ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ
ಅಲಹಾಬಾದ್: ತ್ರಿಸದಸ್ಯ ಪೀಠ ನ್ಯಾಯಾಲಯದೆದುರು ತೀರ್ಪು ಮಂಡಿಸಿದೆ. ಮೂರು ಮಂದಿ ನ್ಯಾಯಾಧೀಶರು ಮೂರು ತೀರ್ಪುಗಳನ್ನು ನ್ಯಾಯಾಲಯದಲ್ಲಿ ಮಂಡಿಸಿದ್ದಾರೆ. ಒಟ್ಟಿನಲ್ಲಿ ಮೂರು ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪುಗಳನ್ನು ನ್ಯಾಯಪೀಠದೆದುರು ಮಂಡಿಸಿದ್ದಾರೆ ಎಂಬ ಅಂಶ ಇದೀಗ ಹೊರಬಿದ್ದಿದೆ. ಒಟ್ಟು 20ವಿವಾದಾಂಶಗಳನ್ನೊಳಗೊಂಡಂತೆ ಈ ಅಯೋಧ್ಯೆ ತೀರ್ಪು ಹೊರಬಿದ್ದಿದ್ದು, ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ಸದ್ಯದಲ್ಲೆ ದೊರಕಲಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು/ಬೆಂಗಳೂರು: ಅಯೋಧ್ಯಾ ತೀರ್ಪಿನ ಹಿನ್ನಲೆಯಲ್ಲಿ ತೀವ್ರ ಭದ್ರೆತೆ ಮಾಡಲಾಗಿದೆ. ಪ್ರಮುಖ ನಗರಗಳಲ್ಲಿ ಜನ ಸಂಚಾರ ವಿರಳವಾಗಿದೆ. ವಾಹನಗಳ ಸಂಚಾರವೂ ವಿರಳವಾಗಿದೆ. ಒಟ್ಟಿನಲ್ಲಿ ಎಲ್ಲರ ಚಿತ್ತ ಇದೀಗ ತೀರ್ಪಿನತ್ತ ನೆಟ್ಟಿದೆ. ಗಲಭೆ, ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಶಾಲಾ ಕಾಲೇಜುಗಳು ಎಲ್ಲೆಡೆ ಮುಚ್ಚಿದ್ದವು. ಬಸ್ಸು, ಹಾಗೂ ಖಾಸಗೀ ವಾಹನ ಸಂಚಾರವೂ ಕೂಡಾ ಹಲವೆಡೆಗಳಲ್ಲಿ ಕಡಿಮೆಯಾಗಿತ್ತು. ಪ್ರಮುಖ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಅಲಹಾಬಾದ್/ಬೆಂಗಳೂರು: ಬಹುನಿರೀಕ್ಷಿತ ಅಯೋಧ್ಯೆ ತೀರ್ಪು ಹೊರಬಿದ್ದಿದೆ. ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಅವರನ್ನೊಳಗೊಂಡ ಸಮಿತಿ ಈ ತೀರ್ಪನ್ನು ಹೊರಹಾಕಿದೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಪುಣ್ಯಕ್ಷೇತ್ರ ಹಿಂದೂಗಳಿಗೆ ಸೇರಿದ್ದು ಎಂಬ ಮಹತ್ವದ ತೀರ್ಪು ಹೊರಬಿದ್ದಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ನವದೆಹಲಿ: ತ್ರಿಸದಸ್ಯ ಪೀಠ ಏನು ತೀರ್ಪು ನೀಡುತ್ತೆ? ಇದು ಈಗ ಎಲ್ಲರ ಮುಂದಿರುವ ಪ್ರಶ್ನೆ. 3.35ರ ಹೊತ್ತಿಗೆ ಅಲಹಾಬಾದ್ ಹೈಕೋರ್ಟಿನಲ್ಲಿ ತೀರ್ಪು ಪ್ರಕಟಗೊಳ್ಳುತ್ತದೆ. ಇದೀಗ ಅಲಹಾಬಾದ್ ಹೈಕೋರ್ಟಿನತ್ತ ತ್ರಿಸದಸ್ಯ ಪೀಠ ಹೊರಟಿದೆ. ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಜನತೆಯ ಚಿತ್ತ ಇದೀಗ ಅಲಹಾಬಾದ್ ಹೈ ಕೋರ್ಟಿನತ್ತ ನೆಟ್ಟಿದೆ. ಜಡ್ಜ್ ಗಳು ಇದೀಗ ನ್ಯಾಯಪೀಠದತ್ತ ಮುನ್ನಡೆಯುತ್ತಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ


ಬೆಂಗಳೂರು/ ನವದೆಹಲಿ: ಅಯೋಧ್ಯೆ ತೀರ್ಪು ಮತ್ತೆ ಅರ್ಧ ಗಂಟೆ ವಿಳಂಬವಾಗಿ ಹೊರಬೀಳಲಿದೆ. 3.30ಕ್ಕೆ ಹೊರಬೀಳಬೇಕಾಗಿದ್ದ ತೀರ್ಪು ಇದೀಗ ನಾಲ್ಕು ಗಂಟೆಗೆ ಪ್ರಕಟಗೊಳ್ಳಲಿದೆ. ಈಗಾಗಲೇ ಜನತೆಯ ಕಾತರ ಎಲ್ಲೆ ಮೀರುತ್ತಿದೆ. ತೀರ್ಪು ಯಾರ ಪರವಾಗಲಿ ಯಾರ ವಿರುದ್ಧವೇ ಇರಲಿ ತೀರ್ಪಿನ ನಂತರ ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಯದಂತೆ ಜಾಗರೋಕತೆ ವಹಿಸುವ ನಿಟ್ಟಿನಲ್ಲಿ ವಿಜಯೋತ್ಸಾಹ ನಡೆಸದಂತೆ ಕಟ್ಟುನಿಟ್ಟಿನ ಆದೇಶವನ್ನು ನ್ಯಾಯಾಲಯ ಹೊರಡಿಸಿದೆ.




ಶಾಂತಿಗಾಗಿ ಮನವಿ: ತೀರ್ಪಿನ ಹಿನ್ನಲೆಯಲ್ಲಿ ಪ್ರಮುಖ ನಾಯಕರು ಶಾಂತಿಮಂತ್ರ ಜಪಿಸಹೊರಟಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ, ದೇಶದ ಹಲವಾರು ಗಣ್ಯರು ನ್ಯಾಯಾಲಯದ ತೀರ್ಪನ್ನು ಗೌರವಿಸಿ ಶಾಂತಿಯನ್ನು ಕಾಪಾಡಿಕೊಳ್ಳಿ ಎಂಬ ಮನವಿ ಮಾಡಿದ್ದಾರೆ. ಅಯೋಧ್ಯೆ ಯಲ್ಲಿರುವ ರಾಮಜನ್ಮಭೂಮಿ-ಬಾಬ್ರಿಮಸೀದಿ ನಿವೇಶನದ 27 ಎಕರೆ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ 1528 ಕ್ಕಿಂತ ಮುಂಚೆ ದೇವಾಲಯವಿತ್ತೆ ಎನ್ನುವ ಪ್ರಶ್ನೆ ಸೇರಿದಂತೆ ಸುಮಾರು 20 ಅಂಶಗಳನ್ನೊಳಗೊಂಡಂತೆ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ನವದೆಹಲಿ: ಬಹುನಿರೀಕ್ಷಿತ ಅಯೋಧ್ಯಾ ತೀರ್ಪು ನಾಲ್ಕು ಗಂಟೆಗೆ ಮುಂದೂಡುಲಾಗಿದೆ. 3.30ಕ್ಕೆ ತೀರ್ಪು ಹೊರಬೀಳುವುದಾಗಿ ಹೇಳಲಾಗಿದ್ದು. ಇದೀಗ ಅರ್ಧ ತಾಸುಗಳ ಕಾಲ ಮುಂದೂಡಲಾಗಿದೆ. ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪನ್ನು ನಾಲ್ಕು ಗಂಟೆಗೆ ಹೊರಹಾಕಲಿದ್ದು ಮಾಧ್ಯಮಗಳ ಮೂಲಕ ಜನತೆಗೆ ಅದು ತಲುಪಲಿದೆ.

ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಅವರನ್ನೊಳಗೊಂಡ ಸಮಿತಿ ಈ ತೀರ್ಪನ್ನು ಹೊರಹಾಕಲಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಗೋರಖ್ ಪುರ್ ದಲ್ಲಿ ವಿವಿಧ ಧರ್ಮೀಯರು ಅಯೋಧ್ಯಾ ತೀರ್ಪಿನ ಹಿನ್ನಲೆಯಲ್ಲಿ ಶಾಂತಿಮಂತ್ರ ಜಪಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ನವದೆಹಲಿ/ಬೆಂಗಳೂರು :ಅಯೋಧ್ಯೆ ಯಾರಿಗೆ...? ಅದು ಹಿಂದೂಗಳ ಆಸ್ತಿಯಾಗಿ ಉಳಿಯುತ್ತದೆಯೋ...ಅಥವಾ ಮುಸಲ್ಮಾನ ಸಮುದಾಯಕ್ಕೆ ಕೈಬಿಟ್ಟು ಹೋಗುತ್ತದೆಯೋ...? ಈ ವ್ಯಾಜ್ಯಕ್ಕೆ ಮುಕ್ತಿ ಸಿಗುತ್ತದೆಯೋ ಇಲ್ಲವೋ...ಅದೇ ಅಯೋಧ್ಯೆ ಯಾರಿಗೆ...?




ಇನ್ನು ಈ ಪ್ರಶ್ನೆಗೆ ಸದ್ಯವೇ ಉತ್ತರ ದೊರೆಯಲಿದೆ. ಅಯೋದ್ಯೆಯ ವಿವಾದಿತ ಭೂಮಿ ಪ್ರದೇಶ ಯಾರಿಗೆ ಸೇರಬೇಕು ಎಂಬ ಬಗ್ಗೆ 60ವರುಷಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ... ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡಿಗೋ ಈ ಭೂಮಿ ಸೇರಬೇಕೋ ಅಖಿಲ ಭಾರತ ಹಿಂದೂ ಸಭಾ ಗೆ ಸೇರಬೇಕೋ ಎಂಬ ಬಹು ಸೂಕ್ಷ್ಮ ಅಷ್ಟೇ ಕಠಿಣ ಪ್ರಶ್ನೆ ಉದ್ಭವಿಸಿದ್ದು ಪ್ರಸ್ತುತ ಈ ಪ್ರಶ್ನೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಕದತಟ್ಟಿದೆ.

ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಮ್ ವೀರ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಬಗ್ಗೆ ತೀರ್ಪು ನೀಡಲಿದೆ. ಇದೊಂದು ಐತಿಹಾಸಿಕ ತೀರ್ಪಾಗಿ ಪರಿಣಮಿಸಲಿದೆ. ಅಯೋಧ್ಯೆಯ ಈ ಪ್ರಕರಣವು ಐದು ವ್ಯಾಜ್ಯಗಳನ್ನೊಳಗೊಂಡಿದೆ.ಇಂದು 3.30ಕ್ಕೆ ಈ ಬಗ್ಗೆ ತೀರ್ಪು ಹೊರಬೀಳಲಿದೆ.

ಮುಂದೆ ಓದಿ
2:04 PM

ಕ್ಷಣ ಗಣನೆ ಆರಂಭ

Posted by ekanasu

ರಾಜ್ಯ - ರಾಷ್ಟ್ರ
ಅಯೋಧ್ಯೆ/ ಬೆಂಗಳೂರು: ಅಯೋಧ್ಯೆ ತೀರ್ಪಿಗೆ ಕ್ಷಣ ಗಣನೆ ಪ್ರಾರಂಭಗೊಂಡಿದೆ. ಅಂತೂ ಇಂತೂ ಅರುವತ್ತು ವರುಷಗಳ ಕಾಲ ನಡೆದ ಈ ವ್ಯಾಜ್ಯಕ್ಕೆ ಒಂದು ಮುಕ್ತಿ ಸಿಗುವ ಹಂತ ತಲುಪಿದೆ. ಸಂಜೆ 3.30ಕ್ಕೆ ತೀರ್ಪು ಹೊರಬೀಳಲಿದೆ. ಇದಕ್ಕೆ ಸೂಕ್ತ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ.
ದೇಶಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಭದ್ರತಾವ್ಯವಸ್ಥೆ ಕೈಗೊಳ್ಳಲಾಗಿದೆ. ದ್ವಿತೀಯ ಸುತ್ತಿನ ಭದ್ರತಾ ವ್ಯವಸ್ಥೆಯ ಸಭೆಯನ್ನು ಚಿದಂಬರಂ ಇದೀಗ ಕೈಗೊಂಡು ಸೂಕ್ತ ಭದ್ರತೆಯ ವ್ಯವಸ್ಥೆಯನ್ನು ಪರೀಕ್ಷಿಸಿದ್ದಾರೆ. ಎಲ್ಲೆಡೆ ಜನತೆಯಲ್ಲಿ ಕಾತರ ಕುತೂಹಲ ಕಂಡುಬರುತ್ತಿದೆ. ಜನ ತೀರ್ಪಿನತ್ತ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ತೀರ್ಪು ಯಾರ ಪರವಾಗಲಿದೆಯೋ ಎಂಬುದೇ ಎಲ್ಲರ ಬಾಯಲ್ಲಿ ಕೇಳಿಬರುವ ಮಾತಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ


'ಮಾನವಜನ್ಮ ದೊಡ್ಡದು, ಇದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರಾ', ಅಂದರು ಪುರಂದರದಾಸರು. ಮಾನವಜನ್ಮದಂತೆಯೇ ಮಾನವಧರ್ಮವೂ ದೊಡ್ಡದು. 'ಮಾನವಧರ್ಮ ದೊಡ್ಡದು, ಇದರ ಮಾನ ಕಳೆಯಲುಬೇಡಿ ಅಣ್ಣತಮ್ಮಂದಿರಾ', ಎಂದು ಸಕಲ ಭಾರತವಾಸಿಗಳಲ್ಲೂ ವಿನಂತಿಸಿಕೊಳ್ಳುವ ಸಂದರ್ಭ ಇದೀಗ ಬಂದಿದೆ.
ಅಯೋಧ್ಯೆ ವಿವಾದದ ತೀರ್ಪಿನ ನೆಪದಲ್ಲಿ ನಾವು ಹಿಂಸಾಚಾರಕ್ಕಿಳಿದು ಮಾನವಧರ್ಮವನ್ನೇ ಧಿಕ್ಕರಿಸುವ ಅಪರಾಧ ಮಾಡಬಾರದು. ತಂತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಪುಢಾರಿಗಳು ಈ ಸಂದರ್ಭದಲ್ಲಿ ಹಿಂಸೆಯ ಕಿಚ್ಚು ಹಚ್ಚಲು ಯತ್ನಿಸುತ್ತಾರೆ. ವಿವೇಕಿಗಳಾಗಿರುವ ನಾವು ಅವರ ಈ ಕುಟಿಲಕ್ಕೆ ಬಲಿಯಾಗಬಾರದು. ಅವರ ಕುಟಿಲನೀತಿ ಇನ್ನು ಈ ದೇಶದಲ್ಲಿ ನಡೆಯುವುದಿಲ್ಲವೆಂಬುದನ್ನು ಸಿದ್ಧಮಾಡಿ ತೋರಿಸಲು ಭಾರತದ ಪ್ರಜೆಗಳಾದ ನಮಗಿದೊಂದು ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಾವು ದೇಶಾದ್ಯಂತ ಶಾಂತಿ ಕಾಪಾಡಿಕೊಂಡುಹೋಗುವ ಮೂಲಕ ಈ ಕುತ್ಸಿತಮತಿಗಳಿಗೆ ತಕ್ಕ ಪಾಠ ಕಲಿಸಬೇಕು.



ಇನ್ನೂ ಒಂದು ಮುಖ್ಯ ಸಂಗತಿಯೆಂದರೆ, ವಿಶ್ವದ ಬಹುಪಾಲು ದೇಶಗಳು ಅಯೋಧ್ಯೆ ತೀರ್ಪಿಗೆ ಭಾರತೀಯರ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನು ಕುತೂಹಲದಿಂದ ಎದುರುನೋಡುತ್ತಿವೆ. ಅಮೆರಿಕಾ, ಚೀನಾ, ಪಾಕಿಸ್ಥಾನದಂತಹ ದೇಶಗಳಂತೂ ಭಾರತದಲ್ಲಿ ಭಾರಿ ಗಲಭೆಗಳಾಗಲಿ ಎಂದು ಹಾರೈಸಿಕೊಂಡಿವೆ. ಯಾವುದೇ ರೀತಿಯ ಗಲಭೆಗೂ ಆಸ್ಪದ ಕೊಡದೆ ಸಂಪೂರ್ಣ ಶಾಂತಿ ಕಾಪಾಡುವ ಮೂಲಕ ಭಾರತೀಯರಾದ ನಾವು ಇಡೀ ವಿಶ್ವವೇ ಹುಬ್ಬೇರಿಸುವಂತೆ ಮಾಡಬೇಕು. ಗಲಭೆ ಹಾರೈಸಿದ ರಾಷ್ಟ್ರಗಳು ಹತಾಶೆಯಿಂದ ತಲೆತಗ್ಗಿಸುವಂತೆ ಮಾಡಬೇಕು. ಭಾರತವನ್ನು ಛಿದ್ರಗೊಳಿಸುವುದು ಅಸಾಧ್ಯವಾದ ಕೆಲಸ ಎಂದು ವಿಶ್ವವು ಅರಿಯುವಂತೆ ಮಾಡುವ ಮೂಲಕ ನಮ್ಮ ಗಟ್ಟಿತನವನ್ನು ಜಗತ್ತಿಗೆ ಸಾರಲು ಇದೊಂದು ಅವಕಾಶ. ಈ ಅವಕಾಶ ಹುಸಿಹೋಗದಿರಲಿ.


ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಜೋರಾಗಿದೆ. ಮಳೆಯಿಂದಾಗಿ ಹಲವೆಡೆಗಳಲ್ಲಿ ರಸ್ತೆಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಖುದ್ದಾಗಿ ಕಂಟ್ರೋಲ್ ರೂಂನಲ್ಲಿ ಕುಳಿತು ಸಮಸ್ಯೆ ನಿವಾರಣೆಗೆ ಸ್ಪಂದಿಸುತ್ತಿರುವುದಕ್ಕೆ ಜನತೆಯಿಂದ ಪ್ರಶಂಸೆಗಳು ವ್ಯಕ್ತವಾಗಿವೆ. ಮಳೆಯಿಂದಾಗಿ ಹಲವು ಮನೆಗಳು ಕೃತಕ ನೆರೆಗಳಿಗೆ ಈಡಾಗಿ ತೊಂದರೆಗೆ ಸಿಕ್ಕಿಹಾಕಿಕೊಂಡಿವೆ. ಜನ ಜೀವನ ಅಸ್ತವ್ಯಸ್ಥಗೊಂಡಿವೆ. ಬೆಂಗಳೂರಿನಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಹಲವೆಡೆಗಳಲ್ಲಿ ಚರಂಡಿಗಳು ತುಂಬಿಕೃತಕ ನೆರೆಗೆ ಕಾರಣವಾದವು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಸುಬ್ರಹ್ಮಣ್ಯ: ಇನ್ನು ಮುಂದೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ಕೃಷ್ಣ ಜೆ ಪಾಲೇಮಾರ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೇಳಿದರು. ಸಂಪುಟ ವಿಸ್ತರಣೆಯ ಬಳಿಕ ಮುಜರಾಯಿ ಖಾತೆಯು ಕೃಷ್ಣ ಜೆ ಪಾಲೇಮಾರ್ ಬಗಲಿಗೆ ಬಿದ್ದ ತಕ್ಷಣವೇ ಅವರು ರಾಜ್ಯದ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಅಕ್ಕಿ , ತೆಂಗಿನಕಾಯಿ ಹಾಗೂ ಬೆಲ್ಲದಲ್ಲಿ ತುಲಾಭಾರ ಸೇವೆಯನ್ನು ಮಾಡಿಸಿದರು.ಇದೇ ವೇಳೆ ದೇವಸ್ಥಾನದಲ್ಲಿ ಮಹಾಪೂಜೆಯನ್ನು ಬೆರವೇರಿಸಿದ ಬಳಿಕ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಇದೇ ವೇಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿನ 180 ಕೋಟಿ ರುಪಾಯಿಯ ಮಾಸ್ಟರ್ ಪ್ಲಾನ್ ಕಾಮಗಾರಿಯನ್ನು ವೀಕ್ಷಿಸಿ ಅದರ ಸ್ಲೈಡ್ ಶೋವನ್ನು ನೋಡಿದರು. ಬಳಿಕ ಮಾತನಾಡಿದ ಅವರು ದೇವಸ್ಥಾನಗಳಲ್ಲಿ ವ್ಯಾಪಾರೀಕರಣ ನಡೆಯುತ್ತಿದೆ ಎಂಬ ಆರೋಪವಿದೆ, ಆದರೆ ಇನ್ನು ಮುಂದೆ ಅಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದ ಪಾಲೇಮಾರ್ ಶ್ರೀಮಂತ ದೇವಾಲಯದ ಆದಾಯಗಳಿಂದ ಉಳಿದ ದೇವಸ್ಥಾನಗಳ ಅಭಿವೃದ್ದಿ ನಡೆಸಲಾಗುವುದು ಎಂದು ಅವರು ಹೇಳಿದರು.



ಮಜರಾಯಿ ಖಾತೆಗೆ ಹೆದರಲ್ಲ ; ಸಮರ್ಥವಾಗಿ ನಿಭಾಯಿಸ್ತೀನಿ ಮುಜರಾಯಿ ಖಾತೆ ಅಂದ್ರೆ ಅದೊಂದು ಕಾಟದ ಖಾತೆ, ಇದನ್ನು
ವಹಿಸಿಸ್ಕೊಂಡ್ರೆ ಮುಂಬರುವ ಎಲೆಕ್ಷನ್ನಲ್ಲಿ ಗೆಲ್ಲೋದಿಲ್ಲ ಅನ್ನೋ ಭಯದ ಕಾರಣಕ್ಕಾಗಿ ಕೃಷ್ಣ ಜೆ ಪಾಲೇಮಾರ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಸೇವೆ ಮಾಡಿದ್ದರೇ ಅನ್ನೋದು ಸಾರ್ವಜನಿಕ ವಲಯದಲ್ಲಿ ಕೇಳಿಬಂದ ಮಾತು.ಆದರೆ ಅಂತಹ ಯಾವುದೇ ಭಯ ನನಗಿಲ್ಲ.ದೇವರು ಎಂದರೆ
ನನಗೆ ಭಯ - ಭಕ್ತಿ ಹಾಗಾಗಿ ನನಗೇನೂ ಆಗದು ಎನ್ನುವ ಪಾಲೇಮಾರ್ , ಇದು ಸ್ಥಳೀಯರೊಬ್ಬರು ನಾನು
ಮಂತ್ರಿಯಾಗಬೇಕು ಎಂದು ಹರಕೆ ಹೇಳಿಕೊಂಡಿದ್ದರು ಅದನ್ನು ಈಗ ತೀರಿಸಿದ್ದೇನೆ.ಇದು ಹಿಂದಿನ ಹರಕೆ ಎಂದ ಅವರು, ದೇವರ ಮೇಲಿನ ಶ್ರದ್ದಾ ಭಕ್ತಿಯಿಂದ ಕೆಲಸ ಮಾಡಿದೆ ಯಾವುದೇ ಸಚಿವರಿಗೆ ಏನೂ ಆಗದು ಎಂದೂ ಅವರು ಹೇಳಲು ಮರೆಯಲಿಲ್ಲ.ಪರಿಸರ ಖಾತೆ ಜೊತೆಗೆ ಮುಜರಾಯಿ ಕೂಡಾ ಸಿಕ್ಕಿರೋದು ಒಳ್ಳೆಯದೇ ಆಗಿದೆ.ಇವೆರಡೂ ಒಂದಕ್ಕೊಂದು ಪೂರಕವಾಗಿದೆ ಹಾಗಾಗಿ ಒಳ್ಳೇ ಕೆಲಸ ಮಾಡಬಹುದು ಎಂದು
ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ, ಅರಣ್ಯ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ಸುಳ್ಯ ತಾಲೂಕು ಬಿಜೆಪಿ ಅಧ್ಯಕ್ಷ
ವೆಂಕಟ್ ದಂಬೆಕೋಡಿ,ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಮೊದಲಾದವರಿದ್ದರು.


- ಮಹೇಶ್ ಪುಚ್ಚಪ್ಪಾಡಿ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಸೆಪ್ಟೆಂಬರ್ : 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಬಸವನಗುಡಿ ನ್ಯಾಷನಲ್ ಕಾಲೆಜು ಮೈದಾನದಲ್ಲಿ 3 ದಿನಗಳ ಕಾಲ ನಡೆಸಲಾಗುವ ಈ ಸಮ್ಮೇಳನದಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆಯೆಂದು ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು.
ಸರಕಾರದ ವತಿಯಿಂದ ಪ್ರತಿ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಗಾಗಿ ರೂ.1 ಕೋಟಿಯ ಅನುದಾನವವನ್ನು ನೀಡಲಾಗುತ್ತಿತ್ತು. ಈ ಬಾರಿ ಈ ಆಚರಣೆಗೆ ರೂ. 1.5 ಕೋಟಿ ಅನುದಾನ ಕೋರಲಾಗಿದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರೂ. 1 ಕೋಟಿ ನೆರವು ನೀಡಲಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯ ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಇದಕ್ಕಾಗಿ ನೀಡಲಿರುವುದಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆಂದು ತಿಳಿಸಿದ ಸಚಿವರು, ಬೆಂಗಳೂರು ನಗರದ ವಿಧಾನಪರಿಷತ್ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ಸಚಿವರುಗಳು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲಿದ್ದಾರೆಂದರು.



ಸಮ್ಮೇಳನಾ ನಂತರ ಇದರ ನೆನಪಿನಲ್ಲಿ ಕನ್ನಡ ಸ್ಮಾರಕ ಭವನ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದ ಸಚಿವರು ಅದಕ್ಕೆ ಅಗತ್ಯವಾದ ಜಾಗ ನಕ್ಷೆ ಮತ್ತಿತರ ವಿಚಾರಗಳನ್ನು ಕುರಿತಂತೆ ಅನಂತರ ತೀರ್ಮಾನಿಸಲಾಗುವುದು ಎಂದರು.

ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ಸಹಕಾರವನ್ನು ಸರಕಾರವು ನೀಡಲಿದೆಯೆಂದು ತಿಳಿಸಿದ ಸಚಿವರು ಕನ್ನಡ ಭಾಷೆ, ನೆಲ, ನಾಡು ನುಡಿ ಸಂರಕ್ಷಣೆ ಕುರಿತಂತೆ ಸಮ್ಮೇಳನದಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆಯಲ್ಲದೆ, ಕನ್ನಡವನ್ನು ಸಾಮಾನ್ಯ ಜನರ ಮನೆ ಬಾಗಿಲಿಗೆ ಒಯ್ಯುವ ಪ್ರಯತ್ನ ಮಾಡಲಾಗುತ್ತದೆ.

ನಾಡಹಬ್ಬವಾಗಿ ಆಚರಣೆ:

ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಸಮ್ಮೇಳನವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಸಲುವಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದೆ ಯೆಂದು ತಿಳಿಸಿದ ಸಚಿವರು ತಾವು ಸಮ್ಮೇಳನ ಸಮಿತಿಯ ಮಹಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವುದಾಗಿಯೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವವರ ಊಟ, ವಸತಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದೆಂದರು.
40 ವರ್ಷಗಳ ನಂತರ ಬೆಂಗಳೂರು ನಗರದಲ್ಲಿ ಈ ಸಮ್ಮೇಳನ ನಡೆಸುವ ಅವಕಾಶ ದೊರೆತಿದೆ. ಅಕ್ಟೋಬರ್ 1 ರಂದು ಈ ಸಂಬಂಧ 8 ಸಂಪುಟಗಳನ್ನೊಳಗೊಂಡ 10 ಸಾವಿರ ಪುಟಗಳ ಕನ್ನಡದ ನಿಘಂಟನ್ನು ಮುಖ್ಯ ಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಲ್ಲೂರು ಪ್ರಕಾಶ್ ತಿಳಿಸಿದರು. ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಕಾರ ವ್ಯವಸ್ಥೆಗೊಳಿಸುತ್ತಿರುವುದು ಸಮಾಧಾನ ತಂದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವ ಮುಮ್ತಾಜ್ ಅಲಿಖಾನ್, ಪೂಜ್ಯ ಮಹಾಪೌರರಾದ ನಟರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯರ್ಮತ್ರಿ ಚಂದ್ರು, ಶಾಸಕರುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಾರ್ಯದರ್ಶಿ ಜಯರಾಮರಾಜೇ ಅರಸ್ ಉಪಸ್ಥಿತರಿದ್ದರು.

ಮುಂದೆ ಓದಿ

ಭಕ್ತಿ ಸಿಂಚನ
|| ಹರೇರಾಮ ||

ದೈವೀಸಂಪತ್ತುಗಳು ಹರಿದು ಬರುವ ದ್ವಾರವನ್ನು ಕೃತಜ್ಞತೆಯಿಂದ ಪೂಜಿಸಬೇಕು.
ಹಾಗೆ ಮಾಡದಿದ್ದಾಗ ದ್ವಾರಬಂಧವಾಗಬಹುದು, ಸಂಪತ್ತಿನ ಹರಿವೆಯೇ ನಿಲ್ಲಬಹುದೆಂಬುದು ಬಲ್ಲವರ ಮಾತು..

ಸಂಪೂರ್ಣ ರಾಮಕಥೆಯನ್ನು ಸಂಕ್ಷೇಪವಾಗಿ ಕೇಳಿದ ವಾಲ್ಮೀಕಿಗಳು ನಾರದರನ್ನು ವಿಧಿವತ್ತಾಗಿ ಪೂಜಿಸಿದರು.
ವಾಲ್ಮೀಕಿಗಳ ಪಾಲಿಗೆ ರಾಮದ್ವಾರವಲ್ಲವೇ ನಾರದರು..?
ಯುಗ-ಯುಗಗಳ ಕಾಲ ಭುವಿಯ ಜೀವಿಗಳಿಗೆ ಭವ್ಯ ಬದುಕಿನ ದಾರಿ ತೋರಬಲ್ಲ ಮಹಾಕಾವ್ಯವೊಂದಕ್ಕೆ -
ಅಮೃತಬೀಜವನ್ನು ವಾಲ್ಮೀಕಿಗಳ ಹೃದಯದಲ್ಲಿ ಬಿತ್ತಿದ ನಾರದರು-
‘ಬಂದ ಕಾರ್ಯವಾಯಿತು’ ಎಂಬಂತೆ ಗಗನವನ್ನೇರಿ ಹೊರಟು ಹೋದರು…




ದಿವಿ ಭುವಿಗಿಳಿದಿತ್ತು..
ಭುವಿಯನ್ನು ದಿವಿಯಾಗಿಸಬಯಸಿತ್ತು..!
ವಾಲ್ಮೀಕಿಗಳ ಹೃದಯವನ್ನು ಹೊಕ್ಕಿತ್ತು..
ಬಹು ದೊಡ್ಡ ರೂಪದಲ್ಲಿ ಪ್ರಕಟಗೊಳ್ಳಲು ಸಮಯ ಕಾಯುತ್ತಿತ್ತು…
ಸನ್ನಿವೇಶವನ್ನು ಸೃಷ್ಟಿಸತೊಡಗಿತ್ತು..!

ರಾಮಾಯಣದ ಕಥನ-ಕಥಾನಕ-ಕಥಾನಾಯಕರ ಗಾಢ ಪ್ರಭಾವಕ್ಕೊಳಗಾದ ಮಹಾಮುನಿಗಳಿಗೆ ಬಹು ಹೊತ್ತಿನವರೆಗೆ ಬಾಹ್ಯಪ್ರಜ್ಞೆ ಮರಳಲಿಲ್ಲ…!
ನಡುನೆತ್ತಿಯ ನೇಸರ ತನ್ನ ಕಿರಣಗಳ ಕರಗಳಿಂದ ತಟ್ಟಿ ಎಬ್ಬಿಸಿದಾಗಲೇ ವಾಲ್ಮೀಕಿಗಳಿಗೆ ಎಚ್ಚರವಾದದ್ದು…!

ಪವಿತ್ರತೆಯಲ್ಲಿ ಗಂಗೆಯ ತಂಗಿಯೇ ಆದ ತಮಸೆಯೆಡೆಗೆ ತೆರಳಿದರು ವಾಲ್ಮೀಕಿಗಳು ಮಾಧ್ಯಾಹ್ನಿಕ ಸ್ನಾನಕ್ಕಾಗಿ.
ಪ್ರಿಯಶಿಷ್ಯನಾದ ಭರದ್ವಾಜನು ಸ್ನಾನವಸ್ತ್ರ ಮತ್ತು ಕಲಶಗಳೊಡನೆ ಅವರನ್ನನುಸರಿಸಿದನು.
ನಿರ್ಮಲಾತ್ಮನ ನೆನಪಿನಲ್ಲಿಯೇ ಇದ್ದ ವಾಲ್ಮೀಕಿಗಳಿಗೆ ಪ್ರತಿನಿತ್ಯ ನೋಡುತ್ತಿದ್ದರೂ ಅಂದೇಕೋ ವಿಶೇಷವಾಗಿ ತೋರಿದಳು ತಮಸೆ..!

ಒಂದಿನಿತೂ ಕಲ್ಮಷವಿಲ್ಲದ, ರಮಣೀಯವಾದ, ಸ್ಫಟಿಕಸದೃಶವಾದ ತಮಸೆಯ ಜಲದಲ್ಲಿ -
ವಾಲ್ಮೀಕಿಗಳಿಗೆ ತೋರಿದ್ದು ಶ್ರೀರಾಮನ ಮನ….!
ತಿಳಿದವನಾಗದಿದ್ದರೂ ಚಿಂತೆಯಿಲ್ಲ, ಸನ್ಮನುಷ್ಯನಾಗಬೇಕಿದ್ದರೆ ತಿಳಿಮನದವನಾಗಿರಬೇಕು..!
ಅಂತಹ ಶ್ರೀರಾಮನ ಮನಕ್ಕೆ ನಮನ ಸಲ್ಲಿಸಿ ಸ್ನಾನಕ್ಕೆ ಸಿದ್ಧರಾದ ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.

