ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
7:22 PM

ನಮ್ಮೂರ ಯುವರಾಣಿ

Posted by ekanasu

ಪ್ರಾದೇಶಿಕ ಸುದ್ದಿ


ಈಟೀವಿ ಕನ್ನಡ ವಾಹಿನಿಯು ಹೊಸ
ವರ್ಷಕ್ಕೆ ವಿನೂತನ ಕೊಡುಗೆಯಾಗಿ ಹೊಚ್ಚ ಹೊಸ ಕಾರ್ಯಕ್ರಮ ನಮ್ಮೂರ ಯುವರಾಣಿಯನ್ನು ಬರುವ ಜನೆವರಿ 1, 2011 ರಂದು ಪ್ರತಿ ಶನಿವಾರ ರಾತ್ರಿ 8-30 ಕ್ಕೆ ಪ್ರಸಾರ ಪ್ರಾರಂಭಿಸುತ್ತಿದೆ.ನಮ್ಮೂರ ಯುವರಾಣಿ ಕಾರ್ಯಕ್ರಮ ಸ್ಪರ್ಧೆಯೊಂದಿಗೆ ಮನರಂಜನೆ ನೀಡುವಂತಹದ್ದು. ಈ ಕಾರ್ಯಕ್ರಮಕ್ಕೆ 9 ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಐವರು ಫ್ಯಾಶನ್ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಮಾನಸ, ಸುಷ್ಮಾ,
ರಕ್ಷಾ, ಸಂಜನಾ, ರಶ್ಮಿ ಮತ್ತು ನಾಲ್ವರು ಕನ್ನಡ ಚಿತ್ರರಂಗದಲ್ಲಿ ಹೆಸರುಮಾಡಿದ ಯುವ ನಟಿಯರುಗಳಾದ ಮೈತ್ರಿಯಾ,
ತೇಜಶ್ವಿನಿ, ಸಿಂಧೂ, ರೂಪಶ್ರೀ ಈಗ ಈಟೀವಿಯ ನಮ್ಮೂರ ಯುವರಾಣಿಯ ಸ್ಪರ್ಧಾರ್ಥಿಗಳು.

ಮುಂದೆ ಓದಿ

ಭಕ್ತಿ ಸಿಂಚನ
ಹರೇ ರಾಮ
ಬದುಕು ಮುಂದೆ ಸಾಗಬೇಕು..
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..
ಬದುಕು ಮುಂದೆ ಸಾಗಲು ಬೇಕು “ಪ್ರೀತಿ”
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು “ನೀತಿ”
ಬದುಕು ಚಲಿಸಲು ಬೇಕು ’ಪ್ರೀತಿ” ಎಂಬ ಚಾಲನಾಶಕ್ತಿ..
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು “ನೀತಿ ’ಎಂಬ ಚಾಲಕ..
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!




ಆದುದರಿಂದಲೇ ವಾಲ್ಮೀಕಿಗಳು ನಾಡು- ನರೇಶರ ಬಗೆಗೆ ಕೋಸಲದ ಮಂತ್ರಿಗಳಿಗಿದ್ದ ಪ್ರೀತಿಯನ್ನು ವರ್ಣಿಸುವಾಗ ನೀತಿಯನ್ನು ಮರೆಯಲಿಲ್ಲ..!
ಅಯೋಧ್ಯೆಯ ಮಂತ್ರಿಗಳ ನೀತಿಯ ಪರಿಯನ್ನು ಮುನಿನಯನಗಳ ಮೂಲಕ ನೋಡೋಣವೇ..?

* ನೀತಿಮಂತಃ :
ನೀತಿ ಶಬ್ದದ ನಿಷ್ಪತ್ತಿ ‘ಣೀಞ್ – ಪ್ರಾಪಣೇ‘ ಎಂಬ ಧಾತುವಿನಿಂದ…
ಪ್ರಾಪಣವೆಂದರೆ ತಲುಪಿಸುವುದು…
ಭೂಲೋಕದಿಂದ ಭಾಲೋಕಕ್ಕೆ, ‘ಪಾಪದಿಂದ ಪಾದಕ್ಕೆ’ ಅಸತ್ಯದಿಂದ ಸತ್ಯಕ್ಕೆ, ಕ್ಷೋಭೆಯಿಂದ ಶಾಂತಿಗೆ ಯಾವುದು ನಮ್ಮನ್ನು ತಲುಪಿಸುವುದೋ ಅದುವೇ ನೀತಿ..
ಅದುವೇ ಸತ್ಪುರುಷರ ಬದುಕಿನ ರೀತಿ..
ಅಮಾತ್ಯರು ಪ್ರೀತಿಮಂತರು ಮಾತ್ರವಲ್ಲ, ನೀತಿಮಂತರೂ ಆಗಿದ್ದರು..

* ಜಾಗ್ರತೋ ನಯಚಕ್ಷುಷಾ –
ಬಾಹ್ಯನಯನಗಳು ನಿದ್ರಿಸಲಿ, ಚಿಂತೆಯಿಲ್ಲ..
ನೀತಿನಯನವು ನಿದ್ರಿಸಿದರೆ ಭೀತಿ ತಪ್ಪಿದ್ದಲ್ಲ..!
ಆದರೆ ಅಯೋಧ್ಯೆಯನ್ನೆಂದಿಗೂ ಭೀತಿ ಮುಟ್ಟಲು ಸಾಧ್ಯವಿರಲಿಲ್ಲ..
ಏಕೆಂದರೆ ಸೂರ್ಯಸಿಂಹಾಸನದ ಸೇವಕರ ನೀತಿನೇತ್ರಗಳು ನರರ-ನರೇಂದ್ರನ ರಕ್ಷೆಯ ವಿಷಯದಲ್ಲಿ ಸದಾ ಜಾಗೃತವಾಗಿಯೇ ಇರುತ್ತಿದ್ದವು..
ನೀತಿಯಿರುವಲ್ಲಿ ಭೀತಿಗೆ ಎಡೆಯೆಲ್ಲಿ..?

*ಕ್ರೋಧಾತ್ ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ ||
ಕಾಮಕ್ಕಾಗಿಯಾಗಲೀ, ಕ್ರೋಧದಿಂದಲಾಗಲೀ, ಲೋಭಕ್ಕೊಳಗಾಗಿಯಾಗಲೀ ಅವರು ಎಂದೂ ಸುಳ್ಳಾಡುತ್ತಿರಲಿಲ್ಲ..

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ|
ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾದೇತತ್ತ್ರಯಂ ತ್ಯಜೇತ್ ||
- ಭಗವದ್ಗೀತೆ
(ಕಾಮ-ಕ್ರೋಧ-ಲೋಭಗಳು ನರಕದ ಮುಬ್ಬಗೆಯ ದ್ವಾರಗಳು..
ನಮ್ಮೊಳಸೇರಿ ನಮ್ಮಾತ್ಮವನ್ನೇ ಹಾನಿಗೈಯುವವು..
ನಾಶ-ನರಕಗಳಿಂದ ಬಚಾವಾಗಬಯಸುವವನು ಇವುಗಳಿಂದ ದೂರವೇ ಇರಬೇಕು..)

ಮನವೆಂಬ ಅಂತರಂಗ ಮತ್ತು ಮಾತೆಂಬ ಬಹಿರಂಗಗಳ ನಡುವೆ ಸಾಮರಸ್ಯ-ಸಹಚಾರಗಳಿದ್ದರೆ ಅದುವೇ ’ಸತ್ಯ’
ದೌರ್ಭಾಗ್ಯವಶಾತ್ ಅವುಗಳ ನಡುವೆ ವೈರಸ್ಯ-ವ್ಯಭಿಚಾರಗಳುಂಟಾದರೆ ಅದುವೇ ಮಿಥ್ಯೆ..
ಒಂದು ಮನೆಯೊಳಗೆ ಬರುವ ಭಿನ್ನತೆಯೇ ಅದೆಷ್ಟು ಅಶಾಂತಿ- ಅನಾಹುತಗಳಿಗೆ ಕಾರಣವಾಗುತ್ತದೆ..!?
ಹಾಗಿರುವಾಗ ಒಂದಾಗಿಯೇ ಇರಬೇಕಾದ ಮೈ-ಮಾತು- ಮನಗಳೊಳಗೇ ಭಿನ್ನತೆ ಬಂದರೆ ಬದುಕು ಭಗ್ನವಾಗದೇ ಇದ್ದೀತೇ..?
ದೇಶವೆಂಬ ದೇಹಕ್ಕೆ ಮಂತ್ರಿಯೇ ಮನವಲ್ಲವೇ..?
ಆತನೇ ಸುಳ್ಳಾಡಿದರೆ ದೇಶವೇ ಸುಳ್ಳಾಗುವುದಿಲ್ಲವೇ..!?
ಒಮ್ಮೊಮ್ಮೆ ದುರ್ಲಾಭಗಳ ಲೋಭದಿಂದ, ಒಮ್ಮೊಮ್ಮೆ ನಿಷ್ಕಾರಣವಾದ ದ್ವೇಷದಿಂದ ಮಿಥ್ಯೆಗೆ ವಶವಾಗುವ ಇಂದಿನ ಮಂತ್ರಿಗಳಂತಿರಲಿಲ್ಲ ಅಂದಿನ ಅಯೋಧ್ಯೆಯ ಮಂತ್ರಿಗಳು..

ದಂಡನೀತಿ–
ಭಾರತೀಯ ಸಂಸ್ಕೃತಿಯಲ್ಲಿ ದಂಡವೆಂಬುದು ಜೀವಹಿತೈಷಿತೆಯ, ಜೀವಕಾರುಣ್ಯದ ಪ್ರತೀಕ..!
ಜೀವಹಿಂಸೆಯಲ್ಲವದು..!
ಕೊಲೆಗಡುಕನು ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..
ಕೊಲ್ಲುವುದೇ ಉದ್ದೇಶವಲ್ಲಿ..!
ವೈದ್ಯನೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..
ಬದುಕಿಸುವುದೇ ಉದ್ದೇಶವಲ್ಲಿ..!
ಭಾರತೀಯದಂಡನೀತಿಯೆಂದರೆ ಅದೊಂದು ಬಗೆಯ ಜೀವಚಿಕಿತ್ಸೆ..
ದೇಹದಲ್ಲಡಗಿದ ರೋಗದ ಗಡ್ಡೆಯನ್ನು ವೈದ್ಯನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವಂತೆ, ಜೀವದಲ್ಲಡಗಿದ ಪಾಪದ ಗಡ್ಡೆಯನ್ನು ದಂಡದ ಮೂಲಕ ತೆಗೆದು, ಜೀವವನ್ನು ಶುದ್ಧಗೊಳಿಸುವ, ಭವಿಷ್ಯವನ್ನು ಮಂಗಲಮಯಗೊಳಿಸುವ ವೈಜ್ಞಾನಿಕ ಪ್ರಕ್ರಿಯೆಯದು..!
ಆದುದರಿಂದಲೇ ಅಪರಾಧಿಯ ಮೇಲೆ ಕರುಣೆಯಿದ್ದರೆ ಆತನನ್ನು ದಂಡಿಸಲೇಬೇಕು..!!
ರಾಜನ, ರಾಜಪ್ರತಿನಿಧಿಗಳ ಕರ್ತವ್ಯವದು ..
ಹಾಗೆ ದಂಡಿಸದ ರಾಜನು ಅಪರಾಧಿಯ ಪಾಪದಲ್ಲಿ ತಾನೂ ಭಾಗಿಯಾಗುವನೆಂದು ಶಾಸ್ತ್ರಗಳು ಸಾರುತ್ತವೆ..!
ಅಯೋಧ್ಯೆಯ ಮಂತ್ರಿಗಳನ್ನು “ಸುತೀಕ್ಷ್ಣ ದಂಡ”ರೆಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ..
ಜೀವಗಳ ವಿಷಯದಲ್ಲಿ ಅವರು ಸುಮಕೋಮಲರು..
ಆದರೆ ಅಪರಾಧಗಳ ವಿಷಯದಲ್ಲಿ ವಜ್ರಕಠೋರರು..!!
ಏಕೆಂದರೆ ಅಪರಾಧಗಳೇ ಪಾಪದ ಗಡ್ಡೆಗಳಾಗಿ ಒಳಸೇರಿ ಜೀವವನ್ನು ಬಿಸುಡಿಸುತ್ತವೆ..ಜೀವದ ಉತ್ಕರ್ಷವನ್ನೇ ಹಾನಿಗೈಯುತ್ತವೆ..!!
ಅಪರಾಧಿಗಳನ್ನವರು ದಂಡಿಸದಿರುತ್ತಿರಲಿಲ್ಲ..ಆದರೆ ಅವರ ದಂಡದಲ್ಲಿ ರೋಷ-ದ್ವೇಷಗಳಿರಲಿಲ್ಲ..ವಿವೇಕವಿತ್ತು..!

ಸುತೀಕ್ಷ್ಣ ದಂಡಾಃ ಸಂಪ್ರೇಕ್ಶ್ಯ ಪುರುಷಸ್ಯ ಬಲಾಬಲಂ||
ದಂಡವೆಂಬುದು ಎಲ್ಲಾ ಅಪರಾಧಗಳಿಗೂ ಒಂದೇ ಆಗಲು ಸಾಧ್ಯವಿಲ್ಲ..
ಹಾಗೆಯೇ ಅಪರಾಧವು ಒಂದೇ ಆದರೂ ಅಪರಾಧಿಗಳು ಬೇರೆ ಬೇರೆಯಾದಾಗ ದಂಡವೂ ಬೇರೆ ಬೇರೆಯೇ ಆಗಬೇಕಾಗುತ್ತದೆ..
ಎಲ್ಲಾ ರೋಗಗಳಿಗೂ ಒಂದೇ ಚಿಕಿತ್ಸೆಯಲ್ಲ ..
ರೋಗವೊಂದೇ ಆದರೂ ಬೇರೆ ಬೇರೆ ರೋಗಿಗಳಿಗೆ ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ಚಿಕಿತ್ಸೆಯನ್ನೇ ನೀಡಬೇಕಾಗುತ್ತದೆ..!
ದೊಡ್ಡವರಿಗೆ ಕೊಡುವ ಔಷಧವನ್ನು ಎಳೆಮಗುವಿಗೆ ನೀಡಿದರೆ ಔಷಧವೇ ಮೃತ್ಯುವಾಗಬಹುದಲ್ಲವೇ..?

ಕುಶಲ ಶಿಕ್ಷಕನೊಬ್ಬ ತರಗತಿಯ ಮಕ್ಕಳನ್ನು ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ವಿಧದಲ್ಲಿ ತಿದ್ದುತ್ತಾನೆ..
ಕೆಲವು ಮಕ್ಕಳಿಗೆ ತೀಕ್ಷ್ಣ ದೃಷ್ಟಿಯೇ ಸಾಕಾದೀತು..
ಕೆಲವರಿಗೆ ಬೈಗುಳವೇ ಬೇಕಾದೀತು..!
ಕೆಲವರು ಬೆತ್ತದ ಹೊರತು ದಾರಿಗೆ ಬರಲಾರರು..
ಕೆಲವು ಸೂಕ್ಷ್ಮ ಸಂವೇದಿ ಮಕ್ಕಳಿಗೆ ಎಂದಿನಂತೆ ಮಾತಾಡದಿದ್ದರೆ ಸಾಕು, ಬೆತ್ತಕ್ಕಿಂತ ಹೆಚ್ಚು ಪರಿಣಾಮವನ್ನು ಅದುವೇ ಬೀರುತ್ತದೆ..

ಅಮಾತ್ಯರು ಅಪರಾಧಿಗಳನ್ನು ಕಂಡುಹಿಡಿದು ಕಠೋರವಾಗಿ ದಂಡಿಸುವುದು ಖಂಡಿತವಾಗಿದ್ದುದರಿಂದ ಅಯೋಧ್ಯೆಯಲ್ಲಿ ಅಪರಾಧಗಳಿಗೆ ಆಸ್ಪದವೇ ಇರಲಿಲ್ಲ..!
ಆದರೆ ಅಪರಾಧಿಗಳ -ಅಪರಾಧದ ಬಲಾಬಲಗಳನ್ನು ಚೆನ್ನಾಗಿ ವಿವೇಚಿಸಿಯೇ ಅವರು ದಂಡನೆ ನೀಡುವುದರಿಂದಾಗಿ ಅಪರಾಧಿಗಳಿಗೂ ಅನ್ಯಾಯವಾಗುತ್ತಿರಲಿಲ್ಲ..!

* ಪ್ರಾಪ್ತಕಾಲಂ ತು ತೇ ದಂಡಂ ಧಾರಯೇಯುಃ ಸುತೇಷ್ವಪಿ |
ಅಹಿತಂ ಚಾಪಿ ಪುರುಷಮ್ ನ ಹಿಂಸ್ಸುರವಿದೂಷಕಂ ||
ಹೆತ್ತ ಮಕ್ಕಳೇ ಆದರೂ ತಪ್ಪು ಮಾಡಿದರೆ ದಂಡಿಸದೇ ಬಿಡುತ್ತಿರಲಿಲ್ಲ..
ತಮಗಾಗದವರೇ ಆದರೂ ತಪ್ಪಿಲ್ಲದಲ್ಲಿ ಖಂಡಿತವಾಗಿಯೂ ದಂಡಿಸುತ್ತಿರಲಿಲ್ಲ..

“ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು, ಬೇಕಾದರೆ ನೂರು ಅಪರಾಧಿಗಳು ತಪ್ಪಿಸಿಕೊಳ್ಳಲಿ “
ಇದು ಇಂದಿನ ದಂಡತಜ್ಞರ ಘೋಷವಾಕ್ಯ..
“ಒಬ್ಬನೇ ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳಬಾರದು ..
ಒಬ್ಬನೇ ಒಬ್ಬ ನಿರಪರಾಧಿಯೂ ದಂಡನೆಗೊಳಗಾಗಬಾರದು “
ಇದು ಅಯೋಧ್ಯೆಯ ಅಮಾತ್ಯರ ಧ್ಯೇಯವಾಕ್ಯ..
ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದು ನಿರಪರಾಧಿಯ ಪೀಡನೆಯಲ್ಲಿಯೇ ಪರ್ಯವಸಾನವಾಗುತ್ತದೆ..
ರಾಜನಿಂದಲ್ಲವಾದರೂ ನಿರಂಕುಶರಾದ ದುರ್ಜನರಿಂದ ನಿರಪರಾಧಿಗಳು ಪೀಡನೆಗೆ ಒಳಗಾಗಿಯೇ ಒಳಗಾಗುತ್ತಾರೆ..!

ದಂಡಾಧಿಕಾರಿಯು ತನ್ನ ಕರ್ತವ್ಯವನ್ನು ನಿರ್ವಹಿಸುವಾಗ ರಾಗ-ದ್ವೇಷಗಳ ಪೂರ್ವಾಗ್ರಹಕ್ಕೆ ಒಳಗಾಗಲೇಬಾರದು..
ಹಾಗೊಂದು ವೇಳೆ ಒಳಗಾದರೆ “ವ್ಯಾಮೋಹವಿರುವಲ್ಲಿ ಅಪರಾಧಿಗೂ ದಂಡನೆಯಿಲ್ಲ..ವಿರೋಧವಿರುವಲ್ಲಿ ನಿರಪರಾಧಿಗೂ ದಂಡನೆ”ಎಂಬಂತೆ ಆಗಿಬಿಡುತ್ತದೆ..!
ಅಯೋಧ್ಯೆಯ ಅಮಾತ್ಯರು ದಂಡವನ್ನು ಧಾರಣೆ ಮಾಡುವಾಗ ಅವರಿಗೆ ಗೋಚರಿಸುತ್ತಿದ್ದುದು “ಅಪರಾಧ-ನಿರಪರಾಧಗಳು” ಮಾತ್ರ..!
ವೈಯಕ್ತಿಕ ಸಂಬಂಧಗಳು ಆ ಸಮಯದಲ್ಲಿ ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ..!!

ಅದರೊಂದಿದೆ…
ದಂಡವಿರುವುದು ಕೇವಲ ಶಿಕ್ಷೆಗಾಗಿಯಲ್ಲ, ರಕ್ಷೆಗಾಗಿ..!
ಶಿಕ್ಷೆಗೆ ಶಿಕ್ಷೆಯೇ ಉದ್ದೇಶವಲ್ಲ..ರಕ್ಷೆಯದರ ಪರಮೋದ್ದೇಶ…
ಶಿಕ್ಷೆಯಿರುವುದು ಶಿಷ್ಟರನ್ನು ದುಷ್ಟರಿಂದ ರಕ್ಷಿಸಲು..
ಶಿಕ್ಷೆಯಿರುವುದು ದುಷ್ಟರನ್ನು ದುಷ್ಟತ್ವದಿಂದ ರಕ್ಷಿಸಲು- ಶಿಷ್ಟರನ್ನಾಗಿಸಲು..
ಅಯೋಧ್ಯೆಯ ಮಂತ್ರಿಗಳು ಧರಿಸಿದ್ದ ದಂಡವು ಈ ಬಗೆಯದೆಂಬುದನ್ನು ಮುನಿಪದಗಳು ಬಣ್ಣಿಸಿದ ಪರಿಯಿದು..

ಶುಚೀನಾಂ ರಕ್ಷಿತಾರಶ್ಚ ನಿತ್ಯಂ ವಿಷಯವಾಸಿನಾಮ್ ||
ದುಷ್ಟರ ವಿಷಯದಲ್ಲಿ ಯಮನ ಮನ..
ಶಿಷ್ಟರ ವಿಷಯದಲ್ಲಿ ಸುಮನಮನ..

ಧರ್ಮಕಂಟಕರಿಗೆ ಭಯಂಕರರು..
ಧರ್ಮಶೀಲರಿಗೆ ಅಭಯಂಕರರು..

ತಪ್ಪು ಕಂಡಲ್ಲಿ ಬೆಂಕಿಯಾಗಿ, ಒಪ್ಪು ಕಂಡಲ್ಲಿ ಬೆಳಕಾಗಿ ಬಾಳಿದರವರು..ಆಳಿದರವರು.!
( ಶ್ರೀ ಗುರುಗಳ ಅಮೃತ ಆಶೀರ್ವಚನಕ್ಕಾಗಿ ಹರೇ ರಾಮ.ಇನ್ ಲಾಗ್ ಇನ್ ಮಾಡಿರಿ. - ಸಂ.)

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು : ನೇತ್ರಾವತಿ-ಗುರುಪುರ ನದಿಗಳು ಸಮದ್ರದಲ್ಲಿ ಸೇರುವ ಅಳೆವೆ ಬಾಗಿಲಿನ ದಕ್ಷಿಣ ಬ್ರೇಕ್ ವಾಟರ್ ಹತ್ತಿರದಲ್ಲಿ ತುಂಬಿರುವ ಹೂಳನ್ನು ತೆಗೆಯುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದು ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರ ನಿರ್ದೇಶನದಂತೆ ಜಿಎಂಆರ್ ಎನರ್ಜಿ ಸಂಸ್ಥೆಯವರು ಸಿಂಧೂರಾಜ್ ಎಂಬ ಡ್ರೆಜ್ಜರನ್ನು ಕೇರಳದಿಂದ ತರಿಸಿ ಹೂಳು ತೆಗೆಯುವ ಕಾರ್ಯಾಚರಣೆಗೆ ತೊಡಗಿಸಿರುತ್ತಾರೆ.ಸಿಂದೂರಾಜ್ ಜಪಾನ್ ನಿರ್ಮಿತ ಅತ್ಯಾಧುನಿಕ ಡ್ರೆಜ್ಜರ್ ಇದಾಗಿದ್ದು, ಕೇಂದ್ರ ಸರ್ಕಾರದಿಂದ ಇದನ್ನು ಖರೀದಿಸಿದೆ. ಇದರ ವೈಶಿಷ್ಟ್ಯವೆಂದರೆ ಕಡಿಮೆ ಆಳದ ಪ್ರದೇಶದಲ್ಲಿ ಡ್ರೆಜಿಂಗ್ ಮಾಡಲು ಶಕ್ತವಾಗಿದೆ. ಇದರಲ್ಲಿ ಅಳವಡಿಸಿರುವ ಜಿಪಿಎಸ್ ವ್ಯವಸ್ಥೆಯಿಂದಾಗಿ ಡ್ರೆಜ್ ಮಾಡುತ್ತಿರುವ ಪ್ರದೇಶದ ಆಳ ತಿಳಿಯಬಹುದಾಗಿದೆ. ಡಿಸೆಂಬರ್ 24ರಂದು ಡ್ರೆಜ್ ಮಾಡಲಾದ ಸ್ಥಳವನ್ನು ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳ ಮೀನುಗಾರರ ಪ್ರತಿನಿಧಿಗಳ ಜೊತೆಗೆ ಪರಿಶೀಲಿಸಲಾಗಿ ಅಲ್ಲಿ 3 ರಿಂದ 4.5 ಮೀಟರ್ ಆಳ ಇರುವುದು ಪತ್ತೆಯಾಗಿದ್ದು,, ಮೀನುಗಾರರ ಪ್ರತಿನಿಧಿಗಳು ಇನ್ನು ಸ್ವಲ್ಪ ಡ್ರೆಜಿಂಗ್ ಮಾಡಲು ವಿನಂತಿಸಿದ್ದು ಜಿಎಂಆರ್ ಎನರ್ಜಿ ಸಂಸ್ಥೆಯವರು ಇದಕ್ಕೆ ಒಪ್ಪಿರುತ್ತಾರೆ. ಈ ಬಗ್ಗೆ ಸಲಹೆಗಳೇನಾದರೂ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕಾಗಿ ಮೀನುಗಾರಿಕಾ ಉಪನಿರ್ದೇಶಕರಾದ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ

ಮುಂದೆ ಓದಿ

ವಿಚಾರ
ಶಿಕ್ಷಣ ಎಂದರೇನು, ಮಕ್ಕಳಿಗೆ ಯಾಕೆ ಶಿಕ್ಷಣ ಕೊಡಬೇಕು, ಶಿಕ್ಷಣದ ಹೆಸರಿನಲ್ಲಿ ಈಗ ಪ್ರಾಥಮಿಕ ಹಾಗೂ ಫ್ರೌಢ ತರಗತಿಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವಾಗ ಶಿಕ್ಷಣದ ಉದ್ದೇಶ ಮತ್ತು ಕಾರ್ಯರೂಪ ಒಂದಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ ಎಂದೆನಿಸುತ್ತಿದೆ.

ಒಂದೊಂದು ಕ್ಲಾಸ್ಗೂ ಪಠ್ಯ ಪುಸ್ತಕಗಳು. ತರಗತಿಗಳಲ್ಲಿಅದರಲ್ಲಿದ್ದ ಪಾಠಗಳನ್ನು ವಿವರಿಸುವುದು, ಆಮೇಲೆ ಪಾಠದ ಕೊನೆಯಲ್ಲಿ ಇರುವ ಪ್ರಶ್ನೋತ್ತರಗಳನ್ನು, ಅಭ್ಯಾಸಗಳನ್ನು ನೋಟ್ಸ್ಪುಸ್ತಕಗಳಲ್ಲಿ ಬರೆಸುವುದು, ಮಕ್ಕಳು ಅವುಗಳನ್ನು ಬಾಯಿಪಾಠ ಮಾಡುವುದು, ಆ ಮಾಹಿತಿಗಳಲ್ಲಿ ಕೆಲವನ್ನು ನೆನಪಿನ ಆಧಾರದ ಮೇಲೆ ನಡೆಯುವ ಪರೀಕ್ಷೆಗಳಲ್ಲಿ ಬರೆಸುವುದು. ಆ ಪರೀಕ್ಷೆಗಳ ಪೇಪರ್ ಮೌಲ್ಯಮಾಪನ(?) ಮಾಡುವುದು. ನಿರೀಕ್ಷಿಸಿದ ಉತ್ತರ ಇದ್ದರೆ ಅದಕ್ಕೆ ಪೂರ್ವನಿಗದಿ ಪಡಿಸಿದ ಮಾರ್ಕ್ ಕೊಡುವುದು. ಇಲ್ಲದಿದ್ದರೆ ಇಲ್ಲ. ಅದರಲ್ಲಿ ಸಿಕ್ಕಿದ ಮಾರ್ಕ್ ಗಳನ್ನು ಬರೆದು ನಿನ್ನ ಅರ್ಹತೆ ಇಷ್ಟು (ಪ್ರಗತಿ ಪತ್ರ) ಎಂದು ಅದನ್ನು ವಿದ್ಯಾರ್ಧಿಗಳಿಗೆ ಕೊಡುವುದು. ಇದು ಇಂದಿನ ನಮ್ಮ ಯಾಂತ್ರಿಕ ಶಿಕ್ಷಣ ವ್ಯವಸ್ಥೆ. ಅಂದರೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ 'ಪರೀಕ್ಷೆ' ಹಾಗೂ ಅದಕ್ಕೆ ಬೇಕಾದ 'ಮಾಹಿತಿಗಳ ಬಾಯಿಪಾಠ'ದ ಮೇಲೆ ಕೇಂದ್ರಿತವಾಗಿದೆ.




ಮಕ್ಕಳಿಗೆ ಪಠ್ಯದಲ್ಲಿದುದು ಅಥವಾ ನೋಟ್ಸ್ನಲ್ಲಿ ಕೊಟ್ಟದ್ದು ಬಿಟ್ಟು ಬೇರೇ ರೀತಿ ಆಲೋಚಿಸುವ ಹಕ್ಕು ಇಲ್ಲ, ಬರೆಯುವ ಹಕ್ಕು ಇಲ್ಲ. ತನಗೆ ಸಾಧ್ಯವಿಲ್ಲದಿದ್ದರೂ ಬಲವಂತವಾಗಿ ನಿರೀಕ್ಷಿಸಿದ ರೀತಿ0ೆು ಕಲಿ0ುಬೇಕು. ನಿರೀಕ್ಷಿಸಿದ ರೀತಿಯೇ ಉತ್ತರ ಬರೆಯಬೇಕು. ಸ್ವಂತ ಚಿಂತನೆ ಮಾಡುವ ಅವಕಾಶವಿಲ್ಲ.

ನಾವು ಮಕ್ಕಳನ್ನು ಪರೀಕ್ಷೆಗಾಗಿ ತಯಾರು ಮಾಡುತ್ತಿದ್ದೇವೆ. ಮಾರ್ಕ್ ನಲ್ಲಿ ಅಳೆಯುತ್ತೇವೆ. ಇದೇ ಶಿಕ್ಷಣ ಎಂದು ನಾವೆಲ್ಲ ತಿಳಿಯುತ್ತಿದ್ದೇವೆ.

ಇಲ್ಲಿ ಮಕ್ಕಳು ಜ್ಞಾನರಚನೆ ಮಾಡಿಕೊಳ್ಳುವುದಿಲ್ಲ. ಬರೇ ತಾತ್ಕಾಲಿಕ ಮಾಹಿತಿ ಸಂಗ್ರಹ ಮಾಡುತ್ತಾರೆ. ಪರೀಕ್ಷೆಮುಗಿದ ಮೇಲೆ ವಿಷಯಗಳನ್ನೆಲ್ಲ ಮರೆತು ಬಿಡುತ್ತಾರೆ. ಕೆಲವು ಸಮಯದ ಮೇಲೆ ವಿಷಯಗಳ ಬಗ್ಗೆ ಕೇಳಿದರೆ ಹೆಚ್ಚಿನ ಮಕ್ಕಳು ಹೇಳಲು ಅಸಮರ್ಥರು. ಸಾಮಾನ್ಯವಾಗಿ ಬರುವ ಪ್ರಶ್ನೆಗಳಿಗಷ್ಟೇ ಉತ್ತರ ಬಾಯಿಪಾಠ ಮಾಡಿ ಒಳ್ಳೆಯ ಮಾರ್ಕು ತೆಗೆಯುವವರಿದ್ದಾರೆ. ಇವರು ಜಾಣರೆನಿಸಿಕೊಳ್ಳುತ್ತಾರೆ. ಬಾಯಿಪಾಠ ಮಾಡಿಕೊಳ್ಳಲು ಸಾಧ್ಯವಿಲ್ಲದವರು ಅಥವ ಅರ್ಥವಾಗದೇ ನೆನಪಿಟ್ಟುಕೊಳ್ಳಲು ಅಸಮರ್ಥರಾದವರು ದಡ್ಡರೆನಿಸಿಕೊಳ್ಳುತ್ತಾರೆ.

ಈ ರೀತಿಯ ಪರೀಕ್ಷೆಗಳು ವಿದ್ಯಾರ್ಥಿಯ ಇತರ ಸಾಮರ್ಥ್ಯಗಳನ್ನು ಅಥವಾ ಕೌಶಲಗಳನ್ನು ಅಳೆಯುವುದಿಲ್ಲ. ಇಂಥ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರು ತಮ್ಮಲ್ಲಿರುವ ಇತರ ಸಾಮರ್ಥ್ಯಕ್ಕೂ ಬೆಲೆ ಕೊಡದೆ, ತಾನು ಅಪ್ರಯೋಜಕ ಎಂದು ಕುಗ್ಗಿ ಹೋಗುತ್ತಾರೆ.

