ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು : ರಾಜ್ಯದ ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರ ಹಾಡುಗಳನ್ನು ಸವಿಯುವ ಸದವಕಾಶ ನಗರದ ಸಂಸ್ಕೃತಿ ಪ್ರಿಯ ಜನತೆಗೆ ಲಭ್ಯವಾಗಿದೆ.ಜನವರಿ 9ರಂದು ನಗರದ ಬಳ್ಳಾಲ್ಬಾಗ್ನ ಶ್ರೀದೇವಿ ಕಾಲೇಜು ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಭವನ `ಸಂದೇಶ'ದಲ್ಲಿ ಬೆಳಿಗ್ಗೆ ಅವರು ತಮ್ಮ ವೃತ್ತಿಬದುಕು ಹಾಗೂ ಸಾಧನೆಗಳ ಬಗ್ಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಲಿದ್ದಾರೆ.ಕಳೆದ ವರ್ಷ ನಮ್ಮನ್ನಗಲಿದ ವಿಮಾ ನೌಕರರ ಮುಂದಾಳು ನಾಗೇಶ್ ಕುಮಾರ್ ಸ್ಮರಣಾರ್ಥ ನಾಡಿನ ಪ್ರಮುಖ ಸಾಂಸ್ಕೃತಿಕ ಸಂಘಟನೆ ಸಮುದಾಯದ ಗಾಯಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗಾಯಕರು, ಉದಯೋನ್ಮುಖ ಕಲಾವಿದರು ಭಾಗವಹಿಸಲಿದ್ದಾರೆ. ತಾವು ಕ್ರಮಿಸಿದ ಹಾದಿಯ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಲಿರುವ ಪಿಚ್ಚಳ್ಳಿ ಶ್ರೀನಿವಾಸ್, ವಿಶಿಷ್ಟ ಹಾಡುಗಳನ್ನೂ ಸಾದರಪಡಿಸಲಿದ್ದಾರೆ.

0 comments:

Post a Comment