” ಮಗೂ.. ಕಲಶವನ್ನಿಲ್ಲಿಯೇ ಇಡು, ಸ್ನಾನವಸ್ತ್ರವನ್ನು ಕೊಡು.
ಹಿತವಾದ ಈ ತಮಸಾ ತೀರ್ಥವನ್ನು ಅವಗಾಹಿಸುವೆ..”
ಭರದ್ವಾಜನು ವಿನೀತನಾಗಿ ವಾಲ್ಮೀಕಿಗಳ ಆಣತಿಯನ್ನು ಪಾಲಿಸಿದನು.

ಭರದ್ವಾಜನ ಹಸ್ತದಿಂದ ಸ್ನಾನವಸ್ತ್ರವನ್ನು ವಾಲ್ಮೀಕಿಗಳು ತೆಗೆದುಕೊಂಡಿದ್ದೇನೋ ನಿಜ,
ಆದರೆ ತಮಸೆಯ ಅವಗಾಹನವನ್ನು ಅವರು ಮಾಡಲಿಲ್ಲ..!
ಅದಾಗಲೇ ಅವರ ಮನಸ್ಸು ನಿರ್ಮಲತೆಯಲ್ಲಿ ತಮಸೆಯನ್ನೇ ಹೋಲುವ ರಾಮನ ಮನದಲ್ಲಿ ಅವಗಾಹನಗೈದಾಗಿತ್ತು…!
ಯಾರೋ ಕರೆದವರಂತೆ ತಟ್ಟನೆದ್ದ ವಾಲ್ಮೀಕಿಗಳು ತಮಸಾವನದಲ್ಲಿ ವಿಹರಿಸತೊಡಗಿದರು…!

ತಮಸೆಯ ತಂಪಿನಿಂದ ಮೇಲೆದ್ದು ಬಂದು, ಹಸಿರಿನ ಸೊಂಪಿನಲ್ಲಿ ವಿಹರಿಸುತ್ತಿದ್ದ ವಾಲ್ಮೀಕಿಗಳನ್ನು-
ಇದ್ದಕ್ಕಿದ್ದಂತೆ ಸೆಳೆಯಿತು ಜೋಡಿಹಕ್ಕಿಗಳ ಹಾಡಿನ ಇಂಪು..!
ಧ್ವನಿ ಬಂದೆಡೆಗೆ ಅಪ್ರಯತ್ನವಾಗಿ ತಿರುಗಿದ ವಾಲ್ಮೀಕಿಗಳ ದೃಷ್ಟಿಗೆ -
ಗೋಚರವಾದವು ಪ್ರೇಮದ ವಿನಿಮಯದಲ್ಲಿ ಮಗ್ನವಾಗಿದ್ದ ಜೋಡಿ ಕ್ರೌಂಚ ಪಕ್ಷಿಗಳು..!

ಅನ್ಯೋನ್ಯ ಪ್ರೇಮಾತಿಶಯದಿಂದಾಗಿ ಒಂದು ಕ್ಷಣವಾದರೂ ಪರಸ್ಪರ ವಿರಹವನ್ನು ಸಹಿಸಲಾರದ,
ಆನಂದಾತಿಶಯದಿಂದಾಗಿ ಅತ್ಯಂತ ಮಧುರವಾಗಿ ನಿನಾದಗೈಯುತ್ತಿದ್ದ ಕ್ರೌಂಚಮಿಥುನವನ್ನು-
ಕಣ್ತುಂಬ ನೋಡಿದಾಗ ವಾಲ್ಮೀಕಿಗಳಿಗೆ ಆದದ್ದು ಪ್ರಕೃತಿ-ಪುರುಷರ ಸಾಕ್ಷಾತ್ಕಾರ…!

ಪರಸ್ಪರರನ್ನು ನೋಡಿ ನಲಿಯುವ ಜೋಡಿಹಕ್ಕಿಗಳು..!
ಹಕ್ಕಿಗಳ ಜೋಡಿಯನ್ನು ನೋಡಿ ಆನಂದಿಸುವ ವಾಲ್ಮೀಕಿಗಳು..!
ಹಿನ್ನೆಲೆಯಲ್ಲಿ ಹರಿಯುವ ಹೊಳೆ..
ಹೊಳೆ-ಹೊಳೆಯುವ ಹಸಿರಿನ ಸೃಷ್ಟಿ..!
ಸುಂದರ ಸೃಷ್ಟಿಯನ್ನು ಸಂಧಿಸುವ ನಿರ್ಮಲ ದೃಷ್ಟಿ…!

ಅಯ್ಯೋ…
ಆಗ ಬಿದ್ದಿತಲ್ಲಿಗೊಂದು ‘ಬೇಡ’ದ ದೃಷ್ಟಿ..!
ಸೃಷ್ಟಿ-ದೃಷ್ಟಿಗಳ ಸಮರಸ-ಸೌಖ್ಯವನ್ನು ಚಿರಕಾಲ ಉಳಿಯಲು ವಿಧಿಯದೇಕೆ ಬಿಡದೋ…!?
ಕೆಂಗಣ್ಣಿನ, ಕೆಡುಮನಸ್ಸಿನ, ಕ್ರೂರವೈರದ, ದಯಾದೂರನಾದ, ದುರುಳ ಬೇಡನೊಬ್ಬನು ದಾಂಗುಡಿಯಿಟ್ಟನಲ್ಲಿ..!

ಒಂದೆಡೆ ಸಕಲ ಜೀವಗಳನ್ನೂ ಸ್ವಾರ್ಥವಿಲ್ಲದೆ ಪ್ರೀತಿಸುವ ವಾಲ್ಮೀಕಿಗಳು-
ಇನ್ನೊಂದೆಡೆ ಸಕಲಜೀವಗಳನ್ನೂ ಅಕಾರಣವಾಗಿ ದ್ವೇಷಿಸುವ ಒಬ್ಬ ಬೇಡ..
ಒಂದೆಡೆ ಜೀವಗಳ ಆನಂದವನ್ನು ಕಂಡು ಆನಂದಿಸುವ ದೈವೀಮನಸ್ಥಿತಿ..
ಇನ್ನೊಂದೆಡೆ ಜೀವಹಿಂಸೆಯಲ್ಲೇ ಆನಂದವನ್ನು ಕಾಣುವ ಆಸುರೀಮನಸ್ಥಿತಿ..
ಎಂಥ ವಿಪರ್ಯಾಸದ ಸಮಾವೇಶವಿದು…!

ಪಕ್ಷಿಯುಗಳವು ಮೈಮರೆತು ಸುಖಿಸುತ್ತಿರುವಂತೆಯೇ, ಮಹರ್ಷಿ ವಾಲ್ಮೀಕಿಗಳು ನೋಡನೋಡುತ್ತಿರುವಂತೆಯೇ -
ಬೇಡನ ಕೆಡುಮನಸ್ಸು ಕೆಡುಸಂಕಲ್ಪವೊಂದನ್ನು ಮಾಡಿತು..
ಕೆಂಗಣ್ಣು ಗುರಿಯಿಟ್ಟಿತು..
ಕ್ರೂರ ಕೈಗಳು ಕೂರಂಬನ್ನೆಸೆದವು…!
ನಲ್ಲೆಯ ಒಲವಿನಲ್ಲಿ ಜಗದಿರವನ್ನು, ಹೆಚ್ಚೇಕೆ.. ತನ್ನಿರವನ್ನೇ ಮರೆತಿದ್ದ ಗಂಡುಪಕ್ಷಿಯ ಕೋಮಲ ಹೃದಯವನ್ನು -
ಹೃದಯಶೂನ್ಯನಾದ ಬೇಡನ ಬಾಣವು ಭೇದಿಸಿಯೇಬಿಟ್ಟಿತು..!

ಅಹೋ…ಬದುಕಿನ ಭಾಗ್ಯದ ವಿಪರ್ಯಯವೇ…!
ಎಲ್ಲಿಋಷಿಯ ಪಾವನ ದೃಷ್ಟಿಯಿದ್ದಿತೋ..ಅಲ್ಲಿ ಬಿದ್ದಿತು ವ್ಯಾಧನ ಪಾಪದೃಷ್ಟಿ..
ಮಡದಿಗಾಗಿ ಮೀಸಲಿಟ್ಟ ಮೃದು ಹೃದಯದಲ್ಲಿ ಆಯಿತು ಕ್ರೂರ ಶರಪ್ರವೇಶ..
ಶೃಂಗಾರರಸವಳಿದು ಪ್ರಕಟವಾಯಿತು ಕರುಣರಸ…
ಪ್ರೇಮಧಾರೆಯಾರಿತು, ಚಿಮ್ಮಿತು ರಕ್ತಧಾರೆ..
ಕಲರವ ಕರಗಿತು, ಮಾರ್ದನಿಸಿತು ಚೀತ್ಕಾರ…!!

ಮುಂಜಾನೆಯ ಮಂಜಿನಲ್ಲಿ ಮಿಂದು ನಳನಳಿಸುವ, ಸೂರ್ಯನನ್ನು ನೋಡಿ ತನ್ನಷ್ಟಕ್ಕೇ ನಗುವ,
ಸುಕೋಮಲ ಕಮಲದ ಮೇಲೆ ಸಿಡಿಲು ಬಿದ್ದಂತೆ..
ಹಿಂದುಮುಂದಿಲ್ಲದ, ಪ್ರಾಣಹರವಾದ ಬಾಣಾಘಾತಕ್ಕೆ ತುತ್ತಾಗಿ ಧರೆಗುರುಳಿದ ಪ್ರೇಮಪಕ್ಷಿ ,
ರಕ್ತದ ಮಡುವಿನಲ್ಲಿ ತನ್ನ ಪ್ರಾಣಗಳಿಗಾಗಿ..ಅಲ್ಲಲ್ಲ..ತನ್ನ ಪ್ರಾಣಪ್ರಿಯಳಿಗಾಗಿ ಚಡಪಡಿಸಿತು…!

ಒಂದೇ ಕಲ್ಲಿಗೆ ಎರಡು ಹಕ್ಕಿಗಳೆನ್ನುವರಲ್ಲವೇ..
ಇಲ್ಲಿ ಆದದ್ದು ಹಾಗೇ..!
ಒಂದೇ ಶ್ರುತಿಯ ಎರಡು ವೀಣೆಗಳಲ್ಲಿ ಒಂದನ್ನು ಮೀಟಿದರೆ ಎರಡೂ ಮಿಡಿಯುವಂತೆ -
ಗಂಡುಪಕ್ಷಿಯ ಮರಣವೇದನೆಯ ಕೂಗು ಹೆಣ್ಣುಪಕ್ಷಿಯ ಹೃದಯದಲ್ಲಿ
ಇಮ್ಮಡಿಯಾಗಿ..ಮುಮ್ಮಡಿಯಾಗಿ..ನೂರ್ಮಡಿಯಾಗಿ ಪ್ರತಿಧ್ವನಿಸಿತು..!
ಆಕೆಯ ಕರುಣಾಕ್ರಂದನಕ್ಕೆ ಕರುಳೇಕೆ..ಕಲ್ಲುಬಂಡೆಗಳೇ ಕರಗಿದವು…!

ತಮಸೆಯ ತಟದಲ್ಲಿ ಹರಿಯತೊಡಗಿತು ಮತ್ತೊಂದು ನದಿ..
ಅದು ಜೀವನದಿ… ಜೀವನದ ನೋವ ನದಿ..!

|| ಹರೇರಾಮ ||

ಇನ್ನಷ್ಟು ಶ್ರೀಗಳ ವಚನಾಮೃತಗಳಿಗಾಗಿ ಹರೇರಾಮ.ಇನ್ ವೆಬ್ ಲಾಗ್ ಇನ್ ಮಾಡಿರಿ.


ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ರ ಉದ್ಘಾಟನೆಯನ್ನು ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ನೆರವೇರಿಸಲಿದ್ದಾರೆ. ಅಕ್ಟೋಬರ್ 29ರಂದು ಬೆಳಗ್ಗೆ 9:30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ ಎಂದು ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಸಮ್ಮೇಳನವು ಕನ್ನಡ ಮನಸ್ಸು ಜೀವನ ಮೌಲ್ಯಗಳು
ಎಂಬ ಪರಿಕಲ್ಪನೆಯಡಿ ಅಕ್ಟೋಬರ್ 29 ರಿಂದ 31ರವರೆಗೆ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಇವರು ಕನ್ನಡದ ಪ್ರಸಿದ್ಧ ಕವಿ ಮತ್ತು ನಾಟಕಕಾರರು, ಸಿಂದಾಬಾದನ ಆತ್ಮಕತೆ , ಕ್ರಿಯಾಪರ್ವ , ಒಣಮರದ ಗಿಳಿಗಳು, ಋತುವಿಲಾಸ , ಎಷ್ಟೊಂದು ಮುಗಿಲು , ಅಮೇರಿಕಾದಲ್ಲಿ ಬಿಲ್ಲು ಹಬ್ಬ , ವಿಮುಕ್ತಿ , ಭೂಮಿಯು ಒಂದು ಆಕಾಶ , ನದೀತೀರದಲ್ಲಿ , ಮೂವತ್ತು ಮಳೆಗಾಲ , ಉತ್ತರಾಯಣ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.



ಹೆಜ್ಜೆಗಳು , ಒಂದು ಸೈನಿಕ ವೃತ್ತಾಂತ , ಕತ್ತಲೆಗೆ ಎಷ್ಟು ಮುಖ , ಚಿತ್ರಪಟ ,ಅಗ್ನಿವರ್ಣ, ಉರಿಯ ಉಯ್ಯಾಲೆ , ಕಂಸಾಯಣ , ಊರ್ಮಿಳಾ , ಮಂಥರೆ, , ಮೇಘಮಾನಸ , ಮೊದಲಾದ ನಾಟಕಗಳನ್ನು , ಹಕ್ಕಿಗಳು , ಹೂವಿನ ಶಾಲೆ, ಸೋನಿಪದ್ಯಗಳು , ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅನುವಾದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ , ದೇವರಾಜ ಬಹದ್ದೂರ್ ಪ್ರಶಸ್ತಿ , ಮೈಸೂರು ಅನಂತಸ್ವಾಮಿ ಪ್ರಶಸ್ತಿ ,ಡಿ.ವಿ.ಜಿ.ಪ್ರಶಸ್ತಿ , ಆರ್ಯಭಟ ಪ್ರಶಸ್ತಿ , ಬಿ.ಎಚ್. ಶ್ರೀಧರ್ ಪ್ರಶಸ್ತಿ, ದಿನಕರ ದೇಸಾಯಿ
ಪ್ರತಿಷ್ಠಾನ ಪ್ರಶಸ್ತಿ , ಮೊದಲಾದ ಹಲವು ಗೌರವಗಳು ಇವರಿಗೆ ಸಂದಿದೆ. ಚಿನ್ನಾರಿ ಮುತ್ತ , ಕೊಟ್ರೇಶಿ ಕನಸು , ಮುಕ್ತ ಮುಕ್ತ ,
ಮತದಾನ , ಯಾವ ಜನ್ಮದ ಮೈತ್ರಿ , ಸವಿಗಾನ , ಚಿತ್ರಶಾಲೆ, ಕ್ರೌರ್ಯ ಮೊದಲಾದ ಟಿ.ವಿ. ಧಾರವಾಹಿ ಮತ್ತು ಸಿನಿಮಾಗಳಲ್ಲಿ ಇವರ
ಹಾಡು , ಸಂಭಾಷಣೆ ಪ್ರಸಾರಗೊಂಡಿದೆ. ಇವರ ಭಾವ ಗೀತೆಗಳು ಧ್ವನಿಸುರುಳಿಗಳಾಗಿ ಅಪಾರ ಜನಪ್ರೀತಿಯನ್ನು ಪಡೆದಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಕನ್ನಡ ವಿಜ್ಞಾನ ಪರಿಷತ್ ರಜತೋತ್ಸವ ಪ್ರಶಸ್ತಿ ಪ್ರಕಟ

ಕನ್ನಡದಲ್ಲಿ ವಿಶೇಷವಾಗಿ ವಿಜ್ಞಾನ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಿಗೆ ನೀಡುವ ತನ್ನ ಪ್ರತಿಷ್ಠಿತ ರಜತೋತ್ಸವ ಪ್ರಶಸ್ತಿಯನ್ನು 2005, 2006 ಹಾಗೂ 2007ನೇ ಸಾಲಿಗಾಗಿ ಕನ್ನಡ ವಿಜ್ಞಾನ ಪರಿಷತ್ತು ಪ್ರಕಟಿಸಿದೆ. ಈ ಪ್ರಶಸ್ತಿಯನ್ನು ಕ್ರಮವಾಗಿ ನಿಘಂಟು ತಜ್ಞ ಪ್ರೊ||ಜಿ.ವೆಂಕಟಸುಬ್ಬಯ್ಯ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಪರಿಣತ ಪ್ರೊ||ಸಿ.ಎಸ್.ಯೋಗಾನಂದ ಹಾಗೂ ವಿಜ್ಞಾನಿ-ವಿಜ್ಞಾನ ಬರಹಗಾರ ಪ್ರೊ||ಹಾಲ್ದೊಡ್ಡೇರಿ ಸುಧೀಂದ್ರ ಪಡೆಯಲಿದ್ದಾರೆ.




ಕನ್ನಡ ವಿಜ್ಞಾನ ಪರಿಷತ್ತು ನೀಡುವ ರಜತೋತ್ಸವ ಪ್ರಶಸ್ತಿಯು ತಲಾ 25,000 ರೂ. ಗೌರವಧನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಅಕ್ಟೋಬರ್ 3, 2010 (ಭಾನುವಾರ) ಬೆಂಗಳೂರಿನ ನರಸಿಂಹರಾಜ ಕಾಲನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನ ದಲ್ಲಿ ಸಂಜೆ 5ಗಂಟೆಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಲೋಕಸಭಾ ಸದಸ್ಯ ಹಾಗೂ ಕಂಪ್ಯೂಟರ್ ತಜ್ಞ ಜನಾರ್ದನ ಸ್ವಾಮಿ ಅವರು ವಹಿಸಲಿದ್ದು, ಬೆಂಗಳೂರು ದೂರದರ್ಶನದ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ||ಮಹೇಶ್ ಜೋಷಿ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ಪರಿಷತ್ತಿನ ಸಂಸ್ಥಾಪಕ ಕಾರ್ಯದರ್ಶಿ ಸೂ.ಸುಬ್ರಹ್ಮಣ್ಯಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ವಿಜ್ಞಾನಿಗಳು ಹಾಗೂ ವಿಜ್ಞಾನ ಬರಹಗಾರರನ್ನು ಒಗ್ಗೂಡಿಸಿ ಸರಳ ಕನ್ನಡದಲ್ಲಿ ವಿಜ್ಞಾನ ಕುರಿತ ಪುಸ್ತಕಗಳನ್ನು ಅವರಿಂದ ಬರೆಸಿ, ಪ್ರಕಟಿಸುವ ಉದ್ದಿಶ್ಯದಿಂದ 1976ರಲ್ಲಿ ಆರಂಭವಾದ ಸಂಸ್ಥೆ ಕನ್ನಡ ವಿಜ್ಞಾನ ಪರಿಷತ್ತು. ಕನ್ನಡ ಭಾಷೆಯ ಮೂಲಕ ವಿಜ್ಞಾನವನ್ನು ಜನಪ್ರಿಯ ಗೊಳಿಸಲು ವೈಜ್ಞಾನಿಕ ಮನೋಧರ್ಮ ಬೆಳೆಸಲು, ಗ್ರಾಮೀಣ ಬದುಕಿಗೆ ವೈಜ್ಞಾನಿಕ ಅರಿವು ಮೂಡಿಸಲು ಸ್ಥಾಪಿತವಾದ ಸಂಸ್ಥೆಯಿದು. ಕನ್ನಡ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿಯನ್ನು ಈ ಹಿಂದೆ ಭೂವಿಜ್ಞಾನಿ ಡಾ||ಬಿ.ಪಿ.ರಾಧಾಕೃಷ್ಣ (2002); ವಿಜ್ಞಾನ ಬರಹಗಾರ ಜಿ.ಟಿ.ನಾರಾಯಣರಾವ್ (2003) ಅವರಿಗೂ ಮತ್ತು ಕೊರವಂಜಿ-ಅಪರಂಜಿ ಟ್ರಸ್ಟ್ (2004) ಸಂಸ್ಥೆಗೂ ಪ್ರದಾನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಮುಂದೆ ಓದಿ

ರಾಜ್ಯ - ರಾಷ್ಟ್ರ
ಉಡುಪಿ : ಕಡಲತಡಿಯ ಭಾರ್ಗವ ಎಂದೇ ಖ್ಯಾತನಾಮರಾದ ದಿ. ಡಾ. ಶಿವರಾಮ ಕಾರಂತರ ಸ್ಮೃತಿಯಲ್ಲಿ ಅವರ ಜನ್ಮಸ್ಥಳವಾದ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಸಕ್ತ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಯ್ಕೆಯಾಗಿದ್ದಾರೆ ಎಂದು ಗ್ರಾ. ಪಂ. ಅಧ್ಯಕ್ಷ ರಘು ತಿಂಗಳಾಯ ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಯಾದ ಗ್ರಾಮ ಪಂಚಾಯತ್ ತನ್ನೂರಿನಲ್ಲಿ ಜನಿಸಿದ ಸಾಹಿತಿಯೋರ್ವರ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದು, ಇದು ದೇಶದಲ್ಲೇ ಅಪೂರ್ವ ಎಂದೆನಿಸಿದೆ. ಈಗಾಗಲೇ ಈ ಪ್ರತಿಷ್ಠಿತ ಪ್ರಶಸ್ತಿ, ಡಾ. ಎಂ. ವೀರಪ್ಪ ಮೊಯ್ಲಿ, ಲೋಕಾಯುಕ್ತ ಮಾಜಿ ನ್ಯಾ. ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಪ್ರೊ. ಕೆ. ಆರ್. ಹಂದೆ, ಪತ್ರಕರ್ತ ರವಿ ಬೆಳಗರೆ ಮತ್ತು ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ನೀಡಲಾಗಿದೆ.
ಕಾರಂತರ ಜನ್ಮದಿನವಾದ ಅ. 10ರ ಅಪರಾಹ್ನ 2ಕ್ಕೆ ಕೋಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ತೀರ್ಥ ಯಾತ್ರೆಗೆಂದು ಉತ್ತರಾಂಚಲ್ ಗೆ ತೆರಳಿ ಭೂ ಕುಸಿತ ಪ್ರದೇಶದಲ್ಲಿ ಸಿಲುಕಿ ಕೊಂಡಿರುವ ರಾಜ್ಯದ ಸುಮಾರು 500 ಯಾತ್ರಿಕರಿಗೆ ಅಗತ್ಯ ನೆರವು ಕಲ್ಪಿಸುವತ್ತ ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಲ್ಲಿ ಇಂದು ತಿಳಿಸಿದರು. ಸರ್ವ ಪಕ್ಷಗಳ ಮುಖಂಡರ ಸಭೆಯ ನಂತರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ದವರೊಂದಿಗೆ ಮಾತನಾಡುತ್ತಿದ್ದ ಅವರು ಈ ಬಗ್ಗೆ ಉತ್ತರಾಂಚಲ್ ಸರಕಾರದೊಂದಿಗೆ ನಿರಂತರ ಸಂಪರ್ಕ ಹೊಂದಿರುವುದಾಗಿ ಹೇಳಿದರು.

ಆತಂಕ ಬೇಡ !
ರಾಜ್ಯದ ಯಾತ್ರಿಕರೊಂದಿಗೆ ಸಂಪರ್ಕ ಸಾಧಿಸಿ ಆಹಾರ ಮತ್ತು ಇತರೆ ಸೌಲಭ್ಯಗಳ ದೊರಕಿಸಿಕೊಡಲು ರಾಜ್ಯ ಸರಕಾರ ಈಗಾಗಲೇ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಂಧುಗಳ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.

ಮುಂದೆ ಓದಿ

ರಾಜ್ಯ -ರಾಷ್ಟ್ರ
ಬೆಂಗಳೂರು: ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಛನ್ಯಾಯಾಲಯ ಸೆಪ್ಟೆಂಬರ್ 24 ರಂದು ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ಸೆಪ್ಟೆಂಬರ್ 24 ಮತ್ತು 25 ರಂದು ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಲ್ಲಿ ಇಂದು ಪ್ರಕಟಿಸಿದ್ದಾರೆ.



ನಿಷೇಧ : ಮುಖ್ಯಮಂತ್ರಿ ಸೂಚನೆ
ಸೆಪ್ಟೆಂಬರ್ 24 ಮತ್ತು 25 ರಂದು ಸಂತೆ-ಜಾತ್ರೆ, ಮೆರವಣಿಗೆಗಳು, ಸಭೆ-ಸಮಾರಂಭಗಳನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಆದೇಶ ಮದುವೆ ಹಾಗೂ ಶವ ಸಂಸ್ಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಲ್ಲಿ ಇಂದು ಪ್ರಕಟಿಸಿದರು.
ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಛನ್ಯಾಯಾಲಯ ಸೆಪ್ಟೆಂಬರ್ 24 ರಂದು ತೀರ್ಪು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಸಂಬಂಧ ಕರೆಯಲಾಗಿದ್ದ ಸರ್ವಪಕ್ಷಗಳ ಮುಖಂಡರ ಸಭೆಯ ನಂತರ ಅವರು ಮಾಧ್ಯಮದವರೊಡನೆ ಮಾತನಾಡುತ್ತಿದ್ದರು.

ಕಠಿಣ ಕ್ರಮ !
ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋಧಿಸುವವರ ಹಾಗೂ ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ಅತ್ಯಂತ ಕಠಿಣ ಹಾಗೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು ಈ ಅವಧಿಯಲ್ಲಿ ಇ-ಮೇಲ್ ಹಾಗೂ ಎಸ್ ಎಂ ಎಸ್ ಗಳನ್ನೂ ಕಳುಹಿಸುವುದನ್ನು ಮಿತಿಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಾರ್ವಜನಿಕರು ಈ ಅವಧಿಯಲ್ಲಿ ಇ-ಮೇಲ್ ಹಾಗೂ ಎಸ್ ಎಂ ಎಸ್ ಗಳನ್ನು ಕಳುಹಿಸದಿದ್ದಲ್ಲಿ ಅಥವಾ ಕಳುಹಿಸುವುದನ್ನು ಮಿತಿಗೊಳಿಸಿದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಕೂಡಲೇ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗುತ್ತದೆ ಎಂದರು.

ವದಂತಿಗಳಿಗೆ ಕಿವಿಗೊಡದಿರಿ !

ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳಿಗೆ ಹಾಗೂ ವದಂತಿಗಳಿಗೆ ಕಿವಿಗೊಡಬೇಡಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯವನ್ನು ಹಿಂದೂ, ಮುಸಲ್ಮಾನ ಹಾಗೂ ಕ್ರೈಸ್ತ ಧರ್ಮದವರ ಶಾಂತಿ ತವರೂರನ್ನಾಗಿಸಲು ರಾಜ್ಯ ಸರಕಾರದೊಂದಿಗೆ ಸಹಕರಿಸಲು ವಿನಂತಿಸಿದರು. ರಾಜ್ಯ ವಿಧಾನ ಪರಿಷತಿನ ಪ್ರತಿಪಕ್ಷ ನಾಯಕಿ ಮೋಟಮ್ಮ, ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಪಕ್ಷದ ರಾಜ್ಯಾಧ್ಯಕ್ಷ ಆರ್, ವಿ, ದೇಶಪಾಂಡೆ, ಜಾತ್ಯಾತೀತ ಜನತಾ ದಳದ ಮುಖಂಡ ಎಂ. ಸಿ. ನಾಣಯ್ಯ, ಭಾರತೀಯ ಕಮ್ಯನಿಸ್ಟ್ ಮಾರ್ಕ್ ಸ್ಟ್ ಪಕ್ಷದ ಜಿ. ಎನ್, ನಾಗರಾಜ್, ಬಹುಜನ ಸಮಾಜ ಪಕ್ಷದ ಶ್ರೀ ಮಾರಸಂದ್ರ ಮುನಿಯಪ್ಪ ಅವರೂ ಸೇರಿದಂತೆ ಹಲವು ಗಣ್ಯರು ಸರ್ವಪಕ್ಷ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮೀಸಲು ಕ್ಷೇತ್ರದ ಶಾಸಕ ಎ, ನಾರಾಯಣಸ್ವಾಮಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ. ಹೆಚ್. ವಿಜಯ ಶಂಕರ್, ಗದಗ ಜಿಲ್ಲೆಯ ನರಗುಂದ ಶಾಸಕ ಸಿ. ಸಿ. ಪಾಟೀಲ್, ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ ಕ್ಷೇತ್ರದ ಶಾಸಕಿ ಕುಮಾರಿ ಶೋಭಾ ಕರಂದ್ಲಾಜೆ, ರಾಜ್ಯ ವಿಧಾನ ಪರಿಷತ್ ಸದಸ್ಯ ವಿ, ಸೋಮಣ್ಣ ಹಾಗೂ ಮೈಸೂರು ಜಿಲ್ಲೆಯ ಕೃಷ್ಣರಾಜಾ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ರಾಜ್ಯ ಸಚಿವ ಸಂಪುಟಕ್ಕೆ ಸಂಪುಟ ದರ್ಜೆ ಸಚಿವರಾಗಿ ಇಂದು ಸೇರ್ಪಡೆಯಾಗುವುದರೊಂದಿಗೆ ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಯಾಗಿದೆ.




ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ರಾಜ್ಯಪಾಲ ಹಂಸ ರಾಜ ಭಾರಧ್ವಾಜ್ ಅವರು ನೂತನ ಸಚಿವರಿಗೆ ಅಧಿಕಾರ ಹಾಗೂಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಪ್ರತಿ ಸಚಿವರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಅಭಿಮಾನಿಗಳ ಕರತಾಡನ ಹಾಗೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು. ಎ, ನಾರಾಯಣಸ್ವಾಮಿ ಅವರು ಭಗವಂತನ ಹಾಗೂ ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಿ. ಹೆಚ್. ವಿಜಯ ಶಂಕರ್, ಸಿ. ಸಿ. ಪಾಟೀಲ್ ಹಾಗೂ ಶೋಭಾ ಕರಂದ್ಲಾಜೆ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿ. ಸೋಮಣ್ಣ ಅವರು ಸಿದ್ಧಗಂಗಾ ಮಠಾಧೀಶರ ಹಾಗೂ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಎಸ್. ಎ. ರಾಮದಾಸ್ ಅವರು ತಾಯಿ ಹಾಗೂ ಸತ್ಯ-ನಿಷ್ಠೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಸಮಾರಂಭದಲ್ಲಿ ಯಡಿಯೂರಪ್ಪ ಅವರ ಸಚಿವ ಸಂಪುಟದ ಹಲವು ಸದಸ್ಯರು ಪಾಲ್ಗೊಂಡಿದ್ದರು.


ರಂಗ ಪ್ರವೇಶ !

ಎ, ನಾರಾಯಣಸ್ವಾಮಿ, ಸಿ. ಹೆಚ್. ವಿಜಯ ಶಂಕರ್, ಸಿ. ಸಿ. ಪಾಟೀಲ್ ಹಾಗೂ ಎಸ್. ಎ. ರಾಮದಾಸ್ ಅವರು ಪ್ರಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತಿದ್ದಾರೆ. ಈ ಹಿಂದೆ ವಿ, ಸೋಮಣ್ಣ ಅವರು ಜೆ ಹೆಚ್ ಪಟೇಲ್ ಅವರ ಸರಕಾರದಲ್ಲಿ ಬಂಧೀಖಾನೆ, ಗೃಹ ರಕ್ಷಕ, ಸೈನಿಕ ಕಲ್ಯಾಣ ಮತ್ತು ಸಾರ್ವಜನಿಕ ಕುಂದು-ಕೊರತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಬಿ. ಎಸ್. ಯುಡಿಯೂರಪ್ಪ ಅವರ ಸರಕಾರದ ವಸತಿ ಮತ್ತು ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿದವರಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಕುಮಾರಿ ಶೋಭಾ ಕರಂದ್ಲಾಜೆ ಅವರು ಇದೀಗ ಎರಡನೇ ಬಾರಿಗೆ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಸಾಮಾಜಿಕ ನ್ಯಾಯ !

ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಕಾಯ್ದು ಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ( ಎ, ನಾರಾಯಣಸ್ವಾಮಿ), ಹಿಂದುಳಿದ ವರ್ಗ - ಕುರುಬ ( ಸಿ. ಹೆಚ್. ವಿಜಯ ಶಂಕರ್), ಲಿಂಗಾಯತ - ಪಂಚಮಸಾಲಿ ( ಸಿ. ಸಿ. ಪಾಟೀಲ್ ), ಒಕ್ಕಲಿಗ ( ಕುಮಾರಿ ಶೋಭಾ ಕರಂದ್ಲಾಜೆ ), ಲಿಂಗಾಯತ - ಸಾದರ ( ವಿ, ಸೋಮಣ್ಣ ) ಹಾಗೂ ಬ್ರಾಹ್ನಣ ( ಎಸ್. ಎ. ರಾಮದಾಸ್ ) ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.

ಮುಂದೆ ಓದಿ
7:52 PM

ಮಾ ನಿಷಾದ…

Posted by ekanasu

ಭಕ್ತಿ ಸಿಂಚನ
|| ಹರೇರಾಮ ||

ಕೇವಲ ದುಃಖವು ದುಃಖವೇ ಅಲ್ಲ.
ಸಂತೋಷದ ನಂತರ ಬರುವ ದುಃಖವೇ ನಿಜವಾದ ದುಃಖ..!
ಹುಟ್ಟುಬಡವನಿಗೆ ಗಂಜಿ ಕುಡಿಯಲು ಕಷ್ಟವೇನಿಲ್ಲ -
ಅದು ಕಷ್ಟವಾಗುವುದು, ಕೆಲಕಾಲ ಮೃಷ್ಟಾನ್ನವನ್ನುಂಡ ನಂತರವೇ…!




