ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
11:05 PM

ಪ್ರಶಸ್ತಿ ಪ್ರದಾನ

Posted by ekanasu

ರಾಜ್ಯ - ರಾಷ್ಟ್ರ



ಸಾಗರ: ಸಾಗರದ ನಿಧಿ ಪ್ರಕಾಶನ ನೀಡುವ 2010ರ ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಯು ಡಾ.ಮೋಹನ ಕುಂಟಾರು ಅವರ `ಯಕ್ಷಗಾನ ಆಹಾರ್ಯ ' ಗ್ರಂಥಕ್ಕೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸಾಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಿತು ಡಾ.ನಾ.ಡಿ.ಸೋಜ ಅಧ್ಯಕ್ಷತೆ ವಹಿಸಿದ್ದರು.

ಮುಂದೆ ಓದಿ
10:40 PM

16ರ ಪೋರನ ಸಾಧನೆ. .

Posted by ekanasu

ವಿಶೇಷ ವರದಿ


ವಿಶೇಷ ವರದಿಚಿಕ್ಕಮಗಳೂರು : ಹೊಸ ನಮೂನೆ ವಾಹನ ರೆಡಿ! ಇದನ್ನು
ಯಾವ ಫೇಮಸ್ ಕಂಪನಿ ತಯಾರಿಸಿದ್ದಲ್ಲ. ನಾಲ್ಕು ಚಕ್ರ ಮತ್ತು ಸ್ಟೇರಿಂಗ್ ಇರೋದ್ರಿಂದ ಕಾರು ಎನ್ನಲಡ್ಡಿಯಿಲ್ಲ. ಇದೊಂತರ ಕಾರೂ ಹೌದು...ಬೈಕೂ ಹೌದು.. ಇದು ಹಳ್ಳಿ ಪೊರನ ಗಿಫ್ಟ್ !




ಸಾಧಿಸಿದರೆ ಸಬಳವನ್ನಾದರೂ ನುಂಗಬಹುದು ಎಂಬುದು ಗಾದೆ ಮಾತು! ದಡ ಸೇರುವ ಗುರಿ, ಸಾಧಿಸಬೇಕೆನ್ನುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದೆಂದು ಪಟ್ಟ ಹುಡುಗ ನಿರೂಪಿಸಿದ್ದಾನೆ. ಸ್ವಂತ ಪರಿಶ್ರಮದಲ್ಲಿ ತಯಾರಿಸಿದ ವಾಹನದಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಚಿಕ್ಕಮಗಳೂರು ಪೇಟೆಯಲ್ಲಿ ಜುಮ್ ಅಂತ ಪೇರಿ ಹೊರಡುತ್ತಾನೆ. ತಂದೆ, ತಾಯಿಗಳನ್ನು ಕೂರಿಸಿಕೊಂಡು ವಾಹನದ ಮಜಾ ತೋರಿಸುತ್ತಾನೆ.
ಈ ವಿನೂತನ ಸಾಧನೆಗೆ ಬಾಲಕನಿಗೆ ವಯಸ್ಸು ಅಡ್ಡಿಯಾಗಿಲ್ಲ. ಮಹತ್ತರ ಸಾಧನೆ ಮಾಡಿದ ಬಾಲಕ ಚಿಕ್ಕಮಗಳೂರಿನ ವಂಡರ್ ಬಾಯ್. ಮೀಸೆ ಮೂಡದ ಹುಡುಗ ಹೊಸ ಅವಿಷ್ಕಾರದ ಮೂಲಕ ಅಚ್ಚರಿ ಹುಟ್ಟಿಸುವ ಜತೆಗೆ ವಿಶಿಷ್ಟ ಸಾಧನೆಯಿಂದ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾನೆ.
ಎಲ್ಲರಿಂದಲೂ ಶಹಬಾಸ್ ಗಿರಿಯ ಕೊಡುಗೆ ಸಿಗುತ್ತಿರುವ ಬಾಲಕನಿಗೆ ಮತ್ತೊಂದು ಹೊಸ ಸೃಷ್ಟಿಯ ಮಿಂಚು ಕಣ್ಣಲ್ಲಿ ಮಿನುಗುತ್ತಿದೆ.

ಯಾರೀತ ಪೋರ
ದಿನ ಬೆಳಗಾದರೆ ಒಂದಲ್ಲ ಒಂದು ಸಾಧನೆ ಮಾಡುವವರ ಸಂಖ್ಯೆಗೇನೂ ಬರ ಮತ್ತು ಕೊನೆಯೆಂಬುದೇ ಇಲ್ಲ. ಇಂತಹ ಸಾಧನೆ ಮಾಡಿದವರ
ಸಾಲಿಗೆ ಇನ್ನೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ರಾಂಪುರದ ಹದಿನಾರರ ಪೋರ ವೇದಾಂತ ವಿಶಿಷ್ಟ ಸಾಧನೆ ಮಾಡಿದವರ ಕಡತಕ್ಕೆ ಸೇರಿದ್ದಾನೆ. ರಾಂಪುರ ನಿವಾಸಿ ಪ್ರಭಾಕರ ಮತ್ತು ಭಾರತಿ ಪ್ರಭಾಕರ ದಂಪತಿಗಳ ಪುತ್ರ ವೇದಾಂತ ಗೋಣಿಕೊಪ್ಪಲಿನ
ಕೂರ್ಗ್ ಪಬ್ಲಿಕ್ ಸ್ಕೂಲಿನಲ್ಲಿ ಪ್ರಥಮ ಪಿಯುಸಿಗೆ ಮೊನ್ನೆ ಮೊನ್ನೆಯಷ್ಟೇ ಸೇರ್ಪಡೆಗೊಂಡಿದ್ದಾನೆ. ಇತರ ಹವ್ಯಾಸಗಳ ಜೊತೆಗೆ ಕಲಿಕೆಯಲ್ಲಿಯೂ ವೇದಾಂತ ಮುಂದಿದ್ದಾನೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.81 ಅಂಕ ಪಡೆದು ಮುಂದಿನ ಕಾಲೇಜು ಜೀವನಕ್ಕೆ ಜಿಗಿದಿದ್ದಾನೆ.
ವೇದಾಂತ ಮತ್ತೊಬ್ಬರ ಸಹಾಯವಿಲ್ಲದೇ ಕೇವಲ 40 ದಿನಗಳಲ್ಲಿ, 18,000ರೂ. ವೆಚ್ಚದಲ್ಲಿ ಪುಟ್ಟ ಎಟಿವಿ ವಾಹನ ನಿರ್ಮಿಸಿ
ಹೊಸ ಸಾಧನೆ ಮಾಡಿದ್ದಾನೆ. ಹೀಗೆ ಪುಟ್ಟ ವಾಹನ ಹೆಮ್ಮೆಯಿಂದ ಚಲಾಯಿಸಿಕೊಂಡು ವೇದಾಂತ ಠೀವಿಯಿಂದ ಸುತ್ತುತ್ತಾನೆ.

ಹಳತರಲ್ಲಿ ಹೊಸ ಮಾದರಿ
ಚಿಕ್ಕಂದಿನಿಂದಲೇ ಒಂದಲ್ಲ ಒಂದು ಸಾಧನೆ ಗೀಳು ವೇದಾಂತನ ಮೈಗೆ ಅಂಟಿಕೊಂಡಿತ್ತು. ಈ ಹುಚ್ಚೇ ಹೊಸ ಸಾಹಸಕ್ಕೆ ಪ್ರೇರಣೆ ಎಂದರೆ ತಪ್ಪಲ್ಲ. ವೇದಾಂತ ಹಳೆಯ ವಾಹನ ಬಳಸಿಕೊಂಡು ಪುಟ್ಟ ಎಟಿವಿ ಕಾರು ನಿರ್ಮಿಸಿದ್ದಾನೆ. ಈತ ಸ್ಟೇರಿಂಗ್ ಹೊಂದಿರುವ ಎಟಿವಿ ಕಾರನ್ನು 18 ಸಾವಿರ ರೂ. ವೆಚ್ಚದಲ್ಲಿ ಬರೋಬ್ಬರಿ 40 ದಿನದಲ್ಲಿ ಹೊರಕ್ಕೆ ತಂದಿದ್ದಾನೆ. ವಿನೂತನ ಕಾರು ನಿರ್ಮಾಣಕ್ಕೆ ವೇದಾಂತ ಹಿರೋ ಹೊಂಡಾ
ಸ್ಲೀಕ್ 100 ಸಿಸಿ ಯಂತ್ರ ಬಳಸಿಕೊಂಡಿದ್ದಾನೆ. ಕಾರಿನ ಗಾಲಿಗೆ ಕೆನೈಟಿಕ್ ಬೈಕ್ನ ಟೈಯರ್ ಅಳವಡಿಸಲಾಗಿದೆ. ಸಿಟಿ 100 ಮತ್ತು
ಯಮಹಾ ಬೈಕ್ನ ಶಾಕ್ ಅಬ್ಸರ್ವರ್ ಮತ್ತು ಮಾರುತಿ 800ನ ಸ್ಟೇರಿಂಗ್ ಬಳಕೆ ವೇದಾಂತನ ಕಾರಿನ ವೈಶಿಷ್ಟ್ಯತೆ. ಡಿಸ್ಕ್ ಬ್ರೇಕ್
ಹೊಂದಿರುವ ಈ ಬೈಕ್ ಕಂ ಕಾರು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಒಂದು ಲೀಟರ್
ಇಂಧನದಲ್ಲಿ ಸರಾಗವಾಗಿ 60 ಕಿಲೋಮೀಟರ್ ಕ್ರಮಿಸಬಹುದು. ವಾಹನ ಡಿಸೈನ್ ನಿಂದ ಆರಂಭಗೊಂಡ ಅಂತ್ಯದವರೆಗಿನ
ಕೆಲಸವೆಲ್ಲವೂ ವೇದಾಂತ್ ಮೇಡ್.

ಜನ್ಮಕ್ಕಂಟಿದ ಹವ್ಯಾಸ
ಚಿಕ್ಕಂದಿನಿಂದಲೂ ವೇದಾಂತ ಸದಾ ಕ್ರೀಯಾಶೀಲ. ಎಳೆವೆಯಲ್ಲಿಯೇ ಕಾರುಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದ. ಈ ಬಾರಿಯ ಬೇಸಿಗೆ ರಜೆ
ನಿಮಿತ್ತ ಮನೆಗೆ ಬಂದಿದ್ದ ವೇದಾಂತ ಎಟಿವಿ ವಾಹನ ನಿರ್ಮಿಸಿದ್ದಾನೆ. ಚಿಕ್ಕವನಿದ್ದಾಗ ವೇದಾಂತ ಆಟಿಕೆಯ ಕಾರು ಬಿಚ್ಚಿ ಜೋಡಿಸುವ
ಹವ್ಯಾಸಕ್ಕೆ ಬಿದ್ದಿದ್ದ. ಹಬ್ಬ, ಹರಿದಿನ ಜಾತ್ರೆಗೆ ಹೋದರೆ ಆಟದ ಕಾರು, ಬೈಕ್, ಲಾರಿ ರೈಲು ಕೊಡಿಸಲು ತಂದೆ, ತಾಯಿಗೆ
ದಂಬಾಲು ಬೀಳುತ್ತಿದ್ದ. ಇವನ ಹುಚ್ಚು ಬೇಡಿಕೆ ತಂದೆ, ತಾಯಿಗಳಿಗೆ ಚಿಂತೆಯ ಸಂಗತಿಯಾಗಿತ್ತು. ನಿನಗ್ಯಾಕೆ ಈ ಪಾಟಿ ವಾಹನ ಹುಚ್ಚು . ಮುಂದೆ ಗ್ಯಾರೇಜ್ ಇಡುತ್ತೀಯ ಅಂತ ತಂದೆ ತಾಯಿ ಮಗನನ್ನು ಗೇಲಿ ಮಾಡುತ್ತಿದ್ದರು. ವೇದಾಂತ 12ನೇ ವಯಸ್ಸಿಗೆ ವಾಹನ ಚಲಾಯಿಸುವುದು ಕಲಿತ. ಪ್ರಸಕ್ತ ಕಾಲಘಟ್ಟದಲ್ಲಿ ವಾಹನ ಓಡಿಸುವುದೆಂದರೆ ಇವನಿಗೆ ನೀರು ಕುಡಿದಷ್ಟು ಸಲೀಸು.

ಪೋಷಕರ ಪ್ರೋತ್ಸಾಹ
ವೇದಾಂತನ ಸಾಧನೆ ಹಿಂದೆ ಪೋಷಕರು ನಿಂತಿದ್ದಾರೆ. ಮಗನ ಸಾಧನೆ ಬಗ್ಗೆ ತಂದೆ,ತಾಯಿಗಳಿಗೆ ವಿಪರೀತ ಹೆಮ್ಮಯಿದೆ. ಮಗನ ಉತ್ಸಾಹಕ್ಕೆ
ತಂದೆ ಪ್ರಭಾಕರ ಆಗಲಿ, ತಾಯಿ ಭಾರತಿ ಅವರಾಗಲಿ ತಣ್ಣೀರು ಎರಚಲಿಲ್ಲ. ಮಗ ಕೇಳಿದ್ದನ್ನು ಪೋಷಕರು ದೂಸರಾ ಮಾತನಾಡದೆ ಒದಗಿಸಿದ್ದಾರೆ. ತಂದೆ, ತಾಯಿಯರ ಪ್ರೋತ್ಸಾಹವಿಲ್ಲದೆ ಎಂಥಹದೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವೇದಾಂತ ವಿನಂಬ್ರವಾಗಿ
ಹೇಳುತ್ತಾನೆ.ಮುಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗುವ ಬಯಕೆ ವೇದಾಂತ ಇಟ್ಟು ಕೊಂಡಿದ್ದಾನೆ. ಈ ಪುಟ್ಟ ಪೋರನಿಂದ ಮುಂದಿನ ದಿನಗಳಲ್ಲಿ
ಇನ್ನಷ್ಟು ನವ, ನವೀನ ವಾಹನ ಹೊರಬರಲಿ. ಅದು ಜನ ಸಾಮಾನ್ಯರ ಕೈಗೆಟಕುವಂತಿರಲಿ ಎಂಬುದು ಜನರ ಆಶಯ. ಬೆಸ್ಟ್ ಆಫ್ ಲಕ್ ವೇದಾಂತ್.

ಶ್ರೀಪತಿ ಹೆಗಡೆ ಹಕ್ಲಾಡಿ
(ಶ್ರೀಪತಿ ಹೆಗಡೆ ಹಕ್ಲಾಡಿ ಓರ್ವ ಆತ್ಮೀಯ ವ್ಯಕ್ತಿ. ಉಷಾಕಿರಣ ಪತ್ರಿಕೆಯಲ್ಲಿ ಮಂಗಳೂರು ಆವೃತ್ತಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿದಂದಿನಿಂದ ಗೆಳೆತನ. ದಿನಾ ಒಂದಿಲ್ಲೊಂದು ವರದಿಗಳ ಬೆನ್ನು ಹತ್ತಿ ಸುದ್ದಿಮಾಡುವ ಉತ್ಸಾಹಿ ವ್ಯಕ್ತಿ. ತುಂಬು ಪ್ರೀತಿ. ಅಷ್ಟೇ ಕಾಳಜಿ. ಎಲ್ಲಕ್ಕಿಂತ ಹೆಚ್ಚು ಮೃದು ಮನಸ್ಸು. ಜೀವನದಲ್ಲಿ ಸಾಕಷ್ಟು ನೋವುಂಡವರು. ಆ ಕಾರಣಕ್ಕಾಗಿಯೇ ಇತರರ ನೋವನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಸ್ನೇಹಜೀವಿ, ಇತರರಿಗೆ ತನ್ನ ಕೈಲಾದ ಸಹಾಯ ಮಾಡುವ ವ್ಯಕ್ತಿತ್ವ. ಹೊಸತನದ ವರದಿಗಳನ್ನು ನೀಡುವುದು ಹಕ್ಲಾಡಿ ಅವರ ವೈಶಿಷ್ಠ್ಯ. ಇದೀಗ ಹೊಸದಿಗಂತದ ವರದಿಗಾರರು.ಈ ಕನಸು.ಕಾಂ ಮೇಲಣ ಪ್ರೀತಿ, ವಿಶ್ವಾಸದಿಂದ ವಿಶೇಷ ವರದಿ, ನುಡಿಚಿತ್ರಗಳನ್ನು ನೀಡುತ್ತಿದ್ದಾರೆ. )

ಮುಂದೆ ಓದಿ

ವಿಶೇಷ ವರದಿ







ಅಂದು ಮೇ ೨೩ರ ಮುಂಜಾನೆ ೬.೩೦ರ ಸಮಯ. ರಾತ್ರಿಯೆಲ್ಲಾ ಆಗಸದಲ್ಲಿ ನಸುನಗುತ್ತಿದ್ದ
ಚಂದಮಾಮ ಪಡುವಣದ ಅಂಚಿನಲ್ಲಿ ಜಾರಿದ್ದ. ಇತ್ತ ಮೂಡಣದಲ್ಲಿ ಉದಯಿಸುತ್ತಿದ್ದ ರವಿ,
ತನ್ನ ಕರ್ತವ್ಯ ನಿರ್ವಹಣೆಗೆ ಅಣಿಯಾಗುತ್ತಿದ್ದ. ಅತ್ತ ದೂರದ ದೇಶ ದುಬೈಯಿಂದ
ಬರುತ್ತಿದ್ದ ವಿಮಾನವೊಂದು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ
ಕೆಳಗಿಳಿಯುತ್ತಿತ್ತು. ವರ್ಷಗಳ ನಂತರ ತವರಿಗೆ ಮರಳುತ್ತಿದ್ದ ಪ್ರಯಾಣಿಕರ ಮನಗಳು
ತಮ್ಮವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದವು. ಇನ್ನೇನು, ವಿಮಾನದಿಂದ ಇಳಿದೇ
ಬಿಟ್ಟೆವು ಅಂದುಕೊಳ್ಳುತ್ತಿದ್ದ ಪ್ರಯಾಣಿಕರಿಗೆ ಆಘಾತ ಕಾದಿತ್ತು. ರನ್‌ವೇಯಿಂದ
ಜಾರಿದ ವಿಮಾನ ಹೊತ್ತಿ ಉರಿಯತೊಡಗಿತು. ನೋಡ, ನೋಡುತ್ತಿದ್ದಂತೆ ೧೫೮ ಮಂದಿ ಇಹಲೋಕದ
ಯಾತ್ರೆ ಮುಗಿಸಿದರು. ಅಪಘಾತ ರಾಷ್ಟ್ರೀಯ ದುರಂತವಾಗಿ ಬಿಟ್ಟಿತು.
ವಿಮಾನ ದುರಂತ ಇದೇ ಮೊದಲಲ್ಲ, ಬಹುಶ: ಇದೇ ಕೊನೆಯೂ ಆಗಲಾರದು. ವಿಮಾನಗಳು ಅಪ್ಪಳಿಸುವ,
ತಾಂತ್ರಿಕ ದೋಷದಿಂದ ಕೆಳಗಿಳಿಯುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
ಪ್ರಯಾಣಿಕರ ಎದೆ ಬಡಿತವನ್ನು ಹೆಚ್ಚಿಸುತ್ತವೆ. ವಿಮಾನಯಾನ ಸುರಕ್ಷಿತ ಎನ್ನುವವರ
ಅಭಿಪ್ರಾಯಕ್ಕೆ ಸವಾಲೊಡ್ಡುತ್ತಲೇ ಇರುತ್ತವೆ.
ಅಂಕಿ-ಅಂಶಗಳು ಹೇಳುವಂತೆ ಕಳೆದ ೫ ವರ್ಷಗಳ ಅವಯಲ್ಲಿ ವಿಮಾನಯಾನ ಪ್ರಮಾಣ ಎರಡು ಪಟ್ಟು
ಹೆಚ್ಚಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿಲ್ಲ.
ಬಹುತೇಕ ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗಳ ಕೊರತೆ ಎದುರಿಸುತ್ತಿವೆ.
ಸಿಬ್ಬಂದಿಗಳಿಗೆ ಉತ್ತಮ ತರಬೇತಿಯ ಕೊರತೆಯಿದೆ. ಜತೆಗೆ ಇರುವ ಸಿಬ್ಬಂದಿಯೇ ಹೆಚ್ಚುವರಿ
ಸಮಯದಲ್ಲಿ ಕೆಲಸ ನಿರ್ವಹಿಸಬೇಕಾದ ಒತ್ತಡವಿದೆ. ಇವೆಲ್ಲವೂ ವಿಮಾನ ದುರಂತಗಳಿಗೆ
ಆಹ್ವಾನವೀಯುತ್ತಿವೆ. ಅಲ್ಲದೆ, ಸಿಬ್ಬಂದಿಗಳ ನಡುವಿನ ಸಂವಹನ ಕೊರತೆ, ಅಸಮರ್ಪಕ
ನಿರ್ವಹಣೆ, ಆಧುನಿಕ ತಂತ್ರಜ್ಞಾನದ ಕೊರತೆಗಳು ಅವಘಡಗಳಿಗೆ ತಮ್ಮದೇ ಆದ ಪಾಲನ್ನು
ಸಲ್ಲಿಸುತ್ತಿವೆ.
ಬಹುತೇಕ ಸಂದರ್ಭಗಳಲ್ಲಿ ಸಿಬ್ಬಂದಿಗಳ ತಪ್ಪುಗಳಿಂದಾಗಿಯೇ ಅಪಘಾತಗಳು ಸಂಭವಿಸುತ್ತವೆ.
ಶೇ. ೭೮ರಷ್ಟು ಅಪಘಾತಗಳು ಸಂಭವಿಸುವುದು ಸಿಬ್ಬಂದಿಗಳ ತಪ್ಪುಗಳಿಂದ. ದುರಂತಕ್ಕೆ
ತಾಂತ್ರಿಕ ದೋಷದ ಪಾಲು ಶೇ. ೨೨ರಷ್ಟು ಮಾತ್ರ ಎನ್ನುವುದು ಪರಿಣಿತರ ಅಳಲು.
ದೇಶದಲ್ಲಿ ಸರಿ ಸುಮಾರು ೧೦ ಕಮರ್ಷಿಯಲ್ ಏರ್‌ಲೈನ್ಸ್‌ಗಳಿದ್ದು, ೬೦೦ ವಿಮಾನಗಳು
ಹಾರಾಟ ನಡೆಸುತ್ತವೆ. ಆದರೆ, ಇಡೀ ದೇಶದ ವಾಯುನೆಲೆ ವೀಕ್ಷಣೆಗೆ ಇರುವ ರೆಡಾರ್‌ಗಳ
ಸಂಖ್ಯೆ ಕೇವಲ ೭. ಇನ್ಸ್‌ಪೆಕ್ಟರ್‌ಗಳು ಇರುವುದು ಕೇವಲ ಮೂರು. ಕಡಿಮೆ ವಿಸಿಬಿಲಿಟಿ
ವೇಳೆಯೂ ಲ್ಯಾಂಡಿಂಗ್ ಮಾಡಲು ಅವಕಾಶವೀಯುವ ಅತ್ಯಾಧುನಿಕ ಮಾದರಿಯ ತಂತ್ರಜ್ಞಾನ
ಇರುವುದು ಕೇವಲ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಎನ್ನುತ್ತಾರೆ ವಿಮಾನಯಾನ
ಪ್ರಾಕಾರದ ಹಿರಿಯ ಅಕಾರಿಗಳು.
ಕಳೆದ ೧೦ ತಿಂಗಳ ಅವಯಲ್ಲಿ ದೇಶದಲ್ಲಿ ೧೮ ವಿಮಾನ ದುರಂತಗಳು ಸ್ವಲ್ಪದರಲ್ಲಿ ತಪ್ಪಿವೆ.
ಇಂತಹ ಅಚಾನಕ್ ಘಟನೆಗಳ ಪೈಕಿ ಬಹುತೇಕ ಘಟನೆಗಳು ಸಂಭವಿಸಿದುದು ಮುಂಬಯಿ ವಿಮಾನ
ನಿಲ್ದಾಣ ವ್ಯಾಪ್ತಿಯ ಸಮೀಪ ಎಂಬುದು ಆಘಾತಕಾರಿ ಅಂಶ. ಈ ದಿಸೆಯಲ್ಲಿ ನಂತರದ ಸ್ಥಾನ
ದಿಲ್ಲಿಯದು.

ಭಾರತದ ಈವರೆಗಿನ ೧೦ ಅತಿ ಘೋರ ವಿಮಾನಯಾನ ದುರಂತಗಳು
೧. ಜನವರಿ ೧, ೧೯೭೮.
ಮುಂಬಯಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ೮೫೫ ವಿಮಾನ ಟೇಕ್‌ಆಫ್ ಆದ ಕೆಲವೇ
ಕ್ಷಣಗಳಲ್ಲಿ ಮುಂಬಯಿಯ ಬಾಂದ್ರಾ ಕರಾವಳಿ ತೀರದಾಚೆ ಅಪಘಾತಕ್ಕೀಡಾಯಿತು. ತಾಂತ್ರಿಕ
ದೋಷ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೨೧೩

೨. ಮೇ ೨೩, ೨೦೧೦
ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಐಎಕ್ಸ್ ೮೧೨ ವಿಮಾನ ಮಂಗಳೂರಿನ
ಬಜಪೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದ ವೇಳೆ ದುರಂತಕ್ಕೀಡಾಯಿತು.
ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೧೫೮

೩. ಅಕ್ಟೋಬರ್ ೧೯, ೧೯೮೮
ಮುಂಬಯಿಯಿಂದ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ೧೧೩ ವಿಮಾನ ಅಹಮದಾಬಾದ್ ವಿಮಾನ
ನಿಲ್ದಾಣ ಸಮೀಪ ಮರಕ್ಕೆ ಡಿಕ್ಕಿ ಹೊಡೆದು ಗದ್ದೆಗೆ ಉರುಳಿ ಬೆಂಕಿ ಹೊತ್ತಿಕೊಂಡಿತು.
ಮಂಜು ಮುಸುಕಿದ ವಾತಾವರಣ ದುರಂತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೧೩೦

೪. ಜನವರಿ ೨೪, ೧೯೬೬
ಭಾರತದಿಂದ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ೭೦೭-೪೩೭ ವಿಮಾನ ಫ್ರಾನ್ಸ್ ಹಾಗೂ ಇಟಲಿ
ಗಡಿಯಲ್ಲಿ ಮೌಂಟ್ ಬ್ಲಾಂಕ್ ಪರ್ವತಕ್ಕೆ ಅಪ್ಪಳಿಸಿತು. ಮೃತರಲ್ಲಿ ಖ್ಯಾತ ವಿಜ್ಞಾನಿ
ಹೋಮಿ ಜಹಾಂಗೀರ್ ಭಾಭಾ ಸೇರಿದ್ದಾರೆ.
ಮೃತ ಪ್ರಯಾಣಿಕರ ಸಂಖ್ಯೆ: ೧೧೭

೫. ಫೆಬ್ರವರಿ ೧೪, ೧೯೯೦
ಮುಂಬಯಿಯಿಂದ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ೬೦೫ ವಿಮಾನ ತಾಂತ್ರಿಕ
ದೋಷದಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಅಪಘಾತಕ್ಕೀಡಾಯಿತು. ಖ್ಯಾತ ಉದ್ಯಮಿ
ಅಶೋಕ್ ವರ್ಧನ್ ಬಿರ್‍ಲಾ, ಪತ್ನಿ ಹಾಗೂ ಪುತ್ರಿ ಸುಜಾತಾ ಮೃತರಲ್ಲಿ ಸೇರಿದ್ದಾರೆ.
ಮೃತ ಪ್ರಯಾಣಿಕರ ಸಂಖ್ಯೆ: ೯೨

೬. ಆಗಸ್ಟ್ ೧೬, ೧೯೯೧
ಕೋಲ್ಕತಾದಿಂದ ಇಂಫಾಲ್‌ಗೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ೨೫೭ ವಿಮಾನ
ಥಾಂಗ್‌ಜಿಂಗ್ ಬೆಟ್ಟಕ್ಕೆ ಅಪ್ಪಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೬೯

೭. ಜುಲೈ ೧೭, ೨೦೦೦.
ಬೋಯಿಂಗ್ ೭೩೭ ಪ್ರಯಾಣಿಕ ವಿಮಾನ, ಪಟನಾ ವಿಮಾನ ನಿಲ್ದಾಣ ಸಮೀಪ ವಾಣಿಜ್ಯ
ಸಂಕೀರ್ಣಕ್ಕೆ ಡಿಕ್ಕಿ ಹೊಡೆಯಿತು. ವಿಮಾನ ಸುಮಾರು ೨೦ ವರ್ಷಗಳಷ್ಟು
ಹಳೆಯದಾಗಿದ್ದು, ವರ್ಷದ ಅಂತ್ಯದ ವೇಳೆಗೆ ಸೇವೆಯಿಂದ ಇದನ್ನು ವಾಪಸ್ ಪಡೆಯಲು
ಅಕಾರಿಗಳು ನಿರ್ಧರಿಸಿದ್ದರು.
ಮೃತ ಪ್ರಯಾಣಿಕರ ಸಂಖ್ಯೆ: ೫೮

೮. ಏಪ್ರಿಲ್ ೨೬, ೧೯೯೩.
ದಿಲ್ಲಿಯಿಂದ ಮುಂಬಯಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ೪೯೧ವಿಮಾನ ಮಾರ್ಗಮಧ್ಯೆ
ಔರಂಗಾಬಾದ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಅಪಘಾತಕ್ಕೀಡಾಯಿತು. ಪೈಲಟ್‌ನ ಅಚಾತುರ್ಯ
ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೫೫. ಗಾಯಗೊಂಡವರ ಸಂಖ್ಯೆ: ೬೩

೯. ನವೆಂಬರ್ ೩, ೧೯೫೦
ಮುಂಬಯಿ-ಕೈರೋ-ಜಿನೀವಾ-ಲಂಡನ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ೨೪೫
ವಿಮಾನ ಮೌಂಟ್ ಬ್ಲಾಂಕ್ ಪರ್ವತಕ್ಕೆ ಅಪ್ಪಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೪೮.


೧೦. ಜೂನ್ ೨೧, ೧೯೮೨
ಕೌಲಾಲಂಪುರದಿಂದ ಆಗಮಿಸಿದ ಬೋಯಿಂಗ್ ೭೦೭-೪೨೦ ವಿಮಾನ ಮುಂಬಯಿಯ ಸಹರಾ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ದುರಂತಕ್ಕೀಡಾಯಿತು. ಭಾರಿ ಮಳೆಯಿಂದ
ಕೂಡಿದ ಹವಾಮಾನ ವೈಪರೀತ್ಯ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಮೃತ ಪ್ರಯಾಣಿಕರ ಸಂಖ್ಯೆ: ೧೭.


