ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮುಲ್ಕಿ: ಜನವರಿ 10ರಂದು ಹಿರಿಯ ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ದೇವು ಹನೆಹಳ್ಳಿ ಇವರು ಬರೆದಿರುವ 'ಪ್ರಣವ ರೂಪದ ಭಾವಶುದ್ಧಿ' ಪುಸ್ತಕವನ್ನು ಮುರಳಿ ಕಡೆಕಾರ್ ಹಾಗೂ ಯಶುಪ್ರಿಯ ಕೃಷ್ಣದಾಸ್, ಪಕ್ಷಿಕೆರೆ ಇವರ ಕವನ ಸಂಕಲನ ಶರಸಂಚಯವನ್ನು ಹರಿನಾರಾಯಣ ಮಾಡವು ಇವರು ಕಿನ್ನಿಗೋಳಿಯಲ್ಲಿ ಬಿಡುಗಡೆಮಾಡಲಿರುವರು.
ಮಂಗಳೂರು ಗಂಗೋತ್ರಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ಎಲ್.ಧರ್ಮ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ವಿ.ರಮೇಶ ಇವರ ನಿರ್ದೇಶನದಲ್ಲಿ ಕಾಸರಗೋಡು ಗೋಪಾಲ ಯಕ್ಷಗಾನ ಬೊಂಬೆಯಾಟ ಸಂಘದವರಿಂದ 'ನರಕಾಸುರ ವಧೆ' ಯಕ್ಷಗಾನ ಬೊಂಬೆಯಾಟ ನಡೆಯಲಿದೆ ಎಂದು ಅನಂತ ಪ್ರಕಾಶದ ಪ್ರಕಟನೆ ತಿಳಿಸಿದೆ.

0 comments:

Post a Comment