ಇಲ್ಲಿ ವಾಲ್ಮೀಕಿಗಳಿಗಾದದ್ದು ಹಾಗೆಯೇ…
ಪಕ್ಷಿಗಳ ಪ್ರೇಮ ಪ್ರಸಂಗವನ್ನು ಕಂಡ ಕಣ್ಣಿನಿಂದಲೇ ಅವುಗಳ ದಾರುಣ ಮರಣ-ವಿರಹ-ಸಂಕಟಗಳನ್ನು-
ಆ ಮೃದು ಹೃದಯಿ ಮುನಿ ಕಾಣಬೇಕಾಯಿತು….!
ಒಂದಾದ ಮೇಲೊಂದರಂತೆ ಪ್ರೇಮ-ಘೋರಗಳ ಪರಾಕಾಷ್ಠೆಯನ್ನು ಕಾಣುವುದೆಂದರೆ -
ಆನಂದದ ಅಂಬರವೇರಿ ಅನ್ಯಾಯದ ಪಾತಾಳಕ್ಕೆ ಉರುಳಿದಂತೆಯೇ ಅಲ್ಲವೇ..?

ಸುಡುವ ಸೂರ್ಯನ ಝಳಕ್ಕೆ ಹಿಮಾಲಯವು ಕರಗಿ ಗಂಗೆಯಾಗಿ ಹರಿವಂತೆ..
ಧರೆಯ ಧಗೆಗೆ ಮೋಡ ಕರಗಿ ಮಳೆಯಾಗಿ ಇಳಿಯುವಂತೆ..
ಪಕ್ಷಿಯ ಪರಿತಾಪದ ಬಿಸಿಗೆ ಕರಗಿತು ಮುನಿಮನವೆಂಬ ಹಿಮಾಲಯ..ಹರಿಯಿತು ಕಾವ್ಯಗಂಗೆಯಾಗಿ…!
ವಾಲ್ಮೀಕಿಗಳೊಳಗೆ ಹಕ್ಕಿಗಳ ಹರುಷದಿಂದಾಗಿ ಹುಟ್ಟಿಕೊಂಡಿದ್ದ ನಾಕವು ಶೋಕವಾಗಿ ಪರಿವರ್ತಿತವಾದರೆ-
ಶೋಕವು ಶ್ಲೋಕದಲ್ಲಿ ಪರ್ಯವಸಾನಗೊಂಡಿತು…!

ಮಹಾಪೂರವು ಆಣೆಕಟ್ಟನ್ನು ಮುರಿದು ಮುನ್ನುಗ್ಗುವಂತೆ -
ಸಂಯಮದ ಕಟ್ಟೆಯನ್ನೊಡೆದು ಮುನಿಮುಖದಿಂದ ಹೊರಹೊಮ್ಮಿತು ಶಾಪವಾಕ್ಯ..

ಮಾ ನಿಷಾದ ಪ್ರತಿಷ್ಠಾಂ ತ್ವಂ
ಅಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾತ್ ಏಕಂ
ಅವಧೀಃ ಕಾಮಮೋಹಿತಮ್..||

ಶಾಪವಿದು ಬೇಡನಿಗೆ...ಮಂಗಲಮಹಾವರ ಮನುಕುಲಕೆ..!

“ಎಲೋ ಬೇಡನೇ..! ಕ್ರೌಂಚ ದ್ವಂದ್ವದಲ್ಲೊಂದನ್ನು, ಅದು ಕಾಮಮೋಹಿತವಾಗಿದ್ದಾಗ ನಿಷ್ಕರುಣೆಯಿಂದ ಕೊಂದೆಯಲ್ಲವೇ..?
ಮುಗ್ಧ ಪಕ್ಷಿಯ ವಾಸದ ನೆಲೆ (ವೃಕ್ಷ)-
ವಿಶ್ವಾಸದ ನೆಲೆ (ಪತ್ನಿ)-
ಮತ್ತು ಶ್ವಾಸದ ನೆಲೆ (ಬದುಕು)-
ಹೀಗೆ ಮೂರೂ ನೆಲೆಗಳನ್ನು ಇಲ್ಲವಾಗಿಸಿದ ನಿನಗೆ ನೆಲೆಯೇ ಸಿಗದಿರಲಿ…!”

ವೃತ್ತಿಧರ್ಮವೆಂಬ ನೆಲೆಯಲ್ಲಿ ನಿಂತಲ್ಲವೇ ಆತ ಪಕ್ಷಿಯನ್ನು ಹೊಡೆದದ್ದು..?
ಅಂದಮೇಲೆ ಋಷಿಯು ಬೇಡನ ಮೇಲೆ ಕೋಪಿಸಲೇಕೆ..?
ಆತನನ್ನು ಶಪಿಸಲೇಕೆ..?

ಹಿಂಸೆಗಾದರೊಂದು ಕಾರಣ ಬೇಡವೇ…?
ಹಸಿವಿಗಾಗಿ ಕೊಲ್ಲುವುದುಂಟು..
ಅಪಾಯವಿದ್ದರೆ ಆತ್ಮರಕ್ಷಣೆಗೆಂದು ಕೊಲ್ಲುವುದುಂಟು..!
ಅಪರಾಧ ನಡೆದಾಗ ದಂಡನೆಯ ರೂಪದಲ್ಲಿ ಕೊಲ್ಲುವುದುಂಟು..

ಆದರಿಲ್ಲಿ..?
ಪಕ್ಷಿಯ ಹತ್ಯೆಯ ಹಿನ್ನೆಲೆಯಲ್ಲಿ ಇದ್ಯಾವ ಕಾರಣಗಳೂ ಇರಲಿಲ್ಲ..!
ಕೊಂದವನಿಗೆ ಹಸಿವಿರಲಿಲ್ಲ…
ಮುಗ್ಧ ಪಕ್ಷಿಯಿಂದ ಅವನಿಗೆ ಯಾವ ಅಪಾಯವೂ ಇರಲಿಲ್ಲ..
ಯಾವ ಅಪರಾಧವೂ ಘಟಿಸಿರಲಿಲ್ಲ..
ಆದುದರಿಂದಲೇ ವೃತ್ತಿಧರ್ಮವೊಂದೇನು..ಯಾವ ಧರ್ಮದ ನೆಲೆಯಲ್ಲಿಯೂ ನಡೆಸಿದ ಹತ್ಯೆ ಅದಾಗಿರಲಿಲ್ಲ..!

ಹಿಂಸೆಗಾದರೊಂದು ಸಮಯ ಬೇಡವೇ..?
ಕೊಲ್ಲಲು ಜೋಡಿ ಹಕ್ಕಿಗಳು ಜೊತೆಯಾಗಿ ಅದ್ವೈತದ ನೈಸರ್ಗಿಕ ಆನಂದದಲ್ಲಿ ವಿಹರಿಸುತ್ತಿರುವ ಸಮಯವೇ ಆಗಬೇಕೇ…?

ಹಿಂಸೆಗಾದರೊಂದು ಸಂದರ್ಭ ಬೇಡವೇ…?
ಪ್ರೇಮ-ದಯೆಗಳ ಸಾಕಾರರೂಪರಾದ ಮಹರ್ಷಿಗಳ ಕಣ್ಣೆದುರೇ ಇಂತಹ ಘೋರ ಕೃತ್ಯವನ್ನು ನಡೆಸುವುದೇ…?

ಹಿಂಸೆಗಾದರೊಂದು ಮಿತಿ ಬೇಡವೇ…?
ಪಕ್ಷಿಯುಗಳದಲ್ಲಿ ಒಂದನ್ನು ಹೊಡೆದು ಇನ್ನೊಂದನ್ನು ಬಿಡುವುದರಲ್ಲಿ,
ಒಂದರ ಮರಣಸಂಕಟ, ಇನ್ನೊಂದರ ವಿಯೋಗವ್ಯಥೆಯನ್ನು
ಒಮ್ಮೆಲೇ ಕಂಡು ಆನಂದಿಸುವ ಕ್ರೂರ ಹಿಂಸಾಸಂತೋಷಪ್ರವೃತ್ತಿಯಲ್ಲವೇ ಆ ಬೇಡನಲ್ಲಿ ಅಡಗಿದ್ದದ್ದು…!?

ವಿಷಯವೊಂದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಬುದ್ಧಿಗೆ ಉಪಕರಣಗಳು ಬೇಕು..
ಯುಕ್ತಿಗಳು ಬೇಕು..ಸಾಕ್ಷ್ಯಗಳು ಬೇಕು..
ಆದರೆ,
ಮುನಿಯಾದವನಿಗೆ ಅವನ ಪರಿಶುದ್ಧ ಅಂತಃಕರಣವೇ ಸಾಕು..
ಆ ಸಮಯದಲ್ಲಿ ಅವನ ಅಂತರಂಗದಲ್ಲೇಳುವ ಭಾವತರಂಗಗಳೇ ಸಾಕು..
ಅವನ ಆತ್ಮಸಾಕ್ಷಿಯೇ ಸಾಕು..!
ತನ್ನ ಆತ್ಮದಲ್ಲೇ ಜಗತ್ತನ್ನೇ ನೋಡಬಲ್ಲವನಿಗೆ, ಅರಿಯಬಲ್ಲವನಿಗೆ ತಾನೆ, ಮುನಿಯೆಂದು ಹೆಸರು..!

ಬೇಡನ ಬೇಡದ ಕೃತ್ಯದಿಂದಾಗಿ ತನ್ನೊಳಗೆ ಉಂಟಾದ ಶೋಕದಿಂದಲೇ ವಾಲ್ಮೀಕಿಗಳು ನಿರ್ಣಯಿಸಿದರು ಇಲ್ಲಿ ಧರ್ಮನಾಶವಾಗಿದೆ ಎಂದು.
ಏಕೆಂದರೆ, ಸತ್ಪುರುಷರಿಗೆ ಶೋಕವುಂಟಾಗುವುದು ಧರ್ಮನಾಶವಾದಾಗ ಮಾತ್ರ…!

‘ಧರ್ಮೋ ಹಂತಿ ಹತೋ ರಾಜನ್ ಧರ್ಮೋ ರಕ್ಷತಿ ರಕ್ಷಿತಃ..|’

ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು..
ಧರ್ಮವನ್ನು ನಾವು ಘಾತಿಸಿದರೆ ಅದು ನಮ್ಮನ್ನು ಘಾತಿಸುವುದೂ ಅಷ್ಟೇ ಸಹಜ…!
ಬಲ್ಲವರ ವಾಣಿಯಿದು..!

ಬೇಡ ಹೊಡೆದದ್ದು ಕೇವಲ ಪಕ್ಷಿಯನ್ನಲ್ಲ..
ಪಕ್ಷಿಗಳಲ್ಲಿ ಆನಂದದ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರಾಕೃತಿಕ ಧರ್ಮವನ್ನು…!
ಆದುದರಿಂದಲೇ ಪಕ್ಷಿಯೊಳಗೆ ಆಹತವಾದ ಧರ್ಮವು ವಾಲ್ಮೀಕಿಗಳೊಳಗಿನಿಂದ ವ್ಯಕ್ತವಾಗಿ – ಶಾಪವಾಗಿ ಬೇಡನನ್ನು ದಂಡಿಸಿತು…!
(ಪೂಜ್ಯರಾದ ಎನ್ೆ.ಎಸ್. ರಾಮಭದ್ರಾಚಾರ್ಯರು ನೀಡುತ್ತಿದ್ದ ವಿವರಣೆಯಿದು).

ನೆಲೆ ಸಿಗದಿರಲೆಂಬ ಶಾಪವಾಣಿಯೂ ಅರ್ಥಪೂರ್ಣವಾದುದೇ…!

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ…|
ಧರ್ಮೋ ಧಾರಯತೇ ಪ್ರಜಾಃ…|

ಜಗತ್ತು ನೆಲೆ ನಿಂತಿರುವುದೇ ಧರ್ಮದ ಮೇಲೆ..
ಸಕಲ ಜೀವಿಗಳನ್ನೂ ಧರಿಸಿರುವ ಸೃಷ್ಟಿಯ ಧಾರಕಶಕ್ತಿಯೇ ಧರ್ಮ..
ಅದನ್ನೇ ಘಾತಿಸಿದ ಮೇಲೆ ಮತ್ತೆ ನೆಲೆಯೆಲ್ಲಿಂದ…?
ತಾನು ಕುಳಿತ ಕೊಂಬೆಯನ್ನೇ ಕಡಿದಂತಲ್ಲವೇ ಅದು..?

ಶ್ಲೋಕವಾಯಿತು ಶೋಕ..!

ಶೋಕದಲ್ಲಿಯೋ, ರೋಷದಲ್ಲಿಯೋ, ಆವೇಶದಲ್ಲಿಯೋ..ಆಡಿದ ಮಾತುಗಳು ತಾಳ ತಪ್ಪುವುದು ಸಹಜ..
ಆದರೆ ಅದೇನು ವಿಚಿತ್ರವೋ, ಶೋಕವಶರಾದ ವಾಲ್ಮೀಕಿಗಳ ಬಾಯಿಯಿಂದ ಅಪ್ರಯತ್ನವಾಗಿ ಹೊರಹೊಮ್ಮಿದ ಮಾತುಗಳು ಕೇವಲ ಮಾತಾಗಿರದೆ ಸುವ್ಯವಸ್ಥಿತವಾದ ಛಂದೋಬದ್ಧವಾದ ಕವಿತೆಯಾಗಿದ್ದವು…!

ಸರಿಯಾಗಿ ನಾಲ್ಕು ಚರಣಗಳು..
ಒಂದೊಂದು ಚರಣದಲ್ಲಿಯೂ ಸರಿಯಾಗಿ ಎಂಟೆಂಟು ಅಕ್ಷರಗಳು…!
ತಂತ್ರೀವಾದ್ಯಗಳೊಡನೆ ಮೇಳೈಸಿ ಸೊಗಸಾಗಿ ಹಾಡಬರುವ ತೆರನಾದ ರಾಗ- ತಾಳ-ಲಯಗಳ ಸಮನ್ವಯ..!
ಇವುಗಳೆಲ್ಲವೂ ಆ ಕವಿತಾರೂಪದ ಶಾಪವಾಕ್ಯದಲ್ಲಿ ತಾನೇತಾನಾಗಿ ಪಡಿಮೂಡಿದ್ದವು..

ಗಿರಿಯಿಂದ ಸಹಜವಾಗಿ ಧುಮ್ಮಿಕ್ಕುವ ಝರಿಯಂತೆ..
ವಾಲ್ಮೀಕಿಗಳ ಯಾವ ಪ್ರಯತ್ನವೂ ಇಲ್ಲದೆಯೇ ಛಂದೋಬದ್ಧವಾಗಿ – ರಸಭಾವ ಪರಿಪೂರ್ಣವಾಗಿ -
ತಾಳ-ಲಯಸಮನ್ವಿತವಾಗಿ ಆ ಕವಿತೆ ಅವರೊಳಗಿನಿಂದ ಧುಮ್ಮಿಕ್ಕಿತು…!

ಅವು ಕೇವಲ ಅಕ್ಷರಗಳ ಜೋಡಣೆಯಲ್ಲ..
ಅಂತಃಸ್ಪೂರ್ತಿಯ ನೆಲೆಯಲ್ಲಿ ಚಿಮ್ಮಿಬಂದ ಕಾವ್ಯಧಾರೆ..

ಅದು ಈ ಜಗದ ಮೊದಲ ಕವಿತೆ…!
ಆದಿಕಾವ್ಯದ ಆದಿಮಂಗಳ ಪಂಕ್ತಿಯದು…!

ಆದಿಕವಿತೆಯು ಮುಂಬರುವ ಅನಂತಕವಿತೆಗಳಿಗೆ ಹೇಳಿದ ಪಾಠವಿದು..
ಕವಿತೆಯೆಂಬುದು ಮುಗಿಲಿನಿಂದ ತಾನೇತಾನಾಗಿ ಇಳಿದು ಬರುವ ಮಳೆಯಂತೆ..
ಗಿರಿಯಿಂದ ಸಹಜವಾಗಿ ಹರಿದು ಬರುವ ಝರಿಯಂತೆ…
ಭೂಮಿಯ ಒಡಲಿನಿಂದ ನೈಸರ್ಗಿಕವಾಗಿ ಚಿಮ್ಮಿ ಬರುವ ಚಿಲುಮೆಯಂತೆ…
ಸಹಜವಾದ ಭಾವ ಸೃಷ್ಟಿಯಾಗಿರಬೇಕೇ ಹೊರತು ನಲ್ಲಿಯ ನೀರಿನಂತೆ ಕೃತ್ರಿಮವಾದ ಬುದ್ಧಿಸೃಷ್ಟಿಯಾಗಿರಬಾರದು..
ಒಂದಿಷ್ಟು ಹಣಕ್ಕಾಗಿಯೋ ಹೆಸರಿಗಾಗಿಯೋ ಮನ ಬಂದಂತೆ ಕೃತ್ರಿಮವಾಗಿ ಹೊಸೆಯುವ ಶಬ್ದಜಾಲಗಳೆಲ್ಲ ಕಾವ್ಯಗಳಲ್ಲ…!

ಕೆಲವರ ವರ ಹಲವರಿಗೆ ಶಾಪವಾಗುವುದುಂಟು..!
ಉದಾಹರಣೆಗೆ, ರಾವಣನಿಗೂ, ಹಿರಣ್ಯಕಶ್ಯಪುವಿಗೂ ಸಿಕ್ಕಿದ ವರಗಳು ವಿಶ್ವಕಂಟಕವಾಗಿ ಪರಿಣಮಿಸಿದವು…!
ಆದರೆ ಇಲ್ಲಿ ಹಾಗಲ್ಲ…
ಬೇಡನಿಗೆ ವಾಲ್ಮೀಕಿಗಳಿತ್ತ ಶಾಪವು ವಿಶ್ವಕ್ಕೆ ಶ್ರೀರಾಮಾಯಣ ರೂಪದ ಶಾಶ್ವತ ವರವಾಗಿ ಪರಿಣಮಿಸಿತು…!
ಅನಂತ ಕಾವ್ಯಗಳ ಅಮೃತಧಾರೆಯ ಪ್ರಥಮಬಿಂದುವಾಯಿತು…!

|| ಹರೇರಾಮ ||

ಮುಂದೆ ಓದಿ

ವಿಶೇಷ ವರದಿ

ಕಿನ್ನಿಗೋಳಿ: ಅಚ್ಚರಿಯ ಸಾಧಕ ಡಾ.ಮೋಹನ ಆಳ್ವರ ಸಂಗ್ರಹಗಳ ಪಟ್ಟಿಗೆ ಹೊಸ ಸೇರ್ಪಡೆ 3ಸಾವಿರಕ್ಕೂ ಹೆಚ್ಚಿನ ಕನ್ನಡದ ಪತ್ರಿಕೆಗಳು! ಬಹುಶಃ ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಮೂಡುಬಿದ್ರೆಯ ಆಳ್ವಾಸ್ ಪದವೀ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯವಸ್ಥಿತವಾದ ಪತ್ರಿಕಾ ಸಂಗ್ರಹಾಲಯ ಉದ್ಘಾಟನೆಗೊಳ್ಳಲಿದೆ.





ನಾನಾ ನಮೂನೆಯ ಗಣಪತಿ ವಿಗ್ರಹಗಳು, ಪುರಾತನ ವಸ್ತುಗಳು, ಯಕ್ಷಗಾನ, ಜಾನಪದ ವಸ್ತುಗಳು, ಶೋಭಾವನದಲ್ಲಿ ನೂರಾರು ಸಸ್ಯ ವೈವಿಧ್ಯಗಳು, ಛಾಯಾಚಿತ್ರಗಳು ಹೀಗೆ ಡಾ. ಮೋಹನ ಆಳ್ವರ ಸಂಗ್ರಹದ ಹವ್ಯಾಸಗಳು ಹಲವಾರು. ಈಗ ನಿವೃತ್ತ ಉಪನ್ಯಾಸಕ, ಸಾಗರದ ಪ್ರಸಿದ್ಧ ಪತ್ರಿಕಾ ಸಂಗ್ರಾಹಕ ಮೋಹನ ಗಣಪತಿ ಹೆಗಡೆ ತನ್ನಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಪತ್ರಿಕೆಗಳನ್ನು ಆಳ್ವಾಸ್ ಸಂಸ್ಥೆಗೆ ನೀಡಿದ್ದಾರೆ. ಇದರ ಜೊತೆಗೆ ಕ್ರಿಯಾಶೀಲ ಪತ್ರಕರ್ತರಾಗಿದ್ದು, ಪ್ರಸ್ತುತ ಆಳ್ವಾಸ್ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿರುವ ಹರೀಶ್ ಆದೂರು ಅವರೂ ಕೂಡ ಸಾವಿರಾರು ಪತ್ರಿಕೆಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ದ್ವಿಪ್ರತಿ ಇರುವ ಪತ್ರಿಕೆಗಳನ್ನು ಸಂಸ್ಥೆಯ ಪತ್ರಿಕಾ ಸಂಗ್ರಹಾಲಯಕ್ಕೆ ನೀಡಿ ಸಂಗ್ರಹವನ್ನು ಶ್ರೀಮಂತವಾಗಿಸಿದ್ದಾರೆ.

ರಾಜ್ಯದ ಯಾವುದೇ ವಿವಿ ಅಥವಾ ವಿದ್ಯಾಲಯ, ಸಂಸ್ಥೆಗಳಲ್ಲಿ ಇರದಂತಹ ಅಧ್ಯಯನಕ್ಕೆ, ಸಂಶೋಧನೆಗೆ ಸಹಕಾರಿಯಾಗಬಲ್ಲ ರೀತಿಯಲ್ಲಿ ಶೋಕೇಸ್ ವ್ಯವಸ್ಥೆಯೊಳಗೆ ವಿವಿಧ ಪತ್ರಿಕೆಗಳನ್ನು ಬಿಡಿಸಿಡುವ ಕಾರ್ಯ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ನಡೆಯುತ್ತಿದೆ.
ಉದ್ಯೋಗ, ಸಾಹಿತ್ಯ, ಅಪರಾಧ, ಸಾಮಾನ್ಯ ವಿಚಾರ, ರಾಜಕೀಯ, ಸಿನಿಮಾ, ಧಾರ್ಮಿಕ, ಮನೋರಂಜನೆ, ಮಕ್ಕಳ ಪತ್ರಿಕೆ ಹೀಗೆ ವಿವಿಧ ವಿಭಾಗಗಳಾಗಿ ವಿಂಗಡಿಸಿ ಜಿಲ್ಲಾವಾರುವಿನಂತೆ ವ್ಯವಸ್ಥೆಗೊಳಿಸಲಾಗುತ್ತಿದೆ. ದಿನ, ವಾರ, ಪಾಕ್ಷಿಕ, ಮಾಸ, ದ್ವೈಮಾಸಿಕ ಹೀಗೆ ನಾನಾ ನಮೂನೆಯಲ್ಲೂ ವಿಭಾಗಿಸಲಾಗುವುದು. ವಿಶಿಷ್ಟ ಪತ್ರಿಕೆಗಳನ್ನು ಉದಾಹರಣೆಗೆ ಗಿಡುಗ, ನಾಗರಹಾವು, ಹದ್ದಿನ ಕಣ್ಣು ಹೀಗೆ ಪ್ರಾಣಿ ಪಕ್ಷಿಗಳ ಹೆಸರಿನ ಪತ್ರಿಕೆಗಳನ್ನೂ ಪ್ರತ್ಯೇಕವಾಗಿ ಜೋಡಿಸಿಡಲಾಗುವುದು. ಸ್ವಾತಂತ್ರ್ಯ ಪೂರ್ವದ, ಸ್ವಾತಂತ್ರ್ಯ ಹೋರಾಟ ಕಾಲದ, ತುರ್ತು ಪರಿಸ್ಥಿತಿ ಕಾಲದ ಪತ್ರಿಕೆಗಳು ಹೀಗೆ ನಾನಾ ವಿಧದಲ್ಲೂ ಅಧ್ಯಯನಕಾರರಿಗೆ ಇಲ್ಲಿನ ಕನ್ನಡ ಪತ್ರಿಕೆಗಳ ದೊಡ್ಡ ಸಂಗ್ರಹ ಸಹಕಾರಿಯಾಗಲಿದೆ. ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಲಿಕೆಗೆ ಹೊಸಚೈತನ್ಯವನ್ನು ನೀಡಲಿದೆ. ಒಂದು ಪುಟದಿಂದ ಹಿಡಿದು ನೂರಿನ್ನೂರು ಪುಟಗಳವರೆಗಿನ, ಕೈಬರಹದಿಂದ ತೊಡಗಿ ಬಹುವರ್ಣದ, ಪೋಸ್ಟ್ ಕಾರ್ಡ್ ಆಕಾರದಿಂದ ಆರಂಭಿಸಿ ಯುದ್ಧಪಟಗಳು ಎಂಬ ದೊಡ್ಡ ಸೈಜಿನವರೆಗಿನ ಪತ್ರಿಕೆಗಳೂ ಇಲ್ಲಿನ ಸಂಗ್ರಹಾಲಯದಲ್ಲಿದೆ. ಪತ್ರಿಕೆಗಳ ಮುಖ್ಯವಾಗಿ ಕನ್ನಡದ ಪತ್ರಿಕೆಗಳ ಇತಿಹಾಸ ಅಧ್ಯಯನಕ್ಕೆ ಈ ಸಂಗ್ರಹಾಲಯ ದೊಡ್ಡ ಆಕರವಾಗಿದೆ.
ಸದ್ಯ ಒಂದು ರೂಮಿನಲ್ಲಿ ಕಪಾಟುಗಳಲ್ಲಿಡಲಾಗುತ್ತಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಪ್ರದರ್ಶನಕ್ಕಿಡಲಾಗುವುದು ಎಂದು ಮಾಹಿತಿ ನೀಡಿದ ಹರೀಶ್ ಆದೂರು ತಾನು ವೈಯಕ್ತಿಕವಾಗಿ ಪತ್ರಿಕೆಗಳ ಸಂಪಾದಕ, ಪ್ರಕಾಶಕ, ಬೆಲೆ, ಪುಟ, ಅವುಗಳ ವಿಶಿಷ್ಟತೆ ಹೀಗೆ ನಾನಾ ಮಾಹಿತಿಗಳ ದಾಖಲೀಕರಣವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು. ಆದೂರು ಮತ್ತವರ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಜೋಡಿಸಿಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪತ್ರಿಕೆಗಳ ರಕ್ಷಣೆಗಾಗಿ ದೊಡ್ಡ ಸೈಜಿನ ಪ್ಲಾಸ್ಟಿಕ್ ಲಕೋಟೆಗಳನ್ನು ಮಾಡಿಸಲಾಗಿದೆ.
ಪತ್ರಿಕೆಗಳನ್ನು ಸಂಸ್ಥೆಗೆ ನೀಡಿರುವ ಮೋಹನ ಗಣಪತಿ ಹೆಗಡೆಯವರ ಹೆಸರನ್ನು ಗೌರವಯುತವಾಗಿ ಪತ್ರಿಕಾ ಸಂಗ್ರಹಾಲಯದಲ್ಲಿ ಬಳಸಿಕೊಳ್ಳುತ್ತೇವೆ.
ಹಳೆಯ ಪತ್ರಿಕೆಗಳನ್ನು ಹೆಚ್ಚು ಸಲ ತಿರುವಿ ಹಾಕಿದಾಗ ಅವು ಹಾಳಾಗುವ ಸಾಧ್ಯತೆಗಳಿರುವುದರಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅಗತ್ಯವಿದ್ದರೆ ಪತ್ರಿಕೆಗಳ ಯಥಾಪ್ರತಿ(ಕ್ಸೆರಾಕ್ಸ್) ನೀಡುತ್ತೇವೆ. ವಿವಿಧ ಪತ್ರಿಕೆಗಳ ವಿನ್ಯಾಸ, ಹೂರಣ, ವಸ್ತು ವೈವಿಧ್ಯ ಇತ್ಯಾದಿ ವಿಚಾರಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ದೊಡ್ಡ ಕೊಡುಗೆ ನೀಡಬಲ್ಲವು. ಪಠ್ಯಗಳ ಓದಿಗಿಂತ ಪ್ರಾಯೋಗಿಕ ಅನುಭವ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಅದಕ್ಕೆ ಈ ಪತ್ರಿಕಾ ಸಂಗ್ರಹಾಲಯ ಪೂರಕವಾಗಲಿದೆ ಎಂದು ಹರೀಶ್ ಆದೂರು ಮಾಹಿತಿ ನೀಡಿದರು.




ಮೂಡುಬಿದ್ರೆ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸೆಮಿನಾರ್ ಹಾಲ್ ಮತ್ತು ಮೋಹನ ಗಣಪತಿ ಹೆಗಡೆ ಸಂಗ್ರಹದ ಪತ್ರಿಕಾ ಸಂಗ್ರಹಾಲಯವನ್ನು ತಾ.24ರ ಬೆಳಿಗ್ಗೆ ಕುವೆಂಪು ವಿವಿಯ ಸತೀಶ್ ಕುಮಾರ್ ಅಂಡಿಂಜೆ ಉದ್ಘಾಟಿಸಲಿದ್ದಾರೆ. ಡಾ.ಮೋಹನ ಆಳ್ವ, ಡಾ.ಪ್ರಭಾಕರ ಶೆಟ್ಟಿ, ಕುರಿಯನ್ ಉಪಸ್ಥಿತರಿರುತ್ತಾರೆ .
ಚಿತ್ರ-ವರದಿ: ಮಿಥುನ್ ಕೊಡೆತ್ತೂರು, ಕಿನ್ನಿಗೋಳಿ.

ಮುಂದೆ ಓದಿ
11:07 PM

ಜರೆಯದಿರು…ಜರೆಯ…!

Posted by ekanasu

||ಹರೇರಾಮ||

ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು….
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..

“ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು”..

“ನನಗೆ ಸಾವೇ ಇಲ್ಲದಂತೆ ಮಾಡುವೆಯಾ?” – ಸೋಮು ಕೇಳಿದ..!

“ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು”.

“ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು;
ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು…!!!”



“ತಥಾಸ್ತು…”
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .

ಬಹಳ ಕಾಲ ಕಳೆಯಿತು.
ಸೋಮು ಈಗ ಮುಪ್ಪಿನ ಮುದುಕ..!
ಅದೊಂದು ದಿನ ಮತ್ತೆ ಯಮಲೋಕದ ಗೆಳೆಯನ ಆಗಮನವಾಯಿತು….!!

“ಏನು ಬಂದೆ ಗೆಳೆಯಾ ಬಹಳ ಕಾಲದ ನಂತರ…?”

“ಮಾತು ಕೊಟ್ಟಿದ್ದೆನಲ್ಲವೇ? ನಿನಗೆ ಸಾವು ಸನ್ನಿಹಿತವಾಗಿದೆ. ಕರೆದೊಯ್ಯಲು ನಾನೇ ಬಂದೆ..”

ಸೋಮುವಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ…!!
ವರುಷಗಳ ಮೊದಲೇ ತನಗೆ ಸಾವಿನ ಸೂಚನೆ ಸಿಗುವುದೆಂದೂ,ಮತ್ತುಳಿದ ಸಮಯದಲ್ಲಿ ಮತ್ತುಳಿದ ಆಸೆಗಳೆಲ್ಲವನ್ನೂ (ತಿನ್ನುವ,ತಿರುಗುವ,ಕುಡಿಯುವ,..ಇತ್ಯಾದಿ ಇತ್ಯಾದಿ . . .!) ಪೂರೈಸಿಕೊಳ್ಳಬಹುದೆಂದು ಆತ ಭಾವಿಸಿಕೊಂಡಿದ್ದ..
ಆದರೀಗ ಏಕಾಏಕಿ ಸಾವೇ ಎದುರು ಬಂದು ನಿಂತಾಗ ಗೆಳೆಯನ ಮೇಲೆ ಆಕ್ರೋಶವೇ ಉಂಟಾಯಿತು…

“ಹೀಗೂ ಮಿತ್ರದ್ರೋಹ ಮಾಡುವುದುಂಟೆ..!? ಮೇಲಿನ ಲೋಕದವರೂ ಮಾತಿಗೆ ತಪ್ಪಬಹುದೆ?
ಕೊಟ್ಟ ಮಾತಿನಂತೆ ಸಾವಿನ ಮುನ್ಸೂಚನೆಯನ್ನು ನನಗೆ ನೀನು ಕೊಡಬೇಕಿತ್ತಲ್ಲವೇ…?”

ಯಮದೂತನಿತ್ತ ಉತ್ತರ ಸೋಮುವಿನ ಮಾತ್ರವಲ್ಲ, ಸಕಲ ಮಾನವಕೋಟಿಯ ಕಣ್ತೆರೆಸುವ ಹಾಗಿತ್ತು…!!
ಮುಪ್ಪಿನ ಬಗ್ಗೆ ಅಪೂರ್ವವಾದ ,ಅತ್ಯಾಶ್ಚರ್ಯಕರವಾದ ವಿವರಣೆಯೊಂದನ್ನು ಅದು ಒಳಗೊಂಡಿತ್ತು…

“ಗೆಳೆಯಾ, ಅದೆಷ್ಟೋ ಬಾರಿ ಸಾವಿನ ಸೂಚನೆಗಳನ್ನು ನಿನಗೆ ನಾನು ಕೊಟ್ಟೆ. ಆದರೆ ಅವುಗಳನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.
ಮಾತ್ರವಲ್ಲ, ಕೃತ್ರಿಮ ವಿಧಾನಗಳಿಂದ ಆ ಸೂಚನೆಗಳನ್ನೇ ಮರೆಮಾಡಿ ಸುಳ್ಳು ವಿಶ್ವಾಸದಲ್ಲಿ ನೀನು ಬದುಕಿದರೆ ನಾನೇನು ಮಾಡಲಿ..?

