ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿಷೇದಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಉಪಯೋಗಿಸದಿರುವಂತೆ ಪಾಲಿಕೆ ಆಯುಕ್ತರಾದ ಡಾ.ಕೆ.ಎನ್.ವಿಜಯಪ್ರಕಾಶ್ ಆದೇಶವನ್ನು ಹೊರಡಿಸಿದ್ದರು. ಆದಾಗ್ಯೂ ನಗರದ ಪರಿಸರದಲ್ಲಿ ಪ್ಲಾಸ್ಟಿಕ್ ಉಪಯೋಗಿಸುವುದನ್ನು ಕಾಣುತ್ತಿದ್ದು, ಆದೇಶ ಅನುಷ್ಠಾನಕ್ಕೆ ತಾರದಿದ್ದರೆ ಕಾನೂನಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ನಗರಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.ನಗರದಲ್ಲಿ 20 ಮೈಕ್ರಾನ್ ಕ್ಕಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ಹೊಟೇಲ್, ಅಂಗಡಿಗಳು,ಬೇಕರಿಗಳು,ತರಕಾರಿ ಮೀನು/ಮಾಂಸ ಮಾರಾಟಗಾರರು ಉಪಯೋಗಿಸಬಾರದು. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾ ಖೆಯು ಪುನರ್ ಬಳಸಿದ ಪ್ಲಾಸ್ಟಿಕ್ ತಯಾರಿಕೆ ಮತ್ತು ಬಳಕೆ ನಿಯಮ ಗಳು 1999 ನ್ನು 2-9-1999 ರಲ್ಲಿ ಪರಿಸರ ಸಂರಕ್ಷಣಾ ಕಾಯ್ದೆ 1986 ರಡಿಯಲ್ಲಿ ಅಧಿ ಸೂಚನೆ ಹೊರಡಿಸಿದೆ ಹಾಗೂ 2003 ರಲ್ಲಿ ತಿದ್ದುಪಡಿ ನಿಯಮ ಗಳನ್ನು ನೀಡಿ ರುತ್ತದೆ

0 comments:

Post a Comment