ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ


ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮನಸ್ಸನ್ನು ಕಲುಕಿಸಿದ ಮಂಗಳೂರು ವಿಮಾನ ದುರಂತದ ಬಗ್ಗೆ ಕತಾರ್ ಕನ್ನಡಿಗ ವಿಜಯ ಸುವರ್ಣ ಅವರು ಈ ಕನಸಿಗಾಗಿ ಲೇಖನವನ್ನು ಬರೆದು ಕಳುಹಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. - ಸಂ.




೨೦೧೦ ಮೇ ೨೧. ಮಂಗಳೂರು ಹಾಗೂ ಸನಿಹದ ಪ್ರದೇಶಗಳ ವಿದೇಶದಲ್ಲಿರುವ ನಾಗರಿಕರ ಹಾಗೂ ಅವರ ಮನೆಮಂದಿಯ ಜೀವನದಲ್ಲಿ ಮರೆಯಲಾರದ ಅತ್ಯಂತ ಕರಾಳ ದಿನ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನವೀನ ಟರ್ಮಿನಲ್ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅದೇ ನಿಲ್ದಾಣ ಭಯಾನಕ ದುರಂತವೊಂದನ್ನು ತನ್ನ ಚರಿತ್ರೆಯಲ್ಲಿ ದಾಖಲಿಸಿಕೊಂಡಿತು.



ದುರ್ಘಟನೆ ನಡೆದ ಪ್ರದೇಶದ ಅಕ್ಕಪಕ್ಕದ ಜನ ಬೆಳಿಗ್ಗೆ ನಿದ್ದೆಯಿಂದೆದ್ದು ಕಣ್ಣುಬಿಡುವ ಸಮಯದಲ್ಲೇ ಘೋರದುರಂತದ ದ್ರಶ್ಯ ಕಂಡು ದಿಗ್ಮೂಢರಾದರು. ದೇಶದ ಉದ್ದಗಲದಲ್ಲಿ ಮಾತ್ರವಲ್ಲ ವಿದೇಶದಲ್ಲಿವ ಪ್ರತಿಯೊಬ್ಬ ಜನತೆಯೂ ಮಂಗಳೂರಿನಲ್ಲಿ ಘಟಿಸಿದ ಘಟನೆಗೆ ತತ್ತರಿಸಿ ಕಣ್ಣೀರುಮಿಡಿಯಿತು. ವಿಕ್ರತಿ ಸಂವತ್ಸರವು ತನ್ನ ವಿಕ್ರತ ರೂಪವನ್ನು ಈ ಮೂಲಕ ತೋರಿಸಿಯೇ ಬಿಟ್ಟಿತು.

ಕೆಲವಷ್ಟು ಕಾಲ ತನ್ನ ಒಲುಮೆಯ ತಾಯ್ನಾಡನ್ನು ತೊರೆದು ದೂರದಲ್ಲಿದ್ದು ಹುಟ್ಟಿದನೆಲವನ್ನು ಎಂದು ಕಂಡೇನೋ ಎಂಬ ತವಕದಿಂದ ಬಂದು ತಾಯ್ನಾಡಿಗೆ ಕಾಲೂರುವ ನಮ್ಮ ಜನರ ಹಂಬಲ ಹಂಬಲದಲ್ಲೇ ಕಣ್ಮರೆಯಾಯಿತು. ವಿದೇಶದಿಂದ ಹಾರುತ್ತಾ ಬಂದು ಇನ್ನೇನು ತನ್ನ ತಾಯ್ನಾಡನ್ನು ಸ್ಪರ್ಶಿಸುತ್ತೇನೆ ಎಂಬ ಆ ನೆನಪೇ ಮೈಮನವನ್ನು ಪುಳಕಿಸುತ್ತದೆ. ವಿದೇಶದಲ್ಲಿ ನೆಲಸಿರುವ ನಮ್ಮಂತವರು ತಾಯ್ನಾಡಿಗೆ ತಲುಪಿ ವಿಮಾನದಿಂದ ಕೆಳಕ್ಕಿಳಿದು ಪವಿತ್ರ ಮಾತ್ರಭೂಮಿಯನ್ನು ಸ್ಪರ್ಶಿಸಿದ ತತ್‍ಕ್ಷಣ ಬಾಗಿ ಜನ್ಮಭೂಮಿಗೊಮ್ಮೆ ನಮಸ್ಕರಿಸಿದಾಗಲೇ ಮನಸ್ಸಿಗೆ ಹಿತವೆನಿಸುತ್ತದೆ.

*

*

ಮುನ್ನಾದಿನ ರಾತ್ರಿ ೧.೧೫ ಕ್ಕೆ ಹುಟ್ಟಿದ ನೆಲವನ್ನು ಸೇರುವ ಸಂತಸದಿಂದ ದುಬಾಯಿಯಲ್ಲಿ ವಿಮಾನವೇರಿಕುಳಿತ ನತದ್ರಷ್ಟ ಬಂಧುಗಳಿಗೆ ಬೆಳಗ್ಗಿನ ಜಾವದ ಘೋರ ದುರಂತದ ಬಗ್ಗೆ ಕಿಂಚಿತ್ತೂ ಮುನ್ಸೂಚನೆಯನ್ನೂ ನೀಡದೇ ಜವರಾಯ ಹಟಾತ್ತನೇ ಎದುರಿಗೆ ಬಂದು ನಿಂತಿದ್ದ... ನಿಜ, ವಿಧಿಯ ವಿಕಟ ಅಟ್ಟಹಾಸವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ಪೈಲೆಟ್‍ನ ಚಿಕ್ಕ ಪ್ರಮಾಧ ಅಥವಾ ಗಡಿಬಿಡಿಯ ತಪ್ಪುನಿರ್ಧಾರವೇ ಇಡೀ ದುರಂತಕ್ಕೆ ನಾಂದಿಯಾಯಿತು. ಈ "ಲ್ಯಾಪ್‍ಟಾಪ್ ನಿಲ್ದಾಣ" ನಿಲ್ದಾಣದ ಬಗ್ಗೆ ಪೂರ್ತಿ ಅರಿವಿದ್ದ ಪೈಲೆಟ್‍ಗಳಿಗೆ ಸ್ವಲ್ಪ ತಪ್ಪಿದರೂ ಗಂಡಾಂತರ ಕಟ್ಟಿಟ್ಟದ್ದು ಎಂಬ ವಿಚಾರ ಗೊತ್ತೇ ಇದ್ದರೂ ಹೀಗೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕು. ಬದುಕುಳಿದವರು ಅವಘಡವನ್ನು ಸೂಚಿಸುವ ಯಾ ಎಚ್ಚರಿಸುವ ಬಗ್ಗೆ ಯಾವುದೇ ಸೂಚನೆ ವಿಮಾನದಲ್ಲಿ ದೊರೆಯಲಿಲ್ಲ ಎಂದಿದ್ದರಾದರೂ ತಮ್ಮ ಅಂತ್ಯ ಖಂಡಿತ ಎಂಬುದು ಮನವರಿಕೆಯಾದಾಗ ಸೂಚನೆ ನೀಡುವ ಸಮಯಪ್ರಜ್ಞೆ ಮತ್ತು ಮನಃ ಸ್ಥೈರ್ಯ ಎಂತವರಿಗಾದರೂ ಎಲ್ಲಿಂದ ಬಂದೀತು...



ನಾವು ಕೂಡ ರಜೆಯಲ್ಲಿ ಸ್ವದೇಶಕ್ಕೆ ಹೊರಡುವಾಗ ನಾವು ದುಡಿಯುತ್ತಿರುವ ಅನ್ನಧಾತನೆಲವನ್ನು ಬಿಟ್ಟು ನಮ್ಮ ಒಲುಮೆಯ ತಾಯ್ನಾಡನ್ನು ಅಪ್ಪಿಕೊಳ್ಳುವ ಆತುರ ಅದೆಷ್ಟಿರುತ್ತದೆಂಬುದನ್ನು ಚೆನ್ನಾಗಿ ಅರಿತವರು. ಅಲ್ಲಿ ನಮ್ಮ ಪ್ರೀತಿಪಾತ್ರರು ಬಂದಿಳಿಯುವ ನಮ್ಮನ್ನು ಎದುರುಗೊಳ್ಳಲು, ಕರೆದೊಯ್ಯಲು ದೂರದಿಂದ ಬಂದು ಕಾತರದಿಂದ ಕಾದುನಿಲ್ಲುವ, ನಮ್ಮ ಮುಖದರ್ಶನವಾದಾಗ ಅವರ ಮುಖದಲ್ಲಿ ಚಿಮ್ಮುವ ಸಂತಸದ ರೇಖೆಯನ್ನು ನೋಡಿ ಪ್ರತ್ಯಕ್ಷ ಅನುಭವಿಸುವವರು ನಾವು. ಅಂತಹದೇ ವರ್ಣಿಸಲಾಗದ ಭಾವನೆ ನಮ್ಮ ಹ್ರದಯದಲ್ಲಿಯೂ ಕೂಡ ಆ ಕ್ಷಣ ಹೆಪ್ಪುಗಟ್ಟಿರುತ್ತದೆ. ಅದೇ ರೀತಿ ಮೇ ೨೨ರ ೨೦೧೦ರ ಮುಂಜಾನೆ ತಮ್ಮವರನ್ನು ಕರೆದೊಯ್ಯಲು ಬಂದು ಕಾತರದಿಂದ ಕಾಯುತ್ತಾ ವಿಮಾನ ಬಂದು ಇಳಿಯುವುದನ್ನು ಕಂಡು ಸಂತಸ ಅನುಭವಿಸುತ್ತಿರುವ ಕ್ಷಣದಲ್ಲೇ ವಿಮಾನದ ಪತನ ನೋಡಿ ಅದೆಂತಹಾ ಮಾನಸಿಕ ಅಘಾತವಾಗಿರಬಹುದು ಎಂಬುದನ್ನು ಊಹಿಸಿದರೆ ಮನಮುದುಡುತ್ತದೆ. ವಿಮಾನದ ಒಳಗಿದ್ದ ಪ್ರಯಾಣಿಕರು ಅಪಘಾತದ ಅರಿವಾದಾಗ, ಸುತ್ತಲೂ ಬೆಂಕಿಹತ್ತಿಕೊಂಡಾಗ ತಾವಿನ್ನು ಬದುಕುವುದು ಸಾದ್ಯವೇ ಇಲ್ಲವೆಂದು ಮನವರಿಕೆಯಾದಾಗ, ತಮ್ಮೊಂದಿಗಿದ್ದ ಪುಟ್ಟ ಕಂದಮ್ಮಗಳನ್ನು ಅಪ್ಪಿಕೊಂಡು, ತಮ್ಮ ಪ್ರೀತಿಪಾತ್ರರನ್ನು ನೆನೆಯುತ್ತಾ ಅದೆಂತಹಾ ವೇಧನೆಯನ್ನು ಅವರು ಅನುಭವಿಸಿರಬಹುದು... ಊಹೆಗೂ ಸಿಲುಕದ್ದು. ವಿಧಿಯ ನಿರ್ಣಯವನ್ನು ಮೀರಲು ಯಾರಿಂದ ಸಾಧ್ಯ?
ಚಿತ್ರ ಸಹಕಾರ : ಸತೀಶ್ ಇರಾ.

ಮುಂದೆ ಓದಿ
12:39 PM

ರಿಯಲ್ ಹೀರೋ...

Posted by ekanasu

ವಿಶೇಷ ವರದಿ





ಕೊನೆಗೂ ಆತ ತನ್ನ ಸಾಧನೆಯನ್ನು ಪೂರೈಸಿದ. ತನ್ಮೂಲಕ ರಿಯಲ್ ಹೀರೋ ಎನಿಸಿಕೊಂಡ. ಇದು ಬೇರ್ಯಾರೂ ಅಲ್ಲ.ಅಮೆರಿಕಾದ 13ವರುಷದ ಪುಟ್ಟ ಬಾಲಕನೊಬ್ಬನ ಕಥೆ. ಈತ ಏಳು ಬೃಹತ್ ಶಿಖರಗಳನ್ನು ಏರುವ ಕನಸುಕೊಂಡಿದ್ದ ಅದು ನನಸಾಗಿದೆ. ಕ್ಯಾಲಿಫೋರ್ನಿಯಾದ ಈ ಪೋರ ಇದೀಗ ಮೌಂಟ್ ಎವರೆಸ್ಟ್ ಶಿಖರದ ತುದಿ ತಲುಪಿ ತನ್ನ ಆಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾನೆ. ತನ್ಮೂಲಕ ಎವರೆಸ್ಟ್ ಶಿಖರ ಏರಿದ ಅತ್ಯಂತ ಕಿರಿಯ ಬಾಲಕನೆಂಬ ದಾಖಲೆ ಮೆರೆದಿದ್ದಾನೆ.

ಭಾರತದ ದಾಖಲೆ ಮುರಿಯಿತೇ...
ಉತ್ತರ ಪ್ರದೇಶದ ನೋಯಿಡಾ ಎಂಬಲ್ಲಿನ 16ವರುಷದ ಅರ್ಜುನ ಬಾಜ್ ಪೈ ಮೊನ್ನೆ ಮೊನ್ನೆ ಅಂದರೆ ಮೇ 22ರಂದು ಯಶಸ್ವಿಯಾಗಿ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿಗೆ ತಲುಪಿ ಅಚ್ಚರಿ ಹುಟ್ಟಿಸಿದ ಜೊತೆಗೆ ಎವರೆಸ್ಟ್ ಏರಿದ ಜಗತ್ತಿನ ಅತೀ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನೂ ಬರೆದ. ಆದರೆ ಇದೀಗ ಮೌಂಟ್ ಎವರೆಸ್ಟ್ ಏರಿದ ರೊಮೆರೋ ಈ ದಾಖಲೆ ಮುರಿದಿದ್ದಾನೆ. ಕಾರಣ ಈತ 13ವರುಷದ ಬಾಲಕ.

ಇನ್ನೊಂದಷ್ಟು ಮಾಹಿತಿ

ಮೌಂಟ್ ಎವರೆಸ್ಟ್ ಪ್ರಪಂಚದ ಅತ್ಯಂತ ಎತ್ತರದ ಪರ್ವತ ಶಿಖರ. ಇದು ಸಮುದ್ರ ಮಟ್ಟದಿಂದ ಸುಮಾರು ಒಂಭತ್ತು ಕಿಲೋ ಮೀಟರ್ ಎತ್ತರದಲ್ಲಿ ಇದೆ. ಇದರ ನಿಖರ ಎತ್ತರ ಭಾರತೀಯ ಭೂ ಮಾಪಕರ ಪ್ರಕಾರ ೮೮೪೮ ಮೀಟರ್ಗಳು. ಇದು ನೇಪಾಳ ಹಾಗೂ ಟಿಬೆಟ್ಟಿನ ಮದ್ಯೆ ಇದೆ. ನೇಪಾಳದಲ್ಲಿ ಇದನ್ನು "ಸಾಗರ ಮಾತಾ" ಎಂಬ ಹೆಸರಿನಿಂದ ಕರೆಯುತ್ತಾರೆ. ಇದನ್ನು ಪ್ರಥಮ ಬಾರಿಗೆ ಸರ್ ಎಡ್ಮಂಡ್ ಹಿಲರಿ ಹಾಗೂ ತೇನ್ ಸಿಂಗ್ ಮೇ ೨೯, ೧೯೫೩ ರಂದು ಏರಿದರು.

ಮುಂದೆ ಓದಿ
7:33 PM

ಚಿನ್ನ...ಚಿನ್ನ...

Posted by ekanasu

ರಾಜ್ಯ - ರಾಷ್ಟ್ರ





ಬೆಂಗಳೂರು: ಕೋಲಾರದಲ್ಲಿ ಚಿನ್ನದ ಗಣಿ ಎಂದು ಜಗತ್ ಪ್ರಸಿದ್ಧಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ...ಈಗ ಧಾರಾವಾಡದ ಮಂಗಳಗಟ್ಟಿಯಲ್ಲೂ ಚಿನ್ನದ ಗಣಿ ಇದೆಯೇ ಎಂಬ ಒಂದು ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರವೂ ಲಭಿಸಿದೆ. ಈ ಗ್ರಾಮದ 200 ಎಕ್ಕರೆಗಳಷ್ಟು ವಿಸ್ತೀರ್ಣ ಪ್ರದೇಶದಲ್ಲಿ ಈ ಚಿನ್ನದ ಅದಿರು ಪತ್ತೆಯಾಗಿದ್ದು ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ರವಾನಿಸಲಾಗಿದೆ.
ಏಳು ವರುಷಗಳಿಂದ ಈ ಪ್ರದೇಶದಲ್ಲಿ ಡೆಕ್ಕನ್ ಓರ್ ಎಕ್ಸ್ ಫ್ಲೋರೆಡ್ ಕಂಪೆನಿ ಈ ಪ್ರದೇಶದಲ್ಲಿ ಚಿನ್ನ ಇರುವುದನ್ನು ಗುರುತಿಸಿದ್ದು ಸಂಸ್ಥೆಯ ನಿರ್ದೇಶಕ ಡಾ.ವಾಸುದೇವ್ ಇದನ್ನು ಖಚಿತಪಡಿಸಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಳಗಾವಿ: ಕರ್ನಾಟಕ ವಾಯವ್ಯ ಪದವೀಧರ ಕ್ಷೇತ್ರದಿಂದ ಈ ಕೆಳಕಂಡ ಇಬ್ಬರು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಿ.ಎಂ. ಶಿರೋಳ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಪ್ರಥಮ ದಿನವಾದ ಇಂದು ಈ ಕ್ಷೇತ್ರಕ್ಕೆ ಮಹಾಂತೇಶ ಕೌಜಲಗಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), . ಬಸವರಾಜ ಕೌಜಲಗಿ (ಪಕ್ಷೇತರ) ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ವಾಯವ್ಯ ಶಿಕ್ಷಕರ ಹಾಗೂ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಸಲ್ಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಮುಂದೆ ಓದಿ
7:22 PM

ಶ್ರದ್ಧಾಂಜಲಿ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು : ಬಜ್ಪೆಯಲ್ಲಿ ಮೇ 22 ರಂದು ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತ ಪಟ್ವವರ ಸ್ಮರಣಾರ್ಥ ಜಿಲ್ಲಾಡಳಿತ ಭಾವಪೂರ್ಣ ಶ್ರದ್ದಾಂಜಲಿ ಮತ್ತು ಶೋಕ ಸಭೆಯನ್ನು ಏರ್ಪಡಿಸಿತ್ತು. ವಿಮಾನ ನಿಲ್ದಾಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸರ್ವಧರ್ಮ ಪ್ರಾರ್ಥನೆ ಮತ್ತು 2 ನಿಮಿಷ ಮೌನಾಚರಣೆ, ಪೊಲೀಸ್ ಬ್ಯಾಂಡ್ ಮೂಲಕ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ವಿಶಿಷ್ಟವಾದ ಮುಖವರ್ಣಿಕೆ ,ಆಕರ್ಷಕ ವಸ್ತ್ರಾಲಂಕಾರ ಹಿಮ್ಮೇಳದಲ್ಲಿ ಸುಶ್ರಾವ್ಯವಾದ ಭಾಗವತಿಕೆ,ಚೆಂಡೆ ಮದ್ದಳೆಗಳ ಸದ್ದು, ಇವುಗಳಿಗೆ ತಕ್ಕಂತೆ ಕಲಾವಿದರ ಆಂಗಿಕ ಅಭಿನಯ, ನೃತ್ಯ , ಇದು ನಮ್ಮ ಯಕ್ಷಗಾನ. ಪೌರಾಣಿಕ-ಐತಿಹಾಸಿಕ ಕಥಾ ಪ್ರಸಂಗಗಳನ್ನು ತನ್ನದೇ ರೀತಿಯಲ್ಲಿ ಪ್ರಸ್ತುತ ಪಡಿಸುವ ವಿಶಿಷ್ಟ ಕಲೆ. ಕಲೆ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಬದಲಾವಣೆಗಳು ಮತ್ತು ಹೊಸಪ್ರಯೋಗ ಕಂಡುಬರುವುದು ಸಹಜ.ಯಕ್ಷಗಾನದಲ್ಲಿ ಕೂಡ ಕಾಲಕ್ಕೆ ತಕ್ಕಂತೆ ಅನೇಕ ಮಾರ್ಪಟುಗಳು ಕಂಡುಬಂದಿದೆ.ಕಳೆದ ಎರಡು 3 ವರ್ಷಗಳಿಂದ ಯಕ್ಷಗಾನದಲ್ಲಿ ಸಿನಿಮಾದ ಕಥೆ ಮತ್ತು ಹಾಡು ಪ್ರಯೋಗ ಸೇರ್ಪಡೆಗೊಂಡು ಚರ್ಚೆಗೆ ವಿಷಯವಾಗಿತ್ತು.ಯಕ್ಷಗಾನಕ್ಕೆ ಇಂತಹ ಪ್ರಯೋಗ ಬೇಕಿತ್ತೆ? ಎನ್ನುವುದು ಹಲವರಲ್ಲಿ ಕಾಡಿದ ಪ್ರಶ್ನೆ. ಆದರೆ ಇತ್ತೀಚೆಗೆ ಇದಕ್ಕಿಂತ ಹೊರತಾಗಿ ಯಕ್ಷಗಾನದಲ್ಲಿ ವಿನೂತನ ಪ್ರಯೋಗ ನಡೆಯುತ್ತಿದೆ.



ಬಹಳಷ್ಟು ಜನರನ್ನು ಆಕರ್ಷಿಸುವ ಮಾಧ್ಯಮವಾದ ಜಾಹೀರಾತುಗಳಲ್ಲಿ ಆಕರ್ಷಕ ಕಲೆಯಾದ ಯಕ್ಷಗಾನವು ವಿಶೇಷವಾದ ಛಾಪನ್ನು ಮೂಡಿಸಿದೆ.ರಾಷ್ಟ್ರೀಕೃತ ಬ್ಯಾಂಕುಗಳ,ಇಂಟರ್ನ್ಯಾಶನಲ್ ಹೋಟೆಲ್ ಗಳ, ಮೊಬೈಲ್ ಕಂಪೆನಿಗಳಗಳು,ಶಿಕ್ಷಣ ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ಯಕ್ಷಗಾನ ಛಾಯಾಚಿತ್ರಗಳನ್ನು ಮತ್ತು ಸ್ತಬ್ದ ಚಿತ್ರಗಳನ್ನು ಬಳಸುತ್ತಿದ್ದಾರೆ. ದಕ್ಷಿಣಕನ್ನಡದಲ್ಲಿ ನಡೆಯುವ ಧಾರ್ಮಿಕ-ಸಾಂ ಕಾರ್ಯಕ್ರಮಗಳಲ್ಲಿ ಯಕ್ಷಗಾನವು ವಿವಿಧ ರೀತಿಗಳಲ್ಲಿ ಬಳಕೆಗೊಂಡು ರಾರಾಜಿಸುತ್ತಿದೆ. ಗಣ್ಯರಿಗೆ,ಕಲಾವಿದರಿಗೆ,ವಿಜೇತರಿಗೆ ನೀಡುವ ಸ್ಮರಣಿಕೆ,ಬಹುಮಾನಗಳು ಯಕ್ಷಗಾನದ ಕಿರೀಟ ಮಾದರಿಯಲ್ಲಿ ಇರುತ್ತದೆ. ವೇದಿಕೆಗಳ ಅಲಂಕಾರದಲ್ಲೂ ಯಕ್ಷಗಾನದ ಕಂಪುಹರಡಿದೆ.

ಯಕ್ಷಗಾನವೊಂದು ಪ್ರಬಲವಾದ ಕಲೆಯಾಗಿದೆ,ಹಾಗೆಯೇ ಜಾಹೀರಾತು ಕೂಡ ಜನರನ್ನು ಶೀಘ್ರವಾಗಿ ತನ್ನೆಡೆಗೆ ಸೆಳೆಯುವ ಪರಿಣಾಮಕಾರಿ ಮಾಧ್ಯಮ. ಜಾಹೀರಾತುಗಳಲ್ಲಿ ಯಕ್ಷಗಾನವನ್ನು ಅದರ ಮೂಲಸ್ವರೂಪಕ್ಕೆ ದಕ್ಕೆಬಾರದಂತೆ ಬಳಸಿದರೆ ಯಕ್ಷಗಾನ ಮತ್ತಷ್ಟು ಪ್ರಸಿದ್ದಿ ಹೊಂದಬಹುದು.ಜೊತೆಗೆ ರಾಷ್ಟೀಯ-ಅಂತರಾಷ್ಟೀಯ ಕ್ಷೇತ್ರಗಳ-ಜಾಹೀರಾತುಗಳಲ್ಲಿ ಯಕ್ಷಗಾನದ ಬಳಕೆಯಾದರೆ ಅಂತರಾಷ್ಟೀಯ ಮಟ್ಟದಲ್ಲಿ ನಮ್ಮೂರ ಕಲೆ' ಮತ್ತಷ್ಟು ಮಿನುಗಹಬಹುದು.
ಯಶೋಧರ.ವಿ.ಬಂಗೇರ
ಮೂಡುಬಿದಿರೆ

ಮುಂದೆ ಓದಿ
4:22 PM

ಉಗ್ರರ ಅಟ್ಟಹಾಸ

Posted by ekanasu

ರಾಜ್ಯ - ರಾಷ್ಟ್ರ
ಲಾಹೋರ್ :ಲಾಹೋರ್ ನಲ್ಲಿ ಉಗ್ರರ ಅಟ್ಟಹಾಸ ಮತ್ತೊಮ್ಮೆ ಮೆರೆದಿದೆ. ಉಗ್ರರು ಗ್ರಾನೆಟ್ ಬಾಂಬ್ ಸಿಡಿಸಿ ತಮ್ಮ ಕ್ರೌರ್ಯಮೆರೆದಿದ್ದಾರೆ. ಇದರಿಂದ ಹಲವಾರು ಮಂದಿ ಸಾವನ್ನಪ್ಪಿದ್ದು ಅನೇಕ ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಉಗ್ರ ಹತನಾಗಿದ್ದು, ಮತ್ತೋರ್ವ ಸೆರೆಸಿಕ್ಕಿದ್ದಾನೆ. ಪಾಕಿಸ್ತಾನದ ಕೈಗಾರಿಕಾ ನಗರಿಯೆಂದೇ ಪ್ರಸಿದ್ಧಿ ಪಡೆದ ಲಾಹೋರ್ ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗರ್ಹಿ ಸಾಹು ಮಸೀದಿಯ ಮೇಲೆ ಈ ದಾಳಿ ಸಂಭವಿಸಿದೆ. ಮಸೀದಿಯಲ್ಲಿ ನಮಾಜು ಸಲ್ಲಿಸುತ್ತಿದ್ದ ಸಂದರ್ಭ ದಾಳಿ ಕೈಗೊಳ್ಳಲಾಗಿತ್ತು. ಇದೀಗ ಉಗ್ರರನ್ನು ಬಂಧಿಸಲು ಹರಸಾಹಸ ಪಡಲಾಗುತ್ತಿದೆ.ತಾಲಿಬಾನ್ ಸಂಘಟನೆ ಈ ದಾಳಿಯ ಹೊಣೆಹೊತ್ತುಕೊಂಡಿದೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಕ್ಕಳ ಮೇಲೆ ಟಿ.ವಿ.ಬೀರುತ್ತಿರುವ ಪರಿಣಾಮಗಳ ಕುರಿತಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯುರೋಮುಖ್ಯಸ್ಥ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಅವರ ಸಂಶೋಧನಾ ಗ್ರಂಥದ ಅನಾವರಣ ಸಮಾರಂಭ ಮೇ.29ರಂದು ಮಂಗಳೂರು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ರೆ.ಫಾ.ಡೆನ್ನಿಸ್ ಡೆ'ಸ ಪುಸ್ತಕ ಅನಾವರಣ ಗೈಯಲಿದ್ದಾರೆ. ಪ್ರೊ.ಕೆ.ವಿ.ನಾಗರಾಜ್ ಮುಖ್ಯ ಅತಿಥಿಗಳು. ನೀವೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬಹು ಪುರಾತನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ಶ್ರೀ ಕಾಳಹಸ್ತಿ ಶಿವದೇಗುಲದ ರಾಜಗೋಪುರ ಕುಸಿದು ಬಿದ್ದಿದ್ದು ಅನೇಕ ಮಂದಿ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ಘಟನೆಯ ಜೊತೆ ಜೊತೆಗೆ `ಇದೊಂದು ಅಪಶಕುನ'ಎಂಬ ಅಂಶ ಮನೆಮಾತಾಗುವಂತಾಗಿದೆ. ರಾಜಗೋಪುರ ಕುಸಿತ ಹಲವಾರು ಸಂದೇಹಗಳಿಗೆ ಎಡೆಮಾಡಿದ್ದು ಒಟ್ಟಾರೆಯಾಗಿ ಆತಂಕದ ವಾತಾವರಣ ಸೃಷ್ಠಿಗೆ ಕಾರಣವಾಗಿದೆ.
ದುರಸ್ತಿ ಆಗಿಲ್ಲ
ದೇಗುಲದ ರಾಜಗೋಪುರದಲ್ಲಿ ಮೊದಲೇ ಬಿರುಕಿತ್ತು . ಈ ಬಗ್ಗೆ ಅನೇಕ ಮಾಧ್ಯಮಗಳು ಸಂಬಂಧಪಟ್ಟವರ ಗಮನ ಸೆಳೆದಿತ್ತು. ಆದರೆ ಅದರ ದುರಸ್ತಿಕಾರ್ಯಕ್ಕೆ ಮುಂದಾಗಿರಲಿಲ್ಲ. ಆದರೆ ನಿರಂತರವಾಗಿ ಪ್ರಕೃತಿಯಲ್ಲಿ ಆಗುತ್ತಿರುವ ವೈಪರಿತ್ಯವೂ ಇದಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಬೆಚ್ಚಿಬೀಳಿಸಿದ ಲೈಲಾ ಚಂಡಮಾರುತದ ಹೊಡೆತವೂ ಒಂದಷ್ಟು ಗೋಪುರಕ್ಕೆ ಹಾನಿಮಾಡಿತ್ತು ಎಂಬ ಮಾತು ಕೇಳಿಬರುತ್ತಿದೆ. ಇಷ್ಟೇ ಅಲ್ಲದೆ ಇಲ್ಲೇ ಸನಿಹದಲ್ಲೇ ಕೊಳವೆ ಬಾವಿ ತೋಡುತ್ತಿರುವುದು ನಿರಂತರವಾಗಿ ಇಂತಹ ಕಾರ್ಯ ನಡೆಯುತ್ತಿರುವುದರಿಂದಲೂ ಈ ಗೋಪುರಕ್ಕೆ ಹಾನಿ ಸಂಭಿವಿಸಲು ಕಾರಣ ಎನ್ನಲಾಗುತ್ತಿದೆ.



