ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಪದ್ಮಭೂಷಣ ಡಾ.ಕೆ.ಜೆ ಯೇಸುದಾಸ್ ಇಂದು ಮಿಜಾರಿಗೆ ಆಗಮಿಸಲಿದ್ದಾರೆ.ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಪದ್ಮಭೂಷಣ ಡಾ.ಕೆ.ಜೆ .ಯೇಸುದಾಸ್ ಅವರಿಗೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್ 2011ರ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ನೀಡಿ ಗೌರವಿಸಲಾಗುವುದು.
ಮಿಜಾರಿನ ಶೋಭಾವನದಲ್ಲಿ ಜ.11ರಿಂದ 16ರ ತನಕ ಆಳ್ವಾಸ್ ವಿರಾಸತ್ 2011 ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎನ್.ವಿನಯ ಹೆಗ್ಡೆ ವಹಿಸಲಿದ್ದಾರೆ. ಸಿನೆಮಾ ನಿರ್ದೇಶಕ ನಾಗತೀ ಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ.ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ, ಡಾ.ಪಿ.ದಯಾನಂದ ಪೈ, ಕೆ.ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ ಅತಿಥಿಗಳು.


ಶೋಭಾವನದಲ್ಲಿ ಅತ್ಯಂತ ಆಕರ್ಷಕ ಅಲಂಕಾರಗಳು ನಡೆಸಲಾಗಿವೆ. ಶೋಭಾವನಕ್ಕೆ ತೆರಳುವ ಹಾದಿಯುದ್ದಕ್ಕೂ ಗೂಡುದೀಪ, ಪೂಕ್ಕರೆಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಶೋಭಾವನ ಸಿದ್ಧಗೊಂಡಿದೆ.


1 comments:

Vinaya said...

superb, i wish all success of Alva's Virasat

Post a Comment