ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಜ.11 ರಿಂದ 16
ಮಿಜಾರಿನಲ್ಲಿ ಆಳ್ವಾಸ್ ವಿರಾಸತ್ - 2011


ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ - 2011 ಇದೇ ಜ.11ರಿಂದ 16ರ ತನಕ ಮಿಜಾರಿನ ಶೋಭಾವನದಲ್ಲಿ ನಡೆಯಲಿದ್ದು ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಪದ್ಮಭೂಷಣ ಡಾ. ಕೆ.ಜೆ ಯೇಸುದಾಸ್ ಅವರಿಗೆ "ಆಳ್ವಾಸ್ ವಿರಾಸತ್ - 2011 " ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಜ.11ರಂದು ಸಂಜೆ 6ಗಂಟೆಗೆ ಖ್ಯಾತ ಸಿನೆಮಾ ನಿರ್ದೇಶಕ ನಾಗತೀ ಹಳ್ಳಿ ಚಂದ್ರಶೇಖರ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿ.ವಿ. ಉಪಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ , ಡಾ.ಪಿ.ದಯಾನಂದ ಪೈ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್,ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ದಿನವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲಾ ದಿನಗಳಲ್ಲೂ ದಿನಕ್ಕೆರಡು ಕಲಾ ಪ್ರಕಾರಗಳ ಕಲಾ ಪ್ರದರ್ಶನ ನಡೆಯಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗೆ ವಿಶೇಷ ಅವಕಾಶ ನೀಡುತ್ತಾಬಂದಿದ್ದು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಸ್ಥಳೀಯ ಜನತೆಗೆ ಪರಿಚಯಿಸುವ ಮಹೋನ್ನತ ಕಾರ್ಯವನ್ನು ಕಳೆದ ಹಲವು ವರುಷಗಳಿಂದ ನಿರಂತರವಾಗಿ ನಡೆಸುತ್ತಾ ಬಂದಿದೆ. ಯುವಜನತೆಯನ್ನು ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸುವಂತೆ ಮಾಡಬೇಕೆಂಬ ಸದುದ್ದೇಶದಿಂದ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿಗಳಂತಹ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ.

ಈ ಬಾರಿಯ ಕಲಾ ಪ್ರಕಾರಗಳು

ವಿರಾಸತ್ನ ಮೊದಲ ದಿನ ಸಂಜೆ 7.30ರಿಂದ 8.45 ರ ತನಕ ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪೆನಿಯ ನಿರುಪಮಾ ರಾಜೇಂದ್ರ ಬಳಗದ " ರಾಮ ಕಥಾ ವಿಸ್ಮಯ "ಅಭೂತಪೂರ್ವ ದೃಶ್ಯ ರೂಪಕ ನಡೆಯಲಿದೆ. ಪ್ರಸಿದ್ಧ ಕಥಕ್ ನೃತ್ಯ ಜೋಡಿಗಳಾದ ನಿರುಪಮಾ ರಾಜೇಂದ್ರ ಹಾಗೂ 50ಮಂದಿ ಕಲಾವಿದರ ಬಳಗ ಈ ಕಾರ್ಯಕ್ರಮ ನಡೆಸಿಕೊಡಲಿದೆ.

ಜ.12ರಂದು ಸಂಜೆ 6ರಿಂದ 8ರ ತನಕ ಅಪೂರ್ವ ಸರೋದ್ ತಿಗಲ್ ಬಂದಿ ನಡೆಯಲಿದೆ. ಪದ್ಮವಿಭೂಷಣ ಉಸ್ತಾದ್ ಅಮ್ ಜದ್ ಆಲಿ ಖಾನ್, ಅಮಾಜ್ ಆಲಿ ಖಾನ್, ಅಯಾನ್ ಆಲಿ ಖಾನ್ ಹಾಗೂ ತಬ್ಲಾದಲ್ಲಿ ಪಂಡಿತ್ ವಿಜಯ್ ಘಾಟೆ ಭಾಗವಹಿಸಲಿದ್ದಾರೆ.
ದ್ವಿತೀಯ ಕಲಾ ಪ್ರಕಾರ ಒಡಿಸ್ಸಿ ಸಮೂಹ ನೃತ್ಯ "ವರ್ನಾಲಿ " ರಾತ್ರಿ 8.10ರಿಂದ 9.45ರ ತನಕ ನಡೆಯಲಿದೆ. ಭುವನೇಶ್ವರದ ರುದ್ರಾಕ್ಷಾ ಫೌಂಡೇಷನ್ ಈ ಕಾರ್ಯಕ್ರಮ ನಡೆಸಿಕೊಡಲಿದೆ.

