ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:04 PM

ಸೂರ್ಯ ನಮಸ್ಕಾರ

Posted by ekanasu

ಆರೋಗ್ಯ

ಯೋಗ ಸಾಧಕರು ಬ್ರಾಹ್ಮೀ ಮುಹೂರ್ತ (ಬೆಳಗಾತ 4 ಗಂಟೆ 30 ನಿಮಿಷ) ದಲ್ಲಿಯೇ ಎದ್ದು ಮಲಮೂತ್ರ ವಿಸರ್ಜನೆ, ಮುಖಮಾರ್ಜಿನ, ಕಟಿಸ್ನಾನ, ಸರ್ವಾಂಗ ಸ್ನಾನ ತೀರಿಸಿ, ಸುರ್ಯೋದಯಕ್ಕೆ ಸರಿಯಾಗಿ ಮಂತ್ರ ಸಹಿತ ಸೂರ್ಯ ನಮಸ್ಕಾರಕ್ಕೆ ಸಿದ್ದರಾದರೊಳಿತು.

ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಾಯಾಮಗಳ ಮಿಶ್ರಣ. ದೇಹದ ಜಡತ್ವ ಹೋಗಿ, ಮೃದುತ್ವ ಲಘತ್ವ ಬರಲು ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಬೆಳಿಗ್ಗೆ ಎದ್ದ ಕೂಡಲೇ ನೇರವಾಗಿ ಯೋಗ ಮಾಡಲು ಕಷ್ಟವಾಗುತ್ತದೆ. ಜ್ಞಾನಿಗಳು 'ಆರೋಗ್ಯಂ ಭಾಸ್ಕರಾದಿಚ್ಛೇತ್' ಎಂದಿರುತ್ತಾರೆ. ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ. ದೇಹಕ್ಕೆ ಲವಲವಿಕೆ ಒದಗಿ ಬರುತ್ತದೆ. ಸೂರ್ಯ ನಮಸ್ಕಾರವನ್ನು ಉಸಿರಿನ ಗತಿಯೊಂದಿಗೆ ನಿಧಾನವಾಗಿ ಅಭ್ಯಾಸ ಮಾಡಬೇಕು. ಗುರುಮುಖೇನವೇ ಶಿಸ್ತುಬದ್ದವಾಗಿ ಕಲಿಯಬೇಕು. ಆರಮಭದಲ್ಲಿ ಕೆಲವು ಸೂರ್ಯ ನಮಸ್ಕಾರಗಳನ್ನು ಮಾಡಿದರೆ ಸಾಕು. ಅನಂತರ 12 ವಿಧವಾಗಿ ಸೂರ್ಯನ ದ್ವಾದಶಮಂತ್ರ ಸಹಿತ ನಮಸ್ಕಾರಗಳನ್ನು ಮಾಡಬೇಕು.

ಸಸ್ಯಲೋಕ ಪ್ರಾಣಿ ಪ್ರಪಂಚ ಹಾಗೂ ಮಾನವನ ದೈನಂದಿನ ಚಟುವಟಿಕೆ ಆರಂಭವಾಗುವುದೇ ಸೂರ್ಯೋದಯದ ವೇಳೆ. ಆದ್ದರಿಂದ ಭಾಸ್ಕರನಿಗೆ ನಮಿಸುತ್ತಾ ಸೂರ್ಯದೇವನ ಮಂತ್ರಗಳನ್ನು ಹೇಳುತ್ತಾ ಸೂರ್ಯ ನಮಸ್ಕಾರ ಮಾಡುವುದು ನಮ್ಮ ಕರ್ತವ್ಯ.

ಸೂರ್ಯ ನಾರಾಯಣನಿಗೆ ನಮಸ್ಕರಿಸುವ ಮಂತ್ರ

ಸೂರ್ಯಂಸುಂದರ ಲೋಕನಾಥ ಮಮೃತಂ ವೇದಾಂತಂ ಸಾರಂ ಶಿವಂ|
ಜ್ಞಾನಂ ಬ್ರಹ್ಮಮಯಂ ಸುರೇಶಮಮಲಂ ಲೋಕೈಕ ಚಿತ್ತ ಸ್ವಯಂ !!
ಇಂದ್ರಾಧಿತ್ಯನರಾಧಿಪಂ ಸುರಗುರುಂ ತ್ರೈ ಲೋಕ್ಯಚೂಡಾಮಣಿಂ|
ಬ್ರಹ್ಮಾವಿಷ್ಣುಶಿವ ಸ್ವರೂಪ ಹೃದಯಂ ವಂದೇ ಸದಾ ಭಾಸ್ಕರಂ||

