ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಜಕೀಯ

ಸ್ವಾತಂತ್ರ್ಯ ಭಾರತದಲ್ಲಿ ಶುದ್ಧ ಹಸ್ತದ ರಾಜಕಾರಣಿಗಳು ಕಂಡದ್ದು ಬಹಳ ವಿರಳ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಚಂದ್ರಶೇಖರ್ ಅರಸ್, ಹೆಗಡೆ, ಶರದ್ ಯಾದವ್ ಸೇರಿದಂತೆ ಇತ್ತೀಚಿನ ಶಿವರಾಜ್ ಸಿಂಗ್ ಚೌಹಾನ್ ತನಕ ಎಲ್ಲರೂ ಲಂಚ ತಿಂದವರೇ, ಆದರೆ ಹಿಂದಿನ ದಶಕದಲ್ಲಿ ಲಂಚಬಾಕತನ ಅಮಾನವೀಯವಾದಷ್ಟು ಎಂದೂ ಆಗಿರಲಿಲ್ಲ.
ಬೋಪಾಲ್ ಅನಿಲ ದುರಂತದಂತಹ ಒಂದೆರಡು ಘಟನೆಗಳಲ್ಲಿ ರಾಜಕಾರಣಿಗಳ ಅಮಾನವೀಯ ಮುಖದ ಪರಿಚಯವಾಗಿದ್ದು ಹೊರತುಪಡಿಸಿದರೆ ಎಂದೂ ರಾಜಕೀಯ ಹಿಂದಿನ ದಶಕದಷ್ಟು ಕೊಳಕಾಗಿರಲಿಲ್ಲ; ಅಮಾನವೀಯವಾಗಿರಲಿಲ್ಲ. ಹಿಂದಿನ ದಶಕದಲ್ಲಿ ರಾಜಕೀಯಯಾವ ಸ್ಥಿತಿ ತಲುಪಿತು ನೋಡಿ. ಅದರಲ್ಲೂ ಕೊನೆಯ 2 - 3 ವರುಷ ನಮ್ಮ ರಾಜಕಾರಣಿಗಳು ಕಾಮುಕ ಮಧ್ಯರಾತ್ರಿ ಬೆತ್ತಲೆ ವೇಶ್ಯೆಯನ್ನು ನೋಡಿದರೆ ಹೇಗೆ ಮುಗಿ ಬೀಳಬಹುದೋ ಅದೇ ರೀತಿ ಹಣ ದೋಚಿದರು.

ನೂರಾರು ವರುಷ ಭಾರತವನ್ನು ಆಳಿದ ಬ್ರಿಟಿಷರು ಲೂಟಿ ಮಾಡಿದ್ದು 900ಕೋಟಿ ರುಪಾಯಿ.ಅದು ಈಗಿನ ರುಪಾಯಿ ಲೆಕ್ಕದಲ್ಲಿ. ಕೇಂದ್ರ ಸರಕಾರದ ಸಚಿವ ಎ.ರಾಜಾ ಕಡಿಮೆ ಮೊತ್ತಕ್ಕೆ 2ಜಿ ಸ್ಪೆಕ್ಟ್ರಂ ಹಂಚಿಕೆ ಮಾಡಿ ಸರಕಾರಕ್ಕೆ 1.74 ಕೋಟಿ ರುಪಾಯಿಗೂ ಅಧಿಕ ನಷ್ಟ ಮಾಡಿದ್ದಾರೆ ಎಂದು ಜಯಲಲಿತಾ ಹೇಳಿದ್ದಾರೆ.ರಾಜಾರ ಬಗ್ಗೆ ಇದ್ದಂತಹ ಆರೋಪ ಸತ್ಯ ಎನ್ನುವುದು ಸಿ.ಎನ್.ಎನ್ ಐ.ಬಿ.ಎನ್ ಖಾಸಗೀ ಸುದ್ದಿ ವಾಹಿನಿ ನೀಡಿರುವ ದಾಖಲೆಗಳು ಖಚಿತ ಪಡಿಸಿವೆ. ಈ ಹಗರಣವನ್ನು Mother of all Scandals ಎಂದು ಕರೆಯಲಾಗುತ್ತಿದೆ.

