ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದಿರೆ: ಮುಖ್ಯಮಂತ್ರಿಗಳೇ ನೀವು ಧೈರ್ಯದಿಂದಿರಿ. ವಾಮಾಚಾರಕ್ಕೆ ಭಯಪಡಬೇಕಾಗಿಲ್ಲ.ದೈವ ಭಕ್ತರಿಗೆ ವಾಮಾಚಾರದ ಭಯ ಬೇಡ. ಹೀಗೆಂದಿದ್ದಾರೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ.ಮೂಡಬಿದಿರೆಯ ಆಳ್ವಾಸ್ ಆನಂದಮಯ ಹೆಲ್ತ್ ರೆಸಾರ್ಟ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗುರೂಜಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಾಮಾಚಾರದ ಅಳುಕು ಆಸ್ತಿಕರಿಗಿರಬೇಕಾಗಿಲ್ಲ. ನಾಸ್ತಿಕರ ಮನದೊಳಗೆ ಅಳುಕು ತುಂಬಿರುತ್ತದೆ. ಆ ಕಾರಣಕ್ಕೆ ಆಸ್ತಿಕರು ಯಾವುದೇ ಕಾರಣಕ್ಕೂ ವಾಮಾಚಾರದ ಬಗ್ಗೆ ಭಯಪಡದಿರಿ. ಆತ್ಮಸ್ಥೈರ್ಯವೊಂದಿದ್ದರೆ ಏನನ್ನೂ ಎದುರಿಸಬಹುದು ಎಂದವರು ಹೇಳಿದ್ದಾರೆ. ಭ್ರಷ್ಟಾಚಾರ, ಮದ್ಯಪಾನ ನಿಷೇಧ ಆಗಬೇಕಾಗಿದೆ.
ಮದ್ಯಪಾನ ನಿಷೇಧ ಆಗುವ ತನಕ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಅಸಾಧ್ಯ ಎಂದರು. ಡ್ರಗ್ಸ್ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಇದರ ನಿರ್ಮೂಲನೆಗೆ ಪಣತೊಡಬೇಕಾಗಿದೆ. ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಏಳಬೇಕಾಗಿದೆ ಎಂದವರು ಹೇಳಿದರು.
ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ನ್ಯಾಯಾಲಯದಲ್ಲೂ ಭ್ರಷ್ಟಾಚಾರ, ಧಾರ್ಮಿಕ ಕ್ಷೇತ್ರದಲ್ಲೂ ಭ್ಟಷ್ಟಾಚಾರ ಈಗಿದೆ. ಆಮೂಲಾಗ್ರ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಪ್ರಜೆಗಳ ಜವಾಬ್ದಾರಿ ಎಂದವರು ಹೇಳಿದರು.ದೇಶದಲ್ಲಿ ಯೋಗ ಮತ್ತು ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಯೋಗದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಪ್ರಸಕ್ತ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಆಧ್ಯಾತ್ಮದತ್ತ ಒಲವು ಪಡೆಯುತ್ತಿದ್ದಾರೆ. ಒತ್ತಡದಲ್ಲಿರುವವರು, ಬುದ್ಧಿವಂತರು, ಆಸಕ್ತರು, ಕುತೂಹಲಿಗಳು ಈ ರೀತಿಯಲ್ಲಿ ನಾಲ್ಕು ವರ್ಗದ ಜನ ಆಧ್ಯಾತ್ಮದತ್ತ ಒಲವು ಪಡೆಯುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.

0 comments:

Post a Comment