ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಸಂಸ್ಕೃತಿ ಮತ್ತು ಮೌಲ್ಯಗಳ ಶಿಕ್ಷಣಕ್ಕಾಗಿ ನಾಟಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಸುಳ್ಯದಲ್ಲಿ ನಡೆದ ಜಿಲ್ಲಾಮಟ್ಟದ ಮಕ್ಕಳ ನಾಟಕೋತ್ಸವವು ರುಜುಪಡಿಸಿತು.
ವಿವಿಧ ಪ್ರೌಢಶಾಲೆಗಳ ನಾಟಕ ತಂಡಗಳು ಪ್ರಸ್ತುತ ಪಡಿಸಿದ ನಾಟಕಗಳು ವಸ್ತು ವೈವಿಧ್ಯದಲ್ಲಿಯೂ ಪ್ರತಿಭಾ ಪ್ರದರ್ಶನದಲ್ಲಿಯೂ ವೈಶಿಷ್ಟ್ಯ ಪೂರ್ಣವಾಗಿದ್ದುವು. ನಾಟಕಗಳ ಸ್ಪರ್ಧೆಯಾದರೂ ಇದಕ್ಕೆ ನಾಟಕೋತ್ಸವದ ಆಯಾಮವನ್ನು ನೀಡಿ ಸಂಘಟಿಸಿದ ಸ್ನೇಹಶಿಕ್ಷಣ ಸಂಸ್ಥೆಯ ಪ್ರಯತ್ನ ಸಾರ್ಥಕವೆನಿಸಿತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲವು ಪ್ರಾಯೋಜಿಸಿದ ಈ ನಾಟಕೋತ್ಸವದಲ್ಲಿ ಮೂರು ಅತ್ಯುತ್ತಮ ನಾಟಕಗಳು, ಮೂರು ಉತ್ತಮ ನಾಟಕಗಳು ಹಾಗೂ ಇನ್ನೂ ಮೂರು ಸಮಾಧಾನಕರ ನಾಟಕಗಳೆಂಬುದಾಗಿ ಬಹುಮಾನಿತವಾದವು. ಅತ್ಯುತ್ತಮ ನಾಟಕಗಳಿಗೆ ತಲಾ ರೂಪಾ 1000 , ಉತ್ತಮ ನಾಟಕಗಳಿಗೆ ತಲಾ ರೂಪಾ750 ಹಾಗೂ ಸಮಾಧಾನಕರ ನಾಟಕಗಳಿಗೆ ರೂ 500 ರಂತೆ ಬಹುಮಾನಗಳನ್ನು ವಿತರಿಸಲಾಯಿತು. ಆತಿಥೇಯ ಸ್ನೇಹ ಶಿಕ್ಷಣ ಸಂಸ್ಥೆಯ ನಾಟಕ ತಂಡವು ಕೊನೆಯಲ್ಲಿ ರಾಮಾಯಣದಲ್ಲೊಂದು ಉಪ್ಪಿನಕಾಯಿ ಪ್ರಕರಣವೆಂಬ ನಾಟಕವನ್ನು ಪ್ರದರ್ಶಿಸಿತು.ಸುಳ್ಯದ ರಂಗ ಕರ್ಮಿ ಜೀವನರಾಂ ಇವರು ಉದ್ಘಾಟಿಸಿದ ಈ ನಾಟಕೋತ್ಸವದ ಸಮಾರೋಪ ಭಾಷಣವನ್ನು ಪುತ್ತೂರಿನ ನಿರತ ನಿರಂತರ ನಿರ್ದೇಶಕ ಐ.ಕೆ. ಬೊಳುವಾರು ಮಾಡಿದರು. ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಮಲ್ಲೇಸ್ವಾಮಿ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿದ್ದ ನಾಟಕ ಅಕಾಡೆಮಿ ಸದಸ್ಯ ಡಾ. ಎಚ್.ಎಂ. ಕುಮಾರಸ್ವಾಮಿ, ಪುತ್ತೂರಿನ ರಂಗಕರ್ಮಿ ಆರ್. ಕೆ. ಜೋಷಿ ನಿರ್ಣಾಯಕರಾಗಿದ್ದರು.
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿದರು. ಶಿಕ್ಷಕಿ ಲತಾಶ್ರೀ ಅಂಬೆಕಲ್ಲು ಇವರು ನಿರೂಪಿಸಿದರು. ಶಿಕ್ಷಕರಾದ ಪ್ರಸನ್ನ ಐವರ್ನಾಡು ಸಂಯೋಜಕರಾಗಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ದಾಮ್ಲೆ ವಂದಿಸಿದರು.

0 comments:

Post a Comment