ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:38 PM

ಹೂಬಿಟ್ಟ ಮಾಮರ...

Posted by ekanasu

ಪ್ರಾದೇಶಿಕ ಸುದ್ದಿ


ಕರಾವಳಿಯ ಮಾವಿನ ಮರಗಳು ಇದೀಗ ಹೂಗಳಿಂದ ಕಂಗೊಳಿಸುತ್ತಿವೆ. ಹೆದ್ದಾರಿಯ ಪಕ್ಕದಲ್ಲಿರುವ ಮರಗಳು ಎಲೆತೋರದಂತೆ ಹೂಬಿಟ್ಟು ಹೂಮರಗಳಾಗಿ ಪರಿವರ್ತನೆಗೊಂಡಿವೆ. ಅರ್ಥಾತ್ ಈ ಬಾರಿ ಉತ್ತಮ ಮಾವಿನ ಫಸಲು ಬರುವ ಲಕ್ಷಣ ಗೋಚರವಾಗುತ್ತಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಉತ್ತಮ ಚಳಿಯಾಗುತ್ತಿದ್ದು ಮಾವಿನ ಮರ ಹೂ ಬಿಡಲು ಒಂದು ಕಾರಣವಾಗಿದೆ. ಕಳೆದ ವರುಷ ಮಾವಿನ ಬೆಳೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಮಾವಿನ ರುಚಿನೋಡಲೂ ಕಷ್ಟ ಎಂಬಂತಾಗಿತ್ತು. ಮಾರುಕಟ್ಟೆಯಲ್ಲಿ ಮಾವಿನ ಚೆಂದನೋಡಿ ಆನಂದಿಸುವಷ್ಟರ ಮಟ್ಟಿಗೆ ದರ ಏರಿಕೆ ಕಂಡಿದ್ದವು. ಆದರೆ ಈ ಬಾರಿ ಎಲ್ಲೆಡೆ ಉತ್ತಮ ಫಲ ಬರುವ ನಿರೀಕ್ಷೆ ಗೋಚರಿಸುತ್ತಿದೆ.
ಪರಿಸರ ಮುನಿಸದಿದ್ದರೆ ಉತ್ತಮ ಮಾವಿನ ಫಸಲು ಗ್ಯಾರಂಟಿ... ಕಳೆದ ವರುಷ ಮಾವಿನಕಾಯಿಯ ಉಪ್ಪಿನಕಾಯಿಗೂ ತತ್ವಾರ ಎಂಬಂತಾಗಿತ್ತು. ಊರಿನಲ್ಲೆಲ್ಲೂ ಕಾಟುಮಾವು ಇಲ್ಲ. ಹಾಗಾಗು ಉಪ್ಪಿನಕಾಯಿ ಹಾಕುವಂತಿಲ್ಲ. ಉಪ್ಪಿನಕಾಯಿಗೆ ಪರದಾಟ...ಹೆಂಗಳೆಯರ ಕಿರಿಕಿರಿ...ಆದರೆ ಈ ಬಾರಿ ಇದೆಲ್ಲಾ "ಇಲ್ಲ" ಎಂಬಂತಾಗುವುದು ಎಂಬ ಮುನ್ಸೂಚನೆ ಲಭಿಸಿದೆ. ಕಾರಣ ಮರದತುಂಬೆಲ್ಲಾ ಗೊಂಚಲು ಗೊಂಚಲು ಆಕರ್ಷಕ ಹೂವು ಕಂಗೊಳಿಸುತ್ತಿವೆ...


ಚಿತ್ರ - ಬರಹ :ವರ್ಷಾ

0 comments:

Post a Comment