ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ:ನಾಡೋಡಿ.

ವೇಣೂರು: ಕಾಲ ಬದಲಾಗಿದೆ. ಮನುಷ್ಯನ ಆಚಾರ ವಿಚಾರ, ಆಚರಣೆಗಳಲ್ಲೂ ಬದಲಾವಣೆ ಕಾಣತೊಡಗಿದೆ. ಜೊತೆ ಜೊತೆಗೆ ಪರಿಸರದಲ್ಲೂ ಬದಲಾವಣೆಗಳಾಗಿವೆ. ಯಾರಿಗೂ ಯಾವುದಕ್ಕೂ ಕಾಯುವ ಪುರುಸೊತ್ತಿಲ್ಲ...ಎಲ್ಲವೂ ಸಿದ್ಧವಾಗಿ ದೊರೆತರೆ ಅದನ್ನು ಉಪಯೋಗಿಸುವುದಷ್ಟೇ ಬಾಕಿ ಎಂಬಷ್ಟರಮಟ್ಟಿಗೆ ಮನುಷ್ಯ ಆಲಸಿಯಾಗಿದ್ದಾನೆ. ಇದಕ್ಕನುಗುಣವಾಗಿ ಮನುಷ್ಯ ದಿನಬಳಕೆಯ ವಸ್ತುಗಳೂ ಬದಲಾಗುತ್ತಿವೆ. ಬೆಲೆ ಏರಿಕೆಯ ತಾಪ ಒಂದಡೆಯಾದರೆ, ಕೃಷಿಕ ಇನ್ನೊಂದು ರೀತಿಯಲ್ಲಿ ಭೀತಿಯನ್ನೆದುರಿಸುತ್ತಾನೆ. ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯಿಲ್ಲ ಎಂಬ ನೋವು ಒಂದೆಡೆಯಾದರೆ ಅಧಿಕ ಇಳುವರಿಗಾಗಿ ವಿವಿಧ ಪ್ರಯತ್ನಗಳು ಮತ್ತೊಂದೆಡೆಯಿಂದ ಸಾಗುತ್ತಿದೆ. ಏತನ್ಮಧ್ಯೆ ವಿದೇಶೀ ಕೃಷ್ಯುತ್ಮನಗಳ ಆಮದು ಸ್ಥಳೀಯ ಕೃಷಿಕರಿಗೆ ಕಗ್ಗಂಟಾಗುತ್ತಿದೆ. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಶಾಕ್ ಉಂಟಾಗಿದೆ. ಅದೇ ತರಕಾರಿಗಳಲ್ಲಿ ಕಲಬೆರಕೆ!ಅಚ್ಚರಿಯಾದರೂ ಸತ್ಯ. ಹೌದು ಇಂದು ಸೊಪ್ಪು ತರಕಾರಿ ಪದಾರ್ಥಗಳಲ್ಲಿಯೂ ತೀವ್ರ ಕಲಬೆರಕೆ!.ಇದು ಗ್ರಾಹಕರ ಅರಿವಿಗೆ ಬರುವ ಹೊತ್ತಲ್ಲಿ ಕಾಲ ಮಿಂಚಿಯಾಗುತ್ತಿದೆ.
ಘಟನೆ 1 : ವೇಣೂರು ಸಮೀಪದ ಪಡ್ಡಂತಡ್ಕದ ಸುಶಿಕ್ಷಿತ ಸಸ್ಯಾಹಾರಿ ಕುಟುಂಬವೊಂದರಲ್ಲಿ ಹೀರೇಕಾಯಿಯನ್ನು ಅಂಗಡಿಯಿಂದ ಖರೀದಿಸಿ ಅಡುಗೆ ಸಿದ್ಧಪಡಿಸಲಾಯಿತು. ಆದರೆ ಅಡುಗೆಯ ರುಚಿ ಮಾತ್ರ ಕಹಿಯಾಗಿತ್ತು. ಕಾರಣ ಹೀರೇಕಾಯಿ ವಿಶಜ್ವಾಲೆ ಕಹಿಯಾಗಿತ್ತು. ಇದು ಒಂದಲ್ಲ ಎರಡು, ಮೂರು ಬಾರಿ ಇದೇ ಅನುಭವ. ತರಕಾರಿ ಕೊಂಡದ್ದು ಅಂಗಡಿಯಿಂದ ಅಲ್ಲಿಗೆ ಬಂದದ್ದು ಘಟ್ಟ ಪ್ರದೇಶದಿಂದ.

