ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವಿರಾಸತ್ ನ ದ್ವಿತೀಯ ಕಲಾಪ್ರಕಾರವಾಗಿ ಕೋಲ್ಕತ್ತಾದ ಅಶಿಮ್ಬಂಧು ಭಟ್ಟಾಚಾರ್ಯ ಮತ್ತು ಬಳಗದವರಿಂದ `ಕಥಕ್ ರಂಗ್ ' ಎಂಬ ವೈಶಿಷ್ಟ್ಯಪೂರ್ಣ ಕಲಾ ಪ್ರದರ್ಶನ ಮೂಡಿಬಂತು. ತದನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮೊತ್ತ ಮೊದಲ ಬಾರಿಗೆ "ವಿರಾಸತ್ ರಾಷ್ಟ್ರೀಯ ವೇದಿಕೆಯಲ್ಲಿ" ಕಲಾಪ್ರದರ್ಶನ ನೀಡುವ ಮೂಲಕ ಕಲಾಸಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ "ನೃತ್ಯ ವೈವಿಧ್ಯ " ಇತರ ರಾಷ್ಟ್ರೀಯಮಟ್ಟದ ಕಲಾವಿದರ ಬಾಯಿಯಲ್ಲೂ ಶಹಬ್ಬಾಸ್ ಗಿರಿ ಪಡೆಯುವಲ್ಲಿ ಯಶಸ್ವಿಯಾಯಿತು.ಕಲಾಮಂಡಲ ಲತಾ ನಿರ್ದೇಶನದ ಮೋಹಿನಿಯಾಟಂ ಕಲಾ ಪ್ರದರ್ಶನವನ್ನು ಸಂಸ್ಥೆಯ 20 ವಿದ್ಯಾರ್ಥಿಗಳು ಬೃಹತ್ ವೇದಿಕೆಯಲ್ಲಿ ಅಪೂರ್ವರೀತಿಯಲ್ಲಿ ಪ್ರಸ್ತುತ ಪಡಿಸಿದರು.
ಧನಶ್ರೀ ರಾಗ, ಆದಿ ತಾಳದ ಮೂಲಕ ಈ ಕಲಾ ಪ್ರಕಾರ ಮೂಡಿಬಂತು. ಹತ್ತು ನಿಮಿಷಗಳ ಕಾಲ ಸೇರಿದ್ದ ಜನಸ್ತೋಮವನ್ನು ಉಸಿರು ಬಿಗಿಹಿಡಿಯುವಂತೆ ಮಾಡುವಲ್ಲಿ ಈ ನೃತ್ಯಪ್ರದರ್ಶನ ಯಶಸ್ವಿಯಾಯಿತು.
"ನವಗ್ರಹ" ಎಂಬ ವಿಭಿನ್ನ ಪ್ರಯೋಗವೊಂದನ್ನು 9ಮಂದಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ದೀಪಕ್ ಪುತ್ತೂರು ನಿರ್ದೇಶಿಸಿರುವ ಈ ಕಲಾ ಪ್ರಕಾರ 21ನಿಮಿಗಳ ಕಾಲ ಪ್ರದರ್ಶನಕಂಡಿತು. ನವಗ್ರಹಗಳ ಸುತ್ತ ಹೆಣೆಯಲ್ಪಟ್ಟ ವಿನೂತನವಾದ ಪ್ರಯೋಗವೊಂದು ರಾಷ್ಟ್ರೀಯ ವೇದಿಕೆಯ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
17ಮಂದಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವೀರಗಾಸೆ ನೃತ್ಯ ಅಪಾರ ಮನ್ನಣೆಗೆ ಪಾತ್ರವಾಯಿತು. ಮಣಿಪುರದ 9ಮಂದಿ ಕಲಾವಿದರು ಫೂಂಗ್ ಚೋಳಮ್ ಎಂಬ ದೋಲ್ ಚಲೋ ನೃತ್ಯ ಪ್ರದರ್ಶಿಸಿದರು. ಗಿರಕಿ ಹೊಡೆಯುತ್ತಾ ಡೋಲನಲ್ಲಿ ತಾಳ ಹಾಕುತ್ತಾ ನೃತ್ಯ ಪ್ರದರ್ಶಿಸುವ ರೀತಿ ಅಚ್ಚರಿಮೂಡಿಸಿತು.


ಈ ಬಾರಿಯ ವಿರಾಸತ್ ನಲ್ಲಿ ಭಾವೈಕ್ಯತೆಯ ಸಂಗಮವಾಗಿದೆ. ಕ್ರೈಸ್ತ ಸಮುದಾಯದಲ್ಲಿ ಜನಿಸಿದ ಅಮೋಘ ಕಲಾ ಸೇವೆಯನ್ನು ಮೆರೆದ ಅಪೂರ್ವ ಕಲಾವಿದ ಪದ್ಮಭೂಷಣ ಡಾ.ಕೆ.ಜೆ ಯೇಸುದಾಸ್ ಅವರಿಗೆ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಸಲಾಯಿತು.
ದ್ವಿತೀಯ ದಿನದಂದು ಮುಸಲ್ಮಾನ್ ಸಮುದಾಯದ ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಆಲಿಖಾನ್, ಅಮಾನ್ ಆಲಿ ಖಾನ್ ಹಾಗೂ ಅಯಾನ್ ಆಲಿ ಖಾನ್ ಅವರಿಂದ ಅಪೂವ್ ಸರೋದ್ ತಿಗಲ್ ಬಂದಿಯೂ ನಡೆಯಿತು.
ತೃತೀಯ ದಿನದಂದು ಪಂಡಿತ್ ಜಯತೀರ್ಥ ಮೇವುಂಡಿ , ವಿದ್ವಾನ್ ಅಭಿಷೇಕ್ ರಘುರಾಮ್ ಅವರ ಜುಗಲ್ ಬಂದಿಯೂ ನಡೆಯಿತು. ಇದನ್ನವಲೋಕಿಸಿದರೆ ಹಿಂದೂ , ಮುಸಲ್ಮಾನ್, ಹಾಗೂ ಕ್ರೈಸ್ತ ಈ ಮೂರು ಧಮರ್ೀಯರಿಗೆ ಇಲ್ಲಿ ವಿಶೇಷ ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.
ಉತ್ತಮ ಪ್ರೇಕ್ಷಕವರ್ಗವೊಂದರ ಸೃಷ್ಠಿ ಆಳ್ವಾಸ್ ವಿರಾಸತ್ ಮೂಲಕ ನಡೆದಿರುವುದು ಹರ್ಷ ತಂದಿದೆ ಎನ್ನುತ್ತಾರೆ ವಿರಾಸತ್ ರೂವಾರಿ ಡಾ.ಎಂ.ಮೋಹನ ಆಳ್ವ.

1 comments:

BIDIRE said...

super

Post a Comment