ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಕೌಶಲ್ಯಗಳ ಕೊರತೆ ಇಂದಿನ ಯುವಜನತೆಯಲ್ಲಿದೆ. ಪರಿಣಾಮಕಾರೀ ಸಂವಹನದ ಕೊರತೆಯಿಂದ ಯುವಜನತೆ ಇಂದು ಹಿಂದುಳಿಯುವಂತಾಗಿದೆ. ಶಿಕ್ಷಣದಲ್ಲಿ ಪಠ್ಯಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಕಾಣಲು ಸಾಧ್ಯ ಎಂದು ಉಡುಪಿ ಸರಕಾರಿ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಣಾನಾಥ ಎಕ್ಕಾರು ತಿಳಿಸಿದರು.
ಅವರು ಮಂಗಳವಾರ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜುಗಳ 22ವಿವಿಧ ವಿದ್ಯಾರ್ಥಿ ವೇದಿಕೆಗಳ ಉದ್ಘಾಟನೆ ನೆರವೇರಿಸಿದರು.



ಜ್ಞಾನದೊಂದಿಗೆ ವಿದ್ಯಾರ್ಥಿಗಳು ಕೌಶಲ್ಯಗಳನ್ನು ರೂಪಿಸಬೇಕು. ಜ್ಞಾನ, ಕೌಶಲ್ಯ, ಆರೋಗ್ಯ ಹಾಗೂ ಜೀವನ ಮೌಲ್ಯಗಳನ್ನು ರೂಪಿಸಿಕೊಂಡಾಗ ಬದುಕು ಹಸನಾಗಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಜಿ.ಎಚ್. ಪ್ರಭಾಕರ ಶೆಟ್ಟಿ, ಪ್ರಾಂಶುಪಾಲ ಪ್ರೊ.ಕುರಿಯನ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಓಣಂ ಪೂಕ್ಕಳಂ ರಚನಾ ಸ್ಪರ್ಧೆಯ ಬಹುಮಾನ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಭೂತಾನ್ ರಾಜ್ಯಸಭಾ ಸದಸ್ಯ ಟ್ಸೆರಿಂಗ್ ದೋರ್ಜಿ ಮೂರು ದಿನಗಳ ಭೇಟಿಗಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಬುಧವಾರ ಆಗಮಿಸಲಿದ್ದಾರೆ. ಬುಧವಾರ ಸಂಜೆ ಆಗಮಿಸಲಿದ್ದು ಸಂಸ್ಥೆಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಗುರುವಾರದಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ವೀಕ್ಷಣೆ, ಆಳ್ವಾಸ್ ಶೋಭಾವನ, ಆನಂದಮಯ ಆಯುರ್ವೇಧ ರೆಸಾರ್ಟ್ ಗೆ ಭೇಟಿನೀಡಲಿರುವರು. ಶುಕ್ರವಾರದಂದು (ಸೆ.3)ರಂದು ಬೆಳಗ್ಗೆ 9ರಿಂದ 11ರ ತನಕ ಭೂತಾನ್ ನಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಅರ್ಥಶಾಸ್ತ್ರ, ವಾಣಿಜ್ಯ, ಇತಿಹಾಸ, ಗಣಿತ, ಅಕೌಂಟೆನ್ಸಿ,ಭೋಗೋಳ ವಿಷಯಗಳ ಉಪನ್ಯಾಸಕ ಸಂದರ್ಶನವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಸಲಿದ್ದಾರೆ. ಆಸಕ್ತ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಮುಂದೆ ಓದಿ

ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2010" ಅಕ್ಟೋಬರ್ 29,30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2004ರಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ ಸಮ್ಮೇಳನವು ವರ್ಷಂಪ್ರತಿ ನಿರಂತರವಾಗಿ ನಡೆಯುತ್ತಿದ್ದು ಇದು 7ನೇ ವರ್ಷದ ಸಮ್ಮೇಳನವಾಗಲಿದೆ. "ಕನ್ನಡ ಮನಸ್ಸು : ಜೀವನ ಮೌಲ್ಯ" ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ಮೂಡಿಬರಲಿದೆ.



ಕನ್ನಡ ಮನಸ್ಸು: ಸಾಹಿತ್ಯಕ - ಸಾಂಸ್ಕೃತಿಕ ಸವಾಲುಗಳು, ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ್ಯ , ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು, ಕನ್ನಡ ಮನಸ್ಸು : ಸಾಹಿತಿಯ ಜವಾಬ್ದಾರಿಗಳು, ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ, ಹಾಗೂ ಕನ್ನಡ ಮನಸ್ಸು - ಸಮನ್ವಯದೆಡೆಗೆ ಪರಿಕಲ್ಪನೆಯಲ್ಲಿ ಈವರೆಗಿನ ಸಮ್ಮೇಳನಗಳು ನಡೆದಿವೆ.
ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ಕತೆಗಾರರು, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 29ರಂದು ಬೆಳಗ್ಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, 31ರಂದು ಸಾಯಂಕಾಲ ಸಮಾರೋಪಗೊಳ್ಳಲಿದೆ. ಸಮಾರೋಪಸಮಾರಂಭದಲ್ಲಿ ನಾಡಿನ ಗಣ್ಯರನ್ನು "ನುಡಿಸಿರಿ ಪ್ರಶಸ್ತಿ"ನೀಡಿ ಪುರಸ್ಕರಿಸಲಾಗುವುದು ಎಂದು ಡಾ.ಆಳ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.

ಮುಂದೆ ಓದಿ

ವಿಶೇಷ ವರದಿ
ಕಾರವಾರ : ಅಪರೂಪದ, ವಿರಳ ಹಾಗೂ ಅಂತಾರಾಷ್ಟೀಯ ಮಟ್ಟದಲ್ಲಿ ಬಹಬೇಡಿಕೆಯಲ್ಲಿರುವ ಸಪರ್ತಂಗಿ(ಸಲೇಶಿಯಾ) ಹಾಗೂ ಗುವಾಡಾ(ಮಾಪಿಯಾ ಫೋಟಿಡಾ)ಔಷಧಿ ಸಸ್ಯಗಳ ಸಂರಕ್ಷಣೆ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬರ್ಗಲ್ ಗ್ರಾಮದಲ್ಲಿ ನಡೆಯುತ್ತಿದೆ. ಕಳೆದ ಮುರ್ನಾಲ್ಕು ದಶಕಗಳಿಂದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಪಶ್ಚಿಮ ಘಟ್ಟ ಅರಣ್ಯಗಳಲ್ಲಿ ಅವ್ಯಾಹತ ಕಳ್ಳ ಸಾಗಾಣಿಕೆಯಿಂದಾಗಿ ಈ ಔಷಧ ಸಸ್ಯಗಳು ವಿರಳವಾಗಿದ್ದವು. ಉತ್ತರ ಕನ್ನಡ ಹಾಗೂ ಬೆಳಗಾವಿ ಅರಣ್ಯಗಳಿಂದಲೂ ಈ ಸಸ್ಯಗಳನ್ನು ಈವರೆಗೂ ದೋಚಲಾಗುತ್ತಿತ್ತು. ಔಷಧಿ ಕಂಪನಿಗಳಿಂದ ಈ ಸಸ್ಯಗಳಿಗಿರುವ ಬೇಡಿಕೆಯಿಂದಾಗಿ ಇವುಗಳನ್ನು ರಾಜಾರೋಶವಾಗಿ ಸಾಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ಅರಣ್ಯ ಇಲಾಖೆಯ ಕಾರ್ಯಚರಣೆಗಳಿಂದ ಕಳ್ಳ ಸಾಗಾಣೆದಾರರಿಗೆ ಸ್ವಲ್ಪ ತಡೆಯುಂಟಾಗಿದೆ.




ಸಲೇಶಿಯಾ ಹಾಗೂ ಮಾಫಿಯಾ ಔಷಧಿ ಗಿಡಗಳ ಸಂರಕ್ಷಣೆಗೆ ಕಾರವಾರದ ಗಣೇಶ ನೆವರೇಕರ್ ಈಗ ಮುಂದಾಗಿ ಈ ಸಸ್ಯಗಳ ನರ್ಸರಿ ಹಾಗೂ ನೆಡುತೋಪುಗಳನ್ನು ಬರ್ಗಲ್ದಲ್ಲಿ ಬೆಳೆಸುತ್ತಿದ್ದಾರೆ.ಸಕ್ಕರೆ ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸೆಗಳಿಗೆ ರಾಮಬಾಣವಾಗಿರುವ ಈ ಸಸ್ಯಗಳಿಗೆ ಈಗ ಎಲ್ಲಲ್ಲದ ಬೇಡಿಕೆಯಿದೆ. ಎಂ.ಬಿ.ಎ ಪದವಿ ಮುಗಿಸಿದ ನಂತರ ಸ್ವ - ಉದ್ಯೋಗ ಕೈಗೊಳ್ಳುವ ವಿಚಾರದಲ್ಲಿದ್ದ ಗಣೇಶನಿಗೆ ಆಯುರ್ವೇದ ತಜ್ಞ ಡಾ ಫಾಯದೆ ಮಾರ್ಗದರ್ಶನ ನೀಡಿದ್ದರು.
ಕಾರವಾರದ ಸರಕಾರಿ ಕಾಲೇಜಿನ ಸಸ್ಯ ಶಾಸ್ತ್ರಜ್ಞ ಪ್ರೋ ಜಯಕರ ಭಂಡಾರಿ ಅವರು ಈ ಔಷಧಿ ಸಸ್ಯಗಳ ಕಳ್ಳಸಾಗಣೆ ಹಾಗೂ ಇವುಗಳ ಮಹತ್ವವನ್ನು ತಿಳಿಸಿ ನೆಡುತೋಪು ಹಾಗೂ ಸಂರಕ್ಷಣೆಗೆ ದಾರಿ ತೋರಿಸಿದರು. ಹೀಗಾಗಿ ಸದ್ಯ ಕಾಡಿನಂಥ ತೋಟದಲ್ಲಿ ಈ ಎರಡು ಸಸ್ಯಗಳನ್ನು ಗಣೇಶ ಬೆಳೆಸುತ್ತಿದ್ದಾರೆ. ಅಲ್ಲದೆ ಈ ಸಸ್ಯಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ತಮ್ಮ ಪರಿಚಯಸ್ಥರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಹ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ 6 ಜನರು ಇವರ ಕೈ ಜೋಡಿಸಿದ್ದಾರೆ. ಸದ್ಯ ಅವರು ಸಲೇಶಿಯಾ ಹಾಗೂ ಮಾಪಿಯಾ ಸಸ್ಯಗಳ ಸಸಿಗಳನ್ನು ರಿಯಾಯತಿ ದರದಲ್ಲಿ ನೀಡುತ್ತಿದ್ದು ಕೆಲ ಔಷಧಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಇವುಗಳ ಜೊತೆ ಇತರೆ ಕೆಲ ಔಷಧಿ ಹಾಗೂ ಸುಗಂಧಿ ದ್ರವ್ಯ ಸಸ್ಯಗಳನ್ನು ಸಹ ಗಣೇಶ ಬೆಳೆಸುತ್ತಿದಾರೆ. ಪಚೋಲಿ, ವೆಟಿವರ್ ಹಾಗೂ ಲೆಮನ್ ಗ್ರಾಸ್ಗಳನ್ನು ಬೆಳೆದು ಇವುಗಳಿಂದ ಸುಗಂಧ ಎಣ್ಣೆಯನ್ನು ಉತ್ಪಾದಿಸುತ್ತಾರೆ.

ಮುಂದೆ ಓದಿ

ಆಟ - ಅವಲೋಕನ
ಮೈಸೂರು: ಕ್ವೀನ್ಸ್ ಬ್ಯಾಟನ್ ರಿಲೇ ಸೆಪ್ಟೆಂಬರ್ ಒಂದರಂದು ಊಟಿಯಿಂದ ಚಾಮರಾಜನಗರ ಜಿಲ್ಲೆ ಮೂಲಕ ಮಧ್ಯಾಹ್ನ 3 ಗಂಟೆಗೆ ಮೈಸೂರು ತಲುಪಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
ನಂತರ ನಗರದ ವಿವಿಧ ಭಾಗಗಳಲ್ಲಿ ಸಂಚರಿಸುವ ರಿಲೇಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸ್ವಾಗತಿಸುವಂತೆ ವಿನಂತಿಸಿರುವ ಅವರು ನಗರದೆಲ್ಲೆಡೆ ಸಂಭ್ರಮದ ವಾತಾವರಣ ಮೂಡಿಸಲು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.
ಅರಮನೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಉಪಸ್ಥಿತರಿದ್ದು ರಿಲೇಯಲ್ಲಿ ಪಾಲ್ಗೊಂಡು ಬ್ಯಾಟನ್ ಹಿಡಿಯಲಿದ್ದಾರೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.




ಕ್ವೀನ್ಸ್ ಬ್ಯಾಟನ್ ರಿಲೇಗೆ ಅರಮನೆ ಆವರಣದಲ್ಲಿ ಅದ್ದೂರಿ ಸ್ವಾಗತ ನೀಡಿದ ನಂತರ ಮೈಸೂರಿನ ವಿವಿಧ ಭಾಗಗಳಲ್ಲಿ ಸಂಚರಿಸುವ ರಿಲೇಯಲ್ಲಿ ನಗರದ ಗಣ್ಯ ನಾಗರೀಕರು, ಕ್ರೀಡಾಪಟುಗಳು, ಹಿರಿಯರು ಬ್ಯಾಟನ್ ಹಿಡಿದು ನಡೆಯಲಿದ್ದಾರೆ.ಮೈಸೂರು ಅರಮನೆಯಿಂದ ಮಹಾರಾಜ ಪ್ರತಿಮೆವರೆಗೆ ಮಹಾಪೌರ ಸಂದೇಶ್ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್, ಸಚಿವ ಗೂಳಿಹಟ್ಟಿ ಡಿ. ಶೇಖರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಶಾಸಕರುಗಳಾದ ಎಸ್.ಎ. ರಾಮದಾಸ್, ಹೆಚ್.ಎಸ್. ಶಂಕರಲಿಂಗೇಗೌಡ, ಡಾ: ಹೆಚ್.ಸಿ. ಮಹದೇವಪ್ಪ, ವಿ. ಶ್ರೀನಿವಾಸ ಪ್ರಸಾದ್, ತನ್ವೀರ್ ಸೇಠ್, ಕೆ. ವೆಂಕಟೇಶ್, ಚಿಕ್ಕಣ್ಣ, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಎಂ. ಸತ್ಯನಾರಾಯಣ, ಲೋಕಸಭಾ ಸದಸ್ಯರುಗಳಾದ ಅಡಗೂರು ಹೆಚ್ ವಿಶ್ವನಾಥ್, ಎನ್ ಚೆಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರುಗಳಾದ ತೋಂಟದಾರ್ಯ, ಸಿದ್ಧರಾಜು, ಮರಿತಿಬ್ಬೇಗೌಡ, ಗೋ ಮಧುಸೂದನ್, ಎಸ್ ನಾಗರಾಜು, ಪ್ರೊ: ಕೆ.ಎಸ್. ಮಲ್ಲಿಕಾರ್ಜುನಪ್ಪ, ಚಿಕ್ಕಮಾದು, ಸಿ.ಹೆಚ್. ವಿಜಯಶಂಕರ್, ನಾರಾಯಣಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷರುಗಳು ಸೇರಿದಂತೆ ಇತರ ಪ್ರಮುಖರು ಬ್ಯಾಟನ್ ಹಿಡಿಯುವರು.
ಮಹಾರಾಜ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ವಿಶ್ವವಿದ್ಯಾನಿಲಯ, ಪ್ರಾಚ್ಯ ವಸ್ತು ಸಂಗ್ರಹಾಲಯ, ಏಕಲವ್ಯ ವೃತ್ತ, ರಾಮಸ್ವಾಮಿ ವೃತ್ತ, ಶಾಂತಲಾ ಹಾಗೂ ಲಕ್ಷ್ಮಿ ಚಿತ್ರಮಂದಿರ, ಸಂಸ್ಕೃತ ಪಾಠಶಾಲೆ, ಬಸವೇಶ್ವರ ವೃತ್ತ, ಚೆನ್ನಯ್ಯ ಕುಸ್ತಿ ಅಖಾಡ, ಅರಮನೆ ಮಾರ್ಗದಲ್ಲಿ ರಿಲೇ ಸಂಚರಿಸಲಿದೆ.

ಮುಂದೆ ಓದಿ

|| ಹರೇರಾಮ ||

ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…

ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…

ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…

ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…




ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ…

ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ…?

ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು…!

ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?

ಒಬ್ಬ ಜಯಿಸುವವರಲ್ಲಿ ಶ್ರೇಷ್ಠ…

ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!

ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..

ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!

ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ…

ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!

ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ…

ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ…!

ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ…

ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ…!

ಒಬ್ಬನದು ಅರಮನೆ…

ಇನ್ನೊಬ್ಬನಿಗೆ ಅರಣ್ಯವೇ ಮನೆ!

ಒಬ್ಬನದು ಜೈತಯಾತ್ರೆಯಾದರೆ ಮೈತ್ರಯಾತ್ರೆ ಇನ್ನೊಬ್ಬನದು..!

ಒಬ್ಬನ ಶೋಭೆಗೆ ಕಾರಣ ಆಭೂಷಣವಾದರೆ ಇನ್ನೊಬ್ಬನಿಗೆ ಆತ್ಮವೇ ಆಭರಣ..!

ವಿಶ್ವದ ಯಾವುದೇ ಎರಡು ಮಹಾಶಕ್ತಿಗಳ ನಡುವೆ ಸಂಗಮವಾಗಲೀ, ಸಂಘರ್ಷವಾಗಲೀ ಏರ್ಪಟ್ಟಾಗ ಅದಕ್ಕೊಂದು ಮಹಾಫಲವೇ ಇರಬೇಕಲ್ಲವೇ?

ವಿಧಿಚಿತ್ತವೇನಿತ್ತೋ?

ಬ್ರ್ರಹ್ಮ-ಕ್ಷತ್ರಗಳ ಮಹಾಮೇರುಗಳೆರಡು ವಸಿಷ್ಠ-ಕೌಶಿಕರ ರೂಪದಲ್ಲಿ ಸಂಧಿಸಿದವು ಅಲ್ಲಿ…

ಎತ್ತರದವರೆಲ್ಲ ಹತ್ತಿರದವರಲ್ಲ…

ಹತ್ತಿರದವರೆಲ್ಲ ಎತ್ತರದವರಾಗಿರಬೇಕಿಲ್ಲ…

ಎತ್ತರವಾಗಿದ್ದೂ ಹತ್ತಿರವಾಗುವವರು ಎಲ್ಲೋ ಭುವಿಗೊಬ್ಬರು…ಯುಗಕ್ಕೊಬ್ಬರು..!

ಎತ್ತರವನ್ನು ಕಂಡಾಗ ಕೌಶಿಕನಿಗೆ ವಸಿಷ್ಠರು ಸಾಕ್ಷಾತ್ ಪರಮಾತ್ಮನೇ ಎಂಬಂತೆ ತೋರಿಬಂದರು..

ಆದರೆ ಹತ್ತಿರವಾದಾಗ ಅವರು ತನ್ನಾತ್ಮವೇ ಎನ್ನಿಸುವಷ್ಟು ಆಪ್ತವಾದರು..!

ವಸಿಷ್ಠರ ಎತ್ತರ ಕೌಶಿಕನಲ್ಲಿ ವಿನಯವನ್ನು ಹುಟ್ಟುಹಾಕಿತು..

ಅವರ ಆಪ್ತತೆ ಕೌಶಿಕನಲ್ಲಿ ಪ್ರೀತಿಯನ್ನು ಮೂಡಿಸಿತು..

ಪ್ರೀತಿಯು ಆತನನ್ನು ಸಮೀಪಿಸುವಂತೆ ಮಾಡಿತು..

ವಿನಯವು ಆತನನ್ನು ಅವರ ಶ್ರೀಚರಣಗಳಲ್ಲಿ ಮಣಿಸಿತು..

ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?

ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?

ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ ‘ಸ್ವರಾಟ್’ ಆಗಲೆಂಬ ಆಶಯವಿದ್ದಿತು..

ರತ್ನಸಿಂಹಾಸನ ವಿರಾಜಿತನಾದ, ಮೃಷ್ಟಾನ್ನಭೋಜಿಯಾದ ಕೌಶಿಕನಿಗೆ ವಸಿಷ್ಠರಿತ್ತ ದರ್ಭಾಸನ, ಕಂದ-ಮೂಲ-ಫಲಗಳು, ಬದಲಾಗುವ ಭವಿಷ್ಯತ್ತಿನ ಅವ್ಯಕ್ತ ಸಂದೇಶವನ್ನು ನೀಡುವಂತಿದ್ದಿತು..

ಮತ್ತೆ ನಡೆಯಿತು ಮಹಾಮುನಿ ಮತ್ತು ಮಹಾರಾಜರ ನಡುವೆ ಕುಶಲಪ್ರಶ್ನೆಗಳ ವಿನಿಮಯ..

ಮಹೋನ್ನತ ವ್ಯಕ್ತಿತ್ವಗಳ ನಡುವೆ ನಡೆಯುವ ಕುಶಲಪ್ರಶ್ನೆಗಳು ಲೋಕಸಾಮಾನ್ಯರ ಬದುಕಿಗೆ ಆತ್ಮವಿಸ್ತರಣೆಯ ಕೈದೀವಿಗೆಗಳು..!

ಕೌಶಿಕನು ಪ್ರಶ್ನಿಸಿದ್ದು ತಪಸ್ಸು-ಅಗ್ನಿಹೋತ್ರಗಳ, ಶಿಷ್ಯ-ಶ್ರದ್ಧಾಳುಗಳ, ಗಿಡಮರಗಳ, ಮೃಗಪಕ್ಷಿಗಳ ಯೋಗಕ್ಷೇಮವನ್ನು..

ಮಹರ್ಷಿಯೊಬ್ಬರ ಆತ್ಮ ಅವರ ಶರೀರಕ್ಕಷ್ಟೇ ಸೀಮಿತವಾಗಿರಬಾರದು…

ಅದು ಶಿಷ್ಯರಲ್ಲಿ, ಮೃಗಪಕ್ಷಿಗಳಲ್ಲಿ, ಹೆಚ್ಚೇಕೆ ಗಿಡಮರಗಳಲ್ಲಿಯೂ ವಿಸ್ತರಿಸಿ ವ್ಯಾಪಿಸಿರಬೇಕು…

ಇವುಗಳಲ್ಲಿ ಎಲ್ಲಿ ನೋವಾದರೂ ತಾನು ನೋಯುವ, ಎಲ್ಲಿ ನಗುವಿದ್ದರೂ ತಾನು ನಲಿಯುವ ತಾದಾತ್ಮ್ಯ ಆತನಿಗಿರಬೇಕು …

ತನ್ನೊಡನಾಡಿಗಳಲ್ಲೆಲ್ಲ ತನ್ನನ್ನೇ ಕಾಣುವ ವಿಸ್ತೃತಾತ್ಮನಾಗಿರಬೇಕು ಆತ…

ಸರ್ವತ್ರ ಕುಶಲವೆಂದ ವಸಿಷ್ಠರು ಅಂತೆಯೇ ಕೌಶಿಕನ, ರಾಜ್ಯ-ಕೋಶಗಳ, ಸೈನ್ಯ-ಸಾಮಂತರ, ಪುತ್ರ-ಪೌತ್ರರ, ಮಂತ್ರಿ-ಮಿತ್ರರ, ಪರಿಜನ-ಪುರಜನರ ಕುಶಲ ವಿಚಾರಿಸಿದರು…

‘ದೇಶವು ದೇಹವಾದರೆ, ರಾಜನೇ ಅದರ ಆತ್ಮ.. ಸೈನ್ಯ-ಕೋಶಗಳು, ಮಂತ್ರಿಗಳು, ಪ್ರಜೆಗಳೇ ಅದರ ಅಂಗಾಂಗಗಳು-ಇಂದ್ರಿಯಗಳು’ ಎಂಬ ತತ್ತ್ವದ ಅಭಿವ್ಯಕ್ತಿ ವಸಿಷ್ಠರ ಕುಶಲ ಪ್ರಶ್ನೆಯಲ್ಲಿತ್ತು…!

ಮಹಾಪುರುಷರು ಕುಶಲವನ್ನು ಪ್ರಶ್ನಿಸುವ ಪರಿಯೇ ಬದುಕಿಗೆ ಇಷ್ಟು ದೊಡ್ಡ ಸಂದೇಶವನ್ನು ನೀಡುವುದಾದರೆ, ಅವರ ಬದುಕು ಇನ್ನೆಷ್ಟು ದೊಡ್ಡ ಸಂದೇಶವನ್ನು ಜೀವಿಗಳ ಜೀವನಕ್ಕೆ ನೀಡೀತು?

ವಸಿಷ್ಠ-ಕೌಶಿಕರ ಕುಶಲಸಂಭಾಷಣೆಯು ಜೀವಲೋಕದ ಕುಶಲಕ್ಕೇ ಕಾರಣವಾಗಬಹುದಾದ ಮಹತ್ತರಘಟನಾವಳಿಗಳನ್ನು ಅನಾವರಣಗೊಳಿಸಬಹುದೆಂಬುದನ್ನು ಯಾರು ತಾನೇ ಊಹಿಸಿದ್ದರು…!?

|| ಹರೇರಾಮ ||

ಮುಂದೆ ಓದಿ
11:55 PM

ರಾಮಸಾಗರಗಾಮಿನೀ…

Posted by ekanasu

ಭಕ್ತಿ ಸಿಂಚನ

|| ಹರೇರಾಮ ||

ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…?
ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…?
ರಾಮರಸ ಒಳಸೇರಿದಾಗ ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು…

ಬಿಂದುವಿನೊಳು ಸಿಂಧು ಹಿಡಿಸುವುದೇ…?
ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..?
ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…!




ಕೈಯಲ್ಲಿ ತಂಬೂರಿ…
ಕಣ್ತುಂಬ ರಾಮ…
ಬಾಯಲ್ಲಿ ರಸಕಾವ್ಯ…

ಗಂಗೋತ್ರಿಯಿಂದ ಹೊರಟು ಗಂಗಾಸಾಗರವನ್ನು ಸೇರುವ ಮುನ್ನ ದೇಶದೆಲ್ಲೆಡೆ ಹರಿಯವ ಗಂಗೆಯಂತೆ…
ಆಶ್ರಮದಿಂದ ಹೊರಹೊರಟು ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಹಾಡತೊಡಗಿದರವರು ರಾಮಕಥೆಯನ್ನು…

” ಐಸೀ ಲಾಗೀ ಲಗನ್…
ಮೀರಾ ಹೋಗಯೀ ಮಗನ್…
ವೋ ತೋ ಗಲೀ ಗಲೀ ಹರಿಗುನ್ ಗಾನೇ ಲಗೀ…”
ಕೃಷ್ಣರಸವೂಡಿದಾಗ ಅರಮನೆಯನ್ನು ಪರಿತ್ಯಜಿಸಿ, ಗಲ್ಲಿಗಲ್ಲಿಗಳಲ್ಲಿ ಹರಿಗುಣವನ್ನು ಹಾಡಿ ಹಾಡಿ ಕುಣಿದ, ಕುಣಿದು ಕುಣಿದು ಹಾಡಿದ ಮೀರಾ ನೆನಪಾಗುವಳಲ್ಲವೇ ಇಲ್ಲಿ…!?