ನಮ್ಮ ಪಠ್ಯಪುಸ್ತಕಗಳೂ ಇದಕ್ಕೆ ಪೂರಕವಾಗಿಯೇ ಇವೆ. ನಮ್ಮ ಪಠ್ಯ ಪುಸ್ತಕಗಳಲಿ ವಿಷಯದ ಹೊರೆ ಜಾಸ್ತಿ ಇದೆಯೇ ಹೊರತು ಬದುಕಿಗೆ ಬೇಕಾದ ಜ್ಞಾನ ಕಟ್ಟಿಕೊಳ್ಳುವಂತಹ ಪಾಠಗಳು ಕಡಿಮೆ. ಬ್ರಿಟಿಷರ ಕಾಲದಿಂದ ಇದ್ದಂತಹ ಪುಸ್ತಕಗಳಲ್ಲಿ ಆಗಾಗ ಸಣ್ಣಪುಟ್ಟ ಬದಲಾವಣೆಗಳನ್ನು ತಂದು ಹಾಗೆಯೇ ಅವನ್ನು ಮುಂದುವರೆಸಿದ್ದೇವೆ.

ಚರಿತ್ರೆಯಲ್ಲಿ ನಾವೇನು ಕಲಿಯುತ್ತೇವೆ...? ಯಾವ ರಾಜರು ಯಾರಡೊನೆ ಹೋರಾಡಿದರು, ಯಾರು ಗೆದ್ದರು ,ಯಾರು ಸೋತರು,ಯಾವ ಇಸವಿಯಲ್ಲಿ ರಾಜ ಪಟ್ಟಕ್ಕೇರಿದ, ಹೇಗೆ ಸಾಮ್ರಾಜ್ಯ ವಿಸ್ತರಿಸಿದ, ಅವರ ಸಾಮ್ರಾಜ್ಯದ ದೇಶದ ಯಾವ ಭಾಗದಲ್ಲಿತ್ತು ಎಂದು ನಕ್ಷೆ ಬರೆಯುವುದು, ಇಸವಿಗಳನ್ನು ನೆನಪಿಡುವುದು...
ಇದರ ಮೇಲಿನ ಪರೀಕ್ಷೆಗಳು ಮಕ್ಕಳಿಗೆ ಅಪ್ರಸ್ತುತ. ಜೀವನಕ್ಕೆ ಏನೂ ಅನ್ವಯವಾಗುವುದಿಲ್ಲ.

ಭೂಗೋಳದಲ್ಲಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿನ ಹವಾಮಾನ , ಭೌಗೋಳಿಕ ಲಕ್ಷಣಗಳು, ನದಿಗಳು, ಬೆಳೆಗಳು ಇವುಗಳಬಗ್ಗೆ ಮಾಹಿತಿಗಳನ್ನು ಬಾಯಿಪಾಠ ಮಾಡಿ (ಈ ವ0ುಸ್ಸಿನಲ್ಲಿ ಎಲ್ಲ ನೆನಪಿಡುವುದು ಕಷ್ಟ)ಪರೀಕ್ಷೆ ಮುಗಿದಕೂಡಲೇ ಮರೆತು ಬಿಡುವುದು.
ಇದರಿಂದ ಏನು ಕಲಿತ ಹಾಗಾಯ್ತು.

ಪಠ್ಯಪುಸ್ತಕದಲ್ಲಿ ಕಲಿಯುವ ಪೌರನೀತಿಯೆ ಬೇರೆ. ಸಮಾಜದಲ್ಲಿ ಕಾಣುವ ಪೌರನೀತಿಯೆ ಬೇರೆ.

ಭಾಷಾಪಾಠದಲ್ಲಿ ಕೂಡ ನಾವು ವ್ಯಾಕರಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ ಭಾಷಾ ಪರೀಕ್ಷೆ ಕೂಡ ಸಂಧಿ ಸಮಾಸ ವ್ಯಾಕರಣ, ಪದ್ಯ ಬಾಯಿಪಾಠ, ಪ್ರಶ್ನೋತ್ತರಗಳ ಬಾಯಿ ಪಾಠದ ಮೇಲೆ ಇರುತ್ತದೆ. ಅಭಿವ್ಯಕ್ತಿಗೆ ಅಥವ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಭಾಷಾಶಿಕ್ಷಣ ಅನುವು ಮಾಡಿ ಕೊಡುವುದಿಲ್ಲ. ಭಾಷಾ ಬೋಧನೆ ನಡೆಯುತ್ತಿದೆ ಭಾಷಾ ಬಳಕೆಯಲ್ಲ. ಈರೀತಿಯ ಭಾಷಾಶಿಕ್ಷಣ ಮಕ್ಕಳಲ್ಲಿ ಭಾಷಾಸಾಮರ್ಥ್ಯವನ್ನು ವೃದ್ಧಿಸುವುದಿಲ್ಲ. ಎಸ್ ಎಸ್ ಎಲ್ ಸಿ ವರೆಗೆ ಓದಿದದರೂ ಒಂದು ಅರ್ಜಿ ಬರೆಯಲು, ಒಂದು ವರದಿ ತಯಾರಿಸಲು, ಒಂದು ವಿಷಯದ ಮೇಲೆ ಸ್ವಂತವಾಗಿ ಹತ್ತು ಹದಿನೈದು ವಾಕ್ಯಗಳನ್ನು ಬರೆಯಲು ಎಷ್ಟು ಮಕ್ಕಳು ಸಮರ್ಥರು ಎಂಬುದನ್ನು ಮರು ಚಿಂತಿಸಬೇಕಾಗಿದೆ.


ಪಠ್ಯದಲ್ಲಿರುವ ಮಾಹಿತಿಗಳನ್ನು ಬಾಯಿ ಪಾಠ ಮಾಡಿ ಪರೀಕ್ಷೆ ಬರೆದು ಮುಗಿಸಿ, ಮುಗಿದ ತಕ್ಷಣ ಪಡೆದ ಮಾಹಿತಿ ಮರೆತು ಬಿಡುವುದಾದರೆ ಅಥವಾ ಕಲಿತದ್ದು ಬದುಕಿಗೆ ಅನ್ವಯಿಸಲು ಆಗುವುದಿಲ್ಲವಾದರೆ ಶಿಕ್ಷಣದಲ್ಲಿ ಎಲ್ಲೋ ಬದಲಾವಣೆ ಆಗಬೇಕು ಅಂತ ಅನಿಸುತ್ತದೆ. ಬರೇ ಬದಲಾವಣೆ ಅಲ್ಲ ಶೈಕ್ಷಣಿಕ ಕ್ರಾಂತಿ ಆಗಬೇಕು.

ದಿನ ದಿನಕ್ಕೆ ಬದುಕಿನ ಅವಶ್ಯಕತೆಗಳು ಬದಲಾಗುತ್ತಲೇ ಇವೆ. ನಮ್ಮ ಮಕ್ಕಳು ಬೆಳೆದು ನಿಲ್ಲುವಾಗ ಅವರಲ್ಲಿ ಜೀವನಕ್ಕೆ ಬೇಕಾದ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸದಿದ್ದರೆ ಶಿಕ್ಷಣಕ್ಕೆ ಏನು ಅರ್ಥ?
ನಮ್ಮ ಮಕ್ಕಳಿಗೆ ಬದುಕಲು ಎಂತಹ ಶಿಕ್ಷಣ ಬೇಕು ಎಂಬುದನ್ನು ಚಿಂತಿಸಿ ಅದಕ್ಕೆ ಪೂರಕವಾದ ಪಠ್ಯಕ್ರಮ ತಯಾರಿಸಬೇಕು. ಶಿಕ್ಷಣದ ಉದ್ದೇಶ ಅವುಗಳಲ್ಲಿ ಪ್ರತಿಫಲಿಸಬೇಕು. ನಮ್ಮ ಮಕ್ಕಳಿಗೆ ತಮ್ಮ ಬದುಕಿನ ಆವಶ್ಯಕತೆಗಳಿಗೆ ಸ್ಪಂದಿಸಲು ಸಾಮರ್ಥ್ಯ ಕೊಡುವ ಶಿಕ್ಷಣದ ಬಗ್ಗೆ ಚಿಂತಿಸಬೇಕು.

ಶಕುಂತಲಾ ನಾಯಕ್

ಮುಂದೆ ಓದಿ

ರಾಜ್ಯ - ರಾಷ್ಟ್ರ





ಬೆಂಗಳೂರು: ರಾಜ್ಯದಲ್ಲಿ ಮತ್ತೆ ಉಗ್ರರ ಭೀತಿ...!..ಹೌದು ಎನ್ನುತ್ತಿದೆ ಕೇಂದ್ರದ ಗುಪ್ತಚರ ಇಲಾಖೆ. ರಾಜ್ಯದ ಮೇಲೆ ಉಗ್ರರ ಕರಿನೆರಳು ಸೋಕುತ್ತಿದೆ. ಹೈ ಎಲರ್ಟ್ ಆಗಿರಿ ಎಂಬ ಸಂದೇಶವೂ ಗುಪ್ತಚರ ಇಲಾಖೆಯಿಂದ ಲಭಿಸಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ನಡೆಸಲಾಗಿದೆ.

ಕರಾವಳಿಯಮೂಲಕ ಉಗ್ರರು ಕರ್ನಾಟಕದ ಒಳ ನುಸುಳುವ ಸಾಧ್ಯತೆ ಅಧಿಕವಾಗಿದೆ ಎಂಬ ಮುನ್ಸೂಚನೆ ಲಭಿಸಿದೆ. ಇದಕ್ಕಾಗಿ ಕರಾವಳಿಯಾದ್ಯಂತ ಬಿಗು ಭದ್ರತಾ ವ್ಯವಸ್ಥೆಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದು ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿದೆ.

ಹೊಸ ವರುಷಾಚರಣೆಯ ಸಂದರ್ಭದಲ್ಲಿ ಈ ದಾಳಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜನ ನಿಬಿಡ ಪ್ರದೇಶವನ್ನೇ ಗುರಿಯಾಗಿಸಿಕೊಂಡು ಉಗ್ರ ದಾಳಿಗಳು ನಡೆಯಲಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮುಂದೆ ಓದಿ
7:39 PM

ಪ್ರಿಯ ಓದುಗರೇ...

Posted by ekanasu

ರಾಜ್ಯ - ರಾಷ್ಟ್ರ




ಪ್ರಿಯ ಓದುಗ ಮಿತ್ರರೇ...
ಈ ಕನಸು.ಕಾಂ ಗೆ ಇದೀಗ ಎರಡರ ಸಂಭ್ರಮ. ಎರಡು ವರುಷಗಳ ಹಿಂದೆ ಮಂಗಳೂರಿನ ಏಕೈಕ, ಮೊತ್ತ ಮೊದಲ ಕನ್ನಡ ಅಂತರ್ಜಾಲ ತಾಣವಾಗಿ ಬೆಳಕು ಕಂಡಿದ್ದ ಈ ಕನಸು.ಕಾಂ. ಹತ್ತು ಹಲವು ಹೊಸ ಪ್ರಯೋಗಗಳೊಂದಿಗೆ ಅಂತರ್ಜಾಲ ಪ್ರಪಂಚದಲ್ಲೇ ಉತ್ತಮ ಹೆಸರು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪ್ರೋತ್ಸಾಹ ನೀಡಿದ ಓದುಗ ಮಿತ್ರರಿಗೆ ಟೀಂ ಈ ಕನಸು ಕೃತಜ್ಞತೆ ಸಲ್ಲಿಸುತ್ತಿದೆ.
ಫೆಬ್ರವರಿ 28ರಂದು ಈ ಕನಸು ತನ್ನ ದ್ವಿತೀಯ ಹುಟ್ಟುಹಬ್ಬವನ್ನು ಆಚರಿಸಲಿದೆ.

ಈ ಕನಸು.ಕಾಂ ಯಾವುದೇ ವಾಣಿಜ್ಯ ದೃಷ್ಠಿಕೋನದಿಂದ ಕಾರ್ಯನಿರ್ವಹಿಸುತ್ತಿಲ್ಲ . ಬದಲಾಗಿ ಬರಹಗಾರರಿಗೊಂದು ಮುಕ್ತ ವೇದಿಕೆ ದೊರಕಬೇಕು. ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂಬ ದೃಷ್ಟಿಕೋನದಿಂದ ಈ ಕನಸು ಈ ತನಕ ಶ್ರಮಿಸಿದೆ. ಹಲವಾರು ಯುವ ಬರಹಗಾರರಿಗೆ ಇದೊಂದು ವೇದಿಕೆಯಾಗಿ ದೊರೆತಿದೆ ಎಂದು ತಿಳಿಸಲು ಸಂತಸವಾಗುತ್ತಿದೆ.

ಈ ಕನಸು.ಕಾಂ ಬಗ್ಗೆ ನಿಮ್ಮ ಅಭಿಪ್ರಾಯಗಳು ಮುಕ್ತವಾಗಿ ನಮಗೆ ಬೇಕು. ಮುಂದಿನ ದಿನಗಳಲ್ಲಿ ಈ ಕನಸು ಮುನ್ನಡೆಯಲು ತಮ್ಮ ಪ್ರೋತ್ಸಾಹ ಸರಕಾರ ಅತೀ ಅಗತ್ಯ. ನಿಮ್ಮ ಅಭಿಪ್ರಾಯಗಳನ್ನು editor@ekanasu.com ಗೆ ಮೇಲ್ ಮಾಡಿ. ಜೊತೆಗೆ ಒಂದು ಭಾವಚಿತ್ರಗಳಿರಲಿ. ಈ ಕನಸು ಹೇಗಿದ್ದರೆ ಚೆನ್ನ ಎಂಬ ಬಗ್ಗೆಯೂ ನಿಮ್ಮ ಅನಿಸಿಕೆಗಳಿರಲಿ.

ವಂದನೆಗಳೊಂದಿಗೆ
- ಟೀಂ ಈ ಕನಸು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು: ನಗರದ ಆಕರ್ಷಣೀಯ ಉದ್ಯಾನವಾದ ಕದ್ರಿ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಯಾತ್ರಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಉದ್ಯಾನವನದ ಒಳಗೆ ಫಲಕಗಳನ್ನು ಹಾಕಿಸುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೋಟಗಾರಿಕಾ ಇಲಾಖಾಧಿಕಾರಿಗೆ ಸೂಚಿಸಿದ್ದಾರೆ.



ಜಿಲ್ಲಾಧಿಕಾರಿಗಳು ಕದ್ರಿ ಉದ್ಯಾನವನದ ಸ್ಥಳ ಪರಿಶೀಲನೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಹೆದ್ದಾರಿ ಬದಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಆವರಣ ಗೋಡೆಯನ್ನು ಕಟ್ಟುತ್ತಿದ್ದು, ಈ ಕಾಮಗಾರಿಯನ್ನು ತುರ್ತಾಗಿ ಪೂರೈಸಲು ಸಂಬಂಧಪಟ್ಟ ಇಂಜಿನಿಯರ್ ಗೆ ಸೂಚಿಸಿದರು. ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಉದ್ಯಾನವನದಲ್ಲಿ ಪುಟಾಣಿ ರೈಲನ್ನು ಇನ್ನು 20 ದಿನಗಳೊಳಗೆ ಚಾಲನೆಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹೇಳಿದರು.

ರೈಲಿನ ಶೆಡ್ ಹಾಗೂ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಟೆಂಡರ್ ದಾರರಿಗೆ ಷರತ್ತಿನೊಂದಿಗೆ ವಹಿಸಲು ಸೂಚಿಸಿದೆ. ಪಾರ್ಕ್ ಹೈಮಾಸ್ಟ್ ಲೈಟನ್ನು ಮತ್ತು ಇತರ ವಿದ್ಯುತ್ ಜೋಡಣೆಗಳನ್ನು ಕೂಡಲೇ ಸರಿಪಡಿಸುವಂತೆ ಪಾಲಿಕೆ ಇಂಜಿನಿಯರ್ ಗೆ ಸೂಚಿಸಿದರು.

ಉದ್ಯಾನವನದ ಅಭಿವೃದ್ಧಿಗಿರುವ ತಾಂತ್ರಿಕ ತೊಂದರೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ನಿದರ್ೇಶಕರು, ತೋಟಗಾರಿಕಾ ಇಲಾಖೆ ಇವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಉದ್ಯಾನವನದ ಅಭಿವೃದ್ಧಿಗೆ 16 ಕೋಟಿ ರೂ. ಯೋಜನೆಯ ಪ್ರಸ್ತಾವವಿದ್ದು, ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿಗಳಿಗೆ ಕ್ರಮ ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು.

ಮುಂದೆ ಓದಿ
7:05 PM

ತಾಜ್ ಮಹಲ್

Posted by ekanasu

ಸಾಹಿತ್ಯ

ಮುಂದೆ ಓದಿ
8:35 PM

ಹರಿದಾಸ ಕೀರ್ತನೆ

Posted by ekanasu

ರಾಜ್ಯ - ರಾಷ್ಟ್ರ
ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ 'ಮಾಹಿತಿ ಮನರಂಜನೆ' ಕಾರ್ಯಕ್ರಮದಡಿ ಡಿಸೆಂಬರ್ 27 ರಂದು ಚಿತ್ರಕಲಾ ಪರಿಷತ್ತಿನಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಅವರಿಂದ ಹರಿದಾಸ ಕೀರ್ತನೆ ಹಾಗೂ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಹಾಗೂ ಕೃಷ್ಣ ಕಲ್ಚರಲ್ ಅಕಾಡೆಮಿಯ ವಿದುಷಿ ಕೆ. ನಾಗಲಕ್ಷ್ಮೀ ಮತ್ತು ತಂಡದವರಿದ ಭರತನಾಟ್ಯ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮೂಲದ ಕಿರಾಣಾ ಘರಾನಾದ ಗಾಯಕರಾದ ಜಯತೀರ್ಥ ಮೇವುಂಡಿ ಅವರು, ಎಳೆ ವಯಸ್ಸಿನಲ್ಲೇ ಪಂ. ಅರ್ಜುನ ನಾಕೋಡ ಅವರ ಬಳಿ ಆರಂಭಿಕ ತರಬೇತಿ ಪಡೆದರು. ನಂತರ ಸುಮಾರು 12 ವರ್ಷಗಳ ಕಾಲ ಭಾರತ ರತ್ನ ಪಂ. ಭೀಮಸೇನ ಜೋಷಿ ಅವರ ಶಿಷ್ಯ ದಿ. ಶ್ರೀಪತಿ ಪಾಡಿಗಾರ್ ಅವರ ಗರಡಿಯಲ್ಲಿ ಪಳಗಿದವರು.



ಶ್ರೀ ಕೃಷ್ಣ ಕಲ್ಚರಲ್ ಅಕಾಡೆಮಿಯ ವಿದುಷಿ ನಾಗಲಕ್ಷ್ಮೀ ಕೆ. ಅವರು ಎರಡು ದಶಕಗಳಿಂದ ನೃತ್ಯ ಸೇವೆಯಲ್ಲಿ ತೊಡಗಿದ್ದಾರೆ. ಭರತನಾಟ್ಯ, ಕೂಚಿಪುಡಿ, ಜಾನಪದ, ಬುಡಕಟ್ಟು ಪ್ರಕಾರಗಳು ಹಾಗೂ ಆಧುನಿಕ ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಇವರು ಅತ್ಯುತ್ತಮ ನೃತ್ಯ ಸಂಯೋಜಕರೂ ಹೌದು.

ಈ ಇಬ್ಬರೂ ಕಲಾವಿದರು ಡಿಸೆಂಬರ್ 27 ರಂದು ಸಂಜೆ 6.30 ಗಂಟೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದು, ಪ್ರವೇಶ ಉಚಿತವಾಗಿರುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಾರ್ತಾ ಇಲಾಖೆ ನಿರ್ದೇಶಕ ಡಾ. ಮುದ್ದು ಮೋಹನ್ ಮನವಿ ಮಾಡಿದ್ದಾರೆ.

ಮುಂದೆ ಓದಿ
8:21 PM

ಉತ್ಸವದ ಸಂಭ್ರಮ

Posted by ekanasu

ರಾಜ್ಯ - ರಾಷ್ಟ್ರ
ಹೊಸನಗರ: ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್ , ಶ್ರೀ ಸಂಸ್ಥಾನ ಗೋಕರ್ಣ - ಶ್ರೀ ರಾಮಚಂದ್ರಾಪುರ ಮಠ ಇದರ ಆಶ್ರಯದಲ್ಲಿ ನಿರಂತರ ಒಂದಿಲ್ಲೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ಸಮಾಜಕ್ಕೆ ಲಭಿಸುತ್ತಿರುವುದು ಗಮನಾರ್ಹ ಸಂಗತಿ. ಇದೀಗ ಜನವರಿ 1ರಿಂದ 3ರ ತನಕ ಇಲ್ಲಿ ಉತ್ಸಾಹದ ಉತ್ಸವಗಳ ಸಂಭ್ರಮ ನಡೆಯಲಿದೆ. ಶ್ರೀ ಶಾರದಾರಾಧನಮ್, ಪೂರ್ವಛಾತ್ರ ಸಂಗಮ, ಗಣಕ ಘಟಕ ಲೋಕಾರ್ಪಣ ಮತ್ತು ಛಾತ್ರೋತ್ಸವ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಲಿವೆ.





ಮುಂದೆ ಓದಿ

ಪ್ರಾದೇಶಿಕ ಸುದ್ದಿ











ಜಾನಪದ ಗ್ರಾಮೀಣ ಕ್ರೀಡೆಯಾದ ಕಂಬಳಗಳು ವೆಚ್ಚದಾಯಕವಾಗಿರುವುದರಿಂದ ಅದಕ್ಕೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಐತಿಹಾಸಿಕ ಪ್ರಸಿದ್ದ ಮೂಲ್ಕಿ ಸೀಮೆ ಅರಸು ಕಂಬಳ ಸಭಾ ಕಾರ್ಯಕ್ರಮದಲ್ಲಿ ದಾನಿ ತೋಕೂರು ಗುತ್ತು ಭಾಸ್ಕರ ಶೆಟ್ಟಿಯವರನ್ನು ಕಂಬಳ ಸಮಿತಿಯ ವತಿಯಿಂದ ಸನ್ಮಾನಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳ ರಘುರಾಮ ಶೆಟ್ಟಿ ವಹಿಸಿದ್ದರು. ಪಾದೆ ಮನೆ ಅಜಿತ್ ರೈ, ಎಡ್ಮೆಮಾರ್ ಪ್ರವೀಣ್ ಭೋಜ ಶೆಟ್ಟಿ,ಕಂಬಳ ಸಮಿತಿಯ ಗೌರವ ಅಧ್ಯಕ್ಷ ಎಂ.ಎಚ್.ಅರವಿಂದ ಪೂಂಜಾ,ಅಧ್ಯಕ್ಷ ಕೊಲ್ನಾಡು ಗುತ್ತು ರಾಮಚಂದ್ರ ನಾಯ್ಕ,ಕೆ.ತಿಮ್ಮಯ್ಯ ಶೆಟ್ಟಿ,ಕೆ.ಗೋಪಾಲಕೃಷ್ಣ ಪ್ರಭು,ಪಿ.ಶಾಂತಾರಾಮ ಶೆಟ್ಟಿ,ಪೈಯೊಟ್ಟು ಸದಾಶಿವ ಸಾಲ್ಯಾನ್,ಗುಣಪಾಲ ಕಡಂಬ,ವಿನೋದ್.ಎಸ್.ಸಾಲ್ಯಾನ್ ಮತ್ತಿತರರು ವೇದಿಕೆಯಲ್ಲಿದ್ದರು
ಚಿತ್ರ ವರದಿ: ಭಾಗ್ಯವಾನ್ ಮುಲ್ಕಿ

ಮುಂದೆ ಓದಿ

ವೈವಿಧ್ಯ






ಮತ್ತೊಮ್ಮೆ ಈ ಲೇಖನದ ಮೂಲಕ ನಿಮ್ಮನ್ನು ಕಾಪು ಬೀಚ್ಗೆ ಕರೆದೊಯ್ಯುವ ಅವಕಾಶ ನನಗೆ. ಈ ಬಾರಿ ನನಗೆ ಕಾಪು ಬೀಚ್ ಎಷ್ಟು ಪರಿಚಿತವಾಯಿತು ಅಂದ್ರೆ ಬಿಡುವಾದಾಗಲೆಲ್ಲಾ ಸಮುದ್ರ ದಂಡೆಯಲ್ಲಿ ಕುಳಿತು ರಿಲ್ಯಾಕ್ಸ್ ಆಗುವ ಕನಸು ಕಾಣುತ್ತಿದ್ದೆ. ಬೇರೆಲ್ಲಾ ಬೀಚ್ಗಳಿಗಿಂತಲೂ ಕಾಪು ಬೀಚ್ನ ಬಳಿ ಸಮುದ್ರ ದಂಡೆ ತೀರಾ ಸಮತಟ್ಟಾದ ಇಳಿಜಾರಾಗಿದ್ದು ಕಡಲ ಅಲೆಗಳ ಅಬ್ಬರ ಅಷ್ಟೊಂದು ಬಾದಿಸುವುದಿಲ್ಲ. ಹಾಗಂತ ನಾನು ಕಡಲಿನ ರೌದ್ರವತೆಯ ಅಲೆಗಳ ನಡುವೆ ಚೆಲ್ಲಾಟವಾಡುತ್ತಾ ರಿಸ್ಕ್ ತೆಗೆದುಕೊಳ್ಳುವವನೂ ಅಲ್ಲ. ಮರಗಳ ತಂಪು ತೋಪಿನಲ್ಲಿ ಕುಳಿತು ಅಲೆಗಳ ಸ್ವೇಚಂದ ಆಟವನ್ನು ನೋಡುತ್ತಾ ಮೈ ಮರೆತು ಹೋಗುವವನು ನಾನು. ಹಾಗೇ ನೋಡುತ್ತಾ ನೋಡುತ್ತಾ ನಾನು ದೀಪಸ್ತಂಭವಿರುವ ಬಂಡೆಯೇರಿ ಅದೆಷ್ಟೋ ಹೊತ್ತು ಕುಳಿತಿರುವಾಗ ಕಾಗೆಗಳ ಹಿಂಡು ನನ್ನ ಕೈಯಲ್ಲಿರುವ ಚರುಂಬುರಿಗಾಗಿ ಕಾದು ಕುಳಿತಿದ್ದವು. ಅವುಗಳಿಗೆ ಚರುಂಬರಿಯನ್ನು ಬಿಸಾಡುತ್ತಾ ಎತ್ತರಕ್ಕೆ ಹಾರುವ ಅವುಗಳ ಆಟವನ್ನು ನೋಡುತ್ತಾ ಇರುವಾಗ ಒಂದು ಜೋಡಿ ದೀಪಸ್ತಂಭದ ಒಳಗೆ ಹೋಗುವುದನ್ನು ಕಂಡೆ. ಅರೆ! ಏನಾಶ್ಚರ್ಯ ಲೈಟ್ಹೌಸ್ ಒಳಗಡೆ ಹೋಗುವುದಕ್ಕೆ ಬಿಡುತ್ತಾರೆಯೆ? ಅಂದುಕೊಂಡು ನಾನು ಎದ್ದು ನಿಂತೆ. ಕಾಗೆಗಳು ನಾನು ಎಸೆದ ಕಾಗದದ ಪೊಟ್ಟಣವನ್ನು ಹಿಡಿದುಕೊಂಡು ಒಂದನ್ನೊಂದು ಅಟ್ಟುತ್ತಾ ದೂರ ಹಾರಿದವು.

ಅನುಮಾನಿಸುತ್ತಲೇ ಒಳಗೆ ನಡೆದಾಗ ಹಿಂದಿ ಮಾತನಾಡುವಾತನೊಬ್ಬ ನನ್ನನ್ನು ತಡೆದು ನಿಲ್ಲಿಸಿದ. ನಾನು ಅವನನ್ನು ಮೇಲೆ ಹೋಗ ಬಹುದೆ? ಎಂದು ವಿಚಾರಿಸಿದೆ. ಆತ `ಖಂಡಿತವಾಗಿಯೂ, ಆದರೆ ಕ್ಯಾಮರಾ ತೆಗೆದುಕೊಂಡು ಹೋಗುವಂತ್ತಿಲ್ಲ' ಅಂದ. ನನ್ನ ಬಳಿ ಕ್ಯಾಮರಾ ಇಲ್ಲವಾದರಿಂದ `ಆಯ್ತು' ಅಂದೆ. ಅವನು ಐದು ರೂಪಾಯಿಯ ಒಂದು ಕೂಪನನ್ನು ಹರಿದು ನನ್ನತ್ತ ಚಾಚಿದ. ಅದನ್ನು ತೆಗೆದುಕೊಂಡು ಪರ್ಸ್ ತೆರೆದು ಐದು ರೂಪಾಯಿ ಕೊಟ್ಟು ಮೆಟ್ಟಿಲುಗಳತ್ತ ನಡೆದೆ. ಹೊಗೆ ಕೊಳವೆಯಂತೆ ವೃತ್ತಾಕಾರದಲ್ಲಿರುವ ದೀಪಸ್ತಂಭದ ಒಳಗೋಡೆಗೆ ಅಂಟಿಕೊಂಡಿರುವಂತಹ ಪುಟ್ಟಪುಟ್ಟ ಇಕ್ಕಟ್ಟಾದ ಮೆಟ್ಟಿಲುಗಳ ಮೇಲೆ ಹೆಜ್ಜೆಯಿಡುತ್ತಲೇ ಒಂದು ರೀತಿಯ ಪುಳಕವಾಗುತ್ತಿತ್ತು. ಕುತ್ತಿಗೆ ಎತ್ತಿ ಮೇಲೆ ನೋಡಿದರೆ ಮೇಲ್ಛಾವಣಿಯೆ ಕುಸಿದು ಬಿದ್ದಂತೆ ಕಾಣುತ್ತಿತ್ತು. ಧೈರ್ಯದಿಂದ ಸೈಡ್ ರಿಂಗ್ಸ್ಗಳನ್ನು ಹಿಡಿದುಕೊಂಡು ಮೆಟ್ಟಿಲುಗಳನ್ನು ಏರಿದೆ. ಮೇಲೆ ಹೋದ ಬಳಿಕ ಸಣ್ಣನೆಯ ಬಾಗಿಲಿನಿಂದ ಹೊರಗೆ ಬಂದರೆ ಕಬ್ಬಿಣದ ಆವರಣವಿರುವ ದೀಪಸ್ತಂಭದ ದೀಪವಿರುವ ಸುತ್ತು. ಅಲ್ಲಿಂದ ನಿಂತು ನೋಡಿದರೆ ಒಂದೆಡೆ ಅನಂತತೆಯವರೆ ಚಾಚಿರುವ ವಿಶಾಲವಾದ ಸಮುದ್ರ, ಇನ್ನೊಂದೆಡೆ ತೆಂಗಿನ ಮರಗಳ ಸಮೃದ್ಧ ಹಸಿರು ಹಿನ್ನಲೆಯ ವೈಭವ. ಸಣ್ಣ ಸಣ್ಣ ಗೊಂಬೆಗಳಂತೆ ಕಾಣುವ ಜನರು. ಕಣ್ಣಿನೆತ್ತರಕ್ಕೆ ಹಾರುವ ಸಮುದ್ರ ಕಾಗೆಗಳು, ಪಕ್ಷಿಗಳು. ದೂರದಿಂದ ಬಿಳಿಯ ಬಟ್ಟೆಯ ಸೆರಗನ್ನು ಹಾಸಿಕೊಂಡು ಬರುವ ಸಮುದ್ರದ ಅಲೆಗಳು. ಅಸ್ಪಷ್ಟವಾಗಿ ಕೇಳುವ ಅವುಗಳ ಬೋರ್ಗರೆತದ ಸದ್ದು. ನಾನೇನೋ ಸ್ವರ್ಗದಲ್ಲಿದ್ದೇನೋ ಅನಿಸಿತು. ನನಗಿಂತ ಮುಂದೆ ಏರಿದ ಜೋಡಿ ಹಿಂತಿರುಗುವ ಸೂಚನೆ ಕಂಡಿತು. ನಾನು ಪಕ್ಕಕ್ಕೆ ಸರಿದು ನಿಂತರೆ ಕೆಳಗೆ ಬಿದ್ದೆನೇನೋ ಅನಿಸಿ, ಸ್ವರ್ಗ ಸೇರುವೆನೇನೋ ಎಂದು ಹೆದರಿದೆ. ಕೊನೆಗೆ ಹೆದರಿ ಅವರ ಜೊತೆಗೆ ನಾನು ಕೆಳಗಿಳಿದೆ. ಕೆಳಗಿನಿಂದ ಮೇಲೆ ನೋಡಿದರೆ ದೀಪಸ್ತಂಭದ ದೃಶ್ಯ ಒಂದು ಬಸವನ ಹುಳುವಿನಂತೆ ಕಾಣುತ್ತಿತ್ತು. ಅಲ್ಲಿಂದ ಹೊರಗೆ ಬಂದು ಅಬ್ಬಾ! ಅನ್ನುತ್ತಾ ನಿಟ್ಟುಸಿರಿಟ್ಟೆ.