ಮೊಟ್ಟಮೊದಲು ನಾನು ನಿನ್ನ ಕೂದಲನ್ನು ಬಿಳಿಯಾಗಿಸಿದೆ – ಆದರೆ ಅವುಗಳಿಗೆ ನೀನು ಕರಿಬಣ್ಣ ಹಚ್ಚಿದೆ…!!

ಮತ್ತೆ ನಿನ್ನ ಕಣ್ಣಿನ ಶಕ್ತಿಯನ್ನು ಕುಂದಿಸಿದೆ – ಆದರೆ ನೀನು ಕನ್ನಡಕ ಹಾಕಿಕೊಂಡೆ…!!

ಆಮೇಲೆ ನಿನ್ನ ಶ್ರವಣಶಕ್ತಿಯನ್ನು ಶಿಥಿಲಗೊಳಿಸಿದೆ – ಆದರೆ ನೀನು ಶ್ರವಣಸಾಧನವನ್ನು ಬಳಸಿದೆಯೇ ಹೊರತು, ನನ್ನ ಸೂಚನೆಯನ್ನರಿಯಲಿಲ್ಲ..!!

ನಂತರ ನಿನ್ನ ಹಲ್ಲುಗಳನ್ನು ಬೀಳಿಸಿದೆ – ನಿನ್ನ ಬಾಯಲ್ಲಿ ಕೃತಕ ಹಲ್ಲುಗಳು ಪ್ರತ್ಯಕ್ಷವಾದವು…!!

ನಾ ನಿನ್ನ ಚರ್ಮವನ್ನು ಸುಕ್ಕಾಗಿಸಿ ಸೌಂದರ್ಯ ಕೆಡಿಸಿದೆ – ಆದರೆ ನೀನು ‘ಮೇಕಪ್’ ಎಂಬ ಚಮತ್ಕಾರದ ಮೂಲಕ ನಾನಿನ್ನೂ ಯುವಕನೆಂಬ ಭ್ರಮೆಯನ್ನು ನೋಡುಗರಲ್ಲಿ ಮೂಡಿಸಲು ಯತ್ನಿಸಿದೆ…!!

ಸೂಚನೆಯ ಸಂದೇಶವನ್ನು ನೀನರಿಯದಿದ್ದರೆ ಅದಕ್ಕೆ ಬೇರೆ ಯಾರು ಹೊಣೆಯಾಗಲು ಸಾಧ್ಯ..?”

ಸೋಮುವಿನ ಬಳಿ ಉತ್ತರವಿರಲಿಲ್ಲ…!!
ಸತ್ಯ ಅರ್ಥವಾಗಿತ್ತು…!
ಆದರೆ ಸಮಯ ಮಿಂಚಿತ್ತು….!!

ನಮಗೆ ಇಷ್ಟವೇ ಇರದ, ಆದರೆ ಬದುಕಿನಲ್ಲಿ ಬಂದೇ ಬರುವ ಒಂದು ಅವಸ್ಥೆಯೆಂದರೆ ..ಮುಪ್ಪು..!!
ಮುಪ್ಪು ಕೆಡುಕಲ್ಲ.. ಮುಕ್ತಾಯದ ಮುನ್ಸೂಚನೆಯದು…!!
ಬದುಕು ಮೃತ್ಯುವಿನಲ್ಲಿ ಮುಕ್ತಾಯವಾಗಬಾರದು. . . . ಮುಕ್ತಿಯಲ್ಲಿ ಮುಕ್ತಾಯವಾಗಬೇಕು…..!
‘ಮುಕ್ತಿ ಸಿದ್ಧತೆಯ ಸಮಯ ಮೀರುತ್ತಿದೆ’ ಎಂಬ ಎಚ್ಚರಿಕೆಯ ಘಂಟೆಯಿದು….!!
ಹಣವೆಂಬ ಸಂಪತ್ತು ಹೋದರೆ ಮತ್ತೆ ಬರಬಹುದು – ಆದರೆ ಸಮಯವೆಂಬ ಸಂಪತ್ತು ಮತ್ತೆ ಬರಲಾರದು…!!
ಮುಪ್ಪೆಂಬುದು ಈಶ್ವರನ ಭಾಷೆ…

ರೈಲು ಪ್ರಯಾಣದಲ್ಲಿ ಇಳಿಯುವ ಸ್ಥಳ ಸಮೀಪಿಸುತ್ತ್ತಿದ್ದರೂ ಇನ್ನೂ ಮಲಗಿರುವ ಮಗುವನ್ನು ತಾಯಿ ತಟ್ಟಿ ಎಬ್ಬಿಸುವುದಿಲ್ಲವೇ..?
ಜೀವನವಾಹನವಾದ ದೇಹವನ್ನೇ ನಾವು ಬಿಟ್ಟು ಹೋಗುವ ಸಮಯ ಹತ್ತಿರ ಬರುವಾಗ ಸಿದ್ಧತೆಗಳಿಗಾಗಿ ಈಶ್ವರನು ನಮ್ಮನ್ನು ಬಡಿದೆಬ್ಬಿಸುವ ರೀತಿಯದು…!

ರಾತ್ರಿ ಮಲಗುವಾಗ ಅಲಾರ್ಮ್ ಇಟ್ಟುಕೊಳ್ಳುವುದುಂಟು..
ಅದು ಬೆಳಿಗ್ಗೆ ಕೂಗಿ ನಮ್ಮನ್ನೆಚ್ಚರಿಸುವಾಗ ಕಿರಿಕಿರಿಯೆನ್ನಿಸುವುದುಂಟು…
ಅಲಾರ್ಮ್ ಕೆಟ್ಟದಲ್ಲ…!!
‘ನಿದ್ದೆಯ ಸಮಯ ಮುಗಿಯಿತು,ಎಚ್ಚರದ ಸಮಯ ಆರಂಭವಾಯಿತು’ ಎನ್ನುವ ಸೂಚನೆಯದು..!!
ಮುಪ್ಪೆಂಬುದು ನಮಗಾಗಿ ಈಶ್ವರನಿಟ್ಟ ಅಲಾರ್ಮ್….!!

ಬಾಲ್ಯ ಆಟದಲ್ಲಿ ಮುಗಿಯಿತು…..
ಯೌವನ ಹುಡುಗಾಟದಲ್ಲಿ…..
ಇಲ್ಲಿ ನಿಜದ ಹುಡುಕಾಟಕ್ಕೆ ಎಡೆಯೆಲ್ಲಿ…?!!

ನಮ್ಮ ಮೈಮರೆವಿನ ನಿದ್ದೆಯನ್ನು ಕಳೆಯಲು…
ಬದುಕಿನ ಸಾರ್ಥಕತೆಯ ಹುಡುಕಾಟಕ್ಕೆ ತೊಡಗಿಸಲು,
ಪ್ರತಿಯೊಂದು ಜೀವಿಯ ಶರೀರದಲ್ಲಿಯೂ ದೇವರು ಮುಪ್ಪೆಂಬ ಎಚ್ಚರಿಕೆ ಗಂಟೆಯನ್ನು ಅಳವಡಿಸಿದ್ದಾನೆ…!!

ಮುಪ್ಪೆಂಬುದು ನಮ್ಮ ಕುರಿತು ಈಶ್ವರನಿಗಿರುವ ಕಾಳಜಿಯ ಪ್ರತೀಕ..!
ಅಡುಗೆ ಮಾಡುವಾಗ ಎದ್ದು, ಕುಳಿತು, ಓಡಾಡಿ, ಗಡಿಬಿಡಿಯಲ್ಲಿ ದುಡಿಯುತ್ತಾನೆ ಮನುಷ್ಯ…!
ಆದರೆ ಊಟ ಮಾಡುವಾಗ ಶಾಂತವಾಗಿ ಕುಳಿತು ಅಡುಗೆಯನ್ನು ಆಸ್ವಾದಿಸುತ್ತಾನೆ…!!
ಬಾಲ್ಯ-ಯೌವನಗಳು ಜೀವನದ ಅಡುಗೆಯಿದ್ದಂತೆ. . !
ಅಲ್ಲಿ ಗಡಿಬಿಡಿ ದುಡಿಮೆಗಳಿವೆ..!!
ಮುಪ್ಪಿರುವುದು ಶಾಂತವಾಗಿ ಬದುಕನ್ನು ಆಸ್ವಾದಿಸಲು…!

ಮುಪ್ಪಿನಲ್ಲಿ ಕಣ್ಣು ಮಂಜಾಗುತ್ತದೆ…
ಕಿವಿ ಮಂದವಾಗುತ್ತದೆ…
ಹಲ್ಲುಗಳು ಶಿಥಿಲವಾಗುತ್ತವೆ…
ದೇಹ ದುರ್ಬಲವಾಗುತ್ತದೆ…
ಹೀಗೆ ಬಾಹ್ಯಶರೀರ ಮತ್ತು ಬಹಿರಿಂದ್ರಿಯಗಳೆಲ್ಲವೂ ಕ್ಷೀಣಿಸುತ್ತವೆ…
ಆದರೆ ಅಂತರಂಗ ಕ್ಷೀಣಿಸುವುದಿಲ್ಲ…..!
ಅದು ಅನುಭವದಿಂದ ಇನ್ನಷ್ಟು ಪಕ್ವವಾಗುತ್ತದೆ…!!
ಅನಗತ್ಯ ವೇಗ ಕಳೆದು ಮನಸ್ಸಿಗೊಂದು ಸಮತೋಲನ ಬರಬೇಕಾದ ಕಾಲವದು…

ಬಗೆದು ನೋಡಿದರೆ ಇದರ ಅರ್ಥ “ಅಂತರ್ಮುಖಿಯಾಗು“ ಎಂದೇ ಅಲ್ಲವೇ…?
ಹೊರಜಗತ್ತಿನೆಡೆಗೆ ಇಂದ್ರಿಯಗಳು ಹರಿಯುವುದು ಅಲ್ಲಿಯ ಸೌಂದರ್ಯವನ್ನು ಸವಿಯಲು – ಆನಂದವನ್ನು ಮೊಗೆಯಲು . . !!
ಆದರೆ, ಅದಕ್ಕಿಂತ ಅದೆಷ್ಟೋ ಮಿಗಿಲಾದ ಆನಂದ-ಸೌಂದರ್ಯಗಳ ನಿಧಿ ನಮ್ಮೊಳಗೇ ಇದೆ!

ಮಾಯೆಯ ಮೋಸವಿದು. . !!

ಆನಂದ-ಸೌಂದರ್ಯಗಳ ತುಣುಕುಗಳನ್ನು ತೋರಿಸಿ ಹೊರಪ್ರಪಂಚದೆಡೆಗೆ ನಮ್ಮನ್ನು ಸೆಳೆದು, ನಮ್ಮೊಳಗೇ ಇರುವ ಆನಂದ ಸೌಂದರ್ಯಗಳ ರಾಶಿಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವುದು…!!

ಈಶ್ವರನ ಕರುಣೆಯಿದು…!!

ಮುಪ್ಪಿನ ಮೂಲಕ ನಮ್ಮ ಬಹಿರಿಂದ್ರಿಯಗಳೆಲ್ಲವನ್ನೂ ಶಿಥಿಲಗೊಳಿಸಿ,
ಅಂತರ್ಮುಖಿಯಾಗಲು ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸುವುದು..?

ನಮ್ಮ ಮೂರ್ಖತೆಯಿದು….!!!

ಸೂಚನೆಯ ಸಂದೇಶವನ್ನರಿಯದೆಯೇ – ಭ್ರಮೆಯಲ್ಲಿಯೇ ವಿಹರಿಸಲೆಳಸುವುದು. . . !!

ಜಾನಪದ ಪದ್ಯವೊಂದು ನೆನಪಾಗುತ್ತಿದೆ…..

>ಮಕ್ಕಳಾಟಿಕೆ ಚಂದ….
ಮತ್ತೆ ಯೌವನ ಚಂದ……
ಮುಪ್ಪಿನಲಿ ಚಂದ ನರೆಗಡ್ಡ…..!!

ಈ ಪದ್ಯದಲ್ಲಿರುವಂತೆ ಯಾವುದೂ ಇಂದು ನಡೆಯುತ್ತಿಲ್ಲವೆನ್ನುವುದೇ ನಮ್ಮ ವಿಷಾದದ ವಿಷಯ…

ಮಕ್ಕಳಾಟಿಕೆ ಚಂದ….

ಮಕ್ಕಳು ಸ್ವತಂತ್ರ ಹಕ್ಕಿಗಳಂತೆ,ತಾಯಿಯ ಹಾಲ್ಕುಡಿದ ಪುಟ್ಟ ಕರುಗಳಂತೆ ನಲಿಯುತ್ತಿದ್ದರೇ ಚೆನ್ನ…!
ಆದರೆ ತಂದೆ-ತಾಯಂದಿರಿಗೆ ಮಕ್ಕಳು ಆಟವಾಡಿದರೆ ಕೋಪವೇ ಬರುತ್ತದೆ…!!
ಮಕ್ಕಳು ಗಂಭೀರವಾಗಿರಬೇಕೆಂದೂ,ದೊಡ್ಡವರ ಹಾಗೆ ಜವಾಬ್ಧಾರಿಯುತರಾಗಿರಬೇಕೆಂದೂ, ದಿನವಿಡೀ ಓದಬೇಕೆಂದೂ ಕಂಡಕಂಡ ದೇವರಲ್ಲಿ ಹರಕೆ ಹೊರುತ್ತಾರೆ…!!
ಆದರೆ ಒಮ್ಮೆ ಕಳೆದುಹೋದ ಆಟದ ವಯಸ್ಸು ಮತ್ತೆ ಬರುವುದೇ…?
ಮಕ್ಕಳು ಮುದುಕರಾದ ಮೇಲೆ ಆಟವಾಡಬೇಕೆ..? (ಅಲ್ಲಿಯವರೆಗೂ ಆಟವಾಡಲು ಬಿಡುವೆಲ್ಲಿ…?!!)

ಮತ್ತೆ ಯೌವನ ಚಂದ…

ಯೌವನ ಚಂದ….ಆದರೆ ಅದು ಬರುವಾಗ ಬರಬೇಕು…!
ತಿನ್ನುವ ಅನ್ನವೇ ನಮ್ಮ ಮನಸ್ಸಾಗುತ್ತದೆ..ನಮ್ಮ ಸ್ವಭಾವವಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು…
ನಮ್ಮ ಆಹಾರದಲ್ಲಿ ಹೈಬ್ರೀಡಿನದ್ದೇ ಸಿಂಹಪಾಲು…!!
ಹೈಬ್ರೀಡೆಂದರೆ ಅನೈಸರ್ಗಿಕವಾಗಿ – ಸಮಯಕ್ಕೆ ಮೊದಲೇ ಬರುವ ಬೆಳೆಯಲ್ಲವೇ…?
ಅದನ್ನೇ ತಿಂದರೆ ಮತ್ತೇನಾಗಬೇಕು…?
ಜೊತೆಗೆ ವಾತಾವರಣದ ಕುಮ್ಮಕ್ಕು ಬೇರೆ….!!
ಹೀಗಾಗಿ…….
ಐದು ವರ್ಷಕ್ಕೇ ಯೌವನ …….
ಇಪ್ಪತ್ತೈದು ವರ್ಷಕ್ಕೇ ವೃದ್ಧಾಪ್ಯ….
ಮುವತ್ತೈದು ವರ್ಷಕ್ಕೇ ಸತ್ತು, ಮತ್ತೆ ಜೀವನವಿಡೀ ಜೀವಚ್ಛವವಾಗಿ ಬದುಕಿರುತ್ತಾರೆ….!!!
ಅವಸ್ಥೆ ಯಾವುದಾದರೂ – ಬರುವ ಸಮಯಕ್ಕೆ ಬಂದರೆ; ಇರುವ ಹಾಗೇ ಇದ್ದರೇ – ಚಂದ ಅಲ್ಲವೇ….?

ಮುಪ್ಪಿನಲಿ ಚಂದ ನರೆ ಗಡ್ಡ….
ಕಾಯಿ ಹಣ್ಣಾಗುವಾಗ ಬಣ್ಣ ಬೇರಾಗುತ್ತದೆ…
ಭಿನ್ನ ಪರಿಮಳ ಬರುತ್ತದೆ…
ಮೃದುತ್ವವೇರ್ಪಡುತ್ತದೆ….
ಅಂತರಂಗ ಮಧುರವಾಗುತ್ತದೆ…!!!

ಇದೆಲ್ಲವೂ ಪಕ್ವತೆಯ ಲಕ್ಷಣಗಳು….
ಮನೆಗೆ ತರುವಾಗ, ಸವಿದು ತಿನ್ನುವಾಗ, ಕಾಯಿಗಳನ್ನು ಪಕ್ಕಕ್ಕಿಟ್ಟು ಹಣ್ಣುಗಳನ್ನೇ ಇಷ್ಟಪಟ್ಟು ಆರಿಸುವ ನಮಗೆ…
ನಮ್ಮದೇ ಜೀವನದಲ್ಲಿ ಪಕ್ವತೆ ಏರ್ಪಡುವಾಗ ಅದೇಕೆ ಜಿಗುಪ್ಸೆಯೋ…..?!!
ಮನುಷ್ಯನೂ ಹಣ್ಣಾಗುವಾಗ ಆತನ “ಬಣ್ಣ“ಬೇರಾಗಬೇಕು..!!
ಅನುಭವದ ಸುಗಂಧ ಸೂಸಬೇಕು…!!

ಅಂತರಂಗ ಮೃದು-ಮಧುರವಾಗಬೇಕು….!!!
ಅದೇಕೆ ಮುಚ್ಚಬೇಕೋ ಮುಪ್ಪನ್ನು…?
ಕಪ್ಪೆಂದರೆ ತಮೋಗುಣ…ಬಿಳಿ ಎಂದರೆ ಸತ್ವಗುಣ….
ಮಸ್ತಿಷ್ಕ ತಮಸ್ಸಿನಿಂದ ಸತ್ವದೆಡೆಗೆ ಸಾಗಬೇಕಿರುವುದನ್ನು ತೋರಿಸಲು, ಕೂದಲಿನ ಕಪ್ಪು ಹೋಗಿ ಬಿಳಿ ಬರುತ್ತದೆ . . .!!
ಬಿಳಿ ತಲೆಗೆ ಕರಿವಿಷ ಹಾಕಿ ಕಪ್ಪು ಮಾಡಿದರೆ…..ಆಗುವ ಲಾಭ ಬರಿಯ ಭ್ರಮೆ ಮಾತ್ರ . . .!
ತಲೆಯೊಳಗಿಳಿಯುವುದು ವಿಷ – ಆತ್ಮಕ್ಕಾಗುವುದು ವಂಚನೆ…
ನೋಡುಗನಲ್ಲುಂಟಾಗುವುದು ಭ್ರಮೆ…!!!

ಸಹಜತೆಯಷ್ಟು ಚಂದ ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ….!!

ಸೃಷ್ಟಿಯನ್ನು ನೋಡಿ….!!

ಸೂರ್ಯನ ಬೆಳಕು . .
ಚಂದ್ರನ ತಂಪು . . .
ಅಗ್ನಿಯ ಬಿಸಿ . . .
ಆಕಾಶದ ಅನಂತತೆ. . .
ಹಿಮಾಲಯದ ಔನ್ನತ್ಯ . . .
ಸಾಗರದ ಆಳ……
ಇವುಗಳೆಲ್ಲವೂ ಸಹಜತೆಯ ಸೊಗಸುಗಳು….!!!!

ಕಾಡು ನೋಡಿ….!!

ಕೋತಿಯ ಬಾಲ…
ಆನೆಯ ಸೊಂಡಿಲು…
ಘೇಂಡಾಮೃಗದ ಕೊಂಬು…
ಸಿಂಹದ ಕೇಸರ…..
ನವಿಲಿನ ಗರಿ……
ಹಾವಿನ ಹೆಡೆ…….
ಇವೆಲ್ಲವೂ ಸಹಜತೆಯ ಸೊಗಸುಗಳು….!!!

ನಾಡು ನೋಡಿದರೆ…….?

…….!?
…… !?
……!?
…..!?

ಮೆರೆಯೋಣ ಸಹಜತೆಯ…..
ಮರೆಯೋಣ ಕೃತಕತೆಯ…..
ಅರಿಯೋಣ “ಜರೆ”ಯ ಸಾರ-ಸಂದೇಶಗಳ….
ಕಳೆಯಿತೈ ಬಹುಕಾಲ…
ಕದ ತಟ್ಟುತಿಹ “ಕಾಲ”….!
ಕಳವಳವ ಬಿಟ್ಟೇಳು…
ನಡೆ ಸತ್ಯದೆಡೆಗೆ….!!

||ಹರೇರಾಮ||

(ಶ್ರೀ ಗುರುಗಳ ವಚನಾಮೃತಕ್ಕಾಗಿ http://hareraama.in ವೆಬ್ ಲಾಗ್ ಇನ್ ಆಗಿರಿ.. - ಸಂ.)

ಮುಂದೆ ಓದಿ

ರಾಜ್ಯ - ರಾಜಕೀಯ
ರಾಜ್ಯ ಸಚಿವ ಸಂಪುಟ ವಿಸ್ತರಣೆ `ಇನ್' ಶ್ರೀನಿವಾಸ ಶೆಟ್ರೋ ಪೂಜಾರ್ರೋ

ಉಡುಪಿ : ಇದೇ ತಿಂಗಳು ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾಗುತ್ತದೋ ಇಲ್ಲಾ ಮತ್ತೆ ಮುಂದಕ್ಕೆ ಹೋಗುತ್ತದೋ ಗೊತ್ತಿಲ್ಲ. ಆದರೆ ಇಂಥಹದ್ದೊಂದು `ರುಮಾರ್' ಮಾತ್ರ ಹುಟ್ಟಿಕೊಂಡಿದೆ.ಸಚಿವ ಸಂಪುಟಕ್ಕೆ `ಇನ್' ಯಾರಾಗುತ್ತಾರೆ. ಹಾಲಾಡಿ ಶ್ರೀನಿವಾಸ ಶೆಟ್ರೋ ಅಥವಾ ಶ್ರೀನಿವಾಸ ಪೂಜಾರ್ರೋ ಎಂಬ ಲೆಕ್ಕಚಾರ. ಹಾಗೆ ನೋಡಿದರೆ ಈ ಇಬ್ಬರಲ್ಲೂ ಸಚಿವರಾಗುವ ಯೋಗ್ಯತೆಯಿದೆ. ಸಚಿವರಾದರೆ ಸಮರ್ಥವಾಗಿ ನಿಭಯಿಸುವ ತಾಕತ್ತೂ ಇದೆ. ಪ್ರಾಮಾಣಿಕತೆಗೆ ಇಬ್ಬರಲ್ಲೂ ಕೊರತೆಯಿಲ್ಲ. ಎಲ್ಲೂ ಹೆಸರೂ ಕೆಡಿಸಿಕೊಂಡಿಲ್ಲ. ಶ್ರೀನಿವಾಸ ಪೂಜಾರಿ ಅವರ ಹತ್ತಿರ ಮಾತಿನ ಬಂಡವಾಳವಿದ್ದರೆ, ಶ್ರೀನಿವಾಸ ಶೆಟ್ಟಿ ಅವರಿಗೆ ಕುಂದಾಪುರದ `ವಾಜಪೇಯಿ' ಎಂಬ ಬಿರುದಿದೆ. ಈ ಇಬ್ಬರೂ ಜೀ `ಹುಜೂರ್' ಸಂಸ್ಕೃತಿಯವರಲ್ಲ ಅನ್ನೋದು ವಿಶೇಷ.



ಇವರಿಗೆ ತಮ್ಮಷ್ಟಕ್ಕೆ ಕೆಲಸಮಾಡೋದು ಗೊತ್ತು. ಲಾಭಿ ಮಾಡೋದು ಗೊತ್ತಿಲ್ಲ. ಸೌಜನ್ಯ, ನಿಷ್ಠೆ, ಪ್ರಾಮಾಣಿಕತೆ, ಎಲ್ಲರೊಟ್ಟ್ಟಿಗೆ ಬೆರೆಯುವ ಗುಣ, ಮನೆಗೆ ಬಂದವರನ್ನು ಹಾಗೆ ಕಳುಹಿಸದೆ ಕೈಲಾಷ್ಟು ಸಹಾಯಮಾಡುವ `ಸಾಪ್ಸೀದಾ' ಮನೋಭವ ಇಬ್ಬರ ಆಸ್ತಿ. ಇವರ ವ್ಯಕ್ತಿತ್ವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ `ಬಹುಪಾರಾಕು' ಎಂದಿದ್ದಾರೆ. ಶ್ರೀನಿವಾಸ ಶೆಟ್ಟಿ ಮತ್ತು ಶ್ರೀನಿವಾಸ ಪೂಜಾರಿ `ರಾಮಲಕ್ಷ್ಮಣ'ರಂತೆ ಎಂಬ `ಸರ್ಟಿಫಿಕೇಟ್' ಕೂಡಾ ಕೊಟ್ಟಿದ್ದಾರೆ.
ಪ್ರಾಮಾಣಿಕರು ಸಚಿವರಾಗ ಬೇಕು ಎಂಬ ಉದ್ದೇಶವಿದ್ದರೆ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನಿಕ್ಕಿ. ಇನ್ನು ಬಿಲ್ಲವ ಸಮುದಾಯಕ್ಕೆ ಮನ್ನಣೆ ಕೊಡಬೇಕು ಅಂತಾದರೆ ಶ್ರೀನಿವಾಸ ಪೂಜಾರಿ ಅವರಿಗೆ `ಲಕ್' ಕುದುರಲು ಅಡ್ಡಿಯಿಲ್ಲ.
ಶ್ರೀನಿವಾಸ ಶೆಟ್ಟಿ ಅವರಾಗಲೀ ಶ್ರೀನಿವಾಸ ಪೂಜಾರಿ ಅವರಾಗಲೀ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸೋರಲ್ಲ. ಬಿಜೆಪಿ ಮುಖಂಡರು ಇವರ ನಿಷ್ಠೆ ಗುರುತಿಸಿ ಸಚಿವ ಸ್ಥಾನ ಕೊಟ್ಟರೆ ಬೇಡಾ ಎನ್ನಲ್ಲು ಇವರೇನು ಸನ್ಯಾಸಿಗಳಲ್ಲ.
ವರಿಷ್ಠರ ಮಾತುಕತೆ : ಒಂದು ಮೂಲದ ಪ್ರಕಾರ ಬಿಜೆಪಿ ಮುಖಂಡರು ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನದ ಜವಾಬ್ದಾರಿ ಹೊರಬಲ್ಲಿರಾ ಎಂದು ಬಿಜೆಪಿ ಮುಖಂಡರು ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಶ್ರೀನಿವಾಸ ಪೂಜಾರಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಹಾಗೇನಾದರೂ ಆದರೆ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನಿಶ್ಚಿತ.
ಶ್ರೀನಿವಾಸ ಪೂಜಾರಿ ಕೆಳಮಟ್ಟದಿಂದ ರಾಜಕೀಯದಲ್ಲಿ ಮೇಲಕ್ಕೆ ಬಂದವರು. ಇವರ ಪಕ್ಷನಿಷ್ಠೆ ಪ್ರಶ್ನಾತೀತ. ಸಂಘ ಪರಿವಾರದಲ್ಲೂ ಪೂಜಾರಿಗೆ ಒಳ್ಳೆಯ ಹೆಸರಿದೆ. ಅರಳು ಹುರಿದಂತೆ ಮಾತನಾಡುವ ಪೂಜಾರಿ ಅವರು ಮಧ್ಯಮ ವರ್ಗದಿಂದ ಬಂದವರು.
ಕೋಟದಲ್ಲೊಂದು ಇವರ ಸ್ಟುಡಿಯೋ ಇದೆ. ಸ್ಟುಡಿಯೋ ಇವರಿಗೆ ಆಫೀಸು ಹೌದು. ಬಗಲಿಗೆ ಕ್ಯಾಮರಾ ತೂಗುಹಾಕಿ ಕೊಂಡು ಫೋಟೋಗ್ರಫಿ ಮಾಡುತ್ತಿದ್ದ ಇವರಿಗೆ ಜನಸಾಮಾನ್ಯರೊಟ್ಟಿಗೆ ಬೆರೆಯುವ ಸೌಜನ್ಯವಿದೆ. ಬಡತನವನ್ನು ಹತ್ತಿರದಿಂದ ಕಂಡಿದ್ದರಿಂದ ಬಡವರ ತೊಂದರೆ ತಾಪಾತ್ರಯಗಳ ಸ್ಪಷ್ಟ ಅರಿವಿದೆ. ಕೋಟದಲ್ಲಿ ಇವರು ಅಂದು ಶ್ರೀನಿವಾಸಣ್ಣ ಆಗಿದ್ದರೂ, ಶಾಸಕರಾಗಿ ಆಯ್ಕೆಯಾದ ಮೇಲೂ ಅದೇ ಶ್ರೀನಿವಾಸಣ್ಣ! ಅಧಿಕಾರ ಪದವಿ ಬಂದರೆ ಜನ `ಚೇಂಜ್' ಆಗುತ್ತಾರೆ ಎನ್ನುವ ಮಾತಿದೆ. ಆದರೆ ಅದು ಶ್ರೀನಿವಾಸ ಪೂಜಾರಿ ಅವರಿಗೆ ಅನ್ವಯಿಸುವುದಿಲ್ಲ. ಅಂದೂ, ಇಂದೂ ಶುದ್ಧ ಹಸ್ತರಾಗಿದ್ದಾರೆ. ಹಿಂದೆ ಹೇಗೆ ಜನರಿಗೆ ಸಿಗುತ್ತಿದ್ದರೋ ಇಂದೂ ಹಾಗೆ ಸಿಗುತ್ತಾರೆ. ಹೊಟೇಲ್ನಲ್ಲಿ `ಒನ್ಬೈಟೂ' ಕಾಫಿ ಹೀರುತ್ತಾ ಹರಟೆ ಹೊಡೆಯುತ್ತಾರೆ. ಶ್ರೀನಿವಾಸ ಪೂಜಾರಿ ಎಂಎಲ್ಸಿ ಆದರೂ ಒಂದು ಚೂರು ಬದಲಾಗಿಲ್ಲ. ಹಾಗಾಗಿ ಇವರನ್ನು ಯಾರು ಬೇಕಾದರೂ ಎಷ್ಟು ಹೊತ್ತಿಗಾದರೂ `ಮೀಟ್' ಮಾಡಬಹುದು. ಕಚೇರಿಯಲ್ಲಿ ಕುಳಿತು ಕಷ್ಟಸುಖ ಹಂಚಿಕೊಳ್ಳಬಹುದು ಎನ್ನೋದು ಜನಸಾಮಾನ್ಯರ ಅಂಬೋಣ.
ಜಾತಿವಾರು ಲೆಕ್ಕಾಚಾರ : ಸಚಿವ ಸಂಪುಟ ವಿಸ್ತರಣೆಗೆ ಜಾತಿವಾರು ಪ್ರಧಾನತೆ ಕೊಟ್ಟರೆ ಬಿಲ್ಲವ ಸಮಾಜಲೆಕ್ಕಕ್ಕೆ ಬರುತ್ತದೆ. ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಈಡಿಗ ಸಮುದಾಯದ ಹಾಲಪ್ಪ ರಾಜಿನಾಮೆ ನಂತರ ಬಿಲ್ಲವ ಸಮುದಾಯಕ್ಕೆ ಸೇರಿದವರು ಸಚಿವ ಸಂಪುಟದಲ್ಲಿ ಇಲ್ಲ.
ಬೇಳೋರು ಬೆಂಬಲಿಗರು ಈಡಿಗ ಸಮುದಾಯಕ್ಕೆ ಅವಕಾಶ ಕೊಡುವಂತೆ ಒತ್ತಡ ಹಾಕುತ್ತಿದ್ದರೂ, ಅಲ್ಲೊಂದು ಇಲ್ಲೊಂದು ಹೇಳಿಕೆ ನೀಡಿ ರಾಜ್ಯಾಧ್ಯಕ್ಷರ ಸಿಟ್ಟಗೆ ಬೇಳೂರು ಕಾರಣರಾಗಿದ್ದಾರೆ. ಇನ್ನು ಜಾಲಪ್ಪ ಪುತ್ರ ನರಸಿಂಹಮೂರ್ತಿ ನಿಗಮ ಮಂಡಳಿಗೆ ರಾಜಿನಾಮೆ ಕೊಟ್ಟು ಮತ್ತೆ ಹಿಂದಕ್ಕೆ ಪಡೆದು ತಾನೂ ಸಚಿವ ಆಕಾಂಕ್ಷಿ ಎಂದು `ಇನ್ಡೈರೆಕ್ಟ್ ' ಆಗಿ ಸಂದೇಶ ರವಾನಿಸಿದ್ದಾರೆ. ಇನ್ನು ಹಾಲಪ್ಪ ಸಂಪುಟಕ್ಕೆ ಬರೋ ಕಾಲ ದೂರವೇ ಇದೆ. ಹಾಗೆ ನೋಡಿದರೆ ಬೇಳೂರು ಮತ್ತು ನರಸಿಂಹಮೂರ್ತಿ ಅವರ ಹಾಗೆ ಶ್ರೀನಿವಾಸ ಪೂುಜಾರಿ `ಮಿನಿಸ್ಟರ್' ಮಾಡಿ ಎಂದು ಒತ್ತಡ ಹಾಗೂ ಲಾಭಿ ಮಾಡಿಲ್ಲ. ಸಮುದಾಯದ ಮುಖಂಡರ ಮೂಲಕ ಒತ್ತಡ ಹಾಕಿಲ್ಲ. ಶ್ರೀನಿವಾಸ ಪೂಜಾರಿ ಅವರೊಟ್ಟಿಗೆ ಬಿಜೆಪಿ ನಾಯಕರು ಮಾತನಾಡಿದ್ದು ಶ್ರೀನಿವಾಸ ಪೂಜಾರಿ ಬೆಂಬಲಿಗರಲ್ಲಿ ಆಸೆ ಹುಟ್ಟು ಹಾಕಿದೆ.
ಬ್ರಹ್ಮಾವರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅನ್ವೇಷಣೆಯಲ್ಲಿದ್ದಾಗ ಕಣ್ಣಿಗೆ ಬಿದ್ದವರು ಶ್ರೀನಿವಾಸ ಪೂಜಾರಿ.ಮೂರು ಬಾರಿ ಬ್ರಹ್ಮಾವರದಲ್ಲಿ ಚುನಾವಣೆಗೆ ನಿಂತು ಪರಾಜಿತರಾದರೂ ಅಥಿರಥ ಮಹಾರಥರಿಗೆ ಗಿಟುಕು ನೀರು ಕುಡಿಸಿದ್ದರು.
ಪ್ರಥಮಭರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಇವರು ನಿರಾಯಾಸವಾಗಿ ಗೆದ್ದು ಬಂದರು. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಪಂಚಾಯ್ತಿಗಳು ಕಾಂಗ್ರೆಸ್ ಹಿಡಿತದಲ್ಲಿದ್ದರೂ ಇವರು ಎಂಎಲ್ಸಿ ಆದರು. ಇದಕ್ಕೆ ಇವರ ವ್ಯಕ್ತಿತ್ವವೇ ಕಾರಣ. ಪಕ್ಷಾತೀತವಾಗಿ ಎಲ್ಲಾ ಪಂಚಾಯ್ತಿ ಪ್ರತಿನಿಧಿಗಳು ಬೆಂಬಲಿಸಿದ್ದರು. ಚುನಾವಣೆಗೆ ಮುಂಚೆಯೇ ಶ್ರೀನಿವಾಸ ಪೂಜಾರಿ ಗೆಲುವು ನಿಶ್ಚಯವಾಗಿತ್ತ. ಈ ಬಾರಿ ಇವರು ಅವಿರೋಧವಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ.
ಶ್ರೀನಿವಾಸ ಪೂಜಾರಿ : ಸಚಿವ ಸ್ಥಾನದ ಆಕಾಂಕ್ಷಿಯಂತೂ ನಾನಲ್ಲ. ಸಚಿವ ಸ್ಥಾನಕ್ಕಾಗಿ ಲಾಭಿ ಕೂಡಾ ನಡೆಸಿಲ್ಲ. ಸಜ್ಜನ, ಪ್ರಮಾಣಿಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗೋದಾರೆ ಹಾಗೂ ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಅವರಿಗೆ ಕಿರಿಕಿರಿ ಆಗೋದಾದರೆ ನಾನು ಸಚಿವ ಸ್ಥಾನದಿಂದ ಗಾಮದ ದೂರು. ಒಮ್ಮೆ ಬಿಲ್ಲವ ಸಮುದಾಯಕ್ಕೆ ಸಂಪುಟದಲ್ಲಿ ಪ್ರಧಾನತೆ ನೀಡಬೇಕು ಅಂತಾದರೆ ನಾನು ಬಿಲ್ಲವ ವರ್ಗಕ್ಕೆ ಸೇರಿದ್ದೇನೆ ಎಂದು ಶ್ರೀನಿವಾಸ ಪೂಜಾರಿ ಮಾಮರ್ಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆ ಶ್ರೀನಿವಾಸ ಪೂಜಾರಿ ಹೆಸರು ಸಚಿವರ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಸಂಪುಟ ಸೇರುತ್ತರೋ ಬಿಡುತ್ತಾರೋ ಮೂಂದಿನ ಮಾತು. ಸದ್ಯ ಶ್ರೀನಿವಾಸ ಪೂಜಾರಿ ಹೆಸರು `ರೇಸ್'ನಲ್ಲಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕೋಟ ಶ್ರೀನಿವಾಸ ಪೂಜಾರಿ ಸಂಪುಟದಲ್ಲಿ ಸ್ಥಾನ ಸಿಗಲಿ, ಸಗದೇ ಇರಲಿ ಅದಕ್ಕಾಗಿ ಹಪಹಪಿಸುವರಂತೂ ಅಲ್ಲ.

