ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:07 PM

ನಲ್ಲೆ..

Posted by ekanasu

ಸಾಹಿತ್ಯಮುಂಜಾನೆಯ ಸೂರ್ಯನ ಕಿರಣಗಳು ಭುವಿಯ

ಬಂದು ಚುಂಬಿಸಿ ರಮಿಸುಂತೆ,

ನಲ್ಲೆಯ ಕೆನ್ನೆಗಿತ್ತ ಮುದ್ದಾದ ಮುತ್ತೊಂದು

ಇಬ್ಬನಿ ಕರಗುವ ಪರಿಯಲ್ಲಿ ಅವಳಕೋಪವ ಕರಗಿಸಿತ್ತು......
ಬಿಸಿಲ ಝಳದಲ್ಲಿ ಕಾದು

ಬೇಯುವ ಧರೆಯಂತೆ,

ವಿರಹ ಬೇಗುದಿಯಲ್ಲಿ ಮನ ಬೆಂದಿತ್ತು....

ಬಿದ್ದ ಕಿರಣಗಳಿಗೆ ಸೋತು ಮೈದುಂಬಿ

ಅರಳುವ ಹೂವುಗಳ ಸಾಲೊಂದು,

ಅವಳಲ್ಲಿ ಬಯಕೆಯ,ಕೋರಿಕೆಯ

ಪರಿಮಳವ ಪಸರಿಸಿತ್ತು.....
ಬೆಳಗಿನ ಸೊಭಗಲ್ಲಿ ಹಾರುವ

ಹಕ್ಕಿಗಳ ಹಿಂಡೊಂದು,

ಅವಳ ಕನಸಿನ ಸಂತೆಯ

ಸಾಲನ್ನು ನೆನಪಿಸಿತ್ತು.....
ಪಡುವಣ ಬಾನಿನ ಅಂಚಿಗೆ

ಜಾರುತ್ತ ರವಿ ಸರಿದು ಚೆಲ್ಲುವ ಕೆಂಪಿನಂತೆ,

ಮುತ್ತಿನ ಮತ್ತಿಗೆ,ಅನುರಾಗದ ತುತ್ತಿಗೆ

ಅವಳ ಕೆನ್ನೆಯು ರಂಗೇರಿತ್ತು.....
ಬೆಳದಿಂಗಳ ರಾತ್ರಿ ತಂಪನ್ನು

ಹೊತ್ತು ಬಂದ ಚಂದಿರನ ಹೊಳಪಲ್ಲಿ,

ಇಳೆಯ ಚಂದ್ರಮುಖಿಯ ಹೊಂಬಣ್ಣದ

ಕಾಂತಿಯು ನಾಚಿ ನೀರಾಗಿ ಶರಣಾಗಿತ್ತು......

ಬರಹ: ವಾಣಿಶ್ರೀ ಭಟ್

5 comments:

ಸಿಮೆಂಟು ಮರಳಿನ ಮಧ್ಯೆ said...

ಶಬ್ಧಗಳಲ್ಲಿ ಭಾವಗಳು ಚೆನ್ನಾಗಿ ವ್ಯಕ್ತವಾಗಿವೆ...

ಅಭಿನಂದನೆಗಳು...

ವಾಣಿಶ್ರೀ ಭಟ್ said...

ಧನ್ಯವಾದಗಳು

ಚೆಂದುಳ್ಳಿ said...

ಬರಹ ಚೆನ್ನಾಗಿದೆ.

One of the bests I have ever read..

-ಪ್ರಕಾಶ

ವಾಣಿಶ್ರೀ ಭಟ್ said...

ಧನ್ಯವಾದಗಳು ಪ್ರಕಾಶ

ಸುಷ್ಮಾ.. said...

thumbaaaa chennagide.....

Post a Comment