ಕುಂಜಾರುಗಿರಿಯ ಪಾದೆಯೇರಿ ಕುಳಿತರೆ ಸಂಜೆಯ ಹೊತ್ತು ಜಿಗ್ಗನೆ ಹೊತ್ತಿ ಮಾಯವಾಗುವ ಸರ್ಕಸ್ ಕಂಪನಿಯ ಬೆಳಕಿನಂತೆ ಕಾಣುವ ಲೈಟ್ ಹೌಸ್ನ ಬೆಳಕು ಆಕರ್ಷಕವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಆ ದೀಪಸ್ತಂಭದ ಬೆಳಕು ನೋಡುವುದಕ್ಕೆ ಸಂಜೆಯ ಹೊತ್ತು ಪಾದೆಯೇರಿ ಕುಳಿತುಕೊಳ್ಳುವುದಿತ್ತು.

ಸರಿಯಾಗಿ ನೆನಪಾಗುತ್ತಿಲ್ಲ ನಾನಾಗ ಡಿಗ್ರಿಯಲ್ಲಿದ್ದಿರಬಹುದು. ಆಗ ಸಲ್ಮಾನ್ಖಾನ್ ಅಭಿನಯದ ಮೊದಲ ಚಿತ್ರ `ಮೈನೆ ಪ್ಯಾರ್ ಕಿಯಾ' ಗಲ್ಲಾಪೆಟ್ಟಿಗೆಯನ್ನು ಬಾಚಿಕೊಂಡು ದೇಶ ವಿದೇಶದ ಮೂಲೆ ಮೂಲೆಗಳಲ್ಲಿಯೂ ಖ್ಯಾತಿ ಪಡೆದಿತ್ತು. ಭಾಗ್ಯಾಶ್ರೀಯೆಂಬ ಚೆಲುವೆ ಮತ್ತು ಸಲ್ಮಾನ್ ಖಾನ್ ಎಂಬ ಚಾಕಲೇಟ್ ಹೀರೋನ ಎಂಟ್ರಿಯ ಚಿತ್ರ ಯುವ ಪ್ರೇಮಿಗಳಿಬ್ಬರ ಸುತ್ತಾ ಹೆಣೆದ ಕಥೆಯಾದರೂ ಅದರ ಹಾಡುಗಳಿಂದಲೇ ಹೆಸರು ಪಡೆದಿತ್ತು. ಹಾಗೆ ಸಲ್ಮಾನ್ ಖಾನ್ನ ಬಗ್ಗೆ ತಿಳಿದುಕೊಳ್ಳುವುದಕ್ಕೆ ದಾರಿಯಾಯಿತು. ಅಂಗಡಿಗಳೆಲ್ಲಾ ಬಣ್ಣ ಬಣ್ಣದ ಪೋಸ್ಟ್ ಕಾರ್ಡ್ಗಳನ್ನು ನೇತು ಹಾಕಿ ಮಾರಾಟಮಾಡುತ್ತಿದ್ದಾಗ ಅದನ್ನೆಲ್ಲಾ ಒಟ್ಟು ಸೇರಿಸುವ ಹುಚ್ಚಿತ್ತು. ಒಂದು ರೂಪಾಯಿ ಕೊಟ್ಟರೆ ಐದು ಚೀಟಿಗಳನ್ನು ಎತ್ತುವ ಅವಕಾಶ. ಅದರಲ್ಲಿ ಒಂದಲ್ಲ ಒಂದು ಕಾರ್ಡ್ ನಮ್ಮ ಪಾಲಿಗಾಗುತ್ತಿತ್ತು.

ಅದೇ `ಮೈನೆ ಪ್ಯಾರ್ ಕಿಯಾ'ದ ಯುವ ಪ್ರೇಮಿ ಇದ್ದಕ್ಕಿದ್ದಂತೆ ಕಾಪು ಬೀಚ್ಗೆ ಬಂದಿಳಿದರೆ ಹೇಗಾಗ ಬೇಡ? ಹೌದು, ಆತ ಬಂದಿಳಿದ್ದದ್ದು ಹಿಂದಿ ಚಿತ್ರ `ಜಾಗೃತಿ'ಯ ಶೂಟಿಂಟ್ ಗಾಗಿ ಅವನ ಜೊತೆಗೆ ನಾಯಕಿಯಾಗಿ ಅಭಿನಯಿಸಿದ ಕರಿಷ್ಮಾ ಕಪೂರ್ ಡ್ಯೂಯೆಟ್ಗಾಗಿ ಕಾಪು ತೀರದಲ್ಲೆಲ್ಲಾ ಮತ್ತು ಸುತ್ತ ಮುತ್ತೆಲ್ಲಾ ಹಾಡಿ ನಲಿಯುವ, ಫೈಟಿಂಗ್ನ ದೃಶ್ಯಗಳ ಚಿತ್ರೀಕರಣವಾಗಿತ್ತು. ಚಿತ್ರೀಕರಣ ನಡೆಯುತ್ತಿರುವಾಗ ಜನ ಸೇರುವುದೇನೋ ಸಹಜ. ಆದರೆ ಶೂಟಿಂಗ್ಗೆ ತೊಂದರೆಯಾಗದಂತೆ ಅದನ್ನು ನೋಡುತ್ತಾ ಖುಷಿಪಡುವುದು ಸಭ್ಯತನ. ಆದರೆ ಶೂಟಿಂಗ್ಗೆ ಜನರ ಗುಂಪೆ ತೊಂದರೆ ಪಡಿಸಿದರೆ, ಸಿನಿಮಾ ಮಂದಿಯ ಗತಿಯೇನು? ಹಾಗೆಯೆ ಸಲ್ಲು ಅಭಿನಯದ ಜಾಗೃತಿ ಚಿತ್ರೀಕರಣವಾಗುತ್ತಿರುವಾಗ ಅಂತಹ ಒಂದು ಕಹಿ ಘಟನೆ ನಡೆದಿತ್ತು. ಯಾವುದೋ ವೃತ್ತಿ ಪರ ಕಾಲೇಜ್ ವಿದ್ಯಾರ್ಥಿಗಳು ಸಿನಿಮಾ ತಂಡದ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದೆ ಆ ಘಟನೆಗೆ ಕಾರಣವಾಯಿತಂತೆ. ಅಂತೂ ಎರಡು ದಿನಗಳ ಚಿತ್ರೀಕರಣ ಸಮುದ್ರ ತೀರದಲ್ಲಿಯೆ ಮುಗಿಸಿ ತಂಡ ಮರಳಿ ಮುಂಬೈ ಸೇರಿದ್ದೆ ಜುಲೈ 3, 1992ರಲ್ಲಿ `ಜಾಗೃತಿ' ಬಿಡುಗಡೆಯಾಗಿ ಜನಪ್ರಿಯ ಸಿನಿಮಾಗಳ ಸಾಲಿಗೆ ಸೇರಿತ್ತು.

ಸುರೇಶ್ ಕೃಷ್ಣ ನಿರ್ದೇಶನದ ರಾಮ್ ಶೆಟ್ಟಿಯವರ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರಿಷ್ಮಾ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರೆ ಉಳಿದಂತೆ ಪ್ರೇಮ್ ಚೋಪ್ರಾ, ಅಪರಾಜಿತಾ, ಬೀನಾ ಬ್ಯಾನರ್ಜಿ, ಪಂಕಜ್ ಧೀರ್, ಮೋಹನ್ ಜೋಶಿ ಮೊದಲಾದವರಿದ್ದರು.

ಮುಂಬೈನ ಕಪ್ಪು ಮರಳ ದಂಡೆಗಳಿಗಿಂತ ಆಕರ್ಷಕವಾಗಿರುವ ಕರ್ನಾಟಕದ ಕರಾವಳಿಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ. ರಾಮ್ ಶೆಟ್ಟಿಯವರು ಮೂಲತ: ದಕ್ಷಿಣಕನ್ನಡದವರೇ ಆಗಿರುವುದರಿಂದ ತಮ್ಮ `ಜಾಗೃತಿ' ಚಿತ್ರವನ್ನು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಚಿತ್ರೀಕರಿಸುವ ನಿರ್ಧಾರ ಮಾಡಿರಬಹುದು.

ಚಿತ್ರವೇನೋ ಬಿಡುಗಡೆಯಾಗಿ ದಕ್ಷಿಣ ಕನ್ನಡದಲ್ಲಿ ಶೂಟಿಂಗ್ ಆಗಿರುವ ಅನ್ನುವ ಅದ್ದೂರಿ ಪ್ರಚಾರವನ್ನೂ ಪಡೆದುಕೊಂಡಿತ್ತು. ಆದರೆ ಅದು ಮಂಗಳೂರಿನಲ್ಲಿ ಪ್ರದರ್ಶನ ಮುಗಿಸಿ ಉಡುಪಿಗೆ ಬರುವಷ್ಟರಲ್ಲಿ ನಾವು ತುದಿಗಾಲಲ್ಲಿ ನಿಂತಿದ್ದೆವು. ಕೊನೆಗೆ ಉಡುಪಿಯ ಥಿಯೇಟರ್ ಬಂದಾಗ ಹತ್ತು ಹದಿನೈದು ಮಂದಿ ಗೆಳೆಯರೆಲ್ಲ ಸೇರಿ ಸಿನಿಮಾ ನೋಡಲು ಹೊರಟೆವು. ನಮ್ಮ ಭಾಗ್ಯಕ್ಕೆ ಹೆಚ್ಚು ರಷ್ ಇಲ್ಲದ ಕಾರಣ ಟಿಕೇಟೇನೋ ಈಸಿಯಲ್ಲಿ ದೊರೆಯಿತು. ಆದರೆ ಒಳಗೆ ಹಳೆಯ ಸೀಟ್ಗಳಲ್ಲಿ ತಗಣೆ ಕಾಟ. ಮೊದಲೆ ಹಿಂದಿ ಸಿನಿಮಾ, ನಮ್ಮ ಕರಾವಳಿಯಲ್ಲಿ ಶೂಟಿಂಗ್ ಆಗಿದೆಯೆನ್ನುವ ಕಾರಣಕ್ಕೆ ಹೊರಟ ನಮಗೆ ನಿರಾಶೆಯಾಗದಿದ್ದರೂ ಒಂದು ಸಣ್ಣ ಇನ್ಸಿಡೆಂಟ್ ನಡೆಯಿತು.

ನಮ್ಮ ಜೊತೆಗೆ ಬಂದ ಒಬ್ಬ ಗೆಳೆಯನಿಗೆ ಒಂದು ಕರಾಬ್ ಸೀಟ್ ಸಿಕ್ಕಿತ್ತು. ನಾವೆಲ್ಲಾ ಒಂದೇ ಸಾಲಿನಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕೆನ್ನುವ ನಿಧಾರಕ್ಕೆ ಬಂದದ್ದರಿಂದ ಅವನಿಗೆ ಆ ಸೀಟ್ ಅನಿವಾರ್ಯವಾಗಿತ್ತು. ಸಿನಿಮಾದ ಇಂಟರ್ಮಿಷನ್ ಆಗುವ ಅರ್ಧಗಂಟೆ ಮೊದಲು ಆತನ ಸೀಟ್ ಮುರಿದು ದಡಕ್ಕನೆ ಕೆಳಗೆ ಬಿದ್ದ. ಬಿದ್ದ ಅವಮಾನಕ್ಕೆ ಅವನು ನೇರವಾಗಿ ಗೇಟ್ಕೀಪರ್ನ ಬಳಿಗೆ ಹೋಗಿ ಸಿನಿಮಾ ನಡೆಯುತ್ತಿರುವಂತೆಯೆ ಗಲಾಟೆ ಹಚ್ಚಿಕೊಂಡ. ಅಂತು ಅವನನ್ನು ಸಮಾಧಾನ ಪಡಿಸಿ ಕರೆತರಬೇಕಾದರೆ ಸಾಕೋ ಸಾಕಾಗಿತ್ತು. ಅಂತು ಜಾಗೃತಿ ನೋಡಿ ಹಿಂತಿರುಗಿದೆವು. ಹೀಗೆ ಲೇಖನವನ್ನು ಬರೆಯುವಾಗಲು ನೆನಪುಗಳನ್ನು ಮೆಲುಕು ಹಾಕಿಕೊಂಡಾಗ ಅಂತಹ ಘಟನೆಗಳನ್ನು ನೆನೆಸಿಕೊಂಡಾಗ ನಗು ಬರದಿರುವುದಿಲ್ಲ.

ಮುಂದೆ ಓದಿ

ರಾಜ್ಯ -ರಾಜಕೀಯ
ಬಂಗಾರಪ್ಪ ಪಕ್ಷಾಂತರ ಮಾಡಿದಾಗ ಶೇಕ್ಸ್ ಪಿಯರ್ ಟ್ರೆಜಿಡಿಗಳು ನೆನಪಾದವು...

ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಕಾಂಗ್ರೆಸ್, ಕಾಂಗ್ರೆಸ್ ಬಿಟ್ಟು ಕ್ರಾಂತಿರಂಗದ ಸ್ಥಾಪನೆ, ಕ್ರಾಂತಿರಂಗದಿಂದ ಪುನಃ ಕಾಂಗ್ರೆಸ್, ಕಾಂಗ್ರೆಸ್ ಬಿಟ್ಟು ಕರ್ನಾಟಕ ಕಾಂಗ್ರೆಸ್ ಪಕ್ಷಷದ ಸ್ಥಾಪನೆ, ಪುನಃ ಕಾಂಕ್ರೆಸ್ ಸೇರ್ಪಡೆ, ಕಾಂಗ್ರೆಸ್ ನಿಂದ ಬಿ.ಜೆ.ಪಿ, ಬಿ.ಜೆ.ಪಿ ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ, ಸಮಾಜವಾದಿಯಿಂದ ಕಾಂಗ್ರೆಸ್ ಇದು ಬಂಗಾರಪ್ಪನವರ ಪಕ್ಷಾಂತರದ ಇತಿಹಾಸ!. ಈಗ ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಸೇರಿದ್ದಾರೆ ಸಾರೆಕೊಪ್ಪ ಬಂಗಾರಪ್ಪ.




ಬಂಗಾರಪ್ಪನವರಲ್ಲಿ ಎಲ್ಲವೂ ಇತ್ತು. ನಾಯಕತ್ವ ಗುಣ, ಅಪಾರ ಜನ ಬೆಂಬಲ, ನೆರವಂತಿಕೆ, ಎಲ್ಲವೂ ಇತ್ತು. ದೇವರಾಜ ಅರಸರ ನಂತರ ಕರ್ನಾಟಕ ಕಂಡ ಅತ್ಯಂತ charishmatic ರಾಜಕಾರಣಿ ಎಸ್.ಬಂಗಾರಪ್ಪ. ಅವರಿಗೆ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದರು. (ಈಗ ಸಾವಿರಾರು ಉಳಿದಿದ್ದಾರೆ!).ಹಾಗೂ ಸಾವಿರಾರು ಭಕ್ತಾಧಿಗಳೂಇದ್ದರು. ಯಾವ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದರೂ ಅವರ ಹೆಸರಿನಿಂದಲೇ ಸುಮಾರು 3ಲಕ್ಷ ಮತಗಳು ಬರುತ್ತಿದ್ದವು. ಅಂತಹ ಜನ ಬೆಂಬಲದಿಂದಲೇ ಅವರು ಆರು ಬೇರೆ ಬೇರೆ ಪಕ್ಷಗಳಿಂದ ಈತನಕ ಚುನಾಯಿತರಾಗಿದ್ದಾರೆ. ಯಾವ ಪಕ್ಷದಿಂದ ಸ್ಪರ್ಧಿಸಿದರೂ ಜನ ಅವರಿಗೆ ಮತ ಚಲಾಯಿಸಿದ್ದಾರೆ ಅಂತಹ ಜನಕ್ಕೆ ಪಕ್ಷಕ್ಕಿಂತ ಬಂಗಾರಪ್ಪನವರ ಬಗ್ಗೆ ಹೆಚ್ಚು ವಿಶ್ವಾಸವಿತ್ತು ಎಂದರ್ಥವಲ್ಲವೇ?

ಸುಮಾರು ನಾಲ್ಕು ದಶಕಗಳ ಕಾಲ ಜನರಿಂದ ಈ ಪ್ರಮಾಣದಲ್ಲಿ ಬೆಂಬಲ ಪಡೆಯುವುದು ಸುಲಭದ ವಿಷಯವಲ್ಲ. ದೇವೇಗೌಡರೂ ನಾಲ್ಕು ದಶಕಗಳಿಂದ ಚಾಲ್ತಿಯಲ್ಲಿದ್ದಾರೆ. ಆದರೆ ಹಲವು ಬಾರಿ ರಾಜಕೀಯವಾಗಿ "ಕೋಮಾ"ಕ್ಕೆ ಹೋಗಿದ್ದಾರೆ. ಬಂಗಾರಪ್ಪನವರು ಒಂದೆರಡು ಬಾರಿ ರಾಜಕೀಯ ಅಸ್ವಸ್ಥರಾಗಿದ್ದರು. ಆದರೆ 2008ರ ತನಕ ಎಂದೂ ಕೋಮಾಕ್ಕೆ ಹೋಗಲೇ ಇಲ್ಲ. ಒಮ್ಮೆ ಆಕಸ್ಮಿಕವಾಗಿ ಸೋತದ್ದನ್ನು ಬಿಟ್ಟರೆ ನಾಲ್ಕುದಶಕಗಳ ಕಾಲ ಸೋಲಿಲ್ಲದ ಸರದಾರನಾಗಿ ಮೆರೆದರು. 1978ರಿಂದ 2004ರ ತನಕ ಯಾವ ಪಕ್ಷದಲ್ಲಿದ್ದರೂ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಅವರ 20 -25 ಬೆಂಬಲಿಗರು ಗೆಲ್ಲುತ್ತಿದ್ದರು. ಇಷ್ಟೆಲ್ಲಾ ಇದ್ದೂ ಸ್ವಲ್ಪ ತಾಳ್ಮೆಯು ಇದ್ದಿದ್ದರೆ ಹತ್ತು ವರ್ಷ ಮುಖ್ಯಮಂತ್ರಿಯಾಗಿ ಮೆರೆಯಬಹುದಿತ್ತು. ಆದರೆ ತಾಳ್ಮೆಯೇ ಇರಲಿಲ್ಲ.

1983ರಲ್ಲಿ ಅವರ ಕ್ರಾಂತಿರಂಗ ಪಕ್ಷ ಜನತಾ ದಳದೊಂದಿಗೆ ಕೈಜೋಡಿಸಿತು. ದಳದ ರಾಮಕೃಷ್ಣ ಹೆಗಡೆ ಅಥವಾ ಬಂಗಾರಪ್ಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದವು. ಹೆಗಡೆ ಮುಖ್ಯಮಂತ್ರಿಯಾದರು. ತಕ್ಷಣ ಬಂಗಾರಪ್ಪ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ಹೆಗಡೆಯವರಿಗೆ ಬೆಂಬಲ ನೀಡಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಹೆಗಡೆಯವರೊಂದಿಗೆ ಮುನಿಸಿಕೊಂಡಿತ್ತು.ಬಂಗಾರಪ್ಪ ಸ್ಪಲ್ಪ ತಾಳ್ಮೆ ತೋರಿದ್ದರೆ ಬಿಜೆಪಿಯ ಮುನಿಸು ಅವರಿಗೆ ಲಾಭ ತರುವ ಸಾಧ್ಯತೆಗಳಿತ್ತು. ಆದರೆ ಬಂಗಾರಪ್ಪನವರಿಗೆ ತಾಳ್ಮೆ ಇರಲಿಲ್ಲ. ಅವರಾಗಲೇ ಜನತಾ ಸರಕಾರದಿಂದ ದೂರ ಸರಿದು ಕಾಂಗ್ರೆಸ್ ಸೇರಿ ವಿರೋಧ ಪಕ್ಷದ ನಾಯಕರಾಗಿದ್ದರು.! ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರನ್ನು ಕೆಳಗಿಳಿಸಿ ವೀರಪ್ಪ ಮೊಯ್ಲಿ ಅವರನ್ನು ಕುರ್ಚಿಯಲ್ಲಿ ಕೂರಿಸಿತ್ತು ಕಾಂಗ್ರೆಸ್ ಪಕ್ಷ. ಬಂಗಾರಪ್ಪ ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು.
ಮುಖ್ಯಮಂತ್ರಿ ಕುರ್ಚಿಹೋದ ತಕ್ಷಣ ಅವರ ರಾಜಕೀಯ ಜೀವನ ಮುಗಿಯುತ್ತಿರಲಿಲ್ಲ. ಮುಂದೆ ಕಾಂಗ್ರೆಸ್ ನಿಂದಲೇ ಮುಖ್ಯಮಂತ್ರಿಯಾಗುವ ಅವಕಾಶ ಹಲವು ಬಾರಿ ಬರುತ್ತಿತ್ತು. ಕೆಲವು ವರುಷಗಳ ನಂತರ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂತು. ಆಗ ಮುಖ್ಯಮಂತ್ರಿ ಕುರ್ಚಿ ಒಲಿದದ್ದು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ!

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಪದವಿ ಅಲಂಕರಿಸುವುದನ್ನು ನೋಡುವುದರ ಹೊರತು ಬಂಗಾರಪ್ಪರಿಗೆ ಬೇರೆ ಮಾರ್ಗವೇ ಇರಲಿಲ್ಲ. 2004ರಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿತ್ತು. ಬಂಗಾರಪ್ಪ ಥಟ್ ಎಂದು ಬಿಜೆಪಿಗೆ ಹಾರಿದರು. ಬಿಜೆಪಿ ಸೋತುಹೋಯಿತು. ಕಾಂಗ್ರೆಸ್ ನಲ್ಲಿಯೇ ಮುಂದುವರಿಯುತ್ತಿದ್ದರೆ ಅವರನ್ನು ಮಂತ್ರಿ ಮಾಡುವುದು ಕಾಂಗ್ರೆಸ್ ಗೆ ಅನಿವಾರ್ಯವಾಗುತ್ತಿತ್ತು.ಬಂಗಾರಪ್ಪ ಪ್ರಥಮಬಾರಿ ಮುಖ್ಯಮಂತ್ರಿ ಕುರ್ಚಿಯ ಸನಿಹ ತಲುಪಿದ್ದು 1983ರ ವಿಧಾನಸಭೆಯ ಚುನಾವಣೆಯ ನಂತರ. ಅದು ಯಡಿಯೂರಪ್ಪನವರು ಎದುರಿಸಿದ ಪ್ರಪ್ರಥಮ ವಿಧಾನಸಭೆ ಚುನಾವಣೆಯೂ ಆಗಿತ್ತು.! ಬಂಗಾರಪ್ಪ ಪ್ರಥಮಬಾರಿ ಮುಖ್ಯಮಂತ್ರಿಯಾಗುವ ಸಂದರ್ಭ ನಿರ್ಮಾಣವಾದಾಗ ಕುಮಾರಸ್ವಾಮಿಯವರಿಗೆ ಇನ್ನೂ 18 - 20 ವರ್ಷ.ರೆಡ್ಡಿಗಳು ಬಹುಶಃ ಹೈಸ್ಕೂಲ್ ಗೆ ಹೋಗುತ್ತಿದ್ದರು.!

1991ರಲ್ಲಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಸಿದ್ದನ್ಯಾಮ್ ಗೌಡ ಎಂಬ ಅನಾಮಧೇಯ ಚುನಾಯಿತನಾದ. ಆತನನ್ನು ಗೆಲ್ಲಿಸಿದ್ದು ಬಂಗಾರಪ್ಪನವರೇ. ಅಂತಹ ಸುಮಾರು 30 ಅನಾಮಧೇಯರನ್ನು ಬಂಗಾರಪ್ಪ ಗೆಲ್ಲಿಸಿದ್ದಾರೆ.ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆದಿದ್ದ ಬಂಗಾರಪ್ಪ ಇವತ್ತು ಯಡಿಯೂರಪ್ಪರ ಮಗನ ಎದರೂ ಸೋತರು!.ಅವರನ್ನು ನೋಡಿದರೆ ಕಿಂಗ್ ಲಿಯರ್ ನ ಟ್ರೆಜಿಡಿ ನೆನಪಾಗುತ್ತದೆ. ಶೇಕ್ಸ್ ಪಿಯರ್ ನ ನಾಟಕ ಕಿಂಗ್ ಲೀಯರ್ ನಲ್ಲಿ ಲಿಯರ್ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಕೊನೆಯಲ್ಲಿ ಮಕ್ಕಳ ಪ್ರೀತಿಯನ್ನೂ . ಲಿಯರ್ ಕಳೆದುಹೋದ ಗತ ವೈಭವದ ದಿನಗಳ ಸಂಕೇತ. ಲೋಕಸಭೆ, ವಿಧಾನ ಸಭೆ ಎರಡೂ ಚುನಾವಣೆಗಳನ್ನೂ ಸೋತ ಎಸ್.ಬಂಗಾರಪ್ಪ ಲಿಯರ್ ಅಲ್ಲವೇ? ಅನಾಮಧೇಯರನ್ನೂ ಗೆಲ್ಲಿಸುತ್ತಿದ್ದ ಬಂಗಾರಪ್ಪ ಇಂದು ಸ್ವತಃ ತಾವೇ ಗೆಲ್ಲಲಾಗದ ಸ್ಥಿತಿ ತಲುಪಿದ್ದಾರೆ.

ಯಡಿಯೂರಪ್ಪನವರು ಆದರ್ಷ ರಾಜಕಾರಣಿ ಎಂದು ನಾನು ಹೇಳುತ್ತಿಲ್ಲ. ಆದರೆ ಸುಮಾರು 3ದಶಕಗಳ ಕಾಲ ಒಂದೇ ಪಕ್ಷದಲ್ಲಿ ದುಡಿದಿದ್ದರಿಂದ 2008ರಲ್ಲಿ ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಈ 3ದಶಕಗಳಲ್ಲಿ ಅವರು ಪಕ್ಷ ಬಿಡುತ್ತೇನೆಂದು ಹೆದರಿಸಿರಬಹುದು. ಆದರೆ ಹೆದರಿಸುವುದಕ್ಕೂ ಆರೇಳುಬಾರಿ ಪಕ್ಷ ಬಿಡುವುದಕ್ಕೂ ವ್ಯತ್ಯಾಸವಿದೆ ಅಲ್ಲವೇ?ಅವರೇನಾದರೂ ಆರೇಳುಬಾರಿ ಪಕ್ಷ ತೊರೆದಿದ್ದರೆ ಖಂಡಿತಾ 2008ರಲ್ಲಿ ಖಂಡಿತಾ ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುತ್ತಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಅನಂತಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅನುಮಾನಗಳು ಹಿಂದೆ ಇದ್ದವು. ಆದರೂ ಯಡಿಯೂರಪ್ಪ ಪಕ್ಷ ತೊರೆಯಲಿಲ್ಲ. ಇಂತಹ ಪರಿಸ್ಥಿತಿ ಬಂಗಾರಪ್ಪನವರಿಗೆ ಹಲವು ಬಾರಿ ಬಂದಿದೆ. ಪ್ರತಿ ಬಾರಿಯೂ ಪಕ್ಷ ತೊರೆದಿದ್ದಾರೆ. ಕೇವಲ ಪಕ್ಷ ನಿಷ್ಠೆಯಿಂದಲೇ ಇಂದು ಮುನಿಯಪ್ಪ ಕೇಂದ್ರ ಮಂತ್ರಿಯಾಗಿದ್ದಾರೆ. 1996ರಲ್ಲಿ ವಿಶ್ವಕಪ್ ಗೆದ್ದ ನಂತರ "ಒಂದು ವಿಶ್ವಕಪ್ ಗೆಲ್ಲಲು ಎರಡು ದಶಕ ಕ್ರಿಕೆಟ್ ಆಡಿದ್ದೇನೆ" ಎಂದಿದ್ದರು ಅರ್ಜುನ್ ರಣತುಂಗ. ಐದಾರು ದಶಕಗಳ ಕಾಲ ಒಂದೇ ಪಕ್ಷದಲ್ಲಿ ದುಡಿದಿದ್ದರಿಂದ ವಾಜಪೇಯಿ ಪ್ರಧಾನ ಮಂತ್ರಿಯಾದರು.

"ರಾಜನಾಗುವ ಸಾಮರ್ಥ್ಯವಿದ್ದೂ ರಾಜನಾಗಲು ಸಾಧ್ಯವಾಗದಿದ್ದರೆ ಅದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ" ಎಂದಿದ್ದರು ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗುವ ಮುಂಚೆ.
ಬಂಗಾರಪ್ಪನವರ ನೋವು ಅರ್ಥವಾಗುವಂತದ್ದೇ. ಸಾಮರ್ಥ್ಯವಿದ್ದರೂ ಅವರಿಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿಲ್ಲವೆಂದು ಅವರು 1980ರ ದಶಕದಲ್ಲಿ ಪ್ರಥಮ ಬಾರಿ ಕಾಂಗ್ರೆಸ್ ತೊರೆದರು.
ನಂತರ ಪಕ್ಷ ತೊರೆಯುವುದೇ ರೂಢಿ ಮಾಡಿಕೊಂಡರು. ಲಕ್ ಎನ್ನುವುದು ಇರದೇ ಎಲ್ಲರಿಗೂ ಅವರವರ ಯೋಗ್ಯತೆಗೆ ತಕ್ಕುದಾದ ಸ್ಥಾನಮಾನ ಸಿಗುವಂತಿದ್ದರೆ ಮೇಲೇರಿದವರಲ್ಲಿ ಬಹುತೇಕರು ಕೆಳಗಿರುತ್ತಿದ್ದರು. ಕೆಳಗಿರುವವರಲ್ಲಿ ಬಹುತೇಕರು ಮೇಲಿರುತ್ತಿದ್ದರು. ಇದು ಶೇಕ್ಸ್ ಪಿಯರ್ ನ ನಾಟಕವೊಂದರಲ್ಲಿ ಬರುವ ಒಳಾರ್ಥ. ಬದುಕು ಗಣಿತವಲ್ಲ. ರಾಜಕೀಯ ಖಂಡಿತಾ ಗಣಿತವಲ್ಲ. ಇಲ್ಲಿ ಏನೂ ಆಗಬಹುದು. ಅಯೋಗ್ಯ ಮುಖ್ಯಮಂತ್ರಿಯಾಗಬಹುದು. ರಾಜನಾಗುವ ಸಾಮರ್ಥ್ಯ ಇರುವಾತ ಎಂ.ಎಲ್.ಎ ಕೂಡಾ ಆಗದಿರಬಹುದು. ಅವುಗಳಿಗೆ ಪಕ್ಷಾಂತರ ಉತ್ತರವಲ್ಲ. ರಾಜಕೀಯ ವಿಡಂಬನೆಗಳಿಗೆ ಹತಾಶರಾದರೆ ಪಕ್ಷ ಬದಲಾಯಿಸುತ್ತಾ ಹೊರಟರೆ ತಾವೇ ಗೇಲಿಯ ವಸ್ತುಗಳಾಗಬೇಕಾಗುತ್ತದೆ. " ಏಳು ಬಾರಿ ಪಕ್ಷ ಬದಲಾಯಿಸಿದ್ದಾರೆ ಬಂಗಾರಪ್ಪ. ಮದುಮಗಳು ಸಪ್ತಪದಿಯನ್ನು ಏಳು ಬಾರಿ ಬೇರೆ ಬೇರೆ ಗಂಡಸಿನೊಂದಿಗೆ ತುಳಿದಂತೆ" ಎಂದಿದ್ದರು ಮೋದಿ. ಈಗ ಒಂಭತ್ತನೇ ಬಾರಿ ಪಕ್ಷ ಬದಲಾಯಿಸಿದ್ದಾರೆ ಬಂಗಾರಪ್ಪ. ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ...!?

ಆದಿತ್ಯ ಭಟ್

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು : 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2011 ರ ಫೆಬ್ರವರಿ 4, 5 ಮತ್ತು 6 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಲು ತೀಮರ್ಾನಿಸಲಾಗಿದೆ. ನಲವತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ನುಡಿ ಜಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭಿಮಾನಿಗಳು ತಮ್ಮ ಹೆಸರುಗಳನ್ನು ಆಯಾಯಾ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳ ಹತ್ತಿರ ಅಥವಾ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಸಮ್ಮೇಳನ ಸ್ವಾಗತ ಸಮಿತಿ ಕಚೇರಿಯಲ್ಲಿ ರೂ. 250/- ಪ್ರತಿನಿಧಿ ಶುಲ್ಕವನ್ನು ಪಾವತಿಸಿ ತಮ್ಮ ಹೆಸರುಗಳನ್ನು 20-1-2011 ರೊಳಗಾಗಿ ನೋಂದಾಯಿಸಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಮುಂದೆ ಓದಿ

ವೈವಿಧ್ಯ

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸಹ ಒಂದು ಕಲೆ. ಅದು ಎಲ್ಲರಿಗೂ ಬರುವುದಿಲ್ಲ. ಒಂದೇ ಒಂದು ಸರಿಯಾದ ನಿರ್ಧಾರ ದಿಂದ ಇಡೀ ಜೀವನವೇ ಬದಲಾಗಬಹುದು ಅಥವಾ ಒಂದೇ ಒಂದು ತಪ್ಪು ನಿರ್ಧಾರದಿಂದ ಜೀವನವಿಡೀ ಕೊರಗುವ ಸ್ಥಿತಿ ಉಂಟಾಗಬಹುದು ಅಥವಾ ಜೀವನದಲ್ಲಿ ಒಳ್ಳೆಯ ಅವಕಾಶಗಳು ಕಳೆದು ಹೋಗಬಹುದು. ತನ್ನ ತೀರ್ಮಾನದಿಂದ ಒಳ್ಳೆಯ ಫಲಿತಾಂಶ ಬಂದರೆ ಆ ವ್ಯಕ್ತಿ ತನ್ನನ್ನು ಹೊಗಳಿಕೊಳ್ಳುತ್ತಾನೆ. ಅದೇ ವ್ಯಕ್ತಿಯ ತೀರ್ಮಾನದಿಂದ ಫಲಿತಾಂಶ ಕಟ್ಟದಾಗಿದ್ದರೆ, ಆ ವ್ಯಕ್ತಿ ತನ್ನ ಸೋಲನ್ನು ತನ್ನ ಸೋಲೆಂದು ಪರಿಗಣಿಸದೇ, ತನ್ನ ಸೋಲಿಗೆ ಬೇರೆಯವರೇ ಹೊಣೆ ಎಂದು ಟೀಕಿಸಿ ಜಾರಿಕೊಳ್ಳುತ್ತಾನೆ. ಇದು ಜನರಲ್ಲಿ ಕಾಣುವ ಸಹಜ ಗುಣವಾಗಿದೆ. ಗೆದ್ದರೆ ನಾನು ಗೆದ್ದೇ ಎನ್ನುತ್ತಾರೆ. ಸೋತರೆ ನಿನ್ನಿಂದಲೇ ಸೋತೆ ಎನ್ನುತ್ತಾರೆ. ಅದೇನೇ ಇರಲಿ ಒಟ್ಟಿನಲ್ಲಿ ಒಂದೇ ಒಂದು ಸರಿ ಅಥವಾ ತಪ್ಪು ನಿರ್ಧಾರದಿಂದ ಅದರ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಅನುಭವಿಸಲೇ ಬೇಕು.




