ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಗರ್ಭಿಣಿಯರಿಗೆ ಬಿಸಿ ಬೇಳೆ ಬಾತ್.. ಮಕ್ಕಳಿಗೆ ಕೇಸರಿ ಬಾತ್!

ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ಅಂಗನಾಡಿ ಗಿಫ್ಟ್! ಮಕ್ಕಳಿಗೆ ಕೇರಿಬಾತ್,ಗರ್ಭಿಣಿ ಸ್ತ್ರೀಯರಿಗೆ ಬಿಸಿ ಬೇಳೆ ಬಾತ್ ರಾಜ್ಯಾದ್ಯಂತ ಜಾರಿಗೆ ಬಂದ ಹೊಸ ಆಹಾರ ಪದ್ದತಿ. ಇದು ರಾಜ್ಯ ಸರಕಾರದ ಎಫೆಕ್ಟ್! ಉಪ್ಪ್ಪಿಟ್ಟು ಅದೂ ಇದೂ ಅಂತ ಮಕ್ಕಳಿಗೆ ಆಹಾರ ನೀಡುತ್ತಿದ್ದ ಅಂಗನವಾಡಿ ಮೆನು ಬದಲಾಗಿದೆ. ವಾರದಲ್ಲಿ ವಿವಿಧ ಶುಚಿರುಚಿಯ ತಿನಿಸು ಮಕ್ಕಳಿಗೆ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಲಭ್ಯ. ಘಮಘಮ ಕೇಸರಿಬಾತ್, ಬಿಸಿಬೇಳೆ ಬಾತ್ ಹೀಗೆ ಅಂಗನವಾಡಿ ಆಹಾರ ಪದ್ದತಿಗೆ ಬದಲಾವಣೆಯ ಚಾಲನೆ ಸಿಕ್ಕಿದೆ. ವೊಳೆಕ ಬರಿಸಿದ ಹೆಸರು ಕಾಳು, ಚಿತ್ರಾನ್ನಾ, ಮಕ್ಕಳಿಗೆ ಕಾರ್ನ್ ಪಾಪ್ ಮಧ್ಯಾಹ್ನ ಬಿಸಿಬೇಳೆ ಬಾತ್, ಕಲ್ಲರ್ ಕಲ್ಲರ್ ಕೇಸರಿ ಬಾತ್ ಹೊಸಾ ಮೆನು ವೊಟ್ಟೆ, ಹಾಲು ಬಾಳೆಹಣ್ಣು ನೀಡುತ್ತಿದ್ದ ಸರಕಾರ ಮಕ್ಕಳ ಟೇಸ್ಟ್ ಬದಲಾಯಿಸುವ ಮೂಲಕ ಸತ್ವ ಭರಿತ ಆಹಾರ ನೀಡಲು ಮುಂದಾಗಿರೋದು ಒಳ್ಳೆಯ ಬೆಳವಣಿಗೆ.ಆರು ತಿಂಗಳಿಂದ ಮೂರು ವರ್ಷದ ವರೆಗಿನ ಮಕ್ಕಳಿಗೆ ವಾರದಲ್ಲಿ ಆರು ದಿನ ಶಕ್ತಿಯುತ ಆಹಾರ ಸೇವೆನೆಗೆ ಒತ್ತು ನೀಡಲಾಗಿದೆ.
ಇನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ವಾರದಲ್ಲಿ ಎರಡು ದಿನ ಕೇಸರಿಬಾತ್, ಮತ್ತೆರಡು ದಿನ ಬಿಸಿ ಬೇಳೆ ಬಾತ್ ತಯಾರಿ ಸಮಾಗ್ರಿ ಮನೆಗೆ ರವಾನೆಯಾಗಲಿದೆ. ಮನೆಯಲ್ಲಿ ತಮ್ಮಷ್ಟದ ಹಾಗೆ ತಯಾರಿಸಿಕೊಂಡು ಮೆಲ್ಲಬಹುದು.
ಮಕ್ಕಳಿಗೆ ಕೊಡುವ ಬಿಸಿ ಬೇಳೆ ಬಾತ್ನಲ್ಲಿ ನಲವತ್ತು ಗ್ರಾಮ್ ತೂಕದಲ್ಲಿ ಇಪ್ಪತ್ಮೂರು ಗ್ರಾಮ್ ಅಕ್ಕಿ, ನಾಲ್ಕು ಗ್ರಾಮ್ ತೊಗರಿ ಬೇಳೆ, ಹದಿಮೂರು ಗ್ರಾಮ್ ಮೈಕ್ರೋನ್ಯೂಟ್ರಿಯೆಂಟ್ಸ್ ಮಸಾಲ ಇರುತ್ತದೆ. ಇಪ್ಪತ್ತೈ ಗ್ರಾಮ್ ನ್ಯೂಟ್ರಿಕಾರ್ನ್ ಪಾಪ್ ಮತ್ತಿಷ್ಟು ನ್ಯೂಟ್ರಿ ಕೇಸರಿಬಾತ್ ಮಿಕ್ಸ್ ಸೇರಿಕೊಂಡಿದೆ.