ಇತಿಹಾಸ
ಈ ಗೋಪುರಕ್ಕೆ ತನ್ನದೇ ಆದ ಐತಿಹ್ಯವಿದೆ. ಕ್ರಿ.ಶ.1516ರಲ್ಲಿ ಗಜಪತಿ ಸಾಮ್ರಾಜ್ಯದ ಮೇಲೆ ವಿಜಯ ಸಾಧಿಸಿದ ಕುರುಹಾಗಿ ಶ್ರೀ ಕೃಷ್ಣದೇವರಾಯ 7 ಅಂತಸ್ತು ಹೊಂದಿದ 136ಅಡಿ ಎತ್ತರದ ರಾಜಗೋಪುರ ನಿರ್ಮಿಸಿದ ಎಂಬುದು ಇದರ ಇತಿಹಾಸ. ಆದರೆ ಇವು ಇಂದು ಧಾರಾಶಾಹಿಯಾಗಿದೆ. ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಶೋಭಾ ಮತ್ತೆ `ಗೃಹ ಪ್ರವೇಶ'ವೇ... ಇದೇನು ಎಂಬ ಅಚ್ಚರಿಯೇ...ಆದರೂ ಹೌದು...ಇದು ಕೇವಲ ಗಾಸಿಪ್ ಅಲ್ಲ...ಶೋಭಾ ಕರಂದ್ಲಾಜೆ ಇಡೀ ರಾಜ್ಯದ ಗೃಹಮಂತ್ರಿ ಪಟ್ಟವನ್ನಲಂಕರಿಸಲಿದ್ದಾರೆ. ಇದೆಲ್ಲವೂ ಸದ್ಯವೇ ನಡೆಯಲಿದೆ...



ಹೌದು ಈ ಬಿಸಿ ಬಿಸಿ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ಬಹುಚರ್ಚಿತವಾಗುತ್ತಿದೆ. ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಶೋಭಾ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.ಅಂದಹಾಗೆ ಮುಖ್ಯಮಂತ್ರಿಯವರ `ಆಪ್ತ'ರೆನಿಸಿಕೊಂಡಿದ್ದ ಶೋಭಾ ತಮ್ಮ ಕ್ಷೇತ್ರದಲ್ಲಿ ಮಾತ್ರ ಯಾವುದೇ ಕಳಂಕವಿಲ್ಲದೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಅಷ್ಟೇ ಮುಖ್ಯ.
ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿಗಳು. ಆದರೆ ರಾಜ್ಯಸರಕಾರದ ಸಂಪುಟದಲ್ಲಿ 3ಹುದ್ದೆಗಳು ಖಾಲಿ ಇವೆ.ಇಲ್ಲಿ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮಂದಿ ಸೇರ್ಪಡೆಯಾಗಲಿದ್ದಾರೆ ಎಂಬ ಅಂಶ ಇದೀಗ ಬಹು ಚರ್ಚಿತವಾಗುತ್ತಿದೆ. ಏತನ್ಮಧ್ಯೆ ಈಗಿರುವ ಗೃಹಮಂತ್ರಿಗಳನ್ನು `ದೆಹಲಿ'ಗೆ ಕಳುಹಿಸಿ ಅಲ್ಲೊಂದು ಪ್ರಮುಖ ಸ್ಥಾನ ನೀಡುವ ಬಗ್ಗೆಯೂ ಯೋಜನೆ ನಡೆಯುತ್ತಿದೆ. ಒಟ್ಟಿನಲ್ಲಿ ಶೋಭಾ ರನ್ನು ಮತ್ತೆ ಕರೆತರುವ ಎಲ್ಲಾ ಕಾರ್ಯಗಳೂ ಮರೆಯಲ್ಲಿ ನಡೆಯುತ್ತಿವೆ ಎಂಬುದು ಸ್ಪಷ್ಟ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ಜೂನ್ 1ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಇದಾದ ಕೆಲದಿನಗಳಲ್ಲೇ ಕರ್ನಾಟಕಕ್ಕೂ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಲೈಲಾ ಚಂಡಮಾರುತದ ಪ್ರಭಾವದಿಂದ ಮಳೆಬಿದ್ದಿದ್ದಾದರೂ ಇದೀಗ ಬಿಸಿಲ ಝಳ ಹೆಚ್ಚಿದೆ. ಸೆಖೆಯ ಪರಿಣಾಮ ಜೋರಾಗಿದೆ. ಕೃಷಿ ಕಾರ್ಮಿಕರು ಕೃಷಿಯ ಕೆಲಸಕ್ಕೆ ಪೂರ್ವತಯಾರಿಯಲ್ಲಿದ್ದಾರೆ. ಒಟ್ಟಾರೆಯಾಗಿ ಮುಂಗಾರು ಮಳೆಯ ಆಗಮನಕ್ಕೆ ಜನತೆ ಕಾಯುತ್ತಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ಮಂಗಳೂರು ವಿಮಾನ ಪಥನದ ಕರಿರಹಸ್ಯ ಶೀಘ್ರ ಬದಲಾಗಬೇಕಾಗಿದೆ. ರಹಸ್ಯ ಹೊಂದಿರುವ ಕರಿಪೆಟ್ಟಿಗೆ ಇದೀಗ ದಕ್ಕಿದ್ದು ಇದು ದುರಂತದ ಸತ್ಯಾಸತ್ಯತೆಗಳನ್ನು ಬಹಿರಂಗಗೊಳಿಸಲಿದೆ. ವಿಮಾನ ಪಥನಕ್ಕೂ ಮೊದಲು ವಿಮಾನದಲ್ಲಿ ಏನೇನು ನಡೆದವು , ಪೈಲೆಟ್ ಕಾರ್ಯವೈಖರಿ, ಪ್ರಯಾಣಿಕರ ಮಾಹಿತಿಗಳು ಈ ಪೆಟ್ಟಿಗೆಯೊಳಗೆ ಭದ್ರವಾಗಿದೆ. ಪ್ರಾಥಮಿಕ ತನಿಖೆಗೊಳಪಡಿಸಿದ ಕರಿಪೆಟ್ಟಿಗೆ ಡೆಲ್ಲಿಗೆ ರವಾನಿಸಲಾಗಿದೆ. ಅದರಲ್ಲಿದ್ದ ಮಾಹಿತಿಗಳನ್ನು ಡೀ ಕೋಡಿಂಗ್ ಮಾಡಲು ಅಮೆರಿಕಾಕ್ಕೆ ಕಳುಹಿಸಲಾಗುತ್ತಿದೆ.



ಹೊಸದಿಗಂತ ದೈನಿಕ ಈ ರೀತಿ ವರದಿ ಮಾಡಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು :ಗೃಹರಕ್ಷಕ ದಳ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಆಧುನಿಕ ಪರಿಹಾರ ಸಲಕರಣೆಗಳ ಅವಶ್ಯಕತೆ ಇದೆ ಎಂದು ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ರಾಜಭವನದ ಗಾಜಿನ ಮನೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗು ಗೃಹ ರಕ್ಷಕ ಮತ್ತು ಪೌರರಕ್ಷಣಾ ದಳದಲ್ಲಿ ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿರುವ 73 ಮಂದಿ ಅಧಿಕಾರಿ ಹಾಗು ಸಿಬ್ಬಂದಿಯವರಿಗೆ 2008-09 ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವದ ಸಂದರ್ಭದ ರಾಷ್ಟ್ರಪತಿ ಸೇವಾ ಪದಕವನ್ನು ನೀಡಿ ಗೌರವಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ಸಂದರ್ಭದಲ್ಲಿ ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ಶ್ರಮವಹಿಸಿ ತಮ್ಮ ಸೇವಾ ಕಾರ್ಯವನ್ನು ಮಾಡಿದ್ದಾರೆ. ವಿದೇಶಗಳಲ್ಲಿ ಬಳಸುವಂತಹ ಆಧುನಿಕ ಪರಿಹಾರ ಸಲಕರಣೆಗಳನ್ನು ಇವರಿಗೂ ಒದಗಿಸಿಕೊಟ್ಟಲ್ಲಿ ರಕ್ಷಣಾ ಕಾರ್ಯಗಳನ್ನು ಇನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಮುಂದೆ ಓದಿ

ಕಾರಿಡಾರ್

ಮಳೆಹುಡುಗಾ, ಮತ್ತೆ ನಿನ್ನ ಕೆಣಕೋಣ ಅನ್ನಿಸ್ತಿದೆ. ಅದೇನೋ ಅಮ್ಮನ ಪ್ರೀತಿಯ ನಂತರ ಸಿಗೋ ಮಡಿಲು ಪ್ರೀತಿಸಿದ ಹುಡುಗ ಹುಡುಗಿಯರದ್ದು ಅಂದಿದೀಯಲ್ವಾ... ನಿನ್ನ ವಾದವನ್ನು ವಿಮರ್ಶಿಸೋಕೆ ಹೋಗೊಲ್ಲ. ಆದ್ರೆ ಒಪ್ಪಿಕೊಳ್ಳಲ್ಲಾ... ಹಾಗಾಗಿ ಮತ್ತೊಂದು ಕಥೆ ಹೇಳ್ತೀನಿ ಸುಮ್ಮನೆ ಕೇಳು... ನಿಜಾನಾ ಅಂತ ಮತ್ತೆ ಯೋಚಿಸು. ಈ ಕಥೆಯೊಳಗಿರುವ ಸಂಬಂಧಕ್ಕೆ ಯಾವುದೇ ಬಂಧನದ ಅಗತ್ಯವಿಲ್ಲ,ವಿಮರ್ಶೆಯ ಚೌಕಗಳಿಲ್ಲ, ಕಥೆಯ ಹಂಬಲವಿಲ್ಲ, ನಂಬಿಕೆಯ ಪ್ರಶ್ನೆಯಿಲ್ಲ... ಅದು ತಾನೇ ಎನ್ನುವ ಅಹಂ ಇಲ್ಲ. ಜಗದ ಅರಿವಿಲ್ಲ... ಆದರೆ ಸುಮ್ಮನೆ ಒಂದು ಗಂಟೆ ನನ್ನ ಕಣ್ಣೊಳಗೆ ಅವಿತು ಹೋಗುವ ಕಾದಂಬರಿಯ ಪುಟಗಳು ಹಾಗೇ ಕುಂತಿವೆ. ಯಾಕೆಂದರೆ ಅವರಿಬ್ಬರು ನನ್ನ ಎದುರಿಗಿದ್ದರು.




ಅವರಿಬ್ಬರು ಹುಡುಗ ಮತ್ತು ಹುಡುಗಿ. ಬಸ್ಸು ಹತ್ತಿದ್ದರು ಹುಡುಗನಿಗೆ, ಹುಡುಗಿ ಎಲ್ಲಿಯಾದಾರೂ ತಪ್ಪಿಹೋದಾಳು ಬಿದ್ದಾಳು ಎಂಬ ಭಯ. ಅದಕ್ಕೆ ಕೈಯ ಆಸರೆ ಮತ್ತೆ ಅದೇನೋ ಪಿಸುಮಾತು, ನಾವಿಬ್ಬರೇ ಅನ್ನೋವಂತಹ ಗೊಣಗಾಟ. ಚಕ್ರದ ಅಡಿಯಲ್ಲಿ ಕಳೆದುಹೋಗುವ ದಾರಿಯ ತೆರೆದುಕೊಳ್ಳುತ್ತಾ ಸಾಗುವ ಜಗತ್ತನ್ನು ಹುಡುಗಿಗೆ ತೆರೆದಿಡುವ ಹಂಬಲ... ಹುಮ್ಮಸ್ಸು ಅದಕ್ಕೆ ಹುಡುಗಿಯ ಪುಟ್ಟ ಮುಗುಳ್ನಗೆ ಅಷ್ಟೇ ಮತ್ತೆಲ್ಲೋ ಇಳಿದು ಹೋದರು.

ಗೊತ್ತು ಈಗಂತೂ ಇದು ಪ್ರೀತಿನೇ ಅಂತೀಯಂತಾ... ಹೌದು ಪ್ರೀತಿಯೇ... ಆದರೆ ನಿನ್ನ ಪ್ರೀತಿಯ ವ್ಯಾಖ್ಯಾನ ಅವರಿಗೆ ಬೇಕಾಗಿಲ್ಲ. ಆದರೆ ಆ ಸಂಬಂಧದಲ್ಲಿ ತಪ್ಪುಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಬೇಡ. ಆದರೆ ಅವರನ್ನು ಬಂಧಿಸೋಕೆ ಹೋಗಬೇಡ. ಅವರು ಯಾವ ಪರಿಧಿಯೊಳಗೂ ಬರಲ್ಲ.

ಅವರಿಗೆ ಇವತ್ತು ಮಾತಾಡಲೇಬೇಕೆಂಬ ಹಂಬಲವಿಲ್ಲ. ಅವರಿಬ್ಬರ ಮಧ್ಯೆ ಪ್ರೇಮಿಗಳ ಜಂಜಾಟವಿಲ್ಲ... ಜಗಳ ಮಾಡಿದರೆ ಸಾವಿರ ಬಾರಿ ಕ್ಷಮಿಸು ಎಂದು ಲೆಕ್ಕಹಾಕಬೇಕಿಲ್ಲ. ಆ ಹುಡುಗನ್ನು ತನ್ನ ಪ್ರೀತಿಯ ಹುಡುಗಿಯಷ್ಟೇ ಅವಳನ್ನು ಪ್ರೀತಿಸಬಲ್ಲ. ಆ ಹುಡುಗಿಯೂ ತನ್ನ ಪ್ರೀತಿಯ ಹುಡುಗನ ಜೊತೆ ಮಾತಾನಾಡುವಂತೆ ಮಾತನಾಡಬಲ್ಲಳು.

ತಲೆಕೆಟ್ಟು ಹೋಗುತ್ತಿದ್ದೆಯಾ... ಸರಿ ಸರಿ ಹೇಳ್ತೀನಿ ಕೇಳು ಮಳೆಹನಿ ಆಣೆಯೂ ಅವರಿಬ್ಬರು ಪ್ರೇಮಿಗಳಲ್ಲ... ಅವರಿಬ್ಬರು ಅಣ್ಣತಂಗಿಯರು. ಅವರಿಗಿನ್ನು ಪ್ರೀತಿ ಅಂದ್ರೆ ಏನಂತಾನೇ ಗೊತ್ತಿರಲಿಕ್ಕಿಲ್ಲ. ಮುಗ್ಧ ಮನಸ್ಸುಗಳು... ತುಡಿಯುವ ಹಂಬಲದ ಜಗತ್ತಿಗೆ ತೆರೆದುಕೊಳ್ಳಬೇಕಷ್ಟೇ... ಈಗಿನ್ನೂ ಅವರು ಅಮ್ಮನ ಸೆರಗಲ್ಲಿ ಬಚ್ಚಿಟ್ಟುಕೊಳ್ಳುವ ಮನಸ್ಸುಗಳು... ವಾಸ್ತವ ಎಷ್ಟು ಖುಷಿಕೊಡುತ್ತಲ್ವಾ...
ಧೀಷ್ಮಾ ಡಿ. ಶೆಟ್ಟಿ

ಮುಂದೆ ಓದಿ

ವಿಚಾರ

ಮಾತೃಭೂಮಿಯ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿ ಪಡೆ!


ಮಹಾಪಾಪಿ ಕಸಬ್ ಗೆ ಮರಣದಂಡನೆ ಶಿಕ್ಷೆ ಘೋಷಣೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದ ದಿನ. ಜನರ ಮನದಲ್ಲಿ ಮುಂಬೈ ದಾಳಿಯ ನೆನಪು ಮರುಕಳಿಸಿ ಕಣ್ಣುಗಳು ಒದ್ದೆಯಾಗಿದ್ದವು. ನಿತ್ಯಾನಂದಸ್ವಾಮಿ, ವೆಂಕಟೇಶಮೂರ್ತಿ-ಹಾಲಪ್ಪ ಪ್ರಕರಣಗಳು ಜನರಲ್ಲಿ ಆಗಲೇ ರೇಜಿಗೆ ಹುಟ್ಟಿಸಿದ್ದವು. ಇಂಥ ಸಂದರ್ಭದಲ್ಲಿ ಮರುಭೂಮಿಯಲ್ಲಿನ ಓಯಸಿಸ್ನಂತೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ರಾಂಕ್ ವಿಜೇತರ ಸಾಧನೆಗಳ ವಿವರಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನರ ಮನಸ್ಸನ್ನು ಕೊಂಚ ಅರಳಿಸಿದವು. ಆದರೆ, ಅದೇ ದಿನ, ಅಂದರೆ ಮೇ 7ರಂದು ಬೆಂಗಳೂರಿನ ಆಂಗ್ಲ ದೈನಿಕವೊಂದರಲ್ಲಿ ಪ್ರಕಟವಾದ ವರದಿಯೊಂದು ನಮ್ಮ ವಿದ್ಯಾರ್ಥಿಸಮೂಹದ ಬಗ್ಗೆ ಚಿಂತೆ ಹುಟ್ಟಿಸುವಂತಿತ್ತು!




ಠಾಕೂರ್ ಗೊತ್ತಿಲ್ಲ

ಮೇ 7ರಂದು ಶುಕ್ರವಾರ ರವೀಂದ್ರನಾಥ ಠಾಕೂರರ 150ನೇ ಜನ್ಮದಿನ. ಅಂದು ಆ ಆಂಗ್ಲ ದೈನಿಕವು ಠಾಕೂರರ ಚಿತ್ರವೊಂದನ್ನು ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೋರಿಸಿ ಚಿತ್ರದ ವ್ಯಕ್ತಿಯನ್ನು ಗುರುತಿಸುವಂತೆ ಕೇಳಿತು. ಆ ಯುವಕ-ಯುವತಿಯರು 'ಬೆಬ್ಬೆಬ್ಬೆ' ಅಂದರು! ಅವರಿಗೆ ರವೀಂದ್ರನಾಥ ಠಾಕೂರರ ಗುರುತೇ ಹತ್ತಲಿಲ್ಲ! ಒಬ್ಬ ವಿದ್ಯಾರ್ಥಿ ಕೊಟ್ಟ ಉತ್ತರ ಹೀಗಿತ್ತು: "ಈತ ಯಾರೋ ಒಬ್ಬ ಪೈಂಟರ್. ಅಲ್ಲ, ತಾಳಿ, ಈತ ಆರ್ಕಿಟೆಕ್ಟ್. ಈತ ಬಾಬ್ ಮಾಲರ್ೆಯಹಾಗೆ ಕಾಣುತ್ತಾನೆ." ಹೀಗೆ ಉತ್ತರ ಕೊಟ್ಟಾತ ಪತ್ರಿಕೋದ್ಯಮದ ವಿದ್ಯಾರ್ಥಿ!
ಠಾಕೂರ್ ಬಗ್ಗೆ ಪತ್ರಿಕೆಯು ಕೇಳಿದ ವಿವಿಧ ಪ್ರಶ್ನೆಗಳಿಗೆ ಆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೊಟ್ಟ ಉತ್ತರಗಳು ಹೀಗಿದ್ದವು:
ಪ್ರಶ್ನೆ: "ರವೀಂದ್ರನಾಥ್ ಟ್ಯಾಗೋರರು ಆರಂಭಿಸಿದ ವಿದ್ಯಾಲಯದ ಹೆಸರೇನು?"
ಉತ್ತರ: "ಟ್ಯಾಗೋರ್ ಇಂಟರ್ನ್ಯಾಷನಲ್ ವಿದ್ಯಾಲಯ." (ಈ ಉತ್ತರ ಬಂದಿದ್ದು ಪತ್ರಕೋದ್ಯಮದ ವಿದ್ಯಾರ್ಥಿನಿಯಿಂದ!)
ಪ್ರಶ್ನೆ: "ಟ್ಯಾಗೋರರು ರಚಿಸಿರುವ ಪ್ರಸಿದ್ಧ ಗೀತೆ ಯಾವುದು?"
ಉತ್ತರ: "ವಂದೇ ಮಾತರಂ." (ನಮ್ಮ ರಾಷ್ಟ್ರಗೀತೆಯ ರಚನಕಾರನ ಹೆಸರು ಗೊತ್ತಿಲ್ಲದ ಈ ವಿದ್ಯಾರ್ಥಿನಿಗೆ ರಾಷ್ಟ್ರಗೀತೆಯ ಪೂರ್ಣಪಾಠ ಗೊತ್ತಿರುವುದೂ ಅನುಮಾನ! 'ವಂದೇ ಮಾತರಂ' ಗೀತೆ ಈಗ ಜನರ ಬಾಯಲ್ಲಿ ಹೆಚ್ಚು ನಲಿದಾಡುತ್ತಿರುವುದರಿಂದ ಈಕೆ 'ವೈಲ್ಡ್ ಗೆಸ್' ಮಾಡಿದ್ದಾಳೆ ಅಷ್ಟೆ.)
ಪ್ರಶ್ನೆ: "ಟ್ಯಾಗೋರರಿಗೆ ಸಂದ ಅಂತಾರಾಷ್ಟ್ರೀಯ ಪ್ರಶಸ್ತಿ ಯಾವುದು?"
ಉತ್ತರ: "ನನಗೆ ನೆನಪಿಲ್ಲ."
ಪ್ರಶ್ನೆ: "ಟ್ಯಾಗೋರರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಗಣಿತ, ಶಾಂತಿ, ಸಾಹಿತ್ಯ ಈ ಮೂರರ ಪೈಕಿ ಯಾವುದಕ್ಕೆ?"
ಉತ್ತರ: (ಹಲವು ವಿದ್ಯಾರ್ಥಿನಿಯರು ಒಕ್ಕೊರಲಿನಿಂದ) "ಶಾಂತಿಗೆ."
ಇದು ಇಂದಿನ ನಮ್ಮ ಶಿಕ್ಷಣಕ್ರಮದಡಿಯಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸ್ವದೇಶದ ಬಗ್ಗೆ ಹೊಂದಿರುವ ಜ್ಞಾನ!

ವಿದ್ಯಾರ್ಥಿ ಎಂಬ ಯಂತ್ರ

ನಮ್ಮ ಇಂದಿನ ಶಿಕ್ಷಣಕ್ರಮವು ವಿದ್ಯಾರ್ಥಿಗಳಿಗೆ ಮಾತೃಭೂಮಿಯ ಬಗ್ಗೆ ಸೂಕ್ತ ಅರಿವು ಹುಟ್ಟಿಸುವಲ್ಲಿ ಸಮರ್ಪಕವಾಗಿ ಕಾರ್ಯತತ್ಪರವಾಗಿಲ್ಲ. ಸಮಾಜವಿಜ್ಞಾನವೆಂಬ ಪಠ್ಯವಿಷಯವು (1) ಅನಗತ್ಯ ಮಾಹಿತಿಗಳಿಂದ (2) ಅಪ್ರಸ್ತುತರಾದ ಅಥವಾ ಬೇಡವಾದ ಹಲವು ವ್ಯಕ್ತಿಗಳ ಚರಿತ್ರೆ, ಗುಣಗಾನಗಳಿಂದ (3) ಸರ್ಕಾರಕ್ಕೆ ಬೇಕಾದ ವ್ಯಕ್ತಿಗಳ ವೈಭವೀಕರಣದಿಂದ (4) ಹಲವು ಅವಶ್ಯ ವಿಷಯ, ವ್ಯಕ್ತಿಗಳ ವಿರುದ್ಧ ಪಕ್ಷಪಾತದಿಂದ ಮತ್ತು (5) ಚರಿತ್ರೆಯ ತಿರುಚುವಿಕೆಯಿಂದ ಕೂಡಿದೆ. ಈ ಚೋದ್ಯಕ್ಕೆ ಪೂರಕವಾಗಿಯೆಂಬಂತೆ ಪೋಷಕರು ತಮ್ಮ ಮಕ್ಕಳಿಗೆ ಭಾರತದ ಸಂಸ್ಕೃತಿ, ಪರಂಪರೆ, ಇತಿಹಾಸ, ವರ್ತಮಾನ ಇವುಗಳ ತಿಳಿವಳಿಕೆ ಹೆಚ್ಚಿಸುವಲ್ಲಿ ಆಸಕ್ತಿ ತೋರುತ್ತಿಲ್ಲ.