ಜ.13ರಂದು ಸಂಜೆ 6ರಿಂದ 8 ರ ತನಕ ವಿಶೇಷ ಜುಗಲ್ ಬಂದಿ ನಡೆಯಲಿದೆ. ಪಂಡಿತ್ ಜಯತೀರ್ಥ ಮೇವುಂಡಿ ಹಿಂದೂಸ್ಥಾನಿ ಹಾಡುಗಾರಿಕೆ, ವಿದ್ವಾನ್ ಅಭಿಷೇಕ್ ರಘುರಾಮ್ ಕರ್ನಾಟಕ ಹಾಡುಗಾರಿಕೆ, ಹಾರ್ಮೋನಿಯಂ - ಪ್ರೊ.ನರೇಂದ್ರ ಎಲ್ ಕಾಮತ್, ವಾಯೊಲಿನ್ ಮೈಸೂರು ವಿ.ಶ್ರೀಕಾಂತ್, ತಬ್ಲಾ ಶ್ರೀ ರಾಮ್ ದಾಸ್ ಪಲ್ ಸುಲೆ, ಮೃಂದಗದಲ್ಲಿ ಅನಂತ ಆರ್ ಕೃಷ್ಣನ್ ಕಲಾ ಪ್ರಕಾರ ಪ್ರಸ್ತುತ ಪಡಿಸಲಿದ್ದಾರೆ.

ದ್ವಿತೀಯ ಕಲಾ ಪ್ರಕಾರ 8.10ರಿಂದ 10.30ರ ತನಕ ನಡೆಯಲಿದ್ದು, ಮೇಲೇಶಿಯಾದ ಸೂತ್ರ ಡ್ಯಾನ್ಸ್ ಥಿಯೇಟರ್ ರಾಮ್ಲಿ ಇಬ್ರಾಹಿಂ ಮತ್ತು ತಂಡದವರಿಂದ "ಮಿಷನ್ ಆಫ್ ಫಾರೆವರ್" ನೃತ್ಯ ವೈವಿಧ್ಯ ಪ್ರಸ್ತುತಗೊಳ್ಳಲಿದೆ.
ಜ.14ರಂದು ಸಂಜೆ 6 ರಿಂದ 8.20ರ ತನಕ ಅಪೂರ್ವ ಜುಗಲ್ ಬಂದಿ ನಡೆಯಲಿದೆ. ಪಂಡಿತ್ ತರುಣ್ ಭಟ್ಟಾಚಾರ್ಯ ಸಂತೂರ್, ಪಂಡಿತ್ ಪ್ರವೀಣ್ ಗೋಡ್ಕಿಂಡಿ ಬಾನ್ಸುರಿ, ಪಂಡಿತ್ ವಿಕ್ರಮ್ ಘೋಷ್ ತಬ್ಲಾದಲ್ಲಿ ಕಲಾ ಪ್ರದರ್ಶನ ನೀಡಲಿದ್ದಾರೆ.

ದ್ವಿತೀಯ ಕಲಾ ಪ್ರದರ್ಶನ 8.30ರಿಂದ 10.15ರ ಕೋಲ್ಕತ್ತಾದ ಶ್ರೀ ಅಶಿಮ್ಬಂಧು ಭಟ್ಟಾಚಾರ್ಯ ಮತ್ತು ಬಳಗದವರಿಂದ ಕಥಕ್ ರಂಗ್ ಕಲಾ ಪ್ರದರ್ಶನ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಜ.15ರಂದು ಸಂಜೆ 6ರಿಂದ 8.20ರ ತನಕ ಪೂರ್ವ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತ ಸಂಗಮ ನಡೆಯಲಿದೆ. ಹಿರಿಯ ಕಲಾವಿದರಾದ ಡಾ.ಮೈಸೂರು ಮಂಜುನಾಥ್ ಹಾಗೂ ಮೈಸೂರು ನಾಗರಾಜ್ ವಾಯೋಲಿನ್, ಶ್ರೀ ನೆಡ್ ಮೆಕ್ ಗೋವೆನ್ - ಕಾನ್ಟ್ರಾಬೇಸ್ ಫ್ಲೂಟ್, ತಬ್ಲಾ : ಪಂಡಿತ್ ರಾಮ್ ಕುಮಾರ್ ಮಿಶ್ರಾ, ಮೃದಂಗ: ವಿದ್ವಾನ್ ಬಿ.ಸಿ.ಮಂಜುನಾಥ್, ಘಟಂ: ವಿದ್ವಾನ್ ಗಿರಿಧರ್ ಉಡುಪ ಕಲಾ ಪ್ರದರ್ಶನ ನಡೆಸಿಕೊಡಲಿದ್ದಾರೆ.