ಹರಿಕೃಷ್ಣ ಬಂಟವಾಳ : ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಅದು ಹಿಂದುಳಿದ ವರ್ಗಕ್ಕೆ ಪ್ರಧಾನತೆ ಸಿಕ್ಕಂತಾಗುತ್ತದೆ.ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಲ್ಲವರು ಬಹುಸಂಖ್ಯಾತರಾಗಿದ್ದಾರೆ. ಬಿಲ್ಲವ ಸಮಾಜದವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಇದು ಬಿಲ್ಲವರೊಟ್ಟಿಗೆ ಹಿಂದುಳಿದವರಿಗೂ ಆಧ್ಯತೆ ಸಿಕ್ಕಂತಾಗುತ್ತದೆ ಎಂದು ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ ಈ ಕನಸಿಗೆ ತಿಳಿಸಿದ್ದಾರೆ.

ಸ್ವಾಮೀಜಿ ಲೆಟರ್ : ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಕನ್ಯಾಡಿ ಮಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಬರೆದಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಬಿಲ್ಲವ ಸಮಾಜ ಕಡೆಗಣಿಸಬಾರದು. ಅವಳಿ ಜಿಲ್ಲೆಯಲ್ಲಿ ಬಿಲ್ಲವರು ಪ್ರಭಲರಾಗಿದ್ದಾರೆ. ಬಿಲ್ಲವ ಸಮಾಜದ ಪ್ರತಿನಿಧಿಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸ್ವಾಮೀಜಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಕಾಗದ ಬರೆದಿದ್ದಾರೆ ಎಂದು ತಿಳಿದುಬಂದಿದೆ.



ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮೂಡಬಿದಿರೆ : ಸ್ಪರ್ಧಾತ್ಮಕ ಮನೋಭಾವ ಆಟಗಾರರಿಗೆ ಅಗತ್ಯ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಮೈಗೂಢಿಸಬೇಕಾಗಿದೆ. ಶಾಲೆಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಶಾಲೆಗಳು ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ರೂಪಿಸುತ್ತಿರುವುದು ಶ್ಲಾಘನಾರ್ಹ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.



ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಪ್ರೌಢಶಾಲೆಯ ಜಯರಾಮ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮೂಡಬಿದಿರೆ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿಭಾಗದ ಕ್ರೀಡಾಕೂಟ 2010 ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ ಊರವರ ಸಹಕಾರ ಶಿಕ್ಷಣ ಸಂಸ್ಥೆಗಳಿಗೆ ದೊರೆತಲ್ಲಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದರು.
ಪಾಲಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಸುನೀತಾ ಎಸ್ ಶೆಟ್ಟಿ ಧ್ವಜಾರೋಹಣಗೈದರು. ದ.ಕ.ಜಿ.ಪಂ. ನಿಕಟಪೂರ್ವಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಗೌರವ ವಂದನೆ ಸ್ವೀಕರಿಸಿದರು. ಮುಖ್ಯಅತಿಥಿಗಳಾಗಿ ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜು ಪ್ರಾಂಶುಪಾಲ ಎಚ್.ಉದಯಕುಮಾರ್ ಹಬ್ಬು, ಮುಂಡ್ಕೂರು ಲಯನ್ಸ್ ಅಧ್ಯಕ್ಷ ಸತ್ಯಶಂಕರ ಶೆಟ್ಟಿ, , ವಿಜೇಂದ್ರ ಪೈ ಅತಿಥಿಗಳಾಗಿದ್ದರು.
ಶಾಲಾ ಸಂಚಾಲಕ ಕೆ.ಸುದರ್ಶನ ಶೆಟ್ಟಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಎಸ್.ಎನ್.ರಾವ್ ಪಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಮುಂದೆ ಓದಿ
9:29 PM

ಕ್ಲಿಕ್...

Posted by ekanasu

ಕ್ಲಿಕ್...












ಚಿತ್ರ: ಅಭಿಲಾಷ್ ಪಿ.ಎಸ್.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಗುಲ್ಬರ್ಗಾ: ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಅರುಣಾ ಚಂದ್ರಶೇಖರ ಪಾಟೀಲ್ ಅವರು ಜಯಗಳಿಸಿದ್ದಾರೆ. ಅರುಣಾ ಚಂದ್ರಶೇಖರ ಪಾಟೀಲ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶಿಲ್ ಜಿ ನಮೋಶಿ ಅವರನ್ನು 3532ಮತಗಳ ಅಂತರದಿಂದ ಸೋಲಿಸಿದರು. ವಿಜಯಿ ಅಭ್ಯರ್ಥಿ 39430 ಮತಗಳನ್ನು ಗಳಿಸಿದರು. ಬಿಜೆಪಿ ಅಭ್ಯರ್ಥಿ 35898 ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಜಯಸಿಂಗ್ ಧರ್ಮಸಿಂಗ್ ಅವರು 35567ಮತಗಳನ್ನು ಪಡೆದರು.
ಸೆಪ್ಟಂಬರ್ 13ರಂದು ನಡೆದ ಚುನಾವಣೆಯಲ್ಲಿ ಒಟ್ಟು 115378 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇ.54.9 ಮತದಾನ ದಾಖಲಾಗಿತ್ತು. ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಆರಂಭವಾಯಿತು. ಜಿಲ್ಲಾಧಿಕಾರಿ ಡಾ.ವಿಶಾಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎ.ಪದ್ಮನಯನ ಮತ್ತಿತರ ಅಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಮತ ಎಣಿಕೆ ಮೇಲುಸ್ತುವಾರಿ ನೋಡಿಕೊಂಡರು. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ಆಯೋಜಿಸಲಾಗಿತ್ತು. ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಚಿಕ್ಕಮಗಳೂರು: ಕಡೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೈ.ಸಿ.ವಿಶ್ವನಾಥ್ ಅವರು ಜಯಭೇರಿ ಬಾರಿಸಿದ್ದಾರೆ. ಅವರು ತಮ್ಮ ಸಮೀಪದ ಸ್ಪರ್ಧೆ ಜೆ.ಡಿ.ಎಸ್ ನ ವೈ.ಎಸ್.ವಿ.ದತ್ತ ಅವರಿಗಿಂತ 13,897 ಅಧಿಕ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ವಿಶ್ವನಾಥ್ ಅವರು 55,796 ಮತಗಳನ್ನು ಪಡೆದರೆ, ದತ್ತ 41,899 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ನ ಕೆ.ಎಂ.ಕೆಂಪರಾಜು 30,330 ಮತಗಳನ್ನು ಪಡೆದು 3ನೇ ಸ್ಥಾನ ಗಳಿಸಿದ್ದಾರೆ. ಮೊದಲನೇ ಸುತ್ತಿನಲ್ಲೇ ಮುನ್ನಡೆ ಪಡೆದುಕೊಂಡ ಬಿಜೆಪಿ ಅಭ್ಯರ್ಥಿ ವಿಶ್ವನಾಥ್, ಪ್ರತೀ ಸುತ್ತಿನಲ್ಲೂ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡು, ಅಂತಿಮವಾಗಿ 17ನೇ ಸುತ್ತಿನಲ್ಲಿ 13,897 ಮತಗಳ ಅಂತರದಲ್ಲಿ ಗೆಲುವಿನ ರೇಖೆಗೆ ಬಂದು ನಿಂತರು. ಸೆಪ್ಟೆಂಬರ್ 13ರಂದು ಉಪಚುನಾವಣೆ ನಡೆದಿತ್ತು.

ಡಾ.ವೈ.ಸಿ.ವಿಶ್ವನಾಥ್ 55,796 (43.58% )
ವೈ.ಎಸ್.ವಿ.ದತ್ತ 41,899 (32.72% )
ಕೆ.ಎಂ.ಕೆಂಪರಾಜು 30,330 (23.69%)

ಮುಂದೆ ಓದಿ

ಭಕ್ತಿ ಸಿಂಚನ
||ಹರೇರಾಮ||

ಒಮ್ಮೊಮ್ಮೆ ನಮ್ಮ ಕೃತಿಯ ಕುರಿತು ನಮ್ಮೊಳಗೇ ಅಚ್ಚರಿ ಮೂಡುವುದುಂಟು.ಇದು ಹೇಗಾಯಿತು ಎನ್ನುವ ಪ್ರಶ್ನೆ ಏಳುವುದುಂಟು ! ಆಗ ಅದು ಕೇವಲ ನಮ್ಮ ಕೃತಿಯಲ್ಲವೆಂದೇ ತಿಳಿಯಬೇಕು.ನಮ್ಮನ್ನು ಮಾಧ್ಯಮವಾಗಿರಿಸಿಕೊಂಡು ಸೃಷ್ಟಿಕರ್ತನೇ ಹೊರ ತರುವ ಕೃತಿಯದು..! ನಮ್ಮ ಕೃತಿಯೇ ಆಗಿದ್ದರೆ, ಹೇಗಾಯಿತು ಎನ್ನುವ ಪ್ರಶ್ನೆಗೆ ಅವಕಾಶವಾದರೂ ಎಲ್ಲಿ?
ತಮ್ಮ ಮುಖದಿಂದಲೇ ತಾನಾಗಿ ಹೊರಹೊಮ್ಮಿದ ‘ಮಾನಿಷಾದ‘ವನ್ನು ತಮ್ಮ ಕಿವಿಯಿಂದಲೇ ಕೇಳಿ ಅಚ್ಚರಿಗೊಂಡರು ವಾಲ್ಮೀಕಿಗಳು..!
ಅಚ್ಚರಿಯ ಆದಿಕವಿತೆಯ ಆವಿರ್ಭಾವಕ್ಕೆ ಪ್ರಪಂಚದ ಪಂಚ ಜೀವಿಗಳು ಸಾಕ್ಷಿ. ಬೇಡನ ಬಾಣಾಘಾತಕ್ಕೆ ಸಿಲುಕಿ ಸಾಯುವ ಪಕ್ಷಿ ಒಂದು ಸಾಕ್ಷಿಯಾದರೆ, ಸಾಯುವ ಪಕ್ಷಿಯನ್ನು ಕಂಡು ನೋಯುವ ಪಕ್ಷಿ, ಇನ್ನೊಂದು ಸಾಕ್ಷಿ !
ಇನ್ನೆರಡು ಮಾನವ ಸಾಕ್ಷಿಗಳು. ವಾಲ್ಮೀಕಿಗಳಿಗೆ ‘ಬೇಡ-ಬೇಡ’ವೆನಿಸಿದ ಬೇಡ..ಬೇಕೆನಿಸಿದ ಭರದ್ವಾಜ…!
ಐದನೆಯದು ಆತ್ಮಸಾಕ್ಷಿ. ಅದು ಬೇರೆ ಯಾರಲ್ಲ..ತನ್ನ ಮತಿ-ಅನುಮತಿಗಳಿಲ್ಲದೆ, ಸಂಕಲ್ಪ ಪ್ರಯತ್ನಗಳಿಲ್ಲದೆ, ತಾನೇತಾನಾಗಿ ತನ್ನೊಳಗಿಂದ ಹೊರಹೊಮ್ಮುವ ಶ್ಲೋಕವೊಂದನ್ನು ಕಂಡು ಮೂಕರಾದ ವಾಲ್ಮೀಕಿಗಳೇ..!




ಈ ಪಂಚ ಸಾಕ್ಷಿಗಳಲ್ಲಿ ವಾಲ್ಮೀಕಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿದ್ದುದು ಭರದ್ವಾಜನೊಂದಿಗೆ ಮಾತ್ರ. ಪಾಲ್ಗಡಲು ತರಂಗವೊಂದನ್ನು ಕರೆದು ತನ್ನೊಳಗಿನಿಂದ ಉದಯಿಸಿ ಬರುವ ಚಂದ್ರನನ್ನು ತೋರಿಸಿದಂತೆ..
ವಾಲ್ಮೀಕಿಗಳು ಭರದ್ವಾಜನಿಗೆ ಹೇಳಿದರು.

“ಏನು ಸೋಜಿಗವಿದು!? ಛಂದಸ್ಸೂತ್ರದಲ್ಲಿ ಬದ್ಧವಾದ, ಸಮವಾದ ನಾಲ್ಕು ಪಾದಗಳಿಂದ ಶೋಭಿಸುವ, ನಾದ-ಲಯಗಳಲ್ಲಿ ನಲಿಯುವ ಕವಿತಾ ಕಾಮಧೇನುವೇ ಇಳೆಗಿಳಿದು ಬರುವುದನ್ನು ನೋಡು…
ಇದು ಶಾಪವಲ್ಲ, ಶೋಕವಲ್ಲ…ಶ್ಲೋಕವಿದು..ಕರುಣರಸ ಪಾಕವಿದು..!”

ಭರದ್ವಾಜನ ಆತ್ಮ ಅಹುದೆಂದಿತು, ಮನ ಬಾಗಿತು,ತಲೆದೂಗಿತು.ವಾಲ್ಮೀಕಿಗಳ ‘ಮಾನಿಷಾದ’ ಭರದ್ವಾಜನ ಮುಖದಲ್ಲಿ ಮಾರ್ದನಿಸಿತು..
ವಾಲ್ಮೀಕಿಗಳ ಕಿವಿದೆರೆಗಳಲ್ಲಿ ಅಮೃತ ಹೊಕ್ಕಂತೆ, ಅದೇನೋ ತಂಪು-ತೃಪ್ತಿ..ಆತ್ಮಸಂತೋಷ,ಸಮಾಧಾನ!
ಅದೊಂದು ವೃತ್ತ…ವಾಲ್ಮೀಕಿಗಳ ಹೃದಯದಲ್ಲಿ ಹುಟ್ಟಿದ ಶೋಕ..ಮುಖದಲ್ಲಿ ಶ್ಲೋಕವಾಯಿತು! ಭರದ್ವಾಜನ ಕಿವಿಯ ಹಾದಿಯಲ್ಲಿ ಹೃದಯ ಸೇರಿ ಆತನ ಮುಖದಲ್ಲಿ ಪ್ರತಿಧ್ವನಿಸಿತು.
ಅದು ವಾಲ್ಮೀಕಿಗಳ ಕರ್ಣಪಥದ ಮೂಲಕವಾಗಿ ಮತ್ತೊಮ್ಮೆ ತನ್ನ ಮೂಲನೆಲೆಯಾದ ಹೃದಯವನ್ನು ಸೇರುವಾಗ, ಏನಚ್ಚರಿ! ತಾಪವು ತೃಪ್ತಿಯಾಗಿ..ಶೋಕವು ಸಂತೋಷವಾಗಿ ಮಾರ್ಪಟ್ಟಿತ್ತು…!

ತನ್ನ ಮಗುವನ್ನು ತಾನೇ ಕಂಡು ತೃಪ್ತಿಪಡುವ ತಾಯಿಯಂತೆ…ತನ್ನ ಮೊಗವನ್ನೇ ಕನ್ನಡಿಯಲ್ಲಿ ಕಂಡು ನಲಿಯುವ ನಾರಿಯಂತೆ…ತನ್ನದೇ ಪ್ರತಿಧ್ವನಿಯಲ್ಲಿ ವಿಸ್ತರಿಸುವ ಧ್ವನಿಯಂತೆ…
ತನ್ನ ಜ್ಞಾನಕಂದನ ಸ್ವರದಲ್ಲಿ ಅನುರಣಿಸುವ ಕಾವ್ಯಕಂದವನ್ನು ಆಲಿಸಿ ಆನಂದಿಸಿದರು ವಾಲ್ಮೀಕಿಗಳು..
ಗಂಗೆಯಲ್ಲಿ ಬಂದ ಮಹಾಪೂರವು ಮೆಲ್ಲಮೆಲ್ಲನೇ ಇಳಿಯುವಂತೆ, ಒಮ್ಮೆ ಸಾಮಾನ್ಯ ಪ್ರಜ್ಞೆಗೆ ಮರಳಿ,ಮರೆತೇ ಹೋಗಿದ್ದ ತಮಸಾ ಸ್ನಾನಕ್ಕೆ ಉದ್ಯುಕ್ತರಾದರು..!

ಆಕಾಶಕಾಯಗಳು ಅಸಾಮಾನ್ಯ ಕಾರಣಗಳಿಗಾಗಿ ಒಮ್ಮೊಮ್ಮೆ ತಮ್ಮ ಪಥವನ್ನು ಬದಲಾಯಿಸುವುದುಂಟು..ಪುನಃ ಮೂಲಪಥವನ್ನೇ ಸೇರುವುದೂ ಉಂಟು…!ಎಂದಿನಂತೆ ಸ್ನಾನಕ್ಕೆ ಹೊರಟಿದ್ದ ವಾಲ್ಮೀಕಿಗಳನ್ನು ಅದ್ಯಾವುದೋ ದಿವ್ಯಶಕ್ತಿಯೊಂದು ಸೆಳೆದೊಯ್ದು ವಿಚಿತ್ರ ಘಟನಾವಳಿಗಳನ್ನು ನಿರ್ಮಿಸಿ ಮರಳಿ ತಮಸಾ ತೀರಕ್ಕೆ ತಂದಿಳಿಸಿತ್ತು..!

ತಮಸೆಯಲ್ಲಿ ತನ್ಮಯರಾಗಿ ಮುಳುಗಿ ತನು ತೊಳೆದರೂ ವಾಲ್ಮೀಕಿಗಳ ಮನದೊಳಗೆ ‘ಮಾನಿಷಾದ’ ಮರೆಯಾಗಲಿಲ್ಲ..!

ನಮ್ಮಾತ್ಮ ನಮ್ಮ ತನುವಿಗೇ ಸೀಮಿತವಾಗಿದ್ದರೆ ಪರರ ನೋವು-ನಲಿವುಗಳು ನಮಗರಿವಾಗದು..ವಾಲ್ಮೀಕಿಗಳಾದರೋ, ಆತ್ಮವಿಸ್ತಾರವುಳ್ಳವರು..ಸಕಲ ಜೀವಿಗಳಲ್ಲಿಯೂ ತಮ್ಮನ್ನೇ ಕಾಣುವವರು..!
ಆದುದರಿಂದಲೇ ಕ್ರೌಂಚಪಕ್ಷಿಗಳ ಕರುಣಧ್ವನಿ ಅವರ ಹೃದಯದಲ್ಲಿ ಪ್ರತಿಧ್ವನಿಸುತ್ತಿತ್ತು..ಆಶ್ರಮದಲ್ಲಿ ಸುಖಾಸನದಲ್ಲಿ ಸುಖಾಸೀನರಾಗಿ ಕ್ರೌಂಚಕಥೆಯನ್ನು ಮರೆಯಲೋಸುಗವೋ ಎಂಬಂತೆ…
ಅನ್ಯಾನ್ಯ ಕಥೆಗಳನ್ನು ಕಥನ ಮಾಡತೊಡಗಿದರು..ಆದರೆ, ಮರೆತೇನೆಂದರೂ ಮರೆಯಲಾಗದಸ್ಥಿತಿ ಅವರದಾಗಿತ್ತು..ಮನದಲ್ಲಿ ಮಡುಗಟ್ಟಿದ ವಿಷಾದ,ಮುಖದಲ್ಲಿ ಉದ್ಗಾರಗೊಳ್ಳುವ ಮಾನಿಷಾದ…

ಯಾಕೆ ಹೀಗೆ? ಏನಿದು? ಹೇಗಿದು? ಎನ್ನುವ ಪ್ರಶ್ನೆಗಳ ಸಾಲು ಸಾಲು ಮುನಿಮನದಲ್ಲಿ ಸಮುದ್ರಮಥನವನ್ನೇ ಏರ್ಪಡಿಸುವಾಗ ಉತ್ತರದ ಅಮೃತವನ್ನೇ ತರುವಂತೆ..ಚತುರ್ಮುಖ ಬ್ರಹ್ಮನ ಆವಿರ್ಭಾವವಾಯಿತಲ್ಲಿ…!
ಸೃಷ್ಟಿ ರಹಸ್ಯದ ಓನಾಮವನ್ನೇ ತಿಳಿಯದೆ ಪಾಡುಪಡುವ ನಮಗೆ,ಸೃಷ್ಟಿಕರ್ತನೊಡನೆ ತನ್ನ ಕುಟಿಯಲ್ಲಿಯೇ ಮುಖಾಮುಖಿಯಾಗುವ,ಸರಳ ಸಂಭಾಷಣೆಗೈಯುವ ವಾಲ್ಮೀಕಿಗಳು ಅರ್ಥವಾಗದಿದ್ದರೆ ಆಶ್ಚರ್ಯವೇನಿಲ್ಲ…!

ಮಹಾಕಾವ್ಯವೊಂದರ ಸೃಷ್ಟಿಗೆ ನಾಂದಿ ಹಾಡಲು ಸೃಷ್ಟಿಕರ್ತನೇ ಆಗಮಿಸಬೇಕಲ್ಲವೇ…!
ಸೃಷ್ಟಿಯ ಕಾರಕ ಶಕ್ತಿಯೇ ಕಣ್ಣೆದುರು ಬಂದು ನಿಂತಾಗ,ಕ್ಷಣಕಾಲ ಮುನಿಗೆ ಮಾತೇ ನಿಂತಿತು..ವಿಸ್ಮಯ ಮುಸುಕಿತು..!
ಮೈವೆತ್ತ ಸೃಷ್ಟಿಯನ್ನು ಮನಸಾರೆ ಭಾವಿಸಿದರು..ಪೂಜಿಸಿದರು..ವಂದಿಸಿದರು ವಾಲ್ಮೀಕಿಗಳು..ಬಳಿಕ ಬ್ರಹ್ಮನ ಆಣತಿಯಂತೆ ಬಳಿಯಲ್ಲಿಯೇ ಉಪವಿಷ್ಟರಾದರು.

ಕಾವ್ಯಸೃಷ್ಟಿಗೆ ಮೊದಲು ಸೃಷ್ಟಿಪೂಜೆ…!

ದೊಡ್ಡವರ ಸ್ವಭಾವವೇ ಹೀಗೆ..ನಾವು ಯಾವುದನ್ನು ಬಹುದೊಡ್ಡದೆಂದುಕೊಳ್ಳುತ್ತೇವೆಯೋ,ಅದು ಕಣ್ಣೆದುರಿದ್ದರೂ ಮರೆತುಬಿಡುತ್ತಾರವರು..!
ನಾವು ಯಾವುದನ್ನು ಚಿಕ್ಕದೆಂದುಕೊಳ್ಳುತ್ತೇವೆಯೋ,ಅದು ಅವರಿಗೆ ಬಹುದೊಡ್ಡದಾಗಿ ಕಾಣುತ್ತದೆ..!
ವರ್ತಮಾನದಲ್ಲಿ ಪ್ರತ್ಯಕ್ಷವಿರುವ ಸೃಷ್ಟಿಕರ್ತನನ್ನು ಮರೆತು, ಭೂತದಲ್ಲಿ ಮರೆಯಾಗಿ ಹೋದ ಪುಟ್ಟ ಪಕ್ಷಿಗಳೆಡೆಗೆ ಮತ್ತೆ ಹರಿಯಿತು ಮುನಿಮನಸ್ಸು..!

“ಛೆ, ಪಾಪಿಯೇ..! ಅದೆಂಥ ಕೆಡುಕನ್ನೆಸಗಿಬಿಟ್ಟೆ..? ನಿನ್ನ ಅಕಾರಣ ವೈರಕ್ಕೆ,ನೀನೆಸಗಿದ ಅಕಾರಣ ಹಿಂಸೆಗೆ ಧಿಕ್ಕಾರವಿರಲಿ.ಸೊಗಸೇ ಮೈವೆತ್ತ ರೂಪದ, ಮಾಧುರ್ಯವೇ ಮೈವೆತ್ತ ನಾದದ ಕ್ರೌಂಚಪಕ್ಷಿಯನ್ನು ಆ ಅವಸ್ಥೆಯಲ್ಲಿ ಕೊಲ್ಲಲು ಮನವಾದರೂ ಹೇಗಾಯಿತು…?”


ತಮಸಾ ತೀರದ ಘಟನೆಗಳು ತಮಸಾ ತರಂಗಗಳಂತೆ ಒಂದರ ಮೇಲೊಂದು ವಾಲ್ಮೀಕಿಗಳ ಕಣ್ಣಿಗೆ ಕಟ್ಟಿದಂತೆ ಗೋಚರಿಸತೊಡಗಿದವು.
ಮರಣಸಂಕಟದಲ್ಲಿ ಚಡಪಡಿಸುವ ತನ್ನ ವಲ್ಲಭನನ್ನು ಕಂಡು ಅಸಹಾಯಳಾಗಿ ರೋಧಿಸುವ ಕ್ರೌಂಚಿಯನ್ನು ನೆನೆನೆನೆದು ದುಃಖಿಸುತ್ತಾ ತನ್ನನ್ನೇ ಮರೆತ,
ತನ್ನ ಮುಂದೆ ಬ್ರಹ್ಮದೇವನಿರುವನೆಂಬುದನ್ನೂ ಮರೆತ ವಾಲ್ಮೀಕಿಗಳ ಮುಖದಿಂದ ಅಪ್ರಯತ್ನವಾಗಿ ಮಾನಿಷಾದ ಹೊರಹೊಮ್ಮಿತು.
ಅದನ್ನು ಆಲಿಸಿ ಕಮಲದಂತೆ ವಿಕಸಿತವಾದ ಕಮಲಾಸನನ ಮುಖದಿಂದ ಹೊರಹೊಮ್ಮಿದ ನಗು ಆಶ್ರಮವನ್ನು ವ್ಯಾಪಿಸಿತು…ವಾಲ್ಮೀಕಿಗಳಿಗೆ ಆಶ್ಚರ್ಯವನ್ನು ತಂದಿತು..!

ಆಗ ಬ್ರಹ್ಮನ ವಾಣಿಯಾಯಿತು…!

“ನಿನ್ನ ಮುಖದಲ್ಲಿ ಮಾನಿಷಾದದ ರೂಪದಲ್ಲಿ ಸರಸ್ವತಿ ಪ್ರಕಾಶವಾಗುತ್ತಿರುವುದು ನಿನ್ನಿಚ್ಚೆಯಲ್ಲ..ನನ್ನಿಚ್ಚೆ..!
(ವಾಣಿ ಬ್ರಹ್ಮನ ರಾಣಿಯಲ್ಲವೇ..? ತನ್ನ ಪತಿಯ ಅಭಿಪ್ರಾಯ-ಅನುಮತಿಯಿಲ್ಲದೆ ಹೇಗೆ ತಾನೇ ಆಕೆ ಬೇರೊಂದೆಡೆ ಹೋಗಲು ಸಾಧ್ಯ..!?)
ಯಾವುದು ಮೊದಲು ಶೋಕವಾಗಿತ್ತೋ..ಮತ್ತೆ ಶ್ಲೋಕವಾಯಿತೋ..ಅದು ಮುಂದೆ ಮಹಾಕಾವ್ಯವಾಗಬೇಕಾಗಿದೆ…!
ರಾಮಚರಿತವನ್ನು ರಚಿಸು..
ನಾರದರ ಮುಖದಿಂದ ಆ ಧರ್ಮಮೂರ್ತಿಯ, ಗುಣಸಾಗರನ, ಲೋಕೈಕವೀರನ ಚರಿತೆಯನ್ನು ಹೇಗೆ ನೀನು ಕೇಳಿದೆಯೋ, ಹಾಗೆಯೇ ಜಗತ್ತಿಗೆ ಬಿತ್ತರಿಸು.
ನಾರದರು ಬಣ್ಣಿಸುವಾಗ ರಾಮಚರಿತೆಯನ್ನು ಕಿವಿಯಿಂದ ನೋಡಿದ ನೀನು..ಇದೋ, ಈಗ ನನ್ನ ಕೃಪೆಯಿಂದ ಅದನ್ನು ಕಣ್ಣಿನಿಂದಲೇ ನೋಡುವೆ.
ಆದರೆ ಕಣ್ತೆರೆದು ನೋಡುವುದಲ್ಲ, ಧ್ಯಾನಮಗ್ನನಾಗಿ ಕಣ್ಮುಚ್ಚಿ ಕುಳಿತ ನಿನ್ನ ಮುಂದೆ ಸಂಪೂರ್ಣ ರಾಮಕಥೆಯೇ ಪ್ರಕಟಗೊಳ್ಳುವುದು ..
ಯಾವ ಘಟನೆಗಳು ರಾಮನ ಜೀವನದಲ್ಲಿ ಲೋಕಾಂತದಲ್ಲಿ ನಡೆದವೋ..ಯಾವ ಘಟನೆಗಳು ಏಕಾಂತದಲ್ಲಿ ನಡೆದವೋ,ಅವೆಲ್ಲವೂ ಹಾಗೆ ಹಾಗೆಯೇ ನಿನ್ನ ಕಣ್ಮುಂದೆ ಗೋಚರಿಸುವುವು.
ಇದೇ ರೀತಿಯ ಶ್ಲೋಕಗಳಿಂದಲೇ ರಾಮಕಥೆಯನ್ನು ಬಣ್ಣಿಸು..ಈ ಕಾವ್ಯದಲ್ಲಿ ನಿನ್ನ ಮಾತೆಂದಿಗೂ ಸುಳ್ಳಾಗದು..
ಎಲ್ಲಿಯವರೆಗೆ ಧರೆಯಲ್ಲಿ ಹಿಮಾಲಯವೇ ಮೊದಲಾದ ಪರ್ವತಗಳಿರುವುವೋ..ಎಲ್ಲಿಯವರೆಗೆ ಗಂಗೆಯೇ ಮೊದಲಾದ ನದಿಗಳು ಹರಿಯುವುವೋ, ಅಲ್ಲಿಯವರೆಗೆ ನೀನು ರಚಿಸಿದ ರಾಮಾಯಣವು ಅಜರಾಮರವಾಗಿ ಉಳಿಯುವುದು.
ಎಲ್ಲಿಯವರೆಗೆ ರಾಮಾಯಣವು ಭೂಮಿಯಲ್ಲಿ ಉಳಿದುಕೊಳ್ಳುವುದೋ..ಅಲ್ಲಿಯವರೆಗೆ ನೀನು ಬ್ರಹ್ಮಲೋಕದಲ್ಲಿ ವಿಹರಿಸುವೆ..”

