ಅಗ್ರಲೇಖನ
"ನೋಡಿ ನೀನ್ ಮಾಡುವುದು ಸರಿಯಲ್ಲ ಎಂದು ಬೊಟ್ಟು ಮಾಡಿ ತೋರುವ ಮೊದಲು ನಾವೆಷ್ಟರ ಮಟ್ಟಿಗೆ ಸರಿಯಿದ್ದೇವೆ " ಎಂದು ಅವಲೋಕಿಸುವ ಸುಸಂದರ್ಭ ಇದು. ಇದು ಮಾಧ್ಯಮ ಮಂದಿಯನ್ನೂ ಬಿಟ್ಟಿಲ್ಲ ಎಂದರೆ ತಪ್ಪಾಗಲಾರದು. ರಾಜಕಾರಣಿಗಳನ್ನು , ಅವರ ಅವ್ಯವಹಾರಗಳನ್ನು ಬಟಾ ಬಯಲುಗೊಳಿಸುತ್ತೇವೆ ಎಂಬಂತೆ ಫೋಸ್ ನೀಡುವ ಗೌರವಾನ್ವಿತ ಮಾಧ್ಯಮ ಮಿತ್ರರೂ ತಾನೂ ಇದರಿಂದ ಹೊರತಾಗಿಲ್ಲ ಎಂಬುದನ್ನು ಅರ್ಥೈಸಿಕೊಳ್ಳುವುದು ಒಳಿತು.
ಸಣ್ಣ ಒಂದೇ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪರ ಮೇಲಿನ ವಿಪಕ್ಷಗಳ ಆರೋಪ, ಭೂ ಹಗರಣ , ನಿವೇಶನ ಹಂಚಿಕೆ ಕುರಿತಂತೆ ಇಂದಿನ ವಿದ್ಯುನ್ಮಾನ ಮಾಧ್ಯಮಗಳೂ ಸೇರಿದಂತೆ ಕೆಲವೊಂದು ಮುದ್ರಣಮಾಧ್ಯಮಗಳು ತಾವೇನೋ ಸಂಪೂರ್ಣ ಸಾಚಾಗಳು , ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಬಹುದೊಡ್ಡ ಹಗಣರಣವನ್ನೇ ಮಾಡಿದ್ದಾರೆ ಎಂಬಂತೆ ವರದಿ ಮಾಡಿವೆ. ಪ್ಯಾನಲ್ ಡಿಸ್ಕರ್ಶನ್ ನಡೆಸಿವೆ.ಒಳ್ಳೆಯದೇ.
ಯಾರೇ ಆಗಿರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಇರುವಂತಹವರು ಅವ್ಯವಹಾರ ನಡೆಸಿದ್ದೇ ಆದಲ್ಲಿ ಅದನ್ನು ಜನತೆಯೆದುರು ತಿಳಿಸುವುದು ಮಾಧ್ಯಮದ ಕರ್ತವ್ಯ. ಆದರೆ ಇಂದು ಅದೇ ವಿಚಾರವನ್ನು ವರದಿ ಮಾಡಿದ ಮಾಧ್ಯಮದ ಪ್ರಮುಖರು ತಾವು ಇತರ ರಾಜಕೀಯ ಪಕ್ಷಗಳು ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇದೇ ಬಿ.ಡಿ.ಎ. ನಿವೇಶನಗಳನ್ನು ಪಡಕೊಂಡಿದ್ದೇವೆ ಎಂಬುದನ್ನು ಮರೆತಿರುವುದು ವಿಷಾಧನೀಯ. ಈ ವಿಚಾರವನ್ನು ತೆಹಲ್ಕಾ ಬಯಲು ಮಾಡಿದ್ದು ; ತೆಹಲ್ಕಾದ ಈ ಕಾರ್ಯಾಚರಣೆ ಮೆಚ್ಚತಕ್ಕಂತಹುದಾಗಿದೆ.
ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರ ಸ್ವಾಮಿ ಮುಖ್ಯಮಂತ್ರಿಗಳಾಗಿ ಇದೇ ಕರ್ನಾಟಕವನ್ನು ಆಡಳಿತ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ರಕ್ತ ಸಂಬಂಧಿಗಳಿಗೆ, ಮಿತ್ರರಿಗೆ, ಆತ್ಮೀಯರಿಗೆ, ವಿಶ್ವಾಸಿಗಳಿಗೆ, ಹೆಚ್ಚೇಕೆ ತಮ್ಮ ಪರವಾಗಿದ್ದ ಪತ್ರಕರ್ತರಿಗೆ ಕೋಟ್ಯಾಂತರ ಬೆಲೆಯ ಭೂಮಿಯನ್ನು ಹಂಚಿದ್ದಾರೆ ಎಂಬಂಶವನ್ನು ತೆಹಲ್ಕಾ ಬಹಿರಂಗಗೊಳಿಸಿದೆ. ಆದರೆ ಈ ಬಗ್ಗೆ ಇಷ್ಟರ ತನಕ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ, ಪ್ಯಾನಲ್ ಡಿಸ್ಕರ್ಷನ್ ಮಾಡುತ್ತಿದ್ದ ಮಹಾನ್ ಪತ್ರಕರ್ತರು, ಸಂಪಾದಕ ಮಿತ್ರರು ಚಕಾರವೆತ್ತದೆ ಮುಗುಂ ಆಗಿರುವುದು ಮಾತ್ರ ವಿಷಾಧನೀಯ.
ಇಷ್ಟೇ ಅಲ್ಲ... ದಿನ ದಿನವೂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಕಿಡಿಕಾರುವ, ಒಂದಿಲ್ಲೊಂದು ಪ್ರಕರಣಗಳನ್ನು ಸೃಷ್ಠಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್. ನಾಯಕ ಘನಮಾನ್ಯ ಕುಮಾರಸ್ವಾಮಿಯವರು ತಮ್ಮ ಅಧಿಕಾರಾವಧಿಯಲ್ಲಿ 346.33 ಎಕ್ಕರೆಗೂ ಮಿಕ್ಕಿದ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿ ಕೈತೊಳೆದು ಕೂತಿದ್ದಾರೆ. ಧರಂಸಿಂಗ್ ತಮ್ಮ ಅವಧಿಯಲ್ಲಿ 110.33, ಎಸ್.ಎಂ.ಕೆ 633.33 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ. ಇದೆಲ್ಲವೂ ಕೇವಲ ತಮ್ಮ ಸಂಬಂಧಿಗಳಿಗಷ್ಟೇ ವಿತರಿಸಿದ್ದಲ್ಲ. ಇಲ್ಲೂ ಮಾಧ್ಯಮ ಮಿತ್ರರಿಗೆ ಪಾಲುಹೋಗಿದೆ.
ಇರಲಿ ಬಿಡಿ. ಸರಕಾರಿ ಭೂಮಿಯನ್ನು ಕೊಟ್ಟಿದ್ದಾರೆ ಎಂದೆ ಸುಮ್ಮನಿರೋಣ.ಅದು ತಪ್ಪು. ಆದರೆ... ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪ್ರಮುಖ ಸ್ಥಾನದಲ್ಲಿರುವ ಪತ್ರಿಕಾ ರಂಗ ಅಥವಾ ಮಾಧ್ಯಮ ರಂಗ ಕೇವಲ ಹಗರಣಗಳನ್ನು ಸೃಷ್ಠಿಸುವ ಸಲುವಾಗಿ ಕೋಟಿ ಕೋಟಿ ಹಣವನ್ನು ವಿವಿಧ ರಾಜಕೀಯ ಪಕ್ಷಗಳಿಂದ ವಿವಿಧ ರೀತಿಯಲ್ಲಿ ಪಡೆಯುತ್ತಿದೆ . ಇದಕ್ಕಿಂತ ಬೇಸರ ಇನ್ನೊಂದಿಲ್ಲ. ಕರ್ನಾಟಕ ರಾಜ್ಯದ ಆಡಳಿತ ಪಕ್ಷ ಬಿ.ಜೆ.ಪಿಯ ವಿರುದ್ಧ ಭೂ ಹಗರಣದಂತಹ ಹಗರಣ ಸೃಷ್ಠಿಸಿ ಮುಖ್ಯಮಂತ್ರಿಗಳ ಮುಖಕ್ಕೆ ಕಪ್ಪು ಮಸಿ ಬಳಿಯಬೇಕು, ಆಡಳಿತದಲ್ಲಿರುವ ಬಿಜೆಪಿಯನ್ನು ಕೆಳಗಿಳಿಸಬೇಕೆಂದು ವಿಪಕ್ಷವೊಂದು ಕನ್ನಡದ 24x7 ಸುದ್ದಿವಾಹಿನಿಗೆ 2ಕೋಟಿ ಗುಟ್ಟಾಗಿ ನೀಡಿದ್ದ ಒಂದಾದರೆ, ಇನ್ನೊಂದು ಸುದ್ದಿವಾಹಿನಿಯ ವರದಿಗಾರರಿಗೆ ಕಾರೊಂದನ್ನು ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೋರ್ವರು ಕೊಡುಗೆಯಾಗಿ ನೀಡಿ ಬೆನ್ನುಸವರಿದ್ದಾರೆ.
ಮತ್ತೊಂದು ಸುದ್ದಿವಾಹಿನಿಯ ಒಡೆತನವನ್ನೇ ಹೊಂದಿದ ಈ ಪ್ರಮುಖರು ಏನೇ ಆಗಲಿ ಬಿಜೆಪಿ ವಿರುದ್ಧ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ನಿರಂತರ ನೀವು ನಿಮ್ಮ ವಾಹಿನಿಯಲ್ಲಿ ಹೇಳುತ್ತಿರಬೇಕೆಂದು ಒಂದಷ್ಟು ಹಣದ ಆಮಿಷತೋರಿ ಆ ವಾಹಿನಿಯನ್ನು ದುರುಪಯೋಗಪಡಿಸಿದ್ದು ಇದೀಗ ಬಟಾಬಯಲಾಗಿದೆ.
ಮಾಧ್ಯಮ ಎಂಬುದು ಒಂದು ಅಸ್ತ್ರವಲ್ಲ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆಂದು ಗೂಂಡಾಗಿರಿ ನಡೆಸುವ, ಏಕವಚನದಲ್ಲಿ ಸಮಾಜದ ಎದುರಿಗೆ ಗಣ್ಯಾತಿಗಣ್ಯ ವ್ಯಕ್ತಿಗಳ ಮಾನ ಹರಾಜು ಮಾಡುವ , ತಾನೇನೋ ಮಹಾನ್ ಸಾಧನೆ ಮಾಡಿದ್ದೇನೆ ಎಂಬಂತೆ ಫೋಸ್ ಕೊಡುವ, ಅನೇಕ ಮಂದಿ ಪತ್ರಕರ್ತರು, ಮಾಧ್ಯಮದ ಪ್ರಮುಖ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿಯುತ ವ್ಯಕ್ತಿಗಳು ನಮ್ಮ ನಡುವೆಯೇ ಇದ್ದಾರೆ. ಆದರೆ ಮಾಧ್ಯಮ ಎಂಬುದು ಅಷ್ಟೇ ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕ್ಷೇತ್ರ ಎಂಬುದನ್ನು ಇವರೆಲ್ಲರೂ ಮರೆತಂತಿದ್ದಾರೆ . ಇದು ಮಾತ್ರ ಶೋಚನೀಯ ಅಷ್ಟೇ ಅಮಾನವೀಯ.
ಮಾಧ್ಯಮ ಎಂಬುದು ಕೇವಲ ಹಣಮಾಡುವ "ಉದ್ಯಮ" ಆಗಬಾರದು. ಅದು ಸಂವಿಧಾನದ ನಾಲ್ಕನೇ ಅಂಗ. ಸಮಾಜದ ಓರೆ ಕೋರೆಗಳನ್ನು ತಿದ್ದುವ, ಸಮಾಜಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡುವ, ತಪ್ಪನ್ನು ತಿದ್ದಿ ಸರಿಪಡಿಸಿ , ಸುಖೀ ಸಮಾಜದ ನಿರ್ಮಾಣಕ್ಕೆ ಬೇಕಾದ ಮಾರ್ಗದರ್ಶನ ನೀಡುವ ಒಂದು ಮಹತ್ಕಾರ್ಯ ಮಾಧ್ಯಮರಂಗದಿಂದ ಆಗಬೇಕಾಗಿದೆ. ಮಾಧ್ಯಮ ಮಂದಿ "ನಾವು ನಡೆದದ್ದೇ ದಾರಿ, ಮಾಡಿದ್ದೇ ಕಾರ್ಯ" ಎಂಬ ಧೋರಣೆಯನ್ನು ಬಿಡಬೇಕಾಗಿದೆ. ನಿಜವಾದ ಮಾಧ್ಯಮ ನೀತಿಯನ್ನು , ಧೋರಣೆಯನ್ನು ಸಮಾಜಕ್ಕೆ ತಿಳಿಸುವ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜಕ್ಕೆ ಸನ್ಮಾರ್ಗ ತೋರುವ ಕಾರ್ಯ ಮಾಡಬೇಕು. ಅದು ಬಿಟ್ಟು ಅವರಿವರೊಡ್ಡುವ ಆಮಿಷಗಳಿಗೆ ಬಲಿಯಾಗಿ, ಸ್ವಾರ್ಥ ರಾಜಕೀಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾ ; ತಪ್ಪನ್ನೂ ಸರಿಯೆಂಬಂತೆ ಅಮಾಯಕ ಜನತೆಗೆ ತೋರುವ ಕಾರ್ಯ ಮಾಡಬಾರದು.
ಹರೀಶ್ ಕೆ. ಆದೂರು
ಪ್ರಾದೇಶಿಕ ಸುದ್ದಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಲಬವನ್ ರಜತಮಹೋತ್ಸವವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿ, ಸಾಧಕರಿಗೆ ಕಲಾಶ್ರೀ ಬಿರುದು ಪ್ರಧಾನಿಸಿದರು.
ಪ್ರಾದೇಶಿಕ ಸುದ್ದಿಮಂಗಳೂರು: ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘದ ವ್ಯವಹಾರವೇ ಸುಮಾರು 9 ಕೋಟಿ ರೂ. ಸ್ತ್ರೀಶಕ್ತಿ ಸಬಲೀಕರಣಗೊಳ್ಳುತ್ತಿರುವುದಕ್ಕೆ, ಸ್ತ್ರೀಯರು ಸ್ವಾವಲಂಬಿ ಗಳಾಗುತ್ತಿರುವುದಕ್ಕೆ ಇದು ಅತ್ಯುತ್ತಮ ಸಾಕ್ಷಿ ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಹೇಳಿದರು.
ಅವರು ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಕೇಂದ್ರ ಸುರತ್ಕಲ್ ಇವರ ಸಂಯುಕ್ತಾಶ್ರಯದಲ್ಲಿ ಇಡ್ಯಾ ಮಹಾಲಿಂಗೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ನವೆಂಬರ್ 29ರಂದು ಆಯೋಜಿಸಿದ್ದ 'ಮಹಿಳಾ ಸಬಲೀಕರಣ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಮಂಗಳೂರು ಗ್ರಾಮಾಂತರ ವಲಯದಲ್ಲಿ 2002ರ ನಂತರ 860 ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಾಡಿದ ವ್ಯವಹಾರ ಸುಮಾರು 9 ಕೋಟಿ ರೂ.ಗಳು. ಮಹಿಳೆಯರು ಸಬಲೀಕರಣಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ ಎಂದ ಅವರು, ಸಾಮಾಜಿಕ ಹಾಗೂ ಸರಕಾರ ನೀಡುವ ಪ್ರೋತ್ಸಾಹವನ್ನು ಸದುಪಯೋಗ ಮಾಡಿಕೊಂಡು ಮಹಿಳೆಯರು ಇನ್ನಷ್ಟು ಸಬಲರಾಗಬೇಕೆಂದರು. ಉದ್ಯೋಗಿನಿ, ಭಾಗ್ಯಲಕ್ಷ್ಮಿಯಂತಹ ಯೋಜನೆಗಳು ಹೆಣ್ಣು ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳೆಂದ ಶ್ಯಾಮಲ, ರಾಜಕೀಯವಾಗಿಯೂ ಮಹಿಳೆ ಇನ್ನಷ್ಟು ಬೆಳೆದರೆ ಮಹಿಳೆಯರ ಅಭಿವೃದ್ಧಿಗೆ ಪೂರಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜ್ಯೋತಿ ಕಾರ್ಣಿಕ್ ಅವರು, ಜ್ಞಾನ ಶಕ್ತಿಯ ಸಂಕೇತ. ಅರಿವಿನೊಂದಿಗೆ ವ್ಯಕ್ತಿತ್ವದ ಪರಿಪೂರ್ಣ ಅಭಿವೃದ್ಧಿ ಸಾಧ್ಯ ಎಂದರು. ಮಹಿಳಾ ಕೇಂದ್ರದ ಅಧ್ಯಕ್ಷರೂ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸುಲೋಚನಾ ವಿ. ರಾವ್ ಅವರು, ಗ್ರಾಮೀಣ ಮಹಿಳೆಯರಿಗೆ ನೀಡುವ ಎಲ್ಲ ಪ್ರೋತ್ಸಾಹಗಳನ್ನು ನಗರದ ಮಹಿಳೆಯರಿಗೆ ನೀಡಬೇಕು; ಮಹಿಳಾ ಕೇಂದ್ರಗಳು ಇಂದು ಹಿಂದಿನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಸಂತೋಷವನ್ನು ವ್ಯಕ್ತಪಡಿಸಿದರಲ್ಲದೆ, ನಗರದ ಮಹಿಳೆಯರ ಸಮಸ್ಯೆಗಳ ಬಗ್ಗೆ ಸಭೆಯ ಗಮನಸೆಳೆದರು.
ಸಂಧ್ಯಾ ಕಾಮತ್ ಹಾಗೂ ಶಕುಂತಳಾ ಆರ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಕೆ. ಕಲಾವತಿ ಕಾರ್ಯಕ್ರಮ ನಿರೂಪಿಸಿದರು. ರಮಣಿ ವಂದಿಸಿದರು. ನಂತರ ಮಹಿಳಾ ಕೇಂದ್ರದ ವತಿಯಿಂದ ಸಾಂಸ್ಕೃತಿಕ ಸಪ್ತಾಹದ ಅಂಗವಾಗಿ ಸಹೋದರಿಯರಾದ ಕುಮಾರಿ ಪವಿತ್ರ ಮತ್ತು ಪಲ್ಲವಿಯವರಿಂದ ಕನರ್ಾಟಕ ಶಾಸ್ತ್ರೀಯ ಕಾರ್ಯಕ್ರಮ ನಡೆಯಿತು.
ಪ್ರಾದೇಶಿಕ ಸುದ್ದಿ
ಅಂತರ್ ಜಿಲ್ಲಾ ಮಟ್ಟದ ಬಂಟರ ಕ್ರೀಡೋತ್ಸವ
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ಮತ್ತು ಬಂಟರ ಸಂಘ ಕಾವೂರು ಇದರ ಜಂಟಿ ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದ.ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಸುರತ್ಕಲ್ ಬಂಟರ ಸಂಘವು 14ಚಿನ್ನ, 9ಬೆಳ್ಳಿ ಮತ್ತು 6ಕಂಚಿನ ಪದಕವನ್ನು ಗಳಿಸಿಕೊಂಡಿದೆ.ಹದಿನೆಂಟರಿಂದ ಇಪ್ಪತ್ತರ ವಯೋಮಿತಿಯಲ್ಲಿ ಸುರತ್ಕಲ್ ನ ಭವಿಷ್ಯ್ ಪಿ.ಶೆಟ್ಟಿ ಗುಂಡು ಎಸೆತ, ಉದ್ದ ಜಿಗಿತ 1500ಮೀಟರ್ ಓಟ, 800 ಮೀಟರ್ ಓಟ, 200ಮೀಟರ್ ಓಟ, 100 ಮೀಟರ್ ಓಟದಲ್ಲಿ ಕ್ರಮವಾಗಿ ಚಿನ್ನದ ಪದಕಗಳಿಸಿದ್ದಾರೆ. 4x100 ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಇವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ.
16ರಿಂದ 18ರ ವಯೋಮಿತಿಯಲ್ಲಿ ಸಾರ್ಥಕ್ ಶೆಟ್ಟಿ ನಾಲ್ಕು ವಿಭಾಗದಲ್ಲಿ 2ಚಿನ್ನದ ಪದಕ ಮತ್ತು ಎರಡು ಬೆಳ್ಳಿ ಪದಕ ಗಳಿಸಿದರು. 14ರಿಂದ 16ರ ವಯೋಮಿತಿಯಲ್ಲಿ ಅಕ್ಷಯ್ ಶೆಟ್ಟಿ ನಾಲ್ಕು ವಿಭಾಗದಲ್ಲಿ ಒಂದು ಚಿನ್ನ ಎರಡು ಬೆಳ್ಳಿ ಮತ್ತು 2ಕಂಚಿನ ಪದಕ ಗಳಿಸಿದರು. ಇವರಿಬ್ಬರು ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿ. 21ರಿಂದ 30ರ ವಯೋಮಿತಿಯಲ್ಲಿ ಬಬಿತಾ ಜೆ.ಶೆಟ್ಟಿ ಮೂರು ವಿಭಾಗದಲ್ಲಿ ಒಂದು ಚಿನ್ನ ಎರಡು ಬೆಳ್ಳಿ ಪಡೆದರು. ಸೌಮ್ಯ ಪಿ.ಶೆಟ್ಟಿ ಎರಡು ಚಿನ್ನ ಗಳಿಸಿದರೆ ಅಕ್ಷತಾ ಶೆಟ್ಟಿ ಕಂಚಿನ ಪದಕ ಗಳಿಸಿದರು.
ಗುಂಡು ಎಸೆತದಲ್ಲಿ ಪುರುಷರ ವಿಭಾಗದಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಚಿನ್ನದ ಪದಕ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ರೇಖಾ ಶೆಟ್ಟಿ ಮತ್ತು ಶಕುಂತಳಾ ಶೆಟ್ಟಿ ಕಂಚಿನ ಪದಕ ಗಳಿಸಿದರು. ಲೋಹಿತ್ ಶೆಟ್ಟಿ ಒಂದು ಬೆಳ್ಳಿ ಒಂದು ಕಂಚು ಗೆದ್ದರೆ ಸನತ್ ಶೆಟ್ಟಿ ಒಂದು ಬೆಳ್ಳಿ ಪದಕ ಪಡೆದರು.ಹಗ್ಗ ಜಗ್ಗಾಟದಲ್ಲಿ ಸುರತ್ಕಲ್ ಬಂಟರ ಸಂಘ ನವೀಶ್ ಶೆಟ್ಟಿ ಪಡ್ರೆ ನೇತೃತ್ವದ ತಂಡವು ಚಿನ್ನದ ಪದಕ ಗಳಿಸಿದರೆ ಸೌಮ್ಯ ಶೆಟ್ಟಿ ಬಳಗದ ಮಹಿಳಾ ವೇದಿಕೆ ಬೆಳ್ಳಿ ಪದಕ ಗಳಿಸಿಕೊಂಡಿದೆ.ಸುರತ್ಕಲ್ ಬಂಟರ ಸಂಘದ ಕಾರ್ಯದರ್ಶಿ ಉಲ್ಲಾಸ್ ಆರ್.ಶೆಟ್ಟಿ ಮತ್ತು ಉಸ್ತುವಾರಿ ಕ್ರೀಡಾ ಕಾರ್ಯದರ್ಶಿ ಗುಣಶೇಖರ ಶೆಟ್ಟಿ ನೇತೃತ್ವದಲ್ಲಿ ತಂಡವು ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು.ಕ್ರೀಡಾ ಕೂಟದಲ್ಲಿ ಸುರತ್ಕಲ್ ಬಂಟರ ಸಂಘವು ಒಟ್ಟು 29 ಪದಕಗಳನ್ನು ಗಳಿಸಿದೆ.
ಪ್ರಾದೇಶಿಕ ಸುದ್ದಿ
ಮಂಗಳೂರು : ದ.ಕ.ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಇವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಡಿಯಲ್ಲಿರುವ ದ.ಕ. ಜಿಲ್ಲಾ ಕಾಲೇಜುಗಳ ಎಲಾ ರೆಡ್ ರಿಬ್ಬನ್ ಕ್ಲಬ್ ಗಳು ಮತ್ತು ದ.ಕ. ಜಿಲ್ಲಾ ಸೋಶಿಯಲ್ ವರ್ಕ್ಸ್,ರೋಶನಿ ನಿಲಯ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ 2010 ಇದರ ಅಂಗವಾಗಿ ಹೆಚ್ಐವಿ/ಏಡ್ಸ್ ಜಾಗೃತಿ ಸಪ್ತಾಹವನ್ನು ಏರ್ಪಡಿಸಲಾಗಿದೆ. ಡಿ.1ರಂದು ಬೆಳಗ್ಗೆ 9.30 ಕ್ಕೆ ಮಂಗಳೂರು ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್,ರೋಶನಿ ನಿಲಯದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಜಿಲ್ಲಾಧಿಕಾರಿಗಳಾದ ಸುಬೋಧ್ ಯಾದವ್ ನೆರವೇರಿಸುವರು. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಾದ ಪಿ.ಶಿವಶಂಕರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಓ.ಆರ್.ಶ್ರೀರಂಗಪ್ಪ,ರೋಶನಿ ನಿಲಯದ ಪ್ರಾಂಶುಪಾಲರಾದ ಡಾ.ಜೆಸಿಂತ ಡಿ ಸೋಜಾ,ಖ್ಯಾತ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ರತಿದೇವಿ,ವಿಶ್ವ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಕಿಶೋರ್ ಕುಮಾರ್ .ಎಂ ಭಾಗವಹಿಸುವರೆಂದು ರಾಷ್ಟ್ರೀಯ ಸೇವಾ ಯೋಜನೆಜಿಲ್ಲಾ ಸಮನ್ವಯಾಧಿಕಾರಿಗಳು ತಿಳಿಸಿರುತ್ತಾರೆ.
ಏಡ್ಸ್ ಜಾಗೃತಿ ಸಪ್ತಾಹದ ಕಾರ್ಯಕ್ರಮಗಳು ಡಿಸೆಂಬರ್ 1 ರಂದು ಸ್ಕೂಲ್ ಆಫ್ ಸೋಶಿಯಲ್ ವಕ್ಸ್ರ್ ರೋಶನಿ ನಿಲಯದಲ್ಲಿ, 2 ರಂದು ಮೆರಿಡಿಯನ್ ಕಾಲೇಜು ಉಳ್ಳಾಲದಲ್ಲಿ, 3 ರಂದು ಆರ್ ಆರ್ ಸಿ ನಿಟ್ಟೆ ಉಷಾ ಇನ್ಸ್ ಟ್ಯೂಟ್ ಆಫ್ ನರ್ಸಿಂಗ್ ಸೈಯನ್ಸ್ ದೇರಳಕಟ್ಟೆಯಲ್ಲಿ,4 ರಂದು ಸುಬ್ರಮಣ್ಯ ಕೆ ಎಸ್ ಎಸ್ ಕಾಲೇಜು ನೂಜಿಬಾಳ್ತಿಲದಲ್ಲಿ ನಡೆಸಲಿರುವ ಎನ್ ಎಸ್ ಎಸ್ ಶಿಬಿರದಲ್ಲಿ, 5 ರಂದು ಎಸ್ ಡಿ ಎಂ ಲಾಕಾಲೇಜಿನಲ್ಲಿ, 6 ರಂದು ಶ್ರೀ ರಾಮಕೃಷ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಇವರು ಪಿಲಿಕುಳ ವಾಮಂಜೂರಿನಲ್ಲಿ ನಡೆಸಲಿರುವ ಎನ್ ಎಸ್ ಎಸ್ ಶಿಬಿರದಲ್ಲಿ 7 ರಂದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮತ್ತು ಎಸ್ ಡಿ ಎಂ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ನಡೆಯಲಿವೆ.
ಪ್ರಾದೇಶಿಕ ಸುದ್ದಿ
ಮಂಗಳೂರು : ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು ಜೈವಿಕ ಇಂಧನ ಕಾರ್ಯಪಡೆ ವತಿಯಿಂದ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಜೈವಿಕ ಇಂಧನ-ಸಂಶೋಧನೆ ಮತ್ತು ಉದ್ಯಮ ಅವಕಾಶಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರಗೋಷ್ಠಿಯನ್ನು ಡಿ.2 ರಂದು ಬೆಳಗ್ಗೆ 9.30 ರಿಂದ ಕೊಡಿಯಾಲ್ಬೈಲ್,4ನೇ ಮಹಡಿ,ಕರ್ನಾಟಕ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.ಉದ್ಘಾಟನೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಮೋಹನ್ ಕುಮಾರ್ ನೆರವೇರಿಸುವರು. ಮುಖ್ಯ ಭಾಷಣಕಾರರಾಗಿ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷರಾದ ವೈ.ಬಿ.ರಾಮಕೃಷ್ಣ ಭಾಗವಹಿಸುವರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾದೇಶಿಕ ಸುದ್ದಿ
ಮಂಗಳೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ಜನಪರವಾಗಿ ತೆಗೆದುಕೊಂಡಿರುವ ಅನಧಿಕೃತ ಧಾರ್ಮಿಕ ನಿರ್ಮಾಣಗಳ ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟವರು ಸ್ವ ಇಚ್ಛೆಯಿಂದ ಕೈಗೊಳ್ಳಲು ಡಿಸೆಂಬರ್ 15ರವರೆಗೆ ಜಿಲ್ಲಾಡಳಿತ ಕಾಲಾವಕಾಶ ನೀಡಿದೆ.
ಇಂದು ಈ ಸಂಬಂಧ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ನೇತೃತ್ವದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನಪರ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು.ಈ ಸಭೆಗಳಿಗೆ ಧಾರ್ಮಿಕ ಮುಖಂಡರು ಹಾಜರಾಗಿದ್ದು, ಸ್ಥಳೀಯರಲ್ಲಿ ಅರಿವು ಮೂಡಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಧಿಕೃತವಾಗಿದ್ದು, ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗಿರುವ ನಿರ್ಮಾಣಗಳನ್ನು ತೆಗೆಯಲು ಬಹುತೇಕರು ಸ್ವ ಇಚ್ಛೆಯಿಂದ ಮುಂದೆ ಬಂದಿರುವರೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1579 ಅನಧಿಕೃತ ನಿರ್ಮಾಣಗಳನ್ನು ಗುರುತಿಸಲಾಗಿದ್ದು, ಪುತ್ತೂರಿನಲ್ಲಿ 152, ಕಡಬದಲ್ಲಿ 150, ಮಂಗಳೂರಿನಲ್ಲಿ 363, ಬಂಟ್ವಾಳದಲ್ಲಿ 352, ಬೆಳ್ತಂಗಡಿಯಲ್ಲಿ 298, ಸುಳ್ಯದಲ್ಲಿ 136 ಮೂಡಬಿದ್ರೆಯಲ್ಲಿ 98 ಇವೆ. ಸ್ವ ಇಚ್ಛೆಯಿಂದ ತೆರವು ಗೊಳಿಸುವ ಗಡುವು ಮುಗಿದ ಬಳಿಕ, ಆದ್ಯತೆಯ ನೆಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯಾಡಳಿತದ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಆದ್ಯತಾ ಪಟ್ಟಿಯನ್ನು ಸ್ಥಳೀಯ ಅಧಿಕಾರಿಗಳು ಡಿಸೆಂಬರ್ 10 ರೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚನೆ ನೀಡಿದರು. ಪಟ್ಟಿ ತಯಾರಿಸುವಾಗ ಪೊಲೀಸ್ ಇಲಾಖೆಯ ಜೊತೆಗೂ ಚರ್ಚಿಸಬೇಕೆಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ಸಭೆಗಳನ್ನು ನಡೆಸುವ ಹಾಗೂ ಸ್ಥಳೀಯವಾಗಿ ವಿವೇಚನ ಶಕ್ತಿಗನುಸಾರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ಥಳೀಯ ಉನ್ನತಾಧಿಕಾರಿಗಳಿಗೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ರಮೇಶ್, ಸಿಇಒ ಪಿ. ಶಿವಶಂಕರ್, ಮಂಗಳೂರು ಎಸಿ, ಪುತ್ತೂರು ಎಸಿ, ಎಲ್ಲ ತಾಲೂಕಿನ ತಹಸೀಲ್ದಾರ್ ಸೇರಿದಂತೆ ಎಲ್ಲ ಹಿರಿಯ ಹಾಗೂ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವ್ಯಾಸರ ಪತ್ರಗಳು... /ವೈವಿಧ್ಯ
ಎಂ.ವ್ಯಾಸ
ಕೃಪಾನಿಧಿ, - ರಾಮದಾಸ ನಗರ
ಕಾಸರಗೋಡು 671121
04994 - 224201
ಸಂಪಾದಕರಿಗೆ; ವಂದನೆಗಳು
ಜನಪಥ ಎಂಬ ಅಂಕಣ ಲೇಖನಗಳನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಣೆಗಾಗಿ ಕಳುಹಿಸುತ್ತಿದ್ದೇನೆ. 25 - 30 ವರುಷಗಳ ಹಿಂದೆ ಉ.ವಾಣಿಯಲ್ಲಿ ಕತ್ತಲು - ಬೆಳಕು ಎಂಬ ಅಂಕಣ ಲೇಖನಗಳನ್ನು ಬರೆಯುತ್ತಿದ್ದೆ. ಆಗ ಅದು ಬಹಳ ಜನಪ್ರಿಯವಾಗಿತ್ತು. ಓದುಗರಿಗೆ ಉಪದೇಶ ಕೊಡದೆ ವಸ್ತು ಸ್ಥಿತಿಯ ಬಗೆಗೆ ಇನ್ನೊಂದು ದೃಷ್ಟಿಯನ್ನು ತೋರಿಸಿಕೊಡುವುದು ನನ್ನ ಆ ಕಾಲದ ಬರಹಗಳ ಉದ್ದೇಶವಾಗಿತ್ತು. ಈಗಲೂ ಕತೆ - ಕವಿತೆ - ಕಾದಂಬರಿ - ಲೇಖನಗಳ ಉದ್ದೇಶವೂ ಅದೇ ಆಗಿದೆ. ನನಗೆ ಬಹಳ ತಿಳಿದಿಲ್ಲ. ನನ್ನ ಮಿತಿ ನನಗೆ ಗೊತ್ತು. ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಹೆಚ್ಚೆಂದರೆ ಮೂರು ತಿಂಗಳ ಕಾಲ ಬರೆಯಬಲ್ಲೆ ಎಂಬ ನಂಬಿಕೆ ನನಗೆ ಬಂದ ಮೇಲೆ ಬರೆಯಲಾರಂಭಿಸಿದೆ. ಈ ಬರಹಗಳು ನೂರಕ್ಕೆ ನೂರು ತೃಪ್ತಿಕೊಟ್ಟ ಬರಹಗಳಲ್ಲ. ನೀವು ಇವುಗಳನ್ನು ಪ್ರಕಟಣೆಗೆ ಆಯ್ಕೆ ಮಾಡಿದರೆ ಎಷ್ಟು ಸಂತೋಷವಾಗುತ್ತದೋ ಅಷ್ಟೇ ಸಂತೋಷ ಆಯ್ಕೆಮಾಡದೆ ಇದ್ದರೂ ಆಗುತ್ತದೆ. ಜನಪಥ ತಲೆ ಬರಹ ನಿಮಗೆ ಇಷ್ಟವಾಗುದೇ ಇದ್ದರೆ ಕೋಲು / ಮಿಂಚು ಎಂಬ ತಲೆಬರಹದಡಿಯಲ್ಲೂ ಇವುಗಳನ್ನು ಪ್ರಕಟಿಸಬಹುದು.
ದಯವಿರಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಬರೆದು ಅಥವಾ ಫೋನ್ ಮಾಡಿ. ಮಧ್ಯಾಹ್ನ 2 - ರಿಂದ 4ರ ವೆರೆಗೂ ಅಥವಾ ರಾತ್ರಿ 7 - ರಿಂದ ನಂತರ ಮನೆಯಲ್ಲೇ ಇರುತ್ತೇನೆ. ಪ್ರೀತಿಗಾಗಿ ಕೃತಜ್ಞ. - ಎಂ.ವ್ಯಾಸ.
(ಇದು ನಾನು ಮತ್ತು ಗೆಳೆಯ ಶೇಣಿ ಬಾಲಮುರಳಿ ಜೊತೆಯಾಗಿ ಕೆಲಸ ಮಾಡುತ್ತಿದ್ದ "ಉಷಾಕಿರಣ" ಪತ್ರಿಕೆಯ ಸಂಪಾದಕರಿಗೆ ಎಂ.ವ್ಯಾಸರು ಬರೆದ ಪತ್ರ. ಇದರ ಜೆರಾಕ್ಸ್ ಪ್ರತಿ ನನ್ನ ಸಂಗ್ರಹಕ್ಕೆ ಲಭಿಸಿತು. ಆರಂಭ ಇಲ್ಲಿಂದಲೇ ಆಗಲಿ ಎಂಬ ಉದ್ದೇಶದಿಂದ ಈ ಪತ್ರ ಮೊದಲಾಗಿ ಪ್ರಕಟಿಸುತ್ತಿದ್ದೇನೆ. - ಸಂ.)
ಭಕ್ತಿ ಸಿಂಚನ
ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್ ನಲ್ಲಿ ಸಂನ್ಯಾಸದೀಕ್ಷೆ ಪಡೆದರು.೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.
ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.
ಶ್ರೀ ರಾಮಚಂದ್ರಾಪುರ ಮಠ
ಶ್ರೀ ಕ್ಷೇತ್ರ ಗೋಕರ್ಣದ ಸುಂದರ ಕಡಲ ಕಿನಾರೆಯಲ್ಲಿ, ಸನಾತನ ಧರ್ಮ ಪುನರುತ್ಥಾನದ ಅವತಾರ ಪುರುಷ ಆದಿ ಶಂಕರರಿಂದ ಸ್ಥಾಪಿತ ಪ್ರಮುಖ ಪೀಠ ಶ್ರೀ ರಾಮಚಂದ್ರಾಪುರ ಮಠ. ಅವರ ಕರಕಮಲದಿಂದಲೇ ಪೀಠ ಪರಂಪರೆಗೆ ಅನುಗ್ರಹಿತವಾದದ್ದು ಚಂದ್ರಮೌಳೀಸ್ವರ ಲಿಂಗ, ಸೀತಾ-ಲಕ್ಷ್ಮಣ ಸಹಿತ ಶ್ರೀರಾಮಚಂದ್ರ ವಿಗ್ರಹಗಳು. ಅವುಗಳ ಆರಾಧನೆ, ಉಪಾಸನೆ ಅನುಷ್ಟಾನವಾಗಿ ಈ ವರೆಗಿನ 36 ಪೀಠಾಧಿಪತಿಗಳಿಂದ ನಡೆಯುತ್ತಾ ಬಂದಿರುವುದು ವಿಶೇಷ.
ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ
ಶ್ರೀ ಶ್ರೀ ರಾಘವೇಶ್ವರ ಭ್ಹಾರತೀ ಸ್ವಾಮಿಜಿಯವರ ಕನಸಿನ ಕೂಸಾದ “ಕಾಮದುಘಾ” ಈ ಯೋಜನೆಯಡಿಯಲ್ಲಿ ಹಾಗೂ ಅವರ ನೇತೃತ್ವದಲ್ಲಿ, ಅಮೃತಧಾರಾ ಗೋಶಾಲೆಯು ಮಹಾರಾಷ್ಟ್ರದ ಕೋಲಾಡ, ತಾ, ರೋಹಾ, ರಾಯಗಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸುಮಾರು ೧೫೦ ಆಕಳುಗಳನ್ನು ಈ ಯೋಜನೆಯಡಿಯಲ್ಲಿ ಸಾಕಲಾಗುತ್ತಿದೆ. ವಿಶ್ವದಿಂದ ನಶಿಸುತ್ತಿರುವ ಭಾರತೀಯ ಗೋವಂಶದ ತಳಿಗಳನ್ನು ಸಂರಕ್ಷಿಸಲು ಅಮೃತಧಾರಾ ಗೋಶಾಲೆಯು ಟೊಂಕಕಟ್ಟಿದೆ.
ಇಲ್ಲಿ ಮಹಾರಷ್ಟ್ರದ ೪ ತಳಿಗಳಲ್ಲಿ (ಡಾಂಗಿ, ಗೀರ, ಗೌಳವ, ಖಿಲಾರಿ) ೨ ತಳೀಗಳನ್ನು (ಡಾಂಗಿ, ಖಿಲಾರಿ) ಸಂರಕ್ಷಿಸಲ್ಪಡುತ್ತಿದೆ. ಈ ಜಾಗವನ್ನು, ಸುಮಾರು ೪೦ ಎಕರೆ, ಶ್ರೀಮಾನ್ ಕೃಷ್ಣ ಭಟ್ಟರು ಮಠಕ್ಕೆ ದಾನ ಮಾಡಿದ್ದಾರೆ.
ಈ ಯೋಜನೆಯು ಭಾರತೀಯ ಗೋವಂಶದ ಸಂಶೋಧನೆ, ಸಂವರ್ಧನೆ ಹಾಗೂ ಸಂರಕ್ಷಣೆ ಯ ಉದ್ದೇಶ ಹಾಗೂ ಸಿದ್ಧಾಂತವಾದ ಗಾವೋ ವಿಶ್ವಸ್ಯ ಮಾತರಃ, ವನ್ನು ಇಟ್ಟುಕೊಂಡು ಗೋಶಾಲೆ ಯನ್ನು ನಡೆಸಲಾಗುತ್ತಿದೆ.
ಅಮೃತಧಾರಾ ಗೋಶಾಲೆಯು, ಗೋಶಾಲೆಯ ಅಭಿವೃದ್ಡಿಗಾಗಿ ಆದಷ್ಟು ಹೆಚ್ಚಿನ ಮಟ್ಟಿಗೆ ಗವ್ಯೋತ್ಪನ್ನಗಳನ್ನು ತಯಾರಿಸಿ ಮಾರಟಮಾಡಬೇಕೆಂಬುದನ್ನು ಮನಗೊಂಡಿದೆ.
ಸದ್ಯಕ್ಕೆ ೨ ಗವ್ಯೋತ್ಪನ್ನಗಳು ಈ ಗೋಶಾಲೆಯಲ್ಲಿ ಉತ್ಪಾದಿಸಲಾಗುತ್ತಿದೆ:
೧. ಅಮೃತಸಾರ – ಗೋಮೂತ್ರ ಅರ್ಕ,
೨. ಸ್ಪ್ರಿಂಗ ಫ್ರೆಶ – ಗೋಮೂತ್ರದಿಂದ ಪ್ಲೋರ್ ಕ್ಲೀನರ್
ಇದರ ಹೊರತಾಗಿ ಅಲ್ಲಿ ಬೆಳೆಯುವ ನೆಲ್ಲಿಕಾಯಿಯನ್ನು (ಕೆಮಿಕಲ್ ರಹಿತ) ಉಪ್ಪಿನಕಾಯಿ, ಜಾಮ್ ನ್ನು ಮಾಡಿ, ಮಾರಾಟ ಮಾಡಿ, ಅದರ ಹಣವನ್ನು ಗೋಶಾಲೆಯ ಅಭಿವೃಧ್ಧಿಗೆ ಉಪಯೋಗಿಸಲಾಗುತ್ತಿದೆ.
ಮುಂದಿನ ಯೋಜನೆಯಲ್ಲಿ, ಪೇಸ್ ಪೆಕ್, ಅಮೃತ ಮಲಮ್ ಹಾಗೂ ಇತರ ಗವ್ಯೋತ್ಪನ್ನಗಳ ತಯಾರಿಕೆ ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.
ಅಮೃತಧಾರಾ ಗೋಶಾಲೆಯಲ್ಲಿ ಈಗ ರಾಮಾಶ್ರಮ, ಧ್ಯಾನ ಮಂದಿರ ಹಾಗೂ ೪ ಗೋಶಾಲೆ ಇದೆ.
ಶ್ರೀ ಭಾರತೀ ಸ್ವಾಸ್ಥ್ಯ ಮಂದಿರ ಮುಜುಂಗಾವು
ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ.
ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ ವೈದ್ಯರು ಮತ್ತು ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಔಷಧಿಗಳಲ್ಲಿ ಗೋ ಉತ್ಪನ್ನಗಳಿಗೆ ಆದ್ಯತೆ ಇದೆ. ಆಧುನಿಕ ಚಿಕಿತ್ಸಾ ಸೌಲಭ್ಯ ಇದೆ. ಈ ಆಸ್ಪತ್ರೆಗೆ ಶ್ರೀ ಗುರುಗಳ ಶಿಷ್ಯರು ಹಾಗೂ ಭಕ್ತರು ಪ್ರತೀ ತಿಂಗಳೂ ದೇಣಿಗೆಗಳನ್ನು ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಮಠದ ಭಕ್ತರಾದ ತುಂಬಾ ಮಂದಿ ವೈದ್ಯರುಗಳು ಪ್ರತೀ ತಿಂಗಳು ಔಷಧಿ ದಾನ ಮಾಡುತ್ತಿದ್ದಾರೆ. ಈ ಸೌಲಭ್ಯಗಳನ್ನು ದಿನಕ್ಕೆ ೧೦೦ರವರೆಗೆ ಜನರು ಉಪಯೋಗ ಪಡುತ್ತಿದ್ದಾರೆ. ಉಳ್ಳವರಿಗಾಗಿ ರಿಯಾಯಿತಿ ದರದ ಚಿಕಿತ್ಸೆಗಳೂ ಲಭ್ಯ. ಈ ಸ್ವಾಸ್ಥ್ಯ ಮಂದಿರಕ್ಕೂ ತಜ್ಞ ವೈದ್ಯರುಗಳು ವಾರಕ್ಕೆ, ತಿಂಗಳಿಗೊಮ್ಮೆ ಸಂದರ್ಶನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೇವಾ ಸೌಲಭ್ಯ ಇಡೀ ಊರಿಗೇ ಒಂದು ಆದರ್ಶಪ್ರಾಯ ಸೇವೆಯೆಂದು ಗುರುತಿಸಲ್ಪಟ್ಟಿದೆ.
ಪ್ರಾದೇಶಿಕ ಸುದ್ದಿಮಂಗಳೂರು: ಮಂಗಳೂರು ನಗರದಲ್ಲಿ ಕೆಟ್ಟು ಹೋದ ರಸ್ತೆಗಳ ದುರಸ್ತಿ ಕಾರ್ಯ ಇಂದು ನಡೆಯಿತು. ಪಾಲಿಕೆ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಅವರ ನೇರಾ ಉಸ್ತುವರಿಯಲ್ಲಿ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯಿತು.
ವೈವಿಧ್ಯ
ಇದು ಆನಂದಮಯ ಆರೋಗ್ಯಧಾಮ
ಮನುಷ್ಯ ಎಂದರೇ ಹೀಗೆ.... ಏನು ಮಾಡಬೇಕೋ ಅದನ್ನು ಮಾಡಲಾರ. ಏನು ಬೇಡವೋ ಅದನ್ನು ಮಾಡುತ್ತಾನೆ.ಕೊನೆಗೆ ಪಶ್ಚಾತ್ತಾಪ ಪಡುತ್ತಾನೆ. ಕೊಂಚ ಕೂತಲ್ಲಿಯೇ ಯೋಚಿಸಿ... ಈ ಮಾತು ಸತ್ಯತಾನೇ...ನಿಜಕ್ಕೂ ಹೌದು.. ನಾವೂ ನೀವೂ ಎಲ್ಲರೂ ಇದೇ ಅವಸ್ಥೆಯಲ್ಲಿಯೇ ಸುತ್ತುತ್ತಿರುತ್ತೇವೆ. ತೊಳಲಾಡುತ್ತಿದ್ದೇವೆ. ಕೊನೆಗೊಮ್ಮೆ " ಛೇ...ಎಡವಿ ಬಿಟ್ಟೆನಲ್ಲಾ..." ಎಂದು ಪಶ್ಚಾತ್ತಾಪ ಪಡುತ್ತೇವೆ. ಮಾತೊಂದಿದೆಯಲ್ಲಾ "ಕೆಟ್ಟಮೇಲೆ ಬುದ್ದಿ ಬಂತು ಎಂಬಂತೆ " ಪಶ್ಚಾತ್ತಾಪ ಪಡುತ್ತೇವೆ. ಇದು ಆಧುನಿಕ ಮಾನವನ ಜೀವನ ಸ್ಥಿತಿ. ಕೆಲವೊಬ್ಬರು ಇದರಿಂದ ಹೊರತಾಗಿರಬಹುದು. ಅಪವಾದಕ್ಕೆ ಎಂಬಂತೆ. ಆದರೆ ಬಹುತೇಕ ಮಂದಿಯೂ ಹೀಗೇ...
ಇಂದು ಅವಸರದ ಯುಗ. ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ರಿಯೆಯೂ ಅವಸರವಸರವಾಗಿಯೇ ನಡೆಯುತ್ತದೆ. ಯಾವೊಂದಕ್ಕೂ ಪುರುಸೊತ್ತು ಎಂಬುದೇ ಇಲ್ಲ ಎಂಬಂತೆ!. ಅದು ಮನುಷ್ಯನ ದೈನಂದಿನ ಕೈಂಕರ್ಯಗಳನ್ನೂ ಬಿಟ್ಟಿಲ್ಲ!. ಊಟ , ನಿದ್ದೆ, ಒಂದಷ್ಟು ವಿಶ್ರಾಂತಿ ಊಹೂಂ...ಇದ್ಯಾವುದಕ್ಕೂ ಇಂದು ಪುರುಸೊತ್ತಿಲ್ಲ!. ಯಾರನ್ನೇ ಕೇಳಿ " ತುಂಬಾ ಬ್ಯುಸಿ " ಹಾಗಾಗಿ ಸ್ವಲ್ಪ ಲೇಟ್ ... ಈ ಸಿದ್ಧ ಉತ್ತರಕ್ಕೇನೂ ಕೊರತೆಯಿಲ್ಲ. ಈ ಬ್ಯುಸಿ ಜೀವನದ ನಡುವೆಯೇ ಮನುಷ್ಯನ ಆರೋಗ್ಯ ಸದ್ದಿಲ್ಲದೆ ಕೆಡಲಾರಂಭಿಸುತ್ತದೆ. ಸರಿಯಾಗಿ ಮನೆಊಟ ಮಾಡಲು ಸಮಯವಿಲ್ಲ...ಹಾಗಾಗಿ ಹೊಟೇಲ್ ಫೂಡ್... ಇನ್ನು ಟೀನೇಜ್ ಯುವಕ ಯುವತಿಯರಂತೂ ಪಟ್ಟಾಂಗಹೊಡೆಯುತ್ತಾ ಫಿಡ್ಝಾ, ಬರ್ಗರ್,ಚೈನೀಸ್ ಐಟಂ, ಟೇಸ್ಟ್ ಪೌಡರ್ ಉಪಯೋಗಿಸಿದ ಮಂಚೂರಿಗಳ ಮೊರೆಹೋಗುತ್ತಿರುವುದು ಸರ್ವೇ ಸಾಮಾನ್ಯ. ಪರಿಣಾಮ ಟೀನೇಜ್ ಮುಗಿಯುವುದರೊಳಗೆ ಮನುಷ್ಯನ ಆರೋಗ್ಯದ ಏಜ್ ಬಾರ್ ಆಗಿ ಹೋಗಿರುತ್ತದೆ...ಮತ್ತೆ ಸುಖೀ ಆರೋಗ್ಯಕ್ಕಾಗಿ ಹುಡುಕಾಟ..ತಡಕಾಟ...ಪೀಕಲಾಟ... ಇದು ಮೋಡರ್ನ್ ಲೈಫ್ ಸ್ಟೈಲ್! . ಒಟ್ಟಿನಲ್ಲಿ ಆಧುನಿಕ ಜೀವನದಲ್ಲಿ ಅಬಾಲ ವೃದ್ಧರಾದಿಯಾಗಿ ಪ್ರತಿಯೊಬ್ಬರೂ ಎಂಬಂತೆ ದೈಹಿಕ - ಮಾನಸಿಕ ಒತ್ತಡಗಳಿಂದ ತೊಳಲಾಡುತ್ತಿದ್ದಾರೆ.
ಛೇ...ಹೀಗಾಗಬಾರದಾಗಿತ್ತು ಎಂಬ ಆಧುನಿಕ ಮಾನವರ ಬೇಸರವನ್ನು ದೂರಮಾಡಲು ಮತ್ತೆ ಚೈತನ್ಯ ಒದಗಿಸಿಕೊಡುವ ಪ್ರಯತ್ನಕ್ಕೆ ಹುಟ್ಟಿಕೊಂಡಿರುವುದು "ಆರೋಗ್ಯ ಧಾಮಗಳು." ಎಲ್ಲೋ ಕಳೆದು ಹೋದ ಆರೋಗ್ಯಕ್ಕೆ ಮತ್ತೆ ಜೀವತುಂಬುವ , ಮನದ ಬೇಸರ ಕಳೆಯುವಂತೆ ಮಾಡುವ , ಉಲ್ಲಾಸ ಹುಟ್ಟಿಸುವ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳೇ ಈ ಆರೋಗ್ಯಧಾಮಗಳು. ದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಆರೋಗ್ಯಧಾಮಗಳು ಅಲ್ಲಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಆದರೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಸೇವಾ ಮನೋಭಾವದಿಂದ ಮಿಜಾರಿನಲ್ಲಿ ಕಾರ್ಯಾಚರಿಸುತ್ತಿರುವ " ಆನಂದಮಯ ಆರೋಗ್ಯ ಧಾಮ " ಉಳಿದೆಲ್ಲಾ ಆರೋಗ್ಯಧಾಮಗಳಿಂದಲೂ ಒಂದು ಹೆಜ್ಜೆ ಮೀರಿ ನಿಂತು ತನ್ನ ಸೇವಾಮನೋಭಾವದ ಮೂಲಕ ಸಾಧನೆ ಮೆರೆಯುತ್ತಿದೆ. ಈ ಕಾರಣಕ್ಕಾಗಿಯೇ ಇಂದು ದೇಶ ವಿದೇಶ, ಊರು ಪರವೂರುಗಳಿಂದ ನಿರಂತರ ಜನ ಈ ಆರೋಗ್ಯಧಾಮದತ್ತ ಆಕರ್ಷಿತರಾಗುತ್ತಿದ್ದಾರೆ. ಕೈಗೆಟಕುವ ಕನಿಷ್ಠದರದಲ್ಲಿ ಆರೋಗ್ಯವೃದ್ಧಿಗಾಗಿ ವೈವಿಧ್ಯಮಯ ಚಿಕಿತ್ಸೆ ನೀಡುತ್ತಿರುವುದು ಇಲ್ಲಿನ ಪ್ರಮುಖ ವೈಶಿಷ್ಠ್ಯ.ಚಿಕಿತ್ಸಾ ಕೇಂದ್ರದ ವೈದ್ಯ ಡಾ.ಪದ್ಮನಾಭರೊಂದಿಗೆ ಈ ಕನಸು.ಕಾಂ.ಪ್ರತಿನಿಧಿ.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ , ಆಯುರ್ವೇದ ಚಿಕಿತ್ಸೆ ಮತ್ತು ಫಿಸಿಯೋ ಥೆರಪಿ ಚಿಕಿತ್ಸೆ ಈ ತ್ರಿವೇಣೀ ಸಂಗಮ ಚಿಕಿತ್ಸೆಗಳು ಮೊತ್ತ ಮೊದಲ ಬಾರಿಗೆ ಎಂಬಂತೆ ಈ ಆನಂದ ಮಯ ಆರೋಗ್ಯಧಾಮದಲ್ಲಿ ಪ್ರಯೋಗಿಸುವ ಮೂಲಕ ಹೊಸತೊಂದು ಪರಂಪರೆಗೆ ನಾಂದಿಹಾಡಿತು. ಯಾವನೇ ವ್ಯಕ್ತಿ ಚಿಕಿತ್ಸೆ ಆಶ್ರಯಿಸಿ ಆನಂದಮಯಕ್ಕೆ ಆಗಮಿಸಿದರೂ ಆತನಿಗೆ ಈ ಮೂರೂ ಚಿಕಿತ್ಸಾ ಪದ್ಧತಿಗಳ ಮೂಲಕ ಚಿಕಿತ್ಸೆನೀಡಿ ಮರಳಿ ಆರೋಗ್ಯ ಕಲ್ಪಿಸುವ ಹೊಸವ್ಯವಸ್ಥೆ ಇಲ್ಲಿದೆ. ಬೆಳ್ಳಂ ಬೆಳಗ್ಗೆ 6.30ರಿಂದ ಆರಂಭಗೊಂಡರೆ ರಾತ್ರಿ 8.30ರ ತನಕ ವಿವಿಧ ಹಂತಗಳಲ್ಲಿ ಆರೋಗ್ಯಧಾಮದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಧುಮೇಹ, ಬೊಜ್ಜುತನ ನಿವಾರಣೆ, ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ಇಲ್ಲಿ ವಿಶೇಷವಾದ ಚಿಕಿತ್ಸಾ ವಿಧಾನಗಳಿವೆ. ಬೆಳಗ್ಗಿನ ಪ್ರಶಾಂತ ವಾತಾವರಣದಲ್ಲಿ ಯೋಗ - ಪ್ರಾಣಾಯಾಮ, ವಿವಿಧ ರೀತಿಯ ಕ್ರಿಯೆಗಳು ಹೊಸ ಉಲ್ಲಾಸಮೂಡಿಸುವುದರಲ್ಲಿ ಸಂದೇಹವಿಲ್ಲ.
ಆನಂದಮಯ ಆರೋಗ್ಯಧಾಮದಲ್ಲಿ ಎಣ್ಣೆ ಮಾಲೀಸು, ಪೌಡರ್ ಮಾಲೀಸು, ಮಣ್ಣಿನ ಚಿಕಿತ್ಸೆ, ಪಥ್ಯಾಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಸೂಜಿ ಚಿಕಿತ್ಸೆ (ಅಕ್ಯುಪಂಕ್ಚರ್) , ಅಕ್ಯುಪ್ರೆಶರ್, ಆಯಸ್ಕಾಂತ ಚಿಕಿತ್ಸೆ, ಸುಂಗಂಧ ಚಿಕಿತ್ಸೆ, ಜಲಚಿಕಿತ್ಸೆ, ಸೋನಾಬಾತ್, ಆತಪಸ್ನಾನ, ಯೋಗ, ಪ್ರಾಣಾಯಾಮ, ಧ್ಯಾನ , ಪಂಚಕರ್ಮ ಚಿಕಿತ್ಸೆ, ಆಪ್ತಸಮಾಲೋಚನೆ ಈ ಎಲ್ಲಾ ಚಿಕಿತ್ಸಾ ವ್ಯವಸ್ಥೆಗಳಿವೆ. ಅತ್ಯಂತ ಪಾರಂಪರಿಕ ರೀತಿಯಲ್ಲಿ ಎಲ್ಲೂ ಚ್ಯುತಿಬಾರದಂತೆ ಸಂಪೂರ್ಣ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆಯನ್ನು ನುರಿತ ಚಿಕಿತ್ಸಕರೊದಗಿಸುತ್ತಾರೆ.
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪಂಚಕರ್ಮ ಚಿಕಿತ್ಸೆ, ನಶ್ಯ, ಅಕ್ಷಿತರ್ಪಣ, ಬಸ್ತಿ, ವಮನ, ವಿರೇಚನ, ಪಿಂಡಸ್ವೇದ, ಶಿರೋಧಾರ, ಜಲಧಾರ, ಕ್ಷೀರಧಾರ, ಷಷ್ಠಿಕಶಾಲಿಪಿಂಡಸ್ವೇದ, ಸರ್ವಾಂಗ ಸ್ವೇದ, ಕಟಿಬಸ್ತಿ, ಜಾನುಬಸ್ತಿ, ಗ್ರೀವಬಸ್ತಿ ಮೊದಲಾದ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ.
ಫಿಸಿಯೋಥೆರಪಿ ಚಿಕಿತ್ಸಾ ಪದ್ಧತಿಯ ಮೂಲಕ ಯಂತ್ರಗಳ ನೆರವಿನೊಂದಿಗೆ ವಿವಿಧ ರೀತಿಯ ದೈಹಿಕ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ವಿಭಾಗಗಳಲ್ಲಿ ಚಿಕಿತ್ಸಾ ಕ್ರಮಗಳನ್ನು ಪ್ರತ್ಯೇಕವಾಗಿಯೇ ಕೈಗೊಳ್ಳಲಾಗುತ್ತಿದೆ.ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ ಶ್ಲಾಘನಾರ್ಹ. ಚಿಕಿತ್ಸೆ ಪಡೆಯಲು ಆಗಮಿಸುವವರಿಗೆ ವಸತಿ ವ್ಯವಸ್ಥೆಯನ್ನೂ ಅಷ್ಟೇ ಚೊಕ್ಕವಾಗಿ ರಚಿಸಲಾಗಿದೆ. 8 ಕಾಟೇಜುಗಳು, 4 ಡೀಲಕ್ಸ್ ವಸತಿ ವ್ಯವಸ್ಥೆ, ಜೊತೆಗೆ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಉತ್ತಮ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರತಿಯೊಂದು ಕಾಟೇಜುಗಳೂ ಒಂದರಿಂದೊಂದು ಭಿನ್ನವಾಗಿ ಜನಾಕರ್ಷಣೆಗೆ ಕಾರಣವಾಗುತ್ತಿವೆ. ಆಕರ್ಷಕ ವಿನ್ಯಾಸ ಮಾದರಿಗಳು, ಸೌಲಭ್ಯಗಳು ಎಂತವರನ್ನೂ ಮೋಡಿಮಾಡದಿರದು. ಚಿಕಿತ್ಸಾ ಕೇಂದ್ರವು ಈ ಕಾಟೇಜುಗಳ ಸನಿಹದಲ್ಲೇ ಇರುವುದರಿಂದಾಗಿ ಆರೋಗ್ಯ ಅರಸಿ ಬರುವ ಮಂದಿಗೆ ಮತ್ತಷ್ಟು ಅನುಕೂಲ ಆದಂತಾಗಿದೆ. ಕಾಟೇಜು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿರಿಸಿರುವ ಪಾರಂಪರಿಕ ಮರದ ಪೀಠೋಪಕರಗಣಗಳು ಮನಸ್ಸನ್ನು ಪುಳಕಗೊಳಿಸುತ್ತಿವೆ.ನೈಸರ್ಗಿಕ ಆಹಾರ ಪದ್ಧತಿ, ಸಾಂಪ್ರದಾಯಿಕದೊಂದಿಗೆ ಆಧುನಿಕ ರೀತಿಯ ಚಿಕಿತ್ಸಾ ಸೌಲಭ್ಯ, ಮನಸ್ಸು ವಿಕಸಿಸುವಂತಹ ಚಟುವಟಿಕೆಗಳು ಇವೆಲ್ಲವುಗಳ ಮೂಲಕ ಎಲ್ಲೋ ಕಳೆದುಹೋದ ನೆಮ್ಮದಿ ಮತ್ತೆ ನವೋಲ್ಲಾಸದೊಂದಿಗೆ ಮರಳಿ ಲಭಿಸುವಂತೆ ಮಾಡುತ್ತದೆ ಈ ಆನಂದಮಯ ಆರೋಗ್ಯಧಾಮ. ತನ್ಮೂಲಕ ಹಲವರ ಪಾಲಿಗೆ ಇದೊಂದು ಆರೋಗ್ಯ ಸ್ವರ್ಗ ಎನಿಸಿಕೊಂಡಿದೆ.
ಕನಸುಗಾರನ ಹೊಸ ಕನಸು...
ಆಧುನಿಕ ಮೂಡಬಿದಿರೆಯ ರೂವಾರಿ ಎಂದೇ ಖ್ಯಾತಿಹೊಂದಿದ ಮಿಜಾರುಗುತ್ತು ಮೋಹನ ಆಳ್ವರು ಒಂದಿಲ್ಲೊಂದು ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ. ಹೊಸ ಹೊಸ ನೂರಾರು ಕನಸುಗಳು ಅವರ ಮನದಲ್ಲಿ ಮೂಡಿರುತ್ತವೆ. ಅವೆಲ್ಲ ಸಾಕಾರಗೊಂಡಾ ನೋಡುಗರಿಗೆ ಒಂದು ಅದ್ಭುತ ಎಂದೆನಿಸುತ್ತದೆ. ಈ ಆನಂದಮಯವೂ ಅವರ ಕನಸುಗಳಲ್ಲೊಂದು. ಮೂಡಬಿದಿರೆಯಿಂದ ಸರಿಯಾಗಿ 8ಕಿಲೋಮೀಟರ್ ದೂರದಲ್ಲಿದೆ ಈ ಶೋಭಾವನ. ರಾಷ್ಟ್ರೀಯ ಹೆದ್ದಾರಿ 13ರ ಅಂಚಿನಲ್ಲಿ ವಿಶಾಲವಾದ ಪರಿಸರದಲ್ಲಿ ಈ ಶೋಭಾವನ ನೆಲೆನಿಂತಿದೆ. ಮೂಡಬಿದಿರೆಯಿಂದ ಮಂಗಳೂರಿಗೆ ಸಾಗುವ ಹಾದಿಯಲ್ಲಿ ಸಿಗುವ ಈ ವನ ಸಹಸ್ರ ಸಸ್ಯಗಳ ಕಣಜ. ವಿಶಾಲವಾದ ಭೂಮಿಯಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ಅತ್ಯಂತ ಕಾಳಜಿಯಿಂದ ಪೋಷಿಸುವ ಕೇಂದ್ರ. ನಿರಂತರ ಆರೈಕೆ, ಹೊಸ ಹೊಸ ಅನ್ವೇಷಣೆಗೆ ಈ ವನ ಕಾರಣವಾಗುತ್ತಿದೆ. ಇದರ ಒಂದಂಚಿನಲ್ಲೇ ಆನಂದಮಯ ಆರೋಗ್ಯಧಾಮ ನೆಲೆನಿಂತಿದೆ. ಮುಂಜಾನೆಯ ಇಬ್ಬನಿಯ ಹನಿಯೊಂದಿಗೆ, ಆಹ್ಲಾದದಾಯಕ ವಾತಾವರಣದೊಂದಿಗೆ ಶೋಭಾವನದ ಸುತ್ತ ವಾಕಿಂಗ್ ಮಾಡುವುದರಲ್ಲಿ ಸಿಗುವ ಆನಂದ ಅನುಭವಿಸಿಯೇ ಅರಿಯಬೇಕು. ವೈವಿಧ್ಯಮಯ ಪಕ್ಷಿಗಳ ಇಂಚರ ನಿನಾದ... ಸಹಸ್ರ ಸಹಸ್ರ ಆಯುರ್ವೇದ ಗಿಡಮೂಲಿಕೆಗಳನ್ನೆಲ್ಲಾ ದಾಟಿ ಬರುವ ತಂಗಾಳಿ... ನಿಷ್ಕಲ್ಮಶ ಪರಿಸರ ಇವೆಲ್ಲವೂ ಮಾನವನ ದೈಹಿಕ ಹಾಗೂ ಮನೋವಿಕಾಸಕ್ಕೆ ಪೂರಕ ವಾತಾರವಣವನ್ನೊದಗಿಸುತ್ತದೆ.
