ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ವೈವಿಧ್ಯ

ನಮ್ಮಲ್ಲಿ ಬಹುತೇಕ ಮಂದಿಗೆ ಸರಿಯಾಗಿ ನಿದ್ದೆ ಮಾಡಲಿಕ್ಕೆ ಬರೋಲ್ಲ. ಇದು ಜೋಕಲ್ಲ
ಸ್ವಾಮಿ. ನೂರಕ್ಕೆ ನೂರರಷ್ಟು ಸತ್ಯ. ಹ್ಯಾಗ್ಯಾಗೊ ಮಲಗಿ, ಒಟ್ಟಾರೆ ನಿದ್ದೆ ಮಾಡಿ
ಮುಗಿಸ್ತಾರೆ.
ನಿದ್ದೆ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಕೆಲಸ ಮಾಡಿ ಸುಸ್ತಾದ ದೇಹ ಹಾಗೂ ಮನಸ್ಸಿಗೆ,
ಉಲ್ಲಾಸ, ನವೋತ್ಸಾಹ ತುಂಬುತ್ತದೆ ನಿದ್ದೆ. ಸರಿಯಾದ ನಿದ್ದೆ ಇಲ್ಲದಿದ್ದರೆ ದೇಹದ
ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ದೇಹ ರೋಗಗಳ ವಿರುದ್ಧ
ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಬಿಡುತ್ತದೆ. ಶರೀರ ರೋಗಗಳ ಗೂಡಾಗಿ ಬಿಡುವ
ಸಾಧ್ಯತೆಯಿದೆ. ನಿದ್ರಾಹೀನತೆ ದೈಹಿಕ ಹಾಗೂ ಮಾನಸಿಕ ತೊಂದರೆಗೆ ಕಾರಣವಾಗುತ್ತದೆ.
ಮೆದುಳು ಸರಿಯಾಗಿ ಕೆಲಸ ಮಾಡಲಾರದು.



ಮಾನಸಿಕ ಖಿನ್ನತೆ, ಹೃದಯದ ತೊಂದರೆ
ಕಾಣಿಸಿಕೊಳ್ಳಬಹುದು. ಇದು ರಕ್ತದ ಒತ್ತಡ, ಬೊಜ್ಜು ಶೇಖರಣೆಗೆ ಮೂಲವಾಗಬಹುದು.
ನಿದ್ದೆಯ ಗುಣಮಟ್ಟ ಹಾರ್ಮೋನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಶಕ್ತಿಯ
ಮೇಲೂ ಪರಿಣಾಮ ಬೀರಬಲ್ಲುದು.
ಆರೋಗ್ಯವಂತ ವ್ಯಕ್ತಿಗೆ ದಿನವೊಂದಕ್ಕೆ ೬-೭ ತಾಸು ನಿದ್ದೆ ಬೇಕೇ, ಬೇಕು. ಹಾಗಾಗಿ
ಅನಾರೋಗ್ಯಕರವಾದ ಮಲಗುವ ಭಂಗಿ ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು. ಗೊರಕೆ, ಬೆನ್ನು
ನೋವು, ಕುತ್ತಿಗೆ ನೋವುಗಳು ಬರುವುದು ಅನಾರೋಗ್ಯಕರ ಮಲಗುವ ಭಂಗಿಯಿಂದಾಗಿ ಎಂಬುದು
ನೆನಪಿರಲಿ.
ಆಧುನಿಕ ಜೀವನ ಶೈಲಿ ಹಲವು ಮಂದಿಯಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತಿದೆ.
ದೀರ್ಘಾವಯವರೆಗೆ ಕೆಲಸ ಮಾಡುವವರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರು
ಉತ್ತಮ ನಿದ್ದೆಯಿಂದ ವಂಚಿತರಾಗುತ್ತಾರೆ ಎಂಬುದು ವೈದ್ಯರ ಅಭಿಮತ. ಮನುಷ್ಯನ ವಯಸ್ಸು
ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ನಿದ್ದೆ ಮಾಡುವುದು ಕಡಿಮೆ.
ಉತ್ತಮ ನಿದ್ದೆಗೆ ಕೆಲವು ಟಿಪ್ಸ್ ಇಲ್ಲಿದೆ.
* ಉತ್ತಮ, ಆರಾಮದಾಯಕವಾದ ಹಾಸಿಗೆ ಉಪಯೋಗಿಸಿ. ದುಬಾರಿ ಹಾಸಿಗೆಯೇ ಬೇಕೆಂದಿಲ್ಲ.
ಆದರೆ, ಮಲಗುವ ಹಾಸಿಗೆ ಸ್ವಚ್ಚವಾಗಿರಲಿ. ಶುಭ್ರವಾಗಿರಲಿ.
* ದಿಂಬು ಬಳಸುವ ಹವ್ಯಾಸವಿದ್ದರೆ ಉತ್ತಮ ದಿಂಬನ್ನು ಬಳಸಿ.
*ಮಲಗುವ ಕೋಣೆ ಸ್ವಚ್ಚವಾಗಿರಲಿ. ಆದಷ್ಟೂ ನಿಶ್ಯಬ್ಧವಾಗಿರುವಂತೆ ನೋಡಿಕೊಳ್ಳಿ.
ಪ್ರಶಾಂತ ವಾತಾವರಣ ಉತ್ತಮ ನಿದ್ದೆಗೆ ಅನುಕೂಲ.
*ಚಳಿ ಎನಿಸಿದರೆ ಹೆಚ್ಚು ಹೊದಿಕೆ ಬಳಸಿ, ಸೆಖೆ ಎನಿಸಿದರೆ ಕಡಿಮೆ ಹೊದಿಕೆ ಬಳಸಿ.
ಆರಾಮ ಎನಿಸುವಷ್ಟೇ ಹೊದಿಕೆ ಸಾಕು.
*ಮಲಗುವ ಕೋಣೆಯಲ್ಲಿ ಕಣ್ಣಿಗೆ ಹಿತ ನೀಡುವಷ್ಟೇ ಬೆಳಕಿರಲಿ. ಕತ್ತಲ ಕೋಣೆ ನಿದ್ದೆಗೆ
ಸಹಕಾರಿ. ಪ್ರಖರ ಬೆಳಕು ನಿದ್ದೆಗೆ ಒಳಿತಲ್ಲ.
*ಮಲಗುವುದಕ್ಕೂ ಸ್ವಲ್ಪ ಮೊದಲು ರಿಲ್ಯಾಕ್ಸ್ ಆಗಿ .
*ಬೇಕಿದ್ದರೆ ಬಿಸಿ ನೀರ ಸ್ನಾನ ಮಾಡಿ.
* ಬೆಚ್ಚನೆಯ ಹಾಲು ಕುಡಿಯಿರಿ. ಬೇಕಿದ್ದರೆ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ.
*ಹಲ್ಲುಜ್ಜಿ ಮಲಗಲು ಮರೆಯದಿರಿ.
* ಬಿಗಿಯಾದ ಬಟ್ಟೆ ಧರಿಸಿ ಮಲಗಬೇಡಿ. ಸಡಿಲ ಉಡುಪು ಧರಿಸಿ. ಹಿತವಾದ ಭಂಗಿಯಲ್ಲಿ ಮಲಗಿ.
* ಹಾಸಿಗೆ ಅನುಕೂಲಕರವಾಗಿಲ್ಲ ಎಂದಾದಾಗ ಹಾಗೆಯೇ ಮಲಗಬೇಡಿ. ಸರಿಪಡಿಸಿಕೊಂಡು ಮಲಗಿ.
* ನಿದ್ದೆ ಬರುತ್ತಿಲ್ಲ ಎಂದಾದರೆ, ಕೆಲ ಸಮಯ ದೀರ್ಘ ಉಸಿರಾಟ ನಡೆಸಿ.
* ದಿಂಬನ್ನು ಸ್ವಲ್ಪ ತಂಪಾಗಿಸಿ ಕೊಳ್ಳಿ. ಬೇಕಿದ್ದರೆ ಫ್ರಿಜ್ ಬಳಿ ಕೆಲ ಸಮಯ
ಹಿಡಿಯಿರಿ. ತಂಪನೆಯ ದಿಂಬು ತಲೆಗೆ ತಂಪನೆಯ ಅನುಭವ ನೀಡುತ್ತದೆ. ದೇಹದ ಉಳಿದ ಭಾಗ
ಇದನ್ನು ಅನುಸರಿಸುತ್ತದೆ.
* ಮಲಗಿ ೧೦-೧೫ ನಿಮಿಷವಾದರೂ ನಿದ್ದೆ ಬರಲಿಲ್ಲ ಎಂದಾದರೆ ಎದ್ದು ನಿಧಾನ ಓಡಾಡಿ. ಕೆಲ
ಸಮಯ ಒಳ್ಳೆಯ ಪುಸ್ತಕ ಓದಿ. ಇಲ್ಲ ಏನಾದರೂ ಬರೆಯಿರಿ. ಇಂಪಾದ ಸಂಗೀತ ಕೇಳಿ. ನಿದ್ದೆ
ಬರದಿದ್ದರೂ ಬಲವಂತವಾಗಿ ಹಾಗೆಯೇ ಮಲಗಿ ಹಾಸಿಗೆ ಮೇಲೆ ಹೊರಳಾಡಬೇಡಿ.
* ಇವೆಲ್ಲಕ್ಕಿಂತ ಮುಖ್ಯವಾಗಿ ದಿನವಿಡಿ ಚಟುವಟಿಕೆಯಿಂದ ಕೂಡಿದ್ದು,
ಕ್ರಿಯಾಶೀಲರಾಗಿರಿ. ಚಟುವಟಿಕೆಯಿಂದ ಇದ್ದರೆ ದೇಹದಲ್ಲಿ ಅವಶ್ಯಕ ಹಾರ್ಮೋನು
ಉತ್ಪತ್ತಿಯಾಗುತ್ತದೆ. ದೇಹದ ಶಕ್ತಿ ವ್ಯಯವಾಗುತ್ತದೆ. ದೇಹದಲ್ಲಿ ಜಢತ್ವ
ನೆಲೆಸಿದ್ದರೆ ಶಕ್ತಿ ವ್ಯಯವಾಗುವುದೇ ಇಲ್ಲ. ಪರಿಣಾಮ ದೇಹಕ್ಕೆ ನಿದ್ದೆಯ ಅವಶ್ಯಕತೆ
ಬೀಳುವುದಿಲ್ಲ.
* ಮಲಗುವುದಕ್ಕೂ ಮೊದಲು ಕೆಲ ಹೊತ್ತು ಧ್ಯಾನ/ಪ್ರಾರ್ಥನೆ ಮಾಡುವ, ಉತ್ತಮ
ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದಾಗಿ ಮಲಗುವ ಸಮಯದಲ್ಲಿ
ಮನಸ್ಸಿನಲ್ಲಿ ಬೇರೆ ಯೋಚನೆಗಳು ಬಂದು ಮನಸ್ಸು ಕಲುಷಿತಗೊಳ್ಳುವ ಸಂದರ್ಭ ಬರಲಾರದು.
ಬೇಕಿದ್ದರೆ ಇಂಪಾದ ಸಂಗೀತ ಕೇಳಿ. ಸ್ವಲ್ಪ ಹೊತ್ತು ಸಂಗೀತದ ವಾದ್ಯಗಳನ್ನು ನುಡಿಸಿ.
ಮನಸ್ಸು ಪ್ರಶಾಂತವಾಗಬಹುದು.
* ಮಲಗುವ ಮುಂಚೆ ಪಿಷ್ಠ ಅಕ ಇರುವ ವಸ್ತುಗಳ ಸೇವನೆ ಮಾಡಬೇಡಿ. ಹೊಟ್ಟೆ ಬಿರಿಯುವಷ್ಟು
ಆಹಾರ ಸೇವನೆ ಬೇಡ. ಹಿತ, ಮಿತ ಆಹಾರ ಸೇವಿಸಿ. ಪ್ರೋಟಿನ್, ತರಕಾರಿ, ಸ್ವಲ್ಪ ಪ್ರಮಾಣದ
ಕೊಬ್ಬು ಊಟದಲ್ಲಿರಲಿ. ಕುರುಕಲು ತಿಂಡಿ, ಮದ್ಯ ಸೇವನೆ, ಕೆಫಿನ್, ನಿಕೊಟಿನ್,
ಇನ್ನಿತರ ನಿದ್ದೆ ತಡೆಯುವ ಪಾನೀಯಗಳ ಸೇವನೆ ಬೇಡ.
* ಮಲಗುವುದಕ್ಕೂ ಕನಿಷ್ಠ ಮೂರು ಗಂಟೆಗಳ ಮೊದಲು ಊಟ ಮಾಡಿ.
* ಲಘು ಸಂಗೀತ ಕೇಳುತ್ತಾ ಮಲಗಿದಾಗ, ಮಿದುಳು ಸಂಗೀತಕ್ಕೆ ತಕ್ಕಂತೆ ನಿಧಾನವಾಗಿ
ತಲೆದೂಗುತ್ತದೆ. ಹಾಗೆಯೇ ನಿದ್ದೆ ಆವರಿಸುತ್ತದೆ.
* ದೇಹದ ಉಷ್ಣತೆ ಕೂಡ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದಾಗ ದೇಹದ
ಉಷ್ಣತೆ ಕಡಿಮೆ ಇರುತ್ತದೆ. ರಾತ್ರಿ ವೇಳೆ ಮಲಗುವಾಗ ಹೆಚ್ಚಿರುತ್ತದೆ. ನಿದ್ದೆಗೆ
ಜಾರಿದಂತೆ ದೇಹದ ಉಷ್ನತೆ ಕಡಿಮೆಯಾಗುತ್ತಾ ಸಾಗುತ್ತದೆ. ಬಿಸಿ ನೀರ ಸ್ನಾನ ದೇಹದ
ಉಷ್ಣತೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ನಂತರ ವೇಗವಾಗಿ ಉಷ್ಣತೆ ತಗ್ಗಲು
ಕಾರಣವಾಗುತ್ತದೆ. ನಿದ್ದೆಯ ಮಂಪರಿಗೆ ನಮ್ಮನ್ನು ತಳ್ಳುತ್ತದೆ.
* ಇವೆಲ್ಲಾ ತಂತ್ರಗಳು ವಿಫಲವಾದಾಗ ನೈಸರ್ಗಿಕ ಔಷಧಗಳತ್ತ ಮುಖ ಮಾಡಬಹುದು.
ಮೆಲಾಟೊನಿನ್ ಇಂತಹ ಔಷಗಳಲ್ಲಿ ಒಂದು. ಹಾಗೇ ನೋಡಿದರೆ ಮೆಲಾಟೊನಿನ್ ನಮ್ಮ ದೇಹದಲ್ಲಿಯೇ
ಉತ್ಪಾದನೆಯಾಗುವ ಹಾರ್ಮೋನ್. ಇದು ರಾತ್ರಿ ವೇಳೆ ಉತ್ಪಾದನೆಯಾಗುವ ಹಾರ್ಮೊನ್. ಇದನ್ನು
’ನಿದ್ದೆಯ ಹಾರ್ಮೊನ್’ ಅಂತಲೂ ಕರೆಯಲಾಗುತ್ತದೆ. ಅಂಧರು, ಅತಿಯಾಗಿ ಬಿಸಿಲಿಗೆ
ಮೈಯೊಡ್ಡುವವರು ನಿದ್ದೆಯ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚು. ಕಾರಣ ಇವರಲ್ಲಿ
ಮೆಲಾಟೊನಿನ್ ಉತ್ಪಾದನೆ ಕಡಿಮೆ ಎನ್ನುವುದು ಆರೋಗ್ಯ ತಜ್ಞರ ಅಭಿಮತ. ಕ್ಯಾಮೊಲಿನ್,
ಅತಿ ಹಳೆಯ ನೈಸರ್ಗಿಕ ಔಷಧ. ಇದು ಆಹ್ಲಾದಕರ ರುಚಿ ಹೊಂದಿದ್ದು, ಬಹುತೇಕ ವೇಳೆ ಚಹ ತರಹ
ಸೇವನೆ ಮಾಡಲಾಗುತ್ತದೆ. ಹೊಟ್ಟೆ ಉರಿಯ ಶಮನಕ್ಕೂ ಇದನ್ನು ಬಳಸಲಾಗುತ್ತದೆ.
ವ್ಯಾಲೆರಿಯನ್ ಬಳಕೆ ಕೂಡ ರೂಢಿಯಲ್ಲಿದೆ.

- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ

ವೈವಿಧ್ಯ

ಸೀಮೆ ಎಣ್ಣೆ ಬೆರೆಸಿ ಪೆಟ್ರೋಲ್ ಮಾರುವ, ಅಕ್ಕಿ ಜತೆ ಕಲ್ಲು ಬೆರೆಸುವ, ಉಪ್ಪಿನಲ್ಲಿ ಮಣ್ಣು ಸೇರಿಸುವ ಇಂದಿನ ದಿನಗಳಲ್ಲಿ ನಿಮ್ಮ ಕೈಯಲ್ಲಿರುವ ನೋಟೊಂದು ನಕಲಿಯಾಗಿದ್ದರೆ ಅದೇನು ಆಶ್ಚರ್ಯ ಪಡಬೇಕಾದ ಸಂಗತಿಯಲ್ಲ ಬಿಡಿ. ಆದರಿದು ಅಪರಾಧ.



ನಿಮ್ಮ ಮುಗ್ಧತೆಗೆ ನೀವು ಬೆಲೆ ತೆರಬೇಕಾದೀತು ಎಂಬುದಷ್ಟೇ ಆಶ್ಚರ್ಯದ ಸಂಗತಿ.
ಸಾಮಾನ್ಯ ಜನರ ಮಾತು ಹಾಗಿರಲಿ. ಮಹಾರಾಷ್ಟ್ರದ ಅಪರಾಧ ಪತ್ತೆ ದಳ ಹಾಗೂ ಭಯೋತ್ಪಾದನಾ
ನಿಗ್ರಹ ದಳದ ಅಕಾರಿಗಳಿಗೇ ಅಸಲಿ ಹಾಗೂ ನಕಲಿ ನೋಟುಗಳ ನಡುವಿನ ವ್ಯತ್ಯಾಸ ಪತ್ತೆ
ಹಚ್ಚಲು ಸಾಧ್ಯವಾಗಲಿಲ್ಲ. ನಕಲಿ ನೋಟಿನಲ್ಲಿಯ ಶೇ. ೯೫ರಷ್ಟು ಭಾಗ ಅಸಲಿ ನೋಟುಗಳನ್ನೇ
ಹೋಲುತ್ತಿತ್ತು. ಆದರೆ,

ಈ ಸಂಗತಿ ನಕಲಿಯಲ್ಲ
* ದೇಶದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ೧೦ ಲಕ್ಷ ನೋಟುಗಳ ಪೈಕಿ ೪ ನೋಟುಗಳು ನಕಲಿ.
* ನಕಲಿ ನೋಟು ವ್ಯವಹಾರದಲ್ಲಿ ಸಿಕ್ಕಿ ಹಾಕಿಕೊಂಡರೆ ನಿಮ್ಮ ವಿರುದ್ಧ ಕಾನೂನು ಬಾಹೀರ
ಚಟುವಟಿಕೆ ತಡೆ ಕಾಯಿದೆ ಅನ್ವಯವಾಗುತ್ತದೆ.
* ಎಟಿಎಮ್ ಮೂಲಕವೂ ಕೆಲವು ಬಾರಿ ನಕಲಿ ನೋಟುಗಳು ಬಂದ ಉದಾಹರಣೆಗಳಿವೆ.
* ಕಳ್ಳ ನೋಟುಗಳನ್ನು ಪತ್ತೆ ಹಚ್ಚಲೆಂದೇ ತಯಾರಿಸಲಾದ ಚೆಕ್‌ಮೆಟ್ ಯಂತ್ರಗಳ ಕಣ್ಣಿಗೂ
ಈ ನಕಲಿ ನೋಟುಗಳು ಬೀಳದಿರುವಷ್ಟು ‘ಅಸಲಿ’ಯಾಗಿ ಮುದ್ರಿತವಾಗುತ್ತಿವೆ.
* ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕಗಳಲ್ಲಿ
ನಕಲಿ ನೋಟಿನ ಹಾವಳಿ ಅಕ.

ನಿಮಗಿದು ತಿಳಿದಿರಲಿ
* ಬಹುತೇಕ ಬ್ಯಾಂಕ್‌ಗಳು ಬಣ್ಣದ ಭೂಪಟ ಇಟ್ಟಿದ್ದು, ನಕಲಿ ನೋಟಿನ ಬಣ್ಣದ ಕುರಿತು
ಪ್ರಾಥಮಿಕ ಮಾಹಿತಿ ಪಡೆಯಬಹುದು.
* ಭಾರತೀಯ ರಿಸರ್ವ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯ.
* ನಕಲಿ ನೋಟು ಪತ್ತೆ ಹಚ್ಚುವ ಚೆಕ್‌ಮೆಟ್ ಯಂತ್ರಗಳು ಎಲೆಕ್ಟ್ರಾನಿಕ್ಸ್
ಅಂಗಡಿಗಳಲ್ಲಿ ದೊರೆಯುತ್ತವೆ. ಸಾಧಾರಣವಾಗಿ ೧,೫೦೦-೪,೦೦೦ ರೂ.ಗಳ ಬೆಲೆಯಲ್ಲಿ ಇವು
ಲಭ್ಯ.
* ನಕಲಿ ನೋಟುಗಳನ್ನು ಪತ್ತೆ ಹಚ್ಚಲು ಬಳಸಬಹುದಾದ ಲೇಸರ್ ಟಾರ್ಚ್‌ಗಳು ೧೦-೪೦
ರೂ.ಗಳಿಗೆ ದೊರೆಯುತ್ತವೆ.
* ನಕಲಿ ನೋಟುಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಕೆಲವು ಮೊಬೈಲ್‌ಗಳಲ್ಲೂ ಲಭ್ಯ.

ನಿಮ್ಮ ಸಹಕಾರ ಬೇಕು
ಕಳ್ಳನೋಟುಗಳು ಸಿಕ್ಕರೆ ಬಹುತೇಕ ಗ್ರಾಹಕರು ದೂರು ನೀಡಲು ಹಿಂಜರಿಯುತ್ತಾರೆ. ಕಾರಣ
ತಾವೆಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂಬ ಭಯ. ನಕಲಿ ನೋಟು ಪತ್ತೆಯಾದರೆ ಪೊಲೀಸರಿಗೆ
ದೂರು ನೀಡಿ. ನೋಟು ಎಲ್ಲಿ ಸಿಕ್ಕಿತು ಎಂಬುದರ ಬಗ್ಗೆ ಮಾಹಿತಿ ನೀಡಿ. ಈ ಬಗ್ಗೆ
ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಾರೆ. ನಕಲಿ ನೋಟಿನ ಚಲಾವಣೆ ರಿಯಲ್ ಎಸ್ಟೇಟ್
ಉದ್ಯಮ, ಪ್ರವಾಸಿ ತಾಣಗಳಲ್ಲಿ ಹೆಚ್ಚು. ಈ ಬಗ್ಗೆ ಜಾಗರೂಕರಾಗಿರಿ.

ಐಎಸ್‌ಐ ಕೈವಾಡ
ನೋಟು ಮುದ್ರಿಸುವ ಕಾಗದ ಹಾಗೂ ಇಂಕ್‌ನ್ನು ಆರ್‌ಬಿಐಗೆ ಜರ್ಮನ್ ಮೂಲದ ಕಂಪನಿಯೊಂದು
ಸರಬರಾಜು ಮಾಡುತ್ತಿದೆ. ಇದನ್ನು ಕೇವಲ ಯಾವುದಾದರೊಂದು ದೇಶದ ಸರಕಾರವಷ್ಟೇ ಖರೀದಿಸಲು
ಸಾಧ್ಯ. ಆದರೆ, ಪಾಕಿಸ್ತಾನ ಸರಕಾರವೇ ಭೂಗತ ಜಗತ್ತಿನ ನಂಟಿನೊಂದಿಗೆ ಭಾರತದ ಕರೆನ್ಸಿ
ಮಾದರಿಯ ಪೇಪರ್ ಹಾಗೂ ಇಂಕ್‌ನ್ನು ಖರೀದಿಸಿ, ನೋಟುಗಳನ್ನು ನಕಲಿಯಾಗಿ ಮುದ್ರಿಸಿ
ಐಎಸ್‌ಐ ಏಜೆಂಟರ ಮೂಲಕ ದೇಶದೊಳಕ್ಕೆ ನುಗ್ಗಿಸುತ್ತಿದೆ.

ಅಸಲಿ ನೋಟಿನಲ್ಲಿ ಇವುಗಳನ್ನು ಗಮನಿಸಿ
* ಮಹಾತ್ಮಾಗಾಂ ಭಾವಚಿತ್ರವಿರುವ ಸರಣಿಯ ನೋಟುಗಳು ಗಾಂಯ ವಾಟರ್ ಮಾರ್ಕ್ (ನೋಟಿನ
ಅಸಲಿತನ ಸೂಚಿಸುವ ಕಪ್ಪುಗೆರೆ) ಹೊಂದಿದ್ದು, ಬೆಳಕು ಹಾಗೂ ನೆರಳಿನ ಛಾಯೆ
ತೋರಿಸುತ್ತವೆ. ಅಲ್ಲದೆ, ಬಹುಮಾರ್ಗೀಸೂಚಕ ಗೆರೆಗಳನ್ನು ಹೊಂದಿರುತ್ತವೆ.
* ಪ್ರತಿ ನೋಟಿನಲ್ಲಿಯೂ ಮೂರು ಮಿಲಿ ಮೀಟರ್ ಅಗಲದ ಲಂಬವಾದ ಭದ್ರತಾ ಎಳೆ ಅಥವಾ ಕಡ್ಡಿ
ಇರುತ್ತದೆ. ಇದು ಸಿಲ್ವರ್ ಬ್ರೊಮೈಡ್ ಕಡ್ಡಿ. ಗಾಂ ಭಾವಚಿತ್ರದ ಎಡಭಾಗದಲ್ಲಿರುತ್ತದೆ.
ಒಂದಾದ ನಂತರ ಒಂದರಂತೆ ಹಿಂದಿಯಲ್ಲಿ ಭಾರತ, ಸಂಬಂತ ನೋಟಿನ ಮೌಲ್ಯದ ಅಂಕೆಗಳು (ಉದಾ:
೧೦೦೦, ೫೦೦, ೧೦೦) ಹಾಗೂ ಆರ್‌ಬಿಐ ಎಂಬ ಬರಹಗಳಿರುತ್ತವೆ. ಒಂದು ವೇಳೆ ೧೦೦೦, ೫೦೦
ಹಾಗೂ ೧೦೦ರ ನೋಟುಗಳನ್ನು ಒಟ್ಟಿಗೆ ಬೆಳಕಿಗೆ ಎದುರಾಗಿ ಹಿಡಿದರೆ, ಒಂದೇ ಕಡ್ಡಿಯಾಗಿ
ಕಂಡು ಬರುತ್ತದೆ.
* ೨೦ ರೂ.ಗಿಂತ ಅಕ ಮೌಲ್ಯದ ನೋಟುಗಳಲ್ಲಿ ಗಾಂ ಭಾವಚಿತ್ರದ ಬಲಭಾಗದಲ್ಲಿ ಲಂಬವಾದ
ಪಟ್ಟಿ ಇರುತ್ತದೆ. ಲೇಟೆಂಟ್ ಇಮೇಜ್‌ನಲ್ಲಿ ಸಂಬಂತ ಮೌಲ್ಯದ ಅಂಕೆಗಳನ್ನು
ಹೊಂದಿರುತ್ತವೆ. ನೋಟನ್ನು ಅಂಗಾತ ಹಿಡಿದಾಗ ಮಾತ್ರ ಈ ಲೇಟೆಂಟ್ ಇಮೇಜ್‌ನ್ನು
ಕಾಣಬಹುದು.
* ೫ ಹಾಗೂ ೧೦ರ ನೋಟುಗಳಲ್ಲಿ ಆರ್‌ಬಿಐ ಪದವಿರುತ್ತದೆ. ೨೦ರೂ.ಗಿಂತ ಹೆಚ್ಚಿನ ಮೌಲ್ಯದ
ನೋಟುಗಳಲ್ಲಿ ಇದರ ಜತೆ ಸಂಬಂತ ಮೌಲ್ಯದ ಅಂಕೆಗಳೂ ಇರುತ್ತವೆ. ಮಸೂರಗಳನ್ನು ಬಳಸಿ
ಇವುಗಳನ್ನು ಪರಿಶೀಲಿಸಬಹುದು.
* ೨೦ರೂ ಗಿಂತ ಅಕ ಮೌಲ್ಯದ ನೋಟುಗಳಲ್ಲಿ ಎಡಭಾಗದಲ್ಲಿರುವ ಗಾಂ ಭಾವಚಿತ್ರ, ರಿಸರ್ವ್
ಬ್ಯಾಂಕ್ ಮುದ್ರೆ, ಗ್ಯಾರಂಟಿ ಪ್ರಮಾಣ, ಅಶೋಕ ಸ್ಥಂಭ, ಲಾಂಛನ ಹಾಗೂ ಆರ್‌ಬಿಐ
ಗವರ್ನರ್ ಅವರ ಸಹಿಗಳು ಬರಿಗೈಯಿಂದ ಮುಟ್ಟಿ ಅನುಭವ ಪಡೆಯುವಷ್ಟರ ಮಟ್ಟಿಗೆ
(ಇಂಟಾಗ್ಲಿಯೊ) ಸ್ಪಷ್ಟವಾಗಿ ಮುದ್ರಿತವಾಗಿರುತ್ತವೆ.
* ಈ ಕೆತ್ತನೆ ವಿನ್ಯಾಸ ಬೇರೆ ಬೇರೆ ಮೌಲ್ಯದ ನೋಟುಗಳಿಗೆ ಬೇರೆ ಬೇರೆ
ಮಾದರಿಯಲ್ಲಿರುತ್ತದೆ. ೨೦ರೂ. ನೋಟಿನ ಮೇಲೆ ಲಂಬ ಚತುಷ್ಕೋಣ, ೫೦ರೂ ನೋಟಿಗೆ ಚಚ್ಚೌಕ,
೧೦೦ರೂ. ನೋಟಿಗೆ ತ್ರಿಕೋಣಾಕೃತಿ, ೫೦೦ರೂ.ಗೆ ವೃತ್ತಾಕಾರ, ೧೦೦೦ರೂ. ನೋಟಿನಲ್ಲಿ
ಡೈಮಂಡ್ ಆಕೃತಿಯಲ್ಲಿರುತ್ತದೆ. ಅಂಧರೂ ಸಹ ಕೈಯಿಂದ ಮುಟ್ಟಿ ನೋಟಿನ ಮೌಲ್ಯ ಗುರುತಿಸಲು
ಇದು ಸಹಕಾರಿ.
* ಅಂಕೆಗಳ ಸರಣಿಯನ್ನು ವಿಶೇಷವಾದ ಶಾಹಿಯಲ್ಲಿ ಮುದ್ರಿಸಲಾಗಿರುತ್ತದೆ. ಇದರ ಮೇಲೆ
ಕ್ಷ-ಕಿರಣ ಅಥವಾ ಅತಿ ನೇರಳೆ ಕಿರಣಗಳು ಬಿದ್ದರೆ ಬಣ್ಣದ ಹೊಳಪಿನ ಕಾಂತಿ ಗಮನಿಸಬಹುದು.
ಅಲ್ಲದೆ, ನೋಟುಗಳಲ್ಲಿ ಆಪ್ಟಿಕಲ್ ನಾರು ಅಥವಾ ಎಳೆ ಇರುತ್ತದೆ. ಅತಿ ನೇರಳೆ
ಕಿರಣಗಳಿಗೆ ಒಡ್ಡಿದಾಗ ಇವೆರಡನ್ನೂ ಕಾಣಬಹುದು. ಜತೆಗೆ ೧೦೦೦ ಹಾಗೂ ೫೦೦ರ ನೋಟುಗಳ
ಮೇಲ್ಮುಖ ಭಾಗದಲ್ಲಿ ಬೆಳಕಿಗೆ ಒಡ್ಡಿದಾಗ ಬದಲಾವಣೆ ಕಾಣುವ ಶಾಹಿ ಬಳಸಲಾಗಿದೆ.
* ೧೦೦೦ ರೂ. ನೋಟನ್ನು ಅಂಗಾತ ಹಿಡಿದಾಗ ಹಸಿರು ಬಣ್ಣದ ಹಾಗೂ ಕೋನಾಕೃತಿಯಲ್ಲಿ
ಹಿಡಿದಾಗ ನೀಲಿ ಬಣ್ಣದ ಛಾಯೆ ಗೋಚರವಾಗುತ್ತದೆ. ನೋಟಿನ ಎರಡೂ ಕಡೆ ವಾಟರ್‌ಮಾರ್ಕ್
ಹಾಗೂ ಲಂಬಪಟ್ಟಿಯ ಮಧ್ಯದಲ್ಲಿ ಸಣ್ಣದಾಗಿ ಪ್ಲೊರಾಲ್ (ಹೂವಿನ ಮಾದರಿಯ) ವಿನ್ಯಾಸ
ಇರುತ್ತದೆ. ಬೆಳಕಿಗೆ ಎದುರಾಗಿ ಹಿಡಿದಾಗ ಎರಡೂ ಕಡೆಯ ವಿನ್ಯಾಸ ಪರಸ್ಪರ ಮಿಳಿತವಾಗಿ
ಒಂದೇ ವಿನ್ಯಾಸದ ತರಹ ಕಂಡು ಬರುತ್ತದೆ.

