ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:44 PM

ಭಾವನೆ...

Posted by ekanasu

ಸಾಹಿತ್ಯ

ಹಳೆಯ ಮಾಮರದಲ್ಲಿ
ಹೊಸ ಚಿಗುರು ಮೂಡಿತು
ಅದ ತಿಂದ ಕೋಗಿಲೆ
ಹೊಸ ರಾಗವ ಹಾಡಿತು..


ಹೊಸ ರಾಗದ ಇಂಪಿಗೆ
ತಳಿರಿನ ಕಂಪಿಗೆ
ಮೈಮರೆತೆನು ನಾನು
ಅಮರವಾಗಲಿ ಈ ದಿನ
ಜೀವನದಿ ಬೇಕಿನ್ನೇನು
ಪ್ರಕೃತಿಯ ಒಡಲಿನ
ವೈಚಿತ್ರ್ಯಗಳ ಗಮನಿಸುತ
ಜಗವ ಮರೆತೆನು ನಾನು
ಪ್ರಕೃತಿಯಲ್ಲಿನ ರಸಗವಳನು
ಹೀರಿ ಮದು ಸೂಸಿತು ಜೇನು.

- ಸೌಮ್ಯ ಸಾಗರ.

0 comments:

Post a Comment