ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:05 PM

ವಾಹನ ದುರಂತ

Posted by ekanasu

ಸಾಹಿತ್ಯ

ಬಿಸಿ ರಕ್ತ , ಜೊತೆಗೆ ಹೊಸ ಸವಾರಿ
ವಾಹನ ಓಡುತಿದೆ ವೇಗದ ಮಿತಿ ಮೀರಿ
ಹಾವಿನ ಹಾಗೆ ಹೋಗುವ ಆಸೆ
ಜಿಂಕೆಯ ಹಾಗೆ ಜಿಗಿಯುವ ಆಸೆ
ಹೆಲ್ಮೆಟ್ಟನ್ನು ಹಾಕುವುದಿಲ್ಲ
ಕೂದಲ ಸ್ಟೈಲು ಕೆಡಿಸುವುದಿಲ್ಲ
ರೇಸಿಂಗ್ ಹುಚ್ಚು ಇಳಿದೇ ಇಲ್ಲ
ಸಿಗ್ನಲ್ ಮುರಿಯುವುದು ಬಿಟ್ಟೇ ಇಲ್ಲ
ನೋ ಪಾರ್ಕಿಂಗ್ ನನ್ನ ನಿಲ್ದಾಣ
ಪೋಲಿಸರಿಗೆ ಸಿಕ್ಕಿತು ಕಾಂಚಾಣ


ಕಾನೂನನ್ನು ಲೆಕ್ಕಿಸುವುದಿಲ್ಲ
ನನ್ನ ಬಿಸಿ ರಕ್ತ ಯಾರಿಗೂ ಜಗ್ಗುವುದಿಲ್ಲ
ವೇಗವಾಗಿ ಹೋಗುತ್ತಿದ್ದೆ
ಕಿವಿಯಲಿ ಎಫ್.ಎಂ ಕೇಳುತ್ತಿದ್ದೆ
ಆ ಹಾಳು ಒಂದೇ ಕ್ಷಣ
ವಾಹನದ ಕೆಳಗಿತ್ತು ನನ್ನ ಹೆಣ
ಯುವಕರೆ ನಿಮ್ಮಲಿ ಕಳಕಳಿಯ ವಿನಂತಿ
ಸಹನೆಯ ಕಳೆಯದಿರಿ, ತಾಳ್ಮೆಯ ತೊರೆಯದಿರಿ
ನಿಮಗಾಗಿ, ನಂಬಿದವರಿಗಾಗಿ ಬಾಳಿರಿ ಬದುಕಿರಿ


- ಜಬೀವುಲ್ಲಾ ಖಾನ್

0 comments:

Post a Comment