- ಚಿತ್ರ, ಬರಹ : ಹರೀಶ್ ಕೆ.ಆದೂರು.
ವೈವಿಧ್ಯ
ನಮ್ಮೂರು ಬೆಳ್ಳೆಯ ಪಕ್ಕದ ಊರು ಕುಂಜಾರುಗಿರಿ. ಅದನ್ನು ದುರ್ಗಾ ಬೆಟ್ಟವೆಂದು ಕೂಡ ಕರೆಯುತ್ತಾರೆ. ಕುಂಜರ ಅಂದರೆ ಆನೆ. ಮುಂಭಾಗದಿಂದ ಆನೆಯ ಹಾಗೆ ಕಾಣುವ ಗಿರಿಗೆ `ಕುಂಜಾರುಗಿರಿ' ಎಂಬ ಹೆಸರು ಬಂದಿದೆ ಅನ್ನುವ ಪ್ರತೀತಿ ಇದೆ.
ಅದು ಆಚಾರ್ಯ ಮಧ್ವರ ಜನ್ಮಸ್ಥಳವಾದ ಪಾಜಕಾಕ್ಷೇತ್ರದಿಂದ ಒಂದುವರೆ ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಎರಡು ಗುಹೆಗಳಿದ್ದು ಅವುಗಳಲ್ಲಿ ಒಂದು ಗುಹೆ ಕುಂಜಾರುಗಿರಿ ಬೆಟ್ಟದ ಪಶ್ಚಿಮದ ದಿಕ್ಕಿಗಿರುವ ಪರಶುರಾಮ ಕ್ಷೇತ್ರದ ಗರ್ಭ ಗುಡಿಯಲ್ಲಿ ಹೊರಗೆ ಬರುತ್ತದೆಯೆಂದು ಬಹಳ ವರ್ಷಗಳ ಹಿಂದೆಯೆ ರಾಮಕೃಷ್ಣ ಭಟ್ಟರೆನ್ನುವ ಸಾಹಸಿಯೊಬ್ಬರು ಪತ್ತೆ ಹಚ್ಚಿದ್ದಾರೆಂದು ನಮಗೆ ಗೊತ್ತಿತ್ತು. ಆದರೆ ಈ ಗುಹೆ ಪ್ರವೇಶ ಧ್ವಾರದಲ್ಲಿ ತೆವಳಿಕೊಂಡು ಹೋಗುವ ಹಾಗೆ ಇದ್ದು, ಮುಂದೆ ನೇರವಾಗಿ ನಿಂತು ನಡೆಯಬಹುದಾದಷ್ಟು ಅಗಲವಾಗಿದೆಯಂತೆ. ನಿರಂತರ ಬಾವಲಿಗಳ ಹಾರಾಟದಿಂದ ಅಲ್ಲಿ ನಿಲ್ಲುವುದು ಕೂಡ ಅಸಾಧ್ಯವೆನ್ನುವ ಹಾಗಿದೆ. ಅದಲ್ಲದೆ ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ಈ ಕುಂಜಾರುಬೆಟ್ಟವನ್ನು ಏರಿ ವಿಹಂಗಮ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಬೆಟ್ಟಕ್ಕೆ ನಾಲ್ಕು ಕಡೆಯಿಂದಲೂ ದಾರಿಯಿದ್ದು. ಪೂರ್ವದಲ್ಲಿ ದೊಡ್ಡ ಪಾದೆಯನ್ನು ಏರಿ ಬರಬೇಕು. ಅಲ್ಲಿಂದ ಮೇಲೇರಿ ಬರುವಾಗ ಆಳವಾದ ಕಣಿವೆಯಂತಹ ನೋಟವನ್ನು ನೋಡುವಾಗ ಒಂದು ರೀತಿಯ ಪುಳಕವಾಗುತ್ತದೆ. ಪಶ್ಚಿಮಕ್ಕೆ ನಾಲ್ಕುನೂರು ಮೆಟ್ಟಿಲುಗಳು, ದಕ್ಷಿಣ ಭಾಗದಲ್ಲಿ ಕಡಿದಾದ ಮೆಟ್ಟಿಲುಗಳು ಮತ್ತು ಉತ್ತರ ಭಾಗದಲ್ಲಿ ಮಣ್ಣಿನ ಮೆಟ್ಟಿಲುಗಳಿವೆ. ಅಲ್ಲಿ ಒಂದಲ್ಲಾ ಒಂದು ಸಿನೆಮಾದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.
ನಾವು ಹೈಸ್ಕೂಲ್ಗೆ ಹೋಗಬೇಕಾದರೆ ಒಂದೋ ಇನ್ನಂಜೆ ಅಥವಾ ಮೂಡುಬೆಳ್ಳೆಗೆ ಹೋಗಬೇಕಿತ್ತು. ಮೂಡುಬೆಳ್ಳೆಗೆ ನಮ್ಮೂರಿನಿಂದ ಸೇತುವೆ ಸಂಪರ್ಕವಿಲ್ಲದಿದ್ದರಿಂದ ಮಳೆಗಾಲಕ್ಕೆ ನೆರೆ ಬಂದು ನಮ್ಮೂರ ನದಿ, ಪಾಪನಾಶಿನಿಯನ್ನು ದಾಟುವುದು ಅಸಾಧ್ಯ. ತರಗತಿಗೆ ಬಂಕ್ ಹೊಡಯಲೇಬೇಕು. ದೋಣಿಯ ಪ್ರಯಾಣವಿದ್ದರೂ ನೆರೆಗೆ ಅಸಾಧ್ಯ. ನಮ್ಮೂರಿನ ನೆರೆಯೆಂದರೆ ಬೆಟ್ಟು ಗದ್ದೆಯವರೆಗೂ ನೀರು ಏರುವುದುಂಟು ಮತ್ತು ಒಂದು ವಾರವಾದರೂ ನೆರೆಯ ನೀರು ಇಳಿಯುವುದಿಲ್ಲ. ಎಲ್ಲಿ ನೋಡಿದರೂ ಕಾಡಿನ ನೀರು ಗುದ್ದಳಿಸಿ ಕೆಸರು ನೀರಿನಿಂದ ಕೂಡಿದ ಅಲೆಗಳ ಮತ್ತು ನೀರಿನ ಪ್ರವಾಹದ ನೆರೆ ಅದು. ಹಾಗಾಗಿ ನಾವು ಇನ್ನಂಜೆ ಹೈಸ್ಕೂಲನ್ನು ಸೇರುವುದು ಅನಿವಾರ್ಯವಾಗಿತ್ತು. ಅಲ್ಲಿಗೆ ಬಸ್ಸಿನ ವ್ಯವಸ್ಥೆಯಾಗಲಿ ಇನ್ಯಾವುದೇ ವಾಹನಗಳ ವ್ಯವಸ್ಥೆಯೂ ಇರಲಿಲ್ಲ. ನಡಿಗೆಯಿಂದಲೆ ನಾಲ್ಕೈದು ಮೈಲು ನಡೆದು ಹೋಗಬೆಕು.
ಶಾಲೆಗೆ ಹೋಗುವ ದಾರಿಯಲ್ಲಿ ಅಂದರೆ ಕುಂಜಾರುಗಿರಿಯ ಪಕ್ಕದಲ್ಲಿಯೆ ದೊಡ್ಡ ಪಾದೆಯನ್ನು ಇಳಿಯಬೇಕಿತ್ತು. ಆ ಪಾದೆಗೆ `ನಿನ್ನಿ ಪಾದೆ' ಎಂದು ಹೆಸರು. ನಿನ್ನಿ ಅಂದರೆ ತುಳುವಿನಲ್ಲಿ ಎದುರು ಮಾತನಾಡುವುದು ಎಂಬ ಅರ್ಥವಿದೆ. ಈ ಪಾದೆಯ ಕೆಳಗೆ ನಿಂತು ಮಾತನಾಡಿದರೆ ಅದು ಎರಡು ಬಾರಿ ಪ್ರತಿಧ್ವನಿಸುತ್ತದೆ. ಅದಕ್ಕಾಗಿ ನಿನ್ನಿಪಾದೆಯೆಂದು ಹೆಸರು ಬಂದಿರಬಹುದು. ಈ ಪಾದೆಯನ್ನು ಏರಬೇಕಾದರೆ ಒಂದು ಕಟ್ಟು ಕಡ್ಲೆಕಾಯಿ ಬೇಕೆನ್ನುವುದು ಆಗಿನ ಹುಡುಗರ ಜೋಕು. ಈಗ ಕಲ್ಲು ಗಣಿಗಾರಿಕೆಯಿಂದ ಬಂಡೆ ಕರಗಿದೆ. ಆಗಿನ ಅದರ ಭವ್ಯತೆ ಈಗ ಇಲ್ಲ!
ಕುಂಜಾರುಗಿರಿ ದೇವಸ್ಥಾನದಲ್ಲಿ ಶ್ರಾವಣ ಶುಕ್ರವಾರವಂತೂ ತುಂಬಾ ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ಅಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೂ ಅಷ್ಟೆ. ಎಲ್ಲೆಂದಿಲೋ ದೇವರ ದರ್ಶನ ಮಾಡುವುದಕ್ಕೆ ಬರುತ್ತಾರೆ. ಆಗ ಒಂದು ದೊಡ್ಡ ಜಾತ್ರೆಯೆ ಅಲ್ಲಿ ನೆರೆಯುವುದುಂಟು. ಕೆಲವೊಮ್ಮೆ ಐದು ಶುಕ್ರವಾರಗಳು ಇನ್ನು ಕೆಲವೊಮ್ಮೆ ನಾಲ್ಕು ಶುಕ್ರವಾರಗಳು ಬರುವುದಿದೆ. ಐದು ಶುಕ್ರವಾರವಾದರೆ ಹೆಣ್ಣು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಕೈತುಂಬಾ ಬಣ್ಣ ಬಣ್ಣ ಗಾಜಿನ ಬಳೆಗಳನ್ನಿಟ್ಟು, ಬಗೆಬಗೆಯ ಬಿಂದಿ, ಅಲಂಕಾರಿಕ ವಸ್ತುಗಳನ್ನು ಕೊಂಡು ಸಂಭ್ರಮಿಸುವುದಲ್ಲದೆ, ಮಂಡಕ್ಕಿ(ಕುರ್ಲರಿ), ಸಕ್ಕರೆ ಕಡ್ಡಿ ಮಿಠಾಯಿ, ಐಸ್ಕ್ಯಾಂಡಿಗಳನ್ನು ತೆಗೆದುಕೊಂಡು ಬಂಡೆಯ ಒಂದು ಕಡೆಗೆ ಮರದ ನೆರಳಿನ ಅಡಿಯಲ್ಲಿ ಕುಳಿತು ತಿನ್ನುವುದು ಕೂಡ ಒಂದು ರೀತಿಯ ಮಜಾ ಅನಿಸುತ್ತಿತ್ತು. ಈ ಮಜಾವನ್ನು ಅನುಭವಿಸುವುದಕ್ಕಾಗಿಯೆ ಕೆಲವರು ಬರುವುದುಂಟು.
ಶ್ರಾವಣ ಶುಕ್ರವಾರಕ್ಕೆ ದುರ್ಗಾ ದೇವಿಗೆ ಕರಿಯ ಬಳೆ (ಕರಿಯ ಕಾಜಿ) ಹೇರಳವಾಗಿ ಹರಕೆಯ ರೂಪದಲ್ಲಿ ಹಾಕುವುದುಂಟು. ಸಂಜೆಯ ಹೊತ್ತು ಹೆಣ್ಮಕ್ಕಳೆಲ್ಲ ಶಾಲೆ ಮುಗಿಸಿ ಬಳೆಗಳ ಆಸೆಗೆ ದೇವಸ್ಥಾನಕ್ಕೆ ಹೋಗಿ ಮುಜುಗರ ಪಟ್ಟುಕೊಂಡು ಬಳೆಗಾಗಿ ಕಾಯುವುದು ಇದೆ. ಅಲ್ಲಿ ಒಂದು ಕಡೆ ಹರಕೆಗೆ ಬಂದ ಬಳೆಗಳನ್ನು ರಾಶಿ ಹಾಕಿಡುತ್ತಿದ್ದರು. ದೇವಸ್ಥಾನದ ಆಡಳಿತದವರ ಅಥವಾ ಅರ್ಚಕರ ಅನುಮತಿಯ ಮೇರೆಗೆ ಹೆಣ್ಮಕ್ಕಳೆಲ್ಲ ಅವರವರ ಕೈಯಳತೆಗೆ ಸರಿಯಾದ ಬಳೆಗಳನ್ನು ಆರಿಸಿಕೊಂಡು ಕೈತುಂಬಾ ಕರಿಯ ಬಳೆಗಳನ್ನು ಹಾಕಿಕೊಂಡು ಸಂತೋಷಪಡುವುದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಒಂದೆಡೆ ದೇವರ ಬಳೆ ಅನ್ನುವ ಭಕ್ತಿಭಾವ ಇನ್ನೊಂದೆಡೆ ದುಡ್ಡು ಕೊಟ್ಟರೂ ಕೈ ತುಂಬಾ ಬಳೆ ಇಡುವುದಕ್ಕೆ ಸಾಧ್ಯವಾಗದ ಆಗಿನ ಬಡತನ.
ಒಮ್ಮೆ ಹೆಣ್ಮಕ್ಕಳೆಲ್ಲಾ ಹಾಗೆ ಬಳೆ ತರುವುದಕ್ಕೆ ಅಲ್ಲಿಗೆ ಹೋದಾಗ ಅಲ್ಲೇನೋ ಪರವೂರಿನಜನ ಮಹಜರು ನಡೆಸುವಂತೆ ಸುತ್ತೆಲ್ಲಾ ನಿಂತು ಏನೋ ಎಲ್ಲಾ ಮಾತಾಡಿಕೊಳ್ಳುತ್ತಿದ್ದರಂತೆ. ಆಗ ಬಳೆ ತರುವುದಕ್ಕೆ ಹೋಗಿದ್ದ ಆ ಹುಡುಗಿಯರ ಗುಂಪಿನಲ್ಲಿ ನನ್ನಕ್ಕ ಕೂಡ ಇದ್ದರು. ಅಲ್ಲಿಯ ಅರ್ಚಕರು ಅಲ್ಲಿಗೆ ಮಂಜುಳಾ (ಶಂಕರ್ನಾಗ್ ಆಗ ಅಷ್ಟು ಜನಪ್ರಿಯರಾಗಿರಲಿಲ್ಲ!) ಬರುವ ಸುದ್ದಿ ತಿಳಿಸಿದರು. ಅಕ್ಕ ವಿಷಯ ತಿಳಿದು ಮನೆಗೆ ಬಂದು, ನಾಳೆ ಕುಂಜಾರಿಗೆ ಚಿತ್ರ ನಟಿ ಮಂಜುಳಾ ಬರ್ತಾರಂತೆ ಅಂದಿದ್ದೆ. ಮನೆಯಲ್ಲಿ ಅದರ ವಿಷಯವೆ ಮಾತುಕತೆಯಾಗುತ್ತಿತ್ತು. ಸಿನಿಮಾದವರು ಸುಮ್ಮನೆ ಬರ್ತಾರೆಯೆ? ಎಲ್ಲೋ ಶೂಟಿಂಗ್ ಇರಬಹುದು ಅಂತ ಅಮ್ಮ ಊಹಿಸಿದ್ರೆ, ಹೈಸ್ಕೂಲ್ಗೆ ಹೋಗ್ತಿದ್ದ ಅಣ್ಣ, ನಾಳೆ ಶಂಕರ್ನಾಗ್ ಮಂಜುಳಾ ಕುಂಜಾರುಗಿರಿಗೆ ಶೂಟಿಂಗ್ಗೆ ಬರ್ತಾರಂತೆ ಅಂದಿದ್ದೆ ಅದು ಅಪ್ಪನ ಕಿವಿಗೆ ಬಿದ್ದು, ಅಯ್ಯೋ ಮಾರಾಯ! ಇನ್ನು ಶಾಲೆ ಬಂಕ್ ಹಾಕ್ಲಿಕ್ಕೆ ಊಂಟಾ? ಅಂದಾಗ ಅವನು ಬಾಯಿಮುಚ್ಚಿ ಕುಳಿತ. ನಮ್ಮ ಅಪ್ಪ ಆಗ ಮಧುರೈಯಲ್ಲಿದ್ದ ಹೊಟೇಲನ್ನು ಮುಚ್ಚಿ ಊರಿಗೆ ಬಂದು ಎರಡು ಮೂರು ವರ್ಷಗಳಾಗಿರಬಹುದು. ಅಣ್ಣ ಮತ್ತು ಅಕ್ಕಂದಿರ ಎಜುಕೇಶನ್ ಅಲ್ಲಿಯೆ ಆಗಿದ್ದರಿಂದ ಇಲ್ಲಿ ಕನ್ನಡ ಮಾಧ್ಯಮ ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ನಮ್ಮಣ್ಣನಿಗೆ ಲಾಂಗ್ವೇಜ್ ಪ್ರಾಬ್ಲಂ ಇದ್ದುದ್ದರಿಂದ ಅವನಿಗೆ ಶಾಲೆಗೆ ಹೋಗುವುದೆಂದರೆ ಅಷ್ಟಕಷ್ಟೆ. ಅದಲ್ಲದೆ ಶಾಲೆಗೆ ನಾಲ್ಕು ಮೈಲು ಬರಿ ಗಾಲಿನಲ್ಲಿ ನಡೆದುಕೊಂಡು ಹೋಗಿಬರಬೇಕಾದ ಪರಿಸ್ಥಿತಿ. ಹೋಗಿ ಬರಬೇಕಾದ ಸಂಕಟ ಒಂದೆಡೆ; ಕನ್ನಡ ಬರುವುದಿಲ್ಲವೆಂದು ಪೆಟ್ಟು ತಿನ್ನಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಅದಕ್ಕಾಗಿ ಅವನು ಶಾಲೆಗೆ ಹೊರಟರೂ ಗುಡ್ಡದಲ್ಲೋ, ಇನ್ನೆಲ್ಲೋ ಕುಳಿತು ಸಂಜೆ ಆರು ಏಳು ಗಂಟೆಗೆಲ್ಲಾ ಮನೆಗೆ ಬರುತ್ತಿದ್ದ. ಹಾಗಾಗಿ ಅವನು ಶಾಲೆಗೆ ಹೋಗುವುದಿಲ್ಲವೆಂದರೆ ಅಪ್ಪನ ಬೈಗುಳ, ಹೊಡೆತವಿದ್ದೇ ಇರುತ್ತಿತ್ತು.
ಅವನು ಅಪ್ಪನ ಹೆದರಿಕೆಯಿಂದ ಸುಮ್ಮನಾದರೂ ಅಕ್ಕ ಸುಮ್ಮಿನಿರದೆ, ಮಂಜುಳಾ ಬರುವುದಾದರೆ ನಾವು ನೋಡಲೆಬೇಕು ಎಂದು ಹಠ ಮಾಡಿದಾಗ ಅಮ್ಮ ಗದರಿಸಿ ಸುಮ್ಮನಾಗಿಸಿದರು. ಆದರೂ ಮರುದಿನ ಆ ದಾರಿಯಿಂದ ಶಾಲೆಗೆ ಹೋದಾಗ ಅಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿರುದನ್ನು ನೋಡಿ ಹುಡುಗಿಯರೆಲ್ಲಾ ಶಾಲೆಗೆ ಬಂಕ್ ಹೊಡೆದು ಅಲ್ಲಿ ಹಾಜರ್!
ಮಂಜುಳಾರನ್ನು ನೋಡುವ ಉತ್ಸಾಹದಿಂದ ಅಲ್ಲಿ ಹೋದಾಗ ಆಕೆ ದೂರದಲ್ಲಿ ನೀಲಿ ಜರತಾರಿ ಸೀರೆಯುಟ್ಟು ವಧುವಿನಂತೆ ಅಲಂಕಾರ ಮಾಡಿಕೊಂಡು ಒಂದು ಚೇರ್ನಲ್ಲಿ ಕುಳಿತು ಮೇಕಪ್ ಸರಿ ಮಾಡುತ್ತಿದ್ದರಂತೆ. ಇನ್ನೊಂದೆಡೆ ಶಂಕರ್ನಾಗ್ಗೆ ನಿರ್ದೇಶಕರು ದೇವಸ್ಥಾನದ ಮೆಟ್ಟಿಲಿನ ಬಳಿ ನಿಂತು ಸನ್ನಿವೇಶವನ್ನು ವಿವರಿಸುತ್ತಿದ್ದರಂತೆ. ಮಂಜುಳಾರನ್ನು ಹತ್ತಿರದಿಂದ ನೋಡುವ ಆಸೆಯಿಂದ ಅಲ್ಲಿಗೆ ಹೋದರೂ ಜನ ಮುತ್ತಿಗೆ ಹಾಕಿದ್ದರಿಂದ ನೋಡಲಾಗದೆ ಬೆಟ್ಟದ ಕೆಳಗೆ ನಿಂತು, ಇಣುಕಿ ಇಣುಕಿ ಶೂಟಿಂಗ್ ನೋಡುತ್ತಾ ನಿಂತರಂತೆ.
ಎರಡು ಹಾಡಿನ ಸನ್ನಿವೇಶಗಳು ಮತ್ತು ಕೆಲವೊಂದು ದೃಶ್ಯಗಳನ್ನು ಕುಂಜಾರುಗಿರಿಯ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿತ್ತು. ಅದರಲ್ಲೂ ಚಿತ್ರದಲ್ಲಿ ಸೀತಾ ಮದುವೆಯ ಕನಸು ಕಾಣುತ್ತಾ ಇರುವಾಗ ರಾಮುವನ್ನು ರೌಡಿಗಳು ಸಾಯಿಸಿದ ಮೇಲೆ ಅವಳ ತಂದೆಯೂ ಆಘಾತದಿಂದ ಸಾಯುತ್ತಾರೆ. ಅವಳು ಮತಿಭ್ರಮಣೆಗೊಂಡು ಹಾಡುವ ಸಂದರ್ಭ `ಬಂದೇ ಬರುತ್ತಾನೆ' ಹಾಡು. ಈ ಚಿತ್ರದ ಜನಪ್ರಿಯ ಹಾಡುಗಳಲ್ಲೊಂದಾದ ಇದು ಮಂಜುಳಾರವರಿಗೆ ಹೆಸರು ತಂದುಕೊಟ್ಟ ಹಾಡು ಕೂಡ ಹೌದು.
ಬಂದೇ ಬರುತ್ತಾನೆ ರಾಮ ಬಂದೇ ಬರುತ್ತಾನೆ
ಬಂದ ಒಡನೆಯೆ ಸೀತೆಯ ಕಂಡು ರಾಣಿ ಅನುತ್ತಾನೆ...
ತಾಳಿಯ ತರುತ್ತಾನೆ ರಾಮ ಚಿನ್ನದ ಬಳೆಗಳ ತರುತ್ತಾನೆ
ಮದುವೆಯಾಗಿ ತನ್ನರಮನೆಗೆ ಬಾರೆ ಅನುತ್ತಾನೆ...
ಹಾಡು ಹೇಳುತಾನೆ ರಾಮ ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ, ಬಾ ಚಿನ್ನ ಎಂದು ಸವಿ ಮುತ್ತನು ಕೊಡುತ್ತಾನೆ...
ಅರ್ಧದಷ್ಟು ಈ ಹಾಡಿನ ಚಿತ್ರೀಕರಣವಾಗಿರುವುದು ಕುಂಜಾರುಗಿರಿ ದೇವಸ್ಥಾನದ ಮುಂಭಾಗದಲ್ಲಿ. ಇದೇ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಹೂವಿನ ಸೊಗಸು ನನಗಾಗಿ ಆ ಹೂವೇ ನಿನ್ನ ಪೂಜೆಗಾಗಿ' ಹಾಡಿನ ಕೊನೆಯ ಸಾಲುಗಳು,
ಹೂವಿನ ಸೊಗಸು ನನಗಾಗಿ, ಆ ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ, ಈ ಹೂವಿನ ಮೊಗವು ನನಗಾಗಿ
ಸನಿಹಕೆ ಬರುತಿರೆ, ಬಯಕೆಯು ಕುಣಿದಿರೆ
ಚೆಲುವನೆ ನಾ ತಾಳೆನು
ಬಳಸಲು ತೋಳಲಿ, ಕೆಣಕಲು ಮಾತಲಿ
ಚೆಲುವನೆ ನಾ ಸೋತೆನು
ಈ ಮನಸು ಮನಸು ಬೆರೆತು ಹೋದ ಮೇಲೆ
ನಾಚಿಕೆ ಮಾತೇಕೆ ಹೇಳೆ?
ಮಂಜುಳಾ ಮತ್ತು ಶಂಕರ್ನಾಗ್ರವರ ಈ ಡ್ಯೂಯೆಟ್ ಹಾಡನ್ನು ಮರೆಯಲು ಸಾಧ್ಯವೆ? ಚೆಲುವನ ಪ್ರೀತಿಗೆ ಕರಗುವ ರಾಗರಂಜಿತ ಕದಪುಗಳ ಹುಡುಗಿಯ ಅಂತರಂಗದ ಸವಿ ಮಾತುಗಳು ಹಾಡಾಗಿ ಇಲ್ಲಿ ಹೊರ ಹೊಮ್ಮಿದೆ. ಹಿನ್ನಲೆಯ ಹಸಿರು ಗಿರಿ, ಗಿರಿಯತ್ತ ಚಾಚಿದ ಮೆಟ್ಟಿಲುಗಳು, ಬಂಡೆಯ ಸಾನಿಧ್ಯದ ಸೊಬಗು ಹಾಡಿಗೆ ಮೆರಗು ನೀಡಿರುವುದರಲ್ಲಿ ಸಂದೇಹವಿಲ್ಲ.
ವಿ ಸೋಮಶೇಖರ್ ನಿರ್ದೇಶನದ ಈ ಚಿತ್ರದ ಇನ್ನೊಂದು ಹಾಡು `ಈ ರೂಪವೇ... ನನ್ನಿ ಬಾಳಿನ ನಂದಾದೀಪವು, ಇದು ನೂರಾರು ಜನುಮದ ಅನುಬಂಧವು ತಂದ ಆನಂದವು' ಸನ್ನಿವೇಶದಲ್ಲಿ ರಾಮು (ಶಂಕರ್ನಾಗ್) ಸತ್ತ ಆನಂತರ ಅವನ ಮೆದುಳನ್ನು ಸೀತಾ(ಮಂಜುಳಾ)ಳಿಗೆ ಬದಲಾಯಿಸಿ ಆತನ ನೆನಪುಗಳು ಸೀತಾಳಲ್ಲಿ ಜಾಗೃತವಾಗಿ ಹಿಂದೆ ತಾನು ಸೀತಾಳನ್ನು ದೇವಸ್ಥಾನದಲ್ಲಿ ಭೇಟಿಯಾದ ಸಂದರ್ಭವನ್ನು ನೆನಪಿಸುತ್ತಾ ಸಾಗುವ ಹಿನ್ನಲೆಯ ಹಾಡು ಇದು.
ಬ್ಯಾಂಕ್ ಉದ್ಯೋಗಿಯಾಗಿದ ಶಂಕರ್ ನಾಗ್ ಗೆ ರಂಗಭೂಮಿಯಲ್ಲಿದ್ದಷ್ಟು ಆಸಕ್ತಿ ಸಿನಿಮಾಗಳಲ್ಲಿ ಇರಲಿಲ್ಲ. ಅದರಲ್ಲೂ ಕಮರ್ಷಿಯಲ್ ಸಿನಿಮಾಗಳೆಂದರೆ ನಿರಾಕರಿಸುತ್ತಿದ್ದುದೇ ಹೆಚ್ಚು. ಹಾಗೆಯೆ ಈ ಚಿತ್ರ ಕೂಡ ನಾಯಕಿ ಪ್ರಧಾನವಾಗಿದ್ದರಿಂದ ಚಿತ್ರವನ್ನು ನಿರಾಕರಿಸಿದ್ದರಂತೆ. ಕೊನೆಗೆ ನಿರ್ಮಾಪಕ ಅಬ್ಬಯ್ಯ ನಾಯ್ಡುರವರ ಒತ್ತಾಯದ ಮೇರೆಗೆ ಅಭಿನಯಿಸಿದ್ದರಂತೆ. ಈ ಚಿತ್ರದಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಮೆದುಳು ಬದಲಾವಣೆಯಿಂದ ಸತ್ತ ವ್ಯಕ್ತಿಯಲ್ಲಿರುವ ರಹಸ್ಯವನ್ನು ತಿಳಿದುಕೊಂಡು ರೌಡಿಗಳನ್ನು ಸೆದೆಬಡಿಯುವ ರಿವೇಂಜ್ ಮಾದರಿಯ ಚಿತ್ರವಿದು. ಮಂಜುಳಾ ತನ್ನ ಪ್ರಿಯಕರ ಸತ್ತ ಮೇಲೆ ನೀಡಿದ ಮತಿಭ್ರಮಣೆಯ ಸನ್ನಿವೇಶವಂತೂ ಮರೆಯಲು ಅಸಾಧ್ಯ. ಇಂತಹ ನೆನಪುಗಳನ್ನು ಮರೆಯುವಂತೆ ಇಲ್ಲ. ಈ ಚಿತ್ರ 1979 ರಲ್ಲಿ ಬಿಡುಗಡೆ ಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
ಮತ್ತೆ ಮುಂದಿನ ಕಂತಿನಲ್ಲಿ ಇನ್ನಷ್ಟು!
ವೈವಿಧ್ಯ
ಇದು ಪತ್ರ ಚಿತ್ರ!!! ಅರ್ಥಾತ್ ಪೇಪರ್ ಚಿತ್ರ(ಕಾಗದಗಳಲ್ಲಿ ರಚಿಸಿದ ಚಿತ್ರ). ಪೇಪರ್ ಗಳನ್ನು ವೈವಿಧ್ಯಮಯ ಆಕಾರಗಳಲ್ಲಿ ಕತ್ತರಿಸಿ ಕಲಾಕೃತಿ ರಚಿಸುವ ಕೈಚಳಕ ನಿಜಕ್ಕೂ ಅದ್ಭುತ. ಇದನ್ನು ಖ್ಯಾತ ಕಲಾವಿದ ಬೆಂಗಳೂರಿನ ಎಸ್.ಎಫ್ ಹುಸೇನಿಯವರು ರಚಿಸಿದ್ದಾರೆ. ಈ ಕಲೆ ಇತರರಿಗೂ ತಿಳಿಯುವಂತಾಗಬೇಕೆಂಬ ಹಂಬಲ ಹೊಂದಿ ಕಲಾ ಶಿಬಿರಗಳನ್ನೂ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಕಲಾಕೃತಿ ರಚಿಸುವ ಹಾಳೆಯೇ ಇದೀಗ ಕಲಾಕೃತಿಯಾಗಿ ಬದಲಾಗುತ್ತಿದೆ! ಹೇಗಿದೆ ನೋಡಿ ಎಸ್.ಎಫ್ .ಎಚ್ ಅವರ ಕೈಯ ಮೋಡಿ..!
