ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
2010 ನೇ ವರ್ಷದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟಿದ್ದು 'ಭ್ರಷ್ಟಾಚಾರ' ವಿಷಯವಾಗಿ. ಏಕೆಂದರೆ ಈ ವರ್ಷ ನಮ್ಮ ರಾಜಕೀಯ ಭ್ರಷ್ಟಚಾರ ಸ್ಪೋಟಗೊಂಡು ಇಲ್ಲಿನ ರಾಜಕೀಯ ಲೆಕ್ಕಚಾರಗಳನ್ನೆ ಬುಡಮೇಲನ್ನಾಗಿಸಿತು. ಅದಕ್ಕಾಗಿಯೆ ಈ ವರ್ಷವನ್ನು ಭ್ರಷ್ಟ ರಾಜಕಾರಣಿಗಳ ವರ್ಷ ಎಂದರೆ ತಪ್ಪಾಗಲಾರದು. ಡಿ.9ನ್ನು ಪ್ರತಿವರ್ಷ ಅಂತರಾಷ್ಟ್ರೀಯ ಭ್ರಷ್ಟಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಆ ದಿನದಂದು ಮೈಕಿನ ಮುಂದೆ ನಿಂತು ಭ್ರಷ್ಟಾಚಾರದ ಬಗ್ಗೆ ಫುಂಖಾನುಪುಂಖವಾಗಿ ಭಾಷಣ ಬಿಗಿಯುವ ವ್ಯಕ್ತಿಯ ಚರಿತ್ರೆಯೂ ಸಹ 'ಭ್ರಷ್ಟಾಚಾರ' ರಹಿತವಾಗಿರುತ್ತದೆ ಎನ್ನುವುದರ ಯಾವ ಗ್ಯಾರಂಟಿಯನ್ನು ನಾವು ನೀಡಕಾಗಲ್ಲ.ಏಕೆಂದರೆ ಇಂದು ಭ್ರಷ್ಟಚಾರ ಎನ್ನುವುದು ರಕ್ತದಂತೆ ನಮ್ಮ ದೇಹದ ತುಂಬೆಲ್ಲ ಹರಿದಾಡುತ್ತಿದೆ. ವ್ಯವಸ್ಥೆಯ ಹಾಗೆ ಆಗಲು ಕಾರಣ ಯಾರು? ಎನ್ನುವ ಪ್ರಶ್ನೆ ಹುಡುಕಲು ಹೋದರೆ ಬಹಳ ಗಜಲಿನಲ್ಲಿ ಸಿಲುಕೊಳ್ಳಬೇಕಾದೀತು. ಆದ್ದರಿಂದ ಈ ವ್ಯವಸ್ಥೆ ಹೇಗಾದರೂ ಇರಲಿ. ಮೊದಲು ನಾವು ನಮ್ಮ 'ಮನೆ' ಮತ್ತು 'ಮನ'ವನ್ನು ಇಣುಕಿ ನೋಡುವ. ಎಷ್ಟರ ಮಟ್ಟಿಗೆ ನಾವು ಈ ಭ್ರಷ್ಟಾಚಾರ ಎನ್ನುವ ಪೆಡಂಭೂತ ಹುಟ್ಟಲು, ಬೆಳೆಯಲು ಮತ್ತು ತನ್ನ ಕಬಂಧಬಾಹುಗಳನ್ನು ಚಾಚಲು ಕಾರಣೀಕರ್ತರಾಗಿದ್ದೇವೆ ಎನ್ನವುದು ಸ್ಪಷ್ಟವಾಗುತ್ತದೆ.

ಭ್ರಷ್ಟಾಚಾರ ಪದಕ್ಕೆ ನಿಘಂಟಿನಲ್ಲಿ ದುರಾಚಾರ,ದುರ್ನೀತಿ, ಅನ್ಯಾಯ ಎಂಬೆಲ್ಲ ಅರ್ಥಗಳು ಇವೆ. 'ಲಂಚ' ಕೊಡು-ಕೊಳ್ಳುವಿಕೆಗೂ ನಾವು 'ಭ್ರಷ' ಎನ್ನುವ ಪದವನ್ನು ಬಳಸುವುದುಂಟು. ಅಂದರೆ ದುರಾಚಾರದ ಮತ್ತು ಕೆಟ್ಟ ನಡತೆಯ ಕೆಲಸಗಳು,ಅನ್ಯಾಯ,ಅನೀತಿಗಳು, ವಾಮಮಾರ್ಗಗಳೆಲ್ಲವೂ ಭ್ರಷ್ಟಚಾರ ಎಂಬ ಪದದ ಗಡಿಯೊಳಗೆ ಬರುತ್ತವೆ ಎನ್ನುವಂತಾಯಿತು.