ತನ್ನಲ್ಲಿ ತನ್ಮಯರಾದ ರಾಮತನಯರನ್ನು ಕಂಡು ರಾಮಾಯಣಮಾತೆಯೂ ಕರಗಿದಳೇನೋ…?
ಸೀತಾಮಾತೆಯನ್ನು ಬೀಳ್ಕೊಟ್ಟುಬಂದ ಕುಶಲವರನ್ನು ಅವಳು ತನ್ನ ಮಡಿಲೊಳಗೆ ಹಾಕಿಕೊಂಡಳು…
ಮಾತ್ರವಲ್ಲ, ಮನೆಗೆ ಕರೆದೊಯ್ದಳು…!

ಅಯೋಧ್ಯೆಯಲ್ಲದೆ ಮತ್ತಾವುದು ಅವಳ ಮನೆ…?
ತಮಸಾತೀರದಲ್ಲಿ ಹುಟ್ಟಿ, ಸರಯೂತೀರದಲ್ಲಿ ನೆಲೆಸಿ, ವಿಶ್ವದಲ್ಲೆಲ್ಲ ಪಸರಿಸಿದವಳಲ್ಲವೇ ಅವಳು…?

ಅದು ತಮ್ಮೂರು, ತಮ್ಮ ಮನೆ ಎಂಬ ಅರಿವಿಲ್ಲದೆಯೇ ಅಯೋಧ್ಯೆಯನ್ನು ಪ್ರವೇಶಿಸಿದರು ಕುಶಲವರು…
ಮನೆಗೈತರುವ ತನ್ನೊಡೆಯನ ಕುಡಿಗಳನ್ನು ಕಂಡು ಅವ್ಯಕ್ತವಾಗಿ ಮಿಡಿದಳು ಅಯೋಧ್ಯೆ…!
‘ಈರ್ವರು ರಾಮರು ಬಂದರೇ’ ಎಂಬ ಬೆರಗಿನಲ್ಲಿ ಹರಿಯುವುದನ್ನೇ ಮರೆತಳು ಸರಯೂ…!

ಬಾಲರಾಮನು ನಲಿದಾಡಿದ ಅಯೋಧ್ಯೆಯ ಬೀದಿಗಳಲ್ಲಿ – ರಾಜಬೀದಿಗಳಲ್ಲಿ ನಲಿನಲಿದು ಹಾಡಿದರು ರಾಮಬಾಲರು…
ಮಿಂಚಿನಮರಿಗಳು ಸಂಚರಿಸಿದಂತಾಯಿತು ನಗರಿಯಲ್ಲಿ…

ಕುಮಾರರ ಗಾನಧ್ವನಿಯು ಪಸರಿಸುತ್ತಿದ್ದಂತೆಯೇ…
ಮಲಗಿದವರೆದ್ದುಕುಳಿತರು…
ಕುಳಿತವರು ನಿಂತರು…
ನಿಂತವರು ನಾದದೆಡೆಗೆ ನಡೆದರು…
ಕೇಳುಗರ ಜೊತೆಗೂಡಿದರು…

ಅಯೋಜಿತವಾಗಿ ಕುಶಲವರ ರಾಮಾಯಣಗಾನವು ನಡೆಯತೊಡಗಿದಾಗ…
ಬೀದಿಯಲ್ಲಿ ನಡೆದುಹೋಗುವವರು ನಿಂತರು…
ನಿಂತವರು ಕುಳಿತರು…
ಕುಳಿತವರು ಕಣ್ಮುಚ್ಚಿದರು…
ಈ ಲೋಕವನ್ನೇ ಮರೆತರು…
ಕುಮಾರರ ಗಾನತರಂಗವು ಅಯೋಧ್ಯೆಯಲ್ಲಿ ಯಾರು-ಯಾರನ್ನು ತಲುಪಿತೋ ಅವರು ತಮಗರಿವಿಲ್ಲದಂತೆಯೇ ಆ ಕಡೆಗೆ ಸೆಳೆಯಲ್ಪಟ್ಟರು…

ಗ್ರಾಹಕನು ಬಯಸಿದ ವಸ್ತುವನ್ನು ಕೊಡುವಷ್ಟರಲ್ಲಿ ರಾಮಾಯಣವನ್ನು ಕೇಳಿಸಿಕೊಂಡ ವರ್ತಕನಿಗೆ ಮೌಲ್ಯವನ್ನು ತೆಗೆದುಕೊಳ್ಳುವುದೇ ಮರೆತುಹೋಯಿತು…
ಒಲೆಯ ಮೇಲಿಟ್ಟ ಹಾಲಿನಪಾತ್ರೆಯನ್ನು ಇಳಿಸುವುದನ್ನೇ ಮರೆತು ಗೃಹಿಣಿಯರು ಬೀದಿಗೆ ಧಾವಿಸಿದರು…
ಅಮ್ಮನ ಕೆಚ್ಚಲಲ್ಲಿ ಬಾಯಿಟ್ಟು ಹಸಿವಾರಿಸಿಕೊಳ್ಳುತ್ತಿದ್ದ ಎಳೆಗರುಗಳು ಮುಖ ತಿರುಗಿಸಿ, ಕಿವಿ ನಿಮಿರಿಸಿ ರಾಮಾಯಣ ಕೇಳತೊಡಗಿದವು…
ಕ್ಷಣವೊಂದರಲ್ಲಿ ಹತ್ತೂ ದಿಶೆಗಳನ್ನವಲೋಕಿಸುವ ಸಹಸ್ರದೃಷ್ಟಿಗಳಾದ ಪ್ರಹರಿಗಳ ಕಣ್ಣುಗಳು ಕುಮಾರರಲ್ಲಿ ಕೀಲಿಸಿಹೋದವು…
ವಜ್ರಕಠಿಣವಾದ ಅವರ ಮುಖದಲ್ಲಿ ಒಸರಿತು ಕಣ್ಣೀರು…

ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಸೇರಿದ ಜನಸಮೂಹವು ಕುಶಲವರು ಸಂಚರಿಸಿದಂತೆ ಜೊತೆಗೂಡಿ ಹಿಂಬಾಲಿಸತೊಡಗಿತು…
ಅಯೋಧ್ಯೆಯಲ್ಲಿ ಉಳಿದದ್ದು ಎರಡೇ ಸದ್ದು…
ಕುಶಲವರ ಗಾನವೊಂದಾದರೆ ಜನಸಮೂಹದ ಉದ್ಗಾರವಿನ್ನೊಂದು…

ಶರೀರದ ಎಲ್ಲಿಯೋ ಒಂದೆಡೆ ಉಂಟಾಗುವ ಸುಖಸ್ಪರ್ಶ ಕ್ಷಣಮಾತ್ರದಲ್ಲಿ ಹೃದಯವನ್ನು ತಲುಪಿ ಅಲ್ಲಿ ಮಧುರಭಾವಕಂಪನಗಳನ್ನೇರ್ಪಡಿಸುವಂತೆ…
ಅಯೋಧ್ಯೆಯ ಬೀದಿಗಳಲ್ಲುಂಟಾದ ಕುಶಲವರ ಪಾದಸ್ಪರ್ಶವು ಅರಮನೆಯ ಅಂತರಾತ್ಮದಲ್ಲಿ ಅವ್ಯಕ್ತ ವಾತ್ಸಲ್ಯಕಂಪನಗಳನ್ನೇರ್ಪಡಿಸಿತು…
ತನ್ನ ನಿತ್ಯಸಹಚರಿಯಾದ ಮೂಲಪ್ರಕೃತಿಯ ಚಿರಕಾಲವಿರಹದಿಂದ ಸಂತಪ್ತನಾದ ಪರಮಪುರುಷನಿಗೆ ಆಕೆಯ ಹೃದಯದುಸಿರೇ ತಂಗಾಳಿಯಾಗಿ ಅರಮನೆಯ ಸುತ್ತ ಸುಳಿದಾಡಿದಂತೆನಿಸತೊಡಗಿತು…
ಭೂಸುತೆಯನ್ನು ಬಹುಕಾಲದಿಂದ ಕಾಣದೆ ಕುಂದಿದ ಕಂಗಳು, ಆಕೆಯ ಸವಿನುಡಿಗಳನ್ನು ಕೇಳಲು ಅದೆಷ್ಟೋ ಕಾಲದಿಂದ ಕಾತರಿಸಿದ ಕಿವಿಗಳು ಅದೇನೋ ಸುಳಿವು ಸಿಕ್ಕಂತೆನಿಸಿ ತನುವಿನಲ್ಲಿ ರೋಮಾಂಚನ ತಂದವು…
ಯಾರ ಅಪ್ಪಣೆಯನ್ನೂ ಎದುರು ನೋಡದೆ ನೇರವಾಗಿ ಒಳಬರುವ ಮನೆಯ ಮಕ್ಕಳಂತೆ ಎಳೆಯ ಕೊರಳುಗಳಿಂದ ಹೊರಹೊಮ್ಮಿದ ಮಧುರಮಂಗಲನಿನಾದವು ಅರಮನೆಯ ಒಳಪ್ರವೇಶಿಸಿ ದೊರಯ ಕಿವಿದೆರೆಗಳನ್ನು ಮೀಟಿತು…
ಕಿರಿಬೆರಳ ಹಿಡಿದೆಳೆಯುವ ಎಳೆಯ ಕರಗಳಂತೆ ಬಳಿಕರೆಯತೊಡಗಿತು ಇಲ್ಲವೆನ್ನಲಾರದಂತೆ…
ಧರ್ಮವನ್ನುಳುಹಲು ದಂಡಕೆಯ ಕಂಟಕಗಳಿಂದ ವಿದ್ಧವಾದ ಶ್ರೀಪಾದಗಳು ಅಚಿಂತಿತವಾಗಿ – ಅಪ್ರಯತ್ನವಾಗಿ ಉಪ್ಪರಿಗೆಯ ಮೆಟ್ಟಿಲುಗಳನ್ನೇರಿದವು…

ಗಗನಾಂಗಣದ ಮಧ್ಯೆ ನಿಂತು ಧರಣಿಯೆಡೆಗೆ ದೃಷ್ಟಿ ಬೀರುವ ಪೂರ್ಣಚಂದ್ರನಿಗೆ ಸಾಗರಮಧ್ಯದಲ್ಲಿ ತನ್ನದೇ ಪ್ರತಿಬಿಂಬವು ಗೋಚರಿಸುವಂತೆ…
ಉಪ್ಪರಿಗೆಯಲ್ಲಿ ನಿಂತು ರಾಜಮಾರ್ಗದೆಡೆಗೆ ದೃಷ್ಟಿ ಹಾಯಿಸಿದ ರಾಮಚಂದ್ರನಿಗೆ ಗೋಚರಿಸಿದವು ಜನಸಾಗರದ ನಡುವೆ ಶೋಭಿಸುವ ತನ್ನದೇ ಅವಳಿ ಪ್ರತಿಬಿಂಬಗಳು…!

ಭುವಿಯನ್ನು ಬೆಳಗುವ ತನ್ನ ಎಳೆಯ ಕಿರಣಗಳ ಶೋಭೆಯನ್ನು ವೀಕ್ಷಿಸಲು ಸೂರ್ಯದೇವನು ಇಳಿದು ಬಂದಂತಿದ್ದ, ತನ್ನ ತರಂಗಗಳ ವಿಲಾಸವನ್ನು ವೀಕ್ಷಿಸಲು ಸಾಗರವೇ ಮೇಲೆದ್ದುಬಂದಂತಿದ್ದ ಅಪೂರ್ವ ಸನ್ನಿವೇಶವದು…

ಅಚ್ಚರಿ-ಮೆಚ್ಚುಗೆ ತುಂಬಿದ ಹೃದಯದಿಂದ; ಎವೆಯಿಕ್ಕದ ಕಂಗಳಿಂದ ಮೈಮರೆತು ಮಕ್ಕಳನ್ನು ನೋಡಿಯೇನೋಡಿದನು ಪುರುಷೋತ್ತಮ…

|| ಹರೇರಾಮ ||


ಟಿಪ್ಪಣಿ:
*ಸೋಮರಸ: ಒಂದು ದಿವ್ಯಲತೆಯಿಂದ ಮಾಡುವ ಪದಾರ್ಥ. ಅದು ಯಜ್ಞೋಪಯೋಗಿ ವಸ್ತು. ಆತ್ಮಸಾಧನೆಗೆ ಅತ್ಯುಪಯುಕ್ತ. ಅದರ ಪಾನ ಅಲೌಕಿಕ ಅನುಭವಕ್ಕೆ ಕಾರಣ…
*ಅಯೋಜಿತ: ಒಂದು ಕ್ರಮವತ್ತಾದ ಯೋಜನೆಯಿಲ್ಲದ…
*ಅವ್ಯಕ್ತವಾತ್ಸಲ್ಯಕಂಪನ: ಏನೆಂದು – ಏಕೆಂದು ತಿಳಿಯದೆ, ಹೃದಯದಲ್ಲಿ ಉಂಟಾದ ವಾತ್ಸಲ್ಯದ ಕಂಪನ…
*ಮೂಲಪ್ರಕೃತಿ – ಪರಮಪುರುಷ: ಮೂಲಪ್ರಕೃತಿಯೆಂದರೆ ಭಗವಂತನ ಮನದನ್ನೆ ಶ್ರೀದೇವಿ; ಪರಮಪುರುಷನೆಂದರೆ ಪರಮಾತ್ಮ. ಇಲ್ಲಿ ಸೀತಾ – ರಾಮರು…
-ಸಂಪಾದಕ
ಕೃಪೆ: ಹರೇರಾಮ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಸೆ.2 ರಿಂದ 7

ಮೂಡಬಿದಿರೆ: ಲಲಿತಕಲಾ ಅಕಾಡೆಮಿ ಚೆನ್ನೈ ಪ್ರಾಂತೀಯ ಶಾಖೆ ಹಾಗೂ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ 6 ದಿನಗಳ ಅಂತರ್ ಪ್ರಾಂತೀಯ (ಇಂಟರ್ ರೀಜನಲ್) ಕಲಾವಿದರ ಶಿಬಿರ ( "ಪೈಂಟರ್ಸ್ ಕ್ಯಾಂಪ್" )ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನಲ್ಲಿ ನಡೆಯಲಿದೆ.ಲಲಿತಕಲಾ ಅಕಾಡೆಮಿ ಇದೇ ಮೊದಲ ಬಾರಿಗೆ ಮೂಡಬಿದಿರೆಯಲ್ಲಿ ಆಯೋಜಿಸುತ್ತಿರುವ ಈ ಶಿಬಿರವನ್ನು ಸೆ.2ರಂದು ಬೆಳಗ್ಗೆ 11ಗಂಟೆಗೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಸೆ.7ರ ತನಕ ಶಿಬಿರ ನಿರಂತರವಾಗಿ ನಡೆಯಲಿದೆ.ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯ, ಹಿರಿಯ ಕಲಾವಿದ ಜೆ.ಎಂ.ಎಸ್.ಮಣಿ ಸಭಾಧ್ಯಕ್ಷತೆ ವಹಿಸುವರು. ಕರ್ನಾಟಕ, ಕೇರಳ, ಆಂಧ್ರ, ಮಹಾರಾಷ್ಟ್ರ, ತಮಿಳ್ನಾಡು, ಗೋವಾ ಮೊದಲಾದ ಕಡೆಗಳಿಂದ ಬಂದ 24ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಂಡು ಎರಡೆರಡು ಕಾಲಕೃತಿಗಳನ್ನು ರಚಿಸಲಿದ್ದಾರೆ.



ವಿವಿಧ ಪ್ರಾಂತ್ಯಗಳಲ್ಲಿರುವ ಹಿರಿಯ ಕಲಾವಿದರನ್ನು ಒಂದೆಡೆ ಕಲೆಹಾಕಿ ಕಲಾಭಿವ್ಯಕ್ತಿಗೊಳಿಸುವ ಮೂಲಕ ಈ ಪರಿಸರದ ಜನತೆಗೆ ಹಿರಿಯ ಕಲಾವಿದರೊಂದಿಗೆ ಉತ್ತಮ ಒಡನಾಟಮೂಡಿಸುವುದು ಹಾಗೂ , ಕಲೆಯ ವೈವಿಧ್ಯತೆಗಳ ಹಾಗೂ ಸಾಧ್ಯತೆಗಳ ಕುರಿತಾದ ವಿಭಿನ್ನ ನೋಟಗಳನ್ನು ಪ್ರದರ್ಶಿಸುವುದು ಶಿಬಿರದ ಉದ್ದೇಶವಾಗಿದೆ.ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ತನ್ನ ವಿರಾಸತ್ ಹಾಗೂ ನುಡಿಸಿರಿಗಳ ಸಂದರ್ಭದಲ್ಲಿ ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ಕಲಾಶಿಬಿರಗಳಿಂದ ಆಸಕ್ತಿಹೊಂದಿದ ಲಲಿತಕಲಾ ಅಕಾಡೆಮಿ ಈ ಬಾರಿಯ ಶಿಬಿರವನ್ನು ಆಳ್ವಾಸ್ ನಲ್ಲಿ ನಡೆಸಲುದ್ದೇಶಿಸಿದ್ದು ಉಲ್ಲೇಖಾರ್ಹ. ಅಕಾಡೆಮಿಯು ಕಳೆದಬಾರಿ ಗೋವಾದಲ್ಲಿ ಪ್ರಾಂತೀಯ ಕಲಾವಿದರ ಶಿಬಿರ ನಡೆಸಿತ್ತು.ಶಿಬಿರದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಹೆಸರು ಪಡೆದ 19ಪುರುಷ ಹಾಗೂ 5ಮಹಿಳಾ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ತರಿಕಿಟ ಕಲಾ ಕಮ್ಮಟ(ರಿ), ಜ್ಯೋತಿಗುಡ್ಡೆ, ತುಂಬೆ, ಬಂಟ್ವಾಳ ಇದರ ತಿಂಗಳ ಇರುಳು -70ನೇ ಕಾರ್ಯಕ್ರಮದ ಅಂಗವಾಗಿ ಶಂಭೂರು ಸರಕಾರಿ ಪ್ರೌಡಶಾಲಾ ವಿದ್ಯಾರ್ಥಿಗಳಿಂದ ನೆಲದ ಹಾಡು ನಾಟಕ ನಡೆಯಿತು.






ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ-2010ರ ವಿಜೇತ ತಂಡ ಈ ನಾಟಕ ಪ್ರಸ್ತುತಪಡಿಸಿತು. ಮನೋಜ್ಞವಾಗಿ ಅಭಿನಯಿಸಿದ ವಿದ್ಯಾರ್ಥಿಕಲಾವಿದರು ನೆಲ, ಜಲ, ಸಂಸ್ಕ್ರತಿಯ ಬಗ್ಗೆ ಅಚ್ಚುಕಟ್ಟಾಗಿ ನಾಟಕದ ಮುಖಾಂತರ ನೆರೆದವರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಿದರು. ನಾಟಕ ರಚನೆ ಚಿನ್ನಪ್ಪ ಜಾಲ್ಸೂರು, ನಿರ್ದೇಶನ ಕೃಷ್ಣಪ್ಪ ಬಂಬಿಲ ಹಾಗೂ ಈ ನಾಟಕಕ್ಕೆ ಉತ್ತಮ ಸಹಕಾರ ನೀಡಿದವರು ಮೋಹನ್ ಶೇಣಿ.

ಮುಂದೆ ಓದಿ
11:02 AM

ಚಿಂತನಾ ಬೈಠೆಕ್

Posted by ekanasu

ಪ್ರಾದೇಶಿಕ ಸುದ್ದಿ
ಬೆಳ್ತಂಗಡಿ : ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಸಭಾ ಮಂಟಪದಲ್ಲಿ ಸರಕಾರ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿನ ವಿರುದ್ದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂದಿರಗಳ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ವಿಜಯ ರಾಘವ ಪಡ್ವೆಟ್ನಾಯರು, ನ್ಯಾಯವಾದಿಗಳಾದ ಮುರಳಿ ಬಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ, ಸುಳ್ಯದ ಧರ್ಮಾಭಿಮಾನಿಗಳು ಮತ್ತು ಸಮಿತಿಯ ಸಕ್ರೀಯ ಸದಸ್ಯರಾದ ಲಕ್ಷ್ಮೀಶ ಗಬ್ಬಲಡ್ಕ ಮತ್ತು ರಾಮಭಟ್ ಹಾಗೂ ವಿಎಚ್ಪಿಯ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂಡಳಿಗಳ ಅಧ್ಯಕ್ಷರು, ವಿಶ್ವಸ್ಥರುಮತ್ತು ಆಡಳಿತ ಮುಕ್ತೇಸರರು ಇದ್ದರು. ಕಾನೂನಿಗಿಂತ ಧರ್ಮ ಶಇಚಿಂಷಂಔವಾಗಿದೆ, ಧರ್ಮಕ್ಕೆ ಪೂರಕವಾದ ಕಾನೂನು ಇರಬೇಕು ವಿನಃ ಕಾನೂನಿನ ಆಡಿಯಲ್ಲಿ ಧರ್ಮ ಬರುವುದಿಲ್ಲ ಎಂದು ವಿಜಯ ರಾಘವ ಪಡ್ವೆಟ್ನಾಯರು ಹೇಳಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಅಬ್ಬ ಹೀಗೂ ಇವೆಯೇ... ? ಈ ಪ್ರಶ್ನೆಗಳು ಸಹಜವಾಗಿಯೇ ಮೂಡುವಂತೆ ಮಾಡಿದ್ದವು ವಿಶ್ವಪ್ರದಕ್ಷಿಣೆ ಗೈದ ಜೋನ್ ಟೊರೆಂಟಿ ಅವರ ಛಾಯಾಚಿತ್ರಗಳು. ಅಲ್ಲಿ ನೆರಳು ಬೆಳಕುಗಳ ಅದ್ಭುತ ಸಂಯೋಜನೆಗಳಿದ್ದವು, ನಿಸರ್ಗವನ್ನು ಯಥಾವತ್ತಾಗಿ ಚಿತ್ರೀಕರಿಸಿದ ರೀತಿಗಳಿದ್ದವು, ತಾಯಿ ಮಕ್ಕಳ ಸಂಬಂಧಗಳ ಚಿತ್ರಗಳಿದ್ದವು , "ಇದು ವಾಸ್ತವ" ಎಂಬುದನ್ನು ಅರಹುವ ಚಿತ್ರಗಳು ಅನೇಕವಿದ್ದವು. ಇವೆಲ್ಲವುಗಳನ್ನು ಜಾನ್ ಅತ್ಯಂತ ಸೂಕ್ಷ್ಮವಾಗಿ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದ್ದರು. ಇವರ ಕಲಾತ್ಮಕ ಚಿತ್ರಗಳು ನೋಡುಗರನ್ನುಮೋಡಿಮಾಡಿದ್ದಂತೂ ದಿಟ. ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ "ಬೆಳ್ಳಿಸಾಕ್ಷಿ" ಚಲನಚಿತ್ರ ವೇದಿಕೆ ಹಮ್ಮಿಕೊಂಡ "ಛಾಯಾಚಿತ್ರ - ಒಂದು ನೋಟ " ಕಾರ್ಯಕ್ರಮದಲ್ಲಿ ಜಾನ್ ತಮ್ಮ ಕ್ಯಾಮಾರಾಗಳಲ್ಲಿ ಸೆರೆಹಿಡಿದ ನೂರಾರು ಛಾಯಾಚಿತ್ರಗಳನ್ನು ಪ್ರದರ್ಶಿಸಿದರು. ಅದಕ್ಕೆ ಸೂಕ್ತ ವಿವರಣೆಗಳನ್ನೂ ನೀಡಿದರು. ಪ್ರಾಂಶುಪಾಲ ಪ್ರೊ.ಕುರಿಯನ್, ಉಪನ್ಯಾಸಕರುಗಳಾದ ಮೌಲ್ಯ ಬಿ. , ಹರೀಶ್ ಆದೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಂದೆ ಓದಿ

ವಿಶೇಷ ವರದಿ
ಉಡುಪಿ : ಕೊರೆತ ತಡೆಗಟ್ಟುವ ಸಲುವಾಗಿ ಸಮುದ್ರ ದಂಡೆಗೆ ಸುರಿದ ಶಿಲೆ ಕಲ್ಲು ರಾಶಿ ಕಡಲ ಒಡಲೊಳಗೆ ಜಾರಿಕೊಳ್ಳುತ್ತಿದೆ. ಸಮುದ್ರ ರಾಜನೆಗೆ ಎಣೆಯುಂಟೇ? ರಾಷ್ಟ್ರೀಯ ಹೆದ್ದಾರಿ 17ರ ಮಗ್ಗಲಲ್ಲಿ ಒಪ್ಪ,ಓರಣವಿಲ್ಲದೆ ಸುರಿದ ಕಲ್ಲು ಸಮುದ್ರ ಪಾಲಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ17 ಅಪಾಯದ ಅಂಚಿಗೆ ತಲುಪಿದೆ. ಸೌಪರ್ಣಿಕಾ ಮತ್ತು ಸಮುದ್ರ ತೀರದ ನಡುವೆ ಹಾದು ಹೋಗುವ ಹೆದ್ದಾರಿಯ ಬುಡಕ್ಕೆ ಸಮುದ್ರದ ಅಲೆ ಎಳ್ಳುನೀರು ಬಿಡುತ್ತಿದೆ. ತ್ರಾಸಿಯಿಂದ ಮರವಂತೆವರೆಗಿನ ಸಮುದ್ರ ತೀರ ಕೊರೆತಕ್ಕೆ ಸಿಕ್ಕಿ ನಲುಗಿದೆ. ಶಾಶ್ವತ ಸಮುದ್ರ ಕೊರೆತ ಪರಿಹಾರ ಮಾತ್ರ ಪುಸ್ತಕದ ಬದನೆಕಾಯಿ. ಪ್ರತಿ ಮಳೆಗಾಲ ಬಂದಾಗಲೂ ಸಮುದ್ರ ಕೊರೆತ ಪರಿಹಾರದ ಅದೇ ರಾಗ, ಅದೇ ಹಾಡು. ಕೊರೆತ ಮಾತ್ರ ಅವ್ಯಾಹುತ.



