ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು :ಹೌದು ಸಚ್ಚಣ್ಣ ಇನ್ನಿಲ್ಲ. 3ವರುಷಗಳ ಕಾಲ ಆತ್ಮೀಯರಾಗಿದ್ದ ಹಿರಿಯ ಸ್ನೇಹಿತರೋರ್ವರನ್ನು ಕಳಕೊಂಡ ನೋವು ... ಬೆಳ್ಳಂ ಬೆಳಗ್ಗೆ ಗೆಳೆಯ ಅಶೋಕ ದೂರವಾಣಿ ಕರೆಮಾಡಿ "ಹರೀಶಣ್ಣ ವಿಷಯ ಗೊತ್ತಾಯ್ತ? "ಅಂದಾಗಲೇ ಕಣ್ಣಂಚಿನಿಂದ ಎರಡು ಹನಿ ನೀರು ಕೆಳಜಾರಿತ್ತು. ಕಾರಣ ಅದೇನೋ ಸಚ್ಚಣ್ಣನಲ್ಲಿದ್ದ ಪ್ರೀತಿ. ಆತ್ಮೀಯತೆ... ಏನೇ ಹೇಳಿ... ಅದಕ್ಕೊಂದು ಸಮಜಾಯಿಷಿ ನೀಡಿ ಕೆಲಸ ಮಾಡುವ ಸಚ್ಚಣ್ಣ ಜೀವನದುದ್ದಕ್ಕೂ ನೋವುಂಡವರು. ನಿರಂತರ ನೋವು ತಿಂದ ಜೀವಿ.ನೀಳ ಕಾಯ. ಶ್ವೇತವರ್ಣದ ಅಂಗಿ,ವೇಷ್ಟಿ.ಅದಕ್ಕೊಪ್ಪುವ ಬಿಳಿ ಕರ್ಚೀಫ್.ಸಚ್ಚಣ್ಣ ಅವರಿಗೆ "ಹೃದಯ ಇದೆ" ಎಂಬುದು ಆಗಾಗ ಗೊತ್ತಾಗುತ್ತಿತ್ತು. ನಿರಂತರ ಆಸ್ಪತ್ರೆ ಒಡನಾಟ. ಮಧ್ಯಾಹ್ನವಾಗುತ್ತಲೇ ದೊಡ್ಡ ಪ್ಲಾಸ್ಟಿಕ್ ಬಾಕ್ಸ್ ನಲ್ಲಿದ್ದ ವರ್ಣ ವೈವಿಧ್ಯದ ಮಾತ್ರೆಗಳನ್ನು ತಿನ್ನುವ ಅವರ ನೋವು ಎಂತಹವರನ್ನೂ ಮರುಕ ಹುಟ್ಟಿಸುವಂತೆ ಮಾಡುತ್ತಿತ್ತು.
ವೈದ್ಯರೇನೇ ಹೇಳಲಿ "ಕರಿದ ತಿಂಡಿ"ಇಲ್ಲದೆ ನಾನಿನ್ನ ಎನ್ನುತ್ತಿದ್ದವರು ಸಚ್ಚಣ್ಣ. ಗೋಳಿಬಜೆ, ನೀರುಳ್ಲಿ ಬಜೆ, ಎಣ್ಣೆ ತಿನಿಸುಗಳೆಂದರೆ ಅಚ್ಚುಮೆಚ್ಚು. ಸಿಹಿ ತಿಂಡಿಗಳೆಂದರೆ ಪಂಚಪ್ರಾಣ.
ಮಧ್ಯಾಹ್ನ ಊಟ ಆದ ನಂತರ ವೀಳ್ಯ ಬೇಕೇ ಬೇಕು. ಮೀನಿನ ಊಟ ಅವರ ಅಚ್ಚುಮೆಚ್ಚು. ಇಂತಹ ಸಚ್ಚಣ್ಣ ಉತ್ತಮ ಮುದ್ರಣ ತಂತ್ರಾಂಶಗಳನ್ನರಿತ ವ್ಯಕ್ತಿ. ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸಂಘ ಜೀವಿ. ಇನ್ನು ಕೇವಲ ನೆನಪು ಮಾತ್ರ.

- ಹರೀಶ್.ಕೆ.ಆದೂರು.

ಎಂ. ಸಚ್ಚೀಂದ್ರ ನಿಧನ

ಮಂಗಳೂರಿನ ಶಿವಭಾಗ್ ನಿವಾಸಿ ಎಂ. ಸಚ್ಚೀಂದ್ರ (68)ರವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಮಂಗಳೂರು ಕಛೇರಿಯಲ್ಲಿ ಕಳೆದ 4 ವರ್ಷಗಳಲ್ಲಿ ಕಚೇರಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಶ್ರೀಯುತರು ಟೈಮ್ಸ್ ಆಫ್ ಇಂಡಿಯಾ, ಮುಂಗಾರು, ಜನವಾಹಿನಿ, ವಿಜಯಕರ್ನಾಟಕ ಜನ ಈದಿನ ಪತ್ರಿಕೆಗಳಲ್ಲಿ ದುಡಿದ ಅಪಾರ ಅನುಭವಿ. ಇತ್ತೀಚಿನ ದಿನಗಳಲ್ಲಿ ಹೃದಯರೋಗ ಬಳಲುತ್ತಿದ್ದ ಅವರು ಮಂಗಳೂರು ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಸಂಜೀವ, ಲಕ್ಷ್ಮಣ್, ಸಂತೋಷ್, ಇಬ್ಬರು ಸಹೋದರಿಯರು ಸೇರಿದಂತೆ ಪತ್ನಿ, ಈರ್ವರು ಗಂಡು ಮಕ್ಕಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

0 comments:

Post a Comment