ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ನುಡಿಸಿರಿ
ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿದ್ದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ಗೋಧೂಳಿಯ ಸಂದರ್ಭದಲ್ಲಿ ಸಮಾಪನಗೊಂಡಿದೆ. ನೆರೆದ ಸಹಸ್ರ ಸಹಸ್ರ ಸಂಖ್ಯೆಯ ಸಾಹಿತ್ಯಾಭಿಮಾನಿಗಳ ಶಿಸ್ತಿನ ಉಪಸ್ಥಿತಿಯ ನಡುವೆ ಈ ವರ್ಷದ ಸಮ್ಮೇಳನ ಸಮಾಪನಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನಿಸಿದರು. ಸಮ್ಮೇಳನಾಧ್ಯಕ್ಷೆ ವೈದೇಹಿ, ವಿ.ಎಸ್.ಆಚಾರ್, ಕ್ಯಾ.ಗಣೇಶ್ ಕಾರ್ಣಿಕ್ , ಎಂ.ವೀರಪ್ಪ ಮೊಯ್ಲಿ , ಡಾ.ಎಂ.ಮೋಹನ ಆಳ್ವ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಮುಂದೆ ಓದಿ

ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಹತ್ತು ಮಂದಿ ಗಣ್ಯರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನಿಸಿದರು. ವೀರಪ್ಪ ಮೊಯ್ಲಿ, ಬಲಿಪ ನಾರಾಯಣ ಭಾಗವತ, ಲೀಲಾವತಿ ,ಸಂತೋಷ ಕುಮಾರ್ ಗುಲ್ವಾಡಿ ಸೇರಿದಂತೆ ಹತ್ತು ಮಂದಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮ್ಮೇಳನಾಧ್ಯಕ್ಷೆ ವೈದೇಹಿ, ಕ್ಯಾ.ಗಣೇಶ್ ಕಾರ್ಣಿಕ್, ಡಾ.ಎಂ.ಮೋಹನ ಆಳ್ವ ಈ ಸಂದರ್ಭದಲ್ಲಿದ್ದರು.

ಮುಂದೆ ಓದಿ

ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸಮಾಪ್ತಿ ಸಂಭ್ರಮದಲ್ಲಿ ವರ್ಷಧಾರೆಯ ಸವಿ. ಸಂಜೆ 3ರಿಂದ 3.30ರ ತನಕ ಕಾರ್ಯಕ್ರಮಕ್ಕೆ ಒಂದಷ್ಟು ವಿರಾಮ. ಆದರೆ ವರುಣರಾಯ ಈ ಸಂದರ್ಭದ ಸದುಪಯೋಗ ಪಡೆದಿದ್ದ!. ಎಂದೂ ಕಂಡರಿಯದಷ್ಟರ ಮಟ್ಟಿಗೆ ಸರಿಯಾಗಿ 30ನಿಮಿಷಗಳ ಕಾಲ ವರ್ಷಧಾರೆ ಸುರಿಸಿ ಪರಿಸರವನ್ನು ಒಂದಷ್ಟುಕಾಲ ತಣ್ಣಗಾಗುವಂತಾಗಿಸಿದ. ಛೇ...ಈಗ ಮಳೆ ಬಾರಬಾರದಿತ್ತು ಎಂದು ಎಲ್ಲರು ಬಾನಿನತ್ತ ನೋಡುತ್ತಿದ್ದಂತೆಯೇ ಅದೇನು ಮಾಯೆಯೋ ಗೊತ್ತಿಲ್ಲ...ಸರಿಯಾಗಿ 30 ನಿಮಿಷ ವಾಗುತ್ತಿದ್ದಂತೆಯೇ ಒಂದೇ ಬಾರಿಗೆ ನಿಂತುಬಿಟ್ಟಿತು. ಅದು ಆಳ್ವಾಸ್ ನ ಕಾರ್ಯಕ್ರಮಗಳಲ್ಲಾಗುತ್ತಿರುವ "ಸಮಯ ಪ್ರಜ್ಞೆ" ನೆನಪಿಸುವಂತಾಗಿತ್ತು.!

ಮುಂದೆ ಓದಿ

ನುಡಿಸಿರಿ


ವೇದಿಕೆಯ ಮೂಲಕ ಹೇಳುವ ಅವಕಾಶ ನನಗೆ ಒದಗಿಬಂದಿದೆ. ಅದು ಸಂತೋಷ ಕೊಟ್ಟಿದೆ. ಒಟ್ಟಾರೆ ಸಮ್ಮೇಳನ ಅಚ್ಚುಕಟ್ಟುತನದಿಂದ ಕೂಡಿಬಂದಿದ್ದು ಅತ್ಯಂತ ವ್ಯವಸ್ಥಿತರೀತಿಯಲ್ಲಿ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.













ಆಳ್ವಾಸ್ ನುಡಿಸಿರಿಯ ಮಾಧ್ಯಮ ಕೇಂದ್ರಕ್ಕೆ ಸಮ್ಮೇಳನಾಧ್ಯಕ್ಷೆ ವೈದೇಹಿ ಭೇಟಿನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಹೇಳ ಬೇಕಾಗಿದ್ದನ್ನು ಈ ವೇದಿಕೆಯ ಮೂಲಕ ಹೇಳುವ ಅವಕಾಶ ನನಗೆ ಒದಗಿಬಂದಿದೆ. ಅದು ಸಂತೋಷ ಕೊಟ್ಟಿದೆ. ಒಟ್ಟಾರೆ ಸಮ್ಮೇಳನ ಅಚ್ಚುಕಟ್ಟುತನದಿಂದ ಕೂಡಿಬಂದಿದ್ದು ಅತ್ಯಂತ ವ್ಯವಸ್ಥಿತರೀತಿಯಲ್ಲಿ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿತ್ರ: ಪ್ರಕಾಶ್ ಶೆಟ್ಟಿ ಉಳೆಪಾಡಿ/ ಯಶೋಧರ ವಿ.ಬಂಗೇರ

ಮುಂದೆ ಓದಿ
10:37 PM

ರವಿವಾರ ಸಮಾಪ್ತಿ

Posted by ekanasu

ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರಾಯೋಜಿತ ಆಳ್ವಾಸ್ ನುಡಿಸಿರಿ 2010 ರವಿವಾರ ಸಮಾಪ್ತಿಗೊಳ್ಳಲಿದೆ. ಶನಿವಾರ ಜನಸಾಗರವೇ ನುಡಿಸಿರಿಯತ್ತ ಆಗಮಿಸಿತ್ತು. ರವಿವಾರ ನುಡಿಸಿರಿ ಪ್ರಶಸ್ತಿಯನ್ನು ಹತ್ತುಮಂದಿ ಗಣ್ಯರಿಗೆ ಪ್ರದಾನ ಮಾಡಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಲಿಪ ನಾರಾಯಣ ಭಾಗವತ, ಡಾ.ಎಂ.ವೀರಪ್ಪ ಮೊಯಿಲಿ , ಸಂತೋಷ್ ಕುಮಾರ್ ಗುಲ್ವಾಡಿ ಸೇರಿದಂತೆ ಹತ್ತುಮಂದಿ ಈ ಬಾರಿಯ ಪ್ರಶಸ್ತಿ ಪುರಸ್ಕೃತರು.

ಮುಂದೆ ಓದಿ
10:35 PM

ಆಳ್ವಾಸ್ ಸಂಭ್ರಮ

Posted by ekanasu

ನುಡಿಸಿರಿ

ನುಡಿಸಿರಿಯಂಗವಾಗಿ ಸಿಂಗರಿಸಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳು.
ಚಿತ್ರ: ಅಭಿಲಾಷ್ ಪಿ.ಎಸ್.

ಮುಂದೆ ಓದಿ

ನುಡಿಸಿರಿ
ನುಡಿಸಿರಿಯ ದ್ವಿತೀಯ ದಿನದ ಚಿತ್ರನೋಟ ಇಲ್ಲಿವೆ. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಅಭಿಲಾಶ್ ಪಿ.ಎಸ್. ಸೆರೆಹಿಡಿದ ಚಿತ್ರಗಳು ಈಕನಸು.ಕಾಂ.ಓದುಗರಿಗಾಗಿ.














ಮುಂದೆ ಓದಿ

ನುಡಿಸಿರಿ
ಧರ್ಮ ಅಂದರೇನು ಕಡೆಗೂ? ನನಗೆ ಕಾಣುವುದು ಒಂದೇ. ಅದು ಮಾತೃತ್ವದ ಧರ್ಮ. ಧರ್ಮದ ರೂಪವೆ ಹೆಂಗರುಳು. ಉಳಿದೆಲ್ಲವೂ ಪುರುಷಕಟ್ಟಿದ ಅವಾಂತರಗಳು ಹೀಗೆಂದವರು ನುಡಿಸಿರಿ ಅಧ್ಯಕ್ಷೆ ವೈದೇಹಿ.

ಆಳ್ವಾಸ್ ನುಡಿಸಿರಿ 2010 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾತೃತ್ವದ ಧರ್ಮ ಎಂದೆ. ಪುರುಷರಲ್ಲೂ ಮಹಿಳೆಯರಲ್ಲೂ ನೆಲೆಸಿರುವಂಥದು ಅದು. ಕರುಣೆ ಪ್ರೀತಿ ದಯೆ ಅದರ ಲಕ್ಷಣ. ಯೇಸು, ಪೈಗಂಬರ ಗಾಂಧಿ ಬಸವಣ್ಣ ನಾರಾಯಣಗುರು ಎಲ್ಲರೂ ಹೆಂಗರುಳಿನಿಂದ ಜಗತ್ತು ಅರಿತವರು. ಗಾಂಧಿ ಯಾರೊಂದಿಗೂ ತಾಯಿಯಂತೆಯೇ ಜಗಳ ಕಾದರು ಹೊರತು ದಾಯಾದಿಯಂತಲ್ಲ. ಯಾವುದೇ ಮಾನವ ನಿರ್ಮಿತ ಧರ್ಮ ನಿಲ್ಲುವುದು ಇಂಥ ಹೆಂಗರುಳಿನ ಚೇತನರಿಂದ ಚಿಮ್ಮುವ ಪ್ರೀತಿಯಿಂದ. ಅವರ ನಡೆ ನುಡಿ ಕೃತಿ ಆಕೃತಿ ಎಲ್ಲಕೂ ಲೋಕಪ್ರೀತಿಯೇ ಆಧಾರ ಶ್ರುತಿ ಆಗಿರುವುದರಿಂದ.



ಆದರೆ ಮಾತೃತ್ವವನ್ನು ಪೂರ್ತಿ ಮಹಿಳಾಲೋಕಕ್ಕೇ ಗುತ್ತಿಗೆ ಕೊಟ್ಟಂತೆ, ತಾವು ಭಾವಲೋಕವನ್ನು ದಾಟಿದ ವ್ಯವಹಾರಲೋಕಸ್ಥರಂತೆ ಭಾವಿಸಿಕೊಂಡ ಮಂದಿ ಧರ್ಮವನ್ನು ಅನುಕೂಲಾರ್ಥ ಮಾಡಿ ಅದಕ್ಕೆ ಸಂಕೇತ ಸೂತ್ರ ಇತ್ಯಾದಿಗಳಿಂದ ಸಂಕೀರ್ಣ ಮಾಡಿ ಎಟುಕದಷ್ಟು ಎತ್ತರದಲ್ಲಿಟ್ಟರು. ಎಂತಲೇ ಯುಗಪುರುಷರು ಅನುಭಾವಿಗಳು ಅನುಭವಸ್ಥರು ಮತ್ತೆ ಮತ್ತೆ ಧರ್ಮದ ಪುನರ್ ವ್ಯಾಖ್ಯಾನ ಮಾಡಬೇಕಾಯ್ತು. - ದಯವೇ ಧರ್ಮದ ಮೂಲವಯ್ಯಾ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ ಎಂದು ಮುಂತಾಗಿ ಜನಭಾಷೆಯಲ್ಲಿ ವಿವರಿಸಬೇಕಾಯ್ತು.
ಛಂದಸ್ಸು ಗಿಂದಸ್ಸು ಎಲ್ಲ ಕಲಿತೂ ನುಡಿಪುಂಜಗಳಲ್ಲಿ ಸ್ಪಂದನವೇ ಇಲ್ಲವಾದರೆ ಧರ್ಮ ಗ್ರಂಥಗಳನ್ನೆಲ್ಲ ಓದಿ ಪಾರಂಗತರಾದರೂ ಜ್ಞಾನವೆಂಬುದು ಅಂಗೈ ಮೇಲಿನ ನೆಲ್ಲಿಕಾಯಿಯಂತೆ ಕರಗತವಾದರೂ ಒಳಗೊಂದು ಪ್ರೇಮದ ದೀಪ ಹಚ್ಚಿಕೊಳ್ಳದೆ ಹೋದರೆ, ಖಾಲಿ ಲಾಟೀನು ಹಿಡಿದು, ಕತ್ತಲಲ್ಲಿ ಹೊರಟ ಪಯಣಿಗನಂತಾದೇವು ಅಲ್ಲವೆ?
ಧರ್ಮದ ಮೂಲದ ಸರಳ ನಿಯಮದಲ್ಲಿ ಜಾತ್ಯಾತೀತ ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲ ಇವತ್ತು ಒಂದಾಗಬೇಕಾಗಿದೆ. ಈ ದೇಶದ ಅಸಂಖ್ಯಾತ ಸಜ್ಜನರಿಗೆ ಇದು ಸಾಧ್ವವಾಗದಿದ್ದರೆ ದೇಶ ಒಡೆದು ಹೋಗಲಿದೆ. ( ಪಿ. ಲಂಕೇಶ್.)
ನಮಗೀಗ ಒಗ್ಗೂಡಿಸುವ ಧೋರಣೆ ಬೇಕು, ಛಿದ್ರಗಳಿಸುವ ಧೋರಣೆ ಅಲ್ಲ. ಈ ಸ್ಪಧರ್ಾತ್ಮಕ ಯುಗದಲ್ಲಿ ಸ್ಪರ್ಧೆಯ ಸವಾಲನ್ನು ಎದುರಿಸಿ, ಧೋರಣೆಯೊಂದಿಗೆ ರಾಜಿ ಮಾಡಿಕೊಳ್ಳದೆ ಜನಮನ ಕಟ್ಟುವ ಕೆಲಸ ಮಾಧ್ಯಮಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಜವಾಬ್ದಾರಿಯಿಂದ ಆಗಬೇಕು. ಸಮಾಜದ ನಾಡಿಬಡಿತವನ್ನು ಹಿಡಿತದಲ್ಲಿಡುವ ಮಹತ್ವದ ಸ್ಥಾನದಲ್ಲಿರುವ ಮಾಧ್ಯಮಗಳು, ಕಲಾವಿದರು, ಲೇಖಕರು ಎಲ್ಲರೂ ಎಂದಿಲ್ಲದ ಹೊಣೆಯಿಂದ ನಡೆದುಕೊಳ್ಳಬೇಕಾದ ಸಂದರ್ಭ ಇದು. ಅವರು ಮತ್ತೆ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಹೆಜ್ಜೆ ಇಡಬೇಕಾದ ಕಾಲಘಟ್ಟ ಎಂದರು.

ಮುಂದೆ ಓದಿ

ನುಡಿಸಿರಿ
ಆಳ್ವಾಸ್ ನುಡಿಸಿರಿ ಉದ್ಘಾಟಿಸಿದ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಹೀಗೆ ಹೇಳಿದ್ದಾರೆ.
೧.ಸಾವಿರಾರು ವರ್ಷಗಳಿಂದ ತನ್ನ ಪಾತ್ರವನ್ನು ತಿದ್ದಿಕೊಳ್ಳುತ್ತಾ ಬಂದ ಕನ್ನಡ ಮನಸ್ಸಿನ ಅಭಿವ್ಯಕ್ತಿಯನ್ನು ಅದು ಹಿಂದೆ ಹಿಂದೆ ಉಳಿಸುತ್ತಾ ಹೋದ ನೆನಪುಗಳಲ್ಲಿ ಹುಡುಕಬೇಕಾಗುತ್ತೆ.

೨.ಕಲೆ, ಸಾಹಿತ್ಯ, ವಾಸ್ತು ಮುಂತಾಗಿ ಎಲ್ಲೆಲ್ಲಿ ಕನ್ನಡಿಗನ ಮನಸ್ಸು ನಿರ್ಭಿಡೆಯಿಂದ ಮುಕ್ತ ಅಭಿವ್ಯಕ್ತಿ ಸಾಧಿಸಿದೆಯೋ ಅಲ್ಲಲ್ಲೆಲ್ಲಾ ನಾವು ಕನ್ನಡ ಮನಸ್ಸಿನ ಪಾತ್ರ ನಿರ್ಮಿತಿಯನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.

೩. ಮಹತ್ವಾಕಾಂಕ್ಷೆ
ವಿನಯ
ಕೂಡುಬಾಳು
ಬದಲಾವಣೆಗೆ ತೆರೆದುಕೊಂಡ ಮನಸ್ಸು-ಇವು ಕನ್ನಡ ಮನಸ್ಸಿನ ಮುಖ್ಯ ಲಕ್ಷಣಗಳಾಗಿವೆ.



ಅ.ಮಹತ್ವಾಕಾಂಕ್ಷೆ: ಕನ್ನಡ ಸಾಹಿತ್ಯ ಚರಿತ್ರೆ ಗಮನಿಸಿದಾಗ ನಿರಂತರವಾಗಿ ಬೃಹತ್ ಕಾವ್ಯಗಳ ನಿರ್ಮಾಣ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶವೈಭವ, ಶ್ರೀ ರಾಮಾಯಣ ದರ್ಶನಂ...ಹೀಗೆ. ಇಪ್ಪತ್ತನೇ ಶತಮಾನವನ್ನಷ್ಟೇ ಗಮನಿಸಿದರೂ ಮಹತ್ವಾಕಾಂಕ್ಷೆಯ ಕಾದಂಬರಿಗಳು ನಮ್ಮಲ್ಲಿ ನಿರ್ಮಿತವಾಗಿರುವುದನ್ನು ನೋಡಬಹುದು. ಬೃಹತ್ ಮತ್ತು ಮಹತ್ ಒಮ್ಮೈಗೂಡಬೇಕೆಂಬುದು ಕನ್ನಡ ಮನಸ್ಸಿನ ಯಾವತ್ತಿನ ಅಭಿಲಾಷೆ. ಆಧುನಿಕ ಸಾಹಿತ್ಯದಿಂದಲೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು.

ಬಾಹುಬಲಿಯ ನಿರ್ಮಾಣ, ಹಂಪೆಯ ಉಗ್ರನರಸಿಂಹ ಶಿಲ್ಪದ ನಿರ್ಮಾಣ, ಬಿಜಾಪುರದ ಗೋಲ್ಗುಂಬಜ್, ಬಾದಾಮಿ ಪಟ್ಟದಕಲ್ಲಿನ ಗುಹಾಂತರ್ದೇವಾಲಯಗಳು, ಶ್ರೀರಂಗಪಟ್ಟಣದ ಶ್ರೀರಂಗಮೂರ್ತಿ-ಹೀಗೆ ಬೃಹತ್ ಮಹತ್ತಿನ ಕೂಡುವಳಿಯ ಅನೇಕ ಮಹತ್ವಾಕಾಂಕ್ಷೀ ಯತ್ನಗಳನ್ನು ನಾವು ನೋಡಬಹುದು. ಮೈಸೂರು ಅರಮನೆ, ತುಂಗಭದ್ರ ಡ್ಯಾಮ್, ವಿಧಾನಸೌಧ, ಮುಂತಾದ ಆಧುನಿಕ ಉದಾಹರಣೆಗಳೂ ನಮ್ಮ ಕಣ್ಮುಂದೆ ಇವೆ.

ಬ.ವಿನಯ: ನಮ್ಮ ಸಾಹಿತ್ಯದಲ್ಲಿ ಭಕ್ತಿ ತನ್ನ ಸಾತತ್ಯವನ್ನು ಮೊದಲಿನಿಂದಲೂ ಸಾಧಿಸುತ್ತಾ ಬಂದಿದೆ. ಭಕ್ತಿಯ ಪ್ರಧಾನ ಲಕ್ಷಣವೇ ವಿನಯ. ಶ್ರೇಷ್ಠವಾದುದಕ್ಕೆ ಎಂಥವರೂ ತಲೆಬಾಗಲೇ ಬೇಕು-ಎಂಬುದನ್ನು ಕನ್ನಡ ಮನಸ್ಸು ಒಂದು ಮುಖ್ಯ ಮೌಲ್ಯವಾಗಿ ಗುರುತಿಸಿಕೊಂಡಿದೆ.

ಕ.ಕೂಡುಬಾಳು-ಬಹುಳ ಸಂಸ್ಕೃತಿಗೆ ತೆರೆದುಕೊಂಡ ಮನಸ್ಸು: ಕನ್ನಡ ಸಮುದಾಯ ಅನೇಕ ಭಾಷೆ, ಧರ್ಮ, ಸಂಪ್ರದಾಯ, ಆಚರಣೆಗಳ ಸಂಯುಕ್ತ ಸಮುದಾಯವಾಗಿದೆ. ವೈಷ್ಣವ ಮತ್ತು ಶೈವ ಸಂಪ್ರದಾಯಗಳು ಸಿಡಿದು ಬೇರ್ಪಟ್ಟಾಗ ಹರಿಹರ ಅಭೇದ ಕಲ್ಪನೆಯನ್ನು ಮೂರ್ತೀಕರಿಸಿಕೊಂಡ ಸಂಯುಕ್ತ ದೈವದ ಕಲ್ಪನೆಯನ್ನು ಹುಟ್ಟು ಹಾಕಿದ್ದು ನಮ್ಮ ಹಿರಿಯರು. ಹರಿಹರ, ಶಂಕರನಾರಾಯಣ ಮೊದಲಾದ ಕಲ್ಪನೆಗಳನ್ನು ಇಲ್ಲಿ ಗಮನಿಸಬಹುದು. ಜೈನ ಮತ್ತು ವೈದಿಕ ಧರ್ಮಗಳ ಒಡಕು ಕೊನೆಗೆ ಏಕೀಕರಣದಲ್ಲಿ ತೊಡಗಿದ್ದಕ್ಕೆ ಉದಾಹರಣೆ ಧರ್ಮಸ್ಥಳದಂಥ ಕ್ಷೇತ್ರವನ್ನು ಗಮನಿಸಬಹುದು. ಹಳೇಬೀಡು ಬೇಲೂರು ದೇವಾಲಯಗಳ ನಿರ್ಮಾಣವೂ ಧರ್ಮಸಹಿಷ್ಣುತೆಯ ಅಭಿವ್ಯಕ್ತಿಯೆಂದೇ ನಾವು ಗ್ರಹಿಸಬಹುದು.
ಹಿಂದು ಮುಸ್ಲಿಮ್ ಸಂಪ್ರದಾಯಗಳು ಕಟ್ಟಾವಿರೋಧದಲ್ಲೇ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವಾದರೂ ಅವುಗಳ ಬೆಸುಗೆಗೆ ಕನ್ನಡ ಮನಸ್ಸು ಹವಣಿಸಿದ್ದಕ್ಕೆ ಸಾಕ್ಷಿಯಾಗಿ ಬಾಬಾಬುಡನ್ ಗಿರಿ-ದತ್ತಪೀಠಗಳಂತಹ ಕ್ಷೇತ್ರಗಳಿವೆ. ಷರೀಫ, ರಾಮದಾಸರಂಥ ಅವಧೂತ ಸಂತರಿದ್ದಾರೆ. ಸಂಗೀತ ಮತ್ತು ವಾಸ್ತುವಿನಲ್ಲೂ ಈ ವಿಭಿನ್ನ ಸಂಸ್ಕೃತಿಗಳ ಅನ್ಯೋನ್ಯ ಒಡನಾಟವನ್ನು ಗುರುತಿಸಲಿಕ್ಕೆ ಬರುತ್ತದೆ. ಹಿಂದುಸ್ಥಾನಿಸಂಗೀತ ಅದಕ್ಕೆ ತಕ್ಕ ಉದಾಹರಣೆ . ಗುಂಬಜ್ ಮತ್ತು ದುಂಡು ಗೊಪುರಗಳ ಸಾರೂಪ್ಯದ ನಿರ್ಮಾಣದಲ್ಲೂ ಇದನ್ನು ನಾವು ಗುರುತಿಸಬಹುದು.
ಕರ್ನಾಟಕದಲ್ಲಿ ಕನ್ನಡವೊಂದೇ ಬಳಕೆಯ ಭಾಷೆಯಾಗಿಲ್ಲ. ಕೊಂಕಣಿ, ತುಳು, ಕೊಡವ ಮೊದಲಾದ ಬೇರೆ ಬೇರೆ ಭಾಷೆಗಳು ಇಲ್ಲಿ ಜೀವಂತ ಚಾಲ್ತಿಯಲ್ಲಿ ಇವೆ. ಬೇರೆ ಬೇರೆ ಮಾತೃಭಾಷೆಯ ಲೇಖಕರು ಕನ್ನಡವನ್ನು ಪರಿಸರದ ಭಾಷೆಯೆಂದು ಪರಿಗ್ರಹಿಸಿ ಕನ್ನಡದಲ್ಲಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಕೆಲವರು ಕನ್ನಡದ ಮೇಜರ್ ಲೇಖಕರಾಗಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕಾಗಿದೆ. ಕನ್ನಡ ನಿರೂಪಣಾ ಭಾಷೆಯಾಗಿದ್ದು ಅದರಲ್ಲಿ ಇತರ ಪ್ರಾದೇಶಿಕ ಭಾಷೆಗಳನ್ನು ಹಾಸುಹೊಕ್ಕಾಗಿ ಬಳಸಿ ಒಂದು ಹೊಸ ಭಾಷಾ ಶಯ್ಯೆಯನ್ನೇ ನಾವು ನಿರ್ಮಿಸುವುದು ಸಾಧ್ಯವಿದೆ. ದೇವನೂರು ಮಹಾದೇವ, ವೈದೇಹಿ, ಚೆನ್ನಣ್ಣ, ಮತ್ತು ಅನೇಕ ಮುಸ್ಲಿಮ್ ಲೇಖಕರು ಅಂಥ ಸಮರ್ಥ ಪ್ರಯೋಗಗಳನ್ನು ಈಗಾಗಲೇ ಮಾಡಿ ತೋರಿಸಿದ್ದಾರೆ.

ಬದಲಾವಣೆಗೆ ತೆರೆದುಕೊಂಡ ಮನಸ್ಸು:

ಕನ್ನಡದ ಮನಸ್ಸು ಬದಲಾವಣೆಗೆ ತೆರೆದುಕೊಂಡ ಮನಸ್ಸಾಗಿದೆ. ಧರ್ಮ, ಸಾಹಿತ್ಯ, ಸಂಗೀತ, ವಾಸ್ತು, ಚಿತ್ರಕಲೆ-ಈ ಎಲ್ಲ ವಿಷಯಗಳಲ್ಲೂ ಇದನ್ನು ಗಮನಿಸಬಹುದು. ಸಾಹಿತ್ಯದ ವಿಷಯ ಉದಾಹರಣೆಗೆ ಗಮನಿಸಿ. ಚಂಪೂಕಾವ್ಯದ ಮಹತ್ವದ ಯಶಸ್ಸಿನ ನಂತರವೂ ವಚನ ಸಾಹಿತ್ಯದ ವಿಶಿಷ್ಟ ತಿರುವು ಕನ್ನಡಗಿರ ಬದಲಾವಣೆಗೆ ತೆರೆದುಕೊಂಡ ಮನಸ್ಸನ್ನು ಸೂಚಿಸಬಲ್ಲುದು. ಮುಂದೆ ರಗಳೆ.ಆಮೇಲೆ ಷಟ್ಪದಿ ಈ ಎಲ್ಲವೂ ಅಚ್ಚರಿಹುಟ್ಟಿಸುವ ಬದಲು ದಾರಿಗಳೇ ಆಗಿವೆ. ವೀರದಿಂದ ಭಕ್ತಿ, ಭಕ್ತಿ ಮುಂದೆ ದೇಶಭಕ್ತಿಯಾಗಿ, ಪ್ರಕೃತಿ ಆರಾಧನೆಯಾಗಿ ಪರಿಣಮಿಸಿದ್ದು, ಸಾಹಿತ್ಯದಲ್ಲಿ ಇದ್ದ ಧಾರ್ಮಿಕ ಒತ್ತಡವು ಕ್ರಮೇಣ ಮರೆಯಾಗಿ ಅಧ್ಯಾತ್ಮವು ಆ ಸ್ಥಾನವನ್ನು ಆವರಿಸಿದ್ದು ಮೊದಲಾದವನ್ನು ನೋಡಬಹುದು.
ಜೈನ ವೀರಶೈವ ವೈದಿಕ ಧರ್ಮಗಳು ಹೇಗೆ ತಿಕ್ಕಾಟದೊಂದಿಗೇ ನಿಧಾನವಾಗಿ ಸಮನ್ವಯ ಸಾಧಿಸಿದವು ಎಂಬುದನ್ನು ನಮ್ಮ ಇತಿಹಾಸ ತೋರಿಸುತ್ತಿದೆ.

ಮುಕ್ತಾಯ: ಕರ್ನಾಟಕದ ಬಗ್ಗೆ ಎರಡು ಕಲ್ಪನೆಗಳು ಸಾಧ್ಯ. ಒಂದು-ಅದನ್ನು ಏಕಶಿಲಾ ಸಂಪದ್ವಲಯವಾಗಿ ನೋಡುವುದು. ಹಾಗೆ ನೋಡಿದಾಗ ನಮ್ಮ ಕರ್ನಾಟಕ ಒಳಗೊಳ್ಳುವುದು ಕನ್ನಡಿಗರನ್ನು ಮಾತ್ರ. ಭಾಷೆಯೆಂದರೆ ಕನ್ನಡ ಭಾಷೆಯನ್ನು ಮಾತ್ರ. ಸಂಸ್ಕೃತಿ ಅಂದಾಗ ಮೇಲ್ವರ್ಗದ ಮುಖ್ಯಧಾರೆಯ ಸಂಸ್ಕೃತಿಯನ್ನು ಮಾತ್ರ.
ಕರ್ನಾಟಕದ ಬಗ್ಗೆ ಇನ್ನೊಂದು ಕಲ್ಪನೆ ಸಾಧ್ಯ. ಅದು ಅಖಂಡ ಕರ್ನಾಟಕದ ಕಲ್ಪನೆ. ಅಲ್ಲಿ ಕನ್ನಡಿಗರು ಮಾತ್ರ ಕನ್ನಡನಾಡಿನ ಪ್ರಜೆಗಳಾಗಿರುವುದಿಲ್ಲ. ಈ ನಾಡಿನಲ್ಲಿ ಬಾಳುತ್ತಿರುವ ಅನ್ಯಧರ್ಮೀಯರೂ, ಅನ್ಯ ಭಾಷಿಕರೂ, ಬೇರೆ ಬೇರೆ ಪ್ರಾಂತೀಯ ಭಾಷೆಗಳನ್ನು(ತುಳು, ಕೊಂಕಣಿ, ಕೊಡವ ಇತ್ಯಾದಿ) ಆಡುವ ಜನರನ್ನೂ ಅದು ಒಳಗೊಳ್ಳುವುದು.ಶಿಷ್ಟ, ಜಾನಪದ ಎಲ್ಲವೂ ಅಲ್ಲಿ ಸಮಾನ ಸ್ಥಾನಮಾನವನ್ನು ಪಡೆಯುವುವು.ಇದು ಕೋಡುಗಲ್ಲಿನ ಸಂಸ್ಕೃತಿಯಲ್ಲ. ರೆಂಬೆಕೊಂಬೆ ಚೆಲ್ಲಿದ ಮಹಾವೃಕ್ಷದ ಸಂಸ್ಕೃತಿ. ನಾವೀಗ ಪುರಸ್ಕರಿಸಬೇಕಾದ್ದು ಈ ಬಗೆಯ ಅಖಂಡ ಕರ್ನಾಟಕದ ಕಲ್ಪನೆಯನ್ನ. ನಾವು ಕಟ್ಟ ಬಯಸುವುದು ಸಂಕುಚಿತ ಕರ್ನಾಟಕವನ್ನಲ್ಲ; ವಿಸ್ತೃತ ಕರ್ನಾಟಕವನ್ನು.

ಮುಂದೆ ಓದಿ
12:45 AM

ನೇರವರದಿ...ಹೊಸತನ...

Posted by ekanasu

ನುಡಿಸಿರಿ

ಈ ಬಾರಿ ಮಾಧ್ಯಮಗಳ ನೇರ ವರದಿ, ಹೊಸತನದ ಪ್ರಯತ್ನಗಳು ನುಡಿಸಿರಿ ಸಮ್ಮೇಳನ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯಲು ಕಾರಣವಾಗುತ್ತಿದೆ. ತನ್ಮೂಲಕ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಮಾಧ್ಯಮಗಳ ಸಂಪೂರ್ಣ ಸಹಕಾರ ದೊರಕಿದಂತಾಗಿದೆ.ಸಮಯ ಸುದ್ದಿವಾಹಿನಿಯು ಸಮ್ಮೇಳನದ ನೇರವರದಿ ನೀಡಲು ಇದೀಗ ರತ್ನಾಕರ ವರ್ಣಿ ವೇದಿಕೆಯ ಮುಂಭಾಗದಲ್ಲಿ ತನ್ನ ಹೊರಾಂಗಣ ಚಿತ್ರೀಕರಣ ಘಟಕವನ್ನು ಅಳವಡಿಸಿದೆ. ವಿವಿಧ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು , ಅಂತರ್ಜಾಲ ಮಾಧ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.








ಚಿತ್ರ: ಅಭಿಲಾಶ್ ಪಿ.ಎಸ್.