ತ್ರಾಸಿ ಪ್ರಕೃತಿ ಗಿಫ್ಟ್: ತ್ರಾಸಿ ಬೀಚ್ ವಿಶ್ವವಿಖ್ಯಾತ ಎಂಬ ಮನ್ನಣೆಗೆ ಪತ್ರವಾಗಿದೆ. ಒಂದೆಡೆ ರಕ್ಕಸಾಕಾರದ ಅಲೆಗಳ ಹೋರು. ಮತ್ತೊಂದೆಡೆ ಮಂದಗಾಮಿನಿಯಾಗಿ ಹರಿವ ಸೌಪರ್ಣಿಕಾ ನದಿ, ಕತ್ತೆತ್ತಿ ಬಾನಂಗಳಕ್ಕೆ ಕಣ್ಣು ಹಾಯಿಸಿದರೆ ಅಂಬರವನ್ನೆಲ್ಲಾ ಕೆಂಬಣ್ಣದ ಉಂಡೆ ಮಾಡಿ ಸಮುದ್ರಕ್ಕೆ ಜಾರಿಕೊಳ್ಳುವ ಸೂರ್ಯ ದೇವರ ಒಡ್ಡೋಲಗ. ಮತ್ತೊಂಡೆದೆ ಪಶ್ವಿಮ ಘಟ್ಟದ ಸಾಲು. ಇವೆಲ್ಲದರ ನಡೆವೆ ಸಾಗುವ ಹೆದ್ದಾರಿ. ಜಗ್ಗತಿನ ಅಂದ,ಚಂದವನ್ನೆಲ್ಲಾ ತಂದು ಸುರಿದು ಗುಡ್ಡೆ ಹಾಕಿದಂತೆ ಕಾಣುವ `ತ್ರಾಸಿ ಬೀಚ್' ಮಾನವರಿಗಾಗಿ ಪ್ರಾಕೃತಿ ಮಾತೆ ನೀಡಿದ `ಕೊಡುಗೆ'. ಎಲ್ಲಾ ಇದ್ದರೂ, ಹತ್ತರಲ್ಲಿ ಹನ್ನೊಂದಾಗಿ ಉಳಿದಿದೆ ತ್ರಾಸಿ ಬೀಚ್.

ತ್ರಾಸಿ ಬೀಚ್ ಕೊರೆತ ಇಂದು ನಿನ್ನೆಯ ಕತೆಯಲ್ಲ. ಪ್ರತಿ ಮಳೆಗಾಲದಲ್ಲೂ ಬೀಚ್ ಕೊರೆತದ ಅಪಾಯಕ್ಕೆ ಸಿಲುಕುತ್ತಲೇ ಇದೆ. ಕೊಡಲ ಕೊರೆತ ನಿರಂತರವಾಗಿ ನಡೆದುಕೊಂಡು ಬಂದ ಹಾಗೆ ಜನಪ್ರತಿನಿಧಿಗಳ ಆಶ್ವಾಸನೆಗಳು ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕಲ್ಲು ಗುಡ್ಡೆ ಹಾಕಿದ್ದು ಬಿಟ್ಟರೆ ಇದೂವರೆಗೆ ತ್ರಾಸಿ ಬೀಚ್ ಉದ್ದಾರವಾಗಿದ್ದು ಅಷ್ಟಕಷ್ಟೇ. ಅಚ್ಚರಿಯ ವಿಷಯವೆಂದರೆ ತ್ರಾಸಿ ಬೀಚ್ ಅಭಿವೃದ್ಧಿ ಹೆಸರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಉದ್ದಾರವಾಗಿದ್ದಾರೆ ಎನ್ನೋದು ಸ್ಥಳೀಯರ ಆರೋಪ. ಇಂದಿಗೂ ತ್ರಾಸಿ ಬೀಚ್ ಹಾಳುಕೊಂಪೆಯಾಗಿದೆ.

ಹೇಸಿಗೆ ಹುಟ್ಟಿಸುವ ಮಕ್ಕಳ ಪಾರ್ಕ್, ಹಳ್ಳಹಿಡಿದ `ಹೈಮಾಸ್ಕ್' ದೀಪ ಮತ್ತು ವಿಶ್ರಾತಿ `ಬೆಂಚ್'. ಪ್ರಾವಾಸಿ ಮಂದಿರವಿದ್ದರೂ ಉಪಯೋಗಕ್ಕಿಲ್ಲ. ಒಟ್ಟಾರೆ ತ್ರಾಸಿ ಬೀಚ್ ಇದ್ದರೂ ಒಂದೆ ಇಲ್ಲದಿದ್ದರೂ ಒಂದೆ. ಪ್ರವಾಸೋದಮಕ್ಕಂತೂ ತ್ರಾಸಿ ಮರೆತೇ ಹೋಗಿದೆ.

ಹಿಂದೆ ಹೀಗಿರಲಿಲ್ಲ : ತ್ರಾಸಿ ಬೀಚ್ ಹಿಂದೆ ಹೀಗಿರಲಿಲ್ಲ. ಸುಮಾರು ಎರಡು ಕೀ.ಮೀ. ಅಷ್ಟು ಸಮುದ್ರ ಹಿಂದಕ್ಕೆ ಇತ್ತು. ಸಮುದ್ರ ಮತ್ತು ಹೆದ್ದಾರಿ ಮಗ್ಗಲಲ್ಲಿ ಗಾಳಿ ತೋಪು ನಿರ್ಮಿಸಲಾಗಿತ್ತು. ಸಂಜೆ ಹೊತ್ತು ಸೂರ್ಯಾಸ್ತ ನೋಡಲು ಗಾಳಿ ಮರೆದ ತಂಪಿರುತ್ತಿತ್ತು. ಸ್ಥಳೀಯರು ಇಂದಿಗೂ ಗಾಳಿ ನೆರಳಲ್ಲಿ ಓಡಾಡಿದ `ಖುಷಿ' ಮರೆತಿಲ್ಲ. ಇದು 30 ವರ್ಷದ ಹಿಂದಿನ ಕತೆ. ಈಗ ತ್ರಾಸಿ ಚಿತ್ರಣವೇ ಬದಲಾಗಿದೆ. ಸಮುದ್ರ 2 ಕೀ.ಮೀ.ಅಷ್ಟು ಮುಂದಕ್ಕೆ ಬಂದಿದೆ. ಸಮುದ್ರ ತಟದಲ್ಲಿದ್ದ ಗಾಳಿ ಮರಗಳು ನೆಗೆದುಬಿದ್ದು ಅದೆಷ್ಟೇ ಕಾಲವಾಯ್ತು. ಸೂರ್ಯಾಸ್ತ ಬಕಪಕ್ಷಿಯ ಹಾಗೆ ನಿಂತು ನೋಡಬೇಕು. ಪ್ರವಾಸಿಗರಿಗಂತೂ ಇಲ್ಲಿ ಕಿಲುಬುಕಾಸಿನ ಅನುಕೂಲವಿಲ್ಲ. ಒಟ್ಟಿನಲ್ಲಿ ತ್ರಾಸಿ ಹೆಸರಿಗಷ್ಟೇ ವಿಶ್ವವಿಖ್ಯಾತ!

ಮನೋರಮ ಮಧ್ವರಾಜ್ ಅವರು ಲೋಕಸಭ ಸದಸ್ಯರಾಗಿದ್ದ ಕಾಲದಲ್ಲಿ ಮಲ್ಪೆ ಮತ್ತು ತ್ರಾಸಿ ಬೀಜ್ ಅಭಿವೃದ್ಧಿಗೆ 42 ಲಕ್ಷ ರೂ. ಅನುದಾನ ತಂದಿದ್ದರು. ಅದರಲ್ಲಿ ಮಲ್ಪೆ ಮತ್ತು ತ್ರಾಸಿ ಬೀಚ್ಗಳಲ್ಲಿ ಪ್ರವಾಸಿಗರಿಗೆ ಮೂಲ ಭೂತ ಸೌಲಭ್ಯ ಕಲ್ಲಿಸುವ ಜೊತೆಗೆ `ಹೈಮಾಸ್ಕ್' ದೀಪ ಅಳವಡಿಸಲು ಅನುದಾನ ಮೀಸಲಿಡಲಾಗಿತ್ತು. ಅನುದಾನ ಮಾತ್ರ ಖರ್ಚಾಯಿತು. ಹಿಂದೆ ಮುಂದೆ ಯೋಚಿಸದೆ ನಡೆಸಿದ ಕಾಮಗಾರಿಯಿಂದ ಹೈಮಾಸ್ಕ್ ದೀಪ ಸಮುದ್ರ ಪಾಲಾಯಿತು. ಒರಗು ಬೆಂಚ್ ಸಮುದ್ರ ಹಾರಿ ಆತ್ಮಹತ್ಯೆ ಮಾಡಿಕೊಂಡಿತು. ಮಕ್ಕಳ ಉದ್ಯಾನವನ ಮುಖ ಅಡಿಯಾಗಿ ಮಲಗಿದೆ. ಅಭಿವೃದ್ದಿ ಹೆಸರಲ್ಲಿ ಯಾರೋ ಅಭಿವೃದ್ಧಿಯಾದರು!

ಪರಿಹಾರ ಇಲ್ಲದಿದ್ದರೆ ಜಲಪ್ರಳಯ : ತ್ರಾಸಿ ಕಡಲ ಕಿನಾರೆ ಕೊರೆತಕ್ಕೆ ಶಾಶ್ವತ ಪರಿಹಾರ ನೀಡದಿದ್ದರೆ ವಿಶಾಲ ಭೂ ಪ್ರದೇಶ ಮತ್ತು ನೂರಾರು ಕುಟುಂಬಗಳು ನಿರ್ನಾಮವಾಗಲಿವೆ. ಕುರು, ಹಡವು, ಸಾಲ್ಬುಡ, ಪಡುಕೋಣೆ, ಆನಗೋಡು ಮುಂತಾದ ಊರುಗಳು ನಾಮಾವಶೇಷ ಹೊಂದಲಿದೆ. ಮರವಂತೆ ಮಹಾರಾಜ ಶ್ರೀ ವರಹಾ ಸ್ವಾಮಿ ಸಮುದ್ರ ಕೊರತಕ್ಕೆ ಕಾವಲಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಸ್ವಾಮಿ ಕಾವಲಿದ್ದರೂ, ಎರಡು ಕೀ.ಮೀ.ಮುಂದಕ್ಕೆ ಬಂದ ಸಮುದ್ರಕ್ಕೆ ಹೆದ್ದಾರಿ ಯಾವ ಮಹಾ! ಹಾಗಾನೇದರೂ ಸಮುದ್ರ ಹೆದ್ದಾರಿ ಹಾರಿ ಪಕ್ಕಕ್ಕೆ ನೆಗೆದರೆ ಜಲಪ್ರಳಯ ನಿಶ್ಚಿತ.

ಕಳೆದ ಕೆಲ ವರ್ಷದ ಹಿಂದೆ ಸಮುದ್ರ ರಾಷ್ಟ್ರೀಯ ಹೆದ್ದಾರಿ 17 ಅಂಚನ್ನು ಸವರಿ ಹಾಕಿತ್ತು. ಆ ಸಮಯದಲ್ಲಿ ಸ್ಥಳಕ್ಕೆ ಬಂದ ಕೇಂದ್ರ ಸಚಿವ ಮುನಿಯಪ್ಪ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ನೀಡುವ ಭತವಸೆ ನೀಡಿದ್ದರು. ಸಮುದ್ರ ಕೊರೆತ ತಡೆಗೆ ಒಂದಿಷ್ಟು ಕಲ್ಲು ಹಾಕದ್ದು ಬಿಟ್ಟರೆ ಮತ್ತೇನೂ ಆಗಿಲ್ಲ. ಸಮುದ್ರ ತೀರದಲ್ಲಿ ಏಕಪೋಕವಿಲ್ಲದೆ ಒಟ್ರಾಸಿ ಕಲ್ಲು ಹಾಕಿದ್ದರಿಂದ ಕಲ್ಲೆಲ್ಲಾ ಸಮುದ್ರ ಪಾಲಾಗುತ್ತಿದೆ. ಮತ್ತೆ ಅದೇ ಕೊರೆತ, ಅದೇ ಆಶ್ವಾಸನೆ. ಇನ್ನಾದರೂ ಎಚ್ಚತ್ತು ತ್ರಾಸಿ ಕಡಲ ಕಿನಾರೆ ಕೊರೆತಕ್ಕೆ ಮಂಗಳ ಹಾಡದಿದ್ದರೆ ಜನ ಶಾಪಹಾಕಿಯಾರು?

ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ

|| ಹರೇರಾಮ ||

ಆಹಾ ! ಎಂಥಾ ದೃಶ್ಯವದು…!

ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…!
ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..!

ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ…

ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ…

ರೂಪ ತನ್ನದೇ..!

ಸ್ವರ ತನ್ನದೇ..!




ಕೊನೆಗೆ ಗಮನಿಸಿ ಕೇಳಿದರೆ ಕುಮಾರರು ಹಾಡುತ್ತಿರುವ ಕಥೆಯೂ ತನ್ನದೇ..!

ಎಲ್ಲೆಲ್ಲೂ ತಾನೇ ! ತನ್ನ ತನವೇ..!

ರಾಮನು ಪ್ರೀತಿಸದವರಾರು..?

ಪರಮಾತ್ಮ ಚೈತನ್ಯವು ತಲುಪದ ಸ್ಥಳವಾವುದು..?

ಸೂರ್ಯಕಿರಣಗಳು ಸ್ಪರ್ಶಿಸದ ಜೀವವೆಲ್ಲಿ..?

ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವನವನು..!

ಆದರೆ ಅದೇಕೋ…ಕಣ್ಣರಿಯದ, ಕರುಳರಿಯುವ ಕಾರಣವಿರಬೇಕು..! ಆ ಮಕ್ಕಳಲ್ಲಿ ಅಸಾಮಾನ್ಯವಾದ ಪ್ರೀತಿಯುಂಟಾಯಿತು ಪ್ರಭುವಿಗೆ…

ಮೊದಲ ನೋಟದ ಪ್ರೀತಿಯದು..

ಸಾಮಾನ್ಯವಾಗಿ ಬದುಕಿನಲ್ಲಿ ಯಾವುದಾದರೊಂದು ವಸ್ತುವಿನಲ್ಲೋ, ವ್ಯಕ್ತಿಯಲ್ಲೋ ಪ್ರೀತಿಯುಂಟಾಗುವುದು ಪ್ರಯೋಜನವನ್ನು ಕಂಡಾಗ..

ಆದರೆ ಅತ್ಯಂತ ಅಪರೂಪಕ್ಕೊಮ್ಮೆ ಕೆಲವರನ್ನು ಕಂಡೊಡನೆಯೇ ಕಾರಣವಿಲ್ಲದೆಯೇ ಪ್ರೀತಿ ಮೂಡುವುದೂ ಉಂಟು..

ಅದು ನೈಸರ್ಗಿಕವಾದ ಪ್ರೀತಿ…ಅದುವೇ ನಿಜವಾದ ಪ್ರೀತಿ..!

ರಾಮನಿಗೆ ಕುಶಲವರನ್ನು ಕಂಡೊಡನೆಯೇ ಉಂಟಾದ ಪ್ರೀತಿ ಅಕೃತ್ರಿಮವಾದುದು…ಅನಿಮಿತ್ತವಾದುದು..

ಪ್ರೀತಿಯು ಪರ್ಯವಸಾನವಾಗುವುದು ಸಾಮೀಪ್ಯದಲ್ಲಿ…

ಸಾಮೀಪ್ಯವು ಪರ್ಯವಸಾನವಾಗುವುದು ಅದ್ವೈತದಲ್ಲಿ…

ಕುಶಲವರನ್ನು ಕುರಿತು ರಾಮನ ಅಂತರಾಳದಲ್ಲಿ ಅಂಕುರಿಸಿದ ಪ್ರೀತಿ ತನ್ನ ಮೊದಲ ಹೆಜ್ಜೆಯಿಟ್ಟಿತು…

ಅದಾಗಲೇ ಮನದೊಳಗೆ ಪ್ರವೇಶಿಸಿದ್ದ ಮುದ್ದುಮಕ್ಕಳನ್ನು ಮನೆಯೊಳಗೆ ಬರಮಾಡಿಕೊಂಡನವನು…

ರಾಮನೆಂಬ ಬಿಂದುವಿನಲ್ಲಿ ಕುಶಲವರೆಂಬ ವಿಸರ್ಗವು ಸೇರಿದಾಗ ಅಪೂರ್ವ ಪ್ರೇಮತ್ರಿಕೋಣವೊಂದು ಅಯೋಧ್ಯೆಯ ಅರಮನೆಯಲ್ಲಿ ಅನಾವರಣಗೊಂಡಿತು…

ಕಾನನಮಧ್ಯದಲ್ಲಿ ಅರಳಿ, ಹಳ್ಳಿ ಸೇರಿ ಹಾರವಾಗಿ, ಮಹಾನಗರದ ಮಂದಿರಮಧ್ಯದಲ್ಲಿ ಬೆಳಗುವ ಮೂರ್ತಿಯ ಮುಡಿಯೇರಿ ಶೋಭಿಸುವ ಸುಮಗಳಂತೆ…

ಪ್ರಕೃತಿಗರ್ಭದಲ್ಲಿ ಜನಿಸಿ, ರತ್ನಕಾರನಿಂದ ಸಂಸ್ಕಾರ ಪಡೆದು, ಅರಮನೆ ಸೇರಿ, ಮಹಾರಾಜನ ಮುಕುಟವನ್ನಲಂಕರಿಸುವ ಮಾಣಿಕ್ಯಗಳಂತೆ…

ತಮಸಾತೀರದ ಆಶ್ರಮದಲ್ಲ ಜನಿಸಿ, ವಾಲ್ಮೀಕಿಗಳಿಂದ ಸಂಸ್ಕಾರ ಪಡೆದು, ಅಯೋಧ್ಯಾಮಹಾನಗರಿಯ ಅರಮನೆ ಸೇರಿ, ದೇವರ ದೇವನ – ರಾಜಾಧಿರಾಜನ ಸಾನ್ನಿಧ್ಯದಲ್ಲಿ ಶೋಭಿಸಿದರು ಕುಶಲವರು…

ಆವರೆಗೆ ಕುಮಾರರು ಗಿರಿ-ನದೀ-ಕಾನನಗಳನ್ನು ನೋಡಿದ್ದರು..

ಆಶ್ರಮಗಳನ್ನು, ಋಷಿ-ಮುನಿಗಳನ್ನು ನೋಡಿದ್ದರು..

ನಗರ-ನಾಗರಿಕರನ್ನು, ಅರಮನೆ-ಅರಸರನ್ನು ಕಥೆಯಲ್ಲಿ ಕೇಳಿದ್ದರು..ಕಣ್ಣಲ್ಲಿ ನೋಡಿರಲಿಲ್ಲ…!

ಆದರೆ ಅದೇ ಮೊದಲಾಗಿ ನೋಡಿದರೂ ಅಯೋಧ್ಯೆ ಅವರಿಗೆ ಹೊಸದೆನಿಸಲಿಲ್ಲ..!

ಅರಮನೆ ಮನೆಯಲ್ಲವೆನಿಸಲಿಲ್ಲ..!

ಅರಸ ಅಪರಿಚಿತನೆನಿಸಲಿಲ್ಲ..!

ಭೂಮಂಡಲದ ಸರ್ವೋಚ್ಚ ಸಿಂಹಾಸನವೇರಿ ಮೆರೆಯುವ ಮುಗಿಲೆತ್ತರದ ರಾಮನೇಕೋ ಅತಿಹತ್ತಿರದವನಾಗಿ ಕಂಡುಬಂದ..!

ರಾಮನನ್ನು ನೋಡುವಾಗ ಅದೇಕೋ ಅಮ್ಮನ ನೆನಪಾಯಿತು ಆ ಮಕ್ಕಳಿಗೆ…!

ಕೆಲವು ವ್ಯಕ್ತಿತ್ವಗಳು ಅದೆಷ್ಟು ದೂರವಿದ್ದರೂ ಹತ್ತಿರವೇ ಇರುತ್ತವೆ…

ಕಣ್ಮರೆಯಾದರೂ ಮತ್ತೆ ಮತ್ತೆ ಕಣ್ಮುಂದೆ ಬರುತ್ತವೆ…

ವಿಧಿವಿಪರ್ಯಾಸದಲ್ಲಿ ಸೀತೆಯನ್ನು ರಾಮನೇ ಕಾಡಿಗೆ ಕಳಿಸಿಕೊಟ್ಟಿದ್ದೂ ನಿಜ…

ಮಕ್ಕಳು ಆಕೆಯನ್ನು ಬೀಳ್ಕೊಟ್ಟು ಅಯೋಧ್ಯೆಗೆ ಬಂದಿದ್ದೂ ನಿಜ…

ರಾಮನಿಗೆ ಕಣ್ಮುಂದೆ ಶೋಭಿಸುವ ಮಕ್ಕಳಲ್ಲಿ ಕಾಣದ ಮಡದಿ ತೋರಿಬಂದರೆ…

ಆ ಮಕ್ಕಳಿಗೆ ರಾಮನ ಸಾನ್ನಿಧ್ಯ ಅಮ್ಮನ ಮಡಿಲನ್ನು ನೆನಪಿಸಿತು…

ರಾಮನೇ ಗಂಗೆ;

ಯಮಳರೇ ಯಮುನೆ;

ಸೀತೆಯೇ ಗುಪ್ತಗಾಮಿನಿ ಸರಸ್ವತಿ ;

ಅಯೋಧ್ಯೆಯೇ ಪ್ರಯಾಗವಾಯಿತು ಆ ಕ್ಷಣದಲ್ಲಿ…

ವಾಮನರಾಗಿ ಅಯೋಧ್ಯೆಯನ್ನು ಪ್ರವೇಶಿಸಿದ ಕುಶಲವರು ರಾಮನ ಹೃದಯದಲ್ಲಿ ತ್ರಿವಿಕ್ರಮರಾಗಿ ಬೆಳೆದರು…

ಬಲಿ ಚಕ್ರವರ್ತಿ ನೀಡಿದ್ದು ಮೂರು ಹೆಜ್ಜೆಗಳನ್ನು…

ಆದರೆ ವಾಮನನು ಪಡೆದುಕೊಂಡಿದ್ದು ಮೂರು ಲೋಕಗಳನ್ನು…

ಕ್ಷಣಕಾಲ ಕಿವಿಗೊಟ್ಟು ರಾಮಾಯಣದ ಕೆಲಬಿಂದುಗಳನ್ನು ಆಲಿಸಿದ ರಾಮನಿಗೆ ಕುಶಲವರ ಮುಖದಿಂದ ಸಂಪೂರ್ಣ ರಾಮಾಯಣವನ್ನು ಸವಿಯುವ ಮನಸ್ಸಾಯಿತು…

‘ಏಕಃ ಸ್ವಾದು ನ ಭುಂಜೀತ’…

ಏನನ್ನಾದರೂ ಒಬ್ಬನೇ ಸವಿಯುವುದು ರಾಮನ ಸ್ವಭಾವವೇ ಅಲ್ಲ…

ಹಾಗಾಗಿ ಸಹೋದರರು, ಸಚಿವರು, ಮತ್ತಿತರ ಸಹೃದಯರನ್ನು ರಾಮಾಯಣ ಸವಿಯಲು ಸಾರಿ ಕರೆದನು ಶ್ರೀರಾಮ…

ಪೀಠವೇ ಪೀಠಿಕೆಯನ್ನು ಕೊಟ್ಟರೆ…?

ಕಥಾನಾಯಕನೇ ಕಾವ್ಯಕ್ಕೆ ಮುನ್ನುಡಿಯಿತ್ತರೆ…?

ನಡೆದದ್ದು ಹಾಗೆಯೇ…

ಸ್ವಯಂ ಶ್ರೀರಾಮನೇ ರಾಮಾಯಣಗಾನಕ್ಕೆ ಪ್ರಸ್ತಾವನೆ ಗೈದನೆಂದರೆ ಅದು ಅದ್ಭುತವಲ್ಲವೇ…?

ಸ್ವಯಂ ಗಾಂಧರ್ವತತ್ತ್ವಜ್ಞನೇ ಆದ ಆ ನರದೇವನು ತನ್ನ ಮಧುರಗಂಭೀರಸ್ವರದಿಂದ ಸೇರಿದವರ ಮನಗಳನ್ನು ಸೂರೆಗೊಳ್ಳುತ್ತಾ ಆ ಮಹಾಸಭೆಯನ್ನುದ್ದೇಶಿಸಿ ನುಡಿಯಲುಪಕ್ರಮಿಸಿದನು…

“ಈ ದಿವ್ಯ ಸಭೆಯಲ್ಲಿ ಮಂಡಿಸಿರುವ ಸುಕೃತಿಚೇತನರೇ,

ಈ ಬಾಲಕರಲ್ಲಿ ಅಣು ಮಹತ್ತುಗಳ ಅದ್ಭುತ ಸಮಾವೇಶವನ್ನು ನೋಡಿದಿರಾ..!

ಪುಟ್ಟ ಎದೆಗಳಲ್ಲಿ ಬಹುದೊಡ್ಡ ಗ್ರಂಥ..

ಪುಟ್ಟಪುಟ್ಟ ಕೊರಳುಗಳಲ್ಲಿ ಸಂಗೀತ ಸಾಮ್ರಾಜ್ಯದ ಸಾರ ಸರ್ವಸ್ವ ..

ವಯಸ್ಸು ಕಿರಿದು..

ತಪಸ್ಸು ಹಿರಿದು..!

ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..!

ಸ್ಫಟಿಕದ ಪಾತ್ರೆಯಲ್ಲಿ ಬೆಳಗುವ ಜ್ಯೋತಿಯಂತೆ ಮಾನವತನುವಿನಲ್ಲಿ ಮಿನುಗುವ ದೇವಕಾಂತಿ..!

ಈ ಯಮಳ ವಾಮನರು ತಮ್ಮ ಸ್ವರವಿಸ್ತಾರದಿಂದ ತ್ರಿವಿಕ್ರಮರಾಗಿ ಬೆಳೆದು ನಮ್ಮೆಲ್ಲರನ್ನೂ ಆವರಿಸುತ್ತಿದ್ದಾರೆ.

ಈ ಲೋಕವನ್ನೇ ಮರೆಸಿ, ಇನ್ನಾವುದೋ ಲೋಕವನ್ನು ತೆರೆಸುತ್ತಿದ್ದಾರೆ..!

ಎಂದೋ ನಡೆದುಹೋದ ಘಟನೆಗಳು ಈ ಗಾಯನವನ್ನಾಲಿಸುತ್ತಿದ್ದಂತೆಯೇ ಮರುಹುಟ್ಟು ತಾಳುತ್ತಿವೆ..

ಎಂದೆಂದೂ ಕಾಣದ ಆನಂದವೊಂದು ಎಲ್ಲೆಡೆ ಅಂಕುರಿಸುತ್ತಿದೆ..