ಪೈಲಟ್‌ಗಳಿಗೆ ಮದ್ಯಪಾನ ನಿಷೇಧ
ಕರ್ತವ್ಯ ನಿರ್ವಹಣೆ ವೇಳೆ ಪೈಲಟ್‌ಗಳಿಗೆ ಮದ್ಯಪಾನ ನಿಷೇಸಲಾಗಿದೆ. ವಿಮಾನ ಹಾರಾಟಕ್ಕೆ
ಮುನ್ನ ಮತ್ತು ನಂತರ ದಿಢೀರ್ ದಾಳಿ ಮೂಲಕ ಪೈಲಟ್‌ಗಳು ಮದ್ಯಪಾನ ಮಾಡಿದ್ದಾರೆಯೇ,
ಇಲ್ಲವೇ ಎಂಬುದನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ಅಕಾರಿಗಳು
ಪತ್ತೆ ಹಚ್ಚುತ್ತಾರೆ. ಆದರೂ, ಪೈಲಟ್‌ಗಳು ಮದ್ಯಪಾನ ಮಾಡಿ ಚಾಲನೆ ಮಾಡಿದ ಬಗ್ಗೆ
ದೂರುಗಳು ಬರುತ್ತಿರುತ್ತವೆ. ಡಿಜಿಸಿಎ ಕಳೆದ ವರ್ಷ ೮ ಕುಡುಕ ಪೈಲಟ್‌ಗಳನ್ನು
ವಜಾಗೊಳಿಸಿದೆ. ಮದ್ಯಪಾನ ಮಾಡಿದ ಪೈಲಟ್‌ಗಳಿಗೆ ಸಂಬಂಸಿದಂತೆ ೪೨ ಪ್ರಕರಣಗಳು
ದಾಖಲಾಗಿವೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿಯೇ ೨೧ ಪ್ರಕರಣಗಳು ಪತ್ತೆಯಾಗಿವೆ. ಇತರ
೧೧ ಪ್ರಕರಣಗಳು ಮುಂಬಯಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿವೆ.


ವಿಶ್ವದ ಈವರೆಗಿನ ೧೦ ಘೋರ ವಿಮಾನಯಾನ ದುರಂತಗಳು
೧. ಮಾರ್ಚ್ ೨೭, ೧೯೭೭
ಮಂಜು ಮುಸುಕಿದ ವಾತಾವರಣದಿಂದಾಗಿ ಸ್ಪೇನ್‌ನ ಕೆನರಿ ದ್ವೀಪದ ತೆನೆರಿಫೆಯ
ರನ್‌ವೇನಲ್ಲಿ ಬೋಯಿಂಗ್ ೭೪೭ನ ಎರಡು ವಿಮಾನಗಳ ನಡುವೆ ಡಿಕ್ಕಿ. ಸಂವಹನ ಕೊರತೆಯಲ್ಲಾದ
ಗೊಂದಲ ಅಪಘಾತಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೫೮೩

೨. ಆಗಸ್ಟ್ ೧೨, ೧೯೮೫
ಟೊಕಿಯೋದಿಂದ ಹೊರಟ ಜಪಾನ್ ಏರ್‌ಲೈನ್ಸ್‌ನ ವಿಮಾನ ೭೪೭ ತಾಂತ್ರಿಕ ದೋಷದಿಂದಾಗಿ ಮೌಂಟ್
ಫ್ಯೂಜಿ ಸಮೀಪ ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೫೨೦


೩. ನವೆಂಬರ್ ೧೨, ೧೯೯೬
ಖಜಕಿಸ್ತಾನದಿಂದ ಹೊರಟ ಇಲಿಯುಷಿನ್ ಐಎಲ್-೭೬ ಸರಕು ಸಾಗಣೆ ವಿಮಾನ ಹಾಗೂ ಸೌದಿಯ ೭೪೭
ವಿಮಾನಗಳ ನಡುವೆ ದಿಲ್ಲಿ ಸಮೀಪ ಆಗಸದಲ್ಲಿ ಡಿಕ್ಕಿ. ದಿಲ್ಲಿ ವಿಮಾನ ನಿಲ್ದಾಣದ
ಅಕಾರಿಗಳು ನೀಡಿದ ನಿರ್ದೇಶನವನ್ನು ಖಜಕಿಸ್ತಾನ ವಿಮಾನದ ಚಾಲಕ ಉಲ್ಲಂಘಿಸಿದುದೇ
ಅವಘಡಕ್ಕೆ ಕಾರಣ. ಅಲ್ಲದೆ, ಸಂಭಾವ್ಯ ಡಿಕ್ಕಿ ತಪ್ಪಿಸಲು ಮುನ್ಸೂಚನೆ ನೀಡುವ
ತಂತ್ರಜ್ಞಾನದ ಅಳವಡಿಕೆ ಎರಡೂ ವಿಮಾನಗಳಲ್ಲಿಯೂ ಇರಲಿಲ್ಲ.
ಮೃತ ಪ್ರಯಾಣಿಕರ ಸಂಖ್ಯೆ: ೩೪೯


೪. ಮಾರ್ಚ್ ೩, ೧೯೭೪
ತಾಂತ್ರಿಕ ದೋಷದಿಂದಾಗಿ ಓರ್‍ಲಿ ವಿಮಾನ ನಿಲ್ದಾಣದ ಸಮೀಪ ತುರ್ಕಿಯ ಡಿಸಿ-೧೦ ವಿಮಾನ ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೩೪೬



೫. ಜೂನ್ ೨೩, ೧೯೮೫
ಟೊರೆಂಟೊದಿಂದ ಮುಂಬಯಿಗೆ ಬರುತ್ತಿದ್ದ ಏರ್ ಇಂಡಿಯಾ ೭೪೭ ವಿಮಾನದಲ್ಲಿ ಸಿಖ್
ಉಗ್ರಗಾಮಿ ಇಟ್ಟ ಬಾಂಬ್ ಸಿಡಿದು ಸೋಟ. ಐರ್‌ಲ್ಯಾಂಡ್ ಪೂರ್ವಕ್ಕಿರುವ ಸಾಗರದಲ್ಲಿ
ಪತನ.
ಮೃತ ಪ್ರಯಾಣಿಕರ ಸಂಖ್ಯೆ: ೩೨೯.


೬. ಆಗಸ್ಟ್ ೧೯, ೧೯೮೦
ಕರಾಚಿಯಿಂದ ರಿಯಾದ್‌ಗೆ ಬರುತ್ತಿದ್ದ ಸೌದಿಯ ಎಲ್-೧೦೧೧ ವಿಮಾನದಲ್ಲಿ ಬೆಂಕಿ
ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ವಿಮಾನ ಹೊತ್ತಿ ಉರಿಯಿತು.
ಮೃತ ಪ್ರಯಾಣಿಕರ ಸಂಖ್ಯೆ: ೩೦೧.


೭. ಜುಲೈ ೩, ೧೯೮೮.
ಶತ್ರು ರಾಷ್ಟ್ರದ ಯುದ್ಧ ವಿಮಾನ ಎಂಬುದಾಗಿ ತಪ್ಪಾಗಿ ಭಾವಿಸಿದ ಅಮೆರಿಕದ ನೌಕಾಪಡೆ
ಇರಾನ್ ಏರ್‌ಲೈನ್ಸ್‌ನ ಏರ್‌ಬಸ್ ಎ೩೦೦ ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿತು.
ಮೃತ ಪ್ರಯಾಣಿಕರ ಸಂಖ್ಯೆ: ೨೯೦

೮. ಮೇ ೨೫, ೧೯೭೯
ತಾಂತ್ರಿಕ ದೋಷದಿಂದಾಗಿ ಚಿಕಾಗೊ ವಿಮಾನ ನಿಲ್ದಾಣದ ರನ್‌ವೇಯಿಂದ ಮೇಲಕ್ಕೇರಿದ ಕೆಲವೇ
ಕ್ಷಣಗಳಲ್ಲಿ ಅಮೆರಿಕದ ಡಿಸಿ-೧೦ ವಿಮಾನ ಪತನ. (ಅಮೆರಿಕ ನೆಲದಲ್ಲಿ ಸಂಭವಿಸಿದ
ಈವರೆಗಿನ ಅತಿ ಘೋರ ವಿಮಾನ ದುರಂತ ಎಂಬುದು ಇದರ ಕಪ್ಪು ಚುಕ್ಕೆ).
ಮೃತ ಪ್ರಯಾಣಿಕರ ಸಂಖ್ಯೆ: ೨೭೩.

೯. ಡಿಸೆಂಬರ್ ೨೧, ೧೯೮೮
ಲಿಬಿಯಾದ ಇಬ್ಬರು ಉಗ್ರಗಾಮಿಗಳು ಇಟ್ಟ ಬಾಂಬ್ ಸಿಡಿದು ಸ್ಕಾಟ್‌ಲ್ಯಾಂಡ್‌ನ
ಲಾಕೆರ್‌ಬೈನ್ ಆಗಸದಲ್ಲಿ ಪಾನ್ ಅಮೆರಿಕನ್ ವಿಮಾನ ೧೦೩ ಸಿಡಿಯಿತು.
ಮೃತ ಪ್ರಯಾಣಿಕರ ಸಂಖ್ಯೆ: ೨೭೦.


೧೦. ಸೆಪ್ಟಂಬರ್ ೧, ೧೯೮೩.
ನ್ಯೂಯಾರ್ಕ್‌ನಿಂದ ಸಿಯೋಲ್‌ಗೆ ತೆರಳುತ್ತಿದ್ದ ಕೊರಿಯಾ ಏರ್‌ಲೈನ್ಸ್ ಕೆಎಲ್
೦೦೭ವಿಮಾನವನ್ನು ಸೋವಿಯತ್ ರಷ್ಯಾದ ಸೈನಿಕರು ಹೊಡೆದುರುಳಿಸಿದರು. ವಿಮಾನದ ಸಿಬ್ಬಂದಿ
ಸರಿಯಾದ ಮಾಹಿತಿ ನೀಡದೇ ಸೋವಿಯತ್ ಪ್ರದೇಶಕ್ಕೆ ನುಗ್ಗಿದ್ದೇ ಅವಾಂತರಕ್ಕೆ ಕಾರಣ.
ಮೃತ ಪ್ರಯಾಣಿಕರ ಸಂಖ್ಯೆ: ೨೬೯.

ವಿಮಾನ ದುರಂತ ಕುರಿತ ಕುತೂಹಲಕಾರಿ ಅಂಶಗಳು
* ಈವರೆಗಿನ ವಿಶ್ವದ ೧೦ ಘೋರ ವಿಮಾನಯಾನ ದುರಂತಗಳ ಪೈಕಿ ೭ರಲ್ಲಿ ಬೋಯಿಂಗ್ ೭೪೭ ವಿಮಾನ
ಒಳಗೊಂಡಿದೆ.
* ಭಯೋತ್ಪಾದಕರ ಸಂಚಿನಿಂದ ಇಲ್ಲವೇ ಶತ್ರು ರಾಷ್ಟ್ರದ ಯುದ್ಧವಿಮಾನ ಎಂಬುದಾಗಿ
ತಪ್ಪಾಗಿ ಅರ್ಥೈಸಿ ಹೊಡೆದುರುಳಿಸುವ ಮೂಲಕ ಸಂಭವಿಸಿದ ವಿಮಾನ ದುರಂತಗಳ ಸಂಖ್ಯೆ ೪.
* ಪೈಲಟ್‌ನ ತಪ್ಪಿನಿಂದಾಗಿ ಸಂಭವಿಸಿದ ದುರಂತಗಳ ಸಂಖ್ಯೆ ೩.
* ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ದುರಂತಗಳ ಸಂಖ್ಯೆ ೩.


ವಿಶ್ವದ ಅಪಾಯಕಾರಿ ವಿಮಾನ ನಿಲ್ದಾಣಗಳು
ಕಡಿದಾದ ಪರ್ವತ ಪ್ರದೇಶ ಹಾಗೂ ನದಿ, ಸಾಗರ, ಇಲ್ಲವೇ ಸಮುದ್ರಗಳ ಪಕ್ಕವೇ ಇರುವ ವಿಮಾನ
ನಿಲ್ದಾಣಗಳನ್ನು ಸಾಧಾರಣವಾಗಿ ಸುರಕ್ಷತೆ ದೃಷ್ಟಿಯಿಂದ ‘ವಿಶೇಷ’ ಎಂಬುದಾಗಿ
ಗುರುತಿಸಲಾಗುತ್ತದೆ. ಹಾಗೆ ನೋಡಿದರೆ,
* ಡೊಮಿನಿಕಾದ ಕೇನ್ ಫೀಲ್ಡ್ ವಿಮಾನ ನಿಲ್ದಾಣ ಅತಿ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ
ಒಂದು. ಪರ್ವತ ಪ್ರದೇಶಗಳ ಇಳಿಜಾರು ಜಾರುತ್ತಿದ್ದಂತೆ ಆರಂಭವಾಗುವ ಸಮುದ್ರದ ತೀರದಲ್ಲಿ
ನಿರ್ಮಿಸಲಾದ ರನ್‌ವೇ ದುರಂತಕ್ಕೆ ಆಹ್ವಾನ ನೀಡುವಂತಿದೆ.
* ಶ್ರೀಮಂತರ ಆಟದ ಮೈದಾನ ಎಂದೇ ಖ್ಯಾತವಾದ, ಸುಂದರ ಪ್ರೇಕ್ಷಣೀಯ ಸ್ಥಳ ಕೆರೆಬಿಯನ್
ದ್ವೀಪದ ಸೇಂಟ್ ಬಾರ್ಥೆಲೆಮಿಯ ವಿಮಾನ ನಿಲ್ದಾಣ ಕೂಡ ಅಪಾಯಕಾರಿ ಎಂಬುದು ತಜ್ಞರ
ಅಭಿಮತ. ಕಡಿದಾದ ಪರ್ವತದ ತಳದಲ್ಲಿ ಆರಂಭವಾಗಿ ಸೇಂಟ್ ಜೀನ್ಸ್ ಕರಾವಳಿ ತಟದಲ್ಲಿ
ಕೊನೆಗೊಳ್ಳುವ ರನ್‌ವೇ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚು. ಸುಂದರ
ಬೀಚ್‌ನಲ್ಲಿ ಸೂರ್ಯ ಸ್ನಾನ ಮಾಡುತ್ತಾ ಮೈಮರೆಯುವ ಪ್ರವಾಸಿಗರು ರನ್‌ವೇ ಪಕ್ಕದಲ್ಲೇ
ಮೈ ಮರೆತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿರುತ್ತದೆ.
* ನೇಪಾಳದ ಲುಕ್ಲಾದ ತೇನ್‌ಸಿಂಗ್-ಹಿಲರಿ ಏರ್‌ಪೋರ್ಟ್ ಕೂಡ ಅಪಾಯಕಾರಿ ಎಂಬುದು
ಜನಸಾಮಾನ್ಯರ ಅಭಿಮತ. ೫೨೭ ಮೀಟರ್ ಉದ್ದ ಹಾಗೂ ೨೦ ಮೀಟರ್ ಅಗಲ ಇರುವ ನಿಲ್ದಾಣದ
ರನ್‌ವೇ ಸುರಕ್ಷತೆಗೆ ಸವಾಲೊಡ್ಡುವ ಸ್ಥಿತಿಯಲ್ಲಿದೆ. ಅಲ್ಲದೆ, ಪರ್ವತ ಶ್ರೇಣಿಗಳ
ತಪ್ಪಲ ಮಧ್ಯೆ ಹಾಸುಹೊಕ್ಕಾಗಿ ನಿಂತಿರುವ ಕಠ್ಮಂಡು ವಿಮಾನ ನಿಲ್ದಾಣವೂ ಸ್ವಲ್ಪ
ಮಟ್ಟಿಗೆ ಅಪಾಯಕಾರಿಯೇ.
* ಸಮುದ್ರ ಮಟ್ಟದಿಂದ ೩,೩೦೦ ಅಡಿ ಎತ್ತರದಲ್ಲಿ, ಸುತ್ತ ಪರ್ವತಗಳಿಂದ ಕೂಡಿದ ಕಡಿದಾದ
ಕಣಿವೆಯಲ್ಲಿ ನಿರ್ಮಿಸಲಾದ, ಸಣ್ಣ ರನ್‌ವೇ ಹೊಂದಿರುವ ಹಾಂಡುರಾಸ್‌ನ ಟೊಂಕೊಂಟಿನ್
ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವುದು ಪೈಲಟ್‌ಗಳಿಗೆ ಒಂದು ಸವಾಲೇ
ಸರಿ.
* ಕೆರೆಬಿಯನ್ ದ್ವೀಪ ಸಮೂಹದ ಸಾಬಾದ ಜೂಯಾಂಕೊ ಇ.ಯ್ರಾಸ್‌ಕ್ವಿನ್ ವಿಮಾನ ನಿಲ್ದಾಣ.
ಪ್ರಸ್ತುತ ಇಲ್ಲಿ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುತ್ತಿಲ್ಲವಾದರೂ,
ಅಕಾರಿಗಳ ವಿಶೇಷ ಅನುಮತಿ ಪಡೆದು ವಿಮಾನ ಇಳಿಸಲಾಗುತ್ತಿದೆ. ಈವರೆಗೆ ಯಾವುದೇ ದುರಂತ
ಸಂಭವಿಸದೇ ಇದ್ದರೂ ಕೂಡ ಇಲ್ಲಿಯ ವಿಮಾನ ನಿಲ್ದಾಣ ಅಪಾಯಕಾರಿ ಎಂಬುದು ತಜ್ಞರ ಅಭಿಮತ.
ಒಂದು ಕಡೆ ಕಡಿದಾದ ಬೆಟ್ಟಗಳ ಇಳಿಜಾರು, ಇನ್ನೊಂದೆಡೆ ಸಮುದ್ರ. ಜತೆಗೆ ಸಣ್ಣ ರನ್‌ವೇ.
ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ
ಬುತ್ತಿ.
* ಫ್ರಾನ್ಸ್‌ನ ಆಲ್ಸ್ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಕೌರ್‍ಚೆವೆಲ್, ಅಪಾಯಕಾರಿ
ವಿಮಾನ ನಿಲ್ದಾಣಗಳ ಪೈಕಿ ಒಂದು. ೫೨೫ಮೀಟರ್ ಉದ್ದದ ಇಲ್ಲಿನ ರನ್‌ವೇ, ವಿಶ್ವದ ಅತಿ
ಚಿಕ್ಕ ರನ್‌ವೇಗಳಲ್ಲಿ ಒಂದು. ಕಡಿದಾದ ಕಣಿವೆಗಳ ಮಧ್ಯೆಯೇ ಬರಬೇಕಾದ ವಿಮಾನಗಳನ್ನು
ಸುರಕ್ಷಿತವಾಗಿ ಲ್ಯಾಂಡ್ ಮಾಡುವುದು ತಜ್ಞ ಪೈಲಟ್‌ಗಳಿಂದ ಮಾತ್ರ ಸಾಧ್ಯ.
* ಪೋರ್ಚುಗಲ್‌ನ ಮಡೈರಾ ವಿಮಾನ ನಿಲ್ದಾಣ ನುರಿತ ಪೈಲಟ್‌ಗಳಿಗೂ ಸವಾಲೊಡ್ಡುವಂತಿದೆ.
ರನ್‌ವೇ ಸಣ್ಣದಾಗಿದ್ದು, ನಿಲ್ದಾಣ ಒಂದೆಡೆ ಪರ್ವತ ಶ್ರೇಣಿ ಹಾಗೂ ಇನ್ನೊಂದೆಡೆ
ಸಾಗರದಿಂದ ಆವೃತವಾಗಿದೆ.
* ಗಿಬ್ರಾಲ್ಟರ್ ವಿಮಾನ ನಿಲ್ದಾಣ ವಿಶ್ವದ ಕೆಲವೇ ‘ಎ’ ದರ್ಜೆಯ ವಿಮಾನ
ನಿಲ್ದಾಣಗಳಲ್ಲಿ ಒಂದು. ಆದರೆ, ನಗರದಿಂದ ಸ್ಪೇನ್‌ಗೆ ತೆರಳುವ ಹೆದ್ದಾರಿ, ರನ್ ವೇ
ಮಧ್ಯದಲ್ಲಿಯೇ ಹಾದು ಹೋಗುತ್ತದೆ. ಇದರಿಂದಾಗಿ ಪ್ರತಿ ಸಲ ವಿಮಾನ ಇಳಿಯುವಾಗ ಮತ್ತು
ಟೇಕ್ ಆಫ್ ಆಗುವಾಗ ಹೆದ್ದಾರಿಯನ್ನು ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಸಬೇಕಾದ
ಅನಿವಾರ್‍ಯತೆ ಎದುರಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಎದುರಾಗುತ್ತದೆ.

ಭಾರತದಲ್ಲಿ
ಕಡಿದಾದ ಪರ್ವತಗಳ ಮಧ್ಯೆ ಸಮುದ್ರ ಮಟ್ಟದಿಂದ ಸರಿ ಸುಮಾರು ೫,೦೭೨ ಅಡಿ ಎತ್ತರದಲ್ಲಿ
ನಿರ್ಮಿಸಲಾದ ಹಿಮಾಚಲ ಪ್ರದೇಶದ ಶಿಮ್ಲಾ ವಿಮಾನ ನಿಲ್ದಾಣ ಅಪಾಯಕಾರಿ.
ಅಲ್ಲದೆ, ಮಂಗಳೂರು, ಶ್ರೀನಗರ, ಲೆಹ್, ಪೋರ್ಟ್ ಬ್ಲೇರ್, ಕಾಲಿಕಟ್ ಹಾಗೂ ಲಕ್ಷದ್ವೀಪದ
ಅಗಟ್ಟಿ ವಿಮಾನ ನಿಲ್ದಾಣಗಳು ಸ್ವಲ್ಪ ಮಟ್ಟಿಗೆ ಅಪಾಯಕಾರಿಯೇ.
ಮಂಗಳೂರಿನ ಬಜಪೆ ವಿಮಾನ ನಿಲ್ದಾಣ ವೀಕ್ಷಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂ,
‘ವಿಮಾನ ನಿಲ್ದಾಣ ನೋಡಲು ಬಲು ಸುಂದರ. ಆದರೆ, ಅಪಾಯಕಾರಿ’ ಎಂಬುದಾಗಿ ಹಿಂದೊಮ್ಮೆ
ಉದ್ಘಾರ ತೆಗೆದಿದ್ದರಂತೆ. ಬೆಟ್ಟದ ಮೇಲಿರುವ ನಿಲ್ದಾಣದ ರನ್‌ವೇಯ ಎರಡೂ ಕಡೆ ಕಡಿದಾದ
ಪರ್ವತ ಪ್ರದೇಶವಿದೆ. ಹಾಗಾಗಿ, ವಿಮಾನ ರನ್‌ವೇಯಿಂದ ಸ್ವಲ್ಪ ಜಾರಿದರೂ ಅಪಾಯ
ಕಟ್ಟಿಟ್ಟ ಬುತ್ತಿ.
ಲೇಹ್ ಹಾಗೂ ಪೋರ್ಟ್ ಬ್ಲೇರ್‌ನ ರನ್‌ವೇಗಳು ಏಕಮುಖ ಸಂಚಾರ ವ್ಯವಸ್ಥೆ ಹೊಂದಿವೆ.
ಹಾಗಾಗಿ, ಇಲ್ಲಿ ವಿಮಾನಗಳು ಇಳಿಯುವುದು ಹಾಗೂ ಏರುವುದು ಒಂದೇ ದಿಕ್ಕಿನಿಂದ. ಕಾರಣ,
ರನ್‌ವೇಯ ಇನ್ನೊಂದು ಬದಿ ಪರ್ವತ ಶ್ರೇಣಿಗಳ ಸಾಲನ್ನು ಹೊಂದಿದ್ದು, ಟೇಕ್ ಆಫ್ ಅಥವಾ
ಲ್ಯಾಂಡಿಂಗ್‌ಗೆ ಸಾಧುವಲ್ಲ.
ಸುತ್ತಲ ಪರ್ವತ ಶ್ರೇಣಿ ಹಾಗೂ ಅತಿವೇಗದಿಂದ ಬೀಸುವ ಗಾಳಿ ಶ್ರೀನಗರ ವಿಮಾನ
ನಿಲ್ದಾಣವನ್ನು ಅಪಾಯದ ಪಟ್ಟಿಗೆ ಸೇರಿಸಿದೆ. ಕಾಲಿಕಟ್ ವಿಮಾನ ನಿಲ್ದಾಣದಲ್ಲಿ ವಿಮಾನದ
ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ವೇಳೆ ಪಕ್ಕದಲ್ಲಿ ಹಾಸುಹೊಕ್ಕಾದ ಪರ್ವತ ಶ್ರೇಣಿಗಳ
ಬಗ್ಗೆ ಪೈಲಟ್ ತೀವ್ರ ನಿಗಾ ವಹಿಸಲೇಬೇಕು. ಅಗಟ್ಟಿಯಲ್ಲಿ ರನ್ ವೇ ಚಿಕ್ಕದಾಗಿದೆ.
ಜತೆಗೆ ನಿಲ್ದಾಣದ ಒಂದು ಕಡೆ ಎತ್ತರವಾಗಿ ಬೆಳೆದು ನಿಂತ ಮರಗಳು ಅಪಾಯದ ಮುನ್ಸೂಚನೆ
ನೀಡುತ್ತಿರುತ್ತವೆ.
ಇಂತಹ ಸ್ಥಳಗಳಿಗೆ ಕರ್ತವ್ಯಕ್ಕೆ ತೆರಳುವ ಪೈಲಟ್‌ಗಳಿಗೆ ಸಾಧಾರಣವಾಗಿ ವಿಶೇಷ ತರಬೇತಿ
ನೀಡಲಾಗುತ್ತದೆ. ಪರಿಣಿತ ಪೈಲಟ್, ಸಹ ಪೈಲಟ್‌ಗಳನ್ನು ಕರ್ತವ್ಯಕ್ಕೆ
ನಿಯೋಜಿಸಲಾಗುತ್ತದೆ. ಇಲ್ಲಿನ ಹವಾಮಾನ ವೈಪರೀತ್ಯ, ಭೂಭಾಗಗಳ ಬಗ್ಗೆ ವಿಶೇಷ ಮಾಹಿತಿ
ನೀಡಲಾಗಿರುತ್ತದೆ. ಅಲ್ಲದೆ, ಆಗಾಗ ಪೈಲಟ್‌ಗಳ ಸಾಮರ್ಥ್ಯದ ಬಗ್ಗೆ ಪರಿಶೀಲನೆಯೂ
ನಡೆಯುತ್ತದೆ. ಇಷ್ಟಾಗಿಯೂ ದುರಾದೃಷ್ಟವಶಾತ್ ಕೆಲವು ಸಲ ದುರಂತಗಳು ಸಂಭವಿಸುತ್ತವೆ.

- ಮಹಾಬಲೇಶ್ವರ ಹೊನ್ನೆಮಡಿಕೆ

ಮುಂದೆ ಓದಿ
8:22 PM

ಪ್ರವಾಸ - ಪ್ರಯಾಸ!

Posted by ekanasu

ವಿಶೇಷ ವರದಿ





ಚಿಕ್ಕಮಗಳೂರು : ಸರಕಾರದ ಆದೇಶಗಳೇ ಹೀಗೆ. ಬಹುತೇಕ ನಿಯಮಾವಳಿಗಳು ಜನ ವಿರೋಧಿಯಾಗಿ ಹೊರ ಹೊಮ್ಮುತ್ತಿರುವುದು ನಾಗರಿಕರ ದೌರ್ಭಾಗ್ಯ. ಇದಕ್ಕೆ ಚಿಕ್ಕಮಗಳೂರಿನ ಬೆಳವಾಡಿ ಗ್ರಾಮವೂ ಹೊರತಾಗಿಲ್ಲ. ಅನೇಕ ವರ್ಷಗಳಿಂದ ಬದುಕು ಕಟ್ಟಿಕೊಂಡವರು ಮೂಲ ನೆಲೆಯನ್ನೇ ಕಬಳಿಸುವಂಥ ಆದೇಶ ಕೇಂದ್ರ ಪುರಾತತ್ವ ಇಲಾಖೆಯಿಂದ ಹೊರಬಿದ್ದಿದೆ. ಕೇಂದ್ರ ಪುರಾತತ್ವ ಇಲಾಖೆ ದೇವಸ್ಥಾನದ ಪರಿಸರದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಜಾಗ ಖಾಲಿ ಮಾಡಿ ಎಂಬ ನೋಟೀಸ್ ಜಾರಿ ಮಾಡಿದೆ. ಹಿಂದು, ಮುಂದು ನೋಡದೆ ಪುರಾತತ್ವ ಇಲಾಖೆ ಹೊರಡಿಸಿದ ಆದೇಶದಿಂದ ದೇವಳದ ಸುತ್ತಮುತ್ತ ವಾಸಮಾಡುತ್ತಿರುವ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.ಅದೂ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಜಾಗ ತೆರವು ಮಾಡಿ ಅಂದರೆ ನಾವೆಲ್ಲಿಗೆ ಹೋಗಬೇಕು ಎಂದು ಇಲ್ಲಿನ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಬೇರೆ ನೆಲೆ ಬಗ್ಗೆ ಚಕಾರವೆತ್ತದೆ ಜಾಗ ಬಿಟ್ಟು ಹೊರಡಿ ಎಂದರೆ ನಾವೇನು ಅರಬ್ಬೀ ಸಮುದ್ರಕ್ಕೆ ಬೀಳಬೇಕಾ ಎಂದು ಸಂತ್ರಸ್ಥರು ಆಕ್ರೋಶಿತರಾಗಿ ಪ್ರಶ್ನಿಸುತ್ತಾರೆ. ಮೊದ ಮೊದಲು ಪರಿಹಾರ ಪರ್ಯಯ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದ ಪುರಾತತ್ವ ಇಲಾಖೆ ಈಗ ಪರಿಹಾರದ ಬಗ್ಗೆ ಚಕಾರವೆತ್ತುತ್ತಿಲ್ಲ. ಜೊತೆಗೆ ಪರಿಸರ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿರುವುದು ಮಾತ್ರ ಅಮಾನವೀಯ. ಇದು ಯಾವ ತಿರುವು ಪಡೆಯುತ್ತದೋ ಎನ್ನೋದು ಹೇಳೋಕೆ ಬರೋಲ್ಲ.

ಬೆಳವಾಡಿ ಶ್ರೀ ವೀರನಾರಾಯಣ ದೇವಸ್ಥಾನದ ಪರಿಸರದಲ್ಲಿ 300ಕ್ಕೂ ಮಿಕ್ಕ ಮನೆಗಳಿವೆ. ಸುಮಾರು 2500 ಜನರು ವಾಸಮಾಡುತ್ತಿದ್ದಾರೆ. ಇಲ್ಲಿನ ಹೆಚ್ಚಿನ ಜನರಿಗೆ ದೇವಸ್ಥಾನವೇ ಆಧಾಯದ ಮೂಲ. ಮನೆಜಾಗ ಹೊರತುಪಡಿಸಿ ಮತ್ತೇನು ಇವರ ಬಳಿಯಿಲ್ಲ. ಪರ್ಯಾಯ ವ್ಯವಸ್ಥೆ ಮಾಡದೆ ಇವರನ್ನು ಒಕ್ಕಲೆಬ್ಬಸಿದರೆ ಬೀದಿಗೆ ಬೀಳೋದು ನಿಶ್ಚಿತ.