ಗಭರ್ಿಣಿ ಮತ್ತು ಇನ್ನಿತರೆ ಸ್ತ್ರೀಯರಿಗೆ ಕೊಡಲಾಗುತ್ತಿರುವ ನೂರು ಗ್ರಾಮ್ ಬಿಸಿ ಬೇಳೆ ಬಾತ್ನಲ್ಲಿ ಐವತ್ತೊಂಬತ್ತು ಗ್ರಾಮ್ ಅಕ್ಕಿ, ಹತ್ತು ಗ್ರಾಮ ತೊಗರಿ ಬೇಳೆ, ಮುವತ್ತೊಂದು ಗ್ರಾಮ್ ಮೈಕ್ರೋನ್ಯೂಟ್ರಿಯೆಂಟ್ಸ್ ಮಸಾಲಾ ಮಿಕ್ಸ್ ಇರುತ್ತದೆ. ನ್ಯೂಟ್ರಿ ಕೇಸರಿಬಾತ್ ಮಿಕ್ಸ್ ನೂರು ಗ್ರಾಮ್. ಅಂಗನವಾಡಿ ಆಹಾರ ಫಲಾನುಭವಿಗಳಿಗೆ ಬಾಯಲ್ಲಿ ನೀರು ಬಂತ ಸ್ವಲ್ಪ ತಡೆಯಿರಿ.
ಈ ವ್ಯವಸ್ಥೆ ಎಲ್ಲಾ ಅಂಗನವಾಡಿಗೂ ಸಿಕ್ಕಿಲ್ಲ. ಪ್ರಯೋಗಿಕವಾಗಿ ಪ್ರತಿ ತಾಲೂಕ್ ಐದು ಅಂಗನವಾಡಿಯಲ್ಲಿ ಈ ವಿನೂತನ ಪಟ್ಟತಿ ಜಾರಿಗೆ ಬಂದಿದೆ. ಇದರ ಸಾಧಕ ಬಾಧಕದ ನಂತರ ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ.
ಈ ಹೊಸ ಪದ್ದತಿ ಜಾರಿಗೆ ತರಲು ರಾಜ್ಯ ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ವಿತರಿಸುವ ಆಹಾರವನ್ನು ಬದಲಾಯಿಸುವ ಕುರಿತು ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಬದಲಾವಣೆಗೆ ಬರಲಾಗಿದೆ. ಆಹಾರ ಪದ್ದತಿಯ ಮೆನು ಬದಲಾಗಿ ಅದರ ಪ್ರಯೋಜನ ಕೆಲ ಅಂಗನವಾಡಿ ಕೇಂದ್ರಗಳಿಗೆ ಸಿಕ್ಕಿದೆ. ಮಕ್ಕಳು ಖಷ್ ಮಕ್ಕಳ ತಾಯಿ ಮತ್ತು ಗರ್ಭಿಣಿಯರೂ ಸಕತ್ ಖಷೀ
ಮಕ್ಕಳು ಮತ್ತು ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಹೊಸ ಆಹಾರ ಪಟ್ಟತಿ ಹೊಟ್ಟೆಗೆ ಒಗ್ಗುತ್ತಾ, ಟೇಸ್ಟಿದೆಯಾ ಎನ್ನೋಬಗ್ಗೆ ಅಂಗನವಾಡಿ ಮೇಲ್ವಿಚಾರಕಿಯರು ವಿಚಾರಿಸಬೇಕಾಗುತ್ತದೆ. ಮೇಲ್ವಿಚಾರಕಿಯರು ಕಲೆ ಹಾಕಿದ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಬೇಕು. ಇಲ್ಲಿ ಕಲೆ ಹಾಕಲಾದ ಮಾಹಿತಿ ಆಧಾರದಲ್ಲಿ ಸಾಧಕ ಬಾಧಕ ಚಚರ್ಿಸಿ ಈ ಯೋಜನೆ ರಾಜ್ಯದ್ಯಂತ ಜಾರಿಗೆ ತರಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಬಿಸಿ ಬೇಳೆ ಬಾತ್, ಕೇಸರಿಬಾತ್ ಎಲ್ಲರಿಗೂ ಸಿಗಲಿ ಅನ್ನೋದು ಎಲ್ಲರ ಆಶಯ.
ಮೆನೂ ಹೋಗಿದೆ :
ವಾರ ಬೆಳಿಗ್ಗೆ ಮಧ್ಯಾಹ್ನ
ಸೋಮವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಮಂಗಳವಾರ ಕಾರ್ನ್ ಪಾಪ್ ಕೇಸರಿಬಾತ್
ಬುಧವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಗುರುವಾರ ಕಾನರ್್ಪಾಪ್ ಕೇಸರಿಬಾತ್
ಶುಕ್ರವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಶನಿವಾರ ಕಾರ್ನ್ ಪಾಪ್ ಕೇಸರಿಬಾತ್

0 comments:

Post a Comment