ಪಾಠ ನುಂಗಿ ಪರೀಕ್ಷೆಯಲ್ಲಿ ಉಗುಳಿ ಅಂಕ ಗಳಿಸುವ ಯಂತ್ರಗಳನ್ನಾಗಿಯಷ್ಟೇ ವಿದ್ಯಾರ್ಥಿಗಳನ್ನು ತಯಾರುಮಾಡುತ್ತಿವೆ ನಮ್ಮ ಪಠ್ಯವಿಷಯಗಳು. ವಿದ್ಯಾರ್ಥಿಯು ವರ್ಷವಿಡೀ ಪಠ್ಯವಿಷಯದೊಳಗೇ ಮುಳುಗಿಕೊಂಡಿರುವಂತೆ ನೋಡಿಕೊಳ್ಳುತ್ತಿವೆ ನಮ್ಮ ಶಿಕ್ಷಕವರ್ಗ ಮತ್ತು ಪೋಷಕವರ್ಗ. ಹ್ಞಾ, ಇದೇ ವೇಳೆ, ವಿದ್ಯಾರ್ಥಿಗಳಿಗೆ ಅಮೆರಿಕೆಯ ಅಥವಾ ಆಸ್ಟ್ರೇಲಿಯಾದ ಆಗುಹೋಗುಗಳನ್ನು ಮತ್ತು ಅಲ್ಲಿನ ಭಾಷಾಕ್ರಮವನ್ನು ತಿಳಿಸಿಕೊಡಲು ಮಾತ್ರ ನಾವು ಸದಾ ಮುಂದೆ! ಏಕೆಂದರೆ, ಮುಂದೆ ಆ ವಿದ್ಯಾರ್ಥಿ ಅಮೆರಿಕೆಯಲ್ಲೋ ಅಥವಾ ಆಸ್ಟ್ರೇಲಿಯಾದಲ್ಲೋ ಹೋಗಿದ್ದುಕೊಂಡು ಅಲ್ಲಿನವರ ಸೇವೆ ಮಾಡಬೇಕಲ್ಲಾ. ಅಥವಾ ಒಂದು ವೇಳೆ ಭಾರತದಲ್ಲೇ ಇದ್ದರೂ ಸಾಫ್ಟ್ವೇರ್ ಕ್ಷೇತ್ರದಲ್ಲೋ ಬಿಸಿನೆಸ್ ಮೆನೇಜ್ಮೆಂಟ್ ಪ್ರಭೃತಿಯಾಗಿಯೋ ಇನ್ನಾವುದಾದರೂ ರಂಗದಲ್ಲೋ ವಿದೇಶಿಯರಿಗಾಗಿ ದುಡಿಯಬೇಕಲ್ಲಾ. ಭರ್ಜರಿ ಸಂಬಳ ಗಳಿಸಬೇಕಲ್ಲಾ.
ಇಂಥ ಮನೋಭಾವ ಹೊಂದಿರುವ ಬಹಳಷ್ಟು ಪೋಷಕರು ಮತ್ತು ಶಿಕ್ಷಕರು ಎಳೆಯ ಪೀಳಿಗೆಯನ್ನು ಸ್ವದೇಶದ ಬಗೆಗಿನ ಅರಿವಿನಿಂದ ವಂಚಿತರನ್ನಾಗಿ ಮಾಡುತ್ತಿರುವುದು ಆತಂಕಕಾರಿ ಸಂಗತಿ. ಮಾತೃಭೂಮಿಯ ಬಗ್ಗೆ ಮತ್ತು ಮಾತೃಭೂಮಿಯ ಮಹಾನ್ ವ್ಯಕಿಗಳ ಬಗ್ಗೆ ಅರಿವಿಲ್ಲದ ಪೀಳಿಗೆಗೆ ಮಾತೃಭೂಮಿಯಮೇಲೆ ಅಭಿಮಾನ ಹುಟ್ಟುವುದಾದರೂ ಹೇಗೆ? ಸ್ವದೇಶಾಭಿಮಾನದ ಕೊರತೆ ಇರುವ ಪೀಳಿಗೆಯಿಂದ ಈ ದೇಶ ಉದ್ಧಾರ ಹೊಂದುವುದು ಸಾಧ್ಯವೆ?

ಚರಿತ್ರೆ ಪಾಠ

ಬ್ಯಾಂಕ್ ಅಧಿಕಾರಿಯಾಗಿ ಮೂರು ದಶಕಗಳ ಕಾಲ ಹಲವು ರಾಜ್ಯಗಳಲ್ಲಿ ಬದುಕು ಸಾಗಿಸಿದ ನಾನು ಹಲವೆಡೆ ಸ್ವಇಚ್ಛೆಯಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಟ್ಟಿದ್ದೇನೆ. ಶಾಲೆಗಳಲ್ಲಿ ಉಚಿತವಾಗಿ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಉತ್ತರ ಕರ್ನಾಟಕದ ಪ್ರೌಢಶಾಲೆಯೊಂದರಲ್ಲಿ ತರಗತಿಯೊಂದಕ್ಕೆ ಉಚಿತವಾಗಿ ಶೈಕ್ಷಣಿಕ ವರ್ಷವಿಡೀ 'ಚರಿತ್ರೆ'ಯ ತರಗತಿಗಳನ್ನು ತೆಗೆದುಕೊಂಡ ನಾನು ಪಠ್ಯಭಾಗವನ್ನು ಬೋಧಿಸುವಾಗ ಜೊತೆಜೊತೆಗೇ ಭಾರತದ ಸಂಸ್ಕೃತಿ, ಪರಂಪರೆ, ನಿಜಚರಿತ್ರೆ, ಪ್ರಮುಖ ವ್ಯಕ್ತಿಗಳು ಇತ್ಯಾದಿ ವಿಷಯಗಳನ್ನೂ ಹೆಚ್ಚುವರಿಯಾಗಿ ತಿಳಿಸಿಹೇಳತೊಡಗಿದೆ. ವರ್ಷಾಂತ್ಯದಲ್ಲಿ ವಿದ್ಯಾರ್ಥಿಗಳಲ್ಲಿ ಅದ್ಭುತ ಬದಲಾವಣೆಯನ್ನು ನಾನು ಕಂಡೆ. ಅದುವರೆಗೆ ಶಾಲಾಪಠ್ಯದ ಅಧ್ಯಯನದಲ್ಲಿ ಮಾತ್ರ ಆಸಕ್ತರಾಗಿದ್ದ ವಿದ್ಯಾರ್ಥಿಗಳೀಗ ದೇಶದ ಇತಿಹಾಸ, ಸಂಸ್ಕೃತಿಗಳಿಗೆ ಸಂಬಂಧಿಸಿದ ಪಠ್ಯೇತರ ಕೃತಿಗಳನ್ನು ಓದುವ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಅವರಲ್ಲಿ ದೇಶಾಭಿಮಾನ ಪ್ರಜ್ವಲಿಸತೊಡಗಿತ್ತು. ದೇಶಕ್ಕಾಗಿ ತಾನು ಏನಾದರೂ ಮಹತ್ತರ ಕೊಡುಗೆ ಸಲ್ಲಿಸಬೇಕೆಂಬ ಇಚ್ಛೆ ಅವರಲ್ಲಿ ಕುಡಿಯೊಡೆದು ಬೆಳೆಯತೊಡಗಿತು. ಅವರೆಲ್ಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರು, ಮಾತ್ರವಲ್ಲ, ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಉಜ್ವಲಗೊಳಿಸುವ ಸಂಕಲ್ಪ ತೊಟ್ಟರು.
ನಮ್ಮ ದೇಶಕ್ಕಿಂದು ಇಂಥ ಯುವಸಮೂಹದ ಅಗತ್ಯವಿದೆ.

ಸರ್ಕಾರಕ್ಕೆ ಸಾಧ್ಯ

ಕೇವಲ ಒಂದು ಶೈಕ್ಷಣಿಕ ವರ್ಷವಷ್ಟೇ ತರಗತಿಗಳಲ್ಲಿ ಬೋಧನೆ ಮಾಡುವ ಮೂಲಕ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಲು ನನ್ನಿಂದ ಸಾಧ್ಯವಾದರೆ ಇಡೀ ಶಿಕ್ಷಣಕ್ರಮವನ್ನೇ ಕೈಯೊಳಗಿಟ್ಟುಕೊಂಡಿರುವ ಸರ್ಕಾರಗಳಿಂದ ಇಂಥ ಸಾಧನೆ ಸಾಧ್ಯವಿಲ್ಲವೆ? ಪಠ್ಯವಿಷಯದಲ್ಲಿ ನಿಜಚರಿತ್ರೆ, ದೇಶದ ಸಂಸ್ಕೃತಿ, ಪರಂಪರೆ, ಪಕ್ಷಪಾತರಹಿತ ಇತಿಹಾಸ, ನೀತಿಬೋಧೆ ಮುಂತಾದವುಗಳನ್ನು ಅಳವಡಿಸಲು ಸಾಧ್ಯವಿಲ್ಲವೆ?
ಈ ಮೌಲ್ಯಗಳನ್ನು ಕಡೆಗಣಿಸಿ, ವರ್ಷವಿಡೀ ನುಂಗಿದ ಮಾಹಿತಿಯನ್ನು ಪರೀಕ್ಷೆಯಲ್ಲಿ ಉಗುಳಿ ಅಂಕ ಗಳಿಸುವ ಯಂತ್ರಗಳನ್ನಾಗಿಯಷ್ಟೇ ವಿದ್ಯಾರ್ಥಿಗಳನ್ನು ತಯಾರು ಮಾಡುವ ಇಂದಿನ ನಮ್ಮ ಶಿಕ್ಷಣಕ್ರಮ ಹೀಗೇ ಮುಂದುವರಿದಲ್ಲಿ ಮುಂದಿನ ಪೀಳಿಗೆಗಳು ಧನಾರ್ಜನೆ ಮತ್ತು ವಿಷಯಭೋಗಗಳನ್ನೇ ಜೀವನದ ಗುರಿಯಾಗಿಟ್ಟುಕೊಂಡು ಅದಕ್ಕಾಗಿ ಹೊರದೇಶಗಳ ಚಾಕರಿಯಲ್ಲೇ ಧನ್ಯತೆ ಕಾಣುವ ಪ್ರವೃತ್ತಿ ಉಲ್ಬಣಿಸುವುದರಲ್ಲಿ ಅನುಮಾನವಿಲ್ಲ. ದೇಶವು ಅಂಥ ಅಪಾಯಕ್ಕೆ ತುತ್ತಾಗುವ ಮುನ್ನ ನಾವು ಎಚ್ಚತ್ತುಕೊಳ್ಳಬೇಕು. ನಮ್ಮ ಮಕ್ಕಳು ಈ ದೇಶದ ಇತಿಹಾಸ, ಸಂಸ್ಕೃತಿಗಳ ಸಮಗ್ರ ಅರಿವು ಹೊಂದುವಂತಾಗಬೇಕು. ಅವುಗಳೆಡೆಗೆ ಅವರು ಅಭಿಮಾನ ಬೆಳೆಸಿಕೊಳ್ಳಬೇಕು. ಇದಕ್ಕೆ ತಕ್ಕಂತೆ ನಮ್ಮ ಪಠ್ಯವಿಷಯ ಹಾಗೂ ಶಿಕ್ಷಣಕ್ರಮ ರೂಪುಗೊಳ್ಳಬೇಕು. ಜೊತೆಗೇ ಸಮರ್ಥ ಶಿಕ್ಷಕರ ಪಡೆಯೂ ತಯಾರಾಗಬೇಕು.
'ಜನಗಣಮನ' ರಚಿಸಿದವರು ರವೀಂದ್ರನಾಥ ಠಾಕೂರ್ ಎಂಬುದು ನಮ್ಮ ಮಕ್ಕಳಿಗೆ ಗೊತ್ತಿರಬೇಕು ಮಾತ್ರವಲ್ಲ, 'ವಂದೇ ಮಾತರಂ' ರಚಿಸಿದವರು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಎಂಬುದೂ ಗೊತ್ತಿರಬೇಕು.

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ರಾಜ್ಯ - ರಾಷ್ಟ್ರ


ಬಜ್ಪೆ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಕಾರ್ಯಾಚರಣೆ ಅಂತ್ಯಗೊಂಡಂತಾಗಿದೆ. ಬ್ಲಾಕ್ ಬಾಕ್ಸ್ ಪತ್ತೆ ಹಚ್ಚಲಾಗಿದ್ದು ಅದನ್ನು ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ಪರಿಶೀಲನೆ ಗೈದ ನಂತರವೇ ವಿಮಾನ ದುರಂತಹ ಸತ್ಯಾಸತ್ಯತೆಗಳು ಅರಿವಾಗಲಿವೆ. ವಿಮಾನದ ಅಳಿದುಳಿದ ಅವಶೇಷಗಳನ್ನು ಮೇಲೆತ್ತುವ ಕಾರ್ಯವು ಪ್ರಗತಿಯಲ್ಲಿದೆ. ಮೃತ ಪ್ರಯಾಣಿಕರ ಅಂತ್ಯಸಂಸ್ಕಾರ ಕಾರ್ಯವೂ ನಡೆಯುತ್ತಿದೆ. ಒಟ್ಟಿನಲ್ಲಿ ದುರಂತ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬಜ್ಪೆ: ನಿನ್ನೆ ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ದಾರುಣ ಅಂತ್ಯ ಸಂಭವಿಸಿ 24ಗಂಟೆಗಳು ಕಳೆದ ನಂತರ ಇದೀಗ 110 ಮಂದಿಯ ಶವಗಳ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ಶವಗಳು ಗುರುತಿಸಲಾಗದ ರೀತಿಯಲ್ಲಿ ಸುಟ್ಟು ಕರಕಲಾಗಿದೆ.ಮೃತರ ಸಂಬಂಧಿಗಳ ರೋಧನ ಮುಗಿಲು ಮುಟ್ಟಿದೆ. ನಮ್ಮ ಸಂಬಂಧಿಗಳು ಯಾರೆಂದು ಹುಡುಕುವ ಅವರ ರೀತಿ ಮನಕಲುಕುವಂತಿದೆ. ಒಟ್ಟಿನಲ್ಲಿ ಬಜ್ಪೆಯಲ್ಲಿ ನಡೆದ ವಿಮಾನ ದುರಂತ ಒಂದು ಕರಾಳ ಅಧ್ಯಾಯ ಎಂದೇ ಬಣ್ಣಿಸಲ್ಪಟ್ಟಿದೆ.

ಮುಂದೆ ಓದಿ
9:05 AM

ತನಿಖೆ ಚುರುಕು

Posted by ekanasu

ನಮ್ಮ ವಿಶೇಷ ಪ್ರತಿನಿಧಿ ವರದಿ
ಬಜ್ಪೆ: ನಿನ್ನೆ ನಡೆದ ವಿಮಾನ ದುರಂತ ಪ್ರದೇಶದಕ್ಕೆ ವಿಶೇಷ ತನಿಖಾ ತಂಡ ಆಗಮಿಸಿ ಬೆಳಗ್ಗೆ 6 ಗಂಟೆಯಿಂದ ತೀವ್ರ ತನಿಖೆ ನಡೆಸುತ್ತಿದೆ. ಅರುಣ್ ಕುಮಾರ್ ಛೋಪ್ರಾ ನೇತೃತ್ವದ 15ಜನರ ತಂಡ ತನಿಖಾ ಕಾರ್ಯದಲ್ಲಿ ತಲ್ಲೀನಗೊಂಡಿದೆ. ಏರ್ ಇಂಡಿಯಾದ ಡೈರೆಕ್ಟರ್ ಜನರಲ್ ಆಫ್ ಸೆಕ್ಯೂರಿಟಿ ಅರವಿಂದ್ ಸಹಕಾರ ನೀಡುತ್ತಿದ್ದಾರೆ. ಬ್ಲ್ಯಾಕ್ ಬಾಕ್ಸ್ ಮತ್ತು ವಾಯ್ಸ್ ರೆಕಾರ್ಡರ್ ಪತ್ತೆಗೆ ಈ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ಸಿಗುವ ಸಾಧ್ಯತೆಗಳಿವೆ. ವಿಮಾನದ ಅವಶೇಷಗಳ ನಡುವೆ ಬ್ಲ್ಯಾಕ್ ಬಾಕ್ಸ್ ಸಿಗುವ ಸಾಧ್ಯತೆಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದ ಅವಶೇಷಗಳ ಅಡಿಯಲ್ಲಿ ಪ್ರಯಾಣಿಕರ ಮೃತದೇಹದ ಅಂಗಾಂಗಳು ಸಿಲುಕಿದ್ದು ಭೀಕರವಾಗಿ ಗೋಚರಿಸುತ್ತಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ನಿನ್ನೆ ನಡೆದ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ವಿಧಿ ವಿಜ್ಞಾನ ತಜ್ಞರ ತಂಡ ಆಗಮಿಸಿದೆ. ದುರಂತದಲ್ಲಿ ಮೃತಪಟ್ಟವರ ಶವಗಳು ಗುರುತು ಸಿಗದ ಸ್ಥಿತಿಯಲ್ಲಿದ್ದು ಪತ್ತೆಗಾಗಿ ಡಿ.ಎನ್.ಎ. ಪರೀಕ್ಷೆಗೊಳಪಡಿಸಲಾಗುತ್ತದೆ. ವಿಮಾನ ದುರಂತಕ್ಕೆ ಸಂಬಂಧಿಸಿದ ಕಾರಣಗಳನ್ನು ತಿಳಿಯಲು ತನಿಖೆ ಕಾರ್ಯ ಪ್ರಗತಿಯಲ್ಲಿದ್ದು ಸಂಪೂರ್ಣ ತನಿಖೆಯನ್ನು ಕೇಂದ್ರ ಸರಕಾರ ನಿರ್ವಹಿಸಲಿದೆ. ರಾಜ್ಯ ಸರಕಾರ ತನಿಖೆಗೆ ಸೂಕ್ತ ಸಹಕಾರ ನೀಡುವ ಭರವಸೆಯನ್ನು ನೀಡಿದೆ.

ಮುಂದೆ ಓದಿ
5:26 PM

22/158: ಕರಾಳ ಶನಿವಾರ

Posted by ekanasu

ರಾಜ್ಯ - ರಾಷ್ಟ್ರ




ಅಲ್ಲಿ ಆಕ್ರಂದನ ಮಡುಗಟ್ಟಿತ್ತು...

ಮಗನ ಬರುವಿಕೆಗಾಗಿ ಕಾಯುತ್ತಿದ್ದ ಅಮ್ಮ... ತನ್ನ ಪತಿ ಇನ್ನೇನು ಕೆಲ ಕ್ಷಣದಲ್ಲೇ ಮನೆತಲುಪಲಿದ್ದಾರೆಂಬ ಕಾತರದಲ್ಲಿದ್ದ ಪತ್ನಿ... ಅಣ್ಣ ಬರುತ್ತಾನೆಂಬ ಸಂಭ್ರಮದಲ್ಲಿದ್ದ ಸಹೋದರ... ಕಳೆದ ಹಲವಾರು ಸಮಯಗಳಿಂದ ಕಾಣದ ಅಪ್ಪನ ಮುಖದ ಚಿತ್ರಣವನ್ನೇ ಮನದಲ್ಲಿ ಮೂಡಿಸುತ್ತಾ ನೂರಾರು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದ ಪುಟ್ಟ ಮಗು... ಇನ್ನೇನು ಇವರೆಲ್ಲರೂ ನೂರಾರು ಕನಸುಗಳನ್ನು ಕಟ್ಟುತ್ತಾ ಕಾಯುತ್ತಿರಬೇಕಾದರೆ ಅಪ್ಪಳಿಸಿತೊಂದು ಬರಸಿಡಿಲು...ಆದರೆ ವಿಧಿ ಲೀಲೆಯೇ ಬೇರೆಯಾಗಿತ್ತು. ಇಷ್ಟೆಲ್ಲಾ ಕನಸುಗಳು ಒಂದಿದೊಮ್ಮೆಯೇ ಛಿದ್ರಗೊಂಡಿತು. ಆಕ್ರಂದನ ಮುಗಿಲು ಮುಟ್ಟಿತು. ಅದೇ ಮಂಗಳೂರು ಸಮೀಪದ ಬಜ್ಪೆ ವಿಮಾನ ದುರಂತ. ಇಡೀ ದೇಶದಲ್ಲೇ ನಡೆದ 3 ಅತಿದೊಡ್ಡ ದುರಂತಗಳಲ್ಲಿ ಇದೂ ಒಂದು ಎಂಬ ದಾಖಲೆ ಮಾಡಿದೆ. ಆದರೆ 160ಮಂದಿಯ ಮನೆಯಲ್ಲಿ ತೀವ್ರ ವೇದನೆಯ ಮಡುಮಾಡಿದೆ. ನೂರಾರು ಕನಸುಗಳು ಒಮ್ಮೆಲೆ ಛಿದ್ರಗೊಂಡಿದೆ.
ಪ್ರಶಾಂತವಾಗಿದ್ದ ಆ ಪ್ರಕೃತಿಯ ಮಡಿಲಲ್ಲಿ ಬೆಳ್ಳಂಬೆಳಗ್ಗೇ ಬೆಂಕಿಯುಂಡೆಗಳು ಗೋಚರಿಸಿದವು. ಸುತ್ತೆಲ್ಲಾ ದಟ್ಟನೆಯ ಹೊಗೆ... ನರಳಾಟ ಚೀರಾಟದ ಧ್ವನಿ ಒಂದಷ್ಟು ಕಾಲ...ಮತ್ತೆಲ್ಲವೂ ಮೌನ...ಅಲ್ಲಿಲ್ಲೊಂದು ಮರುಕದ ದನಿಗಳನ್ನು ಬಿಟ್ಟರೆ. ಪ್ರಕೃತಿಯೂ ವಿಕಾರವಾಗಿ ಕಂಡುಬರುತ್ತಿತ್ತು. ಸಂಭ್ರಮದ ಕಳೆ ಇನ್ನೂ ಹಾಗೇ ಉಳಿದಿದ್ದ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅದಾಗ ನೀರವ ಮೌನ. ಪ್ರತಿದಿನ ಕೇವಲ ವಿಮಾನಗಳ ಕರ್ಕಶ ದನಿಯಷ್ಟೇ ಇತ್ತು. ಆದರೆ ಇಂದು ಆ ಕರ್ಕಶ ದನಿ ವಿಕಾರವಾಗಿ ಪರಿಣಮಿಸಿತ್ತು.
ಗೆಳತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕಾಲೇಜು ಹುಡುಗಿಯರು... ಅಲ್ಲಿ ಅದೋ ಶವಗಳ ರಾಶಿ ರಾಶಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪ್ರಾಯದ ವ್ಯಕ್ತಿಯೊಬ್ಬರ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.
ಅಲ್ಲಿ ಆ ಕ್ಷಣದಲ್ಲಿ ಜಾತಿ - ಮತ - ಧರ್ಮ -ಮೇಲು - ಕೀಳೆಂಬ ಯಾವೊಂದು ಭಾವನೆಗಳೂ ಜನತೆಯ ಮನದಲ್ಲಿ ಕಂಡುಬಂದಿಲ್ಲ. ಎಲ್ಲರೂ ಒಂದಾಗಿ ದುಡಿದರು. ಇದ್ದವರನ್ನು ಹೇಗಾದರೂ ಬಚಾವ್ ಮಾಡೋಣ ಎಂಬ ಸಂಕಲ್ಪ ತೊಟ್ಟಂತೆ ಕೆಲಸಮಾಡಿದರು. ಊರವರ ಒಗ್ಗಟ್ಟಿನ ಸಹಕಾರದ ಮನೋಭಾವ ಶ್ಲಾಘನಾರ್ಹವಾಗಿತ್ತು. ಆದರೆ ಎಲ್ಲರ ಮನದಲ್ಲೂ ದುಃಖ...ಸ್ವಂತ ಸಂಬಂಧಿಕರು, ಬಂದು ವರ್ಗದವರು ಅಲ್ಲಿ ಹೆಣವಾಗಿಲ್ಲದಿದ್ದರೂ ಸೇರಿದ್ದ ನೂರಾರು ಮಂದಿ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಪುಟ್ಟ ಪುಟ್ಟ ಮಕ್ಕಳ ಕರಕಲು ಮೃತದೇಹಗಳು, ಅರೆಬೆಂದ ದೇಹಗಳು, ಬೋರಲಾಗಿ ಬಿದ್ದ ಕರಟಿದ ಮೃತದೇಹ...ಅಂಗಾಂಗ ವಿಕೃತಗೊಂಡಿರುವ ಮೃತದೇಹಗಳು ಭಯಾನಕ ರೀತಿಯಲ್ಲಿ ಕಂಡುಬರುತ್ತಿದ್ದವು. ಒಂದರ ಮೇಲೊಂದರಂತೆ ಇದ್ದ ಆ ಮೃತದೇಹಗಳ ಸಾಲು ಸಾಲು ನೋಡುತ್ತಿರಬೇಕಾದರೆ `ಛೆ...ಜೀವನವೆಂದರೆ ಕ್ಷಣಿಕ' ಎಂಬಂತನಿಸುತ್ತಿತ್ತು.
ಅತ್ಯಂತ ಆತ್ಮೀಯರನ್ನು , ಬಂಧುಗಳನ್ನು ಕಳೆದುಕೊಂಡ ದುಃಖ ಇಡೀ ಜಿಲ್ಲೆಯ ನಾಗರೀಕರಿಂದಿದ್ದಾರೆ. ಶೋಕಸಾರದಲ್ಲಿ ದೇಶವಿದೆ...

ಅದೃಷ್ಟ ಮಂದಿ...
ಅದೇ ನೋಡಿ ಪವಾಡ ಎಂದರೆ...ವಿಮಾನದಲ್ಲಿ ಟಿಕೆಟ್ ಸಿಗದೆ ಕೆಲವರು ಅಲ್ಲೇ ಬಾಕಿ ಉಳಿದರೆ ಇನ್ನು 9 ಮಂದಿ ಘೋರ ದುರಂತದಲ್ಲಿ ಜವರಾಯನ ಬಾಯಿಂದ ಪಾರಾಗಿ ಬಂದಿದ್ದಾರೆ. ಆದರೆ ಪುಟ್ಟಕಂದಮ್ಮಗಳು ಈ ಘೋರ ದುರಂತದಲ್ಲಿ ಸಾವನ್ನಪ್ಪಿವೆ. 158 ಮಂದಿ ಸಾವಿಗೆ ಶರಣಾಗಿದ್ದಾರೆ. ವಿಮಾನದ 6 ಮಂದಿ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ 14ಮಂದಿ ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದಾರೆ. ಉಳಿದಂತೆ 60ಮಂದಿ ಕೇರಳ ರಾಜ್ಯದವರು. ಉಳಿದವರು ಕರ್ನಾಟಕದವರು.

ಭೇಟಿ
ಘಟನಾ ಸ್ಥಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇರಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಫುಲ್ ಪಾಟೀಲ್ ,ಸೇರಿದಂತೆ ಅನೇಕ ಮಂದಿ ಗಣ್ಯರು ರಾಜಕೀಯ ಮುಖಂಡರು ಭೇಟಿನೀಡಿದ್ದಾರೆ.
ಒಟ್ಟಿನಲ್ಲಿ ಇಡೀ ದೇಶದಾದ್ಯಂತ ಈ ದುರಂತದ ನೋವು ಮಡುಗಟ್ಟಿದೆ. ಎಲ್ಲರೂ ಈ ದುರಂತದಿಂದ ಪರಿತಪಿಸುವಂತಾಗಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ


ದೇಶದ 3ನೇ ಅತಿದೊಡ್ಡ ದುರಂತಗಳ ಪಟ್ಟಿಗೆ ದಾಖಲಾದ ಮಂಗಳೂರಿನ ವಿಮಾನ ದುರಂತದ ಹಿನ್ನಲೆಯಲ್ಲಿ ರಾಜ್ಯಾದ್ಯಂತ 1 ದಿನ ಶೋಕ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಮುಂದೆ ಇಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂಬ ಮಾತನ್ನು ಸಿ.ಎಂ.ಹೇಳಿದ್ದಾರೆ. ಈಗಾಗಲೇ 137ಮೃತದೇಹಗಳನ್ನು ಘಟನಾ ಸ್ಥಳದಿಂದ ಮೇಲೆತ್ತಲಾಗಿದೆ. ಈ ಪೈಕಿ 19ಮಕ್ಕಳ ಹಾಗೂ 4 ಹಸುಗೂಸುಗಳ ಶವಗಳೂ ಕಂಡುಬಂದಿವೆ. ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದೆ. ವಿಮಾನಗಳ ಬಿಡಿಭಾಗಗಳ ಅಡಿಭಾಗಗಳಲ್ಲಿ ಸಿಲುಕಿರಬಹುದಾದ ಶವಗಳಿಗಾಗಿ ಶೋಧ ನಡೆಯುತ್ತಿದೆ.