ರಾಷ್ಟ್ರೀಯ ಸ್ಮಾರಕ
ಹೊಯ್ಸಳರ ಕಾಲದಲ್ಲಿ ಬೇಲೂರು, ಹಳೆಬೀಡು ಮಾದರಿಯಲ್ಲೇ ನಿರ್ಮಾಣಗೊಂಡಿರುವ ಬೆಳವಾಡಿ ಶ್ರೀ ವೀರನ್ನಾರಾಯಣ ದೇವಸ್ಥಾನ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಕೇಂದ್ರ ಪುರಾತತ್ವ ಇಲಾಖೆ ರಾಷ್ಮ್ರೀಯ ಸ್ಮಾರಕವಾಗಿ ಘೋಷಿಸಿದೆ.
ಪ್ರಸಕ್ತ ದೇವಸ್ಥಾನದ ದೇಖಾರೇಖೆ ಮುಜರಾಯಿ ಇಲಾಖೆಯಿಂದ ನಡೆಯುತ್ತಿದೆ.ಆದರೆ ದೇವಸ್ಥಾನ ಅಭಿವೃದ್ಧಿಪಡಿಸಬೇಕಿರುವ ಕಾರಣಕ್ಕೆ ಈ ವ್ಯಾಪ್ತಿಯ 100 ಮೀಟರ್ ಪ್ರದೇಶದಲ್ಲಿರುವ ಮನೆಗಳನ್ನು ತೆರವುಗೊಳಿಸಬೇಕೆಂಬ ಫರ್ಮಾನು ವರ್ಷಗಳಿಂದಲೇ ಹೊರಬಿದ್ದಿದೆ. ಇದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದಿದ್ದ ಸ್ಥಳೀಯರು ಇಲಾಖೆಯಿಂದ ಜಾಗ ತೆರವಿಗೆ ಒತ್ತಡ ಹೆಚ್ಚುತ್ತಿರುವುದರಿಂದ ಭಯಭೀತರಾಗಿದ್ದಾರೆ. ಪುರಾತತ್ವ ಇಲಾಖೆ ಪರಿಹಾರ ಅಥವಾ ಪುನವರ್ಸತಿ ಮಾತನ್ನಾಡದೆ ಏಕಾಏಕಿ ಹುಟ್ಟಿಬೆಳೆದ ಜಾಗ ತೆರವು ಮಾಡಿ ಎನ್ನುತ್ತಿರುವುದು ಯಾವ ನ್ಯಾಯ ಎನ್ನುವುದು ಸಂತ್ರಸ್ಥರ ಅಳಲು

ಸತ್ಯನಾರಾಯಣ್, ಶಿವಪ್ರಸಾದ್ ಭಟ್ಟ ಏನೆನ್ನುತ್ತಾರೆ ?


ನೂರಾರು ವರ್ಷಗಳ ಇತಿಹಾಸದ ಶ್ರೀವೀರನ್ನಾರಾಯಣ ದೇವಸ್ಥಾನ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಬೇಕಾದ ವೇಳೆ ಭವಿಷ್ಯದಲ್ಲಿ ತಲೆದೋರಬಹುದಾದ ಸಮಸ್ಯೆಗಳ ಬಗ್ಗೆ ಯಾವ ಇಲಾಖೆಯೂ ಎಚ್ಚರಿಸಿರಲಿಲ್ಲ. ಹಾಗೆಂದು ಮಾತ್ರಕ್ಕೆ ಸರಕಾರದ ಮಹತ್ವಾಕಾಂಕ್ಷೆಯ ದೇವಸ್ಥಾನ ಅಭಿವೃದ್ಧಿ ಯೋಜನೆಗೆ ನಮ್ಮ ವಿರೋಧವಿಲ್ಲ .
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಜಾಗ ಖಾಲಿ ಮಾಡಿ ಎಂದು ಅಮಾನವೀಯವಾಗಿ ಎಚ್ಚರಿಸುತ್ತಿರುವುದು ಸಂತ್ರಸ್ಥರಲ್ಲಿ ಅತಂತ್ರತೆ ಭಯ ಮೂಡಿಸಿದೆ. ಪುನರ್ವಸತಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆ ಎಂಬುದು ಸತ್ಯನಾರಾಯಣ ಮತ್ತು ಶಿವಪ್ರಸಾದ್ ಭಟ್ ಎಬ್ಬರ ಅಬಿಪ್ರಾಯವಾಗದೆ ಪರಿಸರದಲ್ಲಿ ವಾಸಿಸಿಸುವ ಎಲ್ಲರ ಅಭಿಪ್ರಾಯವೂ ಆಗಿದೆ.

ಸಿ.ಟಿ.ರವಿ ಹೀಗೆನ್ನುತ್ತಾರೆ ?

ಬೆಳವಾಡಿ ಶ್ರೀ ವೀರನ್ನಾರಾಯಣ ದೇವಸ್ಥಾನ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಯಾಗಬೇಕು. ಶ್ರೀ ವೀರನ್ನಾರಾಯಣ ಪ್ರದೇಶವನ್ನು ಹಾಳು ಗೆಡವಿರುವ ಸರಕಾರ ಒಂದು ವೇಳೆ ಸ್ಥಳೀಯರನ್ನು ಪ್ರವಾಸೋದ್ಯಮ ಅಭಿವೃದ್ದಿ ಉದ್ದೇಶದಲ್ಲಿ ತೆರವು ಮಾಡಿದರೂ ಉದ್ದೇಶಿತ ಯೋಜನೆ ಕಾರ್ಯಗತವಾಗಲು ಇನ್ನೆಷ್ಟು ವರ್ಷ ಬೇಕಾಗುತ್ತದೋ ಗೊತ್ತಿಲ್ಲ . ಸರಕಾರದ ಉದ್ದೇಶ ಸ್ವಾಗತಾರ್ಹ. ಪರಿಸರ ಜನರ ಪರ್ಯಾಯ ವ್ಯವಸ್ಥೆ ಬೇಡಿಕೆ ಪೂರೈಸಿ ನಂತರ ತೆರವು ಕಾರ್ಯಕಕ್ಕೆ ಇಲಾಖೆ ಮುಂದಾಗಲಿ ಎಂದು ಸ್ಥಳೀಯ ಶಾಸಕ ಸಿ.ಟಿ. ಹೇಳಿದ್ದಾರೆ. ಏಕ್ದಂ ತೆರವಿಗೆ ಮುಂದಾದರೆ ಹೋರಾಟ ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.
ವರದಿ: ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ

ವೈವಿಧ್ಯ




ಅಡಿಕೆ ತೋಟಕ್ಕೆ ದುತ್ತೆಂದು ಬಂದು ನಿಂತ ಹಳದಿ ಎಲೆ ರೋಗ. ತೆಂಗಿನ ಸಿಂಗಾರಕ್ಕೆ ದಾಳಿಯಿಟ್ಟ ನುಸಿ ಪೀಡೆಯಿಂದ ದಿಕ್ಕೆಟ್ಟು ಕುಳಿತ ರೈತನ ಬುದುಕನ್ನು ಚೆಂಡು ಹೂವು ಚಂದಗಾಣಿಸಿದೆ!ಸಾವಿರಾರು ಕಾಯಿ ಬಿಡುತ್ತಿದ್ದ ತೆಂಗು ನೂರರ ಲೆಕ್ಕಕ್ಕೆ ಇಳಿಯಿತು. ಅಡಿಕೆ ಮರದ ತಲೆಯಲ್ಲಾ ಹಳದಿ ರೋಗಕ್ಕೆ ಹೀಚು ಹೀಚಾಗಿ ಗೊನೆ ಕಾಣೆಯಾಗಿ ರೈತ ಮುಂದಿನ ದಾರಿ ಮಂಕಾಗಿ ಬದುಕಿಗೆ ವಿಧಾಯ ಹೇಳುವ ಹಂತಕ್ಕೆ ಬಂದಿದ್ದ. ಆದರೆ ಚೆಂಡು ಹೂವು ರೈತನ ಕೈಬಿಡಲಿಲ್ಲ. ಕೊನೆ ಪ್ರಯತ್ನ ಎಂಬಂತೆ ಚೆಂಡು ಹೂವು ಬೇಸಾಯ ರೈತನ ಕೈ ಹಿಡಿದಿದೆ.

ಯಾಕಾಗಿ ಚೆಂಡು ಹೂವು ಬೆಳೆ


ಚಿಕ್ಕಮಗಳೂರು ಲಕ್ಯಾ ಹೋಬಳಿ ನಿವಾಸಿ ಮಂಜೇಗೌಡ ಚೆಂಡುಹೂ ಬೇಸಾಯ ಮಾಡಿ ಇದ್ದಿದ್ದರಲ್ಲಿ ನೆಮ್ಮದಿಯ ಬದುಕು ಕಂಡ ರೈತ. ಇವರ ಕುಟುಂಬಕ್ಕೆ ಚೆಂಡು ಹೂವೇ ಆಧಾರ. ಚೆಂಡು ಹೂ ಬೇಸಾಯ ಮಂಜೇಗೌಡರ ಕುಟುಂಬದ ಆರ್ಥಿಕ ಆಧಾರದ ಮೂಲವಾಗಿದೆ. ಚಂಡು ಹೂ ಬೆಳೆಯುವ ಮನಸ್ಸು ಮಾಡದಿದ್ದರೆ ಮಂಜೇ ಗೌಡರ ಕುಟುಂಬ ಎಂದೋ ಅಬ್ಬೆಪಾರಿಯಾಗಿಬಿಡುತ್ತಿತ್ತು. ಬದುಕು ಬೇಡಾ ಎನ್ನುವ ಹಂತಕ್ಕೆ ಬಂದ ಮಂಜೇ ಗೌಡರಿಗೆ ಅಚಾನಕ್ ಸ್ನೇಹಿತರು ನೀಡಿದ ಸಲಹೆ ಒಂದು ಕುಟುಂಬವನನ್ನು ಉಳಿಸಿದೆ. ಇಂದು ಮಂಜೇಗೌಡ ಇದ್ದಿದ್ರಲ್ಲೇ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಪುಲ್ ಟೈಂ ಚೆಂಡು ಹೂ ಕೃಷಿಯಲ್ಲಿ ಮಂಜೇ ಗೌಡ ಕುಟುಂಬ ಬ್ಯುಸಿ!

ಮಂಜೇಗೌಡಿರಿಗೆ ಸುಮಾರು ಎರಡು ಎಕ್ರೆ ಭೂಮಿಯಿದೆ. ಅದರಲ್ಲಿ ತೆಂಗು ಮತ್ತು ಅಡಿಕೆ ಕೃಷಿ ಮಾಡಿದ್ದರೆ. ನುಸಿ ಮತ್ತು ಹಳದಿ ಎಲೆ ರೋಗದ ದಾಳಿಗೆ ಮುಂಚೆ ಮಂಜೇಗೌಡರ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಅಷ್ಟರಲ್ಲಿ ತೋಟಕ್ಕೆ ಬೇಕಾದ ನೀರಾವರಿ ವ್ಯವಸ್ಥೆ ಕೂಡಾ ಮಾಡಿಕೊಂಡಿದ್ದರು. ಕೃಷಿ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಾಲ, ಸೂಲಾ ಕೂಡಾ ಇತ್ತು.ಇನ್ನೇನು ಕೃಷಿ ಕೈಹತ್ತಬೇಕು ಅನ್ನೋವಷ್ಟರಲ್ಲಿ ರೋಗ ಬಾಧೆ ಕಾಣಿಸಿಕೊಂಡಿದೆ. ತೆಂಗಿನ ಮರದಲ್ಲಿ ಬಿಟ್ಟ ಸಿಂಗಾರ ನುಸಿ ರೋಗಕ್ಕೆ ಧೂಳೀಪಡವಾಗಿದೆ. ಅಡಿಕೆ ಕೂಡಾ ಹಳದಿ ಎಲೆ ರೋಗಕ್ಕೆ ಕೈಕೊಟ್ಟಿದೆ. ಇದರಿಂದ ಮಂಜೇಗೌಡರು ಪಾತಾಳಕ್ಕಿಳಿದು ಹೋಗಿದ್ದರು. ಮಾಡಿದ ಸಾಲದ ಜೊತೆಗೆ ಸಂಸಾರ ನಿವರ್ಹಣೆಯ ಖರ್ಚು, ವೆಚ್ಚ ನಿಭಾಯಿಸುದೆಂತೂ ಎಂಬ ಚಿಂತಗೆ ಸಿಕ್ಕಿದ್ದರು. ಒಂದೆಡೆ ಸಾಲ ತೀರಿಸುವ ಒತ್ತಡ, ಮತ್ತೊಂದೆಡೆ ಸಂಸಾರ ತಾಪಾತ್ರಯದಿಂದ ಇವರು ಸುಸ್ತೆದ್ದು ಹೋಗುದ್ದರು. ಇನ್ನು ಬದುಕು ಕಷ್ಟ ಎಂಬ ತೀರ್ಮಾನಕ್ಕೆ ಬಂದಿದ್ದರು.

ನೆರವಿಗೆ ಬಂತು

ಮಂಜೇಗೌಡರು ಚಂಡು ಹೂ ಕೃಷಿಯನ್ನು ಕನಸಲ್ಲೂ ಎಣಿಸಿರಲಿಲ್ಲ. ಅಚಾನಕ್ಕಾಗಿ ಹತೈಷಿಗಳು ಚೆಂಡು ಹೂ ಬೆಳೆಯುವಂತೆ ಸಲಹೆ ಮಾಡಿದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಮಂಜೇಗೌಡರು ಯಾಕೆ ಒಂದು ಕೈನೋಡಬಾರದು ಎಂಬ ಹಿನ್ನೆಲೆಯಲ್ಲಿ ಚಂಡು ಹೂ ಕೃಷಿಗೆ ಮುಂದಾದರು. ಪ್ರಸಕ್ತ ಮಂಜೇಗೌಡರ ತೋಟದಲ್ಲಿ ಚೆಂಡು ಹೂ ನಳನಳಿಸುತ್ತಿದೆ. ಅಡಿಕೆ ಮತ್ತು ತೆಂಗಿನ ಮರಗಳ ನಡುವೆ ಚೆಂಡು ಹೂವಿನ ಗಿಡವೂ ಸೇರಿಕೊಂಡಿವೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆಯಲಾಗುತ್ತಿದೆ.ಚೆಂಡು ಹೂ ಬೆಳೆಗೆ ರೈತ ಮಂಜೇಗೌಡ ವಿಶೇಷ ತಯಾರಿ ನಡೆಸಿಲ್ಲ. ತೆಂಗು ಅಡಿಕೆ ಮರಗಳ ನಡುವೆ ಏರಿ ತೆಗೆದು ಚೆಂಡು ಹೂ ಗಿಡ ನೆಡಲಾಗಿದೆ. ಗಿಡದ ಆರೈಕೆಗಾಗಿ ಹೆಚ್ಚಿನ ವ್ಯವಸ್ಥೆ ಏನೂ ಇಲ್ಲ. ತೆಂಗು, ಅಡಿಕೆ ಮರಕ್ಕೆ ಬಿಡುವ ನೀರೇ ಚೆಂಡು ಹೂ ಗಿಡಕ್ಕೆ ಸಾಕಾಗುತ್ತದೆ. ಅಡಕೆ, ತೆಂಗಿಗೆ ಹಾಕಿದ ಗೊಬ್ಬರವೇ ಚಂಡು ಹೂ ಗಿಡಕ್ಕೆ ಸಂದಾಯವಾಗುತ್ತಿದೆ. ಒಟ್ಟಾರೆ ಮಂಜೇಗೌಡರದ್ದು ಶೂನ್ಯ ಬಂಡವಳ. ಫಸಲು ಮಾತ್ರ ಬರೋಬ್ಬರಿ ಎಂಬ ಹಾಗಾಗಿದೆ.

ಚೆಂಡು ಹೂ ಬಗ್ಗೆ ಅಕ್ಕರೆ
ಬದುಕನ್ನು ಉಳಿಸಿದ ಚೆಂಡು ಹೂ ಬಗ್ಗೆ ಮಂಜೇಗೌಡರ ಕುಟುಂಬಕ್ಕೆ ವಿಶೇಷ ವ್ಯಾಮೋಹವಿದೆ. ಇವರ ಸಹೋದರ ಸಿದ್ದಪ್ಪ ಗೌಡ ಪುಲ್ ಟೈಂ ಚಂಡು ಹೂ ಕೃಷಿಕರಾಗಿದ್ದಾರೆ. ಮಂಜೇಗೌಡರ ಇಬ್ಬರು ಮಕ್ಕಳು ಮತ್ತು ಪತ್ನಿ ಚಂಡು ಹೂ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಂಜೇಗೌಡರು ಹೈಬ್ರೀಡ್ ಚೆಂಡು ಹೂ ಕೃಷಿ ಮಾಡುತ್ತಾರೆ. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಚಂಡೆ ಹೂ ಕೃಷಿ ವ್ಯಾಪಿಸಿಕೊಂಡಿದೆ.

ಮಂಜೇ ಗೌಡರು ಹೇಳುವ ಪ್ರಕಾರ ಒಂದು ಗಿಡಿದಿಂದ ಪ್ರತಿದಿನ 10 ರಿಂದ 15 ಹೂ ಕೀಳಬಹುದು. ಫಸಲು ಬರಲು ಆರಂಭಿಸಿದ ನಂತರ ಒಂದು ಗಿಡ 15 ರಿಂದ 20 ಕೇಜಿ ಹೂ ಕೊಡುತ್ತದೆ. ಎಕರೆಗೆ 25 ರಿಂದ 30 ಕ್ವಿಂಟಾಲ ಇಳುವರಿಸಿಗುತ್ತದೆ ಎಂದು ಅವರು ಹೇಳುತ್ತಾರೆ. ಚೆಂಡು ಹೂ ನಾಲ್ಕು ತಿಂಗಳು ಬೆಳೆಯಾಗಿದ್ದು, ನಂತರ ಗಿಡ ಸಾಯುತ್ತದೆ. ಸತ್ತ ಗಿಡವನ್ನು ಕಿತ್ತು ತೆಂಗು ಮತ್ತು ಅಡಿಕೆ ಮರಕ್ಕೆ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ಚೆಂಡು ಹೂ ಧಾರಣೆ ಸ್ಥಿರತೆಯಿಲ್ಲದ ಕಾರಣ ಸೀಜನ್ನಲ್ಲಿ ಕೆ.ಜಿ. ಒಂದಕ್ಕೆ 20ರೂ. ಸಿಗುತ್ತದೆ. ಉಳಿದ ದಿನದಲ್ಲಿ ಕೆ.ಜಿ.ಗೆ 15 ರೂ.ಗಿಂತ ಕಡಿಮೆಯಿಲ್ಲದೆ ಬಿಕರಿಯಾಗುತ್ತದೆ. ಸಾಲಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಮಂಜೇಗೌಡ ಮಾದರಿಯಾಗುತ್ತಾರೆ. ಒಂದೇ ಬೆಳೆಯನ್ನು ನಂಬಿ ಕೂರದೆ ಉಪಬೆಳೆಯನ್ನಾಗಿ ಬೇರೆ ಬೇರೆ ಬೆಳೆ ಬೆಳೆಯುವುದರಿಂದ ರೈತ ಆರ್ಥಿಕ ಸ್ವಾವಲಂಭಿಯಾಗಬಹುದು. ಈ ನಿಟ್ಟಿನಲ್ಲಿ ರೈತರು ಚಿಂತಿಸಬೇಕಾಗಿದೆ. ಯಾವುದಕ್ಕೂ ಸಾವೇ ಪರಿಹಾರವಲ್ಲ.

ನುಡಿಚಿತ್ರ: ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ

ವಿಶೇಷ ವರದಿ : ಶ್ರೀಪತಿ ಹೆಗಡೆ ಹಕ್ಲಾಡಿ





ಚಿಕ್ಕಮಗಳೂರು : ಆರ್ಥಿಕ ಮತ್ತು ಸಾಮಾಜಿಕವಾಗಿ ಚಿಕ್ಕಮಗಳೂರು ಏಕೆ ಹಿಂದುಳಿದಿದೆ ಗೊತ್ತಾ? ಅದಕ್ಕೆ ಕಾರಣ.. ಅಷ್ಟ ಲಕ್ಷ್ಮಿಯರ ಶಾಪ!
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಸಚಿವ ಪದವಿ ಸಿಕ್ಕಿಲ್ಲ.ಚಿಕ್ಕಮಗಳೂರು ರಾಜಕೀಯವಾಗಿ ಉತ್ತಂಗಕ್ಕೆ ಏರಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಜನ ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವರಾಗಿಲಲ್ಲ ಕೊನೆಗೆ ನಿಗಮ ಮಂಡಳಿ ಅಧ್ಯಕ್ಷರೂ ಆಗಿಲ್ಲ. ಇದೆಲ್ಲಾ ಏಕೆ ಎನ್ನುವುದಕ್ಕೆ ಉತ್ತರ ಅಷ್ಟಲಕ್ಷ್ಮಿಯರ ಶಾಪ!

ಅಷ್ಟ ಲಕ್ಷ್ಮೀ ದೇವಸ್ಥಾನ ಅಭಿವೃದ್ಧಿಯಾಗದೆ ಚಿಕ್ಕಮಗಳೂರು ಅಭಿವೃದ್ದಿ ಆಗೋದಿಲ್ಲ ಎಂಬ ತೀರ್ಮಾನಕ್ಕೆ ಇಲ್ಲಿನ ನಾಗರಿಕರು ಬಂದಿದ್ದಾರೆ.
ಅಷ್ಟಲಕ್ಷ್ಮೀ ದೇವಸ್ಥಾನ ಹಾಳು ಸುರಿಯುವಂತೆ ಚಿಕ್ಕಮಗಳೂರು ಕೂಡಾ ಹಾಳು ಸುರಿಯುತ್ತಿರುವದು ಸುಳ್ಳಲ್ಲ. ಕಾಕತಾಳಿಯವೋ ಏನೋ ಗೊತ್ತಿಲ್ಲ. ನಾಗರಿಕರ ಹೇಳಿಕೆಗೂ ಅಷ್ಟಲಕ್ಷ್ಮೀ ದೇವಸ್ಥಾನಕ್ಕೂ ಒಂದಕ್ಕೊಂದು ಟೆಚ್ ಇದೆ. ಹೋಲಿಕೆ ವಾಸ್ತವವಾ ಅಥವಾ ಕಾಕತಾಳಿಯವಾ ಎಂಬುದನ್ನು ಅಷ್ಟ ಲಕ್ಷ್ಮೀಯರೇ ಉತ್ತರಿಸಿಬೇಕು.



ಕಥೆ ಆರಂಭವಾಯ್ತು ಕೇಳಿ



ಈ ಕಥೆ ಹುಟ್ಟಿಕೊಂಡು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿದೆ. ಯಾವತ್ತು ಅಷ್ಟ ಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಆಯಿತೋ ಅಂದಿನಿಂದಲೂ ಚಿಕ್ಕಮಗಳೂರು ಒಂದೆಲ್ಲಾ ಒಂದು ತೊಂದರೆ ತಾಪತ್ರೆಯಗಳಿಗೆ ಸಿಕ್ಕಿಕೊಳ್ಳುತ್ತಲೇ ಇದೆ. ದೇವಸ್ಥಾನ ಕಾಮಗಾರಿ ಕುಂಠಿತವಾದಂತೆಲ್ಲಾ ಚಿಕ್ಕಮಗಳೂರು ಅಭಿವೃದ್ದಿಯೂ ಕುಠಿಂತ ಗೊಳ್ಳುತ್ತಿದೆ. ದತ್ತಪೀಠ ವಿವಾದದಿಂದ ಹಿಡಿದು ನಿನ್ನೆ ಮೊನ್ನೆ ನಡೆದ ಗ್ರಾಮ ಪಂಚಾಯ್ತಿ ಸದಸ್ಯೆ ಅಪಹರಣದ ವರೆಗಿನ ಸಂಗತಿವರೆಗೂ ಅಷ್ಟ ಲಕ್ಷ್ಮಿಯರು ಲಿಂಕ್ ಆಗುತ್ತಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಬಸವನಹಳ್ಳಿಯಲ್ಲಿ ಕಳೆದ ಹದಿನೈದು ವರ್ಷದಿಂದ ಏಳುತ್ತಾ ಬೀಳುತ್ತಾ ಸಾಗುತ್ತಿರುವ ಅಷ್ಟಲಕ್ಷ್ಮೀ ದೇವಸ್ಥಾನ ವಿವಾದದ ಕೇಂದ್ರ ಬಿಂದು.ಬಸವನಹಳ್ಳಿ ಖುಲ್ಲಾ ಜಾಗದಲ್ಲಿ ಯಾರು ನೆಟ್ಟು ಬೆಳೆಸಿದ್ದೋ ಗೊತ್ತಿಲ್ಲ ಒಂದು ಬಿಲ್ವಪತ್ರೆ ಮರವಿತ್ತು. ಬಿಲ್ವಪತ್ರೆ ಮರವಿದ್ದಲ್ಲ ಲಕ್ಷ್ಮೀ ಇರುತ್ತಾಳೆ ಎಂಬ ನಂಬಿಕೆಯಿದೆ. ಈ ನಂಬಿಕೆಯೇ ಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ ಮಹೂರ್ತ ಇಡುವಂತೆ ಮಾಡಿದೆ.

ಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ 1996ರಲ್ಲಿ ಚಂಡಿಕಾ ಯಾಗದ ಮೂಲಕ ಮಹೂರ್ತ ಇಡಲಾಯಿತು. ಮೈಸೂರು ಪಾಫಿ ಕ್ಯೂರಿಂಗ್ ಸಂಸ್ಥೆ ಅಷ್ಟಲಕ್ಷ್ಮೀ ದೇವಸ್ಥಾನದ ನಿರ್ಮಾಣಕ್ಕೆ ಮುಂದಾದವರು. ಮೈಸೂರು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಕಾಮಗಾರಿ ನಿರ್ಮಾಣವಾಗುತ್ತಿದೆ. ಸುಮಾರು ಒಂದು ಕೋಟಿ ರೂ. ಸಾರ್ವಜನಿಕ ವಂತಿಗೆ ಸಂಗ್ರಹವಾಗಿದೆ. ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಇದೂವರೆಗೆ 1.20 ಕೋಟಿ ರೂ. ಖರ್ಚಾಗಿದೆ. ಹಣವಿಲ್ಲ ಹಾಗಾಗಿ ಸದ್ಯಕ್ಕೆ ದೇವಸ್ಥಾನ ಕಾಮಗಾರಿಗೆ ಏಳಿಗೆಯಿಲ್ಲ.

ದೇವಸ್ಥಾನದ ಸಂಕಲ್ಪ ಮಾಡಿದವರೂ ಸೋತರು


ಅಷ್ಟಲಕ್ಷ್ಮೀ ದೇವಸ್ಥಾನವನ್ನು ಪ್ರಪಂಚದಲ್ಲೇ ಎಲ್ಲೂ ಕಾಣದ ರೀತಿಯಲ್ಲಿ ನಿರ್ಮಿಸ ಸಂಕಲ್ಪದೊಂದಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿದೇಶ ಮತ್ತು ಸ್ವದೇಶದ ತಂತ್ರಜ್ಞಾನ ಮೇಳೈಕೆಯಲ್ಲಿ ದೇವಸ್ಥಾನ ನಿರ್ಮಿಸುವ ಇರಾದೆ ಟ್ರಸ್ಟಿಗೆ ಇತ್ತು. ಹಾಗಾಗಿ ಟ್ರಸ್ಟ್ ಮುಖ್ಯಸ್ಥರು ವಿದೇಶ ಪ್ರವಾಸ ಕೂಡಾ ಮಾಡಿ ಬಂದಿದ್ದರು. ಪಕ್ಕಾ ವಾಸ್ತಶಿಲ್ಪದ ಆಧಾರದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಆರಂಭದಲ್ಲಿ ವೇಗ ಕಂಡ ಕಾಮಗಾರಿ ಬರುಬರುತ್ತಾ ಆಮೆ ವೇಗಕ್ಕೆ ಬಂದು ನಿಂತಿದೆ. ಈಗ ಕಾಮಗಾರಿ ಸ್ಟಾಪ್.

ದೇವಸ್ಥಾಕ್ಕೆ ಮುಹೂರ್ತವಿಟ್ಟ ನಂತರ ಮೈಸೂರು ಕಾಫಿ ಕ್ಯೂರಿಂಗ್ ಕಂಪನಿ ಕೂಡಾ ನಷ್ಟದ ಹಾದಿ ಹಿಡಿದಿದೆ. ದೇವಸ್ಥಾನ ನಿರ್ಮಾಣದ ಸ್ಥಳ ಸಾಲಕೊಟ್ಟ ಕೆನರಾ ಬ್ಯಾಂಕ್ ತೆಕ್ಕಗೆ ಬಂದಿದೆ. ಇದೂ ಸಹ ದೇವಸ್ಥಾನ ಕಟ್ಟಡ ಕಾಮಗಾರಿಗೆ ಅಡ್ಡಗಾಲು ಎನ್ನಲಾಗುತ್ತದೆ. ಬ್ಯಾಂಕಿನವರು ಹಣಕೊಟ್ಟರೆ ಜಾಗಬಿಟ್ಟು ಕೊಡುತ್ತೇವೆ ಎನ್ನುತ್ತಾರೆ. ಒಟ್ಟಾರೆ ಒಂದೆಲ್ಲಾ ಒಂದು ತೊಂದರೆಯಿಂದ ದೇವಸ್ಥಾನ ಕಾಮಗಾರಿ ಮೇಲೆ ಬಿದ್ದಿದೆ.

ಈಗಾಗಲೇ 1.20 ಕೋಟಿ ರೂ. ನುಂಗಿದ ದೇವಸ್ಥಾನ ಸಂಪೂರ್ಣವಾಗಲು ಇನ್ನೂ 3.50 ಕೋಟಿ ರೂ. ಬೇಕು. ಸದ್ಯಕ್ಕಂತೂ ಕಟ್ಟಡ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅಂತೆ,ಕಂತೆ ಮಾತಿಗೂ ವಿರಾಮ ಬೀಳುತ್ತಿಲ್ಲ.

