ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:31 PM

ಮನದ ಮಾತು..

Posted by ekanasu

ಸಾಹಿತ್ಯ

ಅಂತರಾಳವೆಲ್ಲ ಬಗೆದು
ಹೊತ್ತ ಕೊಳೆಯನ್ನೆಲ್ಲ ತೊಳೆದು
ಧಾರೆಯಾಗಿ ಇಳಿಯಿತಿಂದು
ಮನದುಮ್ಮಳವೆಲ್ಲವೂ...


ಮೇರೆ ಮೀರಿದ ಭಾಷೆಯರಿಯದ
ಭಾವವೊಂದು ಸುಳಿಯಿತು
ಕಾಣಲಾರದ ಹೇಳಲಾಗದ
ಭಾವವೊಂದು ಹೊಮ್ಮಿತು

ಏಕೋ ಏನೋ, ಹೇಗೋ ಏನೋ
ನಾನರಿಯೆನಿದರ ಸತ್ಯವ
ಹೇಳಲ್ಹೇಗೆ ನಾನು ಇಂದು
ಅರಿವಿರದ ಮಿಥ್ಯವ...

ನಿಶೆಯ ಮಡಿಲಿನಲ್ಲಿ ಲೋಕ
ತನ್ನ ತಾ ಹುಡುಕುತಿರೆ
ಮನದ ಮಡಿಲಿನಲ್ಲಿ ಶೋಕ
ತನ್ನಂತೆ ಇಂದು ಹೊರಟಿದೆ..

ಎಲ್ಲೋ ಇದರ ಪಯಣ...
ಸಿಗುವ ತನಕ ಮಸಣ
ಇರಿಯುವಂತಾ ಲೋಕದಿಂದ
ಅರಿವಿರದ ಲೋಕಕ್ಕೆ...
- ಸೌಮ್ಯ ಸಾಗರ.

0 comments:

Post a Comment