ಮುಂದೆ ಓದಿ
11:21 AM

ಕರಾಳ `ಶನಿವಾರ

Posted by ekanasu

ರಾಜ್ಯ - ರಾಷ್ಟ್ರ

ಇದು ಕರಾಳ ಶನಿವಾರ... ಅಕ್ಷರಶಹ ಸತ್ಯ. ಕಾರಣ ಮಂಗಳೂರಿನಲ್ಲಿ ನಡೆದ ಅತ್ಯಂತ ದೊಡ್ಡ ವಿಮಾನ ದುರಂತ. 166 ಮಂದಿ ಪ್ರಯಾಣಿಸುತ್ತಿದ್ದ(ವಿಮಾನದ ಪೈಲೆಟ್ - ತಂಡ ಸೇರಿದಂತೆ)ವಿಮಾನ ಬೆಳ್ಳಂಬೆಳಗ್ಗೆ 5.45ರ ಸುಮಾರಿಗೆ ದುರಂತಕ್ಕೀಡಾಯಿತು. ಇದರಿಂದ ಸುಮಾರು 160ರಷ್ಟು ಮಂದಿ ಸಾವನ್ನಪ್ಪಿದ್ದು ದೃಢಪಟ್ಟಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.


ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ. ಉತ್ತಮ ಸಹಕಾರವನ್ನು ಸ್ಥಳೀಯ ಜನತೆ ನೀಡುತ್ತಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟುಕರಕಲಾಗಿದ್ದು ಅಂಗಾಂಗಳು ಬೇರ್ಪಡುತ್ತಿದ್ದು ಮೇಲೆತ್ತಲು ತೀವ್ರ ತೊಂದರೆಯುಂಟಾಗುತ್ತಿದೆ. ಗುರುತು ಹಿಡಿಯಲು ಕಷ್ಟವಾಗುವ ರೀತಿಯಲ್ಲಿ ಮೃತದೇಹ ಕಂಡುಬಂದಿವೆ.
ಮಂಗಳೂರಿನ ವೆನ್ಲಾಕ್, ಎಜೆ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳ ಶವಾಗಾರದಲ್ಲಿಡಲಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ




ಮಂಗಳೂರಿನಲ್ಲಿ ಇದೇ ಮೊದಲ ಬಾರಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 160ರಷ್ಟು ಮಂದಿಮೃತ ಪಟ್ಟ ಬಗ್ಗೆ ಇದೀಗ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ವಿಮಾನದಲ್ಲಿದ್ದ 6ಮಂದಿ ಬದುಕುಳಿದ ಬಗ್ಗೆ ಮಾಹಿತಿಗಳಿವೆ. ಆದರೆ ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ವರದಿಯ ಪ್ರಕಾರ 166ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಖಚಿತ ದಾಖಲೆಗಳು ಲಭ್ಯವಿಲ್ಲ.
ಮೃತರ ಪೈಕಿ 23 ಮಂದಿ ಮಕ್ಕಳು. ಕೆ.ಎಂ.ಸಿ. ವಿದ್ಯಾರ್ಥಿನಿ ಶೀಲಾ ಇದೀಗ ತೀವ್ರಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉಮ್ಮರ್, ಹಮೀದ್ ಬದುಕುಳಿದಿದ್ದಾರೆ.
ವಿಮಾನ ಮಂಗಳೂರಿಗೆ ಬಂದು ರನ್ ವೇನಲ್ಲಿ ಟಚ್ ಡೌನ್ ಆದನಂತರ ಪೈಲೆಟ್ ಹಿಡಿತಕ್ಕೊಳಗಾಗದೆ ಮುಂದುವರಿದು ಈ ಅಪಘಾತ ಸಂಭವಿಸಿತು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿಗಳು 2ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50ಸಾವಿರ ಪರಿಹಾರ ಘೋಷಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕಾಗಮಿಸಿದ್ದಾರೆ. ಕೇಳದ ಮುಖ್ಯಮಂತ್ರಿ ಅಚ್ಚುತಾನಂದನ್ ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಮಂಗಳೂರು ನಿವಾಸಿ ಪ್ರದೀಶ್ ಉಮರ್ ಫಾರೂಕ್, ಮೊಯಿದಿನ್ ಕುಟ್ಟಿ, ಕೃಷ್ಣನ್, ಅಬ್ದುಲ್ ಸತ್ತಾರ್, ಡಾ.ಸಬ್ರಿನಾ , ಜೋಯಲ್ ಬದುಕುಳಿದ 7ಮಂದಿ ಅದೃಷ್ಟವಂತರು.
ವಿಮಾನವನ್ನು ರಷ್ಯಾದ ಪೈಲೆಟ್ ನಡೆಸುತ್ತಿದ್ದರು. ಸಹಪೈಲೆಟ್ ಎಸ್.ಎಂ.ಅಹ್ಲುವಾಲ ಮಂಗಳೂರು ಪ್ರದೇಶದವರಾಗಿದ್ದರು.
ದುರಂತ ಪ್ರದೇಶದಲ್ಲಿದ್ದ ಶವಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಳೆ ಈ ಪ್ರದೇಶದಲ್ಲಿದ್ದ ಕಾರಣ ಕಾರ್ಯಾಚರಣೆಗೂ ಅಡ್ಡಿ ಉಂಟಾಗುತ್ತಿವೆ. ಕಾಡಿನಂತಹ ಪ್ರದೇಶದಲ್ಲಿ ಈ ವಿಮಾನ ಪಥನಗೊಂಡಿದ್ದು ಆ ಪ್ರದೇಶಕ್ಕೆ ರಕ್ಷಣಾ ಪಡೆಗಳು ತೆರಳಲು , ಕಾರ್ಯಾಚರಣೆ ನಡೆಸಲು ಅಡ್ಡಿಯಾಗುತ್ತಿವೆ.
ಮಂಗಳೂರಿನಲ್ಲಿ ವಿಮಾನ ಹಾರಾಟವನ್ನು ತಕ್ಷಣಕ್ಕೆ ರದ್ದುಗೊಳಿಸಲಾಗಿದೆ. ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಮುಂದೆ ಓದಿ

ರಾಜ್ಯ -ರಾಷ್ಟ್ರ

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 0824-2220422, 011-25603101 ಸಂಪರ್ಕಿಸಿರಿ...

ಮುಂದೆ ಓದಿ

ರಾಜ್ಯ - ರಾಷ್ಟ್ರ

ಟಚ್ ಡೌನ್ ಆಗಿರುವ ವಿಮಾನ ರನ್ ವೇನಲ್ಲಿ ಬ್ರೇಕ್ ಅಪ್ಲೈ ಮಾಡದೆ ಅಪಘಾತಕ್ಕೊಳಗಾಗಿರಬಹುದೆಂಬುದು ಅನೇಕ ಮಂದಿ ತಂತ್ರಜ್ಞರ ಅಭಿಪ್ರಾಯ. ಇದರಿಂದಾಗಿ ವಿಮಾನ ಕಂದಕದಲ್ಲಿ ಬಿದ್ದು ಅಪಘಾತ ಸಂಭವಿಸಿತು. ವಿಮಾನ ಅಪಘಾತದಿಂದಾಗಿ ವಿಮಾನದಲ್ಲಿದ್ದ ಬಹುಪಾಲು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗೆ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ಮಾಹಿತಿ ನೀಡಬಹುದು.

ಮುಂದೆ ಓದಿ

ರಾಜ್ಯ - ರಾಷ್ಟ್ರ




ದುಬಾಯಿನಿಂದ ಮಂಗಳೂರಿಗೆ ಬರ್ತಾ ಇದ್ದ ಬೋಯಿಂಗ್ ಎಕ್ಸ್ ಪ್ರೆಸ್ ವಿಮಾನ ಈ ದುರಂತಕ್ಕೀಡಾದ ವಿಮಾನವಾಗಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ಈ ಅಪಘಾತಕ್ಕೊಳಗಾಯಿತು.737 ಬೋಯಿಂಗ್ ವಿಮಾನ ಇದಾಗಿದೆ.
ಏರ್ ಇಂಡಿಯಾ ಕಂಪೆನಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸೇವೆಯನ್ನು ಬಹಳ ಇತ್ತೀಚೆಗೆ ಪ್ರಾರಂಭಗೊಳಿಸಿತ್ತು. ದುಬಾಯಿನಿಂದ ಮಂಗಳೂರಿಗೆ ಇತ್ತೀಚೆಗೆ ಈ ಸೇವೆಯನ್ನು ಆರಂಭಿಸಲಾಗಿತ್ತು. ಬೆಳಗ್ಗೆ 5.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ 160ಮಂದಿ ಮೃತರಾಗಿರುವ ಸಾಧ್ಯತೆಗಳಿವೆ. ಈಗಾಗಲೇ 10ಕ್ಕೂ ಅಧಿಕ ಮಂದಿಯ ಶವ ಪತ್ತೆಯಾಗಿದೆ. ಪರಿಹಾರ ಕಾರ್ಯಾಚರಣೆ ಚುರುಕಾಗಿದೆ. ಸ್ಥಳದಲ್ಲಿ ಮಳೆ ಬೀಳುತ್ತಿದ್ದು ಪರಿಹಾರ ಕಾರ್ಯಕ್ಕೆ ವಿಳಂಬವಾಗುತ್ತಿದೆ. ತಾಂತ್ರಿಕ ತೊಂದರೆಯಿಂದ ವಿಮಾನ ದುರಂತ ಸಂಭವಿಸುವು ಕಷ್ಟ ಎಂಬುದು ತಂತ್ರಜ್ಞರ ತಕ್ಷಣದ ಅಭಿಮತವಾಗಿದೆ. ಕಾರಣ ಪೈಲೆಟ್ ಈ ಬಗ್ಗೆ ವಿಮಾನ ನಿಲ್ದಾಣಕ್ಕೆ ಯಾವುದೇ ಸಂದೇಶ ರವಾನಿಸಿಲ್ಲ ಎಂಬ ವಿಚಾರ ತಕ್ಷಣಕ್ಕೆ ವ್ಯಕ್ತವಾಗಿದೆ. ಮಳೆ, ಕೆಟ್ಟ ಹವಾಮಾನದ ತೊಂದರೆಯಿಂದ ಪೈಲೆಟ್ ಗೊಂದಲಕ್ಕೀಡಾಗಿ ಈ ಅಪಘಾತ ಸಂಭವಿಸರಬಹುದು ಎಂಬದು ಮತ್ತೊಂದು ವಾದ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬ್ರೇಕಿಂಗ್ ನ್ಯೂಸ್


ಹತ್ತಕ್ಕೂ ಹೆಚ್ಚು ಮೃತದೇಹ ಪತ್ತೆ. ಇದೊಂದು ಭೀಕರ ದುರಂತ. ಮಂಗಳೂರು ವಿಮಾನ ನಿಲ್ದಾಣದ ಸಮೀಪದಲ್ಲೇ ಕೆಂಜಾರು ಎಂಬ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಮಂಗಳೂರಿನ 25ಕ್ಕೂ ಹೆಚ್ಚು ಅಂಬುಲೆನ್ಸ್ ಗಳು, ಹಾಗೂ ಅಗ್ನಿಶಾಮಕ ದಳ ಸ್ಥಳದಲ್ಲಿ ಕಾರ್ಯಾಚರಿಸುತ್ತಿವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ



ದುಬೈನಿಂದ ಬಜ್ಪೆಗೆ ಪ್ರಯಾಣಿಸುತ್ತಿದ್ದ ವಿಮಾನ ಇಂದು ಬೆಳಗ್ಗೆ 5.45ರ ಸುಮಾರಿಗೆ ಪಥನಗೊಂಡಿತು. ಇದರಿಂದ ನೂರಾರು ಜನ ಅಸುನೀಗಿರುವ ಸಾಧ್ಯತೆಗಳಿವೆ. 169 ಮಂದಿ ಪ್ರಯಾಣಿಕರಿದ್ದರು. ರಕ್ಷಣಾ ಕಾರ್ಯ ಭಿರುಸಿನಿಂದ ಸಾಗುತ್ತಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ಸೇರಿದಂತಹ ವಿಮಾನವೊಂದು ಬಜ್ಪೆ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ದುರಂತಕ್ಕೀಡಾಗಿದೆ. ಇದರಿಂದಾಗಿ ತೀವ್ರ ಸಾವುನೋವು ಸಂಭವಿಸಿರುವುದು ಶಂಕಿಸಲಾಗಿದೆ. 169 ಪ್ರಯಾಣಿಕರು 6 ಮಂದಿ ಸಿಬ್ಬಂದಿಗಳು ವಿಮಾನದಲ್ಲಿದ್ದವು.
ದುರ್ಗಮ ಪ್ರದೇಶದಲ್ಲಿ ವಿಮಾನ ಬಿದ್ದಿದೆ. ಕೆಂಜಾರು ಎಂಬಲ್ಲಿ ಈ ವಿಮಾನ ಪಥನಗೊಂಡಿದೆ. ಸ್ಥಳದಲ್ಲಿ 10ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮೊಕ್ಕಾಂ ಹೂಡಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ವಿಮಾನ ಬಿದ್ದ ಸ್ಥಳದಲ್ಲಿ ಭೀಕರ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ ವಿಮಾನ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಮುಂದೆ ಓದಿ
10:15 PM

ನರ್ಮದೆಯ ಅಳಲು...

Posted by ekanasu

ಸಿನೆಮಾ





ನೀವು ಈ ಸಾಕ್ಷ್ಯಚಿತ್ರವನ್ನು ನೋಡುವಷ್ಟರಲ್ಲಿ ತೆರೆಯ ಮೇಲೆ ಕಾಣುತ್ತಿರುವ ಹಳ್ಳಿ ಜಲನಮಾಧಿಯಾಗಿರುತ್ತದೆ. ಅವರು ಆಚರಿಸುತ್ತಿರುವ ಈ ಹೋಲಿ ಹಬ್ಬದ ಆಚರಣೆ ಬಹುಶಃ ಅವರ ಜೀವನದ ಕೊನೆಯ ಸಂತಸವಾಗಿರಬಹುದು...ಹಿನ್ನಲೆ ಧ್ವನಿಯನ್ನು ಕೇಳಿದ ವೀಕ್ಷಕನ ಮನದಲ್ಲಿ ಕುತೂಹಲ ಮನೆಮಾಡುತ್ತದೆ. ಅವರ ಕಥೆ ಮುಂದೇನಾಯಿತು? ಎಂಬ ಪ್ರಶ್ನೆ ಆತನನ್ನು ಕಾಡುತ್ತದೆ. ಸಾಕ್ಷ್ಯಚಿತ್ರ ಮುಂದುವರೆಯುತ್ತದೆ...ಆಕೆ ಮಾತನಾಡುತ್ತಾಳೆ...
ನಾವು ಸಂವಿಧಾನಾತ್ಮಕವಾಗಿ ಹೋರಾಡುತ್ತಿದ್ದೇವೆ.. ಈ ಆದಿವಾಸಿಗಳ ಬಳಿ ಹೋರಾಟಕ್ಕೆ ಯಾವುದೇ ಆಯುಧಗಳಿಲ್ಲ...ತಮ್ಮ ಪ್ರಾಣವನ್ನೇ ಆಯುಧವನ್ನಾಗಿಸಿ ಇವರು ಹೋರಾಡುತ್ತಿದ್ದಾರೆ...ಬದುಕುವ ಹಕ್ಕನ್ನು ಇವರಿಂದ ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಮುಗ್ಧ ಜನರ ದಾಹ ತಣಿಸುವ ನೀರನ್ನು ಸರಕಾರ ಕಿತ್ತುಕೊಂಡರೆ ಆ ನೀರು ನೀರಲ್ಲ ಬಡಜನರ ರಕ್ತವಾಗುತ್ತದೆ...ಮೇಧಾ ಪಾಟ್ಕರ್ ಪಬ್ಲಿಕ್ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದಾರೆ. ಆಕೆಗರಿವಿಲ್ಲದಂತೆ ಆಕೆ ಕಂಠ ಗದ್ಗದಿತಗೊಳ್ಳುತ್ತಿದೆ...ಕಣ್ಣುಗಳು ಹನಿಗೂಡುತ್ತಿವೆ...ನಿಶಬ್ದವಾಗಿ ಕ್ಯಾಮರಾ ಇವೆಲ್ಲವನ್ನು ಸೆರೆ ಹಿಡಿಯುತ್ತಿದೆ.

ಹೌದು! ಇದು ಆನಂದ್ ಪಟವರ್ಧನ್ ನಿರ್ದೇಶನದ 'ನರ್ಮದಾ ಡೈರಿ' ಸಾಕ್ಷ್ಯಚಿತ್ರ. 1985ರಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಭಾರತ ಸರಕಾರ ಕೈಗೊಂಡಿದ್ದ ಬೃಹತ್ 'ಸರ್ದಾರ್ ಸರೋವರ್' ಯೋಜನೆ ಹಾಗೂ ಅದಕ್ಕೆ ವಿರುದ್ಧವಾಗಿ ರೂಪುಗೊಂಡ ನರ್ಮದಾ ಬಚಾವೋ ಆಂದೋಲನಗಳೇ ಈ ಚಿತ್ರದ ಕಥಾವಸ್ತು. ಐದು ವರುಷಗಳ ಕಾಲ ಸತತವಾಗಿ ನರ್ಮದೆಯ ತಪ್ಪಲಲ್ಲಿ ವಾಸಿಸುವ ಆದಿವಾಸಿಗಳ ಜೀವನ, ಸಮಸ್ಯೆಗಳು, ಆಂದೋಲನದ ಚಟುವಟಿಕೆಗಳು ಹಾಗೂ ಸರಕಾರದ ಪ್ರತಿಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಬಳಿಕ ಪಟವರ್ಧನ್ ಅದಕ್ಕೆ ಸಾಕ್ಷ್ಯಚಿತ್ರದ ರೂಪುಕೊಟ್ಟರು.

ಅಭಿವೃದ್ಧಿಯ ಹೆಸರಲ್ಲಿ ಬಡಜನರ ಜೀವಜಲವನ್ನು ಕಸಿದುಕೊಂಡು ಪಟ್ಟಣಗಳಿಗೆ ಬೆಳಕನ್ನು ಕೊಡುವ ಸರಕಾರದ ಬಹುಕೋಟಿ ಯೋಜನೆ ಈ ಸರ್ದಾರ್ ಸರೋವರ್. ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲ್ಪಡುವ ಈ ಡ್ಯಾಮ್ನಿಂದಾಗಿ ಆಸುಪಾಸಿನ ಸುಮಾರು 87 ಹಳ್ಳಿಗಳು ಮುಳುಗಡೆಗೊಂಡು ಅಲ್ಲಿನ ಸಾಂಪ್ರದಾಯಿಕ ಆದಿವಾಸಿ ಸಮುದಾಯ ನಶಿಸಿ ಹೋಗುವ ಭೀತಿಯಿತ್ತು... ಅದೆಷ್ಟೋ ಲಕ್ಷ ಜನರು ನಿರ್ವಸಿತರಾಗುವ ಭಯವಿತ್ತು...ನಾವಿರಾರು ಎಕರೆ ಕೃಷಿಭೂಮಿ ಕಣ್ಮರೆಯಾಗುವ ಸಾಧ್ಯತೆಯಿತ್ತು. ಕೃಷಿಯನ್ನೇ ನಂಬಿ, ಪ್ರಕೃತಿಗೆ ಆಪ್ತರಾಗಿ ಜೀವಿಸುತ್ತಿದ್ದ ಆದಿವಾಸಿಗಳು ಪಟ್ಟಣಕ್ಕೆ ಹೋಗಿ ನೆಲೆಸುವ ಕಲ್ಪನೆಯನ್ನೂ ಮಾಡದ ಸ್ಥಿತಿ ಎದುರಾಯಿತು. ಆಗ ಆದಿವಾಸಿಗಳ ಪರ ಹೋರಾಟದ ನೇತೃತ್ವವನ್ನು ವಹಿಸಿದವರು ಮೇಧಾ ಪಾಟ್ಕರ್. ಮಹಾರಾಷ್ಟ್ರದ ಮಣಿಬೇಲಿ ಎಂಬ ಪುಟ್ಟ ಹಳ್ಳಿಯೊಂದರಿಂದ ಪ್ರಾರಂಭವಾದ ನರ್ಮದಾ ಬಚಾವೋ ಆಂದೋಲನ ಮುಂದೆ ರಾಷ್ಟ್ರ ಮಟ್ಟದಲ್ಲಿ ಸಂಚಲನವನ್ನು ಮೂಡಿಸಿತು.

ನರ್ಮದಾ ನದಿ ಆ ಆದಿವಾಸಿಗಳ ಜೀವಾಳ...ಅವರ ನರನಾಡಿಗಳಲ್ಲಿ ಆಕೆ ಹರಿಯುತ್ತಿದ್ದಾಳೆ..ಆ ನದಿಯಿಂದಲೇ ಅವರ ಜೀವನದ ಆರಂಭ ಮತ್ತು ಅಂತ್ಯ. ಆಕೆಯನ್ನು ಕಳೆದುಕೊಳ್ಳುವುದೆಂದರೆ ಅವರಿಗೆ ತಾಯಿಯನ್ನು ಕಳೆದುಕೊಂಡಂತೆ...ದೊಡ್ಡ ಪಟ್ಟಣಗಳ ಸರಕಾರೀ ಕಛೇರಿಗಳಲ್ಲಿ ಕುಳಿತು ಅಧಿಕಾರ ಚಲಾಯಿಸುವವರಿಗೆ ಆ ಮುಗ್ಧ ಜನರ ಭಾವನೆಗಳು ಹಾಗೂ ಪ್ರಕೃತಿ ಜತೆಗಿನ ಅವರ ಬೆಸುಗೆ ಕಲ್ಪನೆಗೂ ನಿಲುಕದ್ದು.
ಒಂದೆಡೆ ಮೂಲಭೂತ ಸೌಕರ್ಯಗಳಿಂದ ವಂಚಿತ ಆದಿವಾಸಿಗಳು...ಮತ್ತೊಂದೆಡೆ ಶೋಕಿ ಜೀವನ ನಡೆಸುವ ಪಟ್ಟಣ ವಾಸಿಗಳು..ಇನ್ನೊಂದೆಡೆ ಕೃಷಿಯೇ ಬೆನ್ನೆಲುಬಾಗಿರುವ ಆದಿವಾಸಿಗಳಿಂದ ನೆಲೆಜಲವನ್ನು ಕಿತ್ತುಕೊಂಡು ಪಟ್ಟಣದ ಶೋಕೀ ಜೀವನಕ್ಕೆ ಇಲೆಕ್ಟ್ರಿಸಿಟಿ ಕೊಡುವ ಯೋಜನೆ ಹಮ್ಮಿಕೊಂಡಿರುವ ಬುದ್ಧಿಹೀನ ಸರಕಾರ...ಇವಿಷ್ಟರ ಸುತ್ತ ಗಿರಕಿ ಹೊಡೆಯುವ ನರ್ಮದಾ ಡೈರಿ ವಾಸ್ತವಿಕತೆಗೆ ಹಿಡಿದ ಕನ್ನಡಿ. ಇಲೆಕ್ಟ್ರಿಸಿಟಿ ಈಸ್ ದಿ ಪವರ್...ಇಲೆಕ್ಟ್ರಿಸಿಟಿ ಈಸ್ ದಿ ಲೈಟ್ ಇದು ಸರ್ದಾರ್ ಸರೋವರ್ ಯೋಜನೆಯ ಕುರಿತಾದ ಸರಕಾರದ ಉದ್ಘೋಷಣೆ. ಆದರೆ ಬಡ ಆದಿವಾಸಿಗಳ ದಾಹ ತಣಿಸುವ ನೀರನ್ನು ಕಿತ್ತುಕೊಂಡು ತಂದ ಈ ಬೆಳಕು ಬೆಳಕಲ್ಲ ಕತ್ತಲೆ ಎನ್ನುತ್ತದೆ ಸಾಕ್ಷ್ಯಚಿತ್ರ. ಸಾಕ್ಷ್ಯಚಿತ್ರದುದ್ದಕ್ಕೂ ಹೋರಾಟ, ಪ್ರತಿಭಟನೆ, ನೋವು, ಹತಾಶೆ, ಛಲಗಳಿವೆ. ಮೊದಮೊದಲು ಚಿತ್ರ ವೀಕ್ಷಕನನ್ನು ಬೋರ್ ಹೊಡೆಸಿದರೂ ವಿಷಯದ ಸಂಪೂರ್ಣ ಗ್ರಹಿಕೆಯಾದ ಬಳಿಕ ವೀಕ್ಷಕ ಅಲ್ಲಿನ ಪಾತ್ರಗಳ ಜತೆಗೆ ಬೆರೆತು ಬಿಡುತ್ತಾನೆ. ಚಿತ್ರ ನಿಧಾನವಾಗಿ ಸಮಾಜದ ವಾಸ್ತವತೆಗಳನ್ನು ಆತನಿಗೆ ಪರಿಚಯಿಸುತ್ತಾ ಹೋಗುತ್ತದೆ.

ಸಾಕ್ಷ್ಯಚಿತ್ರದುದ್ದಕ್ಕೂ ಸರಕಾರೀ ಅಧಿಕಾರಿಗಳು ಯೋಜನೆಯ ಕುರಿತಾಗಿ ಹೇಳುವ ಹೇಳಿಕೆಗಳು ಸರಕಾರದ ಬಗ್ಗೆ ಹೇಸಿಗೆ ಹುಟ್ಟಿಸುವಂತಿದೆ. ದೇಶ ಅಭಿವೃದ್ಧಿಯಾಗಬೇಕಿದ್ದರೆ ಆದಿವಾಸಿಗಳು ಸಣ್ಣ ತ್ಯಾಗವನ್ನು ಮಾಡಲೇಬೇಕು...ಅದು ಅವರ ಕರ್ತವ್ಯವೆಂದು ತನ್ನ ಬಹು ಅಂತಸ್ಸಿನ ಬಂಗಲೆಯಲ್ಲಿ ಕೂತು ಚಿಕ್ಕ ಅಂತರ್ಯದಿಂದ ಮಾತನಾಡುವ ಬರೋಡಾ ಕಾಂಗ್ರಸ್ ಆಗಿನ ಮುಖ್ಯಸ್ಥರಾ ಅಶ್ವಿನ್ ಶಾ ಅಧಿಕಾರಿಯಾಗಿ ಶೋಷಿತರನ್ನು ರಕ್ಷಿಸುವ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ಮರೆಂತಂತಿದೆ....ಹೆಣ್ಮಗಳು ಮದುವೆಯಾಗಿ ಗಂಡನ ಮನೆ ಸೇರುವಾಗ ಹೆತ್ತವರು ಕಣ್ಣೀರು ಹಾಕುವಂತೆ ಆದಿವಾಸಿಗಳೂ ತಮ್ಮ ಮನೆಮಠ ಬಿಟ್ಟು ತೊಲಗಲು ದುಃಖಿಸುತ್ತಿದ್ದಾರೆ...ಇದು ಪ್ರಕೃತಿ ನಿಯಮ ... ಎಂದು ಪ್ರೋ ಡ್ಯಾಮ್ ಆಕ್ಟಿವಿಷ್ಟ್ ಚುನ್ನಿಬಾಲಾ ವೈಧ್ಯ ಹೇಳಿಕೆ ನೀಡುತ್ತಿದ್ದರೆ ಎಂತಹವರೂ ಅವರ ಸ್ವಾರ್ಥಪರ ಸಮರ್ಥನೆಗೆ ಅಸಹ್ಯ ಪಟ್ಟುಕೊಳ್ಳಬೇಕು.