ನಾವು ಕೊರಗುವ ಮತ್ತು ಖುಷಿಪಡುವ ಸನ್ನಿವೇಶಗಳು ಅನೇಕ. ಉದಾಹರಣೆಗೆ ಆ ಮನೆ ತೆಗೆದುಕೊಳ್ಳದೇ ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಈ ಕೆಲಸವನ್ನು ನಾನು ಮಾಡಬಾರದಾಗಿತ್ತು. ಆ ಹುಡುಗಿಯನ್ನು ಪ್ರೀತಿಸಿದ್ದೇ ತಪ್ಪು, ಬೆಂಗಳೂರಿನಲ್ಲಿ ಮನೆ ಮಾಡಿ ಒಳ್ಳೇ ಕೆಲಸ ಮಾಡಿದೆ, ಉರಾಚೆಯ ಗದ್ದೆ ಮಾರಬಾರದಾಗಿತ್ತು, ಅವಳನ್ನು ಮದುವೆ ಆಗುವ ನಿರ್ಧಾರ ನಿಜವಾಗಲು ಒಳ್ಳೆಯದಾಗಿತ್ತು - ಹೀಗೆ ಒಂದೇ ಎರಡೇ, ಹಲವಾರು ಸಲ ನಾವು ಮಾಡಿದ್ದು ಸರಿ, ನನ್ನ ನಿರ್ಧಾರ ಆ ಸಮಯದಲ್ಲಿ ಸರಿಯಾಗಿತ್ತು. ಹಾಗೆ ಮಾಡಿದ್ದು ತಪ್ಪು, ನಾನು ಹಾಗೆ ಮಾಡಬಾರದಾಗಿತ್ತು ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ತನ್ನ ಜೀವನದಲ್ಲಿ ನಡೆದು ಹೋದ ಸಿಹಿ ಕಹಿ ಘಟನೆಗಳನ್ನು ಜ್ಞಾಪಿಸಿಕೊಂಡು ಒಳಗೊಳಗೇ ಅಳುತ್ತಿರುವುದುಂಟು, ಕೆಲವೊಮ್ಮೆ ಒಂಟಿಯಾಗಿ ತನ್ನಷ್ಟಕ್ಕೆ ತಾನೇ ನಗುತ್ತಿರುತ್ತೇವೆ.

ಕೆಲವರಂತು ಎಲ್ಲವನ್ನೂ ಮರೆತು ಸಾರಾಸಗಟಾಗಿ ದೇವರನ್ನು ದೂಷಿಸುತ್ತಾರೆ. ನನಗೇಕೆ ಈ ಸ್ಥತಿ ಬಂತು? ನಾನು ಏನು ಪಾಪ ಮಾಡಿದ್ದೆ? ನನ್ನ ಜೊತೆಯೇ ಹೀಗೇಕಾಯಿತು? ದೇವರೇ ನಿನಗೆ ಕಣ್ಗಳಿಲ್ಲವೇ? - ಹೀಗೆ ತನ್ನದೇ ಆದ ಶೈಲಿಯಲ್ಲಿ ತನ್ನ ಕೋಪವನ್ನು ವ್ಯಕ್ತಪಡಿಸಿಕೊಳ್ಳುವುದುಂಟು. ತಾನು ತೆಗೆದುಕೊಂಡ ತಪ್ಪು ನಿರ್ಧಾರದ ಬಗ್ಗೆ ಯೋಚನೆ ಮಾಡುವುದಿರಲಿ, ತನ್ನ ತಪ್ಪನ್ನು ತಪ್ಪೆಂದೇ ಪರಿಗಣಿಸುವುದಿಲ್ಲ. ತನ್ನ ನಿಸ್ಸಹಾಯಕತೆಯಲ್ಲಿ ತನ್ನ ಹಣೆಬರಹವೇ ಇಷ್ಟು ಎಂದು ದೂಷಿಸಿಕೊಳ್ಳುವುದಲ್ಲದೇ, ತನ್ನ ಸುತ್ತಮುತ್ತಲಿನವರ ಜೊತೆಯೂ ಅಸಹನೆಯಿಂದ ವರ್ತಿಸುತ್ತಾರೆ. ಕೆಲವರಂತು ಹೆಂಡ ಕುಡಿಯುವಂತಹ ಕೆಟ್ಟ ಚಟಗಳಿಗೂ ಸಹ ಬಲಿಯಾಗುವುದನ್ನು ನಾವು ಕಂಡಿದ್ದೇವೆ, ಮತ್ತೆ ಕೆಲವರು ಆತ್ಮಹತ್ಯೆಯನ್ನೂ ಸಹ ಮಾಡಿಕೊಳ್ಳುತ್ತಾರೆ.

ನಿಮ್ಮ ಜೀವನದಲ್ಲಿ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಒದಗಿಬಂದರೆ, ಆ ನಿರ್ಧಾರ ದಿಂದ ಆಗುವ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಗಾಳಿಯಲ್ಲಿ ಬಾಣ ಬಿಟ್ಟಹಾಗೆ ಏನನ್ನೂ ಯೋಚಿಸದೇ ಕಣ್ಣುಮುಚ್ಚಿ ನಿರ್ಧಾರ ತೆಗೆದುಕೊಂಡರೆ, ದೊಡ್ಡ ಅನಾಹುತವೇ ಸಂಭವಿಸಬಹುದು. ನಿರ್ಧಾರ ತೆಗೆದುಕೊಳ್ಳುವಾಗ ಅದೃಷ್ಟದ ಮೇಲೆ ನಂಬಿಕೆ ಇಡುವುದು ಅಥವಾ ದೇವರ ಮೇಲೆ ಭಾರ ಹಾಕುವುದು ಶತಮೂರ್ಖತನವಾಗುತ್ತದೆ.

ಏನೇ ನಿರ್ಧಾರ ತೆಗೆದುಕೊಳ್ಳುವಾಗ ನಿಮಗೆ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಅರ್ಹತೆ ಇದೆಯೇ? ನಿಮ್ಮಿಂದ ಅದು ಸಾಧ್ಯವೇ? ಅದರ ಲಾಭ ನಷ್ಟಗಳೇಣು? ಅಕಸ್ಮಾತ್ ನಷ್ಟವಾದರೆ ನಾನು ಭರಿಸಬಲ್ಲೆನೇ? ನನ್ನ ಮಾನಸಿಕ, ಆರ್ಥಿಕ ಮತ್ತು ದೈಹಿಕ ಸ್ಥಿತಿ ನನ್ನ ನಿರ್ಧಾರಕ್ಕೆ ಅರ್ಹವೇ? ನನ್ನಿಂದ ಪೂರ್ವ ಸಿದ್ಧತೆಗಳು ಮಾಡಲು ಸಾಧ್ಯವೇ? ನನ್ನ ಬಳಿ ಸಮಯ ಇದೆಯೇ? ತಾಳ್ಮೆ ಇದೆಯೇ? ಅದರ ರೂಪುರೇಷೆಗಳು ಹೇಗಿರಬೇಕು? - ಹೀಗೆ ಮುಂತಾದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೂಲಂಕುಶವಾಗಿ ತನ್ನ ಗಮನವನ್ನು ಹರಿಸಬೇಕು.
ನಿಮ್ಮ ನಿರ್ಧಾರ ವ್ಯಾಪಾರದ ಬಗ್ಗೆ ಇರಬಹುದು, ನೌಕರಿ ಬಗ್ಗೆ ಇರಬಹುದು, ಹೊಸ ಜಾಗ ತೆಗೆದುಕೊಳ್ಳುವ ಬಗ್ಗೆ ಇರಬಹುದು, ಹೊಸ ಕೋರ್ಸುಗಳ ಬಗ್ಗೆ ಇರಬಹುದು - ಹೀಗೆ ನಿಮ್ಮ ಅಭಿರುಚಿಯಿರುವ ವಿಷಯಗಳ ಬಗ್ಗೆ ಇರಬಹುದು. ಎಲ್ಲಾ ರೀತಿಯಲ್ಲಿ ಎಲ್ಲಾ ದಿಕ್ಕುಗಳಿಂದ ಯೋಚನೆ ಮಾಡಿ, ಒಂದೇ ದೃಷ್ಟಿಕೋನದಿಂದ ವಿಷಯವನ್ನು ನೋಡುವುದು ಸರಿಯಲ್ಲ. ಕೆಲವರು ನಿರ್ಧಾರವನ್ನು ಜೂಜಾಟದಂತೆ ತೆಗೆದುಕೊಳ್ಳುತ್ತಾರೆ. "ಆದ ಹಾಗೆ ಆಗಲಿ ಮಾದಪ್ಪನ ಜಾತ್ರೆ" ಎಂಬ ಗಾದೆ ಮಾತನ್ನು ಸಹ ಹೇಳುತ್ತಾರೆ. "ಬಂದ್ರೆ ಒಂದು ಹೋದ್ರೆ ಒಂದು" ಎಂಬ ಬೇಜವಾಬ್ದಾರಿ ಡೈಲಾಗು ಬೇರೆ ಹೊಡೆಯುತ್ತಾರೆ. ಕೊನೆಗೆ ಅಳುವುದು - ಕೊರಗುವುದು ಸಹ ಅವರೇ. "ಮಾಡಿದ್ದುಣ್ಣೋ ಮಾರಾಯ" ಎಂಬ ಗಾದೆ ಆಗ ಅವರಿಗೆ ಅರ್ಥವಾಗುವುದು.

ನವೆಂಬರ್ 14 ರಂದು 'ಕೌನ್ ಬನೇಗಾ ಕರೋಡ್ಪತಿ-4' ಎಂಬ ರಿಯಾಲಿಟಿ ಷೋನಲ್ಲಿ ಒಂದು ಘಟನೆಯನ್ನು ನೋಡಿ ಬಹಳ ಬೇಜಾರಾಯಿತು. ಒಬ್ಬ ಸ್ಪರ್ಧಿ ಸರಿಯಾದ ಉತ್ತರವನ್ನು ಹೇಳಿ 1 ಕೋಟಿ ರೂ.ಗಳನ್ನು ಗೆದ್ದುಕೊಂಡಿದ್ದನು, ಕೊನೆಯ ಪ್ರಶ್ನೆ 5 ಕೋಟಿಗೆ, ಉತ್ತರ ತಪ್ಪಾದರೆ ಕೇವಲ 32000/- ರೂ.ಗಳು ಮಾತ್ರ ಕೈಗೆ ಬರುತ್ತವೆ. ಪಂದ್ಯ ಬಿಟ್ಟರೆ 1 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
ಪಂದ್ಯದ ರೂಪುರೇಶೆಗಳ ಕಾನೂನಿನ ಪ್ರಕಾರ ಅಮಿತಾಬ್ ಬಚ್ಚನ್ ಆ ಸ್ಪರ್ಧಿಯನ್ನು ಕೇಳುತ್ತಾರೆ - "ಮುಂದಿನ ಪ್ರಶ್ನೆಗೆ ಆಡಲು ಇಷ್ಟವಿದಯೇ? ಅಥವಾ 1 ಕೋಟಿ ರೂ.ಗಳನ್ನು ತೆಗೆದುಕೊಂಡು ಪಂದ್ಯ ಬಿಡುತ್ತೀರೋ?
ಆಗ ಆ ಸ್ಪರ್ಧಿ ಒಂದು ಮಾತನ್ನು ಹೇಳುತ್ತಾನೆ - "ನಾನು ಸಂಕಟದಲ್ಲಿ ಸಿಲುಕಿದಾಗ ಕಣ್ಣು ಮುಚ್ಚಿ ಗಣೇಶನಿಗೆ ಪ್ರಾರ್ಥಿಸಿ ಅವನಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ, ದಯವಿಟ್ಟು ಹಾಗೆ ಮಾಡಲು ಸ್ವಲ್ಪ ಸಮಯ ನೀಡಿ".
ಆಗ ಬಚ್ಚನ್ "ಐದು ನಿಮಿಷ ಏನು, ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಿ" ಎನ್ನುತ್ತಾರೆ.
ಆ ಆ ಸ್ಪರ್ಧಿ ಹಾಟ್ ಸೀಟ್ ಮೇಲೆ ಕಣ್ಣುಮುಚ್ಚಿ ಧ್ಯಾನಾವಸ್ಥನಾಗುತ್ತಾನೆ. ಕೆಲ ಸಮಯದ ನಂತರ ಕಣ್ತೆರೆದು "ಗಣೇಶ ನನಗೆ ಹೇಳಿದ - ಪಂದ್ಯ ಮುಂದುವರೆಸಬೇಕಂತೆ" ಎನ್ನುತ್ತಾನೆ.
ಅಲ್ಲಿ ಆಸೀನರಾಗಿದ್ದ ಆತನ ತಂದೆ ತಾಯಿಗೂ ತನ್ನ ಮಗ ಪಂದ್ಯ ಮುಂದುವರೆಸುವುದು ಇಷ್ಟವಿರುವುದಿಲ್ಲ, ಅಲ್ಲಿ ಕುಳಿತಿರುವ ವೀಕ್ಷಕರಿಗೂ ಆತ ಪಂದ್ಯ ಮುಂದುವರೆಸುವುದು ಇಷ್ಟವಿರುವುದಿಲ್ಲ.
ಒಂದುರೀತಿಯ ಅಗ್ನಿ ಪರೀಕ್ಷೆ, ಸೋತರೆ 1 ಕೋಟಿ ರೂ. ಹೋಗುತ್ತದೆ. ಗೆದ್ದರೆ 5 ಕೋಟಿ ರೂ.ಗಳು ಬರುತ್ತದೆ. ಆತ ಆಟ ಮುಂದುವರೆಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಬಚ್ಚನ್ ಪ್ರಶ್ನೆಗೆ ತಪ್ಪು ಉತ್ತರ ನೀಡುತ್ತಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ಹೋಗುತ್ತದೆ. ಮುಕ ಸಪ್ಪೆ ಮಾಡಿಕೊಂಡು ಜಾಗ ಖಾಲಿ ಮಾಡುತ್ತಾನೆ.

ನೋಡಿದಿರ ತಪ್ಪು ನಿರ್ಧಾರದ ಪರಣಾಮ! ಈತನ ತಪ್ಪು ನಿರ್ಧಾರಕ್ಕೆ ಯಾರು ಹೊಣೆ? ಈತನೇ ಗಣೇಶನೇ? ಯಾವಾಗಲೂ ಅಳತೆ ಮಾಡಿ ಅಪಾಯವನ್ನು ತೆಗೆದುಕೊಳ್ಳಬೇಕು, ಕೆಲವೊಮ್ಮೆ ಮಿತಿಮೀರಿದ ವಿಶ್ವಾಸವೂ ಒಳ್ಳೆಯದಲ್ಲ. ಸಮಯ ಪಾಠ ಕಲಿಸುತ್ತದೆ ನಿಜ, ಆದರೆ ಹೋದ ಕಾಲ, ಆಡಿದ ಮಾತು ಮತ್ತು ಬಿಟ್ಟ ಬಾಳ ಮತ್ತೆ ಹಿಂತಿರುಗಿ ಬರುವುದಿಲ್ಲ.

ಜಬೀವುಲ್ಲಾ ಖಾನ್,ಬೆಂಗಳೂರು.

ಮುಂದೆ ಓದಿ
5:49 PM

ರಾಧೆಯ 'ಕೃಷ್ಣ'

Posted by ekanasu

ವೈವಿಧ್ಯ




ಎಲ್ಲ ಯುವತಿಯರಿಗೂ ಕೃಷ್ಣ ರಾಧೆಯರೆಂದರೆ ಪ್ರೀತಿ, ಹುಚ್ಚು ನಮ್ಮ ಪ್ರೀತಿಯೂ ಹಾಗೇ ಇರಲಿ ಅನ್ನೋ ಬಯಕೆ. ಕೃಷ್ಣನ ಬಿದಿರ ಕೊಳಲ ದನಿಗೆ ಧ್ವನಿಯಾದಳು, ಹಾಡಾದಳು ರಾಧೆ.... ಅಂಥಾ ರಾಧೆಯೊಬ್ಬಳಿದ್ದಳು ಅನ್ನೋದೇ ಖುಷಿ.... ಹಾಗಂತ ಊಹಿಸಿಕೊಳ್ಳೋದೂ ಅದೆಷ್ಟು ಸೊಗಸು. ಅವಳು ಕಲ್ಪನೆಯೋ ಕಥೆಯೋ... ತೊರೆದರೂ ತನ್ನ ತೊರೆಯದು ಪ್ರಿಯಾನ ಅದೆಂಥ ಪ್ರೀತಿಯ ಭಾವಪರವಶತೆ ಅವಳಲ್ಲಿ.... ಹೀಗೆಯೂ ಆಕೆ ಆತನನ್ನು ಪ್ರೀತಿಸಿರಬಹುದೇ..... ಪ್ರೀತಿಸಿದ್ದಳು ಅನ್ನೋದು ಸಿಗುವ ನಿಜ.... ಹುಡುಗಿಯರೆಲ್ಲರ ಕಣ್ಣಲ್ಲಿ ಕೃಷ್ಣನಿದ್ದರೂ ನಮಗೆ ಆತ್ಮೀಯವಾಗೋದು ರಾಧೆ. ನನಗಂತೂ ಕೃಷ್ಣನ ನಂಬೋಕೇನೇ ಆಗಲ್ಲ. ಬಹುಷಃ ಎಚ್.ಎಸ್.ವಿ. ಅದಕ್ಕೆ ಬರೆದಿರಬೇಕು ನನಗೂ ಆಕೆ ಕೃಷ್ಣನ ತೋರವ ಪ್ರೀತಿಯು ನೀಡಿದ ಕಣ್ಣು.



ಹೌದು ರಾಧೆಯ ಕಣ್ಣಾಗಿ ನಾವು ಕೃಷ್ಣನನ್ನು ನೋಡಿದಾಗಲೇ ನಮಗೆ ಆತ ಆತ್ಮೀಯನಾಗೋದು. ರಾಧೆ ಅನ್ನೋ ಸೊಗಸು ಆತನ ಪ್ರೀತಿಯಾಗದಿದ್ದರೆ 'ದೇವ' ಎಂಬೋದು ಬಿಡಿ ಆತ ಒಬ್ಬ ಒಳ್ಳೆಯ ಮನುಷ್ಯ ಅಂತ ಊಹಿಸೋಕೂ ಕಷ್ಟವಾಗುತ್ತಿತ್ತು.
ಮನುಷ್ಯ ಜನ್ಮವೆಲ್ಲವೂ ಪೂಜಿಸೋ 'ಕೃಷ್ಣ' ಇಡೀ ಮಹಾಭಾರತದ ಉದ್ದಕ್ಕೂ ರಾಜಕೀಯದ ಪಗಡೆಯಾಡುತ್ತಾನೆ. ವೀರನೆಂದೆಣಿಸಿಕೊಂಡ ಅರ್ಜುನನ ಜೊತೆ ಕೃಷ್ಣ ಅಂತನ್ನುವವನೊಬ್ಬ ಇರದೇ ಇರುತ್ತಿದ್ದರೆ ಆತ ಮನುಕುಲಕ್ಕೆ ಅಪರಿಚಿತನಾಗುತ್ತಿದ್ದನೇನೋ...

ಅಸುರನ ಕೈಯಿಂದ ಬಿಡಿಸಿದ ಹದಿನಾರು ಸಾವಿರ ಹುಡುಗಿಯರನ್ನು ಕೃಷ್ಣ ಮದುವೆಯಾಗಿ ವೀರನಾಗುತ್ತಾನೆ. ಪಾಪ ಆ ಹುಡುಗಿಯರು ಮತ್ತೆ ಏನಾದರೋ... ಆ ಹೊತ್ತಿಗೆ ರಾಧೆ ಎಲ್ಲಿದ್ದಳೋ... ಹೇಗಿದ್ದಳೋ... ಹೌದು ಕೃಷ್ಣ ರಾಧೆಯನ್ನು ಪ್ರೀತಿಸಿದ್ದ...
ಸುಳ್ಳಲ್ಲ... ಆಕೆ ಗೊಲ್ಲರ ಹುಡುಗಿ... ಅವನ ಧರ್ಮಕ್ಕೆ ಅಡ್ಡಿಯಾದಳೋ... ಅಂತೂ ಅವ ಹೊರಟು ಬಿಟ್ಟ... ರಾಧೆ ಮರುಗಿದಳೋ... ಕೊಳಲಿನ ಹಾಡು ಏನಾಯಿತೋ... ಹುಚ್ಚಾದಳೋ... ಹಾಗೇ ಕಳೆದುಹೋದಳೋ... ಯಾರೂ ಬರೆಯಲಿಲ್ಲ.
ಕೊನೆಗೂ ಕೃಷ್ಣ ಧರ್ಮ ಸ್ಥಾಪಕವಾದ... ರಾಜಕೀಯ ದಾಳದಲ್ಲಿ ಲೋಕ ದೇವನಾದ... ರಾಧೆ ಎಚ್.ಎಸ್.ವಿ. ಹೇಳುವಂತೆ ಲೋಕದ ಕಣ್ಣಿಗೆ ಒಂದು ಹೆಣ್ಣಾದಳು. ಎಲ್ಲರ ಪ್ರೀತಿಗೆ ಮಾದರಿಯಾದಳು. ಆಕೆಯ ಪ್ರೀತಿಯನ್ನು ಭಕ್ತಿ ಎಂದರು... ವೃಂದಾವನ ಕಟ್ಟಿ ಪೂಜಿಸಿದರು. ಎದ್ದು ಹೊರಟ ಕೃಷ್ಣನನ್ನು ದೇವನನ್ನಾಗಿಸಿದರೇ ಹೊರತು ರಾಧೆಯನ್ನು 'ಭಕ್ತಿ' ಎಂಬ ನೆಪದಲ್ಲಿ ಭಕ್ತಳನ್ನಾಗಿಸಿದರು.

ಧೀಷ್ಮಾ ಡಿ. ಶೆಟ್ಟಿ

ಮುಂದೆ ಓದಿ

ವೈವಿಧ್ಯ





ಮಹಿಳೆ ಸಬಲೆ ಅಲ್ಲ...ಆಕೆ ಎಂದಿಗೂ ಅಬಲೆಯೇ... ಈ ಮಾತು ನೂರಕ್ಕೆ ನೂರು ಸತ್ಯ. ಕಟ್ಟಾ ಸ್ತ್ರೀ ವಾದಿಗಳು, ಮಹಿಳಾ ಪರ ಚಿಂತಕರು, ಮಹಿಳಾ ವಾದಿಗಳು ಏನೇ ಹೇಳಲಿ ಸ್ತ್ರೀ ತನ್ನ ಕೆಲವೊಂದು ಕಾರಣಗಳಿಂದಾಗಿ ಪುರುಷರಿಗೆ ಸರಿ ಸಮಾನ ಎನ್ನುವುದನ್ನು ಒಪ್ಪಿಕೊಳ್ಳುವುದು ಅಸಾಧ್ಯದ ಮಾತು.

ಮಹಿಳೆ ಅಥವಾ ಸ್ತ್ರೀಗೆ ಭಾರತದಲ್ಲಿ ಪೂಜ್ಯ ಭಾವನೆಯಿದೆ. ಮಹಿಳೆ ಮನೆ ಒಡತಿಯಾಗಿ, ಮನೆ ಮಗಳಾಗಿ, ಸಾಮಾನ್ಯ ಜೀವನದಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಸುಖೀ ಕುಟುಂಬಕ್ಕೆ ಇದೇ ಸ್ತ್ರೀ ಭದ್ರ ಬುನಾದಿಯನ್ನೂ ಹಾಕಿದ್ದು ನಾವೆಲ್ಲ ತಿಳಿದುಕೊಂಡಿರುವ ಸತ್ಯ ಸಂಗತಿ. ಅಮ್ಮ ಎಂಬ ಎರಡಕ್ಷರದ ಮಮತೆಯ ಒಡಲಾಗಿ ಇದೇ ಮಹಿಳೆ ಮನೆಯಲ್ಲಿ ಸ್ಥಾನ ಪಡೆದುಕೊಂಡರೆ, ಸಮರ್ಥ ಸಾಧಕಿಯಾಗಿ ರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ.

ಇಷ್ಟೆಲ್ಲಾ ಸಾಧನೆಗಳನ್ನು ಮಹಿಳೆ ಮಾಡಿದ್ದಾಳೆಯಾದರೂ ಹಲವೊಂದು ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ಮಹಿಳೆ ಇಷ್ಟೇ ಸಮಾನತೆಯಲ್ಲಿ ಸಮಾಜದಲ್ಲಿ ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು. ಪ್ರಸಕ್ತ ಸನ್ನಿವೇಶದಲ್ಲಿ ಸ್ತ್ರೀ - ಪುರುಷ ಇಬ್ಬರೂ ಸಮಾನರು ಎಂಬ ಮಾತುಗಳು ಕೇಳಿಬರುತ್ತಿದೆಯಾದರೂ ಹಲವಾರು ಸಂದರ್ಭಗಳಲ್ಲಿ ಈ ಸಮಾನತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಥರ್ಾತ್ ಮಹಿಳೆ ಪುರಷರಿಗೆ ಸಮಾನರಾಗಿ ಕಾಣಿಸಿಕೊಳ್ಳಲು ಸಾಮಾನ್ಯ ಜೀವನ ಪರಿಸ್ಥಿತಿಯಲ್ಲಿ ಅಸಾದ್ಯವಾಗುತ್ತಿದೆ.

ಮಹಿಳೆ ಇಂದು ಅನೇಕ ಸಮಸ್ಯೆಗಳನ್ನು ಸಮಾಜಿಕವಾಗಿ ಎದುರಿಸುತ್ತಿದ್ದಾಳೆ. ಇಂದು ಕಾರ್ಪೋರೇಟ್ ಸೆಕ್ಟರ್ ನಲ್ಲಿ 45 ರಿಂದ 50ಶೇಕಾಡ ಮಹಿಳಾ ಉದ್ಯೋಗಿಳಿಗದ್ದಾರೆ. ಆದರೆ ಮಹಿಳೆ ಎಷ್ಟರ ಮಟ್ಟಿಗೆ ಸುರಕ್ಷಿತಳು ಎಂಬ ಬಗ್ಗೆ ಚಿಂತಿಸಬೇಕಾಗಿದೆ.
ಮನೆ ಒಡತಿಯಾಗಿರುವ ಮಹಿಳೆ ತನ್ನ ಗಂಡ, ಅತ್ತೆಮಾವಂದಿರಿಂದ ತೊಂದರೆಯನ್ನನುಭವಿಸುತ್ತಾಳೆ, ಮನೆಕೆಲಸದಲ್ಲಿ ತೊಡಗಿರುವ ಮಹಿಳೆಯೂ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾಳೆ, ಕಛೇರಿಗಳಲ್ಲಿ ತನ್ನ ಮೇಲಧಿಕಾರಿಗಳಿಂದ ಹಿಂಸೆ ಅನುಭವಿಸುತ್ತಾಳೆ, ಇವಷ್ಟೇ ಅಲ್ಲ ಮಹಿಳೆ ನಿರಂತರವಾಗಿ ಸಾರ್ವಜನಿಕವಾಗಿ ಇನ್ನನೇಕ ತೊಂದರೆಗಳಿಂದ ನಿತ್ಯ ನಿರಂತರ ಪಡಬಾರದ ಪಾಡು ಅನುಭವಿಸುತ್ತಿದ್ದಾಳೆ, ಮುಂದೆಯೂ ಇರುತ್ತಾಳೆ. ಇದು ಬಹುತೇಕ ಮಹಿಳೆಯರ ಸಾಮಾಜಿಕ ಸ್ಥಿತಿ ಗತಿ.


ಇತ್ತೀಚಿನ ದಿನಗಳಲ್ಲಿ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ವಿಶ್ವಸಂಸ್ಥೆಯ ಕಾರ್ಯತಂತ್ರದ ಜೊತೆ ಹೆಜ್ಜೆ ಹಾಕಲು ನಿರ್ಧರಿಸಿದೆ. ಇದರೊಂದಿಗೆ ವಿಶ್ವದ ಪ್ರಮುಖ ನಾಲ್ಕು ನಗರಗಳ ಜತೆ ದೆಹಲಿಯೂ ಸೇರ್ಪಡೆಯಾಗಿದೆ. ಕೈರೋ, ಕಿಗಾಲಿ, ಕ್ವಿಟ್ಟೋ ಮತ್ತು ಫೋರ್ಟ್ ಮೊರೆಸ್ಬೇ ಸೇರಿದಂತೆ ದೆಹಲಿಯಲ್ಲಿ ವಿಶ್ವಸಂಸ್ಥೆ ಮಹಿಳೆಯರ ಸರುಕ್ಷತೆ ಬಗ್ಗೆ ಕಾರ್ಯಕ್ರಮಕ್ಕೆ ಮುಂದಾಗಿದೆ.

ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು; ಎಷ್ಟರ ಮಟ್ಟಿಗೆ ಸಾಮಾಜಿಕವಾಗಿ ಸಮಸ್ಯೆಗಳಿಂದ ಮುಕ್ತಳಾಗಿದ್ದಾಳೆ ಎಂಬುದಾಗಿ ...
ಇಡೀ ದೇಶದ ರಾಜಧಾನಿಯಲ್ಲಿಯೇ ಇಂದು ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ಹೊಸ ಕಾರ್ಯಯೋಜನೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ. ಇದನ್ನು ಗಮನಿಸದರೆ ಪ್ರಸಕ್ತ ಸನ್ನಿವೇಷದಲ್ಲಿ ಮಹಿಳೆಯರ ಪಾಡು ಹೇಗಾಗುತ್ತಿದೆ ಎಂಬ ಸತ್ಯ ಬಹಿರಂಗಗೊಂಡಂತಾಗುತ್ತಿದೆ. ಇದು ಕೇವಲ ಭಾರತದ ಸ್ಥಿತಿಯಷ್ಟೇ ಅಲ್ಲ; ವಿಶ್ವದಾದ್ಯಂತ ಗಮನಿಸಿದರೂ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ನಿರಂತರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾಳೆಂಬುದು!

ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆ ಸುರಕ್ಷಿತವಾಗಿಲ್ಲ ಎಂಬ ಸತ್ಯವನ್ನು ವಿಶ್ವಸಂಸ್ಥೆಯೇ ಒಪ್ಪಿಕೊಂಡಂತಿದೆ. ಇಡೀ ವಿಶ್ವದಲ್ಲಿ ಆಯ್ದ ಪ್ರಮುಖ ನಾಲ್ಕು ಪ್ರದೇಶಗಳನ್ನು ಅದಕ್ಕಾಗಿಯೇ ಆಯ್ಕೆಗೊಳಿಸಿ ಆ ಭಾಗಗಳಲ್ಲಿ ಮಹಿಳೆಯರಿಗೆ ನಗರಗಳು ಸುರಕ್ಷಿತ ಎಂಬ ಕಾರ್ಯತಂತ್ರವನ್ನು ರೂಪಿಸಲು ಮುಂದಾಗಿದೆ. ಇರಲಿ ಬಿಡಿ; ಕಳೆದ ಒಂದೆರಡು ವರುಷಗಳ ಹಿಂದಿನ ಸ್ಥಿತಿಗತಿಗಳನ್ನವಲೋಕಿಸೋಣ. ನಮ್ಮ ರಾಜ್ಯದ ರಾಜಧಾನಿಯೂ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ನಡೆದ ಅಹಿತಕರ ಘಟನೆಗಳ ಪಟ್ಟಿಯನ್ನೊಮ್ಮೆ ತಿರುವಿ ಹಾಕಿ.