ಹಾಗೆ ನೋಡಿದರೆ ಈ ಭ್ರಷ್ಟಚಾರ ಹುಟ್ಟಲು ಪ್ರಥಮತಃ ನಾವೇ ಕಾರಣರು. ನಮ್ಮ ಮನೆ ಭ್ರಷ್ಟತೆಯ ಉಗಮ ಸ್ಥಾನ. ಮನೆಯಲ್ಲಿ ಮಕ್ಕಳಿಗೆ ಕಲಿಸುವ ವಿದ್ಯೆಯಲ್ಲಿ ಇದೂ ಒಂದು ಎನ್ನಬಹುದು. ಮಕ್ಕಳಿಗೆ ಅಕ್ಷರ ಜ್ಞಾನದ ಪಾಠ, ಧಾರ್ಮಿಕ ವಿಷಯಗಳು ಕಲಿಸಿದಂತೆ ಭ್ರಷ್ಟಾಚಾರದ ಪಾಠವನ್ನು ನಮಗೆ ತಿಳಿದೋ ತಿಳಿಯದೋ, ಪರೋಕ್ಷವೋ ಅಪರೋಕ್ಷವೋ ಕಲಿಸುತ್ತ ಬಂದಿದ್ದೇವೆ.
ಈಗ ಈ ದೇಶದ ತುಂಬೆಲ್ಲ ಭ್ರಷ್ಟಚಾರದ ಪೆಡಂಭೂತ ಹೆಮ್ಮರವಾಗಿ ಬೆಳೆದು ನಿಲ್ಲುವಂತಾಗಲು ನಾವೆ ಕಾರಣೀಭೂತರು ಎಂದರೆ ಯಾರೂ ಸಹ ಆಶ್ಚರ್ಯಪಡಬೇಕಾಗಿಲ್ಲ. ಓರ್ವ ವ್ಯಕ್ತಿಯ ಮನೆಯಲ್ಲಿ ಮೂರು ಜನ ಮಕ್ಕಳು ಅದರಲ್ಲಿ ಇಬ್ಬರು ಗಂಡು ಮತ್ತು ಒಂದು ಹೆಣ್ಣು. ಮನೆಯಲ್ಲಿ ಮೂವರಿಗೆ ಸರಿಸಮಾನವಾಗಿ ಕಾಣುವುದು ಆ ತಂದೆ ತಾಯಿಗಳ ಧರ್ಮ. ಆದರೆ ಹೀಗಾಗುವುದಿಲ್ಲ. ಅಲ್ಲಿ ಅಲ್ಪಸ್ವಲ್ಪ ಏರುಪೇರುಗಳು ಆಗುವುದು ಸಹಜ. ಇಲ್ಲಿಂದಲೆ ಒಂದು ಮಗುವಿನ ಮೇಲೆ ಅನ್ಯಾಯ ಆರಂಭವಾದಂತಾಯಿತು. ಗಂಡು ಹೆಣ್ಣಿ ಮಧ್ಯೆ ತಾರತಮ್ಯಗಳು, ಸಹೋದರ,ಸಹೋದರರ ಮಧ್ಯೆ ಉಂಟಾಗುವ ತಾರತಮ್ಯಗಳು ಇವೆಲ್ಲವೂ ಮುಂದೆ ಮಕ್ಕಳ ಮೇಲೆ ಅನೇಕ ರೀತಿಯ ಪ್ರಭಾವನ್ನು ಬೀರಲು ಆರಂಭಿಸುತ್ತವೆ. ಇದರಿಂದಾಗಿ ಕೆಲವರು ಅಕ್ರಮಿಗಳು, ದುರಾಚಾರಿಗಳು, ಅತ್ಯಚಾರಿಗಳು ಆಗುತ್ತಾರೆ. ಸಮಾಜ ಇಂತಹವರಿಂದಲೆ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಎಮ್.ಆರ್ ಮಾನ್ವಿ, ಭಟ್ಕಳ

0 comments:

Post a Comment