ಮುಂದೆ ಓದಿ

ನುಡಿಸಿರಿ
ರತ್ನಾಕರ ವರ್ಣಿ ವೇದಿಕೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಇದೀಗ ಏಳರ ಸಂಭ್ರಮ. ಇದಕ್ಕಾಗಿ ವೇದಿಕೆ ಸಿದ್ಧಗೊಂಡಿದೆ. ಸರ್ವಾಧ್ಯಕ್ಷತೆ ವಹಿಸಲಿರುವ ವೈದೇಹಿ ಈಗಾಗಲೇ ಮೂಡಬಿದಿರೆಗೆ ಸಕುಟುಂಬಿಕರಾಗಿ ಆಗಮಿಸಿದ್ದು, ಸಮ್ಮೇಳನ ನಡೆಯಲಿರುವ ಸಭಾಂಗಣ ವೀಕ್ಷಿಸಿ ಸಂಭ್ರಮ ಪಟ್ಟಿದ್ದಾರೆ. ನುಡಿಸಿರಿ ಯಶಸ್ಸಿಗಾಗಿ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಬೃಹತ್ ತಂಡ ನಿರಂತರ ಕಾರ್ಯೋನ್ಮುಖವಾಗಿದೆ. ರಾತ್ರಿ ಹಗಲೆನ್ನದೆ ಕಾರ್ಯನಿರತವಾಗಿದ್ದಾರೆ. ಸ್ವತಃ ಡಾ.ಎಂ.ಮೋಹನ ಆಳ್ವರು ರಾತ್ರಿಯ ವೇಳೆಯಲ್ಲೂ ಖುದ್ದಾಗಿದ್ದು ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಅಂತೂ ಏಳರ ನುಡಿಸಿರಿ ಅ.29ರ ಮುಂಜಾನೆ 9ರಿಂದ ಅಧಿಕೃತ ಚಾಲನೆಗೊಳ್ಳಲಿದೆ.

ಮುಂದೆ ಓದಿ

ನುಡಿಸಿರಿ
ರತ್ನಾಕರ ವರ್ಣಿ ವೇದಿಕೆ: ಮೂಡಬಿದಿರೆಯಲ್ಲಿ ಕನ್ನಡದ ಕಂಪು ಪಸರಿಸಿದೆ. ಕಲ್ಲು ಕಲ್ಲುಗಳಲ್ಲಿ ಕನ್ನಡ ಕಂಪು ಹರಡಿದೆ. ಅಕ್ಷರಶಃ ಮೂಡಬಿದಿರೆ ಕನ್ನಡದ ದಾಸೋಹಕ್ಕೆ ಸರ್ವಸಿದ್ದತೆಯನ್ನು ಪೂರ್ಣಗೊಳಿಸಿದೆ. ಕವಿ ರತ್ನಾಕರ ವರ್ಣಿಯ ನಾಡಿನಲ್ಲಿ ಕನ್ನಡದ ಕಂಪು ಪಸರಿಸಲಣಿಯಾಗಿದೆ.ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದಲೂ ಸಾಹಿತ್ಯಾಸಕ್ತ ಪ್ರತಿನಿಧಿಗಳು ಮೂಡಬಿದಿರೆಯತ್ತ ಆಗಮಿಸತೊಡಗಿದ್ದಾರೆ. ಒಟ್ಟಾರೆಯಾಗಿ ಮೂಡಬಿದಿರೆ ತುಂಬೆಲ್ಲಾ ಕನ್ನಡದ ಕಂಪು ಪಸರಿಸುತ್ತಿದೆ.

ಮುಂದೆ ಓದಿ
8:02 PM

ಅಧ್ಯಕ್ಷರ ಆಗಮನ

Posted by ekanasu

ನುಡಿಸಿರಿ

ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷೆ ವೈದೇಹಿ ಸಮ್ಮೇಳನದ ಸಭಾಂಗಣಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಗೊಂದಲ ರಹಿತ ಪ್ರಶಾಂತ ವಾತಾವರಣ.ಇಲ್ಲಿ ಮನಕ್ಕೆ ಮುದ ನೀಡುವಂತಹ ವಾತಾವರಣ ನಿರ್ಮಾಣಗೊಂಡಿದೆ ಎಂದರು. ಈ ಸಂದರ್ಭ ಡಾ.ಎಂ.ಮೋಹನ ಆಳ್ವ ಸ್ವಾಗತ ಸಮಿತಿ ಸರ್ವ ಸದಸ್ಯರು ಹಾಜರಿದ್ದರು.

ಮುಂದೆ ಓದಿ
7:59 PM

ನುಡಿಸಿರಿ

Posted by ekanasu

ನುಡಿಸಿರಿ

ನುಡಿಸಿರಿಯ ಸಭಾಂಗಣದಲ್ಲಿ ವರ್ಣ ವೈಭವ

ಮುಂದೆ ಓದಿ

ವೈವಿಧ್ಯ
ಸ್ವಾತಂತ್ರ್ಯ ಚಳವಳಿಯು ತಾರಕಾವಸ್ಥೆ ತಲುಪಿದ್ದ ಕಾಲ. ಸೇಂದಿ ವಿರೋಧಿ ಹೋರಾಟಗಾರರು ನನ್ನೂರಾದ ದಾವಣಗೆರೆಯ ಹೊಳೆಹೊನ್ನೂರು ತೋಟದಲ್ಲಿ ಈಚಲಮರದಿಂದ ಭಟ್ಟಿ ಇಳಿಸುವುದರ ವಿರುದ್ಧ ಪಿಕೆಟಿಂಗ್ ಹಮ್ಮಿಕೊಂಡಿದ್ದರು. ನೂರಾರು ಮಂದಿ ಚಳವಳಿಗಾರರು ಅಂದು ಪಿಕೆಟಿಂಗ್ನಲ್ಲಿ ಭಾಗವಹಿಸಿದ್ದರು. ಗುತ್ತೂರು ಕ್ಯಾಂಪ್ ಮತ್ತು ಹನಗವಾಡಿ ಕ್ಯಾಂಪ್ ಎಂದು ದಾವಣಗೆರೆ ಸನಿಹದಲ್ಲೇ ಎರಡು ಕಡೆ ಆಗ ಬ್ರಿಟಿಷ್ ಸೇನೆಯ ಶಿಬಿರಗಳಿದ್ದವು. ನನ್ನ ತಂದೆಯವರು ಒಪ್ಪಂದದ ಮೇರೆಗೆ ಈ ಶಿಬಿರಗಳ ಛಾಯಾಚಿತ್ರಕಾರರಾಗಿದ್ದರು.
ಇದ್ದಕ್ಕಿದ್ದಂತೆ ಆ ದಿನ ಬ್ರಿಟಿಷ್ ಸೇನಾ ತುಕಡಿಯೊಂದು ಹೊಳೆಹೊನ್ನೂರು ತೋಟಕ್ಕೆ ಧಾವಿಸಿ ಅಲ್ಲಿ ನೆರೆದಿದ್ದ ಚಳವಳಿಗಾರರಮೇಲೆ ಗುಂಡಿನ ಮಳೆ ಸುರಿಸತೊಡಗಿತು. ಜೀವ ಉಳಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡತೊಡಗಿದರು. ಆ ಪ್ರದೇಶವು ಮಿನಿ ಜಲಿಯನ್ವಾಲಾ ಬಾಗ್ ಆಗಿ ಪರಿವರ್ತಿ ತವಾಗಿತ್ತು. ವ್ಯತ್ಯಾಸವೆಂದರೆ, ಜಲಿಯನ್ವಾಲಾ ಬಾಗ್ನ ಮೈದಾನದ ಸುತ್ತಲೂ ಗೋಡೆಯಿದ್ದುದರಿಂದಾಗಿ ಜನರು ಪಾರಾಗಿ ಹೋಗಲಾರದೆ ಭಾರಿ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳಬೇಕಾಯಿತು; ಆದರೆ ದಾವಣಗೆರೆಯ ಹೊಳೆಹೊನ್ನೂರು ತೋಟದ ಬಯಲಿನಲ್ಲಿ ಆ ದಿನಗಳಲ್ಲಿ ಇಟ್ಟಿಗೆ ಭಟ್ಟಿಗಳಿದ್ದು ಇಟ್ಟಿಗೆ ರಾಶಿಗಳನ್ನು ಪೇರಿಸಿಟ್ಟದ್ದರಿಂದಾಗಿ ಅವುಗಳ ಮರೆಗೆ ಹೋಗಿ ಅವಿತುಕೊಂಡು ನೂರಾರು ಮಂದಿ ಚಳವಳಿಗಾರರು ಪ್ರಾಣ ಉಳಿಸಿಕೊಂಡರು. ಐದು ಜನರು ಬ್ರಿಟಿಷ್ ಸೈನ್ಯದ ಗುಂಡಿಗೆ ಅಂದು ಹುತಾತ್ಮರಾದರು.

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಪುತ್ತೂರು: ಮುಂದಿನ ಎರಡು ವರ್ಷದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಇದರ ಜೊತೆಗೆ ರಾಜ್ಯದ ಪ್ರತೀ ತಾಲೂಕುಗಳನ್ನು ವಿದ್ಯುತ್ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಪುತ್ತೂರು ತಾಲೂಕಿನ ಸವಣೂರಿನಲ್ಲಿ ನೂತನವಾಗಿ ಸಬ್ಸ್ಟೇಶನ್ ನಿಮರ್ಾಣ ಕಾರ್ಯಕ್ಕೆ ಸ್ಥಳಪರಿಶೀಲನೆ ನಡೆಸಿದ ಬಳಿಕ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ.ಆದರೆ ಅದಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯಗುತ್ತಿಲ್ಲವಾದ್ದರಿಂದ ಪ್ರತೀ ದಿನ ವಿವಿದ ಕಡೆಗಳಿಂದ 1500 ಮೆಗಾವ್ಯಾಟ್ ವಿದ್ಯುತ್ ಖರೀಸಲಾಗುತ್ತದೆ.ಅದರ ದರವೂ ಕೂಡಾ ಪ್ರತೀ ಕ್ಷಣವೂ ವ್ಯತ್ಯಾಸವಾಗುತ್ತಿರುತ್ತದೆ ಎಂದ ಶೋಭಾ ಕರಂದ್ಲಾಜೆ ಈ ಬಾರಿ ಜಲಾಶಯಗಳೂ ಶೇಕಡಾ 66 ರಷ್ಟು ಮಾತ್ರಾ ಭರ್ತಿಯಾಗಿವೆ.ಹಾಗಾಗಿ ಸದ್ಯ ಇತ ಮೂಲಗಳಿಂದಲೇ ವಿದ್ಯುತ್ ಖರೀಸಿ ಜಲಾಶಯದ ನೀರನ್ನು ಉಳಿಸಿಕೊಳ್ಳಲಾಗಿದೆ.ಈಗಾಗಲೇ ಜಲವಿದ್ಯುತ್ ಯೋಜನೆಗಳಿಂದ 25 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗಾಗಿ ಖಾಸಗೀ ಕಂಪನಿಗಳನ್ನು ಆಹ್ವಾನ ಮಾಡಲಾಗುವುದು ಎಂದರು.



ಸದ್ಯಕ್ಕೆ ಪ್ರಸರಣದ ನಷ್ಠವನ್ನು ನಿವಾರಿಸುವ ಬಗ್ಗೆ ಗಮನಹರಿಸಲಾಗುವುದು. ಸದ್ಯ ರಾಜ್ಯದಲ್ಲಿ ಶೇಕಡಾ 22 ರಷ್ಟು ಪ್ರಸರಣ ನಷ್ಠವಿದೆ. ಸದ್ಯಕ್ಕೆ ಈ ನಷ್ಠವನ್ನು ಶೇಕಡಾ 20 ಕ್ಕೆ ಇಳಿಸಿ ಮುಂದಿನ 2 ವರ್ಷದಲ್ಲಿ 15 ಶೇಕಡಾ ಇಳಿಸುವುದಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಇದರಿಂದಾಗಿ 500 ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ಉಳಿತಾಯವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.ಇದರ ಜೊತೆಗೆ ಎಲ್ಲಾ ಬಳಕೆದಾರರು ಎಲ್ಇಡಿ ಹಾಗೂ ಸಿಎಫ್ಎಲ್ ಬಳಸುವುದರಿಂದ ಬಳಕೆದಾರರಿಗೂ ಉಳಿತಾಯವಾಗುವುದರ ಜೊತೆಗೆ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗುವುದು ಎಂದರು.

ಈ ಸಂದರ್ಭದಲ್ಲಿ ಮೆಸ್ಕಾಂ ಎಂಡಿ ಸುಮಂತ್ , ಅಭಿಯಂತರರುಗಳಾದ ನಾರಾಯಣ ಪೂಜಾರಿ , ರೋಹಿತ್ , ರಾಜೇಶ್ ,ಜಿಲ್ಲಾ ಪಂಚಾಯತ್ ಸದಸ್ಯ ಶಿವಣ್ಣ ಗೌಡ , ತಾಲೂಕು ಪಂಚಾಯತ್ ಸದಸ್ಯೆ ಪ್ರಮಿಳಾ , ಗ್ರಾಮಪಂಚಾಯತ್ ಅಧ್ಯಕ್ಷೆ ಸುಧಾ , ಸ್ಥಳೀಯರಾದ ಸವಣೂರು ಸೀತಾರಮಾ ರೈ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯುತ್ ದೋಷ ಸರಿಪಡಿಸಲು ಗ್ರಾಮ ಮಟ್ಟದ ಸಮಿತಿ :

ಗ್ರಾಮಮಟ್ಟದಲ್ಲಿ ವಿದ್ಯುತ್ ದೋಷ ಸರಿಪಡಿಸಲು ಸ್ಥಳೀಯ ಗ್ರಾಮಪಂಚಾಯತ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಇದರ ಮೂಲಕ ಇಡೀ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಸದ್ಯಕ್ಕೆ ಶೇಕಡಾ 50 ರಷ್ಟು ಮೆಸ್ಕಾಂ ಸಿಬ್ಬಂದಿಗಳ ಕೊರತೆ ಇರುವುದನ್ನು ಸದ್ಯದಲ್ಲೇ ಭತರ್ಿ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ 26,161 ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವಾಗಿಲ್ಲ ಇದರಲ್ಲಿ 20430 ಬಿಪಿಎಲ್ ಕುಟುಂಬಗಳು ಸೇರಿವೆ.ಇವರಿಗೆಲ್ಲಾ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ಇದೇ ವೇಳೆ ಶೋಭಾ ಹೇಳಿದವರು.


ಬಿಜೆಪಿ ಶಾಸಕರಿಗೆ ಮತ್ತು ಬರಿಸುವ ಔಷಧಿ ಕೊಟ್ಟು ಖರೀದಿಸಿದವರ್ಯಾರು ? ಶೋಭಾ ಪ್ರಶ್ನೆ

ಯಾವುದೇ ಕಾರಣಕ್ಕೂ ಬಿಜೆಪಿ ಯಾವುದೇ ಶಾಸಕರನ್ನು ಖರೀದಿ ಮಾಡುತ್ತಿಲ್ಲ.ಅವರಾಗಿಯೇ ಬರುತ್ತಿದ್ದಾರೆ. ಆದರೆ ಬಿಜೆಪಿ ಶಾಸಕರನ್ನು ಖರೀದಿ ಮಾಡಿ ಅವರಿಗೆ ಮತ್ತು ಬರಿಸುವ ಔಷಧಿ ಕೊಟ್ಟು ಗೋವಾ , ಚೆನ್ನೈ ರೆಸಾರ್ಟ್ ಗಳಿಗೆ ಸುತ್ತಾಡಿದವರ್ಯಾರು ?. ಆದರೆ ಜನರ ಮುಂದೆ ಬಿಜೆಪಿಯವರೇ ಕಳ್ಳರು ಎಂದು ಹೇಳುತ್ತಿದ್ದಾರೆ.ಜನ ಇದನ್ನು ಗಮನಿಸಬೇಕಲು ಎಂದ ಶೋಭಾ ಕರಂದ್ಲಾಜೆ ಅಷ್ಟಕ್ಕೂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ರೆಸಾರ್ಟ್ ಗೆ ಹೋಗಿ ಬಿಜೆಪಿ ಶಾಸಕರ ಬಳಿ ಏನು ಕೆಲಸ? ಇದೆನ್ನೆಲ್ಲಾ ರಾಜ್ಯದ ಜನ ಗಮನಿಸಿದ್ದಾರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ವರದಿ: ಮಹೇಶ್ ಪುಚ್ಚಪ್ಪಾಡಿ

ಮುಂದೆ ಓದಿ

ನುಡಿಸಿರಿ

ಅಕ್ಟೋಬರ್ 29,30 ಮತ್ತು 31ರಂದು ಆಳ್ವಾಸ್ ನುಡಿಸಿರಿ. ಇದು 7ನೇ ಷರ್ಷದ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ.ಹಿರಿಯ ಲೇಖಕಿ ವೈದೇಹಿ ಈ ಬಾರಿಯ ನುಡಿಸಿರಿಯ ಸರ್ವಾಧ್ಯಕ್ಷರು. ಈ ಹಿನ್ನಲೆಯಲ್ಲಿ ಆಳ್ವಾಸ್ ಪದವಿಪೂರ್ವಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಧನಯಂಜಯ ಕುಂಬ್ಳೆ ಈ ಕನಸು.ಕಾಂಗಾಗಿ ವೈದೇಹಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ.




ನೂರು ಜಲುಮದಲೂ ಹೆಣ್ಣು ಜಲುಮವೇ ಇರಲಿ ಹರಸವ್ವ ಕೋಲು ಕೋಲೇ ಹಾದಿ ನಡುವಲಿ ಆರದಿರಲಿ ಆತುಮ ದೀಪ ಕಾಯವ್ವ ಕೋಲು ಕೋಲೇ ಎಂದು ಹಾಡಿದ ವೈದೇಹಿ ತಮ್ಮ ಕವಿತೆ, ಕತೆ, ಅಂಕಣ ಬರಹಗಳಲ್ಲಿ ಮಾತೃಶಕ್ತಿಯ ವಿವಿಧ ಆಯಾಮಗಳನ್ನು ತೆರೆದಿಟ್ಟವರು. ಕುಟುಂಬ ಮತ್ತು ಸಮಾಜ ವ್ಯವಸ್ಥೆಯಡಿ ದಮನಕ್ಕೊಳಗಾದ ಹೆಣ್ಣಿನ ಸ್ಥಿತಿಯನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ಪರಿಭಾವಿಸಿದ ಲೇಖಕಿ ಇವರು. ಬಿಂದು ಬಿಂದಿಗೆ, ಪಾರಿಜಾತ, ಅಮ್ಮಚ್ಚಿಯೆಂಬ ನೆನಪು, ಕ್ರೌಂಚ ಪಕ್ಷಿಗಳು, ಮಲ್ಲಿನಾಥನ ಧ್ಯಾನ, ಜಾತ್ರೆ, ಅಸ್ಪೃಶ್ಯರು, 12ಕ್ಕೂ ಅಧಿಕ ಮಕ್ಕಳ ನಾಟಕಗಳು, ಮೌಲಿಕ ಅನುವಾದಗಳು ಹೀಗೆ ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ವೈದೇಹಿಯವರು ಕನ್ನಡ ಸಾಹಿತ್ಯಲೋಕದಲ್ಲಿ ಸಹಜ, ಆಪ್ತ , ಖಚಿತ ನಿಲುವಿನ ಲೇಖಕಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿ. ಇವರು ಅಕ್ಟೋಬರ 29ರಿಂದ 31ರವರೆಗೆ ಮೂಡುಬಿದಿರೆಯಲ್ಲ್ಲಿ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ನಡೆಯುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2010'ರ ಸರ್ವಾಧ್ಯಕ್ಷರು. ಮಣಿಪಾಲದಲ್ಲಿನ ತಮ್ಮ ಮನೆ ಇರುವಂತಿಗೆಯ ಚಾವಡಿಯಲ್ಲಿ ವಾತ್ಸಲ್ಯ ತುಂಬಿದ ನಗುವಿನೊಂದಿಗೆ ವೈದೇಹಿ ಮೇಡಂ ಮಾತಿಗಿಳಿದರು




ಆಳ್ವಾಸ್ ನುಡಿಸಿರಿಯಂತಹ ಸಮ್ಮೇಳನದ ಅಗತ್ಯ..?
ಒಂದು ಭಾಷೆ, ಸಂಸ್ಕೃತಿಗೆ ಸಮ್ಮೇಳನಗಳು ಶಕ್ತಿ ತುಂಬುವ ಕಾರ್ಯ ಮಾಡುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನ ಕನ್ನಡದ ಜನರನ್ನು ಸೇರಿಸುವ ಉತ್ಸವ. ಅದಕ್ಕೆ ಒಂದು ಸೊಬಗಿದೆ. ಆದರೆ ಸರಕಾರ, ರಾಜಕಾರಣ ಮೊದಲಾದ ಕಾರಣಗಳಿಂದ ಅನೇಕ ಬಾರಿ ಈ ಸಮ್ಮೇಳನ ಗೊಂದಲದ ಗೂಡಾಗುತ್ತದೆ. ಆದರೆ ಮೋಹನ ಆಳ್ವರು ನಡೆಸುತ್ತಿರುವ ಆಳ್ವಾಸ್ ನುಡಿಸಿರಿಗೆ ಉತ್ಸವದ ಮೆರುಗಿನೊಂದಿಗೆ ಒಂದು ಬೌದ್ಧಿಕ ಆಯಾಮ ಕೂಡ ಇದೆ. ಸಮ್ಮೇಳನಕ್ಕೆ ನಿಶ್ಚಿತ ಪರಿಕಲ್ಪನೆಯ ಚೌಕಟ್ಟು ಇದೆ. ಆಸಕ್ತರು ಮಾತ್ರ ಬರುತ್ತಾರೆ. ಸಮಯಪಾಲನೆ, ಅಚ್ಚುಕಟ್ಟುತನ, ವಿಶೇಷವಾಗಿ ಯುವಶಕ್ತಿ ಪ್ರೀತಿಯಿಂದ ಭಾಗವಹಿಸುತ್ತಾರೆ. ಈ ಕಾರಣದಿಂದಲೇ ನುಡಿಸಿರಿಗೆ ಸಾಹಿತ್ಯಲೋಕದಲ್ಲಿ ವಿಶಿಷ್ಟ ಗೌರವವಿದೆ.




ಕನ್ನಡದ ವರ್ತಮಾನ ಮತ್ತು ಭವಿಷ್ಯದ ಕುರಿತು...?
ಕನ್ನಡ ಇಂದು ಮಾತಿನಲ್ಲಿ ಮಾತ್ರ ಉಳಿಯುವ ಸ್ಥಿತಿಯಿದೆ. ಕನ್ನಡವನ್ನು ವರ್ತಮಾನ ಮತ್ತು ಭವಿಷ್ಯದಲ್ಲಿ ಉಳಿಸುವ ಶಕ್ತಿಕೇಂದ್ರಗಳೆಂದರೆ ಶಾಲೆಗಳು. ಆದರೆ ಇಂದು ಕನ್ನಡ ಶಾಲೆಗಳು ಹಲವೆಡೆ ಮುಚ್ಚಲ್ಪಟ್ಟಿವೆ. ಇನ್ನು ಕೆಲವೆಡೆ ಕಷ್ಟದಲ್ಲಿ ಉಸಿರಾಡುತ್ತಿದೆ. ಆದ್ದರಿಂದ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು. ಕನ್ನಡ ಮಾಧ್ಯಮವೇ ಬೇಕು. ಇಂಗ್ಲಿಷ್ ಒಂದು ಕಲಿಕೆಯ ಭಾಷೆಯಾಗಿರಲಿ ಅಷ್ಠೇ.
ಇನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಕರೂಪದ ಸೆಲೆಬಸ್ ಇರಬೇಕು. ಖಾಸಗೀ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರಕ್ಕೆ ನಿಯಂತ್ರಣ ಇರಬೇಕು. ಖಾಸಗಿಯವರು ಮಾಡುವ ಭಾಷಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರ ಪ್ರೋತ್ಸಾಹಿಸಬೇಕು. ಆಗ ಭವಿಷ್ಯದಲ್ಲಿ ಕನ್ನಡ ಇನ್ನಷ್ಟು ಬಲಿಷ್ಟವಾಗಬಲ್ಲುದು.

ಸಾಹಿತ್ಯದಲ್ಲಿ ಪಂಥೀಯ ಬದ್ದತೆ ಎಷ್ಟು ಸರಿ?
ಯಾವ ಪ್ರಾಮಾಣಿಕ ಲೇಖಕನೂ ಒಂದು ಪಂಥಕ್ಕೆ ಬದ್ಧನಾಗಿ ಬರವಣಿಗೆಯನ್ನು ತೊಡಗುವುದಿಲ್ಲ. ಬದ್ಧತೆ ತಾನಾಗಿ ಬರುವುದು. ನಾನು ಮಹಿಳೆಯಾಗಿರುವುದರಿಂದ ಸಹಜವಾಗಿಯೇ ಮಹಿಳೆಯರ ಬದುಕಿನ ತಲ್ಲಣ, ಆತಂಕ, ಸಂತೋಷ ಎಲ್ಲವೂ ನನ್ನ ಬರವಣಿಗೆಯಲ್ಲಿ ಕಾಣಿಸುತ್ತೆ. ಹಾಗೆಂದು ನನ್ನನ್ನು ಮಹಿಳಾ ಸಾಹಿತಿ ಎಂದು ಗುರುತಿಸಬೇಕಿಲ್ಲ. ಸಾಹಿತ್ಯದಲ್ಲಿ ಪ್ರಭೇದ ಇಲ್ಲ. ಸಾಹಿತ್ಯ ಸಾಹಿತ್ಯವೇ. ಅಧ್ಯಯನ ಮಾಡುವವರು ಅವರ ಸೌಲಭ್ಯಕ್ಕಾಗಿ ಈ ರೀತಿ ವಿಂಗಡನೆ ಮಾಡುತ್ತಾರಷ್ಟೇ. ಎಡಪಂಥೀಯ, ಬಲಪಂಥೀಯ ಎಂಬ ಕಪ್ಪು ಬಿಳುಪು ನೆಲೆಯಿಂದ ಲೇಖಕನಾಗಲೀ ಓದುಗನಾಗಲೀ ಸಾಹಿತ್ಯವನ್ನು ಪರಿಭಾವಿಸುವುದು ಸರಿಯಲ್ಲ. ಕಾಲ ಸಾರ್ವಕಾಲಿಕ ಮೌಲ್ಯವುಳ್ಳದ್ದನ್ನು, ಮಾನವೀಯವಾದುದನ್ನು, ಸತ್ವಭರಿತವಾದುದನ್ನು ಮಾತ್ರ ಉಳಿಸಿಕೊಳ್ಳುತ್ತೆ ಅಷ್ಟೇ.

ನಮ್ಮ ರಾಜಕೀಯದ ಬಗೆಗೆ..?

ಹೊಲಸಾಗಿದೆ. ನಮ್ಮ ರಾಜಕಾರಣಿಗಳಿಗೆ ಕುರ್ಚಿ, ಅಧಿಕಾರ, ಅವರ ವೇತನ ಹೆಚ್ಚಳ, ಸ್ವಂತ ಖರ್ಚು, ತಮ್ಮ ಪಾಕೆಟ್ ಇವು ಮಾತ್ರ ಕಾಣಿಸುತ್ತದೆ. ಅವರಿಗೆ ನೆರೆ ಸಂತ್ರಸ್ತರು, ರೈತರು, ಬಡವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹೀಗೆ ಯಾರೂ ಕಾಣಿಸಲ್ಲ.
ಪ್ರಜಾಪ್ರಭುತ್ವದಲ್ಲಿ ನಾವು ಒಡೆಯರು. ಆದರೆ ಪ್ರತೀ ಚುನಾವಣೆ ಮುಗಿದಾಗಲೂ ನಾವು ಸೇವಕರಂತೆ ಹೊಸ ನಿರೀಕ್ಷೆಯಲ್ಲಿ ಕಾಯುತ್ತೇವೆ. ಆದರೆ ಅವರಿಗೆ ಐಟಿ, ಬಿಟಿ, ನೈಸ್ ರಸ್ತೆ ಕಾಣುತ್ತದೆಯೇ ಹೊರತು ನಮ್ಮ ರಸ್ತೆಗಳ ಹೊಂಡ ಕಾಣಿಸುವುದಿಲ್ಲ. ಹಾಗೆ ನೋಡುವುದಿದ್ದರೆ ನಮ್ಮಲ್ಲಿ ಸರಕಾರ ಎಲ್ಲಿದೆ. ಅರಾಜಕತೆಯಿದೆ. ಜವಾಬ್ದಾರಿ ಹೀನ ಸರಕಾರಗಳೇ ಒಂದರ ಹಿಂದೆ ಒಂದು ಬರುತ್ತಿದೆ.



ಧಾರ್ಮಿಕ ಅಸಹನೆ ಹೆಚ್ಚಾಗುತ್ತಿದೆಯಲ್ಲಾ...?

'ತಾಳುವಿಕೆಗಿಂತ ಅನ್ಯ ತಪವು ಇಲ್ಲ' ಎಂದು ನಂಬಿದ ಮನಸ್ಸು ಕನ್ನಡದ್ದು. ಅಹಿಂಸೆ, ಸಹನೆ, ಶಾಂತಿ ಇದು ಗಾಂಧಿ ತೋರಿದ ದಾರಿ. ಇದು ಭಾರತೀಯ ದಾರಿ. ವ್ಯಕ್ತಿಗಳು ಒಬ್ಬೊಬ್ಬರಾಗಿರುವಾಗ ಇಂದೂ ಚೆನ್ನಾಗಿಯೇ ಇದೆ. ಗುಂಪಾಗುವಾಗ ಕೋಮು ಭಾವನೆ ಹೆಚ್ಚಾಗುತ್ತಿದೆ. ಇದಕ್ಕೆ ಸಮಾಜದಲ್ಲಿ ಕಡಿಮೆಯಾಗುತ್ತಿರುವ ಮಾತೃತ್ವ ಶಕ್ತಿ ಕಾರಣ. ಮಾತೃತ್ವ ಎಂಬುದು ಹೆಣ್ಣಿಗೆ ಮಾತ್ರ ಅಲ್ಲ. ಎಲ್ಲ ಮನುಷ್ಯರ ಮನಸ್ಸಿನೊಳಗೂ ಅದು ಇದೆ. ಇರಬೇಕು. ಹಿಂದೆಲ್ಲಾ ಊರೊಳಗೆ ಮಕ್ಕಳ ಸಂಖ್ಯೆ ಹೆಚ್ಚಿರುತ್ತಿತ್ತು. ಎಲ್ಲಾ ಮಕ್ಕಳು ಒಟ್ಟು ಸೇರಿ ಆಡುತ್ತಿದ್ದರು. ಬೆಳೆಯುತ್ತಿದ್ದರು. ಮಕ್ಕಳು ಊರನ್ನು ಜಾತಿ ಮತ ಭೇದದಿಂದ ದೂರಮಾಡಿ ಸೌಹಾರ್ದದ ವಾತಾವರಣ ಸೃಷ್ಟಿಸುತ್ತಿದ್ದರು. ಬಹುಷ: ಕೌಟುಂಬಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಘಟನೆ ಸಾಮಾಜಿಕ ಅಸಹನೆಗೆ ಕಾರಣವಾಗುತ್ತಿದೆ ಅನ್ನಿಸುತ್ತದೆ.

ಸಾಮಾಜಿಕ ಸ್ವಾಸ್ಥ್ಯದಲ್ಲಿ ಮಾಧ್ಯಮಗಳ ಪಾತ್ರ...?
ಮಾಧ್ಯಮಗಳು ಸಮಾಜದ ಜೀವನಾಡಿಗಳು. ಜೀವನಾಡಿಗಳ ನಡುವೆಯೇ ಪರಸ್ಪರ ಕಾದಾಟ ಆರಂಭಗೊಂಡರೆ ಹೇಗೆ? ಮಾಧ್ಯಮಗಳಲ್ಲಿ ಪರಸ್ಪರ ಸ್ಪರ್ಧೆ, ಸ್ವಾರ್ಥ ಬಂದು ಸತ್ಯ ಎಲ್ಲಿ ಅಡಗಿ ಬಿಡುತ್ತೋ ಎಂದು ಹೆದರಿಕೆ ಆಗುತ್ತದೆ. ಕಾಣುವ ಸತ್ಯ ಬೇರೆ. ಒಳಗಡಗಿರುವ ನಿಜ ಬೇರೆ. ಮರೆಯಲ್ಲಿರುವ ಸತ್ಯವನ್ನು ಬಯಲಿಗೆ ತರುವುದು ಮಾಧ್ಯಮಗಳ ಜವಾಬ್ದಾರಿ.
ರಿಯಾಲಿಟೀ ಶೋಗಳ ಮೂಲಕ ದುಡ್ಡು ಮಾಡೋದಕ್ಕೆ ಹೊರಟಿರುವ ಕೆಲ ವಾಹಿನಿಗಳು ಮಕ್ಕಳನ್ನು, ಸ್ತ್ರೀಯರನ್ನು, ಭಾವನೆಗಳನ್ನು ಸರಕಾಗಿಸುತ್ತಿರುವ ಅಮಾನವೀಯತೆ ನಡೆಯುತ್ತಿದೆ. ಅವರ ತಾಳಕ್ಕೆ ತಕ್ಕಂತೆ ಹೆತ್ತವರೂ ಕುಣಿಯುತ್ತಿರುವುದು ಅಶ್ಚರ್ಯಕರ.

ನಿಮ್ಮ ಬರವಣಿಗೆಯ ಕುರಿತು
ಮನುಷ್ಯರ ನಡುವೆ ಅಸಮಾನತೆ ಸೃಷ್ಟಿಸಿ ಹಿಂಸೆ, ಅವಜ್ಞೆ, ಅನಾದರ ತೋರುವ ವ್ಯವಸ್ಥೆ ವಿರುದ್ಧ ನನ್ನ ಹೋರಾಟ. ಅಂತಹ ಹೋರಾಟದಲ್ಲಿ ಬರವಣಿಗೆ ನನಗೆ ಶಕ್ತಿ ನೀಡಿದೆ.