ನೆರೆ ಸಂತ್ರಸ್ತರಿಗೆ ಸಲ್ಲಬೇಕಾದ ಹಣವನ್ನು ದುರ್ಬಳಕೆ ಮಾಡಲಾಯಿತು. ಕಾರ್ಗಿಲ್ ಯುದ್ದದಲ್ಲಿ ಮಡಿದವರ ಪತ್ನಿಯರಿಗೆ ತಯಾರಾದ ಮನೆಗಳನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾನ್ ತಮ್ಮ ಅತ್ತೆ ನಾದಿನಿಯರಿಗೆಲ್ಲ ನೀಡಿದರು. ದೇಶದಲ್ಲಿ ಬಡತನ ಹಸಿಯಾಗಿರುವಾಗಲೇ ಜನಪ್ರತಿನಿಧಿಗಳು ತಮ್ಮ ಸಂಬಳ ಸವಲತ್ತುಗಳನ್ನು ಹಲವಾರು ಪಟ್ಟು ಏರಿಸಿಕೊಂಡರು.


ಮುಂಬೈನ ತಾಜ್ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಸಮಸ್ತ ದೇಶಕ್ಕೆ ದಿಗ್ಭ್ರಮೆಯಾದಾಗ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ತನ್ನ ಮಗನನ್ನು ಸಿನಿಮಾ ನಿರ್ದೇಶಕರೊಂದಿಗೆ ತಾಜ್ ಹೊಟೇಲ್ ಗೆ ಕರೆದೊಯ್ದಿದ್ದರು.ನಿರ್ದೇಶಕ ರಾಂ ಗೋಪಾಲ್ ವರ್ಮಾ ದೇಶ್ ಮುಖ್ ಅವರ ಮಗ ರಿತೇಶ್ ದೇಶ್ ಮುಖ್ ಅವರನ್ನು ಹೀರೋ ಮಾಡಿ ಭಯೋತ್ಪಾದಕ ದಾಳಿಯ ಕುರಿತು ಸಿನೆಮಾ ಮಾಡಲು ಸಿದ್ಧರಾಗಿದ್ದರು..!
ಸಿನೆಮಾದ ಪೂರ್ವ ಸಿದ್ಧತೆಗಾಗಿ ವಿಲಾಸ್ ರಾವ್ ಮಗನನ್ನು ಮತ್ತು ನಿರ್ದೇಶಕರನ್ನು ತಾಜ್ ಹೊಟೇಲ್ ಗೆ ಕೊಂಡೊಯ್ದಿದ್ದರು.ಇದನ್ನು ಅಮಾನವೀಯ ಅನ್ನದೆ ಬೇರೆ ವಿಧಿಯಿಲ್ಲ. ಇಂತಹ ದೇಶ್ ಮುಖ್ ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಅಶೋಕ್ ಚೌಹಾನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ಇವರು ದೇಶಕ್ಕಾಗಿ ಮಡಿದವರ ಕುಟುಂಬಕ್ಕೆಂದು ನಿರ್ಮಿಸಲಾದ ಮನೆಗಳನ್ನು ತನ್ನ ನಾದಿನಿಗೆ ನೀಡಿದರು. ದೇಶ್ ಮುಖ್ ರಷ್ಟೇ ಅಮಾನವೀಯ ಕೃತ್ಯವೆಸಗಿದರು ಚೌಹಾಣ್. ಹಿಂದೆ ರಾಜಕೀಯದಲ್ಲಿ ಅಪರೂಪಕ್ಕೆ ಎಂಬಂತೆ ಟೈಟ್ಲರ್ ನಂತಹ ಅಮಾನವೀಯರು ಕಾಣಿಸುತ್ತಿದ್ದರೇ ಹೊರತು ಈ ರೀತಿ ಪ್ರಾಮಾಣಿಕರನ್ನು ಅಮಾನವೀಯರ ನಡುವೆ ಹುಡುಕುವ ಪರಿಸ್ಥಿತಿ ಇರಲಿಲ್ಲ. ಇವುಗಳನ್ನು ಗಮನಿಸಿದರೆ ಸ್ವತಂತ್ರ ಭಾರತದಲ್ಲಿ ಈ ತನಕ ರಾಜಕೀಯವೆಂದೂ ಇಷ್ಟು ಹೊಲಸಾಗಿರಲಿಲ್ಲ ಅನ್ನಿಸದೇ ಇರದು. ಬಹಳ ಹಿಂದೆ ಒಬ್ಬ ರಾಜಕಾರಣಿ ಎರಡು ಬಾರಿ ಪಕ್ಷಾಂತರ ಮಾಡಿದ ಎಂದು "ಆಯಾ ರಾಮ್ ಗಯಾ ರಾಮ್ " ಎಂಬ ಅಮರ ಜೋಕು(!)ಅವನ ಬಗ್ಗೆ ಹುಟ್ಟಿಕೊಂಡಿತ್ತು. ಈಗ ಪಕ್ಷಾಂತರ ಎಂಬುದುತೀರಾ ಸಾಮಾನ್ಯವಾಗಿದೆ. ನಿನ್ನೆ ಮೊನ್ನೆಯಷ್ಟೇ ಎಂ.ಎಲ್.ಎ ಆದ ಅಸ್ನೋಟಿಕರ್ ಎರಡನೇ ಬಾರಿ ಪಕ್ಷಾಂತರ ಮಾಡುವ ಹೊಸ್ತಿಲಲ್ಲಿದ್ದಾರೆ.

