ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಅವಳಿ ಜಿಲ್ಲೆಯಲ್ಲಿ ನಡೆಯುತ್ತಿದೆ ಜೂಜು
ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ರಂಗಸ್ಥಳದಲ್ಲಿ ಕಲಾವಿದರ ಗಿರಕಿ... ಹೊರಗಡೆ ಗರಗರ ಮಂಡ್ಲದ ಗುಂಡಿನ ಗಿರಕಿ... ಜೋರು! ಸೂರ್ಯ, ಚಂದ್ರ ಖಾಲೀ ಖಾಲಿ. ಎಕ್ಕ, ಕಾಳವರಕ್ಕೆ ಬಾರೀ ನೋಡಿ. ಒಂದಕ್ಕೆ ಎಪ್ಪತ್ತು ದುಡ್ಡು ಹಾಕಿ ಎನ್ನೋ ಕೂಗು ಕಲಾವಿದರ ಅಬ್ಬರಕ್ಕಿಂತಲೂ ಮಿಗಿಲು. ಯಕ್ಷಗಾನ ಆಟಕ್ಕೆ ಗರಗರ ಮಂಡ್ಲ ಶನಿಯಾಗಿ ಕಾಡುತ್ತದೆ. ಯಕ್ಷಗಾನ ಎಲ್ಲಿ ನಡೆದರೂ ಅಲ್ಲಿ ಗರಗರ ಮಂಡ್ಲದ ಸದ್ದಿರುತ್ತದೆ. ಪೇಟೆ, ಪಟ್ಟಣ, ಹಳ್ಳಿ ಪಳ್ಳಿ ಎಲ್ಲೇ ಆಟ ನಡೆದರೂ ಗರಗರ ಮಂಡ್ಲ ಹಾಜರ್. ನೇಮ, ಉತ್ಸವ, ಜಾತ್ರೆ, ಕೋಲಾದಲ್ಲೂ ಗರಗರ ಮಂಡ್ಲದ್ದೇ ಕಾರುಬಾರ್.ಪೊಲೀಸರು ಎದುರುಗಿದ್ದರೂ ಗರಗರ ಮಂಡ್ಲ ಡೋಂಟ್ ಕೇರ್! ಗರಗರ ಮಂಡ್ಲದ ಮಾಲಿಕ ರಾತ್ರಿ ಬೆಳಗಾಗೋದ್ರೊಳಗೆ ಕಿಸೆ ತುಂಬಿಸಿಕೊಳ್ಳುತ್ತಾನೆ. ಆಟದ ವೀಕ್ಷಕ ಆಟವನ್ನೂ ನೋಡದೆ ಬಕ್ಕಣ ಖಾಲಿ ಮಾಡಿಕೊಂಡು ಹ್ಯಾಪ್ ಮೋರೆ ಹಾಕಿಕೊಂಡು ಮನಗೆ ತೆರಳೋದು ಮಾಮೂಲಿ. ಇಷ್ಟೆಲ್ಲಾ ಗರಗರ ಮಂಡ್ಲ, ಮೂರೆಲೆ, ಅಂದರ್ ಬಾಹರ್ ನಡೆಯುತ್ತಿದ್ದರೂ, ಜಿಲ್ಲಾ ಪೊಲೀಸ್ ವರಿಷ್ಟ ಜಿಲ್ಲೆಯಲ್ಲಿ ಅಪಸೌವ್ಯ ನಡೆಯುತ್ತಿಲ್ಲ ಎಂಬ ಪ್ರಮಾಣ ಪತ್ರ ಕೊಡುತ್ತೀರೋದು ನಾಗರಿಕರಿಗೆ ಅಚ್ಚರಿ ಸಂಗತಿ.
ಗರಗರ ಹೆಸರು ಬಂತು ಹೇಗೆ : ಕೋಳಿ ಅಂಕ ಜೂಜಾಟದ ಕೇಂದ್ರವಾಗಿ ಬದಲಾಗುತ್ತಿದೆ. ಅವಳಿ ಜಿಲ್ಲೆಯ ವಸತಿ ಕೇಂದ್ರಗಳಲ್ಲಿ ಇಸ್ಪೀಟ್ ಹಂಗಿಲ್ಲದೆ ನಡೆಯುತ್ತಿದೆ. ರೂಮ್ನಲ್ಲಿ ರಮ್ಮಿ ಮೂರೆಲೆ ಆಟ ನಡೆದರೆ ಬಯಲಲ್ಲಿ ಕೂತು ಗರಗರ ಮಂಡ್ಲೆಕ್ಕೆ ಜನ ದುಡ್ಡು ಸುರಿಯುತ್ತಿದ್ದಾರೆ. ಹಣ ಹಾಕೋರ ಶಕ್ತಿ ಮೇಲೆ ಗರಗರ ಮಂಡ್ಲಕ್ಕೆ ದುಡ್ಡಿ ಬೀಳುತ್ತಿದೆ. ಇಲ್ಲಿ ದೊಡ್ಡು ಕಟ್ಟಿದವ ಕೋಡಂಗಿ ಜೂಜು ನಡೆಸೋರು ವೀರಭದ್ರ ಆಗುತ್ತಾರೆ.
