ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ನಾಲಗೆ ಜೊತೆ ಹಸುವಿನ ಆಟ ನೋಡೋರಿಗೆ ಖಷಿಯೂಟ!
ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ಹಸುವಿಗೆ ಯಾರೇನು ಜಾದು ಕಲಿಸಿದ್ದಲ್ಲ! ಆದರೂ ಜರ್ಸಿ ಕ್ರಾಸ್ ಹಸು ಜಾದು ಮಾಡುತ್ತದೆ. ಬಾಯಿಂದ ಮಾರುದ್ದ ನಾಲಗೆ ಹೊರಹಾಕುತ್ತದೆ. ಹಾಕಿದಷ್ಟೇ ವೇಗವಾಗಿ ಸರಕ್ ಅಂತ ಮತ್ತೆ ಬಾಯೊಳಗೆ ಎಳೆದುಕೊಳ್ಳುತ್ತೆ.ಹಸುವಿಗೆ ಬೇಜಾರು ಅನ್ನೋದಿಲ್ಲ. ಮಂಡೆ ಮೇಲಕ್ಕೆತ್ತಿ ಆಕಾಶಕ್ಕೆ ಮುಖಮಾಡಿ ಮೇಲ್ದವಡೆಗೆ ಒಂದು ಸಲ ಪಠಾರ್ ಅಂತ ಬಡಿದುಕೊಂಡು, ಸಟ್ ಅಂತ ಒಳಕ್ಕೆ ಎಳದೆಕೊಳ್ಳುತ್ತದೆ. ಮತ್ತೆ ನಾಲಗೆ ಹೊರಹಾಕಿ ಕೆಳದವಡೆಗೊಂದು ಪಟಾರ್ ಆಂತ ಬಾರಿಸಿಕೊಂಡು ಹಾವು ಹುತ್ತ ಸೇರಿದ ಹಾಗೆ ಬಾಯೊಳಗೆ ನಾಲಿಗೆ ಎಳೆದುಕೊಳ್ಳುತ್ತೆ. ಒಳಗೆಳದ ನಾಲಗೆ ಪುನಃ ಹೊರತಂದು ಮೂಗಿನ ಹೊಳ್ಳೆಯೊಳಗೆ ತೂರಿಸಿ ತಲೆ ಆಡಿಸುವ ಪರಿಗೆ ಮಾರುಹೋಗದವರಾರು? ಹಸುವಿನ ಈ ಹುಚ್ಚಾಟಕ್ಕೆ ನಾಲಿಗೆ ಮಾರುದ್ದವಾಗಿದೆ. ಹಸು ಸುಮಾರು ಒಂದೂವರೆ ಅಡಿಯಷ್ಟು ನಾಲಗೆ ಹೊರಕ್ಕೆ ತರುತ್ತದೆ.

ಮಾಮೂಲಿ ಹಸುಗಳ ನಾಲಗೆ ಮೂಗಿನ ಹೊಳ್ಳೆ ಸಾಪ್ ಮಾಡೋಕೆ ಮತ್ತು ಬಾಯಿ ಒರಸಿಕೊಳ್ಳೊವಷ್ಟಕ್ಕೆ ಸೀಮಿತವಾಗಿರುತ್ತದೆ. ಒಮ್ಮೆಮ್ಮೆ ಕುತ್ತಿಗೆ ಮಡಿಚಿ ಮೈಕೆರದುಕೊಳ್ಳೋಕು ಅಸು ನಾಲಗೆ ಬಳಸೋದು ಉಂಟು. ಆದರೂ ಈ ಪಾಟಿ ನಾಲಗೆ ಉದ್ದಕ್ಕೆ ತರೋದಿಲ್ಲ.
ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸೀಬುವ ಕರುವನ್ನು ಮುದ್ದು ಮಾಡೋಕೆ ಹಸು ನಾಲಗೆ ಬಳಸುತ್ತದೆ. ಬೇರೆ ಹಸುಗಳನ್ನು ಪ್ರೀಸಿಸೋ ಬಾಷೆ ಹಸುವಿಗೆ ನಾಲಗೆ. ಸಾಕಿದ ದಣಿ ಕೆನ್ನಸವರಲೂ ಹಸು ನಾಲಗೆ ಚಾಚುತ್ತದೆ. ಆದರೆ ನಾಲಗೆ ಜೊತೆ ಅಸು ಆಟವಾಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಲಿಮ್ಕಾ ರೆಕಾರ್ಡ್ ಗೆ ಅವಕಾಶವಿದೆಯಾ ಗೊತ್ತಿಲ್ಲ.