ಇದು ನಕಲಿ ನೋಟು
* ಅಸಲಿ ನೋಟುಗಳಿಗೆ ಹೋಲಿಸಿದರೆ ನಕಲಿ ನೋಟುಗಳಲ್ಲಿನ ಉಪಸರ್ಗ ಸರಣಿ, ಅಂಕೆಗಳು
ಗಾತ್ರದಲ್ಲಿ ಸಣ್ಣದಿರುತ್ತವೆ.
* ಸರಣಿ ಹಾಗೂ ಅಂಕೆಗಳು ಒಂದೇ ಗೆರೆಯ ಮೇಲೆ ಇರುವುದಿಲ್ಲ.
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಗ್ಯಾರಂಟಿ ಹಾಗೂ ಭರವಸೆಯ ವಾಕ್ಯಾಂಗಗಳಿಗೆ
ದಪ್ಪಕ್ಷರ ಬಳಸಿರುತ್ತಾರೆ.
* ಭದ್ರತಾ ಎಳೆ ಅಥವಾ ಕಡ್ಡಿ ಸರಿಯಾಗಿ ಲಂಬಾಕಾರದಲ್ಲಿರುವುದಿಲ್ಲ.
* ಸಿಲ್ವರ್ ಬ್ರೊಮೈಡ್ ಬದಲಾಗಿ ಬೆಳ್ಳಿಯ ಬಣ್ಣದಿಂದ ಕೂಡಿದ ಸಣ್ಣ ಪಟ್ಟಿ ಇರುತ್ತದೆ.
* ವಾಟರ್ ಮಾರ್ಕ್ ಎಡಗಡೆಯ ಗಾಂ ಭಾವಚಿತ್ರ, ರಿಸರ್ವ್ ಬ್ಯಾಂಕ್ ಮುದ್ರೆ, ಗ್ಯಾರಂಟಿ
ಪ್ರಮಾಣ, ಅಶೋಕ ಸ್ಥಂಭ
ಲಾಂಛನಗಳು ಸಮರ್ಪಕವಾಗಿರುವುದಿಲ್ಲ.
* ಗಾಂಯ ಭಾವಚಿತ್ರ ದಪ್ಪ ಗಾತ್ರದ್ದಿರುತ್ತದೆ.
* ಇಂಟಾಗ್ಲಿಯೊ ಮುದ್ರಣ ಇರುವುದಿಲ್ಲ. ಅತಿ ನೇರಳೆ ಕಿರಣಗಳಿಗೆ ಹಿಡಿದಾಗ ಆಪ್ಟಿಕಲ್
ಎಳೆಗಳು ಗೋಚರಿಸಿದರೂ, ಅವುಗಳ ಸಂಖ್ಯೆ ಕಡಿಮೆ ಇರುವುದು ಗಮನಕ್ಕೆ ಬರುತ್ತದೆ.
* ಅತಿ ನೇರಳೆ ಕಿರಣಗಳಿಗೆ ಭದ್ರತಾ ಎಳೆ ಹೊಳೆಯುವುದಿಲ್ಲ.
* ನೋಟಿಗೆ ಬಳಸಲಾದ ಪೇಪರ್, ಮರದ ತಿರುಳಿ(ಪಲ್ಪ್)ನಿಂದ ಮಾಡಿದ್ದಾಗಿರುತ್ತದೆ.

- ಮಹಾಬಲೇಶ್ವರ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಅಲ್ಲಿ ಮಕ್ಕಳ ನಗುವಿದೆ...ಮುಗ್ಧವಾದಂತಹ ನಿಷ್ಕಲ್ಮಶ ಭಾವನೆಗಳಿವೆ... ಆಟಗಳಿವೆ...ಚಿತ್ರಗಳಿವೆ...ಮುಖವಾಡವಿದೆ...ಮಕ್ಕಳ ಕೈಯಿಂದ ಚಿತ್ರಿಸಲ್ಪಟ್ಟ ಸುಂದರ ಚಿತ್ರಗಳಿವೆ. ಉಬ್ಬು ಶಿಲ್ಪಗಳಿವೆ... ಮುಖವಾಡಗಳಿವೆ...ಗೊಂಬೆ ಗಳಿವೆ... ಪುಟ್ಟ ಪುಟ್ಟ ಸುಂದರ ಶುಭಾಶಯ ಪತ್ರಗಳಿವೆ...ನೂರಾರು ಮುಖವಾಡಗಳು ಗೋಡೆಗಳಲ್ಲಿ ತೂಗುಹಾಕಿವೆ.... ಹಾಡು ಕುಣಿತ..ರಂಗಗೀತೆ ಹೀಗೆ ನಿರಂತರ ಚಟುವಟಿಕೆ...ಎಲ್ಲವೂ ಸುಂದರ ಅಚ್ಚುಕಟ್ಟು...






ಆಳ್ವಾಸ್ ಎಂದ ಮೇಲೆ ಕೇಳಬೇಕೇ... ಎಲ್ಲವೂ ಸಮಯಕ್ಕೆ ಸರಿಯಾಗಿ ಶಿಸ್ತುಬದ್ಧವಾಗಿ ನಡೆದೇ ನಡೆಯುತ್ತದೆ. ಈ ಶಿಬಿರವೂ ಹಾಗೆಯೇ... ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ವಿಚಾರಗಳು ಅಷ್ಟೇ ಶಿಸ್ತುಬದ್ಧವಾಗಿ `ಆಳ್ವಾಸ್ ಚಿಣ್ಣರ ಮೇಳ 2010'ರಲ್ಲಿ ಕಂಡುಬರುತ್ತವೆ.




ಮೂಡಬಿದಿರೆಯ ಸ್ವರಾಜ್ಯ ಮೈದಾನದ ಬಳಿಯಿರುವ ಆಳ್ವಾಸ್ ಸ್ಪೆಷಲ್ ಸ್ಕೂಲ್ ನಲ್ಲಿ ನೂರೈವತ್ತು ಮಂದಿ ಚಿಣ್ಣರು ಏಪ್ರಿಲ್ 25ರಿಂದ ಒಟ್ಟಾಗುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿರಂತರ ಚಟುವಟಿಕೆಯಲ್ಲಿ ಕೂಡಿರುತ್ತಾರೆ. ಕಸದಿಂದ ರಸ ತೆಗೆಯುತ್ತಾರೆ... ಪವಾಡಗಳೆಲ್ಲವೂ ಇಷ್ಟೇ ಎಂಬಂತೆ ಅದರ ರಹಸ್ಯಗಳನ್ನು ಬಯಲುಗೊಳಿಸುತ್ತಾರೆ. ರಂಗ ಚಟುವಟಿಕೆಗಳಲ್ಲೂ ತೊಡಗುತ್ತಾರೆ. ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತಾ ಜನಮನ ಗೆಲ್ಲುತ್ತಿದ್ದಾರೆ.





ರಜೆಯನ್ನು ಸುಮ್ಮನೆ ಕಳೆಯದೆ ಒಂದಷ್ಟು ಸದುಪಯೋಗ ಪಡಿಸುವ ಉದ್ದೇಶದಿಂದ ಈ ಮೇಳಕ್ಕೆ ಬಂದ ಚಿಣ್ಣರಿಗೆ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಸೂಕ್ತ ಮಾರ್ಗದರ್ಶನದ ಪಾಠ ಕಲಿಸುತ್ತಿದ್ದಾರೆ. ಜೊತೆಗೆ ಹರೀಶ್ ಆಚಾರ್ಯ, ಮುರಹರಿ ಕಾಸರಗೋಡು, ವಿಕ್ರಂ ಶೆಟ್ಟಿ, ತಾರಾನಾಥ ಕೈರಂಗಳ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ, ಭಾಸ್ಕರ ನೆಲ್ಯಾಡಿ, ಭಗೀರಥ ಕುಮಟ, ರಕ್ಷಿತಾ ಕೋಟ್ಯಾನ್ ಬಾಲಕೃಷ್ಣ ಶೆಟ್ಟಿ, ಮೌಲ್ಯ ಜೀವನ್, ನವೀನ್ ಪೀಲಾರ್, ಶಾರದಾ ಎಸ್ ರಾವ್, ರಮೇಶ್ ಉಳಯ , ಸ್ಮಿತಾ ಹುಬ್ಬಳ್ಳಿ, ಹರೀಶ್ ಟಿ.ಜಿ ವಿವಿಧ ವಿಚಾರಗಳ ಕುರಿತಾದ ಮಾಹಿತಿಗಳನ್ನು ನೀಡುತ್ತಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ಹಮ್ಮಿಕೊಳ್ಳಲಾದ ಛಾಯಾಚಿತ್ರ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಕಳೆದ 3 ದಿನಗಳಿಂದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಲಾಗಮಿಸುತ್ತಿದ್ದಾರೆ.





ಪ್ರದರ್ಶನದಲ್ಲಿ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಹರೀಶ್ ಕೆ.ಆದೂರು ಅವರ ಛಾಯಾಚಿತ್ರಗಳೂ ಸೇರಿದಂತೆ ವಿದ್ಯಾರ್ಥಿಗಳಾದ ಸೊನಾಲಿ ಸಿರಿವರ್ದನೆ, ಸನತ್ ಕುಮಾರ್, ನವ್ಯಜ್ಯೋತಿ ಮತ್ತು ಅಭಿಲಾಶ್ ಅವರ ಚಿತ್ರಗಳು ಒಳಗೊಂಡಿದ್ದವು.

ಪ್ರತಿಯೊಂದು ಚಿತ್ರವೂ ಭಿನ್ನ ಭಿನ್ನವಾಗಿದ್ದು ಜನಮನರಂಜಿಸುವಲ್ಲಿ ಯಶಸ್ವಿಯಾಗಿವೆ.








ಮುಂದೆ ಓದಿ

ರಾಜ್ಯ - ರಾಷ್ಟ್ರ

ಮೂಡಬಿದಿರೆ: ನೀವು ಛಾಯಾಚಿತ್ರ ಪ್ರೇಮಿಗಳೇ...ನಿಮಗೂ ಛಾಯಾಚಿತ್ರ ನೋಡುವ ಆಸಕ್ತಿ ಇದೆಯೇ ... ಹಾಗಾದರೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನೊಮ್ಮೆ ಭೇಟಿ ನೀಡಿ... ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳ ಪತ್ರಿಭೆಗೊಂದು ಉತ್ತಮ ವೇದಿಕೆ ಒದಗಿಸಲಾಗಿದೆ. ಅತ್ಯಂತ ಆಕರ್ಷಕವಾದ ಛಾಯಾಚಿತ್ರಗಳನ್ನು ಅಲ್ಲಿ ಪ್ರದರ್ಶನಕ್ಕಿಡಲಾಗಿದೆ. ಉಪನ್ಯಾಸಕ ಹರೀಶ್ ಕೆ.ಆದೂರು, ವಿದ್ಯಾರ್ಥಿಗಳಾದ ಸೊನಾಲಿ, ಸನತ್, ಅಭಿಲಾಶ್, ಯಶೋಧರ ಮೊದಲಾದವರು ಸೆರೆಹಿಡಿದ ಆಕರ್ಷಕ ಛಾಯಾಚಿತ್ರಗಳ ಪ್ರದರ್ಶನ ಅಲ್ಲಿ ಏರ್ಪಾಡಾಗಿದೆ. ಅಂದಹಾಗೆ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಛಾಯಾಗ್ರಾಹಕ ಜಿ.ಕೆ.ಹೆಗಡೆ ಕಾರ್ಯಕ್ರಮವನ್ನು ಸೋಮವಾರ(ಏ.26)ಬೆಳಗ್ಗೆ 10ಗಂಟೆಗೆ ಉದ್ಘಾಟಿಸಲಿದ್ದಾರೆ. ನೀವೂ ಯಾಕೆ ಬರ್ಬಾರ್ದು...ಅಲ್ವಾ...

ಮುಂದೆ ಓದಿ

ಪ್ರಾದೇಶಿಕ ಸುದ್ದಿ


ಕರಾವಳಿಯಲ್ಲಿ ಬಿಸಿಲ ಝಳ ಏರಿದೆ. ಕಳೆದ ನಾಲ್ಕಾರು ದಿನಗಳಿಂದ ಅಲ್ಲಲ್ಲಿ ಮಳೆಯಾಗಿದೆಯಾದರೂ ಇದೀಗ ಧಗೆ ಹೆಚ್ಚಿದೆ. ಪುಟ್ಟ ಬಾಲಕನೊಬ್ಬ ಸೆಖೆ ತಾಳಲಾಗದೆ ನೀರಾಟದಲ್ಲಿ ತೊಡಗಿದ್ದಾನೆ.
ಚಿತ್ರ: ಮಹೇಶ್ ಪುಚ್ಚಪ್ಪಾಡಿ.

ಮುಂದೆ ಓದಿ
9:10 PM

ಎರಡು ಬಾಲ!

Posted by ekanasu

ವಿಶೇಷ ವರದಿ


ಎರಡು ತಲೆ ಹಾವಿಗೆ ಎಲ್ಲಿಲ್ಲದ ಬೇಡಿಕೆ...ಇದೀಗ `ಎರಡು ಬಾಲದ' ಹಲ್ಲಿ ಪತ್ತೆಯಾಗಿದೆ. ಇದಕ್ಕೂ ಬೇಡಿಕೆ ಬರಬಹುದೇ...? ಇರಬಹುದೇ...
ಚಿತ್ರ: ಮಹೇಶ್ ಪುಚ್ಚಪ್ಪಾಡಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮುಲ್ಕಿ : ಬಾಡಿಗೆ ಮನೆಯಲ್ಲಿ ವಾಸವಾಗಿ ಪರಿಸರದ ವಿಶ್ವಾಸಗಳಿಸಿ ಮನೆಯವರು ಇಲ್ಲದ ಸಮಯ ಮಾಡಿನ ಹೆಂಚು ತೆಗೆದು ಒಳನ್ನುಗ್ಗಿ ಚಿನ್ನಾಭರಣ ಕಳವು ನಡೆಸುತ್ತಿದ್ದ ಆರೋಪಿಯನ್ನು ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ.ಆರೋಪಿಯನ್ನುಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ನವದುರ್ಗಾ ರೈಸ್ ಮಿಲ್ ಬಳಿಯ ಬೆರ್ನೋಟ್ಟು ಮನೆಯ ದಿ.ರಾಮಚಂದ್ರ ಜೋಗಿಯವರ ಮಗ ಸುಧಾಕರ ಜೋಗಿ ಎಂದು ಗುರುತಿಸಲಾಗಿದೆ.



ಮೆನ್ನಬೆಟ್ಟು ಗ್ರಾಮದ ರಾಜರತ್ನಪುರದ ವಾಸಿ ಜಂಯಂತಿ ಶೆಟ್ಟಿ ಕಳೆದ ಫೆಬ್ರವರಿ15ರಂದು ಮನೆಗೆ ಬೀಗಹಾಕಿ ಮುಂಬೈಯಲ್ಲಿದ್ದ ಮಗ ಮತ್ತು ಮಗಳ ಮನೆಗೆ ಹೋಗಿ ಏಪ್ರಿಲ್ ತಿಂಗಳಲ್ಲಿ ವಾಪಾಸು ಬಂದ ಸಮಯ ಮನೆಯ ಅಡುಗೆ ಕೋಣೆಯ ಸಿಮೆಂಟ್ ಶೀಟ್ ಜಾರಿಸಿ ಒಳ ಪ್ರವೇಶಿಸಿ ಮನೆಯ ಕೋಣೆಯ ಕಪಾಟಿನಲ್ಲಿರಿಸಿದ್ದ ಸುಮಾರು 39ಗ್ರಾಂ ಚಿನ್ನಾಬರಣಗಳನ್ನು ಹಾಗೂ ಮೊಬೈಲ್ ಫೋನ್ ಕಳವು ಮಾಡಿರುವ ಬಗ್ಗೆ ಜಂಯಂತಿಯವರು ಮೂಲ್ಕಿ ಠಾಣೆಗೆ ದೂರು ನೀಡಿದ್ದರು.
ಈ ಸಂದರ್ಭ ಮನೆಯ ಬಳಿ ಬಾಡಿಗೆಗೆ ವಾಸವಾಗಿರುವ ಸುಧಾಕರ ಎಂಬ ಕೂಲಿ ಕಾರ್ಮಿಕ ನಾಪತ್ತೆಯಾಗಿರುವುದರಿಂದ ಪೋಲೀಸರು ಆತನ ಬಗ್ಗೆ ಸಂಶಯ ವ್ಯಕ್ತ ಪಡಿಸಿ ತನಿಖೆ ನಡೆಸಿ ಆತನ ಜಾಡು ಹಿಡಿದು ಕಿನ್ನಿಗೋಳಿ ಮೂರು ಕಾವೇರಿ ಬಳಿ ವಶಕ್ಕೆ ಪಡೆದು ವೃತ್ತ ನಿರೀಕ್ಷಕ ಶಿವ ಪ್ರಕಾಶ್ ಆರ್. ನಾಯ್ಕ್ರವರ ಮುಂದೆ ಹಾಜರು ಪಡಿಸಿದ್ದರು. ಆರೋಪಿಯನ್ನು ವಿಚಾರಿಸಿದಾಗ ಆತ ತಪ್ಪು ಒಪ್ಪ್ಪಿಕೊಂಡು ಈತ ಮಾರಾಟ ಮಾಡಿರುವ ಚಿನ್ನಾಭರಣಗಳನ್ನು ಮಂಗಳೂರಿನ ಅಂಗಡಿಯಲ್ಲಿ ಈ ಪ್ರಕರಣದ ಆಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿಯು ಪದವೀಧರನಾಗಿದ್ದು ಸುಜ್ಲಾನ್ ಕಂಪೆನಿಯಲ್ಲಿ ಸೂಪರ್ವೈಜರ್ ಆಗಿ ಕೆಲಸ ಮಾಡಿಕೊಂಡಿದ್ದ ಅಲ್ಲಿ ಕೆಲಸ ಬಿಟ್ಟಿ ಕೂಲಿ ವೃತ್ತಿ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಈತನಿಗೆ ವಿವಾಹವಾಗಿ ಒಂದು ಮಗುವಿದೆ. ಈತನ ಪತ್ನಿ ಹಿಂದೆ ಪೂನಾದಲ್ಲಿರುವಾಗ ಸ್ಟೌ ಸಿಡಿದು ಮೃತಪಟ್ಟಿದ್ದಾಳೆ.ಈತ ಈ ಹಿಂದೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಸರ ಸುಲಿಗೆ ಪ್ರಕರಣದ ಆರೋಪಿಯಾಗಿದ್ದು ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.ಈತನು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ನ್ಯಾಯಾಲಯವು ಪ್ರೊಕ್ಲೆಮೇಶನ್ ಹೊರಡಿಸಿದೆ. ಆರೋಪಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಮೂಲ್ಕಿ ಪಿ.ಎಸ್.ಐ ಮುನಿಸ್ವಾಮಿ ನೀಲಕಂಠನ್, ಸಿಬ್ಬಂದಿಗಳಾದ ಚಂದ್ರಶೇಖರ, ಸುಂದರ, ಬೆನ್ನಿಯಚ್ಚನ್,ಸಂಝೀವ,ಸುಜು,ವರ್ಗೀಸ್, ಮೋಹನ ಭಾಗವಹಿಸಿದ್ದಾರೆ.
ಚಿತ್ರ-ವರದಿ: ಭಾಗ್ಯವಾನ್ ಮುಲ್ಕಿ

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಶತಚಂಡಿಕಾ ಯಾಗವು ಶುಕ್ರವಾರ ಜರುಗಿತು.
ಚಿತ್ರ:ಭಾಗ್ಯವಾನ್ ಮುಲ್ಕಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮೇ 5-6ರಂದು ನೇಮೋತ್ಸವ

ಮಂಗಳೂರು: ಗಟ್ಟಿಸಮಾಜದ ಕೈಯರಣ್ಣ ಕುಟುಂಬದ ಕಲ್ಲಂಗಡಿ ಹೊಸಮನೆ (ಚೌಕಿ)ಯಲ್ಲಿ ಶ್ರೀ ಐವರು ಪರಮಾತ್ಮ ದೈವಗಳ `ಧರ್ಮನೇಮೋತ್ಸವ' ಕಾರ್ಯಕ್ರಮ ಮೇ 5ಮತ್ತು 6ರಂದು ನಡೆಯಲಿದೆ. ಕಾರಣೀಕ ಹಾಗೂ ಪ್ರಸಿದ್ಧಿ ಪಡೆದ ಈ ಐವರು ಪರಮಾತ್ಮದೈವಗಳ ನೇಮೋತ್ಸವಾದಿ ಕಾರ್ಯಗಳಿಗೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. `ದೇಹೀ ಎಂದವನಿಗೆ ನಾಸ್ತಿ' ಎನ್ನದೆ ತನ್ನ ಕಾರಣೀಕ ಮಹಿಮೆಗಳಿಂದ ಪ್ರಸಿದ್ಧಿ ಪಡೆದ ಈ `ಶ್ರೀ ಐವರು ಪರಮಾತ್ಮ ದೈವೀ' ಸಾನಿಧ್ಯದಲ್ಲಿ ಪ್ರತೀ ಐದು ವರುಷಗಳಿಗೊಮ್ಮೆ `ಧರ್ಮನೇಮೋತ್ಸವ' ನಡೆಯುತ್ತದೆ.




ದೀಪಾವಳಿ ಹಾಗೂ ಆಷಾಢಮಾಸದಲ್ಲಿ ಉತ್ಸವಗಳು ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು ದೀಪಾವಳಿಯ ನಾಗಬಲಿ ತಂಬಲ , ಬೊಂಡಾಭಿಷೇಕ ಸೇವೆಗಳು ಹಾಗೂ ಆಷಾಢ ಮಾಸದ ಅಭಿಷೇಕ, ಗುಳಿಗ ಕೋಲಗಳಿಗೆ ಬಹುಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುತ್ತಿರುವುದು ಈ ಕ್ಷೇತ್ರದ ಕಾರಣೀಕಗಳಿಗೆ ಸಾಕ್ಷಿ.
ಮೇ. 5 ರಂದು ಬೆಳಗ್ಗೆ 11ಗಂಟೆಗೆ ಶ್ರೀ ವೆಂಕಟರಮಣ ದೇವರ ಸೇವೆ ಹಾಗೂ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಭಂಡಾರ ಪ್ರವೇಶ, ರಾತ್ರಿ 8ರಿಂದ 10ರ ತನಕ ಕೊರತಿ , ಕಾಡೆತ್ತಿ ಗುಳಿಗ ದೈವಗಳ ಕೋಲ, ರಾತ್ರಿ 10ರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7.30ಕ್ಕೆ ತುಳುನಾಡ ಐಸಿರಿ ಹಾಗೂ ತಮಾಷೋ ಫ್ಯಾಕ್ಟ್ರಿ ಕಾರ್ಯಕ್ರಮ ನಡೆಯಲಿದೆ.
ಮೇ 6ರಂದು ಬೆಳಗ್ಗೆ 4ಕ್ಕೆ ಬಬ್ಬರ್ಯ ದೈವದ ಕೋಲ, 9ಕ್ಕೆ ಧೂಮಾವತೀ , ವಿಷ್ಣುಮೂರ್ತಿ ದೈವಗಳ ಕೋಲ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ಭಂಡಾರ ನಿರ್ಗಮನ, ರಾತ್ರಿ 8ಕ್ಕೆ ಪಳ್ಳತ ಮುದ್ದ ದೈವದ ಕೋಲ ನಡೆಯಲಿದೆ. 8.30ರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಏಪ್ರಿಲ್ 24 ರಂದು ಬೆಂಗಳೂರಿನಲ್ಲಿ...

ಬೆಂಗಳೂರು: ವಾರ್ತಾ ಇಲಾಖೆಯಿಂದ ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್ ಕುಮಾರ್ ಅವರ 82 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಫಾಟಿಸಲಿದ್ದಾರೆ.
ಸಮಾರಂಭದಲ್ಲಿ ವಾರ್ತಾ, ವಸತಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಬೆಂಗಳೂರು ಜಲಮಂಡಳಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾರಿಗೆ ಸಚಿವ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರ್. ಅಶೋಕ್, ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ ಜಯಮಾಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.



ಪದ್ಮಶ್ರೀ ಪುರಸ್ಕೃತ ನಾಡೋಜ ಪ್ರೊ ಕೆ.ಎಸ್. ನಿಸಾರ್ ಅಹಮದ್ ಪ್ರಧಾನ ಭಾಷಣ. ಭಾಷಣ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಪೇಟಿ ವಿಧಾನಸಭಾ ಸದಸ್ಯ ಡಾ ಡಿ. ಹೇಮಚಂದ್ರಸಾಗರ್ ಅವರು ವಹಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಜಗ್ಗೇಶ್, ವಿಧಾನ ಪರಿಷತ್ ಸದಸ್ಯರಾದ ಡಾ ಶ್ರೀನಾಥ್ ಹಾಗೂ ಡಾ ದೊಡ್ಡರಂಗೇಗೌಡ, ಲೋಕಸಭಾ ಸದಸ್ಯ ಶ್ರೀ ಪಿ.ಸಿ. ಮೋಹನ್ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ವಿ. ಮನೋಹರ, ಚಲನಚಿತ್ರ ಸಾಹಿತಿ ಇವರಿಂದ ಅಪರೂಪ ಜನಪ್ರಿಯ ಚಿತ್ರಗಳ ಗೀತಗುಚ್ಚ ಹಾಗೂ ತುಣುಕು ಪ್ರದರ್ಶನ. ನೃತ್ಯ ನಿರ್ದೇಶಕರಾದ ತ್ರಿಭುವನ್ ತಂಡದವರಿಂದ ಜನಪ್ರಿಯ ಗೀತೆಗಳ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು :ಆರೋಗ್ಯ ಇಲಾಖೆ ಸರಕಾರದ ಮಾನವೀಯ ಮುಖದಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಇನ್ಫೊಸಿಸ್ ಮಕ್ಕಳ ವಿಶೇಷ ಚಿಕಿತ್ಸಾ ಆಸ್ಪತ್ರೆಯಲ್ಲಿ ಆರ್ ಎ ಪಿ ಸಿಸಿ ಹಾಲ್ ನಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಖಾಸಗೀಯವರಿಂದ ಪ್ರಬಲ ಪೈಪೋಟಿಯಿದ್ದು, ಉತ್ತಮ ಸೇವೆಯಿಂದ ಮಾತ್ರ ಇಲಾಖೆ ಜನಮನ್ನಣೆ ಗಳಿಸಲು ಸಾಧ್ಯ ಎಂದರು. ಆರೋಗ್ಯದ ಬಗ್ಗೆ ಜಾಗೃತಿ ಇಂದಿನ ಸವಾಲಾಗಿದ್ದು, ಗಾಳಿ,ನೀರು ಎಲ್ಲವೂ ಕಲುಷಿತಗೊಳ್ಳುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.



ಸರಕಾರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸ್ವಾಸ್ಥ ವಿಮಾ ಯೋಜನೆಗಳನ್ನು ಖಾಸಗಿಯವರೊಂದಿಗೆ ಸೇರಿ ಜಾರಿಗೆ ತರುತ್ತಿದ್ದು,ಆರೋಗ್ಯ ಆಡಳಿತವನ್ನು ಅಭಿವೃದ್ಧಿ ಪಡಿಸಲು ಸರ್ವಯತ್ನಗಳನ್ನು ಮಾಡಲಾಗುತ್ತಿದೆ ಎಂದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಾಗೂ ಮೂಲಸೌಕರ್ಯಗಳು ದೊರೆತಿದ್ದು, ಇನ್ನಷ್ಟು ಸೇವೆಯನ್ನು ಜನಪರ ಗೊಳಿಸಲು ಸಾಧ್ಯವಾಗಬೇಕು; ಇದರಲ್ಲಿ ಸಮುದಾಯದ ಪಾಲುಗಾರಿಕೆ ಅಗತ್ಯ ಎಂದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು,ಆರೋಗ್ಯ ಜಾಗೃತಿ ಮೂಡಿಸಲು ಪ್ರಸಕ್ತ ಸಾಲಿನಲ್ಲಿ ನಗರ ಆರೋಗ್ಯ ಸುಧಾರಿಸುವ ಘೋಷಣೆಯಿದ್ದು, ನಗರೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿರುವ ಸಮಸ್ಯೆಗಳು, ಕಲುಷಿತತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದರು.1948ರಲ್ಲೇ ವಿಶ್ವಸಂಸ್ಥೆ ಈ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ವಹಿಸಿದ್ದರು. ಡಾ. ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸರೋಜ, ಲೇಡಿಗೋಷನ್ ಡಾ. ಶಕುಂತಲಾ ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ಡಾ.ರಮೇಶ್, ಅರವಳಿಕೆ ತಜ್ಞರಾದ ಡಾ. ಜೆಸಿಂತ ಡಿಸೋಜ, ಮಕ್ಕಳ ತಜ್ಞ ಡಾ.ಬಾಲಕೃಷ್ಣ ಅವರಿಗೆ ನಗದು ಮತ್ತು ಗೌರವ ಕಾಣಿಕೆಯನ್ನು ನೀಡಲಾಯಿತು.ತಾಲೂಕು ಮಟ್ಟದಲ್ಲಿ ಸುಳ್ಯದ ಮಕ್ಕಳ ವಿಭಾಗದ ಡಾ. ರಮೇಶ್, ಅರವಳಿಕೆ ತಜ್ಞ ಡಾ. ಕರುಣಾಕರ ಕೆ.ವಿ, ಬೆಳ್ತಂಗಡಿಯ ಡಾ. ಪ್ರಕಾಶ್ ಕೊಕ್ಕಡ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಹೇಮಲತಾ, ಪುತ್ತೂರು ಈಶ್ವರಮಂಗಲದ ಡಾ.ಗೋಪಾಲಕೃಷ್ಣ ನಾಯಕ್, ಸುಳ್ಯದ ಡಾ. ಶ್ರೀರಂಗಪ್ಪ, ಬಂಟ್ವಾಳ ವಾಮದಪದವಿನ ಡಾ. ದುರ್ಗಾ ಪ್ರಸಾದ್, ಉಜಿರೆ ಪಿ ಎಚ್ ಸಿಯ ಡಾ.ರವೀಂದ್ರನಾಥ ಅವರಿಗೆ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತಲ್ಲದೆ, ಹಿರಿಯ ಶುಶ್ರೂಷಕಿಯರು, ಕಿರಿಯ ಆರೋಗ್ಯ ಸಹಾಯಕಿಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಕರಾವಳಿಯಾದ್ಯಂತ ಶುಕ್ರವಾರ ಮಳೆಬಿದ್ದಿದೆ. ಸಂಜೆಯ ವೇಳೆಗೆ ದ.ಕ.ಜಿಲ್ಲೆಯ ಹಲವು ಭಾಗಗಳೂ ಸೇರಿದಂತೆ ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಗುಡುಗು , ಮಿಂಚು,ಗಾಳಿ ಸಹಿತ ಅಬ್ಬರದ ಮಳೆ ಬಿದ್ದಿದೆ. ಕಳೆದ ಎರಡು ದಿನಗಳಿಂದ ಕೆಲವೊಂದು ಕಡೆಗಳಲ್ಲಿ ಮಳೆಬೀಳುತ್ತಿತ್ತು. ಶುಕ್ರವಾರ ಸಂಜೆಯ ವೇಳೆ ಬಾನು ಕಪ್ಪಿಟ್ಟು ಮಳೆ ಸುರಿಯಿತು. ಇದರಿಂದಾಗಿ ಕಾದ ಇಳೆಗೆ ಒಂದಷ್ಟು ಮಳೆಯ ಸಿಂಚನವಾದಂತಾಗಿದೆ. ಬಿಸಿಲ ಝಳದಿಂದ ಬೇಸತ್ತಿದ್ದ ಜನತೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಏರುತ್ತಿರುವ ತಾಪಮಾನದಿಂದಾಗಿ ಜನತೆ ತತ್ತರಿಸಿ ಹೋಗಿದ್ದರು. ಹಲವೆಡೆಗಳಲ್ಲಿ ನೀರಿಹಾಗಿ ಹಪಹಪಿ ಪ್ರಾರಂಭಗೊಂಡಿತ್ತು. ಕೃಷಿಭೂಮಿ ನೀರಿಲ್ಲದೆ ಕೆಂಪಾಗಿದ್ದವು. ಇದೀಗ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಯಿತು.
ಬೆಳ್ತಂಗಡಿ ತಾಲೂಕಿನಲ್ಲೂ ಮಳೆಯ ಅಬ್ಬರ ಜೋರಾಗಿತ್ತು. ಹಲವೆಡೆಗಳಲ್ಲಿ ಭೀಕರ ಗಾಳಿ ಬೀಸಿದ್ದು ಕೃಷಿಭೂಮಿಗೆ ತೊಂದರೆಯಾಗಿದೆ. ಹಲವು ತೋಟಗಳಲ್ಲಿ ಅಡಿಕೆ ಮರಗಳು ಗಾಳಿಗೆ ತುತ್ತಾಗಿ ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಮುಂದೆ ಓದಿ

ಕಾರಿಡಾರ್

ಭುವಿಗೆ ಬಿದ್ದ ಮೊದಲ ಮಳೆಹನಿಗೆ ಅದೆಷ್ಟು ಸಂಭ್ರಮ..... ಆ ಹನಿಯಲ್ಲಿ ಎಲ್ಲರಿಗೂ ತುಸುವಾದರೂ ನೆನೀಬೇಕೆನ್ನುವ ಆಸೆ, ಬಿಸಿಲ ಬೇಗೆಗೆ ತಂಪಗಿನ ಸಿಂಚನವನ್ನೀಯುವ ನೆಪದಿಂದ ಮೊದಲ ಮಳೆಹನಿ ಜಾಸ್ತಿ ಖುಷಿ ಕೊಟ್ಟಿರುತ್ತದೆ.