ಅವುಗಳಲ್ಲಿ ಮಹಿಳಾ ದೌರ್ಜನ್ಯ, ಮಹಿಳಾ ಅತ್ಯಾಚಾರ, ಮಹಿಳಾ ಶೋಷಣೆಗಳು ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಇಷ್ಟೇ ಏಕೆ... ಮಹಿಳೆ ರಾತ್ರಿಪಾಳಿಯಲ್ಲೂ ತಾನು ಪುರುಷರಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ನಿಲುವಿನಿಂದ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದಳು. ಆದರೆ ಆ ಸಂದರ್ಭದಲ್ಲಿ ಆಕೆಯ ಮೇಲಣ ದೌರ್ಜನ್ಯ,ಕೊಲೆ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡವು. ಒಟ್ಟಾರೆಯಾಗಿ ಸಾರ್ವಜನಿಕ ಪ್ರದೇಶಗಳು ಮಹಿಳೆಯರ ಪಾಲಿಗೆ ಅಷ್ಟೊಂದು ಸುಲಭವಾಗಿಲ್ಲ ಎಂಬ ಸತ್ಯ ಮತ್ತೊಮ್ಮೆ ಜಗಜ್ಜಾಹೀರಾದವು.

ಹೆಚ್ಚುಬೇಡ... ಕಳೆದ ಕೆಲ ದಿನಗಳ ಹಿಂದಿನ ಒಂದು ಘಟನೆಯತ್ತ ಅವಲೋಕಿಸೋಣ... ಇಡೀ ಸಮಾಜದ ರಕ್ಷಣೆಯ ಜವಾಬ್ದಾರಿ ಹೊತ್ತಂತಹ ಪೊಲೀಸ್ ಇಲಾಖೆಯಲ್ಲೇ ಇಂತಹ ದೌರ್ಜನ್ಯದ ಕೃತ್ಯಗಳು ನಡೆದಿರುವುದು ಬೆಳಕಿಗೆ ಬರುತ್ತವೆ. ಪೊಲೀಸ್ ಪೇದೆಯೊಬ್ಬ ಸಹೋದ್ಯೋಗಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಗಳು ಮಾಧ್ಯಮಗಳ ಮೂಲಕ ಬಹಿರಂಗಗೊಂಡವು.
ಇದು ಕೇವಲ ಕೆಲವು ಉದಾಹರಣೆಗಳಷ್ಟೇ... ದೈನಂದಿನ ಜೀವನದಲ್ಲಿಯೂ ಮಹಿಳೆ ನಿರಂತರವಾಗಿ ಸಮಾಜಿಕ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾಳೆ. ಬಸ್ಸು, ವಾಹನಗಳಲ್ಲಿ ತೆರಳುವ ಸಂದರ್ಭದಲ್ಲಿ ಸಹ ಪ್ರಯಾಣಿಕರ ಕಿರುಕುಳ, ದೌರ್ಜನ್ಯಗಳ ಮೂಲಕ ಮಹಿಳೆ ಮತ್ತೆ ಮತ್ತೆ ತೊಂದರೆ ಅನುಭವಿಸುತ್ತಿದ್ದಾಳೆ.
ರಾತ್ರಿ ಹನ್ನೆರಡರ ಸಮಯದಲ್ಲೂ ಒಂಟಿ ಮಹಿಳೆ ನಿಭರ್ೀತಿಯಿಂದ ಸಾಗುವ ದೇಶ ನಮ್ಮದಾಗಬೇಕೆಂಬ ಮಹತ್ಮಾಗಾಂಧಿಯವರ ಕನಸು ನನಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಮಾಜ ಪರಿವರ್ತನೆಯಾಗಬೇಕಾಗಿದೆ. ಮಹಿಳೆಯರಿಗೆ ಆಗುವ ಅನ್ಯಾಯ ಕಡಿಮೆಯಾಗಬೇಕಾಗಿದೆ.


ಬರಹ: ಸುಮತಿ ಕೆ.ಸಿ.ಭಟ್ ಆದೂರು

ಮುಂದೆ ಓದಿ

ರಾಜ್ಯ - ರಾಷ್ಟ್ರ
ಜನವರಿ 11ರಿಂದ 16 : ಮಿಜಾರಿನಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್


ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ - 2011 ಇದೇ ಜನವರಿ 11ರಿಂದ 16 ತನಕ ಮಿಜಾರಿನ ಸಸ್ಯಕಾಶಿ ಶೋಭಾವನದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ (ರಿ.) ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪದ್ಮಭೂಷಣ ಉಸ್ತಾದ್ ಅಮ್ಜಾದ್ ಆಲಿ ಖಾನ್, ಅಯನ್ ಆಲಿ ಖಾನ್, ಅಮನ್ ಆಲಿ ಖಾನ್, ಪಂಡಿತ್ ಜಯತೀರ್ಥ ಮೇವುಂಡಿ, ವಿದ್ವಾನ್ ಅಭಿಷೇಕ್ ರಘುರಾಮ್, ಮಲೇಷಿಯಾ ಹಾಗೂ ಶ್ರೀಲಂಕಾದ ನೃತ್ಯ ತಂಡಗಳು, ಡಾ.ಮೈಸೂರು ಮಂಜುನಾಥ್, ಮೈಸೂರು ನಾಗರಾಜ್, ಉಜ್ಜೆಯಿನಿಯ ಕಲಾ ತಂಡ, ಪಂಡಿತ್ ತರುಣ್ ಭಟ್ಟಾಚಾರ್ಯ, ಸುರಮಣಿ ಪ್ರವೀಣ್ ಗೋಡ್ಕಿಂಡಿ ಮೊದಲಾದ ಕಲಾವಿದರು ಈ ಬಾರಿಯ ವಿರಾಸತ್ನಲ್ಲಿ ಉತ್ಕೃಷ್ಟ ಕಲಾ ಸಾಧನೆ ಮೆರೆಯಲಿದ್ದಾರೆ.




ಉದ್ಘಾಟನಾ ಸಮಾರಂಭದಲ್ಲಿ ಕಲೆ, ಸಂಸ್ಕೃತಿ, ತನ್ಮೂಲಕ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ರಾಷ್ಟ್ರೀಯಮಟ್ಟದ ಕಲಾವಿದರೋರ್ವರಿಗೆ ಆಳ್ವಾಸ್ ವಿರಾಸತ್ 2011 ಪ್ರಶಸ್ತಿನೀಡಿ ಗೌರವಿಸಲಾಗುತ್ತದೆ. ದಿನಕ್ಕೆರಡು ಕಲಾ ಪ್ರಕಾರಗಳಂತೆ ಈ ಬಾರಿಯ ವಿರಾಸತ್ನಲ್ಲಿ ಖ್ಯಾತ ಕಲಾವಿದರು ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ. ರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಾಡಿನ ಜನಕ್ಕೆ ಪರಿಚಯಿಸುವುದು ಹಾಗೂ ಅವರ ಕಲಾಪ್ರದರ್ಶನಕ್ಕೆ ರಾಷ್ಟ್ರೀಯ ಮಟ್ಟದ ವೇದಿಕೆಯನ್ನೊದಗಿಸುವುದು, ನಾಡಿನ ಕಲಾಸಕ್ತರಿಗೆ ಈ ಹಿರಿಯ ಕಲಾವಿದರ ಕಲಾ ಪ್ರದರ್ಶನವನ್ನು ವೀಕ್ಷಿಸಲು ಮುಕ್ತ ಅವಕಾಶ ನೀಡುವುದು ಈ ವಿರಾಸತ್ನ ಪ್ರಮುಖ ಉದ್ದೇಶ. ಗ್ರಾಮೀಣ ಪ್ರದೇಶವೊಂದರಲ್ಲಿ ಹಿರಿಯ ಕಲಾವಿದರನ್ನು ಒಂದುಗೂಡಿಸಿ ಕಲಾಸಕ್ತರಿಗೆ ಕಾರ್ಯಕ್ರಮದ ಸವಿ ಸವಿಯಲು ಸಂಪೂರ್ಣ ಉಚಿತ ವ್ಯವಸ್ಥೆಯನ್ನು ಮಾಡುತ್ತಿರುವುದು ಆಳ್ವಾಸ್ ಸಮೂಹ ಸಂಸ್ಥೆಗಳ ಸಾಧನೆಯಾಗಿದೆ.

ಸಹಸ್ರ ಸಸ್ಯಗಳ ಕಣಜ ಶೋಭಾವನದಲ್ಲಿ ಗೋಧೂಳಿಯ ಸಮಯದಲ್ಲಿ ಸಮಯಪ್ರಜ್ಞೆಯೊಂದಿಗೆ ನಿಗಧಿತ ಅವಧಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು ನಿಗಧಿತ ಅವಧಿಗೆ ಕಾರ್ಯಕ್ರಮ ಮುಗಿಯಲಿದೆ. 6 ದಿನಗಳ ಕಾಲ ಹಲವು ಪ್ರಕಾರಗಳ ಕಲಾ ಪ್ರದರ್ಶನ ವಿರಾಸತ್ ವೇದಿಕೆಯ ಮೂಲಕ ಪ್ರದರ್ಶನಕಾಣಲಿದೆ.

ಶಿಲ್ಪ ವಿರಾಸತ್ : ಆಳ್ವಾಸ್ ವಿರಾಸತ್ ಪೂರ್ವಭಾವಿಯಾಗಿ ಜ.1ರಿಂದ 16ರ ತನಕ ಆಳ್ವಾಸ್ ಶಿಲ್ಪ, ವರ್ಣ ವಿರಾಸತ್ ನಡೆಯಲಿದೆ. ಸಾಂಪ್ರದಾಯಿಕ ಟೆರೆಕೊಟ್ಟಾ ಕಲಾಪ್ರಕಾರದಲ್ಲಿ ಆಂಧ್ರ ಪ್ರದೇಶ, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕದಿಂದ ತಲಾ ಒಬ್ಬರು ಕಲಾವಿದರು ಶಿಲ್ಪಕಲಾಕೃತಿ ರಚಿಸಲಿದ್ದಾರೆ.

ವರ್ಣ ವಿರಾಸತ್ : ತಂಜಾವೂರು, ಕ್ಯಾಲಿಕೆಟ್, ಮಧುಬನಿ, ಕಲಂಕರಿ ಹಾಗೂ ಮೈಸೂರು ಶೈಲಿಯಲ್ಲಿ ತಲಾ ಒಬ್ಬರಂತೆ ಒಟ್ಟು ಐದು ಮಂದಿ ವರ್ಣ ವಿರಾಸತ್ ಮೂಲಕ ಚಿತ್ರಕಲಾಕೃತಿ ರಚಿಸಲಿದ್ದಾರೆ.
ಗುಜರಾತ್ , ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಕರ್ನಾಟಕ,ಕೇರಳ ಮತ್ತು ಭೋಪಾಳ್ನ ಒಟ್ಟು 11ಮಂದಿ ಕಲಾವಿದರು ಸಮಕಾಲೀನ ಚಿತ್ರಕಲೆಯನ್ನು ರಚಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದ ಕಲಾವಿದ ವಾಸುದೇವ ಕಾಮತ್ ಮುಂಬೈ ಇವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೂಲತಃ ಕಾರ್ಕಳದವರಾದ ವಾಸುದೇವ ಕಾಮತ್ ಪ್ರಸ್ತುತ ಮುಂಬೈನಲ್ಲಿ ತನ್ನ ಕಲಾ ಸೇವೆಯನ್ನು ಮುನ್ನಡೆಸುತ್ತಿದ್ದಾರೆ. ಇವರು ಹಿರಿಯ ಕಲಾವಿದರೂ ಹೌದು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಅಂತರ ರಾಷ್ಟ್ರೀಯ ಆರೋಗ್ಯ ಸಂಸ್ಥೆ ( ಡಬ್ಲ್ಯು. ಎಚ್. ಒ.)ಯಿಂದ ಪುರಸ್ಕರಿಸಲ್ಪಟ್ಟು ಸುಮಾರು 152ದೇಶಗಳಲ್ಲಿ ಶಾಖೆ ಹೊಂದಿರುವ , ವ್ಯಕ್ತಿತ್ವ ವಿಕಸನಗೊಳಿಸುವ ಸುದರ್ಶನ ಕ್ರಿಯಾ ಹಾಗೂ ಜೀವನ ಕಲೆಯ ಸ್ಥಾಪಕಾಚಾರ್ಯ ಸದ್ಗುರು , ವಿಶ್ವವಿಖ್ಯಾತ ಪೂಜ್ಯ ಶ್ರೀ ರವಿಶಂಕರ ಗುರೂಜಿ ಫೆಬ್ರವರಿ 16, 2011ರಂದು ಮಂಗಳೂರಿಗೆ ಭೇಟಿನೀಡಲಿದ್ದಾರೆ ಎಂದು ಮಹಾ ಸತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ಕೆ.ವಿ.ಶೆಣೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಶ್ರೀ ರವಿಶಂಕರ ಗುರೂಜಿಯವರು ಮಂಗಳ ಸಂಧ್ಯಾ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಕೈಗೊಳ್ಳಿದ್ದಾರೆ. ಗಾನ, ಜ್ಞಾನ ಮತ್ತು ಧ್ಯಾನದ ಮೂಲಕ ಎಲ್ಲರ ಮನ,ಮನೆ,ಹೃದಯಲ್ಲಿ ಸಂತೋಷವನ್ನುಂಟುಮಾಡುವ ಮಂಗಳ ಸಂಧ್ಯಾ ಕಾರ್ಯಕ್ರಮ ಮಂಗಳೂರಿನ ಜನತೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುವಂತೆ ಮಾಡಲಿದೆ.
ಶ್ರೀ ರವಿಶಂಕರ ಗುರೂಜಿಯವರ ಭಕ್ತರು, ಶಿಷ್ಯವರ್ಗದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

ಮುಂದೆ ಓದಿ
6:49 PM

ಕಣ್ಣೀರು...

Posted by ekanasu

ಸಾಹಿತ್ಯ

ಮುಂದೆ ಓದಿ

ರಾಜ್ಯ - ರಾಷ್ಟ್ರ







ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನೀಡಿರುವ 202.83 ಲಕ್ಷ ರೂ.ಗಳಲ್ಲಿ ಪಣಂಬೂರು ಬೀಚ್, ತಣ್ಣೀರು ಬಾವಿ ಕಡಲ ತೀರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಪರಿಶೀಲಿಸಿದರು.

ಪಣಂಬೂರಿನಲ್ಲಿ ಬೀಚ್ ಅಭಿವೃದ್ಧಿಗೆ ಇಂಟರ್ ಲಾಕ್ ವ್ಯವಸ್ಥೆಗೆ 44 ಲಕ್ಷ ರೂ. ವೆಚ್ವ ಮಾಡುವ ಬದಲಿಗೆ ಡಾಂಬರಿ ಕರಣ ಮಾಡಿ ಇತರೆ ಅಭಿವೃದ್ಧಿ ಕೈಗೊಂಡಿದ್ದರೆ ಜನರಿಗೆ ಉಪಕಾರವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು. ಅಭಿವೃದ್ಧಿಯ ಬಳಿಕ ನಿರ್ವಹಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಎನ್ ಎಂ ಪಿ ಟಿ ಕಾರ್ಯಕಾರಿ ಅಭಿಯಂತರರಿಗೆ ಸೂಚಿಸಿದರು. 3.25 ಲಕ್ಷ ರೂ.ಗಳಲ್ಲಿ ಅಳವಡಿಸಿದ ಹೈಮಾಸ್ಟ್ ಲೈಟ್ ಗೆ ವಿದ್ಯುತ್ ಸಂಪರ್ಕ ವಿಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು. ಕಾಮಗಾರಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಲು ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.

ಪಣಂಬೂರು ಕಡಲತೀರದಲ್ಲಿ ಪಾತ್ ವೇ,ಪಾರ್ಕಿಂಗ್, ಲ್ಯಾಂಡ್ ಸ್ಕೇಪ್, ಗಾರ್ಡನ್, ಲೈಟಿಂಗ್, ರಿಕ್ರಿಯೇಷನ್, ಪೆನ್ ಸಿಂಗ್, ನೀರು ಪೂರೈಕೆ, ಪಾರ್ಕಿಂಗ್, ವಿದ್ಯುತ್ ಸಂಪರ್ಕ ಕಾಮಗಾರಿಗೆ ನಿರ್ಮಿತಿ ಕೇಂದ್ರಕ್ಕೆ ಜನವರಿ 2010ರಂದೇ 76.80 ಲಕ್ಷ ಆಡಳಿತಾತ್ಮಕ ಮಂಜೂರಾತಿಯಿದ್ದು, ಪ್ರಥಮ ಹಂತದಲ್ಲಿ 22 ಲಕ್ಷ ರೂ. ಮಂಜೂರು ಮಾಡಿದೆ. ಆದರೆ ನಿರ್ಮಿತಿ ಕೇಂದ್ರದವರು ಈ ಕಾಮಗಾರಿ ಬಗ್ಗೆ ಆಲಸ್ಯ ವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು 3 ದಿನಗಳೊಳಗೆ ವರದಿ ಹಾಜರು ಪಡಿಸಲು ನಿರ್ಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ಬೀಚ್ ನಲ್ಲಿ ಪಾತ್ ವೇಯನ್ನು ಇಂಟರ್ ಲಾಕ್ ಮೂಲಕ ಮಾಡಿರುವುದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಬೀಚ್ ನಿರ್ವಹಣೆ ವಹಿಸಿರುವ ಯತೀಶ್ ಬೈಕಂಪಾಡಿಯವರಿಗೆ ಸೂಚಿಸಿದರು.ತಣ್ಣೀರು ಬಾವಿ ಕಡಲ ತೀರ ಅಭಿವೃದ್ಧಿಗೆ 76.80 ಲಕ್ಷ ರೂ. ಅನುಮೋದನೆಯಾಗಿದ್ದು, ಕಾಮಗಾರಿ ಅನುಷ್ಠಾನಕ್ಕೆ ನಿರ್ಮಿತ ಕೇಂದ್ರಕ್ಕೆ 22 ಲಕ್ಷ ರೂ. ನೀಡಲಾಗಿದೆ. ಇಲ್ಲೂ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಬಗ್ಗೆ ಸವಿವರ ಕ್ರಿಯಾಯೋಜನೆ ತಯಾರಿಸಿ, ಪ್ರತೀ ಹಂತದ ಕಾಮಗಾರಿ ಬಗ್ಗೆ ವರದಿ ನೀಡಲು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ತೂಗು ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಪ್ರಗತಿಯಾಗಿಲ್ಲ ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಕ್ಷಣ ಅನುಷ್ಠಾನಕ್ಕೆ ಸೂಚಿಸಿದರು. ಈ ಪ್ರದೇಶ ವ್ಯಾಪ್ತಿಯಲ್ಲೇ ಪ್ರಸ್ತಾವಿತ ಗಾಲ್ಫ್ ಕೋರ್ಸ್ ಪ್ರದೇಶಕ್ಕೆ 162 ಎಕರೆ ಪ್ರದೇಶ ಕಾದಿರಿಸಲಾಗಿದ್ದು, ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆ ಹೆಸರಿಗೆ ಆರ್ ಟಿ ಸಿ ಯಲ್ಲಿ ನಮೂದಿಸಲು ತಹಸೀಲ್ದಾರರಿಗೆ ಸೂಚಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಕಾಸರಗೋಡು : ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು, ಪೆರ್ಲ ಇಲ್ಲಿನ ಅಮೃತಧಾರಾ ಗೋಶಾಲೆ ಆಶ್ರಯದಲ್ಲಿ "ವಿಶ್ವಕ್ಕೆ ಅಮೃತವನ್ನೀಯುವ ವಿಶ್ವಜನನಿಗೆ ವಿಶ್ವಾಸದ ಬಾಗಿನ" ಗೋಮಾತಾ ತುಲಾಭಾರ ಫೆಬ್ರವರಿ 3,4 ರಂದು ಪೆರ್ಲದ ಶ್ರೀ ಶಂಕರ ಸದಬ ಭಾರತೀ ಸದನಲ್ಲಿ ನಡೆಯಲಿದೆ.
ಮನುಷ್ಯನಿಗ ಒಂದೊಂದು ಹನಿ ರಕ್ತದ ಹಿಂದೆ ಇರುವ ಹಾಲು, ಮೊಸರು, ತುಪ್ಪ, ಹಾಗೂ ತರಕಾರಿ ,ದವಸ ಧಾನ್ಯಗಳಂತಹ ಅಮೃತವನ್ನು ನಮಗೆಲ್ಲ ಕೊಡುವ ಗೋಮಾತೆಗೆ ಕೃತಜ್ಞತೆ ಸಲ್ಲಿಸಲು ಇದೊಂದು ಅಪೂರ್ವ ಅವಕಾಶವಾಗಿದೆ.
ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಸಂಕಲ್ಪ, ಮಾರ್ಗದರ್ಶನದಲ್ಲಿ ಈ ತುಲಾಭಾರ ಕಾರ್ಯಕ್ರಮ ನಡೆಯಲಿವೆ.







ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮಂಗಳೂರಿನ ಯೆಯ್ಯಾಡಿ ಸಮೀಪ ಕಂಪದ ಕೋಡಿ ಎಂಬಲ್ಲಿ ನಡೆದಿದೆ ಶಂಕಿತ ವಾಮಾಚಾರಕ್ಕೆ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ರವಿವಾರ ಮಂಗಳೂರು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಅವರು ಘಟನೆ ನಡೆದ ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳಿಯರಿಂದ ಮತ್ತು ಹತ್ಯೆಯಾದ ಮಗು ಪ್ರಿಯಾಂಕಳ ಹೆತ್ತವರಿಂದ ಮಾಹಿತಿ ಸಂಗ್ರಹಿಸಿದರು.ಇನ್ನೆರಡು ದಿನಗಳಲ್ಲಿ ಘಟನೆಯ ಕುರಿತಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಹಾಯಕ ಆಯುಕ್ತರು ನೀಡಲಿದ್ದಾರೆ.



ರಾಜ್ಯ ಮಕ್ಕಳ ಹಕ್ಕು ಆಯೋಗ ಖಂಡನೆ

ದಿನಾಂಕ 16-12-10 ರಂದು ಕಂಪದಕೋಡಿ ಮಂಗಳೂರಿನಲ್ಲಿ 3 ವರ್ಷದ ಮುಗ್ಧ ಮಗುವನ್ನು ಪೂಜೆಯ ಕಾರಣ ನೀಡಿ ಕಾಳ ಭೈರವ ಗುಡಿಯೊಂದರಲ್ಲಿ ಅಮಾನವೀಯವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಷಯವಾಗಿರುತ್ತದೆ. ಈ ನಂಬಲಸಾಧ್ಯ ಘಟನೆಯಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರ ಅಘಾತಕ್ಕೊಳಗಾಗಿರುತ್ತದೆ.21 ನೇ ಶತಮಾನದ ನಾಗರೀಕ ಸಮಾಜದಲ್ಲಿ ಇಂತಹ ಮೂಢನಂಬಿಕೆಗೆ ಮುಗ್ಧ ಹೆಣ್ಣು ಮಗುವಿನ ಕೊಲೆ ನಡೆದಿರುವುದು ಖಂಡನೀಯ.ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ರೀತಿಯ ಘಟನೆಗಳು ಎಲ್ಲಿಯೂ/ಯಾವಾಗಲೂ ನಡೆಯದಂತೆ ತಡೆಯಲು ಸಾರ್ವಜನಿಕರಲ್ಲಿ ಸಹಕಾರವನ್ನು ಕೋರುತ್ತದೆ. ಇಂತಹ ಘಟನೆ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,4ನೇ ಮಹಡಿ ,ಕೃಷಿ ಭವನ,ನೃಪತುಂಗ ರಸ್ತೆ,ಬೆಂಗಳೂರು ದೂ.ಸಂ.22115292 ಕ್ಕೆ ಮಾಹಿತಿ ನೀಡಲು ಕೋರಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ 19ನೇ ವರುಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ - 2011 ಇದೇ ಜನವರಿ 11ರಿಂದ 16 ತನಕ ಮಿಜಾರಿನ ಸಸ್ಯಕಾಶಿ ಶೋಭಾವನದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷ್ (ರಿ.) ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕಲೆ, ಸಂಸ್ಕೃತಿ,ತನ್ಮೂಲಕ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ರಾಷ್ಟ್ರೀಯಮಟ್ಟದ ಕಲಾವಿದರೋರ್ವರಿಗೆ ಆಳ್ವಾಸ್ ವಿರಾಸತ್ 2011 ಪ್ರಶಸ್ತಿನೀಡಿ ಗೌರವಿಸಲಾಗುತ್ತದೆ. ದಿನಕ್ಕೆರಡು ಕಲಾ ಪ್ರಕಾರಗಳಂತೆ ಈ ಬಾರಿಯ ವಿರಾಸತ್ ನಲ್ಲಿ ಖ್ಯಾತ ಕಲಾವಿದರು ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ.





ರಾಷ್ಟ್ರೀಯ ಮಟ್ಟದ ಕಲಾವಿದರನ್ನು ನಾಡಿನ ಜನಕ್ಕೆ ಪರಿಚಯಿಸುವುದು ಹಾಗೂ ಅವರ ಕಲಾಪ್ರದರ್ಶನಕ್ಕೆ ರಾಷ್ಟ್ರೀಯ ಮಟ್ಟದ ವೇದಿಕೆಯನ್ನೊದಗಿಸುವುದು, ನಾಡಿನ ಕಲಾಸಕ್ತರಿಗೆ ಈ ಹಿರಿಯ ಕಲಾವಿದರ ಕಲಾ ಪ್ರದರ್ಶನವನ್ನು ವೀಕ್ಷಿಸಲು ಮುಕ್ತ ಅವಕಾಶ ನೀಡುವುದು ಈ ವಿರಾಸತ್ನ ಪ್ರಮುಖ ಉದ್ದೇಶ. ಗ್ರಾಮೀಣ ಪ್ರದೇಶವೊಂದರಲ್ಲಿ ಹಿರಿಯ ಕಲಾವಿದರನ್ನು ಒಂದುಗೂಡಿಸಿ ಕಲಾಸಕ್ತರಿಗೆ ಕಾರ್ಯಕ್ರಮದ ಸವಿ ಸವಿಯಲು ಸಂಪೂರ್ಣ ಉಚಿತ ವ್ಯವಸ್ಥೆಯನ್ನು ಮಾಡುತ್ತಿರುವುದು ಆಳ್ವಾಸ್ ಸಮೂಹ ಸಂಸ್ಥೆಗಳ ಸಾಧನೆಯಾಗಿದೆ.
ಸಹಸ್ರ ಸಸ್ಯಗಳ ಕಣಜ ಶೋಭಾವನದಲ್ಲಿ ಗೋಧೂಳಿಯ ಸಮಯದಲ್ಲಿ ಸಮಯಪ್ರಜ್ಞೆಯೊಂದಿಗೆ ನಿಗಧಿತ ಅವಧಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು ನಿಗಧಿತ ಅವಧಿಗೆ ಕಾರ್ಯಕ್ರಮ ಮುಗಿಯಲಿದೆ. 6ದಿನಗಳ ಕಾಲ ಹಲವು ಪ್ರಕಾರಗಳ ಕಲಾ ಪ್ರದರ್ಶನ ವಿರಾಸತ್ ವೇದಿಕೆಯ ಮೂಲಕ ಪ್ರದರ್ಶನಕಾಣಲಿದೆ.

ಮುಂದೆ ಓದಿ

ವಿಶೇಷ ವರದಿ




ಒಂದು ರುಪಾಯಿ ನಾಣ್ಯ ನಿಮ್ಮಲ್ಲಿದೆಯೇ...? ಹೌದು ಎಂದಾದರೆ ನೀವು ಲಕ್ಷಾಧೀಶ್ವರರು ಎಂದರ್ಥ. !!! ಒಂದು ರುಪಾಯಿಗೂ ಲಕ್ಷಕ್ಕೂ ಏನು ಸಂಬಂಧ ಎಂಬುದೇ ...ಅಚ್ಚರಿಯಾದರೂ ಸತ್ಯ. ಇದೇ ನೋಡಿ ಇವತ್ತಿನ ಈ ಕನಸು ಎಸ್ಕ್ಲೂಸಿವ್ ಸ್ಟೋರಿ...
ಇಂದಿರಾ ಗಾಂಧಿ ಸರಧರಿಸಿಕೊಂಡಿರುವ ಮುಂಭಾಗದ ಚಿತ್ರಹೊಂದಿದ ಒಂದು ರುಪಾಯಿಯ ನಾಣ್ಯ ನಿಮ್ಮಲ್ಲಿದೆಯೇ? ಅದು 1984ರಲ್ಲಿ ಬಿಡುಗಡೆಹೊಂದಿದ ನಾಣ್ಯವೇ ಹಾಗಾದರೆ ನೀವು ಗೆದ್ದಿರಿ ಎಂದರ್ಥ...
ಇಂಧಿರಾ ಗಾಂಧಿಯವರ ಬಲಪಾಶ್ರ್ವದ ಚಿತ್ರ ಹೊಂದಿರುವ ಐದು ರುಪಾಯಿ ನಾಣ್ಯ ನಿಮ್ಮಲ್ಲಿದೆಯೇ...ಹಾಗಾದರೆ ರು.300ರಿಂದ 5ಸಾವಿರದ ತನಕವೂ ನೀವು ಪಡೆದುಕೊಳ್ಳಬಹುದು. ಇನ್ನೊಂದು ಮಾಹಿತಿಯ ಪ್ರಕಾರ ಇಂದಿರಾ ಗಾಂಧಿಯವರ (1917 - 1984)ರ ನಾಣ್ಯ 75ಸಾವಿರದ ತನಕವೂ ಬಿಕರಿಯಾಗುತ್ತಿದೆ.

1971,1972,1973,1974,1975,1976,1977 ವರುಷದ ಒಂದು ರುಪಾಯಿ ನಾಣ್ಯ, ಆರು ನಕ್ಷತ್ರಗಳನ್ನು ಹೊಂದಿರುವ 1983,1984,1985,1972,1982,1985 ಒಂದು ರುಪಾಯಿ ನಾಣ್ಯಗಳು, ಮೀನುಗಾರನ ಚಿತ್ರ ಇರುವ 50 ಪೈಸೆ ನಾಣ್ಯ, ಹುಲಿ ಚಿತ್ರವಿರುವ 50ಪೈಸೆ ನಾಣ್ಯ, ಜವಹಾರ್ ಲಾಲ್ ನೆಹರೂ ಟೋಪಿ ಹೊಂದಿರುವ 50 ಪೈಸೆ ನಾಣ್ಯ, 1972ರಲ್ಲಿ ಬಿಡುಗಡೆಗೊಂಡ ಸೂರ್ಯ , ತಾವರೆಹೊಂದಿರುವ 20 ಪೈಸೆ ನಾಣ್ಯಕ್ಕೆ ಬೇಡಿಕೆ ಅಧಿಕವಾಗಿದೆ.

ಇಂದು ಚಿಲ್ಲರೆ ನಾಣ್ಯದ ದೊಡ್ಡ ದಂತೆ ಆರಂಭಗೊಂಡಿದೆ. ವಾಣಿಜ್ಯ ನಗರಿಯಿಂದ ಈ ನಾಣ್ಯಗಳ ಸಂಗ್ರಹಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು ವಿವಿದೆಡೆಗಳಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಈ ಚಿಲ್ಲರೆ ಒಟ್ಟುಮಾಡಲು ಬ್ರೋಕರ್ಸ್ ಇದ್ದಾರೆ. ಊರಲ್ಲೆಲ್ಲಾ ಹುಡುಕಿ, ಹಳೆ ಡಬ್ಬಗಳನ್ನು, ಕಾಣಿಕೆ ಹುಂಡಿಗಳನ್ನು ಒಡೆದು ಒಂದು ರುಪಾಯಿಗಾಗಿ ತಡಕಾಡುತ್ತಿದ್ದಾರೆ.
ಗುಪ್ತವಾಗಿ ಹೋಗಿ ನಿಮ್ಮಲ್ಲಿ ಒಂದು ರುಪಾಯಿ ಕಾಯಿನ್ ಇದ್ರೆ ಕೊಡಿ ನಿಮಗೆ ನಾಲ್ಕು ಸಾವಿರ ಆನ್ ದಿ ಸ್ಪಾಟ್ ಕೊಡ್ತೇವೆ ಎಂಬ ದಂಧೆ ಇಂದು ನಿರಾತಂಕವಾಗಿ ಸಾಗುತ್ತಿದೆ. ಈ ಒಂದು ರುಪಾಯಿ ನಾಣ್ಯ, ಒಂದು ರುಪಾಯಿ ನೋಟು, ಹತ್ತು ರುಪಾಯಿ ನಾಣ್ಯ, ನೂರು ರುಪಾಯಿ ನೋಟು ಹೀಗೆ ಆಯ್ದ ಕೆಲವೊಂದು ನೋಟು, ನಾಣ್ಯಗಳಿಗೆ ಇದೀಗ ಭಾರೀ ಡಿಮಾಂಡ್.