ಇದು ಕೆಂಪಿ ಹಸುವಿನ ಸ್ಟೋರಿ : ಬೈಂದೂರು ಪಡುಕೋಣೆ ಭಟ್ರತೋಟ ಅಸೋಡರ್ಮನೆ ಹಸುವಿನ ತವರು. ಕುಂದಾಪುರ ತಾಲೂಕ್ ಕಚೇರಿಯಲ್ಲಿ ಕೆಲಸದಲ್ಲಿರುವ ಎ. ಮಂಜುನಾಥ ಹೆಬ್ಬಾರ್ ಹಸುವಿನ `ಮಾಲಿಕರು' ಮನೆಯೊಡತಿ ಪದ್ಮಿನಿ ಹೆಬ್ಬಾರ್ ಅವರಿಗೆ ಹಸು ಮುದ್ದಿನಿ `ಕೆಂಪಿ' ಮಗ ರಾಘವೆಂದ್ರ ಹೆಬ್ಬಾರ್ ಮತ್ತು ಸೊಸೆ ಮನಸ್ಸಿ ಆರ್. ಹೆಬ್ಬಾರ್ ಅವರಿಗೆ ಕೆಂಪಿ ಅಚ್ಚುಮೆಚ್ಚಿನ ಗೆಳತಿ. ಇವರ ಕುಂಟುಂಬಕ್ಕೆ ಕಂಪಿಯದ್ದೇ ಹಾಲು. ಕಂಪಿ ಸಾಧೂ ಅಂದ್ರೆ ಸಾಧು.
ಕೆಂಪಿ ಹಸು ಮೂರು ಮಕ್ಕಳ ತಾಯಿ. ಮತ್ತೊಂದಕ್ಕೆ ಜನ್ಮ ನೀಡಲು ಕೆಂಪಿ ತಯಾರು ನಡೆಸುತ್ತಿದ್ದಾಳೆ. ಸುಮಾರ್ ಏಳು ವರ್ಷದ ಕೆಂಪಿ ಹಸುವನಿಹೊಟ್ಟೆಯಡಿ ಮಂಜುನಾಥ್ ಹೆಬ್ಬಾರ್ ವೊಮ್ಮಕ್ಕಳಾದ ಶ್ರೀರಾಮ್ ಶ್ರೀಕಲಾ ತೂರಿ ಹೊರ ಬರುತ್ತಾರೆ. ಕೆಂಪಿ ಕುಯ್ಕ್ ಪಯ್ಕ್ ಅನ್ನೋದಿಲ್ಲ. ಕಾಲೆತ್ತು ರಝಾಡಿಸೋದು ಇಲ್ಲಾ. ಯಾರೂ ಚೆಂಬು ಹಿಡಿದು ಹಾಲಿಂಡಲೂ ಕೆಂಪಿ ತಕರಾರು ಮಾಡೋದಿಲ್ಲ. ಮುಂದೆ ಬಂದರೆ ಹಾಯಿದ ಹಿಂದೆ ಬಂದರೆ ಒದೆಯದ ಪುಣ್ಯಕೋಟಿ ಕೆಂಪಿ.
ಮಂಜುನಾಥ ಹೆಬ್ಬಾರ್ ಅವರ ಮನೆಗೆ ಬರೋರಿಗೆ ಹಸು ಚೋದಿಗದ ಸಂಗತಿ. ಹಸು ನಾಲಿಗೆ ಜೊತೆ ಆಟಾ ಆಡೋದು ಗೊತ್ತಿಲ್ಲದವರೂ ಅಯ್ಯೊ ಅಸುವಿಗೆ ಹಸಿವೆ ಆಯ್ತೇ ಹುಲ್ಲು ಹಾಕೀನಿ ಅಂತ ಆರ್ಡರ್ ಮಾಡುತ್ತಾರೆ. ಇನ್ನು ಕೆಲವರು ಹಲ್ಲು ಹಾಕಲು ಮುಂದಾಗಿದ್ದು ಇದೆ. ಅತಿಥಿಗಳ ಕಂಗಾಲು ಕಂಡು ಮನೆಯವರು ಮುಸಿಮುಸಿ ನಕ್ಕಿದ್ದೂ ಇದೆ. ಅಲ್ಲಾ ಮಾರಾಯ್ರೆ ಹಸು ಹೊಟ್ಟೆಗಾಗಿ ನಾಲಗೆ ಹರ ಹಾಕ್ತಿಲ್ಲೆ. ಅದಕ್ಕೆ ನಾಲಿಗೆ ಜೊತೆ ಆಟ ಆಡೋದು ಚಟವೇ ಅಂತ ಮನೆಯವರು ಸಮಜಾಯಸಿ ನೀಡುತ್ತಾರೆ. ಆದರೆ ಹಸುವಿನ ನಾಲಗೆ ಹೊರಚಾಚೋ ಬಗೆಯಿದೆಯಲ್ಲಾ ಅದು ಕೌತುಕ. ಯಾಕೆ ಹಸುವಿಗೆ ನಾಲಿಗೆ ಹೊರಹಾಕೋ ಚಟ ಅಂಟಿಕೊಂಡಿತೋ ಭಗವಂತನೇ ಬಲ್ಲ.