ಮುಂಚೆ ರಾಜಕಾರಣಿಗಳು ಏನೇ ಅವಘಡಗಳನ್ನು ಮಾಡಿದರು ಅವರಿಗೆ ಒಂದಷ್ಟು ಸಿದ್ಧಾಂತಗಳಿರುತ್ತಿದ್ದವು. ರಾಮಕೃಷ್ಣ ಹೆಗಡೆಯವರು ಜಪ್ಪಯ್ಯಾ ಎಂದರೂ ಪಂಚಾಯತ್ ಯೋಜನೆ ಬಿಡಲಿಲ್ಲ.ಮೌಲ್ಯಾಧಾರಿತ ರಾಜಕೀಯದ ಬಗ್ಗೆಯೇ ಮಾತನಾಡಿದರು. ಬಂಗಾರಪ್ಪ ಎಷ್ಟು ಹಗರಣಗಳನ್ನು ಮಾಡಿದರೂ ಕೃಷಿಕರ ಪಂಪ್ ಸೆಟ್ಟಿಗೆ ಉಚಿತ ವಿದ್ಯುತ್ ಕೂಡಾ ನೀಡಿದರು. ಇಂದಿರಾ ಗಾಂಧಿ ಲಂಚನ ನಡುವೆಯೂ ಪಾಕಿಸ್ತಾನದ ಒಂದು ಭಾಗವನ್ನು ಒಡೆದ ಭಾರತದ ವೈರಿಯ ಬಲ ಕುಗ್ಗಿಸಿದರು.

ರಾಜೀವ್ ಗಾಂಧಿ ಬೋಫೋರ್ಸ್ ಹಗರಣದ ನಡುವೆಯೂ ಭಾರತದಲ್ಲಿ ಟೆಲಿಫೋನ್ ವ್ಯವಸ್ಥೆ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಡ್ವಾಣಿ ಅಯೋಧ್ಯೆ ಗಲಭೆಯ ನಡುವೆಯೂ ಅಲ್ಪಸಂಖ್ಯಾತರಿಗೆ ನೀಡುವ ವಿಶೇಷ ಸವಲತ್ತುಗಳನ್ನು ತೆಗೆಯುವುದಾಗಿ ಭರವಸೆ ನೀಡಿದರು. ಅವರೆಲ್ಲರೂ ತಮ್ಮ ಲಂಚ, ಕೊಳಕು ಕೆಲಸಗಳ ನಡುವೆ ಒಂದಷ್ಟು ಸಿದ್ಧಾಂತಗಳನ್ನು ಇಟ್ಟುಕೊಂಡಿದ್ದರು. ಜನರಿಗೆ ಭರವಸೆ ನೀಡಿದ್ದರು. ಆ ಭರವಸೆಯಿಂದ ಜನ ದೇಶದ ಬಗ್ಗೆ ಒಂದಿಷ್ಟು ಕನಸು ಕಟ್ಟಿಕೊಂಡಿದ್ದರು. ಹೆಗಡೆಯವರನ್ನು ನಂಬಿದವರು ಗ್ರಾಮ ಸ್ವರಾಜ್ಯ ಬರುತ್ತದೆಯೆಂಬ ಕನಸು ಕಟ್ಟಿಕೊಂಡಿದ್ದರು. ಬಂಗಾರಪ್ಪನವರನ್ನು ನಂಬಿದವರು ಉಚಿತ ವಿದ್ಯುತ್ ಮೂಲಕ ಕೃಷಿಕರೆಲ್ಲ ಉದ್ಧಾರವಾಗುತ್ತಾರೆ ಎಂಬ ಕನಸು ಕಂಡರು. ಇಂದಿರಾ ಗಾಂಧಿ ನಂಬಿದವರು ಭಾರತ ಸೋವಿಯತ್ ರಷ್ಯಾ ಜೊತೆ ಸೇರಿ ಬಲಾಢ್ಯವಾಗುತ್ತದೆ , ಇಂದಿರಾ ಪಾಕಿಸ್ತಾನವನ್ನು ಸದೆಬಡಿಯುತ್ತಾರೆ ಎಂಬ ಕನಸು ಕಟ್ಟಿಕೊಂಡರು. ರಾಜೀವ್ ಗಾಂಧಿಯವರನ್ನು ನಂಬಿದವರು ಭಾರತ ಟೆಕ್ನೋಲಜಿಯಲ್ಲಿ ಬೆಳೆದು ಸೂಪರ್ ಪವರ್ ಆಗುತ್ತದೆ ಎಂದು ಕನಸು ಕಟ್ಟಿಕೊಂಡರು.

