ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:11 PM

ಹಾಫ್ ಮ್ಯಾರಥಾನ್

Posted by ekanasu

ಪ್ರಾದೇಶಿಕ ಸುದ್ದಿ

ಮಂಗಳೂರು: ಸ್ವಚ್ಛ ಹಸಿರು ಮತ್ತು ಪ್ರಗತಿಪರ ಉದ್ದೇಶಗಳನ್ನು ಮುಂದಿಟ್ಟುಕೊಂಡು ನಾಗರೀಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವಿಜಯಾ ಬ್ಯಾಂಕ್ ಸಹಯೋಗದಲ್ಲಿ ಫೆ.20 ರಂದು ಮಂಗಳೂರು ನಗರದಲ್ಲಿ ಹಾಫ್ ಮ್ಯಾರಥಾನ್ ಮತ್ತು 6 ಕಿ.ಮೀ. ಮ್ಯಾರಥಾನ್ ಆಯೋಜಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಪ್ ಮ್ಯಾರಥಾನ್ ಲೋಗೊ ಬಿಡುಗಡೆಗೊಳಿಸಿದ ಬಳಿಕ ಜರುಗಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರವನ್ನು ನೀಡಿದರು. ಅಭಿ ವೃದ್ಧಿ , ಪರಿಸರ ಹಾಗೂ ಹಸಿರು ಸಮಾ ನಂತರ ವಾಗಿ ಸಾಗುವ ದಿಸೆ ಯಲ್ಲಿ ಜನತೆ ಯನ್ನು ಜಾಗೃತ ಗೊಳಿ ಸಲು ಜಿಲ್ಲಾ ಡಳಿತ ಹಮ್ಮಿ ಕೊಂಡ ಅಪ ರೂಪದ ಕಾರ್ಯ ಕ್ರಮ ಇದಾ ಗಿದೆ. ಸುಮಾರು 5 ಸಾವಿರ ಕ್ಕಿಂ ತಲೂ ಅಧಿಕ ಮಂದಿ ಮ್ಯಾರಥಾ ನ್ನಲ್ಲಿ ಭಾಗವ ಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿ ದರು.ಹಾಫ್ ಮ್ಯಾರಥಾನ್ 21 ಕಿ.ಮೀ. ಹಾಗೂ ಮಿನಿ ಮ್ಯಾರಥಾನ್ 6 ಕಿ.ಮೀ. ಕ್ರಮಿಸಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳು ಇದರಲ್ಲಿ ಭಾಗವಹಿಸಲಿರುವರು.ಫೆ.20ರ ಮುಂಜಾನೆ 6.30ಕ್ಕೆ ನೆಹರೂ ಮೈದಾನದಲ್ಲಿ ಹಾಫ್ ಮ್ಯಾರಥಾನ್ಗೆ ಹಾಗೂ 7 ಗಂಟೆಗೆ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಲಾಗುವುದು.ಓಟದಲ್ಲಿ ಪಾಲ್ಗೊಳ್ಳ ಬಯಸುವರು ಫೆ.17 ರ ಸಂಜೆ 5.30 ರೊಳಗೆ ವಿಜಯಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲಿ ಶಾಖಾಧಿಕಾರಿಗಳನ್ನು , ಉಡುಪಿಯ ರೀಜನಲ್ ಆಫೀಸ್ ನಲ್ಲಿ ರೀಜನಲ್ ಮ್ಯಾನೇಜರ್, ಮಂಗಳೂರು ಸಹಾಯಕ ಆಯುಕ್ತರ ಕಚೇರಿ ಅಥವಾ ಮಂಗಳಾ ಕ್ರೀಡಾಂಗಣದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ಹೆಸರು ನೋಂದಾಯಿ ಸಬಹುದಾಗಿದೆಯಲ್ಲದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಚೇರಿಯ ಅಧಿಕೃತ ವೆಬ್ ಸೈಟ್ www.dk.nic.in ಇಲ್ಲಿಂದಲೂ ಆನ್ ಲೈನ್ ನಲ್ಲಿ ನೋಂದಾಯಿಸಬಹುದು ಎಂದು ಪಾಲೆಮಾರ್ ನುಡಿದರು.