ರಾಜ್ಯ - ರಾಷ್ಟ್ರ
ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ವರಿಷ್ಠರ ಷರತ್ತುಗಳನ್ನು ಈಡೇರಿಸಲು ಹೊರಟಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ವರಿಷ್ಠರು ಹಾಕಿರುವ ಷರತ್ತುಗಳ ಪೈಕಿ ಪ್ರಮುಖ ಹಾಗೂ ಮೊದಲನೆಯದನ್ನು ಈಡೇರಿಸಿದ್ದಾರೆ.ಮುಖ್ಯಮಂತ್ರಿಗಳು ತನ್ನ ಸರಕಾರಿ ನಿವಾಸದಿಂದ ಹೊರಗಿರುವಂತೆ ತಮ್ಮ ಮಗ, ಮಗಳು ಹಾಗೂ ಅಳಿಯನಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶದಂತೆ ಸರಕಾರಿ ನಿವಾಸದಲ್ಲಿರುವ ಅವರ ಎಲ್ಲ ಸಂಬಂಧಿಕರಿಗೆ ಮನೆ ಖಾಲಿ ಮಾಡಲು ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಸುದ್ದಿ
ಮಂಗಳೂರು:ಇಂದಿನ ಸಮಾಜದಲ್ಲಿ ತಲೆದೋರಿರುವ ರಾಜಕೀಯ,ಧಾರ್ಮಿಕ, ಸಾಮಾಜಿಕ ಜಂಜಾಟಗಳನ್ನು ನಿವಾರಣೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ದಾಸ ಶ್ರೇಷ್ಟ ಕನಕ ದಾಸರಕೀರ್ತನೆಗಳ ತತ್ವ ಸಿದ್ದಾಂತಗಳನ್ನು ಪಾಲಿಸಬೇಕು ಎಂದು ರಾಜ್ಯ ಜೀವಿಶಾಸ್ತ್ರ, ಪರಿಸರ,ಬಂದರು,ಮೀನುಗಾರಿಕೆ,ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಕರೆ ನೀಡಿದ್ದಾರೆ.
ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಮತ್ತು ಕರಾ ವಳಿ ಕುರು ಬರ ಸಂಘ ದ ಆಶ್ರಯ ದಲ್ಲಿ ನಡೆದ ದಾಸವ ರೇಣ್ಯ, ದಾರ್ಶ ನಿಕ ಕವಿ,ಸಂತ ಶ್ರೇಷ್ಟ ರಾದ ಕನಕ ದಾಸರ 523 ನೇ ಜಯಂತಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತ ನಾಡಿ ದರು.ಕನಕ ದಾಸರು ಕೇವಲ ಕುರುಬ ಸಮಾಜಕ್ಕೆ ಮಾತ್ರ ಸೀಮಿತ ರಾದ ವರಲ್ಲ, ಬದ ಲಾಗಿ ಎಲ್ಲಾ ಮನು ಕುಲದ ವರಿಗೂ ಕೀರ್ತನೆ ಗಳ ಮೂಲಕ ಅತ್ಯಂತ ಪ್ರೀತಿ ಪಾತ್ರ ರಾದವರು.6 ನೇ ಶತ ಮಾನ ದಲ್ಲೇ ಮಾನವತಾ ವಾದವನ್ನು ಪ್ರತಿಪಾದಿಸಿದ,ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಾಹಾನ್ ದಾರ್ಶನಿಕ ಎಂದು ಪ್ರಶಂಸಿಸಿದರು.ಕನಕ ದಾಸರ ಜೀವನ ಮತ್ತು ಸಾಹಿತ್ಯ ಕುರಿತು ಕಟೀಲು ಶ್ರಿ ದುರ್ಗಾ ಪರ ಮೇಶ್ವರಿ ಪ್ರಥಮ ದರ್ಜೆ ಕಾಲೇಜಿ ನ ಸಂಸ್ಕೃತ
ರಾಜ್ಯ - ರಾಷ್ಟ್ರ
ಬೆಂಗಳೂರು: ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ...ಇದೀಗ ಭಾರತದ 60 ಸಾವಿರ ಹಳ್ಳಿಗಳಲ್ಲಿ ನಿಸ್ತಂತು ಬ್ರಾಡ್ ಬ್ಯಾಂಡ್ ಸೇವೆಯನ್ನು ಪ್ರಾರಂಭಿಸುವ ಉದ್ದೇಶದಿಂದ ದೂರಸಂಪರ್ಕ ಇಲಾಖೆ ಹರಾಜಿಗೆ ಆಹ್ವಾನ ನೀಡಲು ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ.
ಹರಾಜಿನಲ್ಲಿ ಅತಿ ಕಡಿಮೆ ಮೊತ್ತದಲ್ಲಿ ಭಾಗವಹಿಸಿದವರಿಗೆ ಈ ಯೋಜನೆಯ ಅನುಷ್ಠಾನದ ಭಾಗ್ಯ ದೊರಕಲಿದೆ.ಒಂದೊಮ್ಮೆ ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ದೇಶದ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲದ ಮಹಾಕ್ರಾಂತಿಯಾಗಲಿದೆ.
ರಾಜ್ಯ -ರಾಷ್ಟ್ರ
ಹೈದರಾಬಾದ್ : ಆಂದ್ರ ಪ್ರದೇಶದ ಮುಖ್ಯಮಂತ್ರಿ ಕೆ ರೋಸಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅನಾರೋಗ್ಯ ಕಾರಣದಿಂದ ಕಾರ್ಯನಿರ್ವಹಿಸಲು ತೊಡಕಾಗುತ್ತಿದೆ ಎಂದು ರಾಜೀನಾಮೆ ನೀಡಿರುವುದಾಗಿ ತಿಳಿಸಿದರು.ತನ್ನ 14ತಿಂಗಳ ಅಧಿಕಾರಾವಧಿಯಲ್ಲಿ ಉತ್ತಮ ಆಡಳಿತ ನೀಡಿರುವ ಸಂತೃಪ್ತಿ ಇದೆ ಎಂದ ಅವರು ನಾನು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಆಂಧ್ರಪ್ರದೇಶದ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದವರು ಸ್ಪಷ್ಟಪಡಿಸಿದರು.
ಪ್ರಾದೇಶಿಕ ಸುದ್ದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹದಗೆಟ್ಟ ನಗರ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿ ಮಾಡಲು ಹಾಗೂ ದೊಡ್ಡ ದೊಡ್ಡ ಹೊಂಡಗಳನ್ನು ನವೆಂಬರ್ 10 ರೊಳಗೆ ಮುಚ್ಚಬೇಕೆಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ಗಡುವು ನೀಡಿದ್ದರು. ಈ ಆದೇಶ ಪರಿಪಾಲನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಅಭಿವೃದ್ಧಿ ಕುರಿತ ಸಭೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಲೋಕೋಪಯೋಗಿ, ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪರ್ಕ ವ್ಯವಸ್ಥೆಗೆ ಹಣದ ಕೊರತೆ ಇಲ್ಲ; ಬಿಡುಗಡೆಯಾದ ಹಣವನ್ನು ಸದ್ಬಳಕೆ ಮಾಡುತ್ತಿಲ್ಲ ಎಂದರು. ಜಿಲ್ಲೆಯ ಪ್ರಮುಖ ರಸ್ತೆ (ಎಂ ಡಿ ಆರ್) ಗಳ ಅಭಿವೃದ್ಧಿ ಪ್ರಮಾಣ ಕಡಿಮೆ ಇದೆ ಎಂದರು.
.
ದ.ಕ.ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 13, 48 ಹಾಗೂ 234 ರಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಡಿಸೆಂಬರ್ ಹತ್ತರೊಳಗೆ ಮುಗಿಸಬೇಕು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ರಸ್ತೆಯನ್ನು ಖುದ್ದಾಗಿ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದ ಪ್ರಾಧಿಕಾರದ ಅಧ್ಯಕ್ಷರು, ರಸ್ತೆ ಹೊಂಡ ಮುಚ್ಚಲು ಅನುದಾನವಿಲ್ಲ ಎಂಬ ಸಬೂಬು ಹೇಳಬೇಡಿ ಎಂದರು. ರಾಷ್ಟ್ರೀಯ ಹೆದ್ದಾರಿ 48 ಒಟ್ಟು 74.8 ಕಿ.ಮೀ ಉದ್ದವಿದ್ದು, 54.8 ಕಿ.ಮೀ ಉದ್ದ ರಸ್ತೆಯ ಹೊಂಡ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಶಿರಾಡಿ ಮತ್ತು ಅಮೈ - ಬಿ.ಸಿ.ರೋಡು ಬಳಿ ಹೊಂಡ ಮುಚ್ಚಲಾಗಿಲ್ಲ; ಈ ಪ್ರದೇಶಗಳನ್ನು 3 ವಾರದೊಳಗೆ ಮುಚ್ಚಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ 13 ರ ವ್ಯಾಪ್ತಿ 36.90 ಕಿ.ಮೀನಷ್ಟಿದ್ದು, 28 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ. ಸಾಮಾನ್ಯ ವೆಚ್ಚಕ್ಕೆಂದು ನೀಡಲಾದ 61 ಲಕ್ಷ ರೂ.ಗಳು ಖಚರ್ಾಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತನ್ನ ಮುಂದಿರುವ ಒಂದೇ ಕಾರ್ಯಸೂಚಿ ಎಂದರೆ ರಸ್ತೆಯನ್ನು ವಾಹನ ಓಡಾಟಕ್ಕೆ ಸಜ್ಜುಗೊಳಿಸುವುದು. ಆದ್ದರಿಂದ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದರು. ಎನ್ ಎಚ್ 234ರಲ್ಲಿ 67 ಕಿ.ಮೀ ವಿಸ್ತಾರ ರಸ್ತೆಯಿದ್ದು, 25 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ ಎಂದರು. ಒಂದೊಂದು ರಸ್ತೆಗೆ ಒಬ್ಬೊಬ್ಬ ಅಧಿಕಾರಿಯನ್ನು ಹೊಣೆಯಾಗಿಸಬೇಕು. ಪ್ರತೀ ಬಾರಿ ಅಂತಿಮ ಗಡುವು, ದಿನಾಂಕ ನಿಗದಿ ಮಾಡಲು ತನಗೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ನಾಳೆಯೇ ಎನ್ ಎಚ್ 13 ರಸ್ತೆಯನ್ನು ತನಿಖೆ ಮಾಡಲಿದ್ದೇನೆ ಎಂದರು. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನದಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಅಭಿವೃದ್ಧಿ ಕಾಮಗಾರಿಗೆ ಸಹಕಾರ ಸ್ಪಂದನೆ ನೀಡದ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆಗೆ ವಗರ್ಾವಣೆ ತೆಗೆದುಕೊಂಡು ಹೋಗಬಹುದೆಂದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 120 ರಸ್ತೆಗಳಿದ್ದು, 50 ರಸ್ತೆಗಳನ್ನು ಆದ್ಯತೆಯ ಮೇಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 645.80 ಕಿ.ಮೀ ರಸ್ತೆಯಿದ್ದು, 52 ರಸ್ತೆಗಳ ರಿಪೇರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಾಹಿತಿ ನೀಡಿದರು
ಪ್ರಾದೇಶಿಕ ಸುದ್ದಿ
ಮಂಗಳೂರು:ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿ ಹೊಣೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಮತ್ತು ನಿಗಮದ್ದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಅವರು 22ರಂದು ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ 15 ಅಂಶ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಅಲ್ಪಸಂಖ್ಯಾತರ ಅಭಿವೃದ್ಧಿಗೆಂದೇ ಮೀಸಲಿರಿಸಿರುವ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುವ ಬಗ್ಗೆ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಅವರ ಅಭಿವೃದ್ಧಿಗೆ ಮೀಸಲಿಟ್ಟ ಯೋಜನೆಗಳು, ಅವರಿಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ನಿಗದಿ ಪಡಿಸಿದರಲ್ಲದೆ, ಸಾರ್ವಜನಿಕರಿಂದ ಈ ಸಂಬಂಧ ದೂರುಗಳು ಬರಬಾರದು ಎಂದು ಎಚ್ಚರಿಸಿದರು.
ಮುಂದೆ ನಡೆಯುವ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಾಮಾನ್ಯ ಪ್ರಗತಿ ವರದಿಯನ್ನು ತಾರದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿದ ಯೋಜನೆ ಹಾಗೂ ಗುರಿಸಾಧನೆಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ದೊರಕುವ ಸೌಲಭ್ಯಗಳಾದ ಸ್ವಾವಲಂಬನಾ, ಅರಿವು ಯೋಜನೆಯಡಿ ಅರ್ಹರಿಗೆ ಮಾಹಿತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಬೇಕೆಂದರು. ಶಿಕ್ಷಣ ಇಲಾಖೆ, ಕೈಗಾರಿಕಾ ಅಭಿವೃದ್ಧಿ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಯೋಜನೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಅಧಿಕಾರೇತರ ಸದಸ್ಯರಾದ ಧರಣೇಂದ್ರ ಜೈನ್ ಮತ್ತು ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು.
ಪ್ರಾದೇಶಿಕ ಸುದ್ದಿ
ಗುರುವಾಯನಕೆರೆ: ಸುಧನ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ.)ನಮ್ಮ ಮನೆ ಹವ್ಯಕ ಭವನ ಇದರ ಉದ್ಘಾಟನೆ ನ.22 ಸೋಮವಾರ ಬೆಳಗ್ಗೆ 11ಕ್ಕೆ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಲಿದೆ.ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಕಾಂತಾಜೆ ಈಶ್ವರ ಭಟ್ ವಹಿಸಲಿದ್ದಾರೆ. ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್.ಕೆ.ನಾರಾಯಣ ಭಟ್, ದ.ಕ.ಜಿಲ್ಲೆಯ ಹಿರಿಯ ಸಹಕಾರಿ ಎನ್.ಎಸ್.ಗೋಖಲೆ ಮುಂಡಾಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 23ರಂದು ಶ್ರೀ ಗುರು ಪಾದುಕಾ ಪೂಜೆ ಹಾಗೂ ಗುರು ಭಿಕ್ಷಾ ಸೇವೆ ಕುಂಡಡ್ಕ ಅಂಡಿಂಜೆಯಲ್ಲಿ ನಡೆಯಲಿದೆ. 23ರಂದು ಸಂಜೆ 5ಕ್ಕೆ ಶ್ರೀಗಳ ಆಗಮನ, 7ರಿಂದ ಶ್ರೀ ಕರಾರ್ಚಿತ ಶ್ರೀ ಸೀತಾರಾಮಚಂದ್ರ, ಶ್ರೀ ಚಂದ್ರಮೌಳೀಶ್ವರ ,ಶ್ರೀ ರಾಜರಾಜೇಶ್ವರೀ ದೇವತಾ ಪೂಜೆ, 24ರಂದು ಶ್ರೀ ಗುರು ಪಾದುಕಾ ಪೂಜೆ,ಗೋಪೂಜೆ,ಶ್ರೀ ಗುರುಭಿಕ್ಷಾ ಸೇವೆ, ಮಧ್ಯಾಹ್ನ 11ರಿಂದ ಶ್ರೀಗಳವರಿಂದ ಆಶೀರ್ವಚನ, ಮಂತ್ರಾಕ್ಷತಾ ಕಾರ್ಯಕ್ರಮಗಳು ನಡೆಯಲಿವೆ.
ವೈವಿಧ್ಯ
ಒಂದನೇ ಜಾಗತಿಕ ಯುದ್ಧ, ಎರಡನೆಯ ಜಾಗತಿಕ ಯುದ್ಧದ ಬಗ್ಗೆ ನಾವೆಲ್ಲ ತಿಳಿದಿದ್ದೇವೆ. ಅದನ್ನು ಓದಿದವರು, ಅರಿತುಕೊಂಡವರೆಲ್ಲರೂ ಮೂರನೆಯ ಜಾಗತಿಕ ಯುದ್ಧ ನಡೆಯುವುದು ಬೇಡವೆನ್ನುತ್ತಾರೆ. ಯಾರೂ ಯುದ್ಧವನ್ನು ಬಯಸುತ್ತಿಲ್ಲ.ಪ್ರತಿಯೊಂದು ಹೃದಯ ಶಾಂತಿಯನ್ನೇ ಅರಸುತ್ತಿವೆ. ಅದನ್ನೇ ಬಯಸುತ್ತಿವೆ. ಪ್ರತಿಯೊಬ್ಬರು ಜಾಗತಿಕ ಶಾಂತಿಯೇ ಗುರಿಯಾಗಿಸಿದ್ದಾರೆ. ಅದಕ್ಕಾಗಿ ಪಣತೊಡುತ್ತಿದ್ದಾರೆ.
ಯಾವನೇ ಒಬ್ಬ ವ್ಯಕ್ತಿ ಶಾಂತಿ ಸಮಾಧಾನವಿಲ್ಲದೆ ಬದುಕಲು ಸಾಧ್ಯವಿಲ್ಲ. ಇದು ನಂಬಲರ್ಹ ಕಟು ಸತ್ಯ. ಶಾಂತಿ ಸಮಾಧಾನ ಇಲ್ಲದಿದ್ದರೆ ಅವನ ಅಂತ್ಯಕ್ಕೆ ಅವನೇ ಕಾರಣನಾಗುತ್ತಾನೆ. ಇಲ್ಲವೇ ಇತರರು ಅವನ ಸಾವಿಗೆ ಕಾರಣರಾಗುತ್ತಾರೆ. ಏನೇ ಆದರೂ ಅಲ್ಲಿ ಎಳ್ಳಷ್ಟು ಶಾಂತಿಯನ್ನು ಕಾಣಲು ಸಾಧ್ಯವಿಲ್ಲ. ಒಟ್ಟಾರೆ ಶಾಂತಿ ಇಲ್ಲವೆಂದರೆ ಬದುಕು ದುರ್ಬರ. ಇಷ್ಟಕ್ಕೂ ಶಾಂತಿ ಅಥವಾ ಇಂಗ್ಲೀಷ್ನಲ್ಲಿ ಹೇಳುವ 'ಪೀಸ್' ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದುಕೊಳ್ಳುತ್ತೀರಾ? ಅಂದಹಾಗೆ ಇಂದು ಜಾಗತಿಕ ಹಲೋ ಡೇ.
ಅಂದರೆ ವಿಶ್ವಶಾಂತಿ ಡೇ. ಇಂದು 38ನೇ ವಿಶ್ವ ಹಲೋ ದಿನವನ್ನು ಆಚರಿಸಲಾಗುತ್ತಿದೆ. ನಾವು ನಮ್ಮ ಪರಿಚಯಸ್ಥರಿಗೆ ಅಭಿನಂದಿಸಲು, ಹಾರೈಸಲು ಬಳಸುವ ಹಲೋ ಪದ ಕಳೆದ ನಾಲ್ಕು ದಶಕಗಳಿಂದ ಶಾಂತಿಗಾಗಿ ಪಣತೊಡುತ್ತಿದೆ. ಹತ್ತು ಮಂದಿಗೆ 'ಹಲೋ' ಎಂದು ಹಾರೈಸುವ ಮೂಲಕ ನಾವು ವಿಶ್ವ ಶಾಂತಿಯನ್ನು ಬೆಂಬಲಿಸಬಹುದು.
ಸಂಬಂಧಗಳು ದೂರವಾಗುತ್ತಿರುವ ಈ ಕಾಲ ಘಟ್ಟದಲ್ಲಿ ಈ ಸಂಬಂಧಗಳನ್ನು ಬೆಸೆದು, ಸಂವಹನವನ್ನು ವೃದ್ಧಿಸಿ ಎಲ್ಲೆಡೆ ಶಾಂತಿಯನ್ನು ನೆಲೆಸುವಂತೆ ಮಾಡುವುದೇ ಈ ಹಲೋ ದಿನದ ಪ್ರಮುಖ ಉದ್ದೇಶ. ಶಾಂತಿಪ್ರಿಯ ದೇಶದಲ್ಲಿ ಜನ್ಮ ಪಡೆದದಕ್ಕಾಗಿ ನಾವು ಈ ವಿಶ್ವ ಶಾಂತಿಯನ್ನು ಹಾರೈಸುವ ಕಾರ್ಯಕ್ಕೆ ಕೈ ಜೋಡಿಸುವ. ನಾವೂ ಶಾಂತಿಯನ್ನು ಪ್ರತಿಪಾದಿಸುವ ಅಲ್ಲವೇ.... ದಿನಕ್ಕೆ ನಮಗೆ ಇದಿರಾಗುವ ಮಂದಿ ಹಲವರು. ಅವರೂ ನಮ್ಮವರೇ ಎಂದು ಅವರಿಗೆ ಹಾರೈಸುವ ಮುಖಾಂತರ ವಿಶ್ವ ಶಾಂತಿ ದಿನದಲ್ಲಿ ನಾವೂ ಪಾಲ್ಗೊಳ್ಳುವ.
- ನವ್ಯ
ರಾಜ್ಯ - ರಾಷ್ಟ್ರ
ನವೆಂಬರ್ 20, 2011
ಬೆಳ್ತಂಗಡಿ: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿರುಮಲೇಶ್ವರ ಭಟ್ ಬಾರಿಗೆ ಮನೆಯಲ್ಲಿ ಮೊಕ್ಕಾಂ ಹೂಡಿದ್ದು, ಸಮಸ್ತ ಹವ್ಯಕ ಸಮುದಾಯಕ್ಕೆ ಶುಭಾಶೀರ್ವಾದಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ್ದಾರೆ. ಇಂದು ಶ್ರೀಗಳು ಬಾರಿಗೆ ಮನೆಯಲ್ಲಿ ಬೆಳಗ್ಗೆ ೧೧.೩೦ ರಿಂದ ೦೧.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಆಶೀರ್ವಚನ ನೀಡಲಿದ್ದು ಸಮಸ್ತ ಶಿಷ್ಯವೃಂದಕ್ಕೆ ಮಂತ್ರಾಕ್ಷತೆ ನೀಡಿ ಹರಸಲಿದ್ದಾರೆ. ಸಾಯಂಕಾಲ ೦೩.೪೫ ರಿಂದ ೦೪.೪೫ ಸಂದರ್ಭ ಶ್ರೀ ಭಾರತೀವಿದ್ಯಾ ಸಂಸ್ಥೆ, ಉರುವಾಲು ಇಲ್ಲಿಗೆ ಶ್ರೀ ಗುರುಗಳು ಭೇಟಿ ನೀಡಲಿದ್ದಾರೆ. ೦೪.೪೫ ರಿಂದ ೦೫.೩೦ ಪ್ರಯಾಣ- ನಮ್ಮಮನೆ ಹವ್ಯಕ ಭವನ -ಗುರುವಾಯನಕೆರೆ. ಇಂದು ಶ್ರೀ ಗುರುಗಳು ನಮ್ಮ ಮನೆ ಹವ್ಯಕ ಭವನದಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಭಕ್ತಿ ಸಿಂಚನ
ಎಂಟು ಒಂದಾಯಿತು..ಕೊನೆಯೇ ಮೊದಲಾಯಿತು…!!
|| ಹರೇ ರಾಮ ||
ದೀಪ ಬೆಳಗಬೇಕು..
ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು..
ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು..
ತಾನು ಆರಿ ದೀಪವನ್ನು ಉರಿಸಬೇಕು…
ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು..
ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು..
ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!!
ತಾವು ಮರೆಯಲ್ಲಿ ನಿಂತು ಸಕಲ ಕೈಂಕರ್ಯವನ್ನೂ ನಡೆಸಿ ದೀಪವನ್ನು ಮೆರೆಸಿದವು..
ದಶರಥನೆಂಬ ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಆ ಕಾರಣಪುರುಷರನ್ನು – ತ್ಯಾಗಜೀವಿಗಳನ್ನು – ಎಲೆಮರೆಯ ಕಾಯಿಗಳನ್ನು ಇಲ್ಲಿ ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ..!
ಅವರೇ ವೀರದಶರಥನ ವಿವೇಕೀ ಮಂತ್ರಿಗಳು..!
’ಮಂತ್ರಿಣಃ ಸಪ್ತ ವಾಷ್ಟೌ ವಾ ಪ್ರಕುರ್ವೀತ ಪರೀಕ್ಷಿತಾನ್ ’
“ಏಳು ಅಥವಾ ಎಂಟು ಸುಯೋಗ್ಯ ವ್ಯಕ್ತಿಗಳನ್ನು ಚೆನ್ನಾಗಿ ಪರೀಕ್ಷಿಸಿ ಮಂತ್ರಿಗಳನ್ನಾಗಿ ನೇಮಿಸಿಕೊಳ್ಳಬೇಕು”.. ಇದು ಮನುವಚನ..
ಅದರಂತೆ ದಶರಥನ ಆಸ್ಥಾನದಲ್ಲಿ ಎಂಟು ಮಂತ್ರಿಗಳು..
೧. ಧೃಷ್ಟಿ
೨. ಜಯಂತ
೩. ವಿಜಯ
೪. ಸಿದ್ಧಾರ್ಥ
೫. ಅರ್ಥಸಾಧಕ
೬. ಅಶೋಕ
೭. ಮಂತ್ರಪಾಲ
ಎಂಟನೆಯವನೇ ಸಾರಥ್ಯ- ಸಾಚಿವ್ಯಗಳನ್ನು ಜೊತೆಜೊತೆಗೇ ನಿರ್ವಹಿಸುತ್ತಿದ್ದ ’ಸುಮಂತ್ರ’..
ಶ್ರಮ-ವಿಶ್ರಮಗಳ ಪರಿವಿಲ್ಲದೆಯೇ, ಅನವರತವಾಗಿ ಧರಿತ್ರಿಯ ಭಾರವೆಲ್ಲವನ್ನೂ ಹೊರುವ ಅಷ್ಟದಿಗ್ಗಜಗಳನ್ನು ನೆನಪಿಸುವಂತಿದ್ದರು ಸಾಕೇತ ಸಾಮ್ರಾಜ್ಯದ ಸರ್ವಭಾರವನ್ನೂ ಹೊತ್ತು ನಡೆಸುತ್ತಿದ್ದ ದಶರಥನ ಅಷ್ಟ ಸಚಿವರು..
ಮಂತ್ರಿಗಳಂಥವರಿದ್ದರೆ ’ದಶರಥ ರಾಜ್ಯ’ವೇನು,”ರಾಮರಾಜ್ಯ’ವೂ ಅಸುಕರವಲ್ಲ..!!
ಯೋಗ್ಯತೆ-ಯೋಗಗಳು ಜೊತೆಗಿರುವುದೇ ಸೊಗಸು..
ಯೋಗ್ಯತೆಯಿದ್ದು ಯೋಗವಿಲ್ಲದಿದ್ದರೆ ಅದು ಅತೃಪ್ತಿ..
ಯೋಗ್ಯತೆಯಿಲ್ಲದೆಯೇ ಬರುವ ಯೋಗ , ಅದು ನೆಮ್ಮದಿಯ ವಿಯೋಗ..!!
ಅದು ಸಂಪತ್ತಿನ ವೇಷ ತೊಟ್ಟು ಬರುವ ಆಪತ್ತು..!!
ಅದು ವ್ಯಕ್ತಿಗೆ ವಿನಾಶ… ಸಮಾಜಕ್ಕೆ ಕೇಡು..!!
ಯೇನ ಕೇನ ಪ್ರಕಾರೇಣ ಖುರ್ಚಿಯನ್ನಾಶ್ರಯಿಸಬಯಸುವವರರಿಯದ ಸತ್ಯವಿದು..!!
ಯೋಗ್ಯತೆಯೇ ಯೋಗವಾಗಿ ಪರಿಣಮಿಸಿದರೆ.. ಆತ್ಮಕಲ್ಯಾಣ.. ಲೋಕಕಲ್ಯಾಣ ಒಟ್ಟೊಟ್ಟಿಗೇ..!!
ದಶರಥನ ಮಂತ್ರಿಗಳ ಯೋಗ್ಯತೆಯು ಕೋಸಲದ ಶುಭಯೋಗವಾಗಿ ಪರಿಣಮಿಸಿತು…
ಆಯಾ ಪಾತ್ರಕ್ಕೆ ಬೇಕಾದ ವೇಷಭೂಷಣಗಳೊಂದಿಗೆ ಸಜ್ಜಾಗಿಯೇ ನಟನೊಬ್ಬ ರಂಗವನ್ನೇರುವಂತೆ, ಸಚಿವತ್ವಕ್ಕೆ ಬೇಕಾದ ಸಕಲ ಅರ್ಹತೆಗಳನ್ನೂ ಸಾಧನೆ ಮಾಡಿಯೇ ಆ ಸ್ಥಾನವನ್ನೇರಿದ್ದರವರು..
ಪ್ರಾಮಾಣಿಕತೆಯೇ ದುರ್ಲಭ..
ಪ್ರಾಮಾಣಿಕರೆಲ್ಲ ಸಮರ್ಥರಲ್ಲ..
ಪ್ರಾಮಾಣಿಕತೆ – ಸಾಮರ್ಥ್ಯಗಳೆರಡೂ ಇದ್ದವರು ವಿಧೇಯರಲ್ಲ..
ಮೂರೂ ಕೂಡಿದರೆ ಪೂರ್ವ ಸುಕೃತವದು..
ಅಂಥ ಸೇವಕರನ್ನು ಪಡೆಯಲು ಸ್ವಾಮಿಯೇ ಪುಣ್ಯ ಮಾಡಿರಬೇಕು..!!
ಧನ್ಯ ದಶರಥ..!
ಆತನ ಮಂತ್ರಿಗಳಂಥವರು…!
ಮಂತ್ರಿಯೆಂದರೆ ಮಂತ್ರಕ್ಕೊದಗುವವನು..
ಮಂತ್ರವೆಂದರೆ ರಾಜ್ಯಹಿತದ ಗುಪ್ತಸಮಾಲೋಚನೆ..
ಹಲವು ಪರಿಣತರ ಹಲವು ಬಗೆಯ ಚಿಂತನೆಗಳು ಹೊರಸೂಸಿ, ಕಲೆತು, ಮಥನವೇರ್ಪಟ್ಟು, ಹೊರಹೊಮ್ಮುವ ಸಮೀಚೀನವಾದ ನಿರ್ಣಯವದು..
ವಸ್ತುವೊಂದನ್ನು ಸಮಗ್ರವಾಗಿ ತಿಳಿಯಲು ಒಂದು ದೃಷ್ಟಿ ಪರ್ಯಾಪ್ತವಲ್ಲ..
ಹಿಂದೆ….. ಮುಂದೆ…
ಆಚೆ….. ಈಚೆ….
ಮೇಲೆ…… ಕೆಳಗೆ……
ಒಳಗೆ….. ಹೊರಗೆ…….
ಹೀಗೆ ಬಗೆ ಬಗೆಯ ನೋಟಗಳು ಕಲೆತು ಒಂದು ನೋಟವಾದಾಗಲೇ ವಸ್ತುವಿನ ಸಮಗ್ರದರ್ಶನವಾಗುವುದು..
ಹಲವು ನದಿಗಳು ಸ್ವತಂತ್ರವಾದ ಅಸ್ತಿತ್ವದೊಡನೆ – ವ್ಯಕ್ತಿತ್ವದೊಡನೆ ಹರಿಯುತ್ತವೆ..
ಕೊನೆಯಲ್ಲಿ ಸಾಗರದೊಡನೆ ಸಂಗಮಗೊಳ್ಳುತ್ತವೆ..
ಸಮರಸವಾಗುತ್ತವೆ.. ಏಕರಸವಾಗುತ್ತವೆ..
ಹಾಗೆಯೇ ಮಂತ್ರಾಲೋಚನೆಯಲ್ಲಿ ಹಲವರ ಹಲವು ಸ್ವತಂತ್ರ ಚಿಂತನೆಗಳು ಹರಿಯಬೇಕು..
ಕೊನೆಗೊಂದು ಮಹಾನಿರ್ಣಯದಲ್ಲಿ ಸಮರಸವಾಗಿ ಸಮನ್ವಿತವಾಗಬೇಕು…
ಕಾಲಿಡುವಲ್ಲಿ ಮೊದಲು ಕಣ್ಣಿಡಬೇಕಲ್ಲವೇ..?
’ದೃಷ್ಟಿಪೂತಂ ನ್ಯಸೇತ್ ಪಾದಂ’..
ಕಣ್ಣೆಡವಿದರೆ ಮತ್ತೆ ಕಾಲೆಡುವುವುದು ಸ್ವಾಭಾವಿಕವಲ್ಲವೇ..?
ಚೆನ್ನಾಗಿ ನೋಡಿಕೊಳ್ಳಬೇಕಾದುದನ್ನು ಮೊದಲು ಚೆನ್ನಾಗಿ ನೋಡಬೇಕಲ್ಲವೇ..?
ಆ ಮುನ್ನೋಟವೇ – ಯಾವುದೇ ಕಾರ್ಯದ ಪೂರ್ವಾವಲೋಕನವೇ ’ಮಂತ್ರ’ ಅಥವಾ ಮಂತ್ರಾಲೋಚನೆ..
ರಾಜ್ಯಭಾರಕ್ಕೆ ಮಂತ್ರವೇ ಮೂಲಾಧಾರ..