ಅಂತೂ ಸರಕಾರ ತನ್ನ ಛಲವನ್ನು ತೀರಿಸಿಯೇ ಬಿಟ್ಟಿತು. ಆದಿವಾಸಿಗಳ ವಿರೋಧದ ನಡುವೆ ಸರ್ದಾರ್ ಸರೋವರ್ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇತ್ತ ಆಂದೋಲನದ ಹೋರಾಟ ಮುಂದುವರೆಯಿತು...ಮೇಧಾ ತನ್ನ ಜೀವದ ಹಂಗನ್ನು ತೊರೆದು ಆದಿವಾಸಿಗಳ ಹಕ್ಕನ್ನು ದೊರಕಿಸುವಲ್ಲಿ ಸರಕಾರದೊಡನೆ ಹೋರಾಡಿದರು... ಯೋಜನೆಗೆ ವಲ್ಡ್ ಬ್ಯಾಂಕ್ ಆರ್ಥಿಕ ನೆರವು ದೊರಕಿತು. ಡ್ಯಾಮ್ ಕಾರ್ಯ ಇನ್ನೂ ಕ್ಷಿಪ್ರ ಗತಿಯಲ್ಲಿ ಸಾಗತೊಡಗಿತು. ಆದಿವಾಸಿಗಳು ಕಂಗಾಲಾದರು.. ಮೇಧಾ ಅವರಲ್ಲಿ ಧೈರ್ಯ ತುಂಬಿದರು. 1993ರಲ್ಲಿ ಡ್ಯಾಮ್ 61 ಅಡಿ ಎತ್ತರಕ್ಕೇರಿತು. ಹಲವಾರು ಹಳ್ಳಿಗಳು ಮುಳುಗಿದವು. ಆದಿವಾಸಿಗಳು ಸರಿಯಾದ ಪುರ್ನವಸತಿಯಿಲ್ಲದೆ ನಿರ್ಗತಿಕರಾದರು. ಇನ್ನು ಕೆಲವು ಕುಟುಂಬಗಳು ಬೀದಿಪಾಲಾಗುವುದಕ್ಕಿಂತ ನರ್ಮದೆಯ ಮಡಿಲಲ್ಲೇ ಕೊನೆಯುಸಿರೆಳೆಯುವುದು ಲೇಸೆಂದು ಮುಳುಗಡೆಯನ್ನು ಲೆಕ್ಕಿಸದೇ ಅಲ್ಲೇ ಉಳಿದವು.

ಇತ್ತ ನರ್ಮದಾ ಬಚಾವೋ ಆಂದೋಲನದ ಹೋರಾಟ ಗಂಭೀರವಾಯಿತು. ಅದೇ ಸಮಯಕ್ಕೆ ವಲ್ಡ್ ಬ್ಯಾಂಕ್ ಅಧಿಕಾರಿ ಪ್ರೆಟ್ಸನ್ ಭಾರತಕ್ಕೆ ಆಗಮಿಸಿದರು. ಯೋಜನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿರುವ ಆತನನ್ನು ತಡೆದರೆ ಡ್ಯಾಮ್ ನಿರ್ಮಾಣ ನಿಲ್ಲಬಹುದೆಂಬ ಆಸೆಯಲ್ಲಿ ಆದಿವಾಸಿಗಳು ಆತನನ್ನು ಭೇಟಿ ಮಾಡಲು ನಿರ್ಧರಿಸಿದರು. ಹಿ ಈಸ್ ಬ್ಯುಸಿ...ಹಿ ಹ್ಯಾಸ್ ನೋ ಟೈಮ್ ಟು ಮೀಟ್ ಯು ...ಇದು ಹಳ್ಳಿಯಿಂದ ನೂರಾರು ಮೈಲಿ ಕ್ರಮಿಸಿ ಆತನನ್ನು ಕಾಣಲು ಬಂದ ಆದಿವಾಸಿಗಳಿಗೆ ಹೋಟೇಲ್ ಅಧಿಕಾರಿಗಳಿಂದ ಸಿಕ್ಕ ಉತ್ತರ. ಬ್ಯಸಿ ಎಂದು ಹೇಳಿ ಕಳುಹಿಸಿದ್ದ ಪ್ರೆಟ್ಸನ್ ಹೋಟೇಲ್ ಒಳಗೆ ಫ್ಯಾಷéನ್ ಶೋ ವೊಂದರಲ್ಲಿ ತಲ್ಲೀನರಾಗಿದ್ದರು...ಹೊರಗೆ ಭೇಟಿ ಮಾಡಲು ಬಂದ ಆದಿವಾಸಿಗಳ ಮೇಲೆ ಪೋಲೀಸ್ ಲಾಟಿ ಚಾರ್ಜ್ ಮಾಡುತ್ತಿತ್ತು...ಕ್ಯಾಮರಾ ಇವೆಲ್ಲವನ್ನೂ ಸದ್ದಿಲ್ಲದೇ ಶೂಟ್ ಮಾಡುತ್ತಿತ್ತು.

ಸಾಕ್ಷ್ಯ ಚಿತ್ರ ಕೊನೆಮುಟ್ಟುತ್ತಿದ್ದಂತೇ ವೀಕ್ಷಕನಿಗೆ ವಾಸ್ತವದ ಸಂಪೂರ್ಣ ಅರಿವಾಗುತ್ತದೆ. ಸಮಾಜದ ಎರಡು ಮುಖಗಳ ದರ್ಶನವಾಗುತ್ತದೆ. ಒಂದು ಮಾನವೀಯತೆ ತುಂಬಿದ ಮುಗ್ಧ ಮುಖ...ಮತ್ತೊಂದು ಕ್ರೌರ್ಯ ತುಂಬಿದ ಸ್ವಾರ್ಥ ಮುಖ. ಮನೆ-ಮಠಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಬೀದಿಗಿಳಿದ ಆದಿವಾಸಿಗಳಿಗೆ ಸರಕಾರ ಶಾಂತಿ ಮಂತ್ರವನ್ನು ಬೋಧಿಸಲು ಪ್ರುಯತ್ನಿಸುತ್ತದೆ. ತಮ್ಮ ಮನೆಗೆ ಬೆಂಕಿ ಬಿದ್ದಾಗ ಇದೇ ಶಾಂತಿ ತಮ್ಮ ಮುಖದಲ್ಲಿರುತ್ತದೆಯೇ...? ಎಂಬ ಆದಿವಾಸಿಗಳ ಪ್ರಶ್ನೆಗೆ ಅಧಿಕಾರಿಗಳು ಮೂಕರಾಗುತ್ತಾರೆ.

ಡ್ಯಾಮ್ ಎತ್ತರಕ್ಕೇರುತ್ತಿದ್ದಂತೇ ಹಳ್ಳಿಗಳು ಮುಳುಗತೊಡಗಿದವು...ಮೇಧಾ ಉಪವಾಸ ಸತ್ಯಾಗೃಹಕ್ಕಿಳಿದರು...ಸರಕಾರ ಮಣಿಯಲಿಲ್ಲ. ಉಪವಾಸದ 13ನೇ ದಿನ ಮೇಧಾ ಆಸ್ಪತ್ರೆಗೆ ದಾಖಲಾದರು. ಮೇಧಾ ಸಾವಿನಿಂದ ಸರಕಾರಕ್ಕೆ ಎದುರಾಗಬಹುದಾದ ಅನಾಹುತವನ್ನು ಊಹಿಸಿ ಸರ್ದಾರ್ ಸರೋವರ್ ಯೋಜನೆಯ ಮರು ಪರಿಶೀಲನೆಗೆ ಆಶ್ವಾಸನೆ ನೀಡಲಾಯಿತು. ಈ ನಡುವೆ ವಲ್ಡ್ ಬ್ಯಾಂಕ್ ತನ್ನ ಧನಸಹಾಯವನ್ನು ಹಿಂತೆಗೆಯಿತು. ಆದಿವಾಸಿಗಳ ಹೋರಾಟಕ್ಕೆ ಮೊದಲ ಜಯ ಲಭಿಸಿತು.

ಬಿಜಲೀ ಕೊ ಖಾ ಪಿಯಾ ನಹೀ ಜಾಥಾ ...ಎಂಬ ಆಂದೋಲನದ ಹಾಡು ಸಾಕ್ಯಚಿತ್ರದಲ್ಲಿ ಅಲ್ಲಲ್ಲಿ ಕೇಳಿ ಬರುತ್ತದೆ.. ಆದಿವಾಸಿಗಳ ಜೀವನವನ್ನು ಬಿಂಬಿಸು ಜನಪದ ಹಾಡುಗಳ ಬಳಕೆ ಚಿತ್ರವನ್ನು ಪರಿಣಾಮಕಾರಿಯನ್ನಾಗಿಸಿದೆ . ಚಿತ್ರದುದ್ದಕ್ಕೂ ಆದಿವಾಸಿಗಳ ಜೀವನ ಶೈಲಿ, ಕಲೆ-ಸಂಸ್ಕೃತಿ ಹಾಗೂ ಆದುನಿಕತೆಯಿಂದ ಅದಕ್ಕಾದ ಪರಿಣಾಮವನ್ನು ಅರ್ಥಯುತವಾಗಿ ಚಿತ್ರಿಸಲಾಗಿದೆ. ನರ್ಮದೆಗಾಗಿ ಮಡಿದ ನನ್ನ ಮಗ ಯಾವತ್ತೂ ಅಮರ....ಹೋರಾಟದಲ್ಲಿ ಮಗನನ್ನು ಕಳೆದುಕೊಂಡ ತಂದೆಯ ಈ ಮಾತುಗಳನ್ನು ಕೇಳಿದಾಗ ಅಭಿವೃದ್ಧಿಗಾಗಿ ಸರಕಾರ ಇಷ್ಟೊಂದು ಅಮಾನವೀಯವಾಗಬೇಕೇ? ಎಂಬ ಪ್ರಶ್ನೆ ಎದುರಾಗುತ್ತದೆ.

ನರ್ಮದಾ ಬಚಾವೋ ಆಂದೋಲನದ ಸತತ ಹೋರಾಟದ ಫಲವಾಗಿ ಇಂದು ಡ್ಯಾಮ್ ನಿರ್ಮಾಣವನ್ನು 80 ಅಡಿಗೆ ತಂದು ನಿಲ್ಲಿಸಲಾಗಿದೆ. ಪುರ್ನ ಪರಿಶೀಲನೆಗಾಗಿ ರಿವ್ಯೂ ಪಾನೆಲ್ ನ್ನು ನೇಮಿಸಲಾಗಿದೆ. ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ... ಹೋರಾಟ ನಡೆಯುತ್ತಿದೆ...ಮುಂದೇನಾಗುತ್ತದೆ ಎಂಬ ಕಾತರ ಎಲ್ಲರಲ್ಲೂ ಇದೆ...ಸರಕಾರ ಡ್ಯಾಮನ್ನು ಏರಿಸಿದ್ದಲ್ಲಿ ಇನ್ನಷ್ಟು ಹಳ್ಳಿಗಳು ಮುಳುಗುತ್ತವೆ...ಇನ್ನಷ್ಟು ಮುಗ್ಧ ಜನರು ಬೀದಿ ಪಾಲಾಗುತ್ತಾರೆ.

1995ರಲ್ಲಿ ಬಿಡುಗಡೆಗೊಂಡ 57 ನಿಮಿಷಗಳ ನರ್ಮದಾ ಡೈರಿ ಪ್ರತಿಷ್ಟಿತ ಫಿಲಂ ಫೇರ್ ಪ್ರಶಸ್ತಿಯನ್ನು ತನ್ನದಾಗಿಸಿದೆ. ಆನಂದ್ ಪಟವರ್ಧನ್ರ ಇತರ ಸಾಕ್ಷ್ಯಚಿತ್ರಗಳಂತೆ ಇದೂ ಸಾಮಾಜಿಕ ಕಳಕಳಿಯುಳ್ಳ ಸಾಕ್ಷ್ಯಚಿತ್ರ. ಇಫೆಕ್ಟಿವ್ ಶಾಟ್ಗಳಿಂದ ವಿಷಯವನ್ನು ವೀಕ್ಷಕನ ಮನನಾಟುವಂತೆ ತಿಳಿಸುವ ಪಟವರ್ಧನ್ರ ಸಿನೆಮಾಟಿಕ್ ಶೈಲಿ ಇಲ್ಲೂ ಮುಂದುವರಿದಿದೆ. ನರ್ಮದಾ ಡೈರಿ ಕಥೆಯಲ್ಲ ವಾಸ್ತವ...ಗ್ಲಾಮರ್ ಚಿತ್ರಗಳ ನಡುವೆ ಇಂತಹ ಅಪರೂಪದ ವಾಸ್ತವಿಕ ಚಿತ್ರ ಹೆಚ್ಚಿನ ನೋಡುಗರನ್ನು ಆಕರ್ಷಿಸಲಾರದು. ಸಮಸ್ಯೆಗಳಿಂದಲೇ ತುಂಬಿ ತುಳುಕಾಡುತ್ತಿರುವ ಈ ಚಿತ್ರ ಮನರಂಜನೆಯನ್ನೂ ನೀಡಲಾರದು. ಆದರೆ ಇದು ನೀಡಿದ ವಾಸ್ತವ ಜಗತ್ತಿನ ನೈಜ ಅನುಭವ ಬೇರೆಲ್ಲೂ ಸಿಗಲಾರದು...ಇದು ನರ್ಮದೆಯ ಮಕ್ಕಳ ಹೋರಾಟಕ್ಕೆ ಸಂದ ನಿಜವಾದ ಗೌರವ.
ಅಕ್ಷತಾ ಭಟ್ ಸಿ.ಎಚ್.

ಮುಂದೆ ಓದಿ

ಕ್ಲಿಕ್...


ಯಶೋಧರ ... ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ. ಛಾಯಾಚಿತ್ರದಲ್ಲಿ ಅಪಾರ ಆಸಕ್ತಿ. ಹವ್ಯಾಸಿ ಛಾಯಾಗ್ರಾಹಕ. ತನ್ನ ಪುಟ್ಟ ಕ್ಯಾಮರಾದಲ್ಲಿ ವಿಭಿನ್ನ ಆಂಗಲ್ ಗಳಿಂದ ಚಿತ್ರ ಕ್ಲಿಕ್ಕಿಸುವ ಆಸಕ್ತಿ ಹೊಂದಿದ್ದಾನೆ. ಆತನ ಕೆಲವು ಛಾಯಾಚಿತ್ರಗಳು ಈ ಕನಸು.ಕಾಂನ ಓದುಗ ಮಿತ್ರರಿಗಾಗಿ.




















ಮುಂದೆ ಓದಿ

ವಿಶೇಷ ವರದಿ




ಪಶ್ಚಿಮ ಘಟ್ಟ ತನ್ನ ಬಗಲಲ್ಲಿ ಅನೇಕಾನೇಕ ವಿಸ್ಮಯಕಾರಿ ಅಂಶಗಳನ್ನು ಹುದುಗಿಸಿಟ್ಟುಕೊಂಡಿದೆ. ಆದರೆ ಅನೇಕ ಮಿನಿ ವಿದ್ಯುತ್ ಘಟಕಗಳ ಸ್ಥಾಪನೆಯ ಉದ್ದೇಶಗಳಿಂದ, ಪೈಪ್ ಲೈನ್ ಗಾಗಿ , ಗಣಿಗಾರಿಕೆಗಳಿಗಾಗಿ ಈ ಪಶ್ಚಿಮ ಘಟ್ಟ ಸೂರೆಯಾಗುತ್ತಿದೆ. ಇದರಿಂದ ಅಪೂರ್ವ ಪ್ರಾಣಿ ಪ್ರಬೇಧಗಳೂ, ಸೂಕ್ಷ್ಮ ಜೀವರಾಶಿಗಳೂ ನಾಶವಾಗುತ್ತಿರುವುದು ಆಘಾತಕಾರಿ. ಆದರೆ ಏತನ್ಮಧ್ಯೆ ಜೀವ ವಿಜ್ಞಾನಿಗಳು ಪಶ್ಚಿಮ ಘಟ್ಟದಲ್ಲಿ ಮಹತ್ವದ ಸಂಶೋಧನೆಯೊಂದನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಅದೇ ನೋಡಿ ಈ ಬಾರಿಯ ಈ ಕನಸು.ಕಾಂ ಸ್ಪಷಲ್ ಸ್ಟೋರಿ.

ಅದು ಕಣ್ಣುಕೋರೈಸುವ ಪ್ರಖರ ಮಿನುಗುವ ಗುಣಹೊಂದಿವೆ. ಕಡು ಕೆಂಪು ವರ್ಣ ಹಾಗೂ ಕಿತ್ತಳೆ ಬಣ್ಣಗಳಿಂದ ಕೂಡಿವೆ. ಪುಟ್ಟದಾದ ಕಾಲುಗಳನ್ನು ಹೊಂದಿವೆ. ಹೌದು ಅದೇ ನೋಡಿ ವಿಶೇಷ ರೀತಿಯ ಒಂದು ಕಪ್ಪೆ... ಆ ಕಪ್ಪೆ ಕಂಡು ಬಂದಿದ್ದು ಇದೇ ಪಶ್ಚಿಮ ಘಟ್ಟದಲ್ಲಿ ಜೀವ ವಿಜ್ಞಾನ ಕ್ಷೇತ್ರದ ಹೊಸ ಸಂಶೋಧನೆಗೆ ಇದೊಂದು ಗರಿ ಮೂಡಿಸಿದಂತಿದೆ. ದಿಲ್ಲಿ ವಿಶ್ವವಿದ್ಯಾನಿಲಯದ ಎಸ್.ಡಿ. ಬಿಜು ಮತ್ತು ಬ್ರೂಸೆಲ್ಸ್ ಫ್ರೀ ವಿ.ವಿ.ಯ ಜೀವ ವಿಜ್ಞಾನ ಸಂಶೋಧಕರಾದ ಫ್ರಾಂಕಿ ಬೊಸ್ಸಿಯಸ್ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಈ ಕಪ್ಪೆ ಕಂಡುಬಂದವು. ಇದಕ್ಕೆ ರಾವ್ ಚೆಸ್ಟರ್ಸ್ ರೆಸಪ್ಲೆಂಡರ್ಸ್ ಎಂದು ನಾಮಕರಣ ಮಾಡಲಾಯಿತು.

ಮುಂದೆ ಓದಿ

ವಿಶೇಷ ಲೇಖನ

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಗುಲಬರ್ಗಾ ಜಿಲ್ಲೆಯಲ್ಲಿ 2001 ರ ಜನಗಣತಿಯ ಪ್ರಕಾರ 35382 ಪುರುಷರು ಮತ್ತು 25275 ಮಹಿಳೆಯರು ಸೇರಿದಂತೆ ಒಟ್ಟು 60557 ಅಂಗವಿಕಲರಿದ್ದಾರೆ. ವಿವಿಧ ಅಂಗವಿಕಲರ ವಿವರ ಇಂತಿದ್ದು, ಕಂಸಿನಲ್ಲಿ ಮಹಿಳಾ ಅಂಗವಿಕಲರ ಸಂಖ್ಯೆ ತೋರಿಸಲಾಗಿದೆ. ದೈಹಿಕ ಅಂಗವಿಕಲತೆ-12243 (7120), ಅಂಧರು-15926(12305), ಕಿವುಡರು ಮತ್ತು ಮೂಗರು-4563(3862), ಬುದ್ಧಿಮಾಂಧ್ಯರು-2650(1988). ಜಿಲ್ಲೆಯಲ್ಲಿ 2009-10ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳ ವಿವರವೇ ಈ ಲೇಖನ.



ಶಿಷ್ಯವೇತನ:
ಎಲ್ಲ ತರಹದ ಅಂಗವಿಕಲತೆಯನ್ನು ಹೊಂದಿರುವ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ಒಂದರಿಂದ ಹತ್ತನೇ ತರಗತಿ, ಸ್ನಾತಕೋತ್ತರ ತರಗತಿ, ವಿವಿಧ ವೃತ್ತಿಪರ ತರಬೇತಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಶೇ. 40 ರಷ್ಟು ಅಂಕ ಗಳಿಸಿದ ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಲಾಗುವುದು. ಗುಲಬರ್ಗಾ ಜಿಲ್ಲೆಯಲ್ಲಿ ಕಳೆದ ವರ್ಷ 369 ಅಂಗವಿಕಲ ವಿದ್ಯಾರ್ಥಿಗಳಿಗೆ 4.15 ಲಕ್ಷ ರೂ. ಶಿಷ್ಯವೇತನ ಮಂಜೂರು ಮಾಡಲಾಗಿದೆ. ಇವರಲ್ಲಿ 151 ಹೆಣ್ಣುಮಕ್ಕಳು ಹಾಗೂ 218 ಗಂಡುಮಕ್ಕಳಿದ್ದಾರೆ.
ಪ್ರೋತ್ಸಾಹಧನ:
ಅಂಗವಿಕಲ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಹಾಗೂ ಅವರ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ವಿವಿಧ ಪಬ್ಲಿಕ್ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ. 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳು ಅರ್ಹರಾಗಿರುವರು. ಜಿಲ್ಲೆಯಲ್ಲಿ ಹೋದ ವರ್ಷ 16 ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ 15200 ರೂ. ಪ್ರೋತ್ಸಾಹ ಧನ ನೀಡಲಾಗಿದೆ.

ಮೆಟಾಫೋನ್ ಸೌಲಭ್ಯ:
ಅಂಗವಿಕಲ ಫಲಾನುಭವಿಗಳ ನಿವಾಸದ ಬಳಿ ಅಥವಾ ಅವರ ಪರಿಚಯಸ್ಥರ ಅಂಗಡಿ ಬಳಿ ಅತೀ ಕಡಿಮೆ ಮೌಲ್ಯದ ಮೆಟಾಫೋನ್ಗಳ ಸೌಲಭ್ಯ ಕಲ್ಪಿಸಿ ಅವರ ಸ್ವಯಂ ಉದ್ಯೋಗಕ್ಕೆ ನೆರವಾಗುವುದು ಯೋಜನೆಯ ಉದ್ದೇಶವಾಗಿದೆ. ಈಗ ನೀಡುತ್ತಿರುವ ಟೆಲಿಫೋನ್ ಬೂತ್ಗಳ ಬದಲಾಗಿ ಮೆಟಾಪೋನ್ಗಳನ್ನು ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ 2008-09ರಲ್ಲಿ ಜಿಲ್ಲೆಗೆ 1.12 ಲಕ್ಷ ರೂ. ಬಿಡುಗಡೆಯಾಗಿದ್ದು, 56 ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.

ಹಿರಿಯ ನಾಗರಿಕರ ಕಲ್ಯಾಣ:
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಗುಲಬಗರ್ಾ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಮಹಬೂಬ್ ಸುಬಾನಿ ಟ್ರಸ್ಟ್ ಮತ್ತು ಸಂಜೀವನಿ ಶಿಕ್ಷಣ ಸಂಸ್ಥೆ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ಸ್ಥಾನಮಾನ ಕಾಪಾಡುವುದು, ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ಪೌಷ್ಟಿಕ ಆಹಾರ ಮತ್ತು ನೈರ್ಮಲ್ಯದ ಬಗ್ಗೆ ಸಲಹೆ ನೀಡುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಕ್ಕೆ ಹೋದ ವರ್ಷ 4.13 ಲಕ್ಷ ರೂ. ಬಿಡುಗಡೆಯಾಗಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಶಿವರುದ್ರ ಟ್ರಸ್ಟ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಹಳೆಯ ಎಸ್.ಪಿ. ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಶುಲ್ಕರಹಿತ ದೂರವಾಣಿ ಸಂಖ್ಯೆ 1090 ಇರುತ್ತದೆ. ಇದಕ್ಕಾಗಿ ಟ್ರಸ್ಟಿಗೆ ಕಳೆದ ವರ್ಷ 3.60 ಲಕ್ಷ ರೂ. ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 39800 ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ.
ಆಧಾರ:
ರಾಜ್ಯ ಸರ್ಕಾರವು ವಿದ್ಯಾವಂತ ಅಂಗವಿಕಲರ ಸ್ವಾವಲಂಬನೆಗಾಗಿ ಆಧಾರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 16 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಅಂಗವಿಕಲತೆ ಪ್ರಮಾಣ ಶೇ.40 ರಷ್ಟು ಹೊಂದಿದ ನಿರುದ್ಯೋಗಿ ವಿದ್ಯಾವಂತ ಅಂಗವಿಕಲರು ವ್ಯಾಪಾರ ಮಾಡಲು 15000 ರೂ. ಮೌಲ್ಯದ ಲೋಹದ ಪೆಟ್ಟಿಗೆ ಹಾಗೂ ಗರಿಷ್ಠ 20000 ರೂ.ವರೆಗೆ ಬಂಡವಾಳ ಸಾಲ ನೀಡಲಾಗುವುದು. ಈ ಯೋಜನೆಯಡಿ ಹೋದವರ್ಷ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ.

ಬಸ್ ಪಾಸ್ ಸೌಲಭ್ಯ:
ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಕಾರದಿಂದ ರಿಯಾಯತಿ ಬಸ್ ಪಾಸ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಈವರೆಗೆ 6000 ಅಂಗವಿಕಲರಿಗೆ ರಿಯಾಯಿತಿ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲದೆ ಶೇ. 100 ರಷ್ಟು ಅಂಧತ್ವ ಹೊಂದಿದವರಿಗೆ ಉಚಿತ ಬಸ್ಪಾಸ್ಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 41540 ಅಂಗವಿಕಲರಿಗೆ ವೈದ್ಯಕೀಯ ಗುರುತಿನ ಚೀಟಿ ವಿತರಿಸಲಾಗಿದೆ. ಉದ್ಯೋಗಸ್ಥ ಅಂಗವಿಕಲ ಮಹಿಳೆ ಮತ್ತು ಅಂಗವಿಕಲ ವಿದ್ಯಾರ್ಥಿನಿಯರಿಗಾಗಿ ಗುಲಬರ್ಗಾದಲ್ಲಿ ಹೊಸ ವಸತಿ ನಿಲಯ ಪ್ರಾರಂಭಿಸಲಾಗಿದೆ. ಈ ವಸತಿ ನಿಲಯದಲ್ಲಿ 50 ಅಂಗವಿಕಲ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಿದ್ದು ಕಳೆದ ವರ್ಷ 6.49 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ನಿಲಯದಲ್ಲಿರುವವರಿಗೆ ಉಚಿತ ಊಟ, ವಸತಿ ಸೌಲಭ್ಯ ನೀಡಲಾಗುತ್ತಿದೆ.
ವಿಶೇಷ ಶಾಲೆಗಳು:
ಗುಲಬರ್ಗಾ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಎದುರು ಅಂಧಮಕ್ಕಳ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಅಂಧ ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗುಲಬರ್ಗಾ ದೇವತಾ ಕಣ್ಣಿನ ಆಸ್ಪತ್ರೆಯ ವೈದ್ಯರು ಈ ಶಾಲೆಯ ಮೂವರು ಅಂಧಮಕ್ಕಳ ಕಣ್ಣಿನ ಕಾನರ್ಿಯಾ ಹಾಗೂ ಇಬ್ಬರು ಮಕ್ಕಳ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಈ ಮಕ್ಕಳಿಗೆ ದೃಷ್ಟಿ ಬರುವಂತೆ ಮಾಡಿದ್ದಾರೆ. ಈ ಶಾಲೆಯಲ್ಲಿ ಒಟ್ಟು 44 ಅಂಧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಈ ಶಾಲೆಯ 3 ವಿದ್ಯಾರ್ಥಿಗಳು ಶೇ.90ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇದಲ್ಲದೆ ಆಳಂದ ಕಾಲೋನಿಯಲ್ಲಿ ಬಾಲಕರ ಕಿವುಡು ಮತ್ತು ಮೂಗರ ಸರ್ಕಾರಿ ವಸತಿ ಶಾಲೆಯಿದ್ದು, ಈ ಶಾಲೆಯ ಮಕ್ಕಳಿಗೂ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ಗುಲಬರ್ಗಾ ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆಗೆ 4.77 ಲಕ್ಷ ರೂ. ಹಾಗೂ ಅಂಜನಾ ಬಾಲಕಿಯರ ಕಿವುಡು ಮತ್ತು ಮೂಗರ ವಸತಿ ಶಾಲೆಗೆ 5.19 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಸ್ವ-ಸಹಾಯ ಗುಂಪು:
ರಾಜ್ಯ ಸರ್ಕರವು ಪ್ರಸ್ತುತ ವರ್ಷ ಅಂಗವಿಕಲರಿಗಾಗಿ ವಿಶೇಷ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಸ್ಫೂರ್ತಿ ಸ್ವಸಹಾಯ ವಿನೂತನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ 18 ರಿಂದ 45 ವರ್ಷದವರೆಗಿನ ಅಂಗವಿಕಲರಿಗೆ ಸ್ವಯಂ ಉದ್ಯೋಗ ನಿರತರನ್ನಾಗಿ ಮಾಡಿ ಸ್ವಾವಲಂಬಿ ಜೀವನ ನಿರ್ವಹಿಸಲು ಅನುಕೂಲ ಕಲ್ಪಿಸಲಾಗುವುದು. ಯೋಜನೆಯನ್ವಯ ರಚಿಸಲಾಗುವ ಪ್ರತಿ ಸ್ವ-ಸಹಾಯ ಗುಂಪಿಗೆ 30 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಗುಲಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿಗೆ ಈ ಯೋಜನೆ ಮಂಜೂರಾಗಿದೆ.

