ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮುಲ್ಕಿ: ಕಳೆದ 15 ವರ್ಷಗಳಿಂದ ಕಿನ್ನಿಗೋಳಿಯ 'ಅನಂತ ಪ್ರಕಾಶ' ಸಂಸ್ಥೆಯು ನೀಡುತ್ತಾ ಬಂದಿರುವ ಈ ವರ್ಷದ ಅನಂತ ಪ್ರಕಾಶ ಪುರಸ್ಕಾರವನ್ನು ಪ್ರಬುದ್ಧ ಸಾಹಿತಿಯಾಗಿ, ಸಂಘಟಕರಾಗಿ, ಸಾಮಾಜಿಕವಾಗಿ, ಶಿಕ್ಷಣ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ ಡಾ| ವಸಂತ ಕುಷ್ಟಗಿಯವರಿಗೆ ಮಣಿಪಾಲದ ಡಾ| ಭಾಸ್ಕರಾನಂದ ಕುಮಾರ ಅವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 10ರಂದು ಕಿನ್ನಿಗೋಳಿಯಲ್ಲಿ ಹಿರಿಯ ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುವುದು. ವಸಂತ ಕುಷ್ಟಗಿಯವರ ಕುರಿತಾದ ಪರಿಚಯ ಪುಸ್ತಕ 'ವಸಂತ'ವನ್ನು ಬಿಡುಗಡೆಮಾಡಲಾಗುವುದು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರನ್ನು ಹಾಗೂ ಹಿರಿಯ ಕಲಾವಿದರಾದ ದುರ್ಗಾಪಾಣ ವಾಲ್ತೂರು ಇವರನ್ನು ಸಂಮಾನಿಸಲಾಗುವುದು ಎಂದು ಅನಂತ ಪ್ರಕಾಶದ ಕೆ. ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.

0 comments:

Post a Comment