ಮಂತ್ರದ ಪರಿಚಯ ಬೇಕೇ..?
ಮಂತ್ರಾಲೋಚನೆಯ ಪ್ರಾರಂಭ – ಪ್ರಯೋಗ – ಪರಿಣಾಮಗಳ ಬಗೆಗೆ ತಿಳಿದುಕೊಳ್ಳಬೇಕೆ..?
ದಶರಥನ ಮಂತ್ರಿಗಳ ನಾಮಧೇಯಗಳನ್ನು ಒಮ್ಮೆ ಕೊನೆಯಿಂದ ಮೊದಲವರೆಗೆ ಅವಲೋಕಿಸಿದರೆ ಸಾಕು..!!
ಮಂತ್ರಗಳೆರಡು ಬಗೆ, ‘ಸುಮಂತ್ರ-ದುರ್ಮಂತ್ರ‘ ಎಂಬುದಾಗಿ..
ತಪ್ಪು ಸಲಹೆಗಳು, ತಪ್ಪುದಾರಿಯಲ್ಲಿ ನಡೆಯುವ ಸಂವಾದ, ತತ್ಫಲವಾದ ತಪ್ಪು ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ದುರ್ಮಂತ್ರ’..
ಸೂಕ್ತ ಸಲಹೆಗಳು, ಸಮುಚಿತ ಸಂವಾದ, ಸಮರ್ಪಕ ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ಸುಮಂತ್ರ’..
’ಷಟ್ಕರ್ಣೋ ಭಿದ್ಯತೇ ಮಂತ್ರಃ’..
ಇಬ್ಬರ ನಡುವೆ ನಡೆಯುವ ಸಂಭಾಷಣೆಯು ಆರು ಕಿವಿಗಳನ್ನು , ಎಂದರೆ ಮೂರನೆಯ ವ್ಯಕ್ತಿಯನ್ನು ತಲುಪಲೇಬಾರದು..
ತಲುಪಬಾರದಲ್ಲಿ ವಿಷಯಗಳು ತಲುಪಿದರೆ ಮೂಲಘಾತವೇ ಆದೀತು..!
ಆದುದರಿಂದಲೇ ’ಸುಮಂತ್ರ’ ಎಷ್ಟು ಮುಖ್ಯವೋ, ಮಂತ್ರಾಲೋಚನೆಯ ಗೌಪ್ಯಪಾಲನೆಯೂ ಅಷ್ಟೇ ಮುಖ್ಯ..
ಅದುವೇ ’ಮಂತ್ರಪಾಲ’
ಸಮಸ್ಯೆಗಳು ಬಂದು ಮುಸುಕಿದಾಗ, ಪರಿಹಾರ ತೋರದಾದಾಗ ಶೋಕವು ಮನುಷ್ಯನನ್ನು ಬಾಧಿಸುವುದುಂಟು..
ಮುಂದೇನು ಮಾಡಬೇಕೆಂಬುದೇ ತಿಳಿಯದ ದಿಙ್ಮೂಢಾವಸ್ಥೆಯು ಆವರಿಸುವುದುಂಟು..
ಆಗ ನಮ್ಮ ನೆರವಿಗೆ ಬರುವುದೇ ’ಮಂತ್ರ’
ಆಪ್ತಸಮಾಲೋಚನೆಯಿಂದ ಮುಂದಿನ ದಾರಿ ನಮಗೆ ಸುಜ್ಞಾತವಾಗಬೇಕು..
ಆದರೆ ಬೇರೆಯವರಿಗೆ ನಮ್ಮ ಮುಂದಿನ ಹೆಜ್ಜೆಯೇನೆಂಬುದು ಅಜ್ಞಾತವಾಗಿಯೇ ಇರಬೇಕು..
ಹಾಗಾದಾಗ – ಸಮಾಲೋಚನೆಯ ’ಸುಮಂತ್ರಾವಸ್ಥೆ’ ಮತ್ತು ಗೌಪ್ಯ ರಕ್ಷಣೆಯ ’ಮಂತ್ರಪಾಲಾವಸ್ಥೆ’ಯ ನಂತರ ಮನಸ್ಸಿಗೆ ಬರುವ ನಿರಾಳ ಸ್ಥಿತಿಯೇ – ಕಾರ್ಯಧೈರ್ಯವೇ ‘ಅಶೋಕ‘
ಮುಂದಿನದು ಅತ್ಯಂತ ಮುಖ್ಯವಾದ ಘಟ್ಟ..
ಕಾರ್ಯಸಾಧನೆ…
ಅಂತರಂಗದಲ್ಲಿ ಅನಾವರಣಗೊಂಡ ಯೋಜನೆಗಳೆಲ್ಲವೂ ಬಹಿರಂಗದಲ್ಲಿ ಒಂದಿನಿತೂ ವ್ಯತ್ಯಯವಿಲ್ಲದಂತೆ ಕ್ರಿಯಾನ್ವಯಗೊಳ್ಳಬೇಕು…
’ವಿಚಾರ’ವು ’ಆಚಾರ’ಕ್ಕೆ ಬರಬೇಕು..
ಅದು ’ಅರ್ಥಸಾಧಕ’..
ಮತ್ತೆ ಬರುವುದು ’ಕಾರ್ಯಸಿದ್ಧಿ’ಯ ಅವಸ್ಥೆ..
ಯೋಜನೆ (ಪ್ಲಾನ್) ಸಮರ್ಪಕವಾಗಿದ್ದಾಗ, ಕ್ರಿಯಾನ್ವಯನ(ಎಕ್ಸಿಕ್ಯೂಷನ್)ದಲ್ಲಿ ತಪ್ಪುತಡೆಗಳಿಲ್ಲದಾಗ, ಬಂದೇಬರುವ ಸುಫಲವು ’ಸಿದ್ಧಾರ್ಥಾವಸ್ಥೆ’..
ಕಾರ್ಯಸಿದ್ಧಿಯ ಫಲವಾಗಿ ಉಂಟಾಗುವ ಪರಮೋತ್ಕರ್ಷವು ’ವಿಜಯ’..
ವಿಜಯವು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ ಅದು ’ಜಯಂತ’..
ಬದುಕೆಂಬುದು ಪ್ರತಿಕ್ಷಣದ ಸವಾಲು..
ಸಮುದ್ರದ ತೆರೆಗಳಿಗೆ ಹೇಗೆ ಸಮಾಪ್ತಿಯೆಂಬುದಿಲ್ಲವೋ ಹಾಗೆಯೇ ಜೀವನದ ಸಂಗ್ರಾಮಗಳಿಗೆ ಸಮಾರೋಪವೆಂಬುದಿಲ್ಲ..
ಮೇಲೆ ಹೇಳಿದ ವಿಧಾನಗಳಿಂದ ಬದುಕಿನಲ್ಲಿ ಮತ್ತೆ ಮತ್ತೆ ಬರುವ ಸವಾಲುಗಳನ್ನು ಮತ್ತೆ ಮತ್ತೆ ಮೀರಿ ನಿಲ್ಲುವ ಯಶೋಮಾಲಿಕೆಯ ಅವಸ್ಥೆಯೇ ’ಜಯಂತ’..
ಇವೆಲ್ಲವುಗಳ ಪರಿಪೂರ್ಣತೆಯು ’ಧೃಷ್ಟಿ’ಯಲ್ಲಿ..
ಧೃಷ್ಟಿಯೆಂದರೆ ಪ್ರಾಗಲ್ಭ್ಯ – ಪರಿಪೂರ್ಣತೆ …
ಕಾರ್ಯಪರಂಪರೆಯನ್ನೇ ಸಾಧನೆ ಮಾಡಿದ ಆತ್ಮವಿಶ್ವಾಸ..
ಮೂಜಗವೇ ಇದಿರಾದರೂ ಗೆಲ್ಲುವೆನೆಂಬ ಧೈರ್ಯ..
ಸಕಲ ಜಗತ್ತಿನ ಮಧ್ಯೆ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುವ ಪ್ರಗಲ್ಭ ಸ್ಥಿತಿ..!!
ಎಂಟಲ್ಲ…ಒಂದು..!
ಅಯೋಧ್ಯೆಯ ಸಚಿವರು ಎಂಟಾದರೂ ಎಂಟಲ್ಲ..
ಒಂದೇ ವಿಕಾಸದ ಎಂಟು ಮೆಟ್ಟಿಲುಗಳು..
ಕೊನೆಯು ಕೊನೆಯಲ್ಲ… ಅದುವೇ ಮೊದಲು..!!
ಕೊನೆಯವನಾದ ಸುಮಂತ್ರನೇ ಮೊದಲಿಗನಾಗುವ ಚಿಂತನೆಯ ಈ ಪರಿಯನ್ನು ಅವಲೋಕಿಸಿದರೆ ಸಾಮಾನ್ಯರ ಹೋರಾಟವು ಎಲ್ಲಿ ಕೊನೆಗೊಳ್ಳುವುದೋ ಅಲ್ಲಿಯೇ ಈ ಸಾಧಕರ ಹೋರಾಟದ ಆರಂಭವೆಂಬುದು ಸ್ಫುಟವಾಗುವುದಿಲ್ಲವೇ..?
ದಶರಥನು ಅಯೋಧ್ಯೆಯ ಶಿರದಂತಿದ್ದರೆ.. ಶಿರದೊಳಗಿನ ಮಿದುಳಿನಂತಿದ್ದ ಆತನ ಮಂತ್ರಿಗಳ ಸಾಮರ್ಥ್ಯ ಕರ್ತವ್ಯಪರಾಯಣತೆಗಳಿಂದಾಗಿ-
ಅವನಿಯ ಅಗಣಿತ ರಾಷ್ಟ್ರ ನಗರಗಳ ನಡುವೆ ಶಿರವೆತ್ತಿ ನಿಂತವು ಅಯೋಧ್ಯೆ- ಕೋಸಲಗಳು..!!
|| ಹರೇ ರಾಮ ||
(ಶ್ರೀ ಗುರುಗಳ ದಿನಚರಿಯೂ ಸೇರಿದಂತೆ ಶ್ರೀ ಮಠದ ಮಾಹಿತಿಗಳು ಹರೇ ರಾಮ.ಇನ್ ವೆಬ್ ನಲ್ಲಿ ಲಭ್ಯವಿದೆ. ಶ್ರೀ ಗುರುಗಳು ಎಲ್ಲಿದ್ದಾರೆ ಹೇಗಿದ್ದಾರೆ ಎಂಬ ಜಿಜ್ಞಾಸೆಹೊಂದಿದವರು ನೇರವಾಗಿ ಹರೇ ರಾಮ.ಇನ್ ಲಾಗ್ ಇನ್ ಮಾಡಬಹುದು. ಅಲ್ಲಿ ದಿನಚರಿಯಲ್ಲಿ ಲಭ್ಯವಿದೆ. )
ವೈವಿಧ್ಯ
ಗಿರಿಕನ್ಯೆಯ `ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ'
ನನಗಾಗ ಶಾಲೆಯ ಮೆಟ್ಟಿಲು ಹತ್ತುವ ವಯಸ್ಸು. ನಮ್ಮದು ಕುಗ್ರಾಮವೆಂದರೆ ಕುಗ್ರಾಮ. ಆದರೆ ಹಸಿರು ವನರಾಶಿಯಿಂದ ಸದಾ ಕಂಗೊಳಿಸುವ ಸೌಂದರ್ಯವಂತೆ ಆ ಊರು. ಆಗಿನ್ನೂ ಸಂಪರ್ಕ ಸಾಧನಗಳಾವುದು ಇರಲಿಲ್ಲವಾಗಿ ಜನರಿಗೆ ಕಾಲ್ನಡಿಗೆಯೆ ಗತಿ. ಊರು ಅನ್ನುವುದಕ್ಕೆ ಒಂದು ರಸ್ತೆ, ನೆಪಮಾತ್ರಕ್ಕೆ!
ಹೊಂಡ, ಕಲ್ಲುಗಳ ಪಾದಾಚಾರಿಗೂ ನಡೆಯುವುದಕ್ಕೂ ಕಷ್ಟವಾದ ದಾರಿ ಅದು. ಆ ದಾರಿಯಲ್ಲಿ ಶ್ರೀ ಮಂಜುನಾಥ ಮೋಟಾರ್ ಸರ್ವೀಸ್ ಕಂಪನಿಯ ಉದ್ದ ಮೂತಿಯ ಒಂದೇ ಒಂದು ಬಸ್ಸು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಹಾಗಂತ ಯಾರೂ ಆ ಬಸ್ಸಿಗೆ ಕಾಯುವುದು ಇಲ್ಲ. ಬಸ್ಸು ಬಂದರೆ ಹತ್ತಿಕೊಂಡು ಉಡುಪಿಗೋ ಶಿರ್ವಕ್ಕೊ ಹೋದಾರು. ಆಗಿನ ಕಾಲಕ್ಕೆ ಅದರ ಅನಿವಾರ್ಯತೆ ಇರಲಿಲ್ಲ ಅನ್ನುವಷ್ಟರ ಮಟ್ಟಿಗೆ.
ಅಂತಹ ನಮ್ಮ ಕಾಡುಗುಡ್ಡ ಹಳ್ಳಿಗೆ ಒಂದು ದಿನ ಸಿಟಿಯ ಜನರ ದಿಂಡು ಬಂದು ಬಿಟ್ಟಿತು. ನಮಗೆಲ್ಲಾ ಆಶ್ಚರ್ಯ. ಅವರ ವೇಷಭೂಷಣ, ಸ್ಟೈಲು, ಮಾತುಕತೆ ಎಲ್ಲಾ ಎಲ್ಲಾ ವಿಚಿತ್ರ ಅನಿಸಿಬಿಟ್ಟಿತು.
ಊರಿಗೆ ಏನಾದರೊಂದು ಹೊಸ ವಾಹನ ಬಂದ್ರೆ ಅದು ಮಕ್ಕಳನ್ನು ಕದ್ದೊಯ್ಯುವ `ಕಳ್ಳರ ವಾಹನ' ಅಂತಲೆ ಊರವರ ಅಭಿಪ್ರಾಯ. ಊರಿನ ಪ್ರಮುಖರು ಬಂದ ವಾಹನವನ್ನು ನಿಲ್ಲಿಸಿ, ವಿಚಾರಿಸಿ ವ್ಯಕ್ತಿಗಳ ಬಗೆ ತಿಳಿದುಕೊಂಡ ಬಳಿಕವೆ, `ಇಂತವರು ಊರಿಗೆ ಬಂದಿದ್ರು' ಅನ್ನುವ ಗಾಬು ಊರಿಗೆ ಹರಡುತ್ತಿತ್ತು.
ಹಳ್ಳಿಯಲ್ಲಿ ಮನೆಗಳೆಂದರೆ ಎರಡು ಮೂರು ಫರ್ಲಾಂಗುಗಳಿಗೆ ಒಂದು ಮನೆ. ತೊಡಮೆ, ತೋಡು, ಕಾಲುಸಂಕ, ವಳಚ್ಚಿಲ್, ಗುಡ್ಡ, ಕಾಡುಗಳನ್ನು ದಾಟಿ ಮನೆಯನ್ನು ತಲುಪಬೇಕಾದ ಪರಿಸ್ಥಿತಿ. ಕಾಲು ದಾರಿ ಬಿಟ್ಟರೆ ಊರಿಗೆ ರಸ್ತೆಯೆಂದರೆ ಸುಭಾಸ್ ನಗರದಿಂದ ಬಂಟಕಲ್ ಕ್ರಾಸ್ ರೋಡ್ ವರೆಗಿನ ಒಂದು ಮಣ್ಣಿನ ರಸ್ತೆಯಷ್ಟೆ. ಊರಿನವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅಭಿವೃದ್ಧಿಯೆಂದರೆ ಅದು ಅಪಾಯಗಳಿಗೆ ಆಹ್ವಾನವೆಂದೆ ತಿಳಿದಿದ್ದರು ಅನ್ಸುತ್ತೆ. ಅದಕ್ಕಾಗಿ ರಸ್ತೆಯಾಗಲಿ, ಸರಿಯಾದ ದಾರಿಯನ್ನಾಗಲಿ ಮಾಡುವುದಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಅವರ ಜಾಗೆಯನ್ನೂ ಬಿಟ್ಟು ಕೊಡುತ್ತಿರಲಿಲ್ಲ. ಇವತ್ತಿನ ಹಾಗೆ ಪಂಚಾಯತುಗಳು ಆಗಿನ್ನೂ ಬೆಳೆದಿರಲಿಲ್ಲ. ಇದ್ದರೂ ಅಭಿವೃದ್ಧಿಗೆ ಅವಕಾಶವನ್ನು ನೀಡುತ್ತಿರಲಿಲ್ಲ.
ಅಂತಹ ನಮ್ಮ ಹಳ್ಳಿಗೆ ಇನ್ನೊಂದು ಹೆಸರು ಬೊಲ್ಲೆ (ಬೆಳ್ಳೆ ಹೆಸರಿನ ತುಳು ಉಚ್ಛಾರ). ಊರಿನ ಪೂರ್ವದಿಂದ ಉತ್ತರ ದಿಕ್ಕಿನವರೆಗೂ ಪಾಪನಾಶಿನಿ ನದಿ ಹರಿಯುವುದರಿಂದ ಕೃಷಿ ಪ್ರಧಾನವಾದ ಊರು ನಮ್ಮದು. ಭತ್ತದ ಬೆಳೆ ಮತ್ತು ತೆಂಗಿನಬೆಳೆಗಳನ್ನು ಬಿಟ್ಟರೆ ಉಳಿದಂತೆ ಸೊಪ್ಪು ತರಕಾರಿಯನ್ನು ಬೆಳೆಯುವುದು ಸರ್ವೇ ಸಾಮಾನ್ಯ. ಆ ನದಿಯ ಹತ್ತಿರದಲ್ಲಿ ಅಂದರೆ ಉತ್ತರ ದಿಕ್ಕಿಗೆ ಬೊಲ್ಲೆದಂಗಡಿ. ಅದು ಊರಿನ ಒಂದೇ ಒಂದು ಗೌಡ ಸಾರಸ್ವತ ಬ್ರಾಹ್ಮಣರ ಮನೆ. ಅಲ್ಲಿಯ ಯಜಮಾನರ ಬಗೆಯಾಗಲಿ ಅಥವಾ ಅವರ ಮನೆಯವರ ಹೆಸರಾಗಲಿ ಊರಿನವರಿಗೆ ಗೊತ್ತಿಲ್ಲವಾದರೂ ಅದು ಬೊಲ್ಲೆದಂಗಡಿಯಂತೆಲೆ ಫೇಮಸ್ಸು. ಒಳ್ಳೆಯ ಮನೆತನ. ಬೊಲ್ಲೆದಂಗಡಿಯೆಂದರೆ ಎಲ್ಲರಿಗೂ ಗೌರವ. ದಿನಸಿ ಸಾಮಾನಿಗೆ ಮಾತ್ರವಲ್ಲ ಮೊದಲು ಅಕ್ಕಿ ಮಿಲ್ಲು ಬಂದಂದು ಅಲ್ಲಿಯೆ. ಹಾಗಾಗಿ ಅದು ಒಂದು ಮೂಲೆಯಲ್ಲಿದ್ದರೂ ಜನರಿಗೆ ಅದನ್ನು ಹುಡುಕಿಕೊಂಡು ಹೋಗುವ ಅನಿವಾರ್ಯತೆ. ಈ ಮನೆತನದ ಬಗ್ಗೆ ನಾನು ಹೇಳುತ್ತಿಲ್ಲವಾದರೂ ಊರಿನ ಗೌರವಯುತವಾದ ಮನೆಯಾಗಿರುವುದುರಿಂದ ಊರಿನ ಅಲ್ಪ ಸ್ವಲ್ಪ ಅಭಿವೃದ್ಧಿಗೋ ಸಾಂಸ್ಕೃತಿಕ ಅಡಿಪಾಯವನ್ನೊ ಉಳಿಸಿಕೊಂಡು ಬಂದಿರುವ ಮನೆ ಅದು. ಅಲ್ಲಿ ಭತ್ತದ ಕೃಷಿ ಮತ್ತು ಕಬ್ಬನ್ನು ಬೆಳೆಯುವುದು ಗೊತ್ತಿತ್ತು.
ಬ್ರಹ್ಮಾವರದ ಕಬ್ಬಿನ ಕಾರ್ಖಾನೆ ಪ್ರಾರಂಭವಾಗುವವರೆಗೂ ಅಲ್ಲಿ ಆಲೆಮನೆಯಿತ್ತು. ಊರಿನ ಸೆಲ್ಫ್ ಮೆಕ್ಯಾನಿಕ್ ಎಂದೇ ಖ್ಯಾತರಾದ ಸೀನಪ್ಪ ಭಟ್ಟರು ಆಲೆಮನೆಯ ರೂವಾರಿ. ಕಬ್ಬು ಮಾಗುವ ಸಮಯಕ್ಕೆ ಅವರು ದೊಡ್ಡ ಕೊಪ್ಪರಿಗೆ ಮತ್ತು ಡಿಸೆಲ್ ಪಂಪ್ ತಂದು ಕಬ್ಬನ್ನು ಕ್ರಶ್ ಮಾಡಿ ಅದರ ಹಾಲನ್ನು ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿಸುವುದು ಈಗಲೂ ನಮಗೆ ನೆನಪಿದೆ. ಎರಡು ಮೂರು ದಿನಗಳವರೆಗೂ ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲು ಕೊತ ಕೊತಾಂತ ಕುದಿಯುವುದು ಗೊತ್ತು. ನಾವು ಮಧ್ಯಾಹ್ನದ ಹೊತ್ತಿಗೆ ಶಾಲೆಯಲ್ಲಿ ಬುತ್ತಿ ಊಟ ಮುಗಿಸಿ ಬೆಲ್ಲದ ಆಸೆಗಾಗಿ ಅಲ್ಲಿಗೆ ಓಡುವುದಿತ್ತು. ಬಿಸಿ ಬಿಸಿ ಬೆಲ್ಲವನ್ನು ದೊಡ್ಡ ಎಲೆಗೆ ಹಾಕಿ ಅವರು ನಮಗೆ ಕೊಟ್ಟು, `ಎಲ್ಲರೂ ಹಂಚಿ ತಿನ್ನಿ ಅನ್ನೋರು'.
ಅಂತಹ ಅಲೆಮನೆಯಿರುವ ಮನೆಗೆ ಪರವೂರಿನಿಂದ ಬಂದ ನಾಲ್ಕೈದು ವಾಹನಗಳು ಹೋದದ್ದು ನಮಗೆ ತಿಳಿಯಿತು. ಊರಿಗೆ ವಾಹನ ಬಂದರೆ ಕೇಳಬೇಕೆ? ಒಬ್ಬರ ಕಿವಿಯಿಂದ ಒಬ್ಬರಿಗೆ ವಿಷಯ ತಲುಪಿತು. ಹೆಂಗಸರು ಮಕ್ಕಳು ಮುದುಕರೆನ್ನದೆ ಅಲ್ಲಿಗೆ ಹೊರಟರೆ ಅಲ್ಲಿ ಊರೆ ಜಾತ್ರೆ ಸೇರಿದಂತೆ ಕಾಣುತ್ತಿತ್ತು.
ನಮಗೂ ಕುತೂಹಲ; ಅವರಂತೆ, ಇವರಂತೆ ಅನ್ನುವ ಗಾಬು. ಅಕ್ಕ, ಅಣ್ಣನ ಜೊತೆಗೆ ನಾವು ಹೋದೆವು. ಅಮ್ಮ ನಮ್ಮನ್ನು ಗದರಿಸಿ ಹೋಗದಂತೆ ತಡೆದರು. ಹಾಗೂ ಹೀಗೂ ಅಣ್ಣನವರೆಲ್ಲಾ ಅಮ್ಮನ ಕಣ್ಣು ತಪ್ಪಿಸಿಕೊಂಡು ಓಡಿದರು.
ಅಲ್ಲಿ ಆಗ್ತಾ ಇರೋದು ಸಿನಿಮಾ ಶೂಟಿಂಗ್. ಅದನ್ನೆಲ್ಲಾ ಏನು ನೋಡುವುದು ನೀವು ಸಣ್ಣ ಮಕ್ಕಳು, ಸುಮ್ನೆ ಮನೆಗೆ ಬರ್ತೀರಾ ಇಲ್ವಾ? ಅಂದ್ರು. ಆಗ ಅವರ ಮಾತನ್ನು ಮೀರಿ ನಡೆಯುವ ಧೈರ್ಯವಿರಲಿಲ್ಲ. ಮನೆಗೆ ವಾಪಾಸಾದೆವು. ಆದರೆ ನಮ್ಮ ನೆರೆಮನೆಯ ಹುಡುಗ ಹುಡುಗಿಯರೆಲ್ಲಾ ಹೋದವರ ಬಾಯಿಯಲ್ಲಿ ಡಾ. ರಾಜಕುಮಾರ್ ಮತ್ತು ಜಯಮಾಲರ ಬಗ್ಗೆ ಮಾತುಗಳು.
ಕೊನೆಗೆ ನನ್ನ ಎರಡನೆ ಅಣ್ಣ ಹೈಸ್ಕೂಲ್ ಓದುತ್ತಿದ್ದ ಅವನು ರಾತ್ರಿ ಮನೆಗೆ ಬಂದವನೆ ಎಲ್ಲವನ್ನೂ ನಮಗೆ ವರದಿ ಒಪ್ಪಿಸಿದ. ಶೂಟಿಂಗ್ ನೋಡದಿದ್ದರು ಆ ಸನ್ನಿವೇಶವನ್ನು ಚಿತ್ರಿಸಿಕೊಂಡೆವು.
ಬೊಲ್ಲೆದಂಗಡಿಯ ಸುತ್ತಮುತ್ತ ಬೈಲು ಗದ್ದೆಯಾಗಿರುವುದರಿಂದ ಭತ್ತದ ಪಚ್ಚ ಪೈರಿನ ತೋರಣ ಮತ್ತೊಂದೆಡೆ ಕಬ್ಬಿನ ತೋಟ. ಅಷ್ಟಿದ್ದರೆ ಕೇಳಬೇಕೆ? ಎಂತಹ ಸಿನಿಮಾ ಮಂದಿಯೂ ಆ ದೃಶ್ಯಕ್ಕೆ ಮಾರುಹೋಗದಿರಲಾರರು.
ಅಂತಹ ಪ್ರಕೃತಿಯ ನಡುವೆ `ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ' ಅನ್ನುವ ಯುಗಳ ಗೀತೆಯ ಚಿತ್ರೀಕರಣ. ಪಾಪನಾಶಿನಿ ನದಿಯ `ಕರಿಯದ ಬಾಕಿಲ್' ನಿಂದ ಉದ್ದನೆಯ ಎತ್ತರದ ಕಟ್ಟಪುಣಿಯ ಇಕ್ಕೆಲಗಳಲ್ಲಿ ಭತ್ತದ ಹಸಿರು ಅಲ್ಲಿಂದ ಮುಂದುವರೆದು ದೊಡ್ಡ ಗೊಬ್ಬರದ ಗುಂಡಿಯಿರುವ ಗದ್ದೆಯವರೆಗೂ ಚಿತ್ರೀಕರಣ. ಸಾದಾರಣವಾಗಿ ಆ ಹಾಡಿನ ಕೊನೆಯ ಅರ್ಧ ಭಾಗ ಚಿತ್ರೀಕರಣವಾಗಿರುವುದು ನಮ್ಮೂರಿನಲ್ಲೆ.
ಚಿತ್ರೀಕರಣವೆಂದರೆ ಕನಿಷ್ಟಪಕ್ಷ ಒಂದೆರಡು ದಿನವಾದರೂ ಇರುತ್ತಾರೆಂದು ತಿಳಿದಿದ್ದ ನಮಗೆ ನಿರಾಶೆ. ಮರುದಿನ ಹೇಗೂ ಅಮ್ಮನನ್ನು ಒಪ್ಪಿಸಿ ನಾವು ಅಲ್ಲಿಗೆ ಹೋದರೆ ಅಲ್ಲಿ ಮೂಕ ಸಾಕ್ಷಿಯಂತೆ ನಿಂತಿದ್ದು ಬರೀ ಹಸಿರು ಭತ್ತದ ಪೈರಿನ ಗದ್ದೆಗಳು, ಪಾಪನಾಶಿನಿ ನದಿ, ದೊಡ್ಡ ಕಟ್ಟಪುಣಿ, ತೆಂಗಿನ ಮರದ ಸಾಲುಗಳು, ದೇವಸ್ಥಾನದ ಪ್ರಾಂಗಣ, ನಗಾರಿ ಕೋಣೆ, ನೀಲಗಿರಿ ಮರಗಳು. ಅಣ್ಣ ಮತ್ತು ಅವನ ಫ್ರೆಂಡ್ಸೆಲ್ಲಾ ಸೇರಿ, `ಓ ಇಲ್ಲಿಂದ ಜಯಮಾಲ ನೃತ್ಯ ಮಾಡ್ತಾ ಬರ್ತಾ ಇದ್ರು. ಅಣ್ಣಾವ್ರು ಆ ಕಡೆಯಿಂದ ಬರ್ತಾ ಇದ್ರು. ಅಲ್ಲಿಯೆ ಭತ್ತದ ತೆನೆಗಳನ್ನು ಕಲಶೆಯ ನಡುವೆ ಇಟ್ಟು ನೃತ್ಯ ಮಾಡ್ತಾ ಇದ್ದಿದ್ದು, ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವ ಮೆಟ್ಟಿಲುಗಳ ದೃಶ್ಯ ತೆಗೆದದ್ದು. ಅಲ್ಲಿ ಅವರೆಲ್ಲಾ ಮೇಕಪ್ ಮಾಡ್ತಾ ಇದ್ರು. ಇಲ್ಲಿ ನಾವೆಲ್ಲಾ ನಿಂತು ನೋಡ್ತಾ ಇದ್ದೆವು. ಕ್ಯಾಮರಾ ನಿಧಾನಕ್ಕೆ ನಮ್ಮತ್ತ ತಿರುಗಿದ್ದು. ಪಿಕ್ಚರ್ ರಿಲೀಸ್ ಆದ ಕೂಡ್ಲೆ ನಾನು ಮೊದಲು ನೋಡ್ಬೇಕು ನಮ್ಮ ಊರಿನ ಯಾರ್ಯಾರೆಲ್ಲಾ ಅದರೊಳಗೆ ಇದ್ದಾರೆಂತ ಕಾಣ್ಬೇಕು' ಅಂತ ಉದ್ದಕ್ಕೆ ಹೇಳುತ್ತಿದ್ದರೆ ನಮಗೆ ಎಂತದೋ ಪುಳಕ.
ದೊರೆ-ಭಗವಾನ್ ನಿರ್ದೇಶನದ `ಗಿರಿಕನ್ಯೆ'ಯ ಆ ಹಾಡು ಇಂದಿಗೂ ಜನಪ್ರಿಯ. ನಮ್ಮ ಮಣ್ಣಿನ, ಊರಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಸಾಗಿದ್ದ ಹಾಡಿನ ಸಾಲುಗಳನ್ನು ಕೇಳುವಾಗ ಅಲ್ಲಿಯ ದೃಶ್ಯಗಳದ್ದೇ ಕಾರುಬಾರು ಕಣ್ಣುಗಳಲ್ಲಿ.
ನೆಲವ ನಂಬಿ ಬಾಳೋರು ನಾವುಗಳೆಲ್ಲಾ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲಾ
ಹಸಿರೆ ಉಸಿರು ನಮಗೆಲ್ಲಾ
ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೆ ಹೊನ್ನು ನಮಗೆಲ್ಲಾ
ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಎಂತಹ ಅದ್ಭುತವಾದ ಹಾಡು! ಅದಕ್ಕೆ ಪೂರಕವಾದ ಪಚ್ಚ ಪೈರಿನ ಗದ್ದೆಗಳು. ಸಮುದ್ರ ಮಟ್ಟಕ್ಕಿಂತಲೂ ಎತ್ತರದಲ್ಲಿರುವ ಕುಂಜಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ. ಅಲ್ಲಿಂದ ನಿಂತು ಸುತ್ತಾ ನೋಡಿದರೆ ಪೂರ್ವದಲ್ಲಿ ಕುದುರೆಮುಖದ ಬೆಟ್ಟದ ಸಾಲುಗಳು, ಪಶ್ಚಿಮದಲ್ಲಿ ಸುರತ್ಕಲ್ ನ ದೀಪಸ್ತಂಬದವರೆಗೂ ಕಾಣುವ ಸಮುದ್ರ, ಉತ್ತರಕ್ಕೆ ಮಣಿಪಾಲ, ದಕ್ಷಿಣಕ್ಕೆ ಹಸಿರು ತುಂಬಿದ ಬೆಟ್ಟಗಳು. ಒಂದೊಂದೆ ದೃಶ್ಯಗಳು ಪರದೆಯ ಮೇಲೆ ಮೂಡಿ ಬರುವಾಗ ಇದು ನನ್ನೂರು, ಇದು ದೇವಸ್ಥಾನದ ಮುಂಭಾಗ, ಇದು ನಗಾರಿ ಕೋಣೆ, ದೇವಸ್ಥಾನದ ಎದುರಿನ ಮೆಟ್ಟಿಲುಗಳು. ಹೀಗೆ ಈಗಲೂ ಆ ಹಾಡು ಬರುವಾಗ ನಾವು ಹೇಳುವುದುಂಟು ಹಳೆಯ ನೆನಪುಗಳನ್ನು ಕೆದಕುತ್ತಾ...