ಬೆಡ್ ಸೀಟ್ ಆಕಾರದ ಒಂದು ಪ್ಲಾಸ್ಟಿಕ್ ಹಾಳಿಯಲ್ಲಿ ಸೂರ್ಯ, ಚಂದ್ರ, ಕಾಳಾವರ ಆಟೀನ್ ಎಕ್ಕ, ಡೈಮಂಡ್, ರಾಜಾ, ರಾಣಿ ಮುಂತಾದ ಚಿಹ್ನೆ ಇರುತ್ತದೆ. ಗರಗರ ಮಂಡ್ಲ ನಡೆಸೋರು ಚಿತ್ರ ವಿರುವ ಚಾಪೆ ಮುಂದೆ ಸ್ಥಾಪನೆ ಆಗುತ್ತಾನೆ. ಕೈಯಲ್ಲಿ ತಗಡಿನದ್ದೋ ಪ್ಲಾಸ್ಟಿಕ್ನದ್ದೋ ಸಣ್ಣ ಕರಡಿಗೆ ಇರುತ್ತದೆ. ಕರಡಿಗೆ ಒಳಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ಇರುವ ಚಿತ್ರದ ನಕಲಿರುವ ಸಣ್ಣದೊಂದು ಗುಂಡಿರುತ್ತದೆ.
ಗರಗರ ಮಂಡ್ಲ ನಡೆಸೋನು ಗುಂಡನ್ನ ಕರಡಿಗೆ ಒಳಕ್ಕೆ ಹಾಕಿ ಅದರ ಮೇಲೆ ಕೈಮುಚ್ಚಿಕೊಂಡು ಛೂ ಮಂತ್ರಕಳಿ ಎನ್ನೋಹಾಗೆ ಗುಂಡನ್ನ ಗರಗರ ತಿರುಗಿಸುತ್ತಾನೆ. ಹೀಗೆ ತಿರುಗಿಸುವಾಗ ಗಿರಾಕಿ ಸೆಳೆಯಲು ದೊಡ್ಡದಾಗಿ ಆಟೀನ್ ಎಕ್ಕ ರಾಜಾ ರಾಣಿ ಖಲೀ ಖಾಲೀ ಅಂತ ಅರಚುತ್ತಾನೆ ಹೀಗೆ ಅರಚುತ್ತಾ ಕೈಯಲ್ಲಿ ತಿರುಗಿಸುತ್ತರುವ ಗುಂಡನ್ನು ಕರಡಿಗೆ ಸಮೀತ ಸೋಯ್ ದಬಕ್ ಎನ್ನೋ ಹಾಗಿ ಚಿತ್ರವಿರುವ ಪಟದ ಮಧ್ಯ ವೊಗಚಿ ಹಾಕುತ್ತಾನೆ. ಹಣ ಕಟ್ಟೋದು ಮುಗಿದ ನಂತರ ಕೌಚಿ ಹಾಕಿದ ಕರಡಿಗೆ ತೆರೆಯುತ್ತಾನೆ.ಗುಂಡಿನ ಮೇಲ್ಗಡೆ ಬಂದ ಚಿತ್ರಕ್ಕೆ ಹಣ ಬುರುತ್ತದೆ. ಒಂದು ರೂ. ಕಟ್ಟಿದರೆ ಗರಗರ ಮಂಡ್ಲ ಓನರ್ 70 ರೂ. ಕೊಡುತ್ತಾನೆ. ಆಸೆ ಯಾರನ್ನು ಬಿಟ್ಟದೆ. ಹಾಗಾಗಿ ಜನ ಸುಲಬದಲ್ಲಿ ಹಣ ಸಿಗುತ್ತೆ ಅಂತ ಮುಗಿಬಿದ್ದು ಹಣ ಕಟ್ಟುತ್ತಾರೆ. ಕ್ಷಣಾರ್ಧದಲ್ಲಿ ಹಣ ಕಾಲಿ. ಹೀಗೆ ಅಂಡೆಯೊಳಗೆ ಗುಂಡು ಹಾಕಿ ಗರಗರ ತಿರುಗಿಸೋದ್ರಿಂದ ಗರಗರ ಮಂಡ್ಲ ಅನ್ನೋ ಹೆಸರು ಬಂದಿದೆ.
