ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವೇಣೂರು: ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಹಾಗೂ ರಕ್ತ ವರ್ಗೀಕರಣ ಶಿಬಿರ ಫೆ.13 ಭಾನುವಾರ ಬೆಳಗ್ಗೆ 9.30ರಿಂದ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ವೇಣೂರು ಇಲ್ಲಿ ನಡೆಯಲಿದೆ.ಡಾ.ಶ್ರೀಹರಿ ಶಿಬಿರ ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ವೇಣೂರು ಇದರ ಅಧ್ಯಕ್ಷ ಬಿ.ಪಿ.ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿಗಳಾದ ಡಾ.ರಾಮಚಂದ್ರ ಭಟ್ , ವಿದ್ಯೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಶಿವರಾಮ ಹೆಗ್ಡೆ , ಶ್ರೀ.ಕ್ಷೇ.ಧ.ಗ್ರಾ.ಯೋ. ನಿರ್ದೇಶಕ ಜಯಶಂಕರ ಶರ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಉಪ್ಪಿನಂಗಡಿ ಹವ್ಯಕ ಮಂಡಲ -ವೇಣೂರು ವಲಯ , ಲಯನ್ಸ್ ಕ್ಲಬ್ ವೇಣೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ವೇಣೂರು, ಅಟೋ ಚಾಲಕರ ಮತ್ತು ಮಾಲಕರ ಸಂಘ ವೇಣೂರು ಜಂಟಿಯಾಗಿ ಈ ಶಿಬಿರ ಆಯೋಜಿಸಿದೆ.

0 comments:

Post a Comment