1977 ರಲ್ಲಿ ಚಿತ್ರ ಬಿಡುಗಡೆ ಕಂಡಿತು. ಆಗ ಚಿಕ್ಕಮಕ್ಕಳಿಗೆ ಸಿನಿಮಾ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಅವಕಾಶವಿರಲಿಲ್ಲ. ಸುಮಾರು ಮೂವತ್ತು ವರ್ಷಗಳ ಬಳಿಕ ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ಆ ನೆನಪುಗಳು ನನ್ನನ್ನು ಇಲ್ಲಿ ಬಿಚ್ಚಿಡಲು ಅನುವು ಮಾಡಿಕೊಟ್ಟಿದೆ.
ಡಾ. ರಾಜ್ಕುಮಾರ್ ನಮ್ಮ ಊರಿಗೆ ಬಂದಿದ್ರು. ಡಾ. ಜಯಮಾಲ ಬಂದಿದ್ರು. ನೆನೆಸಿಕೊಂಡ್ರೆ ಈಗ್ಲೂ ಖುಷಿಯಾಗುತ್ತೆ. ಕೇವಲ ಸಿನಿಮಾ ಮಂದಿಯನ್ನು ಹೆಚ್ಚಾಗಿ ಈಗಲೂ ಟಿವಿ. ಸಿನೆಮಾಗಳಲ್ಲಿ ಮಾತ್ರ ನೋಡಿರ್ತೀವಿ. ಅವರನ್ನು ನೇರವಾಗಿ ನೋಡುವುದಕ್ಕೂ ದೃಶ್ಯಗಳಲ್ಲಿ ನೋಡುವುದಕ್ಕೂ ವ್ಯತ್ಯಾಸವಿರುತ್ತೆ, ಅಲ್ವಾ...?
ಇನ್ನಷ್ಟು ನೆನಪುಗಳ ಮಾತುಗಳೊಂದಿಗೆ ಮತ್ತೆ ಮುಂದಿನ ಭಾನುವಾರ ನಾವು ಭೇಟಿಯಾಗೋಣ...ವಂದನೆಗಳು...
ಪ್ರಾದೇಶಿಕ ಸುದ್ದಿಮಂಗಳೂರು: ರಾಜ್ಯ ಮಾನವ ಹಕ್ಕು ಆಯೋಗ ದಡಿ 23,000 ಪ್ರಕರಣ ಗಳನ್ನು ದಾಖಲಿಸ ಲಾಗಿದ್ದು, 5000 ಪ್ರಕರಣ ಗಳನ್ನು ಸ್ವಯಂ ಪ್ರೇರಿತ ವಾಗಿ ದಾಖಲಿ ಸಲಾಗಿದೆ.12,000 ಪ್ರಕರಣ ಗಳ ಕುರಿತು ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ರಾದ ಎಸ್ ಆರ್ ನಾಯಕ್ ಅವರು ಹೇಳಿದರು.ಅವರಿಂದು ಮಂಗಳೂರಿನ ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಸಾರ್ವಜನಿ ಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮ ದೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಸುಮಾರು 1,000 ಪ್ರಕರಣಗಳನ್ನು ದಾಖಲಿಸಲಾಗಿದ್ದು, 450 ಪ್ರಕರಣಗಳ ಸಂಬಂಧ ತೀರ್ಪು ನೀಡಲಾಗಿದೆ. ಮಾನವ ಹಕ್ಕು ಆಯೋಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಕನಿಷ್ಠ ಜಿಲ್ಲಾ ಕೇಂದ್ರದಲ್ಲಿ ಮಾನವ ಹಕ್ಕು ಆಯೋಗದ ಘಟಕಗಳಿರಬೇಕು ಎಂದರು. ರಾಜ್ಯ ಮಾನವ ಹಕ್ಕು ಆಯೋಗ ಅದ್ಭುತ ಸಂಸ್ಥೆಯಾಗಿ ಬೆಳೆಯಲು ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದರು.
ವೈವಿಧ್ಯ
ಹಿರಿಯೂರು ರಾಘವೇಂದ್ರ ನಿರ್ದೇಶನದ 'ಕಾರ್ತಿಕ ದೀಪ' ಐವತ್ತು ಕಂತುಗಳನ್ನು ಪೂರೈಸಿದೆ. ಉದಯವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿಯಲ್ಲಿ ಧಾರ್ಮಿಕ ಕ್ಷೇತ್ರದ ಅನೇಕ ಕರಾಳ ಮುಖಗಳನ್ನು ಬಿಚ್ಚಿಡುತ್ತಿದೆ. ಜೊತೆಗೆ ಪ್ರತಿಭಾಪಲಾಯನ, ಸಂಸಾರಿಕ ಅಡೆತಡೆಗಳಿಗೆ ಸಮಾಜೀಕರಣದ ಛಾಯೆ, ಯುವಕರ ಕನಸಿಗೆ ಅಡ್ಡಗಾಲಾಗುತ್ತಿರುವ ಕುಟುಂಬ ವ್ಯವಸ್ಥೆ ಹೀಗೆ ಅನೇಕ ಸೂಕ್ಷ್ಮತೆಗಳನ್ನು ಕಥೆಯನ್ನಾಗಿಸಿರುವುದೇ ಜನಪ್ರಿಯತೆಗೆ ಕಾರಣ.
ಸಾಮಾನ್ಯವಾಗಿ ಮಧ್ಯಾಹ್ನದ ಧಾರಾವಾಹಿಗಳೆಂದರೆ ಅವುಗಳು ಕೌಟುಂಬಿಕ ಹಿನ್ನಲೆ ಅಥವಾ ಅನೈತಿಕ ಸಂಬಂಧಗಳ ಸುತ್ತ ಹೆಣೆದ ಕಥೆಗಳಾಗಿರುತ್ತಿದ್ದವು. ಆದರೆ, 'ಕಾರ್ತಿಕ ದೀಪ'ವು ಹೊಸ ಶಕೆಯನ್ನು ಆರಂಭಿಸುವ ಮೂಲಕ ತನ್ನ ಜನಪ್ರಿಯತೆಯನ್ನು ಐವತ್ತು ಕಂತುಗಳಲ್ಲಿಯೇ ಸಾಬೀತು ಪಡಿಸಿದ್ದ ಅದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಹಿರಿಯ ಹಾಗೂ ಅನುಭವಿ ಕಲಾವಿದರುಗಳಾದ ಪೃಥ್ವಿರಾಜ್, ಶಮಾ, ಸುನೀಲ್ ಪುರಾಣಿಕ್, ಮಾಲತಿಶ್ರೀ ಮೈಸೂರು, ಚೇತನ್, ಶರಣ್ಯಾಶರಣು, ವಿಕ್ರಂ ಉದಯಕುಮಾರ್, ಗೋಕುಲಾನಂದ, ಗಿರೀಶ್, ವಿನುತಾ ಜೈನ್, ಆಶಾ ಜೋಯಿಸ್, ಶೀಲಾ, ವೀಣಾ ಕೃಷ್ಣ, ಸುಧಾ ಪ್ರಸನ್ನ ಮೊದಲಾದ ಕಲಾವಿದರಿರುವ 'ಕಾರ್ತಿಕ ದೀಪ' ಧಾರಾವಾಹಿಯು ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3 ರಿಂದ 3.30ರವರೆಗೆ ಪ್ರಸಾರ ಕಾಣುತ್ತದೆ.
ಶೇಷಗಿರಿ ಎಲಿಮೇಲಿ ಮತ್ತು ಪತ್ರಕರ್ತ ಶರಣು ಹುಲ್ಲೂರು ಕಥೆ-ಚಿತ್ರಕಥೆ- ಸಂಭಾಷಣೆಯನ್ನು ಒದಗಿಸಿದ್ದರೆ, ಮನೋರಂಜನ ಪ್ರಭಾಕರ್ ಅವರ ಸಂಗೀತವಿದೆ. ಶರಣು ಹುಲ್ಲೂರು ಅವರ ಶೀರ್ಷಿಕೆ ಗೀತೆಗೆ ನಂದಿತಾ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಎ.ರಾಜೇಂದ್ರನ್.ನಿರ್ಮಾಣ ನಿರ್ವಹಣೆ ಸುಧಾ ರಾಘವೇಂದ್ರ, ಸಂಕಲನ ಪಿ.ಜಿ.ಲಕ್ಷ್ಮೀಕಾಂತ್ ಅವರದ್ದು. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಹಿರಿಯೂರು ರಾಘವೇಂದ್ರ.
ವಿಶೇಷ ವರದಿ
ಭೋರ್ಗರೆವ ಕೊಡಗಿನ ಅಬ್ಬಿ ಎಂದೇ ಖ್ಯಾತಿ ಪಡೆದ ಅಬ್ಬಿ ಜಲಪಾತ ಇಂದು "ವಾಸನೆಯ" ಅಬ್ಬಿ ಎಂದು ಕರೆಸಿಕೊಳ್ಳುವ ಸ್ಥಿತಿ ತಲುಪಿದೆ. ತೀರಾ ದುರ್ನಾಥ ಈ ಅಬ್ಬಿ ಜಲಪಾತದಿಂದ ಹೊರಸೂಸುತ್ತಿದ್ದು ಅಬ್ಬಿ ವೀಕ್ಷಕರು ಕೊಂಚ ವಿಚಲಿತರಾಗಿದ್ದಾರೆ.
ವೀರನಾಡು ಕೊಡಗು ನಿಸರ್ಗ ಸೌಂದರ್ಯದ ತಾಣ. ಇಲ್ಲಿನ ಕಲ್ಲು, ಮಣ್ಣು, ನದೀ, ಆಚಾರ, ಆಚರಣೆ, ವಿಚಾರ ಹೀಗೆ ಪ್ರತಿಯೊಂದು ಕೂಡಾ ಸಂದರ್ಶನೀಯ. ಇಲ್ಲೇ ಇರುವ ಕೊಡಗಿನ ಅಬ್ಬಿಯೂ ಕೂಡಾ ಅಷ್ಟೇ ಸೌಂದರ್ಯದ ತಾಣ. ಆದರೆ ಇದೀಗ ಈ ಅಬ್ಬಿ ದುರ್ನಾಥದಿಂದ ಕೂಡಿದೆ. ಮೇಲಿಂದ ಕೆಳ ಧುಮುಕುವ ಜಲಲ ಜಲಧಾರೆ ತನ್ನೊಂದಿಗೆ ಕೆಟ್ಟ ವಾಸನೆಯನ್ನು ಹೊತ್ತೊಯ್ದು ಪ್ರೇಕ್ಷಕರನ್ನು ನಿರಾಸೆಗೊಳಿಸುತ್ತಿದೆ.
ಅಬ್ಬಿಯ ಒಂದು ಪಾಶ್ರ್ವದಲ್ಲಿ ನೆಟ್ಟ ಫಲಕವೊಂದು ತಿಳಿಸುವಂತೆ ಮಡಿಕೇರಿ ತೊರೆ ಅಥವಾ ಮುತ್ತಾರ್ ಮುಟ್ಟು ತೊರೆ ಬೃಹದಾಕಾರದ ಬಂಡೆಗಳ ನಡುವೆ ಹರಿದು 21.3ಮೀಟರ್ ಎತ್ತರದಿಂದ ಆಳವಾದ ಕಮರಿಗೆ ಧುಮುಕುತ್ತದೆ. ಈ ಜಲಧಾರೆ ಅಬ್ಬಿ ಜಲಪಾತ ಎಂದು ಪ್ರಸಿದ್ಧಿ ಹೊಂದಿದೆ. ಕೊಡವ ಭಾಷೆಯಲ್ಲಿ ಅಬ್ಬಿ ಎಂದರೆ ಜಲಪಾತ. ಬ್ರಿಟಿಷರು ಈ ಜಲಪಾತವನ್ನು ಮಡಿಕೇರಿಯ "ಪ್ರಥಮ ಪಾದ್ರಿ"ಯ ಮಗಳ ನೆನಪಿಗಾಗಿ ಜಸ್ಸಿ ಜಲಪಾತ ಎಂದು ಹೆಸರಿಟ್ಟಿದ್ದರು. 
ಪ್ರವಾಸಿಗರಿಗೆ ಈಜಾಡದಂತೆ, ಸಾಹಸ ಪ್ರವೃತ್ತಿ ತೋರದಂತೆ ಅಲ್ಲಲ್ಲಿ ಎಚ್ಚರಿಕೆಯ ಫಲಕ ನಡೆಲಾಗಿದೆ. ಆದರೆ ಈಗ ಅದರ ಅಗತ್ಯ ಇದ್ದಂತೆ ಕಂಡು ಬರುತ್ತಿಲ್ಲ. ಯಾರೆಂದರೆ ಅಬ್ಬಿ ವೀಕ್ಷಿಸಲು ಜಲಪಾತದ ಎದುರಿಗಿರುವ ತೂಗುಸೇತುವೆಯಲ್ಲಿ ನಿಂತರೇ ಸಾಕು ಗಬ್ಬು ನಾಥ ಜಲಪಾತದಿಂದ ಹೊರಸೂಸುತ್ತದೆ. ಮೂಗಿದ್ದವರ್ಯಾರೂ ಈ ಜಲಪಾತದಲ್ಲಿ ಈಜಾಡುವ ಪ್ರಯತ್ನ ಖಂಡಿತಾ ಮಾಡಲಾರರು.
ಚಿತ್ರ - ವರದಿ: ನಾಡೋಡಿ.
ವೈವಿಧ್ಯ
ಕನಕ ಚಂಪಕ ಗಿಡವು ಸಂಪಿಗೆ ಜಾತಿಗೆ ಸೇರಿದ ಹೂಬಿಡುವ ಸಸ್ಯ . ಇದು ಮೂಲತಃ ಮಲಯನ್ ಸಸ್ಯ. ಇಂಗ್ಲೀಷಿನಲ್ಲಿ Ylang – Ylang or ilang - ilang ಕರೆಯಲ್ಪಡುವ ಈ ಸಸ್ಯ Cananga odorala ಎಂಬ ಸಸ್ಯ ಶಾಸ್ತ್ರೀಯ ಹೆಸರು ಪಡೆದಿದೆ. ಗಿಡ ನೆಟ್ಟು ನಾಲ್ಕೈದು ವರ್ಷಗಳಲ್ಲಿ ಸಸ್ಯ ಹಸುರು - ಮಿಶ್ರಿತ ಹಳದಿ ಹೂಗಳನ್ನು ಅರಳಿಸುತ್ತದೆ. 8 ಎಸಳುಗಳನ್ನು ಉದ್ದುದ್ದ ಸಪೂರ ಬೆರಳಿನಾಕಾರದ ಹೊಂದಿರುವ ಹೂವು ಅತಿಯಾದ ಸುಗಂಧವನ್ನು ಹೊಂದಿದೆ. ಎಪ್ರಿಲ್-ಮೇ ತಿಂಗಳಲ್ಲಿ ಮರವಿಡೀ ಹೂಗಳು ಅರಳಿ ಪರಿಸರವನ್ನಿಡೀ ಪರಮಳಭರಿತವಾಗಿ ಮಾಡುತ್ತದೆ. ಕನಕಚಂಪಕ ಹೆಸರಿನ ಈ ಹೂಗಳು ದೇವರ ಅರ್ಚನೆಗೂ ಮುಡಿಯಲೂ ಯೋಗ್ಯವಾಗಿವೆ. ಹೂಗಳು ಒಣಗಿ ಚಿಕ್ಕ ಚಿಕ್ಕ ಗಾತ್ರದ ಗೊಂಚಲು ಗೊಂಚಲು ಕಾಯಿಗಳಾಗುತ್ತವೆ. ಕಾಯಿಯಿಂದ ಹೊಸ ಸಸಿಗಳನ್ನು ಮಾಡಬಹುದು. ಔಷಧೀಯ ಗುಣಗಳನ್ನು ಹೊಂದಿರುವ ಈ ಮರವು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಹೂಪಯೋಗಿ ಸಸ್ಯ .
ಜಯಲಕ್ಷ್ಮಿದಾಮ್ಲೆ
ರಾಜ್ಯ - ರಾಷ್ಟ್ರ
ಮೊನ್ನೆ ಮೊನ್ನೆ ಸುಳ್ಯದ ಸ್ನೇಹ ಶಾಲೆಗೆ ಹೋಗುವ ಅವಕಾಶ ಸಿಕ್ಕಿತು. ಈ ತನಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡುವ ಅವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಆದರೆ ಸ್ನೇಹ ಶಾಲೆಯಲ್ಲಿ ನನಗಾದ ಅನುಭವವೇ ಬೇರೆ. ನಿಜಾರ್ಥದಲ್ಲಿ ಅಲ್ಲಿ ಮಕ್ಕಳನ್ನು , ಮಕ್ಕಳ ಭವಿಷ್ಯವನ್ನು ರೂಪಿಸುವ ಕಾರ್ಯ ನಡೆಯುತ್ತಿತ್ತು. ಮಕ್ಕಳಿಗೆ ಪಾಠವೆಂಬ ಹೊರೆಯನ್ನು ಕಟ್ಟಿಕೊಡದೆ ಅವರ ಬದುಕನ್ನು ಕಟ್ಟಿಕೊಡುವ, ಬದುಕಿಗೊಂದು ರೂಪವನ್ನು ನೀಡುವ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು.ಶಾಲಾ ವಠಾರ, ಅಲ್ಲಿರುವ ಸುಂದರ ಕುಠೀರಗಳು, ನೈಜ ಭೂಮಿಯಲ್ಲೇ ನಿರ್ಮಿತಿಗಳನ್ನು ಸುಂದರವಾಗಿ ನಿರ್ಮಿಸಿ ಅಲ್ಲೆಲ್ಲಾ ಮಕ್ಕಳ ಭವಿಷ್ಯ ಕಟ್ಟುವ ಕಾರ್ಯ, ನಿಸರ್ಗದ ನಡುವೆಯೇ ಪಠ್ಯಕಲಿಕೆಗೆ ಅವಕಾಶ, ಶಿಸ್ತುಬದ್ಧ ಜೀವನ ಕ್ರಮಕ್ಕೆ ಸೂಕ್ತ ವ್ಯವಸ್ಥೆ...ಈ ರೀತಿಯಲ್ಲಿ ಸ್ನೇಹ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡಲಾಗುತ್ತಿದೆ.
" ಏನ್ ಪುಟ್ಟಾ...ತಿಂಡಿ ಮಾಡಿದ್ಯಾ...? ಯಾಕೆ ಏನಾಯ್ತು ಮಾತಾಡ್ತಿಲ್ಲ...ಈ ಮಾಮನ ಪರಿಚಯ ಉಂಟಾ...?" ಪ್ರತಿಯೊಂದು ಪುಟ್ಟ ಪುಟ್ಟ ವಿದ್ಯಾರ್ಥಿಗಳನ್ನೂ ಮುಖ್ಯೋಪಾಧ್ಯಾಯರು ಮಾತನಾಡಿಸುವ ಈ ಪರಿ ನಿಜಕ್ಕೂ ಅಚ್ಚರಿ ಮೂಡಿಸಿತು.
ಈ ಶಾಲೆಯ ವೈಶಿಷ್ಟ್ಯಗಳ ಕುರಿತಾಗಿ ಶಾಲೆಯ ಶಿಕ್ಷಕಿಯರು ತಮ್ಮ ಅನುಭವಗಳನ್ನು ಹಂಚಿಕೊಂಡರೆ ಉತ್ತಮ ಎಂಬ ಅಭಿಪ್ರಾಯದಿಂದ ಶಾಲಾ ಶಿಕ್ಷಕಿಯರು ಬರೆದು ಕಳುಹಿಸಿದ ಲೇಖನವನ್ನು ಯಥಾವತ್ತಾಗಿ ಈ ಕನಸಿನ ಓದುಗರಿಗಾಗಿ ನೀಡುತ್ತಿದ್ದೇವೆ. ಮುಂದೆ ಶಾಲೆಯ ಸಮಗ್ರ ಮಾಹಿತಿಯನ್ನು ಈ ಕನಸು ಸವಿವರವಾಗಿ ಪ್ರಕಟಿಸಲಿದೆ. ಸಾಧ್ಯವಾದಲ್ಲಿ ನೀವೂ ಒಮ್ಮೆ ಈ ಶಾಲೆಗೆ ಭೇಟಿ ನೀಡಿ
ನಮ್ಮ ಶಾಲೆಯಲ್ಲಿ 15 ವರ್ಷಗಳಿಂದ ಬಾಲವಾಡಿ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಬಂದಿದ್ದೇವೆ. ಮಕ್ಕಳಿಗೆ ಶಾಲೆಯಲ್ಲಿ ಮನೆಯ ವಾತಾವರಣವನ್ನೇ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಪಠ್ಯಪುಸ್ತಕಗಳ ಹೊರೆ ಇಲ್ಲ. ಹೋಂ ವರ್ಕ್ ಒತ್ತಡ ಇಲ್ಲ. ಎಲ್ಲಾ ಪಾಠಗಳನ್ನು ಅಂದರೆ ಕನ್ನಡ, ಗಣಿತ, ಇಂಗ್ಲಿಷ್, ಪರಿಸರ ಇವುಗಳನ್ನು ಬಾಯ್ದರೆಯಾಗಿ ಕಲಿಸಲಾಗುತ್ತದೆ. ಮಕ್ಕಳು ನಲಿಯುತ್ತಾ ಕಲಿಯಬೇಕು ಎಂಬ ಧ್ಯೇಯ ನಮ್ಮದು. ಅದಕ್ಕಾಗಿ ಮೌಖಿಕವಾಗಿ ಹೆಚ್ಚು ಹೆಚ್ಚು ಹೇಳಿ ಕೊಡಲಾಗುತ್ತದೆ. 
ವಾರಗಳ ಹೆಸರು, ತಿಂಗಳುಗಳ ಹೆಸರು, ನಕ್ಷತ್ರಗಳ ಹೆಸರು, ಮಾಸಗಳ ಹೆಸರು, ಸಂವತ್ಸರಗಳ ಹೆಸರು, ಶ್ಲೋಕ, ತಿಥಿಗಳ ಹೆಸರು ಇವುಗಳನ್ನು ದಿನನಿತ್ಯ ಹೇಳಿಕೊಡುತ್ತೇವೆ. ಮೊದಲಿಗೆ ಸ್ಲೇಟಿನಲ್ಲಿ ಬರೆಸಿ ತಿದ್ದಿಸಿ ಅಕ್ಷರಾಭ್ಯಾಸ ಮಾಡಿಸುತ್ತೇವೆ. ಜನವರಿಯಿಂದ ಪುಸ್ತಕದಲ್ಲಿ ಬರೆ0ುಲು ಕಲಿಸುತ್ತೇವೆ. ಇದರಿಂದ ಮಕ್ಕಳು ಅಕ್ಷರಗಳನ್ನು ಅಂದವಾಗಿ ಬರೆಯುತ್ತಾರೆ. ಪ್ರತಿಯೊಂದು ಮಗುವಿಗೂ ನೃತ್ಯ, ಹಾಡು, ಕಥೆ, ಅಭಿನಯಗಳನ್ನು ಕಲಿಸಿ, ಅದನ್ನು ಪ್ರದರ್ಶಿಸುವ ಅವಕಾಶ ನೀಡುತ್ತೇವೆ.
ಪಾಠದ ಜೊತೆಗೆ ಆಟ, ಕ.ಇ.ಖಿ., ಭಜನೆ ಇವುಗಳನ್ನೂ ಕಲಿಸುತ್ತೇವೆ. ಚಿಪ್ಪುಗಳು, ಚಮಚಗಳು, ಮಂಜಟ್ಟಿಕಾಯಿ, ಪೆನ್ನುಗಳು, ಮರದ ತುಂಡುಗಳು, ಮಿಂಚುಪಟ್ಟಿ ಇವುಗಳ ಮುಖಾಂತರ ಕಲಿಸುತ್ತೇವೆ. ಇವುಗಳಿಂದ ಅಕ್ಷರಗಳನ್ನು ಬರೆಯುವುದು, ಆಕೃತಿಗಳನ್ನು, ಮಾಡುವುದನ್ನು ಮಕ್ಕಳು ಕಲಿಯುತ್ತಾರೆ. ತರಗತಿಯ ಗೋಡೆಯಲ್ಲಿರುವ ಹಣ್ಣು, ತರಕಾರಿ, ಬೇರೆ ಬೇರೆ ಚಿತ್ರಗಳನ್ನು ತೋರಿಸಿ, ಮಕ್ಕಳಿಗೆ ಅದನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲೂ ಹೇಳಿಕೊಡುತ್ತೇವೆ. ಶಾಲಾ ಪರಿಸರದಲ್ಲಿ ಸುತ್ತಾಡಿಸಿ ಪರಿಸರ ಪಾಠವನ್ನು. ಇದರಲ್ಲಿ ನಮ್ಮ ಸುತ್ತಮುತ್ತಲಿನ ಗಿಡ, ಮರ, ಔಷಧೀಯ ಸಸ್ಯಗಳನ್ನು ಪರಿಚಯಿಸಿಕೊಡಲಾಗುತ್ತದೆ. ಇದರಿಂದ ಮಕ್ಕಳು ಗಿಡಗಳನ್ನು ಗುರುತಿಸಿ ಅದರ ಹೆಸರುಗಳನ್ನು ಹೇಳಬಲ್ಲರು. ಈ ಮಕ್ಕಳಿಗೆ ಬರಹದ ಮನೆ ತುಂಬಾ ಉಪಯುಕ್ತ. ಇಲ್ಲಿ ಮರಳಿನಲ್ಲಿ ಬೆಟ್ಟ, ಗುಡ್ಡ, ನದಿ, ಗೋಪುರಗಳನ್ನು ಮಾಡಿ ಮಕ್ಕಳು ಸಂತೋಷ ಪಡುತ್ತಾರೆ. ಮರಳಿನಲ್ಲಿ ಅಕ್ಷರ ಬರೆಯುವುದನ್ನೂ ಕಲಿಸುತ್ತೇವೆ.
ಒಟ್ಟಾರೆ ಮಗುವಿಗೆ ತನ್ನ ಪ್ರತಿಭೆಯನ್ನು ಹೊರಸೂಸಲು, ಮಗು ಬೆಳೆಯಲು, ಪುಟ್ಟ ಮಕ್ಕಳಿಗೆ ಚೈತನ್ಯಶೀಲ ಹಾಗೂ ಸೌಹಾರ್ದ ವಾತಾವರಣವಿದೆ. ಹಲವು ಮಕ್ಕಳು ನಮ್ಮನ್ನು 'ಅಮ್ಮ' ಎಂದೂ ಕರೆಯುತ್ತಾರೆ. ಮಕ್ಕಳ ಅಕ್ಷರಗಳ ತಿದ್ದುವಿಕೆ ಸತತ ನಡೆಸುತ್ತೇವೆ. ಅಂದವಾದ ಬರವಣಿಗೆ, ಸ್ಪಷ್ಟ ಓದುವಿಕೆಗೆ ಹೆಚ್ಚಿನ ಒತ್ತು ನೀಡುತ್ತೇವೆ. ಒತ್ತಡರಹಿತ ಕಲಿಕೆಯಿಂದಾಗಿ ಮಕ್ಕಳು ಯಾವಾಗಲೂ ಉಲ್ಲಾಸ, ಉತ್ಸಾಹದಿಂದ ಇರುತ್ತಾರೆ.
ಮೀನಾಕ್ಷಿ .ಪಿ/ ವಸಂತಿ .ಬಿ
ಸಹ ಶಿಕ್ಷಕಿಯರು
ಸ್ನೇಹ ಪ್ರಾಥಮಿಕ ಶಾಲೆ, ಸುಳ್ಯ
ಕಾರಿಡಾರ್
ಎಲ್ಲಿ ನೋಡಿದರೂ
ಕಾಣುವುದು ಹಚ್ಚ ಹಸಿರು
ಅದನ್ನು ನೋಡಲು ಸಾಲದು
ಎರಡು ಕಣ್ಣುಗಳು
ಅವುಗಳೇ ನಮ್ಮ ಜೀವನದ ಉಸಿರು
ಅವುಗಳಿಲ್ಲದೆ ನಮ್ಮ ಜೀವನ ಬರಡು
ಇದುವೇ ಸೃಷ್ಟಿಕರ್ತನ ಆಟ
ಇದನ್ನು ಅರಿತರೆ ನಮಗಿಲ್ಲ ಸಂಕಟ
ರಚನಾ ಆರ್.
10ನೇ ತರಗತಿ , ಸ್ನೇಹ ಪ್ರೌಢಶಾಲೆ , ಸುಳ್ಯ
ಪ್ರಾದೇಶಿಕ ಸುದ್ದಿ
ಮಂಗಳೂರು: ಲೋಕೋಪಯೋಗಿ ಇಲಾಖೆ ರೂ.265 ಕೋಟಿಯ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿಗಳೆಲ್ಲವೂ ಪ್ರಗತಿಯಲ್ಲಿದೆ. ಮಂಗಳೂರು ವಿಭಾಗದಲ್ಲಿ ವಿವಿಧ ಯೋಜನೆಗಳಡಿ ಮಿನಿ ವಿಧಾನಸೌಧ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಸುಳ್ಯ ಮಿನಿ ವಿಧಾನಸೌಧ, ನ್ಯಾಯಲಯ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲಾಖೆಗೆ ಮತ್ತೆ ರೂ.160 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಲೋಕೋ ಪಯೋಗಿ ಇಲಾಖೆಯ ವೃತ್ತ ಕಚೇರಿಗೆ ಭೇಟಿ ನೀಡಿ ಕಾರ್ಯಾಲಯದ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಸಚಿವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಬಂದರು ಇಲಾಖೆಯ ರೂ. 15 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ. ರೂ. 358 ಕೋಟಿಯ ಕಾಮಗಾರಿ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಮೀನುಗಾರಿಕಾ ಇಲಾಖೆಯ ರೂ. ಒಂದು ಕೋಟಿ ಮೌಲ್ಯದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ. ರೂ. 3.2 ಕೋಟಿ ಮೌಲ್ಯದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪಿಲಿಕುಳ ನಿಸರ್ಗಧಾಮದಲ್ಲಿ ತಾರಾಲಯ ನಿರ್ಮಾಣಕ್ಕಾಗಿ ಸರಕಾರ ರೂ. 15.5 ಕೋಟಿ ಮಂಜೂರು ಮಾಡಿದೆ. ಯೋಜನೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ನುಡಿದರು.ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗಾಗಿ ಹಿಂದೆ ವಿಭಾಗಗಳಲ್ಲಿ ಒಂದೊಂದರಂತೆ ಪ್ರಯೋಗಾಲಯಗಳಿದ್ದವು. ಈಗ ಪ್ರತೀ ತಾಲೂಕಿಗೆ ಒಂದರಂತೆ ಪ್ರಯೋಗಾಲಯ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವ ಪಾಲೆಮಾರ್ ಹೇಳಿದರು.
ಲೋಕೋಪಯೋಗಿ ಇಲಾಖೆ ಮತ್ತು ಇತರ ಕಚೇರಿ ಸಮುಚ್ಛಯಗಳ ಪೈಕಿ ಲೋಕೋಪಯೋಗಿ ಇಲಾಖೆಯ ಕಾರ್ಯಾಲಯವನ್ನು ನವೀಕರಿಸಲಾಗಿದೆ. ಉಳಿದ ಇಲಾಖೆಗಳ ನವೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಎಸ್.ಬಾಲಕೃಷ್ಣ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಗೋಪಾಲ್ ಗೌಡ ಉಪಸ್ಥಿತರಿದ್ದರು.
ವಿಚಾರ
ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸುಗ್ಗಿಯ ಫಸಲನ್ನು ಕೊಯ್ದುಕೊಳ್ಳುವ ಕೆಲಸವನ್ನು ಮುದ್ರಣ ಹಾಗೂ ವಿದ್ಯುನ್ಮಾನ ಈ ಎರಡೂ ಮಾಧ್ಯಮಗಳೂ ಬಲು ಉಮೇದಿನಿಂದ ನಡೆಸಿವೆ. ಸಂತೋಷವೇ. ಆದರೆ, ಮಾಧ್ಯಮಗಳಿಗಿರಬೇಕಾದ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಮನೋಭಾವ ಇವು ಈ ಉಮೇದಿನ ಹಿಂದೆ ಇವೆಯೇ ಎಂದು ಗಮನಿಸಿದಾಗ ನಿರಾಶೆಯಾಗುತ್ತದೆ.
