ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು:ವ್ಯಕ್ತಿಯ ಬಾಳಿನಲ್ಲಿ ಬಾಲ್ಯ ಎಂಬುದು ಅಮೂಲ್ಯ ಸಮಯ. ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಇದೇ ಸುಸಂದರ್ಭ. ಮಕ್ಕಳು ಜನ್ಮತಃ ಪ್ರತಿಭಾವಂತರು. ಅವರಿಗೂ ಸೂಕ್ತ ಮಾರ್ಗದರ್ಶನ ನೀಡಿದರೆ ಅವರ ಪ್ರತಿಭೆಯನ್ನು ಹೊರಗೆಡಹಬಹುದು ಎಂದು ಗಣಪತಿ ಹೈಸ್ಕೂಲ್ನ ಮುಖ್ಯ ಶಿಕ್ಷಕ ಮಂಗೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರಿನ ಆಕಾಶಭವನದಲ್ಲಿ ನೃತ್ಯಶಿಕ್ಷಕಿ ಚಿತ್ರಲೇಖಾ ಶೆಟ್ಟಿ ಅವರ ಭರತನಾಟ್ಯ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಭರತನಾಟ್ಯ ಇನ್ಸ್ಟಂಟ್ ಕಾಫಿ ಅಲ್ಲ. ಅದೊಂದು ಕಲೆ. ಈ ಕಲೆ ಸಿದ್ಧಿಸಲು ಸೂಕ್ತ ಪರಿಶ್ರಮ, ತಾಳ್ಮೆ ಹಾಗೂ ಗುರುವಿನ ಮಾರ್ಗದರ್ಶನ ಮುಖ್ಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ರಂಗಭಾರತಿ ನಿರ್ದೇಶಕ ಕೆ.ವಿ. ರಮಣ್ ವಹಿಸಿದ್ದರು.

0 comments:

Post a Comment