ಭುವಿಗೂ ಅದೇ ಸಂಭ್ರಮ ಮಳೆಹನಿಯ ಜೊತೆಯಲ್ಲಿ...ಹನಿ ಬಿದ್ದ ಕ್ಷಣ ಬರುವ ಆ ಪರಿಮಳವೇ ಅದೆಷ್ಟು ಚಂದ... ಎಲ್ಲವನ್ನು ಕಳಕೊಂಡ ಮರಗಿಡಗಳೆಲ್ಲ ಮತ್ತೆ ಚಿಗುರುತ್ತವೆ, ಬರಡಾದ ನೆಲ ಮತ್ತೆ ಮೈದುಂಬುತ್ತದೆ. ಹಾಗೇ ಮತ್ತದೇ ಕಪ್ಪಗಿನ ಬಸುರಿ ಮೋಡ ಗುಮ್ಮಗೆ ಕೂತು ಸಂಭ್ರಮ ಹೆಚ್ಚಿಸುತ್ತದೆ...ಮರುಭೂಮಿಯ ಓಯಸಿಸ್ನಂತೆ...

ಇಷ್ಟೆಲ್ಲ ಸಂಭ್ರಮದಿಂದ ಭುವಿಗಿಳಿದ ಮಳೆಹನಿಯನ್ನು ಕೊನೆಕೊನೆಗೆ ಕೇಳುವವರೇ ಇಲ್ಲ. ಎಲ್ಲ ಕಡೆ ನೀರು ತುಂಬಿ ತುಳುಕುತ್ತಿರುತ್ತದೆ... ಮನೆಯ ಮೂಲೆಯಲ್ಲಿ ಕೂತು ಅಂದು ಖುಷಿಪಟ್ಟಿದ್ದ ಮಳೆಹನಿಗೇನೇ ಬೈಯುತ್ತೇವೆ..... ಬಸುರಿ ಮೋಡ ಗಾಳಿಯ ಹೊಡೆತಕ್ಕೆ ಸಿಕ್ಕಿ ಇನ್ನೆಲ್ಲೋ ತೇಲಿ ಹೋಗಲಿ ಅನ್ನೋ ಶಾಪ...

ಹೀಗೆ ಪಡಕೊಂಡವುಗಳನ್ನು ಕೆಲವೇ ಕೆಲವು ಕ್ಷಣದಲ್ಲಿ ಕಳಕೊಳ್ಳಬೇಕೆನ್ನುವ ಬಯಕೆ.... ಹಾಗಾಗಿಯೇ ಇರಬಹುದು ಕೆಲವು ಸಂಬಂಧಗಳು ಆಷಾಡದ ಮಳೆಯಂತಿದ್ದು ಮತ್ತೆಲ್ಲೋ ಕಳೆದುಹೋಗುವುದು. ಆಷಾಡದ ಮಳೆ ಆರಂಭವಾಗುವಾಗ ಇರುವ ಹುಮ್ಮಸ್ಸು ಬರೇ ಮೂವತ್ತು ದಿನದಲ್ಲಿ ಕಳೆದುಹೋಗುತ್ತದೆ. ಬೋರ್ ಅನ್ನಿಸಿಬಿಡುತ್ತದೆ, ಮತ್ತೇನೋ ಬೇಕೆಂದೆನಿಸುತ್ತದೆ.... ಇನ್ನೇನ್ನನ್ನೋ ಹುಡುಕಿಕೊಂಡು ಹೊರಟುಬಿಡುತ್ತೇವೆ.

ಯಾಕೋ ಎಷ್ಟೋ ಸಂಬಂಧಗಳು ಹೀಗೆ ಅನ್ನಿಸುತ್ತೆ....! ಸ್ವಲ್ಪ ಸಮಯದ ಅವರ ಒಡನಾಟ, ಆತ್ಮೀಯತೆ ಕಿರಿಕಿರಿ ಅನಿಸಲಾರಂಭಿಸುತ್ತದೆ. ಅತಿಯಾದ ಪ್ರೀತಿ, ಆತ್ಮೀಯತೆ ಉಸಿರುಗಟ್ಟಿಸಲಾರಂಭಿಸುತ್ತದೆ. ಒಂದು ಕ್ಷಣದ ಹಿಂದೆ ಪರಿಚಯವಾದವರೇ ಹೆಚ್ಚು ಇಷ್ಟವಾಗತೊಡಗುತ್ತಾರೆ.... ನಮಗೆಲ್ಲರಿಗೂ ಹೊಸತರಲ್ಲೇ ಆಸಕ್ತಿಯಲ್ವಾ..... ಹಳೆಯದನ್ನು ಕಳಚಿ ಹೊಸಬಟ್ಟೆ ಧರಿಸುವಾಗ ಹಳತು ದೀನವಾಗಿ ನಮ್ಮನ್ನು ನೋಡುತ್ತಿರುತ್ತದೆಯಂತೆ..... ಇದು ಸಂಬಂಧಕ್ಕೂ ಹೋಲಿಕೆಯಾಗಬಹುದಲ್ವಾ..... ಇವತ್ತು ಹೊಸತು ನಾಳೆ ಹಳತೇ ಅನ್ನುವುದನ್ನು ಕೂಡ ಮರೆತಿರುತ್ತೇವೆ. ಹೋಲಿಕೆ ಅನ್ನೋದು ನಮ್ಮ ಎರಡು ಕಣ್ಣುಗಳ ನಂಬಿಕೆ..... ಹಳೆಯದರಲ್ಲಿ ಹೊಸತನ್ನು ಕಂಡುಕೊಳ್ಳೋದು, ಹೊಸತರಲ್ಲಿ ಹಳೆಯದನ್ನು ಹುಡುಕೋದು.....

ಆದರೆ ಆಷಾಡದ ಮಳೆಗೆ ಆ ಮಳೆಹನಿಯೇ ಸಾಟಿ ಮತ್ಯಾವುದೂ ಸಾಟಿಯಾಗೋಕೆ ಸಾಧ್ಯನೇ ಇಲ್ಲ.... ತಿಂಗಳ ನಂತರ ಮರೆತುಹೋದರೂ ವರ್ಷದಲ್ಲಿ ಎಲ್ಲೋ ಕಾಡಬಹುದು.... ಹೀಗೆ ಬದುಕಿನ ಕೆಲವು ಸಂಬಂಧಗಳಾದರೂ ಆಷಾಡದ ಮಳೆಯಂತೆ ಕಾಡಲಿ....

ದೀಷ್ಮಾ.ಡಿ.ಶೆಟ್ಟಿ

ಮುಂದೆ ಓದಿ

ಬೆಂಗಳೂರು: ಮೈಸೂರನ್ನು ಹಸಿರು ನಗರವನ್ನಾಗಿ ಮಾಡಲು ಬ್ರಿಟಿಷ್ ರಾಯಭಾರ ಕಚೇರಿ ತನ್ನ ಸಹಾಯಹಸ್ತ ಚಾಚಿದೆ.
ಈ ಸಂಬಂಧ ಬ್ರಿಟಿಷ್ ಉಪ ರಾಯಭಾರಿ ರಿಚರ್ಡ್ ಹೈಡ್, ವಾತಾವರಣ ಬದಲಾವಣೆ ಮತ್ತು ಇಂಧನ ಕಾರ್ಯದರ್ಶಿ ಸೆರಗಸ್ ಆಲ್ಡ್ ಹಾಗೂ ಬ್ರಿಟಿಷ್ ರಾಯಭಾರ ಕಚೇರಿಯ ಹಿರಿಯ ಸಲಹೆಗಾರರಾದ ವಿದ್ಯಾ ಸೌಂದರ್ರಾಜನ್ ಅವರು ಇಂದು ವಿಧಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.
ಭೇಟಿಯ ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವರು ಬ್ರಿಟಿಷ್ ತಂಡ ಮೈಸೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವ ಇಂಗಿತ ವ್ಯಕ್ತಪಡಿಸಿದರು. ಈಗಾಗಲೇ ಈ ತಂಡ ಮೈಸೂರಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದೆ. ಅವರ ಅಪೇಕ್ಷೆ, ನಿರೀಕ್ಷೆ ಏನೆಂಬುದನ್ನು ಮೈಸೂರಿನ ಜಿಲ್ಲಾಧಿಕಾರಿಗಳೊಡನೆ ಚರ್ಚಿಸಿದ ನಂತರ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಗುವುದು. ಆರ್ಥಿಕವಾಗಿ ಏನು ಸಹಾಯ ಮಾಡಲಿರುವರೆಂಬ ಬಗ್ಗೆ ಇನ್ನೂ ವಿವರ ತಿಳಿಯದೆಂದರು.



ಮೈಸೂರು ನಗರಕ್ಕೆ ಸಾಂಸ್ಕೃತಿಕ ನಗರವೆಂಬ ಹೆಗ್ಗಳಿಕೆ ಇದೆ. ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಕೇಂದ್ರದ ಅನುದಾನವನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.
ಮತ್ತೆ ಟಾಂಗ ಸವಾರಿ:
ಟಾಂಗಗಳಲ್ಲಿ ಪ್ರಯಾಣ ಮಾಡುವುದು ಒಳ್ಳೆಯ ಅನುಭವ. ಮೈಸೂರಿನಲ್ಲಿ ಟಾಂಗಗಳಿಗೆ ಮಹತ್ವ ನೀಡಿ ಅವುಗಳಲ್ಲಿ ಜನರು ವಿಶೇಷವಾಗಿ ಪ್ರವಾಸಿಗರು ಪ್ರಯಾಣಿಸಲು ಅನುವು ಮಾಡಿಕೊಡಲಾಗುವುದು. ಪ್ರತ್ಯೇಕ ಟಾಂಗ ವಲಯ ಮಾಡಬೇಕೆಂಬ ಇಚ್ಫೆ ಇದೆ ಎಂದು ಸಚಿವರು ತಿಳಿಸಿದರು.
ಸೋಲಾರ್ ವಿದ್ಯುತ್ ಮತ್ತು ಮಳೆ ನೀರು ಕೊಯ್ಲು ಅಳವಡಿಸಿ, ಹವಾನಿಯಂತ್ರಕಗಳ ಅಗತ್ಯವಿಲ್ಲದಂತೆ ಮಾಡಿ ಮೈಸೂರಿನ ಸರಕಾರಿ ಕಟ್ಟಡಗಳನ್ನು ಹಸಿರು ಕಟ್ಟಡಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೈಸೂರಿನ ಹಿಂದಿನ ಉಸ್ತುವಾರಿ ಸಚಿವರು ಕೈಗೆತ್ತಿಕೊಂಡ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರು ತಿಳಿಸಿದರು.
ಎಲ್ಲಾ ನಗರಗಳಿಗೂ ಸೌರ ವಿದ್ಯುತ್
ಎಲ್ಲಾ ನಗರಗಳಲ್ಲಿ ಮುಂದಿನ 4-5 ವರ್ಷಗಳಲ್ಲಿ ಸೌರ ವಿದ್ಯುತ್ ಬಳಸಲು ಯೋಜಿಸಲಾಗಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 300 ಕೋಟಿ ರೂ ಉಳಿತಾಯವಾಗಲಿದೆ ಎಂದು ಸಚಿವರು ತಿಳಿಸಿದರು.

ಹುಬ್ಬಳ್ಳಿ - ಬೆಳಗಾವಿ ಕುಡಿಯುವ ನೀರಿನ ಸಮಸ್ಯೆ
ಹುಬ್ಬಳ್ಳಿಯಲ್ಲಿ 8-9 ದಿನಕ್ಕೊಮ್ಮೆ ಮತ್ತು ಬೆಳಗಾವಿಯಲ್ಲಿ 5-6 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಗುಣಮಟ್ಟದ ನೀರಿನ ಕೊಳವೆಗಳನ್ನು ಅಳವಡಿಸದ ಕಾರಣ ಶೇ 50 - 55 ರಷ್ಟು ನೀರು ಸೋರಿಕೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಿದ್ಯುತ್ ಕೊರತೆಯಿಂದಾಗಿ ನೀರು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿಗೆ ಆದ್ಯತೆ ಮೇಲೆ ವಿದ್ಯುತ್ ನೀಡಲು ಹೆಸ್ಕಾಂ ಅಧಿಕಾರಿಗಳೊಡನೆ ಮಾತನಾಡಿದ್ದೇನೆ. ಈಗ ಹುಬ್ಬಳ್ಳಿಯಲ್ಲಿ ಕುಡಿಯುವ ನೀರು ಒದಗಿಸಲು 18 ಟ್ಯಾಂಕರ್ಗಳನ್ನು ಉಪಯೋಗಿತ್ತಿದ್ದು, ಈ ವಾರದಲ್ಲಿ ಮತ್ತೆ 8 ಟ್ಯಾಂಕರ್ಗಳನ್ನು ಬಳಸಿಕೊಳ್ಳಲಾಗುವುದು ಎಂದರು.

16 ಪಟ್ಟಣಗಳಿಗೆ ಎಲ್ಲಾ ದಿನಗಳಲ್ಲೂ ಕುಡಿಯುವ ನೀರು

ಕುಡಿಯುವ ನೀರನ್ನು ಹುಮ್ನಾಬಾದ್, ಚಿಟ್ಟಗುಪ್ಪ, ಸೇಡಂ, ಹುಕ್ಕೇರಿ, ಸಂಕೇಶ್ವರ, ಬಿಜಾಪುರ, ಮಂಡ್ಯ, ಶ್ರೀರಂಗಪಟ್ಟಣ, ಕಡೂರು, ಬೀರೂರು, ಕುಶಾಲನಗರ, ತುಮಕೂರು, ತಿಪಟೂರು, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಮಾಲೂರು ನಗರಗಳಿಗೆ ಸರಬರಾಜು ಮಾಡಲಾಗುವುದು. ಈ ಯೋಜನೆಯ ಅಂದಾಜು ವೆಚ್ಚ 932 ಕೋಟಿ ರೂ. ಚಾಲ್ತಿಯಲ್ಲಿರುವ ಯೋಜನೆಯಿಂದ ಲಭ್ಯವಿರುವ ಹಣ 30 ಕೋಟಿ ರೂ. ಇತರೆ ಮೂಲಗಳಿಂದ ಲಭ್ಯವಿರುವ ಹಣ 10 ಕೋಟಿ ರೂ. ನಗರಸಭೆಗಳು ನಿರ್ಣಯವನ್ನು ಮಾಡಿ ಶೇ 10 ರಷ್ಟು ವೆಚ್ಚ ಭರಿಸುವುದಾಗಿ ತಿಳಿಸಿದೆ. ಬಾಕಿ ಹಣವನ್ನು ಬ್ಯಾಂಕಿನಿಂದ ಸಾಲ ಪಡೆಯಲಾಗುವುದು ಎಂದರು.

ನೀರಿನ ದರದಲ್ಲಿ ಹೆಚ್ಚಳ ಸಧ್ಯಕ್ಕಿಲ್ಲ
ಶೇ 30 ರಿಂದ 40 ರಷ್ಟು ನೀರಿನ ದರ ಪಾವತಿಯಾಗುತ್ತಿಲ್ಲ. ದರ ವಸೂಲು ಮಾಡಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನೀರಿನ ದರ ತಕ್ಷಣ ಹೆಚ್ಚಿಸಲಾಗುವುದಿಲ್ಲ . ನೀರು ಸರಬರಾಜು ಮತ್ತು ನಿರ್ವಹಣಾ ವೆಚ್ಚವನ್ನು ಆಧರಿಸಿ ದರ ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದರು.

ಮುಂದೆ ಓದಿ

ವಿಚಾರ

ಹವಾಮಾನ ತಜ್ಞರ ಪ್ರಕಾರ ೨೦೧೦ ಅತ್ಯಕ ಉಷ್ಣತಾಮಾನದ ವರ್ಷವಾಗಿ ದಾಖಲಾಗುವ ಸಂಭವವಿದೆ.
ಹೆಚ್ಚುತ್ತಿರುವ ಭೂಮಿಯ ತಾಪಮಾನ ಇದಕ್ಕೆ ಕಾರಣ. ೨೦೦೯ ಹಾಗೂ ೧೯೯೮ ಈವರೆಗಿನ ಅತಿ
ಹೆಚ್ಚು ಉಷ್ಣತಾಮಾನದ ವರ್ಷಗಳಾಗಿದ್ದವು.
ಬ್ರಿಟನ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನ ವರದಿಯೊಂದರ ಪ್ರಕಾರ ಪರಿಸ್ಥಿತಿ ಹೀಗೆಯೇ
ಮುಂದುವರಿದರೆ ೨೦೬೦ರ ವೇಳೆಗೆ ಜಾಗತಿಕ ತಾಪಮಾನದಲ್ಲಿ ೪ ಡಿಗ್ರಿ ಸೆಲ್ಸಿಯಸ್‌ನಷ್ಟು
ಏರಿಕೆ ಕಂಡು ಬರಲಿದೆ. ಆರ್ಕಿಟಿಕ್, ಪಶ್ಚಿಮ ಹಾಗೂ ದಕ್ಷಿಣ ಆಫ್ರಿಕಾದ ಕೆಲವು
ಪ್ರದೇಶಗಳಲ್ಲಿ ಏರಿಕೆಯ ಪ್ರಮಾಣ ೧೦ ಡಿಗ್ರಿಯಷ್ಟು ಹೆಚ್ಚಾದರೂ ಅತಿಶಯೋಕ್ತಿ
ಪಡಬೇಕಿಲ್ಲ.