ಒಂದೊಂದು ಪತ್ರಿಕೆಯೂ/ಟಿವಿ ವಾಹಿನಿಯೂ ಒಂದೊಂದು ಒಲವು - ಒಂದೊಂದು ಮುನಿಸು ಇಟ್ಟುಕೊಂಡು ಆ ಒಲವು ಮತ್ತು ಮುನಿಸಿಗನುಗುಣವಾಗಿ ಸುದ್ದಿಗಳನ್ನು ರೂಪುಗೊಳಿಸಿ ಇಂದು ನಮ್ಮೆದುರಿಡುತ್ತಿವೆ. ಯಾವ ಪತ್ರಿಕೆಯಲ್ಲೂ/ಟಿವಿ ವಾಹಿನಿಯಲ್ಲೂ ನಮಗೆ ನಿಷ್ಪಕ್ಷಪಾತದಿಂದ ಕೂಡಿದ ಮತ್ತು (ರಾಜಕೀಯ) ಪಕ್ಷಾತೀತವಾದ ಸ್ವಚ್ಛ-ಸಂಪೂರ್ಣ ಸುದ್ದಿ ಸಿಗುತ್ತಿಲ್ಲ.
ಒಂದು ದಿನಪತ್ರಿಕೆಗೆ ಕಾಂಗ್ರೆಸ್ ಸಕರ್ಾರ ಮಾಡಿದ್ದೆಲ್ಲಾ ಸರಿಯೆಂಬಂತೆ ಕಂಡರೆ ಇನ್ನೊಂದಕ್ಕೆ ಕಾಂಗ್ರೆಸ್ಸಿನ ಎಲ್ಲ ನಡೆಯೂ ತಪ್ಪೆಂದು ಭಾಸವಾಗುತ್ತಿದೆ! ಒಂದು ಪತ್ರಿಕೆಗೆ ಬಿಜೆಪಿಯು ಪರಮ ಆದರ್ಶ ಪಕ್ಷವಾಗಿ ಕಂಡುಬಂದರೆ ಇನ್ನೊಂದಕ್ಕದು ಪರಮ ದುಷ್ಟ ಪಕ್ಷವಾಗಿ ಕಂಡುಬರುತ್ತಿದೆ! ಮತ್ತೊಂದೆರಡು ಪತ್ರಿಕೆಗಳು ತಾವು ನಿಷ್ಪಕ್ಷಪಾತಿಗಳೆಂದು ತೋರಿಸಿಕೊಳ್ಳಲೆತ್ನಿಸುತ್ತಿವೆಯಾದರೂ ಅವುಗಳ ವರದಿಗಾರಿಕೆಯಲ್ಲಿ ಮತ್ತು ಸುದ್ದಿಯ ಆಯ್ಕೆಯಲ್ಲಿ ಅವುಗಳ ಎಡ/ಬಲ ಒಲವು ಸ್ಪಷ್ಟಗೋಚರವಾಗುತ್ತಿದೆ! ಇವೆಲ್ಲದರ ಪರಿಣಾಮ, ಓದುಗರಾದ ನಮಗೆ ನಿಜಸುದ್ದಿಯ ಅರಿವೇ ಸಂಪೂರ್ಣವಾಗಿ ಆಗುತ್ತಿಲ್ಲ.
ವಿವಿಧ ಸುದ್ದಿಗಳಿಗೆ ಪ್ರಾಮುಖ್ಯ ನೀಡುವ ವಿಷಯದಲ್ಲಿಯೂ ಪತ್ರಿಕೆಗಳ ದೃಷ್ಟಿಗಳು ಭಿನ್ನ-ವಿಭಿನ್ನ. ರಾಜ್ಯ ಬಿಜೆಪಿ ಸರಕಾರದ ಗೊಟಾಳೆಗಳಿಗೆ ಒಂದೆರಡು ಪತ್ರಿಕೆಗಳು ಇನ್ನಿಲ್ಲದ ಮಹತ್ತ್ವ ನೀಡಿದರೆ ಇನ್ನೊಂದೆರಡು ಪತ್ರಿಕೆಗಳು ಆ ಗೊಟಾಳೆಗಳನ್ನು ಬಹುತೇಕ ಸಂಪೂರ್ಣ ಅಲಕ್ಷಿಸುತ್ತಿವೆ. ಮತ್ತೊಂದೆರಡು ಪತ್ರಿಕೆಗಳು ತಮ್ಮಿಚ್ಛೆಗನುಗುಣವಾಗಿ ಎಷ್ಟು ಬೇಕೋ ಅಷ್ಟನ್ನೇ, ಯಾವ ಶೈಲಿಯಲ್ಲಿ ಬೇಕೋ ಆ ಶೈಲಿಯಲ್ಲಿ ಓದುಗರೆದುರಿಡುತ್ತಿವೆ. ಕೇಂದ್ರ (ಯುಪಿಎ) ಸರಕಾರದ ಟೂಜಿ ಹಗರಣದ ವರದಿಗಾರಿಕೆಗೂ ಈ ಮಾತು ಅನ್ವಯ.
ಪತ್ರಿಕೆಗಳ ಕಥೆ ಹೀಗಾದರೆ ಟಿವಿ ವಾಹಿನಿಗಳ ಕಥೆ ಇನ್ನೂ ಅತ್ತತ್ತ. ಇಂಗ್ಲಿಷಿನ ಮೆಜಾರಿಟಿ ವಾಹಿನಿಗಳು ಬಲಪಂಥೀಯ ಸರಕಾರ ಮತ್ತು ಸಂಸ್ಥೆಗಳನ್ನು ದೇಶದ್ರೋಹಿಗಳಂತೆ ಬಿಂಬಿಸುವುದರಲ್ಲಿ ಮತ್ತು ಭಾರತವನ್ನು ಕೊಳಕು-ಕುತ್ಸಿತ-ದರಿದ್ರ ದೇಶವನ್ನಾಗಿ ಚಿತ್ರಿಸುವುದರಲ್ಲಿ ಅದೇನೋ ಸಂತೋಷ ಕಾಣುತ್ತಿವೆ! ನಿಜವಾಗಿ ಭಾರತವು ಕೊಳಕು-ಕುತ್ಸಿತ-ದರಿದ್ರ ದೇಶವೇ? ಹಸಿವು-ಅಸಮಾನತೆಗಳು ಭಾರತದಲ್ಲಿವೆ, ನಿಜ. ಆದರೆ ಅವು ಭಾರತದಲ್ಲಿ ಮಾತ್ರ ಇವೆಯೇ? ಬೇರೆಡೆ ಇಲ್ಲವೇ? ಅಥವಾ, ಭಾರತದಲ್ಲಿ ಅವು ಇತರೆಲ್ಲ ದೇಶಗಳಿಗಿಂತ ಹೆಚ್ಚು ಇವೆಯೇ? ಇತರ ಬಹುಪಾಲು ದೇಶಗಳಿಗಿಂತ ಭಾರತದಲ್ಲಿ ಪ್ರಖರವಾಗಿ ವಿಜೃಂಭಿಸುತ್ತಿರುವ ಸ್ನೇಹ-ಸಹನೆ-ಶಾಂತಿ- ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಂಸಾರಿಕ ಮತ್ತು ಸಾಮಾಜಿಕ ಮೌಲ್ಯ ಇವು ಈ ಇಂಗ್ಲಿಷ್ ವಾಹಿನಿಗಳ ಗಮನಕ್ಕೇಕೆ ಬರುತ್ತಿಲ್ಲ?
ಕನ್ನಡದಲ್ಲಂತೂ, ಒಂದು ವಾಹಿನಿಯು ಜೆಡಿಎಸ್ ಪಕ್ಷದ ಮುಖವಾಣಿಯಾದರೆ ಇನ್ನೊಂದು ವಾಹಿನಿಯು ಕಾಂಗ್ರೆಸ್ ಪಕ್ಷದ ವಕ್ತಾರನಾಗಿ ಹಾಗೂ ಮತ್ತೊಂದು ವಾಹಿನಿಯು ಬಿಜೆಪಿಯ ಸಿಂಪತೈಸರ್ ಆಗಿ ಕಾರ್ಯನಿರ್ವಹಿಸುತ್ತಿವೆ! ತಮಿಳೂ ಸೇರಿದಂತೆ ಇತರ ಭಾಷೆಗಳ ವಾಹಿನಿಗಳೂ ಈ ಪಕ್ಷಪಾತದಿಂದ ಹೊರತೇನಲ್ಲ.
ಕಳೆದ ನಲವತ್ತೈದು ವರ್ಷಗಳಿಂದ ನಾನು ಬರವಣಿಗೆಯ ಜೊತೆಜೊತೆಗೇ ಸಾಮಾಜಿಕ ರಂಗದಲ್ಲೂ ಕ್ರಿಯಾಶೀಲನಾಗಿರುವುದರಿಂದಾಗಿ ಮತ್ತು ನನ್ನಿಂದ ಪ್ರೋತ್ಸಾಹಿತರಾದ ಅನೇಕರು ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಗಳಿಗೇರಿರುವುದರಿಂದಾಗಿ ನನಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಅನೇಕ ಆಗುಹೋಗುಗಳ/ಸುದ್ದಿಗಳ ನಿಜಮಾಹಿತಿಗಳು ಲಭ್ಯವಾಗುತ್ತವೆ. ಇದರಿಂದಾಗಿ ನನಗೆ ಸುದ್ದಿ ಮಾಧ್ಯಮಗಳ ಪಕ್ಷಪಾತವು ಇತರ ಓದುಗರಿಗಿಂತ ಹೆಚ್ಚು ನಿಖರವಾಗಿ ಅರಿವಿಗೆ ಬರುತ್ತದೆ. (ಆದರೆ, ನಿಜಮಾಹಿತಿಯನ್ನು ಪ್ರಚುರಪಡಿಸಲು ನನಗೆ, ಮೂಲಾಧಾರವು ನೀಡಬೇಕಾದ ರಕ್ಷಣೆಯ ಕೊರತೆ ಅಡ್ಡಬರುತ್ತದೆ.)
ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಮಾಧ್ಯಮಗಳ ಪಕ್ಷಪಾತದ ನಡೆಯಿಂದಾಗಿ, ಪ್ರಜೆಗಳಾದ ನಾವು 'ಸಂಪೂರ್ಣ ನಿಜಸುದ್ದಿ'ಗಳಿಂದ ವಂಚಿತರಾಗುತ್ತಲೇ ಇದ್ದೇವೆ. ಇದೊಂದು ದುರಂತವೇ ಸರಿ.
ಎಚ್. ಆನಂದರಾಮ ಶಾಸ್ತ್ರೀ
ಸಾಹಿತ್ಯ
ವೀಕ್ಷಕರ ಮನದಾಳಕ್ಕೀಳಿಯುವಂತಹ, ಸದಭಿರುಚಿಯ, ಬದುಕಿನ-ಬಂಡಿಯಲ್ಲಿ ನಡೆದು ಹೋಗುವ ಘಟನೆಗಳನ್ನು
ಸಾವಧಾನವಾಗಿ ಎದುರಿಸುವಂತಹ ಅತ್ಯುತ್ತಮ ಸಂದೇಶವನ್ನು ಸಾರುವ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಲೇ
ಬರುತ್ತಿರುವ ಈಟೀವಿ ಕನ್ನಡ ವಾಹಿನಿಯಲ್ಲಿ "ಅಮ್ಮ ನಿನಗಾಗಿ"ಹೊಚ್ಚ ಹೊಸ ಧಾರಾವಾಹಿಯನ್ನು ಇದೇ ನವೆಂಬರ್ 22 ರಿಂದ
ಪ್ರತಿ ಸೋಮವಾರ ದಿಂದ ಶನಿವಾರದವರೆಗೆ ಸಂಜೆ 7-30ಕ್ಕೆ ಪ್ರಸಾರವಾಗಲಿದೆ.
ಹೆಣ್ಣು- ತಾಯಿಯಾಗಿ,ಮಗಳಾಗಿ,ಸೊಸೆಯಾಗಿ,ಅತ್ತಿಗೆಯಾಗಿ,ಗೆಳತಿಯಾಗಿ ನಿರ್ವಹಿಸುವ ಪಾತ್ರಗಳು ಅನೇಕ. ಇಂಥಹ
ಒಬ್ಬ ಮಮತಾಮಯಿ ತಾಯಿಯ ಜೀವನದ ಏಳು ಬೀಳುಗಳ ಚಿತ್ರಣವೇ 'ಅಮ್ಮ ನಿನಗಾಗಿ' ಧಾರವಾಹಿಯ ಹೂರಣ.
ರೋಹಿಣಿ(ಉಮಾಶ್ರೀ),ಮನೋಹರ(ರಮೇಶ್ ಭಟ್)ರದು ಸುಖಮಯ ದಾಂಪತ್ಯ. ಮುದ್ದಾದ ಮೂರು ಮಕ್ಕಳು.
ಸುರೇಶ(ದಿಲೀಪ್ ರಾಜ್),ಸುನಿಲ್(ಕವಿಲ್ ನಂದಕುಮಾರ್),ಚಂದನ(ನಾಗಶ್ರೀ) . ಸುರೇಶನ ನಿಶ್ಚಿತಾರ್ಥ ಅನುಷ್ಕ
ಎಂಬ ಶ್ರೀಮಂತರ ಹುಡುಗಿಯ ಜತೆ ನಡೆದಿರುತ್ತದೆ. ಇಂಥಹ ಸಂದರ್ಭದಲ್ಲಿ ಮನೋಹರ ತನಗೆ ಮದುವೆಗೆ
ಮುಂಚೆಯೇ ಒಂದು ಹುಡುಗಿಯ ಜತೆ ಸಂಭಂದವಿತ್ತು ಅದರ ಫಲವಾಗಿ ಒಂದು ಹೆಣ್ಣು ಮಗು ಇದೆ ಎಂದು
ಸ್ಪೋಟಿಸುತ್ತಾನೆ.ಮಕ್ಕಳು ಆಘಾತಕೊಳಗಾಗುತ್ತಾರೆ.ರೋಹಿಣಿ...ತನಗೆ ಮೊದಲೆ ಗೊತ್ತಿತ್ತೆಂದು ಇದರಲ್ಲಿ ಗಂಡನ ತಪ್ಪು
ಏನು ಇಲ್ಲ ಎಂದು ಮಕ್ಕಳ ಎದರು ವಾದಿಸುತ್ತಾಳೆ. ನಡತೆಗೆಟ್ಟ ಮನೋಹರನನ್ನು ಅನುಷ್ಕಳ ತಂದೆ
ತಿರಸ್ಕರಿಸುತ್ತಾನೆ,ಮದುವೆ ಮುರಿದು ಬಿಳುತ್ತದೆ.




ಈ ಮಧ್ಯ ತನ್ನ ಮೊದಲ ಸಂಬಂಧದ ಕರುಳ ಕುಡಿ ಕಾದಂಬರಿ(ಮಂಜುಭಾಷಿಣಿ)ಯನ್ನು ಮನೆಗೆ ಕರೆದುಕೊಂಡು
ಬಂದು ಅವಳಿಗೆ ಹಿರೀಮಗಳ ಸ್ಥಾನ_ಮಾನ ನೀಡಬೇಕು ಎಂದು ಸಂಕಲ್ಪಿಸುತ್ತಾನೆ. ಸುರೇಶ ಇದನ್ನು ಬಲವಾಗಿ
ವಿರೋದಿಸುತ್ತಾನೆ.ಹುಟ್ಟಿದಾರಭ್ಯ ತಂದೆ,ತಾಯಿಯರ ಕಾಣದೆ ಅನಾಥಾಶ್ರಮದಲ್ಲಿ ಬೆಳೆದು ಈಗ ಆರ್ಕಿಟೆಕ್ಟ್ ಆಗಿರುವ
ಕಾದಂಬರಿ ಮನೋಹರನನ್ನು ತನ್ನ ತಂದೆಯೆಂದು ಒಪ್ಪುತ್ತಾಳೆಯೆ? ಅವನ ಹಾಗು ರೋಹಿಣಿಯ ಆಸೆಯಂತೆ ಅವರ
ಮನೆಗೆ ಬಂದು ಎಲ್ಲರ ಮನ ಗೆಲ್ಲಿತ್ತಾಳಾ? ನನಗೆ ನನ್ನ ಅತ್ತೆ ರೋಹಿಣಿಯೇ ಎಲ್ಲಾ ವಿಚಾರದಲ್ಲೂ ಡಿಠಟಜ ಟಠಜಜಟ ,
ಆಕೆಯಂತೆಯೇ ತಾನು ಆಗಬೇಕೆಂದು ಹಪಹಪಿಸುವ ಅನುಷ್ಕಷಂಳ ಕನಸು ಏನಾಗುತ್ತದೆ? ಅವಳು ಈ ಮನೆಗೆ
ಸೊಸೆಯಾಗಿ ಬಂದು ಮನೆಯ ದೀಪ ಹಚ್ಚುತ್ತಾಳೆಯೆ? ಇವರೆಲ್ಲರನ್ನು ರೋಹಿಣಿ ಹೇಗೆ
ಪೊರೆಯುತ್ತಾ,ಸಲಹುತ್ತಾ..,ದಾರಿ ದೀಪವಾಗಿ ನಿಲ್ಲುತ್ತಾಳೆ ಎಂಬುದೇ......ಅಮ್ಮ ನಿನಗಾಗಿ ಧಾರಾವಾಹಿಯ ಕಥಾ
ಹಂದರ.
ಉಮಾಶ್ರೀ, ರಮೇಶ್ ಭಟ್, ಮಾಧುರಿ ಶ್ರಿನಿವಾಸ ಪ್ರಭು, ದಿಲೀಪ್ ರಾಜ್, ಮಂಜು ಭಾಷಿಣಿ, ಲತಾ, ಸುನಿಲ್, ಕವಿಲ್
ನಂದಕುಮಾರ್, ನಾಗಶ್ರೀ, ಭಾಸ್ಕರ್ ಶೆಟ್ಟಿ, ಶೀಲಾ... ಮೊದಲಾದವರು ತಾರಾಗಣದಲ್ಲಿದ್ದಾರೆ.
ಪ್ರಾದೇಶಿಕ ಸುದ್ದಿ
ಮಂಗಳೂರು :ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣಿಕೆ ತಡೆಯಲು ಕಂಡುಕೊಂಡ ಜಿಪಿಎಸ್ ವ್ಯವಸ್ಥೆಯ ಉದ್ದೇಶವನ್ನು ಸಾರ್ಥಕ ಪಡಿಸಲು ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ತಮ್ಮ ಕಚೇರಿಯಲ್ಲಿ ಕರೆದ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಿಂದ ನೆರೆಯ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಣಿಕೆ ತಡೆಯಲು ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾದ ಮರಳು ಲಾರಿಗಳಿಗೆ ಜಿಪಿಎಸ್ ಸಾಧನ ಅಳವಡಿಕೆ ಅಧಿಕಾರಿಗಳ ನಿರ್ಲಕ್ಷ ದಿಂದ ವ್ಯರ್ಥ ವಾಗಬಾರದು ಎಂಬುವುದನ್ನು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ಉಪನಿರ್ದೇಶಕರ ಬಳಿ ಸಮಗ್ರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ಅಧಿಕಾರಿಗಳು ಜಿಪಿಎಸ್ ಅಳವಡಿಸಿದ ಐ ಸರ್ಚ ಕಂಪೆನಿಯ ಬಳಿ ಈ ಬಗ್ಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಮಾಹಿತಿ ನೀಡುತ್ತಿದ್ದು, ತಾಂತ್ರಿಕ ಕಾರಣಗಳಿಂದ ಮಾನಿಟರಿಂಗ್ ವ್ಯವಸ್ಥೆಯಲ್ಲಿ ಕುಂದು ಉಂಟಾಗಿದೆ ಎಂಬುದನ್ನು ಒಪ್ಪಿಕೊಂಡರು. ಗಡಿ ಪ್ರದೇಶ ನರಿಂಗಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು, ಅಲ್ಲಿನ ಗ್ರಾಮಸ್ಥರಿಗೆ ಅಕ್ರಮ ಮರಳಿನ ಲಾರಿಗಳು ಸಂಚರಿಸುವುದು ಗಮನಕ್ಕೆ ಬಂದರೆ ಮಾಹಿತಿ ನೀಡಲು ಅನುಕೂಲವಾಗುವಂತೆ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ.ಉಳಿದ ಗಡಿ ಭಾಗಗಳ ಗ್ರಾಮ ಪಂಚಾಯತ್ ಗಳೊಂದಿಗೂ ಇದೇ ರೀತಿಯ ಸಂಬಂಧವಿರಿಸಿ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.
ಈ ಜಿಪಿಎಸ್ ಸಾಧನ ಅಳವಡಿಕೆಯ ಉದ್ದೇಶ ಸಾರ್ಥಕವಾಗಬೇಕೆಂದು ಈ ಬಗ್ಗೆ ಇಲಾಖೆ ಗಂಭೀರ ನಡಾವಳಿಗಳನ್ನು ತೆಗೆದುಕೊಳ್ಳ ಬೇಕೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಅಕ್ರಮ ತಡೆಗೆ ಮಾನವ ಸಂಪನ್ಮೂಲ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಶ್ರಮವನ್ನು ಬಳಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಪ್ರಾದೇಶಿಕ ಸುದ್ದಿ
ಪ್ರಕೃತಿ ಕಾವ್ಯ ಬರೆದಿದೆ... ಇಬ್ಬನಿ ತಬ್ಬಿದ ಇಳೆಯಲಿ ಎಂಬ ಸುಂದರ ದೃಶ್ಯಕಾವ್ಯ ಕಾಣತೊಡಗಿದೆ. ನಿನ್ನೆಯ ತನಕ ಎಡೆಬಿಡದೆ ಸುರಿದ ಮಳೆಯ ನಡುವೆ ಇಂದು ಮುಂಜಾನೆ ಮೂಡಬಿದ್ರೆ - ವೇಣೂರು ಪರಿಸರದಲ್ಲಿ ಇಬ್ಬನಿ ಚೆಂದದ ಚಿತ್ತಾರ ಬರೆದಿದೆ.
ಚಿತ್ರ: ಹರೀಶ್ ಕೆ.ಆದೂರು.
ಪ್ರಾದೇಶಿಕ ಸುದ್ದಿಮೂಡುಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ವತಿಯಿಂದ ಒಂದು ತಿಂಗಳ ಕಾಲ ನಡೆದ ನಗರ ಭಜನೆಯ ಮಂಗಲೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪಶ್ಚಿಮ ಜಾಗರ ಪೂಜೆಯ ಬಳಿಕ ನಗರ ಭಜನೆ ನಡೆಯಿತು. ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು, ಆಚರಣೆಗಳು ಕಡಿಮೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಗರ ಭಜನೆಯಂತಹ ಧಾರ್ಮಿಕ ಸಾಂಸ್ಕೃತಿಕ ಉತ್ಸವಗಳು ಯುವಜನತೆಯಲ್ಲಿ ಸನಾತನ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತಿರುವುದು ಶ್ಲಾಘನಾರ್ಹ. ಇಂದು ಜಗತ್ತು ಬದಲಾಗುತ್ತಿದೆ. ಜೊತೆಜೊತೆಗೆ ಸಮಾಜವೂ ಬದಲಾಗುತ್ತಿದೆ. ವಿದೇಶೀ ದಾಸ್ಯ ಕ್ಕೆ ಇಡೀ ಸಮಾಜ ಒಳಗಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ವಿರಳವಾಗುತ್ತಿದೆ. ಮೂಡಬಿದಿರೆಯಲ್ಲಿ ನಡೆಯುತ್ತಿರುವ ಈ ನಗರ ಭಜನೆ ಇಂದಿಗೂ ಜನತೆಯಲ್ಲಿ ಧಾರ್ಮಿಕ ಭಾವನೆ ಬಡಿದೆಬ್ಬಿಸಲು ಸಹಕಾರಿಯಾಗುತ್ತಿದೆ.
ಸಚಿತ್ರ ವರದಿ:ಎಂ. ಗಣೇಶ್ ಕಾಮತ್ ಮೂಡುಬಿದಿರೆ.
ಸಾಹಿತ್ಯ
ಭಾಗ - 2
ನವರಾತ್ರಿ ಬಂತೆಂದರೆ ಸಾಕು ಬೆಳಗ್ಗೆ ನಾನು ಅಣ್ಣನೂ ತಾಮ್ರದ ತಂಬಿಗೆ ಹಿಡಿದು ಈ ಮರದಡಿ ಬರುತ್ತಿದ್ದೆವು. ಪೂಜೆಗೆ ರೆಂಜೆ ಹೂಗಳನ್ನಾಯುವುದಕ್ಕೆ. ಬರುವಾಗ ಆಗ ತಾನೇ ಮರದಿಂದ ಕೆಳಗೆ ಬಿದ್ದ ಚಕ್ರಾಕೃತಿಯ ಪುಟ್ಟ ರೆಂಜೆ ಹೂಗಳ ಪರಿಮಳ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತಿತ್ತು. ನಾನು ಯಾವಾಗಲೂ ಅಣ್ಣನನ್ನು ಸೋಲಿಸಿ ಬಿಡುತ್ತಿದ್ದೆ. ನನ್ನ ಉದ್ದಲಂಗವನ್ನು ಮಡಿಸಿ ಸೊಂಟಕ್ಕೆ ಸಿಕ್ಕಿಸಿ ಹೆಕ್ಕಿದ ಹೂಗಳನ್ನೆಲ್ಲಾ ಅದರಲ್ಲಿ ಹಾಕಿ ಕೊನೆಗೆ ತಂಬಿಗೆಗೆ ತುಂಬಿ ಬಿಡುತ್ತಿದ್ದೆ. ಆದರೆ ಅಣ್ಣ ಅರ್ಧಕ್ಕಾಗುವಾಗಲೇ ಹೋಗೋಣ ಎಂದು ಶುರುವಿಡುತ್ತಿದ್ದ. ತಂಬಿಗೆ ತುಂಬಲಿ ಎಂದರೆ ಸಾಕು ತಂಬಿಗೆಯ ಬಾಯಿಗೆ ಕೈಯನ್ನು ಪೂತರ್ಿ ಮುಚ್ಚಿ ಉಲ್ಟಾ ಮಾಡಿ ಮತ್ತೆ ಸರಿಪಡಿಸಿ ತುಂಬಿದಂತೆ ಕಾಣುವ ಹಾಗೆ ಮಾಡಿಬಿಡುತ್ತಿದ್ದ.
ಆಗೆಲ್ಲಾ ಈ ರೆಂಜೆ ಮರ ಹತ್ತುತ್ತಿದ್ದೆವು. ಇದರ ಬುಡದಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದೆವು. ಕಟ್ಟೆಯ ಮೂಲೆಯಲ್ಲಿ ಒಂದೆರಡು ಬಾರಿ ಜೋರಾಗಿ ತಿರುಗಿ ಉದ್ದ ಲಂಗವನ್ನು ಬುಗ್ಗೆ ಮಾಡಿ ಕೂತು ನಾವು ಹುಡುಗಿಯರು ಒಂದಾ ಮಾಡುತ್ತಿದ್ದೆವು. ಅಣ್ಣ ಎಲ್ಲರೆದುರಿಗೇ ಮೇಲಕ್ಕೆ ಹಾರುವ ಹಾಗೆ ಒಂದಾ ಮಾಡಿ ರೆಂಜೆ ಗಿಡದ ಬಾಗಿದ ಗೆಲ್ಲನ್ನು ಒದ್ದೆ ಮಾಡುತ್ತಿದ್ದ. ನಾವೆಲ್ಲ ಅದನ್ನು ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೆವು. ಇದೆಲ್ಲಾ ಎರಡು ಮೂರನೇ ಕ್ಲಾಸಿನವರೆಗಿನ ಕತೆ.
ಒಂದು ಸಲ ರಜೆಯ ದಿನ ನಾವು ಕುಂಟಾಲ ಹಣ್ಣು ಕೊಯ್ಯುತ್ತಾ ಬರುತ್ತಿದ್ದಾಗ ನಡೆದ ಘಟನೆ ನೆನೆಸುವಾಗ ಮೈ ಈಗಲೂ ಜುಮ್ಮೆನ್ನುತ್ತದೆ. ಅಣ್ಣ ಕುಂಟಾಲ ಗಿಡದ ಗೆಲ್ಲು ಬಗ್ಗಿಸಿ ಹಣ್ಣು ಕೊಯ್ಯುತ್ತಿದ್ದ. ನಾನು ಅಲ್ಲೇ ಪಕ್ಕದಲ್ಲಿದ್ದ ಕೇಪುಳದ ಗಿಡದಿಂದ ಹಣ್ಣು ಕೊಯ್ಯಲು ಕೈಯಿಕ್ಕಿದೆ. ತಕ್ಷಣ ಸರ್ರನೆ ಹರಿದ ಹಾವು.... ಅಣ್ಣಾ.... ಎಂದು ಬೊಬ್ಬಿಟ್ಟು ಓಡಿದೆ. ಅಣ್ಣನೂ ನನ್ನ ಹತ್ರ ಓಡಿ ಬಂದ. ಇಬ್ಬರೂ ನೋಡುತ್ತೇವೆ. ನಾಗರ ಹಾವೊಂದು ಹೆಡೆಯೆತ್ತಿ ನಿಂತಿದೆ. ನಾವು ಕೈಯಲ್ಲಿದ್ದ ಕುಂಟಾಲು, ಕೇಪುಳ ಹಣ್ಣುಗಳನ್ನು ಕೆಳಗಿಟ್ಟು ಕೈ ಮುಗಿದೆವು. ನಾಗರ ಸ್ಲೋ ಮೋಶನ್ ನಲ್ಲಿ ತಲೆಯಲ್ಲಾಡಿಸಿ ಹೊರಟು ಹೋಯಿತು. ಹಣ್ಣುಗಳನ್ನು ಅಲ್ಲೇ ಬಿಟ್ಟು ನಡುಗುತ್ತಾ ಬೇಗ ಬೇಗ ಬರುತ್ತಿರಬೇಕಾದರೆ ...
ಇದೇ.... ಇದೇ...ರೆಂಜೆಮರದ ಹಿಂಭಾಗದಲ್ಲಿ ಜೋರಾಗಿ ಉಸಿರಾಡುವ ನರಳಾಡುವ ಸದ್ದು. ಮೊದಲೇ ಹೆದರಿದ್ದ ನಾವು ಏನಿರಬಹುದೆಂದು ದೂರ ನಿಂತೇ ನೋಡಿದೆವು. ಚೋಮನ ಮಗಳು ಚಂದ್ರಿಯ ಮೇಲೆ ಸುಂದರಣ್ಣ ಹೊರಳಾಡುತ್ತಿದ್ದ. ಏ... ಚಂದ್ರೀ... ನಾನು ಅಣ್ಣನಿಗೆ ಜೋರಾಗಿಯೇ ಹೇಳಿದೆ.
ಸ್ವರ ಕೇಳಿ ಪೆಟ್ಟು ತಿಂದವನಂತೆ ಎದ್ದ ಸುಂದರಣ್ಣ ಕಣ್ಣು ಕೆಂಪು ಮಾಡಿ ನಿಮಗಿಲ್ಲೇನು ಕೆಲಸ ಎಂಬಂತೆ ನೋಡಿದ. ಚಂದ್ರಿ ಸರಕ್ಕನೆ ತನ್ನ ಬಿಳಿ ಎದೆಗೆ ಸೆರಗೆಳೆದುಕೊಂಡು ಕಟ್ಟೆಯಲ್ಲಿಟ್ಟಿದ್ದ ಬೀಡಿ ಚೀಲವನ್ನು ಎಳೆದು ಕಣ್ಣೊರೆಸಿಕೊಳ್ಳುತ್ತಾ ಓಡಿದಳು. ಸುಂದರಣ್ಣ ಕೆಳಗಿದ್ದ ಕತ್ತಿಯನ್ನೆತ್ತಿ ಮುಖ ಒರೆಸುತ್ತಾ ಯಾರಿಗಾದರೂ ಹೇಳಿದರೆ...? ಎಂದು ಗದರಿಸಿದ. ನಾವು ಅವನ ಕಣ್ಣು, ಕತ್ತಿಗೆ ಹೆದರಿ ಮನೆಗೆ ಓಡಿದೆವು. ಬಳಿಕ ಎರಡು ದಿನ ತೀವ್ರ ಜ್ವರ ಬಂದು ನಾನು ಕಂಗಾಲಾಗಿದ್ದೆ.