ಆ ವಾಣಿಯ ಪರ್ಯವಸಾನದಲ್ಲಿ ಬ್ರಹ್ಮದೇವನು ಕಣ್ಮರೆಯಾದನು..ಆದರೆ, ಒಂದೇ ದಿನದಲ್ಲಿ ನಡೆದುಹೋದ, ಊಹೆಗೂ ಮೀರಿದ ಘಟನೆಗಳನ್ನವಲೋಕಿಸತೊಡಗಿದ ಮುನಿಯ ವಿಸ್ಮಯ ಬೆಳೆಯುತ್ತಲೇ ಇದ್ದಿತು..!
ಮೊದಲು ಮನದೊಳಗೆ ಪರಿಪೂರ್ಣ ಪುರುಷನ ಕುರಿತುಮೂಡಿದ ಪ್ರಶ್ನೆ..
ನಾರದರೊಂದಿಗೆ ಸಮಾಗಮ…
ಉತ್ತರರೂಪವಾಗಿ ರಾಮಕಥಾಶ್ರವಣ..
ತಮಸಾಗಮನ..
ಕ್ರೌಂಚಯುಗ್ಮದ ಆನಂದ-ಅವಸಾನಗಳ ದರ್ಶನ…ಮಾನಿಷಾದ…
ಆಶ್ರಮ ಪ್ರತ್ಯಾಗಮನ…
ಮನದಲ್ಲಿಯೇ ಮಾನಿಷಾದ ಮಂಥನ…
ಬ್ರಹ್ಮಾಗಮನ..
ರಾಮಚರಿತೆಯ ಮಹಾಕಾವ್ಯ ರಚನೆಗೆ ನಿರ್ದೇಶನ.
ಆದಿಕಾವ್ಯದ ಅಂಕುರಾರೋಪಣದ ಮೂಲಕವಾಗಿ ಅಖಿಲ ವಿಶ್ವಕ್ಕೆ ನವದಿಶಾ ದರ್ಶನವನ್ನುಮಾಡಿಸಿದ ಆ ದಿನವನ್ನು ಮಹಾದಿನವೆನ್ನದಿರಲಾದೀತೆ…!?

ಶ್ಲೋಕ ಒಂದೇ…!
ಆದರೆ ಮೂವರ ಮುಂದೆ ಉಚ್ಚರಿಸಿದಾಗ ಆದ ಪರಿಣಾಮಗಳು ಸಂಪೂರ್ಣ ಬೇರೆ ಬೇರೆ…!
ಬೇಡನ ಮುಂದೆ ಉದ್ಗರಿಸಿದಾಗ ಯಾವ ಶುಭ ಪರಿಣಾಮವೂ ಆಗಲಿಲ್ಲ..! (ಶಾಪದ ದುಷ್ಪರಿಣಾಮವನ್ನು ಹೊರತುಪಡಿಸಿ).
ಭರದ್ವಾಜನ ಮುಂದೆ ಉಚ್ಚರಿಸಿದಾಗ ವೃದ್ಧಿಯಾಗದಿದ್ದರೂ ಪ್ರತಿಧ್ವನಿ ಬಂದಿತು…!
ಬ್ರಹ್ಮದೇವನ ಮುಂದೆ ಉಚ್ಚರಿಸಿದಾಗ..ಅದೊಂದು ಮಹಾಕಾವ್ಯಕ್ಕೇ ನಾಂದಿಯಾಯಿತು..!ಕಾವ್ಯಲೋಕದ ನಿರ್ಮಿತಿಗೆ ಮೂಲಶಿಲೆಯಾಯಿತು…!

ಬದುಕಿನಲ್ಲಿ ’ಏನು’ ಎಂಬುದೆಷ್ಟು ಮುಖ್ಯವೋ, ‘ಎಲ್ಲಿ’ ಎಂಬುದೂ ಅಷ್ಟೇ ಮುಖ್ಯವಾಗುತ್ತದೆ..
ಹೇಳಬಾರದಲ್ಲಿ ಹೇಳಿದರೆ ಆಗಬಾರದ್ದಾಗುತ್ತದೆ .
ಹೇಳಬೇಕಾದಲ್ಲಿ ಹೇಳಿದರೆ ಆಗಬೇಕಾದದ್ದೇ ಆಗುತ್ತದೆ..ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ…!

ದಿವಿಯಲ್ಲಿ ದೇವತೆಗಳ ಸಂದೋಹವೇ ಇರುವಾಗ, ವಾಲ್ಮೀಕಿಗಳ ಬಳಿ ಬ್ರಹ್ಮದೇವನೇ ಬರಬೇಕೇಕೆ..?
ಶ್ರೀರಾಮ ಯಾರ ಅವತಾರವೋ, ಆ ಮಹಾವಿಷ್ಣುವೇ ಬರಬಹುದಿತ್ತು..ಸೀತಾವತಾರಗೈದ ಮಹಾಲಕ್ಷ್ಮಿ ಬರಬಹುದಿತ್ತು.
ಶ್ರೀರಾಮನ ಪರಮಪ್ರಿಯನಾದ ಮಹಾದೇವನೇ ಬರಬಹುದಿತ್ತು..

ಅದು ಹೀಗೆ..
ಸರಸ್ವತಿಯನ್ನು ಧರೆಗೆ ಸರಸ್ವತೀರಮಣನೇ ಕರೆತರಬೇಕು..
ರಾಮಾಯಣವೆಂದರೆ, ಸೃಷ್ಟಿ-ಶಬ್ಧ ಚಿತ್ರ. ಅದರ ಶುಭಾರಂಭಕ್ಕೆ ಸೃಷ್ಟಿಕರ್ತನೇ ಬರಬೇಕು..!
ಅನನ್ಯವಾದ ಜೋಡಿಯದು ಸರಸ್ವತೀ-ಸರಸಿಜಾಸನರದು..

ಬ್ರಹ್ಮನೇ ಜಗತ್ತಿನ ಸಕಲ ವಸ್ತುಗಳನ್ನೂ ಸೃಷ್ಟಿ ಮಾಡುವವನು.
ಒಂದೊಂದು ವಸ್ತುವಿಗೂ ಸಂಬಂಧಿಸಿದ ಶಬ್ಧಗಳನ್ನು ಸೃಷ್ಟಿಸುವುದು ಸರಸ್ವತಿ..
ಅವೆರಡರಲ್ಲಿ (ಶಬ್ಧಾರ್ಥಗಳಲ್ಲಿ)ಸಹಚಾರವಿದ್ದರೆ ಅದುವೇ ಸತ್ಯ..ಅವುಗಳಲ್ಲಿ ವ್ಯಭಿಚಾರ ಬಂದರೆ ಅದುವೇ ಮಿಥ್ಯ..
ಇರುವುದನ್ನೇ ನುಡಿದರೆ ಸತ್ಯ..ಇರುವುದೇ ಬೇರೆ, ನುಡಿಯೇ ಬೇರೆ ಆದರೆ ಅದುವೇ ಮಿಥ್ಯ..
ಶಬ್ಧಾರ್ಥಗಳು ‘ಸಹಿತ’ವಾಗಿದ್ದರೆ, ಅದು ತಾನೆ ‘ಸಾಹಿತ್ಯ’ವೆನಿಸಿಕೊಳ್ಳುವುದು..?
ಶಭಾರ್ಥಗಳ ಮೂಲ ಸ್ರೋತಸ್ಸುಗಳು ಜೊತೆಗೂಡಿ ಬಂದು ಆದಿಕವಿಯನ್ನು ಹರಸಿ ಪ್ರೇರಿಸಿದವು ಆದಿಕಾವ್ಯ ರಚನೆಗೆ..!

ಈ ಮಧ್ಯೆ ಮಾನಿಷಾದ ಬೆಳೆಯತೊಡಗಿತು.ಕ್ಷಣಕ್ಷಣಕ್ಕೂ ಹೆಚ್ಚು ಹೃದಯಗಳನ್ನೂ, ಹೆಚ್ಚು ಮುಖಗಳನ್ನೂ ಆವರಿಸತೊಡಗಿತು…
ಮೊದಲು ವಾಲ್ಮೀಕಿಗಳು.. ಮತ್ತೆ ಜೊತೆಗೆ ಭರದ್ವಾಜ..ಈಗ ಆಶ್ರಮಕ್ಕೆ ಆಶ್ರಮವೇ ಆನಂದ ಆಶ್ಚರ್ಯಗಳೊಂದಿಗೆ ಮಾನಿಷಾದವನ್ನು ಮತ್ತೆ ಮತ್ತೆ ಹಾಡತೊಡಗಿತು…!

ಸಾವಿರ ಯೋಜನಗಳ ಪ್ರಯಾಣ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ..
೨೪,೦೦೦ ಶ್ಲೋಕಗಳ ರಾಮಾಯಣ ರಚನೆ ಮಾನಿಷಾದವೆಂಬ ಒಂದು ಶ್ಲೋಕದಿಂದ ಆರಂಭವಾಯಿತು…!

||ಹರೇರಾಮ||
(ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಮೃತವಚನಗಳ ಅನರ್ಘ್ಯರತ್ನಗಳು http://hareraama.in ವೆಬ್ ನಲ್ಲಿಯೂ ತಾವು ಓದಬಹುದು. - ಸಂ.)

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: 1930 ಕಡೆಂಲೆ ಪರಾರಿ ಮನೆತನದಲ್ಲಿ ಜನಿಸಿದ ಹಿರಿಯ ಸಾಹಿತಿ ಪತ್ರಕರ್ತ ಪರಿಸರ ಹೋರಾಟಗಾರ ಕೆ.ಜೆ ಶೆಟ್ಟಿ ಕಡಂದಲೆ ನಿಧನರಾದರು. ದಿಟ್ಟನಿಲುವಿನ ಬರಹಗಾರ, ನಿವೃತ್ತ ಶಿಕ್ಷಕ, ಜನಪರ ಕಾಳಜಿ ಹೋರಾಟಗಾರ ,ಚಿತ್ರ ನಿರ್ಮಾಪಕ ಕೆ.ಜೆ ಶೆಟ್ಟಿ ಕಡಂದಲೆ (80) ತೀವ್ರ ಅನಾರೋಗ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಪತ್ನಿ, ಮಕ್ಕಳು ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಥೆ ,ಕಾದಂಬರಿ ,ಕವನ ನಗೆಬರಹ, ವಿಡಂಬನಾ ಬರಹ,ಅಂಕಣ ಬರಹಗಳ ಮೂಲಕ ಜನಮನ್ನಣೆ ಗಳಿಸಿದ್ದಲ್ಲದೆ ಸೂಕ್ಷ್ಮ ವಿಚಾರಗಳ ಮೂಲಕ ತಮ್ಮ ಲೇಖನಿ ಜಳಪಿಸುತ್ತಾ ದಿಟ್ಟ ಪತ್ರಕರ್ತರೆಂಬ ಖ್ಯಾತಿಗೆ ಪಾತ್ರರಾಗಿದ್ದರು. ಏಂಜಲ್ ಹಾರ್ಡ್ ಬಣ್ಣದ ಕಂಪೆನಿ ಕಡಂದಲೆ ಯಲ್ಲಿ ತಳವೂರಲು ಹೊರಟಾಗ ಕಡಂದಲೆ ಶಾಂಭವಿ ನದೀ ಹಿತರಕ್ಷಣಾ ಸಮಿತಿ ರೂಪಿಸಿ ಹೋರಾಟಮಾಡಿ ಅದನ್ನು ಅರ್ಧದಲ್ಲೇ ಬಂದ್ ಮಾಡುವಲ್ಲಿ ಯಶಸ್ವಿಯಾದವರು. ಅದಕ್ಕಾಗಿ ಬಳ್ಳಾರಿ ಜೈಲುವಾಸ ಅನುಭವಿಸಿದ್ದರು. ಪಾಡ್ದನ ಆಧಾರಿತ ತುಳುನಾಡ ಸಿರಿ , ಅಬ್ಬಗದಾರಗ ಕೃತಿಗಳು , 8ನಗೆಬರಹ ಸಂಕಲನ, 2 ಕಥಾ ಸಂಕಲನ, ವರದಕ್ಷಿಣೆ ಕನ್ನಡ ಚಲನಚಿತ್ರ ನಿರ್ಮಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಚಂದನ ಮಾಸಿಕ ಪತ್ರಿಕೆಯನ್ನು 15ವರ್ಷ ನಡೆಸಿದ್ದಾರೆ.ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅವರನ್ನರಸಿ ಬಂದಿವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ನವದೆಹಲಿ: ದೆಹಲಿಯಲ್ಲಿ ಕನ್ನಡ ಗೆದ್ದಿದೆ. 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ ವೇಳೆ ಕನ್ನಡಕ್ಕೆ ಭರ್ಜರಿ ಗೆಲುವು.ಎರಡು ಸ್ವರ್ಣ ಕಮಲ ಪ್ರಶಸ್ತಿ ಸೇರಿದಂತೆ ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳು ಕನ್ನಡದ ಪಾಲಾಗಿದ್ದು ಕನ್ನಡಿಗರಿಗೆ ಜೊತೆಗೆ ಕನ್ನಡ ಚಲನಚಿತ್ರ ರಂಗದಲ್ಲಿ ಖುಷಿ ತಂದೊಡ್ಡಿದೆ.ಪಿ ಎನ್ ರಾಮಚಂದ್ರ ಅವರು ನಿರ್ದೇಶಿಸಿರುವ 'ಪುಟಾಣಿ ಪಾರ್ಟಿ' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಆಯ್ಕೆಯಾಗಿದ್ದು ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿದೆ. 'ಪಾ' ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ ಅರುಂಧತಿ ನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ.




ಕನ್ನಡ ಚಲನಚಿತ್ರ ಕ್ಷೇತ್ರದ ಬಗೆಗೆ ಕೆ ಪುಟ್ಟಸ್ವಾಮಿ ಅವರು ಬರೆದಿರುವ ವಿಭಿನ್ನ 'ಸಿನಿಮಾ ಯಾನ' ಕೃತಿಗೆ ಈ ಬಾರಿ ಸ್ವರ್ಣ ಕಮಲ ಬಂದಿರುವುದು ವಿಶೇಷ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬ ಕುದುರೆಯನೇರಿ' ಚಿತ್ರದ ಚಿತ್ರಕಥೆಗಾಗಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಗೋಪಾಲಕೃಷ್ಣ ಪೈ ಅವರಿಗೆ ಲಭಿಸಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ'ಚಿತ್ರವು ರಜತ ಕಮಲ ಪ್ರಶಸ್ತಿಯನ್ನುಗೆದ್ದುಕೊಂಡಿದೆ.




ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ಸಾರ್ವಜನಿಕರು ಸುಖಕರವಾಗಿ ಪ್ರಯಾಣ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮವು ಆಧುನೀಕ ತಂತ್ರಜ್ಞಾನವನ್ನೊಳಗೊಂಡ ಹೈಟೆಕ್ ಬಸ್ಸುಗಳನ್ನು ಪ್ರಯಾಣಿಕರ ಸೇವೆಗಾಗಿ ಬಿಡುಗಡೆಮಾಡಲಿದೆ ಎಂದು ಸಾರಿಗೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಆರ್. ಅಶೋಕ್ ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಧಾನಸೌಧದ ಮುಂಭಾಗದಲ್ಲಿ ಇಂದು ಏರ್ಪಡಿಸಿದ್ದ ಬೆಂಜ್ ಬಸ್ ಸೇವೆಗಳ' ಉದ್ಫಾಟನೆ ಹಾಗೂ ಕಿರುಹೊತ್ತಿಗೆಗಳನ್ನು ಬಿಡುಗಡೆಮಾಡಿ ಮಾತನಾಡುತ್ತಿದ್ದರು.ಸಚಿವರು ಮುಂದುವರೆದು ತಾಂತ್ರಿಕತೆ, ಸುರಕ್ಷತೆ ಹಾಗೂ ಸೇವೆ ಒದಗಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶ್ವದಲ್ಲೇ ಪ್ರಥಮ ಸಾಲಿನಲ್ಲಿ ಇರಲು ಶಕ್ತಿಮೀರಿ ಪ್ರಯತ್ನಿಸಲಾಗಿದೆ ಎಂದರು. ಇಂದು ಬಿಡುಗಡೆ ಮಾಡಲಾದ ಬೆಂಜ್ ಬಸ್ಸುಗಳು ಮೈಸೂರು, ಶಿವಮೊಗ್ಗ, ತಿರುಪತಿ, ಚೆನ್ನೈ ಹಾಗೂ ಹೈದರಾಬಾದ್ಗಳಿಗೆ ತೆರಳಲಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಈ ಬಸ್ಗಳ ಸೇವೆ ಒದಗಿಸಲಾಗುವುದು ಎಂದರು. ಐರಾವತ (ವೋಲ್ವೋ) ವಾಹನಗಳ ಪ್ರಯಾಣ ದರವನ್ನು ಮಾರ್ಪಡಿಸಿ ಬೆಂಜ್ ಬಸ್ಸುಗಳಿಗೂ ದರ ನಿಗದಿಪಡಿಸಲಾಗಿದ್ದು ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದ ಸಾರಿಗೆ ಸಚಿವರು ಸಚಿವರು ತಿಳಿಸಿದರಲ್ಲದೆ, ನಿಗಮಕ್ಕೆ ಈಗ 10 ಮರ್ಸಿಡಿಸ್ ಬೆಂಜ್ ಬಸ್ಸುಗಳು ಸೇರ್ಪಡೆಗೊಂಡಾಂತಾಗಿದೆ ಎಂದರು.ಹೆಚ್ಚಿನ ಗುಣಮಟ್ಟದ ಬಸ್ಸುಗಳನ್ನು ಹಾಗೂ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಸಾರಿಗೆ ಸಂಸ್ಥೆಯು ಸಿದ್ದವಿದೆ ಎಂದ ಅವರು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಬಸ್ಸುಗಳನ್ನು ಬೆಂಗಳೂರಿಗೆ ತರುವ ಮೂಲಕ ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು :ನಮ್ಮ ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ, ಸಂಶೋಧನೆಗಳು ಸದುದ್ದೇಶದ ಗುರಿಯೊಂದಿಗೆ ಸಾಧನೆಯತ್ತ ಕ್ರಮಿಸುವಂತಾಗಲಿ; ಇದರಿಂದ ದೇಶ ಅಭಿವೃದ್ಧಿ ಹೊಂದಲಿ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ ಟಿ.ಸಿ ಶಿವಶಂಕರಮೂರ್ತಿ ಹೇಳಿದರು.
ಸುರತ್ಕಲ್ ನ ಎನ್ ಐ ಟಿ ಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಯುಕ್ತ ಸಹ ಯೋಗದಲ್ಲಿ ಪ್ರೌಢಶಾಲಾ ಮಕ್ಕಳು ಮತ್ತು ಪ್ರಾಧ್ಯಾ ಪಕರಿಗಾಗಿ ಏರ್ಪಡಿಸಿದ 'ಸೃಜನಿಕ' ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರಿಂದು ಮಾತನಾಡುತ್ತಿದ್ದರು.ನಮ್ಮ ಶೈಕ್ಷಣಿಕ ಪರಿಸರ ವಿದ್ಯಾರ್ಥಿ ಗಳಲ್ಲಿ ವಿಜ್ಞಾನದ ಬಗ್ಗೆ, ಸಂಶೋ ಧನೆ ಬಗ್ಗೆ ಕುತೂಹಲ ಮೂಡಿಸು ವಂತಿ ರಬೇಕು; ಇಂದು ಮೂಲ ವಿಜ್ಞಾನದ ಬಗ್ಗೆ ವಿದ್ಯಾ ರ್ಥಿಗಳ ಆಸಕ್ತಿ ಕುಂದಿದ್ದು, ಶೇಕಡ 19ರಷ್ಟು ವಿದ್ಯಾರ್ಥಿ ಗಳು ಮಾತ್ರ ಮೂಲ ವಿಜ್ಞಾನ ವನ್ನು ಆಯ್ಕೆ ಮಾಡು ತ್ತಿರುವ ಬಗ್ಗೆ ಕುಲ ಪತಿಗಳು ಬೇಸರ ವ್ಯಕ್ತ ಪಡಿಸಿದರು. ನಾವಿಂದು ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ಸಾಧನೆ ಗಳನ್ನು ಮಾಡಿದ್ದೇ ವಾದರೂ ಕ್ರಮಿಸ ಬೇಕಾದ ಹಾದಿ ಬಹಳವಿದೆ; ಸವಾ ಲುಗಳು ಸಾಕ ಷ್ಟಿವೆ ಎಂದ ಕುಲ ಪತಿಗಳು, ವಿಜ್ಞಾನಿಗಳು, ಜ್ಞಾನಿಗಳು ಹಾಗೂ ತರಬೇತಿ ಹೊಂದಿದ ಕೌಶಲ್ಯ ಪಡೆದ ಮಾನವ ಸಂಪ ನ್ಮೂಲದ ಅಗತ್ಯ ವನ್ನು ಪ್ರತಿ ಪಾದಿಸಿದರು.



ದೇಶ ಸ್ವಾತಂತ್ರ್ಯ ಪಡೆದು ಹಲವು ವರ್ಷ ಗಳಾದರೂ ಅನಕ್ಷರತೆ, ಜನ ಸಂಖ್ಯಾ ಸ್ಫೋಟ, ಪೌಷ್ಠಿ ಕಾಂಶ ಕೊರತೆ ನಮ್ಮ ಮುಂದಿನ ಪ್ರಮುಖ ಸವಾಲು ಗಳು, ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಗಳಿಂದ ಭಾರತ ಸ್ವಾವ ಲಂಬಿ ಯಾಗಿದೆ. ಬಾಹ್ಯಾಕಾಶ, ಪರಮಾಣು ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರ ಗಳಲ್ಲೂ ದೇಶ ಇಂದು ದಾಖಲಿ ಸಿರುವ ಆರ್ಥಿಕ ಬೆಳವಣಿಗೆ ನಮ್ಮ ವಿಜ್ಞಾನಿಗಳು ಎಲ್ಲ ಕ್ಷೇತ್ರಕ್ಕೂ ನೀಡಿದ ಕೊಡುಗೆಯ ಫಲ ಎಂದರು. ಸೃಜನಿಕೆ ಕಾರ್ಯಾ ಗಾರ ಮಕ್ಕಳಲ್ಲಿ, ಶಿಕ್ಷಕರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಕಲಿಯುವಿಕೆ ಯಲ್ಲಿ ಅಳವಡಿಸಲು ನೆರ ವಾಗಲಿ ಎಂದು ಅವರು ಹೇಳಿದರು.ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ ಎನ್ ಐ ಟಿಕೆ ನಿರ್ದೇಶ ಕರಾದ ಡಾ. ಸಂದೀಪ್ ಸಂಚೇತಿ ಅವರು, ನೋಡಿ ಕಲಿ ಮಾಡಿ ತಿಳಿ ಮೂಲಕ, ಸಂವಾದದ ಮೂಲಕ, ವಿಭಿನ್ನವಾಗಿ ಯೋಚಿಸುವ ಮೂಲಕ ಪ್ರಶ್ನಿಸುವ ಮೂಲಕ ಹಲವು ವಿನೂತ ಗಳನ್ನು ಕಲಿಯುವ ಮತ್ತು ಸಂಶೋಧಿಸಲು ಅನುಕೂಲ ವಾಗಲಿದೆ ಎಂದರು. ಶಾಲೆಗಳಲ್ಲಿ ಕಲಿಯುವಿಕೆ ರೀತಿಯಲ್ಲಿ ಬದಲಾವಣೆ ಇಂದಿನ ತುರ್ತು ಅಗತ್ಯ ಎಂದರು. ವಿಜ್ಞಾನ ಮತ್ತು ಇಂಜಿನಿಯರಿಂಗ್ ಪರಸ್ಪರ ಪೂರಕ ವಿಷಯ ಗಳಾಗಿದ್ದು, ಎರಡು ವಿಷಯವನ್ನು ಪ್ರತ್ಯೇಕಿ ಸುವುದು ಸಲ್ಲ ಎಂದರು. ಉದ್ಘಾಟನಾ ವೇದಿಕೆಯಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಡಾ. ವಿಜಯಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜ್ಞಾನ ಪರಿವೀಕ್ಷಣಾಧಿಕಾರಿ ಸುಬ್ರಹ್ಮಣ್ಯೇಶ್ವರ ಶರ್ಮಾ ಅವರು ಉಪಸ್ಥಿತರಿದ್ದರು. ಡಾ. ಕೆ. ವಿ. ರಾವ್ ಸ್ವಾಗತ ಮತ್ತು ಪ್ರಾಸ್ತಾವನೆ ಗೈದರು.ಕಾರ್ಯಾ ಗಾರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ 180 ವಿದ್ಯಾರ್ಥಿಗಳು ಪಾಲ್ಗೊಳ್ಳ ಬೇಕಿದ್ದು, ಅಪರಾಹ್ನ ದವರೆಗೆ 140 ವಿದ್ಯಾರ್ಥಿಗಳು ಆಗಮಿಸಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಮನೋಭಾವ ಮತ್ತು ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಎರಡು ದಿನಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎನ್ ಎ ಮಧ್ಯಸ್ಥ ಅವರು ಡಾರ್ವಿನ್ ನ ಸಿದ್ದಾಂತದ ಬಗ್ಗೆ ವಿವರಿಸಿದರು. ಶ್ರೀ ಸರ್ವದೆ, ಡಾ. ನರೇಂದ್ರ ನಾಯಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 16 ರಂದು ನಡೆಯುವ ಕಾರ್ಯಾಗಾರದಲ್ಲಿ ಡಾ. ಕೆ. ಬಿ. ರಮೇಶ್, ಡಾ. ಜಯಂತ್, ಡಾ. ಸತ್ಯನಾರಾಯಣ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಡಿ ಬರುವ ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿಗೆ ವಿಶ್ವ ವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ನೆರವಿನಡಿ ಉತ್ತಮ ಕಟ್ಟಡ ಹಾಗೂ ಮೂಲಭೂತ ಸೌಕರ್ಯಕ್ಕೆ ಯೋಜನೆ ರೂಪಿಸಿದ್ದು, 1.50 ಕೋಟಿ ರೂ.ಗಳಲ್ಲಿ ಮುಂದಿನ ವರ್ಷ ಈ ವೇಳೆಗೆ ಕಾಲೇಜಿಗೆ ಉತ್ತಮ ಗ್ರಂಥಾಲಯ, ಮಹಿಳೆಯರ ಹಾಸ್ಟೆಲ್ ಲಭ್ಯವಾಗಲಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಟಿ ಸಿ ಶಿವಶಂಕರಮೂರ್ತಿ ಹೇಳಿದರು.ಅವ ರಿಂದು ಎನ್ ಐ ಟಿಕೆಯಲ್ಲಿ ಸೃಜನಿಕ ಕಾರ್ಯಕ್ರಮದ ಬಳಿಕ ಪತ್ರಕರ್ತ ರೊಂದಿಗೆ ವಿಶ್ವ ವಿದ್ಯಾನಿಲಯ ರೂಪಿಸಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸುತ್ತಿದ್ದರು. ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಆಗಸ್ಟ್ 28ರಂದು ನಡೆದ ಸಭೆಯಲ್ಲಿ ಈ ಕುರಿತು ಒಪ್ಪಿಗೆ ನೀಡಿದ್ದು ಕಾಲೇಜಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲಾಗುವುದು ಎಂದರು.



ಕೊಡಗಿನ ಕುಶಾಲ ನಗರದಿಂದ 12 ಕಿ.ಮೀ ದೂರದಲ್ಲಿರುವ ಚಿಕ್ಕಾಳ್ವದಲ್ಲಿರುವ ಸ್ನಾತಕೋತ್ತರ ಪದವಿಕೇಂದ್ರವನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಸರಕಾರ 70.4 ಎಕರೆ ಭೂಮಿಯನ್ನು ನೀಡಿದೆ ಹಾಗೂ ಅದರ ಪಕ್ಕದಲ್ಲೇ ಇರುವ 30 ಎಕರೆ ಜಮೀನನ್ನು ನೀಡಲು ಒಪ್ಪಿದೆ ಎಂದ ಕುಲಪತಿಗಳು, ಪ್ರಸ್ತುತ ಇಲ್ಲಿ ಮೈಕ್ರೊ ಬಯಾಲಜಿ ಮತ್ತು ಬಯೋಕೆಮಿಸ್ಟ್ರಿ ಕೇಂದ್ರಗಳಿದ್ದು, ಮೂಲಭೂತ ಸೌಕರ್ಯಗಳ ನಿರ್ಮಾಣದ ಬಳಿಕ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗುವುದು ಎಂದರು. ವಿಶ್ವವಿದ್ಯಾನಿಲಯ ಇದಕ್ಕಾಗಿ 8 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು 2 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 27ರಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ನೂತನ ಪಿಜಿ ಕೇಂದ್ರದ ಶಿಲಾನ್ಯಾಸವನ್ನು ಮಾಡಲಿರುವರು ಎಂದರು.
ವಿದ್ಯಾರ್ಥಿಗಳ ಹಿತರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ವಿಶ್ವ ವಿದ್ಯಾಲಯ ಬದ್ಧ ಎಂಬುದನ್ನು ಅವರು ಈ ಸಂದರ್ಭದಲ್ಲ ಪುನರುಚ್ಛರಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

* ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 150ನೇ ಜನ್ಮದಿನ ಬಂತು, ಹೋಯಿತು.
- ರಾಜ್ಯ ಮತ್ತು ಕೇಂದ್ರ ರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ.

* ಪಂಡಿತ ಪುಟ್ಟರಾಜ ಗವಾಯಿಗಳನ್ನು ನೋಡಲು ಜನಸಾಗರ.
- ನಿಜವಾದ ಸೂಪರ್ ಸ್ಟಾರ್ ಎಂದರೆ ಗವಾಯಿಗಳು. ಇದು ಜನರ ಆಯ್ಕೆ.

* ರಾಜ್ಯದ ಪರಿಶಿಷ್ಟರಿಗೆ ಭೂಮಿ.
- ಶಿಷ್ಟರಿಗೆ, ಪರಿಶಿಷ್ಟರಿಗೆ ತುಂಡು ಭೂಮಿ. ಭ್ರಷ್ಟರಿಗೆ, ದುಷ್ಟರಿಗೆ ನುಂಗಿದಷ್ಟೂ ಭೂಮಿ!

* ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ, ಸಿಂಹಗಳ ಸಾವು.
- ಹುಲಿ ರಕ್ಷಣೆಗೆ ಹತ್ತು ಕೋಟಿ, ಸಿಂಹಕ್ಕೆ ಇಪ್ಪತ್ತು ಕೋಟಿ ಘೋಷಿಸಿಲ್ಲ ಸಿ.ಎಂ. ಇನ್ನೂ!




* ರಾಜ್ಯದ ಕೆಲವೆಡೆ ಆನೆಗಳ ಹಾವಳಿ ಮಿತಿಮೀರಿದೆ.
- ಮುವ್ವತ್ತು ಕೋಟಿ?

* ಪ್ರಕೃತಿ ವಿಕೋಪ ನಿಧಿ ಬಳಸಿಕೊಂಡು (ಮಾಜಿ) ಜಿಲ್ಲಾಧಿಕಾರಿಯಿಂದ ಬಂಗಲೆ ನಿರ್ಮಾಣ.
- ಅದು ಆ ಅಧಿಕಾರಿಯ ಪ್ರಕೃತಿ. ಕೋಪ ಅನವಶ್ಯ.

* ರಾಮಚಂದ್ರಗೌಡರನ್ನೀಗ ಕೇಳೋರಿಲ್ಲ.
- ಆದ್ದರಿಂದ ಹರಿಕಥೆ ಸ್ಟಾಪ್?

* ಅಂದು ರಾಮಾಯಣ, ಇಂದು ರಾಮಚಂದ್ರಾಯಣ.
- ಗೌಡಾಯಣ ಅಲ್ಲ. ಏಕೆಂದರೆ ಅದು ಬೇರೆಯವರಿಗೆ ರಿಸರ್ವ್ ಆಗಿದೆ.

* ಹರತಾಳು ಹಾಲಪ್ಪ ಮಾಡಿದ್ದು ಖಾತ್ರಿಯಾಗಿದೆ.
- ಇನ್ನು, ಮಾಡಿದ್ದುಣ್ಣೋ ಮಹರಾಯ.

* ತೆಲಗಿ ದೋಷಿ ಎಂದು ನ್ಯಾಯಾಲಯದ ತೀರ್ಪು
- ಆಸ್ತಿ ನಮ್ಮ ಮಾವನ ಸ್ವಂತದ್ದು ಎಂದು ಅದೇ ದಿನ ತೆಲಗಿಯ ಭಾವೀ ಅಳಿಯನ ಘೋಷಣೆ!

* ವಿದ್ಯುತ್ ಕಡಿತ ಮುಂದುವರಿಯಲಿದೆ.
- ಇದೂ ಒಂದು ಸುದ್ದಿಯೇ?

* ಮಾದಾರ ಚನ್ನಯ್ಯ ಸ್ವಾಮೀಜಿ ಪಾದಯಾತ್ರೆ ಯಶಸ್ವಿ.
- ಇದು ನಿಜಕ್ರಾಂತಿಗೆ ಮುನ್ನುಡಿಯಾದರೆ ಚೆನ್ನಯ್ಯ.

* ಶ್ರೀನಗರದಲ್ಲಿ ನಿಲ್ಲದ ಹಿಂಸಾಚಾರ.
- ಹೀಗೇ ಮುಂದುವರಿದರೆ ಕೊನೆಗೊಂದು ದಿನ ಅದು ಇತಿಶ್ರೀ ನಗರ!

* ಕುಸ್ತಿ ಕೋಚ್ ಸತ್ಪಾಲ್ ಸಿಂಗ್ ಅವರನ್ನು ಅವಮಾನಿಸಿದ ಕ್ರೀಡಾ ಸಚಿವ ಗಿಲ್.
- 'ಗಿಲ್ಲು ಗಿಲ್ಲೆನುತಾ, ಎಂ.ಎಸ್. ಗಿಲ್ಲೇ ತಾನೆನುತಾ, ಬಲ್ಲಿದ ಸತ್ಪಾಲ್ ಸಿಂಗರಮೇಲೆ ಚೆಲ್ಲಿದನೋ ಕೆಸರಾ!'