ಡಾ.ಧನಂಜಯ ಕುಂಬ್ಳೆ


ಮುಂದೆ ಓದಿ

ನುಡಿಸಿರಿ

ಮೂಡುಬಿದಿರೆ:ಸರಕಾರದಿಂದ ಯಾವುದೇ ರೀತಿಯ ಅನುದಾನ ಪಡೆಯದೆ ಮಾಡುವ 'ಚಿತ್ರಸಿರಿ'ಯಂತ ಕಾರ್ಯಕ್ರಮಗಳು ಸಾರ್ಥಕ ನೆಮ್ಮದಿಯನ್ನು ತಂದುಕೊಟ್ಟಿದೆ.ಇದಕ್ಕೆ ಕಲಾಸಕ್ತರ,ಸಾಹಿತ್ಯಾಸಕ್ತರ ಪ್ರೋತ್ಸಾಹವು ಅದನ್ನು ಮತ್ತಷ್ಟ ಚೆಂದವಾಗಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಹೇಳಿದರು. ಅವರು ವಿದ್ಯಾಗಿರಿಯಲ್ಲಿ ಆಳ್ವಾಸ್ ಚಿತ್ರಸಿರಿ-2010ರ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಆಳ್ವಾಸ್ ಚಿತ್ರಸಿರಿಯನ್ನು ಕಲಾವಿದ ಕೋಟಿ ಪ್ರಸಾದ ಆಳ್ವ ಉದ್ಘಾಟಿಸಿದರು. ಚಿತ್ರಸಿರಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 20 ಕಲಾವಿದರು ಪಾಲ್ಗೊಂಡಿದ್ದಾರೆ. ಚಿತ್ರಸಿರಿ ಮೂರುದಿನಗಳ ಕಾಲ ನಡೆಯಲಿದೆ .
ಚಿತ್ರ - ವರದಿ: ಯಶೋಧರ ವಿ. ಬಂಗೇರ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು :ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ವೇಗ ಹೆಚ್ಚಿಸುವ ದೃಷ್ಟಿಯಿಂದ ಆಡಳಿತ ಯಂತ್ರವನ್ನು ಮತ್ತಷ್ಟು ಕ್ರಿಯಾಶೀಲ ಹಾಗೂ ಚುರುಕು ಗೊಳಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸರಕಾರದ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಯೋಜನಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಳೆದ ವರ್ಷಕ್ಕಿಂತ ಶೇ. 29 ರಷ್ಟು ಹೆಚ್ಚು ಆರ್ಥಿಕ ಸಾಧನೆಯಾಗಿದೆ. ಕಳೆದ ವರ್ಷ ಅಂದರೆ 2009-10 ನೇ ಸಾಲಿನ ಏಪ್ರಿಲ್ನಿಂದ ಆಗಸ್ಟ್ನವರೆಗೆ 7108 ಕೋಟಿ ರೂ. ಯೋಜನಾ ವೆಚ್ಚ ಆಗಿತ್ತು. ಈ ವರ್ಷ ಅಂದರೆ 2010-11 ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 9203 ಕೋಟಿ ರೂ. ಹೆಚ್ಚು ವೆಚ್ಚವಾಗಿದೆ. ಅಂದರೆ 2,095 ಕೋಟಿ ರೂ. ಹೆಚ್ಚು ವೆಚ್ಚವಾಗಿದೆ ಎಂದು ವಿವರ ನೀಡಿದರು.




ಕಳೆದ ವರ್ಷ 5123 ಕೋಟಿ ರೂ. ಹಣ ಯೋಜನಾ ಕಾರ್ಯಕ್ರಮಗಳಿಗೆ ಬಿಡುಗಡೆಯಾಗಿದ್ದರೆ ಈ ವರ್ಷ 12,812 ಕೋಟಿ ರೂ. ಬಿಡುಗಡೆಯಾಗಿದೆ. ಅಂದರೆ 7,689 ಕೋಟಿ ರೂ. ಹೆಚ್ಚು ಬಿಡುಗಡೆ ಮಾಡಲಾಗಿದೆ.

ಈ ವರ್ಷದ ಬಜೆಟ್ನಲ್ಲಿ 58 ಹೊಸ ಯೋಜನೆ ಪ್ರಕಟಿಸಲಾಗಿದ್ದು, 33 ಯೋಜನೆಗಳ ಅನುಷ್ಟಾನಕ್ಕೆ ಸರಕಾರಿ ಆದೇಶ ಹೊರಡಿಸಲಾಗಿದೆ. ಉಳಿದ 25 ಯೋಜನೆಗಳಿಗೆ ನವೆಂಬರ್ 15 ರೊಳಗೆ ಸಂಪೂರ್ಣ ಸರಕಾರಿ ಆದೇಶ ಹೊರಡಿಸಿ ಅನುಷ್ಠಾನ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

ಭಾಗ್ಯಲಕ್ಷ್ಮಿ ಯೋಜನೆಯಡಿ ಎಲ್ಲಾ 10 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ, ಸೀರೆ ಮತ್ತು ಫಲಾನುಭವಿ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮ ಪೂರ್ವನಿಗದಿತ ಕಾರ್ಯಸೂಚಿಯಂತೆ ನಡೆಯಲಿದೆ. ಇದಕ್ಕೆ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಇಲಾಖಾ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ.

ಈ ತಿಂಗಳ 27 ರಿಂದ ಜಿಲ್ಲಾ ಪ್ರವಾ ಕೈಗೊಂಡು ಜಿಲ್ಲಾ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ.

ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಇಲಾಖೆಗಳು ಶೇ. 75 ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವಂತೆ ಅಗತ್ಯ ಕಾರ್ಯಕ್ರಮ ಹಾಕಿಕೊಳ್ಳಲು ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ನ.4ರಿಂದ 7ರ ತನಕ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ. ಈ ಕ್ರೀಡಾಕೂಟ ಅ.23ರಿಂದ 26ರ ತನಕ ನಡೆಯಬೇಕಾಗಿತ್ತು. ಅನಿಶ್ಚಿತ ಮಳೆಯಿಂದಾಗಿ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ನ.4ರಿಂದ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು ನ.3ರಂದು ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹಾಜರಿದ್ದು ವರದಿಮಾಡಿಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಕಾಸರಗೋಡು: ತೆಂಗಿನ ಜೈವಿಕ ವೈವಿಧ್ಯತೆಯಿಂದ ಸಂಪನ್ನತೆ - ಅಂತಾರ್ರಾಷ್ಟ್ರೀಯ ಸಮ್ಮೇಳನ ಕಾಸರಗೋಡಿನ ಬಳಿ ಕೂಡ್ಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ.) ಯಲ್ಲಿ ಅಕ್ಟೋಬರ್ 25 ರಿಂದ 28 ರ ತನಕ ಜರಗಲಿದೆ. ಈ ಸಮ್ಮೇಳನದ ಉದ್ಘಾಟನೆಯನ್ನು ಕೇಂದ್ರೀಯ ಕೃಷಿ ಸಹ ಮಂತ್ರಿ ಫ್ರೋ. ಕೆ. ವಿ. ಥಾಮಸ್ 25 ರ ಸಂಜೆ 5 ಗಂಟೆಗೆ ನೆರವೇರಿಸುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇರಳ ಸರಕಾರದ ಕೃಷಿ ಮಂತ್ರಿ ಮುಲ್ಲಕ್ಕರ ರತ್ನಾಕರನ್ ವಹಿಸುವರು.




ಹನ್ನೊಂದು ವಿಭಿನ್ನ ಸತ್ರಗಳಲ್ಲಿ ಜರಗುವ ಸಮ್ಮೇಳನದಲ್ಲಿ ಜೈವಿಕ ವೈವಿಧ್ಯತೆ, ಅಣುರಚನೆಯ ವಿಜ್ಞಾನ, ತಳಿ ನಿರ್ಮಾಣ, ಬೆಳೆ ನಿರ್ವಹಣೆ, ವಾತಾವರಣದ ವ್ಯತಿಯಾನ, ಶರೀರ ಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ, ರೋಗ ಕೀಟ ನಿರ್ವಹಣೆ, ಕೊಯ್ಲಿನ ನಂತರದ ತಂತ್ರಜ್ಞಾನ, ಪರ್ಯಾಯ ಉತ್ಪನ್ನಗಳು, ಮೌಲ್ಯ ವರ್ಧನೆ, ಕೃಷಿ ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆ ವಿಚಾರಗಳಲ್ಲಿ ಪ್ರಬಂಧ ಮಂಡನೆಯನ್ನು ವಿಜ್ಞಾನಿಗಳು ಮಾಡುವರು. ಸಮ್ಮೇಳನದ ಸತ್ರಗಳಿಗೆ ಪ್ರವೇಶ ನೋಂದಾವಣೆಯ ಮೂಲಕ ಮಾತ್ರವಾಗಿದ್ದು, ನೋಂದಾವಣಾ ಶುಲ್ಕ ಕೇವಲ ರೂ ೨,೫೦೦.

ಈ ಸಮ್ಮೇಳನಕ್ಕೆ ದೇಶ - ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. ಫಿಲಿಪ್ಪೈನ್ಸ್, ಇಂಡೊನೇಶ್ಯಾ, ಮಲೇಶ್ಯಾ, ಶ್ರೀ ಲಂಕಾ, ಬ್ರೆಝಿಲ್, ಐವರ್ ಕೋಸ್ಟ್, ಮೆಕ್ಸಿಕೋ, ಇಂಗ್ಲೆಂಡ್, ಆಸ್ಟ್ರೇಲಿಯಾ, ನೈಜೀರಿಯಾ, ಫ್ರಾನ್ಸ್, ಸ್ವಿಜರ್ಲೆಂಡ್, ಅಮೇರಿಕಾ ಮುಂತಾದ ದೇಶಗಳಿಂದ ಪ್ರಮುಖ ವಿಜ್ಞಾನಿಗಳು ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸುವರು. ತೆಂಗು ಹಾಗೂ ಆರೋಗ್ಯ, ಎಲೆಗಳಿಂದ ಸೂಕ್ಷ್ಮ ಪ್ರತ್ಯುತ್ಪಾದನಾ ಅಂಗಾಂಶ ಕಸಿ, ಸಾವಯವ ಕೃಷಿ, ಹಾಗೂ ತೆಂಗಿನ ಬೇರಿಂದ ಬರುವ ಬಾಡುವ ರೋಗ ಎಂಬ ನಾಲ್ಕು ವಿಷಯಗಳಲ್ಲಿ ಪ್ರತ್ಯೇಕ ಕಮ್ಮಟಗಳಿವೆ.

ಸಂಪನ್ಮೂಲ ಭಾಷಣಗಳು
ಮನುಷ್ಯನಿಗೆ ತಾಯಿಯ ಹಾಲಿನಷ್ಟೇ ಹಿತಕರ ತೆಂಗಿನೆಣ್ಣೆ ಎಂಬ ವಿಷಯದಲ್ಲಿ ಡಾ. ಬಿ.ಎಂ ಹೆಗ್ಡೆ, ನಿವೃತ್ತ ಕುಲಪತಿಗಳು, ಮಾಹೆ ಇವರು 25 ರ ಸಂಜೆ 4 ಗಂಟೆಗೆ ಸಂಪನ್ಮೂಲ ಭಾಷಣವನ್ನು ನೀಡುವರು. ತೆಂಗಿನ ಸಂಶೋಧನೆಯ ಹಾಗೂ ಅಭಿವೃದ್ಧಿಯ ವೈಖರಿ - ಅವಕಾಶಗಳು ಮತ್ತು ಅಡಚಣೆಗಳು ಎಂಬ ವಿಷಯದಲ್ಲಿ ಡಾ. ಹೆಚ್. ಪಿ. ಸಿಂಗ್, ಉಪ ಮಹಾ ನಿರ್ದೇಶಕರು, ತೋಟಗಾರಿಕೆ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ನವದೆಹಲಿ ಇವರು 26 ರ ಬೆಳಗ್ಗೆ 9 ಗಂಟೆಗೆ ಸಂಪನ್ಮೂಲ ಭಾಷಣ ನೀಡುವರು. ತೆಂಗಿನಲ್ಲಿ ಬಹೂಪಯೋಗೀ ತಯಾರಿಕೆಗೆ ಉತ್ತೇಜನ ಹಾಗೂ ಸಾಧಕತೆಯ ಕುರಿತಾದ ಸಂಪನ್ಮೂಲ ಭಾಷಣವನ್ನು ಕೇರಳ ಕೃಷಿ ವಿಶ್ವವಿದ್ಯಾಲಯ, ತ್ರಿಶೂರು ಇದರ ಕುಲಪತಿಗಳಾದ ಕೆ.ಆರ್. ವಿಶ್ವಂಭರನ್, ಐ.ಎ.ಯಸ್. 27 ರ ಬೆಳಗ್ಗೆ 9 ಗಂಟೆಗೆ ನೀಡುವರು.

ಮುಂದೆ ಓದಿ

|| ಹರೇರಾಮ ||

ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು ‘ಪ್ರಕೃತಿಗೆ ಮಾತು ಬಾರದು’ ಎಂದುಕೊಳ್ಳುವುದು..
ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು...
‘ವಿಶ್ವ’ವನ್ನೇ ‘ಶತ್ರು’ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು – ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..
ಅಕ್ಕ-ಪಕ್ಕದ ಮಕ್ಕಳೊಂದಿಗೆ ಜಗಳವಾಡಿ ಮನೆಗೆ ಬರುವ ತುಂಟ ಮಗುವಿಗೆ ಶಾಂತಿ-ಮೈತ್ರಿಗಳ ಪಾಠ ಹೇಳುವ ತಾಯಿಯಂತೆ ಪ್ರಕೃತಿಯೇ ಮಾತನಾಡಿತು ಆತನಲ್ಲಿ..!




ಮಗುವಿನ ಕುರಿತಾದ ಮಾತೆಯ ಮಮತೆ ಆಕೆಯ ಕಂಗಳಲ್ಲಿ, ಕೈಗಳಲ್ಲಿ, ಮಾತುಗಳಲ್ಲಿ, ಎಲ್ಲೆಡೆಯಲ್ಲಿ ಹೊರಸೂಸುವಂತೆ…
ಗಿರಿ-ನದಿಗಳು, ಗಗನ-ಮೇಘಗಳು, ಕಾಡು-ಮರ-ಬಳ್ಳಿಗಳು, ಪಕ್ಷಿ-ಮೃಗಗಳು..ಹೀಗೆ ಪ್ರಕೃತಿಯ ಒಂದೊಂದು ಅಂಗಗಳೂ ಬದುಕಿನ ಬದಲಾವಣೆಯ ಸಂದೇಶಗಳನ್ನು ಆತನಿಗೆ ನೀಡತೊಡಗಿದವು..!

ಆಶ್ರಮದ ಹೋಮಧೂಮವನ್ನು ಹೊತ್ತು ತರುವ ಗಾಳಿ ಮಹಾರಾಜನ ಮೈದಡವಿ ಮಾತನಾಡಿಸಿತು..!
‘ಜೈತ್ರಯಾತ್ರೆ’ಯ ಬದಲು ‘ಮೈತ್ರಯಾತ್ರೆ’ಯನ್ನು ಮಾಡೆಂದಿತು..
‘ಸಂಚರಿಸು ಸಂಚರಿಸು..ಸರ್ವಲೋಕಗಳಲ್ಲಿಯೂ ಸಂಚರಿಸು..
ಸತತವೂ ಕ್ರಿಯಾಶೀಲನಾಗಿರು, ಆದರೆ ಸ್ವಾರ್ಥಕ್ಕಾಗಿಯಲ್ಲ, ಲೋಕಹಿತಕ್ಕಾಗಿ..
ನಾನು ಸತತವಾಗಿ ಸಂಚರಿಸುವೆನು. ಆದರೆ, ನಾನು ಸಂಚರಿಸಿದಲ್ಲೆಲ್ಲಾ ಜೀವಸಂಚಾರವಾಗುವುದು..ಜೀವ ಹಾನಿಯಲ್ಲವೆಂದಿತು‘..

ಗಾಳಿಯಲ್ಲಿ ತೇಲಿ ಬರುವ ಮೋಡ ಮಾತಾಡಿತು..
ಕೌಶಿಕನಿಗೆ ಕರಗು ಕರಗೆಂದಿತು..
ಪ್ರಕೃತಿಯೊಂದಿಗೆ ಕೂಡಿ ಬಾಳಿ ಬೆಳೆದ ಬೆಳೆದ ಬ್ರಹ್ಮರ್ಷಿ ವಸಿಷ್ಠರು..
‘ಕರಗಿ ನಾನು ಮಳೆಯಾಗಿ ಇಳೆಗಿಳಿಯುವೆ..
ಹೊಳೆಯಾಗಿ ಹರಿದು ಸಾಗರವ ಸೇರುವೆ..ಈ ದಾರಿ ನಿನಗೂ ಇಹುದು.
ತೊರೆ ಕಾಠಿಣ್ಯವನ್ನು, ಭಾವ ಕರಗಿ ಜೀವನದಿಯಾಗಿ ಹರಿದು ಸೇರು ಆತ್ಮಸಾಗರವನ್ನೆಂದಿತು’

ಮೋಡವು ಮಳೆಯಾಗಿ, ಮಳೆಯು ಹೊಳೆಯಾಗಿ ನೀಡಿದ ನೀರುಂಡು ಹುಲುಸಾಗಿ ಬೆಳೆದ ಕಾಡು ಮಾತನಾಡಿತು..
ಕೂಡಿ ಬಾಳೆಂದಿತು..
‘ನೀನೊಬ್ಬ ಬೆಳೆದರೆ ಸಾಕೇ..?
ನನ್ನ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕೂಡಿ ಬೆಳೆಯಬೇಡವೇ..?
ನೀ ಬೆಳೆಯಬೇಕು..ನೀ ಬೆಳೆಯುವಾಗ ನಿನ್ನೊಡನೆ ಸಾಧಕರ ಸಂಘವೇ ಬೆಳೆಯಬೇಕೆಂದಿತು..’

ಕಾಡಿನ ಕಿರೀಟದಂತಿದ್ದ ಮಹಾವೃಕ್ಷವೊಂದು ಮಾತನಾಡಿತು.
‘ಬಿಸಿಲು ನನಗಿರಲಿ, ನೆರಳು ನಿನಗಿರಲೆಂಬ ತ್ಯಾಗ-ಸೇವೆಗಳ ತತ್ವವನ್ನು ತಿಳಿಹೇಳಿತು..
ಮಹಾಗುರುವೆಂಬ ಕಲ್ಪವೃಕ್ಷದ ಚರಣಚ್ಚಾಯೆಯಲ್ಲಿ ಆಶ್ರಯವನ್ನು ಪಡೆಯೆಂದಿತು..
ಸಂಸಾರದ ತಾಪ-ಪಾಪಗಳನ್ನು ಕಳೆದು ಸುಖಿಸೆಂದಿತು’

‘ಪಾದಪ’ದ ಪಾದಮೂಲದಲ್ಲಿ ಜನಿಸಿ ಕಾಂಡದ ಸುತ್ತೆಲ್ಲ ಬೆಳೆದು ಹೆಗಲ ಮೇಲೆ ತಲೆಯಿಟ್ಟು ವಿಶ್ರಮಿಸಿದ್ದ ಬಳ್ಳಿ ಹೀಗೆಂದಿತು.
‘ಬದುಕೆಂಬ ಬಳ್ಳಿಗೆ ಧ್ಯೇಯವೆಂಬ ವೃಕ್ಷದ ಆಸರೆ ಬೇಕೇಬೇಕು ಕೌಶಿಕಾ..!
ನನ್ನಂತೆ ಧ್ಯೇಯವನ್ನು ಭದ್ರವಾಗಿ ಹಿಡಿದು ಬೆಳೆ ಆಗಸದೆಡೆಗೆಂದಿತು’

ಪ್ರಕೃತಿಯೊಂದಿಗೆ ಕೂಡಿಬಾಳಿದ ಬೆಳೆಸಿದ ಬ್ರಹ್ಮರ್ಷಿ ವಸಿಷ್ಠರು..

ಬಳ್ಳಿಯಲ್ಲಿ ಬಳುಕುವ ಹೂವು ಕೌಶಿಕನ ಕೃತ್ರಿಮ ಸೌಂದರ್ಯವನ್ನು ನೋಡಿ ಕಿಲಕಿಲನೆ ನಕ್ಕಿತು..
ಅರಳು ಅರಳೆಂದಿತು..
‘ಮಾಣಿಕ್ಯ-ಮುಕುಟಗಳ, ಪಟ್ಟೆ-ಪೀತಾಂಬರಗಳ ಸೊಬಗಿದು ನಿನದಲ್ಲವೆಂದಿತು..
ಅರಳು ನೀ ಅರಳು..
ನನ್ನಂತೆ ಅಂತರಾಳದಿಂದ ಅರಳು..
ಅರಳಿದ ಆತ್ಮ ಸೌಂದರ್ಯವನ್ನು ಜಗಕ್ಕೆ ಚೆಲ್ಲೆಂದಿತು..’

ಕೋಟಿ ಕುಸುಮಗಳಿಗೆ,ಲಕ್ಷ ವೃಕ್ಷಗಳಿಗೆ, ನೂರು ಸಾವಿರ ಕಾಡುಗಳಿಗೆ ಆಶ್ರಯವಿತ್ತ ಗಂಭೀರ ಗಿರಿಪಂಕ್ತಿ ಮಾತನಾಡಿತು..
ಅಚಲಧ್ಯಾನದಲ್ಲಿ ಮುಳುಗೆಂದಿತು..
‘ನಮ್ಮ ಎತ್ತರವ ನೋಡು..ನಮ್ಮ ಬಿತ್ತರವ ನೋಡು..ನಮ್ಮ ಗೌರವವ (ತೂಕ) ನೋಡು..!
ಇವು ಪ್ರಾಪ್ತವಾದುದು ಅಚಲತೆಯಿಂದ…
ಚಂಚಲತೆಯಿಂದಲ್ಲ..
ಸ್ಥೂಲದಿಂದ ಆರಂಭಿಸಿ ಬರುಬರುತ್ತಾ ಸೂಕ್ಷ್ಮವಾಗುವ ನಮ್ಮ ಆಕೃತಿಯನ್ನು ನೋಡು.
ಅದರಂತೆ ನೀನಾಗು..ಸ್ಥೂಲದಿಂದ ಪರಮ ಸೂಕ್ಷ್ಮದೆಡೆಗೆ ನೀ ಸಾಗು..
ನಿನ್ನ ನೀ ಗೆದ್ದರೆ ಜಗವ ಗೆಲ್ಲದಿದ್ದರೂ ಗೆದ್ದಂತೆ..
ನಿನ್ನ ನೀ ಗೆಲ್ಲದಿರೆ ಜಗವ ಗೆದ್ದೂ ಸೋಲುವೆಯೆಂದಿತು’

ಎಲ್ಲವೂ ತನ್ನೊಳಗಿದ್ದರೂ ತಾನು ಯಾವುದನ್ನೂ ಮುಟ್ಟದ ಗಗನ ಮಾತಾಡಿತು..
ನಿರ್ಲಿಪ್ತನಾಗೆಂದಿತು..
‘ಮಿಂಚು-ಮಳೆಗಳು ನನ್ನೊಳಗಿವೆ.ಆದರೆ ಮಿಂಚಿನಿ೦ದ ಸುಡದ, ಮಳೆಯಲ್ಲಿ ತೋಯದ ನನ್ನ ವ್ಯಕ್ತಿತ್ವವನ್ನುನೋಡು..
ನಡೆಯುವುದೆಲ್ಲವೂ ನನ್ನೊಳಗೇ ನಡೆದರೂ ಯಾವುದರಿ೦ದಲೂ ವಿಕಾರಗೊಳ್ಳದ ಎಲ್ಲಿಯೂ ಚಲಿಸದ ನನ್ನ ಸ್ವಭಾವನ್ನಾದರೂ ನೋಡು,
ಎಲ್ಲೆಲ್ಲಿಯೂ ಇದ್ದರೂ ಎಲ್ಲಿಯೂ ಕಾಣದ ನನ್ನ ಹಾಗೆ ನೀನಿರಬೇಕು.
ಇದ್ದೂ ಇರದ೦ತಿರಬೇಕೆಂದಿತು’

ಮೃಗಗಳು ಮಾತಾಡಿದವು..
‘ನಿರ್ವೈರನಾಗೆಂದವು..
ಮಹರ್ಷಿಯ ಸಂಗದಿಂದಾಗಿ ಜನ್ಮ ಸಹಜವಾದ ಕ್ರೌರ್ಯ-ವೈರಗಳನ್ನು ತೊರೆದ, ಪ್ರೇಮ-ದಯೆಗಳನ್ನು ತಳೆದ ನಮ್ಮನ್ನು ನೋಡಿ ಕಲಿಯೆಂದವು’

ಹಕ್ಕಿಗಳು ಮಾತಾಡಿದವು..
ಮರುಹುಟ್ಟು ತಾಳೆಂದವು..
‘ನಾವಾಗಲೇ ಮೊಟ್ಟೆಯನ್ನು ಒಡೆದು ಹೊರಬಂದಾಯಿತು.ಇನ್ನೂ ನೀನೇಕೆ ಅಜ್ನಾನದ ಮೊಟ್ಟೆಯಲ್ಲಿಯೇ ಕುಳಿತುಕೊಂಡಿರುವೆ?
ತಡವಿನ್ನೇಕೆ ? ಭೇದಿಸು ಅಜ್ನಾನದ ಆವರಣವನ್ನು..ಕಾಣು ಆತ್ಮಸೂರ್ಯನನ್ನು..
ಕಾಣು ಜಗವನ್ನು ಹೊಸ ದೃಷ್ಟಿಯಿಂದ..ಅಧ್ಯಾತ್ಮದ ಆಗಸದಿ ‘ಹಾರುವವ’ನಾಗೆಂದಿತು..!

ಅದಾಗ ತಾನೇ ಬಿರಿಯುವ ಮೊಟ್ಟೆಯು ದನಿಗೂಡಿಸಿತು.
“ಸಾರು ಗುರುವಿನ ಬಳಿಗೆ..
ನನ್ನಮ್ಮ ನನಗೆ ಮಾಡಿದಂತೆ ಆತ ನಿನಗೆ ಸೋಲು-ನೋವುಗಳ ಕಾವು ಕೊಡುವ..
ಆಗ ನನ್ನಂತೆ ಒಡೆದು ಚೂರಾಗುವೆ ನೀ..!
ನಿನ್ನ ರಾಜವೈಭವದ ಈ ರಾಜಸ ಸ್ವರೂಪವು ನಿನ್ನ ಭ್ರಮೆಗಳೊಡನೆ ನುಚ್ಚುನೂರಾಗುವುದು..!
ಕೆಡುಕಲ್ಲ, ನಿನ್ನ ಜೀವದ ಹಿತವದು..!
ಮರುಹುಟ್ಟು ತಾಳುವೆ ನೀ…
ಆಗ ವಿಶ್ವದ ಮಿತ್ರನಾಗುವೆ..ಅವಿನಾಶಿಯಾಗುವೆ..ಅಜರಾಮರನಾಗುವೆ..!’
ಅದಾಗ ತಾನೇ ಬಿರಿದು ಅಂಕುರಿಸುತ್ತಿದ್ದ ಬೀಜವು, ಕರಗಿ ನೀರಾಗತೊಡಗಿದ ಮೋಡದೊಡಗೂಡಿ ಹೌದು ಹೌದೆಂದಿತು..

ಪ್ರಕೃತಿ ಮಾತೆಯ ಮಮತೆಯ ಮಾತುಗಳನ್ನು ಕೇಳಿಸಿಕೊ೦ಡಿದ್ದು ಕೌಶಿಕನ ಕಿವಿಗಳಲ್ಲ….!
ಚಕ್ರವರ್ತಿಯ ಪರಮ ಸಖನೊಬ್ಬ ದ್ವಾರಪಾಲಕರನ್ನೋ, ಮ೦ತ್ರಿ-ಮಾಗಧರನ್ನೋ ಮಾತನಾಡಿಸದೆ ನೇರವಾಗಿ ಅ೦ತಃಪುರವನ್ನೇ ಪ್ರವೇಶಿಸುವ೦ತೆ…
ಕೌಶಿಕನ ವ್ಯಕ್ತಿತ್ವವೆ೦ಬ ಅರಮನೆಯ ಹೊರಗಿನ ದ್ವಾರಪಾಲಕರಾದ ಇ೦ದ್ರಿಯಗಳನ್ನೋ, ಒಳಗಿರುವ ಮನವೆ೦ಬ ಮ೦ತ್ರಿಯನ್ನೋ ಮುಟ್ಟದೆ, ಮಾತನಾಡದೆ ನೇರವಾಗಿ ಆತನ ಅ೦ತರಾತ್ಮದಲ್ಲಿಳಿದವು ಆತನ ಬದುಕಿನ ಭವ್ಯ ಭವಿಷ್ಯತ್ತನ್ನು ಕಟ್ಟುವ ಅಮರ ಸ೦ದೇಶಗಳು..!
ತಾನು ಮು೦ದೇನಾಗಬೇಕೆ೦ಬುದನ್ನು ಆತನ ಆತ್ಮ ಅರಿಯತೊಡಗಿತ್ತು
ಮನೋ-ಬುದ್ದಿಗಳು ಅರಿಯುವ ಸಮಯ ಸಮೀಪಿಸತೊಡಗಿತ್ತು..
ವಿಧಿಯದರ ಸಿದ್ಧತೆಯನ್ನು ನಡೆಸಿತ್ತು..

ಹೀಗೆ ಪ್ರಕೃತಿದರ್ಶನದ ಮೊದಲ ಮೆಟ್ಟಿಲೇರಿ ಮುಂದುವರೆದ ಕೌಶಿಕನಿಗೆ ಗೋಚರಿಸಿತು ಧರೆಗಿಳಿದ ದೇವತೆಗಳ ಗಡಣ…!

ಮನುಷ್ಯರಲ್ಲಿ ಮೂರು ಬಗೆ..
ತಮ್ಮ ದುಷ್ಕರ್ಮಗಳಿಂದಾಗಿ ಸತ್ತು ನರಕವನ್ನು ಸೇರುವ ಅಧಮರು ಹಲವರು..
ತಮ್ಮ ಸತ್ಕರ್ಮಗಳಿಂದಾಗಿ ಸತ್ತು ಸ್ವರ್ಗವನ್ನು ಸೇರುವ ಮಧ್ಯಮರು ಕೆಲವರು..
ತಮ್ಮ ಸಾನ್ನಿಧ್ಯ ಮಾತ್ರದಿಂದ ಸ್ವರ್ಗವನ್ನೇ ಧರೆಗಿಳಿಸುವ,
ಅಥವಾ ಧರೆಯನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ,
ಸ್ವರ್ಗ ಸಪ್ಪೆಯೆನಿಸಿ ದೇವತೆಗಳೂ ಧರೆಗಿಳಿಯುವಂತೆ ಮಾಡುವ,
ದಿವ್ಯತೆಯನ್ನು ಕಾಣುವ, ತೋರುವ, ಉತ್ತಮೋತ್ತಮರು ಮರಳಿನ ನಡುವೆ ಹರಳಿನಂತೆ ಕೆಲವೇ ಕೆಲವರು..!

ಅಂಥಾ ಮಹಾಪುರುಷನೊಬ್ಬನ ಆವಾಸಭೂಮಿಯಾಗಿದ್ದಿತು ಆ ಸ್ಥಳ..
ಹೆಜ್ಜೆ ಹೆಜ್ಜೆಗೆ ದೇವ-ದಾನವರು, ಗಂಧರ್ವಾಪ್ಸರೆಯರು,ಕಿನ್ನರ-ಕಿ೦ಪುರುಷರು, ಸಿದ್ಧ-ಚಾರಣರು, ಯಕ್ಷ-ವಿಧ್ಯಾದರರ ದರ್ಶನ..
ಯಾವ ದಿವ್ಯಶಕ್ತಿಗಳನ್ನು ಕಾಣಲು ಜನ್ಮಜನ್ಮಗಳ ಕಠಿಣ ತಪಶ್ಚರ್ಯೆಯೂ ಪರ್ಯಾಪ್ತವಲ್ಲವೋ-
ಅವುಗಳೆಲ್ಲವೂ ದರ್ಶನ ಮಾರ್ಗದರ್ಶನಗಳಿಗಾಗಿ ಮಹಾಗುರುವಿನ ದ್ವಾರದಲ್ಲಿ ಕಾತರಿಸಿ ಕಾಯುತ್ತಿದ್ದವು..
ಸಕಲ ದೇವತೆಗಳ ನಿತ್ಯೋತ್ಸವಸ್ಥಾನವಾಗಿದ್ದಿತು ಅದು..!

ದಿವ್ಯಶಕ್ತಿಗಳ ದರ್ಶನವೆಂಬ ಮತ್ತೊಂದು ಮೆಟ್ಟಿಲೇರಿದ ಕೌಶಿಕನಿಗೆ ಕಂಡುಬಂದಿತು ಸಾಧಕಸಾಗರ…

ಜೀವಗಳಲ್ಲಿ ಮೂರು ಬಗೆಯನ್ನು ಬಲ್ಲವರು ಮತ್ತೊ೦ದು ವಿಧದಲ್ಲಿ ಹೇಳುವರು..
ದಾಟುವ ದಾರಿ ಕಾಣದೆಯೇ ಸ೦ಸಾರ ಸಾಗರದಲ್ಲಿ ಮುಳುಗುವವರು ಹಲವರು..
ಗುರು ಕರುಣೆಯಿ೦ದ ದಾರಿ ಲಭಿಸಿ ಹಾಗೂ ಹೀಗೂ ಸ೦ಸಾರ ಸಾಗರವನ್ನು ದಾಟುವವರು ಕೆಲವರು..
ತಾನೊಬ್ಬ ಹೇಗೋ ದಾಟಿದರೂ ಬೇರೆಯವರನ್ನು ದಾಟಿಸುವ ಶಕ್ತಿಯಿಲ್ಲದವರಿವರು..
ಮೂರನೆಯ ಬಗೆಯವರು ತಾವೂ ದಾಟುವುದಲ್ಲದೇ ತಮ್ಮೊಡನೆ ಅಸ೦ಖ್ಯ ಜೀವಿಗಳನ್ನೂ ದಾಟಿಸುವವರು.. ಇವರು ಅ೦ತ್ಯ೦ತ ವಿರಳ..
ಮಹಾಗುರುವೆ೦ದು ಕರೆಯಬೇಕಾದದ್ದು ಇವರನ್ನೇ..!

ಕಲ್ಲು ನೀರಿನಲ್ಲಿ ಮುಳುಗಿ ಹೋಗುತ್ತದೆ..
ಎಲೆ ನೀರಿನಲ್ಲಿ ತೇಲಿದರೂ ಇನ್ನೊ೦ದು ವಸ್ತುವನ್ನು ಮುಳುಗದ೦ತೆ ಕಾಪಾಡುವ ಶಕ್ತಿ ಅದಕ್ಕಿಲ್ಲ..
ಆದರೆ ನೌಕೆ ಹಾಗಲ್ಲ..
ಅದು ತಾನೂ ತೇಲುವುದಲ್ಲದೇ ತನ್ನೊಳಗೆ ಅದೆಷ್ಟೋ ಜನರನ್ನು ಕುಳ್ಳಿರಿಸಿಕೊ೦ಡು ದಡಸೇರಿಸಬಲ್ಲದು..!

