ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಉಜಿರೆ: ಸರಕಾರ ಅಂದರೆ ಹೀಗೇನೇ...ಯಾವುದರಲ್ಲೂ ಒಂದು ಶಿಸ್ತು ಎಂಬುದಿಲ್ಲ. ಏನು ಮಾಡಿದರೂ ನಡೆಯುತ್ತೆ ಎಂಬ ಮೊಂಡು ದೈರ್ಯ.ಇದಕ್ಕೊಂದು ಸಣ್ಣ ನಿದರ್ಶನ ಉಜಿರೆ ಸಮೀಪದಲ್ಲಿರುವ ಈ ಸರಕಾರಿ ಕಟ್ಟಡ. ಕೊಕ್ಕಡದಲ್ಲಿರುವ "ಕರ್ನಾಟಕ ಗೇರು ಅಭಿವೃದ್ಧಿ ನಿಗಮ-ಪುತ್ತೂರು ವಿಭಾಗ,1984ನೇ ಗೇರುತೋಟ ಕೊಕ್ಕಡ ಬ್ಲಾಕ್ 3 ಜೋಡುಮಾರ್ಗ"ಎಂಬ ಫಲಕವನ್ನು ಹೊತ್ತಿರುವ ಕಟ್ಟಡ ಈಗ ಪುಂಡು ಪೋಕರಿಗಳ ಅಡ್ಡೆಯಾಗಿ ಪರಿವರ್ತನೆಗೊಂಡಿದೆ . ಈ ಕಛೇರಿಯನ್ನು ಸಿಬ್ಭಂದಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದಕ್ಕೆ ಇಲ್ಲಿರುವ ಬಿರುಕು ಬಿಟ್ಟ ಗೋಡೆಗಳು,ಮುರಿದುಬಿದ್ದ ಕಿಟಕಿ ಬಾಗಿಲುಗಳೇ ಸಾಕ್ಷಿ.
ಗೇರುಕೃಷಿಯ ರೋಗಗಳಿಗೆ ಕಾರಣವಾದ ಮಾರಕ ಕೀಟಾಣುಗಳ ಹತೋಟಿಗೆ ಎಂಡೋಸಲ್ಫಾನ್ ಸಿಂಪಡಿಸಲಾಗುತ್ತಿತ್ತು. ಇದರ ಪರಿಣಾಮ ಇಲ್ಲಿನ ಅನೇಕ ಕುಟುಂಬಗಳು ಇದರ ಪರಿಣಾಮ ಅನುಭವಿಸಬೇಕಾಗಿ ಬಂದವು. ಜನತೆ ಎಂಡೋಸಲ್ಫಾನ್ ಮಾರಕ ವಿಷಕ್ಕೆ ತತ್ತರಿಸಿ ಹೋದರು. ಅನೇಕರು ಅನೇಕ ರೋಗ ರುಜಿಗಳಿಗೆ ಬಲಿಯಾದರು. ಅಂಗವೈಕಲ್ಯ, ಇತರ ತೊಂದರೆಗಳು ಪ್ರತಿ ಮನೆಗಳಲ್ಲೆಂಬಂತಾದವು. ಇವಕ್ಕೆಲ್ಲಾ ಕಾರಣವಾದ ಈ ಕಟ್ಟಡ ಇಂದು ರೋಗಗ್ರಸ್ಥವಾಗಿದೆ.
ಕೆಲವರ್ಷಗಳ ಹಿಂದೆ ಗೇರು ಬೆಳೆ ಹೆಚ್ಚಿಸಲೆಂದು ಮಾರಕವಾದ ಎಂಡೋಸಲ್ಫಾನ್ಅನ್ನು ಸಿಂಪಡಿಸಿ ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾದ ಈ ಇಲಾಖೆ ಇಂದು ತನ್ನ ಕಛೇರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶ.ಈ ಕಟ್ಟಡವು ಜನವರಿ ಹಾಗು ಎಪ್ರಿಲ್ ತಿಂಗಳ ನಡುವೆ ಗೇರುಗುತ್ತಿಗೆದಾರರು ಉಳಿದುಕೊಳ್ಳುವ ವಸತಿಗೃಹವೆಂದರೆ ಯಾರೂ ಅಚ್ಚರಿಗೊಳ್ಳಬಹುದು! ಏಕೆಂದರೆ ಗೋಡೆಯ ಮೇಲೆ ರಾರಾಜಿಸುತ್ತಿರುವ ಅಶ್ಲೀಲ ಚಿತ್ರಗಳು ಹಾಗೂ ಬರಹಗಳು,ನೆಲದ ತುಂಬೆಲ್ಲಾ ಹರಡಿರುವ ಸಿಗರೇಟಿನ ಖಾಲಿ ಪ್ಯಾಕೆಟ್ಗಳು ಇದೊಂದು ಸರಕಾರಿ ಕಛೇರಿಯೇ ಎಂಬ ಪ್ರಶ್ನೆಯನ್ನು ಜನಸಾಮಾನ್ಯನ ಮುಂದಿಡುತ್ತದೆ.
ಎಂಡೋಸಲ್ಫಾನ್ ಬಳಸಿ ಬಡಜನರ ಜೀವದ ಜೊತೆಗೆ ಚೆಲ್ಲಾಟವಾಡಿದ ಇಲಾಖೆ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತು ವ್ಯವಸ್ಥೆಯನ್ನು ಸರಿಪಡಿಸಬೇಕೆಂಬುದು ಈ ಭಾಗದ ಜನರ ಆಶಯ.
- ದೀಪ್ತಿ
ಪತ್ರಿಕೋದ್ಯಮ ವಿಭಾಗ, ಶ್ರೀ.ಧ.ಮ. ಕಾಲೇಜು ಉಜಿರೆ.

0 comments:

Post a Comment