ಗರಗರ ಮಂಡ್ಲದ ಚಾಪೆಯಲ್ಲಿ ವಿವಿಧ ರೀತಿಯ ಸುಮಾರು ಎಂಟು ಚಿತ್ರಗಳಿರುತ್ತದೆ. ಹಣ ಬರೋದು ಒಂದೇ ಚಿತ್ರಕ್ಕೆ ಉಳಿದ ಚಿತ್ರಕ್ಕೆ ಕಟ್ಟಿದ ಹಣ ಗರಗರ ಮಂಡ್ಲದಾತನಿಗೆ.
ಅವಳಿ ಜಿಲ್ಲೆಯಲ್ಲಿ 33 ಯಕ್ಷಗಾನ ಮೇಳ : ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಟೆಂಟ್ ಮತ್ತು ಬಯಲಾಟ ಸೇರಿ ಮುವತ್ತೂರು ಯಕ್ಷಗಾನ ಮೇಳವಿದೆ. ಬಯಲಾಟಕ್ಕೆ ಕಡಿಮೆಯೆಂದೂ ಹದಿನೈದು ಸಾವಿರ ರೂ. ಖರ್ಚು ತಗಲುತ್ತದೆ. ಟೆಂಟ್ ಆಟಕ್ಕೆ 30 ಸಾವಿರ ರೂ. ಬೀಳುತ್ತದೆ. ಎಲ್ಲಾ ಮೇಳಗಳ ಸರಿಸುಮಾರು ಲೆಕ್ಕತೆಗೆದರೂ ಅವಳಿ ಜಿಲ್ಲೆಯಲ್ಲಿ ಪ್ರತಿ ರಾತ್ರಿ ಯಕ್ಷಗಾನಕ್ಕಾಗಿ 6.6 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಹಾಗೆ ಆರು ನೂರಕ್ಕೂ ಮಿಕ್ಕ ಕಲಾವಿದರು ಮತ್ತು ಆಳು,ಕಾಳಿಗೆ ಯಕ್ಷಗಾನ ಅನ್ನ ನೀಡುತ್ತಿದೆ. ಸಾಂಸ್ಕೃತಿಕ ಸಂಪತ್ ಭರಿತ ಯಕ್ಷಗಾನಕ್ಕೆ ಗರಗರ ಮಂಡ್ಲ ಎಂಬ ಅನಿಷ್ಟ ಬಗಲುಗಾಣವಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಯಕ್ಷಗಾನಕ್ಕೆ ಗರಗರ ಮಂಡ್ಲದ ಕಾಟವಾದರೆ ಉತ್ತರ ಕನ್ನಡದಲ್ಲಿ ಇಸ್ಪೀಟ್ ಆಟ ಶಾಪವಾಗಿ ಕಾಡುತ್ತಿದೆ. ಟೆಂಟ್ ಒಳಗೆ ಇರುವ ಜನರಿಗಿಂತ ಹೆಚ್ಚಾಗಿ ಟೆಂಟ್ ಪಕ್ಕದ ಮೂರೆಲೆ ಆಟದಲ್ಲಿ ಜನರಿರುತ್ತಾರೆ. ರಾತ್ರಿ ಟೆಂಟ್ ಖಾಲಿಯಾದರೆ ಬೆಳಿಗ್ಗೆ ಟೆಂಟ್ ಫುಲ್! ಇಸ್ಪೀಟ್ ಆಟ ಮುಗಿಸಿಕೊಂಡು ರೆಸ್ಟ್ ತಗೆದುಕೊಳ್ಳಲು ಕಿಲಾಡಿಗಳು ಟೆಂಟ್ ಕುರ್ಚಿ ಆಶ್ರಯಿಸುತ್ತಾರೆ. 12 ಗಂಟೆ ನಂತರ ಟೆಂಟ್ ಆಟ ಫ್ರೀ.