ಆ ಮಹಾಪುರುಷನ ದಿವ್ಯಾಶ್ರಮದ ದಿವ್ಯಾಶ್ರಯದಲ್ಲಿ ಸಾವಿರಾರು ಸಾಧಕರು ಸ೦ತತ ಸಾಧನೆಯಲ್ಲಿ -ನಿರತರಾಗಿರುವುದನ್ನು ಕೌತುಕದ ಕಣ್ಣುಗಳಿ೦ದ ಕ೦ಡನು ಕೌಶಿಕ..
ಮಹಾಶಿಲ್ಪಿಯೊಬ್ಬನ ಶಿಲ್ಪ ಶಾಲೆಯಲ್ಲಿ ಕೆತ್ತನೆಯ ಬೇರೆ ಬೇರೆ ಹ೦ತದಲ್ಲಿರುವ ಮೂರ್ತಿಗಳ ದರ್ಶನವಾಗುವ೦ತೆ,
ಸಾಧನೆಯ ಬೇರೆ ಬೇರೆ ಮೆಟ್ಟಿಲುಗಳಲ್ಲಿರುವ ಸಾಧಕಸ್ತೋಮದ ದರ್ಶನವಾಯಿತು ಆತನಿಗೆ..
ಅಲ್ಲಿ ಗೆಡ್ಡೆ-ಗೆಣಸು, ಹಣ್ಣು-ಹ೦ಪಲುಗಳನ್ನು ಮಾತ್ರವೇ ಸೇವಿಸುವ ಕ೦ದಮೂಲಫಲಾಶನರಿದ್ದರು..
ಒಣಗಿದ ತರಗೆಲೆಗಳೇ ಆಹಾರವಾಗಿರುವ ಪರ್ಣಾಶನರಿದ್ದರು..
ತರೆಗೆಲೆಗಳನ್ನೂ ತ್ಯಜಿಸಿ ಕೇವಲ ಜಲಮಾತ್ರವನ್ನೇ ಸೇವಿಸುವ ಜಲಾಶನರಿದ್ದರು..
ಇವೆಲ್ಲವನ್ನೂ ಪರಿತ್ಯಜಿಸಿ ಕೇವಲ ವಾಯುಮಾತ್ರವನ್ನೇ ಸೇವಿಸುತ್ತಾ ತಪಗೈಯುವ ವಾಯುಭಕ್ಷರಿದ್ದರು..

ಅಲ್ಲಿ ಸಾಧಕರಿದ್ದರು..
ಸಿದ್ಧರಿದ್ದರು..
ಋಷಿಗಳಿದ್ದರು..
ಮಹರ್ಷಿಗಳಿದ್ದರು..
ದೇವರ್ಷಿಗಳಿದ್ದರು..
ಬ್ರಹ್ಮರ್ಷಿಗಳಿದ್ದರು..

ಅವರೆಲ್ಲರೊಳಗೆ ಸಾಧನೆಯ ಬೇರೆ ಬೇರೆ ಅವಸ್ಥೆಯಲ್ಲಿರುವ ತನ್ನನ್ನೇ ನೋಡಿದ೦ತೆನಿಸಿತು ಕೌಶಿಕನಿಗೆ..!

ಸಾಧಕರಸ೦ಗಮವೆಂಬ ಮೂರನೆಯ ಮೆಟ್ಟಿಲನ್ನೇರಿದನು ಕೌಶಿಕ..

ದಾರಿಯೆಲ್ಲವನ್ನೂ ಕ್ರಮಿಸಿದ ಮೇಲಲ್ಲವೆ ಗುರಿ ತಲುಪುವುದು..?
ವಿಶ್ವದರ್ಶನವಾದ ಮೇಲಲ್ಲವೇ ವಿಶ್ವ೦ಭರನ ದರ್ಶನವಾಗುವುದು..?
ಮೋಡದಿ೦ದ ಮಳೆಯಾಗಿ ಹೊಳೆಗಿಳಿಯುವ ಬಿ೦ದುವೊ೦ದು ನದಿಗಳನ್ನೂ,ಮಹಾನದಿಗಳನ್ನೂ ಕ೦ಡ ಮೇಲಲ್ಲವೇ ಸಾಗರವನ್ನು ಸೇರುವುದು..?
ಮೂರು ಮೆಟ್ಟಿಲುಗಳನ್ನೆರಿ ಮೂರ್ತಿಯನ್ನು ಕಾಣುವ೦ತೆ..ಪ್ರಕೃತಿ ಮ೦ಡಲವನ್ನೂ, ದೇವಮ೦ಡಲವನ್ನೂ, ಮುನಿಮ೦ಡಲವನ್ನೂ ದಾಟಿ ಮು೦ದುವರೆದು ಬ೦ದ ಕೌಶಿಕನಿಗಾಯಿತು ಅದುವರೆಗೆ ಕ೦ಡ ಬಗೆಬಗೆಯ ದಿವ್ಯತೆಗಳ ಮೂಲಪುರುಷನ ದಿವ್ಯದರ್ಶನ ..!

ಹೌದು..! ಅದು ವಸಿಷ್ಠಾಶ್ರಮ..
ಅದೋ..!
ಅವರೇ ಬ್ರಹ್ಮಮಾನಸಪುತ್ರರಾದ ಭಗವಾನ್ ವಸಿಷ್ಠರು..!!

|| ಹರೇರಾಮ ||
(ಹರೇರಾಮ.ಇನ್.ಲಾಗ್ ಇನ್ ಮಾಡಿ ಶ್ರೀ ಗುರುಗಳ ವಚನಾಮೃತವನ್ನು ಓದಿ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿರಿ.-ಸಂ.)

ಮುಂದೆ ಓದಿ
9:29 PM

ಕಥೆಗಾರ

Posted by ekanasu

ಸಾಹಿತ್ಯ

ಭಾಗ - 5




ಕೋಣೆಯ ಸುತ್ತಲೂ ಕಣ್ಣಾಡಿಸಿದ ಹುಡುಗಿ ಮಂಚದಿಂದ ಎದ್ದು ನಿಂತು ಮೆಲ್ಲಗೆ ಸ್ವಾತಿಯನ್ನು ನೋಡಿದಳು.
"ನಿಮ್ಮಿಂದ ಸಹಾಯ ಬೇಕಿದೆ. ನನ್ನ ಪರಿಚಯ ಹೇಳಿಕೊಂಡ್ರೆ ನೀವು ಸಹಾಯ ಮಾಡೋದಿಲ್ಲ" ಕಿರು ನಗುವೊಂದಿತ್ತು ಹುಡುಗಿಯ ಮುಖದಲ್ಲಿ.
"ಅಂದ್ರೆ...?!" ಅರ್ಥವಾಗದೆ ಅವಳನ್ನೇ ನೋಡಿದಳು.
"ಕುಳಿತಿರಿ, ನೀವು ಪರಿಚಯ ಹೇಳಿಕೊಂಡ್ರೆ ಸಹಾಯ ಮಾಡಬಹುದೇನೋ"
ಹುಡುಗಿ ಮಂಚದ ಮೇಲೆ ಕುಳಿತು ಸೀರೆಯ ಸೆರಗನ್ನು ಸರಿಪಡಿಸಿಕೊಂಡಳು. ಕ್ಷಣ ಹೊತ್ತಿನಲ್ಲಿ ಎಲ್ಲವನ್ನು ಹೇಳಿ ಬಿಡಬೇಕೆನ್ನುವ ತವಕ ಅವಳ ಮುಖದಲ್ಲಿದ್ದಂತೆ ಕಂಡಿತು.


"ಒಂದು ಬಡ ಕುಟುಂಬದಲ್ಲಿ ಜನಿಸಿದ ಹುಡುಗಿ ನಾನು. ಕಲಿಯುವ ಹಠ ನನ್ನಲ್ಲಿತ್ತು. ಆವತ್ತು ಅವರ ಜೊತೆಗೆ ನಾನು ಹೋಗದಿರುತ್ತಿದ್ದರೆ ಇವತ್ತು ನಾನು ನನ್ನ ಗುರಿಯನ್ನು ಸಾಧಿಸುತ್ತಿದ್ದೆ. ಆದರೆ ಹಾಗಾಗಲಿಲ್ಲ. ಶ್ರೀಮಂತರ ಕೈಗೊಂಬೆಯಾಗಬೇಕಾಗಿ ಬಂತು. ಇವತ್ತು ನನ್ನ ಬಳಿ ಕಾರಿದೆ, ಬಂಗ್ಲೆ ಇದೆ. ಐಶ್ವರ್ಯವಿದೆ. ಆದರೆ ಮಾನಸಿಕ ನೆಮ್ಮದಿ ನನ್ನಲ್ಲಿಲ್ಲ. ನೀವೊಬ್ಬ ಪತ್ರಕರ್ತೆ. ನನ್ನಂತಹ ಹೆಣ್ಣಿನ ನೋವನ್ನು ನಾಲ್ಕು ಜನರ ಮುಂದೆ ತೆರೆದಿಡಬೇಕು"
ಸ್ವಾತಿ ಅವಳ ಕಥೆಯನ್ನು ಕೇಳುತ್ತಾ ಕುಳಿತಳು.
"ನೀವು ನನ್ನನ್ನು ಕೆಟ್ಟವಳೆಂದು ಬರೆದರೂ ಸರಿಯೇ... ಗಂಡಸಿನ ಸುಖಕ್ಕೆ ಮೀಸಲಾದ ನಮ್ಮ ಬದುಕನ್ನು ನೀವು ಬರೆಯಲೇ ಬೇಕು"
ಸ್ವಾತಿ ತಟ್ಟನೆ ಕೇಳಿದಳು.
"ನೀವು ನನ್ನನ್ನೇ ಹುಡುಕಿಕೊಂಡು ಬರುವ ಅವಶ್ಯಕತೆಯೇನಿತ್ತು?"
ಕ್ಷಣ ಹೊತ್ತು ಸೂಜಿ ಬಿದ್ದರು ಕೇಳಿಸುವಷ್ಟು ಮೌನ ನೆಲೆಸಿತು. ಅದರ ಹಿಂದೆಯೇ ನಗು. ಗಾಳಿಯಲ್ಲಿ ಅಲೆಯಲೆಯಾಗಿ ತೇಲಿ ಬಂದಂತೆ...
"ನೀವು ಖ್ಯಾತ ಪತ್ತೇದಾರಿ ಕಾದಂಬರಿಗಾರ ಜೇಮ್ಸ್ ಬರ್ಟ್ರಂಡ್ ಬಗ್ಗೆ ಬರೆದ ಲೇಖನ ಓದಿದೆ. ಅವನೇ ಸೃಷ್ಟಿಸಿದ ಒಂದು ಪಾತ್ರ ನಾನು... ಪಾತ್ರಗಳನ್ನು ಸೃಷ್ಟಿಸುವುದು ಸುಲಭ. ಆದರೆ ಅವುಗಳಿಗೊಂದು ನ್ಯಾಯ ಒದಗಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಜೇಮ್ಸ್ನ ಪಾತ್ರಗಳೆಲ್ಲವೂ ಹಾಗೆ. ಅದರಲ್ಲಿ ನಾನೂ ಒಬ್ಬಳು... ನೀರಜಾ"
ಸ್ವಾತಿ ಅವಕ್ಕಾಗಿ ನಿಂತಿದ್ದಳು.
"ಅಂದ್ರೆ ಜೇಮ್ಸ್ನ `ರಾತ್ರಿಯ ಹುಡುಗಿ' ಕಾದಂಬರಿಯ ನೀರಜಾ ಪಾತ್ರ ನೀವು? ಅವರ ಕೊಲೆಯ ಹಿಂದೆ ನಿಮ್ಮ ಕೈವಾಡ"
"ಅವನನ್ನು ಕೊಲೆ ಮಾಡಿದವಳು ನಾನೇ. ಅವನ ಒಂದು ನಿರ್ಧಾರ ನನ್ನನ್ನು ಇಂತ ಕೂಪದಿಂದ ಮೇಲಕ್ಕೆ ತರಬಹುದಿತ್ತು. ಅವನು ನನಗೆ ನ್ಯಾಯ ಕೊಡೋದಿಕ್ಕೆ ಸೋತ. ಅವನ ಮೇಲೆ ಯಾವತ್ತಿಂದಲೂ ಸೇಡು ಇತ್ತು. ಅದನ್ನು ತಿರಿಸ್ಕೊಂಡು ಬಿಟ್ಟೆ. ಇವತ್ತು ಪೊಲೀಸರಿಂದ ಹಿಡಿದು ರಾಜಕೀಯದ ವ್ಯಕ್ತಿಗಳೆಲ್ಲಾ ನನ್ನ ಕೈಯಲ್ಲಿದ್ದಾರೆ. ಆ ಕೊಲೆಯ ಆಪಾಧನೆ ನನ್ನ ಮೇಲೆ ಬರುವ ಸಾಧ್ಯತೆಯೇ ಇಲ್ಲ. ಇದು ನನ್ನ ಭಾವಚಿತ್ರ. ಈ ಚಿತ್ರದ ಜೊತೆಗೆ ಬಡ ಹುಡುಗಿಯರು ಹೇಗೆ ಪರಿಸ್ಥಿತಿಯ ಕೈಗೊಂಬೆಯಾಗಿ ಕೀಳು ಮಟ್ಟಕ್ಕಿಳಿಯುತ್ತಾರೆ ಅನ್ನುವುದನ್ನು ಪ್ರಕಟಿಸಿ. ಆದರೆ ಕೊಲೆಯ ವಿಷಯ ಅಲ್ಲ"
ನೀರಜಾ ಬಾಗಿಲು ತೆರೆದು ಬಂದಷ್ಟೇ ವೇಗವಾಗಿ ಹೊರಗೆ ಹೋದಳು. ಸ್ವಾತಿ ಕನಸು ಕಂಡಂತೆ ಅವಳು ಹೋದತ್ತಲೇ ನೋಡುತ್ತಾ ನಿಂತಳು.
ಕಾರು ಬರ್ರನೆ ಕತ್ತಲನ್ನು ಸೀಳಿಕೊಂಡು ಓಡಿತು!!

ಮುಗಿಯಿತು...
- ಅನು ಬೆಳ್ಳೆ

ಮುಂದೆ ಓದಿ

ವೈವಿಧ್ಯ
ಕಿರಾತ ಅಂದರೆ ಬೇಡ ಜಾತಿಯ ರತ್ನಾಕರ ಚ್ಯವನ ಋಷಿಯ ಮಗನಾಗಿದ್ದ. ಗಂಗಾ ತೀರದ ಕ್ರೌಂಚವೆಂಬ ದಟ್ಟಾರಣ್ಯದಲ್ಲಿ ತನ್ನ ಕುಟುಂಬದವರೊಂದಿಗೆ ಇವನು ವಾಸವಾಗಿದ್ದ. ಈ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುವುದು ದಾರಿಹೋಕರನ್ನು ಕಾಡಿಸಿ ಪೀಡಿಸಿ ಅವರ ತಲೆ ಹೊಡೆದು ಅವರಲ್ಲಿದ್ದುದೆಲ್ಲವನ್ನು ಸುಲಿಗೆ ಮಾಡುವುದು, ವಿರೋಧಿಸಿದರೇ ಹತ್ಯೆ ಮಾಡುವುದು ಈ ಬೇಡನ ನಿತ್ಯದ ಕಾರ್ಯಕ್ರಮಾವಾಗಿತ್ತು. ಇವನ ಧೈರ್ಯ ಸಾಹಸ ಎಂತವರ ಗುಂಡುಗೆಯನ್ನು ಗಡಗಡ ನಡುಗುವಂತೆ ಮಾಡಿತ್ತು. ಈ ಕಾಯಕದಿಂದಲೇ ತನ್ನ ಸಂಸಾರದ ಬಂಡಿ ಸುಖವಾಗಿ ಸಾಗುತಿತ್ತು.
ಅದೊಂದು ದಿನ ಈ ಕಿರಾತ ಬೇಟೆಗಾಗಿ ಕಾಡಿಗೆ ಹೊರಟನು. ಅರಣ್ಯದಲ್ಲೆಲ್ಲ ತಿರುಗಾಡಿದರೂ ಒಂದು ಬೇಟೆಯೂ ಇವನಿಗೆ ಸಿಗಲಿಲ್ಲ. ಅಗ ದಟ್ಟಾರಣ್ಯದ ದಾರಿಯಲ್ಲಿ ಸಪ್ತರ್ಷಿಗಳ ಗುಂಪಿನ ದರ್ಶನವಾಯಿತು. ಅವರಲ್ಲಿರುವ ವಸ್ತುಗಳನ್ನು ಕೊಡುವಂತೆ ಪೀಡಿಸಿದ ಕಿರಾತ. ನೋಡು ಕಿರಾತ ಕುಟುಂಬದ ಪೋಷಣೆ ಮಾಡುವುದು ಗೃಹಸ್ಥನ ಕರ್ತವ್ಯವೆಂಬುದೇನೋ ನಿಜ.



ಆದರೆ ಮುಗ್ದ ಜನರನ್ನು ಹಿಂಸಿಸಿ ಅವರ ಕೊಲೆ ಸುಲಿಗೆ ಮಾಡಿ ನೀನು ದ್ರವ್ಯಾರ್ಜನೆ ಮಾಡುವುದು ಮಹಾ ಪಾಪಕರ ಕೆಲಸ ಪರರನ್ನು ಹಿಂಸಿಸದೇ ಸತ್ಯದ ಹಾದಿಯಲ್ಲಿ ನಡೆದು ದುಡಿತದ ಶ್ರಮದಿಂದ ಉಪ ಜೀವನ ನಡೆಸಿದರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಪುಣ್ಯದ ಹಾದಿಯಲ್ಲಿ ಇಂದಿನಿಂದಲೇ ನೀನು ಸಾಗು. ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳು ಇವರ್ಯಾರೂ ನಿನ್ನ ಪಾಪದಲ್ಲಿ ಪಾಲುದಾರರಾಗುವುದಿಲ್ಲ ಎಂದು ಸಪ್ತರ್ಷಿಗಳು ಬುದ್ದಿವಾದ ಹೇಳಿದರು. ನಮ್ಮ ಬಳಿ ಪವಿತ್ರಗೊಳಿಸುವ ರಾಮನಾಮವಿದೆ. ಈ ರಾಮನಾಮ-ತೀರ್ಥಗಳು, ಬೆಳ್ಳಿ-ಬಂಗಾರದ ಒಡವೆಗಳಲ್ಲಿ . ನಿನ್ನ ಪಾಪದ ರಾಶಿಯನ್ನು ನಾಶ ಮಾಡುವಂತಹ ಅಮೋಘ ಸಾಧನಗಳಿವು. ಇವುಗಳನ್ನು ನಮ್ಮಿಂದ ಸ್ವೀಕರಿಸಿದರೇ ಮಾತ್ರ ನೀನು ಪಾಪದಿಂದ ಮುಕ್ತಿ ಹೊಂದಿ ಉದ್ದಾರವಾಗುವೆ. ಈಗ ನೀನು ಪಕ್ಕದ ಗಂಗೆಯಲ್ಲಿ ಮಿಂದು ಬಾ ಹೋಗು ಎಂದರು ಸಪ್ತರ್ಷಿಗಳು. ಭಕ್ತಿ ಭಾವದಿಂದ ಸಪ್ತರ್ಷಿಗಳ ಸ್ಮರಣೆ ಮಾಡುತ್ತಾ ಗಂಗೆ ಕಡೆಗೆ ಕಿರಾತನಿಗೆ ಕಮಂಡಲದೊಲಗಿನ ತೀರ್ಥ ಕೊಟ್ಟು ಪಾವನಕರವಾದ ರಾಮನಾಮವನ್ನು ಉಪದೇಶಿಸಿದರು.

ನೋಡು ಕಿರಾತ ನೀನು ಪಾಪವನ್ನು ನಾಶಗೊಳಿಸುವಂಥ ಪಾವನಕರ ರಾಮನಾಮವನ್ನು ಜಪಿಸುತ್ತ ಕುಳಿತುಕೋ. ಮನಸ್ಸನ್ನು ಅತ್ತಿತ್ತ ಹರಿದಾಡಗೊಡಗಬೇಡ. ತಂದೆ-ತಾಯಿ, ಹೆಂಡತಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗಬೇಡ. ನೀನು ನಮ್ಮಂತೆ ರಾಮನಾಮದ ತಪಸ್ಸನ್ನಾಚರಿಸಿದರೆ ನಿನ್ನ ಪಾಪರಾಶಿಯು ನಾಶವಾಗಿ ನಮ್ಮಂತೆ ತಪಸ್ವಿಯಾಗುವೆ. ಇವರ ಉಪದೇಶ, ಆಶೀರ್ವಾದ ಪಡೆದು ಕಿರಾತ ಹರ್ಷಿತನಾದ ಅಲ್ಲಿಯೇ ಮರದಡಿಯಲ್ಲಿ ಕುಳಿತು ಏಕಚಿತ್ತದಿಂದ ರಾಮ-ರಾಮ ಎಂದು ಪರಮಾತ್ಮನ ನಾಮಸ್ಮರಣೆ ಮಾಡತೊಡಗಿದನು.
ಹಗಲು ರಾತ್ರಿ ಕೆವಲ ರಾಮನಾಮ ಜಪದಲ್ಲಿ ನಿರತನಾದ ಕಿರಾತ ಧ್ಯಾನದಲ್ಲಿ ಮೈಮರೆತ ಇವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಆನೇಕ ವರ್ಷಗಳ ನಂತರ ಸಪ್ತರ್ಷಿಗಳು ಮತ್ತೇ ಅದೇ ಅರಣ್ಯದ ಮಾರ್ಗದಲ್ಲಿಯೇ ಬಂದಾಗ ಹಿಂದೆ ತಾವು ಉಪದೇಶಿಸಿದ್ದ ಕಿರಾತನ (ಬೇಡ) ನೆನಪಾಯಿತು. ಸಪ್ತರ್ಷಿಗಳು ಏ ಕಿರಾತ ಎಂದು ಜೋರಗಿ ಕೂಗಿದರು. ಇವರ ಕೂಗನ್ನು ಕೇಳಿ ಧ್ಯಾನದಿಂದ ಎಚ್ಚರಗೊಂಡ ಕಿರಾತ ಹುತ್ತವನ್ನು ಒಡೆದುಕೊಂಡು ಹೊರ ಬಂದನು. ಇವನನ್ನು ಕಂಡ ಸಪ್ತರ್ಷಿಗಳು ಹರ್ಷಗೊಂಡು ನಿಂತು ಕೈಗಳನ್ನೆತ್ತಿ ಆಶೀರ್ವದಿಸಿದರು. ಕಿರಾತನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿ ಪ್ರಾರ್ಥಿಸತೊಡಗಿದನು. ಸಪ್ತರ್ಷಿಗಳು ಪರಮಾನಂದದಿಂದ ನೀನು ಮೈಮೇಲೆ ವಲ್ಮೀಕ ಬೆಳೆಯುವವರೆಗೂ ತಪಶ್ಚರ್ಯ ಮಾಡಿದ್ದರಿಂದ ನಿನಗೆ ಲೋಕದಲ್ಲಿ ವಾಲ್ಮೀಕಿ ಎಂಬ ಹೆಸರಿನಿಂದ ನಾಮಕರಣ ಮಾಡಿರುವೆವು, ನಿನ್ನ ಪರ್ವತಪ್ರಾಯವದ ಪಾಪರಾಶಿಯೆಲ್ಲವೂ ರಾಮಮಂತ್ರ ಜಪದಿಂದ ನಾಶವಾಗಿ ಅಮೋಘವಾದ ಪುಣ್ಯ ಸಂಚಯ ಮಾಡಿಕೊಂಡಿರುವೆ ನೀನು ಪರಮಜ್ಞಾನಿಯಾದ ಮಹರ್ಷಿಯಾಗುವೆ. ನಿನ್ನಿಂದ ಲೋಕಕಲ್ಯಾಣವಾದ ಕಾರ್ಯವಾಗಲಿ. ವಾಲ್ಮೀಕಿ ಮಹರ್ಷಿಯೇ ನೀನು ವಿಧಿವಸದಿಂದ ಕಿರಾತನಾಗಿ ಜನಿಸಿ ಅದೇ ಸಂಸ್ಕಾರದಿಂದ ಕುಕರ್ಮವನ್ನಾಚರಿಸಿದೆ. ಅದರೆ ಪರಿಪಕ್ವ ಕಾವೊದಗಿದೊಡನೆಯೇ ನಿನಗೆ ನಮ್ಮ ದರ್ಶನವಾಯಿತು. ನೀನು ವಿದ್ಯಾದಾನ ಮಾಡು ಮುಂದೆ ನಿನಗೆ ನಾರದ ಮಹರ್ಷಿಗಳು ಭೇಟಿಯಾಗುವರು ಅವರ ಆಜ್ಞೆಯಂತೆ ನೀನು ನಡೆಯಬೇಕು ಎಂದು ಆಶೀರ್ವದಿಸಿದರು. ಸಪ್ತರ್ಷಿಗಳ ಆಶೀರ್ವಚನದಿಂದ ವಾಲ್ಮೀಕಿ ಋಷಿಯು ಸಂತುಷ್ಠನಾದನು. ಭಕ್ತಿ ವಿನಯದಿಂದ ಸಪ್ತರ್ಷಿಗಳು ಕುರಿತು ಮಹಾತ್ಮರೇ ನಿಮ್ಮಂದಲೇ ನಾನು ಪುನರ್ಜನ್ಮ ಪಡೆದಿರುವೆ ದುಷ್ಟನಾಗಿದ್ದ ನನ್ನನ್ನು ನೀವು ಉದ್ದರಿಸಿದಿರಿ ನಿಮ್ಮ ಉಪಕರವನ್ನು ನಾನೆಂದು ಮರೆಯಲಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ವಾಲ್ಮೀಕಿ ಮಹರ್ಷಿಯೇ ನಾವು ನಿಮಿತ್ತ ಮಾತ್ರರು. ನಿನ್ನನ್ನು ನೀನೇ ಉದ್ದರಿಸಿಕೊಂಡೆ ಏಕನಿಷ್ಠಿಯಿಂದ ರಾಮ ಮಂತ್ರ ಪುರಸ್ಚರನ ಮಾಡಿ ಪಾವನನಾದೆ, ಸರ್ವಸಂಗ ಪರಿತ್ಯಾಗ ಮಾಡಿ ಮನೋನಿಗ್ರಹಗಳಿಂದ ಯೋಗರುಢನಾಗಿ ಮೈಮೇಲೆ ವಲ್ಮೀಕಿ (ಹುತ್ತ) ಬೆಳೆಯುವವರೆಗೆ ಮಾಡಿದ ತಪಸ್ಸು ಸಾಮನ್ಯವಾದುದಲ್ಲ ನಿನ್ನ ನಿಷ್ಠೆಯೇ ನಿನ್ನನ್ನು ಉದ್ದರಿಸಿದೆ. ನೀನು ಪುರಸ್ಚರಣ ಮಾಡಿದ ರಾಮಮಂತ್ರದ ಮಹಿಮೆಯನ್ನು ಚೆನ್ನಾಗಿ ಅರಿತಿರುವೆ ಮುಂದೆ ದೇವರ್ಷಿ ನಾರದರು ಮಹಾಮಹಿಮನಾದ ರಾಮನ ಚರಿತ್ರೆಯನ್ನು ನಿನಗೆ ತಿಳಿಸುವರು ಶ್ರೀ ರಾಮ ಚರಿತೆಯ ಶ್ರವಣದಿಂದ ನಿನಗೆ ಒಳ್ಳೆಯ ಪ್ರಯೋಜನವಾಗುವುದೆಂದು ಶುಭಾಶೀರ್ವದಿಸಿದರು.
ಸಪ್ತಷಿಗಳ ಅದೇಶದಂತೆ ನಾರದಮುನಿಗಳು ವಾಲ್ಮಿಕಿ ಮಹರ್ಷಿಯ ಆಶ್ರಮಕ್ಕೆ ಭೇಟಿ ಕೊಟ್ಟರು. ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ನಾಶಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಶ್ರೀರಾಮ ಚರಿತ್ರೆಯನ್ನು ಬರೆಯುವಂತೆ ನಾರದಮುನಿಗಳು ತಿಳಿಸಿದರು. ಒಮ್ಮೆ ಶಿಷ್ಯನೊಂದಿಗೆ ಗಂಗಾ ಸ್ನಾನಕ್ಕೆ ಹೊರಟ ವಾಲ್ಮೀಕಿಗೆ ಸರಸಸಲ್ಲಾಪದಲ್ಲಿದ್ದ ಕ್ರೌಂಚ ಪಕ್ಷಿ ದಂಪತಿಯನ್ನು ನೋಡಿದರು. ಅವರ ಕಣ್ಣಿದುರಿಗೆ ಬೇಡನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಪಕ್ಷಿ ಕಂಡು ಮರುಗಿದ ವಾಲ್ಮೀಕಿ ಈ ಪಕ್ಷಿಯ ಸಾವಿಗೆ ಕಾರಣನಾದ ಬೇಡನಿಗೆ ಎಂದು ಏಳಿಗೆಯಾಗದಿರಲೆಂದು ಶಾಪ ಕೊಟ್ಟರು. ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪ ಕೊಟ್ಟದ್ದು ತಪ್ಪಾಯಿತೆಂದು ವಾಲ್ಮೀಕಿ ಋಷಿಯೂ ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನ ದರ್ಶನಕ್ಕೆ ತಪಶ್ಚರ್ಯ ಮಾಡಿದರು. ತಪಸ್ಸಿಗೆ ಲೋಕಕರ್ತನಾದ ಬ್ರಹ್ಮದೇವನು ಮೆಚ್ಚಿ ಇವನ ತಪೋವನಕ್ಕೆ ದರ್ಶನವಿತ್ತನು.

ಆಗ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕಿಯಾದ ಮಹರ್ಷಿಯೇ ನಿನ್ನಿಂದ ಲೋಕಕಲ್ಯಾಣ ಮಹಾಕಾರ್ಯವು ಜರುಗಬೇಕಾಗಿದೆ. ಅದಕ್ಕಾಗಿಯೇ ಕ್ರೌಂಚವಧೆಯ ಘಟನೆಯು ನಿನ್ನ ಕಣ್ಮಂದೆ ನಡೆಯಿತು. ದೇವರ್ಷಿ ನಾರದರು ಕೇಳಿದ ಶ್ರೀರಾಮ ಚರಿತೆಯು ನಿನಗೆ ಪೂರ್ಣವಾಗಿ ಕರಗತವಾಗಿದೆ. ಈ ಪುಣ್ಯಪುರುಷನ ಚರಿತ್ರೆಯನ್ನು ನೀನು ಕಾವ್ಯರೂಪದಲ್ಲಿ ಬರೆಯಬೇಕು ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳು, ನದಿ ಸಮುದ್ರಗಳಿರುವವೋ ಅಲ್ಲಿಯವರೆಗೆ ಈ ಲೋಕದಲ್ಲಿ ರಾಮಾಯನ ಕಥೆಯು ಪ್ರಚಲಿತವಾಗಿರುತ್ತದೆ. ನಿನ್ನ ಶ್ರೀರಾಮಚರಿತ ಮಹಾಕಾವ್ಯದ ದಿವ್ಯಕೃತಿಯಿಂದ ಲೋಕೋಪಕಾರವಾಗುವುದು. ನಿನ್ನ ಕಾವ್ಯವು ತನ್ನ ಘನತೆಯಿಂದ ವೇದ ಪಟ್ಟಕ್ಕೇರುವುದು, ಕಾವ್ಯ ರಚನೆಯ ಕಾರ್ಯದಲ್ಲಿ ನೀನೇ ಮೊದಲಿಗನಾಗುವುದರಿಂದ ಆದಿಕವಿ ಎಂಬ ಖ್ಯಾತಿ ಕೂಡ ನಿನಗೆ ಸಲ್ಲತ್ತದೆ ಎಂದ ಬ್ರಹ್ಮದೇವ ವಾಲ್ಮೀಕಿ ಮಹರ್ಷಿಯೇ ಉಪದೇಶ ಮಾಡಿ ಕಣ್ಮರೆ ಹೊಂದಿದನು. ಮರು ಕ್ಷಣವೇ ಮಹರ್ಷಿಯಲ್ಲಿ ರಾಮಾಯಣ ಕಾವ್ಯ ರಚನೆಯ ಸ್ಪೂರ್ತಿಯ ಉದಯವಾಯಿತು.
ವಾಲ್ಮೀಕಿ ಮಹರ್ಷಿ ಪಾವನಕರವಾದ ಶ್ರೀರಾಮಚರಿತೆಯನ್ನು ಕಾವ್ಯರೂಪದಲ್ಲಿ ಶ್ರೀರಾಮ ಜನನದಿಂದ ಹಿಡಿದು ಅವನ ಪಟ್ಟಾಭೀಷೇಕದವರೆಗೆ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ದಕಾಂಡಗಳೆಂಬ ಆರು ಕಾಂಡಗಲಲ್ಲಿ ಶ್ರೀರಾಮ ಚರಿತೆಯನ್ನು ರಚಿಸಿ ಹಾಡಿದ್ದಾನೆ. ಇದನ್ನೇ ನಾವು ವಾಲ್ಮೀಕಿ ವಿರಚಿರ ರಾಮಾಯಣವೆಮದು ಕರೆಯುತ್ತೇವೆ.