* 'ಅಕ್ಕ'ಳಿಂದ ಅವಮಾನಿತನಾಗಿ ಬಂದ ಮಿತ್ರ ಹೇಳಿದ, 'ನನ್ನದು ಅಲ್ಲಿ ನಾಯಿಪಾಡಾಗಿತ್ತು!'
- 'ಡಬಲ್ ನಾಯಿಪಾಡು', ಎಂದೆ ನಾನು. 'ಹೇಗೆ?' ಅಂತ ಕೇಳಿದ. 'ನಿಯೋಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇಲ್ಲಿ ನಾಯಿಪಾಡು; ನಿಯೋಗದೊಡನೆ ಹೋಗಿ ಅಲ್ಲಿ ನಾಯಿಪಾಡು', ಎಂದೆ. ಹೌದೆಂದು ಬಾಲ, ಅಲ್ಲ, ಗೋಣು ಅಲ್ಲಾಡಿಸಿದ.

* ಒಂದೇ ದಿನದಲ್ಲಿ ಇಷ್ಟೆಲ್ಲ ಸುದ್ದಿ!
- ಇದು ವಿಶಾಲ ಭಾರತ, ಸ್ವಾಮೀ!

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ
10:08 PM

ಪ್ರಯಾಣ ಪ್ರಯಾಸ

Posted by ekanasu

ರಾಜ್ಯ - ರಾಷ್ಟ್ರ
ಇದು ನಮ್ಮ ರಾಷ್ಟ್ರೀಯ ಹೆದ್ದಾರಿ 13ರ ನೋಟ. ಇಲ್ಲಿ ಪ್ರಯಾಣವೇ ದೊಡ್ಡ ಪ್ರಯಾಸ. !!!












ಮುಂದೆ ಓದಿ

ಭಕ್ತಿ ಸಿಂಚನ

||ಹರೇರಾಮ||

ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು….
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..

“ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು”..

“ನನಗೆ ಸಾವೇ ಇಲ್ಲದಂತೆ ಮಾಡುವೆಯಾ?” – ಸೋಮು ಕೇಳಿದ..!

“ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು”.




“ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು;
ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು…!!!”

“ತಥಾಸ್ತು…”
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .

ಬಹಳ ಕಾಲ ಕಳೆಯಿತು.
ಸೋಮು ಈಗ ಮುಪ್ಪಿನ ಮುದುಕ..!
ಅದೊಂದು ದಿನ ಮತ್ತೆ ಯಮಲೋಕದ ಗೆಳೆಯನ ಆಗಮನವಾಯಿತು….!!

“ಏನು ಬಂದೆ ಗೆಳೆಯಾ ಬಹಳ ಕಾಲದ ನಂತರ…?”

“ಮಾತು ಕೊಟ್ಟಿದ್ದೆನಲ್ಲವೇ? ನಿನಗೆ ಸಾವು ಸನ್ನಿಹಿತವಾಗಿದೆ. ಕರೆದೊಯ್ಯಲು ನಾನೇ ಬಂದೆ..”

ಸೋಮುವಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ…!!
ವರುಷಗಳ ಮೊದಲೇ ತನಗೆ ಸಾವಿನ ಸೂಚನೆ ಸಿಗುವುದೆಂದೂ,ಮತ್ತುಳಿದ ಸಮಯದಲ್ಲಿ ಮತ್ತುಳಿದ ಆಸೆಗಳೆಲ್ಲವನ್ನೂ (ತಿನ್ನುವ,ತಿರುಗುವ,ಕುಡಿಯುವ,..ಇತ್ಯಾದಿ ಇತ್ಯಾದಿ . . .!) ಪೂರೈಸಿಕೊಳ್ಳಬಹುದೆಂದು ಆತ ಭಾವಿಸಿಕೊಂಡಿದ್ದ..
ಆದರೀಗ ಏಕಾಏಕಿ ಸಾವೇ ಎದುರು ಬಂದು ನಿಂತಾಗ ಗೆಳೆಯನ ಮೇಲೆ ಆಕ್ರೋಶವೇ ಉಂಟಾಯಿತು…

“ಹೀಗೂ ಮಿತ್ರದ್ರೋಹ ಮಾಡುವುದುಂಟೆ..!? ಮೇಲಿನ ಲೋಕದವರೂ ಮಾತಿಗೆ ತಪ್ಪಬಹುದೆ?
ಕೊಟ್ಟ ಮಾತಿನಂತೆ ಸಾವಿನ ಮುನ್ಸೂಚನೆಯನ್ನು ನನಗೆ ನೀನು ಕೊಡಬೇಕಿತ್ತಲ್ಲವೇ…?”

ಯಮದೂತನಿತ್ತ ಉತ್ತರ ಸೋಮುವಿನ ಮಾತ್ರವಲ್ಲ, ಸಕಲ ಮಾನವಕೋಟಿಯ ಕಣ್ತೆರೆಸುವ ಹಾಗಿತ್ತು…!!
ಮುಪ್ಪಿನ ಬಗ್ಗೆ ಅಪೂರ್ವವಾದ ,ಅತ್ಯಾಶ್ಚರ್ಯಕರವಾದ ವಿವರಣೆಯೊಂದನ್ನು ಅದು ಒಳಗೊಂಡಿತ್ತು…

“ಗೆಳೆಯಾ, ಅದೆಷ್ಟೋ ಬಾರಿ ಸಾವಿನ ಸೂಚನೆಗಳನ್ನು ನಿನಗೆ ನಾನು ಕೊಟ್ಟೆ. ಆದರೆ ಅವುಗಳನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.
ಮಾತ್ರವಲ್ಲ, ಕೃತ್ರಿಮ ವಿಧಾನಗಳಿಂದ ಆ ಸೂಚನೆಗಳನ್ನೇ ಮರೆಮಾಡಿ ಸುಳ್ಳು ವಿಶ್ವಾಸದಲ್ಲಿ ನೀನು ಬದುಕಿದರೆ ನಾನೇನು ಮಾಡಲಿ..?

ಮೊಟ್ಟಮೊದಲು ನಾನು ನಿನ್ನ ಕೂದಲನ್ನು ಬಿಳಿಯಾಗಿಸಿದೆ – ಆದರೆ ಅವುಗಳಿಗೆ ನೀನು ಕರಿಬಣ್ಣ ಹಚ್ಚಿದೆ…!!

ಮತ್ತೆ ನಿನ್ನ ಕಣ್ಣಿನ ಶಕ್ತಿಯನ್ನು ಕುಂದಿಸಿದೆ – ಆದರೆ ನೀನು ಕನ್ನಡಕ ಹಾಕಿಕೊಂಡೆ…!!

ಆಮೇಲೆ ನಿನ್ನ ಶ್ರವಣಶಕ್ತಿಯನ್ನು ಶಿಥಿಲಗೊಳಿಸಿದೆ – ಆದರೆ ನೀನು ಶ್ರವಣಸಾಧನವನ್ನು ಬಳಸಿದೆಯೇ ಹೊರತು, ನನ್ನ ಸೂಚನೆಯನ್ನರಿಯಲಿಲ್ಲ..!!

ನಂತರ ನಿನ್ನ ಹಲ್ಲುಗಳನ್ನು ಬೀಳಿಸಿದೆ – ನಿನ್ನ ಬಾಯಲ್ಲಿ ಕೃತಕ ಹಲ್ಲುಗಳು ಪ್ರತ್ಯಕ್ಷವಾದವು…!!

ನಾ ನಿನ್ನ ಚರ್ಮವನ್ನು ಸುಕ್ಕಾಗಿಸಿ ಸೌಂದರ್ಯ ಕೆಡಿಸಿದೆ – ಆದರೆ ನೀನು ‘ಮೇಕಪ್’ ಎಂಬ ಚಮತ್ಕಾರದ ಮೂಲಕ ನಾನಿನ್ನೂ ಯುವಕನೆಂಬ ಭ್ರಮೆಯನ್ನು ನೋಡುಗರಲ್ಲಿ ಮೂಡಿಸಲು ಯತ್ನಿಸಿದೆ…!!

ಸೂಚನೆಯ ಸಂದೇಶವನ್ನು ನೀನರಿಯದಿದ್ದರೆ ಅದಕ್ಕೆ ಬೇರೆ ಯಾರು ಹೊಣೆಯಾಗಲು ಸಾಧ್ಯ..?”

ಸೋಮುವಿನ ಬಳಿ ಉತ್ತರವಿರಲಿಲ್ಲ…!!
ಸತ್ಯ ಅರ್ಥವಾಗಿತ್ತು…!
ಆದರೆ ಸಮಯ ಮಿಂಚಿತ್ತು….!!

ನಮಗೆ ಇಷ್ಟವೇ ಇರದ, ಆದರೆ ಬದುಕಿನಲ್ಲಿ ಬಂದೇ ಬರುವ ಒಂದು ಅವಸ್ಥೆಯೆಂದರೆ ..ಮುಪ್ಪು..!!
ಮುಪ್ಪು ಕೆಡುಕಲ್ಲ.. ಮುಕ್ತಾಯದ ಮುನ್ಸೂಚನೆಯದು…!!
ಬದುಕು ಮೃತ್ಯುವಿನಲ್ಲಿ ಮುಕ್ತಾಯವಾಗಬಾರದು. . . . ಮುಕ್ತಿಯಲ್ಲಿ ಮುಕ್ತಾಯವಾಗಬೇಕು…..!
‘ಮುಕ್ತಿ ಸಿದ್ಧತೆಯ ಸಮಯ ಮೀರುತ್ತಿದೆ’ ಎಂಬ ಎಚ್ಚರಿಕೆಯ ಘಂಟೆಯಿದು….!!
ಹಣವೆಂಬ ಸಂಪತ್ತು ಹೋದರೆ ಮತ್ತೆ ಬರಬಹುದು – ಆದರೆ ಸಮಯವೆಂಬ ಸಂಪತ್ತು ಮತ್ತೆ ಬರಲಾರದು…!!
ಮುಪ್ಪೆಂಬುದು ಈಶ್ವರನ ಭಾಷೆ…

ರೈಲು ಪ್ರಯಾಣದಲ್ಲಿ ಇಳಿಯುವ ಸ್ಥಳ ಸಮೀಪಿಸುತ್ತ್ತಿದ್ದರೂ ಇನ್ನೂ ಮಲಗಿರುವ ಮಗುವನ್ನು ತಾಯಿ ತಟ್ಟಿ ಎಬ್ಬಿಸುವುದಿಲ್ಲವೇ..?
ಜೀವನವಾಹನವಾದ ದೇಹವನ್ನೇ ನಾವು ಬಿಟ್ಟು ಹೋಗುವ ಸಮಯ ಹತ್ತಿರ ಬರುವಾಗ ಸಿದ್ಧತೆಗಳಿಗಾಗಿ ಈಶ್ವರನು ನಮ್ಮನ್ನು ಬಡಿದೆಬ್ಬಿಸುವ ರೀತಿಯದು…!

ರಾತ್ರಿ ಮಲಗುವಾಗ ಅಲಾರ್ಮ್ ಇಟ್ಟುಕೊಳ್ಳುವುದುಂಟು..
ಅದು ಬೆಳಿಗ್ಗೆ ಕೂಗಿ ನಮ್ಮನ್ನೆಚ್ಚರಿಸುವಾಗ ಕಿರಿಕಿರಿಯೆನ್ನಿಸುವುದುಂಟು…
ಅಲಾರ್ಮ್ ಕೆಟ್ಟದಲ್ಲ…!!
‘ನಿದ್ದೆಯ ಸಮಯ ಮುಗಿಯಿತು,ಎಚ್ಚರದ ಸಮಯ ಆರಂಭವಾಯಿತು’ ಎನ್ನುವ ಸೂಚನೆಯದು..!!
ಮುಪ್ಪೆಂಬುದು ನಮಗಾಗಿ ಈಶ್ವರನಿಟ್ಟ ಅಲಾರ್ಮ್….!!

ಬಾಲ್ಯ ಆಟದಲ್ಲಿ ಮುಗಿಯಿತು…..
ಯೌವನ ಹುಡುಗಾಟದಲ್ಲಿ…..
ಇಲ್ಲಿ ನಿಜದ ಹುಡುಕಾಟಕ್ಕೆ ಎಡೆಯೆಲ್ಲಿ…?!!

ನಮ್ಮ ಮೈಮರೆವಿನ ನಿದ್ದೆಯನ್ನು ಕಳೆಯಲು…
ಬದುಕಿನ ಸಾರ್ಥಕತೆಯ ಹುಡುಕಾಟಕ್ಕೆ ತೊಡಗಿಸಲು,
ಪ್ರತಿಯೊಂದು ಜೀವಿಯ ಶರೀರದಲ್ಲಿಯೂ ದೇವರು ಮುಪ್ಪೆಂಬ ಎಚ್ಚರಿಕೆ ಗಂಟೆಯನ್ನು ಅಳವಡಿಸಿದ್ದಾನೆ…!!

ಮುಪ್ಪೆಂಬುದು ನಮ್ಮ ಕುರಿತು ಈಶ್ವರನಿಗಿರುವ ಕಾಳಜಿಯ ಪ್ರತೀಕ..!
ಅಡುಗೆ ಮಾಡುವಾಗ ಎದ್ದು, ಕುಳಿತು, ಓಡಾಡಿ, ಗಡಿಬಿಡಿಯಲ್ಲಿ ದುಡಿಯುತ್ತಾನೆ ಮನುಷ್ಯ…!
ಆದರೆ ಊಟ ಮಾಡುವಾಗ ಶಾಂತವಾಗಿ ಕುಳಿತು ಅಡುಗೆಯನ್ನು ಆಸ್ವಾದಿಸುತ್ತಾನೆ…!!
ಬಾಲ್ಯ-ಯೌವನಗಳು ಜೀವನದ ಅಡುಗೆಯಿದ್ದಂತೆ. . !
ಅಲ್ಲಿ ಗಡಿಬಿಡಿ ದುಡಿಮೆಗಳಿವೆ..!!
ಮುಪ್ಪಿರುವುದು ಶಾಂತವಾಗಿ ಬದುಕನ್ನು ಆಸ್ವಾದಿಸಲು…!

ಮುಪ್ಪಿನಲ್ಲಿ ಕಣ್ಣು ಮಂಜಾಗುತ್ತದೆ…
ಕಿವಿ ಮಂದವಾಗುತ್ತದೆ…
ಹಲ್ಲುಗಳು ಶಿಥಿಲವಾಗುತ್ತವೆ…
ದೇಹ ದುರ್ಬಲವಾಗುತ್ತದೆ…
ಹೀಗೆ ಬಾಹ್ಯಶರೀರ ಮತ್ತು ಬಹಿರಿಂದ್ರಿಯಗಳೆಲ್ಲವೂ ಕ್ಷೀಣಿಸುತ್ತವೆ…
ಆದರೆ ಅಂತರಂಗ ಕ್ಷೀಣಿಸುವುದಿಲ್ಲ…..!
ಅದು ಅನುಭವದಿಂದ ಇನ್ನಷ್ಟು ಪಕ್ವವಾಗುತ್ತದೆ…!!
ಅನಗತ್ಯ ವೇಗ ಕಳೆದು ಮನಸ್ಸಿಗೊಂದು ಸಮತೋಲನ ಬರಬೇಕಾದ ಕಾಲವದು…

ಬಗೆದು ನೋಡಿದರೆ ಇದರ ಅರ್ಥ “ಅಂತರ್ಮುಖಿಯಾಗು“ ಎಂದೇ ಅಲ್ಲವೇ…?
ಹೊರಜಗತ್ತಿನೆಡೆಗೆ ಇಂದ್ರಿಯಗಳು ಹರಿಯುವುದು ಅಲ್ಲಿಯ ಸೌಂದರ್ಯವನ್ನು ಸವಿಯಲು – ಆನಂದವನ್ನು ಮೊಗೆಯಲು . . !!
ಆದರೆ, ಅದಕ್ಕಿಂತ ಅದೆಷ್ಟೋ ಮಿಗಿಲಾದ ಆನಂದ-ಸೌಂದರ್ಯಗಳ ನಿಧಿ ನಮ್ಮೊಳಗೇ ಇದೆ!

ಮಾಯೆಯ ಮೋಸವಿದು. . !!

ಆನಂದ-ಸೌಂದರ್ಯಗಳ ತುಣುಕುಗಳನ್ನು ತೋರಿಸಿ ಹೊರಪ್ರಪಂಚದೆಡೆಗೆ ನಮ್ಮನ್ನು ಸೆಳೆದು, ನಮ್ಮೊಳಗೇ ಇರುವ ಆನಂದ ಸೌಂದರ್ಯಗಳ ರಾಶಿಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವುದು…!!

ಈಶ್ವರನ ಕರುಣೆಯಿದು…!!

ಮುಪ್ಪಿನ ಮೂಲಕ ನಮ್ಮ ಬಹಿರಿಂದ್ರಿಯಗಳೆಲ್ಲವನ್ನೂ ಶಿಥಿಲಗೊಳಿಸಿ,
ಅಂತರ್ಮುಖಿಯಾಗಲು ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸುವುದು..?

ನಮ್ಮ ಮೂರ್ಖತೆಯಿದು….!!!

ಸೂಚನೆಯ ಸಂದೇಶವನ್ನರಿಯದೆಯೇ – ಭ್ರಮೆಯಲ್ಲಿಯೇ ವಿಹರಿಸಲೆಳಸುವುದು. . . !!

ಜಾನಪದ ಪದ್ಯವೊಂದು ನೆನಪಾಗುತ್ತಿದೆ…..

>ಮಕ್ಕಳಾಟಿಕೆ ಚಂದ….
ಮತ್ತೆ ಯೌವನ ಚಂದ……
ಮುಪ್ಪಿನಲಿ ಚಂದ ನರೆಗಡ್ಡ…..!!

ಈ ಪದ್ಯದಲ್ಲಿರುವಂತೆ ಯಾವುದೂ ಇಂದು ನಡೆಯುತ್ತಿಲ್ಲವೆನ್ನುವುದೇ ನಮ್ಮ ವಿಷಾದದ ವಿಷಯ…

ಮಕ್ಕಳಾಟಿಕೆ ಚಂದ….

ಮಕ್ಕಳು ಸ್ವತಂತ್ರ ಹಕ್ಕಿಗಳಂತೆ,ತಾಯಿಯ ಹಾಲ್ಕುಡಿದ ಪುಟ್ಟ ಕರುಗಳಂತೆ ನಲಿಯುತ್ತಿದ್ದರೇ ಚೆನ್ನ…!
ಆದರೆ ತಂದೆ-ತಾಯಂದಿರಿಗೆ ಮಕ್ಕಳು ಆಟವಾಡಿದರೆ ಕೋಪವೇ ಬರುತ್ತದೆ…!!
ಮಕ್ಕಳು ಗಂಭೀರವಾಗಿರಬೇಕೆಂದೂ,ದೊಡ್ಡವರ ಹಾಗೆ ಜವಾಬ್ಧಾರಿಯುತರಾಗಿರಬೇಕೆಂದೂ, ದಿನವಿಡೀ ಓದಬೇಕೆಂದೂ ಕಂಡಕಂಡ ದೇವರಲ್ಲಿ ಹರಕೆ ಹೊರುತ್ತಾರೆ…!!
ಆದರೆ ಒಮ್ಮೆ ಕಳೆದುಹೋದ ಆಟದ ವಯಸ್ಸು ಮತ್ತೆ ಬರುವುದೇ…?
ಮಕ್ಕಳು ಮುದುಕರಾದ ಮೇಲೆ ಆಟವಾಡಬೇಕೆ..? (ಅಲ್ಲಿಯವರೆಗೂ ಆಟವಾಡಲು ಬಿಡುವೆಲ್ಲಿ…?!!)

ಮತ್ತೆ ಯೌವನ ಚಂದ…

ಯೌವನ ಚಂದ….ಆದರೆ ಅದು ಬರುವಾಗ ಬರಬೇಕು…!
ತಿನ್ನುವ ಅನ್ನವೇ ನಮ್ಮ ಮನಸ್ಸಾಗುತ್ತದೆ..ನಮ್ಮ ಸ್ವಭಾವವಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು…
ನಮ್ಮ ಆಹಾರದಲ್ಲಿ ಹೈಬ್ರೀಡಿನದ್ದೇ ಸಿಂಹಪಾಲು…!!
ಹೈಬ್ರೀಡೆಂದರೆ ಅನೈಸರ್ಗಿಕವಾಗಿ – ಸಮಯಕ್ಕೆ ಮೊದಲೇ ಬರುವ ಬೆಳೆಯಲ್ಲವೇ…?
ಅದನ್ನೇ ತಿಂದರೆ ಮತ್ತೇನಾಗಬೇಕು…?
ಜೊತೆಗೆ ವಾತಾವರಣದ ಕುಮ್ಮಕ್ಕು ಬೇರೆ….!!
ಹೀಗಾಗಿ…….
ಐದು ವರ್ಷಕ್ಕೇ ಯೌವನ …….
ಇಪ್ಪತ್ತೈದು ವರ್ಷಕ್ಕೇ ವೃದ್ಧಾಪ್ಯ….
ಮುವತ್ತೈದು ವರ್ಷಕ್ಕೇ ಸತ್ತು, ಮತ್ತೆ ಜೀವನವಿಡೀ ಜೀವಚ್ಛವವಾಗಿ ಬದುಕಿರುತ್ತಾರೆ….!!!
ಅವಸ್ಥೆ ಯಾವುದಾದರೂ – ಬರುವ ಸಮಯಕ್ಕೆ ಬಂದರೆ; ಇರುವ ಹಾಗೇ ಇದ್ದರೇ – ಚಂದ ಅಲ್ಲವೇ….?

ಮುಪ್ಪಿನಲಿ ಚಂದ ನರೆ ಗಡ್ಡ….
ಕಾಯಿ ಹಣ್ಣಾಗುವಾಗ ಬಣ್ಣ ಬೇರಾಗುತ್ತದೆ…
ಭಿನ್ನ ಪರಿಮಳ ಬರುತ್ತದೆ…
ಮೃದುತ್ವವೇರ್ಪಡುತ್ತದೆ….
ಅಂತರಂಗ ಮಧುರವಾಗುತ್ತದೆ…!!!

ಇದೆಲ್ಲವೂ ಪಕ್ವತೆಯ ಲಕ್ಷಣಗಳು….
ಮನೆಗೆ ತರುವಾಗ, ಸವಿದು ತಿನ್ನುವಾಗ, ಕಾಯಿಗಳನ್ನು ಪಕ್ಕಕ್ಕಿಟ್ಟು ಹಣ್ಣುಗಳನ್ನೇ ಇಷ್ಟಪಟ್ಟು ಆರಿಸುವ ನಮಗೆ…
ನಮ್ಮದೇ ಜೀವನದಲ್ಲಿ ಪಕ್ವತೆ ಏರ್ಪಡುವಾಗ ಅದೇಕೆ ಜಿಗುಪ್ಸೆಯೋ…..?!!
ಮನುಷ್ಯನೂ ಹಣ್ಣಾಗುವಾಗ ಆತನ “ಬಣ್ಣ“ಬೇರಾಗಬೇಕು..!!
ಅನುಭವದ ಸುಗಂಧ ಸೂಸಬೇಕು…!!

ಅಂತರಂಗ ಮೃದು-ಮಧುರವಾಗಬೇಕು….!!!
ಅದೇಕೆ ಮುಚ್ಚಬೇಕೋ ಮುಪ್ಪನ್ನು…?
ಕಪ್ಪೆಂದರೆ ತಮೋಗುಣ…ಬಿಳಿ ಎಂದರೆ ಸತ್ವಗುಣ….
ಮಸ್ತಿಷ್ಕ ತಮಸ್ಸಿನಿಂದ ಸತ್ವದೆಡೆಗೆ ಸಾಗಬೇಕಿರುವುದನ್ನು ತೋರಿಸಲು, ಕೂದಲಿನ ಕಪ್ಪು ಹೋಗಿ ಬಿಳಿ ಬರುತ್ತದೆ . . .!!
ಬಿಳಿ ತಲೆಗೆ ಕರಿವಿಷ ಹಾಕಿ ಕಪ್ಪು ಮಾಡಿದರೆ…..ಆಗುವ ಲಾಭ ಬರಿಯ ಭ್ರಮೆ ಮಾತ್ರ . . .!
ತಲೆಯೊಳಗಿಳಿಯುವುದು ವಿಷ – ಆತ್ಮಕ್ಕಾಗುವುದು ವಂಚನೆ…
ನೋಡುಗನಲ್ಲುಂಟಾಗುವುದು ಭ್ರಮೆ…!!!

ಸಹಜತೆಯಷ್ಟು ಚಂದ ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ….!!

ಸೃಷ್ಟಿಯನ್ನು ನೋಡಿ….!!

ಸೂರ್ಯನ ಬೆಳಕು . .
ಚಂದ್ರನ ತಂಪು . . .
ಅಗ್ನಿಯ ಬಿಸಿ . . .
ಆಕಾಶದ ಅನಂತತೆ. . .
ಹಿಮಾಲಯದ ಔನ್ನತ್ಯ . . .
ಸಾಗರದ ಆಳ……
ಇವುಗಳೆಲ್ಲವೂ ಸಹಜತೆಯ ಸೊಗಸುಗಳು….!!!!

ಕಾಡು ನೋಡಿ….!!

ಕೋತಿಯ ಬಾಲ…
ಆನೆಯ ಸೊಂಡಿಲು…
ಘೇಂಡಾಮೃಗದ ಕೊಂಬು…
ಸಿಂಹದ ಕೇಸರ…..
ನವಿಲಿನ ಗರಿ……
ಹಾವಿನ ಹೆಡೆ…….
ಇವೆಲ್ಲವೂ ಸಹಜತೆಯ ಸೊಗಸುಗಳು….!!!

ನಾಡು ನೋಡಿದರೆ…….?

…….!?
…… !?
……!?
…..!?

ಮೆರೆಯೋಣ ಸಹಜತೆಯ…..
ಮರೆಯೋಣ ಕೃತಕತೆಯ…..
ಅರಿಯೋಣ “ಜರೆ”ಯ ಸಾರ-ಸಂದೇಶಗಳ….
ಕಳೆಯಿತೈ ಬಹುಕಾಲ…
ಕದ ತಟ್ಟುತಿಹ “ಕಾಲ”….!
ಕಳವಳವ ಬಿಟ್ಟೇಳು…
ನಡೆ ಸತ್ಯದೆಡೆಗೆ….!!

||ಹರೇರಾಮ||

ಮುಂದೆ ಓದಿ

ಸಾಹಿತ್ಯ
ಆಷಾಢದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ... ಮಳೇಲಿ ನೆನೀಬೇಕೆನ್ನುವ ಆಸೆ ಯಾಕೋ ನೀನು ನೆನಪಾಗುತ್ತಿದ್ದೀಯಾ. ನಿನ್ನನ್ನು ಬಿಟ್ಟು ಹೊರಟು ಬಂದು ಇಂದಿಗೆ ಸರಿಯಾಗಿ ಆರು ತಿಂಗಳು... ಹೊರಡಬೇಕಾದರೆ ನಿನ್ನ ಮುಖ ನೋಡೋದಿಲ್ಲ ಅಂತ ಬಂದಿದ್ದೇನೆ... ಹೊರಟು ಬರಲು ಅಂತ ದೊಡ್ಡ ಕಾರಣವೇನೂ ಇರಲಿಲ್ಲ, ಹುಡುಕಿದರೆ ಚಿಕ್ಕ ಕಾರಣವೂ ಸಿಗುವುದಿಲ್ಲ. ತಪ್ಪು ನಂದಾ ನಿಂದಾ... ? ಬಹುಶಃ ಇಬ್ಬರೂ ತಪ್ಪೂ ಮಾಡಿಲ್ಲ ಸರಿನೂ ಇಲ್ಲ... ಯಾವತ್ತೂ ನೀನು ಹೇಳುತ್ತಿದೆ ಗೊಂದಲದ ನಡುವೆ ಬದುಕು ಅಂತ? ಎಷ್ಟು ನಿಜ ಅಲ್ವಾ... ನಿನ್ನನ್ನು ಬಿಟ್ಟು ಒಬ್ಬಳೇ ನೆನೆದೆ ನಿನ್ನ ನೆನಪು ನೆನೆಯೋ ಸವಿ ಉಣ್ಣಲು ಬಿಡಲಿಲ್ಲ. ಬಹುಶಃ ನಿನಗೆ ನನ್ನಂಥ ಕನಸುಗಳಿರಲಿಲ್ಲ. ಆದರೆ ಕನಸು ಇತ್ತು, ಭಾವನೆ ಇತ್ತು ನನ್ನಂತೆ ಹುಟ್ಟಾಸೆಗಳಿತ್ತು. ನೀನು ಮಳೆಹನಿಯಂತೆ ಮೌನಿ, ನಾನು ಗುಡುಗಿನಂತೆ ಮಾತುಗಾರಳು, ಬದುಕನ್ನು ಮಾತಲ್ಲೇ ಮುಗಿಸ್ತೀಯಾ ಎಂದು ಎಷ್ಟೋ ಸಲ ನೀನು ಹೇಳುವುದಿತ್ತು... ಈಗ ಅದೆಲ್ಲವೂ ಬರೀ ನೆನಪಷ್ಟೇ. ನಿನ್ನ ಕನಸು ಬಯಕೆಗಳೆಲ್ಲವೂ ಮರುಭೂಮಿಯ ಮರಳಿನಂತಾಯಿತು... ನನ್ನ ಹುಟ್ಟಾಸೆಗಳೆಲ್ಲ ಮಳೆಬಿದ್ದು ಇಂಗಿದ ನೆಲದಂತಿದೆ... ಬಿದ್ದಷ್ಟೂ ಜಾಸ್ತಿಯಾಗೋ ಇಂಗಿತದಂಥ ಹುಚ್ಚು ಬಯಕೆಗಳು.



ಮನೆಯವರನ್ನು ಕಾಡಿ ಬೇಡಿ ಜಾತಿ ಬಂಧನಬಿಟ್ಟು ಪ್ರೀತಿಯ ಗುಡಿಯಲ್ಲಿ ಒಂದಾಗಿದ್ದೇವೆ. ಸಂಭ್ರಮದ ಕನಸು ಕಂಡು ಬಂದಿದ್ದೇನೆ ಎಲ್ಲವೂ ಭ್ರಮನಿರಸವಾಯ್ತು. ಅಮ್ಮಾ ಹೀಗಾಯ್ತು ಎಂದು ಅಮ್ಮನ ಮಡಿಲಲ್ಲಿ ಬೋರೋ ಎಂದು ಅಳುವ ಹಾಗಿಲ್ಲ. ನಾನೇ ಕಟ್ಟಿಕೊಂಡ ಬದುಕಲ್ವಾ... ಯಾರಲ್ಲೂ ಹೇಳುವಂತಿಲ್ಲ... ಈಗೀಗ ಇಷ್ಟೇ ಬದುಕು ಎಂದು ಅನಿಸಲಾರಂಭಿಸಿದೆ... ಆದರೆ ಹುಟ್ಟಾಸೆ ಇನ್ನೂ ನನ್ನನ್ನು ಜೀವಂತವಾಗಿಸಿದೆ.
ಹೌದು ಕಣೋ ನಾನು ನೀನು ಹೇಳಿದ ಹಾಗೆ ಭಾವುಕಗೂಸ್ಲು. ಯಾರಾದರೂ ಅತ್ತರೆ ನನ್ನ ಕಣ್ಣಲ್ಲಿ ನೀರು ಬರುತ್ತೆ ಜೊತೆ ಜೊತೆಗೆ ಗಂಡುಬೀರಿ ನಿನ್ನ ಜೊತೆ ವಾದಕ್ಕೆ ನಿಲ್ಲುವವಳು. ಆದರೂ ನನ್ನಲ್ಲಿ ಪ್ರೀತಿಯಿತ್ತು. ಮಾತಿತ್ತು, ಮಮತೆಯಿತ್ತು ನಿನ್ನಲ್ಲಿ... ? ಮರದಿಂದ ಕೊಯಿದ ಸಂಪಿಗೆ ಹಂಚುವ ಪ್ರೀತಿಯಲ್ಲಿ, ಸಚಿಜೆಯ ಹೊತ್ತಲ್ಲಿ ಮಲ್ಲಿಗೆ ಮೊಗ್ಗಲ್ಲಿ ನಿನ್ನ ಮುಖವಿತ್ತು, ನಿನಗೆ ನಾನು ಕೊಟ್ಟ ಬುತ್ತಿ ತಿನ್ನುವಾಗಲೂ ನನ್ನ ನೆನಪಾಗಲಿಕ್ಕಿಲ್ಲ... ನಿನಗೆ ನಿನ್ನ ಕೆಲಸ ಮಾತ್ರ ಮುಖ್ಯ ಅಲ್ವಾ.

ನೀನು ಯಾವತ್ತೂ ಬೈಯುತ್ತಿದ್ದೆ, ಸಾಹಿತ್ಯದ ವಿದ್ಯಾರ್ಥಿಗಳ ಇಷ್ಟು ಯಾವುದೋ ಕಾದಂಬರಿ, ಕವನಗಳಲ್ಲಿ ಕಳೆದುಹೋಗ್ತೀರಾ... ವಾಸ್ತವ ಯಾವತ್ತೂ ಮರೀಚಿಕೆಯಂತೆ ಅಂತಾ... ಚಿಕ್ಕಂದಿನಲ್ಲಿಯೂ ನನಗೆ ವಿಜ್ಞಾನ ಅಂದರೆ ಅಷ್ಟಕಷ್ಟೇ ಆದರೆ ಈಗ ಅಲರ್ಜಿನೇ... ನನಗೆ ಕಾದಂಬರಿ ಪುಟಗಳಲ್ಲಿ ಕಳೆದುಹೋಗಿ ನಿನ್ನನ್ನು ಬೇರೆ ಒಂದು ಕಥಾಲೋಕದೊಳಗೆ ಕರೆದುಕೊಂಡು ಹೋಗುವ ಹಂಬಲವಿತ್ತು. ಈಗ ಕಾದಂಬರಿಯನ್ನು ಓದುವಾಗ ದುಃಖ ಉಮ್ಮಳಿಸಿ ಬರುತ್ತದೆ. ಸಮಯ ಸರಿದದ್ದೇ ಗೊತ್ತಾಗುವುದಿಲ್ಲ, ನಕ್ಷತ್ರ ಎಣಿಸ್ತಾ ರಾತ್ರಿ ಕಳೆಯೋ ಬಯಕೆ ಈಗ್ಲೂ ಇದೆ.

