ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಕಾಯಿದೆ 2007 ರ ಪ್ರಕಾರ ಇನ್ನು ನೋಂದಣಿಗೆ ಮುಂದಾಗದ 26 ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಶೀಘ್ರ ಮುಚ್ಚುವಂತೆ ಆದೇಶ ನೀಡಬೇಕೆಂದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪರಿಶೀಲನಾ ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣಕನ್ನಡ ಜಿಲಾಧಿಕಾರಿ ಸುಬೋಧ್ ಯಾದವ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಓ.ರಂಗಪ್ಪ ಅವರಿಗೆ ಸೂಚಿಸಿದ್ದಾರೆ.ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
2010 ರ ಅಕ್ಟೋಬರ್ 24,ಖಾಸಗಿ ವೈದ್ಯಕೀಯ ಸಂಸ್ಥೆಗಳು ನೊಂದಾಯಿಸಿಕೊಳ್ಳಲು ಅಂತಿಮ ದಿನವಾಗಿತ್ತು. ಆದರೆ ಜಿಲ್ಲೆಯಲ್ಲಿ ಇನ್ನೂ 26 ಖಾಸಗಿ ವೈದ್ಯಕೀಯ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಿರುವುದಿಲ್ಲವೆಂಬುದು ಪರಿಶೀಲನೆಯಿಂದ ಕಂಡು ಬಂದಿದೆ. ಇದರಲ್ಲಿ ಮಂಗಳೂರು ತಾಲೂಕಿನಲ್ಲಿ 02,ಬಂಟ್ವಾಳದಲ್ಲಿ 14, ಪುತ್ತೂರು ತಾಲ್ಲೂಕಿನಲ್ಲಿ 9ಹಾಗೂ ಸುಳ್ಯ ತಾಲ್ಲೂಕಿನಲ್ಲಿ 1 ಸಂಸ್ಥೆಗಳು ಸೇರಿವೆ.
ನೋಂದಣಿಗೆ ನೀಡಲಾಗಿದ್ದ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ್ದ ಕೆಲವು ನ್ಯೂನತೆಗಳನ್ನು ಹೊಂದಿರುವ ಮಂಗಳೂರು ತಾಲ್ಲೂಕಿನ 123, ಬಂಟ್ವಾಳ ತಾಲ್ಲೂಕಿನ 15, ಪುತ್ತೂರು ತಾಲ್ಲೂಕಿನ 6 ,ಸುಳ್ಯ ತಾಲ್ಲೂಕಿನ 17 ಹಾಗೂ ಬೆಳ್ತಂಗಡಿ ತಾಲ್ಲೂಕಿನ 25 ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
22010ರ ಅಕ್ಟೋಬರ್ 24, ರ ನಂತರ ಅರ್ಜಿ ಸಲ್ಲಿಸುವ /ಸಲ್ಲಿಸಿರುವ ಯಾವುದೇ ಹಳೇ ಸಂಸ್ಥೆಗಳನ್ನು ಪುರಸ್ಕರಿಸದೆ ತಿರಸ್ಕರಿಸಬೇಕೆಂದು ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

0 comments:

Post a Comment