ಆದಿಕವಿ ಮಹರ್ಷಿ ವಾಲ್ಮೀಕಿ ಕೇವಲ ವಾಲ್ಮೀಕಿ ನಾಯಕ ಜನಾಂಗದ ಸ್ವತ್ತಲ್ಲ. ಅವರೊಬ್ಬ ಪುಣ್ಯಪುರುಷರಾಗಿದ್ದಾರೆ. ಬೇಟೆಗಾರ, ದರೋಡೆಕೋರ ಪರಾವಲಂಬಿಯಾಗಿದ್ದ ಕಿರಾತ ರತ್ನಾಕರ ಸಪ್ತರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ ರಾಮನಾಮ ಜಪಿಸಿ ಮಹರ್ಷಿ ವಾಲ್ಮೀಕಿಯಾಗಿ ಜಗತ್ಪ್ರಸಿದ್ದ ರಾಮಾಯಾಣ ರಚಿಸಿ ಆದಿಕವಿಯಾದ. ಇವರ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿದೀಪವಾಗಿದೆ ಎವರ ವಿಚಾರಧಾರೆಗಳು ಇಂದಿನ ತಪ್ಪು ದಾರಿ ತುಳಿಉವ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಇವರ ಚಿಂತನೆಗಳು ಜನ ಸಾಮಾನ್ಯರ ಮನ ತಲುಪಿ ಸನ್ಮಾರ್ಗದಲ್ಲಿ ನಡೆಯಬೇಕು.
ಸಮಾಜದ ಕೆಳ ವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವನ ಹುಟ್ಟಿನ ಜಾತಿಯಿಂದ, ಉದ್ಯೋಗದಿಂದ, ನಡುವಳಿಕೆಯಿಂದ, ಪರಿಸರದಿಂದ, ಅಳೆಯುವುದು ಕಷ್ಟವೆನಿಸುತ್ತದೆ. ಯಾವ ಜಾತಿಯವನೆ ಇರಲಿ, ಅವನಿಗೆ ಸತ್ಯದ ಹಾದಿಯಲ್ಲಿ ಕೊಂಡೊಯ್ಯುವ ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ, ವಿದ್ಯೆ ಬುದ್ದಿ, ಗುರು ದೀಕ್ಷೆ, ಮಾರ್ಗದರ್ಶನ ಸಿಕ್ಕಿದ್ದೇಯಾದರೆ ಅವನು ಏನೆಲ್ಲ ಸಾಧಿಸಿ ತೋರಿಸುವುದರೊಂದಿಗೆ ಜನಮನದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ಉಳಿಯಬಲ್ಲ ಎನ್ನುವುದಕ್ಕೆ ಬೇಡರ ಜಾತಿಯಲ್ಲಿ ಹುಟ್ಟಿದ ಕಿರಾತ ರತ್ನಾಕರ ಅಂದರೆ ವಾಲ್ಮೀಕಿ ಮಹರ್ಷಿಯೇ ನಿದರ್ಶನರಾಗಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ಸಾಹಿತಿಗಳು, ಲೇಖಕರು, ಪ್ರಕಾಶಕರನ್ನು ಬೆಸೆಯುವ ಹಾಗೂ ಕನ್ನಡ ಪುಸ್ತಕಗಳಲ್ಲಿರುವ ಚಿಂತನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಕನ್ನಡ ಪುಸ್ತಕ ಪ್ರಾಧಿಕಾರ ಮಂಗಳೂರಿನ ನೆಹರು ಮೈದಾನದಲ್ಲಿ ಅಕ್ಟೋಬರ್ 24 ರಿಂದ 31ರವರೆಗೆ ರಾಜ್ಯ ಮಟ್ಟದ ಕನ್ನಡ ಪುಸ್ತಕ ಮೇಳವನ್ನು ಆಯೋಜಿಸಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಅಶೋಕ್ ಎನ್. ಚಲವಾದಿ ಹೇಳಿದರು.
ಈ ಸಂಬಂಧ ಜಿಲ್ಲಾಧಿ ಕಾರಿಗಳ ಸಭಾಂಗ ಣದಲ್ಲಿ ಆಯೋಜಿ ಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ.24 ಭಾನುವಾರ ಬೆಳಗ್ಗೆ 10 ಗಂಟೆ ಯಿಂದ ಅ.31 ರಂದು ರಾತ್ರಿ 9 ಗಂಟೆಯ ವರೆಗೆ ಪುಸ್ತಕ ಮಾರಾಟ ಹಾಗೂ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸುವ ಉದ್ದೇಶ ದಿಂದ ಕನ್ನಡ ಪುಸ್ತಕ ಮೇಳವನ್ನು ಹಮ್ಮಿ ಕೊಂಡಿದೆ ಎಂದು ವಿವರಿಸಿದರು.




25,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಸೌಲಭ್ಯ ಸಹಿತ ಹಾಗೂ ಧೂಳು ರಹಿತ ಪೆಂಡಾಲ್, ಸುಸಜ್ಜಿತ ಬುಕ್ ಸ್ಟಾಲ್ ಗಳು, 110 ಕ್ಕೂ ಮಿಕ್ಕಿದ ಸಂಖ್ಯೆಯ ಪುಸ್ತಕ ಮಳಿಗೆಗಳೂ, ಪ್ರಸಿದ್ಧ ಪ್ರಕಾಶನ ಸಂಸ್ಥೆಗಳ ಪುಸ್ತಕಗಳು, ರಾಜ್ಯದ ವಿಶ್ವ ವಿದ್ಯಾನಿಲಯಗಳ ಪ್ರಸಾ ರಾಂಗದ ಮಹತ್ವ ಪೂರ್ಣ ಪ್ರಕಟಣೆ ಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಿತ ಕೃತಿಗಳು, ಕನ್ನಡ, ತುಳು, ಕೊಂಕಣಿ, ಬ್ಯಾರಿ,ಕೊಡವ ಇತ್ಯಾದಿ ಅಕಾಡೆಮಿ ಗಳಿಂದ ಪ್ರಕಾಶ ನಗೊಂಡ ಪುಸ್ತಕಗಳು, ಶೇ. 30 ರಿಯಾಯಿತಿ ದರದಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳು. ಶೇ. 10 ರಿಂದ ಮೇಲ್ಪಟ್ಟು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಅವರು ನುಡಿದರು. ಮೇಳದ ಜೊತೆಗೆ ಸಾಂಸ್ಕೃತಿಕ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿದೆ ಎಂಬುದನ್ನು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸದಸ್ಯ ಸಂಚಾ ಲಕರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, ಪ್ರಾಧಿಕಾರದ ಆಶಯ ಗಳನ್ನು ವಿವರಿಸಿ ದರಲ್ಲದೆ,ಜಿಲ್ಲಾ ಕಸಾಪದ ವತಿಯಿಂದ ಲೇಖಕರಿಗೆ ನೇರ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರಕಾಶಕರು, ಓದುಗರು,ಲೇಖಕರು, ಎಲ್ಲ ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿ ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಸಹಕಾರ ಕೋರಿದರು. ಕಳೆದ ಫೆಬ್ರವರಿಯಲ್ಲಿ ಮೈಸೂರು ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪುಸ್ತಕ ಮೇಳ ಅಭೂತ ಪೂರ್ವ ಯಶಸ್ಸು ಕಂಡಿದ್ದು, ಎಲ್ಲ ಪುಸ್ತಕ ಪ್ರೇಮಿಗಳು ಸಹಕರಿಸಲು ಮನವಿ ಮಾಡಿದರು. ಮತ್ತೊಬ್ಬ ಸದಸ್ಯರಾದ ಮುಕುಂದ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪುಸ್ತಕ ಮೇಳ ಯಶಸ್ಸಿಗೆ ಸಿಇಒ ಅಧ್ಯಕ್ಷತೆಯಲ್ಲಿ ಸಭೆ:ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಪುಸ್ತಕ ಮೇಳವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿ ಕೊಳ್ಳುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪಿ. ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 20 ರಂದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಯಿತು.ಜಿಲ್ಲೆಯ ವಿವಿಧ ಪ್ರಾಥಮಿಕ ಮತ್ತು ಪ್ರೌಢ ಶಾಲೆಗ ಳನ್ನೊಳ ಗೊಂಡಂತೆ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳಲು ಅನುಕೂ ಲವಾಗು ವಂತೆ ಸಂಬಂಧಪಟ್ಟ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ವಿದ್ಯಾಂಗ ಇಲಾಖೆ ಉಪ ನಿರ್ದೇಶಕರಾದ ಚಾಮೇ ಗೌಡ ಅವರಿಗೆ ಸಿ ಇ ಒ ಅವರು ಸೂಚಿಸಿದರು. ಪೂರ್ವಹ್ನ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಅಪರಾಹ್ನ ಪ್ರೌಢಶಾಲಾ ಮಕ್ಕಳು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು. ಓದಿನ ಅಭಿರುಚಿಯನ್ನು ಬೆಳೆಸಲು ಪುಸ್ತಕ ಮಳಿಗೆ ಭೇಟಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಕಾಲೇಜು ಶಿಕ್ಷಣಾಧಿಕಾರಿಗಳು, ಕಾರ್ಪೋರೇಷನ್ ಅಧಿಕಾರಿಗಳು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್ ಎನ್. ಚಲವಾದಿ ಸದಸ್ಯರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಪುಸ್ತಕ ಮೇಳ ಸುವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಸಿ ಇ ಒ ಅವರು ಹೇಳಿದರು.

ಮುಂದೆ ಓದಿ
11:28 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 4


`ಅವನೊಬ್ಬ ನಿಗೂಢ ವ್ಯಕ್ತಿ! ಅವನ ಕಾದಂಬರಿಗಳಲ್ಲಿ ಬರುವ ಪಾತ್ರದಂತೆ. ಕೊನೆಯವರೆಗೂ ಕುತೂಹಲವೇ ತುಂಬಿರುವಂತೆ' ಸಂದರ್ಶನ ನಡೆಸಿದ ತನ್ನದೇ ಕಛೇರಿಯ ಸಹದ್ಯೋಗಿ ಲಕ್ಷಣ ಹೇಳಿದ್ದ. ಪತ್ರಿಕೆಯನ್ನು ಮಡಚಿ ಕೆಳಗಿಟ್ಟು ಇನ್ನೊಂದು ಕಾದಂಬರಿಯನ್ನು ಕೈಗೆತ್ತಿಕೊಂಡಳು.
`ಕೊಲೆಗಾರನ ಕೊಲೆ'!




ಕೊಲೆ ಮಾಡಿದ ವ್ಯಕ್ತಿ ಕೊಲೆ ಮಾಡಲು ಹೊರಟಿರುವ ವ್ಯಕ್ತಿಯ ಕೊಲೆಯಾಗುವ ಮೊದಲು ತಾನೇ ಕೊಲೆಯಾಗಿರುತ್ತಾನೆ. ಹಾಗಾದರೆ ಆ ವ್ಯಕ್ತಿಯ ಕೊಲೆ ಮಾಡಿದವರು ಯಾರು? ಕೊಲೆಗಾರನನ್ನು ಕೊಲೆ ಮಾಡಿದವರು ಯಾರು?
ಹೀಗೆ ಎಲ್ಲಾ ಕಾದಂಬರಿಗಳನ್ನು ಓದಿದ ಬಳಿಕ ಕೊಲೆಯಾದ ಪಾತ್ರಗಳನ್ನೆಲ್ಲಾ ಟಿಪ್ಪಣಿ ಬರೆದು ಇರಿಸಿಕೊಂಡ ಸ್ವಾತಿ, ಆ ಪಾತ್ರಗಳನ್ನೆಲ್ಲಾ ಅಧ್ಯಯನ ಮಾಡಿಕೊಂಡಳು.
ಸಾಪ್ತಾಹಿಕಕ್ಕೆ ಬರವಣಿಗೆ ಸಿದ್ದವಾಯಿತು. ಆದರೆ ಕೊಲೆಯಾದವನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆಹಾಕುವುದು ಬೇಕಿತ್ತು. ಅವನು ನಿರ್ಮಿಸಿದ ಕೊಲೆಯಾದ ಪಾತ್ರಗಳೆಲ್ಲಾ ಕಣ್ಣ ಮುಂದೆ ಸುಳಿದವು. ಆ ಕೊಲೆಯಾದ ಸ್ಥಳಗಳನ್ನು, ಕೊಲೆಯಾದ ಸಮಯದಲ್ಲಿಯೇ ನೋಡಬೇಕೆನ್ನುವ ತುಡಿತ ಅವಳಿಗೆ. ಅಲ್ಲೇನಾದರು ಕುರುಹು ದೊರಕಬಹುದು.

***

ರಾತ್ರಿಯ ಗಾಢವಾದ ಮೌನದಲ್ಲಿ ಕೊಲೆಯಾದ ಪಾತ್ರಗಳೆಲ್ಲವೂ ಕಟಕಟ್ಟೆಯಲ್ಲಿ ನಿಂತು ನ್ಯಾಯ ಕೇಳುವಂತೆ ಕನಸು ಬಿತ್ತು ಸ್ವಾತಿಗೆ. ತಟ್ಟನೆ ಎಚ್ಚರವಾಯಿತು. ಎದ್ದು ಕುಳಿತವಳ ಮೈ ಮೆಲ್ಲಗೆ ಕಂಪಿಸುತ್ತಿತ್ತು. ಇದು ಭ್ರಮೆ! ಯಾರೋ ಬರೆದ ಕಾದಂಬರಿಯ ಪಾತ್ರಗಳು ಈ ರೀತಿ ಕನಸಿನಲ್ಲಿ ಕಾಡುವುದೆಂದರೆ?! ಬಾಯಿ ಒಣಗಿದಂತಾಗಿ ಎದ್ದು ಹೂಜಿಯಿಂದ ನೀರು ತೆಗೆದು ಕುಡಿದಳು.
`ನಾನು ನಿರ್ಮಿಸಿದ ಪಾತ್ರಗಳೇ ನನ್ನನ್ನು ಸಾಯಿಸುತ್ತಿವೆ' ಜೇಮ್ಸ್ ಬರೆದಿಟ್ಟ ವಾಕ್ಯ ಕಣ್ಣ ಮುಂದೆ ಸುಳಿಯಿತು.
ನೀರು ಕುಡಿದು ಚೇತರಿಸಿಕೊಂಡವಳನ್ನು ಪೂರ್ತಿಯಾಗಿ ಎಚ್ಚರಿಸಿದ್ದು ಆ ನಡು ರಾತ್ರಿಯಲ್ಲಿಯೂ ಮನೆಯ ಬಾಗಿಲು ಬಡಿದ ಸದ್ದು!!
ಹಿಂದಕ್ಕೆ ಹಾರಿ ಗೋಡೆಯ ಆಸರೆಗೆ ನಿಂತು ಮೆಲ್ಲನೆ ಕಣ್ಣುಗಳನ್ನು ಬಾಗಿಲಿನ ಸಂಧಿಗೆ ತೂರಿಸಿದಳು.
ಕೆದರಿದ ಕೂದಲು. ಸೀರೆಯ ಸೆರಗು ಕೈಯವರೆಗೂ ಇಳಿಬಿದ್ದು, ಯಾವನೋ ಚಿತ್ರ ಕಲಾವಿದನ ಕುಂಚದ ಅದ್ಭುತ ಸೃಷ್ಟಿಯಂತಹ ತೆಳು ದೇಹದ ಹುಡುಗಿಯೊಬ್ಬಳು ನಿಂತಿದ್ದಳು! ನಿಂತಿರುವುದು ಹೆಣ್ಣೆಂಬ ಧೈರ್ಯ ಮೂಡಿತು. ಬಾಗಿಲಿನ ಚಿಲಕ ತೆಗೆದು ನಿಂತಳು.
"ನನ್ನ ಪರಿಚಯವಿದೆಯಾ? ನಿಮ್ಮತ್ರ ಬಹಳ ಮುಖ್ಯವಾದ ವಿಷಯ ತಿಳಿಸ್ಬೇಕು" ಸ್ವಾತಿಯನ್ನು ತಳ್ಳಿಕೊಂಡಂತೆ ಒಳಗೆ ಬಂದ ಅವಳು ಮಂಚದ ಮೇಲೆ ಕುಳಿತಳು.
ನಿದ್ದೆ ಪೂತರ್ಿ ಹಾರಿ ಹೋಗಿದ್ದ ಹುಡುಗಿ ಬಾಗಿಲು ಮುಚ್ಚಿ ಅವಳತ್ತ ನಡೆದಳು.
"ಮೊದಲು, ನೀವು ಯಾರು ಅನ್ನೋದನ್ನು ತಿಳಿಸಿ"

ನಾಳೆಗೆ...

- ಅನು ಬೆಳ್ಳೆ.

ಮುಂದೆ ಓದಿ

ಅಗ್ರಲೇಖನ

ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ ನೈತಿಕ ಪ್ರಜ್ಞೆ ಇಲ್ಲವೇ.. ಈ ಪ್ರಶ್ನೆ ಖಂಡಿತವಾಗಿಯೂ ಮಂಗಳವಾರ (ಅಕ್ಟೋಬರ್ 19) ಸುದ್ದಿವಾಹಿನಿಗಳನ್ನು ನೋಡಿದ ರಾಜ್ಯದ ಮಂದಿಗೆಲ್ಲಾ ಮೂಡುವುದರಲ್ಲಿ ಸಂದೇಹವೇ ಇಲ್ಲ.
ಅದು ರಾತ್ರಿ 9ರ ಸುಮಾರಿಗೆ ಪ್ರಮುಖ ಸುದ್ದಿವಾಹಿನಿಗಳು ಭಿತ್ತರ ಮಾಡಿದ ವಿಡಿಯೋ ಕ್ಲಿಪ್ಪಿಂಗ್ , ನೇರ ವರದಿಗಳನ್ನು ನೋಡಿದ ಪ್ರಜ್ಞಾವಂತ ಜನತೆಯೆದುರು ಆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರೇನಾದರೂ ಇದ್ದಿದ್ದೇ ಆದಲ್ಲಿ ಕ್ಯಾಕರಿಸಿ ಉಗಿದೇ ಬಿಡುತ್ತಿದ್ದರೇನೋ...!
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಜಯಗಳಿಸಿದವರೋರ್ವರು ಏಕಾಏಕಿಯಾಗಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣ ಕಾಂಗ್ರೆಸ್ ಮುಖಂಡರಿಗೆ ಆವೇಶ ಬಂದುಬಿಟ್ಟಿದೆ. ತಕ್ಷಣ ತಮ್ಮ "ವ್ಯಕ್ತಿತ್ವ"ವನ್ನೂ ಮರೆತು "ರಾಜಕೀಯವೆಂದರೇ ಹೀಗೆ " ಎಂಬಂತೆ ಮೈಮೇಲೆ ದೆವ್ವ ಬಂದಂತೆ ಆಡತೊಡಗಿದರು. ರಾಜ್ಯದ ಮುಖ್ಯಮಂತ್ರಿಗಳ ಮನೆಯೆದರು ಜಮಾಯಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ನೈತಿಕ ಪ್ರಜ್ಞೆಯನ್ನು ಮರೆತು ಮಾತನಾಡಿದ್ದಾರೆ. "ಮುಖ್ಯಮಂತ್ರಿ" ಎಂಬ ಸ್ಥಾನಕ್ಕೆ ಕನಿಷ್ಠ ಗೌರವ ಕೊಡುವುದಕ್ಕೂ "ಕಾಂಗ್ರೆಸ್ " ಪಕ್ಷಕ್ಕೆ ಸಾಧ್ಯವಾಗಿಲ್ಲ. "ಮುಖ್ಯಮಂತ್ರಿಗಳನ್ನು " ಏಕವಚನದಲ್ಲಿ ಕೂಗಿದ ಕಾಂಗ್ರೆಸ್ ಮುಖಂಡರು ತಮ್ಮ ವ್ಯಕ್ತಿತ್ವ ಏನು ಎಂಬುದನ್ನು ಜನತೆಯೆದುರು ತೋರಿಸಿಕೊಂಡಿದ್ದಾರೆ.



"ಮುಖ್ಯಮಂತ್ರಿ ಹುದ್ದೆ "ಎಂಬುದು ಒಂದು ಗೌರವದ ಹುದ್ದೆ. ಅಲ್ಲಿ ಯಾರೇ ಕೂತಿರಲಿ ಆ ಸ್ಥಾನಕ್ಕೆ ಆ ಕ್ಷಣದಲ್ಲಿ ಗೌರವ ಕೊಡಬೇಕು. ಅದು ವ್ಯಕ್ತಿಗೆ ಕೊಡುವ ಗೌರವ ಅಲ್ಲ; ಬದಲಾಗಿ ಆ ಸ್ಥಾನಕ್ಕೆ ಆ ಹುದ್ದೆಗೆ ದೊರಕುವ ಮಯರ್ಾದೆ. ಈ ಒಂದು ಮೂಲ ಜ್ಞಾನವೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನ ಮುಖಂಡರಿಗೆ ಗೊತ್ತಿಲ್ಲವೇ...?
"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನಿಗೆ ಧಿಕ್ಕಾರ "...., "ಕಳ್ಳ , ಸುಳ್ಳ ಬಿಜೆಪಿ ಸರಕಾರ".... , "ಕಳ್ಳ ಮುಖ್ಯಮಂತ್ರಿ ..." ಈ ರೀತಿಯ ಮಾತುಗಳನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ನೇತಾರರು ಮಾಧ್ಯಮದೆದುರು ಹೇಳಿಕೊಂಡಿದ್ದಾರೆ, ಘೋಷಣೆ ಕೂಗಿ ಜಗಜ್ಜಾಹೀರು ಮಾಡಿದ್ದಾರೆ. ಅಂದರೆ ಇಲ್ಲಿ ಮುಖ್ಯಮಂತ್ರಿಗಳನ್ನು "ಏಕವಚನ"ದಲ್ಲಿ ಕರೆದಂತಾಗಿದೆ. "ಸರಕಾರ"ವನ್ನು ಕಳ್ಳ ಸುಳ್ಳ ಎಂದು ಹೀಯಾಳಿಸಿದಂತಾಯಿತು. ವಾಸ್ತವಕ್ಕೆ ಕಾಂಗ್ರೆಸ್ ಪಕ್ಷದವರು ಆಡಳಿತ ಪಕ್ಷವಾದ ಬಿಜೆಪಿಯನ್ನು , ಬಿ.ಜೆ.ಪಿ ಪಕ್ಷದ ಲೋಪ ದೋಷಗಳನ್ನು ಎತ್ತಿ ಹೇಳಬಹುದಿತ್ತು. ಆದರೆ ಬದಲಾಗಿ ಬಿಜೆಪಿ ಪಕ್ಷದಿಂದ ಆರಿಸಿ ಬಂದು ಮುಖ್ಯಮಂತ್ರಿ ಹುದ್ದೆಯನ್ನಲಂಕರಿಸಿದ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಸಿಟ್ಟನ್ನು ನೇರವಾಗಿ "ಮುಖ್ಯಮಂತ್ರಿ" ಹುದ್ದೆಯ ಮೇಲೆ ತೀರಿಸಿಕೊಂಡಂತಾಗಿದೆ. ಆಡಳಿತ ಪಕ್ಷದ ಮೇಲಿನ ಸಿಟ್ಟನ್ನು "ಸರಕಾರ" ಎಂಬ ವ್ಯವಸ್ಥೆಯ ಮೇಲೆ ತೀರಿಸಿಕೊಂಡಂತಾಗಿದೆ.
ನೈತಿಕತೆಯ ಬಗ್ಗೆ ಮಾತನಾಡುತ್ತಿರುವ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಎಷ್ಟರ ಮಟ್ಟಿಗೆ ನೈತಿಕ ಪ್ರಜ್ಞೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಯೋಚಿಸಲೇಬೇಕಾಗಿದೆ.
ಕಾಂಗ್ರೆಸ್ ಪಕ್ಷ ಕಳೆದ ಹಲವು ದಶಕಗಳ ಕಾಲ ಇದೇ ರಾಜ್ಯವನ್ನು ಆಳಿತ್ತು. ತನ್ನ ಆಳ್ವಿಕೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಯಾವೊಂದೂ "ಅನ್ಯಾಯ"ವನ್ನೂ ಮಾಡೇ ಇಲ್ಲ!. ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಂತಹ ಘಟಾನು ಘಟಿ ವ್ಯಕ್ತಿಗಳು ಸರಕಾರದ ಯಾವೊಂದು ಸೌಲಭ್ಯಗಳನ್ನು ಬಳಸಿಕೊಂಡೇ ಇಲ್ಲ!!!? ಅಷ್ಟೊಂದು ಪ್ರಾಮಾಣಿಕ ರೀತಿಯಲ್ಲಿ ರಾಜ್ಯಭಾರ ಮಾಡಿದೆಯಲ್ಲಾ...!!! ಆಡಳಿತ ಪಕ್ಷದ ಕುಂದುಕೊರತೆಗಳನ್ನು ಗುರುತಿಸಿ , ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿರುವುದು ವಿಪಕ್ಷದ ಜವಾಬ್ದಾರಿ. "ತನ್ನ ಎಲೆಯಲ್ಲಿರುವ ಹೆಗ್ಗಣವನ್ನು ಬಿಟ್ಟು ಇನ್ನೊಬ್ಬನ ಎಲೆಯಲ್ಲಿರುವ ನೊಣದ ಬಗ್ಗೆ ಮಾತನಾಡಿದ " ಎಂಬಂತೆ ಆಡುತ್ತಿದೆ ಕಾಂಗ್ರೆಸ್ ಪಕ್ಷ. ಸುಧೀರ್ಘವಾದ ತನ್ನ ಆಡಳಿತಾವಧಿಯಲ್ಲಿ ಮಾಡಬಾರದ ಅನಾಚಾರಗಳನ್ನು ಮಾಡಿದ ಈ ರಾಷ್ಟ್ರೀಯ ಪಕ್ಷ ಹಲವಾರು ಬಾರಿ ಜನತೆಯಿಂದ ಛೀಮಾರಿಗೊಳಗಾಗಿದೆ ಎಂಬುದನ್ನು ಮರೆಯುವಂತಿಲ್ಲ.

ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆದುಕೊಳ್ಳುತ್ತಿದೆ ಎಂದು ಗಂಟಲು ಹರಿಯುವಂತೆ ಮಂಗಳವಾರ ರಾತ್ರಿವೇಳೆ ಭಾಷಣ ಬಿಗಿದ ಕಾಂಗ್ರೆಸ್ ಪಕ್ಷದ ಈಗಿನ ಮುಖಂಡರೆನಿಸಿಕೊಂಡ ಮಾನ್ಯ ಸಿದ್ಧರಾಮಯ್ಯನವರು ತಾನು ಜೆ.ಡಿ.ಎಸ್. ಪಕ್ಷದಿಂದ ವಲಸೆ ಬಂದು ಕಾಂಗ್ರೆಸ್ ಬಾಗಿಲು ಬಡಿದವನೆಂಬುದನ್ನು ಮರೆತಂತಿದ್ದರು!

- ಹರೀಶ್ ಕೆ.ಆದೂರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯವನ್ನು ಕಾಡುತ್ತಿರುವ ಅರಾಜಕತೆಯೆಂಬ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ ಏನು? ಇದು ಈ ರಾಜ್ಯದ ಆರು ಕೋಟಿ ಜನರ ಮನದಲ್ಲಿಂದು ಎದ್ದಿರುವ ದುಗುಡಭರಿತ ಪ್ರಶ್ನೆ.
ಅಲ್ಪಮತವನ್ನು ಬಹುಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಚುನಾಯಿತ ಶಾಸಕರಿಂದ ರಾಜಿನಾಮೆ ಕೊಡಿಸಿ, ಮತ್ತೆ ಚುನಾವಣೆ ನಡೆಸಿ ಅವರನ್ನು ಗೆಲ್ಲಿಸಿ ತರುವುದಾಗಲೀ ಚುನಾಯಿತ ಸರಕಾರವನ್ನು ಬುಡಮೇಲು ಮಾಡಲು ವಿರೋಧ ಪಕ್ಷಗಳು ಯತ್ನಿಸುವುದಾಗಲೀ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯೆಂಬುದು ಎಲ್ಲರಿಗೂ ಗೊತ್ತು. ಆದರೆ, ಸಂವಿಧಾನ, ಕಾನೂನುಗಳನ್ನು ಹೇಗೇ ತಿದ್ದಿ ತೀಡಿದರೂ ಅವುಗಳ ಆಶಯಕ್ಕೆ ವ್ಯತಿರಿಕ್ತವಾಗಿ ಸಾಗಿ ದಕ್ಕಿಸಿಕೊಳ್ಳುವ ಜಾಣ್ಮೆ ನಮ್ಮ ರಾಜಕೀಯ ನೇತಾರರಿಗಿದೆ. ಇದೇ ಜಾಣ್ಮೆಯನ್ನವರು ರಾಜ್ಯಾಡಳಿತದಲ್ಲಿ ತೋರಿದ್ದರೆ ರಾಜ್ಯದ ಮತ್ತು ಆ ನೇತಾರರ ಭವಿಷ್ಯ ಎರಡೂ ಹಸನಾಗುತ್ತಿದ್ದವು. ಅಷ್ಟು ವಿಶ್ವಾಸ ಮತ್ತು ತಾಳ್ಮೆ ನಮ್ಮ ನೇತಾರರಿಗಿಲ್ಲ. ಅವರ ಅತೀವ ದುಃಸ್ವಾರ್ಥ ಇದಕ್ಕೆ ಕಾರಣ.




ಹೀಗಿರುವಾಗ, ನಿಸ್ಪೃಹರನ್ನು, ಕನಿಷ್ಠಪಕ್ಷ ದುಃಸ್ವಾರ್ಥಿಗಳಲ್ಲದವರನ್ನು ಶಾಸನಸಭೆಗೆ ಆರಿಸಿ ಕಳಿಸುವುದೊಂದೇ ಇಂದಿನಂತಹ ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರ. ಹಣಬಲದಿಂದ ಚುನಾವಣೆಗಳನ್ನು ಗೆಲ್ಲುವ ಇಂದಿನ ದಿನಗಳಲ್ಲಿ ನಿಸ್ಪೃಹರ ಆಯ್ಕೆ ಅಸಾಧ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ ಮತದಾರರಾದ ನಮ್ಮಲ್ಲಿ ತಕ್ಕ ಎಚ್ಚರ ಮೂಡಿದರೆ ಯೋಗ್ಯರ ಆಯ್ಕೆ ಅಸಾಧ್ಯವೇನಲ್ಲ.
ಮತದಾರರಾದ ನಾವು, ಮುಖ್ಯವಾಗಿ ವಿದ್ಯಾವಂತರು ಮತದಾನವನ್ನು ತಪ್ಪದೇ ಮಾಡಬೇಕು. ಆಗ ಕೆಲವಾದರೂ ಕ್ಷೇತ್ರಗಳಲ್ಲಿ ಅಯೋಗ್ಯರಿಗೆ ಹಿನ್ನಡೆಯಾಗುವುದು ನಿಶ್ಚಿತ. ಈ ಇತ್ಯಾತ್ಮಕ ಬೆಳವಣಿಗೆಯನ್ನು ಗಮನಿಸುವ ರಾಜಕೀಯ ಪಕ್ಷಗಳು ಕ್ರಮೇಣ ಯೋಗ್ಯ ಅಭ್ಯರ್ಥಿಗಳೆಡೆಗೆ ವಾಲುವುದು ಅನಿವಾರ್ಯವಾಗುತ್ತದೆ. ಪಕ್ಷೇತರನೇ ಯೋಗ್ಯನೆಂದಾದಲ್ಲಿ ಅವನನ್ನೇ ಗೆಲ್ಲಿಸುವ ಇಚ್ಛಾಶಕ್ತಿಯನ್ನು ಮತದಾರರು ಬೆಳೆಸಿಕೊಂಡಲ್ಲಿ ಇದು ಕ್ರಮೇಣ ರಾಜಕೀಯ ಪಕ್ಷಗಳ ಶುದ್ಧೀಕರಣಕ್ಕೆ ಬಲವಾದ ಪ್ರೇರಣೆಯಾದೀತು.

ವಿದ್ಯಾವಂತರಾದ ನಾವು ಬರಿದೆ ಮಾತಾಡುತ್ತೇವೆ. ಮತಗಟ್ಟೆಗೆ ಹೋಗಿ ಮತದಾನ ಮಾಡುವುದಿಲ್ಲ. ಬೆಂಗಳೂರಿನ ಅತಿ ಶ್ರೀಮಂತ ಮತ್ತು ವಿದ್ಯಾವಂತ ಮತದಾರರ ಏರಿಯಾದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿರುವುದು ಇದಕ್ಕೆ ಸಾಕ್ಷಿ. ಅಮಾಯಕ ಮತದಾರರ ಬಡತನ, ದೂರದೃಷ್ಟಿಯ ಕೊರತೆ, ಚಟಗಳು ಇವುಗಳನ್ನು ದುರುಪಯೋಗ ಪಡಿಸಿಕೊಂಡು ದುಡ್ಡು ಚೆಲ್ಲಿ ಚುನಾವಣೆ ಗೆಲ್ಲುವವರೇ ರಾಜಕೀಯ ಸಮಸ್ಯೆಗಳಿಗೆ ಕಾರಣರು. ಇಂತಹವರನ್ನು ಸೋಲಿಸಬೇಕೆಂದರೆ, ಬಡತನವೆಂಬ ಅಸಹಾಯಕತೆ ಆವರಿಸಿರದ, ದೂರದೃಷ್ಟಿಯುಳ್ಳ ಮತ್ತು ಚಟಗಳಿಗಾಗಿ ಧನಾಪೇಕ್ಷೆಯ ಅಗತ್ಯ ಹೊಂದಿರದ ಬಲ್ಲಿದ ವಿದ್ಯಾವಂತರೆಲ್ಲ ಮತಗಟ್ಟೆಗೆ ಹೋಗಿ ಮತ ಹಾಕಬೇಕು. ಇದಕ್ಕಾಗಿ ಮತದಾನವನ್ನು ಕಡ್ಡಾಯಗೊಳಿಸುವುದು ಅವಶ್ಯವೆಂದಾದರೆ ಅದನ್ನು ನಾನು ಸ್ವಾಗತಿಸುತ್ತೇನೆ.
ರಾಜಕೀಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಇನ್ನೊಂದು ಕೆಲಸವೂ ಆಗಬೇಕು. ಅದೆಂದರೆ, ಎಳೆಯರಲ್ಲಿ ನೈತಿಕ ಮೌಲ್ಯಗಳನ್ನು ಸ್ಥಾಪಿಸುವ ಕೆಲಸ. ಪೋಷಕರು, ಶಿಕ್ಷಕರು ಮಾತ್ರವಲ್ಲ, ಇತರರೂ ಈ ಕೆಲಸ ಮಾಡಬಹುದು. ಲೋಕಾಯುಕ್ತ ಸಂತೋಷ ಹೆಗ್ಡೆಯವರು ಇದಕ್ಕೆ ಉದಾಹರಣೆ. ಶಿಕ್ಷಕನಲ್ಲದ ನಾನು ಶಾಲೆ ಕಾಲೇಜುಗಳಿಗೆ ಹೋಗಿ ವಿದ್ಯಾಥರ್ಿಗಳಿಗೆ ನೈತಿಕತೆಯ ಅಗತ್ಯದ ಅರಿವುಂಟುಮಾಡುವ ಕಾರ್ಯವನ್ನು ವರ್ಷಗಳಿಂದ ಕೈಗೊಂಡಿದ್ದು ನನ್ನ ಪ್ರಯತ್ನಗಳು ಆಶಾದಾಯಕ ಫಲಿತಾಂಶವನ್ನು ನೀಡುತ್ತಿವೆ. ಇಂದಿನ ಎಳೆಯರಲ್ಲಿ ನೈತಿಕತೆಯ ಪ್ರಜ್ಞೆ ಮೂಡಿದರೆ ರಾಜಕೀಯ ರಂಗವೂ ಸೇರಿದಂತೆ ನಾಳೆಯ ಸಮಾಜ ಪರಿಶುದ್ಧ ಸಮಾಜವಾಗುವುದು ನಿಶ್ಚಿತ.


ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ

ರಾಜ್ಯ - ರಾಷ್ಟ್ರ


ಮೂಡುಬಿದಿರೆ: ಡಾ.ಜಿ.ಎಸ್.ಅಮೂರ, ಡಾ.ಎಂ.ವೀರಪ್ಪ ಮೊಯಿಲಿ ಸೇರಿದಂತೆ ಹತ್ತುಮಂದಿ ಗಣ್ಯರು 7ನೇ ವರ್ಷದ ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಆಳ್ವರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ಅಕ್ಟೋಬರ ತಿಂಗಳ 29,30 ಮತ್ತು 31ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.






ಡಾ.ಜಿ.ಎಸ್ ಅಮೂರ (ಸಾಹಿತ್ಯ), ಡಾ.ಎಂ.ವೀರಪ್ಪ ಮೊಯಿಲಿ (ಸಮಾಜಸೇವೆ), ಡಾ.ಎಂ.ಎಂ.ಕಲಬುರ್ಗಿ(ಸಂಶೋಧನೆ), ಸಂತೋಷ ಕುಮಾರ್ ಗುಲ್ವಾಡಿ (ಮಾಧ್ಯಮ), ಡಾ.ಶಿವಮೊಗ್ಗ ಸುಬ್ಬಣ್ಣ (ಸುಗಮ ಸಂಗೀತ), ಡಾ.ಬಲಿಪ ನಾರಾಯಣ ಭಾಗವತರು (ಯಕ್ಷಗಾನ), ಡಾ.ಎಂ.ಲೀಲಾವತಿ (ಚಲನಚಿತ್ರ), ಪ್ರೊ.ಬಿ.ಜಯಪ್ರಕಾಶ ಗೌಡ (ಸಂಘಟನೆ), ಡಾ.ಬ್ರ.ಕು.ಬಸವರಾಜ ರಾಜಋಷಿ(ಅಧ್ಯಾತ್ಮ), ಡಾ.ಕೆ.ಪಿ.ಪುತ್ತೂರಾಯ(ಸಾಹಿತ್ಯ)ಇವರುಗಳು ಈ ಬಾರಿಯ ನುಡಿಸಿರಿ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿಯು 10ಸಾವಿರ ನಗದು, ಮಾನಪತ್ರ, ಸ್ಮರಣಿಕೆ, ಶಾಲು, ಫಲಪುಷ್ಪ ಗೌರವಗಳನ್ನೊಳಗೊಂಡಿದೆ.








ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನಡೆಯಲಿದ್ದು ಅನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿವರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯದರ್ಶಿ ಹರೀಶ್ ಕೆ.ಆದೂರು, ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು

ಮುಂದೆ ಓದಿ

ಆಟ - ಅವಲೋಕನ
ಮೂಡಬಿದಿರೆ: ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ "ಏಕಲವ್ಯ ಕ್ರೀಡೋತ್ಸವ - 2010" ಅಕ್ಟೋಬರ್ 23ರಿಂದ 26ರ ತನಕ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಕ್ರೀಡಾಕೂಟ ನಾಲ್ಕು ವಿಭಾಗಗಳಲ್ಲಿ ನಡೆಯಲಿವೆ. 14ವರ್ಷ ವಯೋಮಿತಿ, 16ವರ್ಷ, 18ವರ್ಷ ಮತ್ತು 20ವರ್ಷ ವಯೋಮಿತಿಯಲ್ಲಿ ಈ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸುವ ಕ್ರೀಡಾಳುಗಳು ತಮ್ಮ ಜನನ ಪ್ರಮಾಣ ಪತ್ರವನ್ನು ಹಾಜರು ಪಡಿಸುವಂತೆ ಸಂಘಟಕರು ವಿನಂತಿಸಿದ್ದಾರೆ. ಅಕ್ಟೋಬರ್ 23ರಂದು ಸಂಜೆ 5ಕ್ಕೆ ಸ್ವರಾಜ್ಯ ಮೈದಾನದಲ್ಲಿ ಮಂಗಳೂರು ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ವಹಿಸುವರು. ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ವಂದನೆ ಸ್ವೀಕರಿಸಲಿದ್ದಾರೆ. ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ ಧ್ವಜಾರೋಹಣ ಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ನಿಟ್ಟೆ ವಿದ್ಯಾಸಂಸ್ಥೆಯ ರಾಜೇಂದ್ರ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವೈ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ.
26ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕ್ಯಾ ಗಣೇಶ್ ಕಾರ್ಣಿಕ್, ರತ್ನಾಕರ ದೇವಾಡಿಗ ಪಾಲ್ಗೊಳ್ಳಲಿದ್ದಾರೆ.

ಮುಂದೆ ಓದಿ

ಭಕ್ತಿ ಸಿಂಚನ

ಓ ಅಮ್ಮನ ಮಗುವೇ………..!
ಅಮ್ಮ - ಪ್ರತ್ಯಕ್ಷ ದೇವತೆ
ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!




ಒಮ್ಮೆಯಲ್ಲ, ಒಂದು ದಿನವಲ್ಲ, ಒಂದು ತಿಂಗಳಲ್ಲ, ಒಂಭತ್ತು ತಿಂಗಳ ಕಾಲ ಹೊರ ಜಗತ್ತಿನ ಸಂಪರ್ಕವೇ ನಿನಗಿಲ್ಲದಿದ್ದ ಆ ಸಮಯದಲ್ಲಿ…
ಕಣ್ಣಿದ್ದರೂ ನೋಡಲಾರೆ, ಕಾಲಿದ್ದರೂ ನಡೆಯಲಾರೆ, ಬಾಯಿದ್ದರೂ ಉಣ್ಣಲಾರೆ..
ಹೃದಯದ ಬಡಿತವಿತ್ತು, ನಾಡಿಯ ಮಿಡಿತವಿತ್ತು, ಮತ್ತೇನಿತ್ತು ಹೇಳು ನಿನ್ನಲ್ಲಿ ಅಂದು ..?
ಅಸಹಾಯಕನಾಗಿ ಜೀವಚ್ಛವದಂತೆ ಅಂಧಕಾರದಲ್ಲಿ ಮಲಗಿದ್ದೆ ಅಲ್ಲವೇ ಒಂಭತ್ತು ತಿಂಗಳ ಕಾಲ..?
ಅಂದು ಅಮ್ಮ ತನ್ನ ಬಾಯಿಯಿಂದ ನಿನಗೆ ಉಣಬಡಿಸಲಿಲ್ಲವೇ ..?
ತನ್ನ ಉಸಿರಲ್ಲಿ ನಿನಗೆ ಪಾಲು ಕೊಡಲಿಲ್ಲವೇ..?
ಊಟ ಮಾಡಲು ಒಂದೇ ಬಾಯಿ,
ಉಸಿರಾಡಲು ಒಂದೇ ಮೂಗು,
ಅಮ್ಮನಿಗೂ ನಿನಗೂ ಇದೆಂಥಾ ಅದ್ವೈತ..!!!!!

ಉಣ್ಣುವ ಅನ್ನದಲ್ಲಿ ಪಾಲು ಕೊಡುವವರಿರಬಹುದು,
ಉಂಡ ಊಟದಲ್ಲಿ ಪಾಲು ಕೊಟ್ಟವರುಂಟೇ ?
ಉಸಿರಿನಲ್ಲಿ ಪಾಲು ಕೊಟ್ಟವರುಂಟೇ ..?
ರಕ್ತ ಮಾಂಸಗಳನ್ನು ಹಂಚಿ ಕೊ೦ಡವರು೦ಟೇ..??
ಅಮ್ಮ ಉಸಿರಾಡಿದರೆ ನಿನಗೆ ಬದುಕು, ಅಮ್ಮನು೦ಡರೆ ನಿನಗೆ ತೃಪ್ತಿ..!
ಸಾಟಿಯಿಲ್ಲದ ಸಂಬಂಧವಲ್ಲವೇ..?

ನಿನ್ನಬಳಿ ಇಂದು ಬಂಗಲೆಗಳಿರಬಹುದು,
ಆದರೆ ಅಂದು ಅಮ್ಮನ ಒಡಲೇ ನಿನಗೆ ಮನೆಯಾಗಿತ್ತು..
ಇಂದು ನಿನ್ನ ಬಳಿ ವಾತಾನುಕೂಲಿತ(air conditioned) ಕೊಠಡಿಗಳಿರಬಹುದು,
ಆ ಒಂಭತ್ತು ತಿಂಗಳ ಮನೆ ವಾತಾನುಕೂಲಿತವಷ್ಟೇ ಅಲ್ಲ, ಸರ್ವಾನುಕೂಲಿತವಿತ್ತಲ್ಲವೇ..?
ಅಲ್ಲಿಯ ಸೌಕರ್ಯಗಳು ಮತ್ತೆಲ್ಲಿಯೂ ಸಿಗಲಾರವು..!

ಅಂದು ನಿನ್ನಲ್ಲಿ ಉಸಿರಾಡುವ, ಉಣ್ಣುವ ಶಕ್ತಿಯು ಇಲ್ಲದಿದ್ದಾಗ ಅಮ್ಮ ತನ್ನ ಒಡಲಲ್ಲಿಟ್ಟುಕೊಂಡು ನಿನ್ನನ್ನು ಬೆಳಸಿದಳು,
ಮತ್ತೆ ಆ ಶಕ್ತಿ ನೀಡಿ ನಿನ್ನನ್ನು ಭುವಿಗಿಳಿಸಿದಳು ..
ಅಂದು ಆಕೆ ನಿನಗಾಗಿ ಅನುಭವಿಸಿದ ವೇದನೆ ಎಷ್ಟೆಂದು ಗೊತ್ತೇ..??

ಉಪನಿಷತ್ತುಗಳು ಬಣ್ಣಿಸುತ್ತವೆ “ಗರ್ಭದಲ್ಲಿರುವಾಗ ಶಿಶುವಿಗೆ ಪರಮಾತ್ಮದರ್ಶನವಾಗುವುದೆಂದು”. ಅದೆಷ್ಟು ಪವಿತ್ರವಿರಬೇಕು ಅಮ್ಮನ ಗರ್ಭ..!!
ಕಾಶಿ ಕೈಲಾಸಗಳಿಗೆ ಅದೇನು ಕಡಿಮೆ ಹೇಳು..? (ಕಾಶಿ ಕೈಲಾಸಗಳಲ್ಲಿ ದೇವರ ಸಾಕ್ಷಾತ್ಕಾರವಾಗದಿರಬಹುದು, ಆದರೆ ಅಮ್ಮನ ಗರ್ಭದಲ್ಲಿ…?)
ಬದುಕಿಗೆ ಬೆಳಕು ಕೊಟ್ಟವಳು..
ಅವಳು ನಿನ್ನನ್ನು ತನ್ನೊಳಗಿಟ್ಟುಕೊಂಡು ಪರಮಾತ್ಮ ಜ್ಯೋತಿಯನ್ನು ತೋರಿಸಿದಳು,
ಮಾತ್ರವಲ್ಲ ಮತ್ತೆ ಹೊರತಂದು ಈ ಭುವಿಯ ಬೆಳಕು ತೋರಿಸಿದಳು..

ನೆನಪಿದೆಯೇ..ನೀನು ಈ ಜಗಕೆ ಬಂದ ಮೇಲೆ ಮಾಡಿದ ಮೊದಲ ಊಟ ??
ಅಮ್ಮನಿತ್ತ ಅಮೃತ ದ್ರವ ?
ಅದನ್ನು ಸಿದ್ದಪಡಿಸುವಾಗ ಅಮ್ಮ ತನ್ನ ಒಡಲನ್ನೇ ಅಡುಗೆ ಮನೆಯಾಗಿ ಮಾಡಿಕೊಂಡಿದ್ದಳು, ಮತ್ತೆ ತನ್ನ ಹೃದಯದಿಂದ ವಾತ್ಸಲ್ಯ ಧಾರೆಯಾಗಿ ನಿನ್ನೆಡೆಗೆ ಹರಿಸಿದಳು..
ನಿನ್ನ ಹಲ್ಲಿಲ್ಲದ ಬಾಯಿಗೆ ಶ್ರಮವಾಗದಂತೆ..
ಎಳೆಯ ಒಡಲಿಗೆ ಭಾರವಾಗದಂತೆ..
ಎಲ್ಲಿಲ್ಲದ ಮಧುರತೆ….!!
ಎಲ್ಲಬಗೆಯ ಪೌಷ್ಟಿಕಾಂಶ..!!

ಜಗತ್ತಿನ ಎಲ್ಲಾ ಬಾಣಸಿಗರು ಸೇರಿದರೂ ನೀನುಣುವ ಊಟಕ್ಕೆ ಆ ಸ್ವಾದವನ್ನು ತರಲಾರರು..
ಜಗತ್ತಿನ ಎಲ್ಲಾ ವೈದ್ಯರು ಜೊತೆಗೂಡಿದರೂ ಅಮ್ಮನಿತ್ತ ಮೊದಲೂಟದ ಪೌಷ್ಟಿಕತೆಯನ್ನು ತಂದು ಕೊಡಲಾರರು..!
ಇಂದು ನೀನು ಬೆಳ್ಳಿಯ ತಾಟು, ಬಂಗಾರದ ಸೌಟುಗಳನ್ನು ಕಂಡಿರಬಹುದು,
ಔತಣಕೂಟಗಳಲ್ಲಿ ಸಾವಿರಾರು ಬಾರಿ ಪಂಚಭಕ್ಷ್ಯ ಪರಮಾನ್ನಗಳನ್ನು ಉಂಡಿರಬಹುದು..
ಆದರೆ ಬದುಕಿನ ಪ್ರಥಮಚರಣದಲ್ಲಿ ಅಮ್ಮನಿತ್ತ ಅಮೃತ ದ್ರವದ ಶ್ರೇಷ್ಠತೆಯಾಗಲಿ, ಪ್ರೇಮದ ಆ ಪರಾಕಾಷ್ಠೆಯಾಗಲಿ, ಎಲ್ಲಾದರೂ, ಎಂದಾದರೂ ಮತ್ತೊಮ್ಮೆ ಸಿಕ್ಕಿತೇ..?
ಬದುಕಿನ ಮೊದಮೊದಲೇ ಸಿಗುವ, ಮತ್ತೆಂದೂ ಸಿಗದ ಸೌಭಾಗ್ಯವದು..!

“ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಈ ಗಾದೆಮಾತನ್ನೊಮ್ಮೆ ಗಾಢವಾಗಿ ಚಿಂತಿಸು!
ಯಾವ ಇಬ್ಬರಲ್ಲಿ ಬಂಧವಿದೆಯೋ ಅವರು ಬಂಧುಗಳು
.ನಿಜವಾದ ಬಂಧುವೆಂದರೆ ತಾಯಿಯೇ ಸರಿ..!
ಜಗತ್ತಿನ ಇತರ ಸಂಬಂಧಗಳೆಲ್ಲ ಭಾವಾತ್ಮಕ..!
ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದು, ಮಾತುಗಳಲ್ಲಿ ಆಡಬಹುದು, ಆದರೆ ಬರಿಗಣ್ಣಿನಿಂದ ನೋಡಲಾಗದು – ಎನ್ನುವರೀತಿಯವು.
ಆದರೆ, ನಿನ್ನ ಮತ್ತು ಅಮ್ಮನದ್ದು ಬೇರೆಯೇ ರೀತಿಯದ್ದು, ಅದು ಕಣ್ಣಿಗೆ ಕಾಣುವ ಕರುಳಬಳ್ಳಿಯ ಸಂಬಂಧ..!
ಅಂಥ ಸಂಬಂಧ ಒಂದು ಜನ್ಮಕ್ಕೆ ಒಂದೇ ಸರಿ..!
ಅತ್ಯಂತ ಅಸಹಾಯಕ ಸ್ಥಿತಿಗಳಲ್ಲಿ ಜೀವಸೆಲೆ ಅಮ್ಮನಿಂದ ನಿನ್ನೆಡೆಗ ಹರಿದು ಬರುವುದು ಕರುಳ ಬಳ್ಳಿಯೆಂಬ ಅಮೃತ ಸೇತುವಿನಿಂದಲ್ಲವೇ..!?

ಅಬ್ಬಾ….!!
ಕರುಳಬಳ್ಳಿಯೆಂಬ ಪರಮಾಶ್ಚರ್ಯವೇ! ಬರಿಗಣ್ಣಿಗೇ ಕಾಣುವ, ಭಾವಿಸಿದಷ್ಟೂ ಮುಗಿಯದ, ಜೀವ-ಜೀವಗಳ ನಡುವಿನ ಇಂಥದ್ದೊಂದು ಬೆಸುಗೆ ಬೇರೆಲ್ಲಿ ಕಾಣಲು ಸಾಧ್ಯ?
ಹೇಗೆ ತಾನೇ ಕತ್ತರಿಸುವರೋ…..?
ಕಲ್ಲು ಮನಸ್ಸೇ!!!
ದೇವರು ದೊಡ್ಡವನು, ನಾಭಿಯೊಂದು ಉಳಿದಿದೆ ನಮ್ಮ ಶರೀರದಲ್ಲಿ. ನಾಭಿ ಇರುವವರೆಗೂ ನೀನು ಮರೆಯಬಾರದ ಸಂಬಂದ ಅದು.
ನೀನು ಹುಟ್ಟುವಾಗಲೇ ಇರುವ – ಅಷ್ಟೇ ಏಕೆ, ಅದಕ್ಕಿಂತ ಮೊದಲೇ ಇದ್ದ ಸಂಬಂಧವಿದು.

ಅದೇ ಬದುಕಿನ ಆದಿ ಸಂಬಂಧ.
ಮತ್ತೆಲ್ಲರೂ ಅಮ್ಮನ ಮುಖಾಂತರವೇ ಸಂಬಂಧಿಗಳು..!

ಈ ಜಗತ್ತಿನಲ್ಲಿ ಅದೆಷ್ಟೋ ಬಗೆಯ ಮೃದು ಮೃದುವಾದ – ಹಂಸತೂಲಿಕಾ ತಲ್ಪಗಳಿರಬಹುದು, ಆದರೆ ಅಮ್ಮನ ಮಡಿಲಿನ ಮಾರ್ದವಕ್ಕೆ ಅವು ಯಾವವೂ ಸಾಟಿಯಲ್ಲ..!!
ಭೌತಿಕ ಮಾರ್ದವಕ್ಕಿಂತ ಭಾವದ ಮಾರ್ದವ ಹಿರಿದಲ್ಲವೇ..?
ನಿರ್ಜೀವ ಮಾರ್ದವಕ್ಕಿಂತ ಚೈತನ್ಯಮಯವಾದ ಮಾರ್ದವ ಜೀವಕ್ಕೆ ಹೆಚ್ಚು ಹಿತವಲ್ಲವೇ..?

ವಿಶ್ವದಲ್ಲಿ ದೊಡ್ಡವರೆನಿಸಿಕೊಂಡವರು ಎಷ್ಟಿಲ್ಲ?
ಆದರೆ ಅವರೆಲ್ಲ ಅಮ್ಮನಮುಂದೆ ಚಿಕ್ಕವರೇ..!
ಭಯಂಕರವಾದ ಜೀವನರಣಾಂಗಣವನ್ನು ಪ್ರವೇಶಿಸುವ ಮುನ್ನ ಅವರೆಲ್ಲಾ ಅಮ್ಮನ ಮಡಿಲಲ್ಲಿ ಆಡಿದವರೇ..!
ಅಮ್ಮನೆಂದರೆ ದೊಡ್ಡವರಿಗಿಂತ ದೊಡ್ಡವಳು.


ಕೈ ಹಿಡಿದು ನಡೆಸೆನ್ನನು. . . .!
ನೀನಿಂದು ಜಗತ್ತನ್ನೇ ನಡೆಸುತ್ತಿರಬಹುದು, ಆದರೆ ನಡೆಯಲುಬಾರದ ಸ್ಥಿತಿಯಲ್ಲಿ ನಿನ್ನನ್ನು ಕೈ ಹಿಡಿದು ನಡೆಸಿದ ಅಮ್ಮನ ಮರೆಯದಿರು..!
ಹೃದಯದ ಹಾಲಿತ್ತವಳನ್ನು ಎಂದೂ ಉಪವಾಸ ಕೆಡಹದಿರು..
ಮಾತು ಕಲಿಸಿದ ಮಾತೆಯ ಮೇಲೆ ಅಪಶಬ್ಧಗಳನ್ನು ಪ್ರಯೋಗಿಸದಿರು..!
ತನ್ನ ರಕ್ತ ಮಾಂಸಗಳನ್ನೇ ನಿನಗೆ ಧಾರೆಯೆರೆದವಳಿಗೆ ಪ್ರತಿಯಾಗಿ ನೀನೇನು ತಾನೇ ಕೊಡಬಲ್ಲೆ?
ಅಮ್ಮ ಹಾಸಿಗೆ ಹಿಡಿದಾಗ ಆಕೆಯ ಮಡಿಲೇ ನಿನಗೆ ಹಾಸಿಗೆಯಾದ್ದುದನ್ನು ನೆನಪಿಸಿಕೊ..
ಏಳಲಾರದ ಅಶಕ್ತ ಅಮ್ಮನ ಶರೀರವನ್ನು ಶುಚಿಯಾಗಿಡಬೇಕಾಗಿ ಬಂದರೆ “ಛೀ” ಎನ್ನಬೇಡ..!
ಎಳವೆಯಲ್ಲಿ ನಿನ್ನ ಮಲಮೂತ್ರಗಳನ್ನು ಶುಚಿಗೊಳಿಸುವಾಗ ಎಂದೂ ಹೇಸಿಕೊಳ್ಳಲಿಲ್ಲ ಅವಳು..
ತನ್ನುದರವನ್ನೇ ನಿನಗೆ ಮನೆಯಾಗಿ ಮಾಡಿ ಕೊಟ್ಟವಳನ್ನು ಎಂದೂ ಮನೆಯಿಂದ ಹೊರನೂಕದಿರು..!

ತಾಯಿಯ ರೂಪದಲ್ಲಿ ವಿಶ್ವದ ತಂದೆಯೇ ಬಂದಾಗ,
ಮಮತೆಯ ಸಾಗರವನ್ನೇ ತಂದಾಗ,
ಕಣ್ಣಿದ್ದೂ ಕುರುಡನಾಗಿ ಮತ್ತೆ “ದೇವರು ಕಾಣಲಿಲ್ಲ” ವೆನ್ನುವವನಿಗೆ. . . . . . . . .
ಏನೆನ್ನ ಬೇಕು..?

|| ಮಾತೃದೇವೋ ಭವ.. ||

(ಮುಂದುವರಿಯುವುದು.. ಎಂದೂ ಮುಗಿಯದು.!)
(ಶ್ರೀ ಗುರುಗಳ ವಚನಾಮೃತಕ್ಕಾಗಿ ಲಾಗ್ ಇನ್ ಮಾಡಿರಿ ಹರೇ ರಾಮ.ಇನ್.)

ಮುಂದೆ ಓದಿ
11:02 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 3


`ನಿಮ್ಮ ಕಥೆಗಳಿಗೆ ಪ್ರೇರಣೆಯೇನು? ಸಹಜ ಘಟನೆಗಳೆ ಇಲ್ಲ, ನಿಮ್ಮ ಊಹನೆಯೆ?' ಸಂದರ್ಶನದ ಪ್ರಶ್ನೆ.
`ನನ್ನ ಕಥೆಯ ಪಾತ್ರಗಳು ಕೇವಲ ಕಾಲ್ಪನಿಕ. ದಿನಪತ್ರಿಕೆಗಳು, ನಿಯತಕಾಲಿಕಗಳು, ಕಥಾಸಂಕಲನಗಳು, ಕಾದಂಬರಿಗಳ ನಿರಂತರ ಓದು ನನಗೆ ಹೊಸ ಹೊಸ ಕಲ್ಪನೆಗಳನ್ನು ನೀಡುತ್ತದೆ'




ಸಂದರ್ಶನವ ಓದಿದ ಬಳಿಕ ದೀರ್ಘ ಆಲೋಚನೆಗೊಳಗಾದ ಸ್ವಾತಿ ಮತ್ತೆ ಕಂಪ್ಯೂಟರ್ನ ಪರದೆಯನ್ನು ತೆರೆದಳು. ಅವನ ಕಥೆಗಳು ಕಲ್ಪನೆಯದ್ದದ್ದಾಗಿದ್ದರೆ ಅವನೇ ನಿರ್ಮಿಸಿದ ಪಾತ್ರಗಳು ಅವನನ್ನು ಕೊಲ್ಲುವುದಕ್ಕೆ ಸಾಧ್ಯವೇ? ಅವನು ಬರೆದ ಕಥೆ, ಕಾದಂಬರಿಗಳನ್ನು ಓದಬೇಕೆನಿಸಿತು.
ತಟ್ಟನೆ ತಲೆಗೆ ಹೊಳೆದದ್ದು ಅದು. ಪತ್ತೇದಾರಿ ಕಥೆಗಾರನ ಮೇಲೆಯೆ ತಾನು ಲೇಖನ ಸಿದ್ಧಪಡಿಸಿದರೆ ಹೇಗೆ? ಮುಂದಿನ ಸಾಪ್ತಾಹಿಕಕ್ಕೆ ಕೊಡಬೇಕಿರುವ ಲೇಖನವು ಆಗಬಹುದು. ಕಥೆಗಾರ ನಿರ್ಮಿಸಿದ ಪಾತ್ರಗಳನ್ನು ತಿಳಿದುಕೊಂಡ ಹಾಗೂ ಆಗುತ್ತದೆ. ಆ ರೀತಿ ಕಲ್ಪನೆ ಹೊಳೆದಿದ್ದೆ ಸಂಜೆ ಕೆಲಸ ಮುಗಿಸಿ ನಗರದ ಪ್ರತಿಷ್ಟಿತ ಪುಸ್ತಕಾಲಯಕ್ಕೆ ನಡೆದಳು. ಜೇಮ್ಸ್ ಬರೆದಿರುವ ಹತ್ತು ಹದಿನೆಂಟು ಪುಸ್ತಕಗಳನ್ನು ಖರೀದಿಸಿದಳು. ಹಿಂದೆ ಕೆಲವೊಂದು ಕಾದಂಬರಿಗಳನ್ನು ಓದಿದ ನೆನಪಿತ್ತು. ಒಂದೊಂದೆ ಕಾದಂಬರಿಯ ಕಥೆಯನ್ನು ನೆನಪಿಸಿಕೊಂಡಳು. ಯಾವ ಪಾತ್ರಗಳು ಕಥೆಗಾರನನ್ನೇ ಕೊಲೆ ಮಾಡುವಂತೆ ಕಾಣಿಸಲಿಲ್ಲ. ಆದರೂ ಕುತೂಹಲ ಅವಳನ್ನು ಬಿಡಲಿಲ್ಲ. ಪ್ರತಿಯೊಂದು ಕಾದಂಬರಿಯನ್ನೂ ಇನ್ನೊಂದು ಬಾರಿ ಓದಿ, ತಿಳಿದುಕೊಳ್ಳಬೇಕೆನ್ನುವ ಹಠ ಅವಳಲ್ಲಿತ್ತು.
ರಾತ್ರಿ ಕಪ್ಪಗಿನ ಬೆಡ್ಶೀಟನ್ನು ಹಾಸಿ ಮಲಗಿಕೊಂಡಿತ್ತು. ಸಾಧಾರಣ ಆ ಪ್ರದೇಶದಲ್ಲಿ ವಿದ್ಯುತ್ ಕಂಬಗಳಲ್ಲಿ ಬಿಟ್ಟು ಬೇರೆಲ್ಲೂ ದೀಪಗಳು ಕಾಣಿಸಲಿಲ್ಲ. ಅವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಂತೆ ಓದುತ್ತಾ ಕುಳಿತಿದ್ದಳು. ಉಸಿರು ಬಿಗಿ ಹಿಡಿದು... ಕಾದಂಬರಿಯ ಶೀರ್ಷಿಕೆಯೂ ಹಾಗಿತ್ತು.
ಒಂದು ಪರಿಪೂರ್ಣ ಕೊಲೆ!
ಸರಿ ಸುಮಾರು ಹನ್ನೊಂದು ಗಂಟೆಯ ಸಮಯ. ಬಾರ್ನ ಕೌಂಟರ್ ಮುಚ್ಚುವ ಹೊತ್ತು. ಹೊರಗೆ ಬಂದ ಶ್ರೀಮಂತ ಪರಿಶಿತ್ ರಸ್ತೆಯ ಗಲ್ಲಿಯಲ್ಲಿ ತಿರುಗಿ, ದೂರಕ್ಕೆ ನಿಲ್ಲಿಸಿದ ತನ್ನ ಕಾರಿನತ್ತ ಹೆಜ್ಜೆ ಹಾಕಬೇಕ್ಕೆನ್ನುವಷ್ಟರಲ್ಲಿ ಎಲ್ಲಿಂದಲೋ ಹಾರಿ ಬಂದ ಮೂರು ಗುಂಡುಗಳು ಅವನ ಪ್ರಾಣವನ್ನೇ ಅಪಹರಿಸಿದ್ದವು. ಆದರೆ ಸ್ವಾರಸ್ಯವಾಗಿರುವುದು ಅದಲ್ಲ. ಕುಸಿದು ಬಿದ್ದ ಶ್ರೀಮಂತನ ಮೈ ಮೇಲೆ ಬೆಲೆಬಾಳುವ ವಸ್ತುಗಳೆಲ್ಲಾ ಹಾಗೆ ಇವೆ. ಅದಲ್ಲದೆ ಗುಂಡು ಬಿದ್ದ ದೇಹದಿಂದ ಒಂದು ಹನಿ ರಕ್ತವೂ ಹರಿದಿಲ್ಲ!
ಅವನು ಒಳ್ಳೆಯ ವ್ಯಕ್ತಿ! ತಾನಾಯಿತು ತನ್ನ ಕೆಲಸವಾಯಿತು ಅನ್ನುವ ಹಾಗೆ. ಮುಖದಲ್ಲಿ ವಯಸ್ಸಿಗೂ ಮೀರಿದ ಗಂಭೀರತೆ, ಇನ್ನೊಬ್ಬರ ಮೇಲಿರುವ ಕಾಳಜಿ, ಬಡವರ ಮೇಲೆ ಅನುಕಂಪ ಜೊತೆಗೆ ಸಹಾಯಹಸ್ತ. ಇಷ್ಟಿದ್ದೂ ಆ ವ್ಯಕ್ತಿ ಕೊಲೆಯಾಗಿದ್ದು ಹೇಗೆ? ಕೊಲೆ ಮಾಡಿದವರು ಯಾರು? ಗುಂಡು ಹಾರಿದ್ದರೂ ಮೈಮೇಲೆ ಗಾಯಗಳೇಕಿಲ್ಲ?... ಕಥೆ ಹೀಗೆ ಮುಂದುವರಿದಿತ್ತು. ಉಸಿರು ಬಿಗಿ ಹಿಡಿದೇ ಓದಿ ಮುಗಿಸಿದ ಸ್ವಾತಿ ಒಂದು ಟಿಪ್ಪಣಿಯನ್ನು ಬರೆದು ಇಟ್ಟಳು. ಪರಿಶಿತ್ನಂತಹ ಒಳ್ಳೆಯ ಪಾತ್ರ ಕೊಲೆಯಾಗಿದ್ದು ಓದುಗರಲ್ಲಿ ಅನುಕಂಪ ಗಿಟ್ಟಿಸುವಂತಿತ್ತು.
ಆ ದಿನ ಕಛೇರಿಗೆ ರಜೆ ಹಾಕಿ ಉಳಿದ ಪುಸ್ತಕಗಳನ್ನು ಓದಬೇಕೆಂದು ನಿರ್ಧರಿಸಿದ್ದಳು. ದಿನ ಪತ್ರಿಕೆಯಲ್ಲಿ ಪತ್ತೇದಾರಿ ಕಥೆಗಾರನ ಸಾವಿನ ಸುದ್ದಿ ಅಚ್ಚಾಗಿತ್ತು. ಒಮ್ಮೆ ಅದರ ಮೇಲೆ ಕಣ್ಣಾಡಿಸಿದವಳು ಅವನ ವೈಯಕ್ತಿಕ ವಿಷಯವೇನಾದರೂ ಬರೆದಿದೆಯೇ ಎಂದು ಗ್ರಹಿಸಿದಳು. ಎಲ್ಲೂ ಕಾಣಿಸಲಿಲ್ಲ.

... ನಾಳೆಗೆ

- ಅನುಬೆಳ್ಳೆ.

ಮುಂದೆ ಓದಿ
10:26 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 2

"ಯಾರಿದ್ದೀರಿ?" ಕೂಗು ದಟ್ಟ ಮರಗಳ ಮಧ್ಯೆ ತೂರಿ ಎಲೆಗಳನ್ನು ಮೆಲ್ಲಗೆ ಕಂಪಿಸಿತು. ತಂಗಾಳಿ ಬೀಸಿ ನಕ್ಕಂತಾಯಿತು. ಮನೆಯ ಒಳಗಿನಿಂದ ಏನಾದರೂ ಪ್ರತಿಕ್ರಿಯೆ ಬರಬಹುದೆನ್ನುವ ನಿರೀಕ್ಷೆಯೂ ಸುಳ್ಳಾಯಿತು.