ದ್ವಿತೀಯ ಕಲಾ ಪ್ರಕಾರವಾಗಿ ಶ್ರೀಲಂಕಾದ 30 ಪರಿಣತ ಕಲಾವಿದರಿಂದ ಜಾನಪದಹಾಡು ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ.
ಜ.16ರಂದು ಸಂಜೆ 6ರಿಂದ 10.30ರ ತನಕ ಜೋಧ್ಪುರ ಕಲಾವಿದರಿಂದ ಮಲ್ ಕಂಬ್, ಬಿರ್ ಖಲ್ಸಾ ಪಾಟಿಯಾಲ ಪಂಜಾಬ್ ಕಲಾವಿದರಿಂದ ಬಾಂಗ್ರಾ ನೃತ್ಯ, ಸಮುದ್ರ ಆರ್ಟ್ಸ್ ತಿರುವನಂತ ಪುರಂ ಇವರಿಂದ ಕೋಸ್ಮಿಕ್ ಡ್ಯಾನ್ಸ್ ಆಫ್ ಶಿವ, ಗುಜರಾತ್ನ ರಾಜೇಂದ್ರ ರಾವಲ್ ಅವರಿಂದ ತಲವಾರ್ ನೃತ್ಯ, ಉಡುಪಿ ಭಾರ್ಗವಿ ನೃತ್ಯ ತಂಡದಿಂದ ಭಾವಯೋಗ ನೃತ್ಯ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಶಿಲ್ಪ ವಿರಾಸತ್ : ಜ.1ರಿಂದ ಜ.16ರ ತನಕ ಮಿಜಾರು ಶೋಭಾವನದಲ್ಲಿ ಆಳ್ವಾಸ್ ಶಿಲ್ಪವಿರಾಸತ್ ನಡೆಯುತ್ತಿದ್ದು ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ಆಂಧ್ರ, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕದಿಂದ ತಲಾ ಒಬ್ಬರಂತೆ 9 ಮಂದಿ ಕಲಾವಿದರು ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.

ಜ.10ರಿಂದ 16 ರ ತನಕ ಆಳ್ವಾಸ್ ವರ್ಣವಿರಾಸತ್ ನಡೆಯಲಿದೆ. ತಂಜಾವೂರು, ಕ್ಯಾಲಿಕಟ್ , ಮಧುಬನಿ, ಕಲಂಕರಿ, ಮೈಸೂರು ಶೈಲಿಯಲ್ಲಿ ತಲಾ ಒಬ್ಬರಂತೆ ಕಲಾವಿದರು ಕಲಾಕೃತಿ ರಚಿಸಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದ ಕಲಾವಿದ ವಾಸುದೇವ ಕಾಮತ್ ಮುಂಬೈ ಇವರಿಗೆ ವರ್ಣವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆಳ್ವಾಸ್ ವಿರಾಸತ್ನ ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡು ಸಮಯಕ್ಕೆ ಸರಿಯಾಗಿ ಮುಗಿಯುತ್ತದೆ. ಸಭಾ ಕಾರ್ಯಕ್ರಮ ಕೇವಲ ಉದ್ಘಾಟನಾ ದಿನದಂದು ಮಾತ್ರ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.

5 comments:

Anonymous said...

Alva’s Virasat thubha chenagi moodibarali yendu bayasuteve.
Nagarathna & Vinaya B Rai
Alva’s Education Foundation

Vinaya said...

Alva’s Virasat thubha chenagi moodibarali yendu bayasuteve.
Nagarathna & Vinaya B Rai
Alva’s Education Foundation

Anonymous said...

Alva's virasat thumbha uthammavagi sagali yendu nanu asisutene

Anonymous said...

Alva’s Virasat thubha chenagi sagali yendu nanu bayasutene

nagarathna said...

Alva’s Virasat thubha chenagi sagali yendu nanu bayasutene

Post a Comment