ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಹೌದು...ನೆನಪುಗಳ ಮಾತು ಮಧುರ...ನಿಜಕ್ಕೂ ಕೂಡಾ.. ಭಾನುವಾರ ಕಛೇರಿಗೆ ರಜೆಯಾದರೂ ನಮ್ಮ ಓದುಗರ ನಿರಂತರ ಪತ್ರಗಳು, ಅಭಿಪ್ರಾಯಗಳು ಮೇಲ್ ತುಂಬಾ ಹರಿದಾಡುತ್ತಿರುತ್ತವೆಯಲ್ಲಾ ಎಂದು ಈ ಮೇಲ್ ಇನ್ ಬಾಕ್ಸ್ ನೋಡುತ್ತಿರುವಾಗ ಜೀ ಟಾಕ್ ನಲ್ಲಿ ಹಳೆಯ ಸ್ನೇಹಿತೆಯೋರ್ವಳು "ಏನು ತುಂಬಾ ಬ್ಯುಸಿನಾ" ಎಂಬ ಸಂದೇಶ ಕಳುಹಿಸಿದಳು. ಆ ಸಂದೇಶವೇ ಈ ಒಂದು ನೆನಪುಗಳ ಮಾತು ಮಧುರ ಎಂಬ ಲೇಖನಕ್ಕೆ ವಸ್ತುವಾಯಿತು!.ಹತ್ತಾರು ವರುಷಗಳ ಹಿಂದಿನ ದಿನಗಳತ್ತ ಚಿತ್ತ ಓಡುವಂತೆ ಮಾಡಿತು... ಅಂದಿನ ಆ ಮಧುರ ಕ್ಷಣಗಳು ಮತ್ತೆ ಮತ್ತೆ ಮನದ ತುಂಬೆಲ್ಲಾ ಹರಿದಾಡಿ ಕಚಕುಳಿಯಿಟ್ಟು ಒಂದಷ್ಟು ಸುಮಧುರ ನೆನಪುಗಳ ಮೆರವಣಿಗೆಗೆ ನಾಂದಿ ಹಾಡಿದವು.. ಆ ಸಂತಸ ನಿನಕ್ಕೂ ಆಕೆಯೇ ಹೇಳಿದ ಹಾಗೆ "ಗೋಲ್ಡನ್ ಲೈಫ್" ಕೂಡಾ ಹೌದು.

ಉಜಿರೆಯ ಎಸ್.ಡಿ.ಯಂ ಹೈಸ್ಕೂಲಿನಲ್ಲಿ ಎಂಟನೇ ತರಗತಿಯಲ್ಲಿದ್ದಾಗ ಸ್ನೇಹಿತೆಯಾಗಿದ್ದವಳು ಗೀತಾಲಕ್ಷ್ಮಿ. ಈಗ ಆಕೆ ಸಿಂಗಾಪುರದಲ್ಲಿದ್ದಾಳೆ. ಓದಿದ್ದು ಎಂಜಿನಿಯರಿಂಗ್, ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾಳೆ. ಪುಟ್ಟಮಗನೂ ಇದ್ದಾನೆ. ಸುಖೀ ಕುಟುಂಬ. ವಿದೇಶದಲ್ಲಿದ್ದರೂ ದೇಶದ ಬಗ್ಗೆ ಊರಿನ ಬಗ್ಗೆ ಕಾಳಜಿ ಮಮತೆಯಿದೆ. ಸಂಸ್ಕೃತಿಯ ಬಗ್ಗೆ ಉತ್ತಮ ಆಸಕ್ತಿ ಹೊಂದಿದ್ದಾಳೆ.ಭಾಷೆ ದೇಶದ ಬಗ್ಗೆಯೂ ಅದೇ ಪ್ರೀತಿ ಉಳಿಸಿಕೊಂಡಿದ್ದಾಳೆ. ಆ ಕಾರಣಕ್ಕೆ ಈ ಪೀಠಿಕೆ ಬರೆಯುತ್ತಿದ್ದೇನೆ.