ಅಲೌಕಿಕವಾದ ಈ ಗಾಯನವು ನನ್ನನ್ನೂ ಕೂಡ ನನ್ನ ಪರಮೋಚ್ಚ ಸತ್ತ್ವದೆತ್ತರಕ್ಕೆ ಎತ್ತುತ್ತಿದೆ..!

ಜೀವಕ್ಷೇಮಂಕರವಾದ ಈ ಧರ್ಮಾಖ್ಯಾನವನ್ನು ಕುಮಾರರು ಮೈಮನವೆಲ್ಲ ಮುಖವಾಗಿ ಆಮೂಲಾಗ್ರವಾಗಿ ಹಾಡಲಿ..

ಮೈಮನವೆಲ್ಲ ಕಿವಿಯಾಗಿ ಕೇಳೋಣ ನಾವೆಲ್ಲರೂ…”

ಸಭೆಯನ್ನುದ್ದೇಶಿಸಿ ಹೀಗೆಂದ ಶ್ರೀರಾಮನು ತನ್ನ ಬೆಳದಿಂಗಳ ದೃಷ್ಟಿಯನ್ನು ಕುಮಾರರೆಡೆಗೆ ಬೀರುತ್ತ ಹಾಡಲು ಪ್ರೇರಿಸಿದನು..

ಅಧರ ಮಧುರ, ವದನ ಮಧುರ, ನಯನ ಮಧುರ, ಹೆಚ್ಚೇಕೆ ಸರ್ವಮಧುರನಾದ ಮಧುರಾಧಿಪತಿಯಿಂದ ಸಂಪ್ರೇರಿತರಾದ ಕುಮಾರರು ಭಾವದುಂಬಿ, ರಸವುಕ್ಕಿ , ಮಧುರ ಮಧುರವಾಗಿ ಹಾಡತೊಡಗಿದರು ಅನಾದಿನಾಯಕನ ಆದಿಕಾವ್ಯವನ್ನು..

ಸಹಜವಾಗಿಯೇ ಮಧುರವಾದ ಕುಶಲವರ ಕಂಠಗಳು ಶ್ರೀರಾಮನ ಸಾನ್ನಿಧ್ಯ ಮತ್ತು ಪ್ರೇರಣೆಗಳಿಂದಾಗಿ ಮತ್ತಷ್ಟು ಮಧುರವಾದವು..!

ಗಂಗೆಯನ್ನು ಬರಮಾಡಿಕೊಳ್ಳುವ ಶಾಂತಸಾಗರದಂತೆ,ಕುಶಲವರು ನಿರಂತರ ಹರಿಸಿದ ಕಥಾಲಹರಿಯನ್ನು ಒಳಗೊಂಡನು ಶ್ರೀರಾಮ..

ಆ ಕಥಾಗಂಗೆಯು ಅವನ ಅಂತರಂಗದ ತುಂಬೆಲ್ಲ ತುಂಬಿ ತುಳುಕಿತು ಆನಂದಬಾಷ್ಪದ ರೂಪ ತಾಳಿ ಕಂಗಳಲ್ಲಿ…

ಆತನ ಹನಿಗೂಡಿದ ನಿಮೀಲಿತ ನೇತ್ರಗಳು ಹಿಮಬಿಂದುಗಳಿಂದೊಪ್ಪುವ ಸಂಧ್ಯಾಕಮಲಗಳಂತೆ ಶೋಭಿಸಿದವು..

ಮಹಾಪ್ರಭುವಿನೊಂದಿಗೆ ಕಳೆದ ರಸನಿಮಿಷಗಳು, ಒಡಗೂಡಿ ಅನುಭವಿಸಿದ ಸಂಕಟ-ಸಂತೋಷಗಳು ‘ಪುನರ್ನವ’ಗೊಂಡವು ಲಕ್ಷ್ಮಣ-ಭರತ-ಶತ್ರುಘ್ನ-ಸುಮಂತ್ರರೇ ಮೊದಲಾದ ರಾಮನ ಒಡನಾಡಿಗಳಲ್ಲಿ..

ಹಾಡುವುದರಲ್ಲಿ ಎರಡು ವಿಧ..

ಇಂದ್ರಿಯ ರಂಜನೆಯಾಗುವಂತೆ ಹಾಡಿದರೆ ಅದು”ದೇಶೀ”

ಆತ್ಮಕ್ಕೆ ಹಿತವಾಗುವಂತೆ – ಮುಕ್ತಿಗೆ ಮಾರ್ಗವಾಗುವಂತೆ ಹಾಡಿದರೆ ಅದು “ಮಾರ್ಗ”

ಕರಣವನ್ನೂ, ಅಂತಃಕರಣವನ್ನೂ ಮಾತ್ರವಲ್ಲ, ಅಂತರಾಳದಲ್ಲಿ ಹುದುಗಿರುವ ಆತ್ಮ – ಪರಮಾತ್ಮರನ್ನೂ ತೃಪ್ತಿಪಡಿಸುವ ಸಂಗೀತ ರೀತಿಯದು..

ಕುಶಲವರು ರಾಮಾಯಣವನ್ನು ಹಾಡಿದ್ದು “ಮಾರ್ಗ” ವಿಧಾನದಲ್ಲಿ..

ಏಕೆಂದರೆ, ರಾಮಾಯಣವು ಕೇವಲ ಬುದ್ಧಿಜೀವಿಗಳ ಕಾವ್ಯವಲ್ಲ.

ಅದು ಹೃದಯ ಜೀವಿಗಳ ಕಾವ್ಯ ; ಆತ್ಮಬಂಧುಗಳ ಕಾವ್ಯ..

ಸಾಗರದಿಂದ ಆವಿಯಾಗಿ ಮೇಲೇಳುವ ನೀರು ಮೋಡವಾಗಿ ತೇಲಿ, ಮಳೆಯಾಗಿ ಸುರಿದು, ಹೊಳೆಯಾಗಿ ಹರಿದು ಪುನಃ ಸಾಗರವನ್ನೇ ಸೇರುವಂತೆ..

ಮುನಿಮನದಲ್ಲಿ ಸನ್ನಿಹಿತನಾದ, ಶ್ರೀರಾಮನಿಂದಲೇ ಉಗಮಿಸಿದ ಶ್ರೀರಾಮಾಯಣವು ಕುಶಲವರ ಮೂಲಕ ಶ್ರೀರಾಮಾರ್ಪಣವಾಯಿತು.

ಕಾಲವೆಂದೂ ನಿಲ್ಲದು..
ಅದೆಂದೆಂದೂ ಹಿಂದೆ ಸರಿಯದು..

ಸದಾ ಮುಂದು ಮುಂದಕ್ಕೆ ಸರಿಯುತ್ತಲೇ ಇರುವುದು ಕಾಲದ ಸ್ವಭಾವ..

ಆದರೆ ಅಂದು ಅಯೋಧ್ಯೆಯಲ್ಲಿ ಕುಶಲವರು ರಾಮಾಯಣವನ್ನು ಹಾಡತೊಡಗಿದಾಗ ಕಾಲಕ್ಕೆ ಮುಂದೆ ಸರಿಯಲು ಸಾಧ್ಯವೇ ಆಗಲಿಲ್ಲ..!

ಅದು ನಿಂತೇ ಬಿಟ್ಟಿತು.. ಮಾತ್ರವಲ್ಲ, ಮೆಲ್ಲಮೆಲ್ಲನೆ ಹಿಂದುಹಿಂದಕ್ಕೆ ಸರಿಯತೊಡಗಿತು..!

ಸಕಲರನ್ನೂ ತಮ್ಮ ಗಾನಪುಷ್ಪಕದಲ್ಲಿ ಕುಳ್ಳಿರಿಸಿಕೊಂಡು ಕುಶಲವರು ಹೊರಟೇಬಿಟ್ಟರು ಕಾಲವಿಹಾರಕ್ಕೆ..!

ಈ ಕಾಲದಿಂದ ಆ ಕಾಲಕ್ಕೆ..

ರಾಮಸಮ್ಮುಖದ ಕಾಲದಿಂದ ರಾಮಪ್ರತೀಕ್ಷೆಯ ಕಾಲಕ್ಕೆ..!

ಅಯೋಧ್ಯೆ ನಿಶ್ಶಬ್ದವಾಯಿತು..

ಜಡವಸ್ತುಗಳು ಮಾತ್ರವೇ ಉಳಿದವಲ್ಲಿ..!

ಸಕಲ ಚೇತನರೂ ರಾಮನ ಬದುಕಿನ ಜೊತೆಗೇ ಪಯಣಿಸುವ ಕುಶಲವರನ್ನು ಹಿಂಬಾಲಿಸಿದರು..

ಮುಚ್ಚಿದ ಕಣ್ಣುಗಳ ಮುಂದೆ ಮೂಡತೊಡಗಿತ್ತು ರಾಮಾಯಣ..

|| ಹರೇರಾಮ ||

ಟಿಪ್ಪಣಿ :-

ಅಕೃತ್ರಿಮ -ಕೃತ್ರಿಮವಲ್ಲದ್ದು, ಸಹಜವಾದುದು.

ಅನಿಮಿತ್ತ – ಅಕಾರಣವಾದುದು, ಯಾವುದೋ ಕಾರಣವನ್ನಿಟ್ಟುಕೊಂಡು ಹುಟ್ಟಿದ್ದಲ್ಲ.
ಯಮಳ – ಅವಳಿ
ಏಕಃ ಸ್ವಾದು ನ ಭುಂಜೀತ – ಸವಿಯಾದದ್ದನ್ನು ಒಬ್ಬನೇ ಸವಿಯಬಾರದು.
ಗಾಂಧರ್ವ ತತ್ವಜ್ಞ - ಸಂಗೀತ – ನಾಟ್ಯವೇ ಮೊದಲಾದ ಕಲೆಗಳ ಮರ್ಮವನ್ನರಿತವನು.
ಭಸ್ಮಚ್ಛನ್ನವಾದ ಕೆಂಡದಂತೆ ಮುನಿವೇಷದ ಮರೆಯಲ್ಲಿ ನೈಸರ್ಗಿಕವಾದ ರಾಜಲಕ್ಷಣಗಳು..ಭಸ್ಮವೆಂಬುದು ಮುನಿಲಕ್ಷಣ..ಕೆಂಡದ ಬಿಸಿ ಕ್ಷಾತ್ರವನ್ನು ನೆನಪಿಸುವಂಥದ್ದು..ಕುಶಲವರ ಮುನಿವೇಷದ ಮರೆಯಲ್ಲಿ ಕ್ಷಾತ್ರಲಕ್ಷಣಗಳೂ – ರಾಜಲಕ್ಷಣಗಳೂ ಇರುವುದನ್ನು ಈ ಉಪಮೆಯು ಸುಂದರವಾಗಿ ನಿರೂಪಿಸುತ್ತದೆ..
ಜೀವಕ್ಷೇಮಂಕರ – ಜೀವಕ್ಕೆ ಹಿತವನ್ನುಂಟುಮಾಡುವ..
ಧರ್ಮಾಖ್ಯಾನ – ಧರ್ಮಬಲದಿಂದಲೇ ಮುನಿ ಕಂಡ ಕಥೆ, ಧರ್ಮಮೂರ್ತಿಯ ಕಥೆ, ಕೇಳಿದವರ ಮನದಲ್ಲಿ ಧರ್ಮವು ಅಂಕುರಿಸುವಂತೆ ಮಾಡುವ ಕಥೆ, ಧರ್ಮವನ್ನೇ ತಿಳಿಸಿ ಹೇಳುವ ಕಥೆ..
ನಿಮೀಲಿತ ನೇತ್ರ -( ತನ್ಮಯತೆಯಿಂದಾಗಿ) ಮುಚ್ಚಿದ ಕಣ್ಣು
ಸಂಧ್ಯಾಕಮಲ – ಸಂಧ್ಯಾಸಮಯದಲ್ಲಿ ಮುದುಡುವ ಕಮಲ
ಪುನರ್ನವ- ಮತ್ತೆ ಹೊಸದಾಗುವುದು..
ರಾಮಸಮ್ಮುಖ ಕಾಲ – ರಾಮನೆದುರು ಕುಳಿತಿರುವ ವರ್ತಮಾನಕಾಲ
ರಾಮಪ್ರತೀಕ್ಷಾ ಕಾಲ – ರಾವಣನ ಅನ್ಯಾಯಗಳಿಂದಾಗಿ ನೊಂದ ಸೃಷ್ಟಿ ರಾಮನು ಹುಟ್ಟಿ ಬರಲೆಂದು ಕಾಯುತ್ತಿದ್ದ ಕಾಲ, ರಾಮಾವತಾರಕ್ಕಿಂತ ಪೂರ್ವ ಕಾಲ.
(ಕೃಪೆ: ಹರೇರಾಮ. ಶ್ರೀಮದ್ ಜಗದ್ಗುರು ಶಂಕರಾಚಾರ್ಯಪರಂಪರಾ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ "ಭಕ್ತಿ ಸಿಂಚನ"ಕ್ಕಾಗಿ ಹಾಗೂ ಸಮಸ್ತ ಶಿಷ್ಯವರ್ಗಕ್ಕೆ ಇದು ತಲುಪುವ ಸದುದ್ದೇಶದಿಂದ ಈ ಕನಸಿನಲ್ಲಿ ಮರುಪ್ರಸಾರಮಾಡಲಾಗುತ್ತಿದೆ. - ಸಂ.)

ಮುಂದೆ ಓದಿ

ಆಟ - ಅವಲೋಕನ

ಬೆಂಗಳೂರು: ಕಾಮನ್ವೆಲ್ತ್ ಕ್ರೀಡಾ ಕೂಟದ ಕ್ವೀನ್ಸ್ ಬ್ಯಾಟನ್ 70 ಕಾಮನ್ವೆಲ್ತ್ ದೇಶಗಳು ಮತ್ತು ಭಾರತದ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಚರಿಸಿ ಸೆಪ್ಟೆಂಬರ್ 1, 2010 ರಂದು ರಾಜ್ಯಕ್ಕೆ ತಮಿಳುನಾಡಿನಿಂದ ಚಾಮರಾಜನಗರದ ಗಡಿಭಾಗವಾದ ಚಿಕ್ಕನಹಳ್ಳಿಗೆ ಮದ್ಯಾಹ್ನ 12.30 ಗಂಟೆಗೆ ಆಗಮಿಸಲಿದೆ. ಕ್ವೀನ್ಸ್ ಬ್ಯಾಟನ್ ರಾಜ್ಯಕ್ಕೆ ಆಗಮಿಸಿದಾಗ, ಕರ್ನಾಟಕ ಓಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜ ಮತ್ತು ಸಂಸದರು ಸ್ವಾಗತಿಸಲಿದ್ದಾರೆ. ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಜವಳಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ ಡಿ. ಶೇಖರ್ ಅವರು ಕ್ವೀನ್ಸ್ ಬ್ಯಾಟನ್ ರಿಲೆಯು ರಾಜ್ಯದ ಮೈಸೂರು, ಬೆಂಗಳೂರು, ಹಾಸನ, ಮಂಗಳೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಸೆಪ್ಟೆಂಬರ್ 07, 2010 ರಂದು ಕಾರವಾರದ ಮುಖಾಂತರ ಗೋವಾ ರಾಜ್ಯಕ್ಕೆ ತೆರಳಲಿದೆ ಎಂದರು. ಸೆಪ್ಟೆಂಬರ್ 1, 2010 ರಂದು ಚಾಮರಾಜನಗರದ ಬಂಡಿಪುರ, ಗುಂಡ್ಲುಪೇಟೆ, ನಂಜನಗೂಡು ಮಾರ್ಗವಾಗಿ ಸಂಚರಿಸಿ ಮದ್ಯಾಹ್ನ 3.00 ಗಂಟೆಗೆ ಮೈಸೂರು ನಗರವನ್ನು ತಲುಪಿ ನಗರದಲ್ಲಿ ಸಂಚರಿಸಲಿದೆ. ಸಂಜೆ 07.00 ಗಂಟೆಗೆ ಅರಮನೆಯ ಆವರಣದಲ್ಲಿ ಮೈಸೂರು ನಾಡಿನ ಸಂಸ್ಕೃತಿ ಮತ್ತು ಚರಿತ್ರೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.



ಸೆಪ್ಟೆಂಬರ್ 2, 2010 ರಂದು ಕ್ವೀನ್ಸ್ ಬ್ಯಾಟನ್ ರಿಲೆಯು ಮೈಸೂರಿನಿಂದ ಹೊರಟು ಬೆಂಗಳೂರಿಗೆ ಸಂಜೆ 03.00 ಗಂಟೆಗೆ ಆಗಮಿಸಲಿದೆ. ಕ್ವೀನ್ಸ್ ಬ್ಯಾಟನ್ ರಿಲೆಯನ್ನು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಸಂಜೆ 4.00 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳು ಬರಮಾಡಿಕೊಳ್ಳಲಿದ್ದಾರೆ. ಅಂಚೆ ಇಲಾಖೆಯು ಸಿದ್ದಪಡಿಸಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು. ರಿಲೆಯಲ್ಲಿ ಮಾಜಿ ಬ್ಯಾಡಮಿಂಟನ್ ವಿಶ್ವ ಚಾಂಪಿಯನ್ ಪ್ರಕಾಶ್ ಪಡಕೋಣೆ, 60ರ ದಶಕದ ಖ್ಯಾತ ಓಟಗಾರ ಕೆನೆತ್ ಪೊವೆಲ್ ಹಾಗೂ ರಾಜ್ಯದ ಅರ್ಜುನ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತರು, ಹೆಸರಾಂತ ಅಂತರ್ ರಾಷ್ಟ್ರೀಯ ಕ್ರೀಡಾಪಟುಗಳು, ವಿವಿಧ ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಮಕ್ಕಳು, ಸಚಿವರು, ಶಾಸಕರು, ಮಹಾ ಪೌರರು, ಚಲನಚಿತ್ರ ನಟ-ನಟಿಯರು, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ 7.00 ಗಂಟೆಗೆ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ 02, 2010 ರಂದು ಕಾಮನ್ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇಯು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದೆ. ಸೆಪ್ಟೆಂಬರ್ 3, 2010 ರಂದು ಬೆಂಗಳೂರಿನಲ್ಲಿಯೇ ಉಳಿಯಲಿದೆ.

ಸೆಪ್ಟೆಂಬರ್ 04 ರಂದು ಬೆಂಗಳೂರಿನಿಂದ ಹೊರಟ ಬ್ಯಾಟನ್ ರಿಲೇ ಹಾಸನ, ಸೆಪ್ಟೆಂಬರ್ 5 ರಂದು ಮಂಗಳೂರು, ಸೆಪ್ಟೆಂಬರ್ 06 -ಉಡುಪಿ, ಕಾರವಾರ, ಅನಂತರ ಸೆಪ್ಟೆಂಬರ್ 7 ರಂದು ಗೋವಾ ರಾಜ್ಯಕ್ಕೆ ತೆರಳಲಿದೆ.

ರಾಜ್ಯದಲ್ಲಿ ಕ್ವೀನ್ಸ್ ಬ್ಯಾಟನ್ ರಿಲೇಯನ್ನು ರಾಜ್ಯ ಸರ್ಕಾರವು ಕರ್ನಾಟಕ ಒಲಂಪಿಕ್ ಸಂಸ್ಥೆ, ರಾಜ್ಯ ಅಥ್ಲೆಟಿಕ್ ಸಂಸ್ಥೆ ಮತ್ತು ಇನ್ನಿತರ ಕ್ರೀಡಾ ಸಂಸ್ಥೆಗಳ ಸಹಕಾರದೊಂದಿಗೆ ಸಂಘಟಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಸಚಿವರು ತಿಳಿಸಿದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಂಗಳೂರು: ಆರೋಗ್ಯ ಪೂರ್ಣ ಸಮಾಜಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಎ ಸಿ ಭಂಡಾರಿ ಹೇಳಿದರು.ಅವರಿಂದು ಇರಾ ಗ್ರಾಮಪಂಚಾಯತ್ ಪರಪ್ಪುವಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಜನಶಿಕ್ಷಣ ಟ್ರಸ್ಟ್ ಹಾಗೂ ಇರಾ ಗ್ರಾಮಪಂಚಾಯತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ 'ಪರಿಸರ ಸಂರಕ್ಷಣೆಗೆ ಪ್ಲಾಸ್ಟಿಕ್ ನಿರ್ಮೂಲನೆ' ವಿಷಯದ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.



ಸ್ವಚ್ಛತೆ ಎಂಬುದು ನಿರಂತರ ವ್ಯವಸ್ಥೆ ಯಾಗಿದ್ದು, ಇದಕ್ಕೆ ಜನರ ಸಹಕಾರ ಅಗತ್ಯ. ಇರಾ ಗ್ರಾಮ ಪಂಚಾಯತ್ ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ತನ್ನ ವಿಶಿಷ್ಟ ಮಾದರಿ ಗಳಿಂದ ರಾಷ್ಟ್ರದಾ ದ್ಯಂತ ಹೆಸರು ಮಾಡಿದ್ದು, ಈ ಹೆಸರು ಶಾಶ್ವತ ವಾಗಿರ ಬೇಕಾದರೆ ಜಾಗೃತ ಜನರ ಅಗತ್ಯವಿದೆ; ಇಂತಹ ಕಾರ್ಯ ಕ್ರಮಗಳಿಂದ ಅಗತ್ಯ ಸಂದೇಶ ರವಾನೆಯಾಗಿ ಜಾಗೃತಿ ನಿರಂತರ ವಾಗಿರುತ್ತದೆ. ಪ್ಲಾಸ್ಟಿಕ್ ಜನರ ಬದುಕಿಗೆ ಮಾರಕವಾಗಿದ್ದು, ಜನರು ಈ ಬಗ್ಗೆ ತಿಳಿದುಕೊಂಡು ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಕೆ.ಚಂದ್ರಹಾಸ ಕರ್ಕೇರಾ ಅವರು, ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಇರಾದ ಇಚ್ಛಾ ಶಕ್ತಿ ನಿರಂತರವಾಗಿ ಮುಂದುವರಿಯಲಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಡಿ ಶೆಟ್ಟಿ ಅವರು, ಸುಜ್ಞಾನದಿಂದ ಮಾತ್ರ ನಮ್ಮ ಉಳಿವು; ದೇವರು ನಿರ್ಮಿಸಿದ ರಾಜ್ಯವನ್ನು ಪ್ಲಾಸ್ಟಿಕ್ ನಂತಹ ಮಾರಕಾಸುರನ ಕೈಯ್ಯಿಂದ ಮುಕ್ತ ಗೊಳಿಸುವ ಅಗತ್ಯದ ಬಗ್ಗೆ ಬೆಳಕು ಚೆಲ್ಲಿದರು. ವಾರ್ತಾ ಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೇಮು ಪೂಜಾರಿ ಮಾತ ನಾಡಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಝಾಕ್ ಅಧ್ಯಕ್ಷೀಯ ಭಾಷಣ ಗೈದರು. ಶ್ರೀ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಸಂಯೋಜಕ ವರದರಾಜ್, ಶಾಲಾ ಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯ್ದಿನ್ ಕುಂಞ, ಶಾಲಾ ಮುಖ್ಯೋಪಾಧ್ಯಾಯರಾದ ರೋಹಿಣಿ ಎನ್ ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ನ ಸಂತೋಷ್ ಉಪನ್ಯಾಸ ನೀಡಿದರು. ಇಲಾಖೆಯ ಸಿನಿ ಚಾಲಕ ಫ್ರಾನ್ಸಿಸ್ ಲೂಯಿಸ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ವಂದಿಸಿದರು. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಗಣೇಶಪುರ ಗಿರೀಶ್ ನಾವಡ ತಂಡದಿಂದ ನಾಟಕ ಪ್ರದರ್ಶನ ನಡೆಯಿತು.

ಮುಂದೆ ಓದಿ
10:51 PM

ವರ್ಧಂತ್ಯುತ್ಸವ

Posted by ekanasu

ರಾಜ್ಯ - ರಾಷ್ಟ್ರ
ಮೈಸೂರು: ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಈ ಬಾರಿ ಪುರಾಣಪ್ರಸಿದ್ಧ ಜಪ್ಯೇಶ್ವರ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತಾನುಷ್ಠಾನವನ್ನು ಕೈಗೊಂಡಿರುತ್ತಾರೆ.ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಶ್ರೀಗಳವರ ವರ್ಧಂತ್ಯುತ್ಸವವು ಆ.28 ರಂದು ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಶತಚಂಡೀ ಮಹಾಯಾಗವು ನಡಯಲಿದ್ದು, ಪೂರ್ಣಾಹುತಿ ಮಧ್ಯಾಹ್ನ 12ಗಂಟೆಗೆ ಜರುಗಲಿದೆ. ನಂತರ ಸಭಾಕಾರ್ಯಕ್ರಮವು ನಡೆಯಲಿದೆ. ಈ ಸಭಾಕಾರ್ಯಕ್ರಮದಲ್ಲಿ ವಿದ್ವತ್ ಸಂಮಾನ, ಪುಸ್ತಕಬಿಡುಗಡೆ, ಪರಮಪೂಜ್ಯಶ್ರೀಶ್ರೀಗಳವರಿಗೆ ಅಭಿವಂದನೆ ಮುಂತಾದ ಕಾರ್ಯಕ್ರಮಗಳು ಜರುಗಲಿದೆ.ಸಬಾಕಾರ್ಯಕವುದಲ್ಲಿ ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಉಚನ್ಯಾಯಾಲಯದ ನ್ಯಾಯಾಧೀಶರಾದ ಎನ್. ಕುಮಾರ್ ಹಾಗೂ ಸನ್ಮಾನ್ಯಶ್ರೀ ಕೆ. ಎನ್. ಕೇಶವನಾರಾಯಣರವರು ಉಪಸ್ಥಿತರಿರುತ್ತಾರೆ.

ಮುಂದೆ ಓದಿ
11:16 PM

ಶಿಲಾನ್ಯಾಸ

Posted by ekanasu

ರಾಜ್ಯ - ರಾಷ್ಟ್ರ

ಚಿಕ್ಕೋಡಿಯಲ್ಲಿ 26ಕೋಟಿ ರುಪಾಯಿಗಳ "ಕುಡಿಯುವ ನೀರು " ಯೋಜನೆಗೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು.