ಸೂರ್ಯ ನಮಸ್ಕಾರದ ಪ್ರಯೋಜನಗಳು: - (ಅದೋಮದೇ ಸಂಕ್ಷಿಪ್ತ ಯೋಗಾಭ್ಯಾಸ)
- ದೈಹಿಕ ನಿಲುವು ಮತ್ತು ಚಲನಾ ವ್ಯವಸ್ಥೆ ಸುಗಮವಾಗುವುದು.
- ಹೃದಯ ಕ್ರಿಯೆ ಮತ್ತು ರಕ್ತ ಚಲನೆ ಸುಸೂತ್ರವಾಗುವುದು.
- ಜೀರ್ಣಕ್ರಿಯೆ ಆರೋಗ್ಯಕರವಾಗುವುದು. ಸೂರ್ಯ ನಮಸ್ಕಾರ ಒಂದು ವ್ರತ.
- ಶ್ವಾಸಕೋಶಗಳು ಬಲಿಷ್ಠವಾಗುವುವು.
- ವಿಸರ್ಜನಾ ವ್ಯವಸ್ಥೆ ಕ್ರಮಬದ್ದವಾಗುವುದು.
- ನರವ್ಯೂಹ ಮತ್ತು ಮೆದುಳು ಚುರುಕಾಗುವುದು.
- ನಿರ್ನಾಳಗ್ರಂಥಿಗಳು ಚೋದಕಗಳನ್ನು ಸರಿಯಾಗಿ ಸರವಿಸುವುವು.
- ಜನನಾಂಗಗಳು ಆರೋಗ್ಯಕರ ಬೆಳವಣಿಗೆಯಾಗಿ ವೀರ್ಯ/ಅಂಡಾಣುಗಳು ಕ್ರಮವಾಗಿ ಉತ್ಪತ್ತಿಯಾಗುವುದು.
- ಜ್ಞಾನೇಂದ್ರಿಯಗಳು ಚುರುಕುಗೊಳ್ಳುವುವು, ಕ್ರಿಯಾಶೀಲವಾಗುವುವು.
- ಶರೀರ ಮೃದುತ್ವ, ಲಘುತ್ವ ಉಂಟಾಗಿ ಮಾನಸಿಕ ಜಡತ್ವ ಮಾಯವಾಗುವುದು.

ಆದಿತ್ಯ ನಮಸ್ಕಾರಾನ್ ಯೇಕುರ್ವಂತಿ ದಿನೇ ದಿನೇ|
ದೀರ್ಘಮಾಯುರ್ಬಲಂ ವೀರ್ಯಂ ತೇಜಸ್ತೇಷಾಚಜಾಯತೇ ||
ಅಕಾಲ ಮೃತ್ಯುಹರಣಂ ಸರ್ವವ್ಯಾಧಿ ವಿನಾಶನಂ|
ಸೂರ್ಯಪಾದೋದಕಂ ತಈರ್ಥಂ ಜಠರೇಧಾರಯಾಮ್ಯಹಂ||

ಎಂದು ಶ್ಲೋಕ ಹೇಳಿ ತುಳಸೀ ತೀರ್ಥ ಸೇವಿಸಬೇಕು.

ಸೂರ್ಯನಮಸ್ಕಾರದ ಶ್ಲೋಕಗಳು

1. ಓಂ ಹ್ರಾಂ ಮಿತ್ರಾಯ ನಮಃ
2. ಓಂ ಹ್ರೀಂ ರವಯೇ ನಮಃ
3. ಓಂ ಹ್ರೂಂ ಸೂರ್ಯಾಯ ನಮಃ
4. ಓಂ ಹ್ರೈಂ ಭಾನವೇ ನಮಃ
5. ಓಂ ಹ್ರೌಂ ಖಗಾಯ ನಮಃ
6. ಓಂ ಹ್ರಃ ಪೂಷ್ಣೇ ನಮಃ
7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ
8. ಓಂ ಹ್ರೀಂ ಮರೀಚಯೇ ನಮಃ
9. ಓಂ ಹ್ರೂಂ ಆದಿತ್ಯಾಯ ನಮಃ
10. ಓಂ ಹ್ರೈಂ ಸವಿತ್ರೇ ನಮಃ
11. ಓಂ ಹ್ರೌಂ ಅರ್ಕಾಯ ನಮಃ
12. ಓಂ ಹ್ರಃ ಭಾಸ್ಕರಾಯ ನಮಃ


ಬರಹ: ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್
ಅಂತರರಾಷ್ಟ್ರೀಯ ಯೋಗ ತೀರ್ಪುಗಾರರು

2 comments:

preetham d, nitte said...

that was a good artilce,sir..

nasal said...

Its like a social awarnes to people..Keep Continue this type Article

Post a Comment