ಸಮೂಹ ವಿಮಾ:
ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಹಾಗೂ ವಾರ್ಷಿಕ 12000ರೂ.ಗಿಂತ ಕಡಿಮೆ ವರಮಾನ ಹೊಂದಿದ ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರಿಗೆ ಭಾರತೀಯ ಜೀವ ವಿಮಾ ನಿಗಮಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ವಿಮಾ ಕಂತು ಪಾವತಿಸಿ ವಿಮಾ ಸೌಲಭ್ಯ ಒದಗಿಸಲಾಗುವುದು. ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರ ನಿಧನದ ನಂತರ ಬುದ್ಧಿಮಾಂದ್ಯ ವ್ಯಕ್ತಿಗಳ ಪೋಷಣೆಗಾಗಿ ಜೀವ ವಿಮಾ ನಿಗಮದಿಂದ ಮಾಸಿಕ ವರಮಾನ ದೊರೆಯುತ್ತದೆ. ಕಳೆದ ವರ್ಷ 11 ಫಲಾನುಭವಿಗಳು ಜೀವವಿಮಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಅಂಗವಿಕಲರ ಪುನರ್ವಸತಿ ಯೋಜನೆ:
ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರ ಅಂಗವಿಕಲರ ಗ್ರಾಮೀಣ ಹಾಗೂ ಸಮುದಾಯಾಧಾರಿತ ಪುನರ್ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಅಂಗವಿಕಲರ ಅಗತ್ಯತೆಗಳ ಬಗ್ಗೆ ಅವರ ವಾಸ ಸ್ಥಳದಲ್ಲಿಯೇ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಅಂಗವಿಕಲರೊಬ್ಬರನ್ನು ಗ್ರಾಮ ಪುನರ್ವಸತಿ ಕಾರ್ಯಕರ್ತರೆಂದು(ವಿಆರ್ಡಬ್ಲ್ಯೂ) ಹಾಗೂ ತಾಲೂಕು ಪಂಚಾಯಿತಿಯಲ್ಲಿ ಪದವಿ ಪಡೆದ ಅಂಗವಿಕಲರೊಬ್ಬರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರೆಂದು(ಎಂಆರ್ಡಬ್ಲ್ಯೂ) ನೇಮಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 337 ಗ್ರಾಮೀಣ ಹಾಗೂ 10 ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಕಳೆದ ವರ್ಷ ಕಾರ್ಯಕರ್ತರ ಗೌರವಧನಕ್ಕಾಗಿ 38.46 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದಲ್ಲದೆ ರಾಜ್ಯ ಸರ್ಕಾರ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮುದಾಯಾಧಾರಿತ ಪುನರ್ವಸತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ಜಿಲ್ಲೆಯ ಆಳಂದ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ.
ವರದಿ: ಜಿ. ಚಂದ್ರಕಾಂತ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಭೀಕರ ಲೈಲಾ ಚಂಡಮಾರುತ ನಾಳೆ ಕರ್ನಾಟಕ್ಕೆ ಪ್ರವೇಶಗೈಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಇದರಿಂದಾಗಿ ಕರಾವಳಿ ಹಾಗೂ ತೀರ ಪ್ರದೇಶದಲ್ಲಿ ಎಚ್ಚರಿಕೆ ಸೂಚಿಸಲಾಗಿದೆ. ಮುಂದಿನ 48ಗಂಟೆಗಳಲ್ಲಿ ರಾಜ್ಯದಲ್ಲಿ ಭೀಕರ ಮಳೆಯಾಗುವ ಸಾಧ್ಯತೆಯಿದೆ. ಲೈಲಾ ಚಂಡಮಾರುತ ಪರಿಣಾಮ ಮುಂಗಾರು ಮಳೆಯೂ ಈ ಬಾರಿ ಬೇಗ ಆಗುವ ನಿರೀಕ್ಷೆಯಿದೆ.ಪಶ್ಚಿಮ ಬಂಗಾಳಕರಾವಳಿಯಲ್ಲಿ ಇಂದು ರಾತ್ರಿಯೇ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಬಹುವಾಗಿದೆ. ಮೀನುಗಾರರಿಗೆ ಆಳ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಇಷ್ಟು ದಿನ ಬಿಸಿಲು ಧಗೆ ಎಂದು ಬೆವರು ಹಿಂಡುತ್ತಿದ್ದವರು ಅಯ್ಯೋ ಯಾಕಪ್ಪಾ ಬಂತು ಇಂಥ ಮಳೆ ಎನ್ನೋ ಸ್ಥಿತಿ...ಹೌದು ಬಂಗಾಳಕೊಲ್ಲಿಯಲ್ಲಿ ಬೀಸಿರುವ ಲೈಲಾ ಚಂಡಮಾರುತ ಇದಕ್ಕೆ ಕಾರಣ. ಕರ್ನಾಟಕ ರಾಜ್ಯದ ಕರಾವಳಿ ತೀರಪ್ರದೇಶಗಳು, ದಕ್ಷಿಣದ ಕೆಲವು ಭಾಗಗಳಲ್ಲಿ ಮಳೆ ಬಿರುಸಿನಿಂದ ಸುರಿದಿದೆ. ಭರ್ಜರಿ ಮಳೆಯೊಂದಿಗೆ ಸಿಡಿಲು, ಗುಡುಗು, ಮಿಂಚು, ಗಾಳಿಯ ಸಾಥ್ ಕಂಡುಬಂದಿವೆ.




ಲೈಲಾ ಚಂಡಮಾರುತದ ಪ್ರಭಾವದಿಂದ ಇದೀಗ ಮಳೆಯಾಗುತ್ತಿದ್ದು ಈ ಒಂದು ಪರಿಸ್ಥಿತಿ ರಾಜ್ಯಾದ್ಯಂತ ಮುಂದಿನ 48ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ತಿಳಿಸಿದೆ.
ತಮಿಳ್ನಾಡು ಆಂದ್ರ ಪ್ರದೇಶಗಳಲ್ಲಿ ಗಂಟೆಗೆ 75 ಕಿಲೋಮೀಟರ್ ವೇಗದಲ್ಲಿ ಲೈಲಾ ಬೀಸುತ್ತಿದ್ದು ತೀವ್ರ ಮಳೆಯಾಗಿದೆ. ಈ ಭೀಕರ ಮಳೆಯಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಮುಂಜಾಗರೋಕತೆಗಾಗಿ ಜನತೆಯನ್ನು ಸ್ಥಳಾಂತರಗೊಳಿಸಲಾಗಿದೆ.

ಮೀನುಗಾರರಿಗೆ ಸೂಚನೆ: ಸಮುದ್ರದಲ್ಲಿ ತೂಫಾನ್ ಏಳುವ ಸಾಧ್ಯತೆಗಳೂ ಸೇರಿದಂತೆ ಭೀಕರ ಮಳೆ ಸಂಭವಿಸುವ ಸಾಧ್ಯತೆಗಳಿಂದ ಅಪಾಯ ಹೆಚ್ಚಾಗುವ ನಿಟ್ಟಿನಲ್ಲಿ ಮೀನುಗಾರರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದೆ. ಮೀನುಗಾರರು ಸದ್ಯದ ದಿನಗಳಲ್ಲಿ ಮೀನುಗಾರಿಕೆಗೆ ತೆರಳಬಾರದೆಂಬ ಮುನ್ಸೂಚನೆ ನೀಡಲಾಗಿದೆ.

ಮುಂದೆ ಓದಿ
9:12 PM

ಭಕ್ತಿಗಾನ

Posted by ekanasu

ಪ್ರಾದೇಶಿಕ ಸುದ್ದಿ

ಶ್ರೀಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ಹಿರಿಯ ಗಾಯಕ ಜೇಸುದಾಸ್ ಅವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಯಿತು.

ಮುಂದೆ ಓದಿ
2:09 PM

ದ ಮಿಸ್ಟರಿ...

Posted by ekanasu

ಸಿನೆಮಾ





ಅದೊಂದು ದಟ್ಟವಾದ ಭಯಾನಕ ಕಾಡು. ಚಾರಣದ ಖುಷಿಯನ್ನು ಸವಿಯುತ್ತಿರುವ ಹುಡುಗರು. ಮರದ ರೆಂಬೆ ಕೊಂಬೆಗಳ ಜೊತೆ ಆಟವಾಡುತ್ತಾ ತರಗೆಲೆಯನ್ನು ಹಾರಿಸುತ್ತಾ ನಡೆಯುತ್ತಿದ್ದವರು. ಅದಾಗಲೇ ಹರಿಯುತ್ತದೆ ರಕ್ತಪಾತ. ಆ ಸಾವು ಸಂಭವಿಸಿದಾದರೂ ಹೇಗೆ? ಆ ಅಗೋಚರ ಶಕ್ತಿಯಾದರೂ ಯಾವುದು? ಎನ್ನುವ ನಿಗೂಢ ಹಾಗೂ ತರ್ಕಕ್ಕೆ ನಿಲುಕದ ಪ್ರಶ್ನೆಯೊಂದಿಗೆ ಸಾಗುತ್ತದೆ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ದ ಮಿಸ್ಟರಿ ಎಂಬ 40 ನಿಮಿಶಗಳ ಚಲನಚಿತ್ರ.

ಶ್ರೀಕಾಂತ್ ಕುಂಡಂತಾಯ ಚಿತ್ರದ ನಿರ್ದೇಶಕ. ಎರಡು ವರ್ಷದ ಹಿಂದೆ ಕಂಡ ಸಿನಿಮಾದ ಕನಸನ್ನು ಸ್ನೇಹಿತರಾದ ಮಾಧವ ಹೊಳ್ಳ ಹಾಗೂ ಸನಲ್ ಜೊತೆಗೂಡಿ ನನಸಾಗಿಸಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಇರುವ ಜವಾಬ್ದಾರಿಗಳನ್ನು ಅರಿಯುವ ಉದ್ದೇಶದಿಂದ, 10 ಜನ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ಚಿತ್ರಹೊರತಂದಿದ್ದಾರೆ.

ಹೊಸ ಉಪಕರಣಗಳಿಲ್ಲದೆ ಸಾಮಾನ್ಯ ಕ್ಯಾಮೆರಾ ಸಹಾಯದಿಂದ ತಮ್ಮ ಕ್ರಿಯಾತ್ಮಕ ಆಲೋಚನೆಗಳಿಂದಾಗಿ ಭಯಾನಕ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆಧುನಿಕ ತಂತ್ರಜ್ಞಾನದ ಕೊರತೆಯಿದ್ದಾಗಿಯೂ ಎತ್ತರದ ಜಾಗದಿಂದ ದೃಶ್ಯಗಳನ್ನು ತೆಗೆಯಬೇಕಾದ ಸಂದರ್ಭದಲ್ಲಿ ಮರವನ್ನು ಹತ್ತಿ, ಕ್ಯಾಮೆರಾವನ್ನು ಹಗ್ಗದಲ್ಲಿ ಕಟ್ಟಿ ರಾಠೆಯ ಮೂಲಕ ಇಳಿಸಿ, ಹತ್ತಿಸಿ ದೃಶ್ಯಗಳ ಚಿತ್ರೀಕರಣ ನಡೆಸಿರುವ ವಿದ್ಯಾರ್ಥಿಗಳ ಪರಿಶ್ರಮವನ್ನು ಮೆಚ್ಚಲೇ ಬೇಕು.

ಸಂದೇಶವುಳ್ಳ ಚಲನಚಿತ್ರಗಳು ಇಂದು ಸಾಮಾನ್ಯ. ಆದರೆ ಅಂತಹಾ ಯಾವುದೇ ಸಂದೇಶಗಳಿಲ್ಲದೆ ತಮ್ಮ ಬುದ್ದಿ ಹಾಗೂ ಸಂಕಲನದಲ್ಲಿ ತಾಂತ್ರಿಕತೆಗೆ ಸಾಣೆ ಹಿಡಿದು ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಈ ತಂಡ ಯಶಸ್ವಿಯಾಗಿದೆ. ವಿದ್ಯಾರ್ಥಿಗಳ ಈ ಯಶಸ್ಸಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಯಶೋವರ್ಮ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗ್ಡೆ.
ವಿದ್ಯಾರ್ಥಿಗಳ ಆಸಕ್ತಿಗೆ ಪುಷ್ಟಿ ನೀಡಿದವರು ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳ, ಕಾಲೇಜಿನ ಸ್ಟುಡಿಯೋ ಟೆಕ್ನಿಕಲ್ ಚೀಫ್ ಅಭಿಷೇಕ್ ಮರಾಠೆ.

ಪರಿಕಲ್ಪನೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಶ್ರೀಕಾಂತ್ ಕುಂಡಂತಾಯ, ಛಾಯಾಗ್ರಹಣ ಸನಲ್ ಹಾಗೂ ಸಂಕಲನದಲ್ಲಿ ಅಭಿಷೇಕ್ ಮರಾಠೆಯವರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಚಿತ್ರದ ನಿರ್ಮಾಪಕ ಮಾಧವ ಹೊಳ್ಳ, ಸಹ ನಿರ್ಮಾಪಕ ಯತಿನ್ ವಿದ್ಯಾರ್ಥಿಗಳಾದ ಸೌಹಾರ್ದ್ , ಕಾರ್ತಿಕ್, ಮನೋಜ್, ಸಿರಾಜ್, ಚೇತನ್ ಹಾಗೂ ಸನಲ್ ಇವರುಗಳ ನಟನೆ ಚಿತ್ರಕ್ಕೆ ಜೀವ ತುಂಬಿದೆ.


ಬೊರ್ಗಲ್ಗುಡ್ಡೆ ಮಂಜುನಾಥ್

ಮುಂದೆ ಓದಿ

ವಿಚಾರ
ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.



ಉಪಭೋಗ-ಆಯುಷ್ಯ

ಜಾಗತೀಕರಣದ ನೆರವಿನಿಂದ ನಮ್ಮ ಉಪಭೋಗ ಸಂಸ್ಕೃತಿಯು ವರ್ಧಿಸುತ್ತಿದೆಯಷ್ಟೆ. ಅದೇವೇಳೆ, ನಮ್ಮ ಆಯುಷ್ಯ ಕ್ಷಯಿಸುತ್ತಲೇ ಇದೆ. ಉಪಭೋಗಗಳ ಅನುಭವಕ್ಕಾಗಿಯೇ ನಮ್ಮ ಸಂಪೂರ್ಣ ಜೀವನವನ್ನು ವ್ಯಯಿಸಿಬಿಡುತ್ತೇವಲ್ಲಾ, ಜೀವನದ ಅರ್ಥ, ಉದ್ದೇಶ ಇಷ್ಟೇಯೇ?
'ದಿನಮಪಿ ರಜನೀ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ
ಕಾಲಃ ಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಾಯುಃ' ('ಚರ್ಪಟ ಪಂಜರಿಕಾ')
'ಹಗಲು-ರಾತ್ರಿ, ಸಂಜೆ-ಬೆಳಗು, ಚಳಿಗಾಲ-ವಸಂತಕಾಲ ಇವೆಲ್ಲ ಪುನಃಪುನಃ ಬರುತ್ತ ಹೋಗುತ್ತ ಇರುತ್ತವೆ. ಇದು ಕಾಲನ ಆಟ. ಪರಿಣಾಮ, ನಮ್ಮ ಆಯುಷ್ಯದ ಕ್ಷಯ. ಆದರೆ, ಆಯುಷ್ಯ ಕುಂದುತ್ತಿದ್ದರೂ ಆಶೆ ಮಾತ್ರ ಬೆಳೆಯುತ್ತಲೇ ಇರುತ್ತದಲ್ಲ!'
ಈ ಆಶೆಯ ಬೆಂಬತ್ತಿ, ಉಪಭೋಗವನ್ನೇ ಆನಂದವೆಂದು ಭ್ರಮಿಸಿ, ಜೀವನವನ್ನು ಅರಿಯಲಾರದವರಾಗಿ, ಕೊನೆಗೊಮ್ಮೆ ಭ್ರಮನಿರಸನ ಹೊಂದಿ, ಅಷ್ಟರಲ್ಲಿ ಕಾಲ ಮಿಂಚಿಹೋಗಿರುವುದರಿಂದಾಗಿ ಬಾಳನ್ನು ವ್ಯರ್ಥಮಾಡಿಕೊಳ್ಳುತ್ತೇವಲ್ಲಾ, ಅದರ ಬದಲು, ವೇದಾಂತವೆಂದು ನಾವು ಉಪೇಕ್ಷಿಸುವ ಜೀವನತತ್ತ್ವವನ್ನೊಂದಿಷ್ಟು ಅರಿಯಲು ಯತ್ನಿಸಬಾರದೇಕೆ?
ಶಿವೋಹಂ

'ನ ಭೂಮಿರ್ನ ತೋಯಂ, ನತೇಜೋ ನ ವಾಯುರ್
ನ ಖಂ ನೇಂದ್ರಿಯಂ ವಾ, ನ ತೇಷಾಂ ಸಮೂಹಃ
ಅನೈಕಾಂತಿಕತ್ವಾತ್ ಸುಷುಪ್ತೈಕ ಸಿದ್ಧಃ
ತದೇಕೋವಶಿಷ್ಟಃ ಶಿವಃ ಕೇವಲೋಹಂ' ('ದಶಶ್ಲೋಕೀ')
'ನಾನು ಭೂಮಿಯಲ್ಲ, ನೀರಲ್ಲ, ತೇಜಸ್ಸಲ್ಲ, ವಾಯುವಲ್ಲ, ಆಕಾಶವಲ್ಲ, ಇಂದ್ರಿಯವೂ ಅಲ್ಲ. ಇವೆಲ್ಲವುಗಳ ಸಮೂಹವೂ ನಾನಲ್ಲ. ಏಕೆಂದರೆ, ಇವುಗಳಿಗೆ ಏಕೀಭಾವ ಸ್ಥಿರವಾಗಿಲ್ಲ. ಆದ್ದರಿಂದ, ಗಾಢನಿದ್ರಾವಸ್ಥೆಯಲ್ಲಿ ಪ್ರತ್ಯೇಕವಾಗಿ ಇವುಗಳಿಂದಾಚೆ ಎದ್ದು ಉಳಿಯುವ ಶಿವ(ದೈವ)ತತ್ತ್ವವೇ ನಾನು.'
ಇಂಥದೊಂದು ಅರಿವನ್ನು ಬೆಳೆಸಿಕೊಂಡಾಗ ನಾವು ಹೊಂದುವ ಆನಂದ ಅದುವೇ ನಿಜವಾದ ಜೀವನಾನಂದ. ಅಂಥ ಆನಂದವು ನಮಗೆ ಉಪಭೋಗವಸ್ತುಗಳಿಂದ ದೊರಕಲು ಸಾಧ್ಯವೆ?
ಜೀವನದ ಈ ಆನಂದಘಟ್ಟವನ್ನು ತಲುಪಿದ ಆದಿಶಂಕರರು ಹಿಮಾಲಯದಲ್ಲಿ ಲೀನವಾಗುವ ಮುನ್ನಾ ರಾತ್ರಿ ಈ ರೀತಿ ಹೇಳಿಕೊಳ್ಳುತ್ತಿದ್ದರು,
'ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ
ನಚಶ್ರೋತ್ರಜಿಹ್ವೇನ ಚ ಘ್ರಾಣ ನೇತ್ರೇ
ನಚ ವ್ಯೋಮ ಭೂಮಿರ್ನತೇಜೋನವಾಯುಃ
ಚಿದಾನಂದರೂಪಃ ಶಿವೋಹಂ ಶಿವೋಹಂ'
'ಅಂತಃಕರಣಗಳಾದ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವು ನಾನಲ್ಲ. ಜ್ಞಾನೇಂದ್ರಿಯಗಳಾದ ಕಿವಿ, ನಾಲಗೆ, ಮೂಗು, ಕಣ್ಣು, ಚರ್ಮ ಇವು ನಾನಲ್ಲ. ಪಂಚಭೂತಗಳಾದ ಆಕಾಶ, ಭೂಮಿ, ತೇಜಸ್ಸು, ವಾಯು, ಜಲ ಇವು ನಾನಲ್ಲ. ಚಿದಾನಂದರೂಪನಾದ ಶಿವನೇ ನಾನು, ಶಿವನೇ ನಾನು, ಶಿವನೇ ನಾನು.'
ಇಂಥ ಜೀವನದೃಷ್ಟಿಯನ್ನು ರೂಢಿಸಿಕೊಂಡರೆ ನಮಗೆ ಈ ಜೀವಿತದಲ್ಲಿ ಮೋಹಜನ್ಯ ಕಳವಳವೆಂಬುದಿಲ್ಲ. 'ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ' ಎಂಬ ಭಗವದ್ಗೀತೆಯ ನುಡಿಯಂತೆ ನಾವು ದುಃಖದ ಸಂದರ್ಭಗಳಲ್ಲಿ ಉದ್ವೇಗಕ್ಕೊಳಗಾಗದಿರಲು ಮತ್ತು ಸುಖದ ಸನ್ನಿವೇಶಗಳಲ್ಲಿ ನಿಷ್ಪೃಹರಾಗಿ ಮುನ್ನಡೆಯಲು ಸಾಧ್ಯ. ಇದಕ್ಕಿಂತ ಸೌಭಾಗ್ಯ ನಮಗೆ ಈ ಜೀವನದಲ್ಲಿ ಇನ್ನೊಂದುಂಟೆ?
ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವ ಸಂಕಲ್ಪವನ್ನು ಶಂಕರ ಜಯಂತಿಯ ಈ ದಿನ ನಾವು ಮಾಡೋಣವಲ್ಲವೆ?


ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ಭುಬನೇಶ್ವರ - ಕಪಿಲಾಶ - ಪುರಿ - ಕೊನಾರ್ಕ ಯಾತ್ರೆ

ಮೇ ೧ರಿಂದ ೧೦ ರ ವರೆಗೆ ನಾನು ಒರಿಸ್ಸಾ ಪರ್ಯಟನೆಗೆ ಹೋದೆ. ನನ್ನ ಪ್ರಯಾಣ ಆರಂಭವಾದದ್ದು ಕಾಸರಗೋಡಿಂದ. ಅಪರಾಹ್ನ ಚೆನ್ನೈ ಸ್ಪೆಷಲ್ ರೈಲಿನಲ್ಲಿ ಪ್ರಯಾಣ ಬೆಳೆಸಿದೆ.



ಅಹಾರ ಕೈಯಲ್ಲಿ ತೆಗೆದುಕೊಂಡಿಲ್ಲವಾದ್ದರಿಂದ ಕಣ್ಣೂರಿನ ನಂತರ ಬಂದ ರಾತ್ರಿ ಭೋಜನವನ್ನು ಪಡಕೊಂಡು ತಿಂದೆ. ಮರುದಿನ ಬೆಳಗ್ಗೆ ೮:೩೦ ಕ್ಕೆ ಚೆನ್ನೈ ತಲುಪಬೇಕಿದ್ದ ರೈಲು ೮:೦೫ ಕ್ಕೇ ತಲುಪಿತು. ಬಹುಷಃ ಆ ರೈಲು ಪ್ರತೀ ಮುಖ್ಯ ಸ್ಟೇಷನ್ ಗೆ ಸಮಯಕ್ಕೆ ಮುಂಚಿತವಾಗಿಯೇ ತಲಪುತ್ತಿತ್ತು. ಸಹ ಪ್ರಯಾಣಿಕರೋರ್ವರು ಇದು ಸರ್ವೇ ಸಾಮಾನ್ಯ ಎಂದರು. ಆಶ್ಚರ್ಯವಲ್ಲವೇ. ಅದಕ್ಕೇ ಆ ರೈಲಿನ ಹೆಸರನ್ನು ಸ್ಪೆಷಲ್ ಎಂದು ಇರಿಸಿರಬೇಕು ಎಂದುಕೊಂಡೆ. ಈಗ ಮಂಗಳೂರಿಂದ ಚೆನ್ನೈಗೆ ನಾಲ್ಕೈದು ರೈಲುಗಳಿದ್ದರೂ ಶೀಘ್ರವಾಗಿ ತಲುಪುವ ರೈಲು ಇದುವೇ.





ಅಲ್ಲಿಂದ ನನ್ನ ಪ್ರಯಾಣ ವಿಮಾನದಲ್ಲಿ ಮುಂದುವರಿಯಬೇಕು. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇಳಿದು ಸಬ್ ವೇ ಯ ಮೂಲಕ ದಾಟಿದರೆ ಪಾರ್ಕ್ ಸ್ಟೇಷನ್ ಲೋಕಲ್ ಟ್ರೈನು ಸಿಗುತ್ತದೆ. ಮೆಟ್ರೋ ರೈಲಿನಂತಹುದು. ಅದರಲ್ಲಿ ತ್ರಿಶೂಲಂ ಸ್ಟೇಷನ್ ತಲುಪಲು ಅರ್ಧ ಘಂಟೆಯ ಪ್ರಯಾಣಕ್ಕೆ ೭ ರೂ. ಅಲ್ಲಿಂದ ತುಸು ನಡೆದರೆ ಮೀನಂಬಾಕಂ ವಿಮಾನ ನಿಲ್ದಾಣಕ್ಕೆ ಸೇರಬಹುದು. ಆದರೆ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ನನ್ನ ದೊಡ್ಡಮ್ಮನ ಮಗ ಪ್ರಸಾದಣ್ಣ ಬಂದಿದ್ದ. ಪ್ರಸಾದಣ್ಣ ಬ್ಲೂ ಡಾರ್ಟ್ ಕಾರ್ಗೋದಲ್ಲಿ ಎರ್ ಕ್ರಾಫ್ಟ್ ಮೈಂಟೆನೆನ್ಸ್ ಎಂಜಿನಿಯರ್. ಅವರ ಮನೆಗೆ ಹೋಗಿ ಬೆಳಗ್ಗಿನ ಉಪಹಾರ ಲಗುಬಗೆಯಿಂದ ತಿಂದು ಪ್ರಸಾದಣ್ಣನ ಕಾರಿನಲ್ಲಿ ಮೀನಂಬಾಕಂ ತಲುಪಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಸೆಕ್ಯೂರಿಟಿ ಚೆಕ್ ನಂತರ ವಿಮಾನ ಏರಲು ಸುಮಾರು ಅರ್ಧ ತಾಸು ಬೇಕು. ನನ್ನ ಪ್ರಯಾಣ ಇಂಡಿಯನ್ ಏರ್ ಲೈನ್ಸ್ ನಲ್ಲಿ ಚೆನ್ನೈಯಿಂದ ಭುಬನೇಶ್ವರಕ್ಕೆ ಇತ್ತು. ನಮ್ಮ ಸಾಮಾನ್ಯ ಚಾಳಿಯಂತೆ ನೀರ ಬಾಟ್ಲಿ ತೆಗೆದುಕೊಂಡಿದ್ದೆ, ಧಗೆ ಬೇರೆ, ಅಂತಹ ಹವಾಮಾನದಲ್ಲಿ ಆಗಾಗ ನೀರು ಕುಡಿಯುತ್ತಿರಬೇಕು. ಪ್ರಸಾದಣ್ಣ ಹೇಳಿದ, ನೀರು ವಿಮಾನದ ಒಳಗೊಯ್ಯುವಂತಿಲ್ಲ. ಬಾಟ್ಲಿ ಬೇಕೇಬೇಕಾದರೆ ನೀರು ಚೆಲ್ಲಿ ತೆಕ್ಕೊಳ್ಳಬೇಕು ಎಂದು. ಸರಿ ಎಂದು ನೀರು ಚೆಲ್ಲಿದೆ. ಕೈಚೀಲದಲ್ಲಿ ಚೂರಿ, ಬ್ಲೇಡು, ದ್ರವ, ಜೆಲ್, ಪಟಾಕಿ, ಆಯುಧಗಳನ್ನು ಒಯ್ಯುವಂತಿಲ್ಲ. ಪರವಾನಗಿ ಇರುವ ಅಥವಾ ಸಾಮಾನ್ಯ ಉಪಯೋಗದ ವಸ್ತುವಾದರೆ ಅದನ್ನು ಚೆಕ್ ಇನ್ ಮಾಡುವಲ್ಲಿ ಲಗೇಜ್ ಜೊತೆಗೆ ಹಾಕಬೇಕು. ಇಂಡಿಯನ್ ನಲ್ಲಿ ಇಂತಹ ಒಟ್ಟು ಲಗೇಜ್ ಪರಿಮಿತಿ ೩೦ ಕೆ.ಜಿ. ಜೆಟ್ ಲೈಟ್, ಕಿಂಗ್ ಫಿಷರ್ ರೆಡ್ ಮುಂತಾದವುಗಳಲ್ಲಿ ಲಗೇಜ್ ಪರಿಮಿತಿ ೨೦ ಕೆ.ಜಿ.