ಈಗ ಈ ರೆಂಜೆ ಮರ ಪವಿತ್ರ ಸ್ಥಳ. ಮುಟ್ಟಾದ ಹೆಂಗಸರು, ಕೆಳಜಾತಿಯವರು ಈ ಕಟ್ಟೆಯ ನೆರಳಿಗೆ ಸುಳಿಯಬಾರದೆಂಬ ಅಲಿಖಿತ ನಿಯಮವಿದೆ ಊರಲ್ಲಿ. ಬಲ್ಲಾಳರ ಮನೆಗೆ ರೈಟ್ರ್ ಆಗಿ ಬಂದಿದ್ದ ಆನಂದನನ್ನು ತನ್ನ ಎರಡನೇ ಮಡದಿ ಜತೆಗೆ ಹೆಚ್ಚು ಮಾತಾಡುತ್ತಾನೆಂದರಿತ ಬಲ್ಲಾಳ ಕೆಲಸದಿಂದ ತೆಗೆದು ಹಾಕಿದ. ಹಾಗೆ ಬಂದ ಆನಂದ ಈ ರೆಂಜೆ ಕಟ್ಟೆಯಲ್ಲಿ ಮಲಗಿ ನಿದ್ರಿಸುತ್ತಿರುವಾಗ ಕನಸಲ್ಲಿ ದೇವಿ ಪ್ರತ್ಯಕ್ಷಳಾಗಿ ' ಇಲ್ಲಿಂದ ಒಂದು ಮೈಲಿ ದೂರದಲ್ಲಿರುವ ಬೆಟ್ಟದ ತುದಿಯಲ್ಲಿ ನಾನು ನೆಲೆಸುತ್ತೇನೆ. ನೀನು ನನ್ನ ಪ್ರತಿನಿಧಿಯಾಗಿ ಊರ ಜನಕ್ಕೆ ದಾರಿ ತೋರು ' ಎಂದು ದೇವಿ ಹೇಳಿದಳಂತೆ. ಆನಂದ ಅಸಾಮಾನ್ಯ, ದೈವಾಂಶ ಸಂಭೂತ ಎಂದು ಅದರ ಮರುದಿನ ರಾತ್ರಿ ಊರ ನಾಲ್ಕು ಜನಕ್ಕೆ ಕನಸು ಬಿತ್ತಂತೆ. ಅವರೆಲ್ಲಾ ಸುದ್ದಿ ಹೇಳಿ ಕಳೆದ ನಾಲ್ಕು ವರ್ಷಗಳ ಹಿಂದೆ ಊರಲ್ಲಿ ಒಂದು ಸಂಚಲನವೇ ಸೃಷ್ಟಿಯಾಗಿತ್ತು.
ರಾಜಕೀಯದ ಹುಚ್ಚು ಹಿಡಿದ ಸುಂದರಣ್ಣ ಊರ ಹುಡುಗರನ್ನೆಲ್ಲಾ ಸೇರಿಸಿ ನಮ್ಮ ಊರಿಗೆ ದೈವಾನುಗ್ರಹವಾಗಿದೆ. ನಾವು ಸೇರಿಕೊಂಡು ಗುಡ್ಡದ ಮೇಲೆ ಆಶ್ರಮವೊಂದನ್ನು ಕಟ್ಟುವ ಎಂದು ತೀಮರ್ಾನಿಸಿದರು. ಆನಂದ ಪರಮಾನಂದ ಸ್ವಾಮಿಯಾದರು. ಗುಡ್ಡದ ತುದಿ ಸವರಿ ಒಂದು ದೇವಿಗುಡಿ, ಅದರ ಸರಿ ಎದುರು ಭಾಗದಲ್ಲೊಂದು ರೆಂಜೆ ಗಿಡ, ಗುಡಿಯ ಎಡಬದಿಯಲ್ಲೊಂದು ಗುಹೆ, ಆ ಗುಹೆಯಿಂದ 200 ಮೀಟರ್ ದೂರದಲ್ಲಿ ಸ್ವಾಮಿಗಳಿಗೆ ಒಂದು ಆಶ್ರಮ, ಸುತ್ತುಗೋಪುರ, ಹೊರಗಡೆ ಒಂದು ಅನ್ನಛತ್ರ, ಅದರ ಮೇಲ್ಗಡೆ ಹತ್ತಾರು ಅತಿಥಿಗೃಹಗಳು ಹೀಗೆ ಒಂದು ವರ್ಷದಲ್ಲಿ ಸಕಲ ಅಭಿವೃದ್ಧಿ ಕಾರ್ಯಗಳು ನಡೆದವು. ಮಂತ್ರಿಗಳು, ರಾಜಕಾರಣಿಗಳು, ಸಿನಿಮಾ ನಟರ ಆಗಮನದಿಂದ ರಸ್ತೆ, ವಾಹನ ವ್ಯವಸ್ಥೆಗಳೂ ಬಂದವು. ಎಲ್ಲಾ ಕಡೆ ಪ್ರಚಾರವೂ ಆಯಿತು. ಇತ್ತೀಚೆಗೆ ವಿದೇಶದಿಂದ ದುಡ್ಡು ಬೇರೆ ಹರಿದು ಬರುತ್ತಿದೆಯಂತೆ. ಶ್ರೀ ಶ್ರೀ ಶ್ರೀ ಪರಮಾನಂದರ ಕೃಪೆಯಿಂದ ಸುಂದರಣ್ಣ ರಾಜ್ಯದ ಪ್ರಭಾವಿ ರಾಜಕಾರಣಿಯಾದ. ಸುಂದರಣ್ಣನಿಂದ ಪರಮಾನಂದರು ಜಗದ್ವಿಖ್ಯಾತರಾದರು...
'ಏ... ಬಾರಾ... ಏನ್ ಚಂದಾ ನೋಡ್ತಾ ಇದ್ದೀ? ಒಂದು ಕೈಯದ್ದರ ತಕೋ.. ' ಮಾತು ಕೇಳಿ ಎಚ್ಚತ್ತ ಭೂಮಿ ಅಮ್ಮನ ಒಂದು ಕೈಲ್ಲಿದ್ದ ರೇಶನ್ ಸೀಮೆಎಣ್ಣೆಯ ಕ್ಯಾನನ್ನು ಹಿಡಿದು ಮನೆ ಕಡೆ ಹೊರಟಳು. ' ಅಮ್ಮ ನನಗೆ ಸಂಬಳ ಸಿಕ್ಕಿತು' ಭೂಮಿ ಮಾತಿನಲ್ಲೇ ಸಂಭ್ರಮಿಸಿದಳು. 'ಹೌದಾ... ಸುಮ್ಮಗೆ ಖರ್ಚು ಗಿರ್ಚು ಮಾಡ್ಬೇಡಾ. ಹಾಗೆ ಒಂದು ಬ್ಯಾಂಕ್ ಎಕೌಂಟ್ ಮಾಡಿ ಹಾಕಿಡು. ಕಷ್ಟ ಕಾಲಕ್ಕೆ ಬೇಕಾಗುತ್ತೆ'' ಎಂದಳು. ಭೂಮಿಗೆ ತನ್ನ ಯೋಚನೆ ತಲೆಕೆಳಗಾಗುವಂತೆ ಭಾಸವಾಯಿತು. 'ಇಲ್ಲಮ್ಮ ಮುಂದಿನ ತಿಂಗಳಿಂದ ನೀನು ಹೇಳಿದ ಹಾಗೆ. ಈ ಬಾರಿ ನನಗೆ ತೋಚಿದಂತೆ'' ಎಂದು ಕಣ್ಣು ಮಿಟುಕಿಸಿದಳು. ಅಮ್ಮನೂ ನಕ್ಕು ಸುಮ್ಮಗಾದಳು.
ಶಂಕರ ಭಟ್ರು ಸೋಮಕೋಡಿಯಲ್ಲಿ ಅವರ ಅಜ್ಜನ ಕಾಲದಿಂದಲೂ ವಾಸವಿದ್ದಾರೆ. ಆರಂಭದಲ್ಲಿ ಪೌರೋಹಿತ್ಯ ನಡೆಸಿ ಜೀವನ ನಡೆಸುತ್ತಿದ್ದವರು ತೇಜಸ್ವಿಯವರ ಕತೆಗಳ ಹುಚ್ಚು ಹಿಡಿದ ಬಳಿಕ ಅದ್ಯಾಕೋ ಇರುವ ಅಲ್ಪಸ್ವಲ್ಪ ತೋಟದ ಕೃಷಿಯಲ್ಲೇ ಮುಳುಗಿ ಹೋಗಿದ್ದರು. ಇತ್ತೀಚೆಗೆ ಮನೆಯಿಂದ ಹೊರಗೆ ಹೋಗುವುದೇ ಕಡಿಮೆ. ರೇಶನ್, ಸಾಮಾನು, ಕರೆಂಟು ಬಿಲ್ಲು, ತೋಟಕ್ಕೆ ಬೇಕಾದ ಗೊಬ್ಬರ, ಮೈಲುತುತ್ತಿನವರೆಗೂ ಎಲ್ಲಾ ಕಾರ್ಯವನ್ನೂ ನೋಡಿಕೊಳ್ಳುತ್ತಿರುವವರು ಭಟ್ರ ಹೆಂಡತಿ ಗಿರಿಜಮ್ಮನೇ. ತಪ್ಪಿದರೆ ಮಗಳು ಭೂಮಿ ಅಲ್ಪ ಸ್ವಲ್ಪ. ಮಗ ಗೌತಮ ಡಿಗ್ರಿ ಮುಗಿಸಿದ ಬಳಿಕ ಉಂಡಾಡಿ ಗುಂಡನಂತೆ ತಿರುಗುತ್ತಿದ್ದಾಗ ಸೋಡಾ ಮಹಮ್ಮದನ ತಂದೆಯ ಕಾಲು ಹಿಡಿದು ದುಬೈಯಲ್ಲಿ ಒಂದು ಆಯಿಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಟ್ಟದ್ದು ಬಿಟ್ಟರೆ ಶಂಕರ ಭಟ್ರು ಇತ್ತೀಚೆಗೆ ಹೇಳಿ ಕೊಳ್ಳುವಂತ ಯಾವ ಕೆಲಸವನ್ನೂ ಮಾಡಿಲ್ಲ. ಭೂಮಿ ಪಿಯುಸಿ ಮುಗಿಸಿ ಅನಂತರ ಕಂಪ್ಯೂಟರ್ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿ ಈಗ ಊರ ಸರಕಾರಿ ಶಾಲೆಗೆ ತಾಗಿಕೊಂಡು ಆರಂಭಗೊಂಡ ಕಂಪ್ಯೂಟರ್ ಸೆಂಟರಿನಲ್ಲಿ ಇನ್ಸ್ಟ್ರಕ್ಟರ್ ಆಗಿ ತಿಂಗಳ ಹಿಂದಷ್ಟೇ ಸೇರಿಕೊಂಡಿದ್ದಳು.
'ಈಗ ಕಲಿಯಲು ಯಾರೆಲ್ಲ ಬರ್ತಾರೆ ?' ಅಮ್ಮ ಮೌನ ಮುರಿದಳು.
'ಯಾರು ಬರ್ತಾರಮ್ಮ ಈ ಹಳ್ಳೀಲಿ? ಕಂಪ್ಯೂಟರ್ ಅಂದ್ರೇ ಏನೂಂತ ಗೊತ್ತಿಲ್ಲ. ಇನ್ನು ಕಲಿಯಲು.. ಆ ಚಂದ್ರಿಯ ತಂಗಿ ಪುಷ್ಪ, ಪಕ್ರುನ ಮಗ ಶಿವು... ಮತ್ತೆ ಆ ಮೀನು ಮಾರುವ ಐಸಾಕ್ನ ಮಕ್ಕಳು ಸಫಿಯಾ ಮೈಮೂನಾ ಬರ್ತಾರೆ. ಅವರಿಗೆಲ್ಲಾ ಸರಕಾರದಿಂದ ಸ್ಟೈಫಂಡ್ ಬರುತ್ತೆ. ಮತ್ತೆ ದೇವಸ್ಥಾನದ ಭಟ್ರ ಮಗಳು ಆರತಿ... ಮೊನ್ನೆಯಿಂದ ಸೋಡಾ ಮಹಮ್ಮದ್ ಬರ್ತಾ ಇದ್ದಾನೆ. ಗಲ್ಫ್ಗೆ ಹೋಗ್ತಾನಂತೆ. ಅಲ್ಲಿನ ಕೆಲಸಕ್ಕೆ ಕಂಪ್ಯೂಟರ್ ಗೊತ್ತಿರಬೇಕಂತೆ. ನಿನ್ನೆಯಿಂದ ಅವನೂ ಕಾಣ್ತಾ ಇಲ್ಲ... ' ಎಂದು ಭೂಮಿ ದಾರಿ ಸವೆಸಿದಳು.
'ನೋಡು ಆ ಸೋಡಾ ಮಹಮ್ಮದನ ವಿಷಯ ನಿನಗೆ ಬೇಡ. ಅವ ಬಂದ್ರೆ ಕಲಿಸಲ್ಲ ಅಂತ ಹೇಳು'.' ದೆವ್ವ ಬಂದಂತೆ ಗಿರಿಜಮ್ಮ ದಡಕ್ಕನೇ ನಿಂತು ಮಗಳಿಗೆ ಹೇಳಿದಳು. 'ಯಾಕಮ್ಮ? ಆಗೋಲ್ಲ ಅಂದ್ರೆ ಹೇಗೆ? ನಾನು ಕಲಿಸೋದಕ್ಕೆ ಮಾತ್ರ. ಬಾಕಿಯೆಲ್ಲ ಸರಕಾರ ಮತ್ತು ನಮ್ಮ ದಣಿಗಳದ್ದಲ್ಲವಾ ತೀರ್ಮಾನ'' ಭೂಮಿ ಹೇಳಿದಳು.
'ಆ ಸೋಡಾ ಮಹಮ್ಮದ್ ನೋಡಿದ ಹಾಗಲ್ಲ . ಇಂದು ರೇಶನಿಗೆ ಬಿಳೀ ಕಾರಿನಲ್ಲಿ ಬಂದ ಸುಂದರಣ್ಣ ಕಾರಿನಿಂದ ಇಳಿದವರೇ 'ಏನ್ ಗಿರಿಜಮ್ಮ...' ಅಂತ ಕೇಳಿ ಸ್ವಲ್ಪ ದೂರ ಕರೆದು ಏನ್ ಹೇಳಿದರು ಗೊತ್ತಾ? ಶಿವ... ಶಿವಾ...'
ಏನು?.....
'ನೋಡಿ ಗಿರಿಜಮ್ಮ.. ನಿಮ್ಮನ್ನು ನೋಡಿಯೇ ನಾನು ಕೆಳಗಿನವರೆಗೆ ಬಂದದ್ದು. ಒಂದು ವಿಷಯವಿದೆ. ಆ ಸೋಡಾ ಮಹಮ್ಮದ್ ಇದ್ದಾನಲ್ಲಾ ಅವ ಡೇಂಜರ್ ಮನುಷ್ಯ. ಈಗ ಅವರಲ್ಲಿ 'ಲವ್ ಜಿಹಾದ್' ಅಂತ ಶುರುವಾಗಿದೆ. ಹಿಂದೂ ಹುಡುಗಿಯರನ್ನು ಪ್ರೀತಿಸಿ ಮತಾಂತರ ಮಾಡಿ, ಮದುವೆಯಾಗಿ, ಅವರಿಂದ ಮಕ್ಕಳನ್ನು ಹುಟ್ಟಿಸಿ ಅವರ ಧರ್ಮವನ್ನು ಬೆಳೆಸುತ್ತಾರಂತೆ. ಅದಕ್ಕೆ ಅವರಿಗೆ ಕೆಲವು ಸಂಘಟನೆಯವರು ದುಡ್ಡು ಕೊಡ್ತಾರಂತೆ. ಮಹಮ್ಮದನೂ ಆ ಗ್ರೂಪ್ ನಲ್ಲಿದ್ದಾನಂತೆ.. ನಮಗೆ ಸುದ್ದಿ ಸಿಕ್ಕಿದೆ.
ನಾನೂ ಅವನೂ ಒಂದೇ ತರಗತಿಯಲ್ಲಿ ಓದಿದವರಾದರೂ ಅವನು ಅವನ ಜಾತಿ ಬುದ್ದಿ ಬಿಟ್ಟಿಲ್ಲ ನೋಡಿ. ಆ ಚಂದ್ರಿ ಗೊತ್ತಲ್ಲ ನಿಮಗೆ. ಅವಳನ್ನು ಬುಟ್ಟಿಗೆ ಹಾಕಿಕೊಂಡು ಅವನ ಜಾತಿಗೆ ಮತಾಂತರ ಮಾಡಲು ಹೊರಟಿದ್ದಾನೆ. ಈ ಕೆಳಜಾತಿಯವರಿಗೆ ಬುದ್ಧಿ ಇಲ್ಲ ನೋಡಿ. ದುಡ್ಡು ಕಂಡ್ರೆ ಸಾಕು ಯಾರಿಗೆ ಬೇಕಿದ್ರೂ ಮೈ ಚಾಚ್ತವೆ.. ಅದಕ್ಕೆ ನಾವು ಹಿಂದುಗಳು ಜಾಗ್ರತೆಯಲ್ಲಿರಬೇಕು. ಈಗ ಮೊನ್ನೆಯಿಂದ ಕಂಪ್ಯೂಟರ್ ಕಲಿಯುವುದಕ್ಕೆ ಬೇರೆ ಹೊರಟಿದ್ದಾನೆ. ಅಲ್ಲಿ ಕೆಲವು ಹುಡುಗಿಯರಿದ್ದಾರೆ ನೋಡಿ. ನಿಮ್ಮ ಮಗಳೂ ವಯಸ್ಸಿಗೆ ಬಂದಿದ್ದಾರೆ. ಸ್ವಲ್ಪ ಜಾಗ್ರತೆ ಹೇಳಿ ಗೊತ್ತಾಯಿತಾ'' ಎಂದರು.
'ನೀ ಸುಮ್ಮಗಿರಮ್ಮ. ಆ ಸುಂದರಣ್ಣನ ಕತೆ ನನಗೆ ಗೊತ್ತಿಲ್ವ? ಎಲ್ಲಾ ರಾಜಕೀಯ.... ಧರ್ಮ ರಾಜಕೀಯ, ಜಾತಿ ರಾಜಕೀಯ..ಮಾಡೋದು... ಇವರಿಗೆಲ್ಲಾ ಜನ ಒಟ್ಟಿಗಿರೋದು ನೋಡೋಕಾಗಲ್ಲ. ಏನೇನೋ ಕತೆ ಕಟ್ತಾರೆ..'' ಎನ್ನುತ್ತಾ ಮನೆಯ ಅಂಗಳಕ್ಕೆ ಕಾಲಿಟ್ಟಳು ಭೂಮಿ. ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಚೆನ್ನಾಗಿ ಸೆಗಣಿ ಸಾರಿಸಿದ್ದ ಅಂಗಳ ತುಂಬಾ ಅಪ್ಪ ವೀಳ್ಯದೆಲೆ ತಿಂದು ಉಗುಳಿದ ಚಿತ್ತಾರ ಕಂಡು ಭೂಮಿಗೆ ಸಿಟ್ಟು ನೆತ್ತಿಗೇರಿತು. 'ಅಪ್ಪಾ.. ಅಪ್ಪಾ... ' ಸಿಟ್ಟಿನ ಭರದಲ್ಲೇ ಕೂಗುತ್ತಾ ಒಳ ಹೋದಳು.
ನಡುಮನೆಯಲ್ಲಿ ಶಂಕರ ಭಟ್ರು ಎರಡೂ ಕೈಗಳಲ್ಲಿ ಎದೆಯನ್ನು ಗಟ್ಟಿಯಾಗಿ ಹಿಚುಕಿಕೊಳ್ಳುತ್ತಾ ಹೊರಳಾಡುತ್ತಿದ್ದರು. ಕೈಯಲ್ಲಿದ್ದುದನ್ನು ಅಲ್ಲೇ ಬಿಸಾಡಿ ಭೂಮಿ 'ಏನಾಯ್ತಪ್ಪಾ... ಏನಾಯ್ತಪ್ಪಾ.... ' ಎಂದು ಅಪ್ಪನ ತಲೆಯನ್ನೆತ್ತಿ ತನ್ನ ಮಡಿಲಲ್ಲಿಟ್ಟು ಅಳತೊಡಗಿದಳು. ಗಿರಿಜಮ್ಮ ಓಡಿಹೋಗಿ ನೀರು ತಂದು ಕುಡಿಸಿದರು.
ಭೂಮಿ ಸೋಡಾ ಮಹಮ್ಮದನಿಗೆ ಫೋನ್ ಮಾಡಿ ಕಾರು ಬರ ಹೇಳಿದಳು.ಹತ್ತು ನಿಮಿಷದಲ್ಲಿ ಬಂದ ಕಾರಿಗೆ ಇನ್ನೂ ಒದ್ದಾಡುತ್ತಲೇ ಇದ್ದ ಶಂಕರ ಭಟ್ರನ್ನು ಹತ್ತಿಸಿ ಆಸ್ಪತ್ರೆಗೆ ಸೇರಿಸಿದರು. ತಕ್ಷಣಕ್ಕೆ ಬೇಕಾದ ಮದ್ದನ್ನೆಲ್ಲಾ ಮಹಮ್ಮದನೇ ತಂದುಕೊಟ್ಟು ಕೈಯಲ್ಲಿ ಸ್ವಲ್ಪ ದುಡ್ಡನ್ನೂ ಕೊಟ್ಟು ಹೋದ.
ಭೂಮಿ ಅಳುತ್ತಲೇ ಮೊಬೈಲ್ ಕೈಗೆತ್ತಿಕೊಂಡಳು. 'ಅಣ್ಣಾ ... ನೀನು ತಕ್ಷಣ ಹೊರಟು ಬಾ.. ಇಲ್ಲಿ ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಐಸಿಯು ನಲ್ಲಿದ್ದಾರೆ. ಡಾಕ್ಟರರು ಕಷ್ಟ ಎಂದಿದ್ದಾರೆ. ಬೇಗ ಬಾ''' ಎಂದಳು
ಆಮೇಲೆ ರಾತ್ರಿ ಒಂದೆರಡು ಬಾರಿ ಗೌತಮನೇ ಫೋನು ಮಾಡಿದ. ಆರು ತಿಂಗಳ ಹಿಂದೆಯಷ್ಟೇ ಬಂದಿದ್ದೇನೆ. ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಕಂಪೆನಿ ರಜೆ ಕೊಡುತ್ತಿಲ್ಲ.. ನೀನು ಅಪ್ಪನನ್ನು ಚೆನ್ನಾಗಿ ನೋಡಿಕೋ. ದೇವರಿದ್ದಾನೆ ಏನೂ ಆಗೋಲ್ಲ.. ದುಡ್ಡು ಎಷ್ಟು ಬೇಕಿದ್ರೂ ಕಳಿಸ್ತೇನೆ ಎಂದೆಲ್ಲಾ ಹೇಳಿದ.
ಮರುದಿನ ಬೆಳಗ್ಗೆ ಡಾಕ್ಟರರು ಭೂಮಿಯ ಬಳಿ ಬಂದು 'ಮನಸ್ಸು ಗಟ್ಟಿ ಮಾಡಿಕೊಳ್ಳಿ. ಬರಬೇಕಾದವರನ್ನೆಲ್ಲಾ ಬರಹೇಳಿ. ಐ ಯಾಮ್ ಸ್ವಾರಿ... ' ಎಂದು ಹೇಳಿ ಹೋದರು. ಭೂಮಿ ಉಕ್ಕಿ ಬರುತ್ತಿರುವ ದು:ಖದೊಂದಿಗೆ ಮೂರ್ಚೆ ತಪ್ಪಿ ಬಿದ್ದಿದ್ದ ಅಮ್ಮನ ಮುಖಕ್ಕೆ ನೀರೆರಚಿ ಎಬ್ಬಿಸಿ ಐಸಿಯು ಒಳಹೊಕ್ಕು ನೀರಿನ ಬಾಟ್ಲಿಯ ಮುಚ್ಚಳಕ್ಕೆ ನೀರು ಸುರಿದು ಅಪ್ಪನ ಬಾಯಿಗೆ ಬಿಟ್ಟಳು. ಅಣ್ಣನ ಹೆಸರು ಹೇಳಿ ಇನ್ನೊಂದು ಮುಚ್ಚಳ ನೀರು..
ಅಣ್ಣನಿಗೆ ಫೋನಿನಲ್ಲಿ ಎಲ್ಲಾ ವಿವರಗಳನ್ನು ಅಳುತ್ತಲೇ ಹೇಳಿದಳು. ಆ ಕಡೆಯಿದ್ದ ಅಣ್ಣನಿಗೂ ದು:ಖ ಒತ್ತರಿಸಿ ಬಂತು. ಕೊನೆಗಾತ ಹೇಳಿದ. ಭೂಮಿ ನನ್ನ ದುರ್ದೈವ. ಅಪ್ಪನ ಚಿತೆಗೂ ಕೊಳ್ಳಿ ಇಡಲಾಗುತ್ತಿಲ್ಲ. ನಾನು ಸುಂದರಣ್ಣನಿಗೆ ಫೋನು ಮಾಡಿ ವ್ಯವಸ್ಥೆ ಮಾಡಲು ಹೇಳುತ್ತೇನೆ. ನೀನು ಸಾಧ್ಯವಾದರೆ ಗಣೇಶಣ್ಣ್ಣನಿಗೆ ಹೇಳಿ ಅಂತ್ಯ ಸಂಸ್ಕಾರವನ್ನು ರೆಕಾರ್ಡ್ ಮಾಡಿ ಕಳಿಸುವೆಯಾ..?.. ದಯವಿಟ್ಟು.. ಎಂದು ಅತ್ತ.
'ಥೂ.. ನಿನ್ನ.. ' ಅಳುವಿನ ನಡುವೆಯೂ ಕೋಪಗೊಂಡ ಭೂಮಿ ಕಾಲ್ ಕಟ್ ಮಾಡಿದಳು.
ಸುಂದರಣ್ಣನ ನೇತೃತ್ವದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿಗಳು ನಡೆಯಿತು. ಮಗ ಬಾರದೇ ಇರುವ ಕಾರಣ ಶಂಕರ ಭಟ್ರ ಅಣ್ಣನ ಮಗ ಗಣೇಶ ಚಿತೆಗೆ ಬೆಂಕಿ ಇಡುವುದೆಂದು ಹಿರಿಯರು ತೀರ್ಮಾನಿಸಿದರು.
ನಡುಮನೆಯಲ್ಲಿ ತಲೆಯ ಮೇಲೆ ಮತ್ತು ಕಾಲಿನಕೆಳಗೆ ಇಟ್ಟಿದ್ದ ಪಡಿಯಕ್ಕಿಯಲ್ಲಿ ತುಪ್ಪದ ದೀಪ ಉರಿಯುತ್ತಿತ್ತು. ಈ ನಡುವೆ ಬಿಳಿ ಬಟ್ಟೆ ಮುಚ್ಚಿಕೊಂಡ ಶಂಕರ ಭಟ್ರ ದೇಹ. ನಾಲ್ಕು ಜನ ಬಂದು ದೇಹವನ್ನು ಎತ್ತಿ ಸ್ನಾನ ಮಾಡಿಸಿ, ಹಣೆಗೆ ಗಂಧವನ್ನಿಟ್ಟು, ಮಲ್ಲಿಗೆಯ ಹಾರವೊಂದನ್ನು ಹಾಕಿ , ಬಿದಿರಿನಿಂದ ಮಾಡಿದ ಚಟ್ಟದಲ್ಲಿ ಮಲಗಿಸಿದರು. ಗಣೇಶ ಮಡಕೆಯಲ್ಲಿ ಹಾಕಿದ ಕೆಂಡವನ್ನು ಹಿಡಿದುಕೊಂಡು ಮುಂದೆ ಮುಂದೆ .. ನಾಲ್ಕು ಜನರ ಹೆಗಲ ಮೇಲೆ ಭಟ್ರ ದೇಹ ಹಿಂದೆ ಹಿಂದೆ.. ಕಣ್ಣಿನಿಂದ ರಕ್ತವೇ ಹೊರಬರುತ್ತಿದೆಯೋ ಎಂಬಷ್ಟು ಕೆಂಪಗಾಗಿದ್ದ ಕಣ್ಣನ್ನೂ ಮತ್ತೂ ಒರೆಸುತ್ತಾ ಭೂಮಿ ಮತ್ತು ಗಿರಿಜಮ್ಮ ಜನರ ಜತೆ ಭಾರವಾದ ಹೆಜ್ಜೆಯಿಡುತ್ತಾ ಸಾಗಿದರು.
ಕಟ್ಟಿಗೆಯ ರಾಶಿಯ ಮೇಲೆ ದೇಹವನ್ನಿಟ್ಟರು. ಗಿರಿಜಮ್ಮ ಹಣೆಯ ಕುಂಕುಮ ಒರೆಸಿ, ಕರಿಮಣಿ ತೆಗೆದಿಟ್ಟು, ಕೈಯ ಬಳೆಗಳನ್ನೊಡೆದು ಒಮ್ಮೆ ತನ್ನ ಬಾಳಸಂಗಾತಿಯ ಕೆನ್ನೆಯನ್ನು ಸವರಿದರು. ಗಿರಿಜಮ್ಮನ ಕಣ್ಣಿನಿಂದ ಇಳಿದ ನೀರು ಭಟ್ರ ಕೆನ್ನೆಯಲ್ಲಿ ಹರಿಯಿತು. ಭೂಮಿ ತಾನಳುತ್ತಾ ಅಮ್ಮನಿಗೆ ಸಮಾಧಾನ ಹೇಳುತ್ತಿದ್ದಳು.
ಇನ್ನೇನು ಕಿಚ್ಚು ಕೊಡಬೇಕು ಎನ್ನುವಷ್ಟರಲ್ಲಿ ಭೂಮಿ ಗಣೇಶಣ್ಣನಲ್ಲಿ ಏನೋ ಹೇಳಿ ಮನೆಯತ್ತ ಹೋದಳು. ಎರಡೇ ನಿಮಿಷದಲ್ಲಿ ಮರಳಿ ಬಂದ ಭೂಮಿಯ ಕೈಯಲ್ಲಿ ವೈನಿಟಿ ಬ್ಯಾಗ್ನಲ್ಲಿದ್ದ ಐನೂರರ ಐದು ನೋಟುಗಳು ಮತ್ತು ಗದ್ದೆಯಲ್ಲಿ ಸಿಕ್ಕಿದ ನವಿಲುಗರಿಯಿತ್ತು. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಗೋಳೋ.. ಎಂದು ಅತ್ತ ಭೂಮಿ ಅವನ್ನು ಅಪ್ಪನ ಕೈಯಲ್ಲಿಟ್ಟು ಕುಸಿದು ಕುಳಿತಳು.
ದಿವ್ಯಶ್ರೀ ಡೆಂಬಳ.
ಪ್ರಾದೇಶಿಕ ಸುದ್ದಿ
ಮೂಡುಬಿದಿರೆ: ಕವಿ, ವಿಮರ್ಶಕ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಧನಂಜಯ ಕುಂಬ್ಳೆ ಇವರಿಗೆ ಕಣ್ಣೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಅವರು ಕಾಸರಗೋಡಿನಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಅರುಣಾಬ್ಜ ಮತ್ತು ಕುಮಾರವ್ಯಾಸ : ತೌಲನಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿ ನೀಡಿದೆ. ಪ್ರಬಂಧವು ತುಳುವಿನ ಉಪಲಬ್ಧ ಮೊದಲ ಮಹಾಕಾವ್ಯ ಅರುಣಾಬ್ಜ ಕವಿಯ 'ಮಹಾಭಾರತೋ' ಕೃತಿಯ ವಿಸ್ತೃತ ಅಧ್ಯಯನವಾಗಿದ್ದು, ಕನ್ನಡ-ತುಳು ಕಾವ್ಯದ ಕುರಿತ ತೌಲನಿಕ ಸಂಶೋಧನೆಯ ಮೊದಲ ಪ್ರಯತ್ನವಾಗಿದೆ.
ಇವರು ಮೊದಲ ಪಾಪ, ಹಾಡು ಕಲಿತ ಹಕ್ಕಿಗೆ (ಕವನ ಸಂಕಲನಗಳು), ಪಾಲ್ಗಡಲ ಮುತ್ತುಗಳು (ಸಂಪಾದಿತ ಹನಿಗವನ ಸಂಕಲನ), ನಾನು ಮತ್ತು ಆಕಾಶ (ವಿಮರ್ಶೆ), ಕಜಂಪಾಡಿ ರಾಮ (ವ್ಯಕ್ತಿಚಿತ್ರ) ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕಾರ್ನಾಡು ಸದಾಶಿವರಾವ್ ಕಾವ್ಯ ಪ್ರಶಸ್ತಿ, ಸೃಜನಶೀಲ ಬರಹಗಾರ ಪ್ರಶಸ್ತಿ, ವರ್ಷದ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ದೊರಕಿದೆ. ರಾಜ್ಯ , ವಿಶ್ವವಿದ್ಯಾಲಯ ಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.
ಇದು ದೀಪೋತ್ಸವ...
ಮುಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ಮುಂಜಾನೆ ಜರುಗಿದ ದೀಪೋತ್ಸವ ದೃಶ್ಯಗಳು. ಚಿತ್ರ: ಚಿತ್ರಾಲಯ ಮೂಲ್ಕಿ.
ಇನ್ನಷ್ಟು ಚಿತ್ರಗಳಿಗಾಗಿ ಮುಂದೆ ಓದಿ...






Video
