ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು:ಬ್ಯಾಂಕಿಂಗ್ ಸೌಲಭ್ಯಗಳಿಂದ ದೇಶದ ಯಾವೊಬ್ಬ ಪ್ರಜೆಯು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಕುಗ್ರಾಮಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಒದಗುಸುವುದೇ ವಿತ್ತೀಯ ಸೇರ್ಪಡೆ ಕಾರ್ಯಕ್ರಮದ ಉದ್ದೇಶ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕರಾದ ವಿಜಯ ಭಾಸ್ಕರ್ ಅವರು ತಿಳಿಸಿದ್ದಾರೆ. ಅವರು ಇಂದು ಮಂಗ ಳೂರು ತಾಲೂಕು ಮೊಗರು ಗ್ರಾಮ ದಲ್ಲಿ ಸಿಂಡಿ ಕೇಟ್ ಬ್ಯಾಂ ಕಿನ ಪ್ರಥಮ ವಿತ್ತೀ ಯ ಸೇರ್ಪಡೆ ಬ್ಯಾಂಕ್ ಉದ್ಘಾ ಟಿಸಿ ನಂತರ ಸಾರ್ವ ಜನಿಕ ಬ್ಯಾಂ ಕಿಂಗ್ ಕುಂದು ಕೊರತೆ ವಿಚಾ ರಣಾ ಹಾಗೂ ಬ್ಯಾಂ ಕಿಂಗ್ ವ್ಯವ ಹಾರ ಗಳ ಕುರಿತು ತಿಳು ವಳಿಕೆ ಮೂಡಿ ಸುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿ ದರು.ಯಾವುದೇ ಬ್ಯಾಂಕುಗಳು ತಮ್ಮ ಶಾಖೆಗಳ ಸಂಖ್ಯೆ ವಿಸ್ತರಿಸುವ ಮೂಲಕವಾಗಲೀ ಅಥವಾ ಠೇವಣಿ ಸಂಗ್ರಹಣೆಯ ಆಧಾರದಲ್ಲಿ ಅದರ ಪ್ರಗತಿಯನ್ನು ಅಳೆಯಬಾರದು,ಬದಲಾಗಿ ತನ್ನಲ್ಲಿಗೆ ಬರುವ ಗ್ರಾಹಕರೊಂದಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವುದರ ಮೂಲಕ ಆ ಬ್ಯಾಂಕುಗಳು ಗ್ರಾಹಕರಿಗೆ ಎಷ್ಟರ ಮಟ್ಟಿಗೆ ಹತ್ತಿರವಿದೆ ಎಂಬುದನ್ನು ಕಂಡ ಕೊಳ್ಳಬಹುದೆಂದರು.ಎಲ್ಲಾ ಗ್ರಾಮಸ್ಥರು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು.ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ತಿಳಿಸಿ, ಕೃಷಿಕರು ಅದರಲ್ಲೂ ವಿಶೇಷವಾಗಿ ಸಣ್ಣ ಭೂ ಹಿಡುವಳಿದಾರರು ತಮ್ಮ ಆರ್ಥಿಕಾಭಿವೃದ್ಧಿಗೆ ಬ್ಯಾಂಕ್ ಮೂಲಕ ಸಾಲ ಪಡೆದು ಕೃಷಿ ಪೂರಕ ಕಸುಬುಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.

ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕರಾದ ದೇವಾನಂದ ಉಪಾಧ್ಯಾಯ ಮಾತನಾಡಿ ಸಿಂಡಿಕೇಟ್ ಬ್ಯಾಂಕಿಗೆ 2000 ಜನಸಂಖ್ಯೆ ಇರುವ 1493 ಗ್ರಾಮಗಳಲ್ಲಿ ವಿತ್ತೀಯ ಸೇರ್ಪಡೆ ಯೋಜನೆಯನ್ವಯ ಶಾಖೆಗಳನ್ನು ಆರಂಭಿಸುವ ಗುರಿ ನೀಡಲಾಗಿದ್ದು,ಈಗಾಗಲೇ ವಿವಿದೆಡೆ 25 ವಿತ್ತೀಯ ಸೇರ್ಪಡೆ ಆಗಿದ್ದು 2012 ರ ಮಾರ್ಚ್ ವೇಳೆಗೆ ಗುರಿ ಸಾಧಿಸಲಾಗುವುದೆಂದರು. ಇದಲ್ಲದೆ 723 ಬಿಸಿನೆಸ್ ಕರೆಸ್ಪಾಂಡೆಂಟ್ ಗಳನ್ನು ಆಯ್ಕೆ ಮಾಡಿದ್ದು,ಈ ಗ್ರಾಮಗಳಲ್ಲಿ ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು.ಇದರಿಂದ ರೂ.2000/- ವರೆಗಿನ ಬ್ಯಾಂಕಿಂಗ್ ವ್ಯವಹಾರ ಸಾಧ್ಯವಿದೆ ಎಂದು ತಿಳಿಸಿ ಗ್ರಾಹಕರು ಕೇವಲ ರೂ.30/- ಪಾವತಿಸಿದರೆ ಅವರಿಗೆ 25000/- ವಿಮಾ ಪಾಲಿಸಿ ನೀಡಲಾಗುವುದು. ಇದರಿಂದಾಗಿ ಸಹಜ ಅಥವಾ ಅಪಘಾತದಿಂದ ಗ್ರಾಹಕ ಮರಣ ಹೊಂದಿದರೆ ಅವರ ಅವಲಂಬಿತರಿಗೆ ರೂ.25000/- ವಿಮಾ ಮೊತ್ತ ಲಭಿಸಲಿದೆ ಎಂದರು.
ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ರಾಮನಾಥನ್,ರಿಸರ್ವ್ ಬ್ಯಾಂಕಿನ ಒಂಬುಡ್ಸ್ಮನ್(ಲೋಕಪಾಲ) ಜೆ.ಎಸ್.ರವಿಶಂಕರ್ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಅವರುಗಳು ಈ ಸಂದರ್ಭದಲ್ಲಿ ಮಾತನಾಡಿದರು.ಸಿಂಡಿಕೇಟ್ ಬ್ಯಾಂಕಿನ ಉಪ ಮಹಾಪ್ರಬಂದಕರಾದ ಜೆ.ಎಸ್.ಶೆಣೈ ಅವರು ಸ್ವಾಗತಿಸಿದರು.

0 comments:

Post a Comment