ಎಷ್ಟೋ ದಿನ ನಿನ್ನೆದುರಿಗೆ ಕಣ್ಣೀರು ಸುರಿಸಿದ್ದೇನೆ ಯಾಕೆ ಅಂತ ಒಂದಿನಾದ್ರೂ ಕೇಳಿದ್ದೀಯಾ... ಈ ಮನೆಯಲ್ಲಿ ಯಾರೂ ಇಲ್ಲದೆ, ಭಾವನೆಗಳನ್ನು ಹೇಳಲಿಕ್ಕೂ ಆಗದೆ, ಹಾಗೆ ಅದುಮಿಡಲೂ ಆಗದೆ ಸಾಯುತ್ತಿದ್ದೇನೆ. ನಾನು ಮಾಡಿದ ದೊಡ್ಡ ತಪ್ಪೆಂದರೆ ಪ್ರೀತಿಸಿ ನಾನೇ ಮದುವೆಯಾದೆ ನಿನ್ನ. ಪ್ರೀತಿ ಅರ್ಥ ಆಗಲಿಲ್ಲ ನಿನಗೆ... ಕೆಮೆಸ್ಟ್ರಿ ಲ್ಯಾಬೋರೇಟರಿನಲ್ಲಿ ನೀನೂ ಕೆಮಿಕಲ್ ಆಗಿಹೋಗಿದ್ದೀಯಾ... ಅದೇನೋ ಕಂಪ್ಯೂಟರ್ ಮುಂದೆ ಕುಳಿತು ಪುಲ್ಸ್ಟಾಪ್. ಕೊಮ, ಸಮ ಚಿಹ್ನೆಗೂ ಅರ್ಥ ಹುಡುಕ್ತೀಯಾ ಆದರೆ ಅದರಲ್ಲಿ ಅಡಗಿರೋ ಪ್ರೀತಿಯ ಕಣ ನಿಂಗೊತ್ತಾ... ಯಂತ್ರವೇ ಆಗಿಬಿಟ್ಟಿದ್ದೀಯಾ ನಿನ್ನನ್ನು ಬದಲಾಯಿಸಬೇಕೆಂದರೆ ಯಂತ್ರಕ್ಕೆ ನಾನು ಭಾವನೆಯನ್ನು ಕಲಿಸಬೇಕು.
ನೀನು ಬದಲಾಗಬಹುದು ಎಂಬ ಒಂದೇ ಒಚಿದು ಆಸೆಯಿಂದ ಕಾಯುತ್ತಿದ್ದೇನೆ ಬಿಸಿಲ ಬೇಗೆ ತಾಳಲಾರದೆ ಮಳೆಹನಿಗಾಗಿ ಕಾಯೋ ಭುವಿಯಂತೆ ಪ್ರತೀ ಮಳೆಹನಿಯೂ ನನ್ನ ಬೊಗಸೆಯೊಳಗಿದೆ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ... ನಿನ್ನ ಕೈ ಕಂಪ್ಯೂಟರ್ ಒಳಗಡೆ ಏನನ್ನೋ ಹುಡುಕುತ್ತಿರಬಹುದು... ನನ್ನ ಪುಟ್ಟ ಬೊಗಸೆಯಲ್ಲಿ ಸಾವಿರ ತುತ್ತುಗಳಿವೆ... ಆ ತುತ್ತುಗಳು ತನ್ನವನಿಗಾಗಿ ಕಾಯುತ್ತಿವೆ... ನಿನಗಾಗಿಯೂ...

ಅಂತರ್ಮುಖಿ

ಮುಂದೆ ಓದಿ

ನುಡಿಸಿರಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ . ಸಮ್ಮೇಳನವು ಅಕ್ಟೋಬರ ತಿಂಗಳ 29, 30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. ಕನ್ನಡ ಮನಸ್ಸು: ಜೀವನ ಮೌಲ್ಯಗಳು ಎಂಬ ಪ್ರಧಾನ ಪರಿಕಲ್ಪನೆಯಡಿ ಈ ಬಾರಿಯ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು.






ಅವಿಭಜಿತ ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ, ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಮ್ಮ ಕ್ರೌಂಚ ಪಕ್ಷಿಗಳು ಸಂಕಲನಕ್ಕೆ ಪಡೆದಿರುವ ವೈದೇಹಿಯವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ವಹಿಸುವುದು ನಮಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ಅವರು ಅಕ್ಟೋಬರ 29ರಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.ಈ ಬಾರಿಯ ಸಮ್ಮೇಳನವು ನುಡಿಸಿರಿಯ ಏಳನೇ ಸಮ್ಮೇಳನವಾಗಿದ್ದು ಈ ಹಿಂದಿನ ವರ್ಷಗಳಲ್ಲಿ ಬರಗೂರು ರಾಮಚಂದ್ರಪ್ಪ, ಚೆನ್ನವೀರ ಕಣವಿ, ಎಸ್ ಎಲ್ ಭೈರಪ್ಪ, ಚಂದ್ರ ಶೇಖರ ಕಂಬಾರ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಇವರು ಅಧ್ಯಕ್ಷತೆಯನ್ನು ವಹಿಸಿ ನುಡಿಸಿರಿಯನ್ನು ಮುನ್ನಡೆಸಿದ್ದರು.




ವೈದೇಹಿ ಪರಿಚಯ

ವೈದೇಹಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ಮೂಲತ: ಕುಂದಾಪುರದ ಜಾನಕಿ ಶ್ರೀನಿವಾಸ ಮೂರ್ತಿಯವರು ಕವಿತೆ, ಕಥೆ, ನಾಟಕ, ಅಂಕಣ ಬರೆಹ, ಅನುವಾದಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದವರು. ಮರಗಿಡ ಬಳ್ಳಿ, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಇವರ ಕಥಾ ಸಂಕಲನಗಳು. ಬಿಂದು ಬಿಂದಿಗೆ, ಪಾರಿಜಾತ ಎಂಬ ಕವನ ಸಂಕಲನಗಳು ಹಾಗೂ ಅಸ್ಪೃಶ್ಯರು ಇವರ ಕಾದಂಬರಿ.

ಮಕ್ಕಳ ನಾಟಕ ಕ್ಷೇತ್ರಕ್ಕೆ ವೈದೇಹಿಯವರ ಕೊಡುಗೆ ಅನುಪಮ. ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಗೊಂಬೆ ಮ್ಯಾಕ್ಬೆತ್, ಢಾಣಾ ಢಂಗುರ, ನಾಯಿಮರಿ, ಸೂರ್ಯ ಬಂದ, ಝಂ ಝಾಂ ಆನೆ ಮತ್ತು ಪುಟ್ಟ, ಕೋಟು ಗುಮ್ಮ ಮೊದಲಾದ ಹದಿಮೂರು ಮಕ್ಕಳ ನಾಟಕಗಳನ್ನು ಇವರು ಬರೆದಿದ್ದಾರೆ. ಮಲ್ಲಿನಾಥನ ಧ್ಯಾನ ಇವರ ಪ್ರಸಿದ್ಧ ಅಂಕಣ ಬರಹಗಳ ಸಂಕಲನ. ಇವಲ್ಲದೇ ಸೂರ್ಯ ಕಿನ್ನರಿಯರು, ಭಾರತೀಯ ಮಹಿಳೆಯರ ಸ್ವಾತಂತ್ರ್ಯ, ಬೆಳ್ಳಿಯ ಸಂಕೋಲೆಗಳು, ಸಂಗೀತ ಸಂವಾದ ಮೊದಲಾದ ಅನುವಾದಗಳನ್ನು ಇವರು ಮಾಡಿದ್ದಾರೆ. ಜಾತ್ರೆ. ಮೇಜು ಮತ್ತು ಬಡಗಿ, ಸೇಡಿಯಾಪು ನೆನಪುಗಳು ಇವರ ಇತರ ಕೃತಿಗಳು.

ವೈದೇಹಿಯವರ ಕತೆಗಳು ಮರಾಠಿ, ಇಂಗ್ಲಿಷ್, ಮಲಯಾಳ, ತಮಿಳು, ಹಿಂದಿ, ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಸಿನಿಮಾ ಗುಲಾಬಿ ಟಾಕೀಸು.
ಅನುಪಮ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅನುಪಮಾ ಪ್ರಶಸ್ತಿ,ಭಾರ್ಗವ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ಸದೋದಿತ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಸ್ತುತ ಮಣಿಪಾಲದ ಇರುವಂತಿಗೆಯಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸುತ್ತಿದ್ದಾರೆ.

ಮುಂದೆ ಓದಿ

ಸಾಹಿತ್ಯ



ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ.
ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ 'ಹಾಯ್' ಹೇಳಿ ಮುಂದುವರಿಯಬೇಕು. ಒಂದು ಸಲ 'ಹಾಯ್' ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.

ಪೀಠಿಕೆ

ಹರಿಕಥೆಯ ಪೇಳ್ವೆನು ಭಕ್ತರಿಗಿಂದು
ಹರಸುತನೆ ಹರಸುತನೆ ಓದು
ನೀನೂ ಚತುರ್ಥಿಯಂದು...
ಇಲ್ಲಿಗೆ ಬಂದು.
ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ ಆರಂಭವಾಗಬೇಕು. ಎಂದೇ ಈ ಹರಿಕಥೆಯ ಆರಂಭದಲ್ಲಿ ಗಣಪತಿ ಕುರಿತ ಈ ಪದ್ಯ. ಆದರೆ ಈ ಪದ್ಯವು ಸ್ತುತಿಯಲ್ಲ, ವಸ್ತುಸ್ಥಿತಿ. ಬರಲಿರುವ ಚತುರ್ಥಿಯಂದು ಗಣಪ ನಮ್ಮ ಬಳಿಗೆ ಬರುತ್ತಾನಷ್ಟೆ. ಆಗ ಅವನೂ ಓದಲಿ ಈ ಹರಿಕಥೆ.
ಅಂದಹಾಗೆ, ಮೇಲಿನ ಪದ್ಯದಲ್ಲಿ ನಾನು ಎರಡು ಸಲ 'ಹರಸುತನೆ' ಎಂದದ್ದರ ಅರ್ಥ ಇಂತಿದೆ. ಮೊದಲನೆಯದರ ಅರ್ಥ 'ಹರನ ಮಗನೆ' ಎಂದು. ಎರಡನೆಯದರ ಅರ್ಥ 'ಹರಸುತ್ತಲೇ' ಎಂದು. ಹರಿಕಥೆ ದಾಸರ ಶಬ್ದಚಮತ್ಕಾರ ಇದು. ಇಷ್ಟಕ್ಕೂ, ಹರಿಕಥೆಯೆಂದರೆ ಹಾರ್ಮೋನಿಯಂ ತಬಲಾ ಮತ್ತು ಹರಿದಾಸರ ಕೈಯಲ್ಲಿನ ಚಿಟಿಕೆ ಇವುಗಳ ಜೊತೆಗೆ ಅವರ ಬಾಯಿಂದಲೂ ಹೊರಡುವ ನಾನಾ ಬಗೆಯ ಶಬ್ದಗಳ ಅರ್ಥಾತ್ ಸೌಂಡ್ ಗಳ ಚಮತ್ಕಾರವೇ ತಾನೆ!



ನನ್ನ ಈ ಹರಿಕಥೆ ಹರಿಕಥೆಯಲ್ಲ, ಹರಕಥೆ. ಹರಸುತನ ಕಥೆ.
ಹರಿ ಹರ ಒಂದೇ. ಅದು ದಾವಣಗೆರೆಯ ಪಕ್ಕದಲ್ಲಿದೆ. ವಿಶ್ವ ಭೂಪಟದಲ್ಲಿ ಇನ್ನೊಂದು ಹರಿಹರ ನನಗಂತೂ ಕಂಡಿಲ್ಲ.
ಇಷ್ಟಕ್ಕೂ ನನ್ನ ಈ ಹರಿಕಥೆ ಹರಿಕಥಾ ದಾಸರು ಮಾಡುವಂಥ ಆ ಟೈಪ್ ಹರಿಕಥೆ ಅಲ್ಲ.
'ಸುಮ್ನೆ ಹರಿಕಥೆ ಹಚ್ಬೇಡ. ಷಾರ್ಟ್ ಆಗೊ ಹೇಳ್ಬಿಡು', ಅಂತಾರಲ್ಲಾ ಆ ಟೈಪ್ ಹರಿಕಥೆ ಇದು.
('ಪ್ರಿಯ ಮಿತ್ರರೇ, ಹರಿಕಥೆ ಅಂದಾಕ್ಷಣ ಕಥಾವಾಚನ ನಿಲ್ಲಿಸ್ಬಿಡ್ಬೇಡಿ, ಕಂಟಿನ್ಯೂ ಮಾಡಿ; ಸುಮ್ನೆ ಹರಿಕಥೆ ಹಚ್ಚೋಲ್ಲ, ಷಾರ್ಟ್ ಆಗೇ ಹೇಳ್ಬಿಡ್ತೀನಿ; ಸೋ, ಈ ಆರ್ಟಿಕಲ್ ನ ಫುಲ್ ಓದ್ಬಿಡಿ.')

ಕಥೆ

ತಿಪ್ಪೇಶಿ ಎಮ್ಮೆ ಕಟ್ಟಿದ.
ಪಾಸಾದ.
ಎಂ.ಎ. ಪಾಸಾದಮೇಲೆ ಏನು ಮಾಡಬೇಕು? ಪಿ.ಎಚ್.ಡಿ. ಮಾಡಬೇಕು.
ಭಾರತದ ಎಲ್ಲ ತಂದೆತಾಯಂದಿರಂತೆಯೇ ತಿಪ್ಪೇಶಿಯ ಮಾತಾಪಿತೃರೂ ತಮ್ಮ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ತಿಪ್ಪೇಶಿ ಎಮ್ಮೆ ಆದ.
ಪಿ.ಎಚ್.ಡಿ. ಮಾಡಿ ಡಾಕ್ಟರ್ ಆಗಿ ತೋರಿಸ್ತೀನಿ ಅಂದುಕೊಂಡು ಪಿ.ಎಚ್.ಡಿ. ಮಾಡಲು ನಿರ್ಧರಿಸಿದ.
ಯಾವ ವಿಷಯದಮೇಲೆ ಪಿ.ಎಚ್.ಡಿ. ಮಾಡೋದು? ದಿನಪತ್ರಿಕೆಯಮೇಲೆ ಕಣ್ಣಾಡಿಸಿದ. ಆ ದಿನ ಮೂವರು ಪಿ.ಎಚ್.ಡಿ. ಗಳಿಸಿದ ಸುದ್ದಿಗಳಿದ್ದವು. ಅವರು ಆಯ್ದುಕೊಂಡಿದ್ದ ವಿಷಯಗಳು:
(1) ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಭಾರತದಮೇಲೆ ಹಂದಿಜ್ವರದ ಪರಿಣಾಮ.
(2) ದರೋಡೆಕೋರರ ಮನಃಸ್ಥಿತಿ: ಒಂದು ಮನೋ ಅರ್ಥೋ ಸಮಾಜೋ ವೈಜ್ಞಾನಿಕ ವಿಶ್ಲೇಷಣೆ.
(3) ನೊಣ ಹೊಡೆಯುವುದಕ್ಕೂ ಸೊಳ್ಳೆ ಹೊಡೆಯುವುದಕ್ಕೂ ಇರುವ ಸಾಮ್ಯ ಹಾಗೂ ವ್ಯತ್ಯಾಸ: ಒಂದು ಕ್ಷ ಕಿರಣ.
ಊಹ್ಞೂ. ಇಂಥ ಕ್ಲಿಷ್ಟ ದುಷ್ಟ ನಿಕೃಷ್ಟ ವಿಷಯಗಳನ್ನು ಪಿ.ಎಚ್.ಡಿ.ಗೆ ಆಯ್ದುಕೊಳ್ಳಲು ತಿಪ್ಪೇಶಿಯ ಮನಸ್ಸು ಒಪ್ಪಲಿಲ್ಲ. ಯಾವುದಾದರೂ ಸರಳ ಸುಂದರ ಆಕರ್ಷಕ ವಿಷಯ ಆಗಬೇಕು. ಯಾವುದು?
'ಈ ಸಲ ಗಣಪ್ಪಂಗೆ ಸರ್ವಜ್ಞನ ಡ್ರೆಸ್ ಹಾಕಣ್ವಾ ಅಣ್ಣಾ?' ಅಂತ ತಮ್ಮರಾಯ ಕೇಳಿದ್ದೇ ತಡ ತಿಪ್ಪೇಶಿಯ ತಲೆಯಲ್ಲಿ ವಿದ್ಯುತ್ ಸಂಚಾರವಾಯಿತು! (ಈಶ್ವರಪ್ಪನವರಿಗೆ ಹೇಳ್ಬೇಡಿ, ಹರಿಸಿ ಇತ್ಲಾಗೆ ಅಂತಾರೆ.)
'ಗಣಪತಿಯನ್ನು ಬಿಟ್ಟು ಬೇರಾವ ದೇವರನ್ನೂ ನಾವು ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕಿಡುವುದಿಲ್ಲ. ಬೇರಾವ ದೇವರಿಗೂ ಸಲ್ಲದ ಈ ಗೌರವ (ಅಥವಾ ಹಿಂಸೆ) ಗಣಪತಿಗೆ ಮಾತ್ರ ಯಾಕೆ?' ತಿಪ್ಪೇಶಿಯ ಪಿ.ಎಚ್.ಡಿ. ಸಂಶೋಧನೆಗೆ ವಿಷಯ ಸಿಕ್ಕಿಬಿಟ್ಟಿತು.
ಗಜಾನನ, ಏಕದಂತ, ಮಹೋದರ, ವಕ್ರತುಂಡ, ಲಂಬೋದರ, ವಿಘ್ನೇಶ್ವರ, ವಿಘ್ನರಾಜ, ವಿಘ್ನನಾಶಕ, ಸುಮುಖ, ಗಜಕರ್ಣ, ಧೂಮ್ರಜ, ಧೂಮ್ರಕೇತು, ಗಣಾಧಿಪ, ಗಣಾಧ್ಯಕ್ಷ, ಗಣಪತಿ, ಗಣನಾಥ, ಗಣನಾಯಕ, ಗಣೇಶ, ಗೌರೀತನಯ, ಗಜಮುಖ, ಗೌರೀಸುತ, ಹೇರಂಬ, ಭಾಲಚಂದ್ರ, ವಿಕಟ, ಮೂಷಿಕವಾಹನ, ಮೋದಕಹಸ್ತ, ಗಜವದನ, ಸಿದ್ಧಿದಾತ, ವಿಘ್ನಹರ, ವಿನಾಯಕ
ಮುಂತಾದ ಗಣಪತಿಯ ವಿವಿಧ ಹೆಸರುಗಳನ್ನು ಒಂದೇ ಉಸುರಿಗೆ ಒದರಬಲ್ಲ ಪ್ರೊ. ಶಿವಪುತ್ರಪ್ಪಾ ಬಸವರಾಜಪ್ಪಾ ಕಂಚಿನಮನಿ ಇವರು ತಿಪ್ಪೇಶಿಯ ಪ್ರಸ್ತುತ ಸಂಶೋಧನೆಗೆ ಗೈಡ್ ಆದರು.
'ಅವರು ಕಂಚಿನಮನಿ ಇರಲಿಕ್ಕಿಲ್ಲ, ಹಂಚಿನಮನಿ ಇದ್ದಾರು. ಅಥವಾ ಅದು ಇಂಗ್ಲಿಷ್ ಮನಿಯೇ?'
ಹೀಗೊಂದು ಸಂಶಯ ತಿಪ್ಪೇಶಿಗೆ ಬಂದು ಈ ಸಂಶಯಭರಿತ ವಿಷಯವೇ ಸಂಶೋಧನೆಗೆ ಯೋಗ್ಯ ಎಂದು ಅವನಿಗನ್ನಿಸಿತಾದರೂ ಈ ವಿಷಯದ ಸಾರ್ವತ್ರಿಕತೆಯ ಕೊರತೆಯಿಂದಾಗಿ ಇದರ ಸುದ್ದಿಗೆ ಹೋಗದೆ ಗಣಪತಿಗೇ ಅಂಟಿಕೊಂಡ.
ಲೈಬ್ರೆರಿಗಳಿಗೆ ಹೋಗಿ ಪುಸ್ತಕಗಳನ್ನು ತಿರುವಿಹಾಕತೊಡಗಿದ ತಿಪ್ಪೇಶಿ. ಎಲ್ಲ ಪುಸ್ತಕಗಳಲ್ಲಿದ್ದುದೂ ಒಂದೇ ಮಾಹಿತಿ: 'ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಹುರಿದುಂಬಿಸಿ ವಿದೇಶಿ ದಬ್ಬಾಳಿಕೆಯ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಮಹಾನ್ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಗೆ ಸಾರ್ವಜನಿಕ ಉತ್ಸವದ ಮತ್ತು ಸಾರ್ವತ್ರಿಕ ಆಚರಣೆಯ ರೂಪು ನೀಡಿದರು.'
ಇದಿಷ್ಟಕ್ಕೇ ತಿಪ್ಪೇಶಿಗೆ ಸಮಾಧಾನವಾಗಲಿಲ್ಲ. ಇನ್ನೂ ಡೀಟೈಲ್ಗಳಿಗಾಗಿ ತಡಕಾಡಿದ. ತಾಳೆಗರಿ ಗ್ರಂಥಗಳನ್ನು ತಿರುವಿಹಾಕಿದ. ಶಿಲಾಶಾಸನಗಳನ್ನು ಓದಿದ. ಪ್ರಯೋಜನವಾಗಲಿಲ್ಲ. ಕೊನೆಗೊಂದು ದಿನ,
'ಗಜಮುಖನೇ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನಾ ಕಲ್ಪತರು ನೀನೇ'
ಹಾಡನ್ನು ಇಪ್ಪತ್ತೊಂದು ಸಲ ಹಾಡಿ ಮಲಗಿದ.
ಕರೆದರೆ ಓ ಎನ್ನನೇ ಶಿವ(ಸೂ)ನು?
ಆ ರಾತ್ರಿ ತಿಪ್ಪೇಶಿಯ ಕನಸಿನಲ್ಲಿ ಸಾಕ್ಷಾತ್ ಗಣಪತಿಯೇ ಪ್ರತ್ಯಕ್ಷನಾದ!
ತನ್ನ ಪಿ.ಎಚ್.ಡಿ. ವಿಷಯವನ್ನು ಡೀಟೈಲ್ ಆಗಿ ಗಣಪತಿಗೆ ತಿಳಿಸಿದ ತಿಪ್ಪೇಶಿ. ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕೊಳಗಾಗಿರುವುದೇಕೆಂದು ಗಣಪತಿಯನ್ನು ಪ್ರಶ್ನಿಸಿದ.
'ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅವರವರಿಗೆ ಬೇಕಾದ ವೇಷಭೂಷಣಗಳಲ್ಲಿ ಮತ್ತು ಪಾತ್ರಗಳಲ್ಲಿ ನಾನು ಅವತರಿಸುತ್ತೇನೆ ವತ್ಸಾ', ಎಂದ ಗಣಪತಿ.
'ಭಕ್ತರಿಗೆ ಬೇಕಾದ ರೀತಿಯಲ್ಲಿ ಅವತರಿಸುವ ಕೆಲಸವನ್ನು ನೀನು ಮಾತ್ರ ಯಾಕೆ ಮಾಡುತ್ತೀ, ಇನ್ನಾವ ದೇವರೂ ಯಾಕೆ ಮಾಡುವುದಿಲ್ಲ? ಅಥವಾ, ಭಕ್ತರು ಯಾಕೆ ನಿನ್ನನ್ನು ಮಾತ್ರ ತಮಗೆ ಬೇಕಾದ ರೀತಿಗಳಲ್ಲಿ ಅವತರಿಸಿಸುತ್ತಾರೆ, ಬೇರಾವ ದೇವರನ್ನೂ ಆ ರೀತಿಯೆಲ್ಲ ಅವತರಿಸಿಸುವುದಿಲ್ಲ ಯಾಕೆ?' ಎಂದು ಮರುಪ್ರಶ್ನೆ ಹಾಕಿದ ತಿಪ್ಪೇಶಿ. ಆಗ ಗಣಪತಿ ಹೇಳಿದ,
'ವತ್ಸಾ, ಇದಕ್ಕೆ ಉತ್ತರವನ್ನು ನಾನು ಡೀಟೈಲ್ ಆಗಿ ತಿಳಿಸುತ್ತೇನೆ. ಈಗ ಹೇಳತೊಡಗಿ ನಿನ್ನ ಸವಿನಿದ್ದೆಗೆ ಭಂಗ ತರಲಿಚ್ಛಿಸುವುದಿಲ್ಲ. ಹೇಗೂ ನಿನಗೆ ಪಿ.ಎಚ್.ಡಿ.ಗಾಗಿ ಈ ವಿಷಯದಲ್ಲಿ ಮಹಾಪ್ರಬಂಧವೇ ಬೇಕಷ್ಟೆ. ಮಹಾಪ್ರಬಂಧವನ್ನು ನಾನೇ ರಚಿಸಿ ನಿನಗೆ ಈಮೈಲ್ ಮಾಡುತ್ತೇನೆ. ವ್ಯಾಸೋಕ್ತ ಮಹಾಭಾರತವನ್ನು ಸರಸರನೆ ಲೀಲಾಜಾಲವಾಗಿ ಬರೆದು ಮುಗಿಸಿರುವ ನನಗೆ ಈ ನಿನ್ನ ಮಹಾಪ್ರಬಂಧವೇನು ಮಹಾ? ಇದೀಗಲೇ ಬರೆದು ಮುಗಿಸಿ ಈಮೈಲ್ ಮಾಡುತ್ತೇನೆ. ಬೆಳಗ್ಗೆ ಎದ್ದವನು ನೀನು ಕಂಪ್ಯೂಟರ್ನಲ್ಲಿ ಮೈಲ್ಬಾಕ್ಸ್ ಓಪನ್ ಮಾಡು. ನನ್ನ, ಊಹ್ಞೂ, ನಿನ್ನ ಮಹಾಪ್ರಬಂಧ ಅಲ್ಲಿ ರೆಡಿ ಇರುತ್ತದೆ.'
ಇಷ್ಟು ಹೇಳಿದವನೇ ಗಣಪತಿಯು ತಿಪ್ಪೇಶಿಯ ಪ್ರತಿಕ್ರಿಯೆಗೂ ಕಾಯದೆ ಅಂತರ್ಧಾನವಾಗಿಬಿಟ್ಟ.
ಮರುದಿನ ಎದ್ದವನೇ ತಿಪ್ಪೇಶಿಯು ತನ್ನ ಕಂಪ್ಯೂಟರ್ ಬಳಿಗೋಡಿದ. ಗಜಾನನನ ವಾಹನನಾದ ಮೂಷಿಕಪ್ರಭುವಿನ ನೆರವಿನಿಂದ ಈಮೈಲ್ ಬಾಕ್ಸ್ ಓಪನ್ ಮಾಡಿದ.
ವಾಹ್!
ಗಣಪತಿ ಕಳಿಸಿದ ಮಹಾಪ್ರಬಂಧದ ಕಡತ ಅಲ್ಲಿತ್ತು!
ಮೂಷಿಕದ ನೆರವಿಂದ ಆ ಕಡತದಮೇಲೆ ಕೈಬಾಣ ಹಾಯಿಸಿ ಮೂಷಿಕದ ಬೆನ್ನನ್ನು ತನ್ನ ಬೆರಳಿಂದ ಒಮ್ಮೆ ಮೃದುವಾಗಿ ಒತ್ತಿದ. ಕಡತ ತೆರೆದುಕೊಂಡಿತು.
ಓಹ್!
ಇದೇನಿದು?! ಅಂಕಿಗಳನ್ನು ಹೋಲುವ ಗಜಿಬಿಜಿ ಸನ್ನೆಗಳು, ಅರ್ಥವಾಗದ ಭಾಷೆಯ ಹುಚ್ಚಾಪಟ್ಟೆ ಆಕೃತಿಯ ಅಕ್ಷರಗಳು, ಬಗೆಬಗೆಯ ಗೀಟುಗಳು, ನಕ್ಷತ್ರಗಳು ಮತ್ತು ಇನ್ನೂ ಏನೇನೋ ಚಿತ್ರ-ವಿಚಿತ್ರಗಳು! ಇದೆಂಥ ಮಹಾಪ್ರಬಂಧ? ಇದನ್ನು ಓದುವುದಾದರೂ ಹೇಗೆ?
ಕಂಪ್ಯೂಟರ್ ಎಕ್ಸ್ ಪರ್ಟ್ ಮಿತ್ರನೋರ್ವನನ್ನು ಕರೆಸಿದ ತಿಪ್ಪೇಶಿ. ಆ ಮಿತ್ರ,
'ಇದೇನ್ ಮಹಾ. ಒಂದ್ನಿಮಿಷದಲ್ಲಿ ಇದನ್ನ ಸರಿಮಾಡಿಕೊಡ್ತೀನಿ, ಆಗ ಓದ್ಬಹುದು', ಎಂದು ನುಡಿದು ಸರಿಮಾಡಲು ಕುಳಿತ.
ಇಪ್ಪತ್ತೊಂದು ದಿನ ಆಯಿತು, ಇನ್ನೂ ಸರಿಮಾಡುತ್ತಲೇ ಇದ್ದಾನೆ ಆ ಕಂ.ಎ.ಮಿತ್ರ! ಅದು ದೇವರ ಭಾಷೆಯೋ ಅಥವಾ ಕಂಪ್ಯೂಟರ್ ದೋಷವೋ ಅವನಿಗೆ ಗೊತ್ತಾಗುತ್ತಿಲ್ಲ.
ಈ ಮಧ್ಯೆ ಏನಾಯಿತೆಂದರೆ ಗಣಪತಿಯು ತಿಪ್ಪೇಶಿಗೆ ಮಹಾಪ್ರಬಂಧ ಕಳಿಸಿರುವ ಸುದ್ದಿಯು ಅವನ ತಮ್ಮನ ಮುಖೇನ ಜಗತ್ತಿಗೆಲ್ಲ ಟಾಂಟಾಂ ಆಯಿತು. ಪರಿಣಾಮ,
ಭಾರತದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳು ಸದರಿ ಮಹಾಪ್ರಬಂಧವನ್ನು ತೆಕ್ಕೆಗೆ ಹಾಕಿಕೊಳ್ಳಲು ಕ್ಯೂ ಹಚ್ಚಿವೆ! ಈಗಿರುವ ಪೊಸಿಷನ್ನಲ್ಲಿಯೇ ಅದನ್ನು ಸ್ವಾಮ್ಯಸಹಿತ ಸ್ವೀಕರಿಸಿ ತಿಪ್ಪೇಶಿಗೆ ಡಾಕ್ಟರೇಟ್ ದಯಪಾಲಿಸಲು ಅವೆಲ್ಲ ತುದಿಗಾಲಲ್ಲಿ ನಿಂತಿವೆ! ಕಾಲಾಂತರದಲ್ಲಿ ಪ್ರಬಂಧವು ತಿಳಿಯಾದರೆ ವಿಶ್ವವಿದ್ಯಾಲಯಕ್ಕೆ ಭಗವಾನ್ ಪ್ರಣೀತ ವಿಷಯವೊಂದರ ಸ್ವಾಮ್ಯ ದೊರೆತಂತಾಯಿತು. ಒಂದುವೇಳೆ ತಿಳಿಯಾಗದೆಯೇ ಇದ್ದರೂ ನೋ ಪ್ರಾಬ್ಲಮ್, ಭಗವಂತನೇ ಬರೆದು ಕಳಿಸಿದ ಮಹಾಪ್ರಬಂಧವೊಂದರ ಒಡೆತನ - ಯಾವುದೇ ರೂಪದಲ್ಲಾಗಲೀ ಅಂತೂ ಒಡೆತನ - ಎಂದರೇನು ಸಾಮಾನ್ಯವೇ?
ಡಾಕ್ಟರೇಟ್ ಸ್ವೀಕರಿಸಲಿಕ್ಕಾಗಿ ತಿಪ್ಪೇಶಿಯು ಡಿಮಾಂಡ್ ಮಾಡಬಹುದಾದ ಮೊತ್ತವನ್ನು ಅವನಿಗೆ ದಯಪಾಲಿಸಲು ಎಲ್ಲ ವಿ.ವಿ.ಗಳೂ ತುದಿಗಾಲಲ್ಲಿ ನಿಂತಿವೆ. ಇನ್ನು ಹರಾಜು (ಉಲ್ಟಾ ಹರಾಜು) ಪ್ರಕ್ರಿಯೆಯೊಂದೇ ಬಾಕಿ.

ಉಪಸಂಹಾರ
ಈಗ ತಾನೇ ಬಂದ ಸುದ್ದಿ:
ತಿಪ್ಪೇಶಿಯ ಕಂ.ಎ.ಮಿತ್ರನು ಸದರಿ ಪ್ರಬಂಧಭಾಷೆಯನ್ನು ತಿಳಿಗೊಳಿಸುವ ಯತ್ನದಲ್ಲಿ ಆ ಕಡತವನ್ನೇ ಹೊಲಬುಗೆಡಿಸಿಬಿಟ್ಟನಂತೆ! ಪರಿಣಾಮ, ಅದರಲ್ಲಿದ್ದದ್ದೆಲ್ಲ ಅಳಿಸಿಹೋಗಿಬಿಟ್ಟಿದೆಯಂತೆ!
ಎಲ್ಲ ದೈವೇಚ್ಛೆ!
ದೇವರ ವಿಷಯವನ್ನೇ ಕೆದಕಲು ಹೊರಟರೆ ಇನ್ನೇನಾಗುತ್ತದೆ!
ಓಂ ಶ್ರೀ ವಿಘ್ನರಾಜಾಯ ನಮಃ.

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ
| | |Home