ಹಸು ನಿಂತಾಗ ಮಾತ್ರ ಕ್ಷಣಕ್ಕೊಂದು ಸಲದಂತೆ ನಾಲಿಗೆ ಒಳಕ್ಕೆ ಹೊರಕ್ಕೆ, ಮೇಲೆ ಕೆಳಗೆ ಮೂಗಿನೊಳಕ್ಕೆ ಹಾಗೆ ಬಾಯಿ ಸುತ್ತಾ ಗಿರಗರನ ಗಿರಕಿ ಹೊಡಿಸುತ್ತದೆ. ಈ ಪ್ರಕ್ರಿಯೆ ಸ್ಲೋ ಮೋಷನ್ನಲ್ಲಿ ನಡೆಯೋದಿಲ್ಲ. ಸೂಪರ್ ಫಾಸ್ಟ್! ಹಾಗಂತ ಹಸು ಮಲಿಗಿಕೊಂಡರೆ ನಾಲಿಗೆ ಸರ್ಕಸ್ ಬಂದ್!
ವೈದ್ಯರು ಏನು ಹೇಳುತ್ತಾರೆ ಕೇಳಿ : ನಾಲಿಗೆ ಒಟ್ಟಿಗೆ ಆಟ ಆಡುವ ಹಸುವಿನ ಬಗ್ಗೆ ಪಶುವೈದ್ಯರು ಕೊಡೋ ಕಾರಣ ಬೇರೆ. ಸ್ಥಳೀಯ ಪಶುವೈದ್ಯ ಪ್ರಕಾರ ಈ ರೀತಿ ಹುಚ್ಚಾಟದ ಹಸುವನ್ನು ಕಂಡಿದ್ದೆ ಇಲ್ಲ ಎನ್ನುತ್ತಾರೆ. ಹಾಗೆ ಕೆಂಪಿ ಹಸುವಿನ ನಾಲಗೆ ಕೂಡಾ ಮಾಮೂಲಿ ಹಸುವಿನ ನಾಲಗೆಯ ದುಪ್ಪಟ್ಟು ಉದ್ದವಿದೆ ಎನ್ನುತ್ತಾರೆ.
ಹಸು ತಿಂದ ಅಹಾರವನ್ನು ಜೀರ್ಣಸಿಕೊಳ್ಳಲು ಮೆಲಕು ಹಾಕುತ್ತವೆ. ಆದರೆ ಅವು ಗಪ್ಚುಪ್ಪ ಆಗಿ ನಡೆಯುತ್ತದೆ. ಆದರೆ ಕೆಂಪಿ ಹಸು ನಾಲಗೆ ಹೊರಹಾಕುವ ಮೂಲಕ ಮೆಲಕು ಹಾಕುತ್ತದೆ. ನಿರಂತರ ನಾಲಗೆ ಹೊರಕ್ಕೆ ಎಳೆದುಕೊಳ್ಳೊದ್ರಿಂದ ನಾಲಗೆ ಕೂಡಾ ಉದ್ದವಾಗಿದೆ. ಇದರಿಂದ ಹಸುವಿಗೆ ಏನೂ ತೊಂದರೆಯಿಲ್ಲ.
ಆರೋಗ್ಯ ದೃಷ್ಟಿಯಲ್ಲಿ ಕೆಂಪಿ ಹಸು ದಿವಿನಾಗಿದೆ. ಬೇರೆಲ್ಲಾ ಹಸುಗಳು ತಿಂದನ್ನು ಶಬ್ದವಿಲ್ಲದೆ ಅರಗಿಸಿಕೊಂಡರೆ, ಕೆಂಪಿ ಹಸು ನಾಲಗೆ ಹೊರಹಾಕಿ ಅರಗಿಸಿಕೊಳ್ಳುತ್ತದೆ. ಹಸುವಿನ ವಿನೂತನ ಪ್ರಕ್ರಿಯೆ ಹೆಬ್ಬಾರ್ ಮನಗೆ ಬರುವ ಅಥಿತಿಗಳಿಗೆ ಮನೋರಂಜನೆ ಸರಕು!

0 comments:

Post a Comment