"ಹಲೋ! ಯಾರಿದ್ದೀರಿ?" ಮತ್ತೊಮ್ಮೆ ಪ್ರಶ್ನಿಸಿದಳು. ಮತ್ತದೆ ಶೂನ್ಯ ಉತ್ತರ.
ಧೈರ್ಯದಿಂದ ಒಳಗೆ ನಡೆದು ನೋಡಿದಳು. ವ್ಯಕ್ತಿ ನಿದ್ರಿಸುತ್ತಿರುವಂತೆ ಕಂಡಿತು. ಹಿಂದಕ್ಕೆ ತಿರುಗಿದವಳಿಗೆ ಅನುಮಾನ ಕಾಡಿತು. ಮೆದುಳು ಚುರುಕಾಯಿತು. ಪರಿಚಿತ ಮುಖ! ಹೌದು, ಪತ್ತೇದಾರಿ ಕಥೆಗಳ ಮಾಂತ್ರೀಕ. ಜೇಮ್ಸ್ ಬರ್ಟ್ರಂಡ್! ಕಳೆದವಾರವಷ್ಟೇ ಸಾಪ್ತಾಹಿಕದಲ್ಲಿ ಅವನ ಸಂದರ್ಶನ ಪ್ರಕಟಿಸಿತ್ತು `ಮಾದರಿ' ಪತ್ರಿಕೆ!
"ಸಾರ್..." ಎಚ್ಚರಿಸುವಂತೆ ಕರೆದವಳು ಹತ್ತಿರಕ್ಕೆ ನಡೆದಳು.
ಬಿಳಿ ಚಹರೆಯ, ತುಂಬು ಗಲ್ಲದ ಮೇಲೆ ಚಿತ್ತಾರ ಬಿಡಿಸಿದಂತೆ ನೀಟಾಗಿ ಬೆಳೆದಿದ್ದ ಗಡ್ಡ! ಪತ್ತೇದಾರಿಕೆಯ ಸೂಕ್ಷ್ಮ ಕಣ್ಣುಗಳು ಮುಚ್ಚಿದಂತೆ ಇವೆ! ಪ್ರತಿಕ್ರಿಯೆ ಇಲ್ಲದೆ ನಿರ್ಜೀವದಂತೆ ಇದ್ದ ದೇಹದ ಮಧ್ಯದಲ್ಲಿ ಹೆಪ್ಪುಗಟ್ಟಿದ ರಕ್ತದ ಮುದ್ದೆ! ಸಣ್ಣ ಚಿತ್ಕಾರವೊಂದು ಸ್ವಾತಿಯ ತುಟಿಗಳಲ್ಲಿ ಮೂಡಿತು.
ಅವಳ ದೃಷ್ಟಿ ಸುತ್ತೆಲ್ಲಾ ಆಡಿತು. ಕಥೆಗಾರ ಕೊಲೆಯಾಗಿದ್ದ! ತಟ್ಟನೆ ವರದಿಗಾರಳ ಪ್ರಜ್ಞೆ ಜಾಗೃತವಾಯಿತು. ಕ್ಯಾಮರಾ ಕಣ್ಣಿಗೆ ಹೊಂದಿಕೊಂಡಿತು. ಫ್ಲ್ಯಾಶ್ ಮೂರು ನಾಲ್ಕು ಬಾರಿ ದೇಹದ ಮೇಲೆ ಬೆಳಗಿತು.

ಧೈರ್ಯವಿದ್ದರೂ ಕೈ, ಕಾಲುಗಳು ಬೆವತವು. ಹೊರಟ ಘಳಿಗೆಯೆ ಅಪಶಕುನದಂತಾಗಿತ್ತು. ಕಾರು ಕೆಟ್ಟು ರಸ್ತೆಯಲ್ಲಿ ನಿಂತರೆ, ಇಲ್ಲಿ ಕಥೆಗಾರನ ಕೊಲೆ!

***

ಭಾವಾವೇಶಕ್ಕೊಳಗಾದ ಸ್ವಾತಿ ಗಣಕಯಂತ್ರಕ್ಕೆ ಸೇರಿಸಿದ್ದ ಕ್ಯಾಮರಾದ ಕೇಬಲನ್ನು ಸರಿಯಾಗಿ ಹೊಂದಿಸಿದ ಬಳಿಕ ಮೌಸ್ನ ಮೇಲೆ ಕೈಯಾಡಿಸಿದಳು. ಚಿತ್ರಗಳು ಒಂದರ ನಂತರ ಇನ್ನೊಂದು ತೆರೆದುಕೊಂಡಿತು. ಅತೀ ಹತ್ತಿರದಿಂದ ತೆಗೆದ ಚಿತ್ರದ ಮೇಲೆ ಕಣ್ಣಾಡಿಸಿದವಳಿಗೆ ಕನ್ನಡದಲ್ಲಿ ಬರೆದ ಕಾಗದದ ಚೂರು ಗೋಚರಿಸಿತು. ಗಣಕಯಂತ್ರದ ಪರದೆಯ ಮೇಲಿದ್ದ ಚಿತ್ರವನ್ನು ಝೂಮ್ಗೆ ತಂದು ನೋಡಿದಳು. ಅಕ್ಷರಗಳು ಚೆನ್ನಾಗಿ ಗೋಚರಿಸಿದವು.
`ನಾನು ನಿರ್ಮಿಸಿದ ಪಾತ್ರಗಳೇ ನನ್ನನ್ನು ಸಾಯಿಸುತ್ತಿವೆ' ವಾಕ್ಯವನ್ನು ಓದಿದ ಬಳಿಕ ಅವಕ್ಕಾಗಿ ಕುಳಿತಳು. ಕಥೆಗಾರನಿಗೆ ತನ್ನ ಸಾವಿನ ಸುಳಿವು ಮೊದಲೇ ತಿಳಿದಿತ್ತೆ? ಪ್ರಶ್ನೆ ಭೂತಾಕಾರವಾಗಿ ಬೆಳೆದು ನಿಂತಿತು.
ಪರದೆಯನ್ನು ಮುಚ್ಚಿ ಆಫೀಸಿನ ಪರಿಚಾರಕನನ್ನು ಕರೆದಳು. ಹುಡುಗ ಅನಂತು ಅವಳ ಎದುರಿಗೆ ಬಂದು ನಿಂತ.
"ಕಳೆದ ವಾರದ ಸಾಪ್ತಾಹಿಕ ಸಂಚಿಕೆ ಬೇಕಿದೆ"
ಹುಡುಗ ಚುರುಕಿನಿಂದ ಪತ್ರಿಕೆಗಳನ್ನು ಜೋಡಿಸಿದ್ದ ರಾಕ್ ಕಡೆಗೆ ನಡೆದ. ಅವಳು ಹೇಳಿದ ಪತ್ರಿಕೆಯನ್ನು ತಂದು ಅವಳ ಮೇಜಿನ ಮೇಲಿರಿಸಿದ. ಪತ್ತೇದಾರಿ ಕಥೆಗಾರ ಜೇಮ್ಸ್ನ ಸಂದರ್ಶನವಿದ್ದ ಪುಟವನ್ನು ತೆರೆದು ಓದಿಕೊಂಡಳು. ಸಂದರ್ಶನದುದ್ದಕ್ಕೂ ನಿರಾಶೆಯ ಉತ್ತರವೇ ನೀಡಿದ್ದ ಕಥೆಗಾರ. ಕನ್ನಡದಲ್ಲಿ ಕೇವಲ ಬೆರಳೆಣಿಕಯಷ್ಟೇ ಪತ್ರಿಕೆಗಳು ಮಾತ್ರ ಪತ್ತೇದಾರಿ ಕಥೆಗಳಿಗೆ ಉತ್ತೇಜನ ನೀಡುತ್ತವೆನ್ನುವುದು ಜೇಮ್ಸ್ನ ಕೊರಗುಗಳಲ್ಲಿ ಒಂದು. ಅವನ ಕಥೆಗಳ ಬಗ್ಗೆ ಹೇಳುತ್ತಾ ಒಂದೊಂದು ಕಥೆಯೂ ಅವುಗಳಲ್ಲಿ ಬರುವ ಪಾತ್ರಗಳೂ, ಅವು ತಮ್ಮ ಬುದ್ಧಿವಂತಿಕೆಯಿಂದ ಕೊಲೆಗಾರನನ್ನು ಪತ್ತೆ ಹಚ್ಚುವ ವಿಧಾನ ಎಲ್ಲವನ್ನೂ ಸ್ವಾರಸ್ಯಕರವಾಗಿ ಚಿತ್ರಿಸಿದ್ದ ಪತ್ತೇದಾರಿ ಕಥೆಗಳ ಮಾಂತ್ರೀಕ.

- ಅನು ಬೆಳ್ಳೆ.





ನಾಳೆಗೆ...
ವಿನ್ಯಾಸ: ಆದೂರು

ಮುಂದೆ ಓದಿ

ಆಟ - ಅವಲೋಕನ
ಉಡುಪಿ : ಹ್ವಾಯ್ ನಿಮಗೆ ಗೊತ್ತೀತಾ.. ಮಾರಾಯ್ರೇ. ನಮ್ಮೂರು ಹುಡುಗಿ ಚಿನ್ನಾಗೆದ್ಲಂಬ್ರಲೇ! ಕುಂದಾಪುರ ತಾಲೂಕಿನಾದ್ಯಂತ ಪ್ರಸಕ್ತ ಕೇಳಿ ಬರುತ್ತಿರುವ ಹೆಮ್ಮಯ ಮಾತಿನ ಒರಸೆಯ ಸಣ್ಣ ಚಿತ್ರಣ ಅಷ್ಟೇ ಇದು. ರಾತ್ರಿ ಬೆಳಗಾಗೋದ್ರೊಳಗೆ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡುಬಿಟ್ಟಿದೆ ಜನ್ಸಾಲೆ ಎಂಬ ಪುಟ್ಟ ಊರು.





ಈ ಕೊಡುಗೆ ಹಿಂದೆ ಹಳ್ಳಿಯಿಂದ ಡಿಲ್ಲಿಗೆ ಓಡಿದ ಅಪ್ಪಟ `ಕುಂದಗನ್ನಡ' ಹುಡುಗಿಯ ಸಾಹಸದ ಓಟದ ಗಾಥೆಯಿದೆ. `ಕಾಮನ್ವೆಲ್ತ್' ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕುಂದಾಪುರ ತಾಲೂಕು ಸಿದ್ದಾಪುರ ಸಮೀಪದ ಜನ್ನಾಲೆ ಎಂಬ ಪುಟ್ಟ ಊರಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ನಿನ್ನೆ ವೊನ್ನೆ ದೆಹಲಿಯಲ್ಲಿ ನಡೆದ 4x400 ಮೀಟರ್ `ರಿಲೆ ' ಓಟದಲ್ಲಿ ಭರತೆಕ್ಕೆ ಚಿನ್ನ ಸಿಕ್ತಲ್ಲಾ ಅದರಲ್ಲಿ ಮೂರನೆಯವರಾಗಿ ಓಡಿದ ಆಶ್ವಿನಿ ಚಿದಂಬರ್ ಅವರು `ಜನ್ಸಾಲೆ'ಯವರು ಎಂಬುದು ಎಷ್ಟೋ ಜನಕ್ಕೆ ಗೊತ್ತೇಯಿರಲಿಲ್ಲ! ಈ ಹುಡುಗಿ ಚಿನ್ನ ಗೆದ್ಲು ನೋಡಿ ಕುಂದಾಪುರ ತಾಲೂಕಿನ ನಾಗರಿಕರಿಗೆ ತಮ್ಮ ಮನೆ ಮಗಳು ಚಿನ್ನಗೆದ್ದ್ದು ತಂದಷ್ಟು `ಹ್ಯಾಪಿ'ಯಾಗಿದ್ದಾರೆ. ಎಲ್ಲರಿಗೂ ಒಂದು ರೀತಿ ರೋಮಾಂಚನ. ನಮ್ಮ ಅಕ್ಕಪಕ್ಕದಲ್ಲೇ ಇಂಥಹದ್ದೊಂದು ಪ್ರತಿಭೆ ಇದೆ ಎನ್ನೋದೇ ಗೊತ್ತಿರಲಿಲ್ಲವಲ್ಲಾ ಎಂಬ ಕೊರಗು. ಏನಾದರೂ ಆಗಲಿ ಚಿನ್ನಗೆದ್ದ ಹುಡುಗೀಗೆ `ಒಳ್ಳೇದಾಯ್ಕು' ಅಂತ ಕುಂದಾಪುರ ನಾಗರಿಕರ ಬಾಯಿಂದ `ಕುಂದಗನ್ನಡ'ದಲ್ಲಿ ಹೊರಡುತ್ತಿರುವ ಅಂತರಾಳದ `ಸಿಂಪಲ್' ಮಾತುಗಳಿವು.
ಓಟ ಹೀಗುತ್ತು : ಕಾಮನ್ವೆಲ್ತ್ ಫೈನಲ್ ಎಲ್ಲರ ಕಣ್ಣು ಭರತ ತಂಡದ ಮೇಲಿತ್ತು. ಪೈನಲ್ ಪ್ರವೇಶಿಸಿದ ಮಹಿಳೆಯರ ರಿಲೇ ತಂಡದಿಂದ ಭರತಕ್ಕ್ಕೆಪದಕದ `ಗ್ಯಾರೆಂಟಿ'ಯಿತ್ತು. ಅದರೆ ಚಿನ್ನ ದಕ್ಕಬೇಕು ಎನ್ನುವುದು ಕೋಟಿ ಕೋಟಿ ಭರತೀಯರ ಆಸೆಯಾಗಿತ್ತು. ಹಾಗಾಗಿ ಕ್ರೀಡಾ ಪ್ರೇಮಿಗಳು ಉಸಿರು ಬಿಗಿ ಹಿಡಿದು ಟಿವಿ ಮುಂದೆ ಕೂತಿದ್ದರು.

ಮಹಿಳೆಯ 4x400 ರಿಲೇ ತಂಡದಲ್ಲಿ ಮಂದೀಪ್ ಕೌರ್, ಸಿನಿ ಜೋಸ್, ಅಶ್ವಿನಿ ಚಿದಾನಂದ ಮತ್ತು ಮಂಜಿತ್ ಕೌರ್ ಇದ್ದರು.
ಓಟಕ್ಕೆ ಆರಂಭ ಕೊಟ್ಟಿದ್ದು ಮಂದೀಪ್ ಕೌರ್, ನಂತರ ದಾಂಡು ಹೊಡಿದು ಓಡಿದವರು ಸಿನಿ ಜೋಸ್. ಆಶ್ವಿನಿ ಅವರಿಗೆ ಸಿನಿ ಜೋಸ್ ರಿಲೇ ದಾಂಡು ನೀಡಿವಷ್ಟರಲ್ಲಿ 10 ಮೀಟರ್ ಹಿಂದಕ್ಕೆ ಬಿದ್ದಿದ್ದರು. ಟಿವಿ ವೀಕ್ಷಕರಲ್ಲಿ `ಬ್ಲಡ್ಪ್ಲಸರ್' ಏರಿದ್ದೇ ಆಗ! ಭರಕ್ಕೆ ಚಿನ್ನ ಕೈತಪ್ಪಿತು ಅಂತಾನೇ ಭವಿಸಿದ್ದರು. ಆದರೆ ಬಹುಜನರ ನಿರೀಕ್ಷೆ ಹುಸಿ ಮಾಡಲಿಲ್ಲ ಅಶ್ವಿನಿ ಉಗಾಂಡ ಮತ್ತು ನೈಜೇರಿಯಾದ ಓಟಗಾರ್ತಿಯರನ್ನು ಹಿಂದಕ್ಕಿಕ್ಕಿ ಅಶ್ವಿನಿ ತಮ್ಮ ಓಟ ನಿಲ್ಲಿಸಿದರು. ಮುಂದೆ ಮಂಜಿತ್ ಕೌರ್ ಯಶಸ್ವಿ ಓಟ ಮುಗಿಸಿ ಭರತದ ಕಿರೀಟಕ್ಕೆ ಚಿನ್ನದ `ಮೆಡಲ್' ಸಿಕ್ಕಿಸಿದರು.
ಸೆಮಿಪೈನಲ್ನಲ್ಲಿ ಅಶ್ವಿನಿ ಕೊನೆಯರಾಗಿ ಓಡುವ ಮೂಲಕ ಅಂತಿಮಹಂತಕ್ಕೆ ಭರತದ ವನಿತೆಯರ ತಂಡವನ್ನು ಮುಟ್ಟಿಸಿದ್ದರು. ಇವರ ಓಟದ ತಾಕತ್ತು ಗೊತ್ತಿದ್ದೇ ಇವರನ್ನು ಪೈನಲ್ನಲ್ಲಿ ಮೂರನೆಯನವರಾಗಿ ಓಡಿಸಲು ಕಾರಣವಾಯತು. ಮೂರನೇ ಹಂತದಲ್ಲಿ ಒಂದಿಷ್ಟು ಲೀಡ್ ತಂದುಕೊಟ್ಟರೆ ಕೊನೆಯ ಓಟಗಾರ್ತಿಗೆ ಗುರಿ ಮುಟ್ಟಲು ಸಾಧ್ಯ ಎಂಬುದೇ ಆಗಿತ್ತು. ಅಶ್ವಿನಿ ಬಾಕಿಯಾಗಿದ್ದ ಹಿನ್ನೆಡೆ ಪೂರೈಸಿ ಒಂದು ಮೂಟರ್ನಷ್ಟು ಮುನ್ನೆಡೆ ಕೊಟ್ಟಿದ್ದರಿಂದ ಭರತದ ಮಹಿಳೆಯರು ಇತಿಹಾಸ ಬರೆಯಲು ಸಾಧ್ಯವಾಯಿತು ಎನ್ನತ್ತಾರೆ ಕ್ರೀಡಾಭಿಮಾನಿಗಳು.

ಪರಿಚಯ ಹೀಗಿದೆ : ನಕ್ಸಲ್ ಪೀಡಿತ ಪ್ರದೇಶ ಮತ್ತು ಕಮಲಿಶಿಲೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಿನ್ನೆಯಲ್ಲಿ ಪ್ರಸಿದ್ದಿಗೆ ಬಂದ ಕಮಲಶಿಲೆ ಸಮೀಪದಲ್ಲಿ ಜನ್ಸಾಲೆ ಬರುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ಬಾಳೆಬರೆ ಘಾಟಿ ಕಾಲಲ್ಲಿ ಜನ್ಸಾಲೆಯಿದೆ ಎಂದರೆ ತಪ್ಪಲ್ಲ. ಹಳ್ಳಿಯೆಂದರೆ ಹಳ್ಳಿ ಮೂಲೆಯಲ್ಲಿಯ ಕೃಷಿಕ ಕುಟುಂಬದಲ್ಲಿ ಆ.7,1987ರಲ್ಲಿ ಆಶ್ವಿನಿ ಜನನವಾಯಿತು. ತಂದೆ ಚಿದಾನಂದ ಶೆಟ್ಟಿ ಶುದ್ಧ ಕೃಷಿಕರು. ತಾಯಿ ಯಶೋಧಾ ಶೆಟ್ಟಿ `ಹೌಸ್ ವೈಪ್' ಮೂವರ ಕುಟುಂಬದಲ್ಲಿ ಓಟದ ರಾಣಿ ಅಶ್ವಿನಿ `ಲಾಸ್ಟ್' ಓಟದಲ್ಲಿ `ಫಸ್ಟ್'
ತಂದೆ, ತಾಯಿ ಇಬ್ಬರಿಗೂ ಓಟದ ಗೀಳಿತ್ತು.ಇವರ ತಾಯಿ ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ಓಟದ `ಛಾಂಪಿಯನ್' ಆಗಿದ್ದರು. ತಂದೆ ಚಿದಾನಂದ ಶೆಟ್ಟಿ ಅವರು ಶಾಲೆಯಲ್ಲಿ ಓದಿನೊಟ್ಟಿಗೆ, ಓಟಕ್ಕೂ ಸೈ ಎನ್ನುತ್ತಿದ್ದರು. ತಮ್ಮಿಬ್ಬರ ಆಸೆಯನ್ನು ಮಗಳರೂಪದಲ್ಲಿ ಈಡೇರಿಸಿಕೊಂಡಿದ್ದಾರೆ. ಮಗಳ ಸಾಧನೆ ಕಂಡು ಅಶ್ವಿನಿ ಕುಂಟುಂಬದಲ್ಲಿ ಹಬ್ಬದ ವಾತಾವರಣ ಮೂಡಿದೆ.
ಇವರ ಅಕ್ಕ ದೀಪ್ತಿ ಶಂಕರನಾರಾಯಣ ಕಾಲೇಜ್ನಲ್ಲಿ ಲೆಚ್ಚರ್. ಅಣ್ಣ ಅಮಿತ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯಮಿ.ಇದಿಷ್ಟು ಅಶ್ವಿನಿ ಅವರ `ಬ್ಯಾಕ್ ಸ್ಟೋರಿ'
ಹೊಸಂಗಂಡಿ ಶಾಲೆಯಿಂದ ಡೆಲ್ಲಿ ವರೆಗೆ : ಮಗಳಲ್ಲಿ ಓಟದಲ್ಲಿದ್ದ ಸಕ್ತಿಯನ್ನು ಪೋಷಕರು ಬೆನ್ನುತಟ್ಟಿ ಹುರಿದುಂಬಿಸಿದರು. ಹೊಸಂಗಡಿ ಕೆಪಿಸಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾಭ್ಯಸ ಪೂರೈಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅಶ್ವಿನಿ `ಚಿಗುರೆ'ಯಂತೆ ಓಡುತ್ತಿದ್ದರು. ಶಾಲೆ ಓಟದ ಸ್ಪರ್ಧೇಯಲ್ಲಿ ಅಶ್ವಿನಿಗೆ ಪ್ರತಿಸ್ಪಧರ್ಿಗಳೆೇ ಇರಲಿಲ್ಲ. ಇವಳದ್ದು ಪ್ರತೀ ವರ್ಷ ಪ್ರಥಮದ ಸಾಧನೆ.
ಅಶ್ವಿನಿ ಬೆಂಗಳೂರು ಕ್ರಿಡಾ ಶಾಲೆಯಲ್ಲಿ ಎಸ್ಸೆಸ್ಎಲ್ಸಿ ಮುಗಿಸಿದಳು. ಪ್ರೌಢ ಶಿಕ್ಷಣ ಪಡೆಯುತ್ತಿರು ವಾಗಲೇ `ನ್ಯಾಷನಲ್ ಲೆವಲ್' ಓಟಗಾರ್ತಿಯಾಗದ್ದಳು. ಕೊಲ್ಕತ್ತದಲ್ಲಿ ನಡೆದ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದರು. ಇವರ ಓಟದ ಶಕ್ತಿ ಗುರುತಿಸಿದ ಮಂಜುನಾಥ್ ಇವರಿಗೆ `ಕೋಚ್' ಆಗಬಂದರು. ಮಂಜುನಾಥ ಅವರು ಅಶ್ವಿನಿ ಅವರಿಗೆ ಹತ್ತು ವರ್ಷ ಕೋಚ್ ಆಗಿ ಕೆಲಸಮಾಡಿದ್ದಾರೆ. ಪ್ರಸಕ್ತ ರಷ್ಯಾ ದೇಶದ ಕೋಚ್ ಯೂಕ್ರೀನ್ ಎಂಬವರು ಅಶ್ವಿನಿ ವೇಗಕ್ಕೆ ಹೊಸ ಹದ ಬೆರೆಸುತ್ತಿದ್ದಾರೆ.
ಅಶ್ವಿನಿ ಅವರ ಕೋಚ್ ಮಂಜುನಾಥ್ ಅವರು ಹತ್ತು ವರ್ಷದ ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಈಕೆಯಲ್ಲಿ ಸಾಮಥ್ರ್ಯವಿದೆ ಒಂದೆಲ್ಲಾ ಒಂದು ದಿನ ಈಕೆ ಭರತಕ್ಕೆ ಪದಕ ತರುತ್ತಾಳೆ ಎಂದಿದ್ದರು.
ಗುರಿ ಚೀನಾದತ್ತ : ಮುಂದಿನ ದಿನದಲ್ಲಿ ಚೀನಾದಲ್ಲಿ ನಡೆಯವ ಕ್ರಿಡಾ ಕೂಟದಲ್ಲಿ ಪದಕ ಗೆಲ್ಲುವ ಗುರುಯೊಟ್ಟಿಗೆ ಎರಡು ವರ್ಷದ ನಂತರ ನಡೆಯುವ ಒಲಂಪಿಕ್ಸ್ನಲ್ಲಿ ಪದಕ ಗಳಸುವ ಮಹತ್ವಾಕಾಂಕ್ಷೆ ಅಶ್ವಿನಿ ಅವರಲ್ಲಿದೆ. ದೆಹಲಿಯಲ್ಲಿ ಸಿಕ್ಕ ಪದಕ ಇವರಿಗೆ ಮತ್ತಷ್ಟು ಉಮೇದು ತಂದಿದೆ.
ಅಶ್ವಿನಿ ಬರೇ ರಿಲೇ ಓಟಕ್ಕಷ್ಟೇ ಸೀಮಿತವಲ್ಲ. ಕಾಮನ್ವೆಲ್ತ್ ಕ್ರಿಡಾಕೂಟದಲ್ಲಿ `ಹಲ್ಡ್ಸರ್್' ಓಟವನ್ನು ಐದನೆಯವರಾಗಿ ಮುಗಿಸಿದ್ದಾರೆ. ಇವರಿಗೆ ಹರ್ಡಲ್ಸ್`ಪೇವರೇಟ್' ಕೂಡಾ ಹೌದು. ಇವರು ಬರೇ ಓಟಕ್ಕಷ್ಟೆ ಸೀಮಿತವಲ್ಲ. ಓದಿನಲ್ಲೂ ಮುಂದಿದ್ದಾರೆ. ಇದರೊಟ್ಟಿಗೆ ಇವರು ಒಳ್ಳೆ `ಡ್ಯಾನ್ಸರ್' ಕೂಡಾ ಹೌದು. `ಯೋಗ' ಮತ್ತೊಂದು ಹವ್ಯಾಸ.




ಗ್ರಾಮೀಣ ಪ್ರದೇಶದ ಯುವತಿಯರಲ್ಲಿ ಹೆಚ್ಚಿನ ತಾಕತ್ತಿದೆ. ಅವರಿಗೆ `ಟ್ರೈನಿಂಗ್' ಕೊಟ್ಟರೆ ಅವರು ಕಂಡಿತಾ ಉತ್ತಮ ಕ್ರೀಡಾಳುಗಳಾಗುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಯುವತಿಯರ ಸಹಾಯಕ್ಕೆ ಬರಲು ಅಶ್ವ್ವಿನಿ ಯೋಚಿಸುತ್ತಿದ್ದಾರೆ. ಇಂದಿನ ಯಶಸ್ಸಿಗೆ ದೇವರ ದಯ ಮತ್ತು ತಂದೆ, ತಾಯಿಗಳ ಆಶೀರ್ವಾದ ಕಾರಣ ಎನ್ನುತ್ತಾಳೆ ಅಶ್ವಿನಿ. ಈಕೆ ಮೂಡುಬಿದ್ರೆ ಆಳ್ವ್ವಾಸ್ ಕಾಲೇಜು ಹಳೆ ವಿದ್ಯಾರ್ಥಿ. ಚೀನಕ್ಕೆ ತೆರಳುಲು ಸಜ್ಜಾಗಿತ್ತಿರುವ ಅಶ್ವಿನಿಗೆ ಕ್ರೀಡಾಭಿಮಾನಿಗಳಿಂದ `ಬೆಸ್ಟ್ಆಫ್ಲಕ್' ಅಂದಹಾಗೆ ಅಶ್ವಿನಿ ರೈಲ್ವೆ ಉದ್ಯೋಗಿ.

ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ

| ಹರೇರಾಮ ||

ರಾಮಾಯಣ ಆರಂಭವಾಗುವುದು ಹೀಗೆ..

” ತಪ:ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಂ | ವಾಲ್ಮೀಕಿಃ ಪರಿಪಪ್ರಚ್ಛ ನಾರದಂ ಮುನಿಪುಂಗವಂ || “

“ತಪಸ್ಸು ಮತ್ತು ಸ್ವಾಧ್ಯಾಯಗಳಲ್ಲಿ ನಿರತರೂ, ಮಾತು ಬಲ್ಲವರಲ್ಲಿ ಮಿಗಿಲಾದವರೂ ಆದ ನಾರದರೆಂಬ ಶ್ರೇಷ್ಠ ಮುನಿಯಲ್ಲಿ ತಪಸ್ವಿಗಳಾದ ವಾಲ್ಮೀಕಿಗಳು ಪರಿಪ್ರಶ್ನೆಗೈದರು..”

ನಾರದರಲ್ಲಿ ಮೂರು ವಿಶೇಷಗಳನ್ನು ಗುರುತಿಸಿದೆ ಈ ಕವಿತೆ…




೧. ತಪಸ್ಸು,

೨. ಸ್ವಾಧ್ಯಾಯ,

೩. ವಾಗ್ಮಿತ್ವ.

ತಪಸ್ಸಿನ ಮೂಲಕ ತನ್ನೆಲ್ಲ ದೋಷಗಳನ್ನು ಕಳೆದುಕೊಂಡು..

ಸ್ವಾಧ್ಯಾಯದ ಮೂಲಕ ತನ್ನನ್ನೇ ತಾನರಿತು..

ವಾಗ್ಮಿತೆಯ ಮೂಲಕ ತನ್ನರಿವನ್ನು ಜೀವಕೋಟಿಗೆ ವಿತರಿಸಬಂದವರು ನಾರದರು..

ಇದೇ ಕವಿತೆ ವಾಲ್ಮೀಕಿಗಳನ್ನು ಬಣ್ಣಿಸುವುದು ‘ತಪಸ್ವೀ’ ಎಂಬ ಒಂದೇ ಒಂದು ವಿಶೇಷಣದಿಂದ..

ತಪಸ್ಸೆಂದರೆ ತಾಪ..
ಅದೊಂದು ಬಗೆಯ ಕಾವು..
ಚಿನ್ನದಲ್ಲಿರುವ ಚಿನ್ನವಲ್ಲದ್ದನ್ನು ಸುಡಲು ಬೇಕೇ ಬೇಕಲ್ಲವೇ ಕಾವು..?
ಹೊನ್ನು, ಕಾವು ಕಂಡ ಮೇಲಲ್ಲವೆ ಸು-ವರ್ಣವಾಗಿ ಕಂಗೊಳಿಸುವುದು..?
ತಪಸ್ಸೂ ಕೂಡ ಪ್ರಕೃತಿಯಲ್ಲಿ ಒಂದು ಬಗೆಯ ತಾಪವನ್ನೇರ್ಪಡಿಸುತ್ತದೆ…
ತನ್ಮೂಲಕ ದೋಷಗಳನ್ನೆಲ್ಲ ದಹಿಸಿ ಜೀವಿಯನ್ನು ಪರಿಶುದ್ಧಗೊಳಿಸುತ್ತದೆ…!

ನಾರದರು ಬರುವ ಮುನ್ನ ತೀವ್ರತರ ತಪದಿಂದ ತನ್ನೊಳಗಿನ ಸರ್ವದೋಷಗಳನ್ನೂ ಕಳೆದುಕೊಂಡು ಪರಿಶುದ್ಧರಾಗಿ ಸಿದ್ಧರಾಗಿದ್ದರು ವಾಲ್ಮೀಕಿಗಳು…!

ಪಾತ್ರದಲ್ಲಿ ಏನಾದರೂ ಒಳ್ಳೆಯದನ್ನು ತುಂಬಬೇಕಾದರೆ ಮೊದಲು ಅದನ್ನು ತೊಳೆದು ಶುದ್ಧ ಮಾಡಬೇಕಲ್ಲವೇ..?
ಕಲ್ಮಷ ತುಂಬಿರುವ ಪಾತ್ರದಲ್ಲಿ ಒಳ್ಳೆಯದೇನನ್ನದರೂ ತುಂಬಿದರೆ ಅದು ಒಳ್ಳೆಯದಾಗಿ ಉಳಿಯುವುದಾದರೂ ಹೇಗೆ..?

ತಪದ ಮೂಲಕ ತೊಳೆಯಲ್ಪಟ್ಟಿದ್ದ, ಕಲ್ಮಷ ಕಳೆದು ಬರಿದಾಗಿದ್ದ, ವಾಲ್ಮೀಕಿಗಳ ಅಂತರಂಗವೆಂಬ ಪಾತ್ರದಲ್ಲಿ ಶ್ರೀರಾಮಾಯಣವನ್ನು ತುಂಬಿದರು ನಾರದರು…!

ಇಲ್ಲಿ ನಮಗೊಂದು ಸಂದೇಶವಿದೆ…

ವಾಲ್ಮೀಕಿಯ ರಾಮಾಯಣ ನಮ್ಮದಾಗಬೇಕಾದರೆ ವಾಲ್ಮೀಕಿಯ ದಾರಿ ನಮ್ಮದಾಗಬೇಕು..

ಅದೆಷ್ಟು ಕಾಲವಾಯಿತೋ… ನಾವು ನಮ್ಮೊಳಮನೆಯನ್ನು ತೊಳೆಯದೆಯೇ…!
ಹೊರಜಗತ್ತಿನ ಕಸಕಡ್ಡಿಗಳು – ಬೇಡದ ಸಂಗತಿಗಳು ಅದೆಷ್ಟು ಕಾಲದಿಂದ ನಮ್ಮೊಳತುಂಬಿಕೊಂಡಿವೆಯೋ..!!

ಅವುಗಳ ಜೊತೆಗೆ ರಾಮಾಯಣವೂ ಸೇರಿದರೆ ರಾಮಾಯಣದ ನೈಜರೂಪ ಮನಸ್ಸಿಗೆ ಬರುವುದಾದರೂ ಎಂತು..?

ಹುಳಿಪಾತ್ರದಲ್ಲಿಟ್ಟ ಹಾಲು ಹಾಳೆನಿಸಿದರೆ…
ಮೆಣಸಿನ ಪಾತ್ರದಲ್ಲಿಟ್ಟ ಹಾಲು ಖಾರವೆನಿಸಿದರೆ…
ಅದು ಹಾಲಿನ ತಪ್ಪಲ್ಲ…!

