ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:57 PM

ಇಂಟರ್ ಸಿಟಿ ರೈಲು

Posted by ekanasu

ರಾಜ್ಯ - ರಾಷ್ಟ್ರ

ಶಿವಮೊಗ್ಗ: ಕಳೆದ 9 ತಿಂಗಳುಗಳಿಂದ ವಿಳಂಬವಾದ ಮೈಸೂರು - ಶಿವಮೊಗ್ಗ ಇಂಟರ್ ಸಿಟಿ ರೈಲು ಇದೇ ಜನವರಿ 16ರಿಂದ ಆರಂಭವಾಗಲಿದೆ.ಕೊನೆಗೂ ಈ ರೈಲು ಸೇವೆಗೆ ಮುಕ್ತಿದೊರಕಿದಂತಾಗುತ್ತಿದೆ. ಮೈಸೂರಿನಲ್ಲಿ ಜ 16ರಂದು ಮಧ್ಯಾಹ್ನ 12.30ಕ್ಕೆ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ರೈಲು ಸೇವೆಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

16 ಬೋಗಿಗಳನ್ನು ಹೊಂದಿರುವ ಈ ಇಂಟರ್ ಸಿಟಿ ರೈಲಿನಲ್ಲಿ ಒಂದು ಹವಾನಿಯಂತ್ರಿತ, ಎರಡು ರಿಸರ್ವ್ ಮತ್ತು 13 ಸಾಮಾನ್ಯ ಬೋಗಿಗ ಳ ಸೌಲಭ್ಯವಿದೆ.ಕೆ ಆರ್ ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬೀರೂರು ಮಾರ್ಗವಾಗಿ ಸಂಚರಿಸಲಿದೆ.

0 comments:

Post a Comment