ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಬರಿಮಲೆ : ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಇಂದು ಮಕರ ಜ್ಯೋತಿ.ದೇಶ ವಿದೇಶಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯ ಅಯ್ಯಪ್ಪ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.ಇರುಮುಡಿ ಕಟ್ಟಿನೊಂದಿಗೆ ಕ್ಷೇತ್ರದ ದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತ ಜನಸಾಗರವೇ ಶ್ರೀ ಕ್ಷೇತ್ರದತ್ತ ಹರಿದುಬರುತ್ತಿದೆ. ಕಳೆದ ಎರಡು ತಿಂಗಳುಗಳಿಂದ ಶ್ರೀ ಕ್ಷೇತ್ರಕ್ಕೆ ವೃತಾಧಾರಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಒಟ್ಟಾರೆಯಾಗಿ ಕಳೆದೆರಡುತಿಂಗಳುಗಳಿಂದ ಈ ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಐದಾರು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ವೃಶ್ಚಿಕಾ ತಿಂಗಳ ಮೊದಲ ಭಾಗದಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಭಕ್ತಾಧಿಗಳ ಯಾತ್ರೆ ಆರಂಭವಾದರೆ ಮಕರ ತಿಂಗಳ ಮೊದಲ ವಾರ ಈ ಯಾತ್ರೆ ಮುಕ್ತಾಯಗೊಳ್ಳುವುದು ವಾಡಿಕೆ. ಶ್ರೀ ಕ್ಷೇತ್ರದಲ್ಲಿ ದೇವರಿಗೆ ಪೂಜೆ ಆಗುತ್ತಿದ್ದಂತೆ 3ಬಾರಿ ಅದೃಶ್ಯ ಶಕ್ತಿಯೊಂದು ದೂರದ ಬೆಟ್ಟದಲ್ಲಿ ಗೋಚರವಾಗುತ್ತದೆ. ಜ್ಯೋತಿಯ ರೂಪದಲ್ಲಿ ಭಕ್ತಾಧಿಗಳಿಗೆ ಇದು ದರ್ಶನ ನೀಡುತ್ತದೆ. ಸೇರಿದ್ದ ಲಕ್ಷಾಂತರ ಭಕ್ತರು ಏಕ ಕಂಠದಲ್ಲಿ ಸ್ವಾಮಿಯೇ ಶರಣಮಯ್ಯಪ್ಪ ಎಂಬ ಘೋಷವಾಕ್ಯವನ್ನು ಮೊಳಗಿಸುತ್ತಾರೆ. ಕಾನನ ಗರ್ಭದ ತನಕವೂ ಈ ದೇವರ ನಾಮ ಸ್ಮರಣೆ ಮೊಳಗುತ್ತದೆ. ಅದೊಂದು ರೋಮಾಂಚನ ಕ್ಷಣ ಎಂಬಂತೆ ಭಾಸವಾಗುತ್ತದೆ.

ಶಬರಿಮಲೆ ಕ್ಷೇತ್ರವು ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿದ್ದು ಗಿರಿಯ ಮೇಲೆ ಅತ್ಯಂತ ರಮ್ಯಸ್ವರೂಪದಲ್ಲಿ ನಿರ್ಮಾಣಗೊಂಡಿದೆ.ಪಂಪೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ಇದೀಗ ಭಕ್ತ ಜನ ಸಾಗರ ಈ ಭಾಗದಲ್ಲಿ ಕಾಣತೊಡಗಿದ್ದಾರೆ.ಶ್ರೀಕ್ಷೇತ್ರಕ್ಕೆ ಸಾಗಲು ಭಕ್ತಾಧಿಗಳು ಕೆಲವೊಂದು ಕಟ್ಟುಕಟ್ಟಲೆಗಳನ್ನು ವೃತಾಚರಣೆಗಳನ್ನು ಅನುಸರಿಸುತ್ತಾರೆ. 41ದಿನಗಳ ವೃತ, ಕಾಲ್ನಡಿಗೆಯಲ್ಲಿ ಸಾಗುವ ಸಂಪ್ರದಾಯ , ಹಲವಾರು ಕ್ಷೇತ್ರ ದರ್ಶನದ ನಂತರ ಶ್ರೀ ಅಯ್ಯಪ್ಪ ದರ್ಶನ, ಹದಿನೆಂಟು ಮೆಟ್ಟಲೇರಿ , ಮಾಲಾಧಾರಿಯಾಗಿ ಕ್ಷೇತ್ರ ದರ್ಶನ ಗೈಯುವುದು ಇದೆಲ್ಲವೂ ಒಂದು ವಿಶಿಷ್ಠ ಆಚರಣೆಯಾಗಿದೆ. ಪ್ರತೀ ವರುಷವೂ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬಾರಿ ಹೆಚ್ಚುವರಿ ಬಸ್ಸು, ರೈಲು ಸೇವೆಯನ್ನು ಅಳವಡಿಸಲಾಗಿದೆ. ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ.
ಭಕ್ತಾಧಿಗಳು ಜ್ಯೋತಿಯ ದರ್ಶನಗೈದು ಮರಳುತ್ತಾರೆ.

0 comments:

Post a Comment