ಹೀಗೆ ದೇಶದ ರಾಜಕಾರಣಿಗಳು ಜನರಿಗೆ ಭರವಸೆ ನೀಡುತ್ತಾ ನಂಬಿಸುತ್ತಾ ಮತ ಪಡೆದು ಮುನ್ನಡೆಯುತ್ತಿದ್ದರು. ಆ ಭರವಸೆಗಳೇ ಜನರಲ್ಲಿ ಕನಸು ಹುಟ್ಟು ಹಾಕುತ್ತಿತ್ತು. ಈಗ ನೋಡಿ ಕನಸಲ್ಲ ಒಂದು ಭ್ರಮೆಯನ್ನು ರಾಜಕಾರಣಿಗಳು ಕಟ್ಟಿಕೊಡುತ್ತಿಲ್ಲ. ಎ.ರಾಜಾ, ಅಶೋಕ್ ಚೌಹಾಣ್, ಸೋನಿಯಾ ಗಾಂಧಿ, ಗಡ್ಕರಿ ಇವರೆಲ್ಲ ನಂಬಬಹುದಾದ ಯಾವುದಾದರೂ ಭರವಸೆ ನೀಡಿದ್ದಾರೆಯೇ? ಇವರಲ್ಲಿ ಹಲವರು ಭರವಸೆಯನ್ನೇ ನೀಡಲಿಲ್ಲ. ಇವರಿಂದ ದೇಶ ಕಟ್ಟುವ ಕೆಲಸ ಸಾಧ್ಯವೇ? ಎ.ರಾಜಾರನ್ನು ವೇದಿಕೆ ಮೇಲೆ ನಿಲ್ಲಿಸಿ ಒಂದು ಲಕ್ಷ ಮತದಾರರನ್ನು ಎದುರಿಗೆ ಕೂರಿಸಿ ನೋಡಿ ಅವರು ಸುಳ್ಳು ಭರವಸೆಯನ್ನೂ ಮತದಾರರಿಗೆ ನೀಡಲಾರರು! ಜನ ಹೇಗೆ ಕನಸು ಕಟ್ಟಲು ಸಾಧ್ಯ?

ನೀವು ಏನೇ ಹೇಳಿ ಭ್ರಷ್ಟಾಚಾರ ರಾಜಕೀಯದ ಅಂಗವೆಂದು ಭಾರತೀಯರು ಒಪ್ಪಿಕೊಂಡಿದ್ದಾರೆ. " ಅವನೊಬ್ಬ ರಾಜಕಾರಣಿ ಹತ್ತು ಸಾವಿರ ರುಪಾಯಿ ಲಂಚ ಪಡೆದು ನನಗೆ ನೌಕರಿ ಕೊಡಿಸಿದ" ಎಂದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. "ಪುಕ್ಸಟೆ ನೌಕರಿ ಕೊಡಿಸಲಿ ಎಂದು ಇವನು ಬಯಸಿದ್ದನೆ" ಎಂದು ನಿಮ್ಮನ್ನೇ ನೋಡಿ ಜನ ಆಶ್ಚರ್ಯ ಪಡಬಹುದು. ಭ್ರಷ್ಟಾಚಾರ ಒಪ್ಪಿಕೊಂಡಿದ್ದಾರೆ ಆದರೆ ಈ ಪ್ರಮಾಣದ ಭ್ರಷ್ಟಾಚಾರವನ್ನಲ್ಲ. ಇಂತಹ ಅಮಾನವೀಯ ಕೃತ್ಯಗಳನ್ನಲ್ಲ. ಅದು ತಿಳಿದೇ ಸೋನಿಯಾ ಗಾಂಧಿ ಚೌಹಾಣ್ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ್ದು. ಸುರೇಶ್ ಕಲ್ಮಾಡಿಯ ತಲೆದಂಡ ಪಡೆದದ್ದು. ಆದರೆ ಅವರಿಬ್ಬರೂ ಮಾಡಿದ ತಪ್ಪಿಗೆ ರಾಜಾ ಮಾಡಿದ ದೇಶದ್ರೋಹದ ಕೆಲಸಕ್ಕೆ ಪದವಿಯಿಂದ ಕೆಳಗಿಳಿಸಿದರೆ ಸಾಲದು, ಬದಲಾಗಿ ದೇಶದ ಒಬ್ಬ ಸಾಮಾನ್ಯ ನಾಗರೀಕ ಅಂತಹ ತಪ್ಪುಗಳನ್ನು ಮಾಡಿದರೆ ಯಾವ ಕ್ರಮ ಕೈಗೊಳ್ಳುತ್ತಿದ್ದರೋ ಅದೇ ಕ್ರಮ ಕೈಗೊಳ್ಳುವಂತಾಗಲಿ. ಹಾಗಾಗದಿದ್ದರೆ ದೇಶ್ ಮುಖ್ ಅವರನ್ನು ಅಶೋಕ್ ಚೌಹಾಣ್ Replace ಮಾಡಿದಂತೆ ರಾಜಾರನ್ನು ಮೀರಿಸುವ ಇನ್ನೂ ದೊಡ್ಡ ರಾಜಾ ಅರ್ಥಾತ್ ಕಳ್ಳ ಮಂತ್ರಿಯಾಗಬಹುದು.