ಘಟನೆ 2: ಅದೊಂದು ತರಕಾರಿ ಪ್ರಿಯ ಕುಟುಂಬ. ಸೊಪ್ಪು ತರಕಾರಿ ಎಂದರೆ ಆ ಕುಟುಂಬದ ಸದಸ್ಯರಿಗೆಲ್ಲ ಪಂಚಪ್ರಾಣ. ಮೂಡಬಿದಿರೆಯ ಪ್ರತಿಷ್ಟಿತ ಕಾಲೇಜೊಂದರ ಉಪನ್ಯಾಸಕರ ಮನೆಯಲ್ಲಿ ನಡೆದ ಘಟನೆ. ಸಂತೆಯಿಂದ ಕೊಂಡ ಸೊಪ್ಪು ತರಕಾರಿ ಕಳೆದ ಕೆಲ ದಿನಗಳಿಂದ ತೀವ್ರ ಕಹಿರುಚಿಯನ್ನು ಹೊಂದಿತ್ತು. ಒಂದೆರಡು ದಿನ ಅದೇನೋ ಅಡುಗೆಯಲ್ಲಿ ತೊಂದರೆ ಎಂದು ಸುಮ್ಮನಾದರೆ ಇತ್ತೀಚೆಗೆ ಇತರ ತರಕಾರಿಗಳೂ ಕಹಿಯನುಭವ ನೀಡುತ್ತಿದೆ ಎನ್ನುತ್ತಾರೆ.

ಘಟನೆ 3: ಹೊಸಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಚಂದ್ರಶೇಖರ ಭಟ್ ಅವರ ಮನೆಯಲ್ಲಿ ನಡೆದ ಘಟನೆ. ಅಂಗಡಿಯಿಂದ ಕೊಂಡ ಬದನೆ ತೀವ್ರ ಕಹಿ. ಮಾಮೂಲಿ ಬದನೆ ಚೊಗರು ರುಚಿಯನ್ನು ಹೊಂದಿದ್ದರೆ ಈ ಬಾರಿ ಅವರು ಕೊಂಡ ಕಿಲೋಗಟ್ಟಲೆ ಬದನೆಗಳು ಮಾತ್ರ ಅತ್ಯಂತ ಕಹಿರುಚಿಯಿಂದ ಕೂಡಿತ್ತು.

ಘಟನೆ 4 : ಮೂಡಬಿದಿರೆ ಹೃದಯ ಭಾಗದಲ್ಲಿರುವ ಜನಪ್ರಿಯ ಸಸ್ಯಾಹಾರಿ ಹೋಟೆಲ್ ಒಂದರ ಮಾಲಿಕರಿಗಾದ ಅನುಭವ. ಮಧ್ಯಾಹ್ನದ ಊಟಕ್ಕಾಗಿ ತಯಾರಿಸಿದ ಬದನೆಕಾಯಿ ಹುಳಿ, ಗೊಜ್ಜು, ಸಾಂಬಾರುಗಳನ್ನು ಉಪಯೋಗಿಸಲಾಗದ ಸ್ಥಿತಿ.ಕಾರಣ ಬದನೆಯ ತೀವ್ರ ಕಹಿರುಚಿ.ಕಿಲೋಗಟ್ಟಲೆ ಬದನೆಯನ್ನು ತೊಟ್ಟಿಗೆಸೆದು ತಲೆಮೇಲೆ ಕೈಯಿರಿಸಿ ಕೂರುವ ಸ್ಥಿತಿ ಅವರದ್ದು.

ಸೊಪ್ಪು ತರಕಾರಿಗಳು ಕರಾವಳಿ ಪ್ರದೇಶಕ್ಕೆ ಹೆಚ್ಚಾಗಿ ಘಟ್ಟ ಪ್ರದೇಶಗಳಿಂದ ಪೂರೈಕೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ (ಉದಾ: ಚಿಕ್ಕಮಗಳೂರು, ಹಾಸನ, ಬೆಂಗಳೂರು ಆಸುಪಾಸುಗಳಲ್ಲಿನ ಹಳ್ಳಿಗಳಿಂದ)ಕನಿಷ್ಠ ಅವಧಿಯಲ್ಲಿ ಗರಿಷ್ಠ ಬೆಳೆ ತೆಗೆಯುವ ಸಲುವಾಗಿ ವಿವಿಧ ಕಸರತ್ತುಗಳು ನಡೆಯುತ್ತಿರುತ್ತವೆ. ಕೃಷಿಯಲ್ಲಿ ಇಳುವರಿ ಅಧಿಕ ಪಡೆಯುವ ಸಲುವಾಗಿ ವಿವಿಧ ರಾಸಾಯನಿಕಗಳ ಬಳಕೆ ಮಾಡಲಾಗುತ್ತಿದೆ. ಬೆಳೆದ ಗಿಡ,ಸೊಪ್ಪುಗಳಿಗೆ ಬಾಧಿಸುವ ಕೀಟಗಳ ಹತೋಟಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಆದರೆ ಇವೆಲ್ಲದರ ಪರಿಣಾಮ ಈ ಉತ್ಪನ್ನಗಳನ್ನು ಕೊಂಡು ಬಳಸುವ ಗ್ರಾಹಕನಮೇಲಾಗುತ್ತಿದೆ!