ನನ್ನ ಅನೇಕ ಗೆಳೆಯರು ಇಲ್ಲೇ ಬೆಂಗಳೂರಿಗೆ ಹೋದರೆ ಸಾಕು. ಪಾಪ ತುಳುನಾಡಿನ ನೆನಪೇ ಅವರಿಗೆ ಆರಿಹೋಗುತ್ತದೆ. ಕನ್ನಡ ಭಾಷೆಯ ಬಗ್ಗೆ ಅವರಿಗೆ ಅದ್ಯಾಕೋ ಒಂದು ಥರಾ ಜಿಗುಪ್ಸೆ ಹುಟ್ಟಿದಂತೆ ಮಾಡುತ್ತಾರೆ. ಅರೆಬರೆ ಆಂಗ್ಲಭಾಷೆಯಲ್ಲಿಯೇ ಅವರ ವ್ಯವಹಾರಗಳು ನಡೆಯುತ್ತವೆ. ಆದರೆ ಈ ಗೀತಾ ಹಾಗಲ್ಲ. ಇಂದಿಗೂ ತನ್ನ ಮಾತೃಭಾಷೆಯನ್ನೇ ನೆಚ್ಚಿ ಅದರಲ್ಲೇ ಮಾತನಾಡುತ್ತಾ ತನ್ನ ಸೌಮ್ಯ ಸ್ವಭಾವವನ್ನು ಆಕೆ ಮೆರೆದಿದ್ದಾಳೆ.ನನ್ನ ಪ್ರೀತಿಯ ಗೆಳೆಯ ಸುದರ್ಶನನೂ ಹಾಗೆಯೇ. ಆತನೂ ಸಾಫ್ಟ್ ವೇರ್ ಇಂಜಿನಿಯರ್. ಆದರೆ ಆತ ಎಂದೂ ದೊಡ್ಡ ಜನ ಎಂದು ತೋರಿಸಿಕೊಂಡಿಲ್ಲ. ಅದೇ ಸರಳತೆಯಲ್ಲಿಯೇ ಇಂದಿಗೂ ಇದ್ದಾನೆ. ಆತನೂ ಮೊನ್ನೆ ಮೊನ್ನೆ ಮದುವೆಯಾಗಿ ಇದೀಗ ಬೆಂಗಳೂರಿನಲ್ಲಿ ಸಂಸಾರ ಸಾಗಿಸುತ್ತಿದ್ದಾನೆ. ಅವನದ್ದೂ ಸುಖೀ ಕುಟುಂಬ. ನಾವೆಲ್ಲರೂ ಒಂದೇ ತರಗತಿಯಲ್ಲಿ ಒಟ್ಟೊಟ್ಟಿಗೇ ಕೂಡಿ ಕಲಿತವರು..
ನನಗೂ , ಸುದರ್ಶನನಿಗೂ , ಗೀತನಿಗೂ ಆತ್ಮೀಯತೆ ಬೆಳೆಯಲು ಕಾರಣ ಡ್ರಾಯಿಂಗ್ ಹುಚ್ಚು. ನಾವೆಲ್ಲರೂ ಚಿತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದೆವು. ನಾನು ಪಾಠದಲ್ಲಿ ಒಂದಷ್ಟು ಹಿಂದೆ..ಆದರೆ ಇವರಿಬ್ಬರು ಪಾಠ, ಚಿತ್ರ,ಎಲ್ಲದರಲ್ಲೂ ಮುಂದೆ.. ಹೈಸ್ಕೂಲು ಬಿಟ್ಟನಂತರ ಒಂದೆರಡು ಬಾರಿ ಗೀತಳನ್ನು ಮುಖತ ಭೇಟಿಯಾಗಿದ್ದು ಬಿಟ್ಟರೆ ಮತ್ತೆ ಅದೆಷ್ಟೋ ವರುಷಗಳ ನಂತರ ಆಕಸ್ಮಿಕವಾಗಿ ಅಂತರ್ಜಾಲದ ಮೂಲಕ ಭೇಟಿ..ಆದರೆ ಆ ಸಂದರ್ಭದಲ್ಲೂ ನಮ್ಮ ಆತ್ಮೀಯತೆ ಸ್ನೇಹ ಮಾತ್ರ ಮೊದಲಿನಂತೆಯೇ ಇತ್ತು...ಗೀತ ಮೊದಲಿನಿಂದಲೂ ಉತ್ತಮ ಚಿತ್ರ ಬರೆಯುತ್ತಿದ್ದಳು. ಶಾಲೆಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯುತ್ತಿದ್ದ ಚಿತ್ರ ಸ್ಪರ್ಧೆಯಲ್ಲಿ ಆಕೆ ಭಾಗವಹಿಸುತ್ತಿದ್ದಳು.ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯನ್ನೂ ಪಾಸುಮಾಡಿದ್ದಳು. ಗಮಕ, ಹಾಡು ಇವೆಲ್ಲವೂ ಆಕೆಯ ಆಸಕ್ತಿಯ ವಿಷಯ. ಹಾಗೇ ಚಾಟ್ ಮಾಡುತ್ತಿರುವಾಗ ಮತ್ತೆ ಚಿತ್ರದ ಬಗ್ಗೆ ನಮ್ಮ ಮಾತುಗಳು ಹೊರಳಿದವು. "ಈಗಲೂ ಚಿತ್ರ ಬರೆಯುತ್ತಿಯಾ?" ಎಂಬ ನನ್ನ ಪ್ರಶ್ನೆಗೆ ಮೊದಲಿನಂತಲೇ ಅದೇ ಹುಸಿಮುನಿಸಿನ ಉತ್ತರಕೊಟ್ಟಳು. ಚಿತ್ರನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಕ್ಕೆ ಒಂದಷ್ಟು ಚಿತ್ರ ಕಳುಹಿಸಿದ್ದಳು.ಆಕೆಯ ಕಪ್ಪುಬಿಳುಪು ಚಿತ್ರಗಳು ನಿಜಕ್ಕೂ ಮೆಚ್ಚತಕ್ಕಂತಹುದು. ಸುಧಾ ಮೂರ್ತಿಯವರ ಭಾವಚಿತ್ರ ಉತ್ತಮವಾಗಿ ರೂಪುಗೊಂಡಿದೆ. ಉಳಿದಂತೆ ಪ್ರತಿಯೊಂದು ಚಿತ್ರದಲ್ಲೂ ತನ್ನದೇ ಆದಂತಹ ಛಾಪುಮೂಡಿಸಿಕೊಂಡಿದ್ದಾಳೆ. ಊರು ಬಿಟ್ಟು ವಿದೇಶ ಸೇರಿದರೂ ಮತ್ತೆ ಹಳೆಯ ನೆನಪನ್ನು ರೂಢಿಸಿಕೊಂಡಿದ್ದಾಳೆ. ಚಿತ್ರ ರಚನೆ, ಓದುವ ಹವ್ಯಾಸ ತೊಡಗಿಸಿಕೊಂಡಿದ್ದಾಳೆ ಎಂಬುದು ಸಂತಸದ ವಿಷಯ.
- ಎಚ್.ಕೆ.

0 comments:

Post a Comment