ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಹೆಜಮಾಡಿಯಲ್ಲಿ ಆಗ್ನಿ ಆಕಸ್ಮಿಕ 1.5ಲಕ್ಷ ರೂ ಮೌಲ್ಯದ ನಗದು ಮತ್ತು ವಸ್ತುಗಳು ಭಸ್ಮ

ಮೂಲ್ಕಿ: ಹೆಜಮಾಡಿ ಕೋಡಿ ಅಡ್ಕ ಎಂಬಲ್ಲಿನ ಜಯಂತ ಎಂಬವರ ಮನೆಯಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ 1.5ಲಕ್ಷರೂ ಮೌಲ್ಯದ ನಗದು ಮತ್ತು ವಸ್ತುಗಳು ಸುಟ್ಟು ಹೋಗಿದೆ.ಜಯಂತರು ತಮ್ಮ ಮನೆಯನ್ನು ದಯಾನಂದ ಕೋಟ್ಯಾನ್ ಎಂಬವರಿಗೆ ಬಾಡಿಗೆಗೆ ನೀಡಿದ್ದು ರಾತ್ರಿ ಕರೆಂಟ್ ಇಲ್ಲದ ಕಾರಣ ದಯಾನಂದರ ಮಗ ಚಿಮಿಣಿ ದೀಪ ವಿರಿಸಿ ಓದುತ್ತಿದ್ದ ಎನ್ನಲಾಗಿದೆ.


ರಾತ್ರಿ ನಿದ್ರೆ ತಡೆಯಲಾಗದೆ ಆತ ಬೇರೆ ಕೋಣೆಗೆ ಮಲಗಲು ತೆರಳಿದ್ದು ಚಿಮಿಣಿ ದೀಪ ನಂದಿಸದೆ ಇದ್ದ ಪರಿಣಾಮ ಇಲಿಗಳು ಬೆಂಕಿಯಿಂದ ಆಕರ್ಷಿತಗೊಂಡು ದೀಪವನ್ನು ಅಡ್ಡಹಾಕಿದ್ದರಿಂದ ಕೊಣೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹರಡಿ ಪಕ್ಕದಲ್ಲಿದ್ದ ಕಪಾಟಿಗೆ ಬೆಂಕಿ ಹಿಡಿದ ಪರಿಣಾಮ ನೂತನ ಮನೆಗಾಗಿ ಇರಿಸಿದ್ದ 90ಸಾವಿರ ರೂ ಮೌಲ್ಯದ 500ಮುಖ ಬೆಲೆಯ ನೋಟು ಸಹಿತ ಬಟ್ಟೆ ಇತರ ವಸ್ತುಗಳು ಸುಟ್ಟುಹೋಗಿದೆ. ಪಕ್ಕ ಕೋಣೆಯಲ್ಲಿ ಮಲಗಿರುವುದರಿಂದ ಯಾರಿಗೂ ತೊಂದರೆಯಾಗಿಲ್ಲ ಬೆಂಕಿಯ ತೀವ್ರತೆಗೆ ಎಚ್ಚೆತ್ತ ಕುಟುಂಬ ಪರಿಸರದವರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ.
ಚಿತ್ರ - ವರದಿ : ಭಾಗ್ಯವಾನ್ ಮುಲ್ಕಿ.

0 comments:

Post a Comment