ವಿಮಾನದಲ್ಲಿ ನಾನು ಈ ಹಿಂದೆಯೂ ಪ್ರಯಾಣ ಮಾಡಿದ್ದೇನೆ. ಪ್ರಥಮ ಬಾರಿಗೆ ಮಂಗಳೂರು - ಬೆಂಗಳೂರು - ಹೈದರಾಬಾದ್ ಹಾಗೂ ವಾಪಸ್ ಅದೇ ದಾರಿಯಾಗಿ, ಎರಡನೇ ಬಾರಿಗೆ ಮನೆಯವರೊಂದಿಗೆ ಮಂಗಳೂರು - ಬೆಂಗಳೂರು - ಕೊಲ್ಕತ್ತಾ - ಬಾಗ್ಡೋಗ್ರಾ (ಗ್ಯಾಂಗ್ಟಾಕ್) ಹಾಗೂ ವಾಪಸ್ ಅದೇ ದಾರಿಯಾಗಿ. ಈಗ ಮೂರನೆ ಬಾರಿಗೆ ಚೆನ್ನೈ ಭುಬನೇಶ್ವರ ಹಾಗೂ ವಾಪಸ್ ಅದೇ ದಾರಿಯಾಗಿ. ಆದರೂ ನಿರಂತರ ವಾಯು ಯಾನದಲ್ಲಿ ಹೋಗದಿರುವುದರಿಂದ ನೀರಿನಂತಹ ವಸ್ತುಗಳ ವಿಚಾರ ಮರೆತು ಹೋಗುತ್ತದೆ. ಅದು ಸೆಕ್ಯೂರಿಟಿ ಚೆಕ್ ಸಮಯದಲ್ಲಿ ಕಸಿವಿಸಿ ಉಂಟುಮಾಡುವಂತಹದ್ದು ಕೂಡಾ.

ವಿಮಾನ ಚೆನ್ನೈಯಿಂದ ವಿಶಾಖಪಟ್ನ ಕರಾವಳಿಯಾಗಿ ಸಮುದ್ರದ ಮೇಲೆ ಸುಮಾರು ಹತ್ತು ಕಿಲೋಮೀಟರ್ ಎತ್ತರದಲ್ಲಿ ಹಾರಿ ಭುಬನೇಶ್ವರ ತಲುಪಲು ಒಂದು ಘಂಟೆ ೫೦ ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ವೇಗ ಸುಮಾರು ೯೦೦ ಕಿ.ಮೀ. ಪ್ರತೀ ಘಂಟೆಗೆ ಇರುತ್ತದೆ. ಹೊಸ ಫ್ಲೈಟ್, ಪ್ರತೀ ಸೀಟಿನ ಮುಂದೆ ಎಂಟರ್ಟೈನ್ ವಿಡಿಯೋ, ಸೀಟಿನಲ್ಲಿ ಇಯರ್ ಫೋನ್ ಆಡಿಯೋ ಇತ್ತು. ೧೧:೦೫ ಕ್ಕೆ ಹೊರಟ ವಿಮಾನದಲ್ಲಿ ಊಟ ಕೊಟ್ಟರು. ಪುಲಾವ್, ಸಲಾದ್, ರಸಗುಲ್ಲಾ, ಹಸಿ ತರಕಾರಿ, ನೀರು, ಕಾಫಿ ಮುಂತಾದವುಗಳಿದ್ದವು. ಪ್ರಯಾಣ ದರ ಸುಮಾರು ೫ ಸಾವಿರ ರೂ. ವಿಮಾನ ೧೨:೪೫ ಕ್ಕೆ ಭುಬನೇಶ್ವರ ತಲುಪಿತು. ಭುಬನೇಶ್ವರದಲ್ಲಿ ಇಳಿಯುವುದಕ್ಕೆ ಹತ್ತು ನಿಮಿಷ ಮೊದಲು ಚಿಲ್ಕಾ ಸರೋವರದ ವಿಹಂಗಮ ದೃಶ್ಯ ಕಾಣಬಹುದು. ಅದು ವಿಮಾನದ ಎಡಭಾಗದಲ್ಲಿ ಬರುತ್ತದೆ. ದುರದೃಷ್ಟ ವಶಾತ್ ನನಗೆ ಮಧ್ಯದ ಸೀಟು ಲಭಿಸಿ ಆ ಮನರಂಜನೆ ತಪ್ಪಿ ಹೋಯಿತು.




ಚೆನ್ನೈ ಯಿಂದ ಕೊಲ್ಕತ್ತಾಕ್ಕೆ ಹೋಗುವ ಹಲವಾರು ಟ್ರೈನುಗಳು ಭುಬನೇಶ್ವರಕ್ಕೆ ಹೋಗುತ್ತವೆ. ಸುಮಾರು ೨೦ ತಾಸುಗಳ ಪಯಣ. ಚೆನ್ನೈ - ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ ನಂ. ೫ ವಾಜಪೇಯಿಯ ಸುವರ್ಣ ಚತುರ್ಭುಜದ ಪ್ರಥಮ ಭಾಗ ಉತ್ತಮ ರಸ್ತೆಯಾಗಿದೆ. ರಸ್ತೆಯ ದೂರ ಸುಮಾರು ೧೨೫೦ ಕಿ.ಮೀ.
ಭುಬನೇಶ್ವರ ಒರಿಸ್ಸಾದ ರಾಜಧಾನಿ. ನಮ್ಮ ಮಂಗಳೂರಿಗಿಂತ ಸ್ವಲ್ಪ ದೊಡ್ಡದಾಗಿದೆ, ಸುಮಾರು ಮೈಸೂರಿನಷ್ಟಾಗಬಹುದು. ಒರಿಸ್ಸಾ ರಾಜ್ಯದ ಹೆಸರು ಕೇಳಿದ ತಕ್ಷಣ ನೆನಪಿನಲ್ಲಿ ಬರುವುದು ಪುರಿ, ಕೊನಾರ್ಕ ದೇವಾಲಯಗಳು, ಚಿಲ್ಕಾ ಸರೋವರ, ಪೂರ್ವ ಸಮುದ್ರದ ದಂಡೆಗಳು, ಸಂಭಾಲ್ಪುರ ಕೈಮಗ್ಗದ ವಸ್ತ್ರ, ಖನಿಜದ ಅದಿರುಗಳು, ಉತ್ತಮ ಅಕ್ಕಿ-ಭತ್ತ, ಮಹಾನದಿ, ಇತ್ಯಾದಿ. ಇವೆಲ್ಲಾ ಇದ್ದರೂ ರಾಜ್ಯ ಹಿಂದುಳಿದ ರಾಜ್ಯ, ಜನರು ಶಾಂತಿ ಪ್ರಿಯರು ಮತ್ತು ಆಲಸಿಗಳು.


ಅಧಿಕಾಂಶ ಜನರು ಮೀನು ತಿನ್ನುವವರಾದರೂ ಅವರು ಇತರ ಮಾಂಸ ತಿನ್ನಲಾರರು. ಮದ್ಯವ್ಯಸನಿಗಳೂ ಕಡಿಮೆ. ಭತ್ತ, ತರಕಾರಿ, ಮಾವು, ಬಾಳೆ ಮುಂತದವು ರಾಜ್ಯದಲ್ಲಿ ಸಾಕಷ್ಟಿದೆ. ವಾಣಿಜ್ಯ ಕೃಷಿ ಬೆಳೆಗಳು, ಉದ್ದಿಮೆಗಳು ರಾಜ್ಯದಲ್ಲಿ ಕಡಿಮೆ.

ಭುಬನೇಶ್ವರದಲ್ಲಿ ಉದ್ಯಾನ ಸಸ್ಯಗಳ ಸಂಶೋಧನಾ ಸಂಸ್ಥೆ, ರತ್ನಗಳು ಮುಂತಾದವು ಲಭಿಸುತ್ತವೆ. ಭುಬನೇಶ್ವರದಲ್ಲಿ ಉಳಕೊಂಡರೆ ಒಂದು ದಿನ ಪುರಿ, ಕೊನಾರ್ಕ, ಎರಡನೆಯ ದಿನ ಚಿಲ್ಕಾ ಸರೋವರ, ಮೂರನೆಯ ದಿನ ಕಟಕ್, ಢೇಂಕನಾಲ್ - ಕಪಿಲಾಶ ಮುಂತಾದ ಪ್ರವಾಸೀ ತಾಣಗಳನ್ನೂ, ಒಂದು ದಿನ ಭುಬನೇಶ್ವರ ಪಟ್ಟಣವನ್ನೂ ಸುತ್ತಾಡಬಹುದು. ಭುಬನೇಶ್ವರದಿಂದ ಪುರಿಗೆ ಒಂದೂವರೆಯಿಂದ ಎರಡು ತಾಸು ದಾರಿ. ಸಾಕಷ್ಟು ಸೆಮಿ-ಡಿಲಕ್ಸ್ ಬಸ್ಸುಗಳು, ಮಿನಿ ಬಸ್ಸುಗಳಿವೆ. ಪುರಿ ಜಗನ್ನಾಥನ ದೇವಾಲಯ ಪುಣ್ಯ ಸ್ಥಳ ಹಾಗೂ ಐತಿಹಾಸಿಕ. ಬೆಳಗ್ಗೆ ಹಾಗೂ ಅಪರಾಹ್ನ ದೇವರ ಬಿಂಬದ ಅತೀ ಸಮೀಪಕ್ಕೆ ಹೋಗುವ ಅವಕಾಶವಿದೆ. ಪ್ರಸಾದಗಳೂ ಕ್ಷೇತ್ರದ ಅಂಗಣದಲ್ಲೇ ಸಿಗುತ್ತದೆ. ನೂರು ರುಪಾಯಿಗೆ ಎಲ್ಲಾ ಪ್ರಸಾದಗಳು ಲಭ್ಯ. ಪುರಿಯಿಂದ ಒಂದು ತಾಸು ದಾರಿ ಕೊನಾರ್ಕಕ್ಕೆ. ಕೊನಾರ್ಕದ ಸೂರ್ಯ ದೇವಾಲಯ ಜಗತ್ಪ್ರಸಿದ್ಧ ಪ್ರವಾಸೀ ಆಕರ್ಷಣೆಯ ದೇವಾಲಯ. ಪುರಿ, ಕೊನಾರ್ಕಗಳಲ್ಲಿ ಸಮುದ್ರ ತಟಗಳೂ ಆಕರ್ಷಕವಾಗಿದ್ದು ಬಹಳಷ್ಟು ಪ್ರವಾಸಿಗಳಿಗೆ ಮನರಂಜನೆಯನ್ನು ನೀಡುತ್ತದೆ. ಪೂರ್ವ ಸಮುದ್ರದ ತಟಗಳಲ್ಲಿ ಸೂರ್ಯೋದಯ ಅತ್ಯಂತ ರಮಣೀಯ ಆದರೂ ಸಂಜೆ ಸಮುದ್ರ ತಟದಿಂದ ತಂಪು ಗಾಳಿ ಬೀಸುತ್ತದೆ. ಸೂರ್ಯೋದಯ ಐದು ಘಂಟೆಯ ಆಸುಪಾಸಿನಲ್ಲೂ ಸೂರ್ಯಾಸ್ತ ಐದೂವರೆಯ ಆಸುಪಾಸಿನಲ್ಲೂ ಆಗುತ್ತದೆ.



ಸಮುದ್ರದಿಂದ ಲಭಿಸುವ ಶಂಖ, ಚಿಪ್ಪು, ಸಾಲಿಗ್ರಾಮಗಳು ಪುರಿ, ಕೊನಾರ್ಕಗಳಲ್ಲಿ ಸಿಗುತ್ತವೆ. ಕಾಡು ಉತ್ಪನ್ನಗಳಾದ ರುದ್ರಾಕ್ಷಿ, ಭದ್ರಾಕ್ಷಿ, ಹೆಡಿಗೆ - ಬುಟ್ಟಿಗಳು, ಕರಕುಶಲ ವಸ್ತುಗಳು ಕಾಣಸಿಗುತ್ತವೆ. ಭುಬನೇಶ್ವರದಿಂದ ಪುರಿಯ ಮಧ್ಯೆ ಪಿಪಿಲಿ ಎಂಬ ಸ್ಥಳದಲ್ಲಿ ಬಟ್ಟೆಗಳನ್ನು ಸೇರಿಸಿ ಹೊಲಿವ ಪಿಪಿಲಿ ಕರಕೌಶಲ್ಯದ ಹಲವಾರು ತರಾವಳಿ ವಸ್ತುಗಳು ಲಭ್ಯ. ಟೇಬಲ್ ಕ್ಲಾತ್, ಬ್ಯಾಗ್, ಪರ್ಸ್, ಕೊಡೆ, ಮ್ಯಾಟ್, ಉಯ್ಯಾಲೆ, ವಾಲ್ ಹ್ಯಾಂಗಿಂಗ್, ಇತ್ಯಾದಿ.

ನನ್ನ ಲಕ್ಷ್ಯ ಢೇಂಕನಾಲ್ ಭಾರತೀಯ ಸಮೂಹ ಸಂವಹನ ಸಂಸ್ಥೆ (ಐ.ಐ.ಎಂ.ಸಿ.) ಆಗಿದ್ದು ನನಗೆ ಅಲ್ಲಿ ಮೇ ೩ ರಿಂದ ೮ ರ ತನಕ ಸಮೂಹ ಸಂವಹನ ತರಬೇತಿ ನಡೆದಿತ್ತು. ಭುಬನೇಶ್ವರದಿಂದ ಢೇಂಕನಾಲ್ ೯೦ ಕಿ.ಮೀ. ದೂರದಲ್ಲಿದೆ. ಭುಬನೇಶ್ವರದಿಂದ ಕಟಕ್ ದಾರಿಯಾಗಿ ಹೋಗಬೇಕು. ಭುಬನೇಶ್ವರ್ ಹಾಗೂ ಕಟಕ್ ನ ಮಧ್ಯೆ ಕಾಟ್ಜೋಡಿ ನದಿಗಿಂತ ಮೊದಲು ಪಹಾಳ್ ಎಂಬೊಂದು ಸ್ಥಳವಿದೆ. ಅದು ಸಿಹಿ ತಿಂಡಿಗಳ ಗೂಡಂಗಡಿಗಳ ಸಮೂಹ. ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು ನೂರರಷ್ಟು ಇಂತಹ ಅಂಗಡಿಗಳಿವೆ. ಪನೀರ್, ರಸಗುಲ್ಲಾ, ಗುಲಾಬ್ ಜಾಮೂನ್, ಕೋವಾ, ಪೇಡಾ ಮುಂತಾದ ಹಾಲಿನ ಸಿಹಿ ತಿಂಡಿಗಳೇ ಹೆಚ್ಚಾಗಿ ಇಲ್ಲಿ ತಯಾರಿಸಲ್ಪಡುತ್ತವೆ.





ಕಟಕ್ ಒರಿಸ್ಸಾದ ಹಳೇ ರಾಜಧಾನಿ. ಕಟಕ್ ನ ಸಮೀಪ ರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆ ಇದೆ. ಇಲ್ಲಿ ದೇಶದ ವಿವಿಧೆಡೆಗಳಿಗೆ ಅನುಕೂಲಕರ ಭತ್ತದ ತಳಿಗಳನ್ನು ಸಂಶೋಧನೆಯ ಮೂಲಕ ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಕೃಷಿಕರಿಗೆ ೨೦ ಕಿಲೋದ ಬೀಜದ ಚೀಲಗಳನ್ನು ವಿತರಿಸಲಾಗುತ್ತದೆ.

ಭುಬನೇಶ್ವರದ ಬಳಿ ಸಿಹಿನೀರಿನ ಜಲಚರಗಳ ಸಂಶೋಧನಾ ಸಂಸ್ಥೆ ಕೌಶಲ್ಯಗಂಗಾ ಎಂಬಲ್ಲಿದೆ. ಕೆರೆಗಳಲ್ಲಿ ಮೀನು, ಸಿಗಡಿ, ಮುತ್ತು ಉತ್ಪಾದನೆಯ ಹಲವಾರು ತಂತ್ರಜ್ಞಾನಗಳನ್ನು ಈ ಸಂಶೋಧನಾ ಸಂಸ್ಥೆ ಆವಿಷ್ಕರಿಸಿದೆ.

ಢೇಂಕನಾಲ್ ಜಿಲ್ಲೆಯ ಕೇಂದ್ರ ಢೇಂಕನಾಲ್ ಮುನಿಸಿಪಾಲಿಟಿ ಪಟ್ಟಣ. ಪುತ್ತೂರು ಹಾಗೂ ಸುಳ್ಯವನ್ನು ಸೇರಿಸಿದಷ್ಟಾಗಬಹುದು. ವಾಣಿಜ್ಯವಾಗಿ ಮುಂದುವರಿದ ನಗರವಲ್ಲದಿದ್ದರೂ, ಎಲ್ಲಾ ವಿಧದ ಸೌಲಭ್ಯಗಳೂ ಲಭ್ಯ. ಇಲ್ಲಿ ಸಿನರ್ಜಿ ಎಂಬ ತಂತ್ರಜ್ಞಾನ ಮಹಾವಿದ್ಯಾಲಯ, ಢೇಂಕನಾಲ್ ಗವರ್ಮೆಂಟ್ ಕಾಲೇಜ್, ಭಾರತೀಯ ಸಮೂಹ ಸಂವಹನ ಸಂಸ್ಥೆ ಮುಂತಾದ ವಿದ್ಯಾ ಸಂಸ್ಥೆಗಳೂ, ಇದ್ದು ಅಧಿಕಾಂಶ ಬೋರ್ಡ್ ಗಳೂ ಒಡಿಯಾದಲ್ಲೇ ಇವೆ. ಇಲ್ಲಿನ ಜನರಿಗೆ ಇಂಗ್ಲಿಷ್, ಹಿಂದಿಗಳು ಅಷ್ಟಾಗಿ ಅರಗಿಸಿಕೊಳ್ಳಲಾಗುವುದಿಲ್ಲ ಹಾಗೂ ಅರ್ಥವಾದರೂ ತಿರುಗಿ ಉತ್ತರ ಹೇಳಲಾರರು. ಉಳಕೊಳ್ಳಲು ಎರಡು ಉತ್ತಮ ಹೋಟೆಲುಗಳಿವೆ. ಒಂದು ಸೂರ್ಯ, ಇನ್ನೊಂದು ದೇಬಕನ್ಯಾ. ನಾನು ಉಳಕೊಂಡದ್ದು ಸೂರ್ಯದಲ್ಲಿ. ಇಡೀ ಢೇಂಕನಾಲ್ ಪಟ್ಟಣಕ್ಕೇ ಎರಡೇ ಶುದ್ಧ ಸಸ್ಯಾಹಾರಿ ಭೋಜನಶಾಲೆಗಳಿರುವುದು. ಒಂದು ಠಾಕುರ್ ರೆಸ್ಟಾರೆಂಟ್, ಇನ್ನೊಂದು ಜಾಲೂಸ್ ಫುಡ್ ಕೋರ್ಟ್.

ಢೇಂಕನಾಲ್ ಜಿಲ್ಲೆಯಲ್ಲಿ ಕಪಿಲಾಶ ಶಿವ ಕ್ಷೇತ್ರ ಹಾಗೂ ಶಿರ್ಡಿ ಸಾಯಿ ಮಂದಿರಗಳು ಮುಖ್ಯ ದೇವಾಲಯಗಳು. ಕಪಿಲಾಶ ಬೆಟ್ಟದ ತುದಿಯ ದೇವಾಲಯ. ದೇವಾಲಯದ ಸಮೀಪಕ್ಕೆ ಜೀಪಿನಲ್ಲಿ ಹೋಗಬಹುದು. ನಂತರ ಹಲವಾರು ಮೆಟ್ಟಿಲುಗಳನ್ನು ಹತ್ತಿ ಇತರ ಉಪ ಮಂದಿರಗಳಾದ ನಾಗ ಮುಂತಾದವುಗಳನ್ನು ಸಂದರ್ಶಿಸಬಹುದು. ಬೆಟ್ಟ ಹತ್ತುವಾಗ ಸುತ್ತುಮುತ್ತಲಿನ ಪ್ರಕೃತಿ ರಮಣೀಯ ಬಯಲುಗಳನ್ನು ಆಸ್ವಾದಿಸಬಹುದು. ಕಪಿಲಾಶದ ತಪ್ಪಲಿನಲ್ಲಿ ವಿಜ್ಞಾನ ವಸ್ತು ಸಂಗ್ರಹಾಲಯವಿದೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತ ಜಾಗವಾಗಿದೆ.

ಢೇಂಕನಾಲ್ ಮತ್ತು ಕಪಿಲಾಶದ ಮಧ್ಯೆ ಶಿರ್ಡಿ ಸಾಯಿ ಮಂದಿರ ಆಧುನಿಕ ಹಾಗೂ ಸ್ವಚ್ಚ ಮತ್ತು ಶಾಂತವಾದುದು. ಅಲ್ಲಿ ಆಲದಮರವೊಂದಿದೆ. ಅದಕ್ಕೆ ತುಂಬಾ ಕೆಂಪು ರಿಬ್ಬನ್ ಗಳನ್ನು ಕಟ್ಟಿರುವುದನ್ನು ಕಾಣಬಹುದು. ಇಷ್ಟಾರ್ಥ ಸಿದ್ಧಿಗೋಸ್ಕರ ಭಕ್ತರು ಈ ರೀತಿ ಮಾಡುತ್ತಾರೆ. ಇಲ್ಲಿ ಮಡಕೆಯಲ್ಲಿ ನೈವೇದ್ಯ ಮಾಡಲಾಗುತ್ತದೆ ಹಾಗೂ ಪ್ರತೀ ದಿನ ಬೇರೆ ಬೇರೆ ಮಡಕೆಗಳನ್ನು ಬಳಸಲಾಗುತ್ತದೆ.

ಬೇಸಿಗೆಯಲ್ಲಿ ಸೂರ್ಯಾಸ್ತದ ಸಮಯ ಢೇಂಕನಾಲ್ ನಲ್ಲಿ ಬಿರುಸಿನ ತಂಪುಗಾಳಿ ಬೀಸುತ್ತದೆ. ಮಧ್ಯಾಹ್ನ ಅತೀ ಉಷ್ಣ ಇರುವುದರಿಂದ ಇಲ್ಲಿನ ಕಚೇರಿಗಳು ಬೆಳಗ್ಗೆ ೭ ಘಂಟೆಗೇ ತೆರೆದು ಮಧ್ಯಾಹ್ನದ ತನಕವಷ್ಟೇ ಕಾರ್ಯಾಚರಿಸುತ್ತವೆ. ಅಂಗಡಿಗಳಲ್ಲೂ ಬೀದಿಗಳಲ್ಲೂ ಮಧ್ಯಾಹ್ನ ಜನರನ್ನು ಕಾಣುವುದಿಲ್ಲ. ಹಲವಾರು ಜನ ಮಧ್ಯಾಹ್ನ ನಿದ್ರಿಸುತ್ತಾರೆ. ಸಾಯಂಕಾಲದಿಂದ ರಾತ್ರಿಯ ವರೆಗೆ ಅಂಗಡಿಗಳಲ್ಲಿ ಜನಸಂದಣಿ ಕಾಣುತ್ತದೆ.

ಸಂಭಾಲ್ಪುರದ ಕೈಮಗ್ಗದ ವಸ್ತ್ರ ಮೆದು ಮತ್ತು ತೆಳುವಾದ ಅರಿವೆಯಾಗಿದ್ದು ದುಬಾರಿ ಕೂಡಾ ಆಗಿದೆ. ಸೀರೆಯ ಬೆಲೆ ೭೦೦ರಿಂದ ೭೦೦೦ರೂಗಳು. ಪಟ್ಟಣದ ಬೀದಿಗಳ ಬದಿಗಳಲ್ಲಿ ಅಣಬೆ, ಕಾಡುಮಾವುಗಳನ್ನು ಮಾರುವ ಹೆಂಗಸರನ್ನು ಕಾಣಬಹುದು. ಪಡುವಲ್ ಎಂಬ ಗಾತ್ರದಲ್ಲಿ ಮುಳ್ಳುಸೌತೆಗಿಂತ ಚಿಕ್ಕ ಹಾಗೂ ತೊಂಡೆಕಾಯಿಗಿಂತ ದೊಡ್ಡ ತರಕಾರಿ, ಚಿಕ್ಕ ಉರುಟು ಬದನೆಕಾಯಿ, ಹಲವಾರು ಗಡ್ಡೆಗೆಣಸುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಬಹುದು.




ಹಿಂತಿರುಗಿ ಬರುತ್ತಿದ್ದಂತೆಯೇ ಹಲವೆಡೆಗಳಲ್ಲಿ ಮೂರನೇ ಭತ್ತದ ಬೆಳೆ ಕಟಾವಾಗುತ್ತಿದ್ದುದನ್ನೂ, ಕಟಾವಾದೆಡೆಗಳಲ್ಲಿ ಆಕಳುಗಳ ಗುಂಪನ್ನು ಮೇಯಿಸುತ್ತಿರುವುದನ್ನೂ ಕಾಣಬಹುದಾಗಿತ್ತು. ಭುಬನೇಶ್ವರದಿಂದ ಚೆನ್ನೈಗೆ ವಿಮಾನದಲ್ಲು ಚೆನ್ನೈಯಿಂದ ಕಾಸರಗೋಡಿಗೆ ರೈಲಿನಲ್ಲೂ ಪ್ರಯಾಣಿಸಿ ಮನೆ ತಲಪಿದಾಗ ತರಬೇತಿಯ ಜೊತೆಗೆ ಸುಂದರವಾದ ಪ್ರವಾಸದ ಅನುಭವವೂ ನನ್ನದಾಗಿತ್ತು.
ಚಿತ್ರ - ಲೇಖನ : ಮುರಳೀ ಕೃಷ್ಣ ಹಳೆಮನೆ.