ಪರಿಣಾಮ ಘೋರ, ಅಳಿವಿನ ಮೂಲ
ಭೂಮಿಯ ತಾಪಮಾನ ಏರಿಕೆಯ ಪರಿಣಾಮಗಳು ಘೋರ. ಮಾನವ ಸಂತತಿಯ ಅಳಿವಿಗೆ ಮೂಲ. ಜಾಗತಿಕ
ತಾಪಮಾನ ಪರ್ವತ ಪ್ರದೇಶಗಳಲ್ಲಿನ ಹಿಮವನ್ನು ಕರಗಿಸುತ್ತದೆ. ಹೀಗೆ ಕರಗಿದ ಹಿಮ
ಸಮುದ್ರ, ಸಾಗರಗಳನ್ನು ಸೇರುವುದರಿಂದ ಅವುಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ.
ಕಳೆದ ೧೫೦ ವರ್ಷಗಳ ಅವಯಲ್ಲಿ ಕರಗಿದ ಮಂಜಿನಿಂದಾಗಿ ಬಹುತೇಕ ಪರ್ವತ ಪ್ರದೇಶಗಳ ಗಾತ್ರ
ಕಿರಿದಾಗಿದೆ. ಇದು ಹೀಗೆಯೇ ಮುಂದುವರಿದರೆ ೨೧೦೦ರ ವೇಳೆಗೆ ಬಹುತೇಕ ಹಿಮಪರ್ವತಗಳು
ಕರಗಿ ನೀರಾಗಲಿವೆ. ಮಂಜಿನ ಗಾತ್ರ ಕಿರಿದಾದರೆ ಮುಂದಿನ ದಿನಗಳಲ್ಲಿ ಬೇಸಿಗೆಯ
ಕಾಲದಲ್ಲಿ ನದಿಗಳಿಗೆ ಹರಿದು ಬರುವ ನೀರಿನ ಮೂಲ ಕಿರಿದಾಗುತ್ತದೆ. ಪರಿಣಾಮ ನದಿಗಳಲ್ಲಿ
ನೀರಿನ ಅಭಾವ ಕಂಡು ಬರಲಿದೆ.
ತಾಪಮಾನ ಏರಿಕೆಯಿಂದಾಗಿ ಕಳೆದ ೧೦೦ ವರ್ಷಗಳ ಅವಯಲ್ಲಿ ವಿಶ್ವದ ವಿವಿಧ ಸಮುದ್ರಗಳಲ್ಲಿನ
ನೀರಿನ ಮಟ್ಟದಲ್ಲಿ ೪-೧೦ ಇಂಚುಗಳಷ್ಟು, ಅಂದರೆ ೧೦-೨೫ ಸೆ. ಮೀ.ಗಳಷ್ಟು ಏರಿಕೆ ಕಂಡು
ಬಂದಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ೧೦೦ ವರ್ಷಗಳ ಅವಯಲ್ಲಿ ಸಮುದ್ರಗಳ
ನೀರಿನ ಮಟ್ಟದಲ್ಲಿ ೧೫-೯೨ ಸೆ.ಮೀ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸಮುದ್ರದ
ನೀರಿನ ಮಟ್ಟ ಒಂದು ಇಂಚು ಏರಿದರೆ ಅದರ ದಂಡೆಯ ಮೇಲಿನ ೫೦-೧೦೦ ಅಡಿಗಳಷ್ಟು ಪ್ರದೇಶ
ಮುಳುಗಡೆಯಾಗುವ ಸಂಭವವಿರುತ್ತದೆ.
ತಾಪಮಾನ ಹೆಚ್ಚಿದಂತೆ ಬರಗಾಲ ಬರುವ ಸಂಭವ ಹೆಚ್ಚು. ಅಲ್ಲದೇ, ಬರಗಾಲದ ತೀವ್ರತೆಯೂ
ಹೆಚ್ಚು. ದೀರ್ಘಕಾಲದ ಬರಗಾಲ ಕಾಡಿನ ಬೆಂಕಿಗೂ ಆಹ್ವಾನವೀಯುತ್ತದೆ. ಸಸ್ಯಗಳು,
ಬೆಳೆಗಳು ಕೀಟನಾಶಕಗಳ ಹಾವಳಿಗೆ ತುತ್ತಾಗುವ ಸಾಧ್ಯತೆಯೂ ಅಕ. ತಾಪಮಾನದ ಹೆಚ್ಚಳ
ನಿಧಾನವಾಗಿ ಭೂಮಿಯನ್ನು ಬರಡಾಗಿಸಲೂಬಹುದು.
ಬೆಚ್ಚನೆಯ ಹವೆ ಸೊಳ್ಳೆಗಳಿಗೆ ವರದಾನ. ಬೆಚ್ಚನೆಯ ವಾತಾವರಣ ಮಲೇರಿಯಾ, ಡೆಂಗೆ
ಜ್ವರಗಳನ್ನು ಹರಡುವ ಸೊಳ್ಳೆಗಳ ಕಾರ್‍ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇದರಿಂದಾಗಿ ಮನುಜನನ್ನು ಕಚ್ಚುವ ಹಾಗೂ ರೋಗ ತರುವ ಅವುಗಳ ಸಾಮರ್ಥ್ಯ ಹೆಚ್ಚುತ್ತದೆ. ಆ
ಮೂಲಕ ಮಾನವನ ಅನಾರೋಗ್ಯಕ್ಕೆ, ಮಾರಣಾಂತಿಕ ಕಾಯಿಲೆಗಳ ಮೂಲಕ್ಕೆ ಕಾರಣವಾಗುತ್ತದೆ.
ವಿಶ್ವದ ಕೆಲವೆಡೆ ಈಗ ಬೇಸಿಗೆ ಕಾಲ ಬಹು ಬೇಗನೆ ಬರುತ್ತಿದೆ. ಹಳೆಯ ಎಲೆಗಳು ಉದುರಿ
ಹೊಸ ಚಿಗುರು ಬಿಡುವ, ಪ್ರಾಣಿಗಳು ಮೊಟ್ಟೆ ಇಡುವ, ಪಕ್ಷಿಗಳು ವಲಸೆ ಹೋಗುವ
ಪ್ರಕ್ರಿಯೆಗಳು ಈ ಬದಲಾವಣೆಯನ್ನು ಸೂಚಿಸುತ್ತಿವೆ. ಆದರೆ, ವಸಂತನ ಪೂರ್ವಾಗಮನ ಹಲವು
ಸಮಸ್ಯೆಗಳಿಗೆ ಕಾರಣವಾಗಬಹುದು. ಪಕ್ಷಿಗಳ ವಲಸೆ ಪದ್ಧತಿಯ ಮೇಲೆ ವ್ಯತಿರಿಕ್ತ ಪರಿಣಾಮ
ಬೀರಬಹುದು.
ಕೆಲವು ಪ್ರಾಣಿ, ಪಕ್ಷಿಗಳು ವಾತಾವರಣದ ಉಷ್ಣತೆಗೆ ತಮ್ಮದೇ ಆದ ಸಂವೇದನೆ
ವ್ಯಕ್ತಪಡಿಸುತ್ತವೆ. ಪ್ರಾಣಿಗಳು ಎತ್ತರದ ಪ್ರದೇಶ ಹಾಗೂ ಅಕ್ಷಾಂಶದೆಡೆಗೆ
ಚಲಿಸಲಾರಂಭಿಸುತ್ತವೆ. ಸಸ್ಯಗಳು ಅಕ ಉಷ್ಣತೆಯೆಡೆಗೆ ಹೊರಳುತ್ತವೆ. ಇತ್ತೀಚಿನ
ಅಧ್ಯಯನಗಳು ಹೇಳುವ ಪ್ರಕಾರ ಇವು ಈಗಾಗಲೇ ಅನುಕೂಲಕರ ವಾತಾವರಣ ನೋಡಿಕೊಂಡು ತಮ್ಮ
ಬದುಕಿನ ವ್ಯವಸ್ಥೆಗೆ ಸರಿಹೊಂದುವ ಪ್ರದೇಶಗಳತ್ತ ಹೊರಳುತ್ತಿವೆ. ಇದು ಮುಂದೊಂದು ದಿನ
ಪರಿಸರ ಅಸಮತೋಲನಕ್ಕೆ ಕಾರಣವಾಗಬಹುದು. ಒಂದು ವೇಳೆ ಭೂಮಿಯ ತಾಪಮಾನ ಕ್ಷಿಪ್ರಗತಿಯಲ್ಲಿ
ಏರಿದರೆ ಕೆಲವು ಪ್ರಾಣಿ ಹಾಗೂ ಸಸ್ಯ ಸಂತತಿಗಳು ಬೇಗ ನಾಶವಾಗುವ ಸಂಭವವನ್ನೂ
ಅಲ್ಲಗಳೆಯಲಾಗುತ್ತಿಲ್ಲ. ಅಕ ತಾಪಮಾನದಿಂದಾಗಿ ಅಕಾಲಿಕ ಮಳೆ ಸುರಿಯುವ ಸಾಧ್ಯತೆಗಳೂ
ನಿಚ್ಚಳವಾಗಿವೆ.
ಕಳೆದ ೨೦ ವರ್ಷಗಳ ಅವಯಲ್ಲಿ ಇಂಧನ ಮೂಲಗಳಿಂದ ಹೊರಬಂದ ತ್ಯಾಜ್ಯ, ಅವುಗಳ ಜೊತೆ ಹರಿದು
ಬಂದ ಇಂಗಾಲದ ಡೈ ಆಕ್ಸೈಡ್, ಸಮುದ್ರ, ಸಾಗರ ಹಾಗೂ ಅರಣ್ಯಗಳು ಅದನ್ನು ಹೀರಿಕೊಳ್ಳುವ
ಗತಿಗಳ ಕುರಿತು ವಿಜ್ಞಾನಿಗಳು ನಡೆಸಿದ ಅಧ್ಯಯನ ಹೇಳುವ ಪ್ರಕಾರ ತಾಪಮಾನ
ಏರಿಕೆಯಿಂದಾಗಿ ವಿಶ್ವದ ಕೆಲವೆಡೆ ಭೀಕರ ಕ್ಷಾಮ ಉಂಟಾಗಬಹುದು. ಇದರಿಂದಾಗಿ ಈಗಿರುವ
ಮಳೆಯ ಆವರ್ತನ ಪದ್ಧತಿಯೇ ಬದಲಾಗಬಹುದು.
ಈ ಶತಮಾನದ ಮಧ್ಯಭಾಗದ ವೇಳೆಗೆ ವಿಶ್ವದಲ್ಲಿ ಇನ್ನೂ ೨.೫ ಕೋಟಿ ಮಕ್ಕಳು ಆಹಾರ ದೊರಕದೆ
ಹಸಿವಿನಿಂದ ಬಳಲುತ್ತಾರೆ. ಹವಾಮಾನ ವೈಪರೀತ್ಯದ ಪರಿಣಾಮವಿದು. ಹವಾಮಾನ ವೈಪರೀತ್ಯ
ವಿಶ್ವದ ಹಲವೆಡೆ ಆಹಾರದ ಕೊರತೆಯನ್ನು ಉಂಟುಮಾಡಬಲ್ಲುದು ಎಂಬುದು ಈ ಕಳವಳಕ್ಕೆ ಕಾರಣ.
ಭಾರತವೂ ಹೊರತಲ್ಲ
ಭೂಮಿಯ ತಾಪಮಾನದಲ್ಲಿನ ಹೆಚ್ಚಳ ಭಾರತದ ಮೇಲೂ ದುಷ್ಪರಿಣಾಮ ಬೀರಬಲ್ಲುದು.
ಉಷ್ಣಹವೆಯಿಂದಾಗಿ ಹಿಮಾಲಯದ ಹಿಮ ಕರಗುವ ಸಾಧ್ಯತೆಯಿದೆ. ಇದು ಬಿಹಾರ, ಪಶ್ಚಿಮ ಬಂಗಾಳ,
ಅಸ್ಸಾಂ ಹಾಗೂ ಬಾಂಗ್ಲಾದೇಶಗಳಲ್ಲಿ ನೆರೆವಾಹಳಿಯನ್ನು ಸೃಷ್ಠಿಸಬಲ್ಲುದು.
ಮಂಜುಪ್ರವಾಹ ಸಕಾಲಕ್ಕೆ ಸಂಭವಿಸದಿದ್ದಲ್ಲಿ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ
ಬೀರುತ್ತದೆ. ಇದರಿಂದಾಗಿ ಏಷ್ಯಾ ವಲಯದಲ್ಲಿನ ಮಳೆಯ ಆವರ್ತನದಲ್ಲಿ ಬದಲಾವಣೆಯಾಗುವ
ಸಾಧ್ಯತೆಯಿದೆ. ಅಂದರೆ, ಭಾರತದಲ್ಲಿ ಅಲ್ಲದಿದ್ದರೂ, ಇತರೆಡೆ ಎಲ್ಲಿಯಾದರೂ ಇನ್ನಷ್ಟು
ಬರಗಾಲ ಉಂಟಾಗುವ ಸಾಧ್ಯತೆಯಿದೆ. ಆ ಮೂಲಕ ಆಹಾರ, ವಿದ್ಯುತ್ ಹಾಗೂ ನೀರಿನ ತೀವ್ರ
ಸಮಸ್ಯೆ ಜನತೆಯನ್ನು ಕಾಡಲಿದೆ.
ನಮ್ಮ ಕರ್ತವ್ಯ
ಈ ದುರಂತ ತಪ್ಪಿಸಲು ಇರುವ ಉತ್ತಮ ಮಾರ್ಗವೆಂದರೆ ಹಸಿರು ಪರಿಣಾಮ ಉಂಟು ಮಾಡುವ ಅನಿಲದ
ಹೊರಸೂಸುವಿಕೆಯನ್ನು ಆದಷ್ಟು ಕಡಿಮೆ ಮಾಡುವುದು.
ಈ ಭೂಮಿಯ ಮೇಲೆ ಅತ್ಯಕ ಪ್ರಮಾಣದಲ್ಲಿ ದೊರಕುವ ಅನಿಲಗಳ ಪೈಕಿ ಇಂಗಾಲವೂ ಒಂದು. ಭೂಮಿಯ
ಎಲ್ಲಾ ಸ್ತರಗಳಲ್ಲಿಯೂ ಹಾಸು ಹೊಕ್ಕಾಗಿರುವ ಇಂಗಾಲ ಜೀವಿಗಳ ಉಳಿವಿಗೆ ಅತ್ಯಗತ್ಯ.
ಇಂಧನದ ದಹನ ಹಾಗೂ ಇನ್ನಿತರ ಚಟುವಟಿಕೆಗಳ ವೇಳೆ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ
ಬಿಡುಗಡೆಯಾಗುತ್ತದೆ. ಇದು ಸಾಗರದ ನೀರಿನಲ್ಲಿ ಕರಗುತ್ತದೆ. ಸಸ್ಯಗಳು
ಹೀರಿಕೊಳ್ಳುತ್ತವೆ. ಪ್ರಾಣಿಗಳಿಂದ ಸಸ್ಯಗಳಿಗೆ, ಸಸ್ಯಗಳಿಂದ ಪ್ರಾಣಿಗಳಿಗೆ, ಪ್ರಾಣಿ,
ಪಕ್ಷಿ, ಸಸ್ಯಗಳಿಂದ ವಾತಾವರಣಕ್ಕೆ, ವಾತಾವರಣದಿಂದ ಪ್ರಾಣಿ, ಪಕ್ಷಿ, ಸಸ್ಯಗಳಿಗೆ,
ಜೀವಿಗಳಿಂದ ಸಾಗರಕ್ಕೆ, ಸಾಗರದಿಂದ ಜೀವಿಗಳಿಗೆ...ಹೀಗೆ ನಿರಂತರ ಇಂಗಾಲದ
ಆವರ್ತನೆಯಾಗುತ್ತಿರುತ್ತದೆ.
ಈ ಇಂಗಾಲದ ಚಕ್ರ ಸಮನಾಗಿ ತಿರುಗುತ್ತಿದ್ದರೆ ತೊಂದರೆ ಇಲ್ಲ. ವಾತಾವರಣದಲ್ಲಿನ ಇಂಗಾಲದ
ಪ್ರಮಾಣದಲ್ಲಿ ಹೆಚ್ಚು, ಕಡಿಮೆಯಾದರೆ ತೊಂದರೆ ನಿಶ್ಚಿತ. ಕಾರಣ ಇಂಗಾಲಕ್ಕೆ ವಾತಾವರಣದ
ಉಷ್ಣತೆಯನ್ನು ಹೀರಿಕೊಳ್ಳುವ ಗುಣವಿದೆ. ಸೂರ್ಯನಿಂದ ಬರುವ ಕಿರಣಗಳು ಭೂಮಿಯನ್ನು
ತಲುಪಿ, ಪ್ರತಿಫಲನಗೊಂಡು ತಿರುಗಿ ಆಕಾಶದತ್ತ ಸಾಗುತ್ತವೆ. ಆದರೆ, ವಾತಾವರಣದಲ್ಲಿ
ಇಂಗಾಲ ಜಾಸ್ತಿಯಾದರೆ ಅದು ಈ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಆ ಮೂಲಕ ವಾತಾವರಣದ
ಉಷ್ಣತೆ ಹೆಚ್ಚುತ್ತದೆ.
ಭೂಮಿಯ ತಾಪಮಾನ ಏರಿಕೆಗೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್, ಮಿಥೇನ್, ನೈಟ್ರಸ್
ಆಕ್ಸೈಡ್, ಪ್ಲ್ಯೂರೋಕಾರ್ಬನ್ಸ್‌ಗಳನ್ನು ಹಸಿರು ಪರಿಣಾಮ ಉಂಟು ಮಾಡುವ ಅನಿಲಗಳು ಎಂದು
ಕರೆಯಲಾಗುತ್ತದೆ.
ಆಕಸ್ಮಿಕವಾಗಿ, ಕೆಲವು ಸಲ ದುರುದ್ದೇಶಗಳಿಂದಾಗಿ ಬೀಳುವ ಬೆಂಕಿ ಕಾಡಿನ ಅಮೂಲ್ಯ
ಸಂಪತ್ತನ್ನು ನಾಶ ಮಾಡಿ ಬಿಡುತ್ತದೆ. ನೋಡ, ನೋಡುತ್ತಿದ್ದಂತೆಯೇ ಅಪಾರ ಪ್ರಮಾಣದ ಸಸ್ಯ
ಸಂಪತ್ತು ಉರಿದು ಬೂದಿಯಾಗುತ್ತದೆ. ಸಸ್ಯ ಸಂಪತ್ತು ಉರಿದು ಬೀಳುವಾಗ ಅಪಾರ ಪ್ರಮಾಣದ
ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದರ ಜೊತೆ ವಿಷಕಾರಕ
ಅನಿಲಗಳೂ ಸೇರಿರುತ್ತವೆ. ಇದು ಸುತ್ತಲ ವಾತಾವರಣದಲ್ಲಿ ತಾಪಮಾನ ಏರಿಕೆಗೆ
ಕಾರಣವಾಗುತ್ತದೆ.
ಅರಣ್ಯಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಂಡು ಪರಿಸರ ಸಮತೋಲನ
ಉಂಟು ಮಾಡಬಲ್ಲವು. ಮಾತ್ರವಲ್ಲ, ಇತರ ಅಪಾಯಕಾರಿ ಅನಿಲಗಳನ್ನೂ ನಾಶಮಾಡುವ ಸಾಮರ್ಥ್ಯ
ಪಡೆದಿವೆ. ಓಝೋನ್ ಪದರದ ನಾಶಕ್ಕೆ ಮೂಲವಾಗುವ, ಆ ಮೂಲಕ ಜಾಗತಿಕ ತಾಪಮಾನ ಹೆಚ್ಚಳಕ್ಕೆ
ಕಾರಣವಾಗುವ, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂಗಾಲದ ಮಾನಾಕ್ಸೈಡ್
ಪ್ರಮಾಣವನ್ನು ವಾತಾವರಣದಲ್ಲಿ ಕಡಿಮೆ ಮಾಡಲು ಅರಣ್ಯಗಳು ಸಹಕಾರಿ.
ನಾಡ ತಂಪಾಗಿಸೋಣ
ಭೂಮಿಯ ತಾಪಮಾನ ಏರಿಕೆಗೆ ನಮ್ಮೆಲ್ಲರ ಕಾಣಿಕೆಯೂ ಸಾಕಷ್ಟಿದೆ. ನಮ್ಮ ದೈನಂದಿನ
ಚಟುವಟಿಕೆಗಳು, ಅದರಿಂದ ಹೊರಸೂಸುವ ತ್ಯಾಜ್ಯ ತಾಪಮಾನ ಏರಿಕೆಗೆ ಒಂದು ಕಾರಣ. ಹನಿ,
ಹನಿ ನೀರು ಸೇರಿ ದೊಡ್ಡ ಸಮುದ್ರವಾಗುವಂತೆ, ನಾವು ಮತ್ತೊಬ್ಬರ ಮೇಲೆ ತೋರುವ ತುಸು
ಪ್ರೀತಿ ಈ ಭೂಮಿಯನ್ನೇ ಸ್ವರ್ಗವಾಗಿಸುವಂತೆ ನಮ್ಮೆಲ್ಲರ ತುಸು ಪ್ರಯತ್ನ ಈ ಭೂಮಿಯನ್ನು
ತಂಪಾಗಿಸಿ, ನಮ್ಮೆಲ್ಲರ ಬದುಕನ್ನು ಆನಂದಮಯವಾಗಿಸಬಹುದು. ದೊಡ್ಡದೊಂದು ಸಂಕಷ್ಟದಿಂದ
ಪಾರು ಮಾಡಬಹುದು.
ನಾವು ಮನಸ್ಸು ಮಾಡಿದರೆ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಅನಿಲಗಳ
ಹೊರಸೂಸುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ
ಜೀವನಕ್ರಮವನ್ನು ಬದಲಾಯಿಸಿಕೊಳ್ಳಬಹುದು.
* ಬಳಸಿ ಬೀಸಾಡುವ ಅದೆಷ್ಟೋ ಪದಾರ್ಥಗಳನ್ನು ಮರುಬಳಕೆ ಮಾಡಿಕೊಳ್ಳಬಹುದು.
ಅಲ್ಯುಮೀನಿಯಂ ಕ್ಯಾನ್‌ಗಳು, ಪ್ಲಾಸ್ಟಿಕ್‌ಗಳು, ಗಾಜು, ಕಾಗದ, ಸುದ್ದಿಪತ್ರಿಕೆಗಳು
ಮುಂತಾದುವನ್ನು ಬಳಸಿ ಬೀಸಾಡುತ್ತೇವೆ. ಅದರ ಬದಲು ಇವುಗಳ ಮರುಬಳಕೆ ಮಾಡಿಕೊಳ್ಳಬಹುದು.
ನಮ್ಮ ಮನೆಯಲ್ಲಿ ಬಳಸಿ ಬೀಸಾಡುವ ಕೆಲವು ವಸ್ತುಗಳನ್ನಾದರೂ ಪುನರ್ ಬಳಸಿಕೊಂಡರೆ ಅದು
ಆರ್ಥಿಕವಾಗಿಯೂ ಅನುಕೂಲ. ಸುತ್ತಲ ಪರಿಸರಕ್ಕೂ ಸಹಕಾರಿ.
* ಕಚೇರಿಗಳಲ್ಲಿ, ಮನೆಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯ ಬಳಕೆಯಲ್ಲಿ ಸಾಕಷ್ಟು ಕಡಿತ
ಮಾಡಬಹುದು. ಬೇಸಿಗೆಯ ಕಾಲದಲ್ಲಿ ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಹವಾನಿಯಂತ್ರಿತ
ವ್ಯವಸ್ಥೆ ನಮಗೆ ಅನಿವಾರ್‍ಯ. ಆದರೆ, ಮಳೆಗಾಲ, ಚಳಿಗಾಲಗಳಲ್ಲಿ ಇದರ ಬಳಕೆಯನ್ನು
ಕಡಿಮೆ ಮಾಡಬಹುದು.
ಇದರ ಜೊತೆ ವಿದ್ಯುತ್ ಬಳಕೆಯಲ್ಲೂ ಕಡಿತ ಮಾಡಬಹುದು. ರಾತ್ರಿ ಹೊತ್ತು ಮಲಗುವಾಗಲೂ
ವಿದ್ಯುತ್ ದೀಪ ಆರಿಸುವುದನ್ನು ಹಲವರು ಮರೆಯುತ್ತಾರೆ. ಹಗಲು ಹೊತ್ತಿನಲ್ಲೂ ದೀಪ
ಉರಿಸುವುದನ್ನು ಹಲವು ಮನೆಗಳಲ್ಲಿ, ಕಚೇರಿಗಳಲ್ಲಿ ನಾವು ಕಾಣುತ್ತೇವೆ.
ಥರ್ಮೊಸ್ಟ್ಯಾಟ್‌ನ್ನು ಚಳಿಗಾಲದಲ್ಲಿ ೨ ಡಿಗ್ರಿ ತಗ್ಗಿಸಿ. ಇದರಿಂದಾಗಿ ವರ್ಷಕ್ಕೆ
ಸುಮಾರು ೨ ಸಾವಿರ ಪೌಂಡ್ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುವುದನ್ನು
ತಪ್ಪಿಸಬಹುದು. ಅಷ್ಟಕ್ಕೂ ಈ ನಿಸರ್ಗಕ್ಕಿಂತ ಉತ್ತಮ ಹವಾನಿಯಂತ್ರಕ ವ್ಯವಸ್ಥೆ ಬೇಕೆ?
ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾಲ ಕಳೆಯುವ ಬದಲು ಸ್ವಲ್ಪ ಹೊತ್ತು ಹೊರಗಡೆ
ನಿಸರ್ಗದಲ್ಲಿ ಓಡಾಡಿ. ಪ್ರಕೃತಿಯ ಸೌಂದರ್‍ಯ ಆಸ್ವಾದಿಸಿ.
* ಕಾಂಪ್ಯಾಕ್ಟ್ ಪ್ಲುರೋಸೆಂಟ್ ಲೈಟ್ ಬಲ್ಬ್‌ಗಳನ್ನು ಬಳಸಿ. ಮಾಮೂಲಿ ಬಲ್ಬ್ ಬದಲಿಗೆ
ಕಾಂಪ್ಯಾಕ್ಟ್ ಪ್ಲುರೋಸೆಂಟ್ ಲೈಟ್ ಬಲ್ಬ್‌ನ್ನು ಬಳಸಿದರೆ ಅದರ ಜೀವಿತಾವಯಲ್ಲಿ ಅದು
ಸುಮಾರು ೧,೫೦೦ ರೂ.ಗಳನ್ನು ಉಳಿಸಬಲ್ಲದು. ಈ ಬಲ್ಬ್‌ನ ಕಾರ್‍ಯ ಸಾಮರ್ಥ್ಯ ಸಾಧಾರಣ
ಬಲ್ಬ್‌ಗಿಂತ ಅಕ. ಅಲ್ಲದೆ, ಇದರಿಂದ ಹಸಿರು ಗಾಜಿನ ಪರಿಣಾಮ ಬೀರುವ ಅನಿಲಗಳ
ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು.
* ನಮ್ಮಲ್ಲಿ ಕೆಲವರಿಗೆ ಸ್ವಲ್ಪ ದೂರ ಅಡ್ಡಾಡುವುದಕ್ಕೂ ವಾಹನವೇ ಬೇಕು. ಈ
ದೊಡ್ಡಸ್ಥಿಕೆ ಬೇಡ. ಸ್ವಲ್ಪ ದೂರ ನಡೆದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ
ಒಂದಿಷ್ಟು ಪೆಟ್ರೋಲ್ ಉಳಿಸಬಹುದು. ಇದರ ಜೊತೆಗೆ ವೈಯಕ್ತಿಕವಾಗಿ ವಾಹನ ಬಳಕೆ
ಮಾಡುವುದಕ್ಕಿಂತ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತರಾಗಿ.
ಕಾರು, ಬೈಕ್, ಇತರ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ. ಹಾಳಾದ, ಸವಕಲಾದ
ಟೈರ್‌ಗಳ ಬಳಕೆ ಬೇಡ. ಪ್ರತಿ ಸಲ ಈ ಟೈರ್‌ಗಳಿಗೆ ಗಾಳಿ ತುಂಬಿಸುವಾಗ ಇಂಗಾಲದ ಡೈ
ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಒಂದು ಗ್ಯಾಲನ್ ಗ್ಯಾಸ್ ಉಳಿಸಿದರೆ
ಸುಮಾರು ೨೦ ಪೌಂಡ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಡೆಯಬಹುದು.
* ಮೋಲ್ಡ್ ಪ್ಲಾಸ್ಟಿಕ್ ಹಾಗೂ ಇತರ ಪ್ಯಾಕ್ ಮಾಡಿದ ಪದಾರ್ಥಗಳ ಬಳಕೆಯನ್ನು ಆದಷ್ಟು
ಕಡಿಮೆ ಮಾಡಿ. ಮನೆಯಲ್ಲಿ ದಿನಬಳಕೆ ವಸ್ತುಗಳ ಮೇಲಿನ ತ್ಯಾಜ್ಯವನ್ನು ಶೇ. ೧೦ರಷ್ಟು
ಕಡಿಮೆ ಮಾಡಿದರೆ ವಾರ್ಷಿಕ ೧,೨೦೦ ಪೌಂಡ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ
ತಡೆಗಟ್ಟಬಹುದು.
* ಕುದಿಯುವ ನೀರಿನ ಬಳಕೆ ಕಡಿಮೆ ಮಾಡಿ. ತುಂಬಾ ಬಿಸಿ ಮಾಡಿ, ನಂತರ ಅದನ್ನು ತಣಿಸಿ
ಕುಡಿಯುವುದಕ್ಕಿಂತ ಬೆಚ್ಚನೆಯ ಉಷ್ಣತೆಯವರೆಗೆ ಮಾತ್ರ ನೀರನ್ನು ಬಿಸಿ ಮಾಡಿದರೆ ಅಷ್ಟರ
ಮಟ್ಟಿನ ಇಂಧನ ಉಳಿಸಬಹುದು. ಬಟ್ಟೆ ತೊಳೆಯಲೂ ಕೆಲವರು ಬಿಸಿ ನೀರನ್ನು ಬಳಸುತ್ತಾರೆ.
ಇದರ ಬದಲು ತಣ್ಣನೆಯ ನೀರನ್ನು ಇಲ್ಲವೇ ಬೆಚ್ಚಗಿನ ನೀರನ್ನು ಬಳಸಬಹುದು.
* ಮನೆಯಿಂದ ಹೊರಹೋಗುವಾಗ ವಿದ್ಯುತ್ ದೀಪಗಳನ್ನು ಕಡ್ಡಾಯವಾಗಿ ಆರಿಸಿ ಹೋಗಿ. ಬಳಕೆ
ಮಾಡದೇ ಇರುವಾಗ ಟಿವಿ, ವಿಡಿಯೋ, ಸ್ಟಿರಿಯೊ, ಕಂಪ್ಯೂಟರ್‌ಗಳನ್ನು ಸಂಪೂರ್ಣ ‘ಆಫ್’
ಮಾಡಬಹುದು. ಇವುಗಳನ್ನು ‘ಆನ್’ ಸ್ಥಿತಿಯಲ್ಲಿ ಇಡುವುದು ಒಳಿತಲ್ಲ.
* ನಿಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಿ. ಆ ಮೂಲಕ
ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಳ್ಳಲು ಅವಕಾಶ ಮಾಡಿಕೊಡಿ.
ಮರವೊಂದು ಅದರ ಜೀವಿತಾವಯಲ್ಲಿ ಸರಿ ಸುಮಾರು ೧ ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್
ಹೀರಿಕೊಳ್ಳಬಹುದು ಎಂಬ ಅಂಶ ನಿಮ್ಮ ಗಮನದಲ್ಲಿರಲಿ.
ಈ ಎಲ್ಲಾ ಸಂಗತಿಗಳ ಬಗ್ಗೆ ನಿಮ್ಮ ಸ್ನೇಹಿತರಲ್ಲಿ, ನೆರೆ-ಹೊರೆಯವರಲ್ಲಿ, ಸಂಬಂಕರಲ್ಲಿ
ಮಾಹಿತಿ ವಿನಿಮಯ ಮಾಡಿಕೊಳ್ಳಿ. ಪರಿಸರ ಸ್ನೇಹಿ ಚಟುವಟಿಕೆಗಳ ಬಗ್ಗೆ ಅವರಿಗೆ ಮನವರಿಕೆ
ಮಾಡಿಕೊಡಿ. ಈ ದಿಸೆಯತ್ತ ಅವರನ್ನು ಪ್ರೇರೇಪಿಸಿ. ಉತ್ತಮ ಬದುಕಿಗೆ ದಾರಿ
ಮಾಡಿಕೊಳ್ಳಿ.

ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ
7:01 PM

ನಿಟ್ಟುಸಿರು

Posted by ekanasu

ಭಾವನಾ
ನಿನಗೆ ಪತ್ರ ಬರೆದು ತುಂಬಾ ದಿನ ಆಯ್ತು, ಟೈಮ್ ಇರ್ಲಿಲ್ಲ !! ಸುಳ್ಳು... ಸ್ವಲ್ಪ ಸೋಮಾರಿತನ ಅಷ್ಟೇ, physically conservative.. !! ಗೊತ್ತಿಲ್ಲ ಏನೇ ಬರೆದರೂ, ಏನೇ ಹೇಳಿದರೂ.. ಯಾವುದು ಬರೆದಂತಾಗುತ್ತಿಲ್ಲ. ಏನೋ ಒಂದು ತರಹ ಸಂಕಟ, ವಿಚಿತ್ರ ಗೋಜಲು !! "ಬರೆದ ಪದಗಳಿಗೆ ಅನಿಸಿದ್ದೆಲ್ಲ ಹೇಳುವ ತಾಕತ್ತಿಲ್ಲ ಅಂತ ಗೊತ್ತಿದ್ದರು ಅದೇನೂ ಒಂದು ಚಟ, ಏನನ್ನೋ ಬಣ್ಣಿಸುವ ಹಂಬಲ.. ಈ ನಿಟ್ಟುಸಿರಿಗೆ ನಿನ್ನೆದೆ ಬಿಟ್ಟರೆ ಬೇರೆ ಮನೆ ಇಲ್ಲ, ಈ ನಿಟ್ಟುಸಿರಿನಲ್ಲಿ ನಿನ್ನದೆಯಲ್ಲಿ ಸ್ವಲ್ಪ ಹೊತ್ತು ಕೂತು ಸ್ವಲ್ಪ ಉಸಿರೆಳೆದುಕೊಂಡು ಹೋಗುವ ಅಭಿಲಾಷೆ ಅಷ್ಟೇ.. ಅಬ್ಬಬ್ಬ!! ಎಷ್ಟೊಂದು ಕುರುಡು ಕನಸು .. ಈ ಕನಸುಗಳಿಗೆ ಸಾವೇ ಇಲ್ಲ" ಆದರು ಅನಿಸಿದ್ದು ಹೇಳಲಾಗ್ತಾ ಇಲ್ಲ !




ಯಾಕೋ ಗೊತ್ತಿಲ್ಲ ಕಣೆ ಯಾವುದೇ ಕಾರಣವಿಲ್ಲದ ಒಂದೊಂದು ಸಲ ಎದೆ ಬರಡಾಗುತ್ತೆ.. ಕಡಲ ಮದ್ಯ ಬಾಯರಿ ನಿಂತರು ಒಂದು ತೊಟ್ಟು ನೀರು ಕುಡಿಯದ ಹಾಗೆ. ಆದರು ನಾನು ನಿನಗೆ ಬರೀಬೇಕು ಅಂತ ಇರೋದು ಇದಲ್ಲ ..ಇದ್ಯಾವುದು ಅಲ್ಲ..


ಬದುಕು ನನ್ನನ್ನು ಪ್ರೀತಿಸೋಕೆ ಹೇಳ್ತಾ ಇದೆ.. ಪ್ರೀತಿ ನಿನ್ನ ಪ್ರೀತಿಸೋಕೆ ಹೇಳ್ತಾ ಇದೆ, ತನ್ನನ್ನು ಪ್ರೀತಿಸದವನು ಇನ್ಯಾರನ್ನು ಪ್ರೀತಿಸಲಾರನಂತೆ .. ನನ್ನನ್ನು ನಾನು ಸವಿಯುತ್ತಿಲ್ಲ ಬರಿ ಸಹಿಸಿಕೊಳ್ಳುತ್ತಿದ್ದೇನೆ.. ಇನ್ನು ಎಷ್ಟು ದಿನ.. ಮತ್ತೆ ಇದಲ್ಲ ನಾ ಹೇಳಬೇಕೆಂದಿರುವುದು !! ಎಂದೋ ಮಾಡಿದ ಆಣೆ, ಕೊನೆವರಗೂ ನಿನ್ ಜೊತೇನೆ ಇರ್ತೀನಿ ಅಂತ ಕೊಟ್ಟ ಭಾಷೆ , ಯಾರಿಗೂ ಹೇಳಬೇಡ ಅಂತ ಹೇಳಿದ ಗುಟ್ಟುಗಳು, ತಬ್ಬಿ ಜೋರಾಗಿ ಅತ್ತಿದ್ದು, ಮತ್ತೆ ಎಲ್ಲ ಕೊಡವಿಕೊಂಡು ನಿನ್ನೊಂದಿಗೆ ಹುಲ್ಲು ಹಾಸಿನ ಮೇಲೆ ಕೂತು ಹಳೆಯದೆಲ್ಲವನ್ನು ಮೆಲಕು ಹಾಕಿದ್ದು ... ಯಾವುದೇ ಅಬ್ಬರವಿಲ್ಲದೆ, ಹಾರಾಟ ಕುಗಾಟವಿಲ್ಲದ ಈ ನೆನಪುಗಳ ಜಾತ್ರೆ ನಿರಂತರ ಅಲ್ವಾ ...? ಮತ್ತೆ ಅದೇ ಅವಡುಗಚ್ಚುವ ಮೌನ !!


ಕೊನೆಗೂ ನಿನಗೆ ಬರಿಬೇಕಾಗಿದ್ದನ್ನು ಬರೆಯಲಾಗಲಿಲ್ಲ .. ಹೋಗಲಿ ಬಿಡು, ನೀನ್ ಹೇಗಿದ್ರು ಬರ್ತಿಯಾಲ್ಲ .. ಬಂದಾಗ ಹೇಳ್ತೀನಿ .. ನಿನಗಾಗಿ ನೀನ್ ಇಷ್ಟ ಪಡೂ ಹಾಡುಗಳ ಕೆಸೆಟ್ ಇಟ್ಕೊಕೊಂಡಿದ್ದಿನಿ ..ನಿನಗೋಸ್ಕರ ಎರಡು ಚೆಂದದ ಕವಿತೆ ಬರ್ದಿದ್ದೀನಿ... ಮತ್ತೆ ನಿನ್ನೊಂದಿಗೆ ಅದೇ ಹಳೆಯ ಮೆಲಕು ಹಾಕಲು ಕಾದಿದ್ದಿನಿ , ನನಿಗೆ ಗೊತ್ತು ನೀನ್ ಬಂದೆ ಬರ್ತಿಯಾ ಅಂತ .. ಆ ನಂಬಿಕೆ ನನಗೆ ಇದೆ , ಯಾಕೆಂದ್ರೆ ನಂಬಿಕೆ ಅಂದ್ರೇನೆ ನೀನ್ ಅಲ್ವಾ ...!!
ಸಂತೋಷ್ ಸಿ.ರಾವ್

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ಸಾಂಗತ್ಯ ಸಿನಿಮಾಸಕ್ತರ ಬಳಗ. ಒಂದಷ್ಟು ಮಂದಿ ಹೀಗೇ ಕೂಡಿಕೊಂಡು ಕಟ್ಟಿಕೊಂಡದ್ದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇದರ ಕಚೇರಿ. ವರ್ಷಕ್ಕೆರಡು ಚಿತ್ರ ಶಿಬಿರ, ಕಾರ್ಯಾಗಾರಗಳನ್ನು ಎರಡು ವರ್ಷದಿಂದ ಹಮ್ಮಿಕೊಳ್ಳುತ್ತಿದೆ. ಈಗ ಸಾಂಗತ್ಯ ಮ್ಯಾಗಜೈನ್ ಶುರು ಮಾಡಿದೆ.
ಸಾಂಗತ್ಯ ಮ್ಯಾಗಜೈನ್ ಸಿನಿಮಾ ಬಗ್ಗೆ ಆಪ್ತ ಸಂವಾದ ಕಲ್ಪಿಸುವಂಥದ್ದು. ಸಿನಿಮಾದ ಭಾಷೆ, ವ್ಯಾಕರಣದಂಥ ತಾಂತ್ರಿಕ ವಿಷಯಗಳಿಂದ ಹಿಡಿದು, ವಿಶ್ಲೇಷಣೆ, ಸಂವಾದ, ಚರ್ಚೆ ಎಲ್ಲವನ್ನೂ ಈ ಪತ್ರಿಕೆ ಒಳಗೊಳ್ಳಲಿದೆ. ಒಂದು ನೆಲೆಯಲ್ಲಿ ಹೇಳುವುದಾದರೆ ಸಾಹಿತ್ಯ ಕ್ಷೇತ್ರದಲ್ಲಿ ಇರುವ ಗಂಭೀರ ಸಂವಾದದ ಪತ್ರಿಕೆಗಳಂತೆ (ಸಂಚಯ, ದೇಶಕಾಲ ಇತ್ಯಾದಿ).



ಕನ್ನಡದಲ್ಲಿ ಮೊದಲ ಬಾರಿಗೆ ಇಂಥ ಪ್ರಯತ್ನ ನಡೆಯುತ್ತಿರುವುದು. ಈ ಹಿಂದೆ ೯೦ ರ ದಶಕದಲ್ಲಿ ಡಾ. ವಿಜಯಾ ಅವರ ಸಂಪಾದಕತ್ವದಲ್ಲಿ "ಸಂಕುಲ" ಎಂಬ ಮ್ಯಾಗಜೈನ್ ಆರಂಭವಾಗಿತ್ತು. ಅದು ಸೃಜನಶೀಲ ಕಲೆಗಳ ಕುರಿತು ಇಂಥದೊಂದು ಪ್ರಯತ್ನ ನಡೆಸಿತ್ತು. ಸಾಂಗತ್ಯ ಸಿನಿಮಾಕ್ಕೇ ಮೀಸಲಾದದ್ದು. ಈ ಮೂಲಕ ಆಸಕ್ತರಿಗೆ ಸಿನಿಮಾ ಮಾಧ್ಯಮ ಮತ್ತು ಅದರ ಭಾಷೆ ಕುರಿತು ಒಂದಿಷ್ಟು ಮಾಹಿತಿ ನೀಡುವುದು ಸಾಂಗತ್ಯ ಬಳಗದ ಆಶಯ.


ಮೊದಲ ಸಂಚಿಕೆಯಲ್ಲಿ ಏನೇನಿದೆ ?
ನಮ್ಮ ಪ್ರಥಮ ಸಂಚಿಕೆಯಲ್ಲಿ ಬಹಳ ವಿಶಿಷ್ಟವಾದ ೨೦ ಕ್ಕೂ ಹೆಚ್ಚು ಲೇಖನಗಳಿವೆ. ಒಟ್ಟು ಪುಟಗಳು ೧೧೨, ಖ್ಯಾತನಾಮರಿಂದ ಹಿಡಿದು ಹೊಸಬರೂ ಇದರಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇಡೀ ಸಿನಿಮಾ ಅಲೆಯ ಕುರಿತಾದ ವಿಶ್ಲೇಷಣೆಯಿಂದ ಹಿಡಿದು, ಬಾಲಿವುಡ್ ನ ಪ್ರಯೋಗಗಳ ಕುರಿತೂ ಚರ್ಚೆ ನಡೆದಿದೆ.


"ಸಿನಿಮಾ ಸಂಸ್ಕಾರ", "ರನ್ ಲೋಲಾ ರನ್" ಕುರಿತ ಲೇಖನ, ಅಕಿರಾ ಕುರಸೋವಾನ ನೆನಪು, ಮುಖ್ಯವಾಹಿನಿ ಚಿತ್ರಗಳಲ್ಲಿನ ಸೌಂದರ್ಯ ಮೀಮಾಂಸೆಯ ಕುರಿತ ನೋಟ, ಚಿತ್ರ ಅನಿಸಿಕೆ, ನಾಯಕಿಯೊಬ್ಬಳು ಬರೆದ ಪದ್ಯಗಳು, ಸಿನಿಮಾದೊಳಗಿನ ಭಾವತೀರಯಾನ...ಇನ್ನೂ ಹತ್ತು ಹಲವು ಲೇಖನಗಳು.


ಬಿಡುಗಡೆ ಎಂದು ?
ಏಪ್ರಿಲ್ ೨೪ ರಂದು ಸಂಜೆ ೫ ಕ್ಕೆ ಬಾದಾಮಿ ಹೌಸ್ (ಬೆಂಗಳೂರು ಮಹಾನಗರ ಪಾಲಿಕೆ ಎದುರು) ಬಿಡುಗಡೆಗೊಳ್ಳಲಿದೆ. ಗಿರೀಶ್ ಕಾಸರವಳ್ಳಿಯವರು ಬಿಡುಗಡೆಗೊಳಿಸುವರು. ಚಿತ್ರ ನಿರ್ದೇಶಕ ಗುರುಪ್ರಸಾದ್, ಟಿ.ಎಸ್. ನಾಗಾಭರಣ, ಡಾ. ವಿಜಯಾ ಪಾಲ್ಗೊಳ್ಳುವರು.

ಮುಂದೆ ಓದಿ
10:08 PM

ವಂಡರ್ ಕಣ್ಣು

Posted by ekanasu

ಕ್ಲಿಕ್...



ಪೃಥ್ವಿನ್,ಪ್ರಥಮ ಬಿ.ಎ.(ಪತ್ರಿಕೋದ್ಯಮ)
ಆಳ್ವಾಸ್ ಕಾಲೇಜು, ಮೂಡಬಿದಿರೆ.

ಮುಂದೆ ಓದಿ
9:22 PM

ಕಣ್ಮರೆ

Posted by ekanasu

ವಿಶೇಷ ವರದಿ


ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು... ಗಿಳಲಗುಂಡಿಯ ಶಂಕರಪ್ಪನನವರ ಮನೆ ಇನ್ನೊಂದು. ನಾನು ಇಬ್ಬರ ಮನಗೂ ಹೋಗಿ ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನು ಆರಿಸಿಕೊಂಡೆ... ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ . ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು - ಧಾರಾವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬಾ ಹಿಡಿಸಿತ್ತು...!!!





