ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ: ಮೂಲ್ಕಿಯ ಬೃಹತ್ ಸಮಸ್ಯೆಯಾದ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮೂಲ್ಕಿ ನಗರ ಪಂಚಾಯತ್ನ ನಿರ್ಲಕ್ಷ ಧೋರಣೆಯನ್ನು ಜಿಲ್ಲಾಧಿಕಾರಿ ಸುಭೋದ್ ಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಶುಕ್ರವಾರ ಮಧ್ಯಾಹ್ನ ಮೂಲ್ಕಿ ನಗರ ಪಂಚಾಯತ್ಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಿದ ಜಿಲ್ಲಾಧಿಕಾರಿಯವರಿಗೆ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ಸರಿಯಾದ ಮಾಹಿತಿ ಲಭಿಸದ ಕಾರಣ ಅಸಮಧಾನಗೊಂಡು ಪ್ರಥಮ ಆದ್ಯತೆಯ ಮೇರೆಗೆ ಶೀಘ್ರ ಕಾಮಗಾರಿ ಆರಂಭಿಸುವಂತೆ ಆದೇಶ ನೀಡಿದರು.ಮೂಲ್ಕಿಯ ಇನ್ನೊಂದು ಸಮಸದ್ಯೆಯಾದ ದ್ರವತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆಗೆ 27.69ಕೋಟಿ ರೂ ಕ್ರಿಯಾ ಯೋಜನೆ ರೂಪಿಸಿ ಸರಕಾರಕ್ಕೆ ಕಳುಹಿಸಲಾಗಿದ್ದು ಶೀಘ್ರ ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ನಗರ ವ್ಯಾಪ್ತಿಯಲ್ಲಿ 20 ಮೈಕ್ರೋನ್ ಕ್ಕಿಂತ ಕಡಮೆ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಮಾಹಿತಿ ಮತ್ತು ಕ್ರಮ ಮತ್ತು ನಿವೇಶನ ಹಾಗೂ ನಿವೇಶನ ರಹಿತರ ಸರ್ವೇ ಬಗ್ಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳಿಗೆ ಸೂಕ್ತ ಉತ್ತರ ಸಿಗದ ಕಾರಣ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವೈಜ್ಞಾನಿಕ ಕಸ ವಿಲೇವಾರಿ ಬಗ್ಗೆ ಸೂಕ್ತ ಉತ್ತರ ದೊರಕದ ಕಾರಣ ಅಸಮಧಾನಗೊಂಡ ಅವರು ಮುಖ್ಯಾಧಿಕಾರಿಗಳಿಗೆ ನೋಟೀಸು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಕಛೇರಿ ಎಇಇ ಶ್ರೀಧರ್ ರವರಿಗೆ ನಿರ್ದೇಶಿಸಿದರು. ಹಾಗೂ ಸಾರ್ವಜನಿಕರಿಗೆ ಈಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.

ಮಂಗಳೂರು ನಗರ ಪಾಲಿಕೆ ಎಇಇ ಶ್ರೀಧರ್,ಮೂಲ್ಕಿ ನಗರ ಪಂ.ಅಧ್ಯಕ್ಷ ಬಿ.ಎಂ.ಆಸೀಫ್,ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್,ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್,ಸದಸ್ಯರಾದ ಶಶಿಕಾಂತ ಶೆಟ್ಟಿ,ವಂದನಾ ಕಾಮತ್,ಸತೀಶ್ ಅಂಚನ್,ಉಪತಹಶೀಲ್ದಾರ್ ಭಾರತಿ,ಕಂದಾಯ ನಿರೀಕ್ಷಕ ಮಹಾಭಲ ರೈ,ಮಹಾ ನಗರ ಪಾಲಿಕೆ ಪರಿಸರ ಇಂಜಿನಿಯರ್ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ವರದಿ: ಭಾಗ್ಯವಾನ್ ಮುಲ್ಕಿ.

0 comments:

Post a Comment