಿಗೆ ಈಗ ಕೆ.ಜಿಯೊಂದರ ಬೆಲೆ ರು. 200! ಹೈಬ್ರಿಡ್ ಬೆಳ್ಳುಳ್ಳಿಗೆ ಕೆ.ಜಿಗೆ 150ರು.ಮಳೆ ಕಾರಣವೇ? : ಈ ವರ್ಷ ಎಲ್ಲೆಡೆಗಳಲ್ಲೂ ಭಾರೀ ಮಳೆಯಾಗಿದೆ. ಅತಿವೃಷ್ಟಿಯಿಂದಾಗಿ ಪ್ರತಿಯೊಂದು ಕೃಷಿಯೂ ಕೆಟ್ಟಿದೆ. ಪರಿಣಾಮ ಸಾಕಷ್ಟು ಪೂರೈಕೆಯಾಗುತ್ತಿಲ್ಲ. ಇದೇ ಕಾರಣಕ್ಕೆ ಇಂದು ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ.
ಇನ್ನೂ ಒಂದು ಕಾರಣವಿದೆ. ಪೂರೈಕೆ ಕಡಿಮೆಯಾಗುತ್ತಿದ್ದಂತೆಯೇ ದಲ್ಲಾಳಿಗಳು ವರ್ತಕರು ಅಕ್ರಮ ದಾಸ್ತಾನಿಟ್ಟು ಗ್ರಾಹಕರಿಗೆ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ಬೆಲೆ ಏರಿಸಿದ್ದಾರೆ...
ಈ ಬೆಲೆಯೇರಿಕೆ ಕೇವಲ ಬೆಳಗಾವಿಗಷ್ಟೇ ಸೀಮಿತವಾಗಿಲ್ಲ.ರಾಜಧಾನಿ, ಕರಾವಳಿ ಭಾಗಗಳಲ್ಲೂ ಇದೇ ರೀತಿ ಬೆಳ್ಳುಳ್ಳಿ ಶಾಕ್ ನೀಡತೊಡಗಿದೆ.

0 comments:

Post a Comment