ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ವಿಶ್ವ ಸಂಸ್ಕೃತ ಪುಸ್ತಕ ಮೇಳ ಹಾಗೂ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಬೆಂಗಳೂರು ಬಸವನಗುಡಿ ನ್ಯಾಷನಲ್ ಹೈಸ್ಕೂಲು ಮೈದಾನದಲ್ಲಿ ಜ.7ರಿಂದ 10ರ ತನಕ ನಡೆಯಲಿದೆ.ಮೇಳದಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಬಗೆಯ ಸಂಸ್ಕೃತ ಪುಸ್ತಕಗಳ ಮಾರಾಟ ನಡೆಯಲಿದೆ. ಗೋಷ್ಠಿ, ಚರ್ಚೆ, ಸಂವಾದಗಳು ಈ ಸಂದರ್ಭದಲ್ಲಿ ನಡೆಯಲಿದೆ. ಮುದ ನೀಡುವ ವೈವಿಧ್ಯಮಯ ಮನೋರಂಜನೆಗಳೂ ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ 300ಕ್ಕೂ ಹೆಚ್ಚು ಪುಸ್ತಕಗಳ ಬಿಡುಗಡೆ ಒಂದೇ ಬಾರಿಗೆ ನಡೆಯಲಿದೆ.ಭಾರತದ ಪ್ರಾಚೀನ ಜ್ಞಾನ ಪರಂಪರೆಯ ವಿವಿಧ ಮುಖಗಳ ಪುರಾತನ ವೈಜ್ಞಾನಿಕ ಆವಿಷ್ಕಾರಗಳ ಹಾಗೂ ತಾಳೆಗರಿ ಸಂಪತ್ತಿನ ಪರಿಚಯ ನೀಡುವ ಪ್ರದರ್ಶಿನಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

0 comments:

Post a Comment