ಮುಂದೆ ಓದಿ
10:54 PM

ಶೋಭಾಯಾತ್ರೆ

Posted by ekanasu

ಪ್ರಾದೇಶಿಕ

ಮೂಲ್ಕಿ ಬಿಲ್ಲವ ಸಂಘದಲ್ಲಿ ಬುಧವಾರ ನಡೆದ ಗುರುಜಂಯಂತಿಯ ಪ್ರಯುಕ್ತ ವಿಮಲ ಶ್ರೀಧರ ಪೂಜಾರಿಯವರ ನಿವಾಸ ರಾಮು ಕುಟೀರದಲ್ಲಿ ಗುರುಪೂಜೆಯಾಗಿ ಗುರು ಭಾವಚಿತ್ರದ ಶೋಭಾಯಾತ್ರೆಯು ಕಾರ್ನಾಡು ಮತ್ತು ಕೆ.ಎಸ್.ರಾವ್ನಗರದ ಗ್ರಾಮಸ್ಥರ ಕೂಡುವಿಕೆಯಲ್ಲಿ ನಡೆಯಿತು.
ಚಿತ್ರ: ಭಾಗ್ಯವಾನ್ ಸನಿಲ್ , ಮುಲ್ಕಿ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮುಲ್ಕಿ:ನಾರಾಯಣ ಗುರು ಸ್ವಾಮಿಯವರ ತತ್ವಗಳು ಆಚರಣೆಗೆ ಬಂದಲ್ಲಿ ಎಲ್ಲಿಯೂ ಮತ ಅಥವಾ ವರ್ಗ ಸಂಘರ್ಷಗಳು ನಡೆಯದು ಎಂದು ನ್ಯಾಯವಾದಿ ಎಂ.ಭಾಸ್ಕರ ಹೆಗ್ಡೆ ಹೇಳಿದರು.ಅವರು ಬುಧವಾರ ಮೂಲ್ಕಿ ಬಿಲ್ಲವ ಸಂಘದಲ್ಲಿ ನಡೆದ ಶ್ರೀ ನಾರಾಯಣ ಗುರುಗಳ 156ನೇ ಜನ್ಮ ದಿನಾಚರಣೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನಾರಾಯಣ ಗುರುಗಳ ತತ್ವಗಳ ಬಗ್ಗೆ ಉಪನ್ಯಾಸ ನೀಡಿದರು.
ವಿದ್ಯೆಯಿಂದ ಸ್ವತಂತ್ರರಾಗಿರಿ ಮತ್ತು ಸಂಘಟನೆಯಿಂದ ಬಲಯುತರಾಗಿರಿ ಮುಂತಾದ ಗುರುಗಳ ತತ್ವಗಳು ವಿದ್ಯಾರ್ಥಿಗಳ ಪಠ್ಯದಲ್ಲಿ ಬರುವ ಮೂಲಕ ಯುವ ಸಮಾಜವನ್ನು ಸರಿದಾರಿಗೆ ತರುವ ಕೆಲಸವಾಗಬೇಕು ಎಂದ ಅವರು ಗುರುವರ್ಯರ ತತ್ವಾಚಾರಣೆಯ ಪ್ರಕಾರ ವಿದ್ಯೆಗೆ ಪ್ರೋತ್ಸಾಹ ನೀಡುವ ಮೂಲ್ಕಿ ಬಿಲ್ಲವ ಸಂಘದ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉದ್ಯಮಿ ಮಿತ್ರ.ಎಂ.ಕೋಟ್ಯಾನ್ ವಹಿಸಿ ವಿದ್ಯಾರ್ಥಿ ವೇತನಗಳನ್ನು ಹಸ್ತಾಂತರಿಸಿದರು.




ಅತಿಥಿಗಳಾಗಿ ಗುತ್ತಿಗೆದಾರ ಯಾದವ ಕೋಟ್ಯಾನ್ ಪೆರ್ಮುದೆ, ನಮ್ಮ ಕುಡ್ಲ ವ್ಯವಸ್ಥಾಪಕ ಹರೀಶ್ ಕರ್ಕೇರಾ, ಸಂಘದ ಗೌರವಾಧ್ಯಕ್ಷ ಕೆ.ಸೋಮಪ್ಪ ಸುವರ್ಣ,ಅಧ್ಯಕ್ಷ ಕೆ.ರಾಘು ಸುವರ್ಣ, ಮಹಿಳಾ ಮಂಡಳಿಯ ಅಧ್ಯಕ್ಷೆ ಸೀತಾ ಗೋಪಾಲ ಕೋಟ್ಯಾನ್,ಸೇವಾದಳದ ಅಧ್ಯಕ್ಷ ಮೋಹನ ಕೋಟ್ಯಾನ್,ಕೋಶಾಧಿಕಾರಿ ರಮೇಶ್ ಕೊಕ್ಕರಕಲ್ ವೇದಿಕೆಯಲ್ಲಿದ್ದರು. ಸಂಘದ ಗೌ. ಕಾರ್ಯದರ್ಶಿ ಗೋಪೀನಾಥ ಪಡಂಗ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು.

ಮುಂದೆ ಓದಿ

ರಾಜ್ಯ -ರಾಷ್ಟ್ರ
ಮಂಗಳೂರು,ಆಗಸ್ಟ್ 24: ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಲು ಜಿಲ್ಲೆಯ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳನ್ನು ನೀಡಲಾಗುವುದು. ಮುಂದಿನ ಮೂರು ವರ್ಷ ಅಭಿವೃದ್ಧಿ ಕಾರ್ಯಕ್ಕೆ ಹಣದ ತೊಡಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.ಅವರಿಂದು ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಂಟ್ವಾಳ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.




ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರಲ್ಲದೆ ಸ್ಥಳೀಯ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಗತ್ಯಕ್ಕನುಸಾರ ಹಣ ಹಾಗೂ ನೆರವು ಯೋಜನೆಗಳನ್ನು ಪ್ರಕಟಿಸಿದರು.ಜಿಲ್ಲೆಯ ಕಾಲು ಸಂಕ ನಿರ್ಮಾಣಕ್ಕೆ ಐದು ಕೋಟಿ ನೆರವು ಪ್ರಕಟಿಸಿದ ಮುಖ್ಯಮಂತ್ರಿಗಳು, ಬಂಟ್ವಾಳ-ಬೆಳ್ತಂಗಡಿಗೆ ಕುಡಿಯುವ ನೀರಿಗಾಗಿ ಚೆಕ್ ಡ್ಯಾಮ್ ನಿರ್ಮಾಣ ಯೋಜನೆ ರೂಪಿಸಲು ಹೇಳಿದರು. ಮುಂದಿನ ವರ್ಷ ಕಾಲ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿಸಲು ನಿರಂತರ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಸುವುದಾಗಿ ಹೇಳಿದ ಅವರು, ದೂರಾಲೋಚನೆ ಇಲ್ಲದ ಯೋಜನೆಗಳಿಂದ ರಾಜ್ಯ ಇಂದು ವಿದ್ಯುತ್ ಅಭಾವ ಎದುರಿಸುತ್ತಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 13,000 ಮೆವ್ಯಾ ವಿದ್ಯುತ್ ಉತ್ಪಾದನೆಗೆ ರಾಜ್ಯ ಸನ್ನದ್ಧವಾಗಿದೆ. ಮುಂದಿನ ಮೂರು ವರ್ಷದಲ್ಲ 5,000 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುವುದು ಎಂದರು. ಬಂಟ್ವಾಳ ತಾಲೂಕೊಂದರಲ್ಲೇ 37,211 ಫಲಾನುಭವಿಗಳು ರಾಜ್ಯ ಸರ್ಕಾರ ರೂಪಿಸಿದ ವಿವಿಧ ಯೋಜನೆಗಳ ನೆರವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 9ಲಕ್ಷ ಹೆಣ್ಣು ಮಕ್ಕಳು ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಅಮ್ಮ ಮಗುವಿಗೆ ಆರೋಗ್ಯ ಕಾರ್ಡ್ ನೀಡುವ ಬಗ್ಗೆಯೂ ಯೋಜನೆ ರೂಪಿಸಿದೆ ಎಂದರು.ತಾಲೂಕು ಆಸ್ಪತ್ರೆಯ ಟ್ರೌಮಾ ಕೇಂದ್ರ, ಅಗ್ನಿ ಶಾಮಕ ಠಾಣೆ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಮಂಗಳೂರು ವಿದ್ಯುತ್ ಕಂಪೆನಿ ನಿಯಮಿತ ಇದರ ವಿಭಾಗೀಯ ಕಾರ್ಯಾಲಯ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ವಾಮದ ಪದವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯ ಬಳಿಕ ಶಿಕಾರಿ ಪುರವನ್ನು ಸ್ಮರಿಸಿದ ಮುಖ್ಯ ಮಂತ್ರಿಗಳು, ವಾಮದಪದವು ಅಂತಹ ಆತ್ಮೀಯ ತೆಯನ್ನು, ಇಲ್ಲಿನ ಆಸ್ಪತ್ರೆ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಯಾಗಿರುವು ದಾಗಿಯೂ ತುಂಬು ಹೃದಯದಿಂದ ನುಡಿದರು. ಆಸ್ಪತ್ರೆಯ ಪೀಠೋ ಪಕರಣಕ್ಕೆ ತಕ್ಷಣವೇ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಇನ್ನೂ ನನಸಾಗದ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಕುಗ್ರಾಮಗಳ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದಾಗಿ ನುಡಿದರು. ಹೈನು ಗಾರಿಕೆಯಲ್ಲಿ ಗುಜರಾತ್ ನಂತರ ನಮ್ಮ ರಾಜ್ಯವಿದ್ದು, ರಾಜ್ಯವನ್ನು ಪ್ರಥಮ ಸ್ಥಾನಕ್ಕೊಯ್ಯಲು ಪೂರಕ ನೆರವು ಹಾಗೂ ಪ್ರೋತ್ಸಾಹ ಹೈನುಗಾರಿಕೆಗೆ ನೀಡುವು ದಾಗಿ ಹೇಳಿದರು. ಅಧ್ಯಕ್ಷತೆ ಸ್ಥಳೀಯ ಶಾಸಕ ರಮಾನಾಥ ರೈ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ,ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯೋಗೀಶ್ ಭಟ್, ಯು ಟಿ ಖಾದರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ತಾ.ಪಂ. ಅಧ್ಯಕ್ಷ ಬಾಬು ಎಂ, ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು,ಆಗಸ್ಟ್ 24: ಇಂದು ಮುಂಜಾನೆ ನಗರದ ಸಂಘನಿಕೇತನದಲ್ಲಿ ನಡೆದ ರಕ್ಷಾಬಂಧನ ಸಮಾರಂಭದಲ್ಲಿ ಪಾಲ್ಗೊಂಡರು.ನಗರದ ರೋಮನ್ ಅಂಡ್ ಕ್ಯಾಥರೀನ್ ಶಾಲೆಯ ಅಂಧ ಮಕ್ಕಳು ಸೇರಿದಂತೆ ಅನೇಕರು ಮುಖ್ಯ ಮಂತ್ರಿಗಳಿಗೆ ರಕ್ಷೆಯನ್ನು ಕಟ್ಟಿದರು.




ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇ ಮಾರ್,ಶಾಸಕ ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ರಜನಿ ದುಗ್ಗಣ್ಣ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ನಿನ್ನೆ ರಾತ್ರಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಾ ಲಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.


ಮುಂದೆ ಓದಿ
7:36 PM

ಸಮಾಲೋಚನೆ

Posted by ekanasu

ರಾಜ್ಯ - ರಾಷ್ಟ್ರ
ಭಾರತೀಯ ಜನತಾಪಾರ್ಟಿ ಕರ್ನಾಟಕದ ಸಮಾಲೋಚನಾ ಸಭೆ ಬೆಂಗಳೂರಿನ ದೇವನಹಳ್ಳಿ ಪ್ರಕೃತಿ ರೆಸಾರ್ಟ್ನಲ್ಲಿ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖಂಡರು ಪಾಲ್ಗೊಂಡರು.

ಮುಂದೆ ಓದಿ
7:26 PM

ಓಣಂ...

Posted by ekanasu

ರಾಜ್ಯ -ರಾಷ್ಟ್ರ
ಕೇರಳದ ಹಬ್ಬ ಓಣಂ ಇಂದಿನಿಂದ ಆರಂಭಗೊಂಡಿದೆ. ಕೇರಳೀಯರು ಸಂಭ್ರಮದಿಂದ ಓಣಂ ಹಬ್ಬಾಚರಣೆಯಲ್ಲಿ ತೊಡಗಿದ್ದಾರೆ. ಮನೆಮನೆಯಲ್ಲಿ ವಿಶೇಷ ಹೂವಿನ ರಂಗೋಲಿಗಳೊಂದಿಗೆ ಈ ಹಬ್ಬದ ಆಚರಣೆಯನ್ನು ಆರಂಭಿಸಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಓಣಂ ನಡೆಯಲಿದೆ.











ಮುಂದೆ ಓದಿ
7:22 PM

ಯಕ್ಷಲೋಕ

Posted by ekanasu

ಮೂಡಬಿದಿರೆ
ಮೂಡಬಿದಿರೆ ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮುದ್ದುಕೃಷ್ಣರು.

ಮುಂದೆ ಓದಿ
10:37 PM

ಆಹ್ವಾನ

Posted by ekanasu

ರಾಜ್ಯ - ರಾಷ್ಟ್ರ

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು:ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ದಾಯ್ಜಿ ವಲ್ಡ್ ದಶಮನೋತ್ಸವ ಅಂಗವಾಗಿ ಛಾಯಾ ಚಿತ್ರಗ್ರಾಹಕ ದಯಾನಂದ ಕುಕ್ಕಾಜೆಯವರ ಎರಡು ದಿನಗಳ ಛಾಯಾ ಚಿತ್ರ ಪ್ರದರ್ಶನ ವನ್ನು ಸಂತ ಅಲೋಷಿ ಯಸ್ ಕಾಲೇಜು ಸಭಾಂಗಣದಲ್ಲಿ ಇಂದು ಯುಎಇ ಎಕ್ಸ್ಚೇಂಜ್ ಸಿಇಒ ಸುಧೀರ್ ಶೆಟ್ಟಿ ಉದ್ಘಾಟಿ ಸಿದರು.ದಾಯ್ಜಿ ವರ್ಲ್ಡ್ ಮತ್ತು ಸಂತ ಅಲೋಷಿ ಯಸ್ ಪತ್ರಿ ಕೋದ್ಯಮ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಅಪ ರೂಪದ ಛಾಯಾ ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಪರಿಷತ್ ಅಕಾಡೆಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್,ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ, ದಾಯ್ಜಿ ವಲ್ಡ್ ನ ವಾಲ್ಟರ್ ನಂದಳಿಕೆ ಮತ್ತಿತರ ಗಣ್ಯರು ಉಪಸ್ಥಿತ ರಿದ್ದರು. ಇಂದು ಮತ್ತೆ ನಾಳೆ ಬೆ.10.30 ರಿಂದ ಸಂಜೆ 6 ಗಂಟೆ ವರೆಗೆ ಛಾಯಾಚಿತ್ರ ಪ್ರದರ್ಶನ ಸಾರ್ವಜನಿಕ ವೀಕ್ಷಣೆಗೆ ಮುಕ್ತ ವಾಗಿರುತ್ತದೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು :ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಕುಂದುಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸುವುದಾಗಿ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ್ ಮೂರ್ತಿ ಹೇಳಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಗುರುವಾರ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈಗ ಇರುವ ಘಟಕವನ್ನು ಪುನರ್ ರಚಿಸಿ ಅದಕ್ಕೆ ಖಚಿತ ಅಧಿಕಾರಗಳನ್ನು ನೀಡ ಲಾಗುವುದು.



ಪ್ರಸ್ತಾವಿತ ಘಟಕವನ್ನು ಮುಂದಿನ ಮೂರು ತಿಂಗಳೊಳಗೆ ಸ್ಥಾಪಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ಘಟಕದಲ್ಲಿ ವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸ ಲಾಗುವುದು ಎಂದು ಕುಲಪತಿಗಳು ತಿಳಿಸಿದರು.ತಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಪನ್ಯಾಸಕರಿಂದ ಲೈಂಗಿಕ ಕಿರುಕುಳ ಕುರಿತಂತೆ ಒಂದು ಲಿಖಿತ ದೂರು ಬಂದಿರುತ್ತದೆ. ಅದರ ಕುರಿತು ತನಿಖೆ ನಡೆಯುತ್ತಿದೆ. ಪ್ರಾಧ್ಯಾಪಕರನ್ನು ಈಗಾಗಲೇ ಅಮಾನತು ಗೊಳಿಸಲಾಗಿರುತ್ತದೆ ಎಂದು ಪ್ರೊ. ಮೂರ್ತಿ ನುಡಿದರು.


ಪರೀಕ್ಷಾ ಪ್ರಕ್ರಿಯೆಗಳ ಗಣಕೀಕರಣ: ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶೀಘ್ರ ಮತ್ತು ದೋಷ ರಹಿತವಾಗಿ ಪ್ರಕಟಿಸಲು ಗಣಕೀಕರಣ ಮಾಡಲಾಗಿದೆ. ಇದರಿಂದ ವೃಥಾ ವಿಳಂಬವನ್ನು ತಪ್ಪಿಸಿ ಸುಮಾರು ಎರಡು ತಿಂಗಳು ಮುಂಚಿತವಾಗಿ ಫಲಿತಾಂಶ ಗಳನ್ನು ಪ್ರಕಟಿಸ ಲಾಗಿರುತ್ತದೆ ಮತ್ತು ಸ್ನಾತಕೋತ್ತರ ಪದವೀಧರರಿಗೆ ಟ್ಯಾಂಪರ್ ಪ್ರೂಫ್ ಪದವಿ ಪ್ರಮಾಣ ಪತ್ರಗಳನ್ನು ನೀಡಲು ಆರಂಭಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಸ್ನಾತಕ ಪದವೀಧರರಿಗೂ ವಿಸ್ತರಿಸ ಲಾಗುವುದು ಎಂದು ಹೇಳಿದರು.
ಅವ್ಯವಹಾರ ಕುರಿತ ತನಿಖೆ: ಅ.2008ರ ಬಿಬಿಎಂ ಪರೀಕ್ಷೆಯ ಟ್ಯಾಬುಲೇಶನ್ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ಅಧಿಕಾರಿಗಳನ್ನು ನೇಮಕ ಮಾಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಅವ್ಯವಹಾರ ನಡೆದಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಗೊಳಿಸಿ ಹಾಗೂ ಅವರಿಗೆ ಈಗಾಗಲೇ ನೀಡಲ್ಪಟ್ಟಿರುವ ಅಂಕಪಟ್ಟಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿಗಳು ವಿವರಿಸಿದರು.
2008ರ ಅಕ್ಟೋಬರ್ - ನವೆಂಬರ್ ನಲ್ಲಿ ಎಲ್ಎಲ್ಬಿ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಆರೋಪಿ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದಾವೆ ಕೂಡಾ ಹೂಡಲಾಗಿದೆ ಎಂದು ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.ವಿಶ್ವ ವಿದ್ಯಾ ಲಯದ ಗುಣಮಟ್ಟ ವೃದ್ಧಿಸುವ ದಿಸೆಯಲ್ಲಿ ಮತ್ತು ನಿರ್ಧಾರ ಗಳನ್ನು ಎಲ್ಲಾ ಇಲಾಖೆಗಳ ಮುಖ್ಯಸ್ಥರಲ್ಲಿ ಹಂಚಿ ಕೊಳ್ಳುವ ಸಲುವಾಗಿ ಮೈಸೂರು ಮಾದರಿ ಯಂತೆ ಸ್ನಾತಕೋತ್ತರ ಮಂಡಳಿ ಯನ್ನು ರಚಿಸ ಲಾಗಿರುತ್ತದೆ. ಎಲ್ಲಾ ವಿಭಾಗಗಳ ಹಿರಿಯ ಪ್ರಾಧ್ಯಾಪಕರು ಅಧ್ಯಯನ ಮತ್ತು ಪರೀಕ್ಷಾ ಮಂಡಳಿಗಳ ಅಧ್ಯಕ್ಷರು ಹಾಗೂ ವಿವಿಯ ಶಾಸನ ಬದ್ಧ ಅಧಿಕಾರಿಗಳು ಮಂಡಳಿ ಯಲ್ಲಿರುತ್ತಾರೆ ಎಂದು ಅವರು ತಿಳಿಸಿದರು.
ಅನುದಾನ ಅಗತ್ಯ: ರಾಜ್ಯದ ಇತರ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆ ಏನೇನೂ ಸಾಲದು. ಹಿಂದುಳಿಯಲು ಅನುದಾನದ ಕೊರತೆಯೇ ಕಾರಣ. 1980 ರಲ್ಲಿ ಸ್ಥಾಪನೆಗೊಂಡ ಗುಲ್ಬರ್ಗಾ ಮತ್ತು ಮಂಗಳೂರು ವಿವಿಗಳು ಬೆಳ್ಳಿಹಬ್ಬ ದಾಟಿ ಮುನ್ನಡೆದಿವೆ. ಈ ಮಧ್ಯೆ ಗುಲ್ಬರ್ಗ ವಿವಿಗೆ ವಿಶೇಷ ಅನುದಾನ ಲಭಿಸಿದ್ದು, ಅದರಿಂದ ಒಂದಷ್ಟು ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಸರಕಾರ, ಜನಪ್ರತಿನಿಧಿಗಳು ಈ ದಿಸೆಯಲ್ಲಿ ಸಹಕರಿಸ ಬೇಕಾಗಿದೆ ಎಂದು ಮನವಿ ಮಾಡಿದ ಅವರು, ಮುಖ್ಯಮಂತ್ರಿಗಳು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವುದಾಗಿ ತಿಳಿಸಿರುವರೆಂದರು.
ನ್ಯಾಕ್ ಮಾನ್ಯತೆ: ವಿಶ್ವವಿದ್ಯಾನಿಲಯವನ್ನು ನ್ಯಾಕ್ ಮರು ಮೌಲ್ಯಮಾಪನಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನು ಶೀಘ್ರವೇ ಕೈಗೆತ್ತಿ ಕೊಳ್ಳಲಾಗುವುದು. ಅದಕ್ಕಾಗಿ ವಿವಿ ಮತ್ತು ಘಟಕ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ- ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡ ಬೇಕಾಗಿದೆ. ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾನಿಲಯವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಪರಿವರ್ತಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದ ಕುಲಪತಿಗಳು ಮಂಗಳೂರು ಮತ್ತು ಮಡಿಕೇರಿಯ ಘಟಕ ಕಾಲೇಜುಗಳನ್ನು ತಲಾ ರೂ. 2 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು. ಕೊಡಗಿನ ಚಿಕ್ಕಳುವಾರು ಎಂಬಲ್ಲಿ ವಿವಿಯ ಸ್ನಾತಕೋತ್ತರ ಕೇಂದ್ರವನ್ನು ತೆರೆಯುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಎನ್.ಟಿ. ಬಾಳೇಪುಣಿ ಉಪಸ್ಥಿತರಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪಿ.ಬಿ.ಹರಿಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.

ಮುಂದೆ ಓದಿ
9:27 PM

ಪ್ರೆಟಿ ಗರ್ಲ್

Posted by ekanasu

ಸಿನೆಮಾ
ನನಗೆ ಕೆಲಸದ ಅಗತ್ಯ ಇತ್ತು. ಮನೆಯಲ್ಲಿ ಹೆತ್ತವರಿಗೆ ವಯಸ್ಸಾಗಿದೆ. ದುಡಿಯುವವರು ಯಾರೂ ಇಲ್ಲ. ನಾನು ದುಡಿದರೆ ಅವರು ಎರಡು ಹೊತ್ತಿನ ಊಟ ಮಾಡ್ತಾರೆ. ಅದಕ್ಕಾಗಿ ಕೆಲಸವೊಂದನ್ನು ಹುಡುಕ್ತಾ ಇದ್ದೆ. ಆ ಹೆಂಗಸು ಕೆಲಸ ಕೊಡ್ತೇನೆ ಬರ್ತಿಯಾಂತ ಕರೆದಾಗ ಯಾವ ಕೆಲಸ? ಅಂತ ಪ್ರಶ್ನಿಸದೇ ನಾನು ಆಕೆಯೊಡನೆ ಹೊರಟೆ. ಆಕೆ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಳು. ಮೊದಲ ದಿನ ರಾತ್ರಿಯಾದೊಡನೆ ಮನೆಗೆ ಓಡಿಬಿಡಬೇಕು ಅನಿಸಿತು. ಆದರೆ ಕೈಯ್ಯಲ್ಲಿ ಕಾಸಿರಲಿಲ್ಲ. ಅನಿವಾರ್ಯವಾಗಿ ಈ ಕೆಲಸವನ್ನು ಒಪ್ಪಿಕೊಂಡೆ. ಈಗ ಕೀಳರಿಮೆ ಕಾಡ್ತಾ ಇದೆ. ಮದುವೆ ಎಂಬ ಹೆಸರು ಕೇಳಿದ್ರೆ ಭಯವಾಗುತ್ತೆ. ಇಪ್ಪತ್ತೊಂದು ವರುಷದ ಯುವತಿ ಕ್ಸಿಯಾಕೊ ಕ್ಯಾಮರಾದ ಕಡೆ ಮುಖ ಮಾಡಿ ಮಾತನಾಡುತ್ತಿದ್ದರೆ ವೀಕ್ಷಕನ ಕಣ್ಣು ತುಂಬಿ ಬರುತ್ತದೆ.