2008ರಲ್ಲಿ ಎಚ್.ಗಿರೀಶ್ ರಾವ್ ಅವರ `ರಾಯಭಾಗದ ರಹಸ್ಯ ರಾತ್ರಿ'(ಜೋಗಿ ಕಥೆಗಳು) ಪುಸ್ತಕ ಪ್ರಥಮ ಮುದ್ರಣವಾದಾಗ ತಂಗಿ ಧೀಷ್ಮಾ ಕೈಗಿತ್ತು ಓದು ಚೆನ್ನಾಗಿದೆ ಅಂದಿದ್ದಳು. ಆ ಇಡೀ ಪುಸ್ತಕದ ಪೈಕಿ ನನಗೆ ಬಹಳ ಕಾಡಿದ್ದು `ಕಣ್ಮರೆ' ಯಾಕೋ ಏನೋ... ಆ ಕಥೆಯಲ್ಲಿ ಬರುವ `ಚಂದ್ರಮಾವಿನ ಕೊಪ್ಪಲು' ಎಂಬ ಸಣ್ಣ ಹಳ್ಳಿ... ಮಿಲಿಟರಿ ನಿವೃತ್ತ ಅಧಿಕಾರಿ, ರಾಜಶೇಖರ ಮೂರ್ತಿ, ಸಾಗರ, ಸರೋಜಿನಿ...ಸಂಜೆಯ ಭೀಕರ ಮಳೆ... ಸಾವು..ಕೊಲೆ... ಅಮೂರ್ತವಾಗಿರುವ ದೆವ್ವ, ಭೂತಗಳ ಚಿತ್ರಣ...ಇದೆಲ್ಲ ನನ್ನ ಮನದಲ್ಲಿ ಮತ್ತೆ ಮತ್ತೆ ಕಾಡುತ್ತಿತ್ತು... ಕಥೆಯ ಕೊನೆಯಲ್ಲಿರುವ ಸಾಲುಗಳಂತೆ...`` ಆದರೆ ಮಗು ಸಿಗೋಲ್ಲ... ಅನ್ನುವುದು ನನಗೆ ಗೊತ್ತಿತ್ತು. ಅದನ್ನು ಅವರಿಗೆ ವಿವರಿಸಿ ಹೇಳುವ ಹಾದಿ ಗೊತ್ತಿರಲಿಲ್ಲ... ಮಗು ಸಿಗೋಲ್ಲ... ಯಾಕೆಂದರೆ .... ವಿವರಿಸುವ ಶಕ್ತಿ ನನಗಿಲ್ಲ...'' ಎಂಬಂತೆ...!!!


ಜೈನಕಾಶಿ ಮೂಡಬಿದಿರೆಯ ಫಿರ್ಕಾಕ್ಕೆ ಬರುವ ಹೊಸಂಗಡಿ - ಮಾರೂರು ಒಂದು ಪುಟ್ಟ ಹಳ್ಳಿ. ಅಲ್ಲೊಂದು ಮನೆಯಿದೆ. ಹೌದು ಒಂದೊಮ್ಮೆ `ಅರಮನೆ'ಯಾಗಿ ಮೆರೆದಿತ್ತು. ಈಗ ಆ ರಾಜವಂಶಸ್ಥರು ಅಲ್ಲಿದ್ದಾರೆ. ಅರಮನೆಯೂ ಇದೆ...ಆ ಬೃಹದಾಕಾರದ ಹಳೆಯ ಅರಮನೆಯೇ ಈ `ಕಣ್ಮರೆ' ಕಥೆಗೊಂದು `ಲೊಕೇಷನ್'...

`ಜೋಗಿ' ಎಂದೇ ಖ್ಯಾತರಾದ ಎಚ್.ಗಿರೀಶ್ ರಾವ್ ಇದೀಗ `ಕಣ್ಮರೆ'ಯನ್ನು ಕಿರುತೆರೆಗೆ ತರಲಿದ್ದಾರೆ. ಅದಕ್ಕಾಗಿ ಚಿತ್ರೀಕರಣ ಕಳೆದೆರಡು ದಿನಗಳಿಂದ ಸಾಗುತ್ತಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಈ ಚಿತ್ರೀಕರಣದಲ್ಲಿ ಪಾಲುಪಡೆದುಕೊಂಡಿದ್ದಾರೆ. ಪ್ರತೀ ಹಂತವನ್ನೂ ಅತ್ಯಂತ ಕಾಳಜಿ, ಸೂಕ್ಷ್ಮವಾಗಿ ಚಿತ್ರೀಕರಿಸುತ್ತಿದ್ದಾರೆ ಸತ್ಯಬೋಧ ಜೋಶಿ. ಜೋಗಿ , ಅನಿಲ್ ಭಾರಧ್ವಾಜ್ ನಿರ್ದೇಶನದಲ್ಲಿದ್ದಾರೆ.









ಅಂದಹಾಗೆ `ಸುವರ್ಣ 24x7 ' ವಾಹಿನಿಯಲ್ಲಿ ಇದು ಮೂಡಿಬರಲಿದೆ. ನೆರಳು ಬೆಳಕುಗಳ ಸಂಯೋಜನೆ ಚಿತ್ರೀಕರಣದ ಸಂದರ್ಭದಲ್ಲೇ ಸ್ವಷ್ಟವಾಗಿ ಕಾಣುತ್ತಿದೆ.




- ನಾಡೋಡಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ರಾಜ್ಯದ 176 ತಾಲ್ಲೂಕುಗಳ ಪೈಕಿ 136 ತಾಲ್ಲೂಕುಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ 160 ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 40 ತಾಲ್ಲೂಕುಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಹೆಚ್ಚುವರಿ ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಲು ಸರಕಾರ ಮಂಜೂರಾತಿ ನೀಡಿದೆ ಎಂದು ಗೃಹ ಸಚಿವ ಡಾ ವಿ. ಎಸ್. ಆಚಾರ್ಯ ಅವರು ತಿಳಿಸಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಸೇವೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಿ ಮಾತನಾಡಿದರು.




ಅಗ್ನಿಶಾಮಕ ದಳಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಪ್ರತಿವರ್ಷ 35 ಕೋಟಿ ರೂ ಹೆಚ್ಚಿನ ಅನುದಾನವನ್ನು ಇಲಾಖೆಗೆ ನೀಡುತ್ತಿದ್ದು, 2009-10 ನೇ ಸಾಲಿನಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿಗೆ ವಿಶೇಷವಾಗಿ 10 ಕೋಟಿ ರೂ. ಅನುದಾನವನ್ನು ಬಿಡುಗಡೆಮಾಡಲಾಗಿದೆ. ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶದಿಂದ ಕಲ್ಯಾಣ ನಿಧಿಗೆ 25 ಲಕ್ಷ ರೂ ನೀಡುವ ಪ್ರಸ್ತಾವನೆ ಹಾಗೂ ಗೃಹರಕ್ಷಕರಿಗೆ ಗೌರವ ಧನ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತ, ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತ, ಬಳ್ಳಾರಿಯ ಬಹುಮಹಡಿ ಕುಸಿತ ಈ ಸಂದರ್ಭಗಳಲ್ಲಿ ಗೃಹ ರಕ್ಷಕ ಹಾಗೂ ಅಗ್ನಿಶಾಮಕ ದಳಗಳು ಸಲ್ಲಿಸಿದ ಶ್ಲಾಘನೀಯ ಸೇವೆಯನ್ನು ಅವರು ಪ್ರಶಂಶಿಸಿದರು.
ಇಲಾಖೆ ಏಪ್ರಿಲ್ 14 ರಿಂದ 20 ರವರೆಗೆ ನಡೆಸಿದ ಅಗ್ನಿಶಾಮಕ ಸೇವಾ ಸಪ್ತಾಹದಲ್ಲಿ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅಗ್ನಿ ಸುರಕ್ಷತೆ ಬಗ್ಗೆ ಸರಳ ಭಾಷೆಯಲ್ಲಿ ಮಾರ್ಗದರ್ಶನ ನೀಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಸುನೀಲ್ ಕುಮಾರ್, ಡಿ.ಜಿ.ಪಿ. ಜೀಜಾ ಮಾಧವನ್ ಹರಿಸಿಂಗ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.




ಬಾಂಬ್ ಸ್ಪೋಟದ ನಂತರವೂ ಕ್ರಿಕೆಟ್ ಪಂದ್ಯವನ್ನು ನಡೆಸಲು ಅವಕಾಶ ನೀಡಿದ್ದೇಕೆ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಇದೊಂದು ಒಳ್ಳೆಯ ನಿರ್ಧಾರ . ಭಯದ ವಾತಾವರಣ ಸೃಷ್ಟಿಸಿದ್ದಲ್ಲಿ ಗೇಟುಗಳಲ್ಲಿ ಪ್ರೇಕ್ಷಕರು ತುಳಿತಕ್ಕೆ ಒಳಗಾಗುತ್ತಿದ್ದರು. ಪಂದ್ಯಗಳನ್ನು ನವಿ ಮುಂಬಯಿಗೆ ಸ್ಥಳಾಂತರಿಸಿದ ಕಾರಣ ಭದ್ರತೆ ದೃಷ್ಟಿಯಿಂದಲ್ಲ, ಇದಕ್ಕೆ ಬೇರೆ ಕಾರಣಗಳಿರಬೇಕು. ಆ ಕಾರಣಗಳು ಯಾವುದೆಂಬುದನ್ನು ಐಪಿಎಲ್ ಪದಾಧಿಕಾರಿಗಳನ್ನೇ ಕೇಳಬೇಕೆಂದರು.ಬಾಂಬ್ ಸ್ಪೋಟದ ಪ್ರಕರಣಕ್ಕೆ ಬಾಜಿದಾರರ ಕೈವಾಡವೂ ಇರಬಹುದು. ಆ ಕೋನದಿಂದಲೂ ತನಿಖೆ ನಡೆಯುತ್ತಿದೆ ಎಂದರು.


ಅಗ್ನಿ ದುರಂತಗಳು ಸಂಭವಿಸುವುದನ್ನು ತಪ್ಪಿಸಲು ಕೆ.ಇ.ಬಿ. ಅಗ್ನಿಶಾಮಕ ದಳ, ಪೌರಾಡಳಿತ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೊಳಗಂಡ ತಂಡವೊಂದನ್ನು ರಚಿಸಿ, ಕಾಲ ಕಾಲಕ್ಕೆ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತಗಳ ಮುನ್ನೆಚ್ಚರಿಕೆ ವ್ಯವಸ್ಥೆ ಇರುವ ಬಗ್ಗೆ ತಪಾಸಣೆ ನಡೆಸಲಾಗುವುದೆಂದರು.

ಮುಂದೆ ಓದಿ

ವೈವಿಧ್ಯ
ನಾನು, ಆಗ್ನೇಯ ಏಷ್ಯಾದ ಪ್ರಮುಖ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗದ ಅಕಾರಿ.
ನಮ್ಮ ಬ್ಯಾಂಕ್ ಜಾಗತಿಕ ಮಟ್ಟದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದು. ನಿಮ್ಮನ್ನು
ಸಂದರ್ಶಿಸಲು ನಮಗೆ ಸಂತಸವಾಗುತ್ತಿದೆ. ನಿಮಗೆ ವಾರ್ಷಿಕ ೧.೬೦ ಕೋಟಿ ರೂ. ಸಂಬಳ
ನೀಡುತ್ತೇವೆ. ನಮ್ಮ ಕಂಪನಿಗೆ ಸೇರಲು ಬಯಸುತ್ತೀರಾ?"
ಕೆಲಸಕ್ಕಾಗಿ ಪದವಿ ಪತ್ರ ಹಿಡಿದು, ಬೀದಿ ಬೀದಿ ಅಲೆದು, ಕೆಲಸ ಸಿಕ್ಕಿದ್ದೇ ಪುಣ್ಯ
ಎಂದು ಕೊಟ್ಟ ಸಂಬಳಕ್ಕೆ ತೃಪ್ತಿ ಪಟ್ಟುಕೊಳ್ಳುವ ಇಂದಿನ ದಿನಗಳಲ್ಲಿ ಕೊನೆಯ ವರ್ಷದ
ಪದವಿ ತರಗತಿಯಲ್ಲಿ ಓದುತ್ತಿರುವಾಗಲೇ ಜಾಗತಿಕ ಮಟ್ಟದ ಪ್ರತಿಷ್ಠಿತ ಬ್ಯಾಂಕೊಂದು
ವಿದ್ಯಾರ್ಥಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳದ ಆಹ್ವಾನ ನೀಡುತ್ತದೆ ಎಂದಾದರೆ
ನಿಮಗೆ ಆಶ್ಚರ್ಯವಾಗಬಹುದಲ್ಲವೇ?.



ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ.
ಈ ವರ್ಷ ಐಐಎಂ-ಸಿ, ಅಂದರೆ ಕೋಲ್ಕತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್
ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗೆ ಆಗ್ನೇಯ ಏಷ್ಯಾದ ಜಾಗತಿಕ ಬ್ಯಾಂಕ್ ನೀಡಿದ
ಆರಂಭಿಕ ವೇತನ ವಾರ್ಷಿಕ ೧.೬೦ ಕೋಟಿ ರೂ. ಇದೇ ಶಿಕ್ಷಣ ಸಂಸ್ಥೆಯ ಇನ್ನಿಬ್ಬರಿಗೆ
ಬಹುರಾಷ್ಟ್ರೀಯ ಕಂಪನಿಗಳಿಂದ ೧ ಕೋಟಿ ರೂ.ಗೆ ಅಕ ವಾರ್ಷಿಕ ವೇತನದ ಆಹ್ವಾನ
ನೀಡಲಾಯಿತು.



ಹಾಗೆ ನೋಡಿದರೆ ಐಐಎಂಗಳಲ್ಲಿ ಓದಿದವರಿಗೆ ಅತಿ ಹೆಚ್ಚು ಸಂಬಳ ಸಿಗುವುದರಲ್ಲಿ
ವಿಶೇಷವೇನಿಲ್ಲ. ಅದು ಮಾಮೂಲಿಯೇ. ಈ ಸಲದ ಕ್ಯಾಂಪಸ್ ಸಂದರ್ಶನದಲ್ಲಿ
ಐಐಎಂ-ಅಹಮದಾಬಾದ್‌ನ ವಿದ್ಯಾರ್ಥಿಗೆ ವಾರ್ಷಿಕ ೧.೪೪ ಕೋಟಿ. ರೂ., ಐಐಎಂ-ಬೆಂಗಳೂರಿನ
ವಿದ್ಯಾರ್ಥಿಗೆ ವಾರ್ಷಿಕ ೧.೧೪ ಕೋಟಿ ರೂ.ಗಳ ಆರಂಭಿಕ ವೇತನದ ಆಹ್ವಾನ ಬಂತು.
ಐಐಎಂ-ಕೋಲ್ಕತಾದ ೯೧ ಮಂದಿ, ಐಐಎಂ-ಬೆಂಗಳೂರಿನ ೬೪ ಮಂದಿ, ಐಐಎಂ-ಅಹಮದಾಬಾದ್‌ನ ೫೦
ವಿದ್ಯಾರ್ಥಿಗಳು ಸಂದರ್ಶನದ ದಿನ, ಸ್ಥಳದಲ್ಲೇ ನೌಕರಿ ಪಡೆದರು. ಇವರೆಲ್ಲರಿಗೂ
ಕೈತುಂಬಾ ಸಂಬಳ.
ಇತರೆಡೆ ಕೆಲಸ ಬೇಕೆಂದು ಅಭ್ಯರ್ಥಿಗಳು ಕಂಪನಿಗಳ ಮುಂದೆ ಸಾಲುಗಟ್ಟಿ ನಿಂತರೆ, ಇಲ್ಲಿ
ಉದ್ಯೋಗ ನೀಡಲು ಪ್ರತಿಷ್ಠಿತ ಕಂಪನಿಗಳೇ ವಿದ್ಯಾರ್ಥಿಗಳ ಮುಂದೆ ಸಾಲುಗಟ್ಟಿ
ನಿಲ್ಲುತ್ತವೆ. ಇಲ್ಲಿ ಶಿಕ್ಷಣ ಸಂಸ್ಥೆಯೇ ಕಂಪನಿಗಳಿಗೆ ಆಯ್ಕೆಗೆ ಸಂಬಂಸಿದ ರ್‍ಯಾಂಕ್
ಪ್ರಕಟಿಸುತ್ತದೆ. ಇಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಕೆಲಸ ನೀಡುವುದು, ಹೆಚ್ಚು ಸಂಬಳ
ನೀಡುವುದು ಈ ಕಂಪನಿಗಳಿಗೆ ಪ್ರತಿಷ್ಠೆಯ ವಿಷಯ.
ಐಐಎಂಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದು ದೇಶದ ಬಹುತೇಕ ಬುದ್ಧಿವಂತ
ವಿದ್ಯಾರ್ಥಿಗಳ ಕನಸು. ದೇಶದಲ್ಲಿ ಬಿಸಿನೆಸ್ ವಿಷಯಗಳಿಗೆ ಸಂಬಂಸಿದಂತೆ ಪದವಿ
ನೀಡುವಲ್ಲಿನ ಮುಂಚೂಣಿ ಶಿಕ್ಷಣ ಸಂಸ್ಥೆಗಳಿವು. ಇಲ್ಲಿನ ಬೋಧನಾ ವಿಧಾನ, ಪ್ರಾಯೋಗಿಕ
ಅವಕಾಶ, ಮೂಲಭೂತ ಸೌಲಭ್ಯ, ಬೋಧನಾ ವರ್ಗ...ಇವೆಲ್ಲಕ್ಕಿಂತ ಹೆಚ್ಚಾಗಿ ಅಪರಿಮಿತ
ಉದ್ಯೋಗದ ಅವಕಾಶ, ಜತೆಗೆ ಆಕರ್ಷಕ ವೇತನಗಳು ಈ ಸಂಸ್ಥೆಗಳನ್ನು ಜಾಗತಿಕ ಮಟ್ಟದ
ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನಾಗಿಸಿವೆ.
ದೇಶದ ಹಲವು ಪ್ರತಿಷ್ಠಿತ ನಿಯತಕಾಲಿಕಗಳು, ಖ್ಯಾತ ಪತ್ರಿಕೆಗಳು, ನಿಯತಕಾಲಿಕಗಳು
ಪ್ರತಿವರ್ಷವೂ ಬಿಸಿನೆಸ್ ವ್ಯವಹಾರ ವಿಷಯದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳ ಕುರಿತು
ಸಮೀಕ್ಷೆ ಪ್ರಕಟಿಸುತ್ತವೆ. ಸಮೀಕ್ಷೆಯ ಆಧಾರದ ಮೇಲೆ ರ್‍ಯಾಂಕಿಂಗ್ ಪಟ್ಟಿ
ಪ್ರಕಟಿಸುತ್ತವೆ. ಮೂಲಭೂತ ಸೌಕರ್ಯ, ಬೋಧನಾ ವಿಧಾನ, ಉದ್ಯೋಗಾವಕಾಶ ಸೇರಿದಂತೆ ಪ್ರಮುಖ
ಅಂಶಗಳನ್ನು ಪ್ರಮಾಣವನ್ನಾಗಿ ಇಟ್ಟುಕೊಳ್ಳುತ್ತವೆ.
೨೦೦೯-೧೦ರ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಅತಿ ಹೆಚ್ಚು ಸಂಬಳಕ್ಕೆ
ಆಹ್ವಾನ ಪಡೆದ ದೇಶದ ಅತ್ಯುನ್ನತ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜುಗಳು.
(ವಿದ್ಯಾರ್ಥಿಗಳಿಗೆ ನೀಡಲಾದ ವಾರ್ಷಿಕ ಸರಾಸರಿ ಸಂಬಳ, ಕೋಟಿ ರೂ.ಗಳಲ್ಲಿ).
ಸ್ಥಾನ ಕಾಲೇಜು ಸ್ಥಳ ಸರಾಸರಿ ಸಂಬಳ
೧. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ ೧೧.೨೦
೨. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ೧೦.೭೮
೩. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಹೈದರಾಬಾದ್ ೧೦.೫೬
೪. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೋಲ್ಕತಾ ೯.೮೫
೫. ಕ್ಸೆವಿಯರ್ ಲೇಬರ್ ರಿಲೆಷನ್ಸ್ ಇನ್‌ಸ್ಟಿಟ್ಯೂಟ್-ಜಮ್‌ಶೆಡ್‌ಪುರ ೯.೪೪
೬. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಲಖನೌ ೯.೧೫
೭. ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್-ಗಾರ್ಗಿಯಾನ್ ೮.೮೦
೮. ಜಮನ್‌ಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್-ಮುಂಬಯಿ ೮.೩೫
೯. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಕೋಝಿಕೋಡ್ ೮.೨೫
೧೦. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಇಂದೋರ್ ೮.೧೫
೧೧. ಕ್ಸೆವಿಯರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಭುವನೇಶ್ವರ ೮.೧೦
೧೨. ಎಸ್.ಪಿ. ಜೈನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ರಿಸರ್ಚ್-ಮುಂಬಯಿ ೭.೯೫
೧೩. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಇಂಜಿನಿಯರಿಂಗ್ -ಮುಂಬಯಿ ೭.೬೮
೧೪. ಪ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ -ಹೊಸದಿಲ್ಲಿ ೭.೬೦
೧೫. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆನ್ ಟ್ರೇಡ್ -ಹೊಸದಿಲ್ಲಿ ೬.೯೦
೧೬. ಶೈಲೇಷ್ ಜೆ. ಮೆಹ್ತಾ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಐಐಟಿ ಮುಂಬಯಿ ೬.೮೩
೧೭. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ಹೊಸದಿಲ್ಲಿ ೬.೮೦
೧೮. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ಮಡ್ರಾಸ್-ಚೆನ್ನೈ ೬.೭೭
೧೯. ಸಿಂಬಿಯಾಸಿಸ್ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಆಂಡ್ ಹ್ಯೂಮನ್ ರಿಸೋರ್ಸ್
ಡೆವಲಪ್‌ಮೆಂಟ್ - ಪುಣೆ ೬.೪೫
೨೦. ನರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್-ಮುಂಬಯಿ ೫.೯೨
೨೧. ಡಿಪಾರ್ಟ್‌ಮೆಂಟ್ ಆಫ್ ಇಂಡಸ್ಟ್ರೀಯಲ್ ಆಂಡ್ ಮ್ಯಾನೇಜ್‌ಮೆಂಟ್ ಇಂಜಿನಿಯರಿಂಗ್,
ಐಐಟಿ ಕಾನ್ಪುರ ೫.೮೦
೨೨. ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ಸ್, ಅಹಮದಾಬಾದ್ ೫.೭೧
೨೩. ಇಂಟರ್‌ನ್ಯಾಷನಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಹೊಸದಿಲ್ಲಿ ೫.೬೧
೨೪. ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಐಐಟಿ ರೂರ್‍ಕಿ ೫.೪೦
೨೫. ಕೆ.ಜೆ. ಸೋಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ -ಮುಂಬಯಿ ೫.೩೫
೨೬. ಇನ್‌ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಆಂಡ್ ರೀಸರ್ಚ್, ಚೆನ್ನೈ ೫.೨೦
೨೭. ಐಸಿಎಫ್‌ಎಐ ಬ್ಯುಸಿನೆಸ್ ಸ್ಕೂಲ್, ಹೈದರಾಬಾದ್ ೫.೧೮
೨೮. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿ, ತಿರುಚನಾಪಳ್ಳಿ ೫.೧೫
೨೯. ಲೊಯೊಲಾ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಚೆನ್ನೈ ೪.೮೮
೩೦. ನಿರ್ಮಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಅಹಮದಾಬಾದ್ ೪.೮೬
೩೧. ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲ ೪.೮೦
೩೨. ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಆನಂದ ೪.೭೮
೩೩. ಭಾರತಿದಸನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ತಿರುಚನಾಪಳ್ಳಿ ೪.೫೪
೩೪. ವೆಲಿಂಗ್‌ಕಾರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮುಂಬಯಿ ೪.೫೦
೩೫. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಟೆಕ್ನಾಲಜಿ, ಘಾಜಿಯಾಬಾದ್ ೪.೪೪
೩೬. ಲಾಲ್ ಬಹಾದ್ದೂರ್ ಶಾಸ್ತ್ರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಹೊಸದಿಲ್ಲಿ ೪.೩೨
೩೭. ಗ್ರೇಟ್ ಲೇಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಚೆನ್ನೈ ೪.೨೨
೩೮. ಅಲಿಯನ್ಸ್ ಬ್ಯುಸಿನೆಸ್ ಅಕಾಡೆಮಿ, ಬೆಂಗಳೂರು ೪.೨೦
೩೯. ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಎಕ್ಸಲೆನ್ಸ್, ಬೆಂಗಳೂರು ೪.೧೮
೪೦. ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಬ್ಯುಸಿನೆಸ್ ಮೀಡಿಯಾ ೪.೧೫

- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಲೇಖನಿ ಇದು ಖಡ್ಗ ಅಲ್ಲ... ಹೌದು ಇದು ಖಡ್ಗ ಅಲ್ಲ ...ಬದಲಾಗಿ ಭಿನ್ನ ವಿಭಿನ್ನ ಸುದ್ದಿಗಳನ್ನು ಪೋಣಿಸಿದ ಸುಂದರ ಮುತ್ತು... ಕೈ ಬರಹದ ಪತ್ರಿಕೆ. ಇದನ್ನು ಹೊರತಂದವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ನವ್ಯಜ್ಯೋತಿ ನೆಲ್ಲಿಜೆ.





ಅದೊಂದು ಸರಳ ಸಮಾರಂಭ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾದ ಪುಟ್ಟ ಕಾರ್ಯಕ್ರಮ. ಹಿರಿಯ ಪತ್ರಕರ್ತ ಗೋವರ್ಧನ ಹೊಸಮನಿ ಕಾರ್ಯಕ್ರಮದ ಅತಿಥಿ. `` ಕೈ ಬರಹದ ಪತ್ರಿಕೆ ಲೇಖನಿ ಬಿಡುಗಡೆಗೊಳಿಸಿದ ಅವರು ಹೇಳಿದ್ದು : ಈ ಪ್ರಯತ್ನ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜು ಮಟ್ಟದಲ್ಲಿ ಆಗಲೇ ಬೇಕಾದ ಅನಿವಾರ್ಯತೆ ಇಂದಿದೆ. ಪ್ರತೀ ತರಗತಿಗಳ ಪ್ರತೀ ವಿದ್ಯಾರ್ಥಿಗಳೂ ಈ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಪ್ರತಿಭೆಗಳ ಅನಾವರಣ ಆಗಲು ಸಾಧ್ಯ'' .



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ : ``ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತ ಪ್ರತಿಭೆಗಳಿವೆ. ಅವುಗಳನ್ನು ಒರೆಗೆ ಹಚ್ಚುವ ಕಾರ್ಯ ಆಗಬೇಕು. ಸ್ವ ಪರಿಶ್ರಮದಿಂದ ವ್ಯಕ್ತಿ ಉತ್ತುಂಗಕ್ಕೇರಲು ಸಾಧ್ಯ '' ಎಂದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೌಲ್ಯ ಜೀವನ್ ಸ್ವಾಗತಿಸಿದರು. ಪತ್ರಿಕೆಯ ಸಂಪಾದಕಿ ನವ್ಯಜ್ಯೋತಿ ನೆಲ್ಲಿಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರೀಶ್ ಕೆ.ಆದೂರು ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಚಂದ್ರ ವಂದಿಸಿದರು.



ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಹಾಗೂ ಸಜೀವ ಬಾಂಬ್ ಪತ್ತೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ತಿಳಿಸಿದ್ದಾರೆ. ಕ್ರೀಡಾಂಗಣದ ಒಳಗೆ ಈ ಸ್ಫೋಟ ಸಂಭವಿಸಿದ್ದಲ್ಲ. ಇದಕ್ಕೆ ಭದ್ರತಾ ಲೋಪ ಕಾರಣವಲ್ಲ. ಮ್ಯಾಚ್ ಮುಗಿದ ನಂತರ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಘಟನೆಯಲ್ಲಿ ಒಟ್ಟು 14ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಪೊಲೀಸರೇ ಈ ಇಡೀ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವರು ಎಂದವರು ಹೇಳಿದ್ದಾರೆ. ಈ ತನಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಶೀಘ್ರ ಅಪರಾಧಿಗಳನ್ನು ಬಂಧಿಸಲಾಗುವುದು ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ 3ನೇ ಬಾಂಬ್ ಪತ್ತೆಯಾಗಿದೆ. ಈ ಸಜೀವ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಯಶಸ್ವಿಯಾಗಿ ನಿಷ್ಕ್ರಿಯ ಗೊಳಿಸಿದೆ. ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ಸರಿಯಾಗಿ 8ಗಂಟೆಗೆ ಬಾಂಬ್ ಸ್ಪೋಟಿಸುವಂತೆ ಟೈಮರ್ ಅಳವಡಿಸಲಾಗಿತ್ತು. ಕ್ರಿಕೆಟ್ ನೋಡಿ ಕ್ರೀಡಾಸಕ್ತರು ವಾಪಾಸಾಗುವ ಸಂದರ್ಭ ಬಾಂಬ್ ಸಿಡಿಸುವುದು ದುಷ್ಕರ್ಮಿಗಳ ಉದ್ದೇಶವಾಗಿತ್ತು. ಆದರೆ ಅದನ್ನು ವಿಫಲಗೊಳಿಸಲಾಗಿದೆ. ಇದೀಗ ಬಾಂಬ್ ನಿಷ್ಕ್ರಿಯ ದಳ, ಭದ್ರತಾ ಸಿಬ್ಬಂದಿಗಳು, 1ಸಾವಿರಕ್ಕೂ ಮಿಕ್ಕಿದ ಪೊಲೀಸರು ಭದ್ರತೆಯ ಕಾರ್ಯ ಕೈಗೊಂಡಿದ್ದಾರೆ. ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಭಯೋತ್ಪಾದನೆಯ ಕರಿನೆರಳು ಕಾಣಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಸಜೀವ ಬಾಂಬ್ ಪತ್ತೆಯಾಗಿದೆ. ಇವೆಲ್ಲವೂ ಟೈಮರ್ ಅಳವಡಿಸಲ್ಪಟ್ಟ ಬಾಂಬ್ ಗಳಾಗಿದ್ದು ಇದೀಗ ಬಾಂಬ್ ನಿಷ್ಕ್ರಿಯ ದಳ ಇವುಗಳನ್ನು ನಿಷ್ಕ್ರಿಯಗೊಳಿಸಿವೆ. ರಾತ್ರಿ 8ಗಂಟೆಗೆ ಈ ಬಾಂಬ್ ಸಿಡಿಯಲಿದ್ದವು. ಒಂದೊಮ್ಮೆ ಬಾಂಬ್ ಸಿಡಿದದ್ದೇ ಆಗಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತಿದ್ದವು. ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಈ ಬಾಂಬ್ ಪತ್ತೆಯಾಗಿದ್ದವು. ಇದೀಗ ಕ್ರೀಡಾಂಗಣದ ಆವರಣದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ಪ್ರಾರಂಭಗೊಂಡಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು:ಭಾರತೀಯ ಸೇನೆಗೆ ಅರ್ಹ ಅಭ್ಯರ್ಥಿಗಳನ್ನು ಆರಿಸುವ ಪ್ರಕ್ರಿಯೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಈ ಸಂಬಂಧ ಅಗತ್ಯ ಪೂರ್ವಭಾವಿ ಸಭೆ ಹಾಗೂ ಸಿದ್ಧತೆಗಳು ಭರದಿಂದ ಸಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಆಯ್ಕೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮಂಗಳಾ ಸ್ಟೇಡಿಯಂನಲ್ಲಿ ಏಪ್ರಿಲ್ 27ರಿಂದ ಮೇ 4ರವರೆಗೆ ನಡೆಯಲಿರುವ ರಿಕ್ರೂಟ್ ಮೆಂಟ್ ರ್ಯಾಲಿಯ ಬಗ್ಗೆ ಅಗತ್ಯ ಮಾಹಿತಿಗಳಿಗೆ ಆಸಕ್ತ ಅಭ್ಯರ್ಥಿಗಳು www.zrobangalore.com or aromangalore@gmai.com ನಲ್ಲಿ ಅಥವಾ ಮಂಗಳೂರಿನ ಕಚೇರಿ ದೂ.ಸಂ. 0824-2458376 ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ 27ರಂದು ಸಿಪಾಯಿ ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯ ಲಿದ್ದು, ನೇಮಕಾತಿಯಲ್ಲಿ ಪಾಲ್ಗೊಳ್ಳು ವರರಿಗೆ ಆಯ್ಕೆ ದಿನಾಂಕಕ್ಕೆ ಹದಿನೇಳೂವರೆಯಿಂದ 21 ವರ್ಷದೊಳಗಿರಬೇಕು. ಅಥವಾ ಏಪ್ರಿಲ್ 28,1989ರಿಂದ 28 ಅಕ್ಟೋಬರ್ 1992ರೊಳಗೆ ಜನಿಸಿರಬೇಕು.