ಹಾಗೆಯೇ ಪೂರ್ವಾಗ್ರಹಗಳಿಂದ ಕಲುಷಿತವಾದ ನಮ್ಮ ಮನಸ್ಸಿಗೆ ರಾಮಾಯಣ ಏನೇನೋ ಆಗಿ ತೋರಿದರೆ…
ಅದು ರಾಮಾಯಣದ ತಪ್ಪಲ್ಲ…!

ಶುಚಿಯಲ್ಲದ ಕಣ್ಮನಗಳಿಂದ ರಾಮಾಯಣವನ್ನು ನೋಡಿದ್ದೇ ಅದರ ಹಲವು ಬಗೆಯ ಅಪಾರ್ಥ,ಅಪವ್ಯಾಖ್ಯಾನ,ಅಪಪ್ರಚಾರಗಳಿಗೆ ಕಾರಣವಾಯಿತು..!

ಶುದ್ಧ ದೃಷ್ಟಿಗೆ ರಾಮಾಯಣದ ಶುದ್ಧರೂಪ ಗೋಚರಿಸುವುದು….
ಕಲುಷಿತ ದೃಷ್ಟಿಗೆ…………………………???????????????????


ರಾಮಾಯಣದ ಸಿದ್ಧತೆಯೆಂದರೆ………………ಅದು ದೃಷ್ಟಿಯ ಶುದ್ಧತೆ…!!!

|| ಹರೇರಾಮ ||

(ಶ್ರೀ ಗುರುಗಳ ವಚನಾಮೃತಕ್ಕಾಗಿ ಹರೇರಾಮ.ಇನ್ ಲಾಗ್ ಇನ್ ಮಾಡಿರಿ.ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿರಿ.)

ಮುಂದೆ ಓದಿ

ಸಾಹಿತ್ಯ

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ
(ಸುಭಾಷಿತರತ್ನಭಾಂಡಾಗಾರ)

ಗೆಲಬೇಕು ಲಂಕೆಯನು, ಪದಕ್ರಮಿಸಬೇಕು ಕಡಲನು
ವೈರಿಯವ ರಾವಣನು, ಯುದ್ಧದಿ ನೆರವು ಕಪಿಗಳದು
ಆದರೂ ರಾಮನೊಬ್ಬನೆ ರಾಕ್ಷಸಕುಲವನಳಿಸಿದನು
ಶ್ರೇಷ್ಠರಿಗೆ ಸಿದ್ಧಿ ಸತ್ತ್ವದಲಿಹುದು, ಸಾಮಗ್ರಿಯಲಿರದು




ವಿಜಯ ದೊರಕಲಿ ನಮಗೆ ದಶ ದಿಕ್ಕುಗಳಮೇಲೆ;
ಯಶದ ಸೌಧ ಏಳಲಿ ಯತ್ನದ ತಳಹದಿಮೇಲೆ

ವಿಜಯ ದೊರಕಲಿ ನಮಗೆ ನವ ದ್ವಾರಗಳಮೇಲೆ;
ಅವು ನಮ್ಮ ಅಂಕೆಯಲ್ಲಿರಲಿ, ಮನ ಗುರುಶಾಲೆ

ವಿಜಯ ದೊರಕಲಿ ನಮಗೆ ಅಷ್ಟ ಮದಗಳಮೇಲೆ;
ಇಷ್ಟವಾಗಲಿ ವಿನಯ, ದೃಷ್ಟಿಯಿರಲಿ ನೆಲದಮೇಲೆ

ವಿಜಯ ದೊರಕಲಿ ನಮಗೆ ಸಪ್ತ ವ್ಯಸನಗಳಮೇಲೆ;
ಪ್ರಾಪ್ತವಾಗಲಿ ಹಿಡಿತ ಕೋಪ-ಕಾಮಗಳಮೇಲೆ

ವಿಜಯ ದೊರಕಲಿ ನಮಗೆ ಅರಿಷಡ್ವರ್ಗಗಳಮೇಲೆ;
ಅರಿವನಾವರಿಸಿರುವ ಅಂಧಕಾರದಮೇಲೆ

ವಿಜಯ ದೊರಕಲಿ ನಮಗೆ ಪಂಚ ಪಾತಕಗಳಮೇಲೆ;
ಕಿಂಚಿತ್ತಾದರೂ ಗೌರವವಿರಲಿ ಜೀವನಮೌಲ್ಯದಮೇಲೆ

ವಿಜಯ ದೊರಕಲಿ ನಮಗೆ ಕ್ರೂರ ಚತುಷ್ಟಯದಮೇಲೆ;
ಹಾರವಾಗಲಿ ಹೃದಯಕೆ ಅಂತಃಕರಣಮಾಲೆ

ವಿಜಯ ದೊರಕಲಿ ನಮಗೆ ತಾಪತ್ರಯದಮೇಲೆ;
ಈ ಪ್ರಪಂಚವು ಆ ದೇವದೇವನ ಲೀಲೆ

ವಿಜಯ ದೊರಕಲಿ ನಮಗೆ ಸ್ವೇಚ್ಛೆ-ಸ್ವೈರದಮೇಲೆ;
ಎಚ್ಚರವಿರಲಿ ಸದಾ ಇಹಪರಗಳಮೇಲೆ

ವಿಜಯ ದೊರಕಲಿ ನಮಗೆ ಭವದ ಮಾಯೆಯಮೇಲೆ;
ಅವ ಮೊದಲು; ನಾನು, ನನ್ನದು ಎಲ್ಲ ಆಮೇಲೆ

-0-

(ದಶ ದಿಕ್ಕುಗಳು: ಎಂಟು ದಿಕ್ಕುಗಳು+ಊಧ್ರ್ವದಿಶೆ+ಅಧೋದಿಶೆ.
ನವ ದ್ವಾರಗಳು: ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ.
ಅಷ್ಟ ಮದಗಳು: ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ.
ಸಪ್ತ ವ್ಯಸನಗಳು: ವಾಕ್ಪಾರುಷ್ಯ, ಅರ್ಥದೂಷಣ, ದಂಡಪಾರುಷ್ಯ (ಇವು ಕೋಪಜನ್ಯ), ಬೇಟೆ, ಜೂಜು, ಸ್ತ್ರೀ, ಪಾನ (ಇವು ಕಾಮಜನ್ಯ).
ಅರಿಷಡ್ವರ್ಗಗಳು: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
ಪಂಚಪಾತಕಗಳು: ಬ್ರಹ್ಮಹತ್ಯೆ, ಸುರಾಪಾನ, (ಸ್ವರ್ಣ)ಸ್ತೇಯ(=ಕಳ್ಳತನ), ಗುರುಭಾಯರ್ಾ ಗಮನ ಮತ್ತು ಇವುಗಳನ್ನು ಮಾಡುವವರ ಸಹವಾಸ.
ಕ್ರೂರ ಚತುಷ್ಟಯ: ದುರ್ಮನ, ದುಬರ್ುದ್ಧಿ, ದುರಹಂಕಾರ, ದುಶ್ಚಿತ್ತ. ಅಂತಃಕರಣ ಚತುಷ್ಟಯ: ಸುಮನ, ಸದ್ಬುದ್ಧಿ, ನಿರಹಂಕಾರ, ಸತ್ಚಿತ್ತ.
ತಾಪತ್ರಯ: ಆಧ್ಯಾತ್ಮಿಕ ದುಃಖ, ಆಧಿಭೌತಿಕ ದುಃಖ, ಆಧಿದೈವಿಕ ದುಃಖ.
ದೋಷದ್ವಯ: ಸ್ವೇಚ್ಛೆ, ಸ್ವೈರ.
ಏಕಭ್ರಾಂತಿ: ಭವದ ಮಾಯೆ.
ಅವ = ಭಗವಂತ.)

- ವಿಜಯದಶಮಿ, 'ವಿಕೃತಿ' ಸಂವತ್ಸರ (ಇಸವಿ 2010)

ಎಚ್. ಆನಂದರಾಮ ಶಾಸ್ತ್ರೀ

ಮುಂದೆ ಓದಿ
10:38 PM

ಅರುಣೋದಯವಾಯಿತು..!!

Posted by ekanasu

ಭಕ್ತಿ ಸಿಂಚನ

|| ಹರೇರಾಮ ||

ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ…
ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..!
ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..?
ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ..
ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು ಬರುತ್ತಿರುವ, ಬರಲಿರುವ ಹೊಸ ನೀರೂ ಗಂಗೆಯೇ..!
ಗಂಗೋತ್ರಿಯು ಪ್ರಥಮಬಿಂದುವಾಗಿಯೂ, ಕಾಶಿಯು ಮಧ್ಯಬಿಂದುವಾಗಿಯೂ, ಗಂಗಾಸಾಗರವು ಚರಮಬಿಂದುವಾಗಿಯೂ ಇರುವ ಪಾವನ ಪಥದಲ್ಲಿ ಹರಿಯುವ ನೀರೆಲ್ಲವೂ ಗಂಗೆಯೇ..!



ಇಕ್ಶ್ಕ್ವಾಕುವಂಶವೂ ಗಂಗೆಯಂತೆಯೇ..
ಸಿಂಹಾಸನದಲ್ಲಿ ಮಂಡಿಸಿದ ವ್ಯಕ್ತಿಗಳು ಬದಲಾದರೂ ಅಲ್ಲಿ ತತ್ತ್ವಗಳು ಮಾತ್ರ ಬದಲಾಗಲಿಲ್ಲ..!
ಅನುರೂಪವಾಗಿರುವುದಕ್ಕಲ್ಲವೇ ಸಂತತಿಯೆಂದು ಹೆಸರು..!
ದೀಪದ ಪರಂಪರೆಯಲ್ಲಿ ದೀಪಗಳು ಬರಬಹುದೇ ಹೊರತು ಕತ್ತಲೆಂದಿಗೂ ಬರಲು ಸಾಧ್ಯವಿಲ್ಲ
ಕಲ್ಪವೃಕ್ಷವು ಕಲ್ಪವೃಕ್ಷಗಳ ಸಾಲನ್ನೇ ಸೃಷ್ಟಿಸುತ್ತದೆ.. ಅಲ್ಲಿ ಕಳ್ಳಿಗೆಲ್ಲಿಯ ಪ್ರವೇಶ..!
“ಆತ್ಮಾವೈ ಪುತ್ರನಾಮಾಸಿ..”(ತಂದೆ-ಮಕ್ಕಳು ಬೇರೆಯಲ್ಲ,ಮಗನಾಗಿ ಹುಟ್ಟುವವನು ತಂದೆಯೇ)ಎಂಬ ವೇದವಾಕ್ಯವು ತನ್ನ ಪೂರ್ಣಾರ್ಥವನ್ನು ಕಂಡುಕೊಂಡಿದ್ದು ಸೂರ್ಯವಂಶದಲ್ಲಿ..!
ಅಮೃತಸಾಗರದಿಂದ ಒಂದನ್ನೊಂದು ಹೋಲುವ ಆನಂದದಲೆಗಳು ಒಂದಾದ ಮೇಲೊಂದರಂತೆ ಮೇಲೆದ್ದು ಬರುವಂತೆ …
ದಿನಕರನ ಅಮರವಂಶದಲ್ಲಿ ಮಹಾಪುರುಷರುಗಳು ಸಾಲುಸಾಲಾಗಿ ಆವಿರ್ಭವಿಸಿದರು..!

ಇದೋ..
ಭಾಸ್ಕರವಂಶದ ಅಕ್ಷರ ದರ್ಶನ..
ಆದಿರಾಜ ಮನು
ಇಕ್ಷ್ವಾಕು..
ಕುಕ್ಷಿ
ವಿಕುಕ್ಷಿ
ಬಾಣ
ಅನರಣ್ಯ
ಧರ್ಮ-ವಾತ್ಸಲ್ಯಗಳ ಪ್ರತಿಮೂರ್ತಿಯಾಗಿ ಧರಣಿಯನ್ನಾಳಿದ ದೊರೆಯಿವನು..
ಸೂರ್ಯವಂಶದೊಡನೆ ರಾವಣನ ವೈರದ ನಾಂದಿ ಇಲ್ಲಿಂದಲೇ…!
ಯಜ್ಞದೀಕ್ಷಿತನಾಗಿದ್ದ ರಾಜಾ ಅನರಣ್ಯನನ್ನು ನ್ಯಾಯವಲ್ಲದ ರೀತಿಯಲ್ಲಿ ರಾವಣನು ಕಗ್ಗೊಲೆಗೈದನು..
ರಾವಣನ ಸರ್ವನಾಶದ ಬೀಜಾಂಕುರವು ಅಲ್ಲಿಯೇ ಆಯಿತು..!
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿ “ನನ್ನ ವಂಶದಲ್ಲಿ ಉದಯಿಸಿ ಬರುವ ಮಹಾಪುರುಷನೊಬ್ಬನಿಂದ ನಿನ್ನಸರ್ವನಾಶವಾಗುವುದು” ಎಂದು ಶಪಿಸಿದನು ಅನರಣ್ಯ..
ಶ್ರೀರಾಮಾವಿರ್ಭಾವದ ಸೋಪಾನವಾಯಿತು ಅನರಣ್ಯನ ಬದುಕಿನ ಅಂತಿಮವಾಕ್ಯ…

ತ್ರಿಶಂಕು..
ಯಾರೂ ಸಾಧಿಸದಿದ್ದುದನ್ನು ಸಾಧಿಸುವ ಛಲ ತ್ರಿಶಂಕುವಿನದ್ದು..
ಎಲ್ಲರೂ ಸತ್ತು ಸ್ವರ್ಗವನ್ನು ಸೇರಿದರೆ, ಸಶರೀರನಾಗಿಯೇ ಸ್ವರ್ಗವನ್ನು ಸೇರಲು ಹವಣಿಸಿದನಾತ…!
ತನ್ನ ಹೆಬ್ಬಯಕೆಯನ್ನು ಸಾಧಿಸಿಕೊಳ್ಳುವ ಹೋರಾಟದಲ್ಲಿ ಛಲವೊಂದನ್ನುಳಿದು ಮತ್ತೆಲ್ಲವನ್ನೂ ಕಳೆದುಕೊಳ್ಳಬೇಕಾಯಿತು..
ಶಾಪದಿಂದ ಚಂಡಾಲತ್ವ ಬಂದರೂ, ಕುಲಗುರುವಿನಿಂದಾರಂಭಿಸಿ ಪ್ರಜೆಗಳ ತನಕ ಸಕಲರೂ ಕೈಬಿಟ್ಟರೂ..
ತ್ರಿಶಂಕು ತನ್ನ ಹೋರಾಟವನ್ನು ಕೈಬಿಡಲಿಲ್ಲ..!
ಸೃಷ್ಟಿ ಕಂಡು ಕೇಳರಿಯದ, ಆ ಸಾಟಿಯಿಲ್ಲದ ಹೋರಾಟದ ಫಲವಾಗಿ ತ್ರಿಶಂಕುವಿಗಾಗಿ ಪ್ರತಿಸ್ವರ್ಗವೇ ಸೃಷ್ಟಿಯಾಯಿತು..!

ದುಂಧುಮಾರ
ಯುವನಾಶ್ವ
ಮಾಂಧಾತಾ..
ಯುಗಪುರುಷನಿವನು..
ಮಕ್ಕಳಿಲ್ಲದ ಯುವನಾಶ್ವನು ಭೃಗು ಮಹರ್ಷಿಗಳ ಸಾನ್ನಿಧ್ಯದಲ್ಲಿ ಪುತ್ರಕಾಮೇಷ್ಟಿಯನ್ನು ನಡೆಸಿದಾಗ, ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿತವಾದ ಜಲವನ್ನು ಪ್ರಮಾದವಶಾತ್ ಕುಡಿದು ತಾನೇ ಗರ್ಭ ಧರಿಸಬೇಕಾಯಿತು..
ಹೀಗೆ ತಾಯಿಯಿಲ್ಲದೆ ತಂದೆಯ ಮಗನಾಗಿ ಭೂಮಿಗೆ ಬಂದವನು ಮಾಂಧಾತಾ ..
ಆಗ ಅರಮನೆಯಲ್ಲೆದ್ದ ಪ್ರಶ್ನೆ ‘ಕಂ ಧಾಸ್ಯತಿ..’?
‘ಈ ಮಗುವಿಗೆ ಹಾಲು ಕುಡಿಸುವವರಾರು..’?
ಉತ್ತರ ದಿವಿಯಿಂದ ಬಂದಿತು..!
ಸ್ವಯಂ ದೇವೇಂದ್ರನೇ ಧರೆಗಿಳಿದು “ಮಾಂ ಧಾಸ್ಯತಿ”.. “ನಾನು ಹಾಲೀಯುವೆನು” ಎಂದು ಉದ್ಘೋಷಿಸಿ ತನ್ನ ಹೆಬ್ಬೆರಳಲ್ಲಿ ಅಮೃತವನ್ನು ತುಂಬಿ ಮಗುವಿಗೆ ಕುಡಿಸಿದನು..!
ಇಂದ್ರನ ಮಾಂ ಧಾಸ್ಯತಿ ಎಂಬ ವಾಕ್ಯದಿಂದಾಗಿಯೇ ಆತನಿಗೆ “ಮಾಂಧಾತಾ” ಎಂದು ಹೆಸರಾಯಿತು…
ವರ ಪಡೆಯುವ ಅವಕಾಶ ಪ್ರಾಪ್ತವಾದಾಗ ಧರ್ಮಸಂಗ್ರಾಮದಲ್ಲಿ ತನ್ನ ಪ್ರಾಣಾರ್ಪಣೆಯಾಗಬೇಕೆಂದು ಕೇಳಿದವನಿವನು..!
ಅದು ಹಾಗೆಯೇ ಆಯಿತು..
ದುಷ್ಟ ಲವಣಾಸುರನೊಡನೆ ನಡೆದ ಮಹಾಸಂಗ್ರಾಮದಲ್ಲಿ ಮಾಂಧಾತನ ಪ್ರಾಣಾರ್ಪಣೆಯಾಯಿತು..
ಅಂತಿಮ ವಿಜಯ ಏಂದಿದ್ದರೂ ಸೂರ್ಯವಂಶದ್ದೇ..!
ಮುಂದೊಂದು ದಿನ ರಾಮನ ಕಿರಿಯ ಸೋದರನಾದ ಶತ್ರುಘ್ನನು ಲವಣಾಸುರನನ್ನು ಸಂಹರಿಸಿದನು..

ಸುಸಂಧಿ
ಧ್ರುವಸಂಧಿ
ಭರತ
ಅಸಿತ
ಸಗರ..
ಗರವೆಂದರೆ ವಿಷ..
ವಿಷದೊಡನೆ ಜನಿಸಿದವನು ಸಗರ..
ಸಗರನ ತಾಯಿಯು ಗರ್ಭವತಿಯಾಗಿದ್ದಾಗ ಆಕೆಗೆ ಪುತ್ರಪ್ರಾಪ್ತಿಯಾಗುವುದನ್ನು ಸಹಿಸದ ಸವತಿಯೊಬ್ಬಳು ವಿಷವುಣಿಸಿದಳು..
ಆದರೆ ಚ್ಯವನ ಮಹರ್ಷಿಯ ಕೃಪೆ ದೊಡ್ಡದು..
ಗರ್ಭದೊಳಗೇ ವಿಷದೊಡನೆ ಹೋರಾಡಿ ಗೆದ್ದ ಮಗು ಸಚೇತನವಾಗಿ ಭೂಮಿಗೆ ಬಂದೇಬಂದಿತು..!
ಆತನೇ ಸಗರ..
ತನ್ನ ವಿಕ್ರಮದಿಂದಲೇ ವಿಶ್ವವಿಜಯಿಯಾದ ಸಗರನ ಕುರುಹು ಭುವಿಯಲ್ಲಿ ಶಾಶ್ವತ..
ಸಾಗರವು ಸಗರನ ಕೊಡುಗೆ…!

ಅಸಮಂಜ
ಅಂಶುಮಾನ್
ದಿಲೀಪ
ನಂದಿನಿಯೆಂಬ ವಸಿಷ್ಠರ ಹೋಮಧೇನುವಿನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ನೀಡಲು ಮುಂದಾಗಿ ಗೋಸೇವೆಗೆ ಮೇಲ್ಪಂಕ್ತಿಯಾದವನಿವನು..

ಭಗೀರಥ..
ಪುರುಷಪ್ರಯತ್ನದ ಪರಮ ಪ್ರತೀಕನಿವನು..
ತನ್ನ ಮುತ್ತಜ್ಜಂದಿರ ಮೋಕ್ಷಕ್ಕಾಗಿ ದೇವಗಂಗೆಯೆನ್ನು ಭುವಿಗಿಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದವವನು..
ಸಾಲು ಸಾಲು ವಿಘ್ನಗಳನ್ನು ಮೀರಿ ಸಫಲನಾದವನು..
ಪಾಪನಾಶಿನಿ- ಮೋಕ್ಷದಾಯಿನಿ ಭಾಗೀರಥಿಯು ಭಗೀರಥನ ಭವ್ಯಬದುಕಿನ ಶಾಶ್ವತ ಚಿಹ್ನೆಯಾಗಿ ಭುವಿಯಲ್ಲಿ ಹರಿದಳು..!

ಕಕುತ್ಸ್ಥ..
ಸಂಕಟಕ್ಕೊಳಗಾದಾಗ ದೇವತೆಗಳ ಮೊರೆಹೋಗುವುದು ಸಾಮಾನ್ಯ ಮಾನವರಲ್ಲಿ ಕಂಡುಬರುವ ಸಾಮನ್ಯ ಸಂಗತಿ..
ಆದರೆ ಸೂರ್ಯವಂಶೀಯರು ಇದಕ್ಕೆ ಸಂಪೂರ್ಣ ಭಿನ್ನರು.!.
ದಾನವರ ಧಾಳಿಯಿಂದ ಕಂಗೆಟ್ಟ ದೇವತೆಗಳು ಸೂರ್ಯವಂಶದ ಮೊರೆ ಹೋಗುತ್ತಿದ್ದರು..
ಭುವಿಯಿಂದ ದಿವಿಗೇರಿ ದಾನವರನ್ನು ಸದೆಬಡಿದು ಸ್ವರ್ಗವನ್ನು ದೇವತೆಗಳಿಗೆ ಉಳಿಸಿಕೊಡುತ್ತಿದ್ದರು ಸೂರ್ಯವಂಶೀಯರು..!
ಕಕುತ್ ಎಂದರೆ ಎತ್ತಿನ ಹೆಗಲು..
ದಾನವರೊಡನೆ ಸಂಗ್ರಾಮದಲ್ಲಿ ಎತ್ತಿನ ರೂಪದಲ್ಲಿದ್ದ ಇಂದ್ರನ ಹೆಗಲೇರಿ ಹೋರಾಡಿ ಜಯಿಸಿದ್ದರಿಂದ ಈತ ಕಕುತ್ಸ್ಥ ಎನಿಸಿಕೊಂಡನು..
ಸೂರ್ಯವಂಶೀಯರು ಕಾಕುತ್ಸ್ಥರೆನಿಸಿದರು…

ರಘು..
ವಂಶದಿಂದಾಗಿಯೇ ಗೌರವವನ್ನು ಪಡೆಯುವವರು ಹಲವರು..
ವಂಶಕ್ಕೆ ಗೌರವವನ್ನು ತಂದುಕೊಡುವವರು ಕೆಲವರು..
ಎರಡನೇ ವರ್ಗಕ್ಕೆ ಸೇರಿದವನು ರಘುಮಹಾರಾಜ..!!
ಸೂರ್ಯವಂಶವು ರಘುವಂಶವೆನಿಸಿತು ಈತನಿಂದ..

ಕಲ್ಮಾಷಪಾದ
ಶಂಖಣ
ಸುದರ್ಶನ
ಅಗ್ನಿವರ್ಣ
ಶೀಘ್ರಗ
ಮರು
ಪ್ರಶುಶ್ರುಕ
ಅಂಬರೀಷ..
ಪರಮ ವೈಷ್ಣವನಿವನು..
ತನ್ನ ಸೇವಕರ ಸೇವೆಯನ್ನು ಭಗವಂತನೇ ಸ್ವತಃ ಮಾಡುವನೆಂಬುದಕ್ಕೆ ಪ್ರತ್ಯಕ್ಷ ದೃಷ್ಟಾಂತವಾದವನು..
ಸಾಕ್ಷಾತ್ ಸುದರ್ಶನ ಚಕ್ರವೇ ಅಂಬರೀಷನ ರಕ್ಷಣೆಗಾಗಿ ಸದಾ ಸನ್ನದ್ಧವಾಗಿ ಆತನ ಬಳಿಯಲ್ಲಿಯೇ ನೆಲೆಸಿತ್ತು..!

ಮನುವಿನಿಂದ ಮೊದಲುಗೊಂಡು ಮೂವತ್ತೈದನೆಯವನು ದಶರಥ..
ಸೂರ್ಯೋದಯವಾಗುವುದಕ್ಕೆ ಮುನ್ನ ಅರುಣೋದಯವಾಗುವಂತೆ, ಭುವಿಯಲ್ಲಿ ಶ್ರೀರಾಮೋದಯವಾಗುವುದಕ್ಕೆ ಮುನ್ನ ದಶರಥೋದಯವಾಯಿತು..!

|| ಹರೇರಾಮ ||

ಟಿಪ್ಪಣಿ: <ಭಾಸ್ಕರವಂಶದ ಅಕ್ಷರದರ್ಶನ> =ಅಕ್ಷರಗಳ ಮೂಲಕ ಸೂರ್ಯವಂಶದ ದರ್ಶನ,
ಸೂರ್ಯವಂಶದ ಅವಿನಾಶೀ ದರ್ಶನ
(ಸೂಚನೆ: ಶ್ರೀ ಗುರುಗಳ ವಚನಾಮೃತಕ್ಕಾಗಿ ಹರೇರಾಮ.ಇನ್ ಲಾಗ್ ಇನ್ ಮಾಡಿರಿ.)

ಮುಂದೆ ಓದಿ
10:01 PM

ಕಥೆಗಾರ

Posted by ekanasu

ಸಾಹಿತ್ಯ
ಭಾಗ - 1

ಸುಮಾರು 3ಮೈಲಿಗಳಷ್ಟು ದೂರ ನಿರ್ಜನ ರಸ್ತೆಯಲ್ಲಿ ಓಡಿದ ಕಾರು ಏಕಾಏಕಿ ಓಟ ನಿಲ್ಲಿಸಿದಾಗ ಹಣೆಯ ಮೇಲೆ ಕೈ ಹಚ್ಚಿಕೊಂಡ ಸ್ವಾತಿ ಅಸಹಾಯಕತೆಯಿಂದ ಮುಖ ಕಿವುಚಿದಳು. ಜನ ಸಂಚಾರವಿಲ್ಲದ ಈ ರಸ್ತೆಯಲ್ಲಿ ಮತ್ತೆ ಹಿಂದಕ್ಕೆ ಸಾಗೋದು ಅಸಾಧ್ಯ. ಅರಿವಾದಾಗ ಮೆಲ್ಲನೆ ಕೆಳಗಿಳಿದು ಸಹಾಯಕ್ಕಾಗಿ ಅತ್ತಿತ್ತ ನೋಡಿದಳು. `ಮಾದರಿ' ಪತ್ರಿಕೆಯ ಸಾಪ್ತಾಹಿಕ ವಿಭಾಗಕ್ಕೆ ತುರ್ತಾಗಿ ಒಂದು ಬರಹ ಸಿದ್ಧವಾಗಬೇಕಿತ್ತು.



ಸಂಪಾದಕ ನೀಡಿದ ಎರಡು ದಿನಗಳ ಗಡುವು ಮುಗಿಯುತ್ತಾ ಬಂದಾಗ ಪ್ರಕೃತಿಯ ಬಗ್ಗೆ ಬರೆಯಬೇಕೆನ್ನುವ ಆತುರದಿಂದ ನಿರ್ಜನ ಪ್ರದೇಶವನ್ನು ಹುಡುಕಿಕೊಂಡು ಬಂದವಳಿಗೆ ಎದುರಾಗಿದ್ದು ಕೆಟ್ಟು ನಿಂತ ಕಾರಿನ ಸಮಸ್ಯೆ. ಬರೆಯುವ ಉತ್ಸಾಹವನ್ನೂ ಕುಂಠಿತಗೊಳಿಸಿದ ಕಾರಿನತ್ತ ಬೇಸರದ ನೋಟ ಬೀರಿದವಳು ಎರಡು ಹೆಜ್ಜೆ ಮುಂದಕ್ಕೆ ಹೊರಳಿದಳು. ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ವೈಭವಕ್ಕೆ ಸೂರ್ಯನ ಸಂಜೆಯ ಬೆಳಕು ಬಂಗಾರದ ಮೆರಗು ನೀಡಿ ಚಿತ್ತವನ್ನು ಹಿಡಿದಿಟ್ಟಿತ್ತು. ಮುಂದಕ್ಕೆ ನಡೆದು ತೆರೆದ ಭಾಗಕ್ಕೆ ಬಂದು ನಿಂತವಳಿಗೆ ಮರೀಚಿಕೆಯಂತೆ ಗೋಚರಿಸಿದ್ದು ಬಣ್ಣ ಕಳೆದುಕೊಂಡ ಎತ್ತರದ, ಎರಡಂತಸ್ತಿನ ಹಳೆಯ ಕಾಲದ ಹಂಚಿನ ಮನೆ!



ತಟ್ಟನೆ ಕಾರಿನೊಳಗೆ ಚಿಮ್ಮಿ ಗಾಜುಗಳನ್ನು ಏರಿಸಿ ಚರ್ಮದ ಕೈ ಚೀಲ ತೆಗೆದು ಲಾಕ್ ಮಾಡಿ, ಇಳಿಜಾರಿನ ಹಾದಿ ಹಿಡಿದಳು. ಜನರ ಕುರುಹು ಇಲ್ಲದ ಭಗ್ನ ಅವಶೇಷದಂತೆ ನಿಂತಿದ್ದ ಮನೆಯನ್ನು ನೋಡುತ್ತಲೇ ನಿರಾಶೆ ತುಂಬಿತು. ಪ್ರಕೃತಿಯ ನಡುವೆ ಅಡಗಿ ಕುಳಿತಿರುವ ಮನೆಯಲ್ಲಿ ಯಾರು ಇಲ್ಲವೆನ್ನುವ ಋಣಾತ್ಮಕ ಚಿಂತೆ ಕಾಡಿತು.
ಮನೆಯ ಹಿಂಭಾಗದಿಂದ ಇಳಿದ ದಾರಿಯಿಂದ ಪಕ್ಕದ ಪೊದೆಯ ಬಳಿ ಇಳಿದು ಅಂಗಳಕ್ಕೆ ಬಂದಾಗ ಮರದ ಒಣ ಎಲೆಗಳ ಮೆತ್ತನೆಯ ನೆಲ, `ಯಾರು ಇಲ್ಲ ಹೋಗು' ಅನ್ನುವಂತೆ ಇತ್ತು. ಅಳುಕಿನ ಹೆಜ್ಜೆಗಳು ಸರಿದು ತೆರೆದ ಜಗುಲಿಯ ಬಳಿ ಬಂದು ಮುಚ್ಚಿದ ಬಾಗಿಲ ಮೇಲೆ ಬೆರಳುಗಳನ್ನು ಕುಟ್ಟುವಂತೆ ಪ್ರೆರೇಪಿಸಿತು.
ಟಕ್! ಟಕ್!!
ಟಕ್ ಟಕ್ ಸದ್ದು ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ... ಕೊನೆಗೆ ಗೋಡೆಯ ಮೇಲಿದ್ದ ಹಲ್ಲಿ ದೂರಕ್ಕೆ ಓಡುವಂತಾಗಿತ್ತು. ಬೆದರಿದ ಕೈಗಳು ಬಾಗಿಲ ಮೇಲೆ ಒತ್ತಡ ಹೇರಿದಾಗ ಬಾಗಿಲು ತೆರೆದುಕೊಂಡಿತು. ನಿರಾಶೆಯ ತುದಿಯಲ್ಲಿದ್ದವಳು ಚಕಿತಳಾಗಿ ಹಿಂದಕ್ಕೆ ಹೆಜ್ಜೆ ಇರಿಸಿದಳು. ಬಲವಾದ ಸಂಶಯ ಅವಳನ್ನು ಮುಂದುವರಿಯದಂತೆ ತಡೆಯಿತು.

ಏನೊಂದೂ ಪ್ರತಿಕ್ರಿಯೆ ಇಲ್ಲದಾಗ ಬೆರಗು, ಕುತೂಹಲ ಒಳಗೆ ಇಣುಕುವಂತೆ ಉತ್ತೇಜಿಸಿತು. ಮೆಲ್ಲನೆ ಇಣುಕಿದಳು. ಹೊರಗೆ ಬಿಕಾರಿಯಂತಿದ್ದ ಮನೆ, ಒಳಗೆ ಅಷ್ಟೇ ಚೊಕ್ಕವಾಗಿತ್ತು. ಅಂದರೆ ಈ ಮನೆಯಲ್ಲಿ ಯಾರೋ ವಾಸಿಸುತ್ತಿದ್ದಾರೆ. ಅವನು ಒಬ್ಬ ಕವಿ ಹೃದಯದವನೇ! ಮೆದುಳು ಕೂಗಿ ಹೇಳಿತು. ಅದನ್ನು ರುಜುವಾತು ಪಡಿಸುವಂತೆ ಮೇಜಿನ ಮೇಲೆ ಜೋಡಿಸಿದ ಬರವಣಿಗೆಯ ಪರಿಕರಗಳು, ಪ್ರಕಟಿತ ಪುಸ್ತಕಗಳು. ಧೈರ್ಯ ತುಂಬಿತು. ಹಿಂದಕ್ಕೆ ಸರಿದವಳು ಹೊರಗೆ ಕಣ್ಣು ಹಾಯಿಸಿದಳು. ಬರೆಯುವ ಹೃದಯಿ ಪ್ರಕೃತಿಯ ಮಧ್ಯೆ ಅಡಗಿರುವ ಕವಿತೆಯನ್ನು ಹುಡುಕುತ್ತಿದ್ದಾನೆ. ಅದಕ್ಕಾಗಿ ಇಲ್ಲೆಲ್ಲೋ ಅಲೆದಾಡುತ್ತಿದ್ದಾನೆ. ಸಹಾಯ ಯಾಚಿಸುವುದಕ್ಕಾಗಿ ಕೂಗುವುದು ಅನಿವಾರ್ಯವಾಗಿತ್ತು.

ನಾಳೆಗೆ....
ಅನು ಬೆಳ್ಳೆ

ಮುಂದೆ ಓದಿ
| | |Home