ಹೌದು ಇತ್ತೀಚೆಗೆ ಈ ರೀತಿಯ ತೊಂದರೆಗಳು ಅಧಿಕವಾಗಿವೆ. ಇದಕ್ಕೊಂದು ನಿದರ್ಶನ ಕಹಿಬದನೆ!
ಬದನೆಯ ಸಸ್ಯಶಾಸ್ತ್ರೀಯ ಹೆಸರು ಸೊಲಾನಮ್ ಝ್ಹಂತೋ ಕಾರ್ಪಂ . ಇದು ಸೋಲಾನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಬದನೆಕಾಯಿ ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಮೂತಲಃ ಭಾರತ ಮತ್ತು ಶ್ರೀಲಂಕಾಗಳಿಗೆ ಸೇರಿದ ಸಸ್ಯ.
ಇದೊಂದು ಶುಚಿ ರುಚಿ ಉತ್ತಮ ತರಕಾರಿಯಾಗಿರುವುದರಿಂದ ಬದನೆಗೆ ಬೇಡಿಕೆ ಅಧಿಕ.ಅದಕ್ಕನುಗುಣವಾಗಿ ಅದರ ಬೆಳೆಯೂ ಅಧಿಕವಾಗಿದೆ. ಆದರೆ ಇತ್ತೀಚೆಗೆ ಈ ಬದನೆ ಕಹಿಯಾಗಿರುವುದು ಮಾತ್ರ ಹೆಚ್ಚು ಸುದ್ದಿಯಾಗಿಲ್ಲ. ಸಸ್ಯಶಾಸ್ತ್ರಜ್ಞರು, ಅಧ್ಯಯನಕಾರರ ಪ್ರಕಾರ ಸಸ್ಯದಲ್ಲಿರುವ ಅಲ್ಕೋಲೈಡ್ ರಾಸಾಯನಿಕದ ಏರುಪೇರಿನಿಂದಾಗಿ ಬದನೆಯ ಕಾಯಿ ಕಹಿಯಾಗಿರುವ ಸಾಧ್ಯತೆಗಳಿವೆ ಎನ್ನುತ್ತಾರೆ.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ, ಸಂಶೋಧಕ ಚಿಗುರು ಪ್ರಕಾಶ್ ಪ್ರಕಾರ ಅಧಿಕ ಇಳುವರಿಗಾಗಿ ಬಳಸುವ ಗೊಬ್ಬರಗಳು ಕೂಡಾ ಬದನೆ ಕಾಯಿಯಲ್ಲಿ ಕಹಿಗುಣ ಹೆಚ್ಚಾಗಲು ಕಾರಣವಾಗಬಹುದು. ಗಿಡ ಬೆಳೆಯುತ್ತಿದ್ದ ಸಂದರ್ಭದಲ್ಲಿ ಕೀಟ ಬಾಧೆಯನ್ನು ತಡೆಗಟ್ಟಲು ಬಳಸಿರುವ ಕೀಟನಾಶಕಗಳಿಂದಾಗಿಯೂ ಬದನೇಕಾಯಿ ಕಹಿಯಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಇತ್ತೀಚೆನ ದಿನಗಳಲ್ಲಿ ಪರಿಸರದಲ್ಲಾಗುತ್ತಿರುವ ಏರುಪೇರು, ವಾತಾವರಣದ ಬದಲಾವಣೆ ಜೊತೆಗೆ ಭೂಮಿಯಲ್ಲಿ ಜೈವಿಕ ಸಾಂಧ್ರತೆ ವೃದ್ಧಿಯಾಗಿರುವುದು ಕೂಡಾ ಬದನೆ ಕಹಿಯಾಗಲು ಕಾರಣವಾಗುವ ಸಾಧ್ಯತೆಯಿದೆ ಎನ್ನುತ್ತಾರೆ. ಪರಾಗ ಸ್ಪರ್ಶದಿಂದಲೂ ಈ ರೀತಿ ಕಹಿಬದನೆ ಸೃಷ್ಠಿಯಾಗುವ ಸಾಧ್ಯತೆ ಇದೆ ಎಂಬುದು ಅವರ ದಟ್ಟ ವಾದ. ಒಂದೇ ಜಾತಿ/ಕುಟುಂಬಕ್ಕೆ ಸೇರಿದ ಜೀನಸ್ ಹೊಂದಿರುವ ಇತರ ಪ್ರಬೇಧಗಳ ಸಸ್ಯಗಳಿಂದ ನಡೆಸ ಪರಾಗಸ್ಪರ್ಶದಿಂದಾಗಿಯೂ ಕಹಿಬದನೆ ಉತ್ಪಾದನೆ ಆಗಲು ಸಾಧ್ಯ ಎಂಬುದು ಅವರ ಅಭಿಪ್ರಾಯ.
ಕಹಿಬದನೆಯ ಕುರಿತಾಗಿ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಇದಕ್ಕಾಗಿ ಕಹಿಬದನೆ ಉತ್ಪಾದನೆಯಾದ ಗಿಡ,ಬೇರು,ಎಲೆ,ಕಾಯಿಗಳ ಸಮಗ್ರ ಅಧ್ಯಯನ ನಡೆಸಬೇಕಾಗಿದೆ.

0 comments:

Post a Comment