ಏಪ್ರಿಲ್ 28ರಂದು ಸಿಪಾಯಿ ಜನರಲ್ ಡ್ಯೂಟಿಗೆ ಆಯ್ಕೆ ನಡೆ ಯಲಿದ್ದು, ಅಭ್ಯರ್ಥಿಗಳಿಗೆ ಹದಿನೇಳೂ ವರೆಯಿಂದ 21 ವರ್ಷವಾಗಿರಬೇಕು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ದಾವಣಗೆರೆ ಜಿಲ್ಲೆಯ ಅಭ್ಯರ್ಥಿಗಳಿಗೆ ಅವಕಾಶವಿದೆ. 29ರಂದು ಈ ಸಂಬಂಧ ಕರ್ನಲ್ ದೇಶಪಾಂಡೆ ಅವರು ಪತ್ರಿಕೆಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದ್ದು, 29ರಂದು ನಡೆಯುವ ನೇಮಕಾತಿ ರ್ಯಾಲಿಯಲ್ಲಿ ಎಲ್ಲಾ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದ್ದು, ಮಾಜಿ ಸೈನಿಕರ ಮಕ್ಕಳಿಗೆ,ರಾಷ್ಟ್ರ,ರಾಜ್ಯ ಮಟ್ಟದ ಎನ್ ಸಿಸಿ ಕ್ರೀಡಾಪಟುಗಳಿಗೆ ಉತ್ತರ ಕನ್ನಡ,ದಕ್ಷಿಣ ಕನ್ನಡ,ಕೊಡಗು, ಉಡುಪಿ,ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ದಾವಣಗೆರೆಯ ಅಭ್ಯರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅರ್ಹತೆಯನ್ನು, ವಿದ್ಯಾಭ್ಯಾಸವನ್ನು ಹುದ್ದೆಗೆ ಅನುಸಾರವಾಗಿನಿಗದಿ ಪಡಿಸಲಾಗಿದೆ. 30ರಂದು ಸಿಪಾಯಿ ಗುಮಾಸ್ತ, ಎಸ್ ಕೆ ಟಿ ಸಿಪಾಯಿ, ಟೆಕ್ನಿಕಲ್ ಸಿಪಾಯಿ ನರ್ಸಿಂಗ್ ಸಹಾಯಕ ಹುದ್ದೆಗೆ ಸಂದರ್ಶನ ನಡೆಯಲಿದ್ದು, ಆಯ್ಕೆ ದಿನಾಂಕಕ್ಕೆ ವಯೋಮಿತಿ ಹದಿನೇಳೂವರೆಯಿಂದ 23ವರ್ಷ. ಪಿಯುಸಿ ಆಗಿದ್ದು, ಕಲೆ, ವಾಣಿಜ್ಯ, ವಿಜ್ಞಾನ ಯಾವುದೇ ವರ್ಗದಲ್ಲಿ ಸರಾಸರಿ ಕನಿಷ್ಠ 50% ಅಂಕ ಗಳಿಸಿರಬೇಕು. ವಿಜ್ಞಾನ ಪದವೀಧರರಿಗೆ ಆದ್ಯತೆ. ಮೇ 1ರಂದು ಸಿಪಾಯಿ ಟ್ರೇಡ್ ಮ್ನೆ ಹುದ್ದೆಯಡಿ 8ನೇ ತರಗತಿ ಪಾಸಾದ ಅಥವಾ 10ನೇ ತರಗತಿ ಪಾಸಾದ ವಿದ್ಯಾರ್ಹತೆಯುಳ್ಳವರು ಪರೀಕ್ಷೆ ಎದುರಿಸಬಹುದು.
ಅಭ್ಯ ರ್ಥಿಗಳು ತಮ್ಮ ಮೂಲ ಅಂಕಪಟ್ಟಿ, ಪಾಸ್ ಪೋರ್ಟ್ ಸೈಜಿನ 12 ಭಾವಚಿತ್ರ (ಕಪ್ಪು,ಬಿಳುಪು), ವಾಸಸ್ಥಳಕ್ಕೆ ಸಂಬಂಧಿಸಿದಂತೆ ಮೂಲಪ್ರತಿಯಲ್ಲಿ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಸಹಿ ಇರುವ ಸರ್ಟಿಫಿಕೇಟ್ (ಇಂಗ್ಲಿಷ್ ಭಾಷೆ), ನಡತೆ ಪ್ರಮಾಣ ಪತ್ರ, ಹೆತ್ತವರಿಂದ ಅನುಮತಿ ಪಡೆದ ಬಗ್ಗೆ 10ರೂ.ಸ್ಟಾಂಪ್ ಪೇಪರ್ ನಲ್ಲಿ ನೋಟರಿ ಸಹಿಯನ್ನೊಳಗೊಂಡ ಪ್ರಮಾಣ ಪತ್ರ (ಇಂಗ್ಲಿಷ್ ನಲ್ಲಿ). ಎಲ್ಲಾ ಸರ್ಟಿಫಿಕೇಟ್ ಮೂಲಪ್ರತಿಗಳು ಹಾಗೂ 2 ಜೆರಾಕ್ಸ್ ಪ್ರತಿಗಳು ನೇಮಕಾತಿ ರಾಲಿಗೆ ಹಾಜರಾಗುವ ಅಭ್ಯರ್ಥಿ ಗಳಲ್ಲಿರತಕ್ಕದ್ದು. ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು. ದೈಹಿಕ ಪರೀಕ್ಷೆಯಿದ್ದು, 165 ಸೆಂ.ಮೀ ಎತ್ತರ, 50 ಕೆ ಜಿ ತೂಕ ಹೊಂದಿದ್ದು, ಆಯಾಯ ಹುದ್ದೆಗೆ ಎತ್ತರ ಮತ್ತು ತೂಕ ಪ್ರತ್ಯೇಕವಾಗಿರುತ್ತದೆ. ಆಸಕ್ತರು ಸೇನೆಗೆ ಸೇರುವ ಅವಕಾಶವನ್ನು ಬಳಸಿಕೊಳ್ಳಬಹುದು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
``ಖಡ್ಗಕ್ಕಿಂತ ಲೇಖನಿ ಹರಿತ' ಎಂಬ ಮಾತು ಜನಜನಿತ. ಆದರೆ `ಲೇಖನಿ' ಇದು ಖಡ್ಗ ಅಲ್ಲ ಎಂಬ ಶೀರ್ಷಿಕೆಯೊಂದಿಗೆ ಇದೀಗ `ಕೈ ಬರಹದ' ಪತ್ರಿಕೆಯೊಂದು ಹೊರಬರುತ್ತಿದೆ.
ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿನಿ ನವ್ಯಜ್ಯೋತಿ ನೆಲ್ಲಿಜೆ ಇದರ ಸಂಪಾದಕಿ. ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲದಿಂದಿರುವ ಈಕೆ ಇದೀಗ `ಲೇಖನಿ'ಯನ್ನು ಹೊರ ತಂದಿದ್ದಾಳೆ. ಎಂಟು ಪುಟಗಳ ಈ ಲೇಖನಿ ವಿದ್ಯಾರ್ಥಿ ಪ್ರತಿಭೆಗೊಂದು ಉತ್ತಮ ವೇದಿಕೆ. ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವಿದ್ಯಾರ್ಥಿ ಮಟ್ಟದಲ್ಲೇ ಇಂತಹ ಪ್ರಯತ್ನಕ್ಕೆ ಕೈ ಇಕ್ಕಿರುವುದು ಶ್ಲಾಘನಾರ್ಹ. ಈಕೆಗೆ ಈ ಕನಸು ತಂಡದ ಅಭಿನಂದನೆಗಳು. ಅಂದಹಾಗೆ 19ರಂದು ಬೆಳಗ್ಗೆ 10.30ಕ್ಕೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಇದರ ಅನಾವರಣವನ್ನು ಹಿರಿಯ ಪತ್ರಕರ್ತ ಗೋವರ್ಧನ ಹೊಸಮನಿ ನೆರವೇರಿಸಲಿದ್ದಾರೆ.

ಮುಂದೆ ಓದಿ
7:39 PM

ಮುಗಿಯದ ರೀಲು...

Posted by ekanasu

ಅಂಕಣ
ಉಣ್ಣಿ ಸಂಗ್ರಹದ ನೆನಪು
1983ರ ಸುಮಾರಿಗೆ ಬೆಳ್ತಂಗಡಿ ತಾಲೂಕಿನಲ್ಲೊಂದು ವಿಚಿತ್ರ ಕಾಯಿಲೆ. ಅದೇ ಮಂಗನ ಕಾಯಿಲೆ. ಆರಂಭದ ದಿನಗಳಲ್ಲಿ ಕಾಯಿಲೆ ಹರಡುತ್ತಿರುವ ಬಗ್ಗೆ ಗೊತ್ತಿದ್ದರೂ ಇದಕ್ಕೆ ಕಾರಣ ಏನೆಂದು ತಿಳಿಯದೆ ಅನೇಕ ಮಂದಿ ಅಸುನೀಗಿದರು. ಕೆಲವರು ಚೇತರಿಸಿಕೊಂಡರು. ಬದುಕಿರುವವರ ಅನುಭವ ಇಂದಿಗೂ ಮೈ ಜುಮ್ ಎನಿಸುವಂತಿದೆ. ಸುದ್ದಿ ಮಾಧ್ಯಮಗಳಲ್ಲಿ ನಿಗೂಢ ಕಾಯಿಲೆ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಸುದ್ದಿ ಅನೇಕರು ಊರನ್ನೇ ಬಿಟ್ಟುಹೋಗುವಂತೆ ಮಾಡಿತ್ತು. ಕಾಯಿಲೆಯ ತೀವ್ರತೆ ಹೆಚ್ಚಾದಾಗ ರೋಗಿಗಳ ಮೂಗಿನಲ್ಲಿ, ಗುದದ್ವಾರಗಳಲ್ಲಿ ರಕ್ತಸ್ರಾವ, ವಿಪರೀತ ಜ್ವರ, ತಲೆನೋವು, ಭಯ, ಊಹಾಪೋಹಗಳು ಊರವರಿಗೆಲ್ಲ ಚಿಂತೆಯನ್ನುಂಟುಮಾಡಿದ್ದವು.



ಆ ಸಂದರ್ಭದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮಂಗಳೂರು ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಮಂಗನ ಕಾಯಿಲೆ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀನಿವಾಸ್ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾನು ಮಂಗನ ಕಾಯಿಲೆಯನ್ನು ಹರಡಲು ವಾಹಕವಾಗುವ ಉಣ್ಣಿಗಳನ್ನು ಜನರ ಮುಂದೆ ಪ್ರದರ್ಶಿಸಬೇಕೆಂದುಕೊಂಡೆ. ತಕ್ಷಣ ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ವಸಂತ ಅವರ ಜೊತೆ ದೇವಸ್ಥಾನದ ಹಿಂಬದಿ ಗದ್ದೆಯಲ್ಲಿ 2-3 ಕಿಲೋಮೀಟರಿನಷ್ಟು ನಡೆದು ಉಣ್ಣಿಗಳ ಸಂಗ್ರಹ ಮಾಡಿದೆವು.
ಒಂದು ಟವಲನ್ನು ಪೊದೆಯ ಸುತ್ತಲಿನ ತರಗೆಲೆಯ ಮೇಲೆ ಹಾಯಿಸಿ ನೋಡಿದಾಗ ನೂರಾರು ಉಣ್ಣಿಗಳು. ಶ್ರೀನಿವಾಸರ ಪ್ಯಾಂಟ್ ಮೇಲೆ ಅದಕ್ಕಿಂತ ಹೆಚ್ಚು ಉಣ್ಣಿಗಳು! ಟವಲ್ ಬಿಸಾಡಿ ನೆಗೆಯಬೇಕಾದ ಸಂದರ್ಭ. ಆ ಸನ್ನಿವೇಶ ಇಂದು ಸಹ ನನ್ನ ಕಣ್ಮುಂದೆ ಬರುತ್ತಿದೆ. ಆದರೆ ಬಂದ ಕಾರ್ಯ ಮರೆಯದೆ ತಕ್ಷಣ ಉಣ್ಣಿಗಳನ್ನು ಗಾಜಿನ ಬಾಟ್ಲಿಯಲ್ಲಿ ಸಂಗ್ರಹಿಸಿ ಪಟ್ರಮೆ, ನಿಡ್ಲೆ, ಕನ್ನಾಡಿ ಮುಂತಾದ ಕಡೆ ತೋರಿಸುತ್ತಿದ್ದಾಗ ಜನರಿಗೆ ಕುತೂಹಲ. ಸ್ಥಳೀಯ ಭಾಷೆಯಲ್ಲಿ ವಿವರ ನೀಡುತ್ತಿರುವ ಬಗ್ಗೆ ಮೆಚ್ಚುಗೆ. ಇಂತಹ ಹಲವಾರು ಸಂದರ್ಭಗಳಲ್ಲಿ ಶ್ರೀನಿವಾಸ್ ಅವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ಶ್ರೀಗಂಧದಂತಹ ಗುಣ ನಡತೆ, ನಿಷ್ಠೆ, ವಾತ್ಸಲ್ಯಮಯಿ, ಸದ್ಗುಣ ಸಂಪನ್ನ, ಸತ್ಯವಂತ ಶ್ರೀನಿವಾಸರಿಗೆ ನಮನಗಳು.
- ಎಂ. ಸಿದ್ದರಾಜು

ಮುಂದೆ ಓದಿ

ಸಾಹಿತ್ಯ
ವಿಶಿಷ್ಟ ಕಾರ್ಯಕ್ರಮ ಸಂಯೋಜನೆ ಹಾಗೂ ವಿವಿಧ ಸಮಾಜೋತ್ಥಾನದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಂಸ್ಥಾಪನಾ ದಿನೋತ್ಸವದಂಗವಾಗಿ ಉತ್ತರಕನ್ನಡದ ಸಿದ್ದಾಪುರದ ವಡ್ಡಿನಗದ್ದೆಯ ರಂಗಸೌಗಂಧ ಕಲಾತಂಡದಿಂದ 'ಇದು ಕಾರಣ' ನಾಟಕ ಪ್ರದರ್ಶನವು ಕಳೆಕಟ್ಟಿತು. ಇದರ ಕಥಾಹಂದರ ಹೀಗಿದೆ...



ಹಳ್ಳಿಯ ಶ್ರೀಮಂತ ವ್ಯಕ್ತಿಗೆ ಮಕ್ಕಳಿಲ್ಲದೆ ಆತನು ಕೊನೆಯುಸಿರೆಳೆದಾಗ ದಾಯಾದಿಗಳಲ್ಲಿ ಆತನ ಆಸ್ತಿಯ ಕುರಿತು ಆಸೆಮೂಡಿ ತಾವೇ ದಹನಕ್ರಿಯೆಗೆ ಮುಂದಾಗುವ ಹಂಬಲವು ಉಂಟಾಗುದತ್ತದೆ. ಓರ್ವ ದಾಯಾದಿಯು ಮೃತನ ತಮ್ಮನಾಗಿದ್ದು ಮತ್ತೋರ್ವ ಮೃತನ ಅಣ್ಣನ ಮಗನಾಗಿರುತ್ತಾನೆ. ಶ್ರೀಮಂತ ವ್ಯಕ್ತಿಯು ಮೃತನಾಗಿ ಹಲವು ತಾಸುಗಳ ಅನಂತರ ಅತನ ಮನೆಗೆ ಆಗಮಿಸುವ ಈ ದಾಯಾದಿಗಳು ತಮ್ಮ ತಮ್ಮ ಹಕ್ಕುಗಳನ್ನು ಪ್ರತಿನಿಧಿಸತೊಡಗುತ್ತಾರೆ. ಈ ಮಧ್ಯೆ ಊರಿನ ನಾಗರಿಕರು ಶ್ರೀಮಂತ ವ್ಯಕ್ತಿಯ ದಹನಕ್ರಿಯೆಯ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಾಯಾದಿಗಳ ಕಲಹವು ಮುಗಿಲು ಮುಟ್ಟಿ ದಹನ ಕ್ರಿಯೆಗೆ ಯಾರು ಮುಂದಾಗಬೇಕೆಂಬ ತೀರ್ಮಾನವು ದೊರೆಯದೇ ಪರಸ್ಪರರು ಕೈ ಕೈ ಮಿಲಾಯಿಸುವ ಹಂತಕ್ಕೆ ಸಂದರ್ಭವು ಕೂಡಿಬರುತ್ತದೆ. ಊರಿನ ವಿಶಿಷ್ಟ ವ್ಯಕ್ತಿ ಕೆಂಚನು ಈ ಎಲ್ಲ ಘಟನೆಗಳನ್ನು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಯನ್ನು ಮಾಡುತ್ತಲೇ ಸ್ವಗತವನ್ನು ತನ್ನ ಭಾಷೆಯಲ್ಲಿ ಆಡುತ್ತಾ ಗಂಭೀರತೆಗೆ ಸತ್ಯದ ಲೇಪವನ್ನು ಕೊಡಲು ತೊಡಗುತ್ತಾನೆ. ಆತನ ವರ್ತನೆಯು ಅರೆ ಹುಚ್ಚನಂತಿದ್ದರೂ ಸತ್ಯದ ಮತ್ತೊಂದು ಮುಖದ ದರ್ಶನವಾಗಿ ತೋರುತ್ತದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಶ್ರೀಮಂತನ ವಕೀಲರು ಬಂದು ಅತನು ಉಯಿಲಿನಲ್ಲಿ ಆಸ್ತಿಯನ್ನು ಅನಾಥಾಶ್ರಮಕ್ಕೆ ಬರೆದ ವಿಚಾರವನ್ನು ತಿಳಿಸುತ್ತಾರೆ. ಮುಂದೇನಾಗುತ್ತದೆ ಎಂದು ರಂಗಮಂಚದಲ್ಲಿ ಅವಲೋಕಿಸಿ. ದಿ.ಚಿ. ಶ್ರೀನಿವಾಸರಾಜು ಬೆಂಗಳೂರು ಇವರ ಮೂಲನಾಟಕವನ್ನು ಖ್ಯಾತ ನಿರ್ದೇಶಕ ನಾಟಕಕಾರ ದಿ. ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಮೊಮ್ಮಗನಾದ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಇವರು ಹವ್ಯಕ ಭಾಷೆಯಲ್ಲಿ ರೂಪಾಂತರಗೊಳಿ ನಿರ್ದೇಶಿಸಿದ್ದಾರೆ. ಒಂದೂವರೆ ಶತಮಾನಗಳ ಹಿಂದೆ ಹವಿಗನ್ನಡ ಭಾಷೆಯಲ್ಲಿ ರಚಿತವಾದ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನವು ಕನ್ನಡದ ಪ್ರಥಮ ನಾಟಕ ಎಂಬ ಖ್ಯಾತಿಯನ್ನು ಪಡೆದಿದೆ. ಈ ತನಕ ಅದು ಹಲವಾರು ಯಶಸ್ವೀ ಪ್ರದರ್ಶನವನ್ನು ಕಂಡಿದೆ. ಈ ಇದು ಕಾರಣ ನಾಟಕವೂ ಹವಿಗನ್ನಡ ಭಾಷೆಯಲ್ಲಿಯೇ ಇದ್ದು ಈ ಶತಮಾನದ ಅಂತಹ ಮೊದಲನೆಯ ಪ್ರಯತ್ನವೇ ಇದು ಕಾರಣ. ತುಂಬಿಸ ಸಭಾಂಗಣದಲ್ಲಿ ಮಲೆನಾಡ ಪರಿಸರದ ನಾಟಕರಂಗಸ್ಥಳವನ್ನು ರಚಿಸಿಕೊಂಡು, ಅಲ್ಲಿಂದಲೇ ಸಾಂದರ್ಭಿಕ ಪರಿಕರಗಳನ್ನೂ ತಂದು ನೈಜತೆಗೆ ದೃಷ್ಟಾಂವಾದರು. ಎಲ್ಲ ಪಾತ್ರಗಳೂ ಹವಿಗನ್ನಡವನ್ನೇ ಬಳಸುತ್ತಿದ್ದರೂ ಕೆಂಚನೆಂಬ ಮನೆಯಾಳು ಉತ್ತರಕರ್ನಾಟಕದ ಭಾಷೆಯಾಡುತ್ತಿದ್ದ. ಮಧ್ಯ ಮಧ್ಯೆ ಆತನಿಡುತ್ತಿದ್ದ ವಗ್ಗರಣೆ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿತ್ತು. ಊರೆಲ್ಲ ನೆಂಟರು ಹಣದ ಗಂಟೆದ್ದರೆ ಎಂಬ ಗಾದೆಯನ್ನು ಬೋಧಿಸುವ ಗಂಭೀರ ನಾಟಕವಾದರೂ ಅದನ್ನು ಹಾಸ್ಯಲೇಪನದೊಂದಿಗೆ ಹೆಣೆದಿದ್ದು ನಿರ್ದೇಶಕರ ಜಾಣ್ಮೆ. ಸದಭಿರುಚಿಯ ಪ್ರೇಕ್ಷಕರನ್ನು ಕೊನೆತನಕ ಹಿಡಿದಿಡುವಲ್ಲಿ ನಾಟಕೀಯ ತಂತ್ರ ಸಫಲವಾಯಿತು. ಈ ವಿಡಂಬನಾತ್ಮಕ ಪ್ರಹಸನದಲ್ಲಿ .... ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಭಾಜನರಾದ ಶ್ರೀಧರ ಹೆಗಡೆ ಹುಲಿಮನೆ, ಪ್ರಭಾಕರ ಹೆಗಡೆ ಕನ್ನಳ್ಳಿ,ಕೃಷ್ಣಮೂರ್ತಿ ಹೆಗಡೆ ಮಗದೂರು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ಗಣಪತಿ ಹೆಗಡೆ ಗುಂಜಗೋಡು, ಎಮ್.ಕೆ.ಹೆಗಡೆ ಹಳದೋಟ, ಮಾಲಿನಿ ಹೆಗಡೆ ವಾಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ, ಬಾಲನಟರಾದ ಆಶ್ರಿತಾ, ಪಲ್ಲವಿ, ಅಜಿತ್, ಮನೋಜ, ಭಾರ್ಗವ, ಮುಂತಾದವರು ಮನೋಜ್ಞವಾಗಿ ಪಾತ್ರಪೋಷಣೆ ಮಾಡಿದರು.

- ಶ್ರೀಕಾಂತ ಹೆಗಡೆ ಕೈಗಳ್ಮನೆ.

ಮುಂದೆ ಓದಿ
7:20 PM

ವಾಸ್ತವ

Posted by ekanasu

ಸಾಹಿತ್ಯ
ಎರಡು ಕಥೆಗಳು
ದಿನವೂ ಪೀಡುಸುವ ಸೊಸೆ...ಒಗೆಯಲೊಂದಷ್ಟು ಬಟ್ಟೆ ತೊಳೆಯಲೊಂದಷ್ಟು ಪಾತ್ರೆ...ಸೊಂಟ ನೋವಿದ್ದರೂ ನೆಲ ಒರೆಸಬೇಕು... ಹೊತ್ತಿಗೆ ಸರಿಯಾಗಿ ಊಟವಿಲ್ಲ ಕತ್ತೆಚಾಕರಿ ತಪ್ಪಲ್ಲ. ದಿನವಿಡೀ ಕಾಡುವ ಕೆಮ್ಮಿಗೆ ಔಷಧಿ ತರುವವರಿಲ್ಲ. ಕತ್ತಲೆಕೋಣೆಯಲ್ಲಿ ಸೆರಗಿನಿಂದ ಮುಖ ಮುಚ್ಚಿಕೊಂಡು ಬಿಕ್ಕುವ ವೃದ್ಧೆ ನೋಡುಗರ ಕಣ್ಣಲ್ಲಿ ನೀರುಕ್ಕುತ್ತಿತ್ತು. ಎಂಥಹ ಕ್ರೂರಿ ಸೊಸೆ. , ಇಷ್ಟೊಂದು ದುಡಿಸಿಕೊಳ್ಳುತ್ತಾಳಲ್ಲ... ಹೊಟ್ಟೆಗೊಂದಿಷ್ಟು ಅನ್ನ ಹಾಕಬಾರದಾ... ಹೊರಗಿನಿಂದ ಬಂದಾಕೆ ಎಂದಾದರೂ ಅತ್ತೆಯನ್ನು ಅಮ್ಮಾ ಎಂದುಕೊಳ್ಳಲಿಕ್ಕಿದೆಯೇ... ಈ ತರದ ಹಲವಾರು ಅಭಿಪ್ರಾಯ ವಿಶ್ಲೇಷಣೆಗಳು ಆ ಮನೆಯಲ್ಲಿ ನಿತ್ಯವೂ ನಡೆಯುತ್ತಿತ್ತು.



ಟಿ.ವಿಯಲ್ಲಿ ಬರುವ ಆ ಧಾರಾವಾಹಿ ದೃಶ್ಯ ಕಂಡಾಗೆಲ್ಲ ಟಿ.ವಿ.ಮುಂದೆ ಕೂತವರ ಕಣ್ಣಲ್ಲಿ ನಿತ್ಯ ಕಣ್ಣೀರು. ಆ ಸೊಸೆಯ ಪಾತ್ರಧಾರಿಗೊಂದಷ್ಟು ಬೈಗುಳ. ..ಗ್ಲಿಸರಿನ್ ಹಾಕಿ ಅಳುವ ವೃದ್ಧ ಪಾತ್ರಧಾರಿಯ ಕುರಿತೊಂದಷ್ಟು ಅನುಕಂಪ... ಇದು ಆ ಮನೆಯ ನಿತ್ಯದ ಕಥೆ...
ಅಡುಗೆ ಮನೆಯಲ್ಲೇನೋ ಸದ್ದು...ಕೆಮ್ಮಿನ ಜೊತೆಗೆ ಪಾತ್ರೆ ಉರುಳಿದ್ದು .. ಕೂತಲ್ಲಿಂದ ಕದಲದೆ ಟಿ.ವಿ.ನೋಡುತ್ತಿದ್ದ ಸೊಸೆ ಸಿಡಿದು ಬಿದ್ದಳು... ಜಾಗ್ರತೆಯಿಂದ ಪಾತ್ರೆ ತೊಳೆಯಕ್ಕಾಗಲ್ಲವಾ ಕೂಳಿಗೆ ದಂಡ. ''
ಟಿ.ವಿ. ನೋಡುತ್ತಿದ್ದ ಪುಟ್ಟಿಗೆ ಮತ್ತೆ ಟಿ.ವಿ.ನೋಡಬೇಕನಿಸಲಿಲ್ಲ. ಆ ಧಾರವಾಹಿಯ ಮುಂದಿನ ಕಂತು ತನ್ನ ಮನೆಯಲ್ಲಿ ನಡೆಯುತ್ತಿತ್ತು.


ಅಂದು ಬಾಲಕಾರ್ಮಿಕ ದಿನಾಚರಣೆ. ಲೇಡಿಸ್ ಕ್ಲಬ್ ನಲ್ಲಿ ಹಲವಾರು ಕಾರ್ಯಕ್ರಮಗಳ ಆಯೋಜನೆ. ರಾತ್ರಿ ಇಡೀ ಬರೆದು ಉರುಹೊಡೆದ ಭಾಷಣವನ್ನು ವೇದಿಕೆಯಲ್ಲಿ ಬಹಳ ಭಾವುಕರಾಗಿ ಅನವಾರಣ ಗೊಳಿಸಿದರು ಲಲಿತಮ್ಮ. ಬಾಲಕಾರ್ಮಿಕರ ಬದುಕಿನ ಬಗ್ಗೆ , ಅವರ ಕಣ್ಣೀರಿನ ಕಥೆಯ ಬಗ್ಗೆ ಆ ಪುಟ್ಟ ಮಕ್ಕಳ ಕಷ್ಟಕರ ಬಾಲ್ಯದ ಬಗ್ಗೆಹೃದಯ ಹಿಂಡಿದಂತೆ ಮಾತನಾಡಿದಾಗ ಪ್ರೇಕ್ಷಕರ ಕಣ್ಣಲ್ಲಿ ತೊಟ್ಟಿಕ್ಕಿದ ನೀರು. . ಭರ್ಜರಿ ಕರತಾಡನದ ಸದ್ದು. ಕಾರ್ಯಕ್ರಮ ಮುಗಿಯಿತು. ಆಯೋಜಕರು ನೀಡಿದ ಹೂ ಗುಚ್ಛ ಕಾಣಿಕೆಗಳನ್ನು ಕಾರಿನಲ್ಲಿಟ್ಟು ಕಾರಿನಲ್ಲಿ ಸಾಗಿದರು. ಮನೆಯೆಲ್ಲ ಕೊಳಕಾಗಿತ್ತು. ಮನೆಯಲ್ಲಿನ್ನೂ ಕೆಲಸ ಪೂರೈಸದಿದ್ದ ಪುಟ್ಟ ಹುಡುಗಿಯ ಮೇಲೆ ಸಿಟ್ಟು ನೆತ್ತಿಗೇರಿತ್ತು. ಒಲೆಯಲ್ಲಿ ಸಟ್ಟುಗ ಕಾಯುತ್ತಿತ್ತು. ಹುಡುಗಿಯ ಕಂಗಳಲ್ಲಿ ಭಯದ ನೆರಳು...
ಹಿನ್ನೆಲೆಯಲ್ಲಿ ರೇಡಿಯೋ ಹಾಡು... ``ಹೇಳುವುದು ಒಂದು... ಮಾಡುವುದು ಇನ್ನೊಂದು...''

- ಜಯ

ಮುಂದೆ ಓದಿ
6:59 PM

ಓದಿ ಉಳಿದದ್ದು...

Posted by ekanasu

ಸಾಹಿತ್ಯ
`` ನಲ್ವತ್ತೆರಡು ವರ್ಷಗಳಿಂದ ಒಬ್ಬರನ್ನೊಬ್ಬರು ನಂಬಿಸಲು ಪ್ರಯತ್ನಪಡುತ್ತಿದ್ದರೂ ಇನ್ನೂ ನಂಬಿಕೆ ಹುಟ್ಟಿಸಲಾಗದ ದೇವರಿಗೆ'' (ಜೋಗಿ ) ಎಂಬ ವಿಲಕ್ಷಣವಾದ ಅರ್ಪಣೆಯೊಂದಿಗೆ ತೆರೆದುಕೊಳ್ಳುವ ಪುಸ್ತಕ ಜೋಗಿ ಕಥೆಗಳು .


ಅತೀ ಸಣ್ಣ ಕಥೆಗಳು ಎಂಬ 21 ಮಿಂಚು ಹುಳುಗಳ ಸಂಗ್ರಹ ಈ ಸಂಕಲನದಲ್ಲಿದೆ. ಕನ್ನಡ ಕಥಾ ಪ್ರಪಂಚದಲ್ಲಿ ಹೊಸತು ಎಂಬ ಪ್ರಯೋಗಗಳಿಂದ ಕೂಡಿದ ಈ ವಿಶೇಷ ರಚನೆಗಳು ಈ ಸಂಕಲನದಲ್ಲಿರುವುದು ವಿಶೇಷವಾಗಿದೆ. ಆಡಂಬರವಿಲ್ಲದೆ ಪದಗಳ ಅಥವಾ ವಾಕ್ಯಗಳ ಮೆರವಣಿಗೆ , ವಿಜೃಂಭಣೆಯಿಲ್ಲದೆ ಕಥೆ ಹೇಳುವ ಶೈಲಿ ಜೋಗಿಗೆ ಒಲಿದು ಬಂದಿದೆ. ಸಣ್ಣ ಕಥೆಗಳು ಕತ್ತಲ ನಡುವೆ ಬೆಳಗುವ ಬೆಳಕಿನ ತುಣುಕುಗಳಿದ್ದಂತೆ ಎನ್ನುವುದನ್ನು ಜೋಗಿ ಕಥೆಗಳು ಸಾಬೀತು ಪಡಿಸುತ್ತವೆ.