ಮಂಗಳೂರು ಉಡುಪಿ ಜಿಲ್ಲೆಯಲ್ಲಿ ಸುಮಾರು ಯಕ್ಷಗಾನ ಮೇಳದಷ್ಟೇ ಗರಗರ ಮಂಡ್ಲ ಕ್ಯಾಂಪ್ ಇದೆ. ಒಬ್ಬರ ಅಡಿಯಲ್ಲಿ ನಾಲೈದು ನಾಲ್ಕೈದು ಗರಗರ ಮಂಡ್ಲದ ಪಟದ ಹಾಳೆಯಿರುತ್ತದೆ. ಹಾಳೆ ಮಡಿಚಿ ಕಂಕಲಲ್ಲಿಟ್ಟುಕೊಂಡು ಕರಡಿಗೆ ಮತ್ತು ಗುಂಡು ಪ್ಯಾಂಟ್ ಕಿಸೆಗೆ ತುರುಕಿ ಹೊರಟರಾಯಿತಿ. ಇದಕ್ಕೆ ಲಕ್ಷಾಂತರದ ಬಂಡವಾಳವೂ ಬೇಡ. ಕಡಿಮೆ ಬಂಡವಾಳದಲ್ಲಿ ಹೆಚ್ಚು ದುಡ್ಡು ಮಾಡೋ ದಂದೆಯಿದ್ದರೆ ಅದು ಗರಗರ ಮಂಡ್ಲ!
ಜೂಜಾಟದ್ದೇ ಕಾರುಬಾರು : ಜೂಜು ಎನ್ನೋದು ಮಾಮೂಲಾಗಿ ಹೋಗಿದೆ. ಜೂಟದ ಪರಿಕೂಡಾ ಥರಹೇವಾರಿ. ಓಸಿ ಯಿಂದ ಹಿಡಿದು ಕೋಳಿ ಅಂಕದವರೆಗೆ, ಗರಗರ ಮಂಡ್ಲಿದಿಂದ ಆರಂಭವಾಗಿ ಅಂದರ್ ಬಾಹರ್ ವರಗೆ ಜೂಜು ಅಬಾಧಿತ.
ಮೇಲ್ಸ್ತ್ ರ ಜನರು ಜೂಜಾಟಕ್ಕೆ ವಸತಿ ಗೃಹ ಆಶ್ರಯಿಸಿದರೆ, ಕೂಲಿ ನಾಲಿ ಮಾಡೋರು ಮತ್ತು ಮಧ್ಯಮ ವರ್ಗದವರಿಗೆ ಓಸಿ, ಗರಗರ ಮಂಡ್ಲಕ್ಕೆ ದುಡ್ಡು ಹಾಕುತ್ತಿದ್ದಾರೆ. ಮೂರೆಲೆ ಅಂದರ್ ಬಾಹರ್ಗೆ ಗೋಣಿ ಚೀದಲ್ಲಿ ದುಡ್ಡು ಬೇಕಾಗುತ್ತದೆ. ಸಾವಿರ ರೂ.ವರಗೆ ರಮ್ಮಿ ಆಟದ ಪಾಯಂಟ್ ಇರುತ್ತದೆ. ಕೋಳಿ ಅಂಕದ ಬೆಟ್ ಕೂಡ ಸಾವಿರ ರೂ.ಲೆಕ್ಕಚಾರದಲ್ಲಿ ನಡೆಯುತ್ತದೆ. ಪೊಲೀಸರು ಆಗೊಮ್ಮೆ, ಈಗೊಮ್ಮೆ ರೈಡ್ ಮಾಡಿ ಮತ್ತೆ ಸುಮ್ಮನಾಗೋದ್ರಿಂದ ಜಚಜಚ ನಿರಂತರ. ಇದರಿಂದ ಜೂಜುಗಾರರ ಕುಟುಂಬ ಕಣ್ಣಿರಲ್ಲಿ ಕೈತೊಳೆಯುತ್ತಿದೆ. ಪೊಲೀಸ್ ಜೂಜಾಟಕ್ಕೆ ಕಡಿವಾಣ ಹಾಕದಿದ್ದರೆ ಹತ್ತಾರು ಕುಟುಂಬ ಬೀದಿಗೆ ಬರಲಿದೆ. ಅದಲ್ಲದೆ ಬಟ್ಟಂಬಯಲಲ್ಲಿ ಜೂಜು ನಡೆಯುತ್ತಿದ್ದರೂ, ಅದನ್ನ ತಡೆಯೋಕೆ ಆಗೋಲ್ಲ ಅನ್ನೊದು ಚಿದಂಬರ ರಹಸ್ಯ. ಬೀಡಾ ಅಂಗಡಿ ಹಾಡಿ ಮಗ್ಗಲು ಆಟದ ಗೆರ ಜೂಜಾಟದ ತಾಳವಾಗಿ ಬದಲಾಗುತ್ತಿರೋದು ಚಿಂತೆಯ ಸಂಗತಿ

0 comments:

Post a Comment