ಚಿಕ್ಕಮಗಳೂರು ಅತೀ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿದ ಪ್ರದೇಶ. ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗುತ್ತಿರುವ ಲಕ್ಷ್ಮೀ ದೇವಸ್ಥಾನ ಚಿಕ್ಕಮಗಳೂರಿನ ಆಕರ್ಷಣೀಯ ಕೆಂದ್ರವಾಗಲಿದೆ ಎನ್ನವುದರಲ್ಲಿ ಎರಡು ಮಾತಿಲ್ಲ. ಅಂಧ ಶ್ರದ್ದೆ ನಿವಾರಣೆಗಾದರೂ ಲಕ್ಷ್ಮಿ ದೇವಸ್ಥಾನ ಎದ್ದು ನಿಲ್ಲಬೇಕು. ಇಲ್ಲಾ ಅಂತಾದರೆ ಮತ್ತೊಂದು ಕತೆ ಹುಟ್ಟಿಕೊಳ್ಳುತ್ತದೆ. ಕತೆಕಟ್ಟೋರಿಗೇನು ನಮ್ಮಲ್ಲಿ ಬರವಿಲ್ಲ.

ಮುಂದೆ ಓದಿ

ಆತ್ಮಶುದ್ಧಿಗಾಗಿ ಅಲ್ಲ, ಪ್ರಜೆಗಳ ಹಿತಕ್ಕಾಗಿ!

ವಿಶೇಷ ವರದಿ ಕಿರಣ್ ಮಂಜನಬೈಲು





ಸಖಿಯರಿಂದ `ನಿತ್ಯಾನಂದ ಸುಖ' ಅನುಭವಿಸಿದ ಕಾರಣ ಕಂಬಿ ಎಣಿಸಿ, ಬಳಿಕ ಬಿಡುಗಡೆಗೊಂಡ ಸ್ವಾಮಿ ನಿತ್ಯಾನಂದ ಎಂಬ ಕಾಮಿಸ್ವಾಮಿ ಮಾಗಡಿಯಲ್ಲಿ ಆತ್ಮಶುದ್ಧಿಗಾಗಿ ಪಂಚಾಗ್ನಿ ತಪಸ್ಯ ನಡೆಸಿ ಸುದ್ದಿಯಾದರೆ, ಉಡುಪಿಯಲ್ಲೂ ನಿತ್ಯಾನಂದ ಒಳಕಾಡು ಎಂಬ ಸಮಾಜಸೇವಕ ಸೋಮವಾರ ಇಲ್ಲಿನ ಸಂಸ್ಕೃತ ಕಾಲೇಜು ಬಳಿ ಪಂಚಾಗ್ನಿ ತಪಸ್ಯ ನಡೆಸಿ ಸುದ್ದಿ ಮಾಡಿದ್ದಾರೆ. ಆದರೆ, ಅದು ಆತ್ಮಶುದ್ಧಿಗಾಗಿ ಅಲ್ಲ, ಪ್ರಜೆಗಳ ಹಿತಕ್ಕಾಗಿ. !
ಅಡುಗೆ ಅನಿಲ ಸೇರಿದಂತೆ ಇಂಧನ ಮೂಲಗಳ ದರ ಏರಿಸಿದ ಕೇಂದ್ರ ಸರಕಾರದ ಕ್ರಮ ಹಾಗೂ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಪ್ರಕರಣ ಸೇರಿದಂತೆ ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಪಂಚಾಗ್ನಿ ಮಧ್ಯೆ ತಪಸ್ಸಾನಚರಿಸಿದರು.
ಪ್ರಸಕ್ತ ಉಡುಪಿ ನಗರಸಭಾ ಸದಸ್ಯರೂ ಆಗಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ವಿವಿಧ ಕಾರಣಗಳಿಂದ ಸುದ್ದಿಮಾಡುವ, ಸುದ್ದಿಯಲ್ಲಿರುವ ವ್ಯಕ್ತಿ. ಸಕಾಲಕ್ಕೆ ಮಳೆ ಬಾರದಿದ್ದಾಗ ಕಪ್ಪೆ ಮದುವೆ, ಕಪ್ಪೆ ಸೀಮಂತ ನಡೆಸಿ ಸುದ್ದಿ ಮಾಡಿದ್ದ ಅವರು, ಇದೀಗ ಕೇಂದ್ರ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ, ಸರಕಾರದ ಗಮನ ಸೆಳೆಯಲು ಪಂಚಾಗ್ನಿ ತಪಸ್ಯ ಎಂಬ ವಿನೂತನ ಪ್ರಯೋಗ ನಡೆಸಿದರು. ಅವರ ಈ ಕ್ರಮಕ್ಕೆ ಮಹಿಳಾ ಸಂಘಟನೆಯವರು ಸಹಕಾರ ನೀಡಿದ್ದರು!
ಸಾಯಿಬಾಬಾ ತರಹ ತಲೆಗೂದಲು ಹೊಂದಿರುವ ಒಳಕಾಡು, ಖಾವಿ ಧರಿಸಿ ಸುತ್ತಲೂ ಬೆಂಕಿ ಹಾಕಿ ನಡುವೆ ಧ್ಯಾನಾಸಕ್ತ ಭಂಗಿಯಲ್ಲಿ ಪದ್ಮಾಸನ ಹಾಕಿ ಕುಳಿತರು. ಅಡುಗೆ ಅನಿಲ ಖಾಲಿ ಸಿಲಿಂಡರ್ ಸನಿಹದಲ್ಲಿಡಲಾಗಿತ್ತು. ಸುಮಾರು 10 ನಿಮಿಷ ಕಾಲ ಉರಿಯುವ ಬೆಂಕಿ ಮಧ್ಯೆ ಮಂಡಿಸಿದ್ದ ನಿತ್ಯಾನಂದ ಒಳಕಾಡು ಭಂಗಿಯನ್ನು ಕಾಣಲು ಅನೇಕ ಮಂದಿ ನೆರೆದಿದ್ದರು. ಅವರ ಪ್ರತಿಭಟನೆಗೆ ಪೂರಕವಾಗಿ ಮಳೆರಾಯನೂ ಸಹಕರಿಸಿದ್ದ. ಬೆಂಕಿ ಹೊತ್ತಿಸಲು ಸೀಮೆಎಣ್ಣೆ ಬಳಸಿಲ್ಲ ಎನ್ನುವುದೂ ಇಲ್ಲಿ ಉಲ್ಲೇಖನೀಯ.ಆದರೆ, ನಿತ್ಯಾನಂದ ಒಳಕಾಡು ಕಳಕಳಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಲುಪುತ್ತದೆಯೋ ಎಂದು ಕಾದುನೋಡಬೇಕಷ್ಟೇ!

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಉಡುಪಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಜು. 1ರ ಬೆಳಿಗ್ಗೆ 10ಕ್ಕೆ ಇಲ್ಲಿನ ಹೋಟೆಲ್ ಕಿದಿಯೂರ್ ರೂಫ್ಟಾಪಿನಲ್ಲಿ ಪತ್ರಿಕಾ ದಿನಾಚರಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಗೋಕುಲದಾಸ ಪೈ ಸುದ್ದಿಗಾರರಿಗೆ ತಿಳಿಸಿದರು. ಮೈಸೂರು `ಆಂದೋಲನ' ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಕಾರ್ಯಕ್ರಮ ಉದ್ಘಾಟಿಸುವರು. ಪ್ರಸಿದ್ಧ ಮನೋವೈದ್ಯ ಡಾ. ಪಿ. ವಿ. ಭಂಡಾರಿ `ಒತ್ತಡ ನಿರ್ವಹಣೆ' ಕುರಿತು ಮಾತನಾಡುವರು. ಅರಣ್ಯ ಸಂಬಂಧಿ ವರದಿಗಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ, ಕುಂದಾಪುರ `ಜನಪ್ರತಿನಿಧಿ' ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಅವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಪತ್ರಕರ್ತರು ಸೆರೆಹಿಡಿದ ಛಾಯಾಚಿತ್ರ, ವ್ಯಂಗ್ಯಚಿತ್ರ ಹಾಗೂ ಕಲಾಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.ಸಂಘದ ಕಾರ್ಯದರ್ಶಿ ಕಿರಣ್ ಮಂಜನಬೈಲು ಹಾಗೂ ಕೋಶಾಧಿಕಾರಿ ರಾಜೇಶ ಶೆಟ್ಟಿ ಇದ್ದರು.

ಮುಂದೆ ಓದಿ

ವಿಶೇಷ ವರದಿ
ಮಲ್ಲೇಶ್ವರ ಜನರ ಬದುಕು ನರಕಮಾಡಿದ ಫ್ಲೋರೈಡ್ ನೀರು
ವಿಶೇಷ ವರದಿ: ಶ್ರೀಪತಿ ಹೆಗಡೆ ಹಕ್ಲಾಡಿ




ಚಿಕ್ಕಮಗಳೂರು : ಮಲ್ಲೇಶ್ವರ ಎಂಬ ಪುಟ್ಟ ಊರಲ್ಲಿ ಹೆಚ್ಚಿನವರು ಅನಾರೋಗ್ಯ ಪೀಡಿತರು! ಜೀವಜಲ ವಿಷವಾಗಿ ಪರಿಣಮಿಸಿದರೆ ಬದುಕು ಹಳ್ಳಹತ್ತುತ್ತದೆ ಎಂಬುದಕ್ಕೆ ಚಿಕ್ಕ ಹಳ್ಳಿ ಜ್ವಲಂತ ಸಾಕ್ಷಿ.ಹಾಲುಗಲ್ಲದ ಹಸುಳೆ ಮೈಯಲ್ಲಿ ರಕ್ತದ ಛಾಯೆಯಿಲ್ಲ. ವಯೋವೃದ್ಧರು ಎದ್ದು ನಿಲ್ಲುವ ತಾಕತ್ತು ಕಳೆದುಕೊಂಡಿದ್ದಾರೆ. ಪುರಷರು ಪರುಷತ್ವ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರ ಸಂತಾನ ಶಕ್ತಿ ಕ್ಷೀಣಿಸುತ್ತಿದೆ. ಅಬಾಲವೃದ್ಧರಾದಿಯಾಗಿ ಒಂದೆಲ್ಲಾ ಒಂದು ಸೀಕಿನಿಂದ ನರಳುತ್ತಿದ್ದಾರೆ. ಅಂಗವಿಕಲತೆ, ರಕ್ತಹೀನತೆ,ಜಲಂಧರ ಹಾಗೂ ಮೈಬೀಗುವಿಕೆ ಮತ್ತು ಗಳಗಂಡದಂತಹ ಮಾರಕ ರೋಗದಿಂದ ಮಲ್ಲೇಶ್ವರ ನಿವಾಸಿಗಳು ಬದುಕು ನರಕ. ರೋಗಬಾಧೆಯಿಂದ ಇಪ್ಪತ್ತಕ್ಕೂ ಮಿಕ್ಕ ಜನರು ಇಹಲೋಕ ತ್ಯಜಿಸಿದ್ದಾರೆ. ಮತ್ತೆ ಕೆಲವರು ದಿನ ಎಣಿಸುತ್ತಿದ್ದಾರೆ. ಜೀವಜಲ ವಿಷವಾದರೆ ಏನಾಗುತ್ತದೆ ಎಂಬದಕ್ಕೆ ಮಲ್ಲೇಶ್ವರ ಚಿಕ್ಕ ಸ್ಯಾಂಪಲ್.



ಮಲ್ಲೇಶ್ವರಕ್ಕೆ ಅಂಟಿದ ಶಾಪ

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನಲ್ಲಿರುವ ಮಲ್ಲೇಶ್ವರ ಎಂಬ ಪುಟ್ಟ ಊರಿಗೆ ಗಣಿಗಾರಿಕೆಯೇ ಮೃತ್ಯು ಕೂಪವಾಗಿದೆ. ಸುಮಾರು ಇನ್ನೂರು ಮನೆಗಳ ಸಂಚಯ ಮಲ್ಲೇಶ್ವರ. ಮಕ್ಕಳು, ಮರಿಗಳು ಸೇರಿ ಒಂದೂ ಸಾವಿರಕ್ಕೂ ಮಿಕ್ಕ ಕ್ರೌಡ್ ಇದೆ. ದೇವರು, ದಿಂಡಿರು, ಜಾತ್ರೆ ಮುಂತಾದ ನಂಬಿಕೆ ಆಚರಣೆಯಲ್ಲಿದೆ. ಮಲ್ಲೇಶ್ವರ ಜಾತ್ರೆ ಕಡೂರು ತಾಲೂಕಿಗೆ ಫೇಮಸ್.

ಇಲ್ಲಿನ ನಿವಾಸಿಗಳಲ್ಲಿ ಕೃಷಿಕರಿದ್ದಾರೆ. ಕೃಷಿ ಕಾರ್ಮಿಕರಾಗಿ ದುಡಿಯುವವರೂ ಇದ್ದಾರೆ. ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲುಕೊಟ್ಟವರಿ ಗೇನು ಕಡಿಮೆಯಿಲ್ಲ. ತರಕಾರಿ ಮಾರಿ ಜೀವಿಸುವ ಕಷ್ಟ ಜೀವಿಗಳೂ ಇದ್ದಾರೆ. ಕಷ್ಟದಲ್ಲೇ ನೆಮ್ಮದಿ ಕಾಣುತ್ತಿದ್ದ ಮಲ್ಲೇಶ್ವರ ನಿವಾಸಿಗಳ ಬದುಕಿಗೆ ಕೊಳ್ಳಿಯಿಟ್ಟಿದ್ದು ಗಣಿಗಾರಿಕೆ ಎಂಬ ರಕ್ಕಸ!

ಗಣಿಗಾರಿಕೆ ಆರಂಭವಾಗುವುದಕ್ಕೂ ಹಿಂದೆ ಇಲ್ಲಿಯ ನಿವಾಸಿಗಳು ಮಾಮೂಲಾಗಿದ್ದರು. ಗಣಿಗಾರಿಕೆ ಆರಂಭವಾದ ನಂತರದ ದಿನಗಳಲ್ಲಿ ಇಲ್ಲಿನ ನಿವಾಸಿಗಳಲ್ಲಿ ಹಂತಹಂತವಾಗಿ ಅನಾರೋಗ್ಯ ಬಾಧೆ ಕಾಣಿಸಿಕೊಳ್ಳ ತೊಡಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಮಲ್ಲೇಶ್ವರ ನಿವಾಸಿಗಳಲ್ಲಿ ಶೇ.80 ರಷ್ಟು ಅನಾರೋಗ್ಯದಿಂದ ನರಳುತ್ತಿದ್ದಾರೆ. ಕಲ್ಲು ಕೋರೆಯಲ್ಲಿ ನಡೆಸುವ ಸ್ಪೋಟ ಮತ್ತು ಬಳಸುವ ರಾಸಾಯನಿಕ ಪದಾರ್ಥ ಹಾಗೂ ಧೂಳು ಜೀವಜಲವನ್ನು ವಿಷಜಲವಾಗಿ ಪರಿವರ್ತಿಸಿದೆ. ಫ್ಲೋರೈಡ್ ನೀರು ಮಾನವ ಶರೀಕರದ ಮೇಲೆ ಒಂದೆಲ್ಲಾ ಒಂದು ಪರಿಣಾಮ ಉಂಟು ಮಾಡುತ್ತಿದೆ.

ಗಣಿಗಾರಿಕೆ ಶುರು

ಮಲ್ಲೇಶ್ವರದಲ್ಲಿ ಸುಮಾರು ಇಪ್ಪತ್ತು ವರ್ಷದಿಂದ ಕಪ್ಪು ಶಿಲೆಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆರಂಭದಲ್ಲಿ ಇಲ್ಲಿನ ನಿವಾಸಿಗಳು ಗಣಿಗಾರಿಕೆ ವಿರುದ್ಧ ದ್ವನಿ ಎತ್ತಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬದ್ಧತೆ ಕೊರೆತೆಯಿಂದ ಗಣಿಗಾರಿಕೆ ಚಾಲೂ ಆಯಿತು. ಅಂದಿನಿಂದ ಇಂದಿನವರೆಗೆ ಗಣಿಗಾರಿಕೆ ಬೇಡಾ ಅಂತ ಜನರು ಗಂಟಲು ದೊಡ್ಡದು ಮಾಡುತ್ತಾ ಬಂದಿದ್ದಾರೆ. ಪ್ರತಿಫಲ ಮಾತ್ರ ಶೂನ್ಯ. ಜನಪ್ರತಿನಿಧಿಗಳು ಗಣಿಗಾರಿಕೆಯಲ್ಲಿ ರಾಜಕೀಯ ಮಾಡಿದರೇ ಹೊರತು ನಮಗೆ ನ್ಯಾಯ ಒದಗಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

ಮಲ್ಲೇಶ್ವರ ಗಣಿಗಾರಿಕೆಯಿಂದ ಪರಿಸರದ ಮನೆಗಳೂ ಬರ್ಕತ್ತಾಗಿಲ್ಲ. ಗಣಿಗಾರಿಕೆ ಸ್ಪೋಟಕ್ಕೆ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಒಮ್ಮೊ ಮ್ಮೆ ಹೆಂಚುಗಳು ಕಳಚಿಕೊಳ್ಳುವುದುಂಟು ಎಂದು ಇಲ್ಲಿನ ನಿವಾಸಿಗಳು ಅವಲತ್ತು ಕೊಳ್ಳುತ್ತಾರೆ. ಸ್ಪೋಟದ ಶಬ್ಧದಿಂದ ಕೆಲವರ ಕಿವಿ ಕೂಡಾ ಮಂದವಾಗಿದೆ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ. ಬೆನ್ನುಬೆನ್ನಿಗೆ ನಡೆಯುವ ಸ್ಪೋಟದಿಂದ ಜನ, ಜಾನುವಾರು, ಪಶು, ಪಕ್ಷಿಗಳು ಪಥರಗುಟ್ಟಿಹೋಗಿವೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಯಾರು ನಮ್ಮ ನೆರೆವಿಗೆ ಬರೋದಿಲ್ಲ ಎಂಬುದು ಇಲ್ಲಿಯ ವಾಸಿಗಳ ಅಳಲು.

ನಿರಂತರ ಗಣಿಗಾರಿಕೆಯಿಂದ ಏಳುವ ದೂಳು ಕೆರ, ಕೊಳ್ಳ, ಮರಗಿಡದ ಮೇಲೆ ಹೋಗಿ ಕೂರುತ್ತಿದೆ. ದೂಳು ಕೂರುವುದರಿಂದ ದ್ಯುತಿ ಸಂಷ್ಲೇಶಣಾ ಪ್ರಕ್ರಿಯೆ ನಿಂತು ಮರಮಟ್ಟುಗಳು ಒಣಗುತ್ತಿದೆ. ನೀರಿನ ಮರು ಪೂರಣಕ್ಕೆ ಧಕ್ಕೆ ಬಂದಿದೆ. ದೂಳು ಕರೆ, ಹಳ್ಳ ಕಳವೆ ಬಾವಿಗಳ ಮೂಲಕ ಜನರ ಹೊಟ್ಟೆ ಸೇರುತ್ತಿದೆ. ಜಾನುವಾರುಗಳು ಇದ್ದಕ್ಕಿದಂತೆ ಸಾಯುತ್ತಿವೆ. ತೊಟ್ಟಿ ಅಥವಾ ಕೊಡಪಾನದಲ್ಲಿ ನೀರು ಶೇಖರಿಸಿಟ್ಟರೆ ಸುಣ್ಣದಂತೆ ನೀರು ಹೆಪ್ಪುಗಟ್ಟುತ್ತದೆ. ಈ ನೀರು ಸೇವಿಸದ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನೀರಿನ ರುಚಿ ಕೂಡಾ ಒಗರು.

ನೀರು ಫ್ಲೋರೈಡ್

ಮಲ್ಲೇಶ್ವರ ಜನರ ಆರೋಗ್ಯ ಪರೀಕ್ಷಿಸಿದ ಸ್ಥಳೀಯ ಆರೋಗ್ಯಾಧಿಕಾರಿ ಪರಿಸರದ ನೀರು ಕುಡಿಯದಂತೆ ಶಿಪಾರಸ್ಸು ಮಾಡಿದ್ದಾರೆ. ನೀರಿನಲ್ಲಿ ಫ್ಲೋರೈಡ್ ಸೇರಿರುವುದೇ ಈ ಎಲ್ಲಾ ಅನಾರೋಗ್ಯಕ್ಕೆ ಕಾರಣ ಎಂದು ಅವರು ಷರಾ ಬರೆದಿದ್ದಾರೆ. ಆದರೆ ಇಲ್ಲಿನ ವಾಸಿಗಳಿಗೆ ಈ ನೀರು ಕುಡಿಯದೆ ವಿಧಿಯಿಲ್ಲ.

ಊರವರು ಏನು ಹೇಳುತ್ತಾರೆ

ಗಣಿಗಾರಿಕೆ ಬೇಡಾ ಎಂದರು ನಮ್ಮ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಪ್ಲೋರೈಡ್ ನೀರು ಕುಡಿದು ಸಾಯೋದು ನಮ್ಮ ಹಣೆ ಮೇಲೆ ಬರೆದಿದೆ ಅಂತ ಕಾಣುತ್ತೆ. ಈಗಾಲೇ ಒಂದಿಷ್ಟು ಜನರನ್ನು ಕಳೆದುಕೊಂಡಿದ್ದಾಗಿದೆ. ಮತ್ತೆಷ್ಟು ಜನರನ್ನು ಕಳದೆಕೊಳ್ಳಬೇಕೋ ಗೊತ್ತಿಲ್ಲ.

ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ತೊಂದರೆ ತಾಪಾತ್ರೆಯ ವಿವರಿಸಿದ್ದಾಗಿದೆ. ಅವರು ತಿಪ್ಪೇ ಸಾರುತ್ತಲೇ ಬಂದಿದ್ದಾರೆ. ಮಲ್ಲೇಶ್ವರಕ್ಕೆ ಕುಡಿಯುವ ನೀರು ಬೇರೆಕಡೆಯಿಂದ ಒದಗಿಸಿ ಅಂದರೂ ಕೇಳುತ್ತಿಲ್ಲ. ನಮಗೂ ಹೇಳಿ ಸಾಕಾಗಿದೆ. ನಮ್ಮ ಸಮಸ್ಯೆಗೆ ಸ್ಪಂಧಿಸದಿದ್ದರೆ ಆಮರಣಾಂತ ಉಪವಾಸದಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಜನಪ್ರತಿ ನಿಧಿಗಳು ಇವರ ಕೂಗನ್ನ ಕೇಳಿಸಿಕೊಳ್ಳಬೇಕಷ್ಟೇ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಸಾಗರದ ಅಣಲೇ ಕೊಪ್ಪ ಬಡಾವಣೆಯ ವೇದಾವತೀ ಸತ್ಯನಾರಾಯಣ ಎಂಬವರ ಮನೆಯಲ್ಲಿ ಕೇಸರಿ ಬಣ್ಣದ ಅಪರೂಪದ ಬಾವಲಿಯೊಂದು ಕಂಡುಬಂದಿದೆ. ಮಾಮೂಲಿಯಾಗಿ ಕಪ್ಪು, ಕಂದು ಬಣ್ಣದ ಬಾವಲಿಗಳು ಕಂಡುಬರುತ್ತಿದ್ದು ಇದು ಅವೆಲ್ಲಕ್ಕಿಂತ ವಿಭಿನ್ನವಾಗಿದೆ. ಒಟ್ಟಾರೆಯಾಗಿ ಹೊಸತೊಂದು ತಳಿಯ ಬಾವಲಿ ಇದೆಂಬ ಮಾತು ಕೇಳಿಬರತೊಡಗಿದೆ.

ಮುಂದೆ ಓದಿ

ರಾಷ್ಟ್ರ - ಅಂತಾರಾಷ್ಟ್ರ

ಏನೇ ಇರಲಿ ಕನ್ನಡಿಗರು ಅಂದರೆ ಹಾಗೇನೇ. ತಾವು ಎಲ್ಲೇ ಇದ್ದರೂ ತಮ್ಮ ನೆಲದ ಸೊಗಡನ್ನು ಅಲ್ಲೆಲ್ಲಾ ಬಿತ್ತುವುದು ಅವರ ಹೆಗ್ಗಳಿಕೆ. ಊರಲ್ಲಿಲ್ಲದಿದ್ದರೇನಂತೆ, ಊರ ಮಣ್ಣಿನ ಕಂಪನ್ನು ವಿದೇಶದಲ್ಲೂ ತಾವು ಪಸರಿಸುತ್ತೇವೆ ಎಂಬ ಎದೆಗಾರಿಕೆ ಈ ಕನ್ನಡಿಗರದ್ದು. ಅದಕ್ಕೆ ಸಾಕ್ಷಿ ದೂರದ ವಿದೇಶದಲ್ಲಿ ಗಂಡುಕಲೆ ಯಕ್ಷಗಾನವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದು ಎಂದರೆ ತಪ್ಪಾಗಲಾರದು.
ಕಲಾಸಂಗಮ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ದೇವಿಕ ರಾವ್ ಮತ್ತು ತಂಡದವರು ಸೇರಿದ ಸಾವಿರಾರು ವಿದೇಶಿಯರಿಗೆ ಪ್ರದರ್ಶಿಸಿ ಯಕ್ಷಲೋಕವನ್ನೇ ಸೃಷ್ಟಿಸಿದರು.





ಮುಂದೆ ಓದಿ
2:13 PM

ನೀವೂ ಬರೀರಿ...

Posted by ekanasu

ವಿಶೇಷ ಪುಟ


ಈ ಕನಸಿನ ಓದುಗರಿಗಾಗಿ ಅತ್ಯಪೂರ್ವ ಮಾಹಿತಿಯುಕ್ತ ಜುಲೈ 1ರ ಪತ್ರಿಕಾ ದಿನದ ವಿಶೇಷ ಪುರವಣಿ...ನೀವೂ ಬರೆಯಬಹುದು...ಮಾಹಿತಿಗಳನ್ನು ನೀಡಬಹುದು...ನಿರೀಕ್ಷಿಸಿರಿ...

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ರಾಜ್ಯದ ಜನತೆಯ ಜೀವನ ಉತ್ತಮ ಪಡಿಸುವ ಗುರಿಯೊಂದಿಗೆ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವನ್ನು ದೇಶದಲ್ಲಿಯೇ ಮೊದಲಸ್ಥಾನಕ್ಕೆ ಒಯ್ಯುವಲ್ಲಿ, ಸರಕಾರ ವಿರೋಧ ಪಕ್ಷಗಳು ಮತ್ತು ಜನತೆ ಎಲ್ಲರ ಸಹಕಾರ ಅಗತ್ಯವೆಂದು ಭಾವುಕರಾಗಿ ನುಡಿದರು. ಅವರು ಅರಮನೆ ಮೈದಾನದಲ್ಲಿ ಜರುಗಿದ ಸರ್ಕಾರಿ ಆಡಳಿತದಲ್ಲಿ ಯಶಸ್ವಿ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಏರ್ಪಡಿಸಿದ್ದ ' ಸಾಧನಾ ಸಮಾವೇಶ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಬರುವ ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಸಧೃಢ ರಾಜ್ಯವಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಇತರ ರಾಜ್ಯಗಳಿಗೂ ಸಹ ವಿದ್ಯುತ್ ನೀಡುವ ಮಟ್ಟಕ್ಕೆ ಬಲಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.




ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಿರುವ ಭಾಗ್ಯಲಕ್ಷ್ಮೀ ಯೋಜನೆ, ಸಂಧ್ಯಾ ಸುರಕ್ಷಾ, ವಿದ್ಯಾರ್ಥಿಗಳಿಗೆ ಸೈಕಲ್ ನೀಡಿಕೆ, ಅತ್ಯಂತ ಪುರೋಗಾಮಿ ಯೋಜನೆಗಳಾಗಿದ್ದು ರಾಷ್ಟ್ರಕ್ಕ್ಕೇ ಮಾದರಿಯಾಗಿವೆ. ಹೆಣ್ಣು ಭ್ರೂಣ ಹತ್ಯೆ ಸಮಸ್ಯೆ ತಾಂಡವವಾಡುತ್ತಿರುವ ಈ ಕಾಲದಲ್ಲಿ ಹೆಣ್ಣುಮಕ್ಕಳನ್ನು ಸಬಲ, ಸುಭದ್ರಗೊಳಿಸುವ ಈ ಯೋಜನೆಗಾಗಿ ರಾಜ್ಯ ಸರಕಾರ ಅಭಿನಂದನೀಯವೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಪ್ರಶಂಸಿಸಿದರು.

ರಾಜ್ಯ ಸಭಾ ಸದಸ್ಯರಾದ ವೆಂಕಯ್ಯನಾಯ್ಡು, ಲೋಕಸಭಾ ಸದಸ್ಯ ಅನಂತಕುಮಾರ್ ಅವರು ಸಹ ಮಾತನಾಡಿದರು. ಸಮಾವೇಶದಲ್ಲಿ ಹಿರಿಯ ಸಚಿವರುಗಳಾದ ಡಾ: ವಿ.ಎಸ್. ಆಚಾರ್ಯ, ಕಟ್ಟಾಸುಬ್ರಮಣ್ಯ ನಾಯ್ಡು, ಸಿ.ಎಂ. ಉದಾಸಿ, ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಬಸವರಾಜ ಬೊಮ್ಮಾಯಿ, ಸುರೇಶ್ಕುಮಾರ್, ಆರ್. ಅಶೋಕ್ ಅವರು ಸೇರಿದಂತೆ ಎಲ್ಲ ಸಚಿವರುಗಳು, ಪೂಜ್ಯ ಮಹಾಪೌರರರಾದ ಎಸ್.ಕೆ. ನಟರಾಜ್, ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ, ಪಿ.ಸಿ. ಮೋಹನ್, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳ ವತಿಯಿಂದ ಅಭಿವೃದ್ಧಿ ಬಿಂಬಿಸುವ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಶನಿವಾರ ಮತ್ತು ಭಾನುವಾರಗಳಂದು ಸಹ ಲಭ್ಯವಿರುತ್ತದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಸಾಧನಾ ಸಮಾವೇಶದಲ್ಲಿ ಸಾಂಸ್ಕೃತಿಕ ವೈಭವ ನೀಡಿದ ತಂಡದ ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು: ರೋಗ ಬಂದ ನಂತರ ಶುಶ್ರೂಷೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಬುದ್ಧಿವಂತಿಕೆ; ಮಳೆಗಾಲದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಆರಂಭವಾಗಲಿದ್ದು ಪ್ರತಿಯೊಬ್ಬರು ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ. ನಾಗೇಂದ್ರ ಸ್ವಾಮಿ ಹೇಳಿದರು.ಇಂದು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ವಿದ್ಯಾದಾಯಿನಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.ಮಕ್ಕಳು ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ತಿಳಿದುಕೊಂಡು ಮನೆಗಳಲ್ಲಿ, ಅಕ್ಕಪಕ್ಕದ ಪರಿಸರದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಸಾಮಾಜಿಕ ಜಾಗೃತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.