ಈ ಸಂಕಲನವನ್ನು ಓದಿ ಮುಚ್ಚಿಟ್ಟ ಮೇಲೆ ಜುಮುರು ಮಳೆಯಂತೆ ಕಾಡುವ ಮನದ ಜೋಪಡಿಯಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತುಕೊಳ್ಳುವ `ಇನ್ನೊಬ್ಬ', `ಒಂದು ಹೂವಿನ ಕಥೆ' , `ಕನ್ನಡಿಯೊಳಗೆ ಗಳಗನಾಥರಿಲ್ಲ' ಎಂಬ ಮೂರು ವಿಭಿನ್ನವೆನಿಸುವಂತಹ ಪ್ರಯೋಗಗಳು ಇಲ್ಲಿವೆ. ಇಲ್ಲಿನ ಇನ್ನೊಬ್ಬ ಎಂಬ ಕಥೆಯಲ್ಲಿ ಬರುವ ರಾಮಸ್ವಾಮಿ ಐಯಂಗಾರ್ ಮತ್ತು ಕೃಷ್ಣಸ್ವಾಮಿ ಐಯಂಗಾರ್ ಬಗೆಗಿನ ಊರ ಜನರ ಕುತೂಹಲ, ಕಾಳಜಿಯ ಬಗ್ಗೆ ಜೋಗಿ ನಾಜೂಕಾಗಿ ಹೇಳಿ ಕಥೆಯ ಕೊನೆಯಲ್ಲಿ ಪುನಃ ತಿರುವಿತ್ತು ಮುದ ನೀಡುತ್ತಾರೆ. ಇನ್ನು ಒಂದು ಹೂವಿನ ಕಥೆಯಲ್ಲಿ ಪ್ರೀತಿಯ ನವಿರುತನ ಕಥೆಯ ತುಂಬ ಹರಿವಿ ಓದುಗರನ್ನು ಉಲ್ಲಸಿತರನ್ನಾಗಿಸುತ್ತಾರೆ. ರೇವೆಯಲ್ಲಿ ಆಗತಾನೆ ಪುಟ್ಟ ಮಗುವಿಟ್ಟು ನಾಪತ್ತೆಯಾದ ಅನಾಮಧೇಯ ಪಾದದ ಗುರುತಿನಂತೆ ರೋಹಿಣಿ ಎಂಬ ಕಥೆ ಮನಕಲುಕುತ್ತದೆ. ಈ ಕಥೆಯಲ್ಲಿ ಬರುವ ರೋಹಿಣಿ ಪಾಲ್ಯುನುರೋ ಬ್ಲಾಸ್ಟೋಮಾ ಎಂಬ ಖಾಯಿಲೆಯಿಂದ ಬಳಲುತ್ತಿರುತ್ತಾಳೆ. ಅವಳ ತಂದೆ ತಾಯಿ ಚಿಕಿತ್ಸೆಯ ತಯಾರಿಯಲ್ಲಿರಬೇಕಾದರೆ ರೋಹಿಣಿ ತನ್ನ ಅಣ್ಣ ಚಂದ್ರನಲ್ಲಿ ಆಪರೇಷನ್ ಬಯದಿಂದ ಆಪರೇಷನ್ ಬೇಡವೆಂದು ಅಳಲನ್ನು ಹೇಳಿಕೊಳ್ಳುತ್ತಾಳೆ.
ಒಲ್ಲದ ಮನಸ್ಸಿನಿಂದ ತಂಗಿಯು ಪಡೆಯುತ್ತಿರಬಹುದಾದ ಹಿಂಸೆಯನ್ನು ಊಹಿಸಿ ಇದರಿಂದ ತಪ್ಪಿಸಿಕೊಂಡು ಮುಗ್ಧಮನಸ್ಸಿನ ಮಕ್ಕಳಿಬ್ಬರು ಅಜ್ಜಿ ಮನೆಯನ್ನು ಸೇರಿಕೊಳ್ಳುವುದು ಇಲ್ಲಿನ ಕಥೆಯಾಗಿದೆ. ಈ ಕಥೆ ಕೆ. ಸದಾಶಿವರ ರಾಮನ ಸವಾರಿ ಸಂತೆಗೆ ಹೋದದ್ದು ಎಂಬ ಕಥೆಯಲ್ಲಿನ ರಾಮನನ್ನು ನೆನಪಿಸುತ್ತದೆಯಾದರೂ ಅಲ್ಲಿನ ಕಥಾ ವಸ್ತು ಬೇರೆಯೇ ರೀತಿಯದ್ದಾಗಿದೆ. ರೋಹಿಣಿ ಅಲ್ಲಿರುವ ಕೊನೆಯ ದಿನಗಳಲ್ಲಿ ಅಣ್ಣ ಚಂದ್ರ ಅವಳಿಗೆ ಸುತ್ತಲಿನ ಪ್ರಕೃತಿಯ ವಿಸ್ಮಯವನ್ನು ತೋರಿಸುತ್ತಾ ಕಥೆ ಹೇಳಿ ಅವಳ ಹೊಟ್ಟೆನೋವನ್ನು ಮೆರೆಯಿಸಲು ಮಾಡುವ ಪ್ರಯತ್ನ ಅದರಿಂದ ರೋಹಿಣಿ ಪಡೆಯುವ ಖುಷಿ ವಿಪರೀತವಾದದು.
ಬದುಕಿನ ಬಗ್ಗೆ ಹಿರಿಯರ ದಾವಂತಗಳಿಂದ ದೂರವಿರುವ ಮಕ್ಕಳ ಪುಟ್ಟ ಸುಂದರವಾದ ಪ್ರಪಂಚ ಚಂದ್ರರೋಹಿಣಿಯ ಮೂಲಕ ಅನಾವರಣ ಗೊಳ್ಳುತ್ತದೆ. ವಿಡಿಯೋ ಗೇಮ್ ಕಂಪ್ಯೂಟರ್ ಗೇಮ್ ಗಳ ನಡುವೆ ಬೆಳೆದ ಮಕ್ಕಳ ಪ್ರಪಂಚಕ್ಕಿಂತಲೂ ಕಾಡು ಹೂ ಕಥೆ ಎಂಬ ಶಬ್ಧಗಳು ಮಕ್ಕಳ ಮನದಿಂದ ಮರೆಯಾಗುತ್ತಿರುವ ಹಳ್ಳಿ ಪರಿಸರವನ್ನು ನೆನಪಿಸುತ್ತದೆ. ಇಲ್ಲಿನ ಮತ್ತೊಂದು ಕಥೆಯಾದ ಕನ್ನಡಿಯೊಳಗೆ ಗಳಗನಾಥರಿಲ್ಲ ಇಲ್ಲಿರುವ ಉಳಿದ ಕಥೆಗಳಿಗಿಂತಲೂ ವಿಭಿನ್ನ ಪ್ರಯೋಗವಾಗಿದೆ. ಕನ್ನಡಿ ತನ್ನ ಬಿಂಬವನ್ನು ಕಣ್ತುಂಬಿಕೊಳ್ಳುವುದರಿಂದ ಗಳಗನಾಥರಿಗೆ ಗಾಬರಿಯಾಗುತ್ತಿದೆ. ತನ್ನ ಮನೆಯರನ್ನೆಲ್ಲಾ ಕನ್ನಡಿ ಹಿಡಿದಿಟ್ಟುಕೊಳ್ಳುವುದು ಖಾತರಿಯಾದ ಮೇಲೆ ಗಳಗನಾಥರ ಭಯ ಹೆಚ್ಚಾಗುತ್ತದೆ. ಇಲ್ಲಿರುವ ಕನ್ನಡಿ ಗಳಗನಾಥರನ್ನು ವಿಪರೀತವಾಗಿ ಸತಾಯಿಸುತ್ತದೆ. ಕೊನೆಗೆ ಮನೆಯವರಾರಿಗೂ ಗಳಗನಾಥರ ಅಸ್ತಿತ್ವ ಗೋಚರವಾಗುವುದಿಲ್ಲ ಎನ್ನುವುದರ ಮೂಲಕ ಈ ಕಥೆ ಕೊನೆಯಾಗುತ್ತದೆ. ಈ ಕಥೆ ಓದುಗರನ್ನು `ತಮಗೆ ಹೊಳೆದದ್ದನ್ನು'ಮತ್ತೊಬ್ಬರಿಗೆ ಹೊಳೆಯಿಸಲಾಗದಂತೆ ಮಾಡಿ ಪೇಚಿಗೆ ಸಿಲುಕಿಸುತ್ತದೆ.
ಇಲ್ಲಿರುವ ಮತ್ತೊಂದು ಕಥೆಯಾದ ಲಿಫ್ಟ್ ಹೊರಪ್ರಪಂಚದ ಮತ್ತು ಒಳಪ್ರಪಂಚದ ಸತ್ಯವನ್ನು ಒಂದೇ ಸಾರಿ ಎದುರಾಗಿಸಿ ಕ್ಷಣಕಾಲದ ಮಿಂಚಿನಂತೆ ಮಿಂಚಿ ಮಾಯವಾಗುತ್ತದೆ. ಜೋಗಿಯ ಕಾದಂಬರಿಗಳ ಮೇಲೆ ನಾವು ಕಾಣಬಹುದಾದ ಅನಂತ ಮೂರ್ತಿ , ತೇಜಸ್ವಿ ಕೃತಿಗಳ ಪ್ರಭಾವದಿಂದ ಜೋಗಿ ಕಥೆಗಳು ಹೊರತಾಗಿದೆ. ಇಲ್ಲಿನ ಎಲ್ಲಾ ಕಥೆಗಳು ತನ್ನದೇ ಪ್ರಭಾವನ್ನು ಸೃಷ್ಠಿಸುವಷ್ಟು ಹೊಸತಾಗಿದೆ. ಅಂತೆಯೇ ಇಲ್ಲಿನ ಜನ `ಹೇ ಪ್ರಾಣಕಾಂತ' ಕಥೆಯನ್ನು ಓದಿದ ಮೇಲೆ ಈಶ್ವರ ಚಂದ್ರರ ದ್ವಿಪಾತ್ರ ಕಥೆ ನೆನಪಾಗುತ್ತದೆ. ನಿಜಜೀವನದಲ್ಲಿ ನಾವು ಕೇಳಿದ ಕನ್ನಡದ ದೊಡ್ಡ ವ್ಯಕ್ತಿಗಳ ಹೆಸರು ಇಲ್ಲಿ ಪಾತ್ರವಾಗಿರುವುದು ಮತ್ತೊಂದು ವಿಶೇಷ. (ಉದಾ: ಗಳಗನಾಥರು, ರಾಮಸ್ವಾಮಿ ಐಯ್ಯಂಗಾರ್) ಇಲ್ಲಿನ ಮತ್ತೊಂದು ಕಥೆಯಾದ ಚಂದ್ರಹಾಸ 32 ಕಾಡಬೆಳದಿಂಗಳು ಸಿನೆಮಾವಾಗಿ ಮೆಚ್ಚುಗೆ ಗಳಿಸಿದೆ.
ಯುವಕರು ಹಳ್ಳಿಗಳಿಂದ ದೂರವಾಗಿ ಹಳ್ಳಿಗಳೆಲ್ಲ ವೃದ್ಧಾಶ್ರಮವಾಗಿ ಪರಿವರ್ತನೆಯಾಗುವುದನ್ನು ಕಥೆ ಮೆಲ್ಲನೆ ನೆನಪಿಸುತ್ತದೆ. ಇಲ್ಲಿ ವೃದ್ಧ ಜೀವಗಳೆರಡರ ತೊಳಲಾಟ ಸೂಕ್ಷ್ಮವಾಗಿ ಮೂಡಿಬಂದಿದೆ.
`` ಕಥೆ ಬರೆಯುವುದು ಮಹಾನ್ ಪ್ರತಿಭೆಯೂ ಸಾಧನೆಯೋ ಅಲ್ಲ. ಪುಟ್ಟ ಹುಡುಗಿ ಮುಂಜಾನೆಗೆ ಎದ್ದು ಮನೆ ಮುಂದೆ ರಂಗೋಲಿ ಬಿಡಿಸುವಾಗಿನ ತನ್ಮಯತೆ ಉದ್ದಲಂಗದ ಅರಶಿನ ಕೆನ್ನೆಯ ಬಾಲಕಿ ಕುಣಿಗಲ್ ರಸ್ತೆಯ ಬದಿಯಲ್ಲಿ ದಟ್ಟ ಮಂಜಿನ ನಡುವೆ ಮಲ್ಲಿಗೆ ಹೂ ಹಿಡಿದುಕೊಂಡು ನಿಂತುಕೊಂಡಾಗಿನ ಭರವಸೆ, ಸೈಕಲ್ ರಿಪೇರಿ ಪುಟ್ಟ ಬಾಲಕನ ಅಸಾಧ್ಯ ಶ್ರದ್ಧೆ ಇವೆಲ್ಲ ಬರಹಕ್ಕಿಂತ ದೊಡ್ಡದು. ಅವೆಲ್ಲ ನಾಳಿನ ಬದುಕನ್ನು ಕಟ್ಟಿಕೊಡಬಲ್ಲದು. '' -ಜೋಗಿ. ಎಂದು ತೀರಾ ವಿನಯದಿಂದ ಹೇಳುವ ಜೋಗಿಯ ಜೋಳಿಗೆಯಿಂದ ಮತ್ತಷ್ಟು ಮಗದಷ್ಟೂ ಮೊಗೆದಷ್ಟೂ ಕಥೆಗಳು ಬರಲಿ ಎಂದು ಆಶಿಸೋಣ.
ಪತ್ರಿಕೋದ್ಯಮ ಎಂಬ ಗಿರಣಿಗೆ ಬಿದ್ದಮೇಲೆ ಕಥೆಗಳಿಗೆ ಸಮಯವಿಲ್ಲ ಎಂಬ ಮಾತನ್ನು ಲಂಕೇಶ್ ರಂತೆ ಜೋಗಿಯೂ ಸುಳ್ಳಾಗಿಸಿದ್ದಾರೆ. ಈ ಸಂಕಲನಕ್ಕೆ ವಿವೇಕ್ ಶಾನುಭಾಗ್ ಅವರ ಬೆನ್ನುಡಿ , ಸೂರಿ ಮುನ್ನುಡಿ ಪುಸ್ತಕವನ್ನು ಮತ್ತಷ್ಟು ಚಂದ ಕಾಣಿಸಿದೆ. ಜೋಗಿ ಎಂಬ ವಿಸ್ಮಯದಲ್ಲಿ ಹೊಳೆದದ್ದು ತಾರೆ. ಉಳಿದದ್ದು ಆಕಾಶ !!
- ಕೌಶಿಕ್ ಪಾರಾಡ್ಕರ್,
ಪ್ರಥಮ ಬಿ.ಕಾಂ. (ಎ.)
ಆಳ್ವಾಸ್ ಕಾಲೇಜು .

ಮುಂದೆ ಓದಿ
6:56 PM

ಅಪರಾಧಿ ಅರುಂಧತಿ

Posted by ekanasu

ವಿಚಾರ
'2001ರಲ್ಲಿ ಸಂಸತ್ತಿನಮೇಲೆ ನಡೆದ ದಾಳಿಯ ಆರೋಪಿ ಮೊಹಮ್ಮದ್ ಅಫ್ಜಲ್ ಗೆ , ಅಗತ್ಯ ಸಾಕ್ಷ್ಯ ಇಲ್ಲದಿದ್ದರೂ ಸುಪ್ರೀಂ ಕೋರ್ಟ್ ನಿರ್ಭಿಡೆಯಿಂದ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವನಿಗೆ ಇಂತಹ ಶಿಕ್ಷೆ ಕೊಟ್ಟರಷ್ಟೇ ಸಮಾಜದ ಸಮಷ್ಟಿ ಪ್ರಜ್ಞೆ ತೃಪ್ತಗೊಳ್ಳುತ್ತದೆ ಎಂಬ ಕಾರಣದಿಂದ ಅದು ಈ ತೀರ್ಮಾನಕ್ಕೆ ಬಂದಿದೆ.' ಹೀಗೆಂದು ಮಾವೊವಾದಿ ಪಕ್ಷದ ವಕ್ತಾರ ತನಗೆ ಹೇಳಿದ್ದಾಗಿ ಅರುಂಧತಿ ರಾಯ್ ತನ್ನ ವಿವಾದಿತ 'ವಾಕಿಂಗ್ ವಿತ್ ದ ಕಾಮ್ರೇಡ್ಸ್' ಲೇಖನದಲ್ಲಿ ಬರೆದಿದ್ದಾರೆ. ಮಾವೊವಾದಿ ಪಕ್ಷದ ವಕ್ತಾರನ ಸದರಿ ಹೇಳಿಕೆಯನ್ನಷ್ಟೇ ದಾಖಲಿಸಿ, ಆ ಹೇಳಿಕೆಗೆ ಲೇಖನದಲ್ಲಿ ತಮ್ಮ ಪ್ರತಿಕ್ರಿಯೆ ದಾಖಲಿಸದಿರುವ ಮೂಲಕ ಅರುಂಧತಿ ರಾಯ್ ಅವರು 'ಮೌನಂ ಸಮ್ಮತಿ ಲಕ್ಷಣಂ' ಎಂಬ ಧೋರಣೆ ಮೆರೆದಿದ್ದಾರೆ. ಈ ಎಲ್ಲ ಬೆಳವಣಿಗೆ ಅತ್ಯಂತ ಆಕ್ಷೇಪಾರ್ಹ.



ಕ್ರಮಬದ್ಧವಾಗಿಯೇ ತೀರ್ಪು ನೀಡಿರುವ ಮತ್ತು ವಿವೇಕಿಗಳೂ ಪೂರ್ವಗ್ರಹರಹಿತರೂ ನಿಷ್ಪಕ್ಷಪಾತಿಗಳೂ ಜವಾಬ್ದಾರಿಯುತರೂ ಹಾಗೂ ನ್ಯಾಯಶೀಲರೂ ಆದಂಥ ನ್ಯಾಯಾಧೀಶರನ್ನೊಳಗೊಂಡಿರುವ ನಮ್ಮ ಸರ್ವೋಚ್ಚ ನ್ಯಾಯಾಲಯದ ಬಗ್ಗೆ ತಪ್ಪು ಕಲ್ಪನೆ ಉಂಟುಮಾಡಬಲ್ಲಂಥ ಮತ್ತು ಸೌಹಾರ್ದಶೀಲ ಭಾರತೀಯ ಸಮಾಜದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಬಲ್ಲಂಥ ಸದರಿ ಹೇಳಿಕೆಯು ಖಂಡನಾರ್ಹ.

ಭಾರತದ ಘನತೆಗೆ ಪೆಟ್ಟು ನೀಡುವಂತಿರುವ ಅರುಂಧತಿಯ ಈ ಲೇಖನ(ಭಾಗ)ವನ್ನು ದೇಶ ವಿದೇಶಗಳ ನಾಗರಿಕರು ಓದುತ್ತಿದ್ದಾರೆ. ಭಾರತದ ಪ್ರಜೆಗಳಾದ ನಾವು ಈ ಸಂದರ್ಭದಲ್ಲಿ ಸುಮ್ಮನಿರಬಾರದು. ದೇಶದ ಘನತೆಗೆ ಕುಂದುಂಟುಮಾಡುವ ಮತ್ತು ದೇಶವನ್ನು ವಿಘಟನೆಯತ್ತ ಕೊಂಡೊಯ್ಯುವ ಈ ಹೇಳಿಕೆಯನ್ನು ಮತ್ತು ಅದಕ್ಕೆ ಮೌನದ ಸಮ್ಮತಿ ಸೂಚಿಸಿರುವ ಅರುಂಧತಿಯವರ ನಡೆಯನ್ನು ವಿರೋಧಿಸುವ ಮೂಲಕ ನಾವು ದೇಶದ ಘನತೆಯನ್ನು ಎತ್ತಿಹಿಡಿಯಬೇಕು. ಹೇಳಿಕೆ ನೀಡಿದ ವ್ಯಕ್ತಿಯ ಜೊತೆಗೆ ಅರುಂಧತಿಯೂ ಇಲ್ಲಿ ಅಪರಾಧಿ.


ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ರಾಜ್ಯ - ರಾಷ್ಟ್ರ

ನಮ್ಮ ಓದುಗರಿಗೆ, ಬರಹಗಾರರಿಗೆ, ಸಮಸ್ತ ನಾಗರೀಕರಿಗೆ `ವಿಷು' ಹಬ್ಬದ ಹಾರ್ದಿಕ ಶುಭಾಶಯಗಳು. -ಸಂ.

ಮುಂದೆ ಓದಿ
10:03 PM

ಗೌರವ

Posted by ekanasu

ಪ್ರಾದೇಶಿಕ ಸದ್ದಿ

ದುಬೈಯ ಬ್ಯಾರಿ ಕಲ್ಚರಲ್ ಫೋರಂ (ಬಿಸಿಎಫ್) ಇತ್ತೀಚೆಗೆ ದುಬೈಯಲ್ಲಿ ಹಮ್ಮಿಕೊಂಡಿದ್ದ ಜಾಗತಿಕ ಬ್ಯಾರಿ ಸಮ್ಮೇಳನದಲ್ಲಿ ಮೂಲ್ಕಿಯ ಹಿರಿಯ ಸಮಾಜ ಸೇವಕ ಎಂ.ಬಿ.ನೂರ್ ಮಹಮ್ಮದ್ರವರನ್ನು ಬ್ಯಾರಿಸ್ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಫೋರಂ ಅಧ್ಯಕ್ಷ ಡಾ.ಬಿ.ಕೆ.ಯೂಸಫ್ ಕರ್ನಾಟಕ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೇಂದ್ರ ಸರಕಾರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಒರಿಯಂಟಲ್ ವಾಚ್ ಕಂಪೆನಿಯ ಮಹಮ್ಮದ್ ಷಹದಾ ನೂರು, ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ:ಭಾಗ್ಯವಾನ್ ಮುಲ್ಕಿ

ಮುಂದೆ ಓದಿ
9:44 PM

ಬೊಂಬೆ ಮೆರವಣಿಗೆ

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ ವೀರಭದ್ರ ಮಹಮ್ಮಾಯಿ ದೇವಳದ ವಾರ್ಷಿಕ ಉತ್ಸವದ ಅಂಗವಾಗಿ ಶ್ರೀದೇವಿಯ ಬೊಂಬೆ ಮೆರವಣಿಗೆ ನಡೆಯಿತು.
ಚಿತ್ರ:ಭಾಗ್ಯವಾನ್ ಮುಲ್ಕಿ

ಮುಂದೆ ಓದಿ
9:34 PM

ಮುಗಿಯದ ರೀಲು

Posted by ekanasu

ಅಂಕಣ
ನಾ ಕಂಡ ಶ್ರೀನಿವಾಸ್

ಪ್ರಾಮಾಣಿಕತೆ, ವಿನಯಶೀಲತೆ, ಸರಳತೆ, ಸಜ್ಜನಿಕೆ, ನಮ್ರತೆ, ವಿಧೇಯತೆಗೆ ಹೆಸರಾದ ಅಪರೂಪದ ವ್ಯಕ್ತಿ ಗುಂಡಿಬೈಲು ಶ್ರೀನಿವಾಸ್. ಅವರು ಸತ್ಯನಿಷ್ಠರು. ಕೃತಕತೆಯಿಂದ ಬಹುದೂರ. ಅವರು ಆಸ್ತಿ, ಅಂತಸ್ತು, ಅಧಿಕಾರ ಇತ್ಯಾದಿಗಳಿಗೆ ಎಂದೂ ಬೆಲೆಕೊಡದೆ ಭಗವಂತ ಕೊಟ್ಟದ್ದಷ್ಟಕ್ಕೆ ತೃಪ್ತಿಪಟ್ಟವರು. ಬೇರೆಯವರನ್ನು ಸಮಾಧಾನಪಡಿಸಲೆಂದಾಗಲೀ ಸಂತೋಷಪಡಿಸಲೆಂದಾಗಲೀ ಎಂದೂ ಸುಳ್ಳನ್ನು ಹೇಳದೆ, ಸತ್ಯವನ್ನು ಮುಚ್ಚಿಡದೆ ಮೂರು ದಶಕಗಳ ಸುದೀರ್ಘ ಸರಕಾರಿ ಸೇವೆಯನ್ನು ಪೂರೈಸಿದವರು ಶ್ರೀನಿವಾಸ್. ಆದರೆ ತನ್ನ ಪ್ರಾಮಾಣಿಕತೆ ಬಗ್ಗೆ ಅವರು ಎಂದೂ ಅಹಂ ಹೊಂದಿರಲಿಲ್ಲ. ಸರಕಾರಿ ಉದ್ಯೋಗ ಕೇವಲ ಸಂಬಳಕ್ಕಾಗಿ ಎಂದು ತಿಳಿಯದೆ ಸಿಕ್ಕ ಅವಕಾಶವನ್ನು ಸಮಾಜ ಮೆಚ್ಚುವ ರೀತಿಯಲ್ಲಿ ಬಳಸಿಕೊಂಡು ಆ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತಂದರು.



ಕಾರ್ಯಧಕ್ಷತೆಯಿಂದ ತಾವು ಕೆಲಸಮಾಡಿದ ಎಲ್ಲೆಡೆ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡರು. ನೂರಕ್ಕೆ ನೂರು ಪ್ರಾಮಾಣಿಕತೆ ಸಾಧ್ಯವೇ ಇಲ್ಲ ಎಂದೆನಿಸಬಹುದಾದ ಪ್ರಚಾರ ಇಲಾಖೆಯಲ್ಲೂ ದೃಢ ಸಂಕಲ್ಪ, ಕಠಿಣಶ್ರಮವಿದ್ದರೆ ಪ್ರಾಮಾಣಿಕತೆ ಕಷ್ಟಸಾಧ್ಯದ ಮಾತಲ್ಲ ಎಂಬುದನ್ನು ಶ್ರೀನಿವಾಸ್ ಸಾಬೀತುಪಡಿಸಿದ್ದಾರೆ.

ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಅಸ್ತಿತ್ವಕ್ಕೆ ಬಂದ ಐವತ್ತರ ದಶಕದಲ್ಲಿ ಕರ್ನಾಟಕ ವಲಯದಲ್ಲಿ ಕಾರ್ಯನಿರ್ವಹಿಸಿ ಕಾರ್ಯದಕ್ಷತೆ, ಪ್ರಾಮಾಣಿಕತೆ, ನಿಷ್ಠೆಗೆ ಹೆಸರಾದ ಆರ್. ಭೀಮಯ್ಯ, ನಾರಾಯಣರಾಜು ಅವರ ಸಾಲಿಗೆ ಸೇರಿಸಬಹುದಾದ ವ್ಯಕ್ತಿ ಗುಂಡಿಬೈಲು ಶ್ರೀನಿವಾಸ್. ಅವರು ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬದಿಗಿಟ್ಟು ನಿರ್ದೇಶನಾಲಯದ ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡವರು. ಸೇವಾವಧಿಯ ಉದ್ದಕ್ಕೂ ಯಾವುದಕ್ಕೂ ಬೇಸರಪಟ್ಟುಕೊಳ್ಳದೆ, ಜವಾಬ್ದಾರಿಯನ್ನು ಒಂದಿಷ್ಟೂ ಕಡೆಗಣಿಸದೆ ದುಡಿದವರು ಶ್ರೀನಿವಾಸ್. ಅವರು ಅಜಾತಶತ್ರು; ಸಂಪೂರ್ಣ ಸತ್ಯನಿಷ್ಠ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಒಂದು ಘಟನೆಯನ್ನು ಹೇಳಲೇಬೇಕು. ಡಿಸೆಂಬರ್ 10, 2006. ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ವಿಶೇಷ ಕಾರ್ಯಕ್ರಮ ಏರ್ಪಾಡಾಗಿತ್ತು. ಶ್ರೀನಿವಾಸ್ ಅವರದ್ದೇ ಸಾರಥ್ಯ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾಲೇಜು ಉಪನ್ಯಾಸಕರು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೂ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಮಹಿಳೆಯರು ರಸಪ್ರಶ್ನೆ ಹಾಗೂ ವಿವಿಧ ಕ್ರೀಡಾಸ್ಪರ್ಧಿಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ಸುಮಾರು 5-6 ಗಂಟೆಗಳ ಕಾಲ ನಡೆದ ಸಮಾರಂಭದ ನಂತರ ನೆರೆದಿದ್ದ ಎಲ್ಲರಿಗೂ ಬಿಸಿಬಿಸಿ ಕೇಸರಿಬಾತ್, ಖಾರಾಬಾತ್, ಕಾಫಿ-ಟೀ ವ್ಯವಸ್ಥೆ. ನನಗೆ ಅಚ್ಚರಿಯೆನಿಸಿತು. ಏಕೆಂದರೆ ಇಡೀ ಕಾರ್ಯಕ್ರಮಕ್ಕೆ ಮಂಜೂರಾಗಿದ್ದ ಹಣ ಕೇವಲ ಎರಡು ಸಾವಿರ ರೂಪಾಯಿ. ಅಲ್ಲಿನ ಇತರೆಲ್ಲ ಏರ್ಪಾಡುಗಳನ್ನು ಗಮನಿಸಿದರೆ ಹೆಚ್ಚು ಹಣ ವೆಚ್ಚವಾಗಿರಬಹುದು ಎನ್ನಿಸುತ್ತಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಕುತೂಹಲ ತಡೆಯಲಾಗದೆ ಶ್ರೀನಿವಾಸ್ ಅವರನ್ನು ಕೇಳಿಯೇಬಿಟ್ಟೆ. ರಸಪ್ರಶ್ನೆ ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ನೂರಾರು ಮಂದಿಗೆ ಉಪಹಾರ..ಇವೆಲ್ಲ ಎರಡು ಸಾವಿರ ರೂಪಾಯಿಯಲ್ಲಿ ಹೇಗೆ ಸಾಧ್ಯ? `ಆಗುತ್ತೆ ಸರ್ ಶ್ರೀನಿವಾಸ್ ಥಟ್ಟನೆ ಉತ್ತರಿಸಿದರು. ಜತೆಗೆ ವಿವರಣೆ ಕೂಡ. `ಬಹುಮಾನಗಳಿಗೆ ಒಂದು ಸಾವಿರ, ಆಹ್ವಾನಪತ್ರ ಮುದ್ರಣಕ್ಕೆ ಐದುನೂರು ರೂಪಾಯಿ ಹಾಗೂ ಉಪಹಾರಕ್ಕೆ ಇನ್ನುಳಿದ ಐದುನೂರು ರೂಪಾಯಿ. `ಅಷ್ಟೊಂದು ಮಂದಿಗೆ ಐದುನೂರು ರೂಪಾಯಿಯಲ್ಲಿ ಉಪಹಾರ ನೀಡುವುದು ಸಾಧ್ಯವಾಗದು ಎಂದೆ. ಆಗ ಶ್ರೀನಿವಾಸ್ ಹೇಳಿದ್ದು ಹೀಗೆ: `ಅಲ್ಲಿನ ಅಂಗನವಾಡಿ ಕಾರ್ಯಕರ್ತರನ್ನು ಭೇಟಿಮಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದೆ. ಬಳಿಕ ಅವರಿಗೆ ಅಗತ್ಯ ಪ್ರಮಾಣದ ರವೆ, ಸಕ್ಕರೆ, ಎಣ್ಣೆ, ಕಾಫಿ-ಟೀ ಪುಡಿ ಇತ್ಯಾದಿಗಳನ್ನು ಒದಗಿಸಿದೆ. ಇಂದು ಭಾನುವಾರವಾದದ್ದರಿಂದ ಅಂಗನವಾಡಿಯ ಅಡುಗೆಮನೆ ಖಾಲಿ ಇತ್ತು. ಅವರೇ ನಮಗೆ ಚೌಚೌ ಬಾತ್ ಸಿದ್ಧಪಡಿಸಿದರು. ಊಟದ ಎಲೆ ಸ್ಥಳೀಯರಿಂದ ಉಚಿತವಾಗಿ ದೊರಕಿತು. ಶ್ರೀನಿವಾಸ್ ಅವರ ಉತ್ತರ ನನ್ನ ಮನದಲ್ಲಿ ಸದಾ ಉಳಿಯುವಂಥದ್ದು.

- ಎಂ.ಎನ್. ಶಂಕರ್

ಮುಂದೆ ಓದಿ
9:22 PM

ಅವರವರ ಭಾವಕ್ಕೆ...

Posted by ekanasu

ವೈವಿಧ್ಯ

ಸ್ನೇಹಿತರ ಹತ್ತಿರ ಲೊಟ್ಟೆ-ಲೋಸ್ಕು ಪುರಾಣ ಮಾತಾಡ್ತಾ ಇರ್ಬೇಕಾದ್ರೆ ಮನುಷ್ಯರೆಲ್ಲಾ ಅಮೀಬಾಗಳಂತೆ Reproduction ಮಾಡೋಹಾಗಿದ್ದಿದ್ರೆ ಹೇಗ್ ಇರ್ತಿತ್ತು ಅನ್ನೂ ವಿಷಯ ಪ್ರಸ್ತಾಪ ಆಗಿತ್ತು , ಒಂದು ವೇಳೆ ಮನುಷ್ಯರೆಲ್ಲಾ ಅಮೀಬಾ ತರ ಆಗೊಗಿದ್ರೆ ಕವಿತೆಗಳು, ಚಿತ್ರಗಳು, ಬಣ್ಣಗಳು ಯಾವುದು ಹುಟ್ಟುತ್ತಿರಲಿಲ್ಲವೇನೋ, ಪ್ರಣಯಕ್ಕೂ ಮತ್ತು ಪ್ರಳಯಕ್ಕೂ ಅಂತಹ ವ್ಯತ್ಯಾಸ ಗೊತ್ತಾಗ್ತಾ ಇರ್ಲಿಲ್ಲ ! . ಆದ್ರೆ ನೆನಪುಗಳನ್ನು ಅಮೀಬಾಕ್ಕೆ ಹೋಲಿಸಬಹುದು, ಒಂದರ ಹಿಂದೆ ಒಂದು ಬಿಚ್ಚಿಕೊಳ್ತಾ ಹೋಗುತ್ತೆ , ಕೆಲವೊಂದು ಬೇಡವಾದ ನೆನಪುಗಳ ಮೇಲೆAttempt to Murder ಕೇಸ್ ಹಾಕಿ ಗಲ್ಲಿಗೆ ಹಾಕೋಣ ಅಂದ್ರೆ ಹೇಗೋ ಜಾಮೀನಿನ ಮೇಲೆ ಹೊರೆಗೆ ಬಂದು ಮತ್ತೆ ಕಾಡ್ತಾವೆ !




ಬೇಡ ಕಣ್ಲಾ ಇಷ್ಟೊಂದು complex ಆಗ್ ಬೇಡ ಅಂತ ಸ್ನೇಹಿತನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಶಾಪ್ಪಿಂಗ್ ಮಾಲ್ ಗಳಲ್ಲಿ ಕಳೆದು ಹೋಗೋಕೆ ಇಷ್ಟ ಇಲ್ಲ , ಅಜ್ಞಾತದ ಕಡೆಗೆ ಒಂದು ನೆಗೆತ ಬೇಕು ಅನ್ಸುತ್ತೆ, a perfect unfamiliar. ಒಂದು ಚೂರು ಪರಿಚಯವಿಲ್ಲದ್ದನ್ನು ಕಾಣದ ಊರಿಗೆ ಹೋಗಿ ಗೊತ್ತಿಲ್ಲದನ್ನು ಹುಡುಕುವ ಆಸೆ ಮರೀಚಿಕೆ ಆಗೋ ಭಯ ಕಾಡಿದಾಗೆಲ್ಲ ಕವಿತೆ, ಹಾಡು, ಡಾರ್ಕ್ ರಮ್ ಯಾವುದು ರುಚಿಸೋಲ್ಲ. ಪ್ರತೀ ನಿಮಿಷವೂ ಗಂಟೆಗಳಷ್ಟು ಕೆಳೆದ ಅನುಭವ (ಥೇಟ್ ಗಾಂಜಾ ಹೊಡೆದಂತೆ). ಬಹುಶಃ ಇದು ಮನಸ್ಸಿನ ಒಂದು ಭಾವದ ಉತ್ಕಟತೆ ಆಗಿರಲಿಕ್ಕೆ ಮಾತ್ರ ಸಾಧ್ಯವೇನೋ .