ಬಹುಮಾನ:
ಹಾಫ್ ಮ್ಯಾರ ಥಾನ್ ರೂ.20 ಸಾವಿರ ದಿಂದ ಮೊದ ಲ್ಗೊಂಡು ಒಟ್ಟು 10 ನಗದು ಬಹುಮಾ ನಗ ಳನ್ನು ಒಳ ಗೊಂಡಿದೆ. ಕ್ರಾಸ್ ಕಂಟ್ರಿ ರೂ. 3 ಸಾವಿರ ದಿಂದ ಮೊದಲ್ಗೊಂಡು ಒಟ್ಟು 6 ಬಹುಮಾನಗಳಿವೆ. ಮಹಿಳೆಯರು ಮತ್ತು ಪುರುಷರ ವಿಭಾಗಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತದೆ. ಓಟವನ್ನು ಪೂರ್ತಿಗೊಳಿಸುವ ಪ್ರತಿಯೊಬ್ಬರಿಗೂ ಜಿಲ್ಲಾಡಳಿತ ವತಿಯಿಂದ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಸಚಿವರು ವಿವರಿಸಿದರು. ವಿಧಾನಸಭಾ ಉಪಸಭಾಪತಿ ಎನ್.ಯೋಗೀಶ್ ಭಟ್, ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಸುಬೋಧ್ ಯಾದವ್, ವಿಜಯ ಬ್ಯಾಂಕ್ ಉಪಮಹಾ ಪ್ರಬಂಧಕ ಹರೀಂದ್ರನಾಥ್ ಶೆಟ್ಟಿ ,ಎಜಿಎಂ ಮಂಜುನಾಥ, ಕಮಿಷನರ್ ಡಾ ಕೆ. ಎನ್ ವಿಜಯಪ್ರಕಾಶ್, ಮಂಗಳೂರು ಸಹಾಯಕ ಕಮೀಷನರ್ ಪ್ರಭುಲಿಂಗ ಕವಳಿಕಟ್ಟಿ , ಜಿಲ್ಲಾ ಗೃಹ ರಕ್ಷಕದಳ ಕಮಾಂಡೆಂಟ್ ಡಾ.ನಿದರ್ಶ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಾಫ್ ಮ್ಯಾರಥಾನ್ ಹಾದಿ:
ನೆಹರೂ ಮೈದಾನ- ಪಾಂಡೇ ಶ್ವರ-ಮಂಗ ಳಾ ದೇವಿ- ಜಪ್ಪು ಮಾರ್ಕೆಟ್- ವಲೆ ನ್ಸಿಯಾ- ಕಂಕ ನಾಡಿ- ಜ್ಯೋತಿ ವೃತ್ತ - ಹಂಪನ ಕಟ್ಟಾ-ಗೋವಿಂದ ಪೈ ವೃತ್ತ ಸರ್ಕಲ್, ಪಿ.ವಿ.ಎಸ್.-ಸಿ.ಟಿ.ಹಾಸ್ಪಿಟಲ್- ನಂತೂರು- ಕದ್ರಿಪಾರ್ಕ್-ಬಿಜೈ- ಕೆ.ಎಸ್ಆರ್ ಟಿಸಿ - ಕುಂಟಿಕಾನ ರಸ್ತೆ- ಇನ್ಫೋಸಿಸ್-ಉರ್ವಾಸ್ಟೋರ್-ಚಿಲಿಂಬಿ- ಮಂಗಳಾ ಕ್ರೀಡಾಂಗಣ.
ಮಿನಿ ಮ್ಯಾರಥಾನ್:
ನೆಹರೂ ಮೈದಾನ-ಹಂಪನಕಟ್ಟಾ- ಠಾಗೂರ್ ಪಾರ್ಕ್- ಜ್ಯೋತಿ- ಬಂಟ್ಸ್ಹಾಸ್ಟೇಲ್-ಕರಂಗಲ್ಪಾಡಿ- ಜೈಲ್ ರಸ್ತೆ - ಎಂ.ಜಿ.ರೋಡ್-ಲೇಡಿಹಿಲ್ ವೃತ್ತ - ಮಂಗಳಾ ಕ್ರೀಡಾಂಗಣ.
ಬುಲೆಟ್ಸ್:
. ನೆಹರೂ ಮೈದಾನದಿಂದ ಆರಂಭ, ಮಂಗಳಾ ಕ್ರೀಂಡಾಣದಲ್ಲಿ ಮುಕ್ತಾಯ
. ಎರಡೂ ಮ್ಯಾರಥಾನ್ಗಳಲ್ಲೂ ಮುಂಭಾಗದಲ್ಲಿ ಪ್ರಚಾರ ವಾಹನಗಳಿರುತ್ತವೆ
. ಸ್ಪರ್ಧಿಗಳ ಜೊತೆಗೆ ಪೊಲೀಸ್ ಬೆಂಗಾವಲು ಇದೆ.
. ಮಾಧ್ಯಮ ಪ್ರತಿನಿಧಿಗಳಿಗಾಗಿ 4 ತೆರದ ವಾಹನಗಳು.
.ರಾಷ್ಟ್ರೀಯ -ಅಂತಾರಾಷ್ಟ್ರೀಯ ಕ್ರೀಡಾಳುಗಳು ಪಾಲ್ಗೊಳ್ಳುವರು.

0 comments:

Post a Comment