ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಇದು ಬರೆಯ ಮಣ್ಣಲ್ಲ...ಹೌದು...ಅದು ನೋಡ ನೋಡುತ್ತಿದ್ದಂತೆಯೇ ವಿವಿಧ ಆಕಾರಗಳನ್ನು ಪಡೆದುಕೊಳ್ಳುತ್ತಿವೆ...ಕಲಾವಿದರ ಕೈಗಳು ನರ್ತಿಸಿದಂತೆಲ್ಲ ಅಲ್ಲೊಂದು ವೈವಿಧ್ಯಮಯ ಕಲಾಕೃತಿಗಳು ರಚನೆಗೊಳ್ಳುತ್ತಾ ಸಾಗುತ್ತಿವೆ...ವ್ಹಾವ್...ಅದನ್ನು ನೋಡುವುದೇ ಒಂದು ಅಂದ ಚೆಂದ!


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮಿಜಾರಿನ ಶೋಭಾವನದಲ್ಲಿ ಜ.1ರಿಂದ ಪ್ರಾರಂಭಗೊಂಡ ಶಿಲ್ಪ ವಿರಾಸತ್ ನ ಮೋಡಿ ಇದು. 9ಮಂದಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಹಾಗೂ ಆಳ್ವಾಸ್ ನ ಬಿ.ವಿ.ಎ ಪದವಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ವೈವಿಧ್ಯಮಯ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಆಂಧ್ರ, ಒರಿಸ್ಸಾ, ಗೋವಾ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ಕಲಾವಿದರು ಇಲ್ಲಿ ತಮ್ಮ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಅನಾವರಣಗೊಳಿಸುತ್ತಿದ್ದಾರೆ.


- ಆದೂರು.

1 comments:

Anonymous said...

mrithika ninna roopavenithu anda....ninage roopa kotta kai enithu chanakya....shilpa viraasat ninagido namana...

Post a Comment