2009ರಲ್ಲಿ ಕ್ಯಾಮಿಲಾ ಫ್ರೆಂಚ್ ಹಾಗೂ ಜ್ಯೂಡಿ ಬ್ರೆಟ್ಶೆನಿಟ್ ಜತೆಯಾಗಿ ನಿರ್ದೇಶಿಸಿದ ಚೈನೀಸ್ ಸಾಕ್ಷ್ಯಚಿತ್ರ "ಪ್ರೆಟಿ ಗರ್ಲ್ ". ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ತಾಂಡವವಾಡುತ್ತಿರುವ ವೇಶ್ಯಾವಾಟಿಕೆಯ ಸಮಸ್ಯೆ ಈ ಚಿತ್ರದ ಕಥಾವಸ್ತು. ವೇಶ್ಯಾವಾಟಿಕೆಯನ್ನು ಸಾಮಾಜಿಕ ಸಮಸ್ಯೆಯನ್ನಾಗಿ ಬಿಂಬಿಸುವ ಸಾಕ್ಷ್ಯಚಿತ್ರ ಇದರ ಅಪರಿಚಿತ ಮುಖವೊಂದನ್ನು ವೀಕ್ಷಕನಿಗೆ ಪರಿಚಯಿಸುತ್ತದೆ.ಸ್ವಇಚ್ಚೆಯಿಂದ ಯಾರೂ ಇಂತಹ ವೃತ್ತಿಯನ್ನು ಆರಿಸುವುದಿಲ್ಲ. ಹಸಿವಿನ ಅನಿವಾರ್ಯತೆಯೇ ಈ ವೃತ್ತಿಯ ಅಸ್ತಿತ್ವಕ್ಕೆ ಕಾರಣ ಎಂಬ ವಾದ ಈ ಸಾಕ್ಷ್ಯಚಿತ್ರದ್ದು. 2008ರಲ್ಲಿ ಚೀನಾದ ಹೊಸ ವರುಷದ ಪ್ರಾರಂಭದಿಂದ ಹಿಡಿದು 2009ರ ಒಲಿಂಪಿಕ್ಸ್ ಕ್ರೀಡಾಕೂಟದ ಅಂತ್ಯದ ವರೆಗೆ ಬೀಜಿಂಗ್ನಲ್ಲಿ ನಡೆಯುವ ಈ ದಂಧೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಎಲ್ಲೂ ಅಶ್ಲೀಲ ದೃಶ್ಯಗಳನ್ನು ಒಳಗೊಂಡಿಲ್ಲ. ತೆರೆಮರೆಯಲ್ಲಿ ನಡೆಯುವ ವಿಚಾರಗಳನ್ನು ಸಾಂಕೇತಿಕವಾಗಿ ಸೂಚಿಸುವ ಚಿತ್ರ ವೇಶ್ಯೆಯರಿಗೂ ನಮ್ಮನಿಮ್ಮಂತೆ ಬದುಕುವ ಹಕ್ಕಿದೆ ಎಂಬುವುದನ್ನು ತಿಳಿಸಲು ಮಾತ್ರಾ ಮರೆತಿಲ್ಲ.
ಚೀನಾದಲ್ಲಿ ಒಲಿಂಪಿಕ್ಸ್ ಸಂದರ್ಭ ಅದರ ವೀಕ್ಷಣೆಗೆಂದು ಪ್ರಪಂಚದ ನಾನಾ ಕಡೆಗಳಿಂದ ಕ್ರೀಡಾ ಪ್ರೇಮಿಗಳು ಬೀಜಿಂಗ್ಗೆ ಬಂದಿಳಿದರು. ಅವರ ಐಷಾರಾಮಿಗಾಗಿ ಬೀಜಿಂಗ್ನುದ್ದಕ್ಕೂ ಹಲವಾರು ಮಸಾಜ್ ಸೆಂಟರ್ಗಳನ್ನು ತೆರೆಯಲಾಯಿತು. ಇವು ದಿನವಿಡೀ ಮಸಾಜ್ ಸೆಂಟರಗಳಾಗಿ ಕಾರ್ಯವಿರ್ವಹಿಸುತ್ತಿದ್ದರೆ ರಾತ್ರಿಯ ಪಾಳಿಯಲ್ಲಿ ವೇಶ್ಯಾಗೃಹಗಳಾಗುತ್ತಿದ್ದವು. ಚಿತ್ರದುದ್ದಕ್ಕೂ ಅಂತಹ ವೇಶ್ಯಾಗೃಹವೊಂದರಲ್ಲಿ ಕೆಲಸ ಮಾಡುತ್ತಿರುವ ವೇಶ್ಯೆ ಯರೊಂದಿಗೆ ನಿರ್ದೇಶಿಸಿದ ಕ್ಯಾಮಿಲಾ ನಡೆಸಿದ ಮಾತುಕತೆ ಆಸಕ್ತಿದಾಯಕವಾಗಿ ಮೂಡಿಬಂದಿದೆ.

ಎಫೆಂಗ್ ಚೀನಾದ ಗ್ರಾಮೀಣ ಪ್ರದೇಶದಿಂದ ನೌಕರಿಯ ತಲಾಶೆಯಲ್ಲಿ ಬೀಜಿಂಗ್ಗೆ ಬಂದ ಯುವತಿ. ಹಳ್ಳಿಯಲ್ಲಿ ಆಕೆಗೊಂದು ಪುಟ್ಟ ಮನೆಯಿದೆ. ವೃದ್ಧ ತಂದೆ-ತಾಯಂದಿರು ಹಾಗೂ ಇಡೀ ಕುಟುಂಬಕ್ಕೆ ಆಕೆ ತಿಂಗಳಿಗೊಮ್ಮೆ ಕಳುಹಿಸಿ ಕೊಡುವ ಸಂಬಳವೇ ಆಧಾರ. ಆಕೆ ಪೇಟೆಯಲ್ಲಿ ಮಾಡುವ ಕೆಲಸವೇನು? ಎಂಬುವುದು ಅವರಿಗೆ ತಿಳಿದಿಲ್ಲ. ಎಫೆಂಗ್ಗೆ ತಾನು ಮಾಡುವ ವೃತ್ತಿಯಲ್ಲಿ ತೃಪ್ತಿಯಿಲ್ಲ. ಸಮಾಜದ ದೃಷ್ಟಿಯಲ್ಲಿ ಕೆಟ್ಟದಾಗಿರುವ ಆ ವೃತ್ತಿ ಆಕೆಗೆ ಅನಿವಾರ್ಯ. ಬಹಳಷ್ಟು ಶ್ರಮಪಟ್ಟ ಬಳಿಕ ಸಿಕ್ಕ ಕೆಲಸ ಬಿಟ್ಟರೆ ಸಂಸಾರ ಬೀದಿಗೆ ಬರುವುದೆಂಬ ಭೀತಿ ಆಕೆಯನ್ನು ಇಲ್ಲೇ ಇರುವಂತೆ ಮಾಡಿದೆ.

ಆ ವೇಶ್ಯಾವಾಟಿಕೆಯನ್ನು ನಡೆಸುವ ಮೇಲ್ವಿಚಾರಕಿ ಬಳಿ ನಾಲ್ಕು ಸೆಲೂನ್ಗಳಿವೆ. ಆಕೆ ಆರು ಕಾರುಗಳು ಹಾಗೂ ಮೂರು ಮನೆಗಳ ಒಡತಿ. ಆಕೆ ಸ್ವತಃ ಈ ವೃತ್ತಿಯಲ್ಲಿ ಭಾಗಿಯಾಗಿಲ್ಲ. ಇತರರಿಂದ ಈ ಕೆಲಸ ಮಾಡಿಸುವಲ್ಲಿ ನಿಪುಣೆ. ನನ್ನ ಮಗಳು ಚೆನ್ನಾಗಿರಬೇಕು. ಆಕೆಗಾಗಿ ನಾನೊಂದು ಪುಟ್ಟ ಸುಂದರ ಮನೆಯೊಂದನ್ನು ಖರೀದಿಸಬೇಕು. ಅದಕ್ಕಾಗಿ ಹಗಲು ರಾತ್ರಿ ಈ ಕೆಲಸ ಮಾಡುತ್ತಿದ್ದೇನೆ. ಆದರೂ ಬಂದುದರಲ್ಲಿ ಅರ್ಧವನ್ನು ಮೇಲ್ವಿಚಾರಕಿ ಕಿತ್ತುಕೊಳ್ಳುತ್ತಾಳೆ. ಉಳಿದ ದುಡ್ಡು ಮನೆ ಖರೀದಿಸಲು ಎಲ್ಲಿ ಸಾಕು? ಎಂದು ಪ್ರಶ್ನಿಸುವ ತಾಯಿಯ ಮಾತಿನಲ್ಲಿ ಇಣುಕುವ ನಿರಾಸೆ ವಾಸ್ತವದ ಕಠಿಣತೆಯನ್ನು ವೀಕ್ಷಕರಿಗೆ ಪರಿಚಯಿಸುತ್ತದೆ.

ವೇಶ್ಯೆಯರ ಸಹಜವಾದ ದೈನಂದಿನ ಜೀವನವನ್ನು ಬಿಂಬಿಸುವ ಪ್ರೆಟಿ ಗರ್ಲ್ ಅವರ ಮೇಲೆ ಅನುಕಂಪವನ್ನು ಸೂಸುತ್ತದೆ. ಅವರೂ ನಮ್ಮಂತೇ...ಎಂಬ ವಿಚಾರವನ್ನು ಪದೇ ಪದೇ ನೋಡುಗರಿಗೆ ನೆನಪಿಸುತ್ತಿರುತ್ತದೆ. ತಮ್ಮ ಸೆಂಟರ್ಗಳ ಹೊರಗೆ ನಿಂತು ಪುರುಷರನ್ನು ಆಕಷಿಸಲು ಅವರು ಪಡುವ ಪಾಡು ಅಸಹ್ಯವೆನಿಸಿದರೂ ಮನಕರಗುವಂತಿದೆ. ದಿನದ ಕೊನೆಯಲ್ಲಿ ಗಳಿಸಿದ ಹಣವನ್ನು ಲೆಕ್ಕಹಾಕುವಾಗ ಅವರಲ್ಲಿ ಕಾಣುವ ನಿರಾಸೆ, ಕಸ್ಟಮರ್ಗಳಿಗಾಗಿ ಅವರಾಡುವ ಒಳಜಗಳಗಳು ವೀಕ್ಷಕರನ್ನು ಕ್ಷಣಕಾಲ ನಿರ್ಲಿಪ್ತರನ್ನಾಗಿಸುತ್ತದೆ.
ಒಲಿಂಪಿಕ್ ಮುಗಿಯುತ್ತಿದ್ದಂತೆಯೇ ಚೀನಾ ಸರಕಾರ ಎಲ್ಲಾ ಮಸಾಜ್ ಸೆಂಟರ್ಗಳನ್ನು ಮುಚ್ಚುತ್ತದೆ. ವೇಶ್ಯಾವಾಟಿಕೆಗೆ ತೆರೆ ಬೀಳುತ್ತದೆ. ಅವರು ಮತ್ತೆ ನಿರುದ್ಯೋಗಿಗಳಾಗುತ್ತಾರೆ. ಕೀಳರಿಮೆಯಿಂದ ಮುಕ್ತಿ ದೊರಕಿದರೂ ಹಸಿವಿನ ಭೀತಿ ಅವರನ್ನು ಕಾಡತೊಡಗುತ್ತದೆ. ಅವರ ಮುಂದಿನ ಜೀವನ ನೋಡುಗನಿಗೆ ಪ್ರಶ್ನೆಯಾಗಿಯೇ ಉಳಿಯುತ್ತದೆ....ಹೀಗೆ ಸಾಕ್ಷ್ಯಚಿತ್ರ ಕೊನೆಗೊಳ್ಳುತ್ತದೆ.

ತಾಂತ್ರಿಕವಾಗಿ ಸಾಮಾನ್ಯವಾಗಿದ್ದರೂ ಸಾಕ್ಷ್ಯಚಿತ್ರದ ಕಥಾವಸ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಚಿತ್ರದುದ್ದಕ್ಕೂ ವೀಕ್ಷಕ ಚಿತ್ರವನ್ನು ಅನುಭವಿಸುತ್ತಾ ಅದರ ಆಳಕ್ಕಿಳಿಯುತ್ತಾನೆ. ಚಿತ್ರ ಮುಗಿದ ಬಳಿಕವೂ ಆತ ವಿಷಯದ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ. ವಾಸ್ತವತೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ಸಮಾಜದ ಗಂಭೀರವಾದ ಸಮಸ್ಯೆಯೊಂದನ್ನು ಅತೀ ಸೂಕ್ಷ್ಮವಾಗಿ ಬಿಂಬಿಸಿದ ನಿರ್ದೇಶಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಇಂತಹ ಸಾಕ್ಷ್ಯಚಿತ್ರಗಳು ಇನ್ನಷ್ಟು ಮೂಡಿಬರಲಿ.
ಅಕ್ಷತಾ ಭಟ್ ಸಿ.ಎಚ್.

ಮುಂದೆ ಓದಿ
2:40 PM

ಮಿಥುನ

Posted by ekanasu

ಸಾಹಿತ್ಯ
ಕುಸುಮಬಾಲೆ ಅವಳು,
ಸಂತೆಯ ಬೀದಿಯಲಿ ಹೂವ ಮಾರುವಳು
ಮೊಗ್ಗಿನ ಮನಸಿನಲಿ ನೂರಾರು ಕನಸುಗಳು
ಆದರೆ, ಚೆಂಗುಲಾಬಿಯ ರಂಗು ಕಾಣದವಳು
'ಹೂ ಮಾರು ಕುರುಡಿ' ಜನರಿಟ್ಟ ಹೆಸರು'
'ಕನಸು ಕಾಣಲು ಕಂಗಳೇ ಬೆಕಿಲ್ಲ...
ಮನಸೊಂದೇ ಸಾಕೆನ್ನುತ, ಸೇವಂತಿಗೊಂದು ಮುತ್ತಿಟ್ಟಳು
ಅವನು,


ಅದೇ ಸಂತೆಯ ಬೀದಿಯ ಮೂಲೆಯಲಿ
ಬಗೆ-ಬಗೆ ಹಣ್ಣುಗಳ ಮಾರುವವನು
ಅವನಿಗೂ ಸೇಬಿನ ಕೆಂಪು ಕಾಣುವುದಿಲ್ಲ.
ಅವನ ಕನಸಿಗೂ ಕಣ್ಣಿನ ಹಂಗಿಲ್ಲ.

ಸ್ವರ್ಗದಲ್ಲೇ ನಿಶ್ಚಯವಾದ ಬಂಧನಕೆ
ಕಾಲ ಕೂಡಿ ಬಂದಿತೀಗ...
ಅವಳ ಕನಸಮಾಲೆಯಲ್ಲಿ ಅವನೀಗ ಸುಗಂಧರಾಜ!
ಮೊದಲ ರಾತ್ರಿಯಂದು ನಸುನಾಚಿದ ಮಲ್ಲಿಗೆ
ಹೇಳಿತು ಹರಿವಾಣದಿ ಮುಗುಳ್ನಗೆ ಸೂಸುತ್ತಿದ್ದ
ದ್ರಾಕ್ಷಿಯಗೊಂಚಲಿಗೆ,
ಹೂವು ಹಣ್ಣುಗಳ ಅಪೂರ್ವ ಮಿಥುನ

ಆತ್ಮೀಯ ಜೆ.ಕಡಂಬ

ಮುಂದೆ ಓದಿ
2:37 PM

ಇಷ್ಟೇ ಸಣ್ಣ ಕತೆ...

Posted by ekanasu

ಸಾಹಿತ್ಯ
" ಖಂಡಿತ ಬರಬೇಕು" ಎಂದು ವಿವಾಹದ ಕರೆಯೋಲೆಯನ್ನು ಇವನ ಕೈಯಲ್ಲಿ ಅವನಿಟ್ಟಾಗ ಅವನೊಂದಿಗೆ ಪಾಣಿಗ್ರಹಣವಾಗಲಿರುವ ವಧು "ಅವನಿ" -ಇವನ ಪ್ರೇಯಸಿಯಾಗಿದ್ದಳು. .. ಇವನಿಗೆ ಗ್ರಹಣ ಹಿಡಿಯಿತು.
* * *

ಬೆಳಗ್ಗೆ ಗುತ್ತಿನ ಮನೆಯ ಯಜಮಾನನನಿಂದ ಹೀನಾಮಾನವಾಗಿ ಬೈಸಿಕೊಂಡು ಹೊಡೆಸಿಕೊಂಡು ಇದ್ದ "ತನಿಯ" ನ ಮುಂದೆ ಯಜಮಾನ ತಲೆಬಾಗಿ ಕೈ ಮುಗಿದು ನಿಂತಿದ್ದಾನೆ..ಅದೇ ರಾತ್ರಿಯ "ದೈವ ಕೋಲ"ದಲ್ಲಿ...
ತ್ಮೀಯ.ಜೆ.ಕಡಂಬ

ಮುಂದೆ ಓದಿ
2:30 PM

ಸ್ವತಂತ್ರರಾಗಿ

Posted by ekanasu

ವಿಚಾರ
ನಾವೆಲ್ಲಾ ಒಂದೇ ಎಂಬುದನ್ನು ಅರಿಯುವುದಕ್ಕಾಗಿ ಇತರರ ದೇಹಗಳಲ್ಲಿಯೂ ನಾವೇ ಇದ್ದೇವೆ ಎಂದು ಭಾವಿಸಿ. ಉಳಿದವುಗಳನ್ನೆಲ್ಲಾ ಗಾಳಿಗೆ ಎಸೆಯಿರಿ. ಒಳ್ಳೆಯದೋ ಕೆಟ್ಟದ್ದೋ ನಿಮ್ಮ ಕರ್ಮಗಳನ್ನೆಲ್ಲಾ ಹೊರಗೆ ಎಂಜಲಿನಂತೆ ಉಗುಳಿಬಿಡಿ. ಅವುಗಳನ್ನು ಕುರಿತು ಯೋಚಿಸಬೇಡಿ, ಮಾಡಿದ್ದು ಆಗಿಹೋಯಿತು. ಮೂಢನಂಬಿಕೆಗಳನ್ನು ಆಚೆಗೆಸೆಯಿರಿ. ಮೃತ್ಯು ಎದುರಿಗೆ ನಿಂತಿರುವಾಗಲೂ ಅಂಜಬೇಡಿ ಪಶ್ಚಾತ್ತಾಪ ಪಡಬೇಡಿ , ಹಿಂದಿನದನ್ನೇ ಕುರಿತು ಮೆಲುಕುತ್ತಿರಬೇಡಿ . ಹಿಂದಿನದನ್ನೇ ಕುರಿತು ಮೆಲುಕುತ್ತಿರಬೇಡಿ. ನೀವು ಮಾಡಿದ ಪುಣ್ಯ ಕೆಲಸಗಳನ್ನು ಮರೆಯಿರಿ, ಮುಕ್ತರಾಗಿ, ದುರ್ಬಲರು ಅಂಜುಬುರುಕರು ಅಜ್ಞಾನಿಗಳು ಎಂದಿಗೂ ಆತ್ಮನನ್ನು ಪದೆಯಲಾರರು.ನೀವು ಮಾಡಿದ್ದನ್ನು ಅಳಿಸುವುದಕ್ಕೆ ಆಗುವುದಿಲ್ಲ ಆತ್ಮನನ್ನು ಪಡೆಯಲಾರರು. ನೀವು ಮಾಡಿದ್ದನ್ನು ಅಳಿಸುವುದಕ್ಕೆ ಆಗುವುದಿಲ್ಲ. ಅವುಗಳ ಫಲ ಬರಲೇಬೇಕು.




ಅದನ್ನು ಧೈರ್ಯದಿಂದ ಎದುರಿಸಿ . ಆದರೆ ಅದೇ ಕೆಲಸವನ್ನು ಮತ್ತೊಮ್ಮೆ ಮಾಡದಂತೆ ನೋಡಿಕೊಳ್ಳಿ. ಎಲ್ಲಾ ಕೆಲಸಗಳ ಜವಬ್ದಾರಿಯನ್ನು ಭಗವಂತನಿಗೆ ಅರ್ಪಣೆಮಾಡಿ. ಒಳ್ಳೆಯದು ಕೆಟ್ಟದು ಎರಡನ್ನು ಅವನಿಗೆ ಅರ್ಪಿಸಿ ಒಳ್ಳೆಯದನ್ನು ನೀವು ಇಟ್ಟುಕೊಂಡು ಕೆಟ್ಟದ್ದನ್ನು ಮಾತ್ರ ಕೊಡಬೇಡಿ. ಯಾರು ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲವೋ ದೇವರು ಅವರಿಗೆ ಸಹಾಯ ಮಾಡುವನು.
ಅನಾಸಕ್ತಿಭಾವ, ನಿಶ್ಚಿತವಾಗಿಯೂ ಇದ್ದಾಗ, ನಿಮ್ಮ ಭಾಗಕ್ಕೆ ಒಳ್ಳೆಯದೂ ಇಲ್ಲ, ಕೆಟ್ಟದೂ ಇಲ್ಲ ಇದು ಒಳ್ಳೆಯದು, ಇದು ಕೆಟ್ಟದು, ಎಂಬ ಭೇದಜ್ಞಾನವನ್ನು ನಿಮ್ಮಲ್ಲಿ ಉಂಟು ಮಾಡುವುದು ಯಾವುದೆಂದರೆ ಸ್ವಾರ್ಥವೊಂದೇ. ಇದನ್ನು ಅರಿಯುವುದು ಬಹಳ ದುಸ್ತರ. ಆದರೆ ಯಾವುದೇ ಆಗಲಿ, ಅದು ನಿಮ್ಮ ಮೇಲೆ ಅಧಿಕಾರ ಮಾಡುವುದಕ್ಕೆ ನೀವು ಅವಕಾಶವನ್ನು ಕೊಟ್ಟ ಹೊರತು, ಪ್ರಪಂಚದಲ್ಲಿ ಯಾವುದಕ್ಕೂ ನಿಮ್ಮ ಮೇಲೆ ಅಧಿಕಾರವಿರದೆಂಬುದನ್ನು ನೀವು ಕಾಲಾನುಕಾಲದಲ್ಲಿ ಅರಿಯುವಿರಿ. ಸ್ವಮೋಹದಿಂದ ವಿವೇಕಶೂನ್ಯವಾಗಿ ತನ್ನ ಆತ್ಮಾಧೀನತೆಯನ್ನು ಮರೆತ ಹೊರತು, ಆತ್ಮನ ಮೇಲೆ ಯಾವುದಕ್ಕೂ ಅಧಿಕಾರವಿರದು. ನೀವು ಆ ಮೋಹವನ್ನು ಗೆದ್ದು, ನಿಮ್ಮ ಮೇಲೆ ಅಧಿಕಾರ ಮಾಡಲು ಯಾವುದಕ್ಕೂ ಶಕ್ತಿಯಿಲ್ಲವೆಂದು ಹೇಳಲು, ಅನಾಸಕ್ತಿಯೊಂದೇ ಮಾರ್ಗ. ಇನ್ನು ನಾನು ಅವಕಾಶ ಕೊಟ್ಟ ಹೊರತು ಯಾವುದಕ್ಕೂ ನನ್ನ ಮೇಲೆ ಅಧಿಕಾರ ಮಾಡಲು ಹಕ್ಕಿಲ್ಲವೆಂದು ಹೇಳುವುದೇನೋ ನಮ್ಮ ಆಯುಷ್ಯದಲ್ಲಿ ಅದನ್ನ ಆಚರಣೆಗೆ ತರುವುದಕ್ಕಿಂತಲೂ ನಿಶ್ಚಿತವಾಗಿಯೂ ಸುಲಭ. ಆದುದರಿಂದ ಯಾರು ತಮ್ಮ ಮೇಲೆ ಪರಿಣಾಮವನ್ನುಂಟು ಮಾಡಲು ಯಾವುದಕ್ಕೂ ಯತಾರ್ಥ ವಾಗಿಯೂ ಅವಕಾಶ ಕೊಡರೋ, ಯಾರು ಬಾಹ್ಯಪ್ರಪಂಚದ ಅಘಾತದಿಂದ ಹರ್ಷವನ್ನಾಗಲೀ ದುಃಖವನ್ನಾಗಲೀ ಪಡೆಯರೋ, ಅಂತವರನ್ನು ಕಂಡುಹಿಡಿಯುವ ನಿಜವಾದ ಗುರುತನ್ನು ಜ್ಞಾಪಕದಲ್ಲಿಡುವುದು ಒಳ್ಳೆಯದು. ಗುರುತೇನೆಂದರೆ, ಒಂದು ಪರ್ವತವೇ ಆತನ ಮೇಲೆ ಬಿದ್ದು ಆತನು ನಜ್ಜುಗುಜ್ಜಾದರೂ ಆತನ ಮನಸ್ಸು ಕದಲದು. ಆತನಿಗೆ ಪ್ರಿಯವು ಪ್ರಾಪ್ತವಾಗಲಿ; ಅಪ್ರಿಯವು ಪ್ರಾಪ್ತವಾಗಲಿ ಆತನು ಮಾತ್ರ ಒಂದೇ ಸಮನಾಗಿರುವನು. ಆತನು ಎಲ್ಲಾ ಸ್ಥಿತಿಗಳಲ್ಲಿಯೂ ಸಮನಾಗಿ ಅಚಲನಾಗಿ ಇರುವನು.

'ಸಮತ್ವ' ಎಂಬ ಆ ಅದ್ಭುತ ಸ್ಥಿತಿಯಲ್ಲಿ ನೆಲೆಗೊಂಡಾಗ ಯಾವುದನ್ನು ದುಃಖಕ್ಕೆ ಮತ್ತು ಪಾಪಕ್ಕೆ ಕಾರಣ ಎಂದು ಹೇಳುತ್ತೇವೆಯೋ ಅದನ್ನೆಲ್ಲ ನೋಡಿ ನಗುತ್ತೇವೆ. ಸಮತ್ವದಲ್ಲಿ ಪ್ರತಿಷ್ಠಿತರಾಗುವುದನ್ನೇ ವೇದಾಂತದಲ್ಲಿ 'ಮುಕ್ತಿ' ಎನ್ನುವುದು. ಮುಕ್ತಿಯನ್ನು ಸಮೀಪಿಸಿದಂತೆಲ್ಲಾ ಈ ಸಮದರ್ಶಿತ್ವ ಹೆಚ್ಚು ಹೆಚ್ಚು ಪ್ರಕಟವಾಗುವುದು ಯಾರು ಸುಖ ದು;ಖಗಳನ್ನು ಸಮವಾಗಿ ನೋಡುವರೋ ಜಯಾಪಜಯ ಗಳಲ್ಲಿ ಯಾರು ಸಮರಾಗಿರುವರೋ ಅವರು ಮುಕ್ತಿಯ ಸಮೀಪಕ್ಕೆ ಬರುತ್ತಿರುವರು.