ಅನಾಫಿಲಿಸ್ ಸೊಳ್ಳೆಯಿಂದ ಬರುವ ಮಲೇರಿಯಾವನ್ನು ಪತ್ತೆ ಹಚ್ಚಲು ಇಂದು ಆಧುನಿಕ ಸೌಲಭ್ಯಗಳಿದ್ದು, ರೋಗ ಆರಂಭದಲ್ಲೇ ಚಿಕಿತ್ಸೆ ಪಡೆದರೆ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳುವ ಬಗ್ಗೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ರೀತಿಯನ್ನು ವಿವರಿಸಿದರು. 2004ರಿಂದ ಜಿಲ್ಲೆಯಲ್ಲಿ ಮಲೇರಿಯಾ ರೋಗ ಕಡಿಮೆಯಾಗಿದ್ದು, ಜ್ವರ ಬಂದಲ್ಲಿ ತಕ್ಷಣ ರಕ್ತ ಪರೀಕ್ಷೆ ಮಾಡಿಸುವುದರಿಂದ ಚಿಕಿತ್ಸೆ ಪಡೆಯುವುದು ಸುಲಭ ಎಂದರು.ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಪ್ರೊ. ಗಿರಿಧರ್ ಹತ್ವಾರ್, ಸಂಚಾಲಕರಾದ ಶ್ರೀಮತಿ ಉಮಾದೇವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅರಣ್ ಕುಮಾರ್ ಅವರು ಮಲೇರಿಯಾ ಬಗ್ಗೆ ಉಪನ್ಯಾಸ ನೀಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೇಶವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹೇಮಲತಾ ಕಾರ್ಯಕ್ರಮ ಸಂಯೋಜಿಸಿದ್ದರು. ಕ್ಷೇತ್ರ ಪ್ರಚಾರಾಧಿಕಾರಿ ಟಿ.ಬಿ. ನಂಜುಂಡ ಸ್ವಾಮಿ ಸ್ವಾಗತಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಈ ಸಂಬಂಧ ಕ್ಷೇತ್ರ ಪ್ರಚಾರ ಇಲಾಖೆ ವತಿಯಿಂದ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ನಾಲ್ಕು ಬಹುಮಾನಗಳನ್ನು ನೀಡಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಕೊನೆಗೂ ಕೇಂದ್ರ ಸರಕಾರ ತನ್ನ ಚಾಳಿ ತೀರಿಸಿಕೊಂಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸಕತ್ತಾಗಿ ಏರಿಸಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಪೆಟ್ರೋಲ್ ಪಂಪ್ ಗಳಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿ ಕಂಡುಬಂತು. ಆದರೆ ಏತನ್ಮಧ್ಯೆ ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ನೋಸ್ಟಾಕ್ ಫಲಕ ರಾರಾಜಿಸತೊಡಗಿದೆ. ಬೆಂಗಳೂರಿನಲ್ಲಿ ಸಾರಿಗೆ ಸಚಿವ ಆರ್. ಅಶೋಕ್ ಹಲವಾರು ಪೆಟ್ರೋಲ್ ಬಂಕ್ ಗಳ ಮೇಲೆ ದಾಳಿ ನಡೆಸಿದ ಘಟನೆಗಳೂ ವರದಿಯಾಗಿವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ತಮಿಳು ಸರಕಾರದ ವತಿಯಿಂದ ಕೊಯಮುತ್ತೂರಿನಲ್ಲಿ ಏರ್ಪಡಿಸಿರುವ ಐದು ದಿನಗಳ 'World Classical Tamil Conference' ಸಮಾರಂಭದಲ್ಲಿ ಪಾಲ್ಗೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿಗಳು ಕರ್ನನಾಟಕ ಸರಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದು, ಮುಖ್ಯಮಂತ್ರಿಗಳ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ರಾಮಚಂದ್ರ ಗೌಡ ಅವರು ಜೂನ್ 23 ರಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಾದ್ಯಕ್ಷರು, ತಮಿಳುನಾಡಿನ ರಾಜ್ಯಪಾಲರು, ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದು, ಸಮಾರಂಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತಮಿಳು ಸಹೋದರರು ಭಾಗವಹಿಸಿದ್ದ ವಿಶ್ವದ 50 ದೇಶಗಳಿಂದ ಬಂದ ತಮಿಳರು ಸಹ ಸೇರಿರುತ್ತಾರೆ. ಈ ಸಮ್ಮೇಳನದಲ್ಲಿ ಏಳು ಸಾವಿರ ತಮಿಳು ಪ್ರತಿಭಾನ್ವಿತರು ತಮ್ಮ ಪ್ರಬಂಧಗಳನ್ನು ಮಂಡಿಸಿ, ಇವುಗಳಲ್ಲಿ ಭಾಷೆ, ಸಂಸ್ಕೃತಿ, ಚರಿತ್ರೆ ತಮಿಳು ಪರಂಪರೆ ಇತ್ಯಾದಿಗಳು ಒಳಗೊಂಡಿದ್ದು ಈ ಸಮಾರಂಭವು ತಮಿಳು ಭಾಷೆ ಬಗ್ಗೆ ಒಂದು ಚರಿತ್ರಾರ್ಹ ಘಟನೆ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಭಾರತವು ಒಂದು ಉತ್ಕೃಷ್ಟ ಸಾಂಸ್ಕೃತಿಕ ತಳಹದಿಯನ್ನು ಹೊಂದಿದ್ದು, ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಈ ಪಾರಂಪರಿಕ ಸಂಸ್ಕೃತಿಯ ಬೇರುಗಳನ್ನು ನೋಡಬಹುದು. ತಮಿಳು ಭಾಷೆಯು ಎಲ್ಲಾ ತರಹದ ಭಾಷಾ ಧಾಳಿಗಳ ವಿರುದ್ಧ ಹೋರಾಡಿದೆ. ತಮಿ:ಳು ಸಂಸ್ಕೃತಿಯು ಭಾರತದ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇದು ಭಾರತೀಯ ಸಂಸ್ಕೃತಿಯನ್ನು ಪೋಷಿಸಿದೆ ಎಂದು ಸಚಿವರು ತಿಳಿಸಿದರು. 'World Classical Tamil Conference' ನಂತಹ ಅರ್ಥಪೂರ್ಣವಾದ ಸಮಾರಂಭವನ್ನು ಏರ್ಪಡಿಸಿದ್ದಕ್ಕಾಗಿ ತಮಿಳು ನಾಡು ಮುಖ್ಯಮಂತ್ರಿಗಳಾದ ಡಾ: ಕರುಣಾನಿಧಿಯವರನ್ನು ಅಭಿನಂದಿಸುತ್ತೇನೆ ಎಂದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು : ಸಾವಯವ ಕೃಷಿ ಮಿಷನ್ ವತಿಯಿಂದ 'ಅನ್ನದಾತನ ಅಂಗಳದಲ್ಲಿ ಸಾವಯವ ಸಂವಾದ ಮುಖ್ಯಮಂತ್ರಿಗಳ ನಡಿಗೆ-ತಿಂಗಳಿಗೊಮ್ಮೆ ಹಳ್ಳಿಯ ಕಡೆಗೆ' ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಹಮ್ಮಿಕೊಳ್ಳಲಾಗಿದ್ದು, ಮೊದಲ ಸಂವಾದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಸಾವಯವ ಕೃಷಿ ಶ್ರೀ ಸೋಮಲಿಂಗಯ್ಯ ಜಿ. ಗಣಾಚಾರಿ ಅವರೊಂದಿಗೆ ಜೂನ್ 26 ರಂದು ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಜೂನ್ 26 ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಹಳ್ಳಿಗೆ ಭೇಟಿ ನೀಡಿ ಬೆಳಿಗ್ಗೆ 9-30 ಕ್ಕೆ ಗ್ರಾಮದೇವತೆದರ್ಶನ, 9-45 ಸಾರ್ವಜನಿಕ ಸಭೆ, 11-15 ಸಾವಯವ ಕೃಷಿಕರ ಕ್ಷೇತ್ರದರ್ಶನ 12 ಸಾವಯವ ಕೃಷಿ ಸಂವಾದಗಳು 12 ರಿಂದ 1-30 ಸಾವಯವ ಪರಂಪರೆ 1-30 ರಿಂದ ಊಟ 3-15 ರಿಂದ 4-30 ಸಾವಯವ ಸೆಳೆತ 4-45 ರಿಂದ 5-45 ಸಾವಯವ ಕೌಶಲ್ಯ ಕೃಷಿ ಕಾರ್ಮಿಕ ಕುಟುಂಬಗಳ ಜೊತೆ ಕುಶಲೊಪರಿ 6 ರಿಂದ 7 ಗ್ರಾಮದ ಪ್ರಮುಖರೊಂದಿಗೆ ಮುಂದಿನ ಕಾರ್ಯಕ್ರಮ ನಡೆಯಲಿದೆ.

ಮುಂದೆ ಓದಿ
9:05 PM

ಖಂಡನೆ

Posted by ekanasu

ಪ್ರಾದೇಶಿಕ ಸುದ್ದಿ

ಮಂಗಳೂರು: ಪತ್ರಕರ್ತ ಸುಖೇಶ್ ಮೇಲೆ ಇತ್ತೀಚೆಗೆ ಸುರತ್ಕಲ್ನಲ್ಲಿ ನಡೆದ ಹಲ್ಲೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಘಟನೆ ಬಗ್ಗೆ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು.

ಮುಂದೆ ಓದಿ
9:00 PM

ಪತ್ರಿಕಾ ಸಂವಾದ

Posted by ekanasu

ಪ್ರಾದೇಶಿಕ ಸುದ್ದಿ

ಮಂಗಳೂರು: ಮಂಗಳೂರಿನ ಪತ್ರಕರ್ತರೊಂದಿಗೆ ಜಿಲ್ಲಾಧಿಕಾರಿಗಳು ಅಮೆರಿಕಾದ ತರಬೇತಿ ಅನುಭವ ಹೇಳಲಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ರೊಂದಿಗೆ ಶುಕ್ರವಾರ ಬೆಳಗ್ಗೆ 10ಕ್ಕೆ ಪತ್ರಿಕಾ ಭವನದಲ್ಲಿ ಸಂವಾದವನ್ನು ಏರ್ಪಡಿಸಲಾಗಿದೆ. ಅಮೆರಿಕದ ತರಬೇತಿ ಅವಧಿಯ ಅನುಭವವನ್ನು ಪತ್ರಕರ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು :ಸ್ವಚ್ಛತೆಯ ಪಾಠ ಮಕ್ಕಳಿಗೆ ಎಳೆವೆಯಲ್ಲೇ ಕಲಿಸಬೇಕು. ಮನೆ, ವಠಾರ, ಶಾಲಾ ಸ್ವಚ್ಛತೆಯಿಂದ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಿದ್ದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಕ್ಷೇತ್ರ ಪ್ರಚಾರಾಧಿಕಾರಿ ಟಿ ಬಿ. ನಂಜುಂಡಸ್ವಾಮಿ ಹೇಳಿದರು.
ಅವರಿಂದು ಮಂಗಳೂರು ತಾಲೂಕಿನ ಬಡಗುಳಿ ಪಾಡಿ ಗ್ರಾಮದ ಗುರು ಕಂಬಳದ ಎಕೆಯು ಪ್ರೌಢ ಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶ ನಾಲಯ ಮತ್ತು ವಾರ್ತಾ ಇಲಾಖೆ ಏರ್ಪಡಿಸಿದ್ದ ಪರಿಸರ ದಿನಾಚರಣೆ ಸಂಬಂಧ ವಿಚಾರ ಸಂಕಿರಣದಲ್ಲಿ ಮಾತ ನಾಡುತ್ತಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲೇ, ಮಕ್ಕಳು ನಮ್ಮ ಭವಿಷ್ಯ ಈ ಮಕ್ಕಳಿಗೆ ಪಠ್ಯದ ಜೊತೆಗೆ ಪರಿಸರದ ಬಗ್ಗೆ ಮಾಹಿತಿ ನೀಡುವುದು ಎಲ್ಲರ ಕರ್ತವ್ಯ ಎಂದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಓಸ್ವಾಲ್ಡ್ ರೋಡ್ರಿಗಸ್ ಅವರು, ಮಕ್ಕಳು ಶುಭ್ರವಾಗಿದ್ದು, ಶಾಲಾ ಆವರಣದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದರು. ಎಲ್ಲೆಂದರಲ್ಲಿ ಕಸ ಹಾಕುವುದು; ಅಸ್ವಚ್ಛ ಪರಿಸರದಿಂದ ಆರೋಗ್ಯದ ಮೇಲಾಗುವ ಹಾನಿಯ ಬಗ್ಗೆ ಮಕ್ಕಳಿಗೆ ವಿವರಿಸಿದರು.



ಸಮಾರಂಭದ ಮುಖ್ಯ ಅತಿಥಿ ಯಾಗಿದ್ದ ವಾರ್ತಾಧಿಕಾರಿ ರೋಹಿಣಿ ಮಕ್ಕಳನ್ನು ಉದ್ದೇಶಿಸಿ ಮಾತ ನಾಡಿದರು. ನಿವೃತ್ತ ಶಿಕ್ಷಕ ಅನಂತರಾಮ ಅವರು ಸಂಪನ್ಮೂಲ ವ್ಯಕ್ತಿ ಯಾಗಿದ್ದರು. ಕಾರ್ಯ ಕ್ರಮದಲ್ಲಿ ಪರಿಸರ ಸಂಬಂಧ ಏರ್ಪಡಿಸಲಾದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನೌರೀನ್, ಸುನೇವಾ, ಮರ್ಝೀಯಾಭಾನು, ಅಥಾವುಲ್ಲಾ ಅವರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಪ್ರಚಾರ ಇಲಾಖಾ ವತಿಯಿಂದ ಸ್ವಚ್ಛತೆ ಮತ್ತು ಆರೋಗ್ಯ ಕುರಿತ ಚಲನ ಚಿತ್ರ ಪ್ರದರ್ಶಿಸಲಾಯಿತು. ವಾರ್ತಾ ಇಲಾಖೆ ಜನಪದ ಕಲಾವಿದರು ಸ್ವಚ್ಛತೆ ಕುರಿತ ಪದಗಳನ್ನು ಹಾಡಿದರು. ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಮಾಧವ ಮಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಗಣಿತ ಪ್ರಾಧ್ಯಾಪಕರಾದ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಸಾಧನಾ ಸಮಾವೇಶದ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಕಾರ್ಯವನ್ನು ವೀಕ್ಷಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು : 2010-11 ನೇ ಸಾಲಿಗೆ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಯೋಜನೆ ಮತ್ತು ಯೋಜನೆತರ ಕಾರ್ಯಕ್ರಮದಡಿ ಒಟ್ಟು 344.91 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಯೋಜನಾ ಕಾರ್ಯಕ್ರಮದಡಿ 74.07 ಕೋಟಿ ರಾಜ್ಯ ವಲಯದಡಿ, 37.65 ಕೋಟಿ ಅನುದಾನ ಕೇಂದ್ರ ವಲಯದಡಿ ಸೇರಿ ಒಟ್ಟು 111.72, ಯೋಜನೇತರ ಕಾರ್ಯಕ್ರಮದಡಿ ಜಿಲ್ಲೆಗೆ ಒಟ್ಟು 233.19 ಅನುದಾನ ನಿಗದಿಯಾಗಿದೆ.
ಯೋಜನಾ ಕಾರ್ಯ ಕ್ರಮಗಳಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಜಲಾನಯನಕ್ಕೆ ಅನುದಾನ ನಿಗದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 23 ನೇ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.ಬಳಿಕ ವಿವಿಧ ಅಭಿವೃದ್ದಿ ಸಂಬಂಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.




ಅಂಗನ ವಾಡಿಗಳಲ್ಲಿ ಮಕ್ಕಳಿಗೆ ವಿತರಿಸಲಾಗುವ ಪೌಷ್ಠಿಕ ಆಹಾರವು ಮಕ್ಕಳಿಗೆ ತಿನ್ನಲು ರುಚಿಕರವಾಗಿಲ್ಲದ ಜೊತೆಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ಮಕ್ಕಳ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂಬುದಾಗಿ ಜಿಲ್ಲಾ ಪಂಚಾಯತಿನ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ಜೊತೆಗೆ ಉಪಸ್ಥಿತರಿದ್ದ ಶಾಸಕರಿಂದಲೂ ಇಂದು ಗಂಭೀರ ಆರೋಪಗಳು ವ್ಯಕ್ತವಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಯು.ಟಿ.ಖಾದರ್ ಅಂಗನ ವಾಡಿಗಳಿಗೆ ಸರಬ ರಾಜಾಗುತ್ತಿರುವ ಆಹಾರದ ಬಗ್ಗೆ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಹೇಳಿದರು.ಈ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಗಳ ಅಧ್ಯಕ್ಷರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಿ ಸಮಯಮಿತಿ ನಿಗದಿ ಪಡಿಸಿ ವರದಿ ಸಲ್ಲಿಸಲು ಸಭೆ ನಿರ್ಧರಿಸಿತು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ; ಸಿಇಒ : ಸರಕಾರಿ ಶಾಲೆಗಳು ಕೆಲವೆಡೆ ಮಕ್ಕಳೇ ಇಲ್ಲದೆ ಮುಚ್ಚುವಂತಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಶಿಕ್ಷಕರೇ ಇಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯತ್ನಿಂದ ವಿಶ್ಲೇಷಣೆ ನಡೆದಿಯೇ ಎಂದು ಸದಸ್ಯರಾದ ಎ.ಸಿ. ಭಂಡಾರಿ ಸಭೆಯ ಆರಂಭದಲ್ಲೇ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದರು. ಉಳಿದ ಸದಸ್ಯರು ಈ ಬಗ್ಗೆ ವಿವರ ಬಯಸಿದರು. ಜಿಲ್ಲೆಯಲ್ಲಿ ಸರಕಾರಿ ಶಾಲೆಗೆ ಬರಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಊಟ, ಸೈಕಲನ್ನು ನೀಡುತ್ತದೆ. ಆದರೆ ಿದರ ಜೊತೆಗೆ ಶಿಕ್ಷಕರನ್ನೂ ನೀಡಬೇಕು ಎಂದು ಸದಸ್ಯ ಪ್ರಮೋದ್ ಕುಮಾರ್ ಆಗ್ರಹಿಸಿದರೆ, ಏಕೋಪಾಧ್ಯಾಯ ಶಾಲೆಗಳಿಗೆ ಕನಿಷ್ಠ ಇಬ್ಬರು ಶಿಕ್ಷಕರನ್ನಾದರೂ ನೀಡುವಂತಾಗಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಲು ಪೋಷಕರ ಆಂಗ್ಲ ಮಾಧ್ಯಮದ ವ್ಯಾಮೋಹವೂ ಕಾರಣ ಎಂದ ಸದಸ್ಯ ಸುಚರಿತ ಶೆಟ್ಟಿ ಹೇಳಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಶಿವಶಂಕರ್, ಜಿಲ್ಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ 1057 ಶಾಲಾ ಕೊಠಡಿಗಳು ಮಂಜೂರಾಗಿದ್ದು, 23 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಜಿಲ್ಲೆಯಲ್ಲಿ ಶಿಕ್ಷಕರನ್ನು ನೇಮಿಸಲಾಗಿದೆ.ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಶಿಕ್ಷಕರು ಸರಕಾರಿ ಶಾಲೆಗಳಲ್ಲಿದ್ದು, ಮೂಲಭೂತ ಸೌಕರ್ಯವೂ ಉತ್ತಮವಾಗಿದೆ. ಪ್ರಸ್ತುತ ಒಟ್ಟಾರೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದರು. ಕೆಲವು ನಿಗದಿತ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಈ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಇಒ ಶಿವಶಂಕರ್ ಸೂಚಿಸಿದರು.
ತೋಟಗಾರಿಕಾ ಇಲಾಖೆಯಿಂದ ಕೀಟನಾಶಕಗಳನ್ನು ಇತ್ತೀಚೆಗೆ ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸದಾನಂದ ಮಲ್ಲಿ, ಈ ಬಗ್ಗೆ ಜಿಲ್ಲಾ ಮಟ್ಟದ ತಂಡದಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಈ ಬಗ್ಗೆ ಚರ್ಚಿಸಬಹುದು ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ವೆಂಕಟ್ದಂಬೆಕೋಡಿ ಉಪಸ್ಥಿತರಿದ್ದರು.

ಮುಂದೆ ಓದಿ

ವಿಶೇಷ ವರದಿ


ಕ್ಷಣ ಕ್ಷಣದಲ್ಲಿಯೂ ಕುತೂಹಲಕಾರಿ ಪರೀಕ್ಷೆಗಳು. ಸ್ವಲ್ಪ ಎಡವಿದರೂ ಅನೇಕ ಕನಸುಗಳು ನುಚ್ಚುನೂರು. ಪ್ರತಿಯೊಂದು ತಿರುವನ್ನೂ ಸವಾಲೆಂದು ಸ್ವೀಕರಿಸುವ ಧೀಶಕ್ತಿ ಇದು ಚಾಲಕ ವೃತ್ತಿ. ಒರಟು ಮಾತು, ಗಂಟು ಹಾಕಿದ ಮುಖ, ಕೊಳಕು ಖಾಕಿ ಎಂದು ತೆಗಳುವ ನಾವು ಅವರ ಪ್ರತಿಭೆಯನ್ನು ಎಂದಾದರೂ ಕಾಣಲು ಪ್ರಯತ್ನಿಸಿದ್ದೇವಾ? ಇಲ್ಲವಾದರೆ ಅಂತವರಿಗೊಂದು ಇಲ್ಲಿದೆ ಉತ್ತರ. ಅವರ ಹೆಸರು ಬಾಲಕೃಷ್ಣ ಸಹಸ್ರಬುದ್ದೆ. ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದವರು. ವೃತ್ತಿಯಲ್ಲಿ ಚಾಲಕ, ಪ್ರವೃತ್ತಿಯಲ್ಲಿ ಸಾಹಿತ್ಯಾರಾಧಕ. ಪ್ರಪ್ರಥಮ ಬಾರಿಗೆ ತಮ್ಮ ಆಡು ಭಾಷೆ ಚಿತ್ಪಾವನಿಯಲ್ಲಿ ಗೀತೆಗಳನ್ನು ರಚಿಸಿ ಪ್ರಕಟಿಸಿದ ಇವರು ಈಗ ಭಗವದ್ಗೀತೆಯ ಶ್ಲೋಕಗಳ ಒಳಾರ್ಥವನ್ನು ಪದ್ಯರೂಪದಲ್ಲಿ ಬರೆದು, ರಾಗ ಸಂಯೋಜಿಸಿ, ಅದನ್ನು ಸಿ.ಡಿ ಮೂಲಕ ಲೋಕಾರ್ಪಣೆ ಮಾಡಿದ ಪ್ರಪ್ರಥಮ ಕನ್ನಡಿಗನೆನಿಸಿದ್ದಾರೆ. ಇದೇ ಇವರ "ಒಳಗಣ್ಣ ನೋಟ" .





ಓದಿದ್ದು ಹತ್ತನೇ ತರಗತಿಯಾದರೂ ಜೀವನದ ಪ್ರತಿಯೊಂದು ಕ್ಷಣವೂ ಶಿಕ್ಷಣವೇ. ಮೊದಲು ಕೃಷಿಯಲ್ಲಿ ತೊಡಗಿದ್ದ ಇವರಿಗೆ ಚಾಲಕ ವೃತ್ತಿಯಲ್ಲಿ ಆಸಕ್ತಿ ಕೆರಳಿತು. ನಂತರ ಇವರು ಪುತ್ತಿಗೆ ಮಠದ ಸ್ವಾಮೀಜಿಯವರ ವಾಹನಕ್ಕೆ ಸಾರಥಿಯಾದರು. ಪ್ರಯಾಣದ ವೇಳೆಯಲ್ಲಿ ಸ್ವಾಮೀಜಿ ಮತ್ತು ವಿದ್ವಾಂಸರ ನಡುವೆ ನಡೆಯುತ್ತಿದ್ದ ಅಮೂಲ್ಯ ಸಂಭಾಷಣೆಯೇ ಇವರ ಬರವಣಿಗೆಯ ಬದುಕಿಗೆ ನಾಂದಿ ಹಾಡಿತು.



ಜೀವನಕ್ಕೆ ಚಾಲಕ ವೃತ್ತಿ, ಜೊತೆಗೆ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅಡುಗೆಯ ಕೆಲಸ. ಬಿಡುವಿನ ಸಂದರ್ಭದಲ್ಲಿ ಸಾಹಿತ್ಯಾರಾಧನೆ. ತಮ್ಮ ಸಾಹಿತ್ಯ, ಸಂಗೀತಮಯ ಬದುಕಿಗೆ ರಾಗ, ತಾಳ, ಲಯವಾಗಿರುವವರು ಅವರ ಪತ್ನಿ ಮಹಾಲಕ್ಷ್ಮಿ ಹಾಗೂ ಮಕ್ಕಳಾದ ನವಮಿ ಮತ್ತು ಶಾರ್ವರಿ. ತಂದೆಯ ಗುಣಗಳು ಈ ಎರಡು ಮಕ್ಕಳಲ್ಲೂ ಹಂಚಿಹೋಗಿವೆ. ಹಾಡುವ ಜೊತೆಗೆ ಒಬ್ಬರಿಗೆ ಓದುವ ಹವ್ಯಾಸವಾದರೆ ಇನ್ನೊಬ್ಬರಿಗೆ ಬರೆಯುವ ಹವ್ಯಾಸ.



"ಒಳಗಣ್ಣ ನೋಟದಲ್ಲಿ" ಏನಿದೆ

ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಇಪ್ಪತ್ತು ಶ್ಲೋಕಗಳ ಕನ್ನಡ ರೂಪಾಂತರದ ಪದ್ಯರೂಪ. ಜೊತೆಗೆ ಶಂಕರಾಚಾರ್ಯ ವಿರಚಿತ ಭಜಗೋವಿಂದಂ ನ ಕನ್ನಡ ರೂಪಾಂತರದ ಹಾಡುಗಳು. ಇದು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳ ಸುಂದರವಾಗಿ ನೀಡಲಾಗಿದೆ. ಗೀತರಚನೆ ಮತ್ತು ಸಂಗೀತ ಬಾಲಕೃಷ್ಣ ಸಹಸ್ರಬುದ್ದೆ, ಸಂಗೀತ ಸಂಯೋಜನೆ ವಸಂತಕುಮಾರ್ ಕುಂಬ್ಳೆ, ಜೊತೆಗೆ ನವಮಿ ಮತ್ತು ಶಾರ್ವರಿಯವರ ಸುಶ್ರಾವ್ಯ ಕಂಠವಿದೆ.

ವಿಶ್ವವಿದು ಮೇಲ್ಬುಡದ ಅರಳಿ ಮರದಂತೆ, ಆಸೆಯೆಂಬ ಬಿಳಲುಗಳು ಇಳಿದಿಹವು ಭೂಮಿಗೆ, ದೇಹದ ಪ್ರಾಣವು ಗತಿಸಿದ ಬಳಿಕ ಬಾರಳು ಸತಿಯು ಕೊಡಲು ಸುಖ. ಹೀಗೆ ಇನ್ನೂ ಹಲವಾರು ಅಮೋಘ ಶಬ್ಧ ಹಾಗೂ ಜ್ಞಾನಗಳ ಭಂಡಾರವು ಪ್ರಾಸ ಬದ್ದವಾಗಿ ಇದರೊಳಗೆ ಅವಿತಿವೆ.

" ಒಳಗಣ್ಣ ನೋಟ ಒಂದು ಸುಂದರ, ಪರಿಮಳಯುಕ್ತ ಭಕ್ತಿಕುಸುಮ. ಇಂದಿನ ಜನತೆಗೆ ಅಗತ್ಯವಾಗಿ ಬೇಕಾದ ಭಕ್ತಿಯ ಸಾಧನವಿದು. ಆದಷ್ಟು ಬೇಗ ಇನ್ನುಳಿದ ಅಧ್ಯಾಯಗಳ ಮಾಲಿಕೆಗಳೂ ಬರಲಿ" ಎನ್ನುತ್ತಾರೆ ಬೆಂಗಳೂರಿನ ಖ್ಯಾತ ಜ್ಯೋತಿಷಿ ತಿರುಮಲಾಚಾರ್ಯ. ಇದೇ ರೀತಿ ಅನೇಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ದೊರೆಯುತ್ತಿದೆಯಂತೆ.

ಈ ನನ್ನ ಪ್ರಯತ್ನ ಇಲ್ಲಿಗೇ ಕೊನೆಯಾಗಬಾರದು. ಇದು ಇನ್ನೂ ಉತ್ತಮ ರಾಗಸಂಯೋಜನೆಯೊಂದಿಗೆ ಹಾಡಲು ಸಾಧ್ಯ . ಖ್ಯಾತ ರಾಗಸಂಯೋಜಕರು, ಹಾಡುಗಾರರು ಮುಂದೆ ಬಂದರೆ ಇದನ್ನು ಇನ್ನೂ ಸುಂದರವಾಗಿಸಬಹುದು ಎನ್ನುತ್ತಾರೆ ಸಹಸ್ರಬುದ್ದೆ.

ವೃತ್ತಿ ಯಾವುದೇ ಇರಲಿ, ಮನಸ್ಸು ಮತ್ತು ಆಸಕ್ತಿ ಇದ್ದರೆ ಏನನ್ನಾದರೂ ಕಲಿತು ಸಾಧಿಸಬಹುದು ಎನ್ನುವುದಕ್ಕೆ ಸಹಸ್ರಬುದ್ದೆಯವರೇ ಸಾಕ್ಷಿ. ಶಿಕ್ಷಣದಿಂದ ವಂಚಿತರಾದ ಎಷ್ಟೋ ಮಂದಿ ಸಾಮಾನ್ಯ ಜನರಿಗೂ, ಟೈಮ್ ಬರುತ್ತೆ ಎಂದು ಕಾಯುತ್ತಾ ಕುಳಿತಿರುವ ವಿದ್ಯಾವಂತರಿಗೂ ಇವರು ಮಾರ್ಗದರ್ಶಿಯಾಗಬಲ್ಲರು.

ಬೊರ್ಗಲ್ಗುಡ್ಡೆ ಮಂಜುನಾಥ್

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮನಸ್ಸಿಗೆ ನೋವುಂಟಾಗಿದ್ದೇ ಈ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಉಪಲೋಕಾಯುಕ್ತ ಹುದ್ದೆಗೆ ಇನ್ನೂ ನೇಮಕಾತಿ ಆಗಿಲ್ಲ. , ಭ್ರಷ್ಟಾಚಾರ ತಡೆಗಟ್ಟಲು ಹೆಚ್ಚಿನ ಅಧಿಕಾರ ನೀಡುತ್ತಿಲ್ಲ ಈ ಎಲ್ಲಾ ಕಾರಣಗಳಿಂದಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.