- ಆದಿತ್ಯ ಭಟ್

11 comments:

Anonymous said...

ಲೇಖನ ಚೆನ್ನಾಗಿದೆ. ವಿನ್ಯಾಸವೂ ಪೂರಕವಾಗಿದೆ. ಈ ಕನಸಿಗೆ ಎರಡು ವರುಷ ಪೂರ್ಣವಾಗಿದ್ದಕ್ಕೆ ಶುಭಾಶಯಗಳು. ಒಳ್ಳೆಯದಾಗಲಿ.
ವಾಣಿಶ್ರೀ ಬೆಂಗಳೂರು

Anonymous said...

ಆದಿತ್ಯ ಭಟ್ ಅವರೇ ರಾಜಕಾರಣಿಗಳ ಅಸಲಿ ಮುಖ ಬಹಿರಂಗ ಮಾಡಿದ್ದೀರಾ...ಗುಡ್ ಲಕ್.
ಪ್ರೀತಂ, ಮಂಗಳೂರು.

Anonymous said...

good.very nice...

Anonymous said...

ಲೇಖನ ವಿಚಾರಪೂರ್ಣವಾಗಿದೆ. ಭ್ರಶ್ಟಾಚಾರದ ಅವತಾರ ದರ್ಶನವಾಗುತ್ತದೆ.

Anonymous said...

bhrasta rajakaranigala nijaroopa bayalu madiddira aditya....intaha lekhanagalige svagata....

lata hegde,honnavar.

Anonymous said...

ಸ್ವಾತಂತ್ರ್ಯಕ್ಕೆ ಮೊದಲು ನಮ್ಮೊಳಗೆ ಬೆಳಕಿತ್ತು ಹೊರಗಡೆ ಕತ್ತಲಿತ್ತು,ಈಗ ನಮ್ಮೊಳಗೆ ಕತ್ತಲಿದೆ ಹೊರಗಡೆ ಬೆಳಕಿದೆ ಎಂಬ ಲೋಹಿಯಾರ ಈಗಿನ ರಾಜಕೀಯ ಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ.ಎಂದೂ ಸಾದ್ಯವಾಗದ ಬದಲಾವಣೆಯ ನಿರೀಕ್ಶೆಯಲ್ಲಿ ನವಿದ್ದೇವೆ.ಈ ಲೇಖನ ಪ್ರಸ್ತುತ ರಾಜಕೀಯದ ಅಸಲಿಯತ್ತನ್ನು ನಮ್ಮ ಮುಂದಿಟ್ಟಿದೆ.
ಕೌಶಿಕ್ ಪರಾಡ್ಕರ್

Anonymous said...

lekhana arthapurnavagide.....
lata hegde,honnavar.

dr vaishali naik said...

hi aditya,a very good topic and is very nicely written. ya! politics and corruption r like the two sides of a coin.But we should always be aware that corruption,grows only when it is supported,by the people.just cant understand why nobody raises voice against it, even if anyone does,it'll be probably by another politician ,for his personal welfare.We all need to change,to make India the best place to live.........

Anusha said...

hi sir..good article..:)
Anusha..

Anonymous said...

nice article Adi.....................

Anonymous said...

hai sir nice article :)ravikiran frm 3rd BA (HPS)

Post a Comment