ಯಾರು ಆಯಾ ಕೇಂದ್ರಗಳಲ್ಲಿ ತಮ್ಮ ಇಚ್ಛಾನುಸಾರ ಮನಸ್ಸನ್ನು ಇಡಬಲ್ಲರೋ ಮತ್ತು ಅಲ್ಲಿಂದ ತೆಗೆಯಬಲ್ಲರೊ ಅವರು ಪ್ರತ್ಯಾಹಾರದಲ್ಲಿ ಜಯಶೀಲರಾಗಿರುವರು. ಪ್ರತ್ಯಾಹಾರವೆಂದರೆ ಮನಸ್ಸನ್ನು ಏಕಾಗ್ರಗೊಳಿಸುವುದು, ಹೊರಕ್ಕೆ ಹೋಗುವ ಮನಸ್ಸಿನ ಶಕ್ತಿಯನ್ನು ತಡೆಯುವುದು; ಇಂದ್ರಿಯಗಳ ಬಂಧನದಿಂದ ಅದನ್ನು ಬಿಡಿಸುವುದು ಇದನ್ನು ಸಾಧಿಸಿದಾಗ ಮಾತ್ರ ನಾವು ನಿಜವಾಗಿಯೂ, ಶೀಲವಂತರಾಗುವುದು. ಆಗ ಮಾತ್ರ ನಾವು ಮುಕ್ತಿಯೆಡೆಗೆ ನಡೆದಂತೆ ಅದಕ್ಕೆ ಮೊದಲು ನಾವು ಕೇವಲ ಯಂತ್ರಗಳು.
ಸಂತನಿಗೆ ಸ್ವಾತಂತ್ರ್ಯ ಬೇಕಾಗಿದೆ. ಇಂದ್ರಿಯವಿಷಯಗಳು ಬರಿಯ ಭ್ರಾಂತಿ, ಸುಖದುಃಖಗಳಿಗೆ ಅಂತ್ಯವಿಲ್ಲವೆಂಬುದು ಗೊತ್ತಾಗಿದೆ. ಎಷ್ಟು ಜನ ಶ್ರೀಮಂತರು ಹೊಸ ಹೊಸ ಸುಖವನ್ನು ಹುಡುಕುವುದರಲ್ಲಿ ಕಾತರರಾಗಿರುವರು! ಈಗಿರುವ ಸುಖ ಹಳೆಯದಾಗಿದೆ. ಅವರಿಗೆ ಹೊಸತಾದ ಸುಖ ಬೇಕು ಪ್ರತಿದಿನವೂ ಎಷ್ಟು ಕೆಲಸಕ್ಕೆ ಬಾರದ ವಿಷಯಗಳನ್ನು ಕಂಡು ಹಿಡಿಯುತ್ತಿರುವರು ಎಂಬುವುದು ಕಾಣಿಸುವುದಿಲ್ಲವೆ? ಇದು ಕೇವಲ ಕೆಲವು ಕ್ಷಣ ನಮ್ಮ ನರಗಳಿಗೆ ಸುಖವನ್ನು ಕೊಡುವುದಕ್ಕೆ ಮಾತ್ರ. ಅದಾದ ಮೇಲೆ ದುಃಖದ ಪ್ರತಿಫಲ, ಜನಸಾಮಾನ್ಯರು ಒಂದು ಕುರಿಯ ಮಂದೆಯಂತೆ , ಮುಂದಿರುವ ಕುರಿ ಹಳ್ಳಕ್ಕೆ ಬಿದ್ದರೆ ಉಳಿದವೆಲ್ಲ ಹಳ್ಳಕ್ಕೆ ಬಿದ್ದು ತಮ್ಮ ಕತ್ತನ್ನು ಮುರಿದುಕೊಳ್ಳವುವು. ಇದರಂತೆಯೇ ಸಮಾಜದ ಒಬ್ಬ ಮುಂದಾಳು ಏನು ಮಾಡುತ್ತಾನೆಯೋ, ಅದನ್ನು ಉಳಿದವರೆಲ್ಲರೂ ತಾವೂ ಏನು ಮಾಡುತ್ತಿರುವೆವು ಎಂಬುದನ್ನು ಕೂಡ ಆಲೋಚಿಸದೆ ಅನುಕರಿಸುವರು. ಪ್ರಾಪಂಚಿಕ ವಸ್ತುಗಳ ನಶ್ವರತೆ ತನಗೆ ಗೊತ್ತಾದಾಗ ಮನುಷ್ಯನು ಪ್ರಕೃತಿಯ ಆಟಕ್ಕೆ ತಾನು ತುತ್ತಾಗಬಾರದೆಂದು, ಅದರ ಪ್ರಭಾವಕ್ಕೆ ತಾನು ಬೀಳಾಬಾರದೆಂದು ಯೋಚಿಸುವನು. ಇದು ಗುಲಾಮಗಿರಿ. ಯಾರಾದರೂ ತನಗೆ ಒಳ್ಳೆಯ ಮಾತನ್ನು ಹೇಳಿದರೆ ನಗುವನು ಸ್ವಲ್ಪ ಕಟು ಮಾತನ್ನುಕೇಳಿದರೆ ಅಳುವನು.ಒಂದು ಚೂರು ರೊಟ್ಟಿಗೆ, ಸ್ವಲ್ಪ ಗಾಳಿಗೆ, ಅವನು ದಾಸ .ಬಟ್ಟೆಬರೆಗಳಿಗೆ ದಾಸ, ದೇಶಕ್ಕೆ, ದೇಶ ಪ್ರೇಮಕ್ಕೆ, ಹೆಸರಿಗೆ, ಕೀತರ್ಿಗೆ, ಅವನು ದಾಸ, ದಾಸ್ಯದ ಮದ್ಯದಲ್ಲಿ ಅವನು ಇರುವನು ನಿಜವಾದ ಮಾನವನು .ಬಂಧನದಿಂದ ಮುಚ್ಚಿ ಹೋಗುವನು .ನೀವು ಯಾರನ್ನು ಮಾನವನೆನ್ನುವಿರೋ ಆತ ದಾಸ ಈ ದಾಸ್ಯ ಎಂದು ಒಬ್ಬನಿಗೆ ಮನದಟ್ಟಾಗುವುದು. ಆಗ ಮುಕ್ತನಾಗಬೇಕೆಂಬ ಆಸೆ ಉದಯಿಸುವುದು. ತೀವ್ರ ಆಕಾಂಕ್ಷೆ ಆಗ ಏಳುವುದು ಒಬ್ಬನ ತಲೆಯ ಮೇಲೆ ಕೆಂಗೆಂಡವನ್ನು ಇಟ್ಟರೆ ಅವನು ಅದನ್ನು ಆಚೆಗೆಸೆಯಲು ಎಷ್ಟು ಕಾತರನಾಗುತ್ತಾನೆ, ನೋಡಿ ಯಾರು ತಾವು ಪ್ರಕೃತಿಯ ಗುಲಾಮರೆಂದು ನಿಜಾವಾಗಿ ತಿಳಿಯುವರೋ ಅವರು ತಾವು ಮುಕ್ತರಾಗ ಬೇಕೇಂದು ಮಾಡುವ ಹೋರಾಟವು ಹೀಗೆ ಇರುವುದು.
ಮೊದಲು ಸ್ವತಂತ್ರರಾಗಿ ನಂತರ ನಿಮಗೆ ಬೇಕಾದಷ್ಟು ಆಕಾರಗಳನ್ನು ಇಟ್ಟು ಕೊಳ್ಳಿ ನಂತರ ರಂಗಭೂಮಿಗೆ ಬಂದು ಭಿಕ್ಷುಕ ಪಾತ್ರವನ್ನು ನಟಿಸುವ ಪಾತ್ರಧಾರಿಯಂತೆ ನಾವು ಆಡುತ್ತೇವೆ. ದಾರಿಯಲ್ಲಿ ನಡೆಯುವ ನಿಜಾವಾದ ಭಿಕ್ಷುಕನೊಂದಿಗೆ ಅವನನ್ನು ಹೋಲಿಸಿ ನೋಡಿ ಎರಡು ಸಂದರ್ಭಗಳಲ್ಲಿ ಬಹುಶಃ ದೃಶ್ಯ ಒಂದೇ ಮಾತು ಒಂದೇ ಆಗಿರುವುದು ಆದರೂ ಎಷ್ಟು ವ್ಯತ್ಯಾಸ! ಒಬ್ಬನು ತನ್ನ ಭಿಕ್ಷುಕನ ಪಾತ್ರದಿಂದ ಆನಂದಿಸುವನು ಮತ್ತೊಬ್ಬನು ಆದರಿಂದ ದುಃಖಿಸುವನು. ಈ ಅಂತರಕ್ಕೆ ಕಾರಣವೇನು? ಒಬ್ಬನು ಮುಕ್ತ, ಮತ್ತೊಬ್ಬ ಬದ್ಧ ಪಾತ್ರದಾರಿಗೆ ತನ್ನ ಭಿಕ್ಷಾವೃತ್ತಿ ನಿಜವಲ್ಲವೆಂದು ಕೇವಲ ಆಟಕ್ಕಾಗಿ ನಟಿಸಿರುವೆನೆಂದು ಗೊತ್ತಿದೆ. ಆದರೆ ನಿಜವಾದ ಭಿಕ್ಷುಕಾನಾದರೂ ಅದೇ ತನ್ನ ನಿಜ ಸ್ವಭಾವವೆಂದೂ ತನಗೆ ಅದು ಬೇಕಾಗಲೀ, ಬೇಡವಾಗಲೀ, ಸಹಿಸಬೇಕೆಂದು ಗೊತ್ತಿದೆ ಇದೇ ನಿಯಮ ಎಲ್ಲಿಯವರೆಗೆ ನಮಗೆ ಸಹಜಸ್ಥಿತಿಯ ಜ್ಞಾನ ಇರುದಿಲ್ಲವೋ ಅಲ್ಲಿಯವರೆಗೂ ನಾವು ಭಿಕ್ಷುಕರು. ಪ್ರಕೃತಿಯ ಪ್ರತಿಯೊಂದು ಶಕ್ತಿಯು ನಮ್ಮನ್ನು ನಡುಗಿಸುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ನಮ್ಮನ್ನು ಗುಲಾಮರನ್ನಾಗಿ ಮಾಡುವುದು ಸಹಾಯಕ್ಕೋಸುಗವಾಗಿ ಪ್ರಪಂಚದಲ್ಲೆಲ್ಲಾ ಮೊರೆ ಇಡುವೆವು ಆದರೆ ಸಹಾಯ ನಮಗೆ ಎಂದಿಗೂ ಬರುವುದಿಲ್ಲ. ಕಾಲ್ಪನಿಕ ದೇವರನ್ನು ನಾವು ಬೇಡುವೆವು. ಆದರೂ ಸಹಾಯ ಬರುವುದಿಲ್ಲ ಇಷ್ಟಾದರೂ ಸಹಾಯ ಬರತ್ತದೆಯೆಂದು ನಾವು ಮೆಚ್ಚುತ್ತೇವೆ ಹೀಗೆ ಅಳುವುದು ಗೋಳಿಡಿಯುವುದು ಇದರಲ್ಲಿ ಒಂದು ಜೀವನ ವ್ಯರ್ಥವಾಯಿತು ಇದೇ ಆಟ ಪುನಃ ನಡೆಯುತ್ತಿರುತ್ತದೆ.
ರೇಖಾ

ಮುಂದೆ ಓದಿ
2:23 PM

ಉದ್ಘಾಟನೆ

Posted by ekanasu

ರಾಜ್ಯ - ರಾಷ್ಟ್ರ
ಆಲಂಪಳ್ಳಿ ವೆಂಕಟ್ರಾಮ್ ಕಾರ್ಮಿಕ ಅಧ್ಯಯನ ಪೀಠವನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

ಮುಂದೆ ಓದಿ
2:19 PM

'ದೇವರೇ'ಗತಿ

Posted by ekanasu

ರಾಜ್ಯ - ರಾಷ್ಟ್ರ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿನೀಡಿದರು.

ಮುಂದೆ ಓದಿ
11:02 PM

ಪೂರ್ವಭಾವೀ ಸಭೆ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು:ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ -2010 ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14 ರವರೆಗೆ ನಡೆಯಲಿದ್ದು, ಈ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ ಕ್ರೀಡಾಕೂಟದ ಬಗ್ಗೆ ಜಾಗೃತಿ ಮೂಡಿಸಲು ಕ್ವೀನ್ಸ್ ಬ್ಯಾಟನ್ ರಿಲೇ ತಂಡ ವಿವಿಧ ರಾಜ್ಯಗಳಲ್ಲಿ ಸಂಚರಿಸಲಿದೆ.
ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 5 ರಂದು ಹಾಸನದಿಂದ ಆಗಮಿ ಸಲಿದ್ದು, ಶಿರಾಡಿ ಘಾಟಿಯಲ್ಲಿ ರಿಲೇ ತಂಡವನ್ನು ಎದುರು ಗೊಳ್ಳಲಾ ಗುವುದು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ತಂಡವನ್ನು ಸ್ವಾಗತಿಸುವರು. ನಗರದ ಮಹಾವೀರ ಸರ್ಕಲ್ ನಲ್ಲಿ ಮಂಗಳೂರು ಮೇಯರ್ ಅವರು ರಿಲೇ ತಂಡವನ್ನು ಸ್ವಾಗತಿ ಸುವರು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರು ಸಭೆಗೆ ತಿಳಿಸದರು.



ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿ ಗಳನ್ನು ಸಕ್ರಿಯ ಪಾಲ್ಗೊಳಿ ಸುವಿಕೆ ಬಗ್ಗೆ ಆ ಮೂಲಕ ಶಿಕ್ಷಣೇತರ ಅದರಲ್ಲೂ ಮುಖ್ಯವಾಗಿ ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಈ ಅವಕಾಶವನ್ನು ಬಳಸಿ ಕೊಳ್ಳ ಲಾಗುವುದು ಎಂದರು. ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಹಾದು ಹೋಗುವ ರಸ್ತೆಯಲ್ಲಿ ಎಲ್ಲ ಗ್ರಾಮ ಪಂಚಾಯಿ ತಿಗಳಿಗೆ ಹಾಗೂ ನಗರ ಪಂಚಾಯಿತಿಗಳಿಗೆ ಮಾಹಿತಿ ನೀಡಿ ರಸ್ತೆ ಸಿಂಗರಿಸಿ ಸ್ವಾಗತ ಕೋರಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಯವರಿಗೆ ಸೂಚಿಸಿದರು. ಮಂಗಳೂರಿನಲ್ಲಿ ಮಹಾವೀರ ಸರ್ಕಲ್ ನಿಂದ ಕದ್ರಿ, ಲಾಲ್ ಬಾಗ್, ಎಂಜಿ ರಸ್ತೆ, ಪಿ ವಿ ಎಸ್, ಜ್ಯೋತಿ ಮುಖಾಂತರ ಪುರಭವನ ದವರೆಗೆ ರಿಲೇ ಓಟದ ಬಳಿಕ ನಗರದ ಪುರಭವನದಲ್ಲಿ 125 ನಿಮಿಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಿಲೇ ತಂಡದಲ್ಲಿ 26 ವಾಹನಗಳಲ್ಲಿ 98 ಅಧಿಕಾರಿಗಳು ಆಗಮಿಸುವರು.
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಂಗ ಗೌಡ, ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಪ್ರಭುಲಿಂಗ ಕವಳಿಕಟ್ಟಿ, ಆಹಾರ ಮತ್ತು ನಾಗರೀಕರ ಸರಬರಾಜು ಇಲಾಖೆ ಉಪನಿರ್ದೇಶಕರಾದ ವೃಷಭರಾಜೇಂದ್ರ ಮೂರ್ತಿ, ಮಹಾ ನಗರ ಪಾಲಿಕೆ ಕಂದಾಯಧಿಕಾರಿ ಮೇಘನಾ, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ, ಸ್ವಾಗತ ಸಮಿತಿಯ ಸದಸ್ಯರಾದ ಸೀತಾರಾಂ ಕುಲಾಲ್, ಕೆ.ತೇಜೋಮಯ, ಸುನೀಲ್ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಕ್ರೀಡಾ ವಲಯದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದೆ ಓದಿ
10:55 PM

ಮುನಿಸು

Posted by ekanasu

ರಾಜ್ಯ - ರಾಷ್ಟ್ರ

ಕಡಲು ಮುನಿಸಿದೆ. ಅಲೆಗಳಬ್ಬರ ಜೋರಾಗಿದೆ. ಬೋಟುಗಳು ಅಪಾಯದಂಚಿಗೆ ಸಿಲುಕಿವೆ. ಹಲವು ದಡಸೇರಿ ಲಂಗರುಹಾಕಿವೆ. ಅಂತೂ ಮೀನುಗಾರರಿಗೆ ಮುನ್ಸೂಚನೆ ನೀಡಿ ಆಳಸಮುದ್ರದ ಮೀನುಗಾರಿಕೆ ನಡೆಸದಂತೆ ಸೂಚಿಸಲಾಗಿದೆ. ಕಡಲು ಶಾಂತವಾಗುವ ತನಕ ಎದೆನಡುಕ ಕಮ್ಮಿಯಾಗದೆಂಬುದು ಕಡಲ ಮಕ್ಕಳ ಕೂಗು.
















ಚಿತ್ರ: ಪ್ರಸನ್ನ ಬಿ.ಪಿ

ಮುಂದೆ ಓದಿ
7:58 PM

ಮುನಿದ ಕಡಲು

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು: ಕೇರಳದ ಕೊಲ್ಲಂ ಸಮುದ್ರತೀರವೂ ಸೇರಿದಂತೆ ಕರಾವಳಿಯ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದ್ದು ರಕ್ಕಸ ಅಲೆಗಳು ಏಳುವ ಭಯ ಕಾಣತೊಡಗಿದೆ. ಇದರಿಂದಾಗಿ ಮುಂಜಾಗರೋಕತಾ ಕ್ರಮವಾಗಿ ಕರಾವಳಿ ತೀರದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 48ಗಂಟೆಗಳ ಕಾಲ ನಿರಂತರ ಭಾರೀ ಮಳೆಯಾಗುವ ಸಂಭವವಿದೆ. ಮೀನುಗಾರರಿಗೆ ಮೀನುಗಾರಿಕೆಗೆ ಹೋಗದಂತೆ ಸೂಚಿಸಲಾಗಿದೆ. ಕರಾವಳಿ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಭಾರೀ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಒಂದೊಮ್ಮೆ ದೇಶಪ್ರೇಮದ ಸಂಕೇತವಾಗಿದ್ದ ಖಾದಿ ಇಂದು ಭ್ರಷ್ಟತೆಯ ಸಂಕೇತವಾಗಿ ರಾರಾಜಿಸುತ್ತಿದೆ ಎಂದು ಮಂಗಳೂರು ವಿ.ವಿ. ಆಂಗ್ಲವಿಭಾಗದ ರೀಡರ್ ಡಾ.ರವಿಶಂಕರ್ ರಾವ್ ಖೇದ ವ್ಯಕ್ತಪಡಿಸಿದರು.ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ರವಿವಾರ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಗೈದು ಮಾತನಾಡಿದರು.



ಆಳ್ವಾಸ್ ಸಮೂಹ ಸಂಸ್ಥೆಗಳ 8ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿವೃಂದ ಶಿಸ್ತಿನಿಂದ ಪಾಲ್ಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್, ಮನೋಭಾವ, ಸಂಬಂಧ, ಯೋಚನಾಶಕ್ತಿ ಇವುಗಳ ಮೇಲೆ ಅವಕಾಶಗಳು ತೆರೆದಿರುತ್ತವೆ ಎಂದು ಹೇಳಿದರು.
ದೇಶದುದ್ದಗಲಕ್ಕೊಮ್ಮೆ ಅವಲೋಕಿಸಿದರೆ ಶೇ.60ಕ್ಕಿಂತಲೂ ಅಧಿಕ ಮಂದಿ ಇಂದು ರು.20ಕ್ಕಿಂತಲೂ ಕಡಿಮೆ ಹಣದಲ್ಲಿ ದಿನದೂಡುವ ಸ್ಥಿತಿ ಕಂಡುಬರುತ್ತಿದೆ. ಸಮಾನತೆ , ಸಮೃದ್ಧಿ,ಶಾಂತಿಯ ಭಾವಗಳ ನಡುವೆಯೂ ನಿರಾಶೇ, ಅವಮಾನ, ಹತಾಶೆಗಳು ವೈಭವೀಕರಿಸುತ್ತಿದೆ ಎಂದು ಮಾರ್ಮಿಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಆಡಳಿತಾಧಿಕಾರಿ ಡಾ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಮಿಜಾರುಗುತ್ತು ಆನಂದ ಆಳ್ವ ಅವರ 91ನೇ ಹುಟ್ಟುಹಬ್ಬದ ಆಚರಣೆ, ಕುಮಾರಧಾರಾ, ಕಾವೇರಿ, ಗಂಗಾ ಹಾಸ್ಟೆಲ್ ಗಳ ಉದ್ಘಾಟನಾ ಸಮಾರಂಭವೂ ನಡೆಯಿತು.
















ಮುಂದೆ ಓದಿ

ರಾಜ್ಯ - ರಾಷ್ಟ್ರ
ಪಶ್ಚಿಮ ಘಟ್ಟ ಕಾರ್ಯಪಡೆ ಕರಾವಳಿ ಹಸಿರು ಕವಚ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಚಾಲನೆ ನೀಡಿದರು.

ಮುಂದೆ ಓದಿ
9:54 PM

ಸಮಾವೇಶ

Posted by ekanasu

ರಾಜ್ಯ - ರಾಷ್ಟ್ರ
ಭಾರತೀಯ ಜನತಾ ಪಾರ್ಟಿಯ ಜನಜಾಗೃತಿ ಸಮಾವೇಶ ಬಿ.ಜೆ.ಪಿ.ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿ ಸಮ್ಮುಖದಲ್ಲಿ ಶನಿವಾರ ಮೈಸೂರಿನಲ್ಲಿ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.




ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅನಂತ ಕುಮಾರ್, ಈಶ್ವರಪ್ಪ , ಡಿ.ವಿ.ಎಸ್. ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು :ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ಶೀಘ್ರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಯಾಗಿರು ವುದರಿಂದ ಜಲಾಶಯ ಗಳಲ್ಲಿ ಕಳೆದ ವರ್ಷಕ್ಕಿಂತ ಶೇ. 30ರಷ್ಟು ನೀರು ಕಡಿಮೆ ಯಾಗಿದೆ. ಈಗಾಗಲೇ 700 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಆಗಸ್ಟ್ 16 ರಂದು ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆಯ ಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.



ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ:ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆ ಪ್ರವಾ ಸೋದ್ಯಮ ಅಭಿವೃದ್ದಿಗೆ ವಿವಿಧ ಯೋಜನೆ ಹಮ್ಮಿ ಕೊಳ್ಳ ಲಾಗಿದೆ. ಮಂಗ ಳೂರಿನಲ್ಲಿ 250 ಕೋಟಿ ರೂ. ವೆಚ್ಚದ ಮೆರೈನ್ ಅಕ್ವಾ ಪಾರ್ಕ್, 100 ಕೋಟಿ ರೂ. ವೆಚ್ಚದಲ್ಲಿ ಬಂದರು ಅಭಿವೃದ್ಧಿ ಯೋಜನೆ, ನಂದಿಬೆಟ್ಟ, ಕೆಮ್ಮಣ್ಣು ಗುಂಡಿ ಅಭಿವೃದ್ಧಿ ಯೋಜನೆ, ಮಂಗಳ ಕಾರ್ನಿಶ್ ಯೋಜನೆ, ಜೋಗ್ ಜಲಪಾತ, ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ಮೂಡಬಿದ್ರೆ ಸಾವಿರ ಕಂಬದ ಬಸದಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸರಕಾರ ಯೋಜನೆ ಹಮ್ಮಿ ಕೊಂಡಿದೆ. ಈ ನಿಟ್ಟಿನಲ್ಲಿ ಖಾಸಗಿ ಸಹ ಭಾಗಿತ್ವ ದೊಂದಿಗೆ ಯೋಜನೆ ರೂಪಿಸ ಲಾಗುವುದು.
ಅಕ್ರಮ ಗಣಿಗಾರಿಕೆಗೆ ಕೇಂದ್ರದ ನೀತಿಗೆ ಸ್ವಾಗತ: ಅಕ್ರಮ ಗಣಿಗಾರಿಕೆಗೆ ಸಂಬಂಧಿ ಸಿದಂತೆ ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ರೂಪಿಸುವ ಬಗ್ಗೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿಕೆ ನೀಡಿರುವುದನ್ನು ತಾನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟವರು ಕಾಂಗ್ರೆಸ್ಸಿಗರು. ಆದರೆ ಈಗ ದೂರು ಮಾತ್ರ ಯಡಿಯೂರಪ್ಪರ ಮೇಲೆ ಮಾಡುತ್ತಾರೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಗಣಿಗಾರಿಕೆಗೆ ಏಕೆ ಅವಕಾಶ ನೀಡಿಲ್ಲ. ಹಾಗೆ ಒಂದು ವೇಳೆ ಅವಕಾಶ ನೀಡಿದ್ದರೆ ಕಬ್ಬಿಣ, ಉಕ್ಕಿನ ಬೆಲೆ ಒಂದು ತಿಂಗಳಲ್ಲೇ ಇಳಿಯುತ್ತಿತ್ತು.ಕೇಂದ್ರ ಸರಕಾರ ಗಣಿಗಾರಿಕೆಯ ಬಗ್ಗೆ ರಾಷ್ಟ್ರೀಯ ನೀತಿ ರೂಪಿಸಿಲ್ಲ.ದೇಶದ ಎಲ್ಲಾ ಕಡೆ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಶಿರಾಡಿ ಘಾಟ್ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು. ಘಟ್ಟ ಪ್ರದೇಶದ ರಸ್ತೆ ಅಭಿವೃದ್ಧಿ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು. ಮಡಿಕೇರಿ- ಬಂಟ್ವಾಳ ರಸ್ತೆ ಅಭಿವೃದ್ದಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ವರ್ಷದೊಳಗೆ ಪೂರ್ಣಗೊಳ್ಳಲಿದೆ. ಜಿಲ್ಲಾ ನ್ಯಾಯಾಲಯದ ಕಟ್ಟಡ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ರಂಗ ಮಂದಿರಕ್ಕೆ ಚಾಲನೆ ನೀಡಲಾಗುವುದು. ಮಂಗಳೂರಿಗೆ ಸಿಂಥೆಟಿಕ್ ಟ್ರಾಕ್ ರಚನೆಗೆ ವಾರದೊಳಗೆ ಎರಡು ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಡಿಬಿ ವತಿಯಿಂದ ಮತ್ತೆ 100 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 40 ಕೋಟಿ ರೂ. ಕಾಮಗಾರಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಂಸದ ಡಿ.ವಿ. ಸದಾನಂದ ಗೌಡ, ನಳಿನ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಶಾಸಕ ಯೋಗೀಶ್ ಭಟ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾಧಿಕಾರಿ ಪೊನ್ನುರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ನಂತರ ಮುಖ್ಯ ಮಂತ್ರಿಗಳು ಕುಡುಪು ಅನಂತ ಪದ್ಮನಾಭ ದೇವ ಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.ದೇವ ಸ್ಥಾನದ ಸಮಗ್ರ ಅಭಿವೃದ್ದಿಗೆ 2 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದ ಮುಖ್ಯ ಮಂತ್ರಿಗಳು, ಪ್ರಸಕ್ತ ವರ್ಷದಲ್ಲಿ ರೂಪಾಯಿ ಒಂದು ಕೋಟಿಯನ್ನು ಬಿಡುಗಡೆ ಗೊಳಿಸುವುದಾಗಿ ಹೇಳಿದರು.
ದೇವರ ದರ್ಶನ ಮಾಡಿದ ಮುಖ್ಯಮಂತ್ರಿಗಳು ಮಾಧ್ಯಮದೊಂದಿಗೆ ಮಾತನಾಡಿ, ದೇಶ ಹಾಗೂ ರಾಜ್ಯದ ಸುಭಿಕ್ಷೆಗೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು

ಮುಂದೆ ಓದಿ
8:52 PM

ಅಮ್ಮನ ಹಾಲೇ ಅಮೃತ

Posted by ekanasu

ಆರೋಗ್ಯ

ಹಾಲು ಹಣ್ಣಿಗಿಂತ ಜೇನು ತುಪ್ಪಕ್ಕಿಂತ
ವಾಲಾಡಿ ಬೆಳೆಯ ರಸಬಾಳೆ ಹಣ್ಣಿಗಿಂತ
ತಾಯವ್ವ, ನಿನ್ನಾಲು ಕಡುರುಚಿ
-ಜಾನಪದ ತ್ರಿಪದಿ

ಮಗುವಿಗೆ ಪ್ರಕೃತಿಯ ಕೊಡುಗೆ ಮೊಲೆಹಾಲು. ನವಜಾತ ಜೀವಕ್ಕೆ ಅಮ್ಮನ ಹಾಲೇ ಅಮೃತ. ಮೊಲೆ ಹಾಲು ಮಗುವಿಗೆಂದೇ ತಯಾರಾದ ಪ್ರಕೃತಿಯ ಕೊಡುಗೆ. ನಿಸರ್ಗ ಸೃಷ್ಠಿಯೇ ಶ್ರೇಷ್ಠ. ತಾಯಿ ಹಾಲಿಗೆ ಸರಿಸಮಾನವಾದ ಆಹಾರ ಜಗತ್ತಿನಲ್ಲಿಲ್ಲ . ಹಿಂದೆ, ಇಂದು ಮತ್ತು ಮುಂದೆಯೂ ದೊರೆವ ಮಗುವಿನ ಆಹಾರದಲ್ಲಿ ತಾಯಿಯ ಹಾಲಿಗೆ ಪ್ರಥಮ ಮತ್ತು ಉನ್ನತ ಸ್ಥಾನ.