ಮನಕ್ಕೆ ನೋವು ಎಂದರು ಲೋಕಾಯುಕ್ತ

ಲೋಕಾಯುಕ್ತರು ಸುದ್ದಿಗೋಷ್ಠಿ ನಡೆಸಿ ನೀಡಿದ ಮಾಹಿತಿ ಹೀಗಿದೆ...
`` ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ನನ್ನ ಉಪಸ್ಥಿತಿಯಿಂದ ಈ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹವಾಗುತ್ತಿಲ್ಲ. ನಾನಿಲ್ಲಿರುವುದೇ ನಿರುಪಯುಕ್ತ. ನನ್ನಿಂದ ರಾಜ್ಯದ ಜನತೆಗೆ ಯಾವುದೇ ಸಹಾಯವಾಗುತ್ತಿಲ್ಲ. ನಾನು ಅಸಹಾಯಕ. ನನ್ನಡಿಯಲ್ಲಿ ಕೆಲಸ ಮಾಡುತ್ತಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಕಾಪಾಡಲು ಆಗುತ್ತಿಲ್ಲ. ಹೀಗಿರುವಾಗ ನಾನಿದ್ದು ಪ್ರಯೋಜನ ವಿಲ್ಲ ಎಂದು ಲೋಕಾಯುಕ್ತ ಹೇಳಿದರು.

ಮುಂದೆ ಓದಿ

ವಿಚಾರ

ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಅಯೋಗ್ಯರು, ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ, ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ, ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ.

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು.




ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆದುಕೊಂಡಿದೆ. ಹಾಗಂತ ಮನುಷ್ಯನ ವಯುಕ್ತಿಕ ಜೀವನದಲ್ಲಿ ವಚನಭ್ರಷ್ಟತೆ, ವಿಶ್ವಾಸದ್ರೋಹ ಎಂಬುದು ಚಾಲ್ತಿಯಲ್ಲಿ ಇಲ್ಲ ಅಂತಲ್ಲ. ಅಪ್ಪ ಕಾಲೇಜಿನ ಶುಲ್ಕ ಕಟ್ಟಲು ನೀಡಿದ ಹಣದಿಂದ ’ಇನ್ನೇನೋ’ ಮಾಡಿ, ಅಪ್ಪ ಮಗನ ಮೇಲಿಟ್ಟಿರುವ ವಿಶ್ವಾಸವನ್ನು ಕೊಂದುಹಾಕುವ ಮಕ್ಕಳಿಂದ ಹಿಡಿದು ರೈತನ ಬೆವರಿನ ಪ್ರತೀಕವಾದ ಬೆಳೆಯನ್ನು ಆತನ ಶ್ರಮಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಮತ್ತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಯವರೆಗೆ ಭ್ರಷ್ಟಾಚಾರವೆಂಬುದು ವ್ಯಾಪಿಸಿದೆ. ನಮ್ಮಲ್ಲಿ ಕೆಲವರಿಗೆ ನ್ಯಾಯವಾಗಿ ತೆರಿಗೆ ಕಟ್ಟಲು ಮನಸ್ಸಿಲ್ಲ. ಕೆಲವೇ ಕೆಲವರು ನ್ಯಾಯವಾಗಿ ಕಟ್ಟುವ ತೆರಿಗೆಯನ್ನು ನಾಡಿನ ಅಭ್ಯುದಯಕ್ಕೆ ವಿನಿಯೋಗಿಸಲು ನಮ್ಮ ಅಧಿಕಾರಶಾಹಿಗೆ ಮತ್ತು ಆಡಳಿತಶಾಹಿಗೆ ಆಗಿಬರುವಂಥದ್ದಲ್ಲ. ಇನ್ನು ಕೆಲವರಿಗೆ ತಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂದ ಜಮೀನು ಹೇಗಾದರೂ ಸಕ್ರಮವಾದರೆ ಸಾಕು ಎಂಬ ಮನಸ್ಥಿತಿ.

ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹದ ವರ್ತನೆಯನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕಾರಣಿಗಳು ಮಾಡಿದ ಭ್ರಷ್ಟಾಚಾರ ಮತ್ತು ವಚನಭ್ರಷ್ಟತೆಯನ್ನು ನಾವು ವೈಭವೀಕರಿಸುವುದು ಎಷ್ಟು ಸರಿ? ನಿಜ, ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿರಬೇಕು ಎಂಬ ನಿರೀಕ್ಷೆ ಖಂಡಿತಾ ತಪ್ಪಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಕೂಡ ನಾವು-ನೀವು ಜೀವಿಸುತ್ತಿರುವ ಸಮಾಜದ ಒಂದು ಭಾಗವೇ ಆಗಿದ್ದಾರೆ. ಅವರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಸಮಾಜವೇ ಇಡಿಯಾಗಿ ಭ್ರಷ್ಟವಾಗಿರುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕನಾಗಿರಲು ಹೇಗೆ ಸಾಧ್ಯ.

ಅದಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ನಮ್ಮಿಂದಲೇ ಆರಿಸಿಬಂದವನಾಗಿರುತ್ತಾನೆ. ಅವನ ಪೂರ್ವಾಪರಗಳು ಚುನಾವಣೆಗೆ ಮೊದಲೇ ಸ್ವಲ್ಪಮಟ್ಟಿಗಾದರು ಆತ ಪ್ರತಿನಿಧಿಸಲಿರುವ ಕ್ಷೇತ್ರದ ಜನತೆಗೆ ತಿಳಿದಿರುತ್ತದೆ.

ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಗಳು ದಾರಿತಪ್ಪಿದ್ದಾರೆ ಎನ್ನುವುದಾದರೆ ಇವತ್ತಿನ ಸಮಾಜ ಕೂಡ ದಾgತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳೂ ನಾಚುವಷ್ಟರಮಟ್ಟಿಗೆ ವಿಶ್ವಾಸಘಾತುಕತನ ಎಸಗಿದವರು ಇದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ರಾಜಕೀಯ ನಾಯಕರನ್ನು ಮಾತ್ರ ದೂರಿ ನಾವು ನಮ್ಮ ಸಮಾಜದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ರಾಜಕೀಯ ಎನ್ನುವುದು ಶುಚಿಯಾಗಲು ಸಾಧ್ಯವಿಲ್ಲ.

ವಿಜಯ್ ಜೋಶಿ, ಕುಂದಾಪುರ

ಮುಂದೆ ಓದಿ

ವೈವಿಧ್ಯ
ಕೆನರಾ ಬ್ಯಾಂಕ್ ಎಳೆಯುತ್ತಿರುವ ಸಂಸ್ಕೃತಿಯ ತೇರು

ಅದೊಂದು ಯಾರೋ ಕೆತ್ತಿದ ಶಿಲ್ಪ. ಇಂದು ಕಾರಣಿಕದ ಶಕ್ತಿಯಾಗಿ ಭಕ್ತರ ಮನಸ್ಸನ್ನು ಆಳುತ್ತಿದೆ. ಲಕ್ಷಾಂತರ ಜನ ಆ ವಿಗ್ರಹಕ್ಕೆ ಶರಣೆಂದು ತಲೆಬಾಗಿದಾಗ ಕೆತ್ತಿದ ಶಿಲ್ಪಿಯ ಆನಂದ ಅಳೆಯಲು ಸಾಧ್ಯವೇ? ಶಿಲ್ಪ ಯಾವ ಕಾಲದದ್ದಾದರೂ ಸರಿ ಅದರಲ್ಲಿ ಶಿಲ್ಪಿಯ ಮನಸ್ಸು, ಭಾವನೆಗಳು ಅಚ್ಚಳಿಯದಂತೆ ಮೂಡಿರುತ್ತದೆ. ಆದರೆ ಇಂದು ಅಂತಹಾ ಮಹಾನ್ ಕರ್ಮವೀರರಾದರೂ ಯಾರಿದ್ದಾರೆ ಎನ್ನುವ ಪ್ರಶ್ನೆಯೇ? ಹಾಗಾದರೆ ಬನ್ನಿ ಕಾರ್ಕಳ ತಾಲೂಕಿನ ಮಿಯಾರಿಗೆ. ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ. ಇ. ಕಾಮತ್ ಕರಕುಶಲಕರ್ಮಿಗಳ ತರಬೇತಿ ಕೇಂದ್ರಕ್ಕೆ.




ಅದು ನಾಲ್ಕು ಎಕರೆ ಜಾಗವಿರುವ ಅಷ್ಟೊಂದು ಸಮತಟ್ಟಲ್ಲದ ಭೂಮಿ. ನಾಲ್ಕು ಕಟ್ಟಡ ಬಿಟ್ಟು ಉಳಿದಂತೆ ಹಸುರಿನಲ್ಲಿ ಮುಳುಗಿರುವ, ಅಂತೆಯೇ ಸೌಂದರ್ಯದಲ್ಲಿ ನಾನೇನು ಕಮ್ಮಿ ಎಂದು ತಲೆ ಬಾಗಿ ಅರಳಿರುವ ಹಳದಿ ಹೂಗಳು ಕಲಾರಸಿಕರನ್ನು ಮನಸಾರೆ ಸ್ವಾಗತಿಸುತ್ತ್ತವೆ. ಇನ್ನೂ ನಾವು ಹೊರಗೇ ಇದ್ದೇವೆ. ಈಗಾಗಲೇ ಮೈಮರೆತರೆ ಹೇಗೆ? ಇನ್ನು ಒಳಗಿನ ಸೌಂದರ್ಯವನ್ನು ಬಣ್ಣಿಸಲು ಸ್ವಲ್ಪ ಕಷ್ಟವೆ. ದೇಶದ ಪ್ರಮುಖಾತಿ ಪ್ರಮುಖ ವ್ಯಕ್ತಿಗಳೇ ಸೋತು ಶರಣಾಗಿ ನಿಜವಾದ ವಿದ್ಯೆ ಎಂದರೆ ಇದು. ಪ್ರಾಚೀನ ಕಲೆ, ಭಾರತೀಯ ಸಂಸ್ಕೃತಿಯ ಉಳಿವು ಆಗುತ್ತಿದೆ ಎಂದರೆ ಅದು ಮಿಯಾರಿನ ಈ ತರಭೇತಿ ಕೇಂದ್ರದಲ್ಲಿ ಎಂದು ಹಾಡಿ ಹೊಗಳಿದ್ದಾರೆ.

ಇಲ್ಲಿ ಮರ ಮತ್ತು ಶಿಲೆಯ ಕೆತ್ತನೆಗಳ ತರಬೇತಿ, ಲೋಹ ಶಿಲ್ಪ ಹಾಗೂ ಕುಂಭ ಕಲೆಯ ತರಬೇತಿಯನ್ನು ನೀಡಲಾಗುತ್ತದೆ. ಆಧುನಿಕ ಸೌಕರ್ಯವುಳ್ಳ ವಿದ್ಯಾರ್ಥಿನಿಲಯ, ಸಮಯಕ್ಕೆ ಸರಿಯಾಗಿ ಬಿಸಿ ಬಿಸಿಯಾದ ರುಚಿಕರ ಆಹಾರ, ಆಟದ ಸೌಲಭ್ಯ ಅಷ್ಟೇ ಅಲ್ಲ ಸ್ಪೋಕನ್ ಇಂಗ್ಲಿಷ್ ತರಗತಿ ಕೂಡ. ಅವರಿಗೆ ಕೆತ್ತನೆ ಕಾರ್ಯಕ್ಕೆ ಬೇಕಾದ ಪರಿಕರಗಳನ್ನೂ, ಸಮವಸ್ತ್ರವನ್ನೂ ಕರೀದಿಸುವ ಖರ್ಚೊಂದು ಬಿಟ್ಟರೆ ಇತರ ಎಲ್ಲವೂ ಸಂಪೂರ್ಣ ಉಚಿತ.


ಇದೊಂದು ರೀತಿಯಲ್ಲಿ ಗುರುಕುಲವಿದ್ದಂತೆ. ಒಂದೆಡೆ ಧೃಡವಾದ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳು. ಮತ್ತೊಂದೆಡೆ ವಿಶ್ವಾಸಕ್ಕೆ ಕಿಂಚಿತ್ತೂ ಅಡ್ಡಿಯಾಗದಂತೆ ಜ್ಞಾನವನ್ನೂ ಕೌಶಲ್ಯವನ್ನೂ ಧಾರೆಎರೆಯುವ ಗುರುಗಳು. ಇವರಿಬ್ಬರಿಗೂ ಸರಿಯಾದ ಸಂದರ್ಭಕ್ಕನುಗುಣವಾಗಿ ದಾರಿಯನ್ನು ತೋರಿಸುವ ನಿರ್ದೇಶಕರು. ಜೊತೆಗೆ ಇದಕ್ಕೆಲ್ಲಾ ಬೆನ್ನೆಲುಬಾಗಿರುವ, ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ಸಂಸ್ಥೆ ಕೆನರಾ ಬ್ಯಾಂಕ್. ಇವರುಗಳೆಲ್ಲರ ಸಮ್ಮಿಲನದಿಂದಾಗಿ ಮಿಯಾರಿನಲ್ಲಿ ಮಣ್ಣು, ಕಲ್ಲು, ಮರ ಹಾಗೂ ಲೋಹಗಳೂ ಮಾತನಾಡುವ ಶಕ್ತಿಯನ್ನು ಪಡೆದಿವೆ.

ಸುಮಾರು ಹದಿಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಇದುವರೆಗೆ 250 ವಿದ್ಯಾಥಿಗಳು ಶಿಲ್ಪಿಗಳಾಗಿ, ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ 74 ವಿದ್ಯಾರ್ಥಿಗಳು ಶೃದ್ದೆಯಿಂದ ಕಲೆಯನ್ನು ಅರಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಲಿಯುವ ಅವಕಾಶಕ್ಕೆ ಯಾವುದೇ ಬೇಧ ಭಾವವಾಗಲೀ, ಶೈಕ್ಷಣಿಕ ಅರ್ಹತೆಯಾಗಲೀ ಬೇಕಾಗಿಲ್ಲ. ಇಲ್ಲಿ ಆಸಕ್ತಿಯೇ ಅರ್ಹತೆ. ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸುವ ರೀತಿ ಭವಿಷ್ಯವೆಂಬ ಹೆದ್ದಾರಿಯನ್ನು ನಿರ್ಮಿಸುತ್ತದೆ. ಇದು ಮನಸ್ಸಿನಲ್ಲಿರುವ ಭಾವನೆಳು ಕೈಗೆ ಬಂದು ಮರವೋ, ಕಲ್ಲೋ, ಲೋಹದ ಮೇಲೆ ಜೀವವನ್ನು ತುಂಬುವ ಕ್ರಿಯೆ. ತಾಳ್ಮೆ ಹಾಗೂ ಏಕಾಗ್ರತೆಯಲ್ಲಿ ಸ್ವಲ್ಪ ಏರು ಪೇರಾದರೂ ಕೈಗೆ ಬಂದ ಜೀವ ಮಣ್ಣಿಗೆ ಬಾರದೆ ಹಾರಿಹೋಗಬಹುದು.

ಶಿಸ್ತು, ಸ್ವಚ್ಚತೆ, ವ್ಯಕ್ತಿತ್ವ ವಿಕಸನಗಳಿಗೂ ಇಲ್ಲಿ ಪ್ರಾಮುಖ್ಯತೆ ಇದೆ. ನಾಲ್ಕು ಎಕರೆ ಜಾಗದಲ್ಲಿ ಹರಡಿರುವ ಹಸಿರು ಚಪ್ಪರದ ಕರ್ತರು ಇಲ್ಲಿನ ವಿದ್ಯಾರ್ಥಿಗಳೆ. ಅದರ ನಿರ್ವಹಣೆ, ಸ್ವಚ್ಚತೆ ಅವರದೇ ಹೊಣೆ. ಪ್ರಾರ್ಥನೆ, ಭಜನೆ, ಟಿ.ವಿ ವೀಕ್ಷಣೆ, ಪ್ರತಿಭಾಪ್ರದರ್ಶನಕ್ಕೆ ಸೂಕ್ತ ವೇದಿಕೆಯ ಲಭ್ಯತೆ. ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ, ಹೊಸಹೊಳಲು ಇನ್ನಿತರ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ. ನೋಡಿದನ್ನು ಮಸ್ತಕದಲ್ಲೂ ಪುಸ್ತಕದಲ್ಲೂ ತುಂಬಿಸಿಕೊಂಡು ಕೊನೆಗೊಂದು ರೂಪ ಕೊಡುವ ಉದ್ದೇಶ ಈ ಪ್ರವಾಸದ್ದು.



ಕಲೆಯರಳುವ ಕೈ ನಿಮ್ಮದಾಗಬೇಕೆಂಬ ಬಯಕೆ ಹುಟ್ಟಿದೆಯೇ? ನಿಮ್ಮ ವಯಸ್ಸು 17ರಿಂದ 30ವರ್ಷವಾಗಿದ್ದರೆ ಇಂದೇ ಮಿಯಾರಿಗೊಮ್ಮೆ ಭೇಟಿ ನೀಡಿ. ಅಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೇ ರಚಿಸಿದ ಪ್ರಭುದ್ದ ಕಲಾಕೃತಿಗಳಿವೆ. ಎಲ್ಲವೂ ಏಕಶಿಲಾ ಆಕೃತಿಗಳೇ. ಒರಟು ಕಲ್ಲುಗಳೂ ಸಾವಿರೂಪಾಯಿಯ ಮೌಲ್ಯವನ್ನು ಪಡೆದಿವೆ. ನೂರಾರು ನಿರ್ಜೀವ ಭಾವನೆಗಳು ನಿಮ್ಮ ಆಗಮನವನ್ನೇ ನಿರೀಕ್ಷಿಸುತ್ತಿವೆ. ನಿಮ್ಮ ಮನಸ್ಸಿಗೆ ಹೊಂದಾಣಿಕೆಯಾಗುವ, ಸ್ನೇಹಿತರಾಗುವ ಕಲಾಕೃತಿಗಳು ಇದ್ದರೆ ನಿಗದಿತ ಬೆಲೆ ತೆತ್ತು ಅದನ್ನು ನಿಮ್ಮದಾಗಿಸಿಕೊಳ್ಳಲು ಅವಕಾಶವೂ ಕಲ್ಪಿಸಲಾಗಿದೆ.

ಬೊರ್ಗಲ್ಗುಡ್ಡೆ ಮಂಜುನಾಥ್


ಮುಂದೆ ಓದಿ

ವೈವಿಧ್ಯ
ಅವರದು ಏಕಾಂಗಿ ಬದುಕು. ಮನೆ ಸುಡುಗಾಡು. ಹಗಲು ರಾತ್ರಿಗಳ ಭೇದವಿಲ್ಲ. ದೆವ್ವ ಭೂತಗಳ ಹೆದರಿಕೆಯಿಲ್ಲ. ರಾತ್ರಿಯಾದರೂ ಸರಿ, ಸಂಬಂಧಿ ಸತ್ತ ದುಃಖದಲ್ಲಿರುವ ಜನರಿಗೆ ಹೆಣ ಸುಡಲು ಸಹಾಯ ಮಾಡುತ್ತಾರೆ. ಜನರು ಕೊಟ್ಟದನ್ನು ಸ್ವೀಕರಿಸಿ ಸಂತೋಷದಿಂದ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಅವರೇ ಮಸಣದ ಯೋಗಿ ರಮೇಶಣ್ಣ. ರಮೇಶಣ್ಣ ಮೂಲತಃ ಉಡುಪಿ ಅಂಬಲ್ಪಾಡಿಯವರು. ಆರಂಭದಲ್ಲಿ ಪ್ರಿಂಟಿಂಗ್ ಪ್ರೆಸ್, ಗ್ಯಾರೇಜು, ನಂತರ ಶಟರ್ ಗೆ ಗ್ರೀಸ್ ಹಾಕುವ ಕಾಯಕದಲ್ಲಿ ತೊಡಗಿದ್ದರು. ಉಡುಪಿ ಕುಂದಾಪುರದಲ್ಲಿ ತಮ್ಮ ವೃತ್ತಿಯನ್ನು ನಡೆಸುತ್ತಿದ್ದರು. ಆಗ ನೀವು ಪುತ್ತೂರು, ಬೆಳ್ತಂಗಡಿಯಾಚೆಗೂ ಹೋಗ ಬಾರದೇಕೆ? ಎಂದು ಗಿರಾಕಿಯೊಬ್ಬರು ಸಲಹೆಯನ್ನಿತ್ತರು. ಹಾಗೆ ಬೆಳ್ತಂಗಡಿಗೆ ಬಂದೆ ಎನ್ನುತ್ತಾರೆ ಅವರು.




ಬೆಳ್ತಂಗಡಿಗೆ ಬಂದ ಮೊದಲು ಕೆಲಸಕ್ಕಾಗಿ ಅಂಗಡಿ, ಮನೆ- ಮನೆ ಸುತ್ತಾಡಿದರು. ರಾತ್ರಿ ಸಮಯದಲ್ಲಿ ಅಂಗಡಿಯ ಹೊರಗೆ ಅಥವಾ ಬಸ್ ಸ್ಟ್ಯಾಂಡಿನಲ್ಲಿ ಕಾಲ ಕಳೆಯುತ್ತಿದ್ದರು. ಎಷ್ಟು ದಿನ ಅಂತ ಬೀದಿಯಲ್ಲಿ ಮಲಗುವುದು. ತನಗೂ ಬೆಚ್ಚನೆಯ ಸೂರೊಂದು ಬೇಕು ಅನ್ನಿಸ ತೊಡಗಿತು. ಆದರೆ ಸರಿಯಾದ ಕಾಯಕವಿಲ್ಲ, ಕೈಯಲ್ಲಿ ಹಣವಿಲ್ಲ. ಹೀಗೆ ಚಿಂತೆಯಲ್ಲಿ ಮುಳುಗಿದ್ದ ಒಂಟಿ ಜೀವಕ್ಕೆ ತೆರೆದಿದ್ದ ಮಸಣದ ಬಾಗಿಲು ಕಂಡಿತು. ಸಿಕ್ಕ ಸೂರು ಸುಡುಗಾಡಾದರೂ ಸ್ವರ್ಗವೆಂದು ಭಾವಿಸಿದರು. ಹೀಗೆ ಹಲವು ವರ್ಷದಿಂದ ಬೆಳ್ತಂಗಡಿಯ ಸ್ಮಶಾನದಲ್ಲಿ ವಾಸವಾಗಿದ್ದಾರೆ


ಇವರೇನು ಅಶಿಕ್ಷಿತರಲ್ಲ. ಎಂಟನೇ ತರಗತಿಯವರೆಗೆ ಓದಿದ್ದಾರೆ. ಇಂಗ್ಲೀಷನ್ನೂ ಓದಬಲ್ಲರು. ಭವಿಷ್ಯದ ಬಗ್ಗೆ ಉತ್ತಮ ಕನಸನ್ನು ಹೊತ್ತಿದ್ದರು. ಆದರೆ ದುರ್ದೈವ, ಕುಟುಂಬ ಕಲಹದಿಂದ ಒಂಟಿಯಾದೆ ಎನ್ನುವ ಬೇಸರದ ಮಾತು ಅವರದ್ದು. ಅಲ್ಲಿಗೆ ಬಂದ ಮೊದ ಮೊದಲು ರಾತ್ರಿಯಲ್ಲಿ ದೆವ್ವಗಳು ಮಾತಾಡುತ್ತಿರುವಂತೆ ಶಬ್ಧಗಳು ಕೇಳಿ ಭಯವಾಗ್ತಾ ಇತ್ತಂತೆ. ಆದರೆ ಈಶ್ವರ ದೇವರ ಫೋಟೋವೊಂದನ್ನು ಮಲಗುವ ಕೋಣೆಯಲ್ಲಿಟ್ಟ ನಂತರ ಭಯವೆಲ್ಲಾ ಮಾಯ.



ಈತನ ಸ್ಮಶಾನ ವಾಸ್ತವ್ಯದ ನಂತರ ಸ್ಮಶಾನವು ಸ್ವಚ್ಚವಾಗಿ ಕಾಣುತ್ತಿದೆ. ಸ್ಮಶಾನವೆಂದರೆ ಹೆದರುತ್ತಿದ್ದವರು ರಮೇಶಣ್ಣನನ್ನು ಕಂಡು ಧೈರ್ಯ ಬಂದಿದೆ ಎನ್ನುತ್ತಾರೆ ಊರಿನ ಜನ. ಇವರು ಹೊಟ್ಟೆಪಾಡಿಗಾಗಿ ಯಾರಿಗೂ ಹೊರೆಯಾಗಿಲ್ಲ. ತಮಗೆ ಬೇಕಾದ ಆಹಾರವನ್ನೂ ಸ್ಮಶಾನದಲ್ಲೇ ಬೇಯಿಸಿ ತಿನ್ನುತ್ತಾರೆ. ಗಾರೆ ಕೆಲಸ, ಸೋಫಾ ರಿಪೇರಿ, ಶಟರ್ ಗೆ ಗ್ರೀಸ್ ಹಾಕಿ ಕೊಡುವುದು ಹೀಗೆ ಯಾವುದಾದರೂ ಕೆಲಸವನ್ನು ಮಾಡುತ್ತಾ ಇರುತ್ತಾರೆ.




ತನಗೂ ಸಂಸಾರ ಬೇಕೆನಿಸುತ್ತದೆ. ಸ್ಮಶಾನ ಬಿಟ್ಟು ಬಂದರೆ ಹೆಣ್ಣು ಕೊಡ್ತೇವೆ ಅಂದವರೂ ಇದ್ದಾರಂತೆ. ಆದರೆ ಕೈಯಲ್ಲಿ ಹಣ ಬಲವಿಲ್ಲದಿದ್ದರೆ ಮದುವೆಯಾಗಿಯಾದರೂ ಏನು ಪ್ರಯೋಜನವೆಂದುಕೊಂಡು ದಿನ ಮುಂದೂಡುತ್ತಿದ್ದಾರೆ ಮಸಣದ ಯೋಗಿ ರಮೇಶಣ್ಣ.

ಬೋರ್ಗಲ್ ಗುಡ್ಡೆ ಮಂಜುನಾಥ್

ಮುಂದೆ ಓದಿ

ರಾಜ್ಯ - ರಾಷ್ಟ್ರ
ಸಾಗರ: ಸಾಗರದ ನಿಧಿ ಪ್ರಕಾಶನ ನೀಡುವ 2010ರ ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಯು ಡಾ.ಮೋಹನ ಕುಂಟಾರು ಅವರ `ಯಕ್ಷಗಾನ ಆಹಾರ್ಯ ' ಗ್ರಂಥಕ್ಕೆ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 26ರಂದು ಸಾಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆಯಲಿದೆ. ರಂಗತಜ್ಞ ಡಾ.ಗುರುರಾವ್ ಬಾಪಟ್ ಗ್ರಂಥ ಪರಿಚಯ ಮಾಡಲಿದ್ದಾರೆ. ಡಾ.ನಾ.ಡಿ.ಸೋಜ ಅಧ್ಯಕ್ಷತೆ ವಹಿಸುವರು.






ಡಾ.ಮೋಹನ ಕುಂಟಾರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಪ್ರಸಾರಾಂಗದ ನಿರ್ದೇಶಕರು. ಗಡಿನಾಡ ಕಾಸರಗೋಡಿನವರಾದ ಇವರು ಹಲವು ಶೈಕ್ಷಣಿಕ ಮತ್ತು ಅಧ್ಯಯನ ಮಂಡಳಿಗಳಲ್ಲಿ ಸದಸ್ಯರಾಗಿ ಅನುಭವ ಪಡೆದಿದ್ದಾರೆ. ಹಲವು ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.


ಯಕ್ಷಗಾನ ವಾಚಿಕಾಧ್ಯಯನದಂತಹ ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಹಲವು ಗ್ರಂಥಗಳನ್ನು ಅನುವಾದಿಸಿ ಸಂಪಾದಿಸಿ ಪ್ರಕಟಿಸಿದ್ದಾರೆ. ಯಕ್ಷಗಾನ ಆಯಾರ್ಯ ಗ್ರಂಥವು ತೆಂಕುತಿಟ್ಟಿನ ಯಕ್ಷಗಾನ ವೇಷ ಭೂಷಣ ಮತ್ತು ಮುಖವರ್ಣಿಕೆ ಕುರಿತಾದ ಒಂದು ಅಧ್ಯಯನಶೀಲ ಗ್ರಂಥ.




ಯಕ್ಷಗಾನ ರಂಗನಟನೊಬ್ಬನ ಹೆಸರಿನಲ್ಲಿ ನೀಡುತ್ತಿರುವ ಮೊಟ್ಟಮೊದಲ ಗ್ರಂಥಪ್ರಶಸ್ತಿ ಇದಾಗಿದ್ದು ಐದುಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ, ಫಲಕಗಳನ್ನೊಳಗೊಂಡಿದೆ ಎಂದು ಸಾಗರದ ನಿಧಿ ಪ್ರಕಾಶನದ ಡಾ.ಜಿ.ಎಸ್.ಭಟ್ಟ ತಿಳಿಸಿದ್ದಾರೆ.

ಮುಂದೆ ಓದಿ
10:46 PM

ಇದು ಮಾದರಿಯಾಗಲಿ...

Posted by ekanasu

ವಿಶೇಷ ವರದಿ




ಕಳೆದ ವರ್ಷ ಬರಪೂರ ಮಳೆಯಿದ್ದರೂ ರಾಜ್ಯದಲ್ಲಿ ಕೊನೆ ಕೊನೆಗೆ ವಿದ್ಯುತ್ ವ್ಯತ್ಯಯ ಕಂಡುಬರುತ್ತಿತ್ತು. ಇಲಾಖೆಯ ಕಣ್ಣಾಮುಚ್ಚಾಲೆ ನೀತಿಯಿಂದಾಗಿ ರೈತರು, ಕೃಷಿಕರು ಬವಣೆ ಪಟ್ಟಿದ್ದಾರೆ. ನೆರೆಯ ಕೇರಳರಾಜ್ಯದಲ್ಲಿ `ಗಾಳಿ ಯಂತ್ರದ' ಮೂಲಕ ನೀರೆತ್ತುವ ವ್ಯವಸ್ಥೆ ಜಾರಿಯಲ್ಲಿದೆ. ಸಮುದಾಯಗಳ ಕುಡಿಯುವ ನೀರಿನ ವ್ಯವಸ್ಥೆಗೆ ಗಾಳಿ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ನೀರೆತ್ತಲು ಕರೆಂಟ್ ಅವಶ್ಯಕತೆಯಿಲ್ಲ. ತೈಲ ಬೆಲೆಯೇರಿಕೆಯಾದರೂ ಭಯ ಪಡಬೇಕಾಗಿಲ್ಲ. ನೈಸರ್ಗಿಕ ಗಾಳಿಯ ಸಹಾಯದಿಂದಲೇ ತಿರುಗುವ ಈ ಚಕ್ರಗಳು ಪಂಪ್ ಚಾಲೂ ಆಗುವಂತೆ ಮಾಡುತ್ತದೆ. ತತ್ ಪರಿಣಾಮ ಬಾವಿಯಲ್ಲಿರುವ ನೀರು ಮೇಲಕ್ಕೆತ್ತಲ್ಪಡುತ್ತದೆ.

