ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಖ್ಯಾತ ಹಿಂದೂಸ್ಥಾನಿ ಗಾಯಕಿ, ಯುವ ಪ್ರತಿಭೆ ವಿಭಾ ಶ್ರೀನಿವಾಸ್ ನಾಯಕ್ ಇಂದಾಜೆ ಹಾಡಿರುವ ಕೊಂಕಣಿ ಹಾಗೂ ಕನ್ನಡ ಭಕ್ತಿಗೀತೆಗಳ ಸಿಡಿ ``ಜೋ ಜೋ ವೆಂಕಟೇಶ" ಜನವರಿ 5ರಂದು ಬಿಡುಗಡೆಯಾಗಲಿದೆ.
ಕಾರ್ಕಳದ ಹರಿಖಂಡಿಗೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 5ರಂದು ನಡೆಯುವ ಸಮಾರಂಭದಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಪಟ್ಟ ಶಿಷ್ಯರಾದ ಶ್ರೀ ಸಯಮಿಂದ್ರ ಸ್ವಾಮೀಜಿ ಸಿಡಿಯನ್ನು ಬಿಡುಗಡೆ ಮಾಡಲಿದ್ದಾರೆ.
ಭಕ್ತಿ ಗೀತೆಗಳಿಗೆ ಆಶ್ಚಿನ್ ನಾಯಕ್ ಅವರು ಸಂಗೀತ ಮತ್ತು ರಾಗ ಸಂಯೋಜನೆ ಮಾಡಿರುತ್ತಾರೆ. ಜೋ ಜೋ ವೆಂಕಟೇಶ ಭಕ್ತಿಗೀತೆಗಳ ಸಿಡಿಯಲ್ಲಿ ವೆಂಕಟೇಶ ದೇವರ ಎಂಟು ಭಕ್ತಿಗೀತೆಗಳನ್ನು ಒಳಗೊಂಡಿದೆ. ಮಂಗಳೂರಿನ ಶೂ ಕ್ರಿಯೇಶನ್ ಹೊರತಂದಿರುವ ಈ ಸಿಡಿಯ ಎಂಟು ಭಕ್ತಿಗೀತೆಗಳಿಗೆ ರಾಘವೇಂದ್ರ ನಾಯಕ್ ಮಂಚಿ ಸಾಹಿತ್ಯ ಬರೆದಿರುತ್ತಾರೆ.

0 comments:

Post a Comment