ಜೀವ ಅಂಕುರಿಸುವುದು ಪ್ರಕೃತಿಯ ಒಂದು ಅದ್ಭುತ ವಾದರೆ ಅದು ಜೀವಕಳೆ ತುಂಬಿಕೊಂಡು ಅರಳುವ ಬಗೆ ವೈಚಿತ್ರ್ಯದ ಮತ್ತೊಂದು ಮಜಲು. ಕೇವಲ ಏಳು ಪೌಂಡ್ ತೂಕದ ಎಳಸು ಅಂಗಾಂಗಳ ಹಸುಳೆಯೊಂದು ಧರೆಗಿಳಿದು ಬಂದ ಘಳಿಗೆಯಿಂದ ಅಮ್ಮನ ಅಮೃತ ಕಳಶಗಳಿಗೆ ಅಂಟಿಕೊಳ್ಳುವ ಪರಿಯಲ್ಲಿಯೇ ಅದರ ಪಾಲಿನ ಬದುಕು ಬಿಚ್ಚಿಕೊಳ್ಳತೊಡಗುತ್ತದೆ. ಗೋಲಿ ಕಂಗಳಿಂದ ಪ್ರಪಂಚವನ್ನು ನಿರುಕಿಸಲಾರಂಭಿಸುವ ಖಾಲಿ ಹೊಟ್ಟೆಯ ನವಜಾತ ಶಿಶುವಿಗೆ ಅಮ್ಮನ ಮೊಲೆಹಾಲೇ ಜಿವದ್ರವ: ಅಲ್ಲಿಂದಲೇ ಅದು ತನ್ನ ಹಾಲುಗೆನ್ನೆ ತುಂಬಿಕೊಂಡು ನಳನಳಿಸತೊಡಗುವುದು. ಆದರೆ ಈ ಹಾಲಿನ ಬಗ್ಗೆಯೇ ಎಷ್ಟೊಂದು ಅಪಕಲ್ಪನೆಗಳು! ಹತ್ತಾರು ಅಸತ್ಯಗಳ ಎಳೆಗಳಿಂದ ನಮ್ಮ ನಿಲುವುಗಳನ್ನು ಬಂಧಿಸಿಕೊಂಡು ತೊಳಲಾಡುವ ಬದಲು ವೈದ್ಯವಿಜ್ಞಾನದ ಮೊನಚು ಕತ್ತಿಯಿಂದ ಅಂಥವುಗಳನ್ನೆಲ್ಲಾ ಕಡಿದುಹಾಕುವುದು ಬುದ್ಧಿವಂತಿಕೆಯ ಲಕ್ಷಣ.

ತಾಯಿ ಹಾಲಿನ ಮಹತ್ವ

ಎಳೆಯ ಮಕ್ಕಳಿಗೆ ಯೋಗ್ಯ ಆಹಾರ, ಪ್ರೀತಿ, ವಾತ್ಸಾಲ್ಯ, ಪ್ರೋತ್ಸಾಹ ಮತ್ತು ಸೋಂಕುಗಳ ವಿರುದ್ದ ರಕ್ಷಣೆ ಬೇಕು. ಎದೆಹಾಲು ಕೊಡುಗೆ ಎಲ್ಲಾ ಅಗತ್ಯಗಳನ್ನು ಪೂರೈಸಿ ಅವರ ಜೀವಕ್ಕೆ ಉತ್ತಮ ಬುನಾದಿಯನ್ನು ಹಾಕುತ್ತದೆ.ಮೊಲೆಹಾಲು ಸಂಪೂರ್ಣ ಆಹಾರ, ದೈಹಿಕ ಮತ್ತು ಮೆದುಳಿನ ಬೆಳವಣಿಗೆಗೆ ಸಹಾಯಕಾರಿ. ನಾಲ್ಕು ತಿಂಗಳವರೆಗೆ ಮಗುವಿಗೆ ಅಗತ್ಯವಿರುವ ಸಕಲ ಪೋಷಕಾಂಶಗಳನ್ನು ತಾಯಿ ಹಾಲು ಪೂರೈಸುತ್ತದೆ. ನಂತರವೂ ಇತರ ಆಹಾರದೊಂದಿಗೆ ಹಾಲು ಪೂರಕವಾಗಿರುತ್ತದೆ.

ಮಗುವಿಗೆ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಸೂಕ್ತವಾದ ತಾಯಿಹಾಲು, ಅಜೀರ್ಣ, ಮಲಬದ್ಧತೆಯಂತಹ ತೊಂದರೆಗಳನ್ನು ಅಹ್ವಾನಿಸುವುದಿಲ್ಲ. ಯಾವ ಡಬ್ಬಿಹಾಲು ಸಹ ಕೊಡಮಾಡದ ರೋಗನಿರೋಧಕ ಶಕ್ತಿಯನ್ನು ತಾಯಿಯ ಎದೆಹಾಲು ಒದಗಿಸಬಲ್ಲದು. ಎಲ್ಲಾ ಮಕ್ಕಳಿಗೂ ಒಗ್ಗುವ ಈ ಜೀವದ್ರವ ಅಲರ್ಜಿಯಾಗುವ ಸಂಭವ ಅತಿ ಕಡಿಮೆ. ತಾಯಿಯ ಹಾಲಿನಲ್ಲಿ ಮಗುವಿಗೆ ಬೇಕಾದಷ್ಟು ಲವಣ ಮತ್ತು ನೀರು ಇರುವುದರಿಂದ ಇವುಗಳ ಕೊರತೆ ಅಥವಾ ಹೆಚ್ಚಳದ ಸಾದ್ಯತೆ ಇರುವುದಿಲ್ಲ.

ಮಕ್ಕಳ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ ತಾಯಿ ಹಾಲಿನಿಂದ ದೊರಕುತ್ತದೆ. ದಂತಕ್ಷಯವನ್ನು ತಡೆಗಟ್ಟುವ ಪ್ಲೋರಿನ್ ಸಹ ಇದರಲ್ಲಿ ಸೇರಿರುತ್ತದೆ. ಮೊಲೆಹಾಲು ಕುಡಿದು ಬೆಳೆದ ಮಗುವಿಗೆ ಬೆರಳು ಚೀಪುವ ಅಭ್ಯಾಸ ಕಡಿಮೆ ಹಾಗೂ ಮಗುವಿನ ಬೆಳವಣಿಗೆಯ ಹಂತಗಳು ಕ್ರಮಬದ್ಧವಾಗಿರುತ್ತದೆ.ಮಗು ಇಷ್ಟಪಡುವ ರುಚಿ, ವಾಸನೆ, ಬಿಸಿ ಇರುವ ಹಾಲು ಸದಾ ತಾಜಾ ಇರುತ್ತದೆ. ರೋಗಾಣುಗಳಿರುವ ಸಾಧ್ಯತೆ ಇಲ್ಲ. ಇದನ್ನು ಸೇವಿಸಿದ ಮಗು ನಡಿಗೆಯನ್ನು ಬೇಗನೆ ಕಲಿಯುತ್ತದೆ. ಮಗು ತಾಯಿಯ ಹಾಲನ್ನು ಚೀಪಿ ಚೀಪಿ ಕುಡಿಯುವ ಕ್ರಿಯೆಯಿಂದಾಗಿ ಮುಖದ ಮಾಂಸಖಂಡಗಳಿಗೆ ಒಳ್ಳೆಯ ವ್ಯಾಯಾಮ ಸಿಗುವುದರಿಂದ ಮಗುವಿನ ಮುಖ ಸುಂದರವಾಗಿ ರೂಪುಗೊಳ್ಳಲು ಸಹಯಕವಾಗುತ್ತದೆ. ಇಂಥ ಮಗುವಿನ ಧ್ವನಿ ಮತ್ತು ಭಾಷೆ ಕೂಡ ಉತ್ತಮವಾಗಿರುತ್ತದೆ.

ಹುಟ್ಟಿದ ಕ್ಷಣದಿಂದಲೇ ಹಾಲು ಬೇಕೆ?
ತಾಯಿಯ ಪ್ರಥಮ ಹಾಲು "ಕೊಲೆಸ್ಟ್ರಂ" ಎಂಬುದು ರೋಗ ನಿರೋಧಕ ಅಂಶ ಹೊಂದಿದ್ದು ಪ್ರಥಮ ಲಸಿಕೆ ಅಥವಾ ಚುಚ್ಚುಮದ್ದು ಎನ್ನಲಾಗುತ್ತದೆ. ನವಜಾತ ಶಿಶು ಮೊದಲ ಕೆಲವು ದಿನ ಮೊಲೆಯನ್ನು ಚೀಪಲಾರದು ಮತ್ತು ಅದಕ್ಕೆ ಆಹಾರದ ಅಗತ್ಯವೂ ಇರುವುದಿಲ್ಲ. ಎಂದು ಬಹಳಷ್ಟು ಜನ ಭಾವಿಸುತ್ತಾರೆ. ಜನನದ ನಂತರ ಒಂದೆರಡು ದಿನ ಕೆಲವರು ಮಗುವಿಗೆ ಏನನ್ನೂ ಕೊಡುವುದಿಲ್ಲ. ಮತ್ತೆ ಕೆಲವರು ಗ್ಲುಕೋಸ್ ನೀರು, ಸಕ್ಕರೆ ನೀರು ಕುಡಿಸುತ್ತಾರೆ. ಹುಟ್ಟಿದ ಮಗುವಿಗೆ ಚೆನ್ನಾಗಿ ಭೇಧಿ ಆಗಲೆಂದು ಹರಳೆಣ್ಣೆ ಕೊಡುವುದೂ ಉಂಟು, ಜೇನುತುಪ್ಪ ನೆಕ್ಕಿಸುವುದೂ ಕೆಲವೂ ಕಡೆ ರೂಢಿಯಲ್ಲಿದೆ. ಇವೆಲ್ಲಾ ನಂಬಿಕೆ ರೂಢಿಗಳು ಅರ್ಥಹೀನವಷ್ಟೇ ಅಲ್ಲ. ಅಪಾಯಕಾರಿಯೂ ಕೂಡ ಹೌದು.
"ಕೊಲೆಸ್ಟ್ರಂ" ಹಾಲಿನಲ್ಲಿ ಅಧಿಕ ಪ್ರೋಟಿನ್ "ಎ" ಜೀವಸತ್ವಗಳಲ್ಲದೆ ಮಗುವಿಗೆ ರೋಗಾಣುಗಳ ವಿರುದ್ದ ರಕ್ಷಣೆ ನೀಡುವ ವಸ್ತುಗಳೂ ಇವೆ. ಅದುದರಿಂದ ಶಿಶು ಜನಿಸಿದ ದಿನದಿಂದಲೇ ಆದಷ್ಟು ಬೇಗ ಮೊಲೆ ಚೀಪಿಸಲು ಪ್ರಾರಂಭಿಸಬೇಕು. ಇದರಿಂದ ಉಪಯುಕ್ತ ದ್ರವವಾದ "ಕೊಲೆಸ್ಟ್ರಂ" ಸ್ವಲ್ಪವೂ ವ್ಯರ್ಥವಾಗದೆ ಪೂರ್ಣವಾಗಿ ಮಗುವಿಗೆ ಲಭಿಸುವಂತಾಗುತ್ತದೆ ಇದು ಮಗುವಿನ ಆರೋಗ್ಯವನ್ನು ಜೀವನಾದ್ಯಂತ ಕಾಪಾಡುತ್ತದೆ.
ಇದಲ್ಲದೆ ಹೆರಿಗೆಯಾದ ದಿನದಿಂದಲೇ ಹಾಲುಣಿಸುವುದರಿಂದ ಮತ್ತೊಂದು ಪ್ರಯೋಜನವುಂಟು. ಮಗು ಹಾಲು ಚೀಪಿದಾಗ ಉಂಟಾಗುವ ಪ್ರಚೋದನೆಯಿಂದ ತಾಯಿಯ ದೇಹದಲ್ಲಿ ಕೆಲವು ಹಾರ್ಮೋನುಗಳು ತಾಯಿಯ ಗರ್ಭಕೋಶ ಸದೃಢವಾದ ಸಹಜಸ್ಥಿತಿಗೆ ಮರಳಲು ಹಾಗೂ ರಕ್ತಸ್ರಾವ ತಡೆಗಟ್ಟಲು ಸಹಾಯವಾಗಿದೆ. ಅಲ್ಲದೆ ಈ ಪ್ರಚೋದನೆ ಅಧಿಕ ಹಾಲು ಉತ್ಪಾದನೆಗೂ ಸಹಾ ನೆರವಾಗುತ್ತದೆ.


ಮೊಲೆ ಹಾಲು ನೀಡುವ ಸರಿಯಾದ ವಿಧಾನ ಹಾಗೂ ಗಮನದಲ್ಲಿರಬೇಕಾದ ವಿಚಾರಗಳು:
1. ತಾಯಿಯ ಮೊಲೆಯ ತೊಟ್ಟಿನ ಜೊತೆ ತೊಟ್ಟಿನ ಹಿಂಬದಿಯ ಕಪ್ಪು ಭಾಗವೂ ಮಗುವಿಗೆ ಬಾಯಿಯೊಳಗೆ ಇರುವಂತೆ ನೋಡಿಕೊಳ್ಳಬೇಕು.
2. ತಾಯಿಯ ಗಮನ ಮಗುವಿನ ಮುಖದ ಕಡೆ ಇರಬೇಕು.
3. ಮಗುವಿನ ತಲೆ ಮತ್ತು ಕುತ್ತಿಗೆ ನೇರವಾಗಿರಬೇಕು.
4. ಮಗುವಿನ ದೇಹ ತಾಯಿಯ ದೇಹದ ಕಡೆ ಸಂಪೂರ್ಣವಾಗಿ ತಿರುಗಿರಬೇಕು.
5. ಮಗುವಿನ ಇಡೀ ದೇಹವನ್ನು ತಾಯಿ ಎರಡೂ ಕೈಗಳಿಂದ ಸುತ್ತ ಬಳಸಿ ಅಪ್ಪಿಕೊಳ್ಳಬೇಕು.
6. ತಾಯಿ ದೃಷ್ಟಿ ಮಗಿವಿನ ಕಡಗೇ ಇರಬೇಕು. ಕುಳಿತುಕೊಂಡು ಹಾಲುಣಿಸುವುದು ಉತ್ತಮ. ತಾಯಿ ಕುಳಿತುಕೊಳ್ಳುವುದು ಕಷ್ಟವಾಗಿರುವ ಸಂದರ್ಭದಲ್ಲಿ ಮಲಗಿಯೂ ಕೊಡಬಹುದು.
ಮಗು ಹುಟ್ಟಿದ ಅರ್ಧಗಂಟೆಯಿಂದ ಕ್ರಮಬದ್ಧವಾಗಿ ಮಗುವಿಗೆ ಮೊಲೆ ಚೀಪಿಸುತ್ತಿರಬೇಕು. ಮಗುವಿನ ಬಾಯಿಗೆ ಮೊಲೆ ತುರುಕುವುದು, ಅದಿನ್ನೂ ಕುಡಿಯುತ್ತಿರುವಾಗಲೇ ಬಿಡಿಸುವುದು ಸಲ್ಲದ ಕ್ರಮ. ಇದರಿಂದ ಮಗುವಿನ ಎಳೆಯ ಮನಸ್ಸು ಘಾಸಿಕೊಳ್ಳಬಹುದು. ಮೊಲೆಹಾಲುಣಿಸುವ ತಾಯಿಯ ಆಹಾರ ವಿಧಾನವು ಚೆನ್ನಾಗಿರಬೇಕು. ಸೊಪ್ಪು, ತರಕಾರಿ, ಹಣ್ಣುಗಳನ್ನು, ಹಾಲು, ನೀರು ಒಳಗೊಂಡ ಪೌಷ್ಟಿಕ ಸಮತೋಲನ ಸಾಧಿಸಬೇಕಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಆಹಾರ ಸೇವಿಸಕೊಡದು. ಗರ್ಭನಿರೋಧಕ ಮಾತ್ರೆಗಳನ್ನು ನುಂಗಬಾರದು.

ಮಗುವು ಹಾಲು ಕುಡಿಯಲು ಪ್ರಾರಂಭಿಸಿದ ಕೂಡಲೇ ಬರುವುದು ಮುಂಬದಿ ಹಾಲು ಇತದರಲ್ಲಿ ಸಾರಜನಕ, ಸಕ್ಕರೆ(ವಿಟಮಿನ್) ಲವಣಾಂಶಗಳು, ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಿಂಬದಿ ಹಾಲಿನಲ್ಲಿ ಕೊಬ್ಬಿ ನ ಅಂಶ ಜಾಸ್ತಿ ಇರುತ್ತದೆ. ಆದ್ದರಿಂದ ಪೂರ್ಣ ಪ್ರಮಾಣದಲ್ಲಿ ಹಾಲನ್ನು ನೀಡುವುದು ಸೂಕ್ತ.

ತಾಯಿಯ ದೊರಕುವ ಲಾಭಗಳು
1. ತಾಯಿ ಮೊದಲದಿನದಿಂದಲೇ ಹಾಲು ನೀಡುವುದರಿಂದ ಗರ್ಭಕೋಶ ಬೇಗನೆ ಸಂಕುಚಿತವಾಗುವುದರಿಂದ ಗರ್ಭದಲ್ಲಿನ ರಕ್ತಸ್ರಾವ ಕಮ್ಮಿಯಾಗುತ್ತದೆ.
2. ತಾಯಿ ಹಾಲು ನೀಡುವುದರಿಂದ ತಾಯಿಯ ಅಂಗಾಂಶಗಳಲ್ಲನ ಕೊಬ್ಬು ಕರಗಿ ಸೌಂದರ್ಯ ವೃದ್ಧಿಸುತ್ತದೆ.
3. ಸ್ತನದ ಕ್ಯಾನ್ಸರ್ ಕಡಿಮೆ.
4. ದೈವದತ್ತ ಕೊಡುಗೆ- ಮಾನಸಿಕ ತೃಪ್ತಿ.
5. ಇನ್ನೂಂದು ಗರ್ಭಧರಿಸುವ ಸಂಭವ ಕಮ್ಮಿ-ಕುಟುಂಬ ಯೋಜನೆ ಕಾರ್ಯಕ್ತಮಕ್ಕೆ ಮೊಲೆ ಹಾಲು ನೀಡುವ ಸಹಕಾರಿ.

ಇತ್ತೀಚಿನ ಸ್ತನಪಾನದ ಮಹತ್ವವನ್ನು ಜಗತ್ತಿಗೆ ಸಾರಿಹೇಳುವ ಪ್ರಯತ್ನ ರಾಷ್ಟ್ರದ ಮೂಲೆ-ಮೂಲೆಯಲ್ಲಿಯೂ ನಡೆಯುತ್ತಿದೆ. ಜಾಗತಿಕ ಆರೋಗ್ಯ ಸಂಸ್ಥೆ ಅನೇಕ ಕಾರ್ಯಕ್ರಮಗಳ ಮೂಲಕ ಮಹತ್ವವನ್ನು ಸಾರಿದೆ. ವಿಶ್ವಸಂಸ್ಥೆಯ ಮಕ್ಕಳ ವಿದ್ಯಾನಿಧಿ ಸಂಸ್ಥೆಯು ಮೊಲೆ ಹಾಲು ಸಪ್ತಾಹವನ್ನು ಪ್ರಾರಂಭಿಸಿ ಆಗಸ್ಟ್ 1 ರಿಂದ 7 ಅಂದರೆ ಮೊದಲನೆಯ ವಾರವನ್ನು ಅದಕ್ಕಾಗಿಯೇ ಮೀಸಲ್ಪಟ್ಟಿದೆ.

ಇಷ್ಟೇ ಅಲ್ಲದೆ ತಾಯಿಯ ಹಾಲನ್ನು ಸಂಗ್ರಹಿಸಿ, ಶೇಖರಿಸಿಡುವುವ ಹಾಗೂ ಅದನ್ನು ಉಳಿದ ಮಕ್ಕಳ ಬೆಳವಣಿಗೆಗಾಗಿ ಉಪಯೋಗಿಸುತ್ತಿರುವುದು ಇತ್ತೀಚಿನ ಪ್ರಯೋಗ. ಈಗಾಗಲೇ ಮಹಾರಾಷ್ಟ್ರದ ವಡೋದರದಲ್ಲಿ ಅತೀ ಹೆಚ್ಚು ತಾಯಿಯ ಹಾಲು ಸಂಗ್ರಹಿಸಿ 70,000 ಕ್ಕಿಂತಲೂ ಅಧಿಕ ಮಕ್ಕಳ ಬೆಳವಣಿಗೆಗೆ ಒತ್ತು ನೀಡಿದ್ದು, ಸ್ತನ ಪನದ ಮೌಲ್ಯಕ್ಕೆ ಸಾಕ್ಷಿ. ಇಷ್ಟೆಲ್ಲ ಮುಂದುವರಿದಿರುವ ರಾಷ್ಟ್ರ ಕೇವಲ ಗೊಡ್ಡು ನಂಬಿಕೆಗಳು ಹಾಗೂ ಸೌಂದರ್ಯಪ್ರಜ್ಞೆ ಎಂಬ ನೆಪದಲ್ಲಿ ದೇಶದ ಕುಡಿಗಳನ್ನು ಮುರುಚಿ ಹಾಕುವುದು ಪ್ರಗತಿಯ ಸಂಕೇತವಲ್ಲ.

ಹೂವಿನ ಎಸಳಿನಂತಿರುವ ಮುದ್ದು ಕಂದಮ್ಮಗಳನ್ನು
ಮೊಲೆಹಾಲೆಂಬ ಅಮೃತದಿಂದ ತೋಯಿಸಿ.
ಪ್ರೀತಿ, ಮಮತೆ, ವಾತ್ಸಲ್ಯ, ಅಪ್ಪುಗೆಯನ್ನು ಧಾರೆಯೆರೆದು
ಉಜ್ವಲ ರಾಷ್ಟ್ರದ ಪ್ರಜ್ವಲ ಕಿರಣಗಳಂತೆ ಮಾಡುವುದು
ಪ್ರತಿತಾಯಿಯ ಜವಾಬ್ದಾರಿಯಾಗಿದೆ.



ಬರಹ: ಸಂಗೀತ ಹೆಗ್ಡೆ
ತ್ರತೀಯ ಬಿ.ಎಸ್.ಡಬ್ಲ್ಯೂ.
ಆಳ್ವಾಸ್ ಕಾಲೇಜು,

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ವಿ.ವಿ. ಮಟ್ಟದ ಸೆಮಿನಾರ್ ಸಮಾರೋಪ
"ಮಾಧ್ಯಮ : ಪ್ರಸ್ತುತಸ್ಥಿತಿ"

ಮಂಗಳೂರು: ಮಾಧ್ಯಮಗಳು ತೀವ್ರ ಪೈಪೋಟಿಯ ನಡುವೆಯೂ ವಸ್ತುನಿಷ್ಠವಾಗಿ ಮೂಡಿಬರುವಂತಾಗಬೇಕಾಗಿದೆ. ಸತ್ಯವನ್ನು ಮರೆಮಾಚದೆ ನೈಜತೆಯನ್ನು ಸಮಾಜಕ್ಕೆ ತಿಳಿಸುವಂತ ಕಾರ್ಯಗಳು ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಮೂಡಿಬರಬೇಕೆಂದು ಹಿರಿಯ ಪತ್ರಕರ್ತ ಅನಿಲ್ ರೊನಾಲ್ಡ್ ಫೆರ್ನಾಂಡೀಸ್ ಅಭಿಪ್ರಾಯಿಸಿದರು.




ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಮಂಗಳೂರು ವಿ.ವಿ. ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. "ಮಾಧ್ಯಮ : ಪ್ರಸ್ತುತಸ್ಥಿತಿ" (ಮೀಡಿಯಾ: ಪ್ರಸೆಂಟ್ ಸಿನಾರಿಯೋ) ವಿಷಯದಲ್ಲಿ ಕಾರ್ಯಾಗಾರ ನಡೆಯಿತು.


ಕಾರ್ಯಾಗಾರದಲ್ಲಿ ನಾಲ್ಕು ಗೋಷ್ಠಿಗಳು ನಡೆದವು.ಪತ್ರಕರ್ತ ಈಶ್ವರ ದೈತೋಟ ,ವಿನ್ಯಾಸಗಾರ ರಮೇಶ್ ,ಕ.ರಾ.ಮು.ವಿ.ವಿ. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶೈಲೇಶ್ ರಾಜ್ ಅರಸ್ ,ಚಂದನ ವಾಹಿನಿಯ ಉಪನಿರ್ದೇಶಕ ಎ.ಎಸ್. ಚಂದ್ರಮೌಳಿ ಮತ್ತು ಮಣಿಪಾಲ ಸಮುದಾಯ ರೇಡಿಯೋ ಸಂಯೋಜಕ ಕೆ.ಶ್ಯಾಮ್ ಭಟ್ ಉಪನ್ಯಾಸ ನೀಡಿದರು.


ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಪ್ರಭಾಕರ ಶೆಟ್ಟಿ , ಚಂದನ ವಾಹಿನಿಯ ಉಪನಿರ್ದೇಶಕ ಎ.ಎಸ್. ಚಂದ್ರಮೌಳಿ , ಪತ್ರಿಕೋದ್ಯಮ ಉಪನ್ಯಾಸಕರುಗಳಾದ ಮೌಲ್ಯ ಬಾಲಾಡಿ, ಹರೀಶ್ ಕೆ.ಆದೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆತ್ಮಿಕಾ ರಾಮಚಂದ್ರ ನಿರೂಪಿಸಿ, ಪಲ್ಲವಿ ರಾವ್ ವಂದಿಸಿದರು.

















































ಮುಂದೆ ಓದಿ
| | |Home