ಕಾಸರಗೋಡು ಸೇರಿದಂತೆ ಕೇರಳದ ಹಲವೆಡೆಗಳಲ್ಲಿ, ಇಂತಹ ಗಾಳಿಯಂತ್ರ ಅಳವಡಿಸಲಾಗಿದೆ. ಸಮುದಾಯಗಳ ಪ್ರಯೋಜನಕ್ಕಾಗಿ ಈ ವ್ಯವಸ್ಥೆ ಮಾಡಿದ್ದಾರೆ. ಮೈದಾನ ಪ್ರದೇಶದಲ್ಲಿರುವ ಶಾಲಾ ಬಾವಿಗಳಿಗೆ, ಸಾರ್ವಜನಿಕ ಪ್ರದೇಶಗಳಲ್ಲಿರುವ ಬಾವಿಗಳಿಗೆ ಇದನ್ನು ಅಳವಡಿಸಲಾಗಿದೆ. ಗಾಳಿಯಂತ್ರದಿಂದ ಎತ್ತಲ್ಪಟ್ಟ ನೀರು ಶೇಖರಣೆಗೆ ಎತ್ತರದಲ್ಲಿ ಟ್ಯಾಂಕ್ ಒಂದನ್ನು ನಿರ್ಮಿಸಲಾಗುತ್ತದೆ. ಗಾಳಿಯ ವೇಘಕ್ಕೆ ಗಾಳಿಯಂತ್ರದ ರೆಕ್ಕೆ ಅಳವಡಿಸಲ್ಪಟ್ಟ ಗಾಲಿ ತಿರುಗುತ್ತದೆ. ಈ ಸಂದರ್ಭದಲ್ಲಿ ನೀರು ಮೇಲೆತ್ತಲ್ಪಡುತ್ತದೆ. ಬಿರುಗಾಳಿಯಂತಹ ಸಂದರ್ಭದಲ್ಲಿ ಚಕ್ರ ತಿರುಗದಂತೆ `ಲಾಕಿಂಗ್' ವ್ಯವಸ್ಥೆಯೂ ಇದೆ.

ಕೇರಳದ ವಿದ್ಯುತ್, ರಸ್ತೆಗಳಿಗೆ ಸಾಟಿಯಿಲ್ಲ. ಅಲ್ಲಿನ ಸರಕಾರಕ್ಕೆ ಅದನ್ನೆಲ್ಲಾ ನಿರ್ವಹಣೆ ಮಾಡಲು ಸಾಧ್ಯವಾಗಿದೆ. ಹೆಚ್ಚುವರಿಯಾಗಿ ಇಂತಹ ಗಾಳಿಯಂತ್ರಗಳ ಮೂಲಕ ನೀರೆತ್ತುವ ಕಾರ್ಯ, ಸೇರಿದಂತೆ ಅನೇಕ ಜನಮೆಚ್ಚುವ ಕಾರ್ಯ ನಿರ್ವಹಿಸಿದೆ. ಆದರೆ ನಮ್ಮ ಘನ ಸರಕಾರಗಳಿಗೆ ಈ ಬಗ್ಗೆ ಯಾವುದೇ ಯೋಚನೆಯಿಲ್ಲ.ಇಲ್ಲಿನ ಪ್ರಾಕೃತಿಕ ವ್ಯವಸ್ಥೆಗಳು ಸರಿಸುಮಾರು ನೆರೆಯ ಕೇರಳದಲ್ಲಿರುವಂತಿದೆ. ಸಾಕಷ್ಟು ಗಾಳಿ ಬೀಸುವ ಪ್ರದೇಶ, ಪರಿಸರ ನಮಗಿಲ್ಲೂ ಕಾಣಸಿಗುತ್ತದೆ. ಎತ್ತರ ಪ್ರದೇಶದಲ್ಲಿರುವ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಗ್ರಾಮ ಪಂಚಾಯತ್ ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೀಗೆ ಸರಕಾರಿ ಸ್ವಾಮ್ಯದಲ್ಲಿರುವ ಅನೇಕ ವ್ಯವಸ್ಥೆಗಳು ನಮ್ಮ ಜಿಲ್ಲೆಯಲ್ಲಿಯೂ ಇವೆ. ಇಲ್ಲೂ ಇಂತಹ ಗಾಳಿಯಂತ್ರಗಳ ಮೂಲಕ ನೀರೆತ್ತುವ ವ್ಯವಸ್ಥೆ ಕೈಗೊಳ್ಳಬಹುದು. ಇದರಿಂದಾಗಿ ಸರಕಾರಕ್ಕೆ ವಿದ್ಯುತ್ ಬಿಲ್, ಇತರೆ ಖರ್ಚುಗಳು ಉಳಿತಾಯವಾದಂತಾಗುತ್ತದೆ.

ಗಂಟೆಗೆ 8ಕಿ.ಮೀ ವೇಗದಲ್ಲಿ ಬೀಸುವ ಗಾಳಿಯಿಂದ ಈ ಯಂತ್ರ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ. 12ರಿಂದ 15ಕಿ.ಮೀ ವೇಗದ ಗಾಳಿಯಲ್ಲಿ ಮತ್ತೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ದಿನಕ್ಕೆ 6ಸಾವಿರ ಲೀಟರ್ ಗಳಷ್ಟು ಪ್ರಮಾಣದಲ್ಲಿ ನೀರೆತ್ತಬಲ್ಲ ಈ ಯಂತ್ರವನ್ನು ತೆರೆದ ಬಾವಿ ಹಾಗೂ ಕೊಳವೆ ಬಾವಿಗಳಿಗೂ ಯಶಸ್ವಿಯಾಗಿ ಅಳವಡಿಸಬಹುದಾಗಿದೆ.ಕರ್ನಾಟಕದ ಕರೆಂಟ್ ನಂಬುವಂತಿಲ್ಲ... ಇಂದಿನ ತೈಲ ಬೆಲೆಯಲ್ಲಿ ಪಂಪ್ ನಡೆಸುವಂತಿಲ್ಲ ಎಂಬ ಪ್ರಸಕ್ತ ಸನ್ನಿವೇಶದಲ್ಲಿ ಗಾಳಿಯಂತ್ರಗಳತ್ತ ನಮ್ಮ ಯೋಚನೆ ಹೊರಳಬೇಕಾಗಿದೆ. ಅತ್ಯಂತ ಸುಲಭ ನಿರ್ವಹಣೆಯಲ್ಲಿ, ಕಡಿಮೆ ಖರ್ಚಿನಲ್ಲಿ ಈ ಯಂತ್ರದ ಮೂಲಕ ನೀರೆತ್ತಬಹುದಾಗಿದೆ. ಪರಿಸರ ಸ್ನೇಹಿ ಇಂತಹ ಯಂತ್ರಗಳ ಆವಿಷ್ಕಾರ ಮತ್ತಷ್ಟು ಆಗಬೇಕಾಗಿದೆ.

ಮುಂದೆ ಓದಿ
10:24 PM

ಜಲಲ ಜಲಧಾರೆ...

Posted by ekanasu

ವಿಶೇಷ ವರದಿ


ಮಳೆಗಾಲ ಬಂತೆಂದರೆ ಸಾಕು... ಇಷ್ಟೂ ದಿನ ಮೌನವಾಗಿದ್ದ ಜಲಪಾತಗಳೆಲ್ಲವೂ ಭೋರ್ಘರೆವ ಸದ್ದಿನೊಂದಿಗೆ ಆರ್ಭಟಿಸತೊಡಗುತ್ತವೆ. ಎದೆಗಾರಿಕೆ ಇದ್ದವರು, ಪ್ರಕೃತಿ ಸವಿಯಲಿಚ್ಛಿಸುವವರು ಇಂತಹ ಸೌಂದರ್ಯ ವೀಕ್ಷಿಸಲು ಎಷ್ಟೇ ಕಷ್ಟವಾದರೂ ಸೈ ಎಂದು ಹೊರಟೇ ಬಿಡುತ್ತಾರೆ. ಈ ಕನಸು.ಕಾಂ. ಕೆಲವೊಂದು ಜಲಲ ಜಲಧಾರೆಯ ಕುರಿತು ನಮ್ಮ ಓದುಗರಿಗೆ ತಿಳಿಯಪಡಿಸುತ್ತಿದೆ. ನೀವು ನಿಮ್ಮ ಅನುಭವ ಹಂಚಿಕೊಳ್ಳಬಹುದು.




`ಇಳಿದು ಬಾ ತಾಯೆ ಇಳಿದು ಬಾ...
ಬಂಡೆಯ ಮೇಲಿಂದ ಧುಮುಕುತಾ..
ಬೆಳ್ನೊರೆಗಳ ಸೂಸುತ್ತಾ... ಕುಣಿದು ಬಾ ತಾಯೆ ಕುಣಿದು ಬಾ..

ಹೀಗೆ ಜಲರಾಶಿಯ ವರ್ಣನೆಯನ್ನು ಕವಿಗಳು ಹುಚ್ಚೆದ್ದು ವರ್ಣಿಸಿದ್ದಾರೆ... ಕಾವ್ಯ ಕಟ್ಟಿ ಹಾಡಿದ್ದಾರೆ. ಸಾಹಿತಿಗಳು ಸಾಹಿತ್ಯ ರಚನೆಗಳ ಮೂಲಕ ಭವ್ಯವಾಗಿ ಚಿತ್ರಿಸಿದ್ದಾರೆ.
ಹರಿಯುವ ನೀರನ್ನು ತೋರಿಸಿದರೆ ಎಂಥಹವರೂ ಒಂದು ಕ್ಷಣ ಕಾಲ ಮೌನರಾಗುತ್ತಾರೆ. ಅದರ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಜಲಲ ಜಲರಾಶಿಗೆ ಮನ ಸೋಲದವರು ಬಹು ಕಡಿಮೆಯೆಂದೇ ಹೇಳಬಹುದಾಗಿದೆ.
ನೀರಿಗೆ ಅಂತಹ ಒಂದು ಅದ್ಭುತ ಶಕ್ತಿಯಿದೆ.
ಸೂರ್ಯ ನೆತ್ತಿಗೆ ಬಂದರೂ ಸೂರ್ಯ ರಶ್ಮಿ ಇನ್ನೂ ನೆಲತಲುಪದಷ್ಟು ದಟ್ಟವಾದ ಕಾಡಿನಲ್ಲಿ ಜುಳು ಜುಳು ಸದ್ದುಮಾಡುತ್ತಾ ಹರಿಯುವ ನೀರನ್ನು ಮೋಡಿ ಮಾಡುವ ಜಲರಾಶಿಯನ್ನು ನೋಡುವುದೇ ಒಂದು ಅಂದ.
ಎಲ್ಲೋ ಬೆಟ್ಟದಲ್ಲಿ ಹನಿ ಹನಿಯಾಗಿ ಜಿನುಗಿ ತದನಂತರ ನೀರ ಹನಿಗಳು ಒಂದೊಂದು ಸೇರಿ ಝರಿಯಾಗಿ ಅದು ಜುಳು ಜುಳು ಸದ್ದುಮಾಡುತ್ತಾ ನೆತ್ತಿಯ ಮೇಲಿಂದ ಧುಮುಕಿ ಮತ್ತೆ ವಯ್ಯಾರದಿಂದ ಮೈ ಬಳುಕಿಸಿ ಇಬ್ಬದಿಯ ತೋಯಿಸಿ ಝರಿಗಿಡಗಳ ಮೇಲೆಲ್ಲಾ ಸಣ್ಣ ಸಣ್ಣ ಹನಿಗಳ `ಸಿಂಚನ'ಮಾಡಿ ಹಿಗ್ಗುತ್ತಾ ಸಾಗುವುದನ್ನು ನೋಡುವುದೇ ಒಂದು ಚೆಂದ.
ಸ್ಪಟಿಕ ಶುದ್ಧ ಈ ನೀರು ತಣ್ಣನೆಯ ಅನುಭವ ನೀಡುವಾಗ ಭಾವಪುಳಕಿತರಾಗುವುದರಲ್ಲಿ ಯಾವೊಂದು ಸಂದೇಹವೂ ಇಲ್ಲ. ಈ ಪರಿಯಾಗಿ ಜಲರಾಶಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ತನ್ನತ್ತ ಸೆಳೆಯುತ್ತದೆ.
ಮಳೆಗಾಲದಲ್ಲಿ ಇವೆಲ್ಲಾ ಮೈದುಂಬಿ ಹರಿಯಲಾರಂಭಿಸುತ್ತವೆ. ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾ ಅಂದ ಚೆಂದವನ್ನು ಹೆಚ್ಚಿಸುತ್ತಾ ವಯ್ಯಾರದಿಂದ ಸಾಗುತ್ತವೆ.
ಒಂದೊಮ್ಮೆ ಸೌಮ್ಯವಾಗಿ ಮತ್ತೆ ರೌದ್ರವಾಗಿ ನರ್ತಿಸಲಾರಂಭಿಸುತ್ತವೆ. ರುದ್ರ ರಮಣೀಯ ದೃಶ್ಯಗಳನ್ನು ನಿರ್ಮಾಣ ಮಾಡುತ್ತಾ ಕಣ್ಣಿಗೆ ಹಬ್ಬ ಉಣಬಡಿಸುತ್ತವೆ. ಹೀಗೆ ಸಾಗುವ ಈ ಜಲಲ ಜಲಧಾರೆ ಕೊನೆಗೆ ಸಾಗರ ಸೇರುತ್ತದೆ. ಈ ನಡುವೆ ಹಲವು ಸಂದರ್ಭಗಳಲ್ಲಿ ಇವು ತನ್ನ ಅಬ್ಬರಗಳನ್ನು ಏರಿಸಿ, ಸೌಮ್ಯ ಭಾವವನ್ನು ಪ್ರದರ್ಶಿಸಿ ಸಾಗುತ್ತಿರುತ್ತವೆ.

ಜಲಪಾತ ವೀಕ್ಷಣೆ ಒಂದು ರೋಚಕ ಅನುಭವ. ಆದರೆ ಇಂತಹ ಸೌಂದರ್ಯ ರಾಶಿಯನ್ನು ನೋಡುವ ಹೆಸರಿನಲ್ಲಿ `ಮೋಜಿನ ಮಂದ ಬೆಳಕಿನಲ್ಲಿ ಜಲಪಾತಗಳ ಐಸಿರಿ' ಎಂಬಂತಾಗುತ್ತಿದೆ. ಇದು ಆತಂಕದ ವಿಚಾರ.ಜಲಪಾತಗಳ ವೀಕ್ಷಣೆಗೆ ತೆರಳುವವರು ಪ್ರಕೃತಿ ಸೌಂದರ್ಯಕ್ಕೆ ಮಾರಕವಾಗುತ್ತಿದ್ದಾರೆ. ಕುಡಿತ ಕುಣಿತಗಳ ಸದ್ದು ಸುಂದರ ಪ್ರಕೃತಿಯನ್ನು ಬೆಚ್ಚಿ ಬೀಳಿಸುವಂತಾಗುತ್ತಿದೆ. ಇಷ್ಟೇ ಅಲ್ಲದೆ ವಾಣಿಜ್ಯೋದ್ಯಮಿಗಳ ದೃಷ್ಠಿ ಇದೀಗ ಈ ಜಲಧಾರೆಗಳತ್ತ ಹೊರಳತೊಡಗಿದೆ. ಕಿರು ಜಲ ವಿದ್ಯುತ್ ಯೋಜನೆ ಸ್ಥಾಪನೆಯ ಭಯ ಈ ಜಲ ಧಾರೆಗಳಿಗೆ ತಟ್ಟಲಾರಂಭಿಸಿದೆ. ಹಲವೆಡೆಗಳಲ್ಲಿ ಕಿರು ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗಳಿಗಾಗಿ ಪ್ರಕೃತಿಯ ಗರ್ಭ ಬಗೆಯತೊಡಗಿದೆ. ಇವುಗಳಿಂದಾಗಿ ಸುಂದರ ಪ್ರಕೃತಿ ಇಂದು ತನ್ನ ಸೌಂದರ್ಯ ಕಳಕೊಳ್ಳುವ ಭೀತಿಯನ್ನೆದುರಿಸುತ್ತಿದೆ.



ಜಲಪಾತ
ಇದೊಂದು ಸುಂದರ ದೃಶ್ಯ ಕಾವ್ಯ
ಜಲಪಾತದ ನಿಜ ಸವಿ ಸವಿ ಸವಿಯಲು
ಚಾರಣ ಮೂಲಕ ಸಾಗಬೇಕು...
ಅದಾಗ ಸೃಷ್ಟಿ ಸೌಂದರ್ಯದ ಪ್ರತೀಕವಾದ ಪ್ರಕೃತಿಯ ಅನಾವರಣ. ತುಂತುರು ಹನಿಗಳ ಸಿಂಚನ... ಮೈ ಮನ ಪುಳಕ. ಜಲರಾಶಿಯ ಸೌಂದರ್ಯ ಎಂತಹವರನ್ನೂ ಮೋಡಿ ಮಾಡದಿರದು.


ಮಳೆಗಾಳ ಬಂತೆಂದರೆ ಜಲಧಾರೆಗೆ ಯೌವನದ ಸ್ಪೂರ್ತಿ...! ಬಚ್ಚಿಟ್ಟುಕೊಂಡಿದ್ದ ಜಲಧಾರೆಗೆ ಯೌವನದ ಸೊಕ್ಕು...!
ಜುಳು ಜುಳು ಸದ್ದು ಅಟ್ಟಹಾಸದ ಭೋರ್ಗರೆತ...! ಇದಕ್ಕೆ ಹಕ್ಕಿಗಳ ಇಂಚರ ನಾದಗಳ ಸಾಥ್.. ಹೀಗೆ ಜಲಪಾತದ ನೈಜ ಸೌಂದರ್ಯ ಎಂತಹವರ ಮನವನ್ನೂ ಮೋಡಿಮಾಡದಿರದು...

ಕೆಲವೊಂದು ಜಲಪಾತಗಳಿಗೆ ಅತ್ಯಲ್ಪ ಆಯಸ್ಸು
ಪ್ರಕೃತಿ ಇದೇ ಒಂದು ಸೃಷ್ಟಿ ಕ್ರಿಯೆಯ ಅದ್ಭುತ. ಇದರೊಳಗೆ ಇನ್ನೇನೇನೂ ವಿಶೇಷಗಳು!... ಜುಳು ಜುಳು ಸದ್ದುಮಾಡುತ್ತಾ ಸಾಗುವ ಜಲಪಾತಗಳು, ತೊರೆಗಳು, ನದಿಗಳು ಹೀಗೆ ಇನ್ನನೇಕ.
ಇವು ಮಿನಿ ಜಲಪಾತಗಳು. ಇವುಗಳ ಆಯಸ್ಸು ಬಹಳ ಕಡಿಮೆ. ಮಿನಿ ಜಲಪಾತಗಳ ಆಯಸ್ಸು ಅತ್ಯಲ್ಪ. ಮಳೆಗಾಲ ಬಂತೆಂದರೆ ಈ ಜಲಪಾತಗಳು ಹುಟ್ಟುತ್ತವೆ. ತಮ್ಮ ವೈಭವವನ್ನು ಸೃಷ್ಟಿಸುತ್ತವೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ಜಲಪಾತ ಒಂದು ಸಂತಸವನ್ನು ಮೂಡಿಸುತ್ತವೆ. ಮನಕ್ಕೆ ಉಲ್ಲಾಸ ನೀಡುತ್ತವೆ. ನಮ್ಮ ನಿಮ್ಮೆಲ್ಲರ ಮನೆಗಳ ಹಿಂದೆಯಿರುವ ಗುಡ್ಡದಿಂದ ಬೀಳುವ ಜಲಧಾರೆಗಳೋ... ಅಥವಾ ರಸ್ತೆ ಬದಿಗಳಲ್ಲಿರುವ ಗುಡ್ಡಗಳಿಂದ ಹರಿಯವ ನೀರ ಧಾರೆಯೋ ಇವೆಲ್ಲವೂ ಮಳೆಗಾಲದಲ್ಲಷ್ಟೇ ನಮಗೆ ಗೋಚರಿಸಲು ಸಾಧ್ಯ. ಅಂತೂ ಇವೂ ಒಂದು ಸುಂದರ ಭಾವನೆಗಳ ಸೃಷ್ಟಿಗೆ ಕಾರಣವಾಗುತ್ತವೆ.


ದಿಡುಪೆ ಜಲಪಾತ
ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತಾವಳಿಗಳು... ನಿಸಗರ್ಾರಾಧಕರು ಹಾಗೂ ಚಾರಣ ಪ್ರಿಯರಿಗೆ ಮುದ ನೀಡುವ ತಾಣಗಳು. ಸುಂದರ ಕರಾವಳಿ. ಪ್ರಕೃತಿ ರಮ್ಯ ವನಸಿರಿ. ತುಂಬಿ ಹರಿಯುವ ನದಿ, ಧುಮ್ಮಿಕ್ಕಿ ಹರಿಯುವ ಝರಿ... ಜಲಪಾತಗಳು. ಅಬ್ಬರಿಸುವ ಅರಬ್ಬಿ ಸಮುದ್ರ. ಬೆಟ್ಟ ಗುಡ್ಡ ಬಂಡೆ ಐತಿಹಾಸಿಕ ತಾಣಗಳು. ಹೀಗೆ ಪ್ರವಾಸಿಗರ ಆಕರ್ಷಣೆಯ ವಸ್ತು ವೈವಿಧ್ಯಗಳು ನೂರಾರು. ನಿಸರ್ಗ ನಿರ್ಮಿತ ಝರಿಗಳು ತಮ್ಮ ಹರಿಯುವ ಗತಿಯಲ್ಲಿ ಪ್ರಪಾತಗಳನ್ನು ಸೃಷ್ಟಿಸಿ ಜಲಪಾತಗಳಾಗಿ ಧುಮುಕಿ ನದಿಗಳಾಗಿ ಹರಿದು ಸಮುದ್ರ ಸೇರುತ್ತವೆ. ಬೆಟ್ಟ ಗುಡ್ಡ ದಟ್ಟಕಾಡು ಭಾರಿ ಬಂಡೆಗಳೆಡೆಯಲ್ಲಿ ಮೈದಳೆಯುವ ಜಲಪಾತಗಳು ನಿಸರ್ಗ ಪ್ರಿಯರನ್ನು ತನ್ನೆಡೆಗೆ ಆಕರ್ಷಿಸಿ ಅವರ ಮನೋಲ್ಲಾಸಕ್ಕೆ ಕಾರಣವಾಗುತ್ತಿವೆ.

ಜಿಲ್ಲೆಯಲ್ಲಿ ಇಂತಹ ನೂರಾರು ಸಣ್ಣ ಪುಟ್ಟ ದೊಡ್ಡ ಜಲಪಾತಗಳು ಪ್ರವಾಸಿಗರ ತನು ಮನಗಳನ್ನು ಹಸನಾಗಿ ಉಲ್ಲಸಿತರನ್ನಾಗಿಸುತ್ತದೆ. ಎಲ್ಲೋ ಹುಟ್ಟಿ ಅಂಕು ಡೊಂಕಾಗಿ ಮುಂದುವರಿದು ಬಂಡೆಯಿಂದ ಪ್ರಪಾತಕ್ಕೆ ಧುಮುಕಿ ರಮ್ಯಾದ್ಭುತ ನೋಟ ಸೃಷ್ಟಿಸುತ್ತವೆ. ಕ್ಷಣ ಕ್ಷಣಕ್ಕೂ ವೈವಿಧ್ಯತೆಯಿಂದ ನೂರಾರು ಅಡಿಗಳಷ್ಟು ಪಾತಾಳಕ್ಕೆ ಧುಮ್ಮಿಕ್ಕುವ ನಿಸರ್ಗ ವೈಭವವನ್ನು ಕಣ್ಣಾರೆ ಕಂಡು ಆಸ್ವಾದಿಸಬೇಕು. ನೀರು ಧಾರೆಯಾಗಿ ಹರಿಯುವ ಆಹ್ಲಾದಕರ ಸಂತೋಷವನ್ನು ಕಣ್ತುಂಬ ನೋಡಿಯೇ ಅನುಭವಿಸಬೇಕು. ಜಲಪಾತ ಸೃಷ್ಟಿಸಿದ ಅದ್ಭುತ ಸೌಂದರ್ಯಕ್ಕೆ ಮನದಣಿಯೆ ಸುಖಾನುಭವ ಸವಿಯಬೇಕು. ಮಳೆಗಾಲದ ದಿನಗಳಲ್ಲಿ ತನ್ನ ಸಹಜ ವೈಭವ. ಗಾಂಭೀರ್ಯದಿಂದ ನಿತ್ಯ ನಿರಂತರವಾಗಿ ಹರಿಯುವ ಜಲಪಾತದ ಸೊಬಗು. ಉರುಳುರುಳುವ ಬೆಳ್ನೊರೆಗಳ ಪ್ರವಾಹ ನಿಸರ್ಗಾರಾಧಕರು, ಪ್ರಕೃತಿ ಪ್ರಿಯರಿಗೆ ಕಾವ್ಯಾಸಕ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿ ನವಕಾವ್ಯ ಸೃಷ್ಟಿ ಪ್ರೇರಣೆಯಾಗಬಲ್ಲುದು.

ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಹತ್ತಾರು ಝರಿಗಳಿವೆ. ಜಲಪಾತಗಳು ಮಳೆಗಾಲದಲ್ಲಿ ನೋಡುಗರ ಆಕರ್ಷಣೆಯ ಕೇಂದ್ರಗಳಾಗಿ ಜನ ಮನ ಸೂರೆಗೊಳ್ಳುತ್ತವೆ. ಬೆಟ್ಟ ಗುಡ್ಡಗಳ ಚಾರಣ. ಕಾಲ್ನಡಿಗೆಯ ಎಲ್ಲ ಪ್ರಯಾಸವನ್ನು ಮರೆಯಾಗಿಸುವ ದಿವ್ಯ ಶಕ್ತಿ ಜಲಪಾತದ ಸೃಷ್ಟಿ ವೈವಿಧ್ಯತೆಗಿದೆ. ಕುಗ್ರಾಮವೆಂದೇ ಗುರುತಿಸಲ್ಪಟ್ಟ ದಿಡುಪೆಯ ದಟ್ಟಗಾಡು. ವನ ಸಿರಿಯ ಮಧ್ಯೆ ಅಂತಹ ಒಂದು ಜಲಪಾತ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಸಹಜ ಸೌಂದರ್ಯ ಸೃಷ್ಟಿಯ ಅದ್ಭುತ ಲೀಲೆಯೇ ಸರಿ. ವಿವಿಧ ಕೋನಗಳಲ್ಲಿ ಜಲಪಾತದ ವಯ್ಯಾರ ಲಾಸ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಹರಿಯುವ ಜಲಧಾರೆಗೆ ತಲೆ ಮೈಯೊಡ್ಡಿ ಪನ್ನೀರ ಸಿಂಚನದಿಂದ ದಿನವಿಡೀ ನೆನೆದರೂ ಮೈ ಮನಗಳಿಗೆ ದಣಿವಾಗದು. ನಿಸರ್ಗ ಸೃಷ್ಟಿಸಿದ ಮಾಯಾಲೋಕ ಛಾಯಾಗ್ರಾಹಕರಿಗೆ ಕ್ಷಣ ಕ್ಷಣಕ್ಕೂ ಅದ್ಭುತ ದೃಶ್ಯ ರಾಶಿಯನ್ನೊದಗಿಸುತ್ತದೆ. ಎಲ್ಲ ಮಾನಸಿಕ, ದೈಹಿಕ ನೋವು ದಣಿವನ್ನು ಮರೆಸಿ ಸೃಷ್ಟಿ ವೈಚಿತ್ರ್ಯದ ಸ್ವರ್ಗ ಸುಖವನ್ನು ಸವಿದು ಆಸ್ವಾದಿಸುವ ಅಪೂರ್ವ ಸುಯೋಗ ಸೌಭಾಗ್ಯ ವರ್ಷವಿಡೀ ದೊರೆಯದು. ದಿಡುಪೆಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ ಪಚ್ಚನೆ ಹಸುರಿನ ದಟ್ಟ ಕಾಡಿನಲ್ಲಿ ಪ್ರಕೃತಿಯ ಅಪೂರ್ವ ಸಿರಿಯಾಗಿ ಜಲಪಾತ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಆಸಕ್ತರು ದಿಡುಪೆ ಜಲಪಾತಕ್ಕೊಮ್ಮೆ ಬಂದು ಸೃಷ್ಟಿಯ ಸೊಬಗನ್ನು ಮನಸೇಚ್ಚ ಆಸ್ವಾದಿಸಿ ಉಲ್ಲಸಿತರಾಗಬಹುದು.


ಭಾಗಿಮಲೆ
ಇಲ್ಲೊಂದು ಅದ್ಭುತ ಜಲಪಾತವಿದೆ!
ಭಾಗಿಮಲೆ ಈ ಹೆಸರೇ ಒಂದು ರೋಚಕ. ಇಲ್ಲಿರುವ ಜಲಪಾತವೂ ಅಷ್ಟೇ ಸುಂದರ. ಇದು ಚಾರಣಿಗರ ಪಾಲಿಕೆ ಒಂದು ಸವಾಲಿನ ಕೆಲಸವೇ. ಈ ಜಲಪಾತ ಒಂದು ರೋಚಕ ಅನುಭವ ನೀಡುತ್ತದೆ. ನೂರೈವತ್ತು ಅಡಿ ಎತ್ತರದಿಂದ ನೀರು ಧುಮ್ಮಿಕ್ಕಿ ಹರಿಯುತ್ತದೆ. ಅದ್ಭುತ ಸೌಂದರ್ಯವನ್ನು ಸೃಷ್ಠಿಸುತ್ತವೆ. ಭಾಗಿ ಮಲೆ ರಕ್ಷಿತಾರಣ್ಯದಲ್ಲಿರುವ ಎರ್ಮಾಯಿಲ್ ಹೊಳೆಯೇ ಹಲವು ಹಂತಗಳಲ್ಲಿ ಈ ಜಲಲ ಜಲಧಾರೆಯ ಸೊಬಗನ್ನು ನೋಡುಗರಿಗುಣಿಸುತ್ತದೆ. ಗುಂಡ್ಯ ನಾಗರ ಕಟ್ಟೆ ಮಾರ್ಗದಲ್ಲಿ 12ಕಿ.ಮೀ ಮೈಲಿಕಲ್ಲಿನ ಸಮೀಪ ಕಾಣಸಿಗುತ್ತದೆ ಇದು. ಭಾಗೆ ಹೊಳೆಯಿಂದು ಮುಂದೆ ಕೈಕಂಬ (ನಾಗರಕಟ್ಟೆ)ತನಕದ ಹಾದಿಯ ಎಡ ಭಾಗವೇ ಭಾಗಿಮಲೆ ಕಾಡು. ಇಲ್ಲಿ ಸಾಗಿದರೆ ಸಾಕಷ್ಟು ಜಲಪಾತಗಳ ಸವಿ ಸವಿಯಬಹುದು.