ಕೊನೆಗೆ ನಮ್ಮೆಲ್ಲಾ ತೀವ್ರ ತರಹದ ಭಾವನೆಗಳನ್ನು ಕಲ್ಪಿಸಿಕೊಳ್ಳುವಂತಹ intensity ಮನಸ್ಸಿಗಿದ್ದರೂ ಎಲ್ಲವೋ ನಮ್ಮ ಅಭಿವ್ಯತಿತ್ವಕ್ಕೆ ಮತ್ತು ಮಾನಸಿಕ ಪರಾತಂತ್ರ್ಯಕ್ಕೆ ಬಿಟ್ಟಿದ್ದು. ಪರಾತಂತ್ರ್ಯ ಭಾವವಿರುವುದು ಮನಸಿನ್ನಲ್ಲೇ ಹೊರತು ದೇಹದಲಲ್ಲವಲ್ಲ. ಕಾಮಾಟಿಪುರದ ಬೀದಿಗಳಲ್ಲಿ ನಿರೋದ್ ಪ್ಯಾಕೆಟ್ ಮಾರುವ ಪುಟ್ಟ ಬಾಲಕನನ್ನು ಕಂಡಾಗ ಫೆಮಿನಿಸಂನ ತತ್ವಗಳು ಊದಿ ಹಾರಲು ಬಿಟ್ಟ ಬಲೂನ್ , ಬಹುಶಃ ಅದು ಪರಾತಂತ್ರ್ಯದ ಇನ್ನೊಂದು phase ಇರಬಹುದೇನೋ. ಲೊಟ್ಟೆ-ಲೋಸ್ಕು ಪುರಾಣಗಳು, ಫೆಮಿನಿಸಂ ತತ್ವಗಳು, ದೊಡ್ಡ ದೊಡ್ಡ ಆಚಾರ್ಯರ ಸಿದ್ದಾಂತಗಳು, ವೈಜ್ಞಾನಿಕ ಥಿಯರಿಗಳು, ರಾತ್ರಿ ದಂಧೆಗಳ ಮೇಲೆ ನಿಂತ ಪಟ್ಟಣಗಳ ಹಗಲುಗಳು ನಮ್ಮ ನಮ್ಮ ಮನೆಯ ಉಪ್ಪಿನ ಋಣದಿಂದ ಮುಕ್ತವಾಗಿರಲಿಕ್ಕೆ ಸಾದ್ಯನೇ ಇಲ್ಲವೇನೋ.

ಸಂತೋಶ್ ಸಿ.ರಾವ್

ಮುಂದೆ ಓದಿ

ಆಟ - ಅವಲೋಕನ


ಟಿ.ವಿ ಬಿಟ್ಟು ಜನ ಕದಲಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬೆಟ್ ಕಟ್ಟುವ ಜನ... ದೇವಸ್ಥಾನದಲ್ಲಿ ಮುಗಿಯದ ಹೋಮ ಹವನ...
ಈ ಮಟ್ಟಕ್ಕೆ ಕ್ರಿಕೆಟ್ ಮೋಡಿಯಲ್ಲಿ ಮುಳುಗಿರುವ ಬಹುಕೋಟಿ ಭಾರತೀಯರು ಐಪಿಎಲ್ ಆಗಮನಕ್ಕೆ ಕೆಂಪುರತ್ನಗಂಬಳಿ ಹಾಸಿ ಸ್ವಾಗತಿಸಿರುವುದರಲ್ಲಿ ವಿಶೇಷವೇನೂ ಇಲ್ಲ.




ಸಾಂಪ್ರದಾಯಿಕ ಕ್ರಿಕೆಟ್ ಗೆ ಹೋಲಿಸಿದರೆ ಐಪಿಎಲ್ ಲೋಕ `ಬಣ್ಣ ಬಣ್ಣವಪ್ಪೋ...ರಂಗೋ ರಂಗು...' ಮೊದಲೇ ಮಾಯಾ ಸುಂದರಿ ಅದಕ್ಕೊಂದಿಷ್ಟು ಗ್ಲಾಮರ್ ಟಚ್ ಸಿಕ್ಕರೆ ಕೇಳಬೇಕೇ... ? ಸಿಹಿಗೆ ಇರುವೆ ಮುತ್ತಲೆಷ್ಟು ಹೊತ್ತು ...!! ಯಾವುದೇ ಬಾಲಿವುಡ್ ಸೆಟ್ ಗೆ ಕಡಿಮೆಯಿಲ್ಲದ ವರ್ಣಮಯ ಕ್ರೀಡಾಂಗಣ ಸಿನೆಮಾ ತಾರೆಯರ ಮೆರೆದಾಟ ನಡೆಯುವುದೆಲ್ಲ ನೋಟುಗಳ ಆಟ... ರಾತ್ರಿಯಾದೊಡನೆ ಮತ್ತೇರಿಸುವ ಮಾರ್ಜಾಲಗಳಿಗೆ ಜೊತೆಗೊಂದಿಷ್ಟು ಮದ್ಯದ ಅಮಲು ..ಇಲ್ಲಿ ನಡೆಯುವುದು ಕ್ರಿಕೆಟೋ ಅಥವಾ ಲೈವ್ ಬಾಂಡ್ ನರ್ತನವೋ ಎಂಬ ಶಂಕೆ ಹುಟ್ಟಿಸುವ ಮಟ್ಟಿಗೆ ಐಪಿಎಲ್ ಕೂಟ ಮಿನುಗುತ್ತಿದೆ. ಕಣ್ಣು ಜಿಗಿಲ್ ಎನಿಸುವಷ್ಟು...

ಐಪಿಎಲ್ ದು ಶ್ರೀಮಂತ ಜಗತ್ತು. ದುಡ್ಡಿರುವ ದೊಡ್ಡ ಕುಳಗಳಿಗೆಲ್ಲಾ ಜೂಜಿನ ಕೇಂದ್ರ. ಇಲ್ಲಿ ಸಾವಿರ ಸಾವಿರ ಕೋಟಿಗಳ ಲೆಕ್ಕದಲ್ಲಿ ನೋಟು ನಾಟ್ಯವಾಡುತ್ತದೆ. ಕ್ರಿಕೆಟ್ ನಂಬಿಕೊಂಡು ಕ್ರಿಕೆಟಿಗರ ಮೇಲೆ ತಂಡಗಳ ಮೇಲೆ ಹಣದ ಅಭಿಷೇಕ ನಡೆಯುತ್ತದೆ. ಐಪಿಎಲ್ ಕ್ರೀಡಾಕೂಟಕ್ಕಿಂತ ಹೆಚ್ಚಾಗಿ ಉದ್ದಿಮೆಯಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಬಾರಿಯ ಐಪಿಎಲ್ ಬಿಡ್ಡಿಂಗ್ ಸಾಕ್ಷಿ.

ಹೊಸತಾಗಿ ಐಪಿಎಲ್ ಕೂಟಕ್ಕೆ ಸೇರ್ಪಡೆಯಾಗಲಿರುವ ಪುಣೆ ತಂಡವನ್ನು ಸಹರಾ ಇಂಡಿಯಾ 1702ಕೋಟಿಗೆ ಮತ್ತು ರೆಂಡವೋರ್ಸ್ ಸ್ಫೋಡ್ಸ್ 1533ಕೋಟಿಗೆ ಕೊಚ್ಚಿ ತಂಡವನ್ನು ಖರೀದಿಸಿದೆ. ಗಮನಿಸಬೇಕಾದ ಅಂಶವೆಂದರೆ ಐಪಿಎಲ್ ಆರಂಭವಾದ ಸಮಯದಲ್ಲಿ ಹರಾಜಾದ ಎಂಟು ತಂಡಗಳಮೊತ್ತ 2900ಕೋಟಿ ರುಪಾಯಿಗಳು. ಆದರೆ ಈ ಎರಡು ಹೊಸ ತಂಡಗಳು ಮಾರಾಟವಾಗಿರುವುದು 3235ಕೋಟಿ ರುಪಾಯಿಗೆ.!!!

ಐಪಿಎಲ್ ಜನಪ್ರಿಯತೆಗೆ(ಜೂಜಿಗೆ) ಇದಕ್ಕಿಂತ ದೊಡ್ಡ ಉದಾಹರಣೆಬೇಕೇ...
ಐಪಿಎಲ್ ಆಡುತ್ತಿರುವ ಆಟಗಾರರಿಗೆಲ್ಲ ನಿತ್ಯ ಲಕ್ಷಾಧೀಶ್ವರರಾಗುವ ಕನಸು. ಇಲ್ಲಿನ ಪ್ರತಿಯೊಂದು ಸಿಕ್ಸರ್ , ಬೌಂಡರಿ ಲಕ್ಷಗಟ್ಟಲೆ ಬೆಲೆಬಾಳುತ್ತದೆ. ಜಾಹೀರಾತು ಲೋಕಕ್ಕಂತೂ ಐಪಿಎಲ್ ವಜ್ರದ ನಿಕ್ಷೇಪ ಹುಡುಕಿದಂತಾಗಿದೆ. ಐಪಿಎಲ್ ಅವಧಿಯಲ್ಲಿ ಪ್ರಸಾರವಾಗುವ ಜಾಹೀರಾತು ಸಿಕ್ಕಾಪಟ್ಟೆ ದುಬಾರಿ. ಹತ್ತು ವರ್ಷದ ಪ್ರಸಾರ ಹಕ್ಕು ಪಡೆದಿರುವುದು ಖಾಸಗೀ ಚಾನೆಲ್ ಒಂದರಲ್ಲಿ ಹತ್ತು ಸೆಕೆಂಡಿನ ಜಾಹೀರಾತಿಗೆ ಈ ಬಾರಿ 7.5ಲಕ್ಷ !. ಕಳೆದ ಬಾರಿ ಈ ಮೊತ್ತ 5ಲಕ್ಷ. ಭರ್ಜರಿ ಪ್ರಚಾರದ ಹುಚ್ಚಿಗೆ ಭಾರೀ ದುಡ್ಡಿನ ತೆರಿಗೆ.

ಇದು ಐಪಿಎಲ್ ಅಂಗಣದೊಳಗಿನ ಅಧಿಕೃತ ದುಡ್ಡಿನ ವ್ಯವಹಾರ. ಅಂಗಣದ ಆಚೆಗೂ ಹರಡಿದೆ ಐಪಿಎಲ್ ಕರಾಮತ್ತು. ಐಪಿಎಲ್ ನಂಬಿಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವರರು ಹಲವು ಮಂದಿ.
ಈ ಅದೃಷ್ಟದ ಆಟದಲ್ಲಿ ದುಡ್ಡುಗಳಿಸಿದವರೆಷ್ಟೋ ಕಳೆದುಕೊಂಡವರೆಷ್ಟೋ ಮನೆ ಮಠ ಮಾರಿಕೊಂಡವರೆಷ್ಟೋ ಊಹೆಗೆ ನಿಲುಕದ ಸಂಗತಿ.
ಈ ಎಲ್ಲಾ ಬೆಳವಣಿಗೆಯನ್ನು ಗಮನಸಿದಾಗ ಐಪಿಎಲ್ ಆಯೋಜಕರು , ಪ್ರಾಯೋಜಕರು , ವೀಕ್ಷಕರೂ ಮತ್ತು ಆಟಗಾರರಲ್ಲಿ ಕ್ರೀಡಾಮನೋಭಾವನೆಯನ್ನು ಹುಟ್ಟಿಸುವುದಕ್ಕಿಂತ ಹೆಚ್ಚಾಗಿ ದುಡ್ಡು ಗಳಿಸುವ ದಂದೆಯಾಗಿ ಬೆಳೆಯುತ್ತಿದೆಯೇನೋ ಎಂಬ ಭಯ ಹುಟ್ಟಿಸುತ್ತದೆ.



ಐಪಿಎಲ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರ ನಡುವೆ ಸ್ನೇಹ ಸಂಬಂಧ ಬೆಳೆಸುತ್ತದೆ, ದೇಶೀಯ ಆಟಗಾರರನ್ನು ಗುರುತಿಸಿ ಆಡಲು ಅವಕಾಶ ನೀಡುತ್ತಿದೆ ಎಂಬ ದನಾತ್ಮಕ ವಾದಗಳ ಜೊತೆ ಜೊತೆಗೆ ಐಪಿಎಲ್ ರಾಷ್ಟ್ರೀಯ ಕ್ರಿಕೆಟ್ ಮೇಲೆ ಋಣಾತ್ಮಕ ಪರಿಣಾಮ ಉಂಟುಮಾಡುತ್ತಿದೆ. ನಿರಂತರ ಕ್ರಿಕೆಟ್ ನಿಂದಾಗಿ ರಾಷ್ಟ್ರೀಯ ತಂಡದಲ್ಲಿ ಗಾಯದ ಸಮಸ್ಯೆ ಕಾಡುತ್ತಿದೆ. ಮುಂದಿನ ವಿಶ್ವಕಪ್ ಗೆ ತಂಡ ತಯಾರಾಗಬೇಕಾದ ಸಂದರ್ಭದಲ್ಲಿ ಈ ತೆರೆನಾದ ಸಮಸ್ಯೆಗಳು ಭಾರತದ ದಶಕಗಳ ವಿಶ್ವಕಪ್ ಗೆಲ್ಲುವ ಕನಸಿಗೆ ತಣ್ಣೀರೆರಚದಿದ್ದರೆ ಸಾಕು ಎಂದುಕೊಳ್ಳುತ್ತಾನೆ ಕ್ರಿಕೆಟ್ ಅಭಿಮಾನಿ.

ಸಿನೆಮಾ ಜಗತ್ತಿನ ಮೇಲೂ ಐಪಿಎಲ್ ನೇರ ಪರಿಣಾಮ ಬೀರಿದೆ. ಸಿನೆಮಾ ತಾರೆಯರೆಲ್ಲ ಐಪಿಎಲ್ ಫ್ರಾಂಚೈಸಿ ಮತ್ತು ಬ್ರಾಂಡ್ ಅಂಬಾಸಿಡರ್ ಗಳಾಗಿ ಕ್ರೀಡಾಂಗಣದಲ್ಲಿ ಬೀಡು ಬಿಟ್ಟಿರುವಾಗ ಶೂಟಿಂಗ್ ಹೇಗೆ ನಡೆಯುತ್ತೆ ಎಂಬುದು ಚಿತ್ರರಂಗದ ಕೆಲವರ ಅಳಲು. ಒಟ್ಟಿನಲ್ಲಿ ಐಪಿಎಲ್ ಅಟ್ಟ ಹಾಸಕ್ಕೆ ಸಿನೆಮಾ ರಂಗವೂ ಕೂಡ ಕೊಂಚಮಟ್ಟಿಗೆ ಮಂಕಾಗಿದೆ.


ಐಪಿಎಲ್ ಎಂದಾಕ್ಷಣ ತಕ್ಷಣ ನೆನಪಾಗುವುದು ಚಿಯರ್ ಗರ್ಲ್ಸ್ . ಅಂಗಣದಲ್ಲಿ ಕುಣಿಯಲು ಕರಿಸಿದ ಮಾದಕ ಸುಂದರಿಯರು. ಕ್ರೀಡಾಂಗಣಕ್ಕೆ ಗ್ಲಾಮರ್ ಟಚ್ ಕೊಡುವ ಈ ಸುಂದರಿಯರು ಪ್ರೇಕ್ಷಕರ ಕ್ರೀಡಾ ಮನೋಭಾವಗಳನ್ನು ಕೊಂಚ ಕುಗ್ಗಿಸುತ್ತಾರೇನೋ ಎಂದನಿಸುತ್ತದೆ. ಒಂದು ಪತ್ರಿಕೆಯಲ್ಲಿ ವರದಿಯಾದಂತೆ ಹಲವಾರು ಮಂದಿ ಕ್ರಿಕೆಟ್ ನ ಬದಲಾಗಿ ಈ ಕುಣಿಯೋ ಸುಂದರಿಯರನ್ನ ನೋಡಲು ಬರುತ್ತಾರಂತೆ.
ಈ ಸುಂದರಿಯರಿಂದ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯಬಹುದು ಆದರೆ ಇಂತಹ ಪ್ರೇಕ್ಷಕರಲ್ಲಿ ಕ್ರೀಡಾಮನೋಭಾವನೆಯನ್ನು ಹುಡುಕಬಹುದೇ...?
ಐಪಿಎಲ್ ನಿಂದಾಗಿ ಸಾಮಾನ್ಯ ಜನಜೀವನದಲ್ಲೂ ಹಲವಾರು ಏರುಪೇರು. ಸ್ಕೋರು ತಿಳಿವ ಹುಚ್ಚಿನಲ್ಲಿ ಪರೀಕ್ಷೆಗೆ ಓದದ ವಿದ್ಯಾರ್ಥಿಗಳು. ಕ್ರಿಕೆಟ್ ಗುಂಗಿನಲ್ಲಿ ಮನೆಯಲ್ಲಿ ಉಪ್ಪಿಲ್ಲದ ಸಾಂಬಾರು... ಸಂಜೆಯಾದೊಡನೆ ಖಾಲಿಹೊಡೆವ ಮಾರುಕಟ್ಟೆ ಪಾನಿಪೂರಿ ಅಂಗಡಿಗಳು ..ಅಹೋ ರಾತ್ರಿ ಟಿ.ವಿಮುಂದೆ ಕೂರುವ ಪತಿ ಮಹಾಶಯರು... ಎಲ್ಲರೂ ಐಪಿಎಲ್ ಮಾಯೆಗೆ ಸಿಲುಕಿದವರೇ... ಒಟ್ಟಿನಲ್ಲಿ ಹೇಳೋದಾದರೆ ಐಪಿಎಲ್ ರಂಗಿಗೆ ಎಲ್ಲರೂ ಐಲಾಗಿರುವುದಂತೂ ನಿಜ.
ಕೊನೆಯಲ್ಲಿ ನಾವೇ ಕೈಯಗಲಿಸಿ ಸ್ವಾಗತಿಸಿದ ಐಪಿಎಲ್ ಎಂಬ ರತ್ನಗಂಬಳಿಯಡಿಯಲ್ಲಿ ಕ್ರೀಡಾಮನೋಭಾವನೆ ಉಸಿರುಗಟ್ಟಿ ಸಾಯದಿರಲಿ ಎಂಬುದೇ ಆಶಯ.

ಜೆ. ಜೆ ಆಳ್ವ.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು.

ಮುಂದೆ ಓದಿ

ಸಿನೆಮಾ






ಮುಗ್ಧಮನಸಿನ ಪುಟ್ಟ ಹುಡುಗ ಮೆಹರುಲ್ಲಾ... ಕೊಂಚ ಮಸುಕು ಮಸುಕು ರಂಗಿನ ಬದುಕು. ಆಗೊಮ್ಮೆ ಈಗೊಮ್ಮೆ ಕಾಡುವ ಅಗಲಿದ ತಂದೆಯ ಚಿತ್ರ ಜೇಬಿನಲ್ಲಿ ಭದ್ರ. ಸಮುದ್ರ ತೀರದಲ್ಲಿ ಮಾರುವ ಕಪ್ಪೆಚಿಪ್ಪು ಮುತ್ತಿನ ಸರ ಕಂಡಾಗೆಲ್ಲಾ ಪುಟ್ಟ ಪುಟ್ಟ ತಂಗಿಯರ ನೆನಪಿನಿಂದಾಗಿ ಮಸುಕು ಬದುಕಿನಲ್ಲೊಂದಿಷ್ಟು ಹಸಿರು. ಅಂಗಡಿ ಸಾಲಲ್ಲಿ ನೇತು ಹಾಕಿರುವ ಶಾಲು ಕಂಡಾಗಲೆಲ್ಲಾ ಕಣ್ಮುಂದೆ ಹಾಯುವುದು ಅಮ್ಮನ ಮುಖ. ತನ್ನೆಲ್ಲಾ ಮಸುಕು ಪದರುಗಳನ್ನು ಕೆಲದಿನಗಳ ಮಟ್ಟಿಗೆ ಕಳಚಿಕೊಂಡು ಸಿಹಿ ಕನಸುಗಳ ವಾಸ್ತವವನ್ನು ಅಪ್ಪಿಕೊಳ್ಳುವ ಸಂಭ್ರಮವನ್ನು ಮೂಟೆಮಾಡಿಕೊಂಡು ಮನೆಯತ್ತ ಮುಖಮಾಡಿದ ಹುಡುಗ.
ಸಂಭ್ರಮದ ಮೂಟೆ ತೆರೆಯುವ ಮುನ್ನ ಎರಗಿದ ಬರಸಿಡಿಲು. ನಿರೀಕ್ಷೆಗಳೆಲ್ಲಾ ತಲೆಕೆಳಗು. ಹೊಸ ನೀರಿನ ಹೊಳೆಯಲ್ಲಿ ತೇಲಿಹೋದ ಅಪ್ಪನ ನನೆಪು. ಬದಲಾದ ಅಮ್ಮನ ಬದುಕು. ಹಾಳುಬಿದ್ದ ತನ್ನ ಹಳೆಯ ಮನೆ. ಹುಟ್ಟಿಕೊಂಡ ಹೊಸ ಸಂಬಂಧಗಳನ್ನು ಒಪ್ಪಿಕೊಳ್ಳಲಾಗದ ಆಕ್ರೋಶ. ಪ್ರೀತಿಯ ಊಟೆಯೇ ಹೃದಯದಲ್ಲಿದ್ದರೂ ಬಿಚ್ಚಿಡಲಾಗದೇ ಒದ್ದಾಡುವ ಮಲತಂದೆ. ಅಸಾಹಯಕ ತಾಯಿಯ ಮಮತೆ ..ಒಟ್ಟಾರೆ ಭಾವನೆಗಳ ಸುತ್ತವೇ ಗಿರಕಿ ಹೊಡೆಯುವ ಇರಾನಿ ಚಿತ್ರ ದಿ ಫಾದರ್.

ಮಾಜಿತ್ ಮಜೀದಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಸಂಬಂಧಗಳ ನಡುವಿನ ಭಾವುಕತೆ ಕ್ಲಿಷ್ಟತೆಯೇ ಪ್ರಮುಖ ಕಥಾವಸ್ತು. ಭಾವನೆಗಳೇ ಬಂಡವಾಳವಾಗಿರುವ ಚಿತ್ರದ ಪ್ರತಿಯೊಂದು ಸನ್ನಿವೇಶಗಳು ಪ್ರೇಕ್ಷಕರ ಮನದಲ್ಲಿತನ್ನ ವಿಶೇಷ ಛಾಪು ಮೂಡಿಸುತ್ತದೆ. ಪ್ರಮುಖ ಪಾತ್ರಧಾರಿ ಮೆಹರುಲ್ಲಾ ಚಿತ್ರದ ಜೀವಕಳೆ. ಮಲತಂದೆಯ ಮುಂದೆ ನೋಟುಗಳನ್ನೆಸೆದು ತಾಯಿ ತಂಗಿಯರನ್ನು ಕರೆದೊಯ್ಯಲು ಬಯಸುವ ಹುಡುಗ, ತಾಯಿ ತಂಗಿ ಹಿಂದಿರುಗಬಹುದೆಂಬ ನಿರೀಕ್ಷೆಯಲ್ಲಿ ಹಾಳು ಬಿದ್ದ ಹಳೆಮನೆಗೆ ತಾನೇ ಸುಣ್ಣ ಬಣ್ಣ ಹೊಡೆದು ಅಲಂಕರಿಸುವ ಆ ಪುಟ್ಟ ಹುಡುಗ ... ಮಲತಂದೆಯನ್ನು ಕೊಲ್ಲಲೆತ್ನಿಸಿ ಸಾಧ್ಯವಾಗದೆ ಪಿಸ್ತೂಲು ಕದ್ದು ಓಡಿ ಹಿಂಬಾಲಿಸಿ ಬಂದ ಮಲತಂದೆಯನ್ನು ನಾನಾ ರೀತಿಯಲ್ಲಿ ಪೀಡಿಸುವ ಮೆಹರುಲ್ಲಾ ಪ್ರೇಕ್ಷಕರ ಮನದಲ್ಲಿ ಹಟಮಾರಿ ಹುಡುಗನಾಗಿ ನೆಲೆಯೂರುತ್ತಾನೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದ ಯಾವ ಪಾತ್ರಗಳೂ ಕೂಡ ಮಾನವೀಯತೆಯ ಗೆರೆದಾಟಿ ಹೋಗುವುದಿಲ್ಲ. ಪ್ರತಿಯೊಂದು ಪಾತ್ರಗಳು ಕೂಡಾ ಪ್ರೀತಿ ಪ್ರೇಮ ಮಮತೆಯ ಕಣಜಗಳು. .. ಆದರೆ ಭಿನ್ನ ಭಿನ್ನ ಅಭಿವ್ಯಕ್ತಿ. .. ಇಲ್ಲಿ ಮಲತಂದೆಯ ದರ್ಪ ಆತನ ಹೃದಯ ವೈಶಾಲ್ಯತೆ ಮಮತೆ ಹಾಗೂ ಮಲಮಗನನ್ನು ತನ್ನವನ್ನಾಗಿಸಲು ಪಡುವ ಹರಸಾಹಸದ ಮುಂದೆ ದರ್ಪವೆನಿಸುವುದಿಲ್ಲ.

ಬದಲಾಗಿ ಪ್ರೇಕ್ಷಕರ ಮನದಲ್ಲಿ ಅನುಕಂಪದ ಅಲೆ ಹುಟ್ಟುಹಾಕುತ್ತದೆ. ಮಲತಂದೆ ಮತ್ತು ಮಲಮಗನ ನಡುವೆ ಎದ್ದಿರುವ ಭಾವನಾತ್ಮಕ ಬಿರುಗಾಳಿಗೆ ಮತ್ತೊಂದು ಬಿರುಗಾಳಿಯೇ ಸಮಾಧಾನ ನೀಡಿರುವುದು ನಿರ್ದೇಶಕನ ಕಥಾ ನಿರ್ವಹಣೆಯ ಚಾಕಚಕ್ಯತೆಗೆ ಉದಾಹರಣೆ.
ಮೆಹರುಲ್ಲಾನ ಸ್ನೇಹಿತ ಲತೀಸ್ ಚಿತ್ರದ ಗಂಭೀರ ಸನ್ನಿವೇಶಗಳಲ್ಲೂ ಕೆಲವೊಮ್ಮೆ ಪ್ರೇಕ್ಷಕನ ತುಟಿಯಲ್ಲಿ ತುಸು ನಗು ಅರಳಿಸುತ್ತಾನೆ. ಚಿತ್ರದುದ್ದಕ್ಕೂ ಸಿಗುವ ಒಣಭೂಮಿ ಆಗೊಮ್ಮೆ ಈಗೊಮ್ಮೆ ಕಾಣಸಿಗುವ ಹಸಿರು ಚಿಗುರು ನೀರ ತೊರೆ ಇಲ್ಲಿನ ಪಾತ್ರಗಳ ಭಾವನೆಗಳ ಏರಿಳಿತಗಳ ಸೂಚ್ಯವೇನೋ ಎಂಬಂತೆ ಭಾಸವಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಭಾವನೆಗಳ ತಿಕ್ಕಾಟದಲ್ಲಿ ಸಾಗುವ ಚಿತ್ರ ಎಲ್ಲೂ ಕೂಡ ಪ್ರೇಕ್ಷಕನ ಮೇಲೆ ತನ್ನ ಹಿಡಿತ ಕಳೆದುಕೊಳ್ಳವುದಿಲ್ಲ. ಇಲ್ಲೆಲ್ಲೂ ಭಾವನೆಗಳ ಅತಿರೇಕದ ಹರಿವಿಲ್ಲ. ಎಲ್ಲವೂ ಹಿತ ಮಿತ. ಇತರ ಇರಾನಿ ಚಿತ್ರಗಳಂತೆ ಮಾನವೀಯ ಸಂಬಂಧಗಳಿಗೆ ಒತ್ತುನೀಡುತ್ತಾ ಸಾಗುವ ಚಿತ್ರ ಬದುಕಿನಲ್ಲಿ ಕಾಡುವ ಭಾವನಾತ್ಮಕ ಸಂಘರ್ಷಗಳ ಮೇಲೆ ಬೆಳಕುಚೆಲ್ಲುತ್ತಾ ಎರಡು ಗಂಟೆಗಳ ಕಾಲ ಪ್ರೇಕ್ಷಕನ ಮನದಲ್ಲಿ ತನ್ನ ಛಾಪುಮೂಡಿಸಿ ಬಹುಕಾಲ ಕಾಡುತ್ತದೆ.

ಜಯಲಕ್ಷ್ಮೀ ಜೆ.ಆಳ್ವ

ಮುಂದೆ ಓದಿ
6:53 PM

ಮುಗಿಯದ ರೀಲು...

Posted by ekanasu

ಅಂಕಣ
ಕರ್ಮಯೋಗಿ ಗುಂಡಿಬೈಲು

ಸವಿಗರೆವುದು ನೆಲ
ಸಂಸ್ಕರಿಸುತ ನಾವದನುಪಚರಿಸೆ
ಸವಿಗರೆವುದು ಮನ
ಸನ್ಮೌಲ್ಯಗಳಿಂದದನುಪಚರಿಸೆ
ಸವಿಗರೆವುದು ಜಗ
ಸದ್ ಭಾವದಿನಾವದನುಪಚರಿಸೆ.



ಗುಂಡಿಬೈಲು ಶ್ರೀನಿವಾಸ್ ಅವರನ್ನು ಬಣ್ಣಿಸಲು ಈ ಕವಿವಾಣಿ ಸಾಕು. ಅಂಡಮಾನದಿಂದ ಅರಬ್ಬಿಸಮುದ್ರ ತಟದ ಮಂಗಳೂರಿಗೆ ಮಡದಿ ಮಕ್ಕಳೊಡನೆ ವಲಸೆ ಬಂದಾಗ ತಮ್ಮವರಂತೆ ನಮ್ಮನ್ನೆಲ್ಲ ಅಪ್ಪಿಕೊಂಡರು. ನಮ್ಮ ಮನೆಯವರಾದರು ಶ್ರೀನಿವಾಸ್. ಕಾಡುಮೇಡುಗಳಲ್ಲಿ ಕಟ್ಟಕಡೆಯ ಜನರನ್ನರಸಿ ಹೊರಟೆವು. ಅದೊಂದು ಅಪೂರ್ವ ಕ್ಷೇತ್ರಪ್ರಚಾರ.
ಸರಳ ಜೀವಿ ಶ್ರೀನಿವಾಸ್ ಅವರನ್ನು ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ. ಅನ್ಯರ ನಡಾವಳಿ ಅಸಹ್ಯವಾದಾಗಲೂ ಅವರದು ಕೇಡಿಲ್ಲದ, ಕೇಡೆಣಿಸದ ಪ್ರತಿನಡೆ. ಅವರಿಗನುರೂಪದ ಮಡದಿ, ಮಕ್ಕಳಿಬ್ಬರೂ ಮಂಜುನಾಥ, ರಾಘವೇಂದ್ರ.
ಆ ಮೇಲೆ ಕ್ಷೇತ್ರಪ್ರಚಾರ ಪ್ರಾದೇಶಿಕ ಅಧಿಕಾರಿಯಾದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದೇಶದ ಎರಡನೆಯ ಸಂಪೂರ್ಣ ಸಾಕ್ಷರ ಜಿಲ್ಲೆಯಾಗಿಸುವ `ಅಕ್ಷರ ಯಜ್ಞದಲ್ಲಿ ನಾವಿಬ್ಬರೂ ಕೂಡಿದೆವು. ನಮ್ಮ ಅಳಿಲ ಸೇವೆಗೆ ಕ್ಷೇತ್ರಪ್ರಚಾರ ಮಹಾನಿರ್ದೇಶಕರು ನಮ್ಮಿಬ್ಬರಿಗೂ ಒಂದೇ ಸಲ ಪ್ರಶಂಸಾಪತ್ರ ಕೊಟ್ಟಾಗ ಗುಂಡಿಬೈಲು ಶ್ರೀನಿವಾಸ್ ಅವರ ಕರ್ಮಯೋಗದ ಫಲದಲ್ಲಿ ನನಗೂ ಪಾಲು. ನನ್ನ ಬದುಕಿನ ಹಸಿರು ಹಸಿರಾಗಿ ನನ್ನುಸಿರುರುವ ತನಕ ನನ್ನೊಂದಿಗಿರುವ ಮೆಲುಕು. ಅವರಿಗೆ ಶುಭ ಹರಸುವುದು ನನ್ನ ಸುಯೋಗ.

ಖಾದ್ರಿ ಎಸ್. ಅಚ್ಯುತನ್

ಮುಂದೆ ಓದಿ
| | |Home