ಕೊಲ್ಕತ್ತ, ಮುಂಬೈನಲ್ಲಿರುವ ವ್ಯಕ್ತಿಯೋರ್ವ ಈ ನೋಟು, ನಾಣ್ಯಗಳನ್ನು ಸಂಗ್ರಹಿಸಿಕೊಂಡುಹೋಗುತ್ತಾನೆ ಎಂಬುದು ಮಂಗಳೂರಿನಲ್ಲಿ ಕಾಯಿನ್ ಒಟ್ಟುಮಾಡುತ್ತಿರುವ ಏಜೆಂಟ್ ಒಬ್ಬನಿಂದ ಹೊರಬಂದ ಮಾಹಿತಿ. ಇಲ್ಲಿನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ನಿಗಧಿತ ದಿನದಂದು ಈ ವ್ಯಕ್ತಿ ಹಾಜರಾಗುತ್ತಾನೆ. ಎಷ್ಟು ನಾಣ್ಯ, ನೋಟುಗಳಿದ್ದರೂ ಈತ ಕೊಂಡುಕೊಳ್ಳುತ್ತಾನೆ ಎಂಬ ಮಾಹಿತಿ ಹೊರಬಿದ್ದಿದೆ.
ಆನ್ ಲೈನ್ ಮಾರಾಟ

ಈ ಕಾಯಿನ್ ದಂಧೆ ಆನ್ ಲೈನ್ ಮೂಲಕವೂ ನಡೆಯುತ್ತಿದೆ. ವಿವಿಧ ವೆಬ್ ಸೈಟ್ ಗಳ ಮೂಲಕ ರಿಕ್ವೆಸ್ಟ್ ಕಳುಹಿಸಿ ಕಾಯಿನ್ ಸಂಗ್ರಹಕ್ಕೆ ನಾಂದಿಹಾಡಲಾಗುತ್ತಿದೆ. ಒಟ್ಟಾರೆಯಾಗಿ ಈ ನಿರ್ದಿಷ್ಟ ಸೀರಿಸ್ ನಲ್ಲಿ ಹೊರಬಂದಂತಹ ಕಾಯಿನ್ ಗೆ ಮಾತ್ರ ಇಂದು ಚಿನ್ನದ ಬೆಲೆ.
ಗಲ್ಲಿ ಗಲ್ಲಿಗಳಲ್ಲಿ ಇಂದು ಕಾಯಿನ್ ಸಂಗ್ರಹ ಕಾರ್ಯ ನಡೆಯುತ್ತಿದೆ. ಕೆಲವೊಂದು ಮಂದಿ ಚಿಲ್ಲರೆ ವ್ಯಾಪಾರಸ್ಥರು, ಅಂಗಡಿ ವ್ಯಾಪಾರಸ್ಥರಲ್ಲಿ ತೆರಳಿ ಕಾಯಿನ್ ಸಂಗ್ರಹಿಸಿಡುವಂತೆ ದುಂಬಾಲು ಬೀಳುತ್ತಿದ್ದಾರೆ. ಒಟ್ಟಾರೆಯಾಗಿ ಇದೀಗ ಚಿಲ್ಲರೆ ದಂಧೆ ವ್ಯಾಪಕವಾಗಿದೆ...

- ವರ್ಷಾ.

ಮುಂದೆ ಓದಿ

ವೈವಿಧ್ಯ





ಬೀಚ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಹಾಗಂತ ಇಡೀ ದಿನ ಬೀಚ್ನ ಹತ್ತಿರವೇ ಕುಳಿತಿರುವುದಕ್ಕೆ ಸಾಧ್ಯವೆ? ಕಡಲ ದಂಡೆಯ ಮೇಲೆ ಕುಳಿತು ಉಪ್ಪು ನೀರಿನ ಮೇಲಿನಿಂದ ಹಾದು ಬರುವ ಗಾಳಿಯನ್ನು ಸೇವಿಸುತ್ತಾ ದಿವ್ಯ ದಿಗಂತದವರೆಗೂ ನೀಲ ಜಲರಾಶಿಯನ್ನೇ ನೋಡುತ್ತಿದ್ದರೆ, ಆ ಅಗಾಧ ನೀರಿನೆದುರು ನಮ್ಮ ಅಸ್ತಿತ್ವ ಕೇವಲ ಒಂದು ತೃಣದಂತೆ ಕಾಣುವುದರಲ್ಲಿ ಸಂದೇಹವಿಲ್ಲ. ಅಂತಹ ಸಮುದ್ರಕ್ಕೆ ಇದುರಾಗಿ ಕುಳಿತಾಗ ಒಮ್ಮೆ ಮನಸ್ಸಿನ ಚಿಂತೆಗಳೆಲ್ಲಾ ದೂರವಾಗಿ ನಾವು `ರಿಲ್ಯಾಕ್ಸ್' ಆಗುತ್ತೇವೆ. ಕಡಲು ಒಮ್ಮೆ ಉಕ್ಕೇರುವುದಿದೆ, ಮಗದೊಮ್ಮೆ ಶಾಂತವಾಗಿ ತನ್ನ ಅಸ್ತಿತ್ವವೇ ಇಲ್ಲದಂತೆ ಇರುವುದಿದೆ. ಇಂತಹ ಕಡಲು ನಮಗೆ ಬೇಕೆಂದಲ್ಲಿ ಸಿಗಲಾರದು. ನನ್ನೂರಿಗೆ ಹತ್ತಿರವಿರುವ ಬೀಚ್, ಕಾಪು ಬೀಚ್. ಕರಾವಳಿಯ ಅತೀ ಸುಂದರ ಮತ್ತು ಸಮೃದ್ಧಭರಿತವಾದ ಬೀಚ್ಗಳಲ್ಲಿ ಇದೂ ಒಂದು. ಪಶ್ಚಿಮದ ತೀರದಲ್ಲಿ ಗೋಧಿಹುಡಿಯ ಬಣ್ಣದಷ್ಟೇ ಸ್ವಚ್ಛವಾದ ಮರಳರಾಶಿ, ತೆಂಗಿನ ಮರದ ತೋಪುಗಳು, ಕಡಲಿಗೆ ಬೆದರಿ ತೀರಕ್ಕೆ ಬಂದು ನಿಂತಂತಿರುವ ಬಂಡೆಗಳು, ಬಂಡೆಗಳನ್ನು ಬಿಡಲಾರೆವೆನ್ನುವಂತೆ ಮುತ್ತಿಕ್ಕುವ ಅಲೆಗಳು, ಅಲೆಗಳಲ್ಲಿಯೆ ಜೀವ ಪಡೆದ ಪಾಚಿಗಳು, ಪಾಚಿಗಳನ್ನು ತಿನ್ನಲು ಬರುವ ಜಲಚರಗಳು, ಮತ್ತೆ ಹಿಂದಿರುಗಲಾರೆವೆಂದು ಮರಳ ಮೇಲೆಯೆ ಜೀವ ಕಳೆದುಕೊಳ್ಳುವ ಚಿಪ್ಪುಗಳು... ವಾಹ್! ಇಷ್ಟೇಯೆ?... ಇಲ್ಲ ಇನ್ನಷ್ಟಿದೆ ಈ ಮರಳ ದಂಡೆಯಲ್ಲಿ.

ಸಂಜೆಯ ಹೊತ್ತು ಪಶ್ಚಿಮದ ಕಡಲ ಕಿನಾರೆಯಲ್ಲಿ ಕುಳಿತು ಯೌವನದ ಕುರುಹಾಗಿ ಬೆಳೆದ ಮೊಡವೆಗಳನ್ನು ಚಿವುಟುತ್ತಾ ಕಲ್ಪನೆಗಳ ಕೂಸನ್ನು ಹುಟ್ಟಿಸಿಕೊಳ್ಳುವ ಹಾಗೆ ಬಾನಿನ ಬಣ್ಣದ ತಟ್ಟೆಯಾಗುವ ಸೂರ್ಯ, ಮುಖಕ್ಕೆ ತೇಜಸ್ಸು ನೀಡುವ ರೋಮಾಂಚನದ ಘಳಿಗೆ... ಇಂತಹ ಅದೆಷ್ಟೋ ಘಳಿಗೆಗಳನ್ನು ಮನಸ್ಸಿನಾಳಕ್ಕೆ ಇಳಿಸಿ ಮೆಲುಕು ಹಾಕುವುದು ವೈಯಕ್ತಿಕ ನೆನಪುಗಳ ಸವಾರಿಯಷ್ಟೆ. ಆದರೆ ಆ ನೆನಪುಗಳನ್ನು `ಮಾಸ್' ಆಗಿ ಕಾಣಿಸುವುದು ದೃಶ್ಯಮಾಧ್ಯಮಗಳು. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕಾಸರಗೋಡುಗಳ ಉದ್ದಕ್ಕೂ ಭೂಪಟದ ನೀಲಿಯ ಜಲರಾಶಿಯ ಸವಿಯನ್ನು ಅದೆಷ್ಟೋ ಸಿನಿಮಾಗಳಲ್ಲಿ ನಾವು ನೋಡಿರುತ್ತೇವೆ. ಆ ದೃಶ್ಯಗಳನ್ನು ಕಾಣುವಾಗಲೆಲ್ಲಾ ಆನಂದಪಡುವುದಿದೆ. ಅದನ್ನು ನೋಡಿದ ಮೇಲೆ ಒಮ್ಮೆ ಬೀಚ್ಗೆ ಹೋಗಿ ಬರೋಣವೆಂದುಕೊಂಡು ಸಂಸಾರ ಸಮೇತವಾಗಿ; ಇಲ್ಲ, ಒಬ್ಬಂಟಿಯಾಗಿ ಸಮುದ್ರವನ್ನು ನೋಡಲು ಕಾತರಿಸುತ್ತೇವೆ. ಅಲ್ಲೆಲ್ಲಾದರೂ ಒಂದುಕಡೆ ಕುಳಿತು ಬಾಯಿಗೂ ಕೈಗೂ ಜಗಳವಾಡುವಂತೆ ಪಾಪ್ಕಾರ್ನ್ ಅಥವಾ ಚರುಂಬುರಿಯನ್ನೊ ತಿನ್ನುತ್ತಾ ಕಣ್ಣಿಗೆಲ್ಲಾ ಕಾಣುವುದನ್ನು ಸ್ವಂತವಾಗಿಸುತ್ತಾ ಕುಳಿತುಕೊಳ್ಳುತ್ತೇವೆ. ಹೀಗೆ ಸ್ವಂತವಾಗುವುದನ್ನು ದೃಶ್ಯಮಾಧ್ಯಮಗಳು ಬಂಧಿಸಿ ಮೂಟೆ ಕಟ್ಟಿ ಎಲ್ಲೋ ಬಚ್ಚಿಡುತ್ತವೆ. ಈ ಬಚ್ಚಿಟ್ಟ ಸುರುಳಿಗಳು ಬಿಚ್ಚಿಕೊಂಡು ಕಣ್ಣಿಗೆ ಹಬ್ಬ ತರುವುದಂತು ಸುಳ್ಳಲ್ಲ. ಹಾಗೆ ಪಟ್ಟಿ ಮಾಡುತ್ತಾ ಕುಳಿತರೆ ಒಂದೇ ಎರಡೆ... ಸಾವಿರಾರು ಸಿನಿಮಾಗಳು ನಮಗೆ ನೆನಪಾಗದಿರದು. ಕಣ್ಣ ಮುಂದೆ ದುತ್ತನೆ ನಿಂತು ನೆನಪುಗಳನ್ನು ರೈಲಿನ ಹಳಿಯಂತೆ ನೂಕುತ್ತಾ ಕಿರಿದು ಅಗಲವಾಗುತ್ತಾ ಕಾಣಿಸಿಕೊಳ್ಳುವುದು ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ `ರಣಧೀರ' ನೆನ್ನುವ ದೃಶ್ಯಕಾವ್ಯದ ಸಿನಿಮಾ.

`ಒಂದಾನೊಂದು ಊರಲಿ ಒಬ್ಬ ಹುಡುಗನಿದ್ದನು, ಯಾರಿಗೂ ಬೆದರದ ರಣಧೀರನು.
ರಾವಣನಂತವನೊಬ್ಬ ಅವನ ಸಾಕುತ್ತಿದ್ದನು, ಕಾರಣ ಹುಡುಗನು ಅನಾಥನು.
ಭೀಷ್ಮ, ಅರ್ಜುನರೆಲ್ಲಾ ಹುಡುಗಿಯರ ಕಥರೇನೆ
ಹಾಗೇನೆ ಈ ಹುಡುಗ, ಮಾಡಲೆಂದು ಹೋದಾಗ'

ತಟ್ಟನೆ ಹಾಡು ನಿಂತಾಗ ಮಕ್ಕಳ ಒಕ್ಕೊರಲಿನ ದನಿ, `ಏನಾಯ್ತು ಅಂಕಲ್, ಏನಾಯ್ತು?'

`ಪ್ರೀತಿಯ ಕಡಲಲ್ಲಿ ಬಿದ್ದನೊ...' ರವಿಮಾಮನ ಉತ್ತರವಾಗುತ್ತಲೇ ರಣಧೀರನ ಕಥೆ ಆರಂಭವಾಗುತ್ತದೆ.

ದೃಶ್ಯಗಳನ್ನು ಹೊಸತನದಲ್ಲಿ ಕಟ್ಟಿಕೊಡುವ ವಿಶೇಷ ಅಭಿರುಚಿ ರವಿಚಂದ್ರನ್ರಿಗಿದ್ದಷ್ಟು ಆಗ ಬೇರಾರಿಗೂ ಇರಲಿಲ್ಲವೆನ್ನಬಹುದು. ಹಾಗಾಗಿ ಹೊಸ ಹೊಸ ಲೊಕೇಷನ್ ಹುಡುಕುತ್ತಾ ಕಂಗಳಲ್ಲಿ ಕನಸುಗಳನ್ನು ಕಟ್ಟಿಕೊಳ್ಳುತ್ತಾ ಚಿತ್ರಕ್ಕೆ ಚೌಕಟ್ಟನ್ನು ಬರೆದಂತೆ ಸಿನಿಮಾದಲ್ಲಿ ಶ್ರೀಮಂತಿಕೆಯನ್ನು ತುಂಬುವುದು ಅವರ ಕ್ರೇಜ್ ಗಳಲ್ಲಿ ಒಂದು.

ಆಗ ನನಗೆ ಮೀಸೆ ಚಿಗುರುವ ವಯಸ್ಸಿರಬಹುದು. ಪಿಯುಸಿ ಕಲಿಯುತ್ತಿದ್ದೆ. ನನ್ನೂರಿನಿಂದ ಏಳೆಂಟು ಮೈಲಿಗಳ ದೂರದ ಇನ್ನಂಜೆಯೆಂಬ ಹಳ್ಳಿಯ ಎಸ್.ವಿ.ಎಚ್. ಪದವಿ ಕಾಲೇಜಿಗೆ ನಡೆದುಕೊಂಡೆ ಹೋಗಬೇಕು. ಸರಿಯಾದ ವಾಹನ ವ್ಯವಸ್ಥೆಯೂ ಇರಲಿಲ್ಲ. ಇದ್ದರೂ ದುಡ್ಡು ಕೊಟ್ಟು ಪ್ರಯಾಣಿಸುವಷ್ಟು ಅನುಕೂಲತೆ ಇರಲಿಲ್ಲ. ಹಾಗಾಗಿ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಕಾಲಿಗೆ ಜೋಡುಗಳನ್ನು ಹಾಕುವಷ್ಟು ಕೂಡ ದಾರಿದ್ರ್ಯ ಬಿಟ್ಟಿರಲಿಲ್ಲ. ಕಲ್ಲು ಮುಳ್ಳುಗಳ ದಾರಿ ಸವೆಸುವಾಗಲೆಲ್ಲ ಮುಂಬರುವ ಸುಖದ ದಿನಗಳ ಕನಸಿನ ಮೂಟೆಯ ಭಾರ ಒಳಗೊಳಗೆ ಖುಷಿಕೊಡುವುದಿತ್ತು.

ಅಂತು ಆ ದಿನ ಅಷ್ಟು ದೂರದಿಂದ ನಡೆದುಕೊಂಡು ಬಂದಿದ್ದೇ, ಏನಕ್ಕೋ ಕಾಲೇಜಿಗೆ ರಜ ಘೋಷಿಸಲಾಗಿತ್ತು. ಕ್ಲಾಸ್ಮೇಟ್ಸೆಲ್ಲಾ ಸೇರಿ ಎಲ್ಲಿಗಾದರೂ ಹೋಗಿ ಬರೋಣವೆಂದುಕೊಂಡೆವು. ಮಹೇಶನೆನ್ನುವಾತ ನಮ್ಮ ಗುಂಪಿಗೆ ಮುಖಂಡ. ಆಗಲೆ ಅವನಿಗೆ ಸೈಕಲ್ ಇದ್ದದ್ದರಿಂದ ಆತ ನಮ್ಮ ದೃಷ್ಟಿಯಲ್ಲಿ ಹೀರೋ. ಅವನು ಏನು ಹೇಳಿದ್ರೂ ಎಲ್ಲರೂ `ಎಸ್' ಅನ್ನುತ್ತಿದ್ದರು. ಓದುವ ವಿಷಯದಲ್ಲಿ ಆತ ನನ್ನಿಂದ ಬಹಳಷ್ಟು ಕೇಳಿ ತಿಳಿದುಕೊಳ್ಳುತ್ತಿದ್ದ. ಎಲ್ಲರೂ ಕಾಪು ಬೀಚ್ಗೆ ಹೋಗುವುದೆಂದು ನಿರ್ಧಾರವಾದ ಮೇಲೆ ಆತ ನನ್ನನ್ನೂ ಒತ್ತಾಯಿಸಿದ. ಮನೆಯವರ ಅನುಮತಿಯಿಲ್ಲದೆ ಹೀಗೆಲ್ಲ ಹೋಗುವುದಕ್ಕೆ ಅವಕಾಶವಿರಲಿಲ್ಲ. ನಾನು ನಿರಾಕರಿಸಿದಷ್ಟು ಆತ ಒತ್ತಾಯಿಸುತ್ತಿದ್ದ. ಆತನ ಒತ್ತಾಯಕ್ಕೆ ಮಣಿದು ಅವನ ಸೈಕಲ್ ಏರಿ ಹೊರಟೆವು. ನಮ್ಮ ಪ್ರಯಾಣ ಕಾಪು ಬೀಚ್ನತ್ತ ಸಾಗಿತ್ತು.

ಕರಾವಳಿಯವನಾಗಿ ಮೊದಲ ಬಾರಿಗೆ ಸಮುದ್ರವನ್ನು ಅಷ್ಟು ಹತ್ತಿರದಿಂದ ನೋಡುವಾಗ ಪುಳಕಿತನಾಗಿದ್ದೆ. ಆ ಅಲೆಗಳು, ಅವುಗಳ ಅಬ್ಬರ! ಮರಳ ದಂಡೆಗೆ ಬಡಿದು ತೋರಿಸುವ ಅದರ ಪೌರುಷ! ಮತ್ತೆ ಶಾಂತವಾಗಿ ಹಿಂತಿರುಗುವ ಪರಿ. ಅದೆಷ್ಟೋ ಹೊತ್ತು ನೋಡುತ್ತಾ ಮೂಕನಂತೆ ನಿಂತು ಬಿಟ್ಟಿದ್ದೆ. ಗೆಳೆಯರು ಒತ್ತಾಯಿಸಿದರೂ ನೀರನ್ನು ಮುಟ್ಟದೆ ಪುಕ್ಕಲನಂತೆ ದೂರಕ್ಕೆ ನಿಂತು ಅಲೆಗಳ ಆಟ, ಸಮುದ್ರದ ಬೋರ್ಗರೆತ, ದೂರದಿಂದಲೇ ಅಲೆಗಳನ್ನು ಸೃಷ್ಟಿಸಿ ದಂಡೆಗೆ ಅಪ್ಪಳಿಸುವ ದೃಶ್ಯವನ್ನು ನೋಡುತ್ತಿದ್ದೆ. ನಮ್ಮ ಗುಂಪು ಅದಾಗಲೆ ಬಂಡೆಗಳ ಕಡೆಗೆ ಸಾಗಿತ್ತು. ನಾನೂ ಅತ್ತ ಹೆಜ್ಜೆ ಹಾಕಿದೆ. ನೀರಿನ ಹಿನ್ನಲೆಯಲ್ಲಿ ದೈತ್ಯ ಬಂಡೆಗಳು ಅಚಲವಾಗಿ ನಿಂತಿದ್ದವು. ಒಂದೆಡೆ ನದಿಯ ಸಂಗಮದ ಸಾನಿಧ್ಯ ಮತ್ತೊಂದೆಡೆ ಬೋರ್ಗರೆಯುವ ಸಮುದ್ರ. ಇಷ್ಟಿದ್ದೂ ನಿರ್ಲಿಪ್ತತೆಯಿಂದ ನಿಂತಿದ್ದ ಬಂಡೆಯ ಮೇಲೆ ಆಕಾಶದೆತ್ತರಕ್ಕೆ ನಿಂತ ದೀಪಸ್ತಂಭ!

ಹೀಗೆ ನೋಡುತ್ತಾ ನಿಂತಿರುವಂತೆ ಅಲ್ಲೇ ಪಕ್ಕದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದೇ ಇರಲಿಲ್ಲ. ಯಾರೋ ಕರೆದು ನಮ್ಮ ಗಮನವನ್ನು ಅತ್ತ ಸೆಳೆದರು. ರವಿಚಂದ್ರನ್ರವರು ಕುದುರೆಯ ಮೇಲೆ ಕುಳಿತು ಬರುತ್ತಿರುವ ದೃಶ್ಯ ಅದು. ಟೈಟಲ್ ಸಾಂಗ್ `ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ' ಸಾಗುತ್ತಿದ್ದಂತೆ ವೇಗವಾಗಿ ಸಮುದ್ರದಂಡೆಯಲ್ಲಿ ಕುದುರೆಯೇರಿ ಸಮುದ್ರದ ಅಲೆಗಳನ್ನು ಬೆಳ್ಳಿ ತೆರೆಗಾಗಿ ಚಿತ್ರೀಕರಿಸುತ್ತಿದ್ದರು. ದೂರದಲ್ಲಿಯೆ ನಿಂತು ನೋಡುತ್ತಿದ್ದೆವು. ಸಮಯದ ಅಭಾವ ಮತ್ತು ಮನೆಯಲ್ಲಿ ಅನುಮತಿಯಿಲ್ಲದೆ ಬಂದದ್ದರಿಂದ ಗೆಳೆಯರನ್ನು ಎಚ್ಚರಿಸಿಬೇಕಾಗಿತ್ತು. ಅಂತು ಸ್ವಲ್ಪ ಹೊತ್ತು ಇದ್ದು ವಾಪಾಸಾದೆವು.

ಆ ಬಳಿಕ ಒಂದೆರಡು ವರ್ಷದಲ್ಲಿ ಚಿತ್ರ ಬಿಡುಗಡೆಯಾಯಿತು. ನಾವು ನೋಡಿದ ಚಿತ್ರೀಕರಣದ ಭಾಗಗಳನ್ನು ನೋಡಬೇಕೆನ್ನುವ ಉದ್ದೇಶದಿಂದ ಸಿನಿಮಾ ನೋಡಬೇಕೆಂದುಕೊಂಡೆ. ಕೊನೆಗೂ ಆ ಸಿನಿಮಾ ಉಡುಪಿಯಲ್ಲಿ ಆಶೀರ್ವಾದ್ ಥಿಯೇಟರ್ಗೆ ಬಂತು. ಮೊದಲ ಬಾರಿಗೆ ಸಿನಿಮಾಸ್ಕೋಪ್ ಚಿತ್ರ ನಮ್ಮೂರಿನ ಥಿಯೇಟರ್ಗೆ ಬಂದ ನೆನಪು. ಆ ಚಿತ್ರಕ್ಕೆ ಪರದೆಯ ಅಗಲ ಸಾಕಾಗದೆ ಸ್ವಲ್ಪ ಮುಂದಕ್ಕೆ ದೊಡ್ಡ ಸ್ಕ್ರೀನ್ ಅಳವಡಿಸಿದ್ದರು. ಆದರೂ ಎರಡೂ ಬದಿಗಳಲ್ಲಿ ಚಿತ್ರಗಳು ಪರದೆಯ ಹೊರಕ್ಕೆ ಕಾಣಿಸುತ್ತಿದ್ದವು.

ರಣಧೀರ ಚಿತ್ರದಲ್ಲಿ ರವಿಚಂದ್ರನ್ರವರು ಮುರಳಿಯಾಗಿ ತನ್ನ ಪ್ರೀತಿಯನ್ನು ಕಳೆದುಕೊಂಡು ಶಿಷ್ಯನ ಜೊತೆಗೆ, `ರಣಧೀರ ಅನ್ನೋದರಲ್ಲಿರೋ ಮಜಾ ಈ ಮುರಳಿ ಅನ್ನೋ ಹೆಸರಿನಲ್ಲಿಲ್ಲ' ಎಂದು ಕಿಕ್ಕ್ ಏರಿಸಿಕೊಂಡು ಅಲೆಗಳ ನಡುವೆ ಹೇಳುತ್ತಾ ಸಾಗುವ ದೃಶ್ಯ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಅದಲ್ಲದೆ, ಕಾಪು ಬೀಚ್ನ ಹೈಲೈಟ್ ಆಗಿರುವ ಬಂಡೆಯ ದೃಶ್ಯಗಳನ್ನು `ಬಾ ಬಾರೋ ಬಾರೋ ರಣಧೀರ, ಬಾ ಎಂದರೆ...' ಹಾಡಿನ ಹಿನ್ನಲೆಯಲ್ಲಿ ಫೈಟಿಂಗ್ ದೃಶ್ಯಗಳಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಬಂಡೆಗಳ ಮೇಲಿನಿಂದ ಸಮುದ್ರಕ್ಕೆ ಹಾರುವ ದೃಶ್ಯ, ನೀರಿನಲ್ಲಿ ಹೊಡೆದಾಟದ ದೃಶ್ಯ, ನದಿ ಸಂಗಮದ ಹಿನ್ನಲೆಯಲ್ಲಿಯ ದೃಶ್ಯ ನೋಡಿದಷ್ಟು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

1989ರಲ್ಲಿ ಅದ್ದೂರಿಯಾಗಿ ಚಿತ್ರ ಬಿಡುಗಡೆಗೊಂಡು ಜಯಭೇರಿ ಬಾರಿಸಿದ ನೆನಪು. ಆಗ ಆ ಚಿತ್ರ ನನ್ನಂತಹ ಕನಸು ಕಣ್ಣಿನ ಹುಡುಗರನ್ನೆಲ್ಲಾ ಬಡಿದೆಬ್ಬಿಸಿತ್ತು. ಮುಖ್ಯ ಭೂಮಿಕೆಯಲ್ಲಿ ರವಿಚಂದ್ರನ್, ಖುಷ್ಬೂ, ಲೋಕೇಶ್, ಅನಂತ್ನಾಗ್, ಸುಮಿತ್ರಾ, ಜಗ್ಗೇಶ್, ಅರವಿಂದ್ ಮುಂತಾದವರಿದ್ದು, `ಪ್ರೇಮ ಲೋಕ'ದಂತೆ ಅದ್ದೂರಿಯ ತಾರಾಂಗಣ ಈ ಚಿತ್ರಕ್ಕಿತ್ತು.

ಮುಂದಿನ ವಾರ ಮತ್ತೆ ಇದೇ ಬೀಚ್ಗೆ...

ಮುಂದೆ ಓದಿ

ಅಗ್ರ ಲೇಖನ




ರಾಹುಲ್ ಗಾಂಧೀ ಭಾರತದ ಪುಣ್ಯಭೂಮಿಯ ಮಗ ಅಲ್ಲ ಎಂಬುದು ಸ್ಪಷ್ಟ. ಇದಕ್ಕೆ ರಾಹುಲ್ ಗಾಂಧಿ ಅವರ ಕೀಳುಮಟ್ಟದ ಹೇಳಿಕೆಯೇ ನಿದರ್ಶನ. ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ತನ್ನ ವ್ಯಕ್ತಿತ್ವ ಇಷ್ಟೇ ಎಂಬುದನ್ನು ಇಡೀ ವಿಶ್ವಕ್ಕೆ ಸಾದರಪಡಿಸಿದಂತಾಗಿದೆ. ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನೂ ಬೀದಿಪಾಲು ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳನ್ನು ತುಚ್ಛೀಕರಿಸಿ ಮಾತನಾಡಿದ್ದು ನಿಜಕ್ಕೂ ಆ ಪಕ್ಷದ ವರ್ಚಸ್ಸಿಗೆ ಹಿಡಿದ ಕೈ ಗನ್ನಡಿ .
ಕಾಂಗ್ರೆಸ್ ಇಷ್ಟೊಂದು ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದು ಪ್ರಜ್ಞಾವಂತ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದು ನಿಜಕ್ಕೂ ಖಂಡನಾರ್ಹ.
" ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ತೋಯ್ಬಾ ಚಟುವಟಿಕೆಗಳಿಂತಲೂ ಭಾರತಕ್ಕೆ ತೀವ್ರವಾದಿ ಹಿಂದೂ ಸಂಘಟನೆಗಳ ಬೆಳವಣಿಗೆಯಿಂದ ಭಾರೀ ಬೆದರಿಕೆ ಎದುರಾಗಿದೆ " ಎಂದು ರಾಹುಲ್ ಗಾಂಧಿ ಅಮೆರಿಕಾದ ರಾಯಭಾರಿ ತಿಮೋತಿ ರೋಮರ್ ಅವರಲ್ಲಿ ತಿಳಿಸಿದ್ದಾಗಿ ವಿಕಿಲೀಕ್ಸ್ ಬಹಿರಂಗ ಪಡಿಸಿದೆ. ರಾಹುಲ್ ಗಾಂಧೀ ಈ ಹೇಳಿಕೆಯನ್ನು ಜುಲೈ 20, 2009ರಂದು ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಗೌರವಾರ್ಥ ಪ್ರಧಾನಿ ಮನಮೋಹನ್ ಸಿಂಗ್ ತನ್ನ ನಿವಾಸದಲ್ಲಿ ಏರ್ಪಸಿದ ಔತಣ ಕೂಟದಲ್ಲಿ ನಡೆದ ಮಾತುಕತೆ ಸಂದರ್ಭ ಈ ಮಾತನ್ನು ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರಿಗೆ ಭಾರತದಲ್ಲಿ ನಡೆಯುತ್ತಿರುವ ಮುಸ್ಲಿಂ ಸಂಘಟನೆಗಳ ಭಯೋತ್ಪಾದನೆ "ಕ್ಷುಲ್ಲಕ" ಎಂದೆನಿಸಿವೆಯೇ? . ದೇಶದಾದ್ಯಂತ ನಡೆದಿರುವ ಭಯೋತ್ಪಾದನಾ ಧಾಳಿಗಳನ್ನು ಇದೇ ಹಿಂದೂ ಸಂಘಟನೆಗಳು ನಡೆಸಿದ್ದೆಂಬ ಗುಮಾನಿ ಇದೇ ರಾಹುಲ್ ಗಾಂಧಿಯವರಿಗೆ ಇದೆಯೇ? ಒಂದೊಮ್ಮೆ ನವದೆಹಲಿಯಲ್ಲಿ ನಡೆದ ಧಾಳಿ, ಮುಂಬೈ ಧಾಳಿಗಳನ್ನು ನೆನಪಿಸಿಕೊಂಡು ಈ ಧಾಳಿಗೆ ಯಾವ ಸಂಘಟನೆಗಳ ಕೈವಾಡಗಳಿವೆ. ಇದಕ್ಕೆ ನೇರ ಸೂತ್ರದಾರರು ಯಾರು ಎಂಬುದನ್ನು ಇದೇ ಕಾಂಗ್ರೆಸ್ ನಾಯಕ ರಾಹುಲ್ ತನ್ನ ನಿಷ್ಕಲ್ಮಶ ಮನಸ್ಸಿನಿಂದ ಅವಲೋಕಿಸ ಬೇಕಾಗಿದೆ.

ನಿರಂತರವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತೆ ನಡೆಯುತ್ತಿರುವ ಮುಸಲ್ಮಾನ ಸಂಘಟನೆಗಳು ಮಾಡುತ್ತಿರುವ ಅನಾಚಾರಗಳನ್ನು ಇದೇ ರಾಹುಲ್ ಏನೆಂದು ಬಣ್ಣಿಸುತ್ತಾರೆ?, ಲೌ ಜಿಹಾದ್ ನಿಂದ ತೊಡಗಿ, ಹೆಜ್ಜೆ ಹೆಜ್ಜೆಗೆ ನಡೆಯುವ ಅನಾಚಾರಗಳ ತನಕ, ದೇಶದ ಮೂಲೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುವ ಧಾಳಿಗಳಿಂದ ತೊಡಗಿ, ರಾಜಧಾನಿಯೂ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನಡೆದ ಧಾಳಿಗಳ ತನಕ ಅವಲೋಕಿಸಿದರೆ ನೈಜತೆ ಏನೆಂಬುದು ರಾಹುಲ್ ಅವರಿಗೆ ತಿಳಿಯಬಹುದು. ಪ್ರಜ್ಞಾವಂತ ಹಿಂದೂಗಳ ಧಾರ್ಮಿಕ ಭಾವನೆಗಳಲ್ಲೊಂದಾದ ಗೋವನ್ನು ಅಮಾನುಷವಾಗಿ ಹತ್ಯೆಗೈಯುವ ಮುಸಲ್ಮಾನ ಸಮುದಾಯದವರನ್ನು ಇದೇ ರಾಹುಲ್ ಏನೆಂದು ಕರೆಯುತ್ತಾರೆ? ಇವರನ್ನು ಯಾವ ಸಂಘಟನೆ, ಅಥವಾ ಯಾವ ರೀತಿಯಲ್ಲಿ ಚಿತ್ರಿಸಲು ರಾಹುಲ್ ತಯಾರಿದ್ದಾರೆ?