ಬಾಳೆಬರೆ ಘಾಟಿಯಲ್ಲೂ ಜಲಪಾತ
ಬಾಳೆಬರೆ ಘಾಟಿ. ಇದು ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಒಂದು ಘಾಟಿ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಎಂಬ ಗ್ರಾಮದಿಂದ ಮೂರು ಕಿಲೋಮೀಟರ್ ಕ್ರಮಿಸಿದಾಗ ಹುಲಿಕಲ್ ಸಿಗುತ್ತದೆ. ಇದು ಘಾಟಿಯ ಆರಂಭದ ಹಾದಿ. ಈ ಕಾರಣಕ್ಕೆ ಹುಲಿಕಲ್ ಘಾಟಿ ಎಂದು ಪ್ರಸಿದ್ಧಿ ಪಡೆದಿದೆ.
ಅನಘ್ರ್ಯ ವನ್ಯ ಸಂಪತ್ತು, ಪ್ರಾಣಿ ಪ್ರಬೇಧಗಳು ಇಲ್ಲಿವೆ. ಘಾಟಿಯ ಆರಂಭದಲ್ಲೇ ಸುಮಾರು ಮೂರು ಕಿಲೋಮೀಟರ್ ಕ್ರಮಿಸಿದಾಗ ರಸ್ತೆಯ ಪಕ್ಕದಲ್ಲೇ ಪುಟ್ಟ ಜಲಪಾತವೊಂದು ಸಿಗುತ್ತದೆ. 200 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಮುಂದೆ ದಟ್ಟ ಅರಣ್ಯಗಳೊಳು ಸಾಗಿ ಸಾಗರ ಸೇರುತ್ತಾಳೆ. ಈ ಮಧ್ಯೆ ಅನೇಕ ದೃಶ್ಯ ಕಾವ್ಯಗಳ ಸೃಷ್ಠಿಗೆ ಕಾರಣಳಾಗುತ್ತಾಳೆ. ಇದೊಂದು ಸೌಂದರ್ಯಪೂರ್ಣ ಜಲಪಾತ. ಮಳೆಗಾಲದಲ್ಲಿ ಅಬ್ಬರದಿಂದ ಧಾರೆ ಧುಮುಕಿ ನೋಡುಗರನ್ನು ಮೋಡಿಮಾಡುತ್ತದೆ.


ಇದು ಕೊಡಗಿನ ಮಲ್ಲಳ್ಳಿ!
ಕೊಡಗು ಇದೊಂದು ದಕ್ಷಿಣದ ಕಾಶ್ಮೀರ. ಇಲ್ಲಿ ಕಾಫಿ, ಕಿತ್ತಳೆಗಳಿಗೆ ಪ್ರಸಿದ್ಧಿ. ಇಲ್ಲಿನ ಹವಾಮಾನ ಅತ್ಯಂತ ವೈಶಿಷ್ಟ್ಯಪೂರ್ಣ. ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯ ಜಲಪಾತಗಳಿವೆ. ಅಬ್ಬಿ, ಲಕ್ಷ್ಮಣ ತೀರ್ಥ, ತೋಮಾರ, ಮಲ್ಲಳ್ಳಿ ಹೀಗೆ ಹತ್ತು ಹಲವು ಜಲಪಾತಗಳು ಈ ಕೊಡಗಿನಲ್ಲಿವೆ. ಇದು ಕೊಡಗಿಗೆ ಸೇರಿದ ಪುಷ್ಪಗಿರಿ ಬೆಟ್ಟದ ತಳಭಾಗದಲ್ಲಿದೆ. 200 ಅಡಿ ಎತ್ತರದಿಂದ ಧುಮುಕುತ್ತದೆ. ಮಲ್ಲಳ್ಳಿ ಜಲಪಾತ ಬೆಳ್ನೊರೆಗಳ ಸೂಸುತ್ತಾ ಸುಂದರ ಸೊಬಗಿನಿಂದ ಕಂಗೊಳಿಸುತ್ತದೆ. ಹಸಿರ ಹಾದಿಯಲ್ಲಿ ಕ್ಷೀರಧಾರೆಯಂತೆ ಇದು ಭಾಸವಾಗುತ್ತದೆ. ಅಂತೂ ಈ ಜಲಪಾತ ಒಂದು ಸುಂದರವಾದ ಅನುಭವ ನೀಡುತ್ತದೆ. ಸೋಮವಾರ ಪೇಟೆ ಶಾಂತಳ್ಳಿ ಹಾದಿಯಲ್ಲಿ ಸಾಗುವಾಗ ಕುಂದಳ್ಳಿಗೆ ತಲುಪಬೇಕಾದರೆ ದೂರದಿಂದಲೇ ಮಲ್ಲಳ್ಳಿ ಕೈ ಬೀಸಿ ಕರೆಯುತ್ತದೆ. ಕುಂದಳ್ಳಿಯಿಂದ ಮೂರು ಕಿ.ಮೀ ದೂರದ ಕುಮಾರಹಳ್ಳಿಗೆ ಹೋಗಿ ಅಲ್ಲಿಂದ ಜಲಪಾತದೆಡೆಗೆ ನಡೆದು ಹೋಗಲು ಸಾಧ್ಯ. ಕುಮಾರ ಹಳ್ಳಿಯಿಂದ ಎರಡೂವರೆ ಕಿ.ಮೀ ಸಾಗಿದಾಗ ಇದರ ದರ್ಶನ ಭಾಗ್ಯ ದೊರಕುತ್ತದೆ.


ಕಲ್ಯಾಳ ಜಲಪಾತ
ಕೊಡಗಿನ ಇನ್ನೊಂದು ಜಲಪಾತ. ಮಡಿಕೇರಿಯಿಂದ ಮಂಗಳೂರಿಗೆ ಸಾಗುವ ಹೆದ್ದಾರಿಯಲ್ಲಿ ಸಾಗುವುದೇ ಒಂದು ರೋಚಕ ಅನುಭವ. ಸುಮಾರು 23ಕಿ.ಮೀ ಸಾಗುವಷ್ಟರಲ್ಲಿ ದೂರದಲ್ಲಿ ಕಲ್ಯಾಳ ಜಲಪಾತ ಕಾಣಸಿಗುತ್ತದೆ. ಕಲ್ಯಾಳ ಜಲಪಾತಕ್ಕೆ ಸಾಗಲು ಕೊಯನಾಡು ಎಂಬ ಸಣ್ಣ ಹಳ್ಳಿಯಿಂದ ಬೆಟ್ಟದ ಹಾದಿ ಹಿಡಿಯಬೇಕು. ಈ ಹಾದಿಯಲ್ಲಿ ಮೇಲೇರಿ, ಮುಂದೆ ಹೋದಾಗ ಈ ಜಲಪಾತ ಎದುರಾಗುತ್ತದೆ. ಅಷ್ಟೊತ್ತಿಗಾಗಲೇ ನೀವು ಸುಮಾರು 5ಕಿ.ಮೀಟರ್ಗಳಿಗೂ ಅಧಿಕ ದೂರ ಕ್ರಮಿಸಿ ಆಗಿರುತ್ತದೆ. ಸಮರ್ಪಕ ಕಾಲು ಹಾದಿಯೂ ಇಲ್ಲ. ದುರ್ಗಮ ರಸ್ತೆಯಲ್ಲಿ ಸಾಗಬೇಕು. ಕಡಿದಾದ ಹಾದಿಯಲ್ಲಿ ಕೆಳಗಿಳಿಯಬೇಕು. ಒಂದೆಡೆ ಬೆಟ್ಟ ಏರಿದರೆ ಮತ್ತೆ ಕೆಲವೆಡೆಗಳಲ್ಲಿ ದುರ್ಗಮ ಹಾದಿಯಲ್ಲಿ ಕೆಳಗಿಳಿಯಬೇಕು. ಹೀಗೆ ಸಾಗಿದಾಗ ಸುಂದರ ಜಲಪಾತ ನಮ್ಮೆದುರು ತೆರೆದುಕೊಳ್ಳುತ್ತದೆ. 250 ಅಡಿಗಳಷ್ಟು ಮೇಲಿಂದ ಹಂತ ಹಂತವಾಗಿ ಧುಮುಕುವ ಈ ಜಲಧಾರೆ ಒಂದು ಹೊಸ ಅನುಭವ ನೀಡುತ್ತದೆ. ಮಳೆಗಾಲದಲ್ಲಿ ಜಲಪಾತ ವೀಕ್ಷಣೆಗೆ ಕೊಂಚ ಕಷ್ಟ. ಸೆಪ್ಟಂಬರ್ ನಂತರ ಈ ಜಲಪಾತ ವೀಕ್ಷಣೆಗೆ ಹಾದಿ ತುಸು ಸುಗಮವಾಗುತ್ತದೆ. ಅಂತೂ ಒಮ್ಮೆಯಾದರೂ ಈ ಜಲಪಾತ ನೋಡಲೇಬೇಕು.

ಮುಂದೆ ಓದಿ

ಕ್ಲಿಕ್...

ನಿಸರ್ಗವೇ ಹಾಗೆ... ಸೋಜಿಗ... ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆಂಬಂತೆ. .. ಆ ಹಸಿರ ಹೊನ್ನಿನ ರಾಶಿ, ಸೂರ್ಯರಶ್ಮಿಯ ಬಾನಂಚಿನ ಚೆಲ್ಲಾಟ...ಅವೆಲ್ಲವೂ ಮಧುರ...ಮನೋಹರ...
















ಚಿತ್ರ: ಅಭಿಲಾಶ್ ಪಿ.ಎಸ್

ಮುಂದೆ ಓದಿ
1:40 PM

ಜಲಲ ಜಲಲ ಜಲಧಾರೇ...

Posted by ekanasu

ಕ್ಲಿಕ್...

ಮಳೆಕಾಡಿನ ಜಲ ವೈಭವ...

ಚಿತ್ರ: ಸತೀಶ್ ಮಾಗೋಡು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಭಾರತ ಮತ್ತು ಪಾಕಿಸ್ಥಾನ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಭಾರತ ರೋಚಕ 3ವಿಕೆಟ್ ಗಳ ಜಯ ಸಾಧಿಸಿದೆ. ತನ್ಮೂಲಕ ಭಾರತ ತಂಡ ಮತ್ತೊಮ್ಮೆ ತನ್ನ ಬಲ ಪ್ರದರ್ಶಿಸಿದೆ. ಕೊನೆಯ ಹಂತದ ನಿರ್ಣಾಯಕ ಆಟದ ಮೂಲಕ ಭಾರತ ತಂಡ ಈ ವಿಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಉಸಿರು ಬಿಗಿಹಿಡಿಯುವಂತೆ ಮಾಡಿದ ಪಂದ್ಯದಲ್ಲಿ ಕೊನೆಗೂ ಭಾರತ ತಂಡದತ್ತ ವಿಜಯಲಕ್ಷ್ಮಿ ಒಲಿದಿದ್ದಾಳೆ. ಇದೀಗ ತಂಡ ಸಂಭ್ರಮಾಚರಿಸುತ್ತಿದೆ.

ಮುಂದೆ ಓದಿ
10:33 PM

ಅರುಣೋದಯ ಸಮರ್ಪಣೆ

Posted by ekanasu

ರಾಜ್ಯ - ರಾಷ್ಟ್ರ
ಯೂನಿಯನ್ ಮಿನಿಸ್ಟರ್ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರದಲ್ಲೇ ಬೃಹತ್ ಸೋಲಾರ್ ಪ್ರಾಜೆಕ್ಟ್ ಅರುಣೋದಯವನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು.ಈ ಸಂದರ್ಭದಲ್ಲಿ ರಾಜ್ಯದ ಗೃಹಸಚಿವ ವಿ.ಎಸ್.ಆಚಾರ್ ಉಪಸ್ಥಿತರಿದ್ದರು.

ಮುಂದೆ ಓದಿ
10:26 PM
Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು :ಮಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಕಣ್ಣೂರು, ಪಡೀಲು, ಅಡ್ಯಾರು, ಉಜ್ಜೋಡಿ ಪ್ರದೇಶಗಳು ನೀರಿನಿಂದಾ ವೃತವಾಗಿದ್ದು, ನಿವಾಸಿಗಳ ತುರ್ತು ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣವೇ ನೆರೆ ಪೀಡಿತ ಜಾಗಗಳಿಗೆ ತೆರಳಿ ಪರಿಶೀಲನೆ ನಡೆಸಿ ನೀರು ಹೋಗಲು ನಿರ್ಮಿಸಿದ್ದ ತೋಡುಗಳ ಮೇಲಿನ ನಿರ್ಮಾಣ ತೆರವಿಗೆ ಕ್ರಮ ಕೈಗೊಂಡರು.ಉಜ್ಜೋಡಿಯ ನಿರ್ಮಲಾ ಸರ್ವಿಸ್ ಸ್ಟೇಷನ್, ರೋನ್ಸನ್ ಸರ್ವಿಸ್ ಸ್ಟೇಷನ್ ಚರಂಡಿಯನ್ನು ಅತಿಕ್ರಮಿಸಿ ನಿರ್ಮಾಣ ಮಾಡಿದ್ದ ಅತಿಕ್ರಮಗಳನ್ನು ಪಾಲಿಕೆಯಿಂದ ಜೆಸಿಬಿ ತರಿಸಿ ಒಡೆಸಿ ಹಾಕಿಸಿದರಲ್ಲದೆ, ತೋಡುಗಳನ್ನು ತೆರವು ಗೊಳಿಸಿ ನೀರು ಹೋಗಲು ಅವಕಾಶ ಮಾಡಿ ಕೊಡಲಾಯಿತು. ಇಂತಹುದೇ ಅತಿಕ್ರಮಣ ಗಳಿಂದ ಹಲವು ಕಡೆ ನೀರು ನಿಲ್ಲುತ್ತಿದ್ದು, ಪಡೀಲು ಅಡ್ಯಾರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ದಿಂದಲೂ ಸರಾಗ ನೀರು ಹರಿಯಲು ತೊಂದರೆ ಯಾಗಿದ್ದು, ಪ್ರಾಧಿಕಾ ರದವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ನಿರ್ದೆಶಿಸಿದರು. ಮೇಯರ್ ರಜನಿ ದುಗ್ಗಣ್ಣ ಈ ಸಂದರ್ಭದಲ್ಲಿ ಜೊತೆಗಿದ್ದು ಜನತೆಯ ಸಮಸ್ಯೆ ಆಲಿಸಿದರು.

ಮುಂದೆ ಓದಿ

ವಿಚಾರ

ಭಾರತದ ನ್ಯಾಯಾಂಗವು ದೇಶದ ಇತರ ವ್ಯವಸ್ಥೆಗಳಂತಾಗಿರದೆ ಬಹುತೇಕ ಶುದ್ಧವೂ ಪ್ರಾಮಾಣಿಕವೂ ಶಿಸ್ತುಬದ್ಧವೂ ಆಗಿ ಉಳಿದುಕೊಂಡುಬಂದಿದೆ. ಪ್ರಶಾಂತ ತಿಳಿನೀರಿನಮೇಲೊಂದು ಪುಟ್ಟ ಕಲ್ಲು ಬಿದ್ದಂತೆ ಇದೀಗ ನ್ಯಾಯಮೂರ್ತಿಗಳಿಬ್ಬರ ನಡುವಣ ಸಂಘರ್ಷವು ನಮ್ಮ ಸುಂದರ ನ್ಯಾಯಾಂಗಕ್ಕೊಂದು ಕಪ್ಪುಚುಕ್ಕೆಯಾಗಿ ಕಾಡುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯಕ್ಕೇನೋ ನ್ಯಾ.ಶೈಲೇಂದ್ರಕುಮಾರ್ ಅವರಿಗೆ ಸರ್ವೋಚ್ಛ ನ್ಯಾಯಾಲಯವು ಶಿಸ್ತಿನ ಪಾಠ ಬೋಧಿಸಿದೆ. ಆದರೆ, ಈ ಬೆಳವಣಿಗೆ ಇಷ್ಟಕ್ಕೇ ಸುಖಾಂತ್ಯ ಕಂಡೀತೆಂಬ ಭರವಸೆಯಿಲ್ಲ. ಏಕೆಂದರೆ, ಇಡೀ ಪ್ರಕರಣವು ಶಿಸ್ತು ಮತ್ತು ನಿಯಮ ಇವೆರಡರ ನಡುವಿನ ಕದನವಾಗಿದೆ.

ಸಾಮಾನ್ಯ ನಾಗರಿಕರಾದ ನಮಗೆ, ಶಿಸ್ತಿನ ವಿಷಯದಲ್ಲಿ ನ್ಯಾ.ದಿನಕರನ್ ಪರವಾದ ಸರ್ವೋಚ್ಛ ನ್ಯಾಯಾಲಯದ ಕ್ರಮ ಸರಿಯೆನ್ನಿಸಿದರೆ ನಿಯಮದ ವಿಷಯದಲ್ಲಿ ನ್ಯಾ.ಶೈಲೇಂದ್ರಕುಮಾರ್ ಕ್ರಮ ಸರಿಯೆನ್ನಿಸುತ್ತಿದೆ. ಶಿಸ್ತು ಹೆಚ್ಚು ಮುಖ್ಯವೋ, ನಿಯಮ ಹೆಚ್ಚು ಮುಖ್ಯವೋ ಎಂಬುದಿಲ್ಲಿ ಪ್ರಶ್ನೆ. ಈ ವಿಷಯದಲ್ಲಿ ನಮಗಿಂತ ಹೆಚ್ಚು ಪ್ರಾಜ್ಞರಾದ ನ್ಯಾಯಮೂರ್ತಿಗಳೇ ಒಟ್ಟಿಗೆ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ಸಾಮಾನ್ಯ ನಾಗರಿಕರಾದ ನಾವು ಅಪೇಕ್ಷಿಸುತ್ತೇವೆ.



ನಮಗಂತೂ ಈ ಇಬ್ಬರು ನ್ಯಾಯಮೂರ್ತಿಗಳಮೇಲೂ ಗೌರವವಿದೆ. ನ್ಯಾಯದೇವತೆಯ ದೂತರು ಇವರು. ಆ ಪಾವಿತ್ರ್ಯವನ್ನು ಇವರೀರ್ವರೂ ಕಾಪಾಡಿಕೊಂಡು ಮುನ್ನಡೆಯುವರೆಂಬ ಭರವಸೆಯನ್ನು ನಾಗರಿಕರಾದ ನಾವೆಲ್ಲ ಹೊಂದಿದ್ದೇವೆ. ನಮ್ಮ ಈ ಭರವಸೆಯ ಮೇಲೆ ನ್ಯಾಯವ್ಯವಸ್ಥೆಯ ಬಗೆಗಿನ ನಮ್ಮ ಭರವಸೆ ನಿಂತಿದೆ.


ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ಪ್ರಾದೇಶಿಕ ಸುದ್ದಿ


ಮೂಲ್ಕಿಯ ಮೆಡಲಿನ್ ಫ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ನೀಡಿದ ಪುಸ್ತಕ ಹಾಗೂ ಸಮವಸ್ತ್ರವನ್ನು ರೋಟರಿಯ ಮಾಜಿ ಸಹಾಯಕ ರಾಜ್ಯಪಾಲ ರಾಜಾ ಪತ್ರಾವೋ ವಿತರಿಸಿದರು.




ಮುಲ್ಕಿ:ಶಿಕ್ಷಣದ ಜೊತೆಗೆ ಪ್ರಾಮಾಣಿಕತೆಯ ಜೀವನವನ್ನು ಕಲಿಸುವುದು ಇಂದಿನ ದಿನಗಳಲ್ಲಿ ಬಹು ಪ್ರಾಮುಖ್ಯ ಎನಿಸಿದೆ ಎಂದು ರೋಟರಿಯ ಮಾಜಿ ಸಹಾಯಕ ರಾಜ್ಯಪಾಲ ರಾಜಾ ಪತ್ರಾವೋ ಹೇಳಿದರು.

ಮೂಲ್ಕಿಯ ಮೆಡಲಿನ್ ಫ್ರೌಢಶಾಲೆಯಲ್ಲಿ ಬುಧವಾರ ಹಳೆ ವಿದ್ಯಾಥರ್ಿಗಳು ನೀಡಿದ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸುತ್ತಾ ಮಾತನಾಡಿದರು.

ವಿದ್ಯಾರ್ಥಿಗಳು ತಾನು ಕಲಿತ ಶಾಲೆಯನ್ನು ಜೀವನದ ಉದ್ದಕ್ಕೂ ಸ್ಮರಿಸಿಕೊಂಡು ಅದರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸಿದಲ್ಲಿ ಇತರ ವಿದ್ಯಾ ರ್ಥಿಗಳಿಗೆ ಮಾದರಿಯಾಗುತ್ತಾರೆ ಎಂದು ಹೇಳಿದರು.

ಮೆಡಲಿನ್ನ ಪ್ರಾಥಮಿಕ ಮತ್ತು ಫ್ರೌಢಶಾಲೆಯ 64 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು.

ಹಳೆವಿದ್ಯಾರ್ಥಿ ಸಂಘದ ಜೋನ್ ಡಿಸೋಜಾ, ಉಪಾಧ್ಯಕ್ಷ ನಾಗರಾಜ ಆಚಾರ್ಯ, ಕಾರ್ಯದರ್ಶಿ ಶೈಲಜಾ ಸೋನ್ಸ್, ಶಾಲಾ ಸಂಚಾಲಕಿ ಆಗ್ನೇಸ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲಿಲ್ಲಿ, ಫ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಫೆಲ್ಸಿನ್, ಶಿಕ್ಷಕ ಪ್ರವೀಣ್ ಉಪಸ್ಥಿತರಿದ್ದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮುಲ್ಕಿ: ಮೂಲ್ಕಿ ಹೋಬಳಿಯ ಪಡುಪಣಂಬೂರು, ಹಳೆಯಂಗಡಿ, ಕಿಲ್ಪಾಡಿ, ಕೆಮ್ರಾಲ್, ಮೆನ್ನಬೆಟ್ಟು, ಐಕಳ, ಕಿನ್ನಿಗೋಳಿ, ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ದಿನ ನಿಗದಿಯಾಗಿದ್ದು ಬಹುಮತ ಪಡೆದ ಪಕ್ಷಗಳ ಬೆಂಬಲಿಗರು ಪಂಚಾಯತ್ ಉಸ್ತುವಾರಿ ಪ್ರಮುಖರಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಪಡೆಯಲು ಭಾರಿ ಮಸಲತ್ತಿನೊಂದಿಗೆ ಕಸರತ್ತು ನಡೆಸುತ್ತಿದ್ದಾರೆ.ಜೂನ್ 22ರಂದು ಬಳ್ಕುಂಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಜೂನ್ 23ರಂದು ಐಕಳ, 24ರಂದು ಕಿಲ್ಪಾಡಿಯಲ್ಲಿ ನಡೆಯಲಿದ್ದು ಮಂಗಳೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈ ಮೂರು ಪಂಚಾಯಿತಿಗಳ ಚುನಾವಣೆಯನ್ನು ನಡೆಸಿಕೊಡಲಿದ್ದಾರೆ. ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ರವರು ಕಿನ್ನಿಗೋಳಿ(ಜೂನ್23), ಪಡುಪಣಂಬೂರು (ಜೂನ್ 24), ಹಳೆಯಂಗಡಿ( ಜೂನ್ 25) ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಡಲಿದ್ದಾರೆ.




ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಿರ್ವಾಹಕರು ಕೆಮ್ರಾಲ್(ಜೂನ್23), ಮತ್ತು ಮೆನ್ನಬೆಟ್ಟು (ಜೂನ್24) ಗ್ರಾಮ ಪಂಚಾಯಿತಿಗೆ ನಿಯುಕ್ತಿಗೊಂಡಿದ್ದಾರೆ.

ಪ್ರತೀ ಪಂಚಾಯತ್ಗಳಲ್ಲಿ ನಿರ್ಧರಿಸಿದ ದಿನದಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಕೆ ನಡೆಯಲಿದೆ, 2ಗಂಟೆಗೆ ನಾಮಪತ್ರ ಪರಿಶೀಲನೆ, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಒಂದಕ್ಕಿಂತ ಹೆಚ್ಚಿದ್ದಲ್ಲಿ 3 ಗಂಟೆಗೆ ಸದಸ್ಯರ ನಡುವೆ ಗುಪ್ತ ಮತದಾನ ನಡೆಯುತ್ತದೆ ಇಲ್ಲದಿದ್ದಲ್ಲಿ ಅವಿರೊಧವಾಗಿ ಆಯ್ಕೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ವರದಿ: ಭಾಗ್ಯವಾನ್ ಮುಲ್ಕಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮುಲ್ಕಿ: ಮೂಲ್ಕಿ ಬಳಿಯ ಕಿನ್ನಿಗೋಳಿ ಮತ್ತು ಹಳೆಯಂಗಡಿಯಲ್ಲಿ ಶೀಘ್ರದಲ್ಲಿಯೇ ಹೊರಠಾಣೆಯನ್ನು ಸ್ಥಾಪಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಮಂಗಳೂರು ಕಮಿಷನರೇಟ್ನ ಎಸಿಪಿ ಗಿರೀಶ್ ಎಸ್. ತಿಳಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಈ ವಿಷಯ ತಿಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಕಮಿಷನರೇಟ್ ಆದ ಹಿನ್ನಲೆಯಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ತಲಾ ಎರಡು ಹೆಚ್ಚುವರಿ ಹೊರಠಾಣೆಯನ್ನು ಸ್ಥಾಪಿಸುವ ಹಿನ್ನಲೆಯಲ್ಲಿ ಕಿನ್ನಿಗೋಳಿಯು ಬೆಳೆಯುತ್ತಿರುವ ವಾಣಿಜ್ಯ ವ್ಯವಹಾರ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಪ್ರಮುಖ ಜನ ಸಂಪರ್ಕದ ಕೇಂದ್ರವಾಗಿದೆ. ಈ ಹಿಂದೆ ಇಲ್ಲಿನ ಬಸ್ನಿಲ್ದಾಣದಲ್ಲಿ ಅಂದಿನ ಮೂಲ್ಕಿ ಠಾಣೆಯ ಎಸ್ಐ ಶ್ರೀನಿವಾಸ್ರವರ ಮುತುವರ್ಜಿ ಒಂದು ಹೊರಠಾಣೆಯನ್ನು ಸಾಂಕೇತಿಕವಾಗಿ ನಿರ್ಮಿಸಿದ್ದರು. ನಂತರ ಪಂಚಾಯಿತಿಯು ಬಸ್ನಿಲ್ದಾಣ ಕೆಡವಿದಾಗ ಹೊರಠಾಣೆಯು ರದ್ದುಗೊಂಡಿತ್ತು.



ಪ್ರಸ್ತಾವನೆಯಂತೆ ರಾಷ್ಟ್ರೀಯ ಹೆದ್ದಾರಿ 17ರಲ್ಲಿನ ಅತಿ ಹೆಚ್ಚು ವಾಹನ ಸಂಚಾರವಿರುವ ಹಳೆಯಂಗಡಿಯಲ್ಲಿಯೂ ಅಗತ್ಯವಿದ್ದು ಒಳ ರಸ್ತೆಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವನ್ನು ಪಡೆಯುವ ಈ ಪ್ರದೇಶದಲ್ಲಿ ಕ್ರೈಸ್ತ ಮಿಷಿನರಿಗಳ ಕೇಂದ್ರ, ಹಿಂದೂ ಮುಸ್ಲಿಂ ಧಾರ್ಮಿಕ ಕೇಂದ್ರಗಳು ಹಾಗೂ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿರುವುದರಿಂದ ಇಲ್ಲಿ ಹೊರಠಾಣೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಮತ್ತು ಸದಾ ಘರ್ಷಣೆ ನಡೆಯುವ ಕೆ.ಎಸ್.ರಾವ್ನಗರದ ಬಿಜಾಪುರ ಕಾಲೋನಿಯಲ್ಲಿಯೂ ಹೊರಠಾಣೆಯ ಬೇಡಿಕೆಯಿದ್ದು ಮುಂದೆ ನಿರ್ಮಿಸುವ ಯೋಜನೆಇದೆ. ಮೂಲ್ಕಿ ಠಾಣೆಗೆ ಪ್ರತ್ಯೇಕವಾಗಿ ಟ್ರಾಫಿಕ್ ವಿಭಾಗ, ಪ್ರತ್ಯೇಕ ವೃತ್ತ ನಿರೀಕ್ಷಕರು, ಇಬ್ಬರು ಸಬ್ಇನ್ಸ್ಪೆಕ್ಟರ್, ನಾಲ್ಕು ಎಎಸ್ಐ, ಎಂಟು ಹೆಡ್ಕಾನ್ಸ್ಟೇಬಲ್ ಜೊತೆಗೆ ಈಗಿರುವ ಸಿಬಂದಿಗಳ ಸಂಖ್ಯೆಯು ದ್ವಿಗುಣಗೊಳಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆ ಚಾಲ್ತಿಗೆ ಬರಲು ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಗಿರೀಶ್ ತಿಳಿಸಿದ್ದಾರೆ.

ಪ್ರಸ್ತುತ 10 ಹೋಮ್ ಗಾರ್ಡ್ ದಿನವಹಿ 12 ಗಂಟೆಯ ದಿನಕೂಲಿಯ ಆಧಾರದಲ್ಲಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕಿನ್ನಿಗೋಳಿಯ ಉದ್ಯಮಿಗಳಿಗೆ ಭೂಗತ ಲೋಕದ ಬೆದರಿಕೆಯ ಹಿನ್ನಲೆಯಲ್ಲಿ ಬೆಳಿಗ್ಗೆ ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ಗಳನ್ನು, ಮತೀಯ ಗಲಭೆಯಲ್ಲಿದ್ದವನ್ನು ಠಾಣೆಗೆ ಕರೆಯಿಸಿದ ಎಸಿಪಿ ಗಿರೀಶ್ ಎಸ್. ಎಚ್ಚರಿಕೆಯನ್ನು ನೀಡಿದರಲ್ಲದೇ ಪೊಲೀಸ್ ಸಿಬ್ಬಂದಿಗಳಿಗೂ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ

ವರದಿ: ಭಾಗ್ಯವಾನ್ ಮುಲ್ಕಿ.

ಮುಂದೆ ಓದಿ
| | |Home