ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಮುಲ್ಕಿ : ಪವಿತ್ರ ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಸಾವಿರಾರು ಮಂದಿ ಸಮುದ್ರ ಸ್ನಾನಗೈದರು. ದೂರದ ಕಾರ್ಕಳ, ಮೂಡಬಿದಿರೆ, ಬೆಳ್ಮಣ್ಣು ಗಳಿಂದ ವಿಶೇಷ ಬಸ್ಸು ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂಜಾನೆ 2 ಗಂಟೆಯಿಂದಲೇ ಭಕ್ತಾದಿಗಳು ಸಮುದ್ರ ಸ್ನಾನಕ್ಕಾಗಿ ಆಗಮಿಸುತ್ತಿದ್ದರು.
ದೂರದ ಊರುಗಳಿಂದ ಬರುವ ಯಾತ್ರಿಗಳಿಗಾಗಿ ರಾತ್ರಿ ಕಳೆಯಲು ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿಯಲ್ಲಿ 2 ಕಡೆ ಯಕ್ಷಗಾನ ಏರ್ಪಡಿಸಲಾಗಿದ್ದು, ದೂರದೂರಿನ ಭಕ್ತಾದಿಗಳಿಗೆ ಪೂರಕವಾಗಿತ್ತು. ಇದೇ ವೇಳೆ ಹೆಜಮಾಡಿಯಲ್ಲಿ ನೂರಾರು ಭಕ್ತರು ಮಾತಾಪಿತೃಗಳಿಗೆ ತರ್ಪಣ ದೊಂದಿಗೆ ತಿಲಹೋಮ ಇತ್ಯಾದಿ ವಿಧಿವಿಧಾನಗಳನ್ನು ನೆರವೇರಿಸಿದರು.ದೂರದ ಮಹಿಳಾ ಸ್ನಾನಾರ್ಥಿಗಳಿಗೆ ಸ್ಥಳೀಯ ಆಟೋ ಚಾಲಕ-ಮಾಲಕ ಸಂಘದವರು ಬಟ್ಟೆ ಬದಲಾಯಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಪಡುಬಿದ್ರಿ ಪೋಲಿಸರು ಯಾವುದೇ ಅವಘಡ ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ದೋಣಿ ಪ್ರಯಾಣ ಸಹಿತ ವಿವಿಧ ಸೌಲಭ್ಯ ಕಲ್ಪಿಸಲಾಗಿತ್ತು. ಸಂಜೆವರೆಗೆ 50ಸಾವಿರಕ್ಕೂ ಅಧಿಕ ಮಂದಿ ಸಮುದ್ರ ಸ್ನಾನಗೈದರು.
ಚಿತ್ರ - ವರದಿ : ಭಾಗ್ಯವಾನ್ ಮುಲ್ಕಿ

0 comments:

Post a Comment