ಮುಂದೆ ಓದಿ

ಈ ಕನಸು ಎಸ್ಕ್ಲೂಸಿವ್


ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ ಸಾಹಸ ಸಿಂಹ ವಿಷ್ಣುವರ್ಧನ್ ಸರಕಾರಕ್ಕೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೇಡವಾಗಿ ಹೋದರೆ...ಈ ಪ್ರಶ್ನೆ ಕೇಳಿದರೆ ಕೆಂಡಾಮಂಡಲವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಸರಕಾರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆ ನೋಡಿದರೆ ಇದು ಹೌದು ಎಂಬುದರಲ್ಲಿ ಎರಡು ಮಾತಿಲ್ಲ.




ಶ್ರೇಷ್ಠ ನಟ ಡಾ.ವಿಷ್ಣುವರ್ಧನ್ ಮರೆಯಾಗಿ ನೂರುದಿನಗಳು ಕಳೆದು ಹೋದರೂ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಇದಕ್ಕಾಗಿ ಸ್ಥಳ ಖರೀದಿ ಕಾರ್ಯವೂ ಆಗಿಲ್ಲ.

ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ನಂತರ ಅವರ ಅಭಿಮಾನಿ ವರ್ಗ ನಿತ್ಯವೂ ಆ ಪ್ರದೇಶಕ್ಕೆ ತೆರಳಿ ಅಗಲಿದ ನಾಯಕನಿಗೆ ನಮನ ಸಲ್ಲಿಸುತ್ತಿದ್ದಾರೆ. ಅವರ ಸಮಾಧಿ ಸ್ಥಳದಲ್ಲಿ ಮಳೆಗಾಲದಲ್ಲಿ ಯಾವೊಂದು ತೊಡಕುಗಳಾಗದಿರಲಿ ಎಂದು ಸ್ವತಃ ಭಾರತೀ ವಿಷ್ಣುವರ್ಧನ್ ಮುತುವರ್ಜಿಯಿಂದ ತಾತ್ಕಾಲಿಕ ಮಂಟಪವೊಂದನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಆದರೂ ಸರಕಾರ ಮಾತ್ರ ಇಲ್ಲೊಂದು ಸ್ಮಾರಕ ನಿರ್ಮಿಸುವತ್ತ ಚಿಂತನೆ ಮುಂದುವರಿಸಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಮೌನ ವಹಿಸಿದೆ.

ವಿಷ್ಣುವರ್ಧನ್ ನಿಧನರಾದ ದಿನ ಘೋಷಣೆಗಳ ಸರಮಾಲೆಯನ್ನೇ ನೀಡಿದ ಸರಕಾರ ಇಂದ್ಯಾಕೆ ಈ ರೀತಿಯ ಮೌನ ತಾಳಿದೆ. ಚುನಾವಣೆಗಳ ಮೇಲೆ ಚುನಾವಣೆಗಳು ನಡೆದವು. ಅವುಗಳ ಫಲಿತಾಂಶ ಘೋಷಣೆಗಳೂ ಆದವು. ಇನ್ನೇನು ಮಳೆಗಾಲವೂ ಆರಂಭವಾಗುವ ಹಂತದಲ್ಲಿದೆ. ಆದರೂ ಅಗಲಿದ ನಾಯಕನ ಸ್ಮಾರಕ ನಿರ್ಮಾಣ ಮಾತ್ರ ಹಾಗೇ ಉಳಿದುಕೊಂಡು ಬಿಟ್ಟಿದೆ. ವಿಷ್ಣು ಆಪ್ತವರ್ಗಕ್ಕೆ, ಕುಟುಂಬಿಕರಿಗೆ, ಅಭಿಮಾನಿಗಳಿಗೆ ಇದರಿಂದ ತೀವ್ರ ಬೇಸರ ಉಂಟಾಗಿದೆ.
ತಕ್ಷಣ ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಲಿ. ಅಗಲಿದ ಚೇತನಕ್ಕೆ ಸರಿಯಾದ ಮರ್ಯಾದೆ ದೊರಕಲಿ.

ಮುಂದೆ ಓದಿ
8:41 AM

ಮರೆಯದಿರಿ...

Posted by ekanasu

ರಾಜ್ಯ - ರಾಷ್ಟ್ರ

ಎಲ್ಲೆಡೆ ಇದೀಗ ನಿರಾಳ ...ಆದರೆ ಸೋತವರು ಪೆಚ್ಚುಮೋರೆ ಹಾಕಿ ಹಿಡಿಶಾಪ ಹಾಕಿದರೆ ಗೆದ್ದವರು ತಾವೇ `ರಿಯಲ್ ಹೀರೋ' ಎಂಬ ಫೋಸ್ ಕೊಡುತ್ತಿರುವುದು ಕಾಣಸಿಗುತ್ತದೆ. ಇದು ನಿನ್ನೆ ನಡೆದ ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ನಂತರದ ಒಂದು ನೋಟ. ಹೆಂಡ, ಹಣ ಯಥಾ ಪ್ರಕಾರವಾಗಿ ಗ್ರಾಮಪಂಚಾಯತ್ ಚುನಾವಣೆಯಲ್ಲೂ ಎಲ್ಲೆ ಮೀರದೆ ಹರಿದಿದೆ. ಪಕ್ಷಗಳ ನೆರಳಿಲ್ಲದೆ ನಡೆಯಬೇಕಾಗಿದ್ದ ಗ್ರಾಮ ಪಂಚಾಯತ್ ಚುನಾವಣೆ ವಿಧಾನ ಸಭಾ ಚುನಾವಣೆಯಷ್ಟೇ `ಪೈಪೋಟಿ'ಯಲ್ಲಿ ನಡೆದಿದ್ದು ದುರಂತ. ಪಕ್ಷಗಳ ಮೇಲಾಟದಿಂದ ಚುನಾವಣೆ ನಡೆದಿದೆ. ಗೆದ್ದವರು ಯಾರೋ... ಆದರೆ ಪ್ರಾಮಾಣಿಕವಾಗಿ ಜನತೆಯ ಸೇವೆ ಸಲ್ಲಿಸುತ್ತಿದ್ದವರಿಗೆ ಅವಕಾಶವಿಲ್ಲ. ಹಣ, ಪ್ರತಿಷ್ಠೆಯ ಬಲವಿದ್ದವರು ಈ ಚುನಾವಣೆಯಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ. ಇದೆಲ್ಲವೂ ಆಗಿಹೋದ ವಿಚಾರ. ಆದರೆ ಏತನ್ಮಧ್ಯೆ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾಗಿ ಒಂದಷ್ಟು ಚಿಂತಿಸುವ ಕಾಲ ಸನ್ನಿಹಿತವಾಗಿದೆ.



ಹಳ್ಳಿಗೆ ಸರಕಾರವನ್ನು ತಂದಂತಹ ಹಳ್ಳಿಗಳಲ್ಲೆ ಸರ್ಕಾರವನ್ನು ತೋರಿಸಿದಂತಹ ಮಹಾನ್ ವ್ಯಕ್ತಿ ರಾಮಕೃಷ್ಣ ಹೆಗಡೆ ಎಂದರೆ ತಪ್ಪಾಗಲಾರದು. ಅವರ ಆಡಳಿತಾವಧಿಯಲ್ಲಿ ಅವರಿಗೆ ಬೆಂಬಲವಾಗಿದ್ದವರು ಗ್ರಾಮೀಣಾಭಿವೃದ್ಧಿ ಸಚಿವ ನಸೀರ್ ಸಾಬ್. ಇಡೀ ದೇಶಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಂತಹವರು ಮಾಜಿ ಪ್ರಧಾನಿಯಾಗಿದ್ದಂತಹ ರಾಜೀವ್ ಗಾಂಧಿ ಯವರು. ಆದರೆ ಇಂದು ಜನತೆ ಇದನ್ನೆಲ್ಲ ಮರೆತಿದ್ದಾರೆ. ಕೇವಲ ಇವರ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಅವರ ತತ್ವಗಳು, ಅವರ ಕೆಲಸ ಕಾರ್ಯಗಳ ಬಗ್ಗೆ ಯಾಕೆ ಕಿಂಚಿತ್ತು ಚಿಂತಿಸುತ್ತಿಲ್ಲ...? ಕೇವಲ ಅದೇನೋ ಬಾಯಿಗೆ ಬಂದಂತಹ ಮಾಹಿತಿಗಳನ್ನು ಹೇಳುತ್ತಾ `ಅದನ್ನು ಮಾಡಿದ್ದು ನಮ್ಮ ಪಕ್ಷ- ಇದನ್ನು ಅನುಷ್ಠಾನ ಗೊಳಿಸಿದ್ದು ಈ ಪಕ್ಷ' ಎಂಬ ಹೇಳಿಕೆಯನ್ನಷ್ಟೇ ನೀಡುವುದರಲ್ಲಿ ವೃಥಾ ಕಾಲ ಹರಣವಾಗುತ್ತಿದೆ. ಇಂದು ಇರುವ ಅಧಿಕಾರ ಶಾಹೀ ಪಕ್ಷಗಳು ಇಂತಹ ಒಳ್ಳೆ ಕೆಲಸಗಳತ್ತ ಚಿಂತಿಸಲಿ.


ಗ್ರಾಮ ಸರಕಾರಕ್ಕೆ ಇದೀಗ 25 ವರುಷದ ಸಂಭ್ರಮ . ಈ ಸಂದರ್ಭವನ್ನು ಕನ್ನಡದ ರಾಷ್ಟ್ರೀಯ ದೈನಿಕ `ಹೊಸದಿಗಂತ' ನೆನಪಿಸಿದೆ. ಅಭಿವೃದ್ಧಿ ಪರ ಪತ್ರಿಕೋದ್ಯಮದಲ್ಲಿ ದಾಪುಗಾಲಿಡುತ್ತಿರುವ ಈ ಪತ್ರಿಕೆ ಗ್ರಾಮ ಸರಕಾರದ ಕಾರ್ಯವನ್ನು ಶ್ಲಾಘಿಸಿದೆ. ನಮ್ಮ ಓದುಗರು ಈ ಮಾಹಿತಿಯನ್ನೂ ಓದಲಿ ಎಂಬ ಸದುದ್ದೇಶ ನಮ್ಮದು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಕಾರ್ಕಳ:ಬೆಳುವಾಯಿ ಸಮೀಪದ ಚಿಲಿಂಬಿ ಎಂಬಲ್ಲಿ ಮುಖ್ಯರಸ್ತೆಯಿಂದ ಒಳಗೆ ಬಾರಾಡಿ ಕಂಬಳ ನಡೆಯುವ ಸ್ಥಳದ ಸನಿಹ ಮಾರುತಿ 800 ಕಾರಿನೊಳಗೆ ಅಪರಿಚಿತ ಶವವೊಂದು ಪತ್ತೆಯಾಗಿದೆ. ಸುಮಾರು 45ವರುಷ ವಯಸ್ಸಿನ ಗಂಡನಿಸ ಶವ ಇದಾಗಿದೆ. ವ್ಯಕ್ತಿಯ ಕುತ್ತಿಗೆಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಶವಕಂಡುಬಂದಿದೆ. ಕಾರನ್ನು ರಸ್ತೆಪಕ್ಕದ ಹಳ್ಳಕ್ಕೆ ಉರುಳಿಸಲಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು ವಿ.ವಿ. ಯಲ್ಲೇ ಪ್ರಥಮ ಬಾರಿಗೆ ಹೊಸ ಕೋರ್ಸ್
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಟ್ಟ ಮೂಡಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ದೃಶ್ಯಕಲಾ ಪದವಿ ತರಗತಿ ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಂಡಿದೆ. ಬಿ.ವಿ.ಎ ಎಂಬ ನಾಲ್ಕು ವರ್ಷಗಳ ಅವಧಿಯ ಪದವಿ ತರಗತಿ ಇದಾಗಿದೆ. ಬ್ಯಾಚುಲರ್ ಆಫ್ ವಿಶ್ಹುವಲ್ ಆರ್ಟ್ ಎಂಬ ಈ ಪದವಿ ಪಡೆದವರಿಗೆ ಸಿನೆಮಾ, ಜಾಹೀರಾತು, ಶಿಲ್ಪಕಲೆ, ಲ್ಯಾಂಡ್ ಸ್ಕೇಪಿಂಗ್, ಇಂಟೀರಿಯರ್ ಡಿಸೈನಿಂಗ್, ಅನಿಮೇಷನ್ ಮೊದಲಾದ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಕ್ಕೆ ಅವಕಾಶವಿದೆ.



ಮೂರು ಪ್ರಮುಖ ವಿಷಯಗಳಲ್ಲಿ ವಿಶೇಷ ಅಧ್ಯಯನದ ಪದವಿಗೆ ಇಲ್ಲಿ ಅವಕಾಶವಿದೆ. ಚಿತ್ರಕಲೆ, ಶಿಲ್ಪಕಲೆ ಮತ್ತು ಅಪ್ಲೈಡ್ ಆರ್ಟ್ (ಕಮರ್ಷಿಯಲ್ ಆರ್ಟ್ ) ವಿಚಾರಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಅಧ್ಯಯನದ ತರಬೇತಿಗಳನ್ನು ಪಡೆಯಬಹುದಾಗಿದೆ.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳುತ್ತಿರುವ ಆಳ್ವಾಸ್ ವರ್ಣ ಜಾಗೃತಿ, ಆಳ್ವಾಸ್ ವರ್ಣ ವಿರಾಸತ್, ಆಳ್ವಾಸ್ ಶಿಲ್ಪ ವಿರಾಸತ್ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ದೃಶ್ಯಕಲಾ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ದೃಶ್ಯಕಲಾ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತರು ಪ್ರಾಂಶುಪಾಲರು, ಆಳ್ವಾಸ್ ದೃಶ್ಯಕಲಾ ಪದವಿ, ಆಳ್ವಾಸ್ ಕಾಲೇಜು, ವಿದ್ಯಾಗಿರಿ , ಮೂಡಬಿದಿರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

ಮುಂದೆ ಓದಿ

ಮೂಲ್ಕಿ ಹೋಬಳಿಗ್ರಾಮ ಪಂಚಾಯತ್ ಫಲಿತಾಂಶ 4 ಬಿಜೆಪಿ, 3 ಕಾಂಗ್ರೇಸ್ ಒಂದು ಸಮ್ಮಿಶ್ರ

ಮುಲ್ಕಿ : ಮುಲ್ಕಿ ಹೋಬಳಿಯ 8 ಪಂಚಾಯಿತಿಗಳ 137 ಸ್ಥಾನಗಳಲ್ಲಿ 129 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಫಲಿತಾಂಶದಲ್ಲಿ ಕಿಲ್ಪಾಡಿ, ಪಡುಪಣಂಬೂರು, ಹಳೆಯಂಗಡಿ, ಮೆನ್ನಬೆಟ್ಟು ಬಿಜೆಪಿ ಬೆಂಬಲಿತ, ಬಳ್ಕುಂಜೆ, ಕೆಮ್ರಾಲ್, ಕಿನ್ನಿಗೋಳಿಯಲ್ಲಿ ಕಾಂಗ್ರೇಸ್ ಬೆಂಬಲಿತ ಆಡಳಿತ ಬರಲಿದೆ. ಐಕಳದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಚುನಾಯಿತ ಅಭ್ಯರ್ಥಿಗಳು ಅಧಿಕಾರ ಪಡೆಯಲಿದ್ದಾರೆ.



ಕಿಲ್ಪಾಡಿ:

ರಾಜೇಶ್ಖನ್ನಾ ಭಟ್,ಮೋಹನ್, ಗೀತಾ ಆಚಾರ್ಯ, ಇಂದಿರಾ, ಜಯಕುಮಾರ್, ಉಮೇಶ್ ಆಚಾರ್ಯ, ವಿಮಲ ಸುವರ್ಣ, ಕೃಷ್ಣ ಶೆಟ್ಟಿಗಾರ್, ಸಂಜೀವ ಶೆಟ್ಟಿ, ಸುಜಾತ, ಮಾಧವ. (ಬಿಜೆಪಿ ಬೆಂಬಲಿತರು), ಕಾಂಗ್ರೇಸ್ ಬೆಂಬಲಿತರಾಗಿ ಗೋಪಿನಾಥ ಪಡಂಗ, ಮಹಮ್ಮದ್ ಷರೀಫ್, ಕಿಶೋರ್, ಮಮತಾ ಶೆಟ್ಟಿ, ಮನೋಹರ್, ಶಾರದಾ ವಸಂತ, ಗೀತಾ ಜಯಗಳಿಸಿದ್ದಾರೆ

ಪಡುಪಣಂಬೂರು:

ಬೆಜೆಪಿ ಬೆಂಬಲಿತರಾಗಿ ವಿನೋದ್ ಸಾಲ್ಯಾನ್, ಸುರೇಖಾ, ನಾರಾಯಣ ಸುವರ್ಣ, ಕುಸುಮ, ಸೋಮನಾಥ ಶೆಟ್ಟಿ, ಸಂಪತ್ತ್ ಕುಮಾರ್, ಕೊಲ್ಲು, ಲೀಲಾ ಬಂಜನ್, ಶ್ಯಾಮಲಾ ಭಟ್, ಮೋಹನ್, ದುರ್ಗಾದಾಸ್, ಆಶಾ, ಸಂಪಾವತಿ. ಕಾಂಗ್ರೇಸ್ ಬೆಂಬಲಿತರಾಗಿ ಸುಕುಮಾರ್ ಉಮೇಶ್ ಪೂಜಾರಿ ಆಯ್ಕೆಯಾದರು.

ಕಿನ್ನಿಗೋಳಿ:

ಕಾಂಗ್ರೇಸ್ ಬೆಂಬಲಿತರಾಗಿ ಸಂತಾನ್ ಡಿಸೋಜಾ, ಶೇಷರಾಮ್ ಶೆಟ್ಟಿ, ಜಾನ್ಸನ್ ಡಿಸೋಜಾ, ಗಣೇಶ್, ಶ್ಮಲಾ ಹೆಗಡೆ, ಸುಜಾತ, ಶಾಮತ, ಫಿಲೋಮೊನಾ, ಗ್ರೆಟ್ಟಾ ಡಿಸೋಜಾ, ಬೆಜೆಪಿ ಬೆಂಬಲಿತರಾಗಿ ದೇವ ಪ್ರಸಾದ್, ಮಾಧವ ಬಂಗೇರ, ಆನಂದ ಗೌಡ, ರಘುರಾಮ್, ರಾಘವೇಂದ್ರ, ವಿಮಲಾ, ಯಜ್ಞಾತ ಆಚಾರ್ಯ, ಹೇಮಾ, ಪವಿತ್ರ. ಪಕ್ಷೇತರರಾಗಿ ಟಿ.ಎಚ್.ಮಯ್ಯದ್ಧಿ.

ಐಕಳ:

ಜೆಡಿಎಸ್ ಬೆಂಬಲಿತ ಯೋಗೀಶ್ ಕೋಟ್ಯಾನ್, ಆಲ್ಬರ್ಟ್ ಲೋಬೋ, ಯೋಗಿನಿ, ಪ್ರಕಾಶ್ ಶೆಟ್ಟಿ, ಬೆಜೆಪಿ ಬೆಂಬಲಿತ ದಿವಾಕರ ಚೌಟ, ರಾಜೇಶ್, ಪೂಣಿಮಾ, ಕಾಂಗ್ರೇಸ್ ಬೆಂಬಲಿತ ಗ್ರೇಸ್ ಡಿಸೋಜಾ, ಸುಶೀಲಾ, ಸೆವರಿನ್ ಲೋಬೋ, ಜಯಂತ ಪೂಜಾರಿ, ಪದ್ಮಿನಿ.

ಹಳೆಯಂಗಡಿ:

ಬಿಜೆಪಿ ಬೆಂಬಲಿತರಾಗಿ ಸಂತೋಷ್ಕುಮಾರ್, ಮಹಾಬಲ, ಲೀಲಾ, ವನಿತಾ, ಸೂರ್ಯಕುಮಾರ್, ಮಮತಾ, ಲೀಲಾ, ಅಶೋಕ ಕುಮಾರ್, ನಾಗರಾಜ, ಪೂರ್ಣಿಮಾ, ಕಾಂಗ್ರೇಸ್ ಬೆಂಬಲಿತರಾಗಿ ಬಶೀರ್, ಹಮೀದ್, ಸುಜಾತ, ಜಗನ್ನಾಥ, ದೇವಕಿ, ವಸಂತ ಬೆರ್ನಾರ್ಡ, ಅಬ್ದುಲ್ ಖಾದರ್, ಜಲಜ, ಪದ್ಮಾವತಿ ಶೆಟ್ಟಿ ಪಕ್ಷೇತರನಾಗಿ ಖಾಸಿಂ ಸಾಹೇಬ್.

ಕೆಮ್ರಾಲ್:

ಕಾಂಗ್ರೇಸ್ ಬೆಂಬಲಿತ ಮಯ್ಯದ್ದಿ, ರಿಚರ್ಡ್ , ರೇವತಿ ಶೆಟ್ಟಿಗಾರ್, ಹೇಮಲತಾ, ಅಬ್ದುಲ್ ಖಾದರ್, ಲೀನಾ ಮಥಾಯಸ್, ಸುರೇಶ್ ದೇವಾಡಿಗ, ತಾರಾ ಶೆಟ್ಟಿ, ಸುಮಲತಾ. ಬೆಜೆಪಿ ಬೆಂಬಲಿತ ಸುಭಾಸ್ ಶೆಟ್ಟಿ, ಸುಧಾಕರ, ಗುಲಾಭಿ, ಸುಧಾಕರ ಶೆಟ್ಟಿ, ಪ್ರಸಾದ್, ರಾಮ್ದಾಸ್, ನಾಗೇಶ್ ಅಂಚನ್, ಕೂಸು.

ಬಳ್ಕುಂಜೆ:

ಕಾಂಗ್ರೇಸ್ ಬೆಂಬಲಿತ ಜೆರೋಮ್ ಡಿಸೋಜಾ, ಪೌಲ್ ಡಿಸೋಜಾ, ಮಮತಾ ಪಂಜ, ಸುಮತಿ ಸಫಲಿಗ, ಕುಸುಮಾ, ಜಲಜ, ಪ್ರಭಾಕರ ಕವತ್ತಾರು, ವಿಲ್ಸನ್ ರೋಡ್ರಿಗಸ್, ಗೀತಾ ಅಮೀನ್ ಬೆಜೆಪಿ ಬೆಂಬಲಿತ ಕಿಶೋರ್ ದೇವಾಡಿಗ, ದಿನೇಶ್ ಪುತ್ರನ್, ಗೋಪಿ ಕರ್ನಿರೆ.

ಮೆನ್ನಬೆಟ್ಟು:

ಬಿಜೆಪಿ ಬೆಂಬಲಿತರಾಗಿ ರೇವತಿ, ಗೀತಾ, ಅರುಣ್, ಜಯಶಂಕರ ಶೆಟ್ಟಿ, ರತ್ನಾ, ಜನಾರ್ಧನ ಕಿಲೆಂಜೂರು, ಕೇಶವ, ಸರೋಜಿನಿ, ಭಾಸ್ಕರ, ಶೈಲಾ, ಬೇಬಿ ಕಾಂಗ್ರೇಸ್ ಬೆಂಬಲಿತರಾಗಿ ರೋಸಿ ಪಿಂಟೋ, ಹರಿಶ್ಚಂದ್ರರಾವ್, ತಾರಾ ಶೆಟ್ಟಿ, ಗಂಗಾಧರ, ಸುನಿಲ್, ರೋನಿ, ರಾಜೀವಿ ಪಕ್ಷೇತರರಾಗಿ ಶಕ್ತಿಪ್ರಸಾದ್, ರಾಮ್ಗೋಪಾಲ.

ಮುಂದೆ ಓದಿ

ರಾಷ್ಟ್ರ - ಅಂತಾರಾಷ್ಟ್ರ

ಲಂಡನ್ನಿನ ಹ್ಯಾರೋ ನಲ್ಲಿರುವ ,ಕ್ಯಾನೋನ್ ವಿಧ್ಯಾಸಂಸ್ಥೆಯ ಸಭಾಂಗಣದಲ್ಲಿ ಕನ್ನಡಿಗರು ಯು ಕೆ ಯವರು ಆಯೋಜಿಸಿದ್ದ ವಸಂತೋತ್ಸವ ಕಾರ್ಯಕ್ರಮದಲ್ಲಿ ಕುಂಟಿಕಾನ ಮಠ ಕುಮಾರ್ ಮತ್ತು ಸಂಪತ್ ಯದವಾಡ್ ಅತಿಕಾಯ ಕಾಳಗ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು. ಅತಿಕಾಯನಾಗಿ ಕುಂಟಿಕಾನ ಮಠ ಕುಮಾರ್ ಮತ್ತು ರಾವಣನಾಗಿ ಸಂಪತ್ ಯದವಾಡ್ ರವರು ಬಹಳ ಸುಂದರವಾಗಿ ಪಾತ್ರ ನಿರ್ವಹಣೆ ಮಾಡಿದರು.ಸುಮಾರು ವರುಷಗಳಿಂದ ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ಮಾಡುತ್ತಿರುವ ಕುಮಾರ್ ಅತಿಕಾಯನಾಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು. ಯಾತಕೆ ಮರುಳಪ್ಪುದು ತಾತ ಎಂಬ ಬುದ್ದಿವಾದದ ಅಭಿನಯದಲ್ಲಿ ರಾವಣನಿಗೆ ರಾಮನ ಶಕ್ತಿಯನ್ನು ನವಿರಾಗಿ ವಿವರಿಸಿದರು.ಇರುವೆ ಕಚ್ಚಿ ದೊಡೆ ಪರ್ವತ ವನ್ಜು ವುದೇ ಎಂಬ ಉಪಮೇಯಕ್ಕೆ ರಾಮನನ್ನು ಪರ್ವತವಾಗಿ ,ರಾವಣನನ್ನು ಇರುವೆಯಾಗಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರಿಗೆ ರಾಮನ ಕುರಿತಾಗಿ ಭಕ್ತಿ ಯನ್ನು ಮೂಡುವಂತೆ ಮಾಡಿದರು.ಮತ್ತೆ ಯುದ್ಧಕ್ಕೆ ರಣ ವೀಳ್ಯವನ್ನು ಪಡೆದು ವೀರಾವೇಶದಿಂದ ರಾವಣನ ಮಗನಾಗಿ ಕರ್ತವ್ಯ ಪ್ರಜ್ಞೆಯನ್ನು ಮೆರೆದರು.




ಹಿಂದೆಂದೂ ಯಕ್ಷಗಾನವನ್ನು ನೋಡಿರದ ಕನ್ನಡಿಗ ಸಂಪತ್ ಕೇವಲ ಒಂದೆರಡು ದಿನದ ಅಭ್ಯಾಸದಿಂದ ರಾವಣನ ಪಾತ್ರವನ್ನು ನುರಿತ ಕಲಾವಿದನಂತೆ ನಿರ್ವಸಿದ್ದು ನಿಜವಾಗಿಯೂ ಶ್ಲಾಘನೀಯ.ಉತ್ತಮ ರಂಗ ನಿರ್ವಹಣೆ,ರಾವಣನ ಅಭಿನಯ ,ಅತಿಕಾಯನೊಂದಿಗೆ ಸಂಭಾಷಣೆ ಎಲ್ಲವೂ ಅಚ್ಚು ಕಟ್ಟಾಗಿತ್ತು. ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ಮತ್ತು ರಘುದಿಕ್ಷಿತ್ ರವರ ಸಂಗೀತ ಸಂಜೆ ಏರ್ಪಾಡಾಗಿತ್ತು.

ಮುಂದೆ ಓದಿ
| | |Home