ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:21 PM

ವಾರ್ಷಿಕ ಸಂಭ್ರಮ

Posted by ekanasu

ಪ್ರಾದೇಶಿಕ ಸುದ್ದಿ

ಬೆಂಗಳೂರು: ನೂಪುರ ಭ್ರಮರಿ ಹಾಗೂ ಚೈತ್ರರಶ್ಮಿ ಪತ್ರಿಕೆಗಳ 5 ಮತ್ತು 6 ನೇ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಫೆಬ್ರವರಿ 13 , ಭಾನುವಾರ ಸಂಜೆ ೪ ಗಂಟೆಗೆ ಜೆ.ಸಿ.ರಸ್ತೆಯ ಕನ್ನಡ ಭವನದ 'ನಯನ ಸಭಾಂಗಣ' ದಲ್ಲಿ ನಡೆಯಲಿದೆ. ’ನೃತ್ಯ ಮಾರ್ಗ ಮುಕುರ’ವೆಂಬ ಭರತನಾಟ್ಯದ ಕುರಿತ ಕೃತಿ ಮತ್ತು ’ಕನ್ನಡಿ ಬಿಂಬದ ನೆರಳು’ -ರಾಜ್ಯಮಟ್ಟದ ಕಥಾಸ್ಪರ್ಧೆಯ ಕಥಾಸಂಕಲನ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಲಿದೆ. ಈರ್ವರು ಸಾಧಕರಿಗೆ ಸನ್ಮಾನ, ಪ್ರಿಯಾ ರಾಮನ್ ಅವರಿಗೆ ಶ್ರೇಷ್ಟ ನೃತ್ಯ ವಿಮರ್ಶಾ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ , ಬಳಗದ ಶ್ರಮಿಕರಿಗೆ ಗೌರವಾರ್ಪಣೆ ಏರ್ಪಡಿಸಲಾಗಿದೆ. ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ್ ಮತ್ತು ಚಿಂತಕರಾದ ಡಾ.ಜಿ.ಬಿ.ಹರೀಶ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

0 comments:

Post a Comment