ಮಾತು ಆಡಿದರೆ ಹೋಯಿತು... ಮುತ್ತು ಒಡೆದರೆ ಹೋಯಿತು ಎಂಬ ಮಾತೊಂದಿದೆ. ವಿದೇಶಿಯರಲ್ಲಿ ಭಾರತದ ಆಂತರಿಕ ವಿಚಾರಗಳನ್ನು ಎತ್ತಿತೋರಿಸುವ ಕಾರ್ಯವನ್ನು ರಾಹುಲ್ ಮಾಡಿದ್ದಾರೆ. ಒಂದು ಜವಾಬ್ದಾರಿಯುತ ಪಕ್ಷದಲ್ಲಿದ್ದುಕೊಂಡು, ದೇಶವನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷದ ಯುವ ನಾಯಕನಾಗಿ ಈ ಮಾತನ್ನು ಹೇಳಿದ್ದು ಉಚಿತವಲ್ಲ. ಅಷ್ಟೂ ಅಲ್ಲದೆ ಭಾರತೀಯನಾಗಿ ಈ ಮಾತನ್ನು ಹೇಳಿದ್ದು ಅಕ್ಷ್ಯಮ್ಯ ಅಪರಾಧ. ಅಲ್ಪಸಂಖ್ಯಾತ(ಪ್ರಸ್ತುತ ಬಹುಸಂಖ್ಯಾತರಾಗುತ್ತಿರುವ) ಮುಸಲ್ಮಾನರನ್ನು ಓಲೈಸುವ, ಅವರ ಓಟ್ ಬ್ಯಾಂಕ್ ಗೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಈ ಮೊದಲಿನಿಂದಲೂ ಮಾಡುತ್ತಾ ಬಂದಿರುವ ಚಾಳಿಯನ್ನು ರಾಹುಲ್ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೆ ಹಿಂದುಗಳನ್ನು, ಹಿಂದೂ ದೇಶವನ್ನೇ ಹೀಯಾಳಿಸುವ ಮೂಲಕ ತಾನೊಬ್ಬ "ಹೀರೋ" ಎಂದು ಬಿಂಬಿಸಿಕೊಳ್ಳುವ ತೀಟೆ ರಾಹುಲ್ ಗಾಂಧಿಯದ್ದು ಎಂದರೆ ತಪ್ಪಾಗಲಾರದು.


ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ದೇಶದ ಮಾನ ಹರಾಜು ಮಾಡಲು ಹೊರಟಿದ್ದಾರೆ. ತನ್ನ ತಟ್ಟೆಯಲ್ಲಿದ್ದ ಹೆಗ್ಗಣವನ್ನು ಮುಚ್ಚಿಟ್ಟು ಉಳಿದವರ ತಟ್ಟೆಯಲ್ಲಿರುವ ಸೊಳ್ಳೆಯನ್ನು ದೊಡ್ಡ ಸಂಗತಿ ಎಂಬಂತೆ ಮಾಡಲು ಹೊರಟಿರುವುದು ಸ್ಪಷ್ಟ. ಸ್ವತ: ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮುಂದೊಂದು ದಿನ "ಪ್ರಧಾನಿ" ಹುದ್ದೆಯ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ರಾಹುಲ್ ಗಾಂಧಿಯವರಿಗೆ ತನ್ನ ಮಾತಿನ ಬಗ್ಗೆ ಕನಿಷ್ಟಜ್ಞಾನವೂ ಇದ್ದಂತೆ ಕಾಣುತ್ತಿಲ್ಲ. ರಾಜತಾಂತ್ರಿಕ , ವ್ಯವಹಾರಿಕ ಜ್ಞಾನದ ಕೊರತೆ ರಾಹುಲ್ ಅವರಿಗೆ ಇದೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ, ರಾಹುಲ್ ಗಾಂಧಿಯವರಿಗೆ ಮತೀಯ ರಾಜಕಾರಣದ ಒಲವು ಎಷ್ಟಿದೆ ಎಂಬುದಕ್ಕೆ ರಾಹುಲ್ ಹಿಂದೂಗಳ ಮೇಲೆ ಮಾಡಿರುವ ಘೋರ ಆರೋಪವೇ ಪ್ರಮುಖ ಸಾಕ್ಷಿಯಾಗಿದೆ. ಜಾತಿ,ಮತ,ಧರ್ಮಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ. ತನ್ಮೂಲಕ ಚುನಾವಣೆಯಲ್ಲಿ ಮುಸಲ್ಮಾನ ಸಮುದಾಯವನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಬಳಸುತ್ತಿರುವುದು ಘೋರ ದುರಂತ.

ಹರೀಶ್ ಕೆ.ಆದೂರು

ಮುಂದೆ ಓದಿ
4:58 PM

ಜಲಕೋತ್ಸವ

Posted by ekanasu

ಪ್ರಾದೇಶಿಕ ಸುದ್ದಿ

ಮೂಲ್ಕಿ ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿಷ್ಠಾ ಪೂರ್ಣಿಮೆಯ ಪೂರ್ವಭಾವಿಯಾಗಿ ಶನಿವಾರ ಮುಂಜಾನೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಶಾಂಭವಿ ನದಿಯಲ್ಲಿ ಶ್ರೀ ದೇವರ ಜಲಕೋತ್ಸವ ಜರುಗಿತು.
ಚಿತ್ರ: ಭಾಗ್ಯವಾನ್ ಮುಲ್ಕಿ.

ಮುಂದೆ ಓದಿ

ಭಕ್ತಿ ಸಿಂಚನ
॥ಹರೇ ರಾಮ॥
ಪ್ರೀತಿ..ನೀತಿ..ರೀತಿ…ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!

ಪ್ರೀತಿ – ಈಶನಲ್ಲಿ..
ಪ್ರೀತಿ – ದೇಶದಲ್ಲಿ..



ಪ್ರೀತಿ – ನರೇಶನಲ್ಲಿ..
ಪ್ರೀತಿ – ಪರಸ್ಪರರಲ್ಲಿ..
ಪ್ರೀತಿ – ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..

ಲೋಕವು ಅಷ್ಟಾಗಿ ಗಮನಿಸದ ಈ ಎಲೆಮರೆಯ ಕಾಯಿಗಳ ಸಾಮರ್ಥ್ಯ-ಸೇವೆಗಳನ್ನು ಸೂಕ್ಷ್ಮದೃಷ್ಟಿಯಿಂದ ಗಮನಿಸಿ, ಬಣ್ಣಿಸುವ ಋಷಿಪದಗಳನ್ನು ಸಾವಧಾನವಾಗಿ ಗಮನಿಸಿ..

*ನಿತ್ಯಂ ಪ್ರಿಯಹಿತೇ ರತಾಃ :
ಸಾಮ್ರಾಜ್ಯದ – ಸಮ್ರಾಟನ ‘ಪ್ರಿಯ-ಹಿತ’ಗಳಲ್ಲಿ ಅವರು ನಿರತವೂ ನಿರತರಾಗಿದ್ದರು..
ಪ್ರಿಯ-ಹಿತಗಳು ಭುವಿಯ ಬದುಕಿನ ಎರಡು ಧ್ರುವಗಳು..
ನಮಗೆ ಪ್ರಿಯವಾಗುವ ಹಲವು ಸಂಗತಿಗಳು ಜೀವನಕ್ಕೆ ಹಿತವಲ್ಲ..
ಜೀವನಕ್ಕೆ ಹಿತವಾದ ಅದೆಷ್ಟೋ ಸಂಗತಿಗಳು ನಮಗೆ ಪ್ರಿಯವೆನಿಸುವುದೇ ಇಲ್ಲ..
ನಮ್ಮ ಮೇಲೆ ಮಾಯೆಯ ಆಟ ಇಂದಿಗೂ ನಡೆಯುತ್ತಿದ್ದರೆ,ಅದಕ್ಕೆ ಪ್ರಧಾನ ಕಾರಣವೇ ಇದು..
ನಮಗೆ ಹಿತವಾದುದೇ ಪ್ರಿಯವೆನಿಸತೊಡಗಿದರೆ ಮಾಯೆಯನ್ನು ಮೀರಿ ನಾವು ದೇವರೆತ್ತರಕ್ಕೆ ಬೆಳೆದುಬಿಡುವೆವಲ್ಲವೇ..!?

ಪ್ರಿಯ-ಹಿತಗಳು ಒಂದಾಗದಿರುವುದೇ ನಮ್ಮ ಸರ್ವಸಂಕಟಗಳ ಮೂಲ..!
ಹಿತವು ಪ್ರಿಯವಾಗದಿರುವುದರಿಂದ ಸಂಪತ್ತುಗಳು ದೂರವಾದವು..!
ಅಹಿತವು ಪ್ರಿಯವಾದಾಗ ಆಪತ್ತುಗಳು ಹತ್ತಿರವಾದವು..!
ಸಕ್ಕರೆಕಾಯಿಲೆಯವನಿಗೆ ಸವಿಯು ಅಹಿತ, ಆದರದುವೇ ಪರಮಪ್ರಿಯ..!!
ಔಷಧವು ಹಿತ, ಆದರದು ಅತ್ಯಂತ ಅಪ್ರಿಯ..!!

ಹಿತ-ಪ್ರಿಯಗಳೊಂದಾದ ಬದುಕು ಮುಕ್ತಿಗೆ ಸಮಾನ..!
ಹಿತಪ್ರಿಯಗಳೊಂದಾದ ಸಾಮ್ರಾಜ್ಯ ಸ್ವರ್ಗಕ್ಕೆ ಮಿಗಿಲು..!
ಆದರೆ ಇವೆರಡನ್ನೂ ಒಂದುಗೂಡಿಸುವುದು ಉತ್ತರ-ದಕ್ಷಿಣಗಳನ್ನು ಒಂದುಗೂಡಿಸುವಷ್ಟೇ – ಪ್ರಕೃತಿ-ಪರಮಾತ್ಮರನ್ನು ಒಂದುಗೂಡಿಸುವಷ್ಟೇ ಕಠಿಣ..
ಒಂದು ಮನೆಯಲ್ಲಿ, ಹೆಚ್ಚೇಕೆ ? ಒಂದು ಮನದಲ್ಲಿ ಸಾಧಿಸಲು ಅಸಂಭವವೆನಿಸುವ ಈ ಕಾರ್ಯವನ್ನು ಒಂದು ರಾಜ್ಯದಲ್ಲಿ ಸಾಧಿಸಿದ್ದರು ಅಯೋಧ್ಯೆಯ ಅಮಾತ್ಯರು..!

ತನ್ನ ಕಾರ್ಯಸಾಧನೆಗಾಗಿ ಮತ್ತೊಬ್ಬನನ್ನು ಸಂತೋಷಪಡಿಸಬಯಸುವವನು ‘ಮಧುಪಾನ’ ಮಾಡಿಸುತ್ತಾನೆ..
ಇದು ಪ್ರಿಯ, ಆದರೆ ಹಿತವಲ್ಲ..
ರೋಗಿಯೊಬ್ಬನನ್ನು ಆರೋಗ್ಯವಂತನನ್ನಾಗಿಸಲೆಳಸುವ ವೈದ್ಯನು ಕಹಿಯಾದ ಔಷಧವನ್ನು ಕುಡಿಸುತ್ತಾನೆ..
ಇದು ಹಿತ, ಆದರೆ ಪ್ರಿಯವಲ್ಲ..
ಮಗುವಿನ ಸಂತೋಷ- ಸ್ವಾಸ್ಥ್ಯಗಳೆರಡನ್ನೂ ಬಯಸುವ ತಾಯಿಯು ಔಷಧವನ್ನು ಜೇನಿನಲ್ಲಿ ಬೆರೆಸಿ ನೀಡುತ್ತಾಳೆ..
ಇದು ಪ್ರಿಯ-ಹಿತಗಳ ಸಂಗಮ..

ಆಳುವವರ ಆದರ್ಶವಿದು..
ಹಿತವುಂಟುಮಾಡುವೆನೆಂದು ಪ್ರಜೆಗಳನ್ನು ನೋಯಿಸಲೂಬಾರದು..
ಸಂತೋಷಪಡಿಸುವ ಭರದಲ್ಲಿ ಅವರಿಗೆ ಅಂತಿಮವಾಗಿ ಅಹಿತವನ್ನೇ ಉಂಟುಮಾಡುವ ಉಪಕ್ರಮವನ್ನು ತೆಗೆದುಕೊಳ್ಳಲೂಬಾರದು..
(ಅಧಿಕಾರವನ್ನು ಗಳಿಸಿಕೊಳ್ಳುವ, ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಸ್ವಾರ್ಥ ಸಾಧನೆಗಾಗಿ ಜನರಿಗೆ ತತ್ಕಾಲಕ್ಕೆ ಪ್ರಿಯವಾಗುವ ಸಂಗತಿಗಳ ಸುರೆಯನ್ನು ಕುಡಿಸಿ ಶಾಶ್ವತವಾಗಿ ಕೇಡುಂಟುಮಾಡುವವರು ಇಂದಿನ ಮಂತ್ರಿಗಳು..)
ಅಯೋಧ್ಯೆಯ ಮಂತ್ರಿಗಳು “ತಮ್ಮ ದೊರೆಗೆ, ದೇಶಕ್ಕೆ ಯಾವುದು ಪ್ರಿಯವಾದೀತು ? ಯಾವುದು ಹಿತವಾದೀತು ? ಯಾವುದು ಎರಡೂ ಆದೀತು..?” ಎಂಬುದನ್ನೇ ನಿತ್ಯವೂ ಚಿಂತಿಸುವವರಾಗಿದ್ದರು..
ಅದನ್ನು ಸಾಧಿಸುವುದರಲ್ಲಿಯೇ ಆನಂದವನ್ನು ಕಾಣುವವರಾಗಿದ್ದರು..

*ಸತತಂ ಪ್ರಿಯವಾದಿನಃ :
ಪ್ರಿಯವಾದ ಸಂಗತಿಯನ್ನು ಪ್ರಿಯವಾಗುವಂತೆ ಹೇಳಬಲ್ಲವರು ಸಾಮಾನ್ಯರು..
ಇಂಥವರಿಗೆ ದೇವರಿತ್ತ ‘ಮಾತು’ ಸಾಧನ..
ಪ್ರಿಯವನ್ನೂ ಅಪ್ರಿಯವಾಗುವಂತೆ ಹೇಳಿಬಿಡುವವರು ಅಧಮರು..
ಇಂಥವರಿಗೆ ದೇವರಿತ್ತ ‘ಮಾತು’ ಶಾಪ..!
ಅಪ್ರಿಯವನ್ನೂ ಪ್ರಿಯವಾಗುವಂತೆ ಹೇಳುವ ಕಲೆ ಎಲ್ಲೋ ಕೆಲವರಿಗೆ ಮಾತ್ರವೇ ಸಿದ್ಧಿಸುವಂಥದು..
ಇಂಥವರಿಗೆ ದೇವರಿತ್ತ ‘ಮಾತು’ ವರ..!
ತಮ್ಮ ಪ್ರಜೆಗಳನ್ನೂ, ಪ್ರಭುವನ್ನೂ ಬಹುವಾಗಿ ಪ್ರೀತಿಸುತ್ತಿದ್ದ ಅಷ್ಟಮಂತ್ರಿಗಳು ಎಲ್ಲಿಯೂ ಅವರಿಗೆ ನೋವಾಗದಂತೆ ಎಚ್ಚರ ವಹಿಸುತ್ತಿದ್ದರು..
ಅಪ್ರಿಯಸತ್ಯಗಳನ್ನೂ ಪ್ರಿಯವಾಗುವಂತೆ ಹೇಳುವ ಮೂಲಕ ವಾಙ್ಮಯತಪಸ್ಸನ್ನೇ ಆಚರಿಸುತ್ತಿದ್ದರು..

*ರಾಜಕೃತ್ಯೇಷು ನಿತ್ಯಶಃ ಅನುರಕ್ತಾಃ :
ಸರ್ವರೂ ಅವರವರ ‘ಕರ್ತವ್ಯ’ಗಳನ್ನು ‘ಕೃತ’ವಾಗಿಸಿದರೆ ಅದುವೇ ಅಲ್ಲವೇ ‘ಕೃತಯುಗ’..!?
ಮತ್ತೆಲ್ಲಿ ಜಗತ್ತಿನಲ್ಲಿ ಸಮಸ್ಯೆ-ಸಂಕಟಗಳಿರಲು ಸಾಧ್ಯ..?
ಆದರೆ ಹೆಚ್ಚಿನವರು ಮಾಡಬೇಕಾದುದೆಲ್ಲವನ್ನೂ ಮಾಡುವುದೇ ಇಲ್ಲ..
ಮಾಡುವವರೂ ಅನೇಕರು ‘ಪ್ರೀತಿ’ಯಿಂದ ಮಾಡುವುದಿಲ್ಲ, ಪರಿಣಾಮಗಳ ಭೀತಿಯಿಂದ ಮಾಡುತ್ತಾರೆ..
ಕರ್ತವ್ಯವನ್ನು ಪ್ರೀತಿಸುವವರು, ಆ ಪ್ರೀತಿಯನ್ನೇ ಕೃತಿಯಾಗಿಸುವವರು ಕೆಲವೇ ಕೆಲವರು..
ಅಯೋಧ್ಯೆಯ ಮಂತ್ರಿಗಳಲ್ಲಿ ಅದನ್ನು ಕಂಡ ಋಷಿ ಉದ್ಗರಿಸಿದ್ದು ..
‘ಅನುರಕ್ತಾಃ ರಾಜಕೃತ್ಯೇಷು ನಿತ್ಯಶಃ’

*ಪರಸ್ಪರಾನುರಕ್ತಾಃ :
ವ್ಯಕ್ತಿಗಳೇನಕವಾದಂತೆ ಮನಸ್ಸುಗಳೂ ಅನೇಕವಾಗುವುದು ‘ಪ್ರಕೃತಿ’
ವಿಷಯವೊಂದರ ಕುರಿತಾಗಿ ಉಂಟಾಗುವ ವಿರೋಧವು ವ್ಯಕ್ತಿವಿರೋಧದಲ್ಲಿ ವಿಶ್ರಾಂತವಾಗುವುದು ‘ವಿಕೃತಿ’
ಚರ್ಚೆಯಲ್ಲಿ ಹಲವಾಗುವ ಮನಗಳು ನಿರ್ಣಯದಲ್ಲಿ ಒಂದಾಗುವುದು ‘ ಸಂಸ್ಕೃತಿ’
ಈ ಸಂಸ್ಕೃತಿಯನ್ನು ಸಾಧ್ಯವಾಗಿಸುವುದು ‘ಪರಸ್ಪರಾನುರಕ್ತಿ’
ಅನನ್ಯವಾದ ಅನ್ಯೋನ್ಯ ಪ್ರೀತಿಯು ದಶರಥನ ಅಷ್ಟ ಮಂತ್ರಿಗಳ ಅಷ್ಟಮನಗಳನ್ನು ಏಕಬುದ್ಧಿಯಲ್ಲಿ ಸಮ್ಮಿಲಿತಗೊಳಿಸಿತು..
ರಾಜ್ಯಭಾರವನ್ನು ಸುಸೂತ್ರಗೊಳಿಸಿತು..

ಸಮಾನತೆಯು ಸಂಗಮಕ್ಕೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಸಂಘರ್ಷಕ್ಕೂ ಕಾರಣವಾಗುವುದುಂಟು..
ಬುದ್ಧಿವಂತರಲ್ಲಿ ಸ್ಪರ್ಧೆ..
ಬಲವಂತರಲ್ಲಿ ಹೋರಾಟ..
ರೂಪವಂತರಲ್ಲಿ ಅಸೂಯೆ..
ಒಂದು ಗುಂಪಿನಲ್ಲಿ (ಜಾತಿ-ಕುಟುಂಬ-ಊರು)ನಾಯಕರಿಬ್ಬರು ಹುಟ್ಟಿದರೆ ಅಲ್ಲಿ ಸಂಘರ್ಷ ಕಟ್ಟಿಟ್ಟ ಬುತ್ತಿ..
ಆದರೆ ಅಯೋಧ್ಯೆಯ ಮಂತ್ರಿಗಳು ಇದಕ್ಕೊಂದು ಅಪವಾದ..
ಅವರ ನಡುವೆ ಸ್ಪರ್ಧೆ- ಸಂಘರ್ಷಗಳೇರ್ಪಡಲಿಲ್ಲ..
ಬದಲಾಗಿ ಗಾಢವಾದ ಪರಸ್ಪರ ಪ್ರೀತಿಯೇರ್ಪಟ್ಟಿತು..
(ತುಂಡು ಮಾಂಸಕ್ಕಾಗಿ ಕಚ್ಚಾಡುವ ನಾಯಿಗಳಂತೆ ಕ್ಷುಲ್ಲಕ ಲಾಭಕ್ಕಾಗಿ ನಿತ್ಯ ಕಿತ್ತಾಡುವ ಇಂದಿನ “ತಥಾಕಥಿತ ಮಂತ್ರಿಗಳು” ಶ್ರೀ ರಾಮಾಯಣದ ಈ ಭಾಗವನ್ನು ಒಮ್ಮೆ ಅವಲೋಕಿಸಬೇಕು.)

* ಸೌಹೃದೇಷು ಪರೀಕ್ಷಿತಾಃ :
ಬಲವಿದ್ದಲ್ಲಿ ಕಲಹವಿರುತ್ತದೆ..
ಪ್ರೀತಿಯಿದ್ದಲ್ಲಿ ಪರೀಕ್ಷೆಯಿರುತ್ತದೆ..
ಅದರಲ್ಲಿಯೂ ರಾಜನಾದವನು ಪರೀಕ್ಷಿಸದೇ ಯಾರನ್ನೂ ಪ್ರೀತಿಸಬಾರದು ..
ಪ್ರೀತಿಸುವವರನ್ನೂ ಆಗಾಗ ಪರೀಕ್ಷಿಸದೇ ಇರಬಾರದು..
ಪರೀಕ್ಷೆಗಳಿಗೆ ಅಳುಕಬೇಕಾಗಿಲ್ಲ..
ಸಿದ್ಧತೆ ಸಮರ್ಪಕವಾಗಿದ್ದರೆ, ನಮ್ಮಲ್ಲಿ ಕೊರತೆಯಿಲ್ಲದಿದ್ದರೆ ಪರೀಕ್ಷೆಯೂ ಪದೋನ್ನತಿಯನ್ನೇ ತಂದುಕೊಡುತ್ತದೆ..
ತನ್ನ ಮಂತ್ರಿಗಳ ಸೌಹೃದವೆಂಥದೆಂಬುದು ಗೊತ್ತಿದ್ದರೂ ದಶರಥನು ರಾಜಧರ್ಮದಂತೆ ಅವರನ್ನು ಹಲವು ಬಾರಿ ಪರೀಕ್ಷಿಸಿದನು..
ಅವರೂ ಪ್ರತಿಯೊಂದು ಪರೀಕ್ಷೆಯಲ್ಲಿಯೂ ದೇಶ-ದೊರೆಗಳ ಹೃದಯದಲ್ಲಿ ಎತ್ತರೆತ್ತರ ಬೆಳೆದರು..

* ಸ್ಮಿತಪೂರ್ವಾಭಿಭಾಷಿಣಃ :
“ಮುಗುಳ್ನಗುವಿಲ್ಲದೆ ಮಾತಿಲ್ಲ”
ಬೀಜವು ಮೊಳಕೆಯೊಡೆದು ಮತ್ತೆ ಚಿಗುರುವಂತೆ..
ಅಂತರಾಳದ ಆನಂದ ಬೀಜವು ಮೊದಲು ಮುಗುಳ್ನಗೆಯ ಮೊಳಕೆಯೊಡೆದು, ಮತ್ತೆ ಮಾತಿನ ಚಿಗುರಾಗುವಂತಿದ್ದರೆ ಅದೆಷ್ಟು ಸೊಗಸು..!

ನಾವು ಹಿಮಾಲಯವನ್ನು ತಲುಪುವ ಮೊದಲೇ ಹಿಮಾಲಯದ ತಂಪು ನಮ್ಮನ್ನು ತಲುಪುವಂತೆ, ರಾಮಾವತಾರವಾಗುವ ಮುನ್ನವೇ ಅಯೋಧ್ಯೆಯಲ್ಲಿ “ಪ್ರೇಮಾವತಾರ”ವಾಗಿದ್ದಿತು..!

॥ಹರೇ ರಾಮ॥
ಆತ್ಮೀಯ ಈ ಕನಸು ಓದುಗರೇ...ಶ್ರೀ ಗುರುಗಳ ಅನುಗ್ರಹ ಆಶೀರ್ವಚನಗಳನ್ನು ಹರೇ ರಾಮ.ಇನ್ ಅಂತರ್ಜಾಲ ತಾಣದಲ್ಲೂ ನೋಡಬಹುದು. - ಸಂ.

ಮುಂದೆ ಓದಿ

ವಿಶೇಷ ವರದಿ

ಗೋಧೂಳಿಯ ಸಮಯವಾಗಿತ್ತು... ಇನ್ನೂ ಒಂದಷ್ಟು ಬೆಳಕಿತ್ತು...ಆದರೆ ಮನದಲ್ಲಿ ಅವ್ಯಕ್ತ ಭಯ... ಏನೋ ಗೊತ್ತಿಲ್ಲ... ಎದೆ ಸಣ್ಣಗೆ ಢವಢವಿಸುತ್ತಿತ್ತು... ಎಷ್ಟಾದರೂ ನಾವು ಮಾಡುತ್ತಿರುವುದು ಸರಿಯೇ...? ಎಂಬ ಸಣ್ಣದೊಂದು ಸಂದೇಹ ಮನದೊಳಗೆ ಮನೆ ಮಾಡಿತ್ತು... ಹಿಡಿದ ಕಾರ್ಯ ಕೊನೆತಲುಪಲೇ ಬೇಕೆಂಬ ಛಲ ಒಂದೆಡೆ...ಹೊಸತೊಂದರ ಶೋಧದ ತವಕ ಮತ್ತೊಂದೆಡೆ... ಯಾರೂ ಈ ತನಕ ಕಂಡರಿಯದ ಹೊಸ ಜಾಗದ ಅನ್ವೇಷಣೆಯ ಹುಮ್ಮಸ್ಸು... ಇವೆಲ್ಲವೂ ಸೇರಿ ಧೈರ್ಯಮಾಡಿ ಮುಂದುವರಿದೆವು... ಆದರೆ...ನಮ್ಮ ಸಾಹಸಕ್ಕೆ ಹಂತ ಹಂತಕ್ಕೂ ಎಡರು...ತೊಡರುಗಳು... ಆತಂಕ ಮನದೊಳಗೆ ಮನೆಮಾಡಿತ್ತು...ಏನಾಗುವುದೋ ಎಂಬ ಕುತೂಹಲ ನಮ್ಮನ್ನು ಬಿಡದೆ ಕಾಡುತ್ತಿದ್ದವು...ಆದರೂ ಮುಂದುವರಿದೆವು...




ನಿಮಗೂ ಕುತೂಹಲವಾಗಿರಬಹುದಲ್ಲವೇ...? ಏನಿದೆಂಬ ಸಂದೇಹವೇ...? ಸೂರ್ಯನ ಕೆಂಪುಕಿರಣಗಳು ದೂರದ ಬಾನಲ್ಲಿ ಕಾಣುತ್ತಿದ್ದವು...ಆದರೆ ಒಂದು ಚೂರೂ ಈ ಭಾಗದ ನೆಲದ ಮೇಲೆ ಬೀಳುವ ಪ್ರಯತ್ನವನ್ನು ಸಹ ಅವು ಮಾಡುತ್ತಿರಲಿಲ್ಲ. ಕಾರಣ ಅಷ್ಟೂ ದಟ್ಟವಾಗಿ ಬೆಳೆದ ಕಾನನ... ಕಾನನ ಗರ್ಭದೊಳು ನಮ್ಮ ಪ್ರವೇಶ...
ಕಾಲಿಡಲು ಭಯ...ಕುರುಚಲು ಪೊದೆಗಳು... ನೆಲವೇ ಕಾಣದಷ್ಟು ದಟ್ಟನೆ ಬೆಳೆದ ಕಾಡು ಬಳ್ಳಿಗಳು, ಹುಲ್ಲುಗಳು... ಒಂದಷ್ಟು ಮುಂದೆ ಸಾಗಿದಂತೆ ಸುರಳಿ ಸುರಳಿಯಾಗಿ ವಿವಿಧಾಕಾರಗಳಲ್ಲಿ ನೇತಾಡುತ್ತಿರುವ ದಪ್ಪನೆಯ ಬಳ್ಳಿಗಳು.. ಬಾನೆತ್ತರಕ್ಕೆ ಬೆಳೆದುನಿಂತ ವೈವಿಧ್ಯಮಯ ಸಸ್ಯ ಸಂಕುಲ... ವಿಕಾರವಾಗಿ ಚೀತ್ಕರಿಸುವ ಜೀರುಂಡೆಗಳ ಸದ್ದು... ನಮ್ಮ ಹೆಜ್ಜೆ ಸಪ್ಪಳಕ್ಕೆ...ಟ್ವಿಟ್...ರ್..ಟ್ವಿಟ್...ರ್ ಸದ್ದುಮಾಡುತ್ತಿದ್ದ ಅದ್ಯಾವುದೋ ಒಂದು ಪಕ್ಷಿ ಪ್ರುರ್...ರ್...ನೆ ಹಾರಿ ಹೋಯಿತು... ನಮ್ಮ ಕಾಲ ಹೆಜ್ಜೆಯ ಸದ್ದು ಹಾಗೇ ಸಾಗುತ್ತಿತ್ತು... ಅಷ್ಟರಲ್ಲೇ ಧುತ್ತನೆ ಹೆದರಾದ ಹಳದಿವರ್ಣದ ನಾಗರಾಜ...ಈಗಂತೂ ನಿಜಕ್ಕೂ ನಮ್ಮೆದೆಯ ಸದ್ದು ನಮಗೇ ಕೇಳತೊಡಗಿತು...

ಕಾರಣ ಇಷ್ಟೇ... ಋಷಿ ಮೂಲ ಹಾಗೂ ನದೀ ಮೂಲ ಹುಡುಕಬಾರದೆಂಬ ಹಿರಿಯರ ಮಾತು ಕ್ಷಣ ಕ್ಷಣಕ್ಕೆ ಮನದಲ್ಲಿ ಎಷ್ಟು ಬೇಡವೆಂದರೂ ಮತ್ತೆ ಮತ್ತೆ ಮರುಕಳಿಸುತ್ತಿದ್ದವು... ಹೌದು ನಾವು ನದೀ ಮೂಲವೊಂದರ ಶೋಧನೆಗೆ ತೆರಳಿದ್ದವು...!
ಅದು ಹತ್ತಾರು ವರುಷದ ಹಿಂದಿನ ಘಟನೆ... ಎಲ್ಲೋ ತೇಲಿ ಬಂದ " ನಂದಿನಿ ನದಿಯ ತಟದಲ್ಲಿ ... ಶ್ರೀ ಕ್ಷೇತ್ರ ಕಟೀಲಿನಲಿ..." ಎಂಬ ಹಾಡು ಅದ್ಯಾಕೋ ಅತ್ಯಂತ ಆಸಕ್ತಿ ಹುಟ್ಟಿಸಿತ್ತು. ಅಂದಿನಿಂದ ನಂದಿನಿ ನದೀ ಎಂಬ ಹೆಸರು ಮನದಲ್ಲಿ ಅಚ್ಚೊತ್ತಿತ್ತು. ಅದೇ ನಂದಿನಿ ನದಿಯ ಮೂಲ ಯಾವುದೆಂಬ ಕುತೂಹಲ ದಿನ ದಿನಕ್ಕೆ ಅಧಿಕವಾಗುತ್ತಾ ಸಾಗಿತು...ಅಂತೂ ಮೂಲ ಶೋಧಿಸುವ ಸುನಿಧ ಒದಗಿಯೇ ಬಿಟ್ಟಿತು.
ನಂದಿನಿ ನದಿಯ ಕುರಿತು ಕಟೀಲು ಕ್ಷೇತ್ರದಲ್ಲೊಂದು ಐತಿಹ್ಯವಿದೆ. ನಂದಿನಿ ಕಾಮಧೇನಿವಿನ ಮಗಳು. ಬರಗಾಲ ನಿವಾರಣೆಗಾಗಿ ಇಳೆಗೆ ಬರಲು ವಿನಂತಿಸಿದರೂ ಆಕೆ ಒಪ್ಪಲಿಲ್ಲ. ಅದಾಗ ಜಾಬಾಲಿ ಮುನಿಯ ಶಾಪದಿಂದ ಮಾಘಶುದ್ದೆ ಪೌರ್ಣಮಿಯಂದು ನಂದಿನಿ ನದಿಯಾಗಿ ಹರಿದಳು.


ಕನಕಾದ್ರಿಯಲ್ಲಿ ಹುಟ್ಟಿನ ಪಡುಗಡಲು ಸೇರುತ್ತಾಳೆ.ತನ್ಮೂಲಕ ಬರಗಾಲ ನಿವಾರಣೆಯಾಗುತ್ತದೆ. ಈ ನದಿಯ ಕಟಿ ಪ್ರದೇಶದಲ್ಲಿ ದುರ್ಗಾ ಮಾತೆ ಲಿಂಗರೂಪಿಣಿಯಾಗಿ ಆವಿರ್ಭವಿಸಿದ ಕಾರಣಕ್ಕೆ ಕಟೀಲು ಎಂಬ ಹೆಸರು ಬಂತು. ಮುಂದೆ ಈ ಕ್ಷೇತ್ರ ಕಾರಣೀಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆಯುತ್ತದೆ ಎಂಬುದು ಈ ಕಥೆಯ ಸಾರಾಂಶ.
ಈ ಕಥೆಯಲ್ಲಿದ್ದಂತೆ "ಕನಕಾದ್ರಿ" ಪ್ರದೇಶದ ಹುಡುಕಾಟಕ್ಕೆ ನಮ್ಮ ತಂಡ ಸಿದ್ಧಗೊಂಡಿತು. ಕನಕಾದ್ರಿ ಈಗಿನ ಮಿಜಾರು ಪ್ರದೇಶಕ್ಕೆ ಸನಿಹವಾದುದು ಎಂಬ ಅಂಶ ನಮ್ಮ ಗಮನಕ್ಕೆ ಬಂತು. ಮಿಜಾರು ಮೂಡಬಿದಿರೆಯಿಂದ ಸುಮಾರು ಎಂಟು ಕಿಲೋ ಮೀಟರ್ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಿಗುವ ಈ ಪ್ರದೇಶ ಮೂಡಬಿದಿರೆಯಿಂದ ಮಂಗಳೂರಿಗೆ ಸಾಗುವ ಹೆದ್ದಾರಿಯಲ್ಲಿ ಕಾಣಸಿಗುತ್ತದೆ. ಮಿಜಾರಿನಲ್ಲಿ ಕನಕಾದ್ರಿ ಎಂಬಸ್ಥಳವಿದೆಯೇ ಎಂಬ ನಮ್ಮ ತಂಡದ ಸಂದೇಹಕ್ಕೆ ಉತ್ತರ ನೀಡಿದವರು ಮಿಜಾರು ಗುತ್ತಿನ ಭಗವಾನ್ ದಾಸ್ ಶೆಟ್ಟಿ ಹಾಗೂ ಮುಂಡಬೆಟ್ಟು ಗುತ್ತಿನ ಸುಧಾಕರ ಪೂಂಜ. ಇವರೀರ್ವರು ನಮ್ಮ ತಂಡಕ್ಕೆ ಮಾರ್ಗದರ್ಶಕರಾಗಿ ಜೊತೆಯಾದರು.

ಅಲ್ಲಿಂದ ನಮ್ಮ ಪಯಣ ಆರಂಭ. ಮಿಜಾರಿನಿಂದ ಸರಿಸುಮಾರು ಎರಡು ಕಿಲೋಮೀಟರ್ಗಳಿಗೂ ಅಧಿಕ ಹಾದಿ ಕ್ರಮಿಸಿದೆವು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾನನ. ಎಲ್ಲಿನೋಡಿದರೂ ಮರಗಳು... ಅದರ ನಡುವೆ ನಮ್ಮ ಪಯಣ... ಹೆಜ್ಜೆ ಹೆಜ್ಜೆಗೂ ಆತಂಕದ ಸ್ಥಿತಿ... ತರಗೆಲೆಗಳ ಮಧ್ಯೆ ನಾಗಾರಾಜ ಎಲ್ಲಿ ಎದುರಾಗುತ್ತಾನೋ ಎಂಬ ಭಯ... ಒಂದೆರಡು ನಾಗರಾಜನ ಪ್ರತ್ಯಕ್ಷ ದರ್ಶನವಾದನಂತರವಂತೂ ಈ ಸಾಹಸ ಬೇಡವೇ ಬೇಡ ಎಂದು ಕಾಲಿಗೆ ಬುದ್ದಿಹೇಳುವ ಮನಸ್ಸೂ ಒಂದೆಡೆಯಾಗಿತ್ತು. ಆದರೂ ಛಲ ಬಿಡದೆ ಸಾಗಿದೆವು. ಮುಂದೆ ಸಾಗುತ್ತಿದ್ದಂತೆ ಅದೊಂದು ಕಡಿದಾದ ಪ್ರದೇಶ. ಅದರೊಳಗೊಂದು ಪುರಾತನ ನಾಗಬನ. ನಾಗಬದಲ್ಲಿ ನಾಗರ ಕಲ್ಲುಗಳಿವೆ. ಜೊತೆಗೆ ನೆಲತಾಗುವ ಬಿಳಲುಗಳು...ದಟ್ಟನೆಯ ಹಸಿರ ರಾಶಿ... ಕಣ್ಣಿಗೆ ಕಾಣುವ ನಿಜನಾಗ!...ಇವೆಲ್ಲವನ್ನೂ ನೋಡುತ್ತಾ ನೋಡುತ್ತಾ ಮುಂದೆ ಸಾಗಿದೆವು... ಅದಾಗಲೇ ಬೃಹದಾಕಾರದಲ್ಲಿ ನಿರುಮ್ಮಳ ನೀರು ವಿಸ್ತಾರವಾಗಿ ಹರಿವಿನಿಂತಂತ ಸರೋವರವೊಂದು ಕಾಣಸಿಕ್ಕಿತು. ನಮ್ಮ ಸಂತಸಕ್ಕೆ ಪಾರವೇ ಇಲ್ಲ... ಆದರೆ ಈ ನೀರಿನ ಮೂಲವೆಲ್ಲಿ ಎಂಬ ಕುತೂಹಲ...

ಅಲ್ಲಿಂದ ಎಡಭಾಗಕ್ಕೆ ಹೊರಳಿ ಬಾಗಿ ಕತ್ತಲಲ್ಲಿ ಹಾದಿ ಮಾಡುತ್ತಾ ನೀರ ಹಾದಿಯನ್ನೇ ಅನುಸರಿಸಿ ನೀರಿಗೆ ವಿರುದ್ಧವಾಗಿ ಸಾಗತೊಡಗಿದೆವು. ಹೆಜ್ಜೆ ಹೆಜ್ಜೆಗೆ ನೀರಲ್ಲಿ ನಾಗದರುಶನವಾಗುತ್ತಿತ್ತು. ಬಹು ಜಾಗರೋಕತೆಯಿಂದಲೇ ನಮ್ಮ ಪಯಣ ಮುಂದುವರಿಸಿದೆವು. ನೀರ ಹಾದಿ ಕಿರಿದಾಗತೊಡಗಿತು. ಅದೇನೋ ಅವ್ಯಕ್ತವಾದ ಅನುಭವ... ಕಾನನ ಗರ್ಭದೊಳು ಸಾಗುತ್ತಿದ್ದಂತೆಯೇ ಸಹಜವಾಗಿಯೇ ಅಳುಕು...ಜೊತೆಗೆ ತಣ್ಣನೆಯ ಅನುಭವ... ಬಂಡೆಗಳನ್ನೇರಿ, ತೊರೆಯ ಮೂಲವನ್ನು ಹುಡುಕುವ ಆಸಕ್ತಿಯಿಂದ ಮತ್ತಷ್ಟು ದೂರ ಸಾಗಿದೆವು... ಕಲ್ಲ ಬಂಡೆಗಳ ನಡುವಿನಿಂದ ನೀರಧಾರೆಯ ಸದ್ದು ಕೇಳಿಬರಲಾರಂಭಿಸಿತು...ಅಂತೂ ಮೂಲ ಶೋಧಿಸಿದೆವು ಎಂಬ ನಿಟ್ಟುಸಿರು ಬಿಡುತ್ತಿದ್ದಂತೆಯೇ ಮತ್ತೆ ನಿರಾಸೆ...ಇದು ಮೂಲ ಅಲ್ಲ ಎಂಬ ಸಂದೇಹ...ಮತ್ತೆ ಪ್ರಯಾಸದ ಪ್ರಯಾಣ...ಮತ್ತೂ ಮುಂದೆ ಸಾಗಿದೆವು...ಕತ್ತಲೆ ಪೂರ್ಣವಾಗಿತ್ತು... ಕೊನೆಗೂ ನಾವು ಗೆದ್ದುಬಿಟ್ಟೆವು.. ಅದೊಂದು ತುಸು ವಿಶಾಲ ಪ್ರದೇಶ... ನಾಲ್ಕಾರು ಉಂಡೆ ಕಲ್ಲುಗಳು...ಜೊತೆಗೆ ಒಂದಷ್ಟು ಭೀಕರ ಸ್ವರೂಪದ ಮರದ ಕಾಂಡ... ಅದರ ಮಧ್ಯೆ ಹನಿ ಹನಿಯಾಗಿ ಜಿನುಗುವ ನೀರು...ಅದೇ ನಂದಿನಿ ನದಿಯ ಮೂಲ!...ಕೊನೆಗೂ ನಂದಿನೀ ನದೀ ಮೂಲ ಶೋಧಿಸಿದ ಉಲ್ಲಾಸ ನಮ್ಮದು... ಅತ್ಯಪರೂಪದ ವೃಕ್ಷಸಂಕುಲದ ಮಧ್ಯೆ ನಂದಿನಿಯ ಉಗಮ... !




ಅಲ್ಲಿಂದ ತೊರೆಯಾಗಿ ಸಾಗುವ ನಂದಿನಿ ಮಿಜಾರಿಗೆ ಸಾಗಿ ತೋಡಿನ ರೂಪದಲ್ಲಿ ಮುಂದುವರಿಯುತ್ತಾಳೆ. ಅಲ್ಲಿಂದ ನೀಕರ್ೆರೆ, ಕಟೀಲು, ಎಕ್ಕಾರು , ಸೂರಿಂಜೆ , ಶಿಬರೂರು , ಪಾವಂಜೆ ಮೂಲಕ ಕೂಳೂರು ಪ್ರದೇಶದಲ್ಲಿ ಫಲ್ಗುಣೀ ನದೀಗೆ ಜೊತೆಯಾಗಿ ಪಡುವಣ ಕಡಲಿಗೆ ಸೇರುತ್ತಾಳೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಡಲು ಸೇರುವ ಏಕೈಕ ನದಿ ಈ ನಂದಿನಿ...
ಕನಕಗಿರಿಗೆ ಬಂಗಾರ ಗುಡ್ಡೆ ಎಂಬ ಹೆಸರು ಇದೆ. ಇಲ್ಲಿ ನಿಧಿ ಇರಬಹುದೆಂಬ ಊಹೆಯೂ ಇದೆ. ಬಂಗಾರದ ನಿಕ್ಷೇಪ ಈ ಭಾಗದಲ್ಲಿ ಇದೆ ಎಂಬುದು ಬ್ರಿಟಿಷ್ ಕಾಲದಲ್ಲಿ ದಾಖಲಾದ ಸಂಗತಿಯಾಗಿದೆ. ಇದಕ್ಕೆ ಪೂರಕ ದಾಖಲೆಗೂ ಲಭ್ಯವಿದೆ.


ಹರೀಶ್ ಕೆ.ಆದೂರು


ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮೂಲ್ಕಿ: ಮೂಲ್ಕಿ ಬಳಿಯ ಹಳೆಯಂಗಡಿ ಗ್ರಾಮ ಪಂಚಾಯತ್ನಿಂದ ಕಳೆದ ಮೂರು ವರ್ಷದ ಹಿಂದೆ ಸ್ವಚ್ಚಗ್ರಾಮ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸ್ಥಳೀಯ ರಾಮಚಂದ್ರ ಶೆಣೈ ಎಂಬವರ ದೂರಿನ ಹಿನ್ನಲೆಯಲ್ಲಿ ಗುರುವಾರ ಹಳೆಯಂಗಡಿ ಬಳಿಯ ಸಾಗ್ ಎಂಬಲ್ಲಿ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿ ಜಿ.ಗಣೇಶ್ ರಾವ್ ತನಿಖೆ ನಡೆಸಿದರು. ಸಾಗ್ ಬಳಿ ಬಹಳ ಹಿಂದೆ ನಿರ್ಮಿಸಿದ ಹಳೆ ರಸ್ತೆಯನ್ನು ಸ್ವಚ್ಚ ಗ್ರಾಮ ಯೋಜನೆಯಲ್ಲಿ ಅಳವಡಿಸಿ ಬಿಲ್ಲು ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಅಲ್ಲಿಗೆ ಭೇಟಿ ನೀಡಿ ಅಲ್ಲಿನ ಕಲ್ಲಿನ ಮಾದರಿ ಬೆಂಗಳೂರಿಗೆ ಪರಿಶೀಲನೆಗೆ ಕಳುಹಿಸಲು ಸಂಗ್ರಹಿಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ತಾ.ಪಂ. ಇಂಜಿನಿಯರ್ ಚಂದ್ರ ಶೇಖರ್ ಇಂದು ಆಗಮಿಸಿದ್ದು ಕಡತಗಳು ಕಾಣೆಯಾಗಿಲ್ಲ ಅವು ಸಬ್ ಡಿವಿಜನ್ ಕಛೇರಿಯಲ್ಲಿದೆ ಎಂದು ಸ್ವಷ್ಟಪಡಿಸಿದ್ದಾರೆ. ಗುರುವಾರ ಮಧ್ಯಾಹ್ನ ಪ್ರಾಥಮಿಕ ತನಿಖೆ ಮುಗಿಸಿದ ಅಧಿಕಾರಿಗಳು ವರದಿ ನೀಡುವುದಾಗಿ ತಿಳಿಸಿದ್ದಾರೆ.

ಸುದ್ದಿ: ಭಾಗ್ಯವಾನ್ ಸನಿಲ್

ಮುಂದೆ ಓದಿ

ವಿಶೇಷ ವರದಿ

ಸಿಹಿನಿದ್ದೆಯಲ್ಲಿದ್ದ ಮಂಗಳೂರ ಜನತೆಗೆ ಒಮ್ಮೆಲೇ ಸಿಡಿಲಬ್ಬರದ ಆಘಾತ... ನಿದ್ದೆಯಲ್ಲಿದ್ದವರೆಲ್ಲಾ ಕಣ್ಣುಹೊಸಕಿ ಕೊಂಡರು... ಹೌದು ಕನಸಲ್ಲ... ನಿಜ... ಆದರೆ... ಊಹಿಸಲೂ ಅಸಾಧ್ಯ ಘಟನೆಗೆ ಇದೇ ಮಂಗಳೂರು ಸಾಕ್ಷಿಯಾಗುವಂತಾಯಿತು.. 158ಮಂದಿಗೂ ಸಾವು ಒಂದೇ ಕ್ಷಣದಲ್ಲಿ ಬಂದೊರಗಿತ್ತು. ಅಷ್ಟೂ ಜನರ ಆಯಸ್ಸು ಅದೇ ಕ್ಷಣಕ್ಕೆ ಮುಗಿದಿತ್ತು... ಅದು ವಿಮಾನ ದುರಂತದ ಮೂಲಕ.
ಇಡೀ ದಕ್ಷಿಣ ಕನ್ನಡದ ಜನತೆಯಷ್ಟೇ ಅಲ್ಲ, ರಾಜ್ಯ, ದೇಶದ ಜನತೆ ಮರುಮ್ಮಲ ಮರುಗಿದರು. ಪುಟ್ಟ ಪುಟ್ಟ ಕಂದಮ್ಮಗಳು ಸೇರಿದಂತೆ ಹಲವು ಜಾತಿ,ಮತ,ಧರ್ಮ,ಭಾಷೆಯ ಜನತೆ ಒಂದೇ ವಿಮಾನದೊಳಗೆ ಸಿಲುಕಿ ಕ್ಷಣಾರ್ಧದಲ್ಲಿ ಕರಟಿಹೋದರು...ಜನತೆಯ ರೋಧನ ಮುಗಿಲು ಮುಟ್ಟಿತ್ತು...





ಈ ಘಟನೆ ನಡೆದು ಒಂಭತ್ತು ತಿಂಗಳುಗಳು ಉರುಳಿ ಹೋಗಿವೆ... ಹಲವಾರು ಮಂದಿ ಮೃತರ ಬಂಧುಗಳು ಪರಿಹಾರ ಕಾರ್ಯಕ್ಕಾಗಿ ಇಂದಿಗೂ ಹಂಬಲಿಸುತ್ತಿದ್ದಾರೆ... ಬಂದ ಪರಿಹಾರ ಹಣದ ವಿಷಯದಲ್ಲಿ ಕುಟುಂಬ ಕುಟುಂಬಗಳ ಮಧ್ಯೆ ದೊಡ್ಡ ಕೋಲಾಹಲಗಳು ನಡೆದಿವೆ...ಅದೆಲ್ಲವೂ ಇರಲಿ...


ಇನ್ನೇನು ಕೆಲಕ್ಷಣದಲ್ಲೇ ಮಂಗಳೂರು ...ಅಲ್ಲಲ್ಲ...ನಮ್ಮೂರು ತಲುಪುತ್ತಿದ್ದೇವೆ.ಕರ್ನಾಟಕದ ಪವಿತ್ರ ನೆಲದಲ್ಲಿ ನಾವು ಕಾಲೂರುತ್ತೇವೆ...ತನ್ನ ಮನೆಮಂದಿಯ ನೆನಪುಗಳು ಕಣ್ಣಮುಂದೆ ಹಾದು ಹೋಗುತ್ತಾ ಸೊಂಟದ ಬೆಲ್ಟ್ ಗಟ್ಟಿಮಾಡಿ ಊರಲ್ಲಿಳಿಯುವ ತವಕದಲ್ಲಿದ್ದ ಅಷ್ಟೂ ಮಂದಿಯನ್ನು ಸಾವು ತನ್ನ ತೆಕ್ಕೆಗೆ ತೆಗೆದುಕೊಂಡದ್ದು ವಿಪರ್ಯಾಸವೇ ಸರಿ.
ಆದರೆ ವಿಧಿಯ ಚಿತ್ತ ಹೇಗೆ ನೋಡಿ...ಅಂದು ನೂರ ಐವತ್ತೆಂಟು ಮಂದಿಯ ಸಾವು ಇಲ್ಲೇ ಆಗಲಿ ಎಂಬುದು ವಿಧಿ ಲೀಲೆ... ಆದರೆ ಅದೇ ಜಾಗ ಇಂದು ಪ್ರವಾಸಿಗಳ ವೀಕ್ಷಣಾ ತಾಣ!...ಇದೇ ನೋಡಿ ವೈಚಿತ್ರ!


ಹೌದು...ರಾಶಿ ರಾಶಿ ಜನ ಈ ಮಾರಣಹೋಮ ನಡೆದ ಬೆತ್ತಲೆ ಭೂಮಿಯನ್ನು ನೋಡಿ "...ಛೇ..." ಎಂದಾಡಿಕೊಳ್ಳುತ್ತಿದ್ದಾರೆ... ಅಂದು ನೋಡಬೇಕಾಗಿತ್ತು ಎಂಬವರೂ ಇದ್ದಾರೆ... ಎಂತಹ ದರಿದ್ರ ಕಲ್ಲು ಎಂದು ಅಲ್ಲಿದ್ದ ದೊಡ್ಡ ಕಲ್ಲೊಂದಕ್ಕೆ ಹಿಡಿಶಾಪ ಹಾಕಿ ಸಾಗುವ ಮಂದಿಯೂ ಅಲ್ಲಿದ್ದಾರೆ. ಇನ್ನೇನಾದರೂ ನಮಗೆ ಸಿಗಬಹುದೇ ಎಂದು ವಿಮಾನ ದುರಂತವಾದ ಸ್ಥಳದತ್ತ ಹೋಗಿ ಸೂಕ್ಷ್ಮವಾಗಿ ನೋಡುವ ಮಂದಿಯೂ ಇದ್ದಾರೆ...ಒಟ್ಟಿನಲ್ಲಿ ದಿನನಿತ್ಯ ಜನಾಕರ್ಷಣೆಯ ತಾಣವಾಗುತ್ತಿದೆ ಈ ಕೆಂಜಾರು...
ವಿಮಾನ ನಿಲ್ದಾಣದ ಪಾಶ್ರ್ವದಲ್ಲಿರುವ ಕಡಿದಾದ ಕಾಡು ಪ್ರದೇಶ. ಟೇಕಾಫ್ ಆಗುವ ವಿಮಾನಗಳು ಇದೇ ಪ್ರದೇಶದ ಮೇಲ್ಭಾಗದಲ್ಲೇ ಹಾರಿಹೋಗುತ್ತವೆ. ಅಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೂಡಾ ಇದೇ ಪ್ರದೇಶದಲ್ಲಿ ಬಿದ್ದು ಅಷ್ಟೂ ಜನರ ಸಾವಿಗೆ ಕಾರಣವಾಗಿತ್ತು. ವಿಮಾನ ಬಿದ್ದ ಸ್ಥಳದಲ್ಲಿ ಈಚಲು ಮರಗಳು ಕಾಡು ಮರಗಳಿದ್ದವು. ಕಾಯರ್ಾಚರಣೆಗೋಸ್ಕರ ಅಲ್ಲಿ ಹಾದಿಮಾಡಲಾಗಿತ್ತು... ಈಗ ಅದೊಂದು ವಿಷಾಧನೀಯ ಸ್ಥಳವಾಗಿ ಗೋಚರವಾಗುತ್ತಿದೆ.


ಸರ್ಬಿಯಾದ ಕ್ಯಾಪ್ಟನ್ ಜಟ್ಕೋ ಗ್ಲೂಸಿಕ್ ಈ ದುರಂತಕ್ಕೀಡಾದ ವಿಮಾನದ ಮುಖ್ಯ ಪೈಲೆಟ್ ಆಗಿದ್ದರು. ಎಚ್.ಎಸ್.ಅಹ್ಲುವಾಲಿಯಾ ಸಹ ಪೈಲೆಟ್ ಆಗಿ ಕಾರ್ಯ ನಿರ್ವಹಿಸಿದ್ದರು. ವಿಮಾನದಲ್ಲಿದ್ದ ಸಿ.ವಿ.ಆರ್ ನಲ್ಲಿ ದಾಖಲಾದ ಅಂಶದಂತೆ ಕಟ್ಟ ಕಡೆಯ 2.05 ನಿಮಿಷಗಳಲ್ಲಿ ಸಿಕ್ಕಿದ ದಾಖಲೆಯಂತೆ ಸಹ ಪೈಲೆಟ್ ವಿಮಾನವನ್ನು ಇನ್ನೊಂದು ಸುತ್ತು ಹಾರಾಟ ನಡೆಸುವಂತೆ ಕೋರಿದ್ದರು. ಆದರೆ ಪೈಲೆಟ್ ಆ ಮಾತಿಗೆ ಕಿವಿಗೊಡಲಿಲ್ಲ. ನಮಗೆ ರನ್ ವೇ ಮುಗಿದಿದೆ ಎಂಬ ಧ್ವನಿ ಹಾಗೂ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸ್ಫೋಟದ ಧ್ವನಿಯೂ ಸಿ.ವಿ.ಆರ್ ನಲ್ಲಿ ದಾಖಲಾಗಿದ್ದವು. ಇವೆಲ್ಲವೂ ಇಲ್ಲಿ ನಡೆದಿದೆ ಎಂಬುದಕ್ಕೆ ಸ್ಪಷ್ಟ ದಾಖಲೆಯಾಗಿ ನೂರಾರು ಜನ ಸುಟ್ಟುಕರಕಲಾದ ಭೂಮಿ ವಿಕಾರವಾಗಿ ಇಂದು ಗೋಚರವಾಗುತ್ತಿದೆ.


ದುರಂತದಲ್ಲಿ ಮಡಿದವರ ಸ್ಮರಣಾರ್ಥ ಕಪ್ಪುಶಿಲೆಯಲ್ಲಿ ಅಷ್ಟೂ ಜನರ ಹೆಸರು ಕೆತ್ತಿ ಸ್ಟೀಲಿನ ಚೌಕಟ್ಟು ನಿರ್ಮಿಸಿ ದುರಂತ ನಡೆದ ಸ್ಥಳಕ್ಕಿಂತ ಕೊಂಚ ಮೇಲ್ಭಾಗದಲ್ಲಿ ರಸ್ತೆಯಂಚಿನಲ್ಲಿ ಸ್ಮಾರಕನಿರ್ಮಿಸಲಾಗಿತ್ತು. ಆದರೆ ಕಿಡಿಗೇಡಿಗಳು ಅವೆಲ್ಲವನ್ನೂ ಪುಡಿಗಟ್ಟಿದ್ದಾರೆ. ಇದಾಗಿ ಮೂರು ತಿಂಗಳು ಸಂದರೂ ಕಿಡಿಗೇಡಿಗಳನ್ನು ಹುಡುಕುವ ಕಾರ್ಯ ನಡೆದಿಲ್ಲ. ಸ್ಮಾರಕವನ್ನು ಪುನರ್ ನಿರ್ಮಾಣಮಾಡಿಲ್ಲ. ಮಡಿದವರ ಹೆಸರುಗಳನ್ನೊಳಗೊಂಡ ಮಾರ್ಬಲ್ ತುಂಡುಗಳು ರಸ್ತೆಯಂಚಿನಲ್ಲಿ ಬೋರಲಾಗಿ ಬಿದ್ದಿವೆ...ಕೆಳಭಾಗದಲ್ಲಿ ಬೃಹತ್ ವಿಮಾನದಲ್ಲಿ ಬಂದ ದುರದೃಷ್ಟರ ಚಪ್ಪಲಿ, ಬಟ್ಟೆಬರೆಗಳು, ಸೂಟ್ ಕೇಸ್ , ಬ್ಯಾಗ್ಗಳ ಅವಶೇಷಗಳು ಅಲ್ಲಲ್ಲಿ ಚದುರಿ ಬಿದ್ದಂತೆ...!
ಈ ಭಾಗದಲ್ಲಿ ಇಂದಿಗೂ ರಾತ್ರಿವೇಳೆಯಲ್ಲಿ ಯಾರೊಬ್ಬರೂ ಸಂಚರಿಸುತ್ತಿಲ್ಲ!...

- ಆದೂರು

ಮುಂದೆ ಓದಿ

ವಿಶೇಷ ವರದಿ

ಮುಂದೆ ಓದಿ
10:05 PM

ಈ ಕನಸು...

Posted by ekanasu

( ಈ ಕನಸು.ಕಾಂ. ಬಗ್ಗೆ ಖಾನ್ ತಮ್ಮ ಮನದಾಳದ ಮಾತುಗಳನ್ನು ಕವನದ ರೂಪದಲ್ಲಿ ಬರೆದಿದ್ದಾರೆ. ಅಭಿಮಾನಕ್ಕೆ ವಂದನೆಗಳು - ಟೀಂ ಈ ಕನಸು.)

ಮುಂದೆ ಓದಿ
9:49 PM

ಮಗುವಿನ ಬೇಡಿಕೆ...

Posted by ekanasu

ಸಾಹಿತ್ಯ







ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು : ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8ರಿಂದ 12ಗಂಟೆಯವರೆಗೆ, ಸಂಜೆ 4ರಿಂದ 8 ಗಂಟೆಯವರೆಗೆ ತೆರೆದಿರಬೇಕು. ಅಂಗಡಿಗಳಲ್ಲಿರುವ ಪದಾರ್ಥಗಳು ಮತ್ತು ಬೆಲೆ ಬಗ್ಗೆ ಸವಿವರ ಬೋರ್ಡ್ ಹಾಕಿರಬೇಕು; ತೂಕದಲ್ಲಿ ವ್ಯತ್ಯಾಸವಿದೆ ಎಂಬ ಆರೋಪಗಳು ಬರಬಾರದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ಸಮನ್ವಯ ಸಮಿತಿ ಪ್ರಗತಿ ಪರಿಶೀಲನೆ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಡಿತರ ವಿತರಣೆ ವ್ಯವಸ್ಥೆ ಯಲ್ಲಿ ಸಾರ್ವಜನಿ ಕರಿಂದ ಯಾವುದೇ ದೂರುಗಳು ಬರ ಬಾರದು ಎಂದು ಹೇಳಿದ ಅವರು, ಎರಡು ತಿಂಗಳಿಗೊಮ್ಮೆ ನಡೆಯುವ ನ್ಯಾಯಬೆಲೆ ಜಾಗೃತಿ ಸಮಿತಿಯ ವರದಿಯನ್ನು ಸಲ್ಲಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಪಡಿತರ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿರಿಸಲು ಹೆಚ್ಚಿನ ಜಾಗೂರಕತೆ ವಹಿಸಬೇಕೆಂದರು.




ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಖಾನೆ ಮತ್ತು ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರು ಮಾತನಾಡಿ, ಗೇರುಬೀಜ ಸಂಸ್ಕರಣಾ ಘಟಕಗಳಿಗೆ ಸಂಬಂಧಿತ ಇಲಾಖೆಗಳು ಸಹಾಯಧನ ನೀಡುವಾಗ ಬಾಯ್ಲರ್ ಗಳು ಉತ್ತಮ ಗುಣಮಟ್ಟದ್ದ (ಸ್ಟ್ಯಾಂಡರ್ಡ್) ನ್ನೇ ಖರೀದಿಸಬೇಕೆಂಬ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಅವಘಡ ಗಳು ಸಂಭವಿಸಿದರೆ ಹೆಚ್ಚಿನ ಅನಾಹುತ ಸಂಭವಿಸಬಹುದೆಂಬುದನ್ನು ಸಭೆಯ ಗಮನಕ್ಕೆ ತಂದರು.
ಕಾರ್ಮಿಕ ಇಲಾಖೆಯವರು ಸ್ಥಳ ಸಂದರ್ಶನದ ವೇಳೆ ಅಕ್ರಮಗಳು ಪತ್ತೆಯಾದರೆ ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಲ್ಲ ಎಂದು ನಿರ್ಲಕ್ಷ್ಯ ವಹಿಸದೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕೆಂದು ಸಭೆಗೆ ಸೂಚಿಸಿದರು. ಅಕ್ರಮ ಗಣಿಗಾರಿಕೆ, ಜೀತ, ಬಾಲ ಕಾರ್ಮಿಕ ಆಚರಣೆಗಳು ಪತ್ತೆಯಾದರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕೆಂದರು.ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಲೋಕೋ ಪಯೋಗಿ ಇಲಾಖೆ, ತೋಟ ಗಾರಿಕೆ ಇಲಾಖೆ ಗಳಲ್ಲಿ ಸಮನ್ವ ಯದ ಕೊರತೆ ಯಿಂದ ಸಂಭ ವಿಸಿದ ಲೋಪ ಗಳನ್ನು ಸರಿ ಪಡಿಸಿ ಕೊಳ್ಳು ವಂತೆ ಸಭೆ ಯಲ್ಲಿ ಉಪ ಸ್ಥಿತ ರಿದ್ದ ಅಧಿಕಾ ರಿಗ ಳಿಗೆ ಸೂಚಿ ಸಿದರು. ಹಲವು ಇಲಾಖೆಗಳಿಗೆ ಕಟ್ಟಡಕ್ಕೆ ಜಮೀನಿಲ್ಲ ಎಂಬ ಬೇಡಿಕೆಯು ಸಭೆಯಲ್ಲಿ ಮಂಡನೆಯಾಯಿತು. ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ವಿಳಂಬಿಸಬಹುದಾದ ಯೋಜನೆಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಕೈಗೆತ್ತಿಕೊಂಡ ಕಾಮಗಾರಿ ವಿಳಂಬಕ್ಕೆ ಕಾರಣ ಹಾಗೂ ಪರ್ಯಾಯಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ಹೋಮ್ ಗಾರ್ಡ್ ಸಿಬ್ಬಂದಿಗೆ ಐದಾರು ತಿಂಗಳಿಂದ ಸಂಬಳ ನೀಡದಿರುವ ಬಗ್ಗೆ ಹೋಮ್ ಗಾರ್ಡ್ ಕಮಾಂಡೆಂಟ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಗರದಲ್ಲಿ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ, ಜಿಲ್ಲಾ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವಿಸ್ತೃತ ವರದಿ ಸಲ್ಲಿಸಿದರು. ಗಣಿ ಮತ್ತು ವಿಜ್ಞಾನ ಇಲಾಖೆಯವರು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲು ಕಾಯದೇ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೂಡಬಿದರೆ ಬೈಪಾಸ್ ರಸ್ತೆ ಕಾಮಗಾರಿ ಅಭಿವೃದ್ಧಿಯ ಬಗ್ಗೆ ತಕ್ಷಣವೇ ವರದಿ ಸಲ್ಲಿಸಲು ಸೂಚಿಸಿದರು. ಸಭೆಯಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಹಾಜರಾಗದ ಇಲಾಖೆಯ ಅಭಿವೃದ್ಧಿಯಲ್ಲಿ ಕೊರತೆಯಾದರೆ ಅದಕ್ಕೇ ಆಯಾ ಇಲಾಖೆಗಳ ಅಧಿಕಾರಿಗಳೇ ಸಂಪೂರ್ಣ ಹೊಣೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ಮುತ್ತೂರಾಯ, ಸಿಇಒ ಪಿ.ಶಿವಶಂಕರ್ ಉಪಸ್ಥಿತರಿದ್